ನಂದನವನದ ಪಕ್ಷಿಗಳು

ನಂದನವನದ ಪಕ್ಷಿಗಳು ( ಬರ್ಡ್ಸ್ ಆಫ್ ಪ್ಯಾರಡೈಸ್) ಪಕ್ಷಿಸಂಕುಲದ ಪ್ಯಾರಡೈಸಿಈಡೇ ಕುಟುಂಬಕ್ಕೆ ಸೇರಿದವಾಗಿವೆ.

ಈ ಪಕ್ಷಿಗಳು ಪೂರ್ವ ಇಂಡೋನೇಷ್ಯಾ, ಟೋರೆಸ್ ಜಲಸಂಧಿಯ ದ್ವೀಪಗಳು, ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾದ ವಾಯವ್ಯ ಭಾಗದಲ್ಲಿ ಕಾಣಬರುತ್ತವೆ. ಈ ಪಕ್ಷಿಕುಟುಂಬದ ಸದಸ್ಯ ಗಂಡು ಹಕ್ಕಿಗಳು ತಮ್ಮ ಅದ್ಭುತ ಗರಿಗಳ ಜೋಡಣೆ ಹಾಗೂ ಪುಕ್ಕಗಳ ಗುಚ್ಛಕ್ಕೆ ಹೆಸರಾಗಿವೆ. ಸೃಷ್ಟಿಯ ಅದ್ಭುತಗಳಲ್ಲಿ ಒಂದರಂತೆ ಕಾಣುವ ಈ ಗಂಡು ಪಕ್ಷಿಗಳ ತಲೆ ಯಾ ಕೊಕ್ಕು ಅಥವಾ ಬಾಲದಿಂದ ಅತಿ ಉದ್ದವಾದ ಗರಿಗಳ ರಚನೆ ಕಾಣುವುದು. ಅಲ್ಲದೆ ಅನೇಕ ಹಕ್ಕಿಗಳಲ್ಲಿ ಈ ಗರಿಗಳು ಹಿಂದಕ್ಕೆ ಸುರುಳಿಯಂತೆ ಬಾಗಿ ಸುತ್ತಿಕೊಂಡು ಇರುವುದು ಸಹ ಕಾಣಬಹುದು. ಇನ್ನು ಕೆಲವಲ್ಲಿ ಉದ್ದನೆಯ ತಂತಿಯಂತೆ ಗರಿಗಳು ಇರುತ್ತವೆ. ಈ ಗರಿಗಳ ವರ್ಣಮಿಶ್ರಣದ ಸೌಂದರ್ಯ ಅನೂಹ್ಯ. ಈ ಪಕ್ಷಿಗಳಲ್ಲಿ ಹಲವು ಪ್ರಕಾರಗಳಿದ್ದು ೧೫ರಿಂದ ೧೧೦ ಸೆ.ಮೀ.ವರೆಗೆ ಉದ್ದ (ಬಾಲವನ್ನು ಹೊರತುಪಡಿಸಿ) ಮತ್ತು ೫೦ ರಿಂದ ೪೩೦ ಗ್ರಾಂ ವರಗೆ ತೂಕ ಹೊಂದಿರುತ್ತವೆ. ಉಷ್ಣವಲಯದ ಮಳೆಕಾಡುಗಳ ನಿವಾಸಿಗಳಾದ ಇವು ಇಂದು ಬೇಟೆಯಾಡುವಿಕೆ ಮತ್ತು ನಿರಂತರ ಅರಣ್ಯನಾಶದಿಂದಾಗಿ ಕಂಗೆಟ್ಟಿವೆ. ತಮ್ಮ ಅತ್ಯಾಕರ್ಷಕ ಗರಿಗಳಿಂದಾಗಿ ಮಾನವನ ದುರಾಸೆಯ ಕಣ್ಣಿಗೆ ಬಿದ್ದಿರುವ ಈ ನಂದನವನದ ಪಕ್ಷಿಗಳ ಹಲವು ಪ್ರಬೇಧಗಳು ಇಂದು ಅಳಿವಿನಂಚಿನಲ್ಲಿವೆ.

ನಂದನವನದ ಪಕ್ಷಿಗಳು

ನಂದನವನದ ಪಕ್ಷಿಗಳ ಗ್ಯಾಲರಿ

Tags:

ಆಸ್ಟ್ರೇಲಿಯಾಇಂಡೋನೇಷ್ಯಾಪಪುವಾ ನ್ಯೂಗಿನಿ

🔥 Trending searches on Wiki ಕನ್ನಡ:

ಚಿತ್ರದುರ್ಗಯೋಗ ಮತ್ತು ಅಧ್ಯಾತ್ಮಹಸ್ತ ಮೈಥುನಅಕ್ಕಮಹಾದೇವಿರಾಜಕೀಯ ವಿಜ್ಞಾನಭಾರತೀಯ ಧರ್ಮಗಳುಭಾರತದಲ್ಲಿ ಮೀಸಲಾತಿಚುನಾವಣೆಸಮುಚ್ಚಯ ಪದಗಳುಕವಿಗಳ ಕಾವ್ಯನಾಮಕಾದಂಬರಿಜಗನ್ನಾಥದಾಸರುಮುಹಮ್ಮದ್ಅಮ್ಮ1935ರ ಭಾರತ ಸರ್ಕಾರ ಕಾಯಿದೆಎಸ್.ಎಲ್. ಭೈರಪ್ಪಲೋಕಸಭೆವ್ಯವಸಾಯಉಚ್ಛಾರಣೆಅನುರಾಗ ಅರಳಿತು (ಚಲನಚಿತ್ರ)ರಾಜಕೀಯ ಪಕ್ಷಸ್ವರವಿವಾಹಪ್ರಜಾವಾಣಿಮೈಸೂರು ಸಂಸ್ಥಾನಹೊಯ್ಸಳ ವಾಸ್ತುಶಿಲ್ಪಭಾರತದಲ್ಲಿ ಬಡತನಭತ್ತಶಿವಅಮೇರಿಕ ಸಂಯುಕ್ತ ಸಂಸ್ಥಾನವೃದ್ಧಿ ಸಂಧಿಬಾದಾಮಿ ಶಾಸನಯಣ್ ಸಂಧಿಸೂರ್ಯತುಳಸಿಒಗಟುನಗರೀಕರಣವಿಶ್ವದ ಅದ್ಭುತಗಳುಭಾರತದಲ್ಲಿ ಪಂಚಾಯತ್ ರಾಜ್ಕಾವ್ಯಮೀಮಾಂಸೆಮಹಿಳೆ ಮತ್ತು ಭಾರತಭಾಷೆಕೃಷ್ಣಕಮಲಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡದಲ್ಲಿ ವಚನ ಸಾಹಿತ್ಯಕನಕದಾಸರುಆಧುನಿಕ ವಿಜ್ಞಾನತೆಂಗಿನಕಾಯಿ ಮರಬಿ. ಆರ್. ಅಂಬೇಡ್ಕರ್ಮಾನವನ ವಿಕಾಸದುಶ್ಯಲಾಅಕ್ಬರ್ಒಡೆಯರ್ದಶಾವತಾರವೆಬ್‌ಸೈಟ್‌ ಸೇವೆಯ ಬಳಕೆಪಟ್ಟದಕಲ್ಲುಬಾಲಕಾರ್ಮಿಕರಾಮಾಯಣಮೈಸೂರು ದಸರಾಪ್ರಜ್ವಲ್ ರೇವಣ್ಣಫೇಸ್‌ಬುಕ್‌ಹಯಗ್ರೀವಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಬಹಮನಿ ಸುಲ್ತಾನರುಜಾಗತಿಕ ತಾಪಮಾನತುಂಗಭದ್ರ ನದಿಅವ್ಯಯವಿರಾಟಗೂಬೆಅಲ್ಲಮ ಪ್ರಭುನಾರುಮಹಾಕವಿ ರನ್ನನ ಗದಾಯುದ್ಧಐಹೊಳೆಕಲ್ಯಾಣ್🡆 More