ಟಿಮ್ ಬರ್ನರ್ಸ್ ಲೀ: ವೆಬ್ ಡೆವೆಲಪರ್

ಸರ್ ಟಿಮೊತಿ ಜಾನ್ ಟಿಮ್ ಬೆರ್ನರ್ಸ್-ಲೀ (ಜನನ: ಜೂನ್ ೮, ೧೯೫೫ ಲಂಡನ್) ವಿಶ್ವವ್ಯಾಪಿ ಜಾಲದ ಜನಕ.

ಟಿಮ್ ಬರ್ನರ್ಸ್ ಲೀ: ವೆಬ್ ಡೆವೆಲಪರ್
ಟಿಮ್ ಬರ್ನರ್ಸ್-ಲೀ

ಹೈಪರ್‌ಟೆಕ್‌ಸ್ಟ್ ಬಗ್ಗೆ ಒಂದಿಷ್ಟು ಮಾಹಿತಿ

ನೆಟ್‌ವರ್ಕ್ ಮಾರ್ಕೆಟಿಂಗ್ ಬಗ್ಗೆ ತಿಳಿಯೋಣ ಎಂದು ಅಂತರಜಾಲಕ್ಕೆ (ಇಂಟರ್ನೆಟ್‌ಗೆ) ಲಗ್ಗೆ ಇಡಿ. ಜಗತ್ಪ್ರಸಿದ್ಧ ತಾಣ-ಶೋಧಕ ಗೂಗ್‌ಲ್‌ನಲ್ಲಿ ನೆಟ್‌ವರ್ಕ್ ಮಾರ್ಕೆಟಿಂಗ್ ಎಂದು ಬೆರಳಚ್ಚಿಸಿ ಮೌಸ್ ಗುಂಡಿಯನ್ನು ಕ್ಲಿಕ್ ಮಾಡಿ. ಈಗ ನೋಡಿ. ನೆಟ್‌ವರ್ಕ್ ಮಾರ್ಕೆಟಿಂಗ್, ನೆಟ್‌ವರ್ಕ್, ಮಾರ್ಕೆಟಿಂಗ್, ಹೀಗೆ ಹಲವು ವಿಷಯಗಳ ತಾಣಗಳ ಸೂಚಿ ದೊರೆಯುತ್ತದೆ. ನೆಟ್‌ವರ್ಕ್ ಬಗ್ಗೆ ನೀಡಿರುವ ತಾಣದ ತಂತು (ಲಿಂಕ್) ಮೇಲೆ ಕ್ಲಿಕ್ ಮಾಡಿ ನೋಡಿ. ಅದು ನಿಮ್ಮನ್ನು ಗಣಕಗಳ ಜಾಲ (ನೆಟ್‌ವರ್ಕ್) ಬಗ್ಗೆ ವಿವರ ನೀಡುವ ತಾಣವಾಗಿರುತ್ತದೆ. ಅಲ್ಲಿರುವ ಇನ್ಯಾವುದಾದರೂ ಕೊಂಡಿಯ ಮೇಲೆ ಕ್ಲಿಕ್ ಮಾಡಿ ನೋಡಿ. ನೀವು ಮೂಲ ವಿಷಯ ಬಿಟ್ಟು ಇನ್ನೆಲ್ಲೋ ತಲುಪಿರುತ್ತೀರಾ. ಇಲ್ಲಿ ನೀವು ಗಮನಿಸಬೇಕಾದ ಒಂದು ವಿಷಯ ಎಂದರೆ ಕೊಂಡಿ, ತಂತು ಅಥವಾ ಲಿಂಕ್. ಈ ತಂತು ಮೇಲೆ ಕ್ಲಿಕ್ ಮಾಡಿದಂತೆಲ್ಲಾ ಇನ್ನೊಂದು ಜಾಲತಾಣ (ವೆಬ್‌ಸೈಟ್) ಅಥವಾ ಜಾಲಪುಟ (ವೆಬ್‌ಪೇಜ್) ತೆರೆದುಕೊಳ್ಳುತ್ತದೆ. ಹೀಗೆ ಮಾಹಿತಿಗಳನ್ನು ಕುಣಿಕಾ ಬಂಧನಗೊಳಿಸುವುದಕ್ಕೆ ಹೈಪರ್‌ಟೆಕ್‌ಸ್ಟ್ ಎಂಬ ಹೆಸರಿದೆ.

ಅಂತರಜಾಲ ಎಂದರೆ..

ಅಂತರಜಾಲ ಒಂದು ರೀತಿಯಲ್ಲಿ ಸರ್ವಾಂತರ್ಯಾಮಿಯಾಗಿದೆ. ಅದರ ಬಗ್ಗೆ ಕೇಳದವರು ಇಲ್ಲವೇ ಇಲ್ಲವೆಂದರೂ ನಡೆಯುತ್ತದೆ. ಹೆಚ್ಚು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ಬಳಸುತ್ತಿದ್ದಾರೆ. ಅಂತರಜಾಲ ಎಂದರೆ ಏನು ಎಂದು ಹಲವು ಮಂದಿಯನ್ನು ಕೇಳಿ ನೋಡಿ. ಹೆಚ್ಚಿನವರು ಹೇಳುವ ಉತ್ತರ - www. ಈ www ಎಂದರೆ ಅಂತರಜಾಲ ಅಲ್ಲ ಎಂದು ಎಷ್ಟು ಮಂದಿಗೆ ಗೊತ್ತಿದೆ? ಆಶ್ಚರ್ಯವಾಯಿತೇ? www ಎಂದರೆ ವರ್ಲ್ಡ್ ವೈಡ್ ವೆಬ್ ಎಂಬುದರ ಸಂಕ್ಷಿಪ್ತ ರೂಪ. ಇದು ಅಂತರಜಾಲದ ಒಂದು ಅಂಗವೇ ವಿನಾ ಅದುವೇ ಅಂತರಜಾಲವಲ್ಲ! ಅಂತರಜಾಲದಲ್ಲಿ ವಿಶ್ವವ್ಯಾಪಿ ಜಾಲ (www), ವಿ-ಅಂಚೆ (ಇ-ಮೈಲ್), ಟೆಲ್‌ನೆಟ್, ಎಫ್‌ಟಿಪಿ, ನ್ಯೂಸ್‌ಗ್ರೂಪ್, ಇತ್ಯಾದಿ ಹಲವು ವಿಭಾಗಗಳಿವೆ. ಇವಗಳಲ್ಲಿ ಪ್ರತಿಯೊಂದರ ಬಗೆಗೂ ಹಲವು ಪ್ರತ್ಯೇಕ ಲೇಖನ ಬರೆಯುವಷ್ಟು ವಿಷಯಗಳಿವೆ. ಇನ್ನೂ ಒಂದು ಸ್ವಾರಸ್ಯಕರ ವಿಷಯವೆಂದರೆ ಈ ವಿಶ್ವವ್ಯಾಪಿ ಜಾಲ ಕೇವಲ ಹನ್ನೊಂದು ವರ್ಷಗಳಷ್ಟು ಹಳೆಯದು!

ನಾನೀಗ ಹೇಳಹೊರಟಿರುವುದು ವಿಶ್ವವ್ಯಾಪಿ ಜಾಲದ ಬಗ್ಗೆ. ಅಂತರಜಾಲದಲ್ಲಿ ಕೋಟಿಗಟ್ಟಲೆ ತಾಣಗಳಿವೆ. ಈ ತಾಣಗಳೆಲ್ಲ ಒಟ್ಟು ಸೇರಿ ವಿಶ್ವವ್ಯಾಪಿ ಜಾಲವಾಗಿದೆ. ತಾಣದಿಂದ ತಾಣಕ್ಕೆ ತಂತುಗಳ ಮೂಲಕ ಲಂಘನ ಮಾಡಬಹುದು. ಈ ರೀತಿಯ ಸಂಪರ್ಕಕ್ಕೆ ಹೈಪರ್‌ಲಿಂಕಿಂಗ್ ಎನ್ನುತ್ತಾರೆ. ಈ ವಿಶ್ವವ್ಯಾಪಿ ಜಾಲದಲ್ಲಿ ಇರುವ ತಾಣಗಳ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಒಂದು ಗುಂಡು ಪಿನ್ನಿನಿಂದ ಹಿಡಿದು ರಾಕೆಟ್ ತನಕದ ಮಾಹಿತಿಗಳನ್ನು ನೀಡುವ ತಾಣಗಳು ಅಲ್ಲಿವೆ.

ಸರ್ ಟಿಮೊತಿ ಜಾನ್ "ಟಿಮ್" ಬೆರ್ನರ್ಸ್-ಲೀ

ವಿಜ್ಞಾನದ ಬಹುಪಾಲು ಸಂಶೋಧನೆಗಳಂತೆ ಈ ವಿಶ್ವವ್ಯಾಪಿ ಜಾಲದ ಸಂಶೋಧನೆಯೂ ಆಕಸ್ಮಿಕವಾಗಿಯೇ ಆದುದು. ಟಿಮ್ ಬರ್ನರ್ಸ್ ಲೀ (Tim Berners-Lee) ಎಂಬುವರು ೧೯೮೦ರಲ್ಲಿ ಜಿನೇವಾದಲ್ಲಿರುವ ಯುರೋಪಿಯನ್ ಪಾರ್ಟಿಕಲ್ ಫಿಸಿಕ್ಸ್ ಸಂಶೋಧನಾಲಯದಲ್ಲಿ (CERN, ಸರ್ನ್) ಕೆಲಸದಲ್ಲಿದ್ದರು. ಅಲ್ಲಿ ನಡೆಯುತ್ತಿದ್ದ ಹಲವು ಸಂಶೋಧನೆ, ಅವುಗಳಿಗೆ ಸಂಬಂಧಪಟ್ಟ ಆಕರ ಮಾಹಿತಿ ಮತ್ತು ವ್ಯಕ್ತಿಗಳ ಬಗ್ಗೆ ಮಾಹಿತಿಗಳನ್ನು ಗಣಕದಲ್ಲಿ ವ್ಯವಸ್ಥಿತವಾಗಿ ತನಗೆ ಸುಲಭವಾಗಿ ಸಿಗುವಂತೆ ಸಂಗ್ರಹಿಸಿಡಲು ಅವರು ಹೈಪರ್ಟೆಕ್ಸ್ಟ್ ವಿಧಾನವನ್ನು ಪ್ರಥಮ ಬಾರಿ ಬಳಸಿದರು. ಅವರು ಈ ಕೆಲಸಕ್ಕಾಗಿಯೇ ಎನ್‌ಕ್ವೈರ್ ಹೆಸರಿನ ಒಂದು ಗಣಕ ಕ್ರಮವಿಧಿ (ಕಂಪ್ಯೂಟರ್ ಪ್ರೋಗ್ರಾಮ್) ರಚನೆ ಮಾಡಿದರು. ಅದೇನೂ ಪರಿಪೂರ್ಣ ತಂತ್ರಾಂಶವಾಗಿರಲಿಲ್ಲ. ಆದರೆ ಅವರ ಕೆಲಸದ ಅವಧಿ ಮುಗಿದುದರಿಂದ ಅವರು ಹಿಂದಕ್ಕೆ ತೆರಳಿದರು.

ಆದರೆ ಅವರು ಪುನಃ ೧೯೮೪ರಲ್ಲಿ ಪೂರ್ಣ ಪ್ರಮಾಣದ ಉದ್ಯೋಗಿಯಾಗಿ ಅಲ್ಲಿಗೇ ಬಂದರು. ತಾವು ಹಿಂದೆ ಬಳಸಿದ ಎನ್‌ಕ್ವೈರ್ ಅವರ ತಲೆಯಲ್ಲಿ ಕೊರೆಯುತ್ತಿತ್ತು. ಹೈಪರ್ಟೆಕ್ಸ್ಟ್ ಮತ್ತು ಅಂತರಜಾಲಗಳು ಈಗಾಗಲೇ ಅಸ್ತಿತ್ವದಲ್ಲಿದ್ದವು. ಸರ್ನ್ನವರ ಸಂಶೋಧನೆಗಳು ಪ್ರಪಂಚಾದ್ಯಂತ ನಡೆಯುತ್ತಿದ್ದವು. ಎಲ್ಲ ಕಡೆಗಳಿಂದ ಸರ್ನ್‌ಗೆ ಸಂಶೋಧನೆಯ ವರದಿಗಳನ್ನು ವಿದ್ಯುನ್ಮಾನ (ಇಲೆಕ್ಟ್ರಾನಿಕ್) ವಿಧಾನದಿಂದ ಕಳುಹಿಸಲು ಒಂದು ನಿಶ್ಚಿತ ಪದ್ಧತಿಯನ್ನು ಪಾಲಿಸಬೇಕಿತ್ತು. ಇದು ಬಹುಮಂದಿ ವಿಜ್ಞಾನಿಗಳಿಗೆ ತಲೆನೋವು ತರುತ್ತಿತ್ತು. ಲೀ ಇದರ ಬಗ್ಗೆ ತಲೆಕೆಡಿಸಿಕೊಂಡರು. ತಾನು ಈಗಾಗಲೇ ಬಳಸುತ್ತಿದ್ದ ಎನ್‌ಕ್ವೈರ್ ಅನ್ನು ತನಗೆ ಮಾತ್ರವಲ್ಲದೆ ಇತರರಿಗೂ ಬಳಸಲು ಅನುಕೂಲವಾಗುವಂತೆ ಪರಿರ್ತಿಸಿದರು.

೧೯೮೯ರಲ್ಲಿ ಲೀ ಅವರು ಮಾಹಿತಿ ಜಾಲವೊಂದರ ವಿನ್ಯಾಸದ ಬಗ್ಗೆ ಸರ್ನ್‌ಗೆ ಒಂದು ಕ್ರಿಯಾ ಯೋಜನೆ ಒಪ್ಪಿಸಿದರು. ಇದರ ಬಗ್ಗೆ ಅವರಿಗೆ ಯಾವುದೇ ಉತ್ತರ ಬರಲಿಲ್ಲ. ಆದರೆ ಅವರು ಅದರ ಬಗ್ಗೆ ಚಿಂತಿಸದೆ ಪ್ರಪಂಚದ ಎಲ್ಲ ಮಾಹಿತಿಗಳನ್ನು ಅಂತರಜಾಲದ ಮೂಲಕ ತಂತುಗಳಲ್ಲಿ ಬೆಸೆಯುವ ತಮ್ಮ ಆಲೋಚನೆಯನ್ನು ಕಾರ್ಯಗತಗೊಳಿಸ ತೊಡಗಿದರು. ಈ ಜಾಲದಲ್ಲಿರುವ ಪ್ರತಿಯೊಂದು ಮಾಹಿತಿ ಕೇಂದ್ರಕ್ಕೂ ಒಂದು ಪ್ರತ್ಯೇಕ ವಿಳಾಸವನ್ನು ಅಭಿವೃದ್ಧಿ ಮಾಡಿದರು. ಇದುವೇ ಇಂದು ನಾವೆಲ್ಲರೂ ಬಳಸುವ ಯುನಿಫಾರ್ಮ್ ರಿಸೋರ್ಸ್ ಲೊಕೇಟರ್ (URL) ಅರ್ಥಾತ್ ತಾಣಸೂಚಿ. ಈ ತಾಣಸೂಚಿಗಳಿಗೆ ಉದಾಹರಣೆ ಬೇಕಿದ್ದರೆ www.vishvakannada.com, www.microsoft.com, www.google.com, ಇತ್ಯಾದಿ. ಲೀ ಅವರು ಬಳಸಿದ ಪ್ರಥಮ ತಾಣಸೂಚಿ - info.cern.ch. ಈ ಜಾಲದಲ್ಲಿ ತಾಣಗಳ ರಚನೆಗೂ ಅವರು ಒಂದು ಸರಳ ಭಾಷೆಯನ್ನು ಹುಟ್ಟು ಹಾಕಿದರು. ಅದುವೇ ಹೈಪರ್ಟೆಕ್ಸ್ಟ್ ಮಾರ್ಕಪ್ ಲಾಂಗ್ವೇಜ್ (HTML). ಇಷೆಲ್ಲಾ ಆದರೂ ಸರ್ನ್‌ನ ನೌಕರಶಾಹಿ ಮಂದಿಗೆ ಇದರ ಮಹತ್ವ ಅರಿವಾಗಲಿಲ್ಲ. ಅವರ ಕ್ರಿಯಾಯೋಜನೆಗೆ ಹಣಕಾಸಿನ ಸಹಾಯವೂ ಬರಲಿಲ್ಲ. ಆದರೆ ಲೀ ತಮ್ಮ ಕೆಲಸ ನಿಲ್ಲಿಸಲಿಲ್ಲ. ಜಗತ್ತಿನಾದ್ಯಂತ ಎಲ್ಲ ಸಂಶೋಧಕರಿಗೆ ವಿ-ಅಂಚೆ (ಇಮೈಲ್) ಕಳುಹಿಸಿ ತಮ್ಮ ಈ ಸಂಶೋಧನೆಯನ್ನು ಬಳಸಲು ಕೇಳಿಕೊಂಡರು. ಇದರ ಮಹತ್ವ ಬಹು ಬೇಗನೆ ಹಲವಾರು ತಂತ್ರಜ್ಞರುಗಳಿಗೆ ಅರಿವಾಗಿ ಅವರೆಲ್ಲ ಅದನ್ನು ಬಳಸತೊಡಗಿದರು. ಇದರ ಫಲವೇ ಇಂದು ಜಗತ್ತಿನಾದ್ಯಂತ ಕೋಟಿಗಟ್ಟಲೆ ಮಂದಿ ಬಳಸುತ್ತಿರುವ ವಿಶ್ವವ್ಯಾಪಿ ಜಾಲ. ಆದರೆ ಸರ್ನ್‌ನ ನೌಕರಶಾಹಿ ಇನ್ನೂ ಗೊರಕೆ ಹೊಡೆಯುತ್ತಿತ್ತು. ಕೊನೆಗೂ ವಿಶ್ವವ್ಯಾಪಿ ಜಾಲವನ್ನು ಮುಂದುವರೆಸಲು ೧೯೯೪ರಲ್ಲಿ ಅಮೇರಿಕಾದ ಎಮ್.ಐ.ಟಿ.ಯಿಂದ ಅವರಿಗೆ ಕರೆಬಂತು. ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂತು.

ವೆಬ್‌ನ ಜನಕ ಎಂದೇ ಖ್ಯಾತರಾಗಿರುವ ಲೀ ಅವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಬ್ರಿಟಿಷ್ ಸರಕಾರ ಅವರಿಗೆ “ಸರ್” ಬಿರುದಿತ್ತು ಸನ್ಮಾನಿಸಿದೆ. ಅವರು ಮಾಡಿದ ಸಂಶೋಧನೆಗೆ ಸಮಾನವಾದ ಮೂಲಭೂತ ಸಂಶೋಧನೆಯನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ - ಈ ಯಾವುದೇ ಕ್ಷೇತ್ರದಲ್ಲಿ ಮಾಡಿದ್ದರೆ ಅವರಿಗೆ ನೋಬೆಲ್ ಪುರಸ್ಕಾರ ದೊರೆಯುತ್ತಿತ್ತು. ಟೈಮ್ ಮ್ಯಾಗಝಿನ್ ಅವರನ್ನು ಜಗತ್ತಿನ ಮೇಲೆ ಪ್ರಭಾವ ಬೀರಿದ ಶತಮಾನದ ೧೦೦ ಖ್ಯಾತ ವಿಜ್ಞಾನಿ ತಂತ್ರಜ್ಞಾನಿಗಳ ಪಟ್ಟಿಯಲ್ಲಿ ಸೇರಿಸಿದೆ. ಐನ್‌ಸ್ಟೈನ್ ಅವರ ಹೆಸರೂ ಈ ಪಟ್ಟಿಯಲ್ಲಿದೆ ಎಂದರೆ ಲೀ ಅವರ ಸಂಶೋಧನೆಯ ಮಹತ್ವ ಅರಿವಾಗುವುದು. ವಿಶ್ವವ್ಯಾಪಿ ಜಾಲವನ್ನು ನಿಯಂತ್ರಿಸುವ ವರ್ಲ್ಡ್ ವೈಡ್ ವೆಬ್ ಕನ್ಸೋರ್ಟಿಯಂನ ಅಧ್ಯಕ್ಷರಾಗಿ ಅವರು ಈಗಲೂ ಹೊಸ ಹೊಸ ಆಲೋಚನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ.

Tags:

ಜೂನ್ ೮ಲಂಡನ್೧೯೫೫

🔥 Trending searches on Wiki ಕನ್ನಡ:

ಚುನಾವಣೆಮಳೆನೀರು ಕೊಯ್ಲುಹುಬ್ಬಳ್ಳಿಹೊಯ್ಸಳಭಾರತದ ಇತಿಹಾಸಭಾರತದ ಭೌಗೋಳಿಕತೆಸಂಯುಕ್ತ ಕರ್ನಾಟಕನಿರ್ವಹಣೆ ಪರಿಚಯವಿಜಯ ಕರ್ನಾಟಕಎಸ್.ನಿಜಲಿಂಗಪ್ಪವಿಭಕ್ತಿ ಪ್ರತ್ಯಯಗಳುರಾಜಕೀಯ ಪಕ್ಷಹವಾಮಾನವೀಣೆಕಾರ್ಲ್ ಮಾರ್ಕ್ಸ್ಭಾರತೀಯ ರಿಸರ್ವ್ ಬ್ಯಾಂಕ್ಪಿತ್ತಕೋಶವಿಜಯನಗರ ಸಾಮ್ರಾಜ್ಯಪ್ರಬಂಧ ರಚನೆಜಯಂತ ಕಾಯ್ಕಿಣಿಬಿ. ಆರ್. ಅಂಬೇಡ್ಕರ್ಮನುಸ್ಮೃತಿಪಪ್ಪಾಯಿಶ್ರೀ ರಾಮಾಯಣ ದರ್ಶನಂದ್ರಾವಿಡ ಭಾಷೆಗಳುಶಿಶುನಾಳ ಶರೀಫರುಸಂಗೊಳ್ಳಿ ರಾಯಣ್ಣಗೌತಮ ಬುದ್ಧಹುಣಸೆಅಶ್ವತ್ಥಮರಪರಿಸರ ವ್ಯವಸ್ಥೆಪ್ರವಾಸೋದ್ಯಮನಾಯಕ (ಜಾತಿ) ವಾಲ್ಮೀಕಿಶ್ಯೆಕ್ಷಣಿಕ ತಂತ್ರಜ್ಞಾನರಾಸಾಯನಿಕ ಗೊಬ್ಬರಪೂರ್ಣಚಂದ್ರ ತೇಜಸ್ವಿಬ್ರಹ್ಮಆಡು ಸೋಗೆಜಯಚಾಮರಾಜ ಒಡೆಯರ್ಗೋಕರ್ಣವಿರಾಮ ಚಿಹ್ನೆಯು.ಆರ್.ಅನಂತಮೂರ್ತಿರಾಮಆದಿ ಶಂಕರರು ಮತ್ತು ಅದ್ವೈತದಸರಾಗಣೇಶ ಚತುರ್ಥಿಕುರಿಕಲ್ಯಾಣಿಭಾರತ ಸಂವಿಧಾನದ ಪೀಠಿಕೆಮತದಾನಅರವಿಂದ ಘೋಷ್ವಿದ್ಯಾರಣ್ಯಗಾಂಧಿ ಜಯಂತಿಭಾರತದ ರಾಷ್ಟ್ರಪತಿಗಳ ಪಟ್ಟಿಶಾಸನಗಳುಕರ್ನಾಟಕದ ಜಾನಪದ ಕಲೆಗಳುಬಂಡಾಯ ಸಾಹಿತ್ಯಸಿಂಧನೂರುತೆಲುಗುಸಮಾಸಪತ್ರದೇಶಗಳ ವಿಸ್ತೀರ್ಣ ಪಟ್ಟಿಯೋಗ ಮತ್ತು ಅಧ್ಯಾತ್ಮನೈಸರ್ಗಿಕ ಸಂಪನ್ಮೂಲಆಗುಂಬೆರಚಿತಾ ರಾಮ್ಶಿವಬೆಂಗಳೂರಿನ ಇತಿಹಾಸಗಿಡಮೂಲಿಕೆಗಳ ಔಷಧಿಕಾಲ್ಪನಿಕ ಕಥೆಜನಪದ ಕರಕುಶಲ ಕಲೆಗಳುಭಾರತದ ಪ್ರಧಾನ ಮಂತ್ರಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಯಣ್ ಸಂಧಿಭಾರತದ ರಾಜಕೀಯ ಪಕ್ಷಗಳುಅರಬ್ಬೀ ಸಾಹಿತ್ಯಕುಷಾಣ ರಾಜವಂಶಸಾಗುವಾನಿ🡆 More