ನಟ ಚರಿತ್ ಬಾಳಪ್ಪ ಪೂಜಾರಿ

ಚರಿತ್ ಬಾಳಪ್ಪ ಪೂಜಾರಿ ಅಲಿಯಾಸ್ ಚರಿತ್ ತಲ್ವಾರ್(ಜನನ:೧೩ ಆಗಸ್ಟ್ ೧೯೮೫) ಇವರು ಭಾರತೀಯ ದೂರದರ್ಶನ ನಟ ಹಾಗೂ ಮಾಡೆಲ್.

ಇವರು ಕಿರುತೆರೆಗೆ ಪಾದಾರ್ಪಿಸಿದ್ದು ಲವ್ ಲವಿಕೆ ಎಂಬ ಧಾರವಾಹಿಯ ಮೂಲಕ. ಇಲ್ಲಿ ಅಭಿಯಿಸಿದ ಇವರು ಲಕ್ಕಿ ಎಂದೇ ಹೆಸರುವಾಸಿಯಾಗಿದ್ದರು. ನಂತರ ಅಮ್ಮ ಎಂಬ ಧಾರವಾಹಿಯಲ್ಲಿ ನವೀನ್ , ಸರ್ಪ ಸಂಬಂಧ ಎಂಬ ಧಾರವಾಹಿಯಲ್ಲಿ ಭರಣ ಮತ್ತು ಮುದ್ದುಲಕ್ಷ್ಮಿ ಎಂಬ ಧಾರವಾಹಿಯಲ್ಲಿ ಡಾ||ಧ್ರುವಂತ್ ಎಂಬ ಪಾತ್ರವನ್ನು ವಹಿಸಿ ನಟಿಸಿದ್ದಾರೆ. ಹೀಗೆ ನಟನಾ ಕ್ಷೇತ್ರದಲ್ಲಿ ಇವರು ಎರಡು ಬಾರಿ ಅತ್ಯುತ್ತಮ ನಟ ಮತ್ತು ತನ್ನ ನಟನೆಗಾಗಿ ಮೋಸ್ಟ್ ಪ್ರಾಮಿಸಿಂಗ್ ಲೀಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಚರಿತ್ ಬಾಳಪ್ಪ ಪೂಜಾರಿ
Born೧೩ ಆಗಸ್ಟ್ ೧೯೮೫
Other namesಚರಿತ್ ಬಾಳಪ್ಪ ತಲ್ವಾರ್
Educationಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ - ಕೊಡ್ಲಿಪೇಟೆ ಶಾಲೆ ಕೊಡಗು,
ಪದವಿ ಪೂರ್ವ ಶಿಕ್ಷಣ ಶನಿವಾರ ಸಂತೆ ಕಾಲೇಜು,
ಪದವಿ ಮತ್ತು ಸ್ನಾತ್ತಕೋತ್ತರ ಪದವಿ(ಬಿಬಿಎಂ) ನಿಟ್ಟೆ ಯುನಿವರ್ಸಿಟಿ.
Occupation(s)ಮಾಡೆಲ್, ನಟ.
Years active೨೦೧೫ - ಇಂದಿನ ವರೆಗೆ
Known forಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರವಾಹಿಯ ಡಾ
Spouseಮಂಜುಶ್ರೀ ಚರಿತ್
Parent(s)ಬಾಳಪ್ಪ ಪೂಜಾರಿ (ತಂದೆ), ಪ್ರೇಮ ಬಾಳಪ್ಪ (ತಾಯಿ)

ಜನನ , ಆರಂಭಿಕ ಜೀವನ ಮತ್ತು ಶಿಕ್ಷಣ

ಇವರು ೧೩ ಆಗಸ್ಟ್ ೧೯೮೫ ರಂದು ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ ಬಾಳಪ್ಪ ಪೂಜಾರಿ ಮತ್ತು ತಾಯಿ ಪ್ರೇಮ ಬಾಳಪ್ಪ. ಇವರು ತಮ್ಮ ಪ್ರಿಕೆಜಿ ಶಿಕ್ಷಣವನ್ನು ಬಂಟ್ವಾಳದ ಶಾಲೆಯಲ್ಲಿ ಪಡೆದು, ಕೊಡಗಿನ ಕೊಡ್ಲಿಪೇಟೆ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು , ಶನಿವಾರ ಸಂತೆ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪದವಿ ಮತ್ತು ಎಂ.ಬಿ.ಎ ನಲ್ಲಿ ಸ್ನಾತ್ತಕೋತ್ತರ ಪದವಿ ಶಿಕ್ಷಣವನ್ನು ನಿಟ್ಟೆ ಯುನಿವರ್ಸಿಟಿಯಲ್ಲಿ ಪೂರ್ಣಗೊಳಿಸಿದರು. ಬಂಟ್ವಾಳದಲ್ಲಿ ಹುಟ್ಟಿದರೂ ಇವರು ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಕೊಡಗಿನಲ್ಲಿ ಪಡೆದು ನಂತರದ ಶಿಕ್ಷಣವನ್ನು ಕರಾವಳಿಯಲ್ಲಿ ಪಡೆಯುತ್ತಾರೆ.

ವೃತ್ತಿಜೀವನ

ಎಂ.ಬಿ.ಎ ಪದವಿ ಶಿಕ್ಷಣ ಪಡೆದ ನಂತರ ಚರಿತ್ ಇವರು ಮೊದಲಿಗೆ ಹೆಚ್.ಎಸ್.ಬಿ.ಸಿ ಎಂಬ ಮಲ್ಟಿನ್ಯಾಷನಲ್ ಕಂಪನಿ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಒಂದಷ್ಟು ಕಾಲ ಕೆಲಸ ಮಾಡಿದ ಬಳಿಕ ವಿಮಾನದಲ್ಲಿ ಕ್ಯಾಬಿನ್ ಕ್ರೂ ಆಗಿಯೂ ಕಾರ್ಯನಿರ್ವಹಿಸಿದರು. ಹೀಗೆ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವಾಗಲೇ ನಟನೆ ಮತ್ತು ಮಾಡೆಲಿಂಗ್ ನತ್ತ ಆಸಕ್ತಿ ಇವರಲ್ಲಿ ಹುಟ್ಟುತ್ತದೆ. ಕೈ ತುಂಬಾ ಸಂಬಳ ಸಿಕ್ಕರೂ ಆ ಉದ್ಯೋಗವನ್ನು ಬಿಟ್ಟು ಇವರು ನಟನೆಯ ಕಡೆಗೆ ಮುಖ ಮಾಡಿದರು.

ಕಿರುತೆರೆಯಲ್ಲಿ ಚರಿತ್

ನಟನೆ ಮತ್ತು ಮಾಡೆಲಿಂಗ್ ನಲ್ಲಿ ಚಿಕ್ಕದಿನಿಂದಲೇ ಆಸಕ್ತಿಯನ್ನು ಹೊಂದಿದ್ದ ಇವರು ಕೈ ತುಂಬಾ ಸಂಬಳವಿರುವ ಉದ್ಯೋಗವನ್ನ ಬಿಟ್ಟು ೨೦೧೫ ರಲ್ಲಿ ವಿನು ಬಳಂಜ ನಿರ್ದೇಶನದ ಲವ್ ಲವಿಕೆ ಎಂಬ ಕನ್ನಡ ಧಾರವಾಹಿಯಲ್ಲಿ ಮೊದಲ ಬಾರಿಗೆ ನಟಿಸುತ್ತಾರೆ. ಈ ಧಾರವಾಹಿ ಜೀ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುತ್ತಿತ್ತು. ಇಲ್ಲಿ ಲಕ್ಕಿ ಎಂಬ ಪಾತ್ರದಲ್ಲಿ ನಟಿಸಿದ ನಂತರ ೨೦೧೬ ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಅಮ್ಮ ಎಂಬ ಧಾರವಾಹಿಯಲ್ಲಿ ನವೀನ್ ಎಂಬ ಪಾತ್ರದಲ್ಲಿ , ನಂತರ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದ್ದಸರ್ಪ ಸಂಬಂಧ ಎಂಬ ಧಾರವಾಹಿಯಲ್ಲಿ ಭರಣ ಎಂಬ ಪಾತ್ರದಲ್ಲಿ ನಟಿಸಿದರು. ತದನಂತರ ೨೦೧೮ ರಿಂದ ೨೦೨೧ರ ತನಕ ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಎಂಬ ಧಾರವಾಹಿಯಲ್ಲಿ ಡಾ||ಧ್ರುವಂತ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

ವೈವಾಹಿಕ ಜೀವನ

ಚರಿತ್ ಇವರು ೨೦೧೭ ರಲ್ಲಿ ನವೆಂಬರ್ ೩೦ ರಂದು ಮಂಜುಶ್ರೀ ಅವರನ್ನು ವಿವಾಹವಾದರು.

ಅಭಿನಯಿಸಿದ ಧಾರವಾಹಿಗಳ ಪಟ್ಟಿ

ವರ್ಷ ಧಾರವಾಹಿ ಪಾತ್ರ ಉಲ್ಲೇಖ
೨೦೧೫ ಲವ್ ಲವಿಕೆ ಲಕ್ಷ್ಮಣ್/ಲಕ್ಕಿ
೨೦೧೬ ಅಮ್ಮ ನವೀನ್
೨೦೧೬ ಸರ್ಪ ಸಂಬಂಧ ಭರಣ
೨೦೧೮ ಮುದ್ದು ಲಕ್ಷ್ಮಿ ಡಾ॥ಧ್ರುವಂತ್
೨೦೨೧ ಮನಸಾರೆ

ಪ್ರಶಸ್ತಿಗಳು

  • ಸಿ.ಎಚ್.ಎಸ್.ಬಿ.ಸಿ ನಲ್ಲಿ ಲೆರ್ನಿಂಗ್ ಆಫ್ ಚಾಂಪಿಯನ್ ಪ್ರಶಸ್ತಿ.
  • ಡೆಲ್ ಸಂಸ್ಥೆಯಿಂದ ಅಚೀವ್ಮೆಂಟ್ ಅವಾರ್ಡ್.
  • ಮೋಸ್ಟ್ ಪ್ರಾಮಿಸಿಂಗ್ ಲೀಡ್ ಅವಾರ್ಡ್.
  • ಅಮ್ಮ ಧಾರವಾಹಿಯಲ್ಲಿನ ನಟನೆಗಾಗಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿ

ಉಲ್ಲೇಖಗಳು

Tags:

ನಟ ಚರಿತ್ ಬಾಳಪ್ಪ ಪೂಜಾರಿ ಜನನ , ಆರಂಭಿಕ ಜೀವನ ಮತ್ತು ಶಿಕ್ಷಣನಟ ಚರಿತ್ ಬಾಳಪ್ಪ ಪೂಜಾರಿ ವೃತ್ತಿಜೀವನನಟ ಚರಿತ್ ಬಾಳಪ್ಪ ಪೂಜಾರಿ ವೈವಾಹಿಕ ಜೀವನನಟ ಚರಿತ್ ಬಾಳಪ್ಪ ಪೂಜಾರಿ ಅಭಿನಯಿಸಿದ ಧಾರವಾಹಿಗಳ ಪಟ್ಟಿನಟ ಚರಿತ್ ಬಾಳಪ್ಪ ಪೂಜಾರಿ ಪ್ರಶಸ್ತಿಗಳುನಟ ಚರಿತ್ ಬಾಳಪ್ಪ ಪೂಜಾರಿ ಉಲ್ಲೇಖಗಳುನಟ ಚರಿತ್ ಬಾಳಪ್ಪ ಪೂಜಾರಿನಟಭಾರತೀಯ

🔥 Trending searches on Wiki ಕನ್ನಡ:

ಕಾಲಾಯ ತಸ್ಮೈ ನಮಃ (ಚಲನಚಿತ್ರ)ಪ್ರೇಮಾಕವಿರಾಜಮಾರ್ಗರೋಗಕೊರೋನಾವೈರಸ್ಕಲಾವಿದಸಿಂಧೂತಟದ ನಾಗರೀಕತೆಕಂಪ್ಯೂಟರ್ಭಾರತೀಯ ಸಂವಿಧಾನದ ತಿದ್ದುಪಡಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಭಾರತದ ಆರ್ಥಿಕ ವ್ಯವಸ್ಥೆನೈಸರ್ಗಿಕ ಸಂಪನ್ಮೂಲಆದಿ ಶಂಕರರು ಮತ್ತು ಅದ್ವೈತಕರ್ನಾಟಕದ ವಾಸ್ತುಶಿಲ್ಪಆಂಧ್ರ ಪ್ರದೇಶಪ್ರೀತಿಕುವೆಂಪುಅಂತಾರಾಷ್ಟ್ರೀಯ ಸಂಬಂಧಗಳುಹಿಮಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಭಾರತದ ಸಂವಿಧಾನದ ಏಳನೇ ಅನುಸೂಚಿಭಾರತದ ರಾಷ್ಟ್ರೀಯ ಚಿಹ್ನೆಕೊಡಗುಡಾ ಬ್ರೋಮೆಕ್ಕೆ ಜೋಳಭಾರತೀಯ ನೌಕಾ ಅಕಾಡೆಮಿಪ್ರಜಾಪ್ರಭುತ್ವಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಗೋದಾವರಿರಕ್ತಪೂರಣಕೃಷ್ಣರಾಜಸಾಗರರಾಷ್ಟ್ರಕವಿಕರ್ನಾಟಕದ ಜಾನಪದ ಕಲೆಗಳುವೆಂಕಟೇಶ್ವರ ದೇವಸ್ಥಾನಗುರುಲಿಂಗ ಕಾಪಸೆಯಣ್ ಸಂಧಿಅಂತರ್ಜಾಲ ಆಧಾರಿತ ಕರೆ ಪ್ರೋಟೋಕಾಲ್‌ವಿಕ್ರಮಾದಿತ್ಯ ೬ಭಾರತೀಯ ಭೂಸೇನೆಸ್ತನ್ಯಪಾನಅಂತರ್ಜಲಎರಡನೇ ಮಹಾಯುದ್ಧಮಂಗಳೂರುಹಳೆಗನ್ನಡಶಾತವಾಹನರುಇಸ್ಲಾಂಭಾರತದಲ್ಲಿ ತುರ್ತು ಪರಿಸ್ಥಿತಿಕುಮಾರವ್ಯಾಸಕೆ. ಎಸ್. ನಿಸಾರ್ ಅಹಮದ್ಸಾರ್ವಜನಿಕ ಆಡಳಿತಕರ್ಣಾಟಕ ಬ್ಯಾಂಕ್ಶ್ರೀ ರಾಮಾಯಣ ದರ್ಶನಂಅಂಬರೀಶ್ಪ್ಯಾರಾಸಿಟಮಾಲ್ಭಾರತದಲ್ಲಿ ಮೀಸಲಾತಿಪುನೀತ್ ರಾಜ್‍ಕುಮಾರ್ಗರ್ಭಧಾರಣೆಕರ್ನಾಟಕ ಐತಿಹಾಸಿಕ ಸ್ಥಳಗಳುಕರ್ನಾಟಕದಲ್ಲಿ ಬ್ಯಾಂಕಿಂಗ್ಬರಗೂರು ರಾಮಚಂದ್ರಪ್ಪಹೊಸ ಆರ್ಥಿಕ ನೀತಿ ೧೯೯೧ಭಾರತದ ನಿರ್ದಿಷ್ಟ ಕಾಲಮಾನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತದಲ್ಲಿ ಪಂಚಾಯತ್ ರಾಜ್ಟೈಗರ್ ಪ್ರಭಾಕರ್ಶ್ರೀಕೃಷ್ಣದೇವರಾಯಮಹಮದ್ ಬಿನ್ ತುಘಲಕ್ರಗಳೆಚಾಲುಕ್ಯಶಾಂತರಸ ಹೆಂಬೆರಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಭಾರತದ ರಾಷ್ಟ್ರಗೀತೆಬಂಡಾಯ ಸಾಹಿತ್ಯಬಿ.ಎಫ್. ಸ್ಕಿನ್ನರ್ಭಾರತೀಯ ಭಾಷೆಗಳುಬಡತನ🡆 More