ಭಾರತದಲ್ಲಿ ಜವಳಿ ಉದ್ಯಮ

ಸಾಂಪ್ರದಾಯಿಕವಾಗಿ ಭಾರತದಲ್ಲಿ ಜವಳಿ ಉದ್ಯಮವು ಕೃಷಿಯ ನಂತರ ನುರಿತ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ದೊಡ್ಡ ಉದ್ಯೋಗವನ್ನು ಸೃಷ್ಟಿಸಿದ ಏಕೈಕ ಉದ್ಯಮವಾಗಿದೆ.

ಜವಳಿ ಉದ್ಯಮವು ಭಾರತದಲ್ಲಿ ಎರಡನೇ ಅತಿ ದೊಡ್ಡ ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿ ಮುಂದುವರಿದಿದೆ. ಇದು ದೇಶದಲ್ಲಿ ಸುಮಾರು ೩೫ ಮಿಲಿಯನ್ ಜನರಿಗೆ ನೇರ ಉದ್ಯೋಗವನ್ನು ನೀಡುತ್ತದೆ. ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಜವಳಿ ಮತ್ತು ಬಟ್ಟೆ ರಫ್ತುದಾರನಾಗಿದ್ದು, ೨೦೨೨ ರ ಆರ್ಥಿಕ ವರ್ಷದಲ್ಲಿ ರಫ್ತು ಯುಎಸ್(US) $ ೪೪.೪ ಬಿಲಿಯನ್ ಆಗಿತ್ತು. ಜವಳಿ ಸಚಿವಾಲಯದ ಪ್ರಕಾರ ಏಪ್ರಿಲ್-ಜುಲೈ ೨೦೧೦ರ ಒಟ್ಟು ರಫ್ತಿನಲ್ಲಿ ಜವಳಿ ಪಾಲು ೧೧.೦೪% ಆಗಿತ್ತು ಹಾಗೂ ೨೦೦೯-೨೦೧೦ರ ಅವಧಿಯಲ್ಲಿ ಭಾರತೀಯ ಜವಳಿ ಉದ್ಯಮವು US$ ೫೫ ಶತಕೋಟಿಯಷ್ಟಿತ್ತು. ಅದರಲ್ಲಿ ೬೪% ದೇಶೀಯ ಬೇಡಿಕೆಗೆ ಸೇವೆ ಸಲ್ಲಿಸುತ್ತದೆ. ೨೦೧೦ ರಲ್ಲಿ ಭಾರತದಲ್ಲಿ ೨,೫೦೦ ಜವಳಿ ನೇಯ್ಗೆ ಕಾರ್ಖಾನೆಗಳು ಮತ್ತು ೪,೧೩೫ ಜವಳಿ ಫಿನಿಶಿಂಗ್ ಕಾರ್ಖಾನೆಗಳು ಇದ್ದವು. ಎ.ಟಿ. ಕೆರ್ನಿಯವರ '''ಚಿಲ್ಲರೆ ಉಡುಪು ಸೂಚ್ಯಂಕ'''ದ ಪ್ರಕಾರ, ೨೦೦೯ರಲ್ಲಿ ಭಾರತವು ಚಿಲ್ಲರೆ ಉಡುಪು ವ್ಯಾಪಾರಿಗಳಿಗೆ ಅತ್ಯಂತ ಭರವಸೆಯ ಮಾರುಕಟ್ಟೆಯಾಗಿ ಸ್ಥಾನ ಪಡೆದಿದೆ.

ನಾರಿನ ಉತ್ಪಾದನೆಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ ಹಾಗೂ ಇಡೀವಿಶ್ವದಲ್ಲಿ ಹತ್ತಿ ಮತ್ತು ಸೆಣಬಿನ ಅತಿದೊಡ್ಡ ಉತ್ಪಾದಕ ದೇಶವಾಗಿದೆ. ಭಾರತವು ವಿಶ್ವದ ಎರಡನೇ ಅತಿ ದೊಡ್ಡ ರೇಷ್ಮೆ ಉತ್ಪಾದಕ ರಾಷ್ಟ್ರವಾಗಿದೆ. ಭಾರತದಲ್ಲಿ ಉತ್ಪತ್ತಿಯಾಗುವ ಇತರ ಫೈಬರ್ಗಳಲ್ಲಿ ಉಣ್ಣೆ ಮತ್ತು ಮಾನವ ನಿರ್ಮಿತ ಫೈಬರ್ಗಳು ಸೇರಿವೆ. ಜವಳಿ ವಲಯದಲ್ಲಿ ಸ್ವಯಂಚಾಲಿತ ಮಾರ್ಗದ ಮೂಲಕ ೧೦೦% ಎಫ್‌ಡಿಐ ಅನ್ನು ಅನುಮತಿಸಲಾಗಿದೆ . ರೈಟರ್, ಟ್ರುಟ್ಜ್‌ಸ್ಕ್ಲರ್, ಸೌರರ್, ಸೊಕ್ಟಾಸ್, ಜಾಂಬಿಯಾಟಿ, ಬಿಲ್ಸರ್, ಮೊಂಟಿ, ಸಿಎಮ್‌ಟಿ, ಇ-ಲ್ಯಾಂಡ್, ನಿಸ್ಶಿನ್ಬೋ, ಮಾರ್ಕ್ಸ್ & ಸ್ಪೆನ್ಸರ್, ಜರಾ, ಪ್ರಮೋಡ್, ಬೆನೆಟ್ಟನ್ ಮತ್ತು ಲೆವಿಸ್ ಇವು ಭಾರತದಲ್ಲಿ ಹೂಡಿಕೆ ಮಾಡಿದ ಅಥವಾ ಕೆಲಸ ಮಾಡುತ್ತಿರುವ ಕೆಲವು ವಿದೇಶಿ ಜವಳಿ ಕಂಪನಿಗಳಾಗಿವೆ. ಜನವರಿ ಮತ್ತು ಜುಲೈ ೨೦೨೧ ರ ನಡುವೆ ಭಾರತವು ರೂ ೧.೭೭ ಲಕ್ಷ ಕೋಟಿ ಮೌಲ್ಯದ ಜವಳಿ ಉತ್ಪನ್ನಗಳನ್ನು ರಫ್ತು ಮಾಡಿದೆ ಹಾಗೂ ಇದು ಕಳೆದ ವರ್ಷದ ಇದೇ ಅವಧಿಗಿಂತ ೫೨.೬%ರಷ್ಟು ಹೆಚ್ಚಾಗಿದೆ.

ಇತಿಹಾಸ

ಪುರಾತತ್ತ್ವ ಶಾಸ್ತ್ರದ ಸಮೀಕ್ಷೆಗಳು ಮತ್ತು ಅಧ್ಯಯನಗಳು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಹರಪಾನ್ ನಾಗರಿಕತೆಯ ಜನರು ನೇಯ್ಗೆ ಮತ್ತು ಹತ್ತಿ ನೂಲುವ ಬಗ್ಗೆ ಪರಿಚಿತರಾಗಿದ್ದರು ಎಂದು ಸೂಚಿಸಿವೆ. ನೇಯ್ಗೆ ಮತ್ತು ನೂಲುವ ವಸ್ತುಗಳ ಉಲ್ಲೇಖವು ವೈದಿಕ ಸಾಹಿತ್ಯದಲ್ಲಿ ಕಂಡುಬರುತ್ತದೆ. ಆರಂಭಿಕ ಶತಮಾನಗಳಲ್ಲಿ ಭಾರತದಲ್ಲಿ ಜವಳಿ ವ್ಯಾಪಾರವಿತ್ತು. ಮಧ್ಯಕಾಲೀನ ಯುಗದಲ್ಲಿ ಈಜಿಪ್ಟ್‌ಗೆ ಭಾರತೀಯ ಜವಳಿಯ ರಫ್ತು ಅಸ್ತಿತ್ವವನ್ನು ಸೂಚಿಸುವ ಗುಜರಾತಿನ ಹತ್ತಿ ತುಣುಕುಗಳು ಈಜಿಪ್ಟ್‌ನಲ್ಲಿರುವ ಗೋರಿಗಳಲ್ಲಿ ಕಂಡುಬಂದಿವೆ.

ದೊಡ್ಡ ಪ್ರಮಾಣದ ಉತ್ತರ ಭಾರತದ ರೇಷ್ಮೆಗಳನ್ನು ಚೀನಾದ ಸಿಲ್ಕ್ ರೋಡ್ ಮೂಲಕ ಪಶ್ಚಿಮ ದೇಶಗಳಿಗೆ ವ್ಯಾಪಾರ ಮಾಡಲಾಯಿತು. ಭಾರತೀಯ ರೇಷ್ಮೆಗಳನ್ನು ಹೆಚ್ಚಾಗಿ ಮಸಾಲೆಗಳಿಗಾಗಿ ವಿನಿಮಯ ಮಾಡಿಕೊಳ್ಳಲಾಗುತ್ತಿತ್ತು. ೧೭ನೇ ಮತ್ತು ೧೮ನೇ ಶತಮಾನದ ಉತ್ತರಾರ್ಧದಲ್ಲಿ ಭಾರತೀಯ ಆರ್ಡಿನೆನ್ಸ್ ಫ್ಯಾಕ್ಟರಿಗಳಲ್ಲಿನ ದೇಶೀಯ ಅಗತ್ಯವನ್ನು ಹೊರತುಪಡಿಸಿ, ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಯುರೋಪಿಯನ್ ಕೈಗಾರಿಕೆಗಳ ಅಗತ್ಯವನ್ನು ಪೂರೈಸಲು ಪಶ್ಚಿಮ ದೇಶಗಳಿಗೆ ಭಾರತೀಯ ಹತ್ತಿಯ ದೊಡ್ಡ ರಫ್ತುಗಳು ನಡೆದವು.

ಭಾರತದಲ್ಲಿ ಜವಳಿ ಉದ್ಯಮ 
ಢಾಕಾದಲ್ಲಿ ಉತ್ತಮವಾದ ಬೆಂಗಾಲಿ ಮಸ್ಲಿನ್ ಅನ್ನು ಧರಿಸಿರುವ ಮಹಿಳೆ-೧೮ನೇ ಶತಮಾನ

೧೮ ನೇ ಶತಮಾನದವರೆಗೆ ಮೊಘಲ್ ಸಾಮ್ರಾಜ್ಯವು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪ್ರಮುಖ ಉತ್ಪಾದನಾ ಕೇಂದ್ರವಾಗಿತ್ತು. ೧೭೫೦ ರವರೆಗೆ ಭಾರತವು ಪ್ರಪಂಚದ ಒಟ್ಟು ಕೈಗಾರಿಕಾ ಉತ್ಪಾದನೆಯ ಸುಮಾರು ೨೫% ರಷ್ಟನ್ನು ಉತ್ಪಾದಿಸಿತು. ಮೊಘಲ್ ಸಾಮ್ರಾಜ್ಯದಲ್ಲಿ (೧೬ ರಿಂದ ೧೮ ನೇ ಶತಮಾನಗಳವರೆಗೆ) ಅತಿದೊಡ್ಡ ಉತ್ಪಾದನಾ ಉದ್ಯಮವೆಂದರೆ ಜವಳಿ ಉತ್ಪಾದನೆ ಹಾಗೂ ಅದರಲ್ಲೂ ವಿಶೇಷವಾಗಿ ಹತ್ತಿ ಜವಳಿ ಉತ್ಪಾದನೆ. ೧೮ನೇ ಶತಮಾನದ ಆರಂಭದಲ್ಲಿ ಬಂಗಾಳವು ಜಾಗತಿಕ ಜವಳಿ ವ್ಯಾಪಾರದಲ್ಲಿ ೨೫% ಪಾಲನ್ನು ಹೊಂದಿತ್ತು. ಬಂಗಾಳದ ಹತ್ತಿ ಜವಳಿಗಳು ೧೮ ನೇ ಶತಮಾನದಲ್ಲಿ ವಿಶ್ವ ವ್ಯಾಪಾರದಲ್ಲಿ ಅತ್ಯಂತ ಪ್ರಮುಖ ತಯಾರಿಸಿದ ಸರಕುಗಳಾಗಿದ್ದು, ಅಮೆರಿಕದಿಂದ ಜಪಾನ್‌ವರೆಗೆ ಪ್ರಪಂಚದಾದ್ಯಂತ ಬಳಸಲಾಗುತ್ತಿತ್ತು. ಹತ್ತಿ ಉತ್ಪಾದನೆಯ ಪ್ರಮುಖ ಕೇಂದ್ರ ಬಂಗಾಳದ ಸುಬಾಹ್ ಪ್ರಾಂತ್ಯವಾಗಿತ್ತು. ಅದರಲ್ಲೂ ವಿಶೇಷವಾಗಿ ಅದರ ರಾಜಧಾನಿ ಢಾಕಾ ಪ್ರಮುಖ ಕೇಂದ್ರವಾಗಿತ್ತು. ೧೮೫೩ ರಲ್ಲಿ ಕಾರ್ಲ್ ಮಾರ್ಕ್ಸ್ ಗಮನಿಸಿದಂತೆ, ಜವಳಿ ಉದ್ಯಮವು ಪೂರ್ವ ವಸಾಹತುಶಾಹಿ ಭಾರತೀಯ ಆರ್ಥಿಕತೆಯಲ್ಲಿ ಆರ್ಥಿಕ ಆದಾಯದ ಪ್ರಮುಖ ಅಂಶವಾಗಿದೆ. ಅವರು ಬರೆದಿರುವ ಸಾಲಿನಂತೆ, "ತಮ್ಮ ನಿಯಮಿತ ಅಸಂಖ್ಯಾತ ಸ್ಪಿನ್ನರ್ಗಳು ಮತ್ತು ನೇಕಾರರನ್ನು ಉತ್ಪಾದಿಸುತ್ತಿರುವ ಕೈಮಗ್ಗ ಮತ್ತು ನೂಲುವ ಚಕ್ರಗಳು ಆ ಸಮಾಜದ ರಚನೆಯ ಪ್ರಮುಖ ಅಂಶವಾಗಿವೆ."

ಬಂಗಾಳವು ೫೦% ಕ್ಕಿಂತ ಹೆಚ್ಚು ಜವಳಿಗಳನ್ನು ಹೊಂದಿದೆ ಮತ್ತು ಸುಮಾರು ೮೦% ರೇಷ್ಮೆಗಳನ್ನು ಏಷ್ಯಾದಿಂದ ಡಚ್ಚರು ಆಮದು ಮಾಡಿಕೊಂಡರು ಮತ್ತು ಅದನ್ನು ಜಗತ್ತಿಗೆ ಮಾರಾಟ ಮಾಡಿದರು. ಬಂಗಾಳಿ ರೇಷ್ಮೆ ಮತ್ತು ಹತ್ತಿ ಜವಳಿಗಳನ್ನು ಯುರೋಪ್, ಏಷ್ಯಾ ಮತ್ತು ಜಪಾನ್‌ಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಯಿತು ಮತ್ತು ಢಾಕಾದಿಂದ ಬಂಗಾಳಿ ಮಸ್ಲಿನ್ ಜವಳಿಗಳನ್ನು ಮಧ್ಯ ಏಷ್ಯಾದಲ್ಲಿ ಮಾರಾಟ ಮಾಡಲಾಯಿತು. ಅಲ್ಲಿ ಅವುಗಳನ್ನು "ಡಾಕಾ" ಜವಳಿ ಎಂದು ಕರೆಯಲಾಗುತ್ತಿತ್ತು. ಭಾರತೀಯ ಜವಳಿಯು ಶತಮಾನಗಳವರೆಗೆ ಹಿಂದೂ ಮಹಾಸಾಗರದ ವ್ಯಾಪಾರದಲ್ಲಿ ಪ್ರಾಬಲ್ಯ ಹೊಂದಿತ್ತು. ಜೊತೆಗೆ ಇದು ಅಟ್ಲಾಂಟಿಕ್ ಸಾಗರದ ವ್ಯಾಪಾರದಲ್ಲಿ ಮಾರಾಟವಾಯಿತು ಮತ್ತು ೧೮ ನೇ ಶತಮಾನದ ಆರಂಭದಲ್ಲಿ ಪಶ್ಚಿಮ ಆಫ್ರಿಕಾದ ವ್ಯಾಪಾರದಲ್ಲಿ ೩೮% ಪಾಲನ್ನು ಹೊಂದಿತ್ತು.

ಆಧುನಿಕ ಯುರೋಪಿನ ಆರಂಭದಲ್ಲಿ, ಮೊಘಲ್ ಸಾಮ್ರಾಜ್ಯದಿಂದ ಹತ್ತಿ ಜವಳಿ ಮತ್ತು ರೇಷ್ಮೆ ಉತ್ಪನ್ನಗಳನ್ನು ಒಳಗೊಂಡಂತೆ ಜವಳಿಗಳಿಗೆ ಗಮನಾರ್ಹ ಬೇಡಿಕೆ ಇತ್ತು. ಉದಾಹರಣೆಗೆ, ಯುರೋಪಿಯನ್ ಫ್ಯಾಷನ್ ಮೊಘಲ್ ಸಾಮ್ರಾಜ್ಯದಿಂದ ಆಮದು ಮಾಡಿಕೊಂಡ ಜವಳಿ ಮತ್ತು ರೇಷ್ಮೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ೧೭ ನೇ ಶತಮಾನದ ಕೊನೆಯಲ್ಲಿ ಮತ್ತು ೧೮ ನೇ ಶತಮಾನದ ಆರಂಭದಲ್ಲಿ, ಮೊಘಲ್ ಸಾಮ್ರಾಜ್ಯವು ಏಷ್ಯಾದಿಂದ ೯೫% ಬ್ರಿಟಿಷ್ ಆಮದುಗಳನ್ನು ಹೊಂದಿತ್ತು. ಇದನ್ನು ಈಸ್ಟ್ ಇಂಡಿಯಾ ಕಂಪನಿಯ (EIC) ಆಶ್ರಯದಲ್ಲಿ ನಡೆಸಲಾಯಿತು. ಬ್ರಿಟಿಷ್ ಸಾಮ್ರಾಜ್ಯದಲ್ಲಿ ಗುಲಾಮಗಿರಿಯನ್ನು ರದ್ದುಗೊಳಿಸಿದ ನಂತರ ಬ್ರಿಟನ್‌ನಲ್ಲಿನ ತಯಾರಕರು ಅಗ್ಗದ ಹತ್ತಿಯ ಪರ್ಯಾಯ ಮೂಲಗಳನ್ನು ಹುಡುಕಲು ಪ್ರಾರಂಭಿಸಿದರು. ಹಾಗೂ ಅಂತಿಮವಾಗಿ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸ್ವಾಧೀನದಲ್ಲಿ ನೆಲೆಸಿದರು. ಬ್ರಿಟೀಷ್ ಜವಳಿ ಉದ್ಯಮದ ಮೇಲೆ ಹೇರಲಾದ ಸರ್ಕಾರದ ರಕ್ಷಣಾ ನೀತಿಯ ದೀರ್ಘಾವಧಿಯ ನಂತರ, ಈಸ್ಟ್ ಇಂಡಿಯಾ ಕಂಪನಿ (EIC) ಅನೇಕ ರೈತರಿಗೆ ಜೀವನಾಧಾರ ಕೃಷಿಯಿಂದ ಬೃಹತ್ ಪ್ರಮಾಣದ ಹತ್ತಿಯನ್ನು ಉತ್ಪಾದಿಸಲು ಮತ್ತು ರಫ್ತು ಮಾಡಲು ಹಾಗೂ ಬದಲಾಯಿಸಲು ಮನವರಿಕೆ ಮಾಡಿತು. ಅಂತಿಮವಾಗಿ ವಸಾಹತುಶಾಹಿಯಿಂದ ಸಾಧ್ಯವಾದ ತಾಂತ್ರಿಕ ಮತ್ತು ಮಾರುಕಟ್ಟೆಯ ಪ್ರಗತಿಗಳ ಮೂಲಕ ಕುಶಲಕರ್ಮಿಗಳ ಜವಳಿ ಉತ್ಪಾದನೆಯ ಸಾಂಪ್ರದಾಯಿಕ ವಿಧಾನವು ಗಣನೀಯವಾಗಿ ಕುಸಿಯಿತು ಮತ್ತು ದೊಡ್ಡ ಪ್ರಮಾಣದ ಕಾರ್ಖಾನೆ ಉತ್ಪಾದನೆಯೊಂದಿಗೆ ಬದಲಾಯಿಸಲ್ಪಟ್ಟಿತು.

ಭಾರತದಲ್ಲಿ ಜವಳಿ ಉದ್ಯಮ 
ಜವಳಿ ಕಲಾವಿದರು ೨೦೦೨ ರ ಸ್ಮಿತ್ಸೋನಿಯನ್ ಫೋಕ್‌ಲೈಫ್ ಫೆಸ್ಟಿವಲ್‌ನಲ್ಲಿ ಡಬಲ್ ಇಕಾಟ್ ಪಟೋಲಾ ನೇಯ್ಗೆಯನ್ನು ಪ್ರದರ್ಶಿಸಿದರು
ಭಾರತದಲ್ಲಿ ಜವಳಿ ಉದ್ಯಮ 
ಭಾರತೀಯ ಕೈಮಗ್ಗಗಳ ನಕ್ಷೆ

ಹತ್ತಿ

ಆರಂಭಿಕ ವರ್ಷಗಳಲ್ಲಿ ಹತ್ತಿ ಜವಳಿ ಉದ್ಯಮವು ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತ್‌ನ ಹತ್ತಿ ಬೆಳೆಯುವ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು. ಕಚ್ಚಾ ವಸ್ತುಗಳ ಲಭ್ಯತೆ, ಮಾರುಕಟ್ಟೆ, ಸಾರಿಗೆ, ಕಾರ್ಮಿಕರು, ಆರ್ದ್ರ ವಾತಾವರಣ ಮತ್ತು ಇತರ ಅಂಶಗಳು ಸ್ಥಳೀಕರಣಕ್ಕೆ ಕಾರಣವಾಗಿವೆ. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಈ ಉದ್ಯಮವು ಬಾಂಬೆಯ ಆರ್ಥಿಕತೆಯಲ್ಲಿ ದೊಡ್ಡ ಪಾತ್ರವನ್ನು ವಹಿಸಿತು ಆದರೆ ಸ್ವಾತಂತ್ರ್ಯದ ನಂತರ ಶೀಘ್ರದಲ್ಲೇ ಕುಸಿಯಿತು. ೩೦ ನವೆಂಬರ್ ೨೦೧೧ ರಂತೆ ಭಾರತದಲ್ಲಿ ೧,೯೪೬ ಹತ್ತಿ ಜವಳಿ ಗಿರಣಿಗಳಿವೆ ಹಾಗೂ ಅವುಗಳಲ್ಲಿ ಸುಮಾರು ೮೦% ಖಾಸಗಿ ವಲಯದಲ್ಲಿ ಮತ್ತು ಉಳಿದವು ಸಾರ್ವಜನಿಕ ಮತ್ತು ಸಹಕಾರಿ ವಲಯದಲ್ಲಿವೆ. ಇವುಗಳ ಹೊರತಾಗಿ, ಮೂರರಿಂದ ಹತ್ತು ಮಗ್ಗಗಳನ್ನು ಹೊಂದಿರುವ ಹಲವಾರು ಸಾವಿರ ಸಣ್ಣ ಕಾರ್ಖಾನೆಗಳಿವೆ. ಭಾರತದಲ್ಲಿ 'ಜವಳಿ ಸಮಿತಿ ಕಾಯ್ದೆ ೧೯೬೩' ರ ಅಡಿಯಲ್ಲಿ ಸಮಿತಿಯನ್ನು ಸ್ಥಾಪಿಸಲಾಗಿದೆ. ಈ ಸಮಿತಿಯು ಆಂತರಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮತ್ತು ರಫ್ತು ಮಾಡಲು ತಯಾರಿಸಿದ ಜವಳಿಗಳಿಗೆ ಗುಣಮಟ್ಟದ ಮಾನದಂಡಗಳನ್ನು ಹೊಂದಿಸುತ್ತದೆ.

ಭಾರತವು ಜಪಾನ್, ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಕಿಂಗ್‌ಡಮ್, ರಷ್ಯಾ, ಫ್ರಾನ್ಸ್, ನೇಪಾಳ, ಸಿಂಗಾಪುರ, ಶ್ರೀಲಂಕಾ ಮತ್ತು ಇತರ ದೇಶಗಳಿಗೆ ನೂಲು ರಫ್ತು ಮಾಡುತ್ತದೆ. ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಸ್ಪಿಂಡಲ್‌ಗಳ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ(೪೩.೧೩ ಮಿಲಿಯನ್ ಸ್ಪಿಂಡಲ್‌ಗಳು). ಹತ್ತಿ ನೂಲಿನ ವಿಶ್ವ ವ್ಯಾಪಾರದಲ್ಲಿ ಭಾರತವು ಹೆಚ್ಚಿನ ಪಾಲನ್ನು ಹೊಂದಿದ್ದರೂ, ಉಡುಪುಗಳ ವ್ಯಾಪಾರದಲ್ಲಿ ಪ್ರಪಂಚದ ಒಟ್ಟು ೪% ಮಾತ್ರ ಹೊಂದಿದೆ.

ಭಾರತವು ೧೨,೪ ಮಿಲಿಯನ್ ಹೆಕ್ಟೇರ್ ಕೃಷಿಯಲ್ಲಿ ಅತಿ ದೊಡ್ಡ ಹತ್ತಿ ವಿಸ್ತೀರ್ಣವನ್ನು ಹೊಂದಿದೆ. ಇದು ಒಟ್ಟು ಜಾಗತಿಕ ೩೪,೧ ಮಿಲಿಯನ್ ಹೆಕ್ಟೇರ್‌ಗಳಲ್ಲಿ ಸುಮಾರು ೩೬ ಪ್ರತಿಶತವನ್ನು ಹೊಂದಿದೆ.

ಸೆಣಬು

ಭಾರತವು ಕಚ್ಚಾ ಸೆಣಬು ಮತ್ತು ಸೆಣಬಿನ ಸರಕುಗಳ ಅತಿದೊಡ್ಡ ಉತ್ಪಾದಕ ಮತ್ತು ಬಾಂಗ್ಲಾದೇಶದ ನಂತರ ಮೂರನೇ ಅತಿದೊಡ್ಡ ರಫ್ತುದಾರ ರಾಷ್ಟ್ರವಾಗಿದೆ. ೨೦೧೦-೧೧ರಲ್ಲಿ ಭಾರತದಲ್ಲಿ ಸುಮಾರು ೮೦ ಸೆಣಬಿನ ಗಿರಣಿಗಳು ಇದ್ದವು ಹಾಗೂ ಅವುಗಳಲ್ಲಿ ಹೆಚ್ಚಿನವು ಪಶ್ಚಿಮ ಬಂಗಾಳದಲ್ಲಿ, ಮುಖ್ಯವಾಗಿ ಹೂಗ್ಲಿ ನದಿಯ ದಡದಲ್ಲಿನ ಕಿರಿದಾದ ಬೆಲ್ಟ್‌ನಲ್ಲಿವೆ (೯೮ ಕಿಮೀ ಉದ್ದ ಮತ್ತು ೩ ಕಿಮೀ ಅಗಲ).

೨೦೧೦-೨೦೧೧ ರಲ್ಲಿ ಸೆಣಬಿನ ಉದ್ಯಮವು ೦.೩೭ ಮಿಲಿಯನ್ ಕಾರ್ಮಿಕರನ್ನು ನೇರವಾಗಿ ಮತ್ತು ೪೦೦,೦೦೦ ಸಣ್ಣ ಮತ್ತು ಕನಿಷ್ಠ ರೈತರನ್ನು ಸೆಣಬಿನ ಕೃಷಿಯಲ್ಲಿ ತೊಡಗಿಸಿಕೊಂಡಿದೆ.

ಉದ್ಯಮವು ಎದುರಿಸುತ್ತಿರುವ ಸವಾಲುಗಳಲ್ಲಿ ಸಿಂಥೆಟಿಕ್ ಬದಲಿಗಳಿಂದ ಮತ್ತು ಬಾಂಗ್ಲಾದೇಶ, ಬ್ರೆಜಿಲ್, ಫಿಲಿಪೈನ್ಸ್, ಈಜಿಪ್ಟ್ ಮತ್ತು ಥೈಲ್ಯಾಂಡ್ ನಂತಹ ಇತರ ದೇಶಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಠಿಣ ಸ್ಪರ್ಧೆಯ ಸವಾಲುಗಳನ್ನೂ ಒಳಗೊಂಡಿರುತ್ತದೆ. ಆದಾಗ್ಯೂ, ಸೆಣಬಿನ ಪ್ಯಾಕೇಜಿಂಗ್ ಅನ್ನು ಕಡ್ಡಾಯವಾಗಿ ಬಳಸುವ ಸರ್ಕಾರದ ನೀತಿಯಿಂದಾಗಿ ಆಂತರಿಕ ಬೇಡಿಕೆ ಹೆಚ್ಚುತ್ತಿದೆ. ಇದರ ಬೇಡಿಕೆಯನ್ನು ಉತ್ತೇಜಿಸಲು ಉತ್ಪನ್ನಗಳನ್ನು ವೈವಿಧ್ಯಗೊಳಿಸಬೇಕಾದ ಅನಿವಾರ್ಯತೆ ಇದೆ. ಸೆಣಬಿನ ಗುಣಮಟ್ಟವನ್ನು ಸುಧಾರಿಸುವ, ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ಬೆಳೆಯ ಇಳುವರಿಯನ್ನು ಹೆಚ್ಚಿಸುವ ಉದ್ದೇಶದಿಂದ ೨೦೦೫ ರಲ್ಲಿ 'ರಾಷ್ಟ್ರೀಯ ಸೆಣಬಿನ ನೀತಿ' ಯನ್ನು ರೂಪಿಸಲಾಯಿತು.

ಸೆಣಬಿನ ಮುಖ್ಯ ಮಾರುಕಟ್ಟೆಗಳೆಂದರೆ ಯುನೈಟೆಡ್ ಸ್ಟೇಟ್ಸ್, ಕೆನಡಾ, ರಷ್ಯಾ, ಯುನೈಟೆಡ್ ಕಿಂಗ್ಡಮ್ ಮತ್ತು ಆಸ್ಟ್ರೇಲಿಯಾ .

ಜವಳಿ ಮತ್ತು ಕೈಗಾರಿಕೆ ಸಚಿವಾಲಯ

೨೦೦೦ ರಲ್ಲಿ , ಭಾರತ ಸರ್ಕಾರವು ರಾಷ್ಟ್ರೀಯ ಜವಳಿ ನೀತಿಯನ್ನು ಅಂಗೀಕರಿಸಿತು. ಜವಳಿ ಸಚಿವಾಲಯದ ಪ್ರಮುಖ ಕಾರ್ಯಗಳೆಂದರೆ- ಮಾನವ ನಿರ್ಮಿತ ಫೈಬರ್, ಹತ್ತಿ, ಸೆಣಬು, ರೇಷ್ಮೆ, ಉಣ್ಣೆ ಕೈಗಾರಿಕೆಗಳ ನೀತಿ ಮತ್ತು ಸಮನ್ವಯ; ಪವರ್ ಲೂಮ್ ಕ್ಷೇತ್ರದ ವಿಕೇಂದ್ರೀಕರಣ; ರಫ್ತು ಉತ್ತೇಜನ; ಯೋಜನೆ ಮತ್ತು ಆರ್ಥಿಕ ವಿಶ್ಲೇಷಣೆ; ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವುದಾಗಿದೆ. ಈ ಜವಳಿ ಸಚಿವಾಲಯವು ಪ್ರಸ್ತುತ ಪಿಯೂಷ್ ಗೋಯಲ್ ಅವರ ನೇತೃತ್ವದಲ್ಲಿದೆ. ದರ್ಶನಾಬೆನ್ ಜರ್ದೋಶ್ ಪ್ರಸ್ತುತ ರಾಜ್ಯ ಸಚಿವರಾಗಿದ್ದಾರೆ. ಸಚಿವಾಲಯದ ಸಲಹಾ ಮಂಡಳಿಗಳಲ್ಲಿ ಅಖಿಲ ಭಾರತ ಕೈಮಗ್ಗ ಮಂಡಳಿ, ಅಖಿಲ ಭಾರತ ಕರಕುಶಲ ಮಂಡಳಿ, ಅಖಿಲ ಭಾರತ ಪವರ್ ಲೂಮ್ಸ್ ಬೋರ್ಡ್, ಕೈಮಗ್ಗದ ಕಾಯ್ದಿರಿಸುವಿಕೆಯ ಅಡಿಯಲ್ಲಿ ಸಲಹಾ ಸಮಿತಿಯು ಉತ್ಪಾದನೆ ಮತ್ತು ಜವಳಿ ಸಂಶೋಧನಾ ಸಂಘದ ಸಮನ್ವಯ ಮಂಡಳಿಯನ್ನು ಒಳಗೊಂಡಿದೆ. ದೇಶಾದ್ಯಂತ ಹಲವಾರು ಸಾರ್ವಜನಿಕ ವಲಯದ ಘಟಕಗಳು ಮತ್ತು ಜವಳಿ ಸಂಶೋಧನಾ ಸಂಘಗಳಿವೆ.

ಉಲ್ಲೇಖಗಳು

Tags:

ಭಾರತದಲ್ಲಿ ಜವಳಿ ಉದ್ಯಮ ಇತಿಹಾಸಭಾರತದಲ್ಲಿ ಜವಳಿ ಉದ್ಯಮ ಹತ್ತಿಭಾರತದಲ್ಲಿ ಜವಳಿ ಉದ್ಯಮ ಸೆಣಬುಭಾರತದಲ್ಲಿ ಜವಳಿ ಉದ್ಯಮ ಜವಳಿ ಮತ್ತು ಕೈಗಾರಿಕೆ ಸಚಿವಾಲಯಭಾರತದಲ್ಲಿ ಜವಳಿ ಉದ್ಯಮ ಉಲ್ಲೇಖಗಳುಭಾರತದಲ್ಲಿ ಜವಳಿ ಉದ್ಯಮಜವಳಿ ಸಚಿವಾಲಯಬಟ್ಟೆಭಾರತಭಾರತದಲ್ಲಿ ಕೃಷಿಹಣಕಾಸಿನ ವರ್ಷ

🔥 Trending searches on Wiki ಕನ್ನಡ:

ರಾಷ್ಟ್ರಕೂಟಭಾರತದ ಸಂವಿಧಾನ ರಚನಾ ಸಭೆಕಳಿಂಗ ಯುದ್ದ ಕ್ರಿ.ಪೂ.261ತೆಲುಗುಭಾರತೀಯ ಭೂಸೇನೆಹುಲಿಕನ್ನಡಜೋಡು ನುಡಿಗಟ್ಟುಭ್ರಷ್ಟಾಚಾರಬೌದ್ಧ ಧರ್ಮಸಹಕಾರಿ ಸಂಘಗಳುಉಪ್ಪಿನ ಸತ್ಯಾಗ್ರಹಮುದ್ದಣನರಿಗಾಂಧಿ ಜಯಂತಿಕನ್ನಡದಲ್ಲಿ ಪ್ರವಾಸ ಸಾಹಿತ್ಯಶ್ಯೆಕ್ಷಣಿಕ ತಂತ್ರಜ್ಞಾನಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಪೊನ್ನರಾಷ್ಟ್ರಕವಿಧರ್ಮ (ಭಾರತೀಯ ಪರಿಕಲ್ಪನೆ)ಕರ್ನಾಟಕ ಯುದ್ಧಗಳುಲೆಕ್ಕ ಪರಿಶೋಧನೆವಿಜ್ಞಾನಪೌರತ್ವಬನವಾಸಿನೀರು (ಅಣು)ಪ್ರಬಂಧ ರಚನೆಭಾರತದ ಸಂಸತ್ತುಮೇರಿ ಕೋಮ್ಉತ್ತರ ಕನ್ನಡಪ್ರಗತಿಶೀಲ ಸಾಹಿತ್ಯಜಾನಪದರಾಘವಾಂಕರೆವರೆಂಡ್ ಎಫ್ ಕಿಟ್ಟೆಲ್ವ್ಯಾಪಾರಚಾಲುಕ್ಯಇಂಕಾಕರ್ನಾಟಕ ಸರ್ಕಾರಆಂಗ್‌ಕರ್ ವಾಟ್ಕಾವೇರಿ ನದಿಗೋವಜಾತ್ರೆಇಮ್ಮಡಿ ಪುಲಿಕೇಶಿಪ್ರಾಚೀನ ಈಜಿಪ್ಟ್‌ಚಾಮುಂಡರಾಯಕೃಷ್ಣಸಾಲುಮರದ ತಿಮ್ಮಕ್ಕಜನಪದ ಕ್ರೀಡೆಗಳುರೋಸ್‌ಮರಿಹೊಯ್ಸಳ ವಿಷ್ಣುವರ್ಧನಖೊಖೊಒಲಂಪಿಕ್ ಕ್ರೀಡಾಕೂಟಬಂಡವಾಳಶಾಹಿಕರ್ನಾಟಕ ಜನಪದ ನೃತ್ಯಸೂರ್ಯ (ದೇವ)ಸತಿ ಪದ್ಧತಿಭಾವನೆಹೆಣ್ಣು ಬ್ರೂಣ ಹತ್ಯೆಮೂಢನಂಬಿಕೆಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶ್ರೀ ರಾಮ ನವಮಿಷಟ್ಪದಿರತ್ನಾಕರ ವರ್ಣಿಭೋವಿಬೆಂಗಳೂರುಸುಧಾ ಮೂರ್ತಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಓಂ (ಚಲನಚಿತ್ರ)ಕನಕದಾಸರುಹದಿಬದೆಯ ಧರ್ಮನಕ್ಷತ್ರಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕಾನೂನುಭಂಗ ಚಳವಳಿಮಾರ್ಕ್ಸ್‌ವಾದಭಾಮಿನೀ ಷಟ್ಪದಿಊಳಿಗಮಾನ ಪದ್ಧತಿಹುಯಿಲಗೋಳ ನಾರಾಯಣರಾಯಕ್ರೈಸ್ತ ಧರ್ಮ🡆 More