ಬಟ್ಟೆ

ಬಟ್ಟೆಯು ಹಲವು ವೇಳೆ ದಾರ ಅಥವಾ ನೂಲು ಎಂದು ನಿರ್ದೇಶಿಸಲಾಗುವ ನೈಸರ್ಗಿಕ ಅಥವಾ ಕೃತಕ ಎಳೆಗಳ ಜಾಲವನ್ನು ಹೊಂದಿರುವ ಒಂದು ಮೆದುವಾದ ವಸ್ತು.

    ಅಂಬರ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಆಕಾಶದ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.

ಬಹಳ ಪ್ರಾಚೀನ ಕಾಲದಿಂದ ಇಲ್ಲಿಯವರೆಗೂ ಮನುಷ್ಯನಿಗೆ ಬಟ್ಟೆಯ ಆವಶ್ಯಕತೆ, ಊಟ, ವಸತಿಯ ನಂತರ ಮಹತ್ವದ ಪಾತ್ರವನ್ನು ವಹಿಸಿದೆ. ನೂಲನ್ನು ಉದ್ದನೆಯ ಎಳೆಗಳನ್ನು ತಯಾರಿಸಲು ಕಚ್ಚಾ ಉಣ್ಣೆಯ ಎಳೆಗಳು, ನಾರುಬಟ್ಟೆ, ಹತ್ತಿ, ಅಥವಾ ಇತರ ವಸ್ತುವನ್ನು ನೂಲುವ ರಾಟೆಯ ಮೇಲೆ ನೂಲುವ ಮೂಲಕ ತಯಾರಿಸಲಾಗುತ್ತದೆ. ಬಟ್ಟೆಗಳನ್ನು ನೆಯ್ಗೆ, ಹೆಣಿಗೆ, ಕ್ರೋಶವನ್ನು ಬಳಸಿ, ಕುಚ್ಚು ಹಾಕುವಿಕೆ, ಅಥವಾ ಎಳೆಗಳನ್ನು ಒಟ್ಟಾಗಿ ಒತ್ತುವುದರ (ಉಣ್ಣೆಬಟ್ಟೆ) ಮೂಲಕ ತಯಾರಿಸಲಾಗುತ್ತದೆ.

ಬಟ್ಟೆ
ಕರಾಚಿಯ ಬಟ್ಟೆ ಮಾರುಕಟ್ಟೆ

ಇತಿಹಾಸ

    ಮುಖ್ಯ ಲೇಖನ: ಬಟ್ಟೆಯ ಇತಿಹಾಸ
ಬಟ್ಟೆ 
ಈಗ ಡಂಬಾರ್ಟನ್ ಓಕ್ಸ್ ಸಮುಚ್ಚಯದಲ್ಲಿರುವ ಈಜಿಪ್ಟ್‌ನ ಪ್ರಾಚೀನ ಬಟ್ಟೆ
ಬಟ್ಟೆ 
"ಮಿಸಸ್ ಕಾಂಡೇ ನ್ಯಾಸ್ಟ್ ಪ್ರಸಿದ್ಧ ಫ಼ುರ್ತೂನಿ ಟೀ ಗೌನ್‌ಗಳ ಪೈಕಿ ಒಂದನ್ನು ಧರಿಸಿರುವುದು. ಇದು ಟೂನಿಕನ್ನು ಹೊಂದಿಲ್ಲವಾದರೂ ಫ಼ುರ್ತೂನಿ ಶೈಲಿಯಲ್ಲಿರುವಂತೆ ನವುರಾದ ನಿರಿಗೆಗಳನ್ನು ಹೊಂದಿದೆ ಮತ್ತು ಬಾಹ್ಯಾಕಾರವನ್ನು ನಿಕಟವಾಗಿ ಅನುಸರಿಸಿ ಉದ್ದವಾದ ರೇಖೆಗಳಲ್ಲಿ ನೆಲಕ್ಕೆ ಇಳಿಯುತ್ತದೆ"

ಕ್ರಿ.ಶ. ೩೪,೦೦೦ರ ಕಾಲಮಾನದ್ದೆಂದು ನಿರ್ಧರಿಸಲಾಗಿರುವ ಜಾರ್ಜ ಗಣರಾಜ್ಯದಲ್ಲಿನ ಒಂದು ಗವಿಯಲ್ಲಿ ಬಣ್ಣ ಹಾಕಿದ ಅಗಸೆ ನಾರುಗಳ ಶೋಧನೆಯು ಬಟ್ಟೆಯಂತಹ ವಸ್ತುಗಳು ಪ್ರಾಗೈತಿಹಾಸಿಕ ಕಾಲದಲ್ಲೂ ತಯಾರಿಸಲ್ಪಡುತ್ತಿದ್ದವೆಂದು ಸೂಚಿಸುತ್ತದೆ.

ಬಟ್ಟೆಗಳ ಉತ್ಪಾದನೆಯು ಒಂದು ಕೌಶಲವಾಗಿದೆ ಮತ್ತು ಇದರ ವೇಗ ಮತ್ತು ಉತ್ಪಾದನಾ ಶ್ರೇಣಿಯು ಔದ್ಯೋಗೀಕರಣ ಮತ್ತು ಆಧುನಿಕ ತಯಾರಿಕಾ ತಂತ್ರಗಳ ಪರಿಚಯದಿಂದಾಗಿ ಬಹುಮಟ್ಟಿಗೆ ಗುರುತಿಸಲಾರದಷ್ಟು ಮಾರ್ಪಾಟುಗೊಂಡಿದೆ. ಆದಾಗ್ಯೂ, ಬಟ್ಟೆಗಳ ಮುಖ್ಯ ಪ್ರಕಾರಗಳಾದ ಸರಳ ಹೆಣಿಗೆ, ಟ್ವಿಲ್, ಅಥವಾ ಸ್ಯಾಟಿನ್ ಹೆಣಿಗೆಗಳ ಸಂಬಂಧದಲ್ಲಿ, ಪ್ರಾಚೀನ ಮತ್ತು ಆಧುನಿಕ ವಿಧಾನಗಳ ನಡುವೆ ಹೆಚ್ಚು ವ್ಯತ್ಯಾಸವಿಲ್ಲ.

ಇನ್ಕಾಗಳು ಸಾವಿರಾರು ವರ್ಷಗಳಿಂದ ಉಣ್ಣೆಯಂಥ, ನೂಲು ತೆಗೆದ ಮತ್ತು ಎಳೆದ ದಾರದಂತಹ ಪ್ರೋಟೀನ್‌ನಿಂದ ಪಡೆದ, ಅಥವಾ ಆಲ್ಪ್ಯಾಕಾಗಳು, ಲಾಮಾಗಳು ಮತ್ತು ಒಂಟೆಗಳಂತಹ ಕಮೆಲಿಡ್‌ಗಳ ಕೂದಲಿನಿಂದ ಪಡೆದ, ಅಥವಾ ಹತ್ತಿಯಂತಹ ಒಂದು ಸೆಲ್ಯಲೋಸ್‌ನಿಂದ ಪಡೆದ ನಾರುಗಳಿಂದ ರಚಿತವಾದ ಕೀಪೂಗಳನ್ನು (ಅಥವಾ ಖೀಪೂ) ಕೌಶಲದಿಂದ ತಯಾರಿಸುತ್ತಿದ್ದಾರೆ. ಖೀಪೂಗಳು ದಾರದ ಚೂರುಗಳ ಉದ್ದಕ್ಕೂ ಇರುವ ಗಂಟುಗಳ ಒಂದು ಸರಣಿ. ಅವು ಕೇವಲ ಹಣಕಾಸು ಲೆಕ್ಕದ ಒಂದು ಬಗೆಯಾಗಿ ಕಾರ್ಯ ನಿರ್ವಹಿಸುತ್ತಿದ್ದವೆಂದು ನಂಬಲಾಗಿದೆಯಾದರೂ, ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಗ್ಯಾರಿ ಅರ್ಟನ್ ನೀಡಿದ ಹೊಸ ಸಾಕ್ಷ್ಯಾಧಾರವು ಖೀಪೂನ ಉಪಯೋಗ ಬರೀ ಸಂಖ್ಯೆಗಳಷ್ಟೇ ಅಲ್ಲದೇ ಇನ್ನೂ ಹೆಚ್ಚು ಇರಬಹುದೆಂದು ಸೂಚಿಸುತ್ತದೆ. ವಸ್ತು ಸಂಗ್ರಹಾಲಯ ಮತ್ತು ದಾಖಲೆ ಸಂಗ್ರಹಗಳಲ್ಲಿ ಕಾಣುವ ಖೀಪೂಗಳ ಸಂರಕ್ಷಣೆಯು ಪ್ರಚಲಿತ ವಸ್ತ್ರ ಸಂರಕ್ಷಣೆ ನಿಯಮಗಳು ಮತ್ತು ಪದ್ಧತಿಯನ್ನು ಅನುಸರಿಸುತ್ತದೆ.

ಹತ್ತಿಯ ಉಪಯೋಗ ಭಾರತದಲ್ಲಿ ವೇದಗಳ ಕಾಲದಷ್ಟು ಹಳೆಯದು. ಹತ್ತಿಯ ಬಟ್ಟೆಯಿಂದ ಉಡುಪುಗಳನ್ನು ತಯಾರಿಸುವ ಕಲೆಯಲ್ಲಿ ಭಾರತೀಯರು ನಿಷ್ಣಾತರು. ಹತ್ತಿಬಟ್ಟೆಯ ಜೊತೆಗೆ ಬಣ್ಣಹಾಕುವ, ಮುದ್ರಿಸುವ, ಹಾಗೂ ಅದನ್ನು ಕೆಡದಂತೆ ಸಂಸ್ಕರಿಸುವ ಕಲೆಗಳನ್ನು ವಿಕಾಸಮಾಡಿಕೊಳ್ಳುತ್ತಾ ಹೋದರು. ಇದು ಕೇವಲ ಒಂದು ಪ್ರಾಂತ್ಯಕ್ಕೆ ಸೀಮಿತವಾಗದೆ, ಭಾರತದೇಶವಿಡೀ ಇದರಲ್ಲಿ ಪಾಲ್ಗೊಂಡಿತ್ತು.

ಬಳಕೆಗಳು

ಬಟ್ಟೆಗಳು ವಿವಿಧ ಬಳಕೆಗಳನ್ನು ಹೊಂದಿವೆ, ಅತ್ಯಂತ ಸಾಮಾನ್ಯವಾಗಿ ಉಡುಪು, ಮತ್ತು ಚೀಲಗಳು ಹಾಗೂ ಬುಟ್ಟಿಗಳಂತಹ ಧಾರಕಗಳಿಗಾಗಿ ಬಳಸಲ್ಪಡುತ್ತವೆ. ಮನೆಯಲ್ಲಿ, ಅವು ಜಮಖಾನೆ, ಗವಸನ್ನು ಹೊಂದಿದ ಗೃಹವಸ್ತುಗಳು, ಕಿಟಕಿಯ ಪರದೆಗಳು, ಟವೆಲ್ಲುಗಳು, ಮೇಜುಗಳು, ಹಾಸಿಗೆಗಳು ಹಾಗೂ ಇತರ ಸಮತಲ ಮೇಲ್ಮೈಗಳ ಹೊದಿಕೆಗಳಿಗಾಗಿ, ಮತ್ತು ಕಲೆಯಲ್ಲಿ ಬಳಸಲ್ಪಡುತ್ತವೆ. ಕಾರ್ಯಸ್ಥಳದಲ್ಲಿ, ಅವು ಸೋಸುವಿಕೆಯಂತಹ ಕೈಗಾರಿಕಾ ಮತ್ತು ವೈಜ್ಞಾನಿಕ ಪ್ರಕ್ರಿಯೆಗಳಲ್ಲಿ ಬಳಸಲ್ಪಡುತ್ತವೆ. ಇತರ ಬಳಕೆಗಳು, ನಾರುಗಾಜು ಮತ್ತು ಔದ್ಯೋಗಿಕ ಜಿಯೋಟೆಕ್ಸ್‌ಟೈಲ್ಗಳಂತಹ ಸಮ್ಮಿಶ್ರ ವಸ್ತುಗಳಲ್ಲಿ ಬಲಪಡಿಸುವಿಕೆಯನ್ನು ಒಳಗೊಂಡಂತೆ, ಬಾವುಟಗಳು, ಬೆನ್ನುಚೀಲಗಳು, ಡೇರೆಗಳು, ಬಲೆಗಳು, ಕರವಸ್ತ್ರ ಮತ್ತು ಜೂಲುಬಟ್ಟೆಗಳಂತಹ ಸ್ವಚ್ಛಗೊಳಿಸುವ ಸಾಧನಗಳು, ಬಲೂನುಗಳು, ಗಾಳಿಪಟಗಳು, ನೌಕಾಪಟಗಳು ಮತ್ತು ಇಳಿಕೊಡೆಗಳಂತಹ ಸಾರಿಗೆ ಸಾಧನಗಳನ್ನು ಒಳಗೊಂಡಿವೆ. ಮಕ್ಕಳು ಬಟ್ಟೆಗಳನ್ನು ಬಳಸಿ ಕಲಾಜ್ಗಳು ಹಾಗೂ ಆಟಿಕೆಗಳನ್ನು ತಯಾರಿಸುವುದನ್ನು ಮತ್ತು ಹೊಲಿಗೆ ಹಾಗೂ ಕ್ವಿಲ್ಟಿಂಗ್ ಕಲಿಯಬಹುದು.

ಔದ್ಯೋಗಿಕ ಉದ್ದೇಶಗಳಿಗಾಗಿ ಬಳಸಲಾದ, ಮತ್ತು ಅವುಗಳ ನೋಟದ ಬದಲು ವಿಶೇಷಗುಣಗಳಿಗಾಗಿ ಆಯ್ಕೆಮಾಡಲಾದ ಬಟ್ಟೆಗಳನ್ನು ಸಾಮಾನ್ಯವಾಗಿ ತಾಂತ್ರಿಕ ಬಟ್ಟೆಗಳೆಂದು ನಿರ್ದೇಶಿಸಲಾಗುತ್ತದೆ. ತಾಂತ್ರಿಕ ಬಟ್ಟೆಗಳು ಸ್ವಯಂಚಾಲಿತ ಕ್ರಿಯೆಗಳಿಗಾಗಿ ವಸ್ತ್ರ ರಚನೆಗಳು, ವೈದ್ಯಕೀಯ ಬಟ್ಟೆಗಳು (ಉದಾ. ಕಸಿ ವಸ್ತುಗಳು), ಜಿಯೋಟೆಕ್ಸ್‌ಟೈಲ್‌ಗಳು (ಒಡ್ಡುಗಳ ಬಲವರ್ಧನೆ), ಕೃಷಿ ಬಟ್ಟೆಗಳು (ಬೆಳೆ ರಕ್ಷಣೆಗಾಗಿ ಬಟ್ಟೆಗಳು), ರಕ್ಷಣಾ ಉಡುಪುಗಳನ್ನು (ಉದಾ. ಅಗ್ನಿಶಾಮಕ ಉಡುಪುಗಳಿಗಾಗಿ ಧಗೆ ಮತ್ತು ವಿಕಿರಣದ ವಿರುದ್ಧ, ಬೆಸುಗೆಗಾರರಿಗಾಗಿ ಕರಗಿದ ಲೋಹಗಳ ವಿರುದ್ಧ, ಇರಿತದಿಂದ ರಕ್ಷಣೆ, ಮತ್ತು ಗುಂಡು ನಿರೋಧಕ ಒಳಕವಚಗಳು) ಒಳಗೊಳ್ಳುತ್ತವೆ. ಈ ಎಲ್ಲ ಬಳಕೆಗಳಲ್ಲಿ ಕಠಿಣ ಸಾಮರ್ಥ್ಯಾಗತ್ಯಗಳನ್ನು ಪೂರೈಸಬೇಕಾಗುತ್ತದೆ. ಸತುವಿನ ಆಕ್ಸೈಡ್‌ನ ನ್ಯಾನೋತಂತಿಗಳಿಂದ ಲೇಪಿತವಾದ ದಾರಗಳಿಂದ ನೇಯ್ದ ಪ್ರಯೋಗಾಲಯ ಬಟ್ಟೆಯು ವಾಯು ಅಥವಾ ದೈಹಿಕ ಚಲನೆಗಳಂತಹ ದಿನನಿತ್ಯದ ಕ್ರಿಯೆಗಳಿಂದ ಸೃಷ್ಟಿಯಾದ ಕಂಪನಗಳನ್ನು ಉಪಯೋಗಿಸಿ "ನ್ಯಾನೋವ್ಯವಸ್ಥೆಗಳನ್ನು ಸ್ವಯಂಶಕ್ತಿಚಾಲಿತಗೊಳಿಸಲು" ಯೋಗ್ಯವಾಗಿದೆಯೆಂದು ತೋರಿಸಲಾಗಿದೆ.

ಫ಼್ಯಾಷನ್ ಮತ್ತು ವಸ್ತ್ರ ವಿನ್ಯಾಸಕರು

ತಮ್ಮ ಫ಼್ಯಾಷನ್ ವಸ್ತ್ರಸಂಗ್ರಹಗಳನ್ನು ಇತರರ ವಸ್ತ್ರಸಂಗ್ರಹಗಳಿಗಿಂತ ವಿಶೇಷವೆಂದು ತೋರಿಸಲು ಫ಼್ಯಾಷನ್ ವಿನ್ಯಾಸಕರು ಸಾಮಾನ್ಯವಾಗಿ ವಸ್ತ್ರ ವಿನ್ಯಾಸಗಳ ಮೇಲೆ ಅವಲಂಬಿಸಿರುತ್ತಾರೆ. ಅರ್ಮಾನಿ, ಮಾರಿಸಾಲ್ ಡಲೂನಾ, ನಿಕೋಲ್ ಮಿಲರ್, ಲಿಲಿ ಪುಲಿಟ್ಸರ್, ದಿವಂಗತ ಜಾನಿ ವೆರ್ಸಾಚಿ ಮತ್ತು ಎಮೀಲಿಯೊ ಪೂಚಿಯವರನ್ನು ಅವರ ವಿಶಿಷ್ಟ ಮುದ್ರೆ ಪ್ರಭಾವಿತ ವಿನ್ಯಾಸಗಳಿಂದ ಸುಲಭವಾಗಿ ಗುರುತಿಸಬಹುದು.

ಮೂಲಗಳು ಮತ್ತು ಪ್ರಕಾರಗಳು

ಬಟ್ಟೆ 
ರೊಮೇನಿಯಾದ ಸಾಂಪ್ರದಾಯಿಕ ಮೇಜು ವಸ್ತ್ರ, ಮಾರಾಮೂರೆಶ್

ಬಟ್ಟೆಗಳನ್ನು ಹಲವು ವಸ್ತುಗಳಿಂದ ತಯಾರಿಸಬಹುದು. ಈ ವಸ್ತುಗಳು ನಾಲ್ಕು ಪ್ರಮುಖ ಮೂಲಗಳಿಂದ ಬರುತ್ತವೆ: ಪ್ರಾಣಿ (ಉಣ್ಣೆ, ರೇಷ್ಮೆ), ಸಸ್ಯ (ಹತ್ತಿ, ಅಗಸೆ, ಸೆಣಬು), ಖನಿಜ (ಕಲ್ನಾರು, ನಾರುಗಾಜು), ಮತ್ತು ಕೃತಕ (ನೈಲಾನ್, ಪಾಲಿಯೆಸ್ಟರ್, ಅಕ್ರಿಲಿಕ್). ಗತಕಾಲದಲ್ಲಿ, ಎಲ್ಲ ಬಟ್ಟೆಗಳನ್ನು, ಸಸ್ಯ, ಪ್ರಾಣಿ, ಮತ್ತು ಖನಿಜ ಮೂಲಗಳನ್ನು ಒಳಗೊಂಡಂತೆ, ನೈಸರ್ಗಿಕ ನಾರುಗಳಿಂದ ತಯಾರಿಸಲಾಗುತ್ತಿತ್ತು. ೨೦ನೆಯ ಶತಮಾನದಲ್ಲಿ, ಇವುಗಳ ಜೊತೆಗೆ [[[ಖನಿಜತೈಲ]]]ದಿಂದ ತಯಾರಿಸಲಾದ ಕೃತಕ ನಾರುಗಳು ಸೇರಿದವು.

ಬಟ್ಟೆಗಳನ್ನು ವಿವಿಧ ಬಲಗಳು ಮತ್ತು ಬಾಳಿಕೆಯ ಪ್ರಮಾಣ ಮಾಪನಗಳಲ್ಲಿ ತಯಾರಿಸಲಾಗುತ್ತದೆ, ಅತ್ಯಂತ ಸೂಕ್ಷ್ಮವಾದ ನೇಯ್ಗೆಯಿಂದ ಅತ್ಯಂತ ದೃಢವಾದ ಕ್ಯಾನ್ವಾಸ್‌ವರೆಗೆ . ಬಟ್ಟೆಯಲ್ಲಿನ ತುಲನಾತ್ಮಕ ಎಳೆಗಳ ದಪ್ಪವನ್ನು ಡನೀರ್‌ಗಳಲ್ಲಿ ಅಳೆಯಲಾಗುತ್ತದೆ. ಮೈಕ್ರೋಫ಼ೈಬರ್ ಒಂದು ಡನೀರ್‌ಗಿಂತ ತೆಳುವಾದ ಎಳೆಗಳಿಂದ ತಯಾರಿಸಲ್ಪಟ್ಟ ನೂಲುಗಳನ್ನು ಸೂಚಿಸುತ್ತದೆ.

ಪ್ರಾಣಿ ಜವಳಿ

ಪ್ರಾಣಿ ಜವಳಿಯನ್ನು ಸಾಮಾನ್ಯವಾಗಿ ಕೂದಲು ಅಥವಾ ತುಪ್ಪುಳದಿಂದ ತಯಾರಿಸಲಾಗುತ್ತದೆ.

ಉಣ್ಣೆಯು ದೇಶೀಯ ಕುರಿ ಅಥವಾ ಆಡಿನ ಕೂದಲನ್ನು ಸೂಚಿಸುತ್ತದೆ. ಪ್ರತ್ಯೇಕ ಎಳೆಗಳು ಪೊರೆಗಳಿಂದ ಲೇಪಿತವಾಗಿರುವುದರಿಂದ ಮತ್ತು ಬಿಗಿಯಾದ ಸುಕ್ಕುಗಳನ್ನು ಹೊಂದಿರುವುದರಿಂದ ಮತ್ತು ಉಣ್ಣೆಯು ಇಡಿಯಾಗಿ ಜಲನಿರೋಧಕ ಮತ್ತು ಧೂಳುನಿರೋಧಕವಾಗಿರುವ ಲ್ಯಾನ್ಲಿನ್ ಎಂದು ಪರಿಚಿತವಾಗಿರುವ ಮೇಣದ ಒಂದು ಮಿಶ್ರಣದ ಲೇಪನ ಹೊಂದಿರುವುದರಿಂದ ಉಣ್ಣೆಯು ಇತರ ಬಗೆಯ ಪ್ರಾಣಿ ಕೂದಲಿಗಿಂತ ವಿಶಿಷ್ಟವಾಗಿದೆ[ಸೂಕ್ತ ಉಲ್ಲೇಖನ ಬೇಕು]. ವುಲನ್ ಹಿಂಜಿದ, ಸಮಾನಾಂತರವಾಗಿರದ ದಾರದಿಂದ ತಯಾರಿಸಲಾದ ದಪ್ಪನೆಯ ನೂಲನ್ನು ಸೂಚಿಸಿದರೆ, ವಸ್ಟಿಡ್ ಸಮಾನಾಂತರವಾಗಿರುವಂತೆ ಹಿಂಜಲಾದ ಹೆಚ್ಚು ಉದ್ದನೆಯ ದಾರಗಳಿಂದ ನೂಲಲಾದ ನಯವಾದ ನೂಲನ್ನು ಸೂಚಿಸುತ್ತದೆ. ಉಣ್ಣೆಯನ್ನು ಸಾಮಾನ್ಯವಾಗಿ ಬೆಚ್ಚನೆಯ ಉಡುಪುಗಳಿಗಾಗಿ ಬಳಸಲಾಗುತ್ತದೆ. ಭಾರತದ ಕಾಶ್ಮೀರದ ಮೇಕೆಯ ಕೂದಲಿನಿಂದ ತಯಾರಿಸಲಾದ ಕಾಶ್ಮೀರ ಉಣ್ಣೆ, ಮತ್ತು ಉತ್ತರ ಆಫ಼್ರಿಕಾದ ಆಂಗೋರಾ ಮೇಕೆಯ ಮೋಹರ್ ಕೂದಲಿನಿಂದ ತಯಾರಿಸಲಾದ ಉಣ್ಣೆ ಅವುಗಳ ಕೋಮಲತೆಗಾಗಿ ಪರಿಚಿತವಾಗಿರುವ ಉಣ್ಣೆಯ ಪ್ರಕಾರಗಳು.

ಆಲ್ಪ್ಯಾಕಾ ಉಣ್ಣೆ, ವಿಕೂನ್ಯ ಉಣ್ಣೆ, ಲಾಮ ಉಣ್ಣೆ ಮತ್ತು ಒಂಟೆ ಕೂದಲು ಕೂದಲು ಅಥವಾ ತುಪ್ಪುಳದಿಂದ ತಯಾರಿಸಲಾದ ಇತರ ಪ್ರಾಣಿ ಜವಳಿಗಳು, ಮತ್ತು ಇವುಗಳನ್ನು ಸಾಮಾನ್ಯವಾಗಿ ಕೋಟುಗಳು, ಜ್ಯಾಕಿಟ್‌ಗಳು, ಪಾಂಚೋಗಳು, ಕಂಬಳಿಗಳು, ಮತ್ತು ಇತರ ಬೆಚ್ಚಗಿನ ಹೊದಿಕೆಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಆಂಗೋರಾ ಆಂಗೋರಾ ಮೊಲದ ಉದ್ದನೆಯ, ದಪ್ಪ, ಮೃದು ಕೂದಲನ್ನು ಸೂಚಿಸುತ್ತದೆ.

ವಾಡ್ಮಲ್, ಉಣ್ಣೆಯಿಂದ, ಸ್ಕ್ಯಾಂಡನೇವಿಯಾದಲ್ಲಿ, ಬಹುಮಟ್ಟಿಗೆ ಕ್ರಿ.ಶ. ೧೦೦೦-೧೫೦೦ರ ನಡುವೆ, ತಯಾರಿಸಲಾದ ಒಂದು ಒರಟಾದ ಬಟ್ಟೆ.

ರೇಷ್ಮೆ ಚೀನಿ ರೇಷ್ಮೆಹುಳುವಿನ ಪೊರೆಗೂಡಿನ ಎಳೆಗಳಿಂದ ತಯಾರಿಸಲಾದ ಒಂದು ಪ್ರಾಣಿ ಜವಳಿ. ಇದನ್ನು, ಅದರ ಅಂದದ ರಚನೆಗಾಗಿ ಮೆಚ್ಚಲಾದ, ಒಂದು ನಯವಾದ, ಹೊಳೆಯುವ ಬಟ್ಟೆಯಾಗಿ ನೂಲಲಾಗುತ್ತದೆ.

ಸಸ್ಯ ಜವಳಿ

ಹುಲ್ಲು, ಜೊಂಡು, ಭಂಗಿ, ಮತ್ತು ಸಿಸಲ್ ಎಲ್ಲವುಗಳನ್ನು ಹಗ್ಗ ತಯಾರಿಸಲು ಬಳಸಲಾಗುತ್ತದೆ. ಮೊದಲ ಎರಡರಲ್ಲಿ, ಸಂಪೂರ್ಣ ಸಸ್ಯವನ್ನು ಈ ಉದ್ದೇಶಕ್ಕಾಗಿ ಬಳಸಲಾದರೆ, ಕೊನೆಯ ಎರಡರಲ್ಲಿ, ಸಸ್ಯದ ನಾರುಗಳನ್ನು ಮಾತ್ರ ಬಳಸಲಾಗುತ್ತದೆ. ತೆಂಗಿನ ನಾರನ್ನು ಹುರಿಯನ್ನು ತಯಾರಿಸಲು, ಮತ್ತು ಕಾಲೊರಸುಗಳು, ಕುಂಚಗಳು, ಹಾಸಿಗೆಗಳು, ನೆಲದ ಹೆಂಚುಗಳು, ಮತ್ತು ಮೂಟೆಗಳಲ್ಲಿಯೂ ಬಳಸಲಾಗುತ್ತದೆ.

ಸ್ಟ್ರಾ ಮತ್ತು ಬಿದಿರು ಎರಡನ್ನೂ ಹ್ಯಾಟುಗಳನ್ನು ತಯಾರಿಸಲು ಬಳಸಲಾಗುತ್ತದೆ. ಒಣಹುಲ್ಲು ಮತ್ತು ಕೆಂಪುಬೂರುಗವನ್ನು ತುಂಬು ಪದಾರ್ಥವಾಗಿಯೂ ಬಳಸಲಾಗುತ್ತದೆ.ತಿಳ್ಳು ಕಟ್ಟಿಗೆ, ಹತ್ತಿ, ಟೆಟ್ರಪೇನ್ಯಾಕ್ಸ್, ಭಂಗಿ, ಮತ್ತು ಚುರುಚುರಿಕೆ ಸಸ್ಯಗಳ ನಾರುಗಳನ್ನು ಕಾಗದ ತಯಾರಿಸಲು ಬಳಸಲಾಗುತ್ತದೆ.

ಹತ್ತಿ, ಅಗಸೆ, ಸೆಣಬು, ಭಂಗಿ, ಮೋಡಲ್ ಮತ್ತು ಬಿದಿರಿನ ನಾರನ್ನು ಸಹ ಉಡುಪು ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪೀನ್ಯಾ (ಅನಾನಸ್‍ನ ನಾರು) ಮತ್ತು ರೇಮಿ ಕೂಡ ಉಡುಪುಗಳಲ್ಲಿ ಬಳಸುವ ನಾರುಗಳಾಗಿವೆ, ಸಾಮಾನ್ಯವಾಗಿ ಹತ್ತಿಯಂತಹ ಇತರ ನಾರುಗಳ ಮಿಶ್ರಣದೊಂದಿಗೆ. ತುರುಚೆ ಗಿಡಗಳನ್ನು ಕೂಡ ಭಂಗಿ ಅಥವಾ ಅಗಸೆಯಂತೆ ನಾರು ಮತ್ತು ಉಡುಪು ತಯಾರಿಸಲು ಬಳಸಲಾಗಿದೆ. ಹಾಲು ಕಳೆಯ ಕಾಂಡದ ನಾರಿನ ಬಳಕೆಯನ್ನು ಕೂಡ ವರದಿ ಮಾಡಲಾಗಿದೆ, ಆದರೆ ಭಂಗಿ ಅಥವಾ ಅಗಸೆಯಂತಹ ಇತರ ನಾರುಗಳಿಗಿಂತ ಅದು ಸ್ವಲ್ಪಮಟ್ಟಿಗೆ ದುರ್ಬಲವಾಗಿರುತ್ತದೆ.

ಆಸಿಟೇಟನ್ನು ರೇಷ್ಮೆ, ಮಖಮಲ್, ಮತ್ತು ಟ್ಯಾಫ಼ಿಟಾದಂತಹ ಕೆಲವು ನೇಯ್ದ ಬಟ್ಟೆಗಳ ಹೊಳಪನ್ನು ಹೆಚ್ಚಿಸಲು ಬಳಸಲಾಗುತ್ತದೆ.

ಕಡಲಕಳೆಯನ್ನು ವಸ್ತ್ರ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಆಲ್ಜನೇಟ್ ಎಂದು ಕರೆಯಲಾಗುವ ಒಂದು ಜಲದ್ರಾವ್ಯ ನಾರನ್ನು ಉತ್ಪಾದಿಸಲಾಗುತ್ತದೆ ಮತ್ತು ಒಂದು ಬಂಧಕ ನಾರಾಗಿ ಬಳಸಲಾಗುತ್ತದೆ;ವಸ್ತ್ರ ತಯಾರಿಕೆ ಪೂರ್ಣವಾದ ನಂತರ ಆಲ್ಜನೇಟನ್ನು ಕರಗಿಸಲಾದಾಗ ಅದು ಮುಕ್ತ ಪ್ರದೇಶವನ್ನು ಹಿಂದೆ ಬಿಡುತ್ತದೆ.

ಲಾಯೋಸೆಲ್, ಕಟ್ಟಿಗೆಯ ತಿಳ್ಳಿನಿಂದ ಪಡೆಯಲಾದ ಒಂದು ಮಾನವ ನಿರ್ಮಿತ ಬಟ್ಟೆ. ಅದನ್ನು ಹಲವುವೇಳೆ ರೇಷ್ಮೆಗೆ ಸಮಾನವಾದ ಮಾನವ ನಿರ್ಮಿತ ವಸ್ತು ಎಂದು ವಿವರಿಸಲಾಗುತ್ತದೆ ಮತ್ತು ಒಂದು ಗಟ್ಟಿಯಾದ ಬಟ್ಟೆಯಾದ ಇದನ್ನು ಹತ್ತಿಯಂತಹ ಇತರ ಬಟ್ಟೆಗಳೊಂದಿಗೆ ಸೇರಿಸಲಾಗುತ್ತದೆ.

ಭಂಗಿ, ಅಗಸೆ, ಮತ್ತು ತುರುಚೆ ಗಿಡಗಳಂತಹ ಸಸ್ಯಗಳ ಕಾಂಡಗಳಿಂದ ಪಡೆದ ನಾರುಗಳನ್ನು 'ಒಳತೊಗಟೆ' ನಾರುಗಳೆಂದೂ ಕರೆಯಲಾಗುತ್ತದೆ.

ಖನಿಜ ಜವಳಿಗಳು

ಕಲ್ನಾರು ಮತ್ತು ಬಸಾಲ್ಟ್ ನಾರನ್ನು ವೈನಲ್ ಹೆಂಚುಗಳು, ಹಲಗೆ ರಚನೆ, ಮತ್ತು ಅಂಟುಗಳು, "ಟ್ರಾನ್ಸೈಟ್" ಫಲಕಗಳು ಮತ್ತು ಒಳಪದರಗಳು, ಶಬ್ದ ನಿಯಂತ್ರಕ ಸೂರುಗಳು, ರಂಗಮಂಚದ ಪರದೆಗಳು, ಮತ್ತು ಅಗ್ನಿ ನಿರೋಧಕ ಕಂಬಳಿಗಳಿಗಾಗಿ ಬಳಸಲಾಗುತ್ತದೆ.

ನಾರುಗಾಜನ್ನು ಬಾನದಿರಿಸುಗಳು, ಇಸ್ತ್ರಿಯ ಹಲಗೆ ಮತ್ತು ಮೆತ್ತೆಯ ಹೊದಿಕೆಗಳು, ಹಗ್ಗಗಳು ಮತ್ತು ಹೊರಜಿಗಳು, ಸಮ್ಮಿಶ್ರ ವಸ್ತುಗಳಿಗಾಗಿ ಬಲವರ್ಧಕ ನಾರು, ಕೀಟ ಜಾಲ, ಜ್ವಾಲಾ ಪ್ರತಿರೋಧಕ ಮತ್ತು ರಕ್ಷಣಾತ್ಮಕ ವಸ್ತ್ರ, ಶಬ್ದ ನಿರೋಧಕ, ಅಗ್ನಿ ನಿರೋಧಕ, ಮತ್ತು ಅವಾಹಕ ನಾರುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಲೋಹದ ನಾರು, ಲೋಹದ ಹಾಳೆ, ಮತ್ತು ಲೋಹದ ತಂತಿ, ಕ್ಲಾತ್ ಅವ್ ಗೋಲ್ಡ್ ಮತ್ತು ಒಡವೆ ತಯಾರಿಕೆಯನ್ನು ಒಳಗೊಂಡಂತೆ, ವಿವಿಧ ಬಳಕೆಗಳನ್ನು ಹೊಂದಿವೆ. ನಿರ್ಮಾಣದಲ್ಲಿ ಬಳಸಲಾಗುವ ಹಾರ್ಡ್‍ವೇರ್ ಕ್ಲಾತ್ (ಹಾರ್ಡ್‍ವೇರ್ ಬಟ್ಟೆ) ಉಕ್ಕಿನ ತಂತಿಯ ಒರಟಾದ ನೇಯ್ಗೆ. ಅದು ಹೆಚ್ಚಿನ ರೀತಿಯಲ್ಲಿ ಸಾಮಾನ್ಯ ಕಿಟಕಿ ಜಾಲರಿಯಂತೆ, ಆದರೆ ಹೆಚ್ಚು ಭಾರವಾಗಿ ಮತ್ತು ಹೆಚ್ಚು ಮುಕ್ತವಾದ ನೇಯ್ಗೆಯನ್ನು ಹೊಂದಿರುತ್ತದೆ. ಕೆಲವೊಮ್ಮೆ ಅದನ್ನು, ನಾಯಿಗಳಿಂದ ಗೀರುವಿಕೆ ತಡೆಯಲು, ಜಾಲರಿಯ ಜೊತೆಗೆ ತೆರೆ ಬಾಗಿಲುಗಳ ಕೆಳ ಭಾಗಗಳಲ್ಲಿ ಬಳಸಲಾಗುತ್ತದೆ.

ಕೃತಕ ಜವಳಿಗಳು

ಬಟ್ಟೆ 
ವಿವಿಧ ಸಮಕಾಲೀನ ಬಟ್ಟೆಗಳು. ಎಡಗಡೆಯಿಂದ: ಸಮನೇಯ್ಗೆಯ ಹತ್ತಿ, ಮಖಮಲ್, ಮುದ್ರಿತ ಹತ್ತಿ, ಕ್ಯಾಲಿಕೊ, ಉಣ್ಣೆಬಟ್ಟೆ, ಸ್ಯಾಟಿನ್, ರೇಷ್ಮೆ, ಹೆಸಿಯನ್, ಪಾಲಿಕಾಟನ್.
ಬಟ್ಟೆ 
ಕ್ಲ್ಯಾನ್ ಕ್ಯಾಂಬಲ್, ಸ್ಕಾಟ್ಲಂಡ್‍ನ ನೇಯ್ದ ಟಾರ್ಟನ್.
ಬಟ್ಟೆ 
ಪೆರು ದೇಶದ ಕೋಚಾಸ್‍ನ ಅಲ್ಫ಼ಾರೊ-ನೂನ್ಯೆಸ್ ಕುಟುಂಬ, ಪೆರುವಿನ ಸಾಂಪ್ರದಾಯಿಕ ಕಸೂತಿ ವಿಧಾನಗಳನ್ನು ಬಳಸಿ ಕಸೂತಿ ಮಾಡಿದ ಲಂಗಗಳು.

ಎಲ್ಲ ಕೃತಕ ಜವಳಿಗಳನ್ನು ಮುಖ್ಯವಾಗಿ ಉಡುಪುಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

ಪಾಲಿಯೆಸ್ಟರ್ ನಾರನ್ನು ಎಲ್ಲ ಬಗೆಯ ಉಡುಪುಗಳಲ್ಲಿ ಬಳಸಲಾಗುತ್ತದೆ, ಒಂಟಿಯಾಗಿ ಅಥವಾ ಹತ್ತಿಯಂತಹ ನಾರುಗಳೊಂದಿಗೆ ಮಿಶ್ರಣಮಾಡಿ.

ಆರಮಿಡ್ ನಾರನ್ನು (ಉದಾ. ಟ್ವಾರೋನ್) ಅಗ್ನಿ-ನಿರೋಧಕ ಉಡುಪು, ಗಾಯ ರಕ್ಷಣೆ, ಮತ್ತು ರಕ್ಷಾಕವಚಕ್ಕಾಗಿ ಬಳಸಲಾಗುತ್ತದೆ.

ಅಕ್ರಿಲಿಕ್, ಕಾಶ್ಮೀರಿ ಉಣ್ಣೆಯನ್ನು ಒಳಗೊಂಡಂತೆ, ಉಣ್ಣೆಗಳನ್ನು ಅನುಕರಿಸಲು ಬಳಸಲಾಗುವ ಒಂದು ನಾರು ಮತ್ತು ಹಲವುವೇಳೆ ಅವುಗಳ ಬದಲಾಗಿ ಬಳಸಲಾಗುತ್ತದೆ.

ನೈಲಾನ್, ರೇಷ್ಮೆಯನ್ನು ಅನುಕರಿಸಲು ಬಳಸಲಾಗುವ ಒಂದು ನಾರು; ಅದನ್ನು ಪ್ಯಾಂಟಿಹೋಸ್‌ನ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಹೆಚ್ಚು ದಪ್ಪನೆಯ ನೈಲಾನ್ ನಾರುಗಳನ್ನು ಹಗ್ಗ ಮತ್ತು ಹೊರಾಂಗಣ ಉಡುಪುಗಳಲ್ಲಿ ಬಳಸಲಾಗುತ್ತದೆ.

ಸ್ಪ್ಯಾಂಡೆಕ್ಸ್ (ವ್ಯಾಪಾರ ನಾಮ ಲೈಕ್ರಾ) ಚಲನೆಗೆ ಅಡ್ಡಿಮಾಡದಂತೆ ಗುತ್ತವಾಗಿರುವಂತೆ ಮಾಡಬಹುದಾದ ಒಂದು ಪಾಲಿಯೂರಥೇನ್ ಉತ್ಪನ್ನ. ಅದನ್ನು ಕ್ರೀಡಾ ಉಡುಪು, ಮೊಲೆಗಟ್ಟುಗಳು, ಮತ್ತು ಈಜುಡುಗೆಗಳನ್ನು ತಯಾರಿಸಲು ಬಳಸಲಾಗುತ್ತದೆ.

ಓಲಫಿನ್ ನಾರು ಕ್ರೀಡಾಉಡುಪು, ಒಳಪದರಗಳು, ಮತ್ತು ಬೆಚ್ಚನೆಯ ಉಡುಪುಗಳಲ್ಲಿ ಬಳಸಲಾಗುವ ನಾರು. ಓಲಫಿನ್‍ಗಳು ಜಲದ್ವೇಷಿ ಗುಣವನ್ನು ಹೊಂದಿರುವುದರಿಂದ ಬೇಗ ಒಣಗುವುದಕ್ಕೆ ಆಸ್ಪದನೀಡುತ್ತವೆ. ಓಲಫಿನ್ ನಾರುಗಳ ಗುಂಪುಗೂಡಿಸಿದ ಹೆಣಿಗೆಯನ್ನು ಟೈವೆಕ್ ಎಂಬ ವ್ಯಾಪಾರನಾಮದಲ್ಲಿ ಮಾರಾಟಮಾಡಲಾಗುತ್ತದೆ.

ಇಂಜಿಯೊ ಹತ್ತಿಯಂತಹ ಇತರ ನಾರುಗಳೊಂದಿಗೆ ಮಿಶ್ರಣಮಾಡಲಾದ ಮತ್ತು ಉಡುಪುಗಳಲ್ಲಿ ಬಳಸಲಾಗುವ ಒಂದು ಪಾಲಿಲ್ಯಾಕ್ಟೈಡ್ ನಾರು. ಅದು ಬಹುತೇಕ ಇತರ ಕೃತಕ ಜವಳಿಗಳಿಗಿಂತ ಹೆಚ್ಚು ಜಲದ್ವೇಷಿ ಗುಣವನ್ನು ಹೊಂದಿರುವುದರಿಂದ ಬೆವರನ್ನು ತೆಗೆಯಲು ಅನುವು ಮಾಡಿಕೊಡುತ್ತದೆ.

ಲೂರೆಕ್ಸ್ ಉಡುಪುಗಳ ಅಲಂಕರಣದಲ್ಲಿ ಬಳಸಲಾಗುವ ಲೋಹದ ಒಂದು ನಾರು.

ಹಾಲಿನ ಪ್ರೋಟೀನುಗಳನ್ನೂ ಕೃತಕ ಬಟ್ಟೆಯನ್ನು ನಿರ್ಮಿಸಲು ಬಳಸಲಾಗಿದೆ. ಹಾಲಿನ ಅಥವಾ ಕೇಸೀನ್ ನಾರಿನ ಬಟ್ಟೆಯನ್ನು ಜರ್ಮನಿಯಲ್ಲಿ ಮೊದಲನೇ ವಿಶ್ವಯುದ್ಧದ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಯಿತು, ಹಾಗು ಇಟಲಿ ಮತ್ತು ಅಮೇರಿಕಾದಲ್ಲಿ ೧೯೩೦ರ ದಶಕದ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಯಿತು. ಹಾಲಿನ ನಾರಿನ ಬಟ್ಟೆಯು ಹೆಚ್ಚು ಬಾಳಿಕೆ ಬರುವುದಿಲ್ಲ ಮತ್ತು ಸುಲಭವಾಗಿ ಸುಕ್ಕುಗಟ್ಟುತ್ತದೆ, ಆದರೆ ಮಾನವ ಚರ್ಮಕ್ಕೆ ಹೋಲುವ ಪಿಎಚ್ ಹೊಂದಿದೆ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಅದನ್ನು ಒಂದು ಜೈವಿಕ ವಿಘಟನೀಯ, ನವೀಕರಿಸಬಲ್ಲ ಕೃತಕ ನಾರಾಗಿ ಮಾರಾಟಮಾಡಲಾಗುತ್ತದೆ.

ಇಂಗಾಲದ ನಾರನ್ನು ಹೆಚ್ಚಾಗಿ, ರಾಳದ ಜೊತೆಗೆ, ಇಂಗಾಲ ನಾರಿನ ಬಲವರ್ಧಿತ ಪ್ಲಾಸ್ಟಿಕ್‍ನಂತಹ ಸಂಯುಕ್ತ ಸಾಮಗ್ರಿಗಳಲ್ಲಿ ಬಳಸಲಾಗುತ್ತದೆ. ನಾರುಗಳನ್ನು ಪಾಲಿಮರ್ ನಾರುಗಳಿಂದ ಇಂಗಾಲೀಕರಣದ ಮೂಲಕ ತಯಾರಿಸಲಾಗುತ್ತದೆ.

ಉತ್ಪಾದನಾ ವಿಧಾನಗಳು

    ಮುಖ್ಯ ಲೇಖನ: ಜವಳಿ ಉತ್ಪಾದನೆ
ಜವಳಿಯ ಹತ್ತು ಅತಿ ದೊಡ್ಡ ನಿರ್ಯಾತದಾರರು—೨೦೦೮
(ಬಿಲಿಯ $)
ಬಟ್ಟೆ  European Union ೮೦.೨
ಬಟ್ಟೆ  ಚೀನಾ ೬೫.೩
ಬಟ್ಟೆ  ಅಮೇರಿಕ ಸಂಯುಕ್ತ ಸಂಸ್ಥಾನ ೧೨.೫
ಬಟ್ಟೆ  ದಕ್ಷಿಣ ಕೊರಿಯಾ ೧೦.೪
ಬಟ್ಟೆ  ಭಾರತ 1೦.೩
ಬಟ್ಟೆ  ಟರ್ಕಿ ೯.೪
ಬಟ್ಟೆ  Taiwan ೯.೨
ಬಟ್ಟೆ  ಜಪಾನ್ ೭.೩
ಬಟ್ಟೆ  ಪಾಕಿಸ್ತಾನ ೭.೨
ಬಟ್ಟೆ  ಸಂಯುಕ್ತ ಅರಬ್ ಸಂಸ್ಥಾನ ೫.೮
ಬಟ್ಟೆ ಇಂಡೋನೇಷ್ಯಾ ೩.೭
Source:

ನೇಯ್ಗೆಯು (ಹಾಸುನೂಲು ಎಂದು ಕರೆಯಲ್ಪಡುವ) ಉದ್ದನೆಯ ದಾರಗಳ ಕಟ್ಟನ್ನು (ಹಾಸುಹೊಕ್ಕು ಎಂದು ಕರೆಯಲ್ಪಡುವ) ಅಡ್ಡಹಾಯುವ ದಾರಗಳ ಕಟ್ಟುಗಳೊಂದಿಗೆ ಹೆಣೆಯುವುದನ್ನು ಒಳಗೊಳ್ಳುವ ಒಂದು ಜವಳಿ ಉತ್ಪಾದನಾ ವಿಧಾನ. ಇದನ್ನು , ಬಹಳಷ್ಟು ಪ್ರಕಾರಗಳಿರುವ, ಮಗ್ಗ ಎಂದು ಕರೆಯಲ್ಪಡುವ ಚೌಕಟ್ಟು ಅಥವಾ ಯಂತ್ರದ ಮೇಲೆ ಮಾಡಲಾಗುತ್ತದೆ. ಸ್ವಲ್ಪ ನೇಯ್ಗೆಯನ್ನು ಈಗಲೂ ಕೈಯಿಂದ ಮಾಡಲಾಗುತ್ತದೆ, ಆದರೆ ಬಹುಪಾಲು ಯಾಂತ್ರೀಕೃತಗೊಂಡಿದೆ.

ಹೆಣಿಗೆ ಮತ್ತು ಕ್ರೋಶದ ಕೆಲಸ, ಹೆಣಿಗೆ ಸೂಜಿ ಅಥವಾ ಕ್ರೋಶ ಕೊಕ್ಕೆಯ ಮೇಲೆ ರೂಪಗೊಂಡ, ನೂಲಿನ ಕುಣಿಕೆಗಳನ್ನು ಸಾಲಿನಲ್ಲಿ ಒಟ್ಟಾಗಿ ಹೆಣೆಯುವುದನ್ನು ಒಳಗೊಳ್ಳುತ್ತದೆ. ಹೆಣಿಗೆಯು ಒಂದೇ ಸಮಯದಲ್ಲಿ ಮತ್ತೊಂದು ಕುಣಿಕೆಯೊಂದಿಗೆ ತಳಕುಹಾಕಲು ಹೆಣಿಗೆ ಸೂಜಿಯ ಮೇಲೆ ಹಲವು ಸಕ್ರಿಯ ಕುಣಿಕೆಗಳನ್ನು ಹೊಂದಿದ್ದರೆ, ಕ್ರೋಶ ಹೆಣಿಗೆಯಲ್ಲಿ ಸೂಜಿಯ ಮೇಲೆ ಒಂದಕ್ಕಿಂತ ಹೆಚ್ಚು ಸಕ್ರಿಯ ಕುಣಿಕೆಯಿರುವುದಿಲ್ಲ , ಈ ರೀತಿ ಈ ಎರಡು ಪ್ರಕ್ರಿಯೆಯಗಳು ಬೇರೆಯಾಗಿವೆ.

ಹರಡು ನಾರು (ಸ್ಪ್ರೆಡ್ ಟೌ) ನೂಲನ್ನು ತೆಳ್ಳನೆಯ ಪಟ್ಟಿಗಳಾಗಿ ಹರಡಿ, ನಂತರ ಪಟ್ಟಿಗಳನ್ನು ಹಾಸುನೂಲು ಮತ್ತು ಹಾಸುಹೊಕ್ಕಾಗಿ ನೇಯುವ ಒಂದು ಉತ್ಪಾದನಾ ವಿಧಾನ. ಈ ವಿಧಾನವನ್ನು ಹೆಚ್ಚಾಗಿ ಸಂಯುಕ್ತ ಸಾಮಗ್ರಿಗಳಿಗಾಗಿ ಬಳಸಲಾಗುತ್ತದೆ; ಹರಡು ನಾರು ಬಟ್ಟೆಯನ್ನು ಇಂಗಾಲ, ಆರಮೈಡ್ ಇತ್ಯಾದಿಗಳಲ್ಲಿ ತಯಾರಿಸಬಹುದು.

ಹೆಣಿಲುವಿಕೆ ಅಥವಾ ಹೆಣಿಗೆಯು ದಾರಗಳನ್ನು ಒಟ್ಟಾಗಿ ಬಟ್ಟೆಯಾಗಿ ನುಲಿಯುವುದನ್ನು ಒಳಗೊಳ್ಳುತ್ತದೆ. ಅಂಚುಕಟ್ಟುವಿಕೆಯು ದಾರಗಳನ್ನು ಒಟ್ಟಾಗಿ ಕಟ್ಟುವುದನ್ನು ಒಳಗೊಳ್ಳುತ್ತದೆ ಮತ್ತು ಕುಚ್ಚು ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಕಸೂತಿ ಪಟ್ಟಿಯನ್ನು, ಹಿನ್ನೆಲೆ ವಸ್ತು ಮತ್ತು ಮೇಲೆ ವಿವರಿಸಲಾದ ಯಾವುದೇ ವಿಧಾನವನ್ನು ಬಳಸಿ, ದಾರಗಳನ್ನು ಒಟ್ಟಾಗಿ ಮತ್ತು ಸ್ವತಂತ್ರವಾಗಿ ತಳಕುಹಾಕಿ, ಕೃತಿಯಲ್ಲಿ ತೆರೆದ ರಂಧ್ರಗಳನ್ನು ಒಳಗೊಂಡ ನಯವಾದ ಬಟ್ಟೆಯನ್ನು ಸೃಷ್ಟಿಸಿ ತಯಾರಿಸಲಾಗುತ್ತದೆ. ಕಸೂತಿ ಪಟ್ಟಿಯನ್ನು ಕೈಯಿಂದ ಅಥವಾ ಯಂತ್ರದಿಂದ ತಯಾರಿಸಬಹುದು.

ಜಮಖಾನೆಗಳು, ಕಂಬಳಿಗಳು, ಮಖಮಲ್, ವಲೂರ್ ಬಟ್ಟೆ, ವೆಲ್ವಿಟೀನ್ ಬಟ್ಟೆಯನ್ನು ನೇಯ್ದ ಬಟ್ಟೆಯಲ್ಲಿ ಎರಡನೇ ನೂಲನ್ನು ಹೆಣೆದು ತಯಾರಿಸಲಾಗುತ್ತದೆ, ಮತ್ತು ಇದರಿಂದಾಗಿ ಜುಂಜು ಅಥವಾ ಪೈಲ್ ಎಂದು ಕರೆಯಲಾದ ಕುಚ್ಚುಳ್ಳ ಪದರದ ರಚನೆಯಾಗುತ್ತದೆ.

ಉಣ್ಣೆಬಟ್ಟೆ ತಯಾರಿಕೆಯು ನಾರುಗಳ ಹಾಸನ್ನು ಒತ್ತುವುದು, ಮತ್ತು ಅವು ಸಿಕ್ಕಾಗುವವರೆಗೆ ಒಟ್ಟಾಗಿ ಅವನ್ನು ಉಪಚರಿಸುವುದನ್ನು ಒಳಗೊಳ್ಳುತ್ತದೆ. ನಾರುಗಳನ್ನು ಜಾರುವಂತೆ ಮಾಡಲು ಮತ್ತು ಉಣ್ಣೆಯ ಎಳೆಗಳ ಮೇಲೆ ಸೂಕ್ಷ್ಮವಾದ ಪೊರೆಗಳನ್ನು ಹರಡಲು ಸಾಬೂನಿರುವ ನೀರಿನಂತಹ ಒಂದು ದ್ರವವನ್ನು ಸಾಮಾನ್ಯವಾಗಿ ಸೇರಿಸಲಾಗುತ್ತದೆ.

ನೇಯ್ದಿರದ ಬಟ್ಟೆಗಳನ್ನು ನಾರುಗಳನ್ನು ಕಟ್ಟುಹಾಕಿ ತಯಾರಿಸಲಾಗುತ್ತದೆ. ಬಂಧವು ಉಷ್ಣ ಅಥವಾ ಯಾಂತ್ರಿಕವಿರಬಹುದು, ಅಥವಾ ಅಂಟುಗಳನ್ನು ಬಳಸಬಹುದು.

ತೊಗಟೆಬಟ್ಟೆಯನ್ನು ತೊಗಟೆಯನ್ನು ಮೃದು ಮತ್ತು ಚಪ್ಪಟೆಯಾಗುವವರೆಗೆ ಜಜ್ಜಿ ತಯಾರಿಸಲಾಗುತ್ತದೆ.

ಸಂಸ್ಕರಣೆ

ಬಟ್ಟೆಗಳಿಗೆ ಹಲವುವೇಳೆ ಬಣ್ಣ ಹಾಕಲಾಗುತ್ತದೆ, ಮತ್ತು ಬಟ್ಟೆಗಳು ಬಹುತೇಕ ಪ್ರತಿಯೊಂದು ಬಣ್ಣದಲ್ಲೂ ದೊರಕುತ್ತವೆ. ಬಣ್ಣ ಹಾಕುವ ಪ್ರಕ್ರಿಯೆಯಲ್ಲಿ ಹಲವುವೇಳೆ ಪ್ರತಿ ಪೌಂಡ್ ಬಟ್ಟೆಗೆ ಹಲವು ಡಜ಼ನ್ ಗ್ಯಾಲನ್ ನೀರು ಬೇಕಾಗುತ್ತದೆ. ಬಟ್ಟೆಗಳಲ್ಲಿ ಬಣ್ಣವಿರುವ ವಿನ್ಯಾಸಗಳನ್ನು ಬೇರೆಬೇರೆ ಬಣ್ಣದ ನಾರುಗಳನ್ನು ಒಟ್ಟಾಗಿ ನೇಯ್ದು (ಟಾರ್ಟನ್ ಅಥವಾ ಉಜ಼್ಬೇಕ್ ಈಕಾಟ್), ಸಿದ್ಧಪಡಿಸಿದ ಬಟ್ಟೆಗೆ ಬಣ್ಣವಿರುವ ಹೊಲಿಗೆಗಳನ್ನು ಸೇರಿಸಿ (ಕಸೂತಿ ಕೆಲಸ), ಪ್ರತಿರೋಧಕ ಬಣ್ಣಹಾಕುವಿಕೆ ವಿಧಾನಗಳಿಂದ ನಮೂನೆಗಳನ್ನು ರಚಿಸಿ, ಬಟ್ಟೆಯ ಭಾಗಗಳನ್ನು ಕಟ್ಟಿ ಉಳಿದ ಭಾಗಗಳಿಗೆ ಬಣ್ಣಹಾಕಿ (ಕಟ್ಟು ಬಣ್ಣಹಾಕುವಿಕೆ), ಅಥವಾ ಬಟ್ಟೆಯ ಮೇಲೆ ಮೇಣದ ವಿನ್ಯಾಸಗಳನ್ನು ಬರೆದು ಅವುಗಳ ನಡುವೆ ಬಣ್ಣಹಾಕಿ (ಬಟೀಕ್), ಅಥವಾ ಸಿದ್ಧಪಡಿಸಿದ ಬಟ್ಟೆಯ ಮೇಲೆ ವಿವಿಧ ಮುದ್ರಣ ಪ್ರಕ್ರಿಯೆಗಳನ್ನು ಬಳಸಿ ರಚಿಸಬಹುದು. ಮರದ ಪಡಿಯಚ್ಚಿನ ಮುದ್ರಣ, ಇವತ್ತಿಗೂ ಭಾರತ ಮತ್ತು ಇತರೆಡೆ ಬಳಕೆಯಲ್ಲಿದೆ, ಇವುಗಳ ಪೈಕಿ ಅತ್ಯಂತ ಹಳೆಯದು ಚೀನಾದಲ್ಲಿ ಕನಿಷ್ಠ ಕ್ರಿ.ಶ. ೨೨೦ರ ಕಾಲಮಾನದ್ದು. ಬಟ್ಟೆಗಳನ್ನು ಕೆಲವೊಮ್ಮೆ ಬಿಳಿಚಿಸಲಾಗುತ್ತದೆ, ಮತ್ತು ಇದರಿಂದ ಬಟ್ಟೆ ವಿವರ್ಣವಾಗುತ್ತದೆ.

ಬಟ್ಟೆ 
ಗ್ವಾಟೆಮಾಲಾದ ಅದ್ಭುತವಾಗಿ ಬಣ್ಣಹಾಕಿದ ಸಾಂಪ್ರದಾಯಿಕ ನೇಯ್ದ ಬಟ್ಟೆಗಳು, ಮತ್ತು ಬೆನ್ನುಪಟ್ಟಿ ಮಗ್ಗದ ಮೇಲೆ ನೇಯುತ್ತಿರುವ ಮಹಿಳೆ.

ಬಟ್ಟೆಗಳನ್ನು ಅವುಗಳ ಲಕ್ಷಣಗಳನ್ನು ಬದಲಿಸಲು ಕೆಲವೊಮ್ಮೆ ರಾಸಾಯನಿಕ ವಿಧಾನಗಳಿಂದ ನಯಗೆಲಸಕ್ಕೊಳಪಡಿಸಲಾಗುತ್ತದೆ. ೧೯ನೇ ಶತಮಾನ ಮತ್ತು ೨೦ನೆಯ ಶತಮಾನದ ಮುಂಚಿನಲ್ಲಿ ಉಡುಪುಗಳನ್ನು ಕಲೆ ಮತ್ತು ಸುಕ್ಕು ನಿರೋಧಕ ಮಾಡಲು ಗಂಜಿಹಾಕುವಿಕೆಯನ್ನು ಸಾಮಾನ್ಯವಾಗಿ ಬಳಸಲಾಗುತ್ತಿತ್ತು. ೧೯೯೦ರ ದಶಕದಿಂದ, ಕಾಯಂ ಇಸ್ತ್ರಿ ಪ್ರಕ್ರಿಯೆಯಂಥ ತಂತ್ರಜ್ಞಾನಗಳಲ್ಲಿನ ಬೆಳವಣಿಗೆಗಳಿಂದ, ಬಟ್ಟೆಗಳನ್ನು ಬಲಪಡಿಸಲು ಮತ್ತು ಸುಕ್ಕುರಹಿತವಾಗಿಸಲು ನಯಗೆಲಸ ರಾಸಾಯನಿಕಗಳನ್ನು ಬಳಸಲಾಗಿದೆ. ಇತ್ತೀಚೆಗೆ, ನ್ಯಾನೋಸಾಮಗ್ರಿಗಳ ಸಂಶೋಧನೆಯು ಹೆಚ್ಚು ಪ್ರಗತಿಗಳಿಗೆ ಕಾರಣವಾಗಿದೆ, ಮತ್ತು ನ್ಯಾನೋ-ಟೆಕ್ಸ್ ಹಾಗು ನ್ಯಾನೋಹರೈಜ಼ನ್ಸ್ ನಂತಹ ಕಂಪನಿಗಳು ನೀರು, ಕಲೆಗಳು, ಸುಕ್ಕುಗಳಂತಹ ವಸ್ತುಗಳು, ಮತ್ತು ಬ್ಯಾಕ್ಟೀರಿಯಾ ಹಾಗು ಶಿಲೀಂಧ್ರಗಳಂತಹ ರೋಗಕಾರಕಗಳಿಗೆ ಬಟ್ಟೆಗಳನ್ನು ಹೆಚ್ಚು ಪ್ರತಿರೋಧಕ ಮಾಡಲು ಲೋಹೀಯ ನ್ಯಾನೋಕಣಗಳನ್ನು ಆಧರಿಸಿದ ಶಾಶ್ವತ ವಿಧಾನಗಳನ್ನು ಅಭಿವೃದ್ಧಿಪಡಿಸಿವೆ.

ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿ, ಬಟ್ಟೆಗಳು ಅಂತಿಮ ಬಳಕೆದಾರರನ್ನು ಮುಟ್ಟುವ ಮೊದಲು ಹಲವು ಸಂಸ್ಕರಣೆಗಳಿಗೊಳಪಡುತ್ತವೆ. (ಸುಕ್ಕು ಪ್ರತಿರೋಧಕತೆಯನ್ನು ಸುಧಾರಿಸಲು) ಫ಼ಾರ್ಮ್ಯಾಲ್ಡಹೈಡ್ ನಯಗೆಲಸದಿಂದ ಜೀವನಾಶಕ ನಯಗೆಲಸದವರೆಗೆ ಮತ್ತು ಜ್ವಾಲಾ ವಿಲಂಬಕಗಳಿಂದ ಹಲವು ಪ್ರಕಾರದ ಬಟ್ಟೆಗಳಿಗೆ ಬಣ್ಣಹಾಕುವಿಕೆವರೆಗೆ, ಸಾಧ್ಯತೆಗಳು ಅನಂತವೆನ್ನಬಹುದು. ಆದರೆ, ಈ ನಯಗೆಲಸಗಳಲ್ಲಿ ಹಲವು, ಬಳಕೆದಾರನ ಮೇಲೆ ಹಾನಿಕರ ಪರಿಣಾಮಗಳನ್ನು ಬೀರಬಹುದು. ಅನೇಕ ಚದುರು, ಆಮ್ಲೀಯ ಮತ್ತು ಪ್ರತಿಕ್ರಿಯಾತ್ಮಕ ಬಣ್ಣಗಳು ಸೂಕ್ಷ್ಮಸಂವೇದನೆಯ ವ್ಯಕ್ತಿಗಳ ಮೇಲೆ ಅಲರ್ಜಿ ಉಂಟುಮಾಡಬಹುದು ಎಂದು ತೋರಿಸಲಾಗಿದೆ. ಈ ಗುಂಪಿನಲ್ಲಿರುವ ನಿರ್ದಿಷ್ಟ ಬಣ್ಣಗಳು ಪರ್ಪ್ಯೂರ ರೋಗದ ಸಂಪರ್ಕ ಚರ್ಮದೂತವನ್ನು ಪ್ರಚೋದಿಸುತ್ತದೆಂದೂ ತೋರಿಸಲಾಗಿದೆ.

ಉಡುಪುಗಳಲ್ಲಿ ಫ಼ಾರ್ಮ್ಯಾಲ್ಡಹೈಡ್ ಮಟ್ಟಗಳು ಅಲರ್ಜಿಕ ಪ್ರತಿಕ್ರಿಯೆಗೆ ಕಾರಣವಾಗುವಷ್ಟು ಹೆಚ್ಚಾಗಿರುವುದು ಅಸಂಭವವಾದರೂ, ಅಂತಹ ರಾಸಾಯನಿಕದ ಉಪಸ್ಥಿತಿಯಿರುವುದರಿಂದ, ಗುಣಮಟ್ಟ ನಿಯಂತ್ರಣ ಮತ್ತು ಪರೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ. ಜ್ವಾಲಾ ವಿಲಂಬಕಗಳು (ಮುಖ್ಯವಾಗಿ ಬ್ರೋಮಿನ್ಯುಕ್ತ ರೂಪಗಳಲ್ಲಿ) ಕೂಡ, ಪರಿಸರ, ಮತ್ತು ಅವುಗಳ ಸಂಭಾವ್ಯ ವಿಷತ್ವದ ವಿಷಯದಲ್ಲಿ ಕಾಳಜಿಗೆ ಕಾರಣವಾಗಿವೆ. ಈ ಸಂಯೋಜನೀಯಗಳಿಗಾಗಿ ಪರೀಕ್ಷೆ ಅನೇಕ ವಾಣಿಜ್ಯ ಪ್ರಯೋಗಾಲಯಗಳಲ್ಲಿ ಸಾಧ್ಯವಿದೆ, ಜವಳಿ ಉತ್ಪನ್ನಗಳಲ್ಲಿ ಕೆಲವು ರಾಸಾಯನಿಕಗಳ ಬಳಕೆಯ ಸೀಮಾ ಮಟ್ಟಗಳನ್ನು ಹೊಂದಿರುವ, ಓಯ್ಕೊ-ಟೆಕ್ಸ್ ಪ್ರಮಾಣೀಕರಣ ಮಾನದಂಡದ ಪ್ರಕಾರ ಬಟ್ಟೆಗಳನ್ನು ಪರೀಕ್ಷಿಸುವುದು ಕೂಡ ಸಾಧ್ಯವಿದೆ.

ಇವನ್ನೂ ನೋಡಿ

  • ಬಾಂಗ್ಲಾದೇಶದ ಜವಳಿ ಉದ್ಯಮ
  • ಬೆಟ್ಸೋಮೀಟರ್
  • ಬಟ್ಟೆ ನಾರುಗಳ ಪಟ್ಟಿ
  • ಮಾಯಾ ಜವಳಿ
  • ನಾರು ಕಲೆ
  • ಕೀಪೂ
  • ರೇಯಾಲಿಯಾ
  • ಜವಳಿ ಕಲೆ
  • ಬಟ್ಟೆ ತಯಾರಿಕೆ
  • ಬಟ್ಟೆ ತಯಾರಿಕೆ ಪರಿಭಾಷೆ
  • ಜವಳಿ ಸಂರಕ್ಷಣೆ
  • ಬಟ್ಟೆ ಮುದ್ರಣ
  • ಜವಳಿ ಮರುಬಳಕೆ
  • ಲಾಂಪುಂಗ್‍ನ ಜವಳಿಗಳು
  • ಮೆಕ್ಸಿಕೋದ ಜವಳಿಗಳು
  • ವಾಹಾಕಾದ ಜವಳಿಗಳು
  • ಉಡುಪು ಮತ್ತು ಜವಳಿ ತಂತ್ರಜ್ಞಾನದ ಕಾಲರೇಖೆ
  • ಜವಳಿ ಮಾಪನದ ಏಕಮಾನಗಳು
  • ಬಟ್ಟೆಯ ಹೆಸರುಗಳ ಪಟ್ಟಿ

ಉಲ್ಲೇಖಗಳು

Tags:

ಬಟ್ಟೆ ಇತಿಹಾಸಬಟ್ಟೆ ಬಳಕೆಗಳುಬಟ್ಟೆ ಫ಼್ಯಾಷನ್ ಮತ್ತು ವಸ್ತ್ರ ವಿನ್ಯಾಸಕರುಬಟ್ಟೆ ಮೂಲಗಳು ಮತ್ತು ಪ್ರಕಾರಗಳುಬಟ್ಟೆ ಉತ್ಪಾದನಾ ವಿಧಾನಗಳುಬಟ್ಟೆ ಸಂಸ್ಕರಣೆಬಟ್ಟೆ ಇವನ್ನೂ ನೋಡಿಬಟ್ಟೆ ಉಲ್ಲೇಖಗಳುಬಟ್ಟೆ ಹೆಚ್ಚಿನ ವಾಚನಬಟ್ಟೆಉಣ್ಣೆಎಳೆಕುಚ್ಚುನಾರುಬಟ್ಟೆನೂಲುನೆಯ್ಗೆಹತ್ತಿಹೆಣಿಗೆ

🔥 Trending searches on Wiki ಕನ್ನಡ:

ವಚನಕಾರರ ಅಂಕಿತ ನಾಮಗಳುರಗಳೆಭಾರತದಲ್ಲಿನ ಜಾತಿ ಪದ್ದತಿಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಪಂಚಾಂಗಕಬೀರ್ವಾಸ್ತವಿಕವಾದಪತ್ರಿಕೋದ್ಯಮಮೀನಾಕ್ಷಿ ದೇವಸ್ಥಾನಶಿವಮೊಗ್ಗಚದುರಂಗಋಗ್ವೇದಮಹಿಳೆ ಮತ್ತು ಭಾರತರಾಮಾಚಾರಿ (ಕನ್ನಡ ಧಾರಾವಾಹಿ)ಚಾಮರಾಜನಗರಸಂಶೋಧನೆಭರತನಾಟ್ಯಪಾಟೀಲ ಪುಟ್ಟಪ್ಪಕರ್ನಾಟಕವಿಶ್ವ ವ್ಯಾಪಾರ ಸಂಸ್ಥೆಕನ್ನಡ ಸಾಹಿತ್ಯ ಪರಿಷತ್ತುಉತ್ತರ ಕರ್ನಾಟಕಕರ್ಣಾಟ ಭಾರತ ಕಥಾಮಂಜರಿಜಾನಪದಮೆಂತೆಹದಿಬದೆಯ ಧರ್ಮವಿಮರ್ಶೆಗುರುರಾಜ ಕರಜಗಿಶೂದ್ರಆಧುನಿಕ ಮಾಧ್ಯಮಗಳುತ್ರಿಪದಿಚನ್ನಬಸವೇಶ್ವರರಚಿತಾ ರಾಮ್ಆತ್ಮಹತ್ಯೆಚಾಲುಕ್ಯಕಲಿಕೆದೆಹಲಿವೆಂಕಟೇಶ್ವರ ದೇವಸ್ಥಾನರಾಷ್ಟ್ರಕೂಟಕನ್ನಡ ರಾಜ್ಯೋತ್ಸವಭಾರತಶ್ವೇತ ಪತ್ರವೀರಗಾಸೆಏಕರೂಪ ನಾಗರಿಕ ನೀತಿಸಂಹಿತೆಮಂಡಲ ಹಾವುಶಬ್ದಮಣಿದರ್ಪಣಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಭೂಮಿವಿಶ್ವ ಪರಂಪರೆಯ ತಾಣಭೂಕಂಪಜಲ ಮೂಲಗಳುಕಲ್ಯಾಣಿಮೋಡ ಬಿತ್ತನೆಶಕುನಕರ್ಬೂಜರಜಪೂತಭಾರತದ ಇತಿಹಾಸಅಲಾವುದ್ದೀನ್ ಖಿಲ್ಜಿಯುನೈಟೆಡ್ ಕಿಂಗ್‌ಡಂಕಯ್ಯಾರ ಕಿಞ್ಞಣ್ಣ ರೈವಸ್ತುಸಂಗ್ರಹಾಲಯಕೊಲೆಸ್ಟರಾಲ್‌ಪರೀಕ್ಷೆಚಂದನಾ ಅನಂತಕೃಷ್ಣಊಳಿಗಮಾನ ಪದ್ಧತಿನಳಂದಭಾರತದಲ್ಲಿ ಬಡತನಗುಣ ಸಂಧಿಗುರುವಾಲಿಬಾಲ್ಭಾರತದ ಆರ್ಥಿಕ ವ್ಯವಸ್ಥೆಚರ್ಚೆಕರ್ನಾಟಕದ ನದಿಗಳುಸೀತಾ ರಾಮವಿಷ್ಣು ಸಹಸ್ರನಾಮಯಾಣಬೆಸಗರಹಳ್ಳಿ ರಾಮಣ್ಣಜಾಗತೀಕರಣಗೋವಿಂದ ಪೈ🡆 More