ಗೋಲ್ಡನ್ ಐ

ಗೋಲ್ಡನ್ ಐ 1995 ರ ಗೂಢಚಾರಿಕೆಯ ಚಲನಚಿತ್ರವಾಗಿದೆ.

ಈ ಚಲನಚಿತ್ರವು ಇಯಾನ್ ಪ್ರೊಡಕ್ಷನ್ಸ್ ನಿರ್ಮಿಸಿದ ಜೇಮ್ಸ್ ಬಾಂಡ್ ಸರಣಿಯ ಹದಿನೇಳನೆಯ ಮತ್ತು ಪಿಯರ್ಸ್ ಬ್ರಾಸ್ನನ್ ಕಾಲ್ಪನಿಕ MI6 ಏಜೆಂಟ್ ಜೇಮ್ಸ್ ಬಾಂಡ್ ಆಗಿ ನಟಿಸಿದ ಮೊದಲ ಚಿತ್ರ. ಇದನ್ನು ಮಾರ್ಟಿನ್ ಕ್ಯಾಂಪ್‌ಬೆಲ್ ನಿರ್ದೇಶಿಸಿದ್ದಾರೆ ಮತ್ತು ಇದು ಕಾದಂಬರಿಕಾರ ಇಯಾನ್ ಫ್ಲೆಮಿಂಗ್ ಅವರ ಯಾವುದೇ ಕಥಾ ಅಂಶಗಳನ್ನು ಬಳಸದ ಸರಣಿಯಲ್ಲಿ ಮೊದಲನೆಯ ಚಲನಚಿತ್ರವಾಗಿದೆ.ಅಲ್ಬರ್ಟ್ ಬ್ರೊಕೊಲಿ ಅವರು ಇಯಾನ್ ಪ್ರೊಡಕ್ಷನ್ಸ್‌ನಿಂದ ಹೊರಬಂದ ಮೇಲೆ ಅವರ ಮಗಳಾದ ಬಾರ್ಬರಾ ಬ್ರೊಕೊಲಿ ಅವರ ಸ್ಥಾನಕ್ಕೆ ಬಂದ ನಂತರ ಅಲ್ಬರ್ಟ್ ಆರ್ ಬ್ರೊಕೊಲಿ ಅವರು ನಿರ್ಮಿಸದ ಮೊದಲ ಜೇಮ್ಸ್ ಬಾಂಡ್ ಚಲನಚಿತ್ರವಾಗಿದೆ. ( ಮೈಕೆಲ್ ಜಿ. ವಿಲ್ಸನ್ ಜೊತೆಗೆ, ಆಲ್ಬರ್ಟ್ ಅವರು ಸಲಹೆಗಾರ ನಿರ್ಮಾಪಕರಾಗಿ ಚಲನಚಿತ್ರದಲ್ಲಿ ತೊಡಗಿಸಿಕೊಂಡರು. ಇದು ಜೇಮ್ಸ್ ಬಾಂಡ್ ಚಲನಚಿತ್ರದಲ್ಲಿ ಮತ್ತು ಅವರ ವೃತ್ತಿಜೀವನದ ಸಮಯದಲ್ಲಿ ಅವರು ೧೯೯೬ರಲ್ಲಿ ನಿಧನರಾಗುವ ಮುಂಚೆ ಅವರ ಕೊನೆಯ ಭಾಗವಹಿಸುವಿಕೆಯಾಗಿತ್ತು.). ಈ ಕಥೆಯನ್ನು ಮೈಕೆಲ್ ಫ್ರಾನ್ಸ್ ಕಲ್ಪಿಸಿ, ಬರೆದಿದ್ದಾರೆ. ನಂತರ ಇತರ ಬರಹಗಾರರ ಸಹಯೋಗದೊಂದಿಗೆ ಕಥೆ ಮುಂದುವರೆದಿದೆ.ಈ ಚಲನಚಿತ್ರದಲ್ಲಿ, ದುಷ್ಟ MI6 ಏಜೆಂಟ್ ( ಸೀನ್ ಬೀನ್ ) ಲಂಡನ್ ವಿರುದ್ಧ ಉಪಗ್ರಹ ಅಸ್ತ್ರವನ್ನು ಬಳಸಿ, ಜಾಗತಿಕ ಆರ್ಥಿಕ ಕುಸಿತವನ್ನುಂಟು ಮಾಡಲೆತ್ನಿಸುವುದನ್ನು ತಡೆಗಟ್ಟಲು ಬಾಂಡ್ ಹೋರಾಡುತ್ತಾನೆ.

GoldenEye
UK theatrical release poster by Terry O'Neill, Keith Hamshere and George Whitear
ನಿರ್ದೇಶನMartin Campbell
ನಿರ್ಮಾಪಕ
  • Michael G. Wilson
  • Barbara Broccoli
ಚಿತ್ರಕಥೆ
  • Jeffrey Caine
  • Bruce Feirstein
ಕಥೆMichael France
ಆಧಾರJames Bond 
by Ian Fleming
ಪಾತ್ರವರ್ಗ
  • Pierce Brosnan
  • Sean Bean
  • Izabella Scorupco
  • Famke Janssen
  • Joe Don Baker
ಸಂಗೀತÉric Serra
ಛಾಯಾಗ್ರಹಣPhil Méheux
ಸಂಕಲನTerry Rawlings
ಸ್ಟುಡಿಯೋ
  • Eon Productions
  • United Artists
ವಿತರಕರು
  • MGM/UA Distribution Co. (United States)
  • United International Pictures (International)
ಬಿಡುಗಡೆಯಾಗಿದ್ದು
  • 13 ನವೆಂಬರ್ 1995 (1995-11-13) (Radio City Music Hall premiere)
  • 17 ನವೆಂಬರ್ 1995 (1995-11-17) (United States)
  • 24 ನವೆಂಬರ್ 1995 (1995-11-24) (United Kingdom)
ಅವಧಿ130 minutes
ದೇಶ
  • United Kingdom
  • United States
ಭಾಷೆ
  • English
  • Russian
  • Spanish
ಬಂಡವಾಳ$60 million
ಬಾಕ್ಸ್ ಆಫೀಸ್$352.1 million

ಕಾನೂನು ವಿವಾದಗಳ ಸರಣಿಯಿಂದಾಗಿ ಉಂಟಾದ ಆರು ವರ್ಷಗಳ ದೀರ್ಘವಿರಾಮದ ನಂತರ ಚಲನಚಿತ್ರವನ್ನು ಬಿಡುಗಡೆ ಮಾಡಲಾಯಿತು, ಈ ಸಮಯದಲ್ಲಿ ತಿಮೋತಿ ಡಾಲ್ಟನ್ ಜೇಮ್ಸ್ ಬಾಂಡ್ ಪಾತ್ರಕ್ಕೆ ರಾಜೀನಾಮೆ ನೀಡಿದರು ಮತ್ತು ಬ್ರಾಸ್ನನ್ ಅವರನ್ನು ಆ ಪಾತ್ರ ನಿರ್ವಹಿಸಲು ಆಯ್ಕೆ ಮಾಡಲಾಯಿತು. ರಾಬರ್ಟ್ ಬ್ರೌನ್ ಬದಲಿಗೆ ಬಂದ ನಟಿ ಜೂಡಿ ಡೆಂಚ್ ಎಂ ಪಾತ್ರವನ್ನು ಬಿಂಬಿಸಿದ ಮೊದಲ ಮಹಿಳೆ ಎನಿಸಿಕೊಂಡರು. ಮಿಸ್ ಮನಿಪೆನ್ನಿಯ ಪಾತ್ರವನ್ನೂ ಕೂಡ ಮರುಸೃಷ್ಟಿಸಲಾಯಿತು, ಕ್ಯಾರೋಲಿನ್ ಬ್ಲಿಸ್ ಬದಲಾಗಿ ಸಮಂತಾ ಬಾಂಡ್‌ ಅವರನ್ನು ಪಾತ್ರನಿರ್ವಹಣೆಗೆ ಕರೆತರಲಾಯಿತು. ಡೆಸ್ಮಂಡ್ ಲೆವೆಲಿನ್ ಅವರೊಬ್ಬರೇ ತಮ್ಮ ಮೂಲ ಪಾತ್ರವಾದ ಕ್ಯೂ ಪಾತ್ರದಲ್ಲಿ ಮುಂದುವರೆದ ಏಕೈಕ ನಟರೆನಿಸಿಕೊಂಡರು. ಸೋವಿಯತ್ ಒಕ್ಕೂಟದ ವಿಸರ್ಜನೆ ಮತ್ತು ಶೀತಲ ಸಮರದ ಅಂತ್ಯದ ನಂತರ ಮಾಡಿದ ಮೊದಲ ಬಾಂಡ್ ಚಲನಚಿತ್ರ ಇದಾಗಿದ್ದು, ಇದುವೇ ಚಿತ್ರಕ್ಕೆ ಕಥಾವಸ್ತುವಿನ ಹಿನ್ನೆಲೆಯನ್ನೂ ಒದಗಿಸಿತು. ಗೋಲ್ಡನ್ ಐ ಚಲನಚಿತ್ರದ ಪ್ರಧಾನ ಛಾಯಾಗ್ರಹಣವು ಯುಕೆ, ರಷ್ಯಾ, ಮಾಂಟೆ ಕಾರ್ಲೊ ಮತ್ತು ಪೋರ್ಟೊ ರಿಕೊದಲ್ಲಿ ನಡೆಯಿತು ; ಇದು ಲೀವ್ಸ್‌ಡೆನ್ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡ ಉದ್ಘಾಟನಾ ಚಲನಚಿತ್ರವಾಗಿತ್ತು. ಕಂಪ್ಯೂಟರ್-ನಿರ್ಮಿತ ಚಿತ್ರಣವನ್ನು (CGI) ಬಳಸಿದ ಮೊದಲ ಬಾಂಡ್ ಚಲನಚಿತ್ರ ಇದಾಗಿದ್ದು, ಗೋಲ್ಡನ್ ಐ ಸ್ಪೆಷಲ್ ಎಫೆಕ್ಟ್ಸ್ ಮೇಲ್ವಿಚಾರಕ ಡೆರೆಕ್ ಮೆಡ್ಡಿಂಗ್ಸ್ ಅವರ ವೃತ್ತಿಜೀವನದ ಅಂತಿಮ ಚಲನಚಿತ್ರವಾಗಿದೆ, ಈ ಚಲನಚಿತ್ರವನ್ನುಅವರ ಸ್ಮರಣೆಗೆ ಸಮರ್ಪಿಸಲಾಯಿತು.

ಈ ಚಲನಚಿತ್ರವು ವಿಶ್ವದಾದ್ಯಂತ US $ 350 ಮಿಲಿಯನ್^ಗಿಂತ ಹೆಚ್ಚು ಹಣ ಗಳಿಸಿದೆ. ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳದೆ ನೋಡಿದಲ್ಲಿ, ಡಾಲ್ಟನ್‌ನ ಚಲನಚಿತ್ರಗಳಿಗಿಂತ ಗಣನೀಯವಾಗಿ ಉತ್ತಮವಾಗಿದೆ. ಇದು ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ಬ್ರಾಸ್ನನ್ ಅವರು ಅವರ ಹಿಂದಿನ ಪಾತ್ರಧಾರಿಗಿಂತ ಸುಧಾರಿತ ನಟನೆಂದು ವಿಮರ್ಶಕರು ಅಭಿಪ್ರಾಯಪಟ್ಟರು. ಈ ಚಲನಚಿತ್ರವು ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಆರ್ಟ್ಸ್ ನಿಂದ " ಅತ್ಯುತ್ತಮ ವಿಶೇಷ ವಿಷುಯಲ್ ಎಫೆಕ್ಟ್ಸ್ " ಮತ್ತು " ಬೆಸ್ಟ್ ಸೌಂಡ್ " ಗಾಗಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಪಡೆಯಿತು.

"ಗೋಲ್ಡನ್ ಐ" ಎಂಬ ಹೆಸರು ಜೇಮ್ಸ್ ಬಾಂಡ್‌ನ ಸೃಷ್ಟಿಕರ್ತ ಇಯಾನ್ ಫ್ಲೆಮಿಂಗ್‌ಗೆ ಗೌರವ ಸಮರ್ಪಿಸುತ್ತದೆ. ಲೆಫ್ಟಿನೆಂಟ್ ಕಮಾಂಡರ್ ಆಗಿ ಬ್ರಿಟಿಷ್ ನೇವಲ್ ಇಂಟೆಲಿಜೆನ್ಸ್‌ಗಾಗಿ ಕೆಲಸ ಮಾಡುತ್ತಿದ್ದಾಗ , ಫ್ಲೆಮಿಂಗ್ಅವರು ಸ್ಪೇನ್‌ನ ಅಂತರ್ಯುದ್ಧದ ನಂತರದ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡಲು ನೌಕಾ ಗುಪ್ತಚರ ವಿಭಾಗದೊಂದಿಗೆ ಸಂಪರ್ಕ ಹೊಂದಿದ್ದರು. ಈ ಕಾರ್ಯಾಚರಣೆಯುಆಪರೇಷನ್ ಗೋಲ್ಡನ್ ಐ ಎಂಬ ಸಂಕೇತನಾಮ ಹೊಂದಿತ್ತು ಫ್ಲಮಿಂಗ್ ಈ ಕಾರ್ಯಾಚರಣೆಯ ಹೆಸರನ್ನು ಜಮೈಕಾದ ಒರಾಕಾಬೆಸ್ಸಾದಲ್ಲಿರುವ ತಮ್ಮ ಎಸ್ಟೇಟ್‌ಗಾಗಿ ಬಳಸಿದರು.

ಕಥಾವಸ್ತು

1986 ರಲ್ಲಿ, ಎಂಐ 6 ಏಜೆಂಟ್ ಜೇಮ್ಸ್ ಬಾಂಡ್ ಮತ್ತು ಅಲೆಕ್ ಟ್ರೆವೆಲ್ಯಾನ್ ಸೋವಿಯತ್ ದೇಶದ ಅರ್ಖಾನ್^ಜೆಲ್ಸ್ಕ್ ಎಂಬಲ್ಲಿದ್ದ ರಾಸಾಯನಿಕ ಶಸ್ತ್ರಾಸ್ತ್ರಗಳ ಕಾರ್ಖಾನೆಗೆ ಒಳನುಸುಳುತ್ತಾರೆ. (Arkhangelsk) . ಟ್ರೆವೆಲ್ಯಾನ್ ಅರ್ಕಾಡಿ ಗ್ರಿಗೊರೊವಿಚ್ ಔರುಮೋವ್ ಎಂಬ, ಆ ಕಾರ್ಖಾನೆಯ ಪ್ರಧಾನ ಅಧಿಕಾರಿಯಿಂದ ಹತನಾಗುತ್ತಾನೆ. ಆದರೆ ಬಾಂಡ್ ಅಲ್ಲಿಂದ ತಪ್ಪಿಸಿಕೊಳ್ಳಲು ಶಕ್ತನಾಗುತ್ತಾನಲ್ಲದೇ ಅದಕ್ಕೆ ಮೊದಲು ಆ ಸ್ಥಳವನ್ನು ನಾಶಮಾಡುವಲ್ಲಿ ಯಶಸ್ವಿಯಾಗುತ್ತಾನೆ.

ಒಂಬತ್ತು ವರ್ಷಗಳ ನಂತರ, ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರದ ಬೆಳವಣಿಗೆಗಳನ್ನು ಮೌಲ್ಯಮಾಪನ ಮಾಡುವಾಗ, ಮಾಂಟೆ ಕಾರ್ಲೋದಲ್ಲಿ ನಡೆವ ಸೇನಾ ಪ್ರದರ್ಶನವೊಂದರಲ್ಲಿ ಜಾನುಸ್ ಅಪರಾಧ ತಂಡದ ಸದಸ್ಯಳಾದ ಕ್ಸೆನಿಯಾ ಒನಾಟೊಪ್ ಯೂರೋಕಾಪ್ಟರ್ ಟೈಗರ್ ದಾಳಿ ಹೆಲಿಕಾಪ್ಟರ್ ಅನ್ನು ಕದಿಯದಂತೆ ಬಾಂಡ್ ಪ್ರಯತ್ನಿಸಿದರೂ ಅದರಲ್ಲಿ, ವಿಫಲನಾಗುತ್ತಾನೆ. ಲಂಡನ್‌ಗೆ ಹಿಂದಿರುಗುವ ಬಾಂಡ್ ಸೈಬೀರಿಯಾದ ಸೇವರ್ನಯಾ ಎಂಬಲ್ಲಿ ನಡೆಯುವ ಘಟನೆಯೊಂದನ್ನು ತನಿಖೆ ಮಾಡುವ MI6 ಸಿಬ್ಬಂದಿಯ ಮೇಲ್ವಿಚಾರಣೆ ಮಾಡುತ್ತಾನೆ. [nb 1] ಕದ್ದ ಹೆಲಿಕಾಪ್ಟರ್ ಅಲ್ಲಿನ ರಾಡಾರ್^ನತ್ತ ತಿರುಗಿದಾಗ ಎಲೆಕ್ಟ್ರೋಮ್ಯಾಗ್ನೆಟಿಕ್ ಪಲ್ಸ್ ಸಿಡಿತವು ಇದ್ದಕ್ಕಿದ್ದಂತೆ ಆ ಸ್ಥಳಕ್ಕೆ ಅಪ್ಪಳಿಸಿ ಅದನ್ನು ನಾಶಪಡಿಸುತ್ತದೆ ಮತ್ತು ತುರ್ತು ಆಪತ್ ಕರೆಯನ್ನು ತನಿಖೆ ಮಾಡಲು ಕಳುಹಿಸಲಾಗಿದ್ದ ಮೂರು ರಷ್ಯಾದ ಫೈಟರ್ ಜೆಟ್‌ಗಳನ್ನು ಹಾಗೂ ಕಕ್ಷೆಯಲ್ಲಿರುವ ಎಲ್ಲಾ ಉಪಗ್ರಹ ವ್ಯವಸ್ಥೆಗಳನ್ನು ನಾಶಪಡಿಸುತ್ತದೆ.

ಸ್ಫೋಟವು ಸೋವಿಯತ್ ಯುಗದ ಉಪಗ್ರಹದಿಂದ ಪರಮಾಣು ವಿದ್ಯುತ್ಕಾಂತೀಯ ನಾಡಿ ಬಾಹ್ಯಾಕಾಶ ಆಧಾರಿತ ಆಯುಧದಿಂದ ಸಜ್ಜಿತವಾಗಿದ್ದು, ಇದಕ್ಕೆ "ಗೋಲ್ಡನ್ ಐ" ಎಂದು ಸಂಕೇತನಾಮ ನೀಡಲಾಗಿದೆ ಎಂದು ಖಚಿತಗೊಂಡ ನಂತರ,ಹೊಸದಾಗಿ ನೇಮಕಗೊಂಡ ಮಹಿಳಾ ಎಂ ತನಿಖೆಗಾಗಿ ಬಾಂಡ್ ಅನ್ನು ನಿಯೋಜಿಸುತ್ತಾಳೆ. ಜಾನುಸ್ ಈ ದಾಳಿಯನ್ನು ಆರಂಭಿಸಿತೆಂದು ಶಂಕಿಸಲಾಗಿತ್ತಾದರೂ, ಶಸ್ತ್ರಾಗಾರಕ್ಕೆ ಅತ್ಯುನ್ನತ ಮಟ್ಟದ ಸೇನಾಧಿಕಾರ ಹೊಂದಿರುವವರಿಗೆ ಮಾತ್ರ ಪ್ರವೇಶವಿರುವುದರಿಂದ ಸೇನೆಯ ಜನರಲ್ ಆಗಿರುವ ಔರುಮೋವ್ ಎಂಬಾತನ ಕೈವಾಡವನ್ನು ಶಂಕಿಸುತ್ತಾನೆ. ಸೇಂಟ್ ಪೀಟರ್ಸ್‌ಬರ್ಗ್‌ಗೆ ಪ್ರಯಾಣಿಸುವಾಗ, ಬಾಂಡ್‌ಗೆ ಅವನ ಸಿಐಎ ಸಂಪರ್ಕ ಜಾಕ್ ವೇಡ್‌, ಮಾಜಿ ಕೆಜಿಬಿ ಏಜೆಂಟ್ ಆಗಿದ್ದು, ಈಗ ಸುಲಿಗೆಕೋರನಾಗಿರುವ ಮತ್ತು ಈ ಹಿಂದೆ ಬಾಂಡ್ ಖಳನಾಗಿದ್ದ ವ್ಯಾಲೆಂಟಿನ್ ಝುಕೋವಸ್ಕಿಯನ್ನು ಭೇಟಿ ಮಾಡಿ ಅವನ ನೆರವಿನಿಂದ ಜಾನುಸ್^ನೊಂದಿಗೆ ಭೇಟಿಯನ್ನೇರ್ಪಡಿಸುವಂತೆ ಸಲಹೆ ನೀಡುತ್ತಾನೆ. ಒನಾಟೊಪ್‌ನ ಬೆಂಗಾವಲಿನೊಂದಿಗೆ ಸಭೆಗೆ ಬರುವ ಬಾಂಡ್^ಗೆ ಜಾನುಸ್ ಬೇರೆ ಯಾರೂ ಆಗಿರದೆ, ಟ್ರೆವೆಲ್ಯಾನ್ ಮತ್ತು ಜಾನುಸ್ ಇಬ್ಬರೂ ಒಂದೇ ಆಗಿದ್ದು, (ಅರ್ಖಾಂಗೆಲ್ಸ್ಕ್‌ನಲ್ಲಿ ದಾಳಿಯ ನಂತರ ವಿರೂಪಗೊಂಡು), ಅರ್ಖಾಂಗೆಲ್ಸ್ಕ್‌ನಲ್ಲಿ ತನ್ನ ಸಾವು ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಅಕ್ಸಿಸ್ ಒಕ್ಕೂಟದ (ಬ್ರಿಟನ್,ಅಮೇರಿಕ ಮತ್ತು ಸೊವಿಯತ್ ಒಕ್ಕೂಟಗಳ ಒಡಂಬಡಿಕೆ) ಜೊತೆಗಿನ ಸಹಯೋಗದಿಂದ ಸೋವಿಯತ್ ಒಕ್ಕೂಟಕ್ಕೆ ವಾಪಸ್ ಕಳುಹಿಸಲಾದ ಕೊಸಾಕ್ಸ್ ಮೂಲದವನು ಎಂಬುದು ತಿಳಿದು ಬರುತ್ತದೆ.

ಟ್ರೆವೆಲ್ಯಾನ್ ತನ್ನ ಪೋಷಕರಿಗೆ ದ್ರೋಹ ಮಾಡಿದ ಬ್ರಿಟನ್‌ನ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸಿರುತ್ತಾನೆ. ಆತನ ಪೋಷಕರು ತಮ್ಮನ್ನು ಹೊರಹಾಕಿದ ಕಾರಣ ಅವಮಾನಿತರಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬಾಂಡ್ ಆತನನ್ನು ಕೊಲ್ಲುವ ಮುನ್ನವೇ ಬಾಂಡ್^ನ ಪ್ರಜ್ಞೆ ತಪ್ಪಿಸಲಾಗುತ್ತದೆ. ಬಾಂಡ್ ಸೆವೆರ್ನಾಯ ದಾಳಿಯಿಂದ ಬದುಕುಳಿದ ನಟಾಲಿಯಾ ಸಿಮೋನೋವಾಳೊಂದಿಗೆ ಜೊತೆಯಲ್ಲಿ ಕದ್ದ ಟೈಗರ್ ಹೆಲಿಕಾಪ್ಟರಿನಲ್ಲಿ ಸಿಕ್ಕಿಕೊಳ್ಳುತ್ತಾನೆ. ಹೆಲಿಕಾಪ್ಟರ್‌ನ ಕ್ಷಿಪಣಿಗಳು ಅವರನ್ನು ನಾಶಪಡಿಸುವ ಮೊದಲೇ ತಪ್ಪಿಸಿಕೊಂಡರೂ, ಈ ಜೋಡಿಯನ್ನು ರಷ್ಯಾದ ಸೈನಿಕರು ಸೆರೆಹಿಡಿದು ವಿಚಾರಣೆಗಾಗಿ ರಷ್ಯಾದ ರಕ್ಷಣಾ ಸಚಿವ ಡಿಮಿತ್ರಿ ಮಿಶ್ಕಿನ್ ಮುಂದೆ ಕರೆದೊಯ್ಯತ್ತಾರೆ. ಪುರುಷರ ನಡುವಿನ ವಾಗ್ವಾದವು ನಟಾಲಿಯಾಳಿಗೆ ಗೋಲ್ಡನ್ ಐ ಬಳಕೆಯಲ್ಲಿ ಔರುಮೋವ್ ಭಾಗಿ ಎಂಬುದನ್ನು ಸಾಬೀತುಪಡಿಸಲು ನೆರವಾಗುತ್ತದೆ. ಸಹ ಪ್ರೋಗ್ರಾಮರ್ ಬೋರಿಸ್ ಗ್ರಿಶೆಂಕೊ ತನ್ನೊಂದಿಗೆ ಬದುಕುಳಿದು, ಈಗ ಎರಡನೇ ಗೋಲ್ಡನ್ ಐ ಉಪಗ್ರಹವನ್ನು ನಿರ್ವಹಿಸುವಲ್ಲಿ ಜಾನುಸ್‌ಗಾಗಿ ಕೆಲಸ ಮಾಡುತ್ತಿದ್ದಾರೆ ಎಂದೂ ಕೂಡ ಆಕೆಗೆ ತಿಳಿದುಬರುತ್ತದೆ. ಮಿಶ್ಕಿನ್ ಈ ಮಾಹಿತಿಯನ್ನಾಧರಿಸಿ ಕಾರ್ಯೋನ್ಮುಖನಾಗುವ ಮುನ್ನವೇ ಔರುಮೋವ್ ಅಲ್ಲಿಗೆ ಬಂದು ಆತನನ್ನು ಕೊಲ್ಲುತ್ತಾನೆ. ಬಾಂಡ್ ತಪ್ಪಿಸಿಕೊಳ್ಳುತ್ತಾನೆ, ನಟಾಲಿಯಾಳನ್ನು ರಕ್ಷಿಸಲು ಔರುಮೋವ್^ನನ್ನು ಬೆನ್ನಟ್ಟುತ್ತಾನೆ. ಹೀಗೆ ಬೆನ್ನಟ್ಟಿದಾಗ ಜಾನುಸ್ ಬಳಸುವ ಕ್ಷಿಪಣಿ ರೈಲಿನ ಬಳಿ ಬರುತ್ತಾನೆ., ಟ್ರಿವೆಲ್ಯಾನ್ ಅದನ್ನು ನಾಶಪಡಿಸುವ ಮುನ್ನ ಹಾಗೂ ನಟಾಲಿಯಾಳೊಂದಿಗೆ ಆ ರೈಲಿನಿಂದ ಪರಾರಿಯಾಗುವ ಮುನ್ನ ಬಾಂಡ್ ಔರುಮೋವ್^ನನ್ನು ಕೊಲ್ಲುತ್ತಾನೆ.

ಬೊರಿಸ್ ದ್ವೀಪದ ಅರಣ್ಯದಲ್ಲಿದ್ದಾನೆಂಬ ಮಾಹಿತಿ ದೊರೆತಾಗ ಬಾಂಡ್ ಮತ್ತು ನಟಾಲಿಯಾ ಕ್ಯೂಬಾಗೆ ಪಯಣಿಸುತ್ತಾರೆ.ಆ ಪ್ರದೇಶದ ಮೇಲೆ ಹಾರಾಟದಲ್ಲಿದ್ದಾಗ,ಅವರನ್ನು ಹೊಡೆದುರುಳಿಸಲಾಗುತ್ತದೆ. ಅವರಿಬ್ಬರೂ ಭೂಮಿಯ ಮೇಲೆ ಕುಸಿದುಬಿದ್ದಾಗ ಒನಾಟೊಪ್ ಅವರಿಬ್ಬರ ಮೇಲೆ ದಾಳಿ ಮಾಡುತ್ತಾಳೆ. ಆದರೆ ಆ ಕಾಳಗದಲ್ಲಿ ಬಾಂಡ್ ಆಕೆಯನ್ನು ಕೊಲ್ಲುತ್ತಾನೆ.ಬಾಂಡ್ ಮತ್ತು ನಟಾಲಿಯಾ ಜೋಡಿಯು ದೊಡ್ಡ ಕೆರೆಯ ಕೆಳಗೆ ಗುಪ್ತ ನೆಲೆಯೊಂದನ್ನು ಮತ್ತು ಬಚ್ಚಿಡಲಾದ ಉಪಗ್ರಹದ ಡಿಶ್ ಒಂದನ್ನು ಕಂಡುಹಿಡಿಯುತ್ತದೆ. ಅ ನೆಲೆಯನ್ನು ಪ್ರವೇಶಿಸಲು ಮುಂದಾಗುತ್ತದೆ. ಆ ನೆಲೆಯನ್ನು ನಾಶಪಡಿಸಲು ಬಾಂಡ್ ಸ್ಫೋಟಕಗಳನ್ನು ಇರಿಸುವಾಗ ಸೆರೆ ಹಿಡಿಯಲ್ಪಡುತ್ತಾನೆ. ಟ್ರಿವೆಲ್ಯಾನ್ ಮೂಲಕ ಆತನು ಟ್ರೆವೆಲ್ಯಾನ್, ಬ್ಯಾಂಕ್ ಆಫ್ ಇಂಗ್ಲೆಂಡಿನಿಂದ ಆರ್ಥಿಕ ದಾಖಲೆಗಳು ಕಳುವಾದ ವಿಷಯವನ್ನು ರಹಸ್ಯವಾಗಿಡಲು ಗೋಲ್ಡನ್ ಆಯ್ ಬಳಸಿ ಲಂಡನ್^ನ್ನು ವಿನಾಶ ಮಾಡುವ ಉದ್ದೇಶ ಹೊಂದಿರುವ ಬಗ್ಗೆ ಅರಿಯುತ್ತಾನೆ. ಟ್ರಿವೆಲ್ಯಾನ್ ಮಾತುಗಳಲ್ಲೇ ಹೇಳುವುದಾದಲ್ಲಿ, "ಯುನೈಟೆಡ್ ಕಿಂಗ್^ಡಂ ಮತ್ತೆ ಶಿಲಾಯುಗಕ್ಕೆ ಮರಳುತ್ತದೆ" ಮತ್ತು " ವಂಚನೆಯ ಬೆಲೆಯನ್ನು ಅರಿಯುತ್ತದೆ-ಹಣದುಬ್ಬರವನ್ನು ೧೯೪೫ಕ್ಕೆ ಸರಿಹೊಂದಿಸಲಾಗುತ್ತದೆ." ನಟಾಲಿಯಳನ್ನು ಬಂಧಿಸಿದ್ದರೂ ಕೂಡ ಆಕೆ ಉಪಗ್ರಹವನ್ನು ಅತಿಕ್ರಮಿಸಿ,ಅದು ತನ್ನನ್ನು ತಾನೇ ನಾಶ ಮಾಡಿಕೊಳ್ಳುವಂತೆ ಅದನ್ನು ಪುನರ್ ಸಂಯೋಜಿಸುತ್ತಾಳೆ. ಬೊರಿಸ್ ಅವಳು ಮಾಡಿದ ಪುನರ್ ಸಂಯೋಜನೆಯನ್ನು ಬದಲಿಸಲೆತ್ನಿಸಿ ವಿಫಲನಾದಾಗ ತಾಳ್ಮೆ ಕಳೆದುಕೊಳ್ಳುತ್ತಾನೆ. ಆಗ ಬಾಂಡ್ ಈ ಕ್ಷಣದ ಲಾಭ ಪಡೆದು, ಕ್ಯೂ ತನಗಿತ್ತಿದ್ದ, ಗ್ರೆನೆಡ್ ಅಡಗಿಸಿದ ಪೆನ್ ಒಂದರಿಂದ ಗ್ರೆನೆಡ್ ಸಿಡಿಸಿ, ನಟಾಲಿಯಾಳೊಂದಿಗೆ ಪರಾರಿಯಾಗುತ್ತಾನೆ.

ಬೋರಿಸ್ ಉಪಗ್ರಹದ ನಿಯಂತ್ರಣವನ್ನು ಮರಳಿ ಪಡೆಯುವುದನ್ನು ತಡೆಯಲು, ಬಾಂಡ್ ಡಿಷ್ ಆಂಟೆನಾದ ಗೇರುಗಳನ್ನು ಜ್ಯಾಮ್ ಮಾಡುವ ಮೂಲಕ ಅದನ್ನು ಹಾಳುಮಾಡಲು ಮುಂದಾಗುತ್ತಾನೆ. ಟ್ರೆವೆಲ್ಯಾನ್ ಅವನನ್ನು ತಡೆಯಲು ಪ್ರಯತ್ನಿಸುತ್ತಾನೆ, ಮತ್ತು ಇಬ್ಬರ ನಡುವಿನ ಹೊಡೆದಾಟದಲ್ಲಿ ಟ್ರೆವೆಲ್ಯಾನ್ ನೆಲಕ್ಕೆ ಉರುಳುತ್ತಾನೆ ಮತ್ತು ತೀವ್ರವಾಗಿ ಗಾಯಗೊಳ್ಳುತ್ತಾನೆ. ನಟಾಲಿಯಾ ತಕ್ಷಣವೇ ಆಂಟೆನಾ ಕಾರ್ಯ ಸ್ಥಗಿತಗೊಂಡು ಸ್ಫೋಟಗೊಳ್ಳುವ ಮುನ್ನಬಾಂಡ್^ನನ್ನು ಕಮಾಂಡರ್ ಹೆಲಿಕಾಪ್ಟರ್‌ನಲ್ಲಿ ರಕ್ಷಿಸುತ್ತಾಳೆ. ಟ್ರೆವೆಲ್ಯಾನ್ ಬೀಳುತ್ತಿರುವ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿ ಸಾಯುತ್ತಾನೆ. ಮತ್ತು ಬೋರಿಸ್ ಛಿದ್ರವಾದ ದ್ರವರೂಪದ ಸಾರಜನಕ ಡಬ್ಬಗಳಿಂದ ಕೊಲ್ಲಲ್ಪಡುತ್ತಾನೆ. ಯಾವುದೋ ಒಂದು ಸುರಕ್ಷಿತವಾದ ಜಾಗದಲ್ಲಿ ಇಳಿದ ನಂತರ, ಈ ಜೋಡಿಯು ಒಂದಿಷ್ಟು ಏಕಾಂತವನ್ನು ಆನಂದಿಸಲು ಸಿದ್ಧರಾಗುತ್ತಾರೆ, ಆದರೆ ವೇಡ್ ಮತ್ತು ಯುಎಸ್ ಮೆರೈನ್‌ಗಳ ತಂಡದ ಆಗಮನವು ಅದಕ್ಕೆ ಅಡ್ಡಿಪಡಿಸುತ್ತದೆ. ಅವರಿಬ್ಬರನ್ನೂ ಗ್ವಾಂಟನಾಮೊ ಕೊಲ್ಲಿ ನೌಕಾ ನೆಲೆಗೆ ಕರೆದೊಯ್ಯಲಾಗುತ್ತದೆ.

ಪಾತ್ರವರ್ಗ

  • ಪಿಯರ್ಸ್ ಬ್ರಾಸ್ನನ್ ಜೇಮ್ಸ್ ಬಾಂಡ್ ಪಾತ್ರದಲ್ಲಿ (007), MI6 ಅಧಿಕಾರಿ. ಜಾನುಸ್ ಕ್ರೈಮ್ ಸಿಂಡಿಕೇಟ್ "ಗೋಲ್ಡನ್ ಐ" ಅನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ಬಾಂಡ್^ನನ್ನು ನಿಯೋಜಿಸಲಾಗಿರುತ್ತದೆ. 'ಗೋಲ್ಡನ್ ಐ' ಎಂಬುದು ಶೀತಲ ಸಮರದ ಸಮಯದಲ್ಲಿ ಸೋವಿಯತ್ ವಿನ್ಯಾಸಗೊಳಿಸಿದ ಮತ್ತು ಉಡಾಯಿಸಿದ ರಹಸ್ಯ ಉಪಗ್ರಹ ಅಸ್ತ್ರವಾಗಿರುತ್ತದೆ.
  • ಸೀನ್ ಬೀನ್ ಅಲೆಕ್ ಟ್ರೆವೆಲ್ಯಾನ್ ಪಾತ್ರದಲ್ಲಿ (006), ಮೂಲದಲ್ಲಿ ಇವನು 00 ಅಧಿಕಾರಿ ಮತ್ತು ಬಾಂಡ್‌ನ ಸ್ನೇಹಿತ. ಅವನು ಅರ್ಖಾಂಗೆಲ್ಸ್ಕ್‌ನಲ್ಲಿ ತನ್ನ ಸಾವು ಕುರಿತಂತೆ ವದಂತಿ ಹಬ್ಬಿಸಿ, ನಂತರ ಮುಂದಿನ ಒಂಬತ್ತು ವರ್ಷಗಳಲ್ಲಿ ಜಾನುಸ್ ಅಪರಾಧ ಸಿಂಡಿಕೇಟ್ ಅನ್ನು ಸ್ಥಾಪಿಸುತ್ತಾನೆ.
  • ಇಜಾಬೆಲ್ಲಾ ಸ್ಕೋರುಪ್ಕೋ, ನಟಾಲಿಯಾ ಸಿಮೋನೊವಾ ಪಾತ್ರದಲ್ಲಿ, ಸೆವರ್ನಾಯಾ ಲ್ಯಾಬ್‌ನಲ್ಲಿ ಪ್ರೋಗ್ರಾಮರ್ ಆಗಿ. ಅವಳು ತನ್ನದೇ ನಿಯಂತ್ರಣ ಕೇಂದ್ರದ ಮೇಲೆ ಗೋಲ್ಡನ್ ಐ ದಾಳಿಯಿಂದ ಬದುಕುಳಿಯುತ್ತಾಳೆ.
  • ಫಾಮ್ಕೆ ಜಾನ್ಸೆನ್, ಕ್ಸೆನಿಯಾ ಒನಾಟೊಪ್ ಪಾತ್ರದಲ್ಲಿ, ಜಾರ್ಜಿಯನ್ ಫೈಟರ್ ಪೈಲಟ್ ಮತ್ತು ಟ್ರೆವೆಲ್ಯಾನ್ ಅವರ ಆಪ್ತ ಮಹಿಳೆ. ಹಿಂಸಾವಿನೋದಿ ಕೊಲೆಗಡುಕಿ. ಆಕೆ ತನ್ನ ಶತ್ರುಗಳನ್ನು ತನ್ನ ತೊಡೆಯ ನಡುವೆ ಉಸಿರುಕಟ್ಟಿಸುವ ಮೂಲಕ ಹಿಂಸಿಸುವುದನ್ನು ಆನಂದಿಸುತ್ತಾಳೆ.
  • ಜೋ ಡಾನ್ ಬೇಕರ್ ಜ್ಯಾಕ್ ವೇಡ್ ಪಾತ್ರದಲ್ಲಿ, ಹಿರಿಯ ಸಿಐಎ ಅಧಿಕಾರಿ ಬಾಂಡ್‌ನ ಜೊತೆಯ ಕಾರ್ಯಾಚರಣೆಯಲ್ಲಿ.
  • ರಾಬಿ ಕೋಲ್ಟ್ರೇನ್ ವ್ಯಾಲೆಂಟಿನ್ ಜುಕೊವ್ಸ್ಕಿಪಾತ್ರದಲ್ಲಿ, ರಷ್ಯಾದ ಸುಲಿಗೆಕೋರ ಮತ್ತು ಮಾಜಿ ಕೆಜಿಬಿ ಅಧಿಕಾರಿಯಾಗಿದ್ದು, ಇವನ ಮೂಲಕ ವೇ ಬಾಂಡ್ ಜಾನುಸ್ ಜೊತೆ ಸಭೆಯನ್ನು ಏರ್ಪಡಿಸುತ್ತಾನೆ.
  • ಚ್ಚಕಿ ಕರ್ಯೋ, ಡಿಮಿಟ್ರಿ ಮಿಶ್ಕಿನ್, ರಷ್ಯಾದ ರಕ್ಷಣಾ ಮಂತ್ರಿಯ ಪಾತ್ರದಲ್ಲಿ,
  • ಗಾಟ್ಫ್ರೈಡ್ ಜಾನ್ ಕರ್ನಲ್ ಅರ್ಕಾಡಿ ಗ್ರಿಗೊರೊವಿಚ್ ಔರುಮೋವ್ ಪಾತ್ರದಲ್ಲಿ. ಸೋವಿಯತ್ ಒಕ್ಕೂಟದ ಹೀರೋ, ರಷ್ಯಾದ ಬಾಹ್ಯಾಕಾಶ ವಿಭಾಗದ ಕಮಾಂಡರ್ . ಅವನು ರಹಸ್ಯವಾಗಿ ಗೋಲ್ಡನ್ ಐ ಮೇಲೆ ನಿಯಂತ್ರಣ ಪಡೆಯಲು ತನ್ನ ಅಧಿಕಾರ ಮತ್ತು ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಜಾನುಸ್ ಏಜೆಂಟ್ಆಗಿರುತ್ತಾನೆ.
  • ಸೆವೆರ್ನಾಯಾದ ಗೀಕಿ ಕಂಪ್ಯೂಟರ್ ಪ್ರೋಗ್ರಾಮರ್ ಬೋರಿಸ್ ಗ್ರಿಶೆಂಕೊ ಪಾತ್ರಧಾರಿಯಾಗಿ ಅಲನ್ ಕಮ್ಮಿಂಗ್ ಜಾನುಸ್‌ನ ಅಂಗವೆಂಬುದು ನಂತರ ಬಹಿರಂಗವಾಗುತ್ತದೆ.
  • ಮೈಕೆಲ್ ಕಿಚನ್ ಬಿಲ್ ಟ್ಯಾನರ್ ಪಾತ್ರಧಾರಿ. ಎಂ ನ ಮುಖ್ಯಸ್ಥ.
  • ಸೆರೆನಾ ಗಾರ್ಡನ್ ಕೆರೊಲಿನ್ ಪಾತ್ರಧಾರಿ., MI6 ಮಾನಸಿಕ ಮತ್ತು ಮನೋವೈದ್ಯಕೀಯ ಮೌಲ್ಯಮಾಪಕಿ. ಚಿತ್ರದ ಆರಂಭದಲ್ಲಿ ಬಾಂಡ್ ಈಕೆಯನ್ನು ಮೋಹಿಸುತ್ತಾನೆ
  • ಡೆಸ್ಮಂಡ್ ಲೆವೆಲಿನ್ ಕ್ಯೂ ಪಾತ್ರಧಾರಿ. ಕ್ಯೂ ಶಾಖೆಯ ಮುಖ್ಯಸ್ಥ ( ಬ್ರಿಟಿಷ್ ರಹಸ್ಯ ಸೇವೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ).
  • ಸಮಂತಾ ಬಾಂಡ್ ಮಿಸ್ ಮನಿಪೆನ್ನಿ, ಎಂ ನ ಕಾರ್ಯದರ್ಶಿ.
  • ಜೂಡಿ ಡೆಂಚ್ ಎಮ್ ಪಾತ್ರಧಾರಿ. ಎಂಐ 6 ಮುಖ್ಯಸ್ಥೆ ಮತ್ತು ಬಾಂಡ್ ನ ಮೇಲಾಧಿಕಾರಿ.

ನಿರ್ಮಾಣ

ಮುನ್ನುಡಿ

ಜುಲೈ ೧೯೮೯ ರಲ್ಲಿ ಲೈಸೆನ್ಸ್ ಟು ಕಿಲ್ ಬಿಡುಗಡೆಯಾದ ನಂತರ, ಜೇಮ್ಸ್ ಬಾಂಡ್ ಸರಣಿಯ ಹದಿನೇಳನೆಯ ಚಿತ್ರ, ಮತ್ತು ತಿಮೋತಿ ಡಾಲ್ಟನ್ ಅಭಿನಯದ ಮೂರನೆಯ ಚಲನಚಿತ್ರದ (ಅವರ ಮೂರು-ಚಲನಚಿತ್ರ ಒಪ್ಪಂದದ ಭಾಗ)ಪೂರ್ವ-ನಿರ್ಮಾಣ ಕೆಲಸವು ಮೇ 1990 ರಲ್ಲಿ ಆರಂಭವಾಯಿತು. 1990 ರ ಕಾನ್ಸ್ ಚಲನಚಿತ್ರೋತ್ಸವದ ಸಮಯದಲ್ಲಿ ಕಾರ್ಲ್ಟನ್ ಹೋಟೆಲ್‌ನಲ್ಲಿ ಮುಂಬರುವ ಚಲನಚಿತ್ರದ ಭಿತ್ತಿಪತ್ರವನ್ನು ಕೂಡ ಪ್ರದರ್ಶಿಸಲಾಯಿತು. ಸಂಡೇ ಟೈಮ್ಸ್ ಆಗಸ್ಟ್ ತಿಂಗಳಿನಲ್ಲಿ ವರದಿ ಮಾಡಿದಂತೆ ನಿರ್ಮಾಪಕ ಆಲ್ಬರ್ಟ್ ಆರ್. ಬ್ರೊಕೊಲಿಯವರು ಮೂರು ಬಾಂಡ್ ಚಲನಚಿತ್ರಗಳ ಹೊರತಾಗಿ ಇತರ ಎಲ್ಲ ಬಾಂಡ್ ಚಲನಚಿತ್ರಗಳ ಬರಹಗಾರ ರಿಚರ್ಡ್ ಮೈಬಾಮ್ ,ಮತ್ತು ಈ ಸರಣಿಯ ಹಿಂದಿನ ಐದು ಕಂತುಗಳ ಜವಾಬ್ದಾರಿ ಹೊತ್ತಿದ್ದ ನಿರ್ದೇಶಕ ಜಾನ್ ಗ್ಲೆನ್ .ಇವರಿಬ್ಬರ ಸಖ್ಯವನ್ನು ತೊರೆದಿದ್ದರು.ಬ್ರೊಕೊಲಿಯವರು ಜಾನ್ ಲ್ಯಾಂಡಿಸ್, ಟೆಡ್ ಕೋಟ್ಚೆಫ್, ರೋಜರ್ ಸ್ಪಾಟಿಸ್ ವುಡ್ ಮತ್ತು ಜಾನ್ ಬೈರಮ್ ಅವರನ್ನು ಸಂಭಾವ್ಯ ನಿರ್ದೇಶಕರೆಂದು ಪಟ್ಟಿ ಮಾಡಿದ್ದರು. ಬ್ರೊಕೋಲಿಯ ಮಲಮಗ ಮೈಕೆಲ್ ಜಿ. ವಿಲ್ಸನ್ ಸ್ಕ್ರಿಪ್ಟ್ ಅನ್ನು ಕೊಡುಗೆಯಾಗಿ ನೀಡಿದರು, ಮತ್ತು ವೈಸ್‌ಗೈ ಚಲನಚಿತ್ರದ ಸಹ-ನಿರ್ಮಾಪಕ ಅಲ್ಫೋನ್ಸ್ ರಗ್ಗಿರೋ ಜೂನಿಯರ್ ಅವರನ್ನು ತಿದ್ದಿ ಬರೆಯಲು ನೇಮಿಸಲಾಯಿತು. ಚಿತ್ರನಿರ್ಮಾಣವನ್ನು 1990 ರಲ್ಲಿ ಹಾಂಕಾಂಗ್‌ನಲ್ಲಿ ಆರಂಭಿಸಲು ನಿರ್ಧರಿಸಲಾಯಿತು, 1991 ರ ಕೊನೆಯಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿತ್ತು. ಇದು ಸ್ಕಾಟ್ಲೆಂಡ್‌ನ ಬ್ರಿಟಿಷ್ ಪರಮಾಣು ಘಟಕದ ಮೇಲೆ ಭಯೋತ್ಪಾದಕ ದಾಳಿಯನ್ನು ಮಾಡಿ ಅದು ಮೂರನೇ ಮಹಾಯುದ್ಧಕ್ಕೆ ಕಾರಣವಾಗುವಂತೆ ಮಾಡುವ ಕಥಾ ತಿರುಳನ್ನು ಹೊಂದಿತ್ತು. ಭ್ರಷ್ಟ ಉದ್ಯಮಿ ಸರ್ ಹೆನ್ರಿ ಲೀ ಚಿಂಗ್ ಮತ್ತು ಆಭರಣಗಳ ಕಳ್ಳ ಕಾನಿ ವೆಬ್ ಬಗ್ಗೆ ತನಿಖೆ ಮಾಡಲು ಪೂರ್ವ ಏಷ್ಯಾಕ್ಕೆ ಪಯಣಿಸುವ ಬಾಂಡ್ ತನ್ನ ಹಿಂದಿನ ಮಾರ್ಗದರ್ಶಕ ಡೆನ್ಹೋಮ್ ಕ್ರಿಸ್ಪ್ ವಿರುದ್ಧ ಹೋರಾಡುತ್ತಾನೆ.. ಇದು ಚೀನಾದ ರಾಜ್ಯ ಭದ್ರತಾ ಸಚಿವಾಲಯವನ್ನು ಚಿತ್ರಿಸುವಂತಿತ್ತು. ಸ್ಕ್ರಿಪ್ಟ್ ಅನ್ನು ವಿಲಿಯಂ ಓಸ್ಬೋರ್ನ್ ಮತ್ತು ವಿಲಿಯಂ ಡೇವಿಸ್ ಮತ್ತೊಮ್ಮೆ ಬರೆದಿದ್ದಾರೆ . ಗಲ್ಫ್ ಯುದ್ಧದ ನಂತರ, ಅವರು ಸ್ಕಾಟ್ಲೆಂಡ್‌ನ ಸೈಬರ್ ದಾಳಿಯ ಆರಂಭಿಕ ದೃಶ್ಯದ ಬದಲಾಗಿ ಲಿಬಿಯಾದಲ್ಲಿ ಬಾಂಡ್‌ ತನ್ನ ಗುರಿ ಸಾಧಿಸುವಲ್ಲಿ ವಿಫಲನಾಗುವಂತೆ ಬದಲಾಯಿಸಿದರು. ಮೊದಲು ಚಲನಚಿತ್ರವು ಒಂದು ಉನ್ನತ ತಂತ್ರಜ್ಙಾನವುಳ್ಳ ಗುಪ್ತವಾಗಿ ಹೋರಾಟ ಮಾಡಬಲ್ಲ ಯುದ್ಧವಿಮಾನವನ್ನು ಚೈನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮುಖ್ಯಸ್ಥ, ಬ್ರಿಟಿಷ್ ಕೈಗಾರಿಕೋದ್ಯಮಿ ಮತ್ತು ಅಮೆರಿಕನ್ ದೊಂಬಿಕೋರರು ಕದ್ದು, ಪರಮಾಣು ದಾಳಿ ಮಾಡಿ,ಮೇನ್^ಲ್ಯಾಂಡ್ ಚೀನಾ ವಿರುದ್ಧ ಕ್ಷಿಪ್ರಕ್ರಾಂತಿ ಮಾಡಿ, ಹಾಂಗ್ ಕಾಂಗ್ ನಿಯಂತ್ರಣವನ್ನು ಕೈಗಾರಿಕೋದ್ಯಮಿಗೆ ಒಪ್ಪಿಸುವ ಕಥೆಯನ್ನು ಕೇಂದ್ರವಾಗಿ ಹೊಂದಿತ್ತು.

2010 ರ ಸಂದರ್ಶನವೊಂದರಲ್ಲಿ ಡಾಲ್ಟನ್ ಸ್ಕ್ರಿಪ್ಟ್ ಸಿದ್ಧವಾಗಿದೆ ಮತ್ತು "ನಾವು ನಿರ್ದೇಶಕರ ಬಗ್ಗೆ ಚರ್ಚಿಸುತ್ತಿದ್ದೇವೆ" ಎಂದು ಘೋಷಿಸಿದರು, ಈ ಯೋಜನೆಯು ಸರಣಿಯ ವಿತರಕರಾದ ಯುನೈಟೆಡ್ ಆರ್ಟಿಸ್ಟ್ಸ್ ಅವರ ಮಾತೃ ಸಂಸ್ಥೆಯಾದ ಮೆಟ್ರೋ-ಗೋಲ್ಡ್ವಿನ್-ಮೇಯರ್, ಮತ್ತು ಬಾಂಡ್ ಚಲನಚಿತ್ರಗಳ ಹಕ್ಕುಗಳ ಮಾಲಿಕತ್ವ ಹೊಂದಿದ್ದ ಬ್ರೊಕೊಲಿಯ ಡಾಂಜಾಕ್, ಅವರೊಂದಿಗಿನ ಕಾನೂನು ಸಮಸ್ಯೆಗಳಿಂದಾಗಿ ತೀವ್ರ ತೊಂದರೆಗೀಡಾಯಿತು.ಬಾಂಡ್ ಚಿತ್ರದ ಹಕ್ಕುಗಳನ್ನು 1990 ರಲ್ಲಿ, MGM/UA ಅನ್ನು $ 1.5 ಬಿಲಿಯನ್ ದರಕ್ಕೆ ಕ್ವಿಂಟೆಕ್ಸ್ ಎಂಬ ಆಸ್ಟ್ರೇಲಿಯನ್-ಅಮೇರಿಕನ್ ಆರ್ಥಿಕ ಸೇವಾ ಕಂಪನಿಗೆ ಮಾರಾಟ ಮಾಡಬೇಕಿತ್ತು. ಈ ಸಂಸ್ಥೆಯು ದೂರದರ್ಶನ ಪ್ರಸರಣ ಮತ್ತು ಮನರಂಜನಾ ಉದ್ಯಮಗಳನ್ನು ಖರೀದಿಸಲಾರಂಭಿಸಿತ್ತು. ಕ್ವಿಂಟೆಕ್ಸ್ ಕಂಪನಿಗೆ ಐವತ್ತು ಮಿಲಿಯನ್ ಡಾಲರುಗಳ ಸಾಲಪತ್ರ ಕೊಡಲು ಸಾಧ್ಯವಾಗದಾಗ ಒಪ್ಪಂದವು ಮುರಿದು ಬಿತ್ತು. ಪಾಥೆ ಎಂಟರ್ಟೇನ್ಮೆಂಟ್ ಎಂಬ ಫ್ರೆಂಚ್ ಕಂಪನಿಯು ೧.೨ ಬಿಲಿಯನ್ ಮೊತ್ತಕ್ಕೆ ಎಂಜಿಎಂ/ಯುಎ ಕಂಪನಿಯನ್ನು ಖರೀದಿಸಲು ತಕ್ಷಣವೇ ಮುಂದೆ ಬಂದಿತಲ್ಲದೇ ಎರಡೂ ಕಂಪನಿಗಳನ್ನು ವಿಲೀನಗೊಳಿಸಿ ಎಂಜಿಎಂ-ಪಾಥೆ ಕಮ್ಯುನಿಕೇಷನ್ಸ್ ಎಂಬ ಕಂಪನಿಯನ್ನು ರಚಿಸಿತು.. ಪಾಥೆಯ ಸಿಇಒ ಜಿಯಾನ್ಕಾರ್ಲೊ ಪ್ಯಾರೆಟ್ಟಿ ಸ್ಟುಡಿಯೊದ ಕ್ಯಾಟಲಾಗ್‌ನ ವಿತರಣಾ ಹಕ್ಕುಗಳನ್ನು ಮಾರಾಟ ಮಾಡಿ ತಾವು ಮಾಡಿದ್ದ ಖರೀದಿಗೆ ಹಣಕಾಸು ಒದಗಿಸಲು ಮುಂಗಡ ಪಾವತಿಗಳನ್ನು ಸಂಗ್ರಹಿಸುವ ಉದ್ದೇಶ ಹೊಂದಿದ್ದರು. ಇದು ಇಳಿಸಿದ ದರಗಳಲ್ಲಿ 007 ಗ್ರಂಥಾಲಯಕ್ಕೆ ಅಂತಾರಾಷ್ಟ್ರೀಯ ಪ್ರಸಾರ ಹಕ್ಕುಗಳನ್ನು ನೀಡುವುದನ್ನು ಒಳಗೊಂಡಿತ್ತು, ಈ ಪರವಾನಗಿಯು ೧೯೬೨ರಲ್ಲಿ ಯುನೈಟೆಡ್ /ಅರ್ಟಿಸ್ಟ್ಸ್ ಅವರೊಂದಿಗೆ ಕಂಪನಿಯು ಮಾಡಿಕೊಂಡಿದ್ದ ಬಾಂಡ್ ವಿತರಣಾ ಒಪ್ಪಂದವನ್ನು ಉಲ್ಲಂಘಿಸಿದೆ ಹಾಗೂ ಡಾಂಜಾಕ್ ಕಂಪನಿಗೆ ಬರಬೇಕಾದ ಲಾಭಾಂಶವನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿ ಡಾಂಜಾಕ್ ಮೊಕದ್ದಮೆ ಹೂಡಿತು. ಇದಕ್ಕೆ ಪ್ರತಿಮೊಕದ್ದಮೆಯನ್ನು ಹೂಡಲಾಯಿತು. ಮೊಕದ್ದಮೆಗಳಿಗೆ ಪರಿಹಾರ ದೊರೆತ ನಂತರ ಏನು ಮಾಡುತ್ತೀರಿ ಎಂದು ಡಾಲ್ಟನ್ ಅವರನ್ನು ಕೇಳಿದಾಗ ನಾನು ನನ್ನ ಈ ಹಿಂದಿನ ಪಾತ್ರದಲ್ಲಿ ಮುಂದುವರಿಯುವ ಸಾಧ್ಯತೆಗಳಿಲ್ಲ ಎಂದು ಉತ್ತರಿಸಿದರು.



ಪಾರೆಟ್ಟಿಯ ನಡವಳಿಕೆಯು ಎಂಜಿಎಂ-ಪಾಥೆಯ ದಿವಾಳಿತನಕ್ಕೆ ಕಾರಣವಾಯಿತು ಮತ್ತು ಹೆಚ್ಚುವರಿ ಮೊಕದ್ದಮೆಗಳು ಅಂತಿಮವಾಗಿ ಹಣಕಾಸಿನ ಬೆಂಬಲ ನೀಡಿದ್ದಕ್ರೆಡಿಟ್ ಲಿಯೊನೈಸ್‌ ೧೯೯೨ರಲ್ಲಿ ಅವಧಿಪೂರ್ವದಲ್ಲೇ ಹಿಂದೆಗೆಯುವಂತಾಯಿತು. ಬಾಂಡ್ ಹಕ್ಕುಗಳ ಮೊಕದ್ದಮೆಗಳು ಡಿಸೆಂಬರ್ ೧೯೯೨ ರಲ್ಲಿ ಇತ್ಯರ್ಥಗೊಂಡವು, ಮತ್ತು ಕ್ರೆಡಿಟ್ ಲಿಯೊನೈಸ್ ಅಂಗಸಂಸ್ಥೆಯಿಂದ ನಡೆಸಲ್ಪಡುತ್ತಿರುವ ಮರುನಾಮಕರಣ ಪಡೆದ ಮೆಟ್ರೋ-ಗೋಲ್ಡ್ವಿನ್-ಮೇಯರ್, 1993 ರಲ್ಲಿ ಡಾಂಜಾಕ್‌ ಸಹಯೋಗದೊಂದಿಗೆ ಬಾಂಡ್ 17 ರ ಇನ್ನಷ್ಟು ಅಭಿವೃದ್ಧಿಯ ಸಾಧ್ಯತೆಯ ಹುಡುಕಾಟವನ್ನು ಆರಂಭಿಸಿದರು. ಬಾಂಡ್ ಪಾತ್ರಕ್ಕೆ ಡಾಲ್ಟನ್ ಇನ್ನೂ ಬ್ರೊಕೊಲಿಯ ಆಯ್ಕೆಯಾಗಿದ್ದರು, ಆದರೆ ಡಾಂಜಾಕ್ ಜೊತೆಗಿನ ಈ ತಾರಾನಟನ ಏಳು ವರ್ಷಗಳ ಮೂಲ ಒಪ್ಪಂದವು 1993 ರಲ್ಲಿ ಮುಕ್ತಾಯವಾಯಿತು. ತನ್ನ ಮೂರನೇ ಚಿತ್ರದ ವಿಳಂಬದಿಂದಾಗಿ 1990 ರಲ್ಲಿಯೇ ಒಪ್ಪಂದವು ಕೊನೆಗೊಂಡಿತು ಎಂದು ಡಾಲ್ಟನ್ ಹೇಳಿದ್ದಾರೆ.

ಪೂರ್ವ ನಿರ್ಮಾಣ ಮತ್ತು ಬರವಣಿಗೆ

ಮೇ 1993 ರಲ್ಲಿ, ಮೈಕೆಲ್ ಫ್ರಾನ್ಸ್[೧೯] ಅವರ ಚಿತ್ರಕಥೆಯನ್ನಾಧರಿಸಿದ ಹದಿನೇಳನೆಯ ಜೇಮ್ಸ್ ಬಾಂಡ್ ಚಲನಚಿತ್ರವನ್ನು ಘೋಷಿಸಿತು. ಮಾಜಿ ಕೆಜಿಬಿ ಏಜೆಂಟರನ್ನು ಸಂದರ್ಶಿಸಿ, ಫ್ರಾನ್ಸ್ ತಮ್ಮ ಚಿತ್ರಕಥೆಗೆ ತಕ್ಕ ಪೂರ್ವಭಾವಿ ಅಧ್ಯಯನ ಮಾಡಿದ್ದಾರೆ. [೮]. ಬ್ರೊಕೋಲಿಯ ಆರೋಗ್ಯ ಹದಗೆಟ್ಟಾಗ (ಗೋಲ್ಡನ್ ಐ ಬಿಡುಗಡೆಯಾದ ಏಳು ತಿಂಗಳ ನಂತರ ಅವರು ನಿಧನರಾದರು), ಅವರ ಮಗಳು ಬಾರ್ಬರಾ ಬ್ರೊಕೋಲಿ ಚಲನಚಿತ್ರ ನಿರ್ಮಾಣದಲ್ಲಿ ಬ್ರೊಕೊಲಿಯವರು "ಸ್ವಲ್ಪ ಹಿಂದಿನ ಸ್ಥಾನಕ್ಕೆ ಸರಿದರು" ಎಂದು ಬಣ್ಣಿಸಿದರು.[೨೦] ಬಾರ್ಬರಾ ಮತ್ತು ಮೈಕೆಲ್ ಜಿ. ವಿಲ್ಸನ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದರು ಆದರೆ ಆಲ್ಬರ್ಟ್ ಬ್ರೊಕೋಲಿ ಗೋಲ್ಡನ್ ಐ ಚಲನಚಿತ್ರದ ಸಹಾಯಕ ನಿರ್ಮಾಪಕರಾಗಿ ನಿರ್ಮಾಣವನ್ನು ನೋಡಿಕೊಂಡರು. ಅವರನ್ನು " ಪ್ರಸ್ತುತಿಕಾರ" ಎನ್ನಲಾಯಿತು. ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣದ ಬಗ್ಗೆ ಕಾಳಜಿ ಇದ್ದಾಗ, ಶೀತಲ ಸಮರದ ನಂತರದ ಯುಗದಲ್ಲಿ ಮತ್ತು ಸೋವಿಯತ್ ಒಕ್ಕೂಟದ ಪತನದ ನಂತರದ ಚೌಕಟ್ಟಿನಲ್ಲಿ ವಿಲ್ಸನ್ ಚಲನಚಿತ್ರವನ್ನು ರೂಪಿಸಲು ಬಯಸಿದರು. ಬ್ರೊಕೋಲಿ ಅವರು ಮರಳಿ ಬರುತ್ತಾರೆಯೇ ಎಂದು ಮತ್ತೊಮ್ಮೆ ಕೇಳಲು ಡಾಲ್ಟನನ್ನು ಸಂಪರ್ಕಿಸಿದರು ಮತ್ತು ಈಗ ಅವರು ಆಲೋಚನೆಗೆ ಮುಕ್ತರಾಗಿರುವುದನ್ನು ಕಂಡುಕೊಂಡರು.

ಆಗಸ್ಟ್ 1993 ರಲ್ಲಿ, ಫ್ರಾನ್ಸ್ ತನ್ನ ಮೊದಲ ಕರಡನ್ನು ತಯಾರಿಸಿದರು ಮತ್ತು ಚಿತ್ರಕಥೆಯನ್ನು ಬರೆಯುವುದನ್ನು ಮುಂದುವರೆಸಿದರು.  ಬ್ರೊಕೊಲಿಯೊಂದಿಗಿನ ಮುಂದುವರೆದ ಚರ್ಚೆಯಲ್ಲಿ, ಡಾಲ್ಟನ್ ತನ್ನ ಹಿಂದಿನ ಎರಡು ಚಲನಚಿತ್ರಗಳ ಅತ್ಯುತ್ತಮ ಅಂಶಗಳನ್ನು ತೆಗೆದುಕೊಂಡು ಅವುಗಳನ್ನು ಒಂದು ಅಂತಿಮ ಚಿತ್ರಕ್ಕೆ ಆಧಾರವಾಗಿ ಸಂಯೋಜಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಬ್ರೋಕೋಲಿಯವರು ಚಲನಚಿತ್ರವಿಲ್ಲದೆ ದೀರ್ಘ ಅಂತರದ ನಂತರ, ಡಾಲ್ಟನ್ ಮರಳಿ ಬರಲು ಸಾಧ್ಯವಿಲ್ಲ ಮತ್ತು ಹಾಗೆ ಬಂದು ಕೇವಲ ಒಂದು ಚಲನಚಿತ್ರವನ್ನು ಮಾಡಲು ಸಾಧ್ಯವಿಲ್ಲ ಬಹಳಷ್ಟು ಚಿತ್ರಗಳನ್ನು ಮಾಡಬೇಕಾಗುತ್ತದೆ ಎಂದು ಒತ್ತಿ ಹೇಳಿದರು. ಜನವರಿ ವೇಳೆಗೆ ಫ್ರಾನ್ಸ್‌ನ ಚಿತ್ರಕಥೆಯನ್ನು ಪೂರ್ಣಗೊಳಿಸಿದರೂ, ಯಾವುದೇ ಕ್ರಿಯಾತ್ಮಕ ಆರಂಭವಿಲ್ಲದೆ ಚಿತ್ರ ನಿರ್ಮಾಣವನ್ನು ಹಿಂದಕ್ಕೆ ತಳ್ಳಲಾಯಿತು. ಏಪ್ರಿಲ್ 1994 ರಲ್ಲಿ, ಡಾಲ್ಟನ್ ಅಧಿಕೃತವಾಗಿ ಪಾತ್ರಕ್ಕೆ ರಾಜೀನಾಮೆ ನೀಡಿದರು. 2014 ರ ಸಂದರ್ಶನವೊಂದರಲ್ಲಿ, ತಾನು ಬ್ರೊಕೊಲಿಯ ನಿರೀಕ್ಷೆಯನ್ನು ಒಪ್ಪಿಕೊಂಡೆ ಆದರೆ ಇನ್ನೂ ನಾಲ್ಕು ಅಥವಾ ಐದು ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ಬದ್ಧನಾಗಿರಲಿಲ್ಲ ಎಂದು ಡಾಲ್ಟನ್ ಬಹಿರಂಗಪಡಿಸಿದರು.

ಗೋಲ್ಡನ್ ಐ 
ಗೋಲ್ಡನ್ ಐ ಪಿಯರ್ಸ್ ಬ್ರಾಸ್ನನ್ ಅವರ ಮೊದಲ ಬಾಂಡ್ ಪಾತ್ರವಾಗಿತ್ತು

1994 ರ ಉದ್ದಕ್ಕೂ ಚಿತ್ರಕಥೆ ಕುರಿತಂತೆ ಮತ್ತಷ್ಟು ಕೆಲಸ ಮಾಡಲಾಯಿತು. ಫ್ರಾನ್ಸ್‌ನ ಚಿತ್ರಕಥೆಯು "ಆಗಸ್ಟಸ್ ಟ್ರೆವೆಲ್ಯಾನ್" ಮತ್ತು ಗೋಲ್ಡನ್ ಐ ಇಎಂಪಿ ಉಪಗ್ರಹದ ಪಾತ್ರವನ್ನು ಪರಿಚಯಿಸಿತು ಮತ್ತು ಹೈ-ಸ್ಪೀಡ್ ರೈಲಿನಲ್ಲಿ ಆಸ್ಟನ್ ಮಾರ್ಟಿನ್ ಕಾರನ್ನು ಬೆನ್ನಟ್ಟುವಿಕೆಯ ಅನಾಕರ್ಷಕ ಪ್ರಾರಂಭವನ್ನು ಒಳಗೊಂಡಿತ್ತು. ಆದರೆ ಬಾರ್ಬರಾ ಬ್ರೊಕೊಲಿ ಫ್ರಾನ್ಸ್‌ನ ಚಿತ್ರಕಥೆಯು ಸೂಕ್ತ ರಚನೆಯನ್ನು ಹೊಂದಿಲ್ಲ ಎಂದು ಅಭಿಪ್ರಾಯಪಟ್ಟು ಮತ್ತು ಅದನ್ನು ಮತ್ತೊಮ್ಮೆ ಬರೆಯಲು ಜೆಫ್ರಿ ಕೇನ್ ಅವರನ್ನು ಕರೆತಂದರು. ಕೇನ್ ಫ್ರಾನ್ಸ್‌ ಅವರ ಅನೇಕ ಕಲ್ಪನೆಗಳನ್ನು ಉಳಿಸಿಕೊಂಡರು ಆದರೆ ಅರ್ಪಣೆಗಳಿಗೆ ಮುಂಚಿತವಾಗಿ ಮುನ್ನುಡಿಯನ್ನು ಸೇರಿಸಿದರು. ಅಂತಿಮವಾಗಿ ಚಿತ್ರದಲ್ಲಿ ಟ್ರೆವೆಲ್ಯಾನ್ ಅವರ ಕಲ್ಪನೆಗೆ ಹತ್ತಿರವಾಗಿಯೇ ಬರೆದರು.. ಕೆವಿನ್ ವೇಡ್ ಚಿತ್ರಕಥೆಗೆ ಮೆರುಗು ನೀಡಿದರೆ, ಬ್ರೂಸ್ ಫೀರ್‌ಸ್ಟೈನ್ ಅಂತಿಮ ಸ್ಪರ್ಶವನ್ನು ನೀಡಿದರು. ಚಲನಚಿತ್ರದಲ್ಲಿ, ಬರವಣಿಗೆಯ ಶ್ರೇಯವನ್ನು ಅನ್ನು ಕೇನ್ ಮತ್ತು ಫೀರ್‌ಸ್ಟೈನ್ ಇಬ್ಬರಿಗೂ ನೀಡಲಾಯಿತು. ಫ್ರಾನ್ಸ್‌ಗೆ ಕೇವಲ ಕಥೆಯ ಶ್ರೇಯವನ್ನು ಮಾತ್ರ ನೀಡಲಾಯಿತು. ಇದು ಅನ್ಯಾಯಯುತ ಎಂದು ಫ್ರಾನ್ಸ್ ಭಾವಿಸಿದರು, ಚಿತ್ರಕಥೆಯಲ್ಲಿ ಮಾಡಲಾದ ಸೇರ್ಪಡೆಗಳು ಅವರ ಮೂಲ ಆವೃತ್ತಿಯ ಸುಧಾರಣೆಯಲ್ಲ ಎಂದು ಅವರು ನಂಬಿದ್ದರು. ವೇಡ್ ಅಧಿಕೃತ ಕ್ರೆಡಿಟ್ ಅನ್ನು ಸ್ವೀಕರಿಸಲಿಲ್ಲ, ಆದರೆ ಅವರೇ ರಚಿಸಿದ ಸಿಐಎ ಪಾತ್ರವಾದ ಜ್ಯಾಕ್ ವೇಡ್ ಅವರ ಹೆಸರನ್ನು ಒಪ್ಪಿಕೊಂಡರು.

ಈ ಕಥೆಯು ಇಯಾನ್ ಫ್ಲೆಮಿಂಗ್ ಅವರ ಕೃತಿಯನ್ನು ಆಧರಿಸಿಲ್ಲವಾದರೂ, ಫ್ಲೆಮಿಂಗ್ ಅವರಿಗೆ ಸೇರಿದ ಜಮೈಕಾದ ಎಸ್ಟೇಟಿನ ಹೆಸರು ಗೋಲ್ಡನ್ ಐ ಎಂದಾಗಿತ್ತು.ಇಲ್ಲೆಯೇ ಅವರು ಹಲವಾರು ಬಾಂಡ್ ಕಾದಂಬರಿಗಳನ್ನು ರಚಿಸಿದ್ದರು. ಈ ಎಸ್ಟೇಟಿನ ಹೆಸರನ್ನೇ ಚಲನಚಿತ್ರಕ್ಕೂ ಇಡಲಾಯಿತು, ಫ್ಲೆಮಿಂಗ್ ತನ್ನ ಎಸ್ಟೇಟ್ ಹೆಸರಿಗೆ ಹಲವಾರು ಮೂಲಗಳನ್ನು ನೀಡಿದ್ದಾರೆ. ಇದರಲ್ಲಿ ಕಾರ್ಸನ್ ಮೆಕ್‌ಕಲ್ಲರ್ಸ್ ಅವರ ರಿಫ್ಲೆಕ್ಷನ್ಸ್ ಇನ್ ಗೋಲ್ಡನ್ ಐ ಮತ್ತು ಆಪರೇಷನ್ ಗೋಲ್ಡನ್ ಐ, ಸ್ಪೇನ್ ಮೂಲಕ ನಾಝಿ ಆಕ್ರಮಣದ ಸಂದರ್ಭದಲ್ಲಿ ಫ್ಲೆಮಿಂಗ್ ಸ್ವತಃ ಅಭಿವೃದ್ಧಿಪಡಿಸಿದ ಆಕಸ್ಮಿಕ ಯೋಜನೆಯ ಹೆಸರೂ ಗೋಲ್ಡನ್ ಐ ಎಂದಾಗಿತ್ತು..

ಗೋಲ್ಡನ್ ಐ ಚಲನಚಿತ್ರವು ಲೈಸೆನ್ಸ್ ಟು ಕಿಲ್ ಬಿಡುಗಡೆಯಾದ ಕೇವಲ ಆರು ವರ್ಷಗಳ ನಂತರ ಬಿಡುಗಡೆಯಾಗಿದ್ದರೂ, ಈ ಮಧ್ಯದ ಅವಧಿಯಲ್ಲಿ ವಿಶ್ವ ರಾಜಕೀಯವು ನಾಟಕೀಯವಾಗಿ ಬದಲಾಗಿದೆ. ಗೋಲ್ಡನ್ ಐ ಚಲನಚಿತ್ರವು ಬರ್ಲಿನ್ ಗೋಡೆಯ ಪತನ, ಸೋವಿಯತ್ ಒಕ್ಕೂಟದ ಪತನ ಮತ್ತು ಶೀತಲ ಸಮರದ ಅಂತ್ಯದ ನಂತರ ನಿರ್ಮಿಸಿದ ಮೊದಲ ಜೇಮ್ಸ್ ಬಾಂಡ್ ಚಲನಚಿತ್ರವಾಗಿದ್ದು, ಆಧುನಿಕ ಜಗತ್ತಿನಲ್ಲಿ ಪಾತ್ರದ ಪ್ರಸ್ತುತತೆಯ ಬಗ್ಗೆ ಅನುಮಾನವಿತ್ತು. ಬಾಂಡ್ ಸರಣಿಯನ್ನು ಮತ್ತೆ ಪರಿಚಯ ಮಾಡುವುದು "ನಿರರ್ಥಕ" ಎಂದು ಚಲನಚಿತ್ರೋದ್ಯಮದ ಕೆಲವರು ಭಾವಿಸಿದರು, ಮತ್ತು ಇದು "ಹಿಂದಿನ ಐಕಾನ್" ಆಗಿಯೇ ಉಳಿಸುವುದು ಉತ್ತಮ ಎಂದು ಭಾವಿಸಲಾಯಿತು. ನಿರ್ಮಾಪಕರು ಈ ಸರಣಿಯ ಹೊಸ ಪರಿಕಲ್ಪನೆಗಳ ಬಗ್ಗೆ ಯೋಚಿಸಿದರು, ಉದಾಹರಣೆಗೆ 1960 ರ ಅವಧಿಯ ಕಥಾಸಾಹಿತ್ಯ, ಮಹಿಳಾ 007, ಅಥವಾ ಕಪ್ಪು ಜೇಮ್ಸ್ ಬಾಂಡ್. ಅಂತಿಮವಾಗಿ, ಅವರು ಸರಣಿಯ ಮೂಲಭೂತ ವಿಷಯಗಳಿಗೆ ಮರಳಲು ನಿರ್ಧರಿಸಿದರು, ಡಾಲ್ಟನ್ ಚಲನಚಿತ್ರಗಳಲ್ಲಿದ್ದ ಹಾಗೆ ಸೂಕ್ಷ್ಮ ಮತ್ತು ಕಾಳಜಿಯುಳ್ಳ ಬಾಂಡ್ ಚಿತ್ರಣವನ್ನು ಅಥವಾ ಆ ದಶಕದಲ್ಲಿ ವ್ಯಾಪಿಸಲು ಆರಂಭಿಸಿದ್ದ ರಾಜಕೀಯವಾಗಿ ಸರಿಯಾಗಿರುವಿಕೆಯ ನೀತಿಯನ್ನು ಅನುಸರಿಸಲಿಲ್ಲ. ಗೋಲ್ಡನ್ ಐ ಚಲನಚಿತ್ರವು ಪುನಃಶ್ಚೇತನಕಾರಿಯಾಗಿ ಯಶಸ್ಸು ಕಂಡಿತಲ್ಲದೆ, 1990 ರ ದಶಕಕ್ಕೆಬಾಂಡ್ ಸರಣಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿತು. ಗೋಲ್ಡನ್ ಐ ಚಲನಚಿತ್ರದಲ್ಲಿ ಮಹಿಳಾ ಎಂ ನ ಪರಿಚಯವು ಗೋಲ್ಡನ್ ಐ ಚಲನಚಿತ್ರದ ನೂತನ ಆವಿಷ್ಕಾರಗಳಲ್ಲೊಂದಾಗಿದೆ. ನೂತನ ಎಂ ಕ್ಷಿಪ್ರವಾಗಿ ತನ್ನ ಅಧಿಕಾರವನ್ನು ಸ್ಥಾಪಿಸುತ್ತಾಳೆ ಮತ್ತು ಬಾಂಡ್ "ಒಬ್ಬ ಲಿಂಗ ತಾರತಮ್ಯವಾದಿ ಮತ್ತು ಮಹಿಳೆಯರನ್ನು ಕುರಿತಂತೆ ಪೂರ್ವಾಗ್ರಹಪೀಡಿತ ಡೈನೋಸಾರ್ ಹಾಗೂ ಶೀತಲ ಸಮರದ ಪಳೆಯುಳಿಕೆ ಎಂದು ಟೀಕಿಸುತ್ತಾಳೆ.. 1989 ರಿಂದ ತಿಮೋತಿ ಡಾಲ್ಟನ್‌ನ ಬಾಂಡ್‌ಗಿಂತ ನೂತನ ಬಾಂಡ್ ಅನ್ನು ಕಡಿಮೆ ಪ್ರಕ್ಷುಬ್ಧವಾಗಿ ಚಿತ್ರಿಸಲಾಗಿದೆ ಎಂಬುದಕ್ಕೆ ಇದು ಆರಂಭಿಕ ಸೂಚನೆಯಾಗಿದೆ.

ಪಾತ್ರವರ್ಗ

ಡಾಲ್ಟನ್ ಬದಲಿಗೆ, ನಿರ್ಮಾಪಕರು ಪಿಯರ್ಸ್ ಬ್ರಾಸ್ನನ್ ಅವರನ್ನು ಆಯ್ಕೆ ಮಾಡಿದರು. ಅವರು ರೆಮಿಂಗ್ಟನ್ ಸ್ಟೀಲ್ ನಲ್ಲಿ ನಟಿಸುವ ಒಪ್ಪಂದ ಹೊಂದಿದ್ದ ಕಾರಣದಿಂದಾಗಿ 1986 ರಲ್ಲಿ ರೋಜರ್ ಮೂರ್ ಅವರ ಉತ್ತರಾಧಿಕಾರಿಯಾಗುವುದನ್ನು ತಡೆಯಲಾಯಿತು. ಜೂನ್ 8, 1994 ರಂದು ರೀಜೆಂಟ್ ಪ್ಯಾಲೇಸ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರನ್ನು ಸಾರ್ವಜನಿಕರಿಗೆ ಪರಿಚಯಿಸಲಾಯಿತು ಬ್ರಾನ್ಸನ್ ಜೊತೆ ಮಾತುಕತೆ ನಡೆಸುವ ಮೊದಲು, ಮೆಲ್ ಗಿಬ್ಸನ್, ಹಗ್ ಗ್ರಾಂಟ್ ಮತ್ತು ಲಿಯಾಮ್ ನೀಸನ್ ಅವರಿಗೆ ಈ ಪಾತ್ರವನ್ನು ವಹಿಸಲು ಕೇಳಲಾಗಿತ್ತು. ಬ್ರೋಕೋಲಿ ಮತ್ತು ಕ್ಯಾಂಪ್‌ಬೆಲ್ ಅವರು ಬಾಂಡ್ ಪಾತ್ರ ನಿರ್ವಹಣೆ ಬಗ್ಗೆ ರಾಲ್ಫ್ ಫಿಯೆನ್ನೆಸ್ ಅವರನ್ನು ಭೇಟಿಯಾದರು. ಪಾಲ್ ಮೆಕ್‌ಗಾನ್ ಈ ಪಾತ್ರಕ್ಕೆ ಸ್ಟುಡಿಯೊದ ಮೂಲ ಆಯ್ಕೆಯಾಗಿದ್ದರು. ಬ್ರಾಸ್ನನ್ ಈ ಪಾತ್ರವನ್ನು ತಿರಸ್ಕರಿಸಿದರೆ ಮಾತ್ರ ಅವರನ್ನು ಬಾಂಡ್ ಆಗಿ ಆಯ್ಕೆ ಮಾಡಲಾಗುತ್ತಿತ್ತು. ಬ್ರಾಸ್ನನ್ ಗೆ ೧.೨ ಮಿಲಿಯನ್ ಡಾಲರ್ ಸಂಭಾವನೆ ಪಾವತಿಸಲಾಗಿದೆ. ಈ ಚಲನಚಿತ್ರದ ಒಟ್ಟು ಬಜೆಟ್ ೬೦ ಮಿಲಿಯನ್ ಡಾಲರ್. ಜೂಡಿ ಡೆಂಚ್, ಇಂಗ್ಲೀಷ್ ನಟಿ, ರಾಬರ್ಟ್ ಬ್ರೌನ್ ಬದಲಿಗೆ M ಆಗಿ ನಟಿಸಿದರು, ಇದು ಬಾಂಡ್ ಸರಣಿಯಲ್ಲಿ ಮಹಿಳಾ ಎಂ ಪಾತ್ರಪರಿಚಯಿಸಿದ ಮೊದಲ ಚಿತ್ರವಾಗಿದೆ. ಸ್ಟೆಲ್ಲಾ ರಿಮಿಂಗ್ಟನ್ 1992 ರಲ್ಲಿ MI5 ಮುಖ್ಯಸ್ಥರಾಗಿದ್ದು ಈ ಪಾತ್ರದ ಸೃಷ್ಟಿಗೆ ಸ್ಫೂರ್ತಿಯಾಗಿದೆ ಎನ್ನಲಾಗಿದೆ. ಅಲೆಕ್ ಟ್ರೆವೆಲ್ಯಾನ್ ಪಾತ್ರದ ಹೆಸರನ್ನು ಮೂಲತಃ "ಅಗಸ್ಟಸ್ ಟ್ರೆವೆಲ್ಯಾನ್ ಎಂದು ಬರೆಯಲಾಗಿತ್ತು ಮತ್ತು ಬಾಂಡ್^ಗಿಂತ ಹಿರಿಯರಾದ ವ್ಯಕ್ತಿ ಮತ್ತು ಮಾರ್ಗದರ್ಶಕರೆಂಬಂತೆ ಆ ಪಾತ್ರವನ್ನು ಚಿತ್ರಿಸಲಾಗಿತ್ತು. ಆಂಟನಿ ಹಾಪ್ಕಿನ್ಸ್ ಮತ್ತು ಅಲನ್ ರಿಕ್‌ಮ್ಯಾನ್ ಅವರನ್ನು ಆ ಪಾತ್ರ ನಿರ್ವಹಿಸಲು ಕೇಳಲಾಯಿತಾದರೂ ಆದರೆ ಇಬ್ಬರೂ ಅದನ್ನು ತಿರಸ್ಕರಿಸಿದರು. ನಂತರ ಸೀನ್ ಬೀನ್ ಆ ಪಾತ್ರ ನಿರ್ವಹಿಸಿದರು.ಆ ಪಾತ್ರವನ್ನು ಬಾಂಡ್^ನ ಗೆಳೆಯ ಎಂದು ಬದಲಾಯಿಸಲಾಯಿತು. ಜಾನ್ ರೈಸ್-ಡೇವಿಸ್ ಅವರನ್ನು ಅವರು ದಿ ಲಿವಿಂಗ್ಜ ಡೇಲೈಟ್ಸ್ ಚಲನಚಿತ್ರದಲ್ಲಿ ನಿರ್ವಹಿಸಿದ್ದ ಜನರಲ್ ಪುಷ್ಕಿನ್ ಪಾತ್ರವನ್ನು ಪುನರಾವರ್ತಿಸಲು ಕೇಳಿಕೊಳ್ಳಲಾಯಿತಾದರೂ ಅವರು ಆದನ್ನು ನಿರಾಕರಿಸಿದರು,ಈ ಪಾತ್ರವನ್ನು ರಕ್ಷಣಾ ಸಚಿವ ಮಿಶ್ಕಿನ್ ಆಗಿ ಪುನಃ ಬರೆಯಲಾಯಿತು.

ಜಾನ್ ವೂ ಅವರನ್ನು ನಿರ್ದೇಶನ ಮಾಡಲು ಸಂಪರ್ಕಿಸಲಾಯಿತು, ಆದರೆ ಅವರು ಈ ಅವಕಾಶವನ್ನು ತಿರಸ್ಕರಿಸಿದರು. ಈ ಪ್ರಸ್ತಾಪವು ಅವರಿಗೆ ಗೌರವ ತಂದಿದೆ ಎಂದರು.. ಮೈಕೆಲ್ ಕ್ಯಾಟನ್-ಜೋನ್ಸ್ ಮತ್ತು ಪೀಟರ್ ಮೆಡಕ್ ಅವರನ್ನೂ ಸಹ ನಿರ್ದೇಶಕರನ್ನಾಗಿ ಪರಿಗಣಿಸಲಾಯಿತು. ನಿರ್ಮಾಪಕರು ನಂತರ ನ್ಯೂಜಿಲ್ಯಾಂಡರ್ ಮಾರ್ಟಿನ್ ಕ್ಯಾಂಪ್‌ಬೆಲ್ ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಿದರು. ಬ್ರಾಸ್ನನ್ ನಂತರ ಕ್ಯಾಂಪ್‌ಬೆಲ್‌ ಅವರನ್ನು "ಯೋಧನಂತೆ ಕಾರ್ಯ ನಿರ್ವಹಿಸುತ್ತಿದ್ದರು" ಎಂದು ಬಣ್ಣಿಸಿದರು. ಮತ್ತು " ಎರಡೂ ಕಡೆಯವರಲ್ಲೂ ಭಾರಿ ಉತ್ಸಾಹವಿತ್ತು" ಎಂದೂ ವಿವರಿಸಿದರು.

ಚಿತ್ರೀಕರಣ

ಚಲನಚಿತ್ರದ ಪ್ರಧಾನ ಛಾಯಾಗ್ರಹಣವು ೧೬ ಜನವರಿ ೧೯೯೫ ರಲ್ಲಿ ಆರಂಭವಾಯಿತು ಮತ್ತು ಜೂನ್ ೨ ವರೆಗೆ ಮುಂದುವರಿಯಿತು. ಬಾಂಡ್ ಚಿತ್ರಗಳು ಸಾಮಾನ್ಯವಾಗಿ ಚಿತ್ರೀಕರಣಗೊಳ್ಳುತ್ತಿದ್ದ ಪೈನ್‌ವುಡ್ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡಲು ನಿರ್ಮಾಪಕರಿಗೆ ಸಾಧ್ಯವಾಗಲಿಲ್ಲ , ಏಕೆಂದರೆ ಇದನ್ನು ಇನ್ನೊಂದು ಚಲನಚಿತ್ರವಾದ ಫಸ್ಟ್ ನೈಟ್ ಚಿತ್ರೀಕರಣಕ್ಕೆಕಾಯ್ದಿರಿಸಲಾಗಿತ್ತು. ಇದಕ್ಕೆ ಬದಲಾಗಿ, ಹರ್ಟ್‌ಫೋರ್ಡ್‌ಶೈರ್‌ನ ಲೀವ್‌ಸ್ಡೆನ್ ಏರೋಡ್ರೋಮ್‌ನಲ್ಲಿರುವ ಹಳೆಯ ರೋಲ್ಸ್ ರಾಯ್ಸ್ ಕಾರ್ಖಾನೆಯನ್ನು ಹೊಸ ಸ್ಟುಡಿಯೋ ಆಗಿ ಪರಿವರ್ತಿಸಲಾಯಿತು, ಇದನ್ನು ಲೀವ್ಸ್‌ಡೆನ್ ಸ್ಟುಡಿಯೋಸ್ ಎಂದು ಕರೆಯಲಾಯಿತು. ಈ ಪ್ರಕ್ರಿಯೆಯನ್ನು 2006 ಡಿವಿಡಿಯಲ್ಲಿ ತೋರಲಾಗಿದೆ. .

ಗೋಲ್ಡನ್ ಐ 
ಅರೆಸಿಬೊ ವೀಕ್ಷಣಾಲಯವು ಚಿತ್ರದ ಕೊನೆಯ ರೋಚಕ ದೃಶ್ಯದ ಚಿತ್ರಣದ ಸ್ಥಳವಾಗಿತ್ತು

ಬಂಗೀ ಜಂಪ್ ಅನ್ನು ಸ್ವಿಟ್ಜರ್‌ಲ್ಯಾಂಡ್‌ನ ಟಿಸಿನೋದಲ್ಲಿರುವ ಕಾಂಟ್ರಾ ಡ್ಯಾಮ್‌ನಲ್ಲಿ (ವೆರ್ಜಾಸ್ಕಾ ಅಥವಾ ಲೊಕಾರ್ನೊ ಡ್ಯಾಮ್ ಎಂದೂ ಕರೆಯಲಾಗುತ್ತದೆ) ನಲ್ಲಿ ಚಿತ್ರೀಕರಿಸಲಾಗಿದೆ. ಕ್ಯಾಸಿನೊ ದೃಶ್ಯಗಳು ಮತ್ತು ಟೈಗರ್ ಹೆಲಿಕಾಪ್ಟರ್ ಪ್ರದರ್ಶನದ ದೃಶ್ಯವನ್ನು ಮಾಂಟೆ ಕಾರ್ಲೊದಲ್ಲಿ ಚಿತ್ರೀಕರಿಸಲಾಗಿದೆ. ಟ್ಯಾಂಕನ್ನು ಬೆನ್ನಟ್ಟುವ ದೃಶ್ಯವನ್ನು ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಚಿತ್ರೀಕರಿಸಿ, ಲೀವ್ಸ್‌ಡೆನ್‌ನ ಸ್ಟುಡಿಯೋದ ಹಿನ್ನೆಲೆಗೆ ಜೋಡಿಸಲಾಗಿದೆ. ಉಪಗ್ರಹಕ್ಕೆ ಸಂಬಂಧಿಸಿದ ರೋಚಕ ದೃಶ್ಯಗಳನ್ನು ಪೋರ್ಟೊ ರಿಕೊದ ಅರೆಸಿಬೊ ವೀಕ್ಷಣಾಲಯದಲ್ಲಿ ಚಿತ್ರೀಕರಿಸಲಾಗಿದೆ. ನಿಜವಾದ MI6 ಪ್ರಧಾನ ಕಛೇರಿಯ ಹೊರಭಾಗವನ್ನು M ನ ಕಚೇರಿಯನ್ನು ತೋರಿಸಲು ಬಳಸಲಾಗಿದೆ.. ಸೇಂಟ್ ಪೀಟರ್ಸ್‌ಬರ್ಗ್‌ನ ಕೆಲವು ದೃಶ್ಯಗಳನ್ನು ವಾಸ್ತವವಾಗಿ ಲಂಡನ್‌ನಲ್ಲಿ ಚಿತ್ರೀಕರಿಸಲಾಗಿದೆ - ಎಪ್ಸಮ್ ಡೌನ್ಸ್ ರೇಸ್‌ಕೋರ್ಸನ್ನು ವಿಮಾನ ನಿಲ್ದಾಣವೆಂಬಂತೆ ಸಜ್ಜುಗೊಳಿಸಲಾಗಿದೆ - ವೆಚ್ಚಗಳು ಮತ್ತು ಭದ್ರತಾ ಕಾಳಜಿಗಳನ್ನು ಕಡಿಮೆ ಮಾಡಲು ಹೀಗೆ ಮಾಡಲಾಯಿತು ಏಕೆಂದರೆ, ರಷ್ಯಾಕ್ಕೆ ಕಳುಹಿಸಿದ ಎರಡನೇ ಘಟಕಕ್ಕೆ ಅಂಗರಕ್ಷಕರ ಅಗತ್ಯವಿತ್ತು.

ಫ್ರೆಂಚ್ ನೌಕಾಪಡೆಯು ತಮ್ಮ ಕ್ಷಿಪ್ರವೇಗದ ನೌಕೆ ಲಾ ಫಾಯೆಟ್ ಮತ್ತು ಅವರ ಹೊಸ ಹೆಲಿಕಾಪ್ಟರ್ ಯೂರೋಕಾಪ್ಟರ್ ಟೈಗರ್ ಅನ್ನು ಚಿತ್ರದ ನಿರ್ಮಾಣ ತಂಡಕ್ಕೆ ಬಳಸಲು ನೀಡಿತು. ಫ್ರೆಂಚ್ ಸರ್ಕಾರವು ಅದರ ಪ್ರಚಾರ ಅಭಿಯಾನದ ಭಾಗವಾಗಿ ತನ್ನ ನೌಕಾಪಡೆಯ ಲೋಗೊಗಳ ಬಳಕೆಯನ್ನು ಅನುಮತಿಸಿತು. ಆದಾಗ್ಯೂ, ಚಲನಚಿತ್ರದ ನಿರ್ಮಾಪಕರು ಫ್ರೆಂಚ್ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಗೆ ಬ್ರಾಸ್ನನ್ ವಿರೋಧ ಮತ್ತು ಗ್ರೀನ್ ಪೀಸ್ ನೊಂದಿಗೆ ಅವರ ಭಾಗವಹಿಸುವಿಕೆ ಕುರಿತಂತೆ ಫ್ರೆಂಚ್ ರಕ್ಷಣಾ ಸಚಿವಾಲಯದೊಂದಿಗೆ ವಿವಾದವನ್ನು ಹೊಂದಿದ್ದರು; ಪರಿಣಾಮವಾಗಿ, ಚಿತ್ರದ ಫ್ರೆಂಚ್ ಪ್ರಥಮ ಪ್ರದರ್ಶನವನ್ನು ರದ್ದುಗೊಳಿಸಲಾಯಿತು.

ಶಸ್ತ್ರಸಜ್ಜಿತ ರೈಲನ್ನು ಒಳಗೊಂಡ ದೃಶ್ಯಗಳನ್ನು ಇಂಗ್ಲೆಂಡ್‌ನ ಪೀಟರ್‌ಬರೋ ಬಳಿಯ ನೆನೆ ವ್ಯಾಲಿ ರೈಲ್ವೇಯಲ್ಲಿ ಚಿತ್ರೀಕರಿಸಲಾಗಿದೆ. ಈ ರೈಲು ಬ್ರಿಟಿಷ್ ರೈಲ್ ಕ್ಲಾಸ್ 20 ಡೀಸೆಲ್-ಎಲೆಕ್ಟ್ರಿಕ್ ಲೋಕೋಮೋಟಿವ್ ಮತ್ತು ಒಂದು ಜೋಡಿ ಮಾರ್ಕ್ 1 ಬೋಗಿಗಳನ್ನು ಒಳಗೊಂಡಿತ್ತು, ಈ ಮೂರನ್ನೂ ಸೋವಿಯತ್ ಶಸ್ತ್ರಸಜ್ಜಿತ ರೈಲನ್ನು ಹೋಲುವಂತೆ ನಿರ್ಮಿಸಲಾಗಿತ್ತು.

ದೃಶ್ಯಾವಳಿಗಳು

ಚಿತ್ರ:Kleinman titlecredits.jpg
ಗೋಲ್ಡನ್ ಐ ಚಿತ್ರದ ಆರಂಭಿಕ ದೃಶ್ಯವು ಮಹಿಳೆಯೊಬ್ವಳು ಸುತ್ತಿಗೆ ಮತ್ತು ಕುಡುಗೋಲನ್ನು ನಾಶಪಡಿಸುವುದನ್ನು ಒಳಗೊಂಡಿತ್ತು.

ಈ ಚಿತ್ರವು ವಿಶೇಷ ದೃಶ್ಯಾವಳಿಗಳ ಚಿತ್ರಣದ ಮೇಲ್ವಿಚಾರಕರಾದ ಡೆರೆಕ್ ಮೆಡ್ಡಿಂಗ್ಸ್‌ ಅವರ ಕೊನೆಯ ಚಿತ್ರವಾಗಿತ್ತು, ಇದನ್ನು ಅವರಿಗೆ ಸಮರ್ಪಿಸಲಾಯಿತು. ಚಿಕ್ಕಪ್ರತಿರೂಪಗಳ ಬಳಕೆಯು ಮೆಡ್ಡಿಂಗ್ಸ್‌^ರ ಪ್ರಮುಖ ಕೊಡುಗೆಯಾಗಿದೆ. ಕಂಪ್ಯೂಟರ್ ನಿರ್ಮಿತ ಚಿತ್ರಣವನ್ನು ಬಳಸಿದ ಮೊದಲ ಬಾಂಡ್ ಚಿತ್ರವೂ ಹೌದು. ಮಾದರಿ ಎನ್ನಬಹುದಾದ ದೃಶ್ಯಾವಳಿಗಳ ಪೈಕಿ ಸೆವೆರ್ನಾಯದ ಹೆಚ್ಚಿನ ಬಾಹ್ಯ ಚಿತ್ರಣಗಳು, ಜಾನುಸ್ ರೈಲು ಟ್ಯಾಂಕ್‌ಗೆ ಅಪ್ಪಳಿಸುವ ದೃಶ್ಯ ಮತ್ತು ಉಪಗ್ರಹದ ಡಿಶ್^ನ್ನು ಮರೆಮಾಡಿದ ಸರೋವರ ಇವುಗಳನ್ನು ಹೆಸರಿಸಬಹುದಾಗಿದೆ. ಏಕೆಂದರೆ ನಿರ್ಮಾಪಕರಿಗೆ ಗುಂಡಾದ ಸರೋವರವು ಪೊರ್ಟೊರಿಕೊದಲ್ಲಿ ಕಂಡಿರಲಿಲ್ಲ. . ಉಪಗ್ರಹದ ಡಿಶ್ ಕುರಿತ ಅಂತಿಮ ರೋಚಕದೃಶ್ಯಕ್ಕಾಗಿ ಅರೆಸಿಬೊ ದೃಶ್ಯಗಳನ್ನು ಬಳಸಲಾಯಿತು. ಮೆಡ್ಡಿಂಗ್ಸ್ ಅವರ ತಂಡವು ನಿರ್ಮಿಸಿದ ಮಾದರಿ ಹಾಗೂ ಬ್ರಿಟನ್ನಿನಲ್ಲಿ ಸಾಹಸಕಲಾವಿದರೊಂದಿಗೆ ಚಿತ್ರೀಕರಿಸಲಾದ ದೃಶ್ಯಗಳನ್ನು ಬಳಸಲಾಯಿತು

ಸ್ಟಂಟ್ ಕಾರ್ ಸಂಯೋಜಕರಾದ ರೆಮಿ ಜೂಲಿಯೆನ್ ಆಸ್ಟನ್ ಮಾರ್ಟಿನ್ ಡಿಬಿ 5 ಮತ್ತು ಫೆರಾರಿ ಎಫ್ 355 ನಡುವಿನ ಕಾರಿನ ಬೆನ್ನಟ್ಟುವಿಕೆಯನ್ನು "ಪರಿಪೂರ್ಣ ಆಕಾರದ, ಹಳೆಯ ಮತ್ತು ದುರ್ಬಲ ವಾಹನ ಮತ್ತು ರೇಸ್‌ಕಾರ್" ನಡುವಿನ ಬೆನ್ನಟ್ಟುವಿಕೆ ಎಂದು ಬಣ್ಣಿಸಿದ್ದಾರೆ.. ಕಾರುಗಳು ಸಂಪೂರ್ಣವಾಗಿ ವಿಭಿನ್ನವಾಗಿರುವುದರಿಂದ ಸಾಹಸವನ್ನು ನಿಖರವಾಗಿ ಯೋಜಿಸಬೇಕಾಗಿತ್ತು. ಎಫ್ 355 ಟೈರ್‌ಗಳಿಗೆ ಮೊಳೆಗಳನ್ನು ಜೋಡಿಸಿ ಅದನ್ನು ನಿಯಂತ್ರಣ ತಪ್ಪಿ ವಾಲುವಂತೆ ಮಾಡಬೇಕಾಗಿತ್ತು ಮತ್ತು ವಾಹನಗಳ ಒಂದು ದೃಶ್ಯದ ಚಿತ್ರಣದ ಸಮಯದಲ್ಲಿ ಎರಡು ಕಾರುಗಳು ಡಿಕ್ಕಿ ಹೊಡೆದವು. ಟ್ಯಾಂಕಿನ ಬೆನ್ನಟ್ಟುವಿಕೆಯ ದೃಶ್ಯವು ಚಿತ್ರದ ಅತಿದೊಡ್ಡ ಸಾಹಸ ಸರಣಿಯಾಗಿತ್ತು. ಇದರ ಚಿತ್ರೀಕರಣಕ್ಕೆ ಸುಮಾರು ಆರು ವಾರಗಳು ತಗುಲಿದವು ಭಾಗಶಃ ಸೇಂಟ್ ಪೀಟರ್ಸ್‌ಬರ್ಗ್‌ನ ಸ್ಥಳ ಮತ್ತು ಭಾಗಶಃ ಲೀವ್ಸ್‌ಡೆನ್‌ನಲ್ಲಿರುವ ಹಳೆಯ ಡಿ ಹ್ಯಾವಿಲ್ಲಾಂಡ್ ರನ್ವೇ ಮೇಲೆ ಈ ದೃಶ್ಯವನ್ನು ಚಿತ್ರೀಕರಿಸಲಾಯಿತು. ಈಸ್ಟ್ ಇಂಗ್ಲೆಂಡ್ ಮಿಲಿಟರಿ ಮ್ಯೂಸಿಯಂನಿಂದ ಎರವಲು ಪಡೆದ ರಷ್ಯಾದ ಟಿ -54/ಟಿ -55 ಟ್ಯಾಂಕ್ ಅನ್ನು ನಕಲಿ ಸ್ಫೋಟಕ ಪ್ರತಿಕ್ರಿಯಾತ್ಮಕ ರಕ್ಷಾಕವಚ ಫಲಕಗಳನ್ನು ಸೇರಿಸಿ ಮಾರ್ಪಡಿಸಲಾಗಿದೆ. ಸೇಂಟ್ ಪೀಟರ್ಸ್ಬರ್ಗ್ ನಗರದ ಬೀದಿಗಳಲ್ಲಿ ಪಾದಚಾರಿ ರಸ್ತೆಯು ಹಾಳಾಗುವುದನ್ನು ತಪ್ಪಿಸಲು, ಟಿ -54/55 ರ ಸ್ಟೀಲ್ ಮಾರ್ಗಗಳನ್ನು ಬ್ರಿಟಿಷ್ ಚೀಫ್‌ಟೈನ್ ಟ್ಯಾಂಕ್‌ನಿಂದ ರಬ್ಬರ್-ಮಾರ್ಗಕ್ಕೆ ಬದಲಾಯಿಸಲಾಯಿತು. ಈ ಚಿತ್ರದಲ್ಲಿ ಬಳಸಲಾದ ಟಿ -55 ಟ್ಯಾಂಕ್ ಈಗ ಈಸ್ಟ್ ಇಂಗ್ಲೆಂಡ್ ಮಿಲಿಟರಿ ಮ್ಯೂಸಿಯಂ ಇರುವ ಓಲ್ಡ್ ಬಕೆನ್‌ಹ್ಯಾಮ್ ಏರ್‌ಫೀಲ್ಡ್‌ನಲ್ಲಿ ಶಾಶ್ವತ ಪ್ರದರ್ಶನದಲ್ಲಿದೆ.

ಆಂಟೆನಾ ತೊಟ್ಟಿಲಿನೊಳಗೆ ಬಾಂಡ್ ಮತ್ತು ಟ್ರೆವೆಲ್ಯಾನ್ ನಡುವಿನ ಮುಖಾಮುಖಿಗಾಗಿ, ನಿರ್ದೇಶಕ ಕ್ಯಾಂಪ್‌ಬೆಲ್ ಫ್ರಾಮ್ ರಷ್ಯಾ ವಿತ್ ಲವ್‌ ಚಲನಚಿತ್ರದಲ್ಲಿ ರೆಡ್ ಗ್ರಾಂಟ್‌ನೊಂದಿಗೆ ಬಾಂಡ್‌ನ ಹೋರಾಟದಿಂದ ಸ್ಫೂರ್ತಿ ಪಡೆಯಲು ನಿರ್ಧರಿಸಿದರು.ಗೋಡೆಯತ್ತ ಬೀಸಿ ಒಗೆಯುವ ಒಂದು ಟೇಕ್ ಹೊರತುಪಡಿಸಿ ಬ್ರಾಸ್ನನ್ ಮತ್ತು ಬೀನ್ ಎಲ್ಲಾ ಸಾಹಸಗಳನ್ನು ಸ್ವತಃ ತಾವೇ ಮಾಡಿದರು, ಏಣಿ ಏರುವ ದೃಶ್ಯವೊಂದನ್ನು ಚಿತ್ರೀಕರಿಸುವಾಗ ಬ್ರಾಸ್ನನ್ ಅವರ ಕೈಗೆ ಗಾಯವಾಯಿತು,.ಇದರಿಂದಾಗಿ ನಿರ್ಮಾಪಕರು ಬ್ರಾಸ್ನನ್ ಅವರ ದೃಶ್ಯಗಳನ್ನು ವಿಳಂಬಗೊಳಿಸಬೇಕಾಯಿತು ಮತ್ತು ಸೆವೆರ್ನಯಾದಲ್ಲಿ ಮುಂದಿನ ದೃಶ್ಯಗಳನ್ನು ಮೊದಲೇ ಚಿತ್ರೀಕರಿಸಲಾಯಿತು.

ಆರಂಭಿಕ ೨೨೦ ಮೀ (೭೨೦ ಅಡಿ) ಬಂಗೀ ಜಿಗಿತದ ದೃಶ್ಯವನ್ನು ಸ್ವಿಟ್ಜರ್‌ಲ್ಯಾಂಡ್‌ನ ಕಾಂಟ್ರಾ ಡ್ಯಾಮ್‌ನಲ್ಲಿ ಚಿತ್ರೀಕರಿಸಲಾಗಿತ್ತು ಮತ್ತು ವೇಯ್ನ್ ಮೈಕೇಲ್ಸ್ ಆ ಜಿಗಿತವನ್ನು ಮಾಡಿದ್ದರು. ೨೦೦೨ ರ ಸ್ಕೈ ಮೂವೀಸ್ ಸಮೀಕ್ಷೆಯಲ್ಲಿ ಇದು ಸಾರ್ವಕಾಲಿಕ ಅತ್ಯುತ್ತಮ ಚಲನಚಿತ್ರ ಸಾಹಸವಾಗಿ ಆಯ್ಕೆಯಾಯಿತು, ಮತ್ತು ಸ್ಥಿರ ಕಟ್ಟಡದಿಂದ ಅತ್ಯುನ್ನತ ಬಂಗೀ ಜಿಗಿತದ ದಾಖಲೆಯನ್ನು ನಿರ್ಮಿಸಿತು. ಪೂರ್ವಸಮರ್ಪಣೆಯ ದೃಶ್ಯಾವಳಿಯ ಅಂತ್ಯದಲ್ಲಿ ಬಾಂಡ್ ವಿಮಾನದಿಂದ ಹಾರುವ ದೃಶ್ಯ ಮತ್ತು ಜಾಕ್ವೆಸ್ ಮಾಲ್ನಾಯ್ಟ್ ಮೋಟಾರ್ ಸೈಕಲ್ ಅನ್ನು ತುದಿಯವರೆಗೂ ಕೊಂಡೊಯ್ದು ನಂತರ ಜಿಗಿಯುವ ದೃಶ್ಯಗಳು ಮತ್ತು ವಿಮಾನದಿಂದ ಬಿಜೆ ವರ್ತ್ ಕೆಳಗೆ ಹಾರುವ ದೃಶ್ಯವಿದೆ.-ಇದು ನಿಜವಾದ ವಿಮಾನವಾಗಿತ್ತು, ವರ್ತ್ ಹೇಳುವಂತೆ, ಮುಖಕ್ಕೆ ಸಿಡಿಯುತ್ತಿದ್ದ ಸೀಮೆಎಣ್ಣೆ ಈ ದೃಶ್ಯದ ನಟನೆಯ ಅತ್ಯಂತ ಕಷ್ಟದ ಭಾಗವಾಗಿತ್ತು.

ರಷ್ಯಾದಲ್ಲಿ ಕಮ್ಯುನಿಸಂನ ಪತನವು ಆರಂಭಿಕ ಶೀರ್ಷಿಕೆಗಳ ಮುಖ್ಯ ಕೇಂದ್ರವಾಗಿದೆ, ಇದನ್ನು ಡೇನಿಯಲ್ ಕ್ಲೈನ್ಮನ್ ವಿನ್ಯಾಸಗೊಳಿಸಿದ್ದಾರೆ (ಅವರು ೧೯೯೧ ರಲ್ಲಿ ಮಾರಿಸ್ ಬೈಂಡರ್ ನಿಧನರಾದ ನಂತರ ಅಧಿಕಾರ ವಹಿಸಿಕೊಂಡರು). ಕೆಂಪು ನಕ್ಷತ್ರ, ಕಮ್ಯುನಿಸ್ಟ್ ನಾಯಕರ ಪ್ರತಿಮೆಗಳು - ವಿಶೇಷವಾಗಿ ಜೋಸೆಫ್ ಸ್ಟಾಲಿನ್ - ಮತ್ತು ಸುತ್ತಿಗೆ ಮತ್ತು ಕುಡುಗೋಲಿನಂತಹ ಸೋವಿಯತ್ ಒಕ್ಕೂಟಕ್ಕೆ ಸಂಬಂಧಿಸಿದ ಹಲವಾರು ರಚನೆಗಳ ಕುಸಿತ ಮತ್ತು ನಾಶವನ್ನು ಅವರು ತೋರಿಸುತ್ತಾರೆ. ಸಂದರ್ಶನವೊಂದರಲ್ಲಿ, "ಕಮ್ಯುನಿಸ್ಟ್ ದೇಶಗಳಲ್ಲಿ ನಡೆಯುತ್ತಿರುವುದು ಕಮ್ಯೂನಿಸಂ ಕುಸಿಯುತ್ತಿದೆ" ಎಂಬುದನ್ನು ತೋರಿಸುವ "ಒಂದು ರೀತಿಯ ಕಥೆ ಹೇಳುವ ಅನುಕ್ರಮ" ಎಂದು ಕ್ಲೈನ್‌ಮನ್ ಹೇಳಿದರು. ನಿರ್ಮಾಪಕ ಮೈಕೆಲ್ ಜಿ. ವಿಲ್ಸನ್ ಅವರ ಪ್ರಕಾರ, "ಸಮಾಜವಾದಿ ಚಿಹ್ನೆಗಳು ಸರ್ಕಾರಗಳಿಂದ ನಾಶವಾಗದೆ, ಬಿಕಿನಿ ಧರಿಸಿದ ಮಹಿಳೆಯರಿಂದ ನಾಶವಾಗುವುದನ್ನು", ಕೆಲವು ಕಮ್ಯುನಿಸ್ಟ್ ಪಕ್ಷಗಳು ಅದರಲ್ಲೂ ವಿಶೇಷವಾಗಿ ಕೆಲವು ಭಾರತೀಯ ಕಮ್ಯುನಿಸ್ಟ್ ಪಕ್ಷಗಳು ತೀವ್ರವಾಗಿ ಪ್ರತಿಭಟಿಸಿದವಲ್ಲದೆ, ಚಲನಚಿತ್ರವನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದವು.

ಉತ್ಪನ್ನ ಅಳವಡಿಕೆ

  ಈ ಚಿತ್ರವು BMW ನ ಮೂರು-ಚಿತ್ರಗಳನ್ನು ನಿರ್ಮಿಸುವ ಒಪ್ಪಂದವನ್ನು ಒಳಗೊಂಡ ಮೊದಲನೆಯ ಚಿತ್ರವಾಗಿತ್ತು. ಆದ್ದರಿಂದ ನಿರ್ಮಾಪಕರಿಗೆ BMW ನ ಇತ್ತೀಚಿನ ರೋಡ್‌ಸ್ಟರ್ BMW Z3 ಅನ್ನು ಕಾಣಿಕೆಯಾಗಿ ನೀಡಲಾಯಿತು . ಇದು ವಾಹನವು ಬಿಡುಗಡೆಯಾಗುವ ಕೆಲ ತಿಂಗಳುಗಳ ಮುನ್ನವೇ ಚಲನಚಿತ್ರದಲ್ಲಿ ಕಾಣಿಸಿಕೊಂಡಿದೆ ಮತ್ತು ಸೀಮಿತ ಆವೃತ್ತಿ "007 ಮಾದರಿಯು" ಬೇಡಿಕೆ ಸಲ್ಲಿಸಲು ಅವಕಾಶ ದೊರೆತ ಒಂದು ದಿನದೊಳಗೇ ಮಾರಾಟವಾಯಿತು. ಕಾರಿನ ಮಾರ್ಕೆಟಿಂಗ್ ತಂತ್ರದ ಭಾಗವಾಗಿ, ರೇನ್^ಬೋ ರೆಸ್ಟೋರೆಂಟ್‌ನಲ್ಲಿ ಏರ್ಪಡಿಸಲಾಗಿದ್ದ ಭೋಜನಕೂಟಕ್ಕೆ ಬಂದಿದ್ದ ಪತ್ರಕರ್ತರನ್ನು ರೇಡಿಯೋ ಸಿಟಿ ಮ್ಯೂಸಿಕ್ ಹಾಲ್‌ನಲ್ಲಿ ನಡೆದ ಚಲನಚಿತ್ರದ ಪ್ರಥಮ ಪ್ರದರ್ಶನಕ್ಕೆ ಕರೆದೊಯ್ಯಲು ಹಲವಾರು Z3 ಗಳನ್ನು ಬಳಸಲಾಯಿತು.

ಚಲನಚಿತ್ರಕ್ಕಾಗಿ, ಬಳಸಲಾದ ಕನ್ವರ್ಟಿಬಲ್ Z3 ಸಾಮಾನ್ಯ ಕ್ಯೂ ಪರಿಷ್ಕರಣೆಗಳನ್ನು ಹೊಂದಿದ್ದು, ಇದರಲ್ಲಿ ಸ್ವಯಂ-ವಿನಾಶಕಾರಿ ವಿಶೇಷತೆಯಿದ್ದು, ಹೆಡ್‌ಲೈಟ್‌ಗಳ ಹಿಂದೆ ಸ್ಟಿಂಗರ್ ಕ್ಷಿಪಣಿಗಳಿವೆ. Z3 ಹೆಚ್ಚು ಹೊತ್ತು ಪರದೆಯ ಮೇಲೆ ಕಾಣಿಸಿಕೊಳ್ಳುವುದಿಲ್ಲ ಮತ್ತು ಯಾವುದೇ ಗ್ಯಾಜೆಟ್‌ಗಳನ್ನು ಬಳಸಲಾಗಿಲ್ಲ. 1995 ರಲ್ಲಿ ಉತ್ಪನ್ನ ಸ್ಥಾಪನೆ ಮೂಲಕ ಚಲನಚಿತ್ರದಲ್ಲಿ Z3 ಕಾಣಿಸಿಕೊಂಡಿದ್ದು ಅತ್ಯಂತ ಯಶಸ್ವಿ ಪ್ರಚಾರ ಎಂದು ಭಾವಿಸಲಾಗಿದೆ ಹತ್ತು ವರ್ಷಗಳ ನಂತರ, ದಿ ಹಾಲಿವುಡ್ ರಿಪೋರ್ಟರ್ ಇದನ್ನು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಯಶಸ್ವಿ ಉತ್ಪನ್ನ ಸ್ಥಾಪನೆಯಾಗಿದೆ ಎಂದಿದೆ. ಲೇಖನವು ಅರಿಜೋನ ಸ್ಟೇಟ್ ಯೂನಿವರ್ಸಿಟಿಯ ವಾಲ್ಟರ್ ಕ್ರೋಂಕೈಟ್ ಸ್ಕೂಲ್ ಆಫ್ ಜರ್ನಲಿಸಂ ಅಂಡ್ ಮಾಸ್ ಕಮ್ಯುನಿಕೇಷನ್‌ನ ಮಾಧ್ಯಮ ವಿಶ್ಲೇಷಣೆ ಮತ್ತು ಟೀಕೆಗಳ ಮುಖ್ಯಸ್ಥೆ ಮೇರಿ ಲೌ ಗ್ಯಾಲೀಶಿಯನ್ ಅವರನ್ನು ಉಲ್ಲೇಖಿಸಿದೆ ,ಅವರು ಅಭಿಪ್ರಾಯಪಟ್ಟಿರುವಂತೆ, ಆಸ್ಟಿನ್ ಮಾರ್ಟಿನ್ ನಿಂದ ಬಿಎಂಡಬ್ಲ್ಯುಗೆ ಬಾಂಡ್ ಸ್ವಿಚ್ ಆದ ಸುದ್ದಿಯು ಚಲನಚಿತ್ರಕ್ಕೆ ಹಾಗೂ ಅದರ ಮಾರುಕಟ್ಟೆ ಪಾಲುದಾರರಿಗೆ ನೂರಾರು ಮಿಲಿಯನ್ ಡಾಲರ್ ಮೌಲ್ಯದ ಮಾಧ್ಯಮದ ಅವಗಾಹನೆಯನ್ನುಗಳಿಸಿದೆ.

ಚಿತ್ರದ ಎಲ್ಲಾ ಕಂಪ್ಯೂಟರ್‌ಗಳನ್ನು ಐಬಿಎಂ ಒದಗಿಸಿದೆ, ಮತ್ತು ಕೆಲವು ದೃಶ್ಯಗಳಲ್ಲಿ (ಪೆನ್ ಗ್ರೆನೇಡ್ ಸಿಡಿಯುವ ಕೊನೆಯ ದೃಶ್ಯ), ಓಎಸ್/2 ವಾರ್ಪ್ ಸ್ಪ್ಲಾಶ್ ಸ್ಕ್ರೀನ್ ಅನ್ನು ಕಂಪ್ಯೂಟರ್ ಮಾನಿಟರ್‌ಗಳಲ್ಲಿ ಕಾಣಬಹುದು. ಕ್ಯೂ ಲ್ಯಾಬ್ ದೃಶ್ಯದಲ್ಲಿ, ಕ್ಯೂ ನೀಡಿದ್ದ ಸೂಚನೆಗಳನ್ನು ನಿರ್ಲಕ್ಷಿಸಿ, ಜೇಮ್ಸ್ ಬಾಂಡ್ ಐಬಿಎಂ ಥಿಂಕ್‌ಪ್ಯಾಡ್ ಲ್ಯಾಪ್‌ಟಾಪ್ ಬಳಸಿ, ಪಿಟಾನ್ ಗನ್‌ನಿಂದ ಮಾರ್ಪಡಿಸಿದ ಲೆದರ್ ಬೆಲ್ಟ್ ಅನ್ನು ಬಳಸುವುದನ್ನು ಕಾಣಬಹುದು. ಈ ದೃಶ್ಯವು ಚಿತ್ರದ ಆರಂಭಿಕ ಕರಡುಗಳಲ್ಲಿ ಇರಲಿಲ್ಲ, ಆದರೆ ಕಂಪ್ಯೂಟರ್‌ನ ಕೀಬೋರ್ಡನ್ನು ೦೦೭ ಅನುದ್ದೇಶವಾಗಿ ಒತ್ತುತ್ತಿರುವಂತೆ ತೋರಿಸಿದಾಗನಿರ್ದೇಶಕ ಮಾರ್ಟಿನ್ ಕಾಂಪ್^ಬೆಲ್ , ಬಾಂಡ್ ಕ್ವಾರ್ಟರ್‌ಮಾಸ್ಟರ್ ಅನ್ನು ಸ್ಪಷ್ಟವಾಗಿ ನಿರ್ಲಕ್ಷಿಸುತ್ತಿದ್ದನೆಂದು ತೋರಿಸಬಯಸಿದ್ದಾರೆ ಎನಿಸುತ್ತದೆ. ಆದರೆ ಐಬಿಎಂ ಉತ್ಪನ್ನವನ್ನು ಹೆಚ್ಚಿಸುವ ಮಾರ್ಗವಾಗಿ ಈ ದೃಶ್ಯ ಸೃಜಿಸಲಾಗಿದೆ ಎನ್ನಲಾಗಿದೆ.

ಸುಧಾರಿಸಲ್ಪಟ್ಟ ಒಮೆಗಾ ಸೀಮಾಸ್ಟರ್ ಪ್ರೊಫೆಷನಲ್ ಡೈವರ್ 300 ಎಂ ಕೈಗಡಿಯಾರವು ಚಿತ್ರದಲ್ಲಿ ಹಲವೊಮ್ಮೆ ಗೂಢಚಾರಿ ಉಪಕರಣವಾಗಿ ಕಾಣುತ್ತದೆ. ಕಟಿಂಗ್ ಲೇಸರ್ ಮತ್ತು ಡಿಟೋನೇಟರ್ ರಿಮೋಟ್ ಅನ್ನು ಅಡಗಿಸಲಾಗಿರುತ್ತದೆ. ಬಾಂಡ್ ಒಮೆಗಾ ಗಡಿಯಾರವನ್ನು ಧರಿಸಿದಂತೆ ತೋರಿಸಿದ್ದು ಇದೇ ಮೊದಲು, ಮತ್ತು ಮುಂದೆ ಅವರು ನಂತರದ ಪ್ರತಿಯೊಂದು ನಿರ್ಮಾಣದಲ್ಲೂ ಒಮೆಗಾ ಕೈಗಡಿಯಾರಗಳನ್ನು ಧರಿಸಿದ್ದಾರೆ.

ಮಾರುಕಟ್ಟೆ ತಂತ್ರ

೧೯೯೦ ರಲ್ಲಿ ಜೇಮ್ಸ್ ಬಾಂಡ್ ಪ್ರವೇಶವಾದಾಗ, ಕೈಯಿಂದ ಚಿತ್ರಿಸಿದ ಭಿತ್ತಿಚಿತ್ರಗಳನ್ನು ಕೈಬಿಟ್ಟು, ಅತ್ಯಾಧುನಿಕ ಫೋಟೊಮೊಂಟೇಜ್^ಗಳನ್ನು ಬಳಸಿ, ಪಿಯರ್ಸ್ ಬ್ರಾಸ್ನನ್ ನಟಿಸಿದ ೦೦೭ ರ ಪುನರಾಗಮನವನ್ನು ಪ್ರವರ್ತಿಸಲಾಯಿತು. ಎಂಜಿಎಂನ ಮಾರ್ಕೆಟಿಂಗ್ ವಿಭಾಗದಿಂದ ಜಾನ್ ಪಾರ್ಕಿನ್ಸನ್ ಮತ್ತು ಗಾರ್ಡನ್ ಅರ್ನೆಲ್ ಅವರ ನಿರ್ದೇಶನದಲ್ಲಿ, ಜಾಂಡಿ ಸ್ಟೋಡಾರ್ಟ್, ಟೆರ್ರಿ ಒ'ನೀಲ್, ಕೀತ್ ಹ್ಯಾಮ್ಶೆರ್ ಮತ್ತು ಜಾರ್ಜ್ ವಿಥಿಯರ್ ಅವರ ಛಾಯಾಚಿತ್ರಗಳೊಂದಿಗೆ ರಾಂಡಿ ಬ್ರೌನ್ ಮತ್ತು ಅರ್ಲ್ ಕ್ಲಾಸ್ಕಿ ವಿನ್ಯಾಸಗೊಳಿಸಿದ ಚಿತ್ರಕ್ಕಾಗಿ ಹಲವು ಪೋಸ್ಟರ್‌ಗಳನ್ನು ತಯಾರಿಸಲಾಯಿತು. ಯುನೈಟೆಡ್ ಸ್ಟೇಟ್ಸ್ ನಲ್ಲಿ, ಮೊದಲೇ ಬಿಡುಗಡೆ ಮಾಡಲಾದ ಭಿತ್ತಿಚಿತ್ರದಲ್ಲಿ ಬಾಂಡ್ ನ ಕಣ್ಣುಗಳ ಮೇಲೆ ಚಿನ್ನದ ವರ್ಣದ ಛಾಯೆ ಹಾಕಿ, ಆತ ತನ್ನ ವಾಲ್ಥರ್ ಪಿಪಿಕೆ ಗನ್^ನ್ನು ನೋಡುಗನತ್ತ ಗುರಿ ಇಟ್ಟಿರುವಂತೆ ವಿನ್ಯಾಸ ಮಾಡಲಾಗಿತ್ತು. ಚಿತ್ರದ ಲಾಂಛನವನ್ನು ಪ್ರದರ್ಶಿಸಲಾಗಿರಲಿಲ್ಲ, " ಬದಲಿ ಇಲ್ಲ" ಎಂಬ ಅಡಿಶೀರ್ಷಿಕೆ ಮತ್ತು ಕೆಂಪು ಬಣ್ಣದಲ್ಲಿ ೦೦೭ ಗನ್ ಲಾಂಛನ ಮಾತ್ರವಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಭಿನ್ನವಾದ ಭಿತ್ತಿಚಿತ್ರವನ್ನು ಬಿಡುಗಡೆ ಮಾಡಲಾಯಿತು.ಅದರಲ್ಲಿ ಪಿಯರ್ಸ್ ಬ್ರಾನ್ಸನ್ ಕಪ್ಪು ಬಣ್ಣದ ಜಾಕೆಟ್ ಧರಿಸಿ, ತಮ್ಮ PPK ಗನ್ ಹಿಡಿದು, ೦೦೭ ಲಾಂಛನದ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಾರೆ.ಈ ಭಿತ್ತಿಚಿತ್ರವನ್ನು ವಿಭಿನ್ನ ಅಡಿಶೀರ್ಷಿಕೆ ನೀಡಿ ವಿನ್ಯಾಸಗೊಳಿಸಲಾಗಿತ್ತು: " ನಿಮಗೆ ಹೆಸರು ಗೊತ್ತು. ನಿಮಗೆ ಸಂಖ್ಯೆ ಗೊತ್ತು" ಈ ಸಮಯದಲ್ಲಿ, ಮ್ಯಾಟ್ರಿಕ್ಸ್‌ವೈಡ್ ಟೈಪ್‌ಫೇಸ್ ಬಳಸಿ ಈ ಚಿತ್ರದ ಲಾಂಛನವನ್ನು ಪರಿಚಯಿಸಲಾಯಿತು (ಈ ಲಾಂಛನದ ಹಿಂದಿನ ಆವೃತ್ತಿಗಳು ಮಾರ್ಪಡಿಸಿದ ಫ್ರಿಜ್‌ಕ್ವಾಡ್ರಾಟಾ ಮುದ್ರಣಕಲೆಯನ್ನು ಬಳಸಿದವು). ಚಲನಚಿತ್ರದ ಕಲಾವಿನ್ಯಾಸದಲ್ಲಿ ಎರಡು ರೂಪಗಳಿದ್ದವು.ಎರಡೂ ರೂಪಗಳಲ್ಲೂ ಕಪ್ಪು ಹಿನ್ನೆಲೆಯನ್ನು,ಸಾಹಸ ದೃಶ್ಯಗಳನ್ನು ಮತ್ತು ಮೂವರು ಪ್ರಧಾನ ವ್ಯಕ್ತಿಗಳಿರುವ ಸಂಯೋಜಿತ ಚಿತ್ರವನ್ನು (ಪಿಯರ್ಸ್ ಬ್ರಾಸ್ನನ್, ಇಜಾಬೆಲ್ಲಾ ಸ್ಕೋರುಪ್ಕೊ ಮತ್ತು ಫಾಮ್ಕೆ ಜಾನ್ಸೆನ್) ಉಳಿಸಿಕೊಳ್ಳಲಾಯಿತು. ಆದರೆ ಅಂತರಾಷ್ಟ್ರೀಯ ಭಿತ್ತಿಚಿತ್ರದಲ್ಲಿ ಜೇಮ್ಸ್ ಬಾಂಡ್ ಅನ್ನು ಟುಕ್ಸೆಡೊ ಧರಿಸಿದ್ದ ಚಿತ್ರವಿದ್ದು,ಯುಎಸ್ ಆವೃತ್ತಿಯಲ್ಲಿ ಗುಪ್ತಚರನ ಮುಖವು ನೆರಳಿನಿಂದ ಹೊರಹೊಮ್ಮುವಂತೆ ವಿನ್ಯಾಸಗೊಳಿಸಲಾಗಿತ್ತು. ಯುಎಸ್ ರೂಪಾಂತರವನ್ನು ಚಲನಚಿತ್ರದ ಧ್ವನಿಪಥದ ಮೇಲ್ಗವಚದ ಕಲಾಕೃತಿಗೆ ಮತ್ತು ೧೯೯೭ ರಲ್ಲಿ ಬಿಡುಗಡೆಯಾದ ನಿಂಟೆಂಡೊ 64 ವಿಡಿಯೋ ಗೇಮ್ ಪೆಟ್ಟಿಗೆಗೆ ಬಳಸಲಾಯಿತು. ಗೋಲ್ಡನ್ ಐ ಪೋಸ್ಟರ್ ಅಭಿಯಾನವನ್ನು ಕೈಗೆತ್ತಿಕೊಳ್ಳುವ ಕುರಿತು ೨೦೧೫ ರ ಸಂದರ್ಶನದಲ್ಲಿ, ಛಾಯಾಗ್ರಾಹಕ ಜಾನ್ ಸ್ಟೋಡಾರ್ಟ್ ಅವರನ್ನು ಸಂದರ್ಶಿಸಿದಾಗ,(ಈ ಹಿಂದೆ ಬ್ರಾಸ್ನನ್ ಜೊತೆ ಬ್ರಿಯೋನಿ ಫೋಟೋಶೂಟ್ಗಾಗಿ ಕೆಲಸ ಮಾಡುತ್ತಿದ್ದರು) ಅವರ ಏಕೈಕ ಗಮನ "ಬಾಂಡ್, ಹುಡುಗಿಯರು ಮತ್ತು ಗನ್" ಎಂದು ಹೇಳಿದರು

ಜುಲೈ ೧೯೯೫ ರಲ್ಲಿ, ಗೋಲ್ಡನ್ ಐ ಒಂದು ಟ್ರೇಲರನ್ನು ರೋಜರ್ ಡೊನಾಲ್ಡ್ಸನ್ ' ಸ್ಪೀಶಿಸ್ ಎಂಬ ಚಲನಚಿತ್ರದ ಪ್ರತಿಯೊಂದಿಗೆ ಸೇರ್ಪಡೆ ಮಾಡಲಾಯಿತು. ಮುಂದೆ ಬಾಂಡ್ ಏಜೆಂಟ್ 006 ಜೊತೆಗೆ ಮುಖಾಮುಖಿಯಾಗುವ ಟ್ರೇಲರನ್ನು ಬಿಡುಗಡೆ ಮಾಡಲಾಯಿತು. ಮುಂದೆ ೨೦೧೯ರಲ್ಲಿ ನಡೆದ ಸಂದರ್ಶನವೊಂದರಲ್ಲಿ ಈ ರೀತಿಯಾಗಿ ಸೇರ್ಪಡೆ ಮಾಡಿದ ಕಾರಣವನ್ನು ಕೇಳಿದಾಗ, ಈ ಹಿಂದೆ ಎಂಜಿಎಂ/ಯುಎ ಉಪಾಧ್ಯಕ್ಷರಾಗಿದ್ದ ಜೆಫೆ ಕ್ಲೀಮನ್ ಅವರು " ೦೦೬ ಮತ್ತು ೦೦೭ ಮುಖಾಮುಖಿಯು ಒಂದು ಮಾರಾಟದ ಅಂಶವಾಗಿದೆ" ಎಂದು ಉತ್ತರಿಸಿದ್ದರು.ಎರಡೂ ಟ್ರೇಲರ್^ಗಳನ್ನು ಜೋನಿಮ್ಜಿಕಿ ನಿರ್ದೇಶಿಸಿದ್ದಾರೆ.

ಸಂಗೀತ

ಚಲನಚಿತ್ರದ ಪ್ರಧಾನ ಹಾಡಾದ " ಗೋಲ್ಡನ್ ಐ " ಅನ್ನು ಬೊನೊ ಮತ್ತು ಎಡ್ಜ್ ಬರೆದಿದ್ದಾರೆ ಮತ್ತು ಇದನ್ನು ಟೀನಾ ಟರ್ನರ್ ಹಾಡಿದ್ದಾರೆ . ನಿರ್ಮಾಪಕರು ಬೊನೊ ಅಥವಾ ಎಡ್ಜ್‌ನೊಂದಿಗೆ ಸಹಕರಿಸದ ಕಾರಣ, ಹಿಂದಿನ ಜೇಮ್ಸ್ ಬಾಂಡ್ ಚಿತ್ರಗಳಲ್ಲಿರುವಂತೆ ಚಲನಚಿತ್ರದ ಸಂಗೀತ ಮತ್ತು ಪ್ರಧಾನ ಹಾಡಿನ ಮಾಧುರ್ಯವನ್ನು ಸೇರಿಸಲಿಲ್ಲ. ಸ್ವೀಡಿಷ್ ಗ್ರೂಪ್ ಏಸ್ ಆಫ್ ಬೇಸ್ ಕೂಡ ಪ್ರಸ್ತಾವಿತ ಥೀಮ್ ಸಾಂಗ್ ಅನ್ನು ಬರೆದಿದೆ, ಆದರೆ ಆರಿಸ್ಟಾ ರೆಕಾರ್ಡ್ಸ್ ಎಂಬ ಕಂಪನಿಯು ಚಿತ್ರವು ವಿಫಲವಾದರೆ ಉಂಟಾಗಬಹುದಾದ ಋಣಾತ್ಮಕ ಪರಿಣಾಮದ ಭೀತಿಯಿಂದ ಯೋಜನೆಯಿಂದ ಹೊರಬಂದಿತು. ನಂತರ ಹಾಡನ್ನು ಅವರ ಒಂದೇ ಹಾಡಾಗಿ " ದಿ ಜುವೆನೈಲ್ " ಎಂದು ಪುನಃ ಬರೆಯಲಾಯಿತು.

ಧ್ವನಿಪಥವನ್ನು ಎರಿಕ್ ಸೆರ್ರಾ ಸಂಯೋಜಿಸಿದ್ದಾರೆ ಮತ್ತು ಪ್ರದರ್ಶಿಸಿದರು. ಬಾಂಡ್ ಚಿತ್ರಗಳ ಸಂಗೀತ ಸಂಯೋಜಕ ಜಾನ್ ಬ್ಯಾರಿ ಅವರು ಬಾರ್ಬರಾ ಬ್ರೊಕೋಲಿಯವರು ಆಹ್ವಾನ ನೀಡಿದರೂ ಅದನ್ನು ತಿರಸ್ಕರಿಸಿದರು. ಸೆರ್ರಾ ಮಾಡಿದ ಸಂಗೀತ ಸಂಯೋಜನೆಯನ್ನು ಟೀಕಿಸಲಾಯಿತು: ರಿಚರ್ಡ್ ವಾನ್ ಬುಸಾಕ್, ಮೆಟ್ರೋದಲ್ಲಿ, "ರೋಲರ್ ಕೋಸ್ಟರ್‌ನಲ್ಲಿ ಸವಾರಿ ಮಾಡುವುದಕ್ಕಿಂತ ಲಿಫ್ಟ್‌ನಲ್ಲಿ ಸವಾರಿ ಮಾಡುವುದಕ್ಕೆ ಅದು ಸೂಕ್ತವಾಗಿದೆ" ಎಂದು ಬರೆದರು, ಮತ್ತು ಫಿಲ್ಮ್‌ಟ್ರಾಕ್ಸ್ ಹೇಳುವಂತೆ ಸೆರ್ರಾ ಗೋಲ್ಡನ್ ಐ ಯನ್ನು ಹಿಂದಿದ್ದ ಎತ್ತರಕ್ಕೊಯ್ಯಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ"

ಮಾರ್ಟಿನ್ ಕ್ಯಾಂಪ್‌ಬೆಲ್ ನಂತರ ಸಂಗೀತ ಕುರಿತಂತೆ ತನ್ನ ನಿರಾಶೆಯನ್ನು ವ್ಯಕ್ತಪಡಿಸುತ್ತಾರೆ., ಬಜೆಟ್ ನಿರ್ಬಂಧಗಳು ಮತ್ತು ಸೆರ್ರಾ ಜೊತೆ ಕೆಲಸ ಮಾಡುವ ಕಷ್ಟವನ್ನು ಉಲ್ಲೇಖಿಸಿದ ಕ್ಯಾಂಪ್‌ಬೆಲ್ ಸೆರ್ರಾ ಸಲ್ಲಿಸಿದ ಟ್ರ್ಯಾಕ್ ಅನ್ನು ತಾವು ತಿರಸ್ಕರಿಸಿದ ನಂತರ ಸೇಂಟ್ ಪೀಟರ್ಸ್‌ಬರ್ಗ್ ಟ್ಯಾಂಕ್ ಚೇಸ್ ಅನ್ನು ಮತ್ತೊಮ್ಮೆ ಸಂಯೋಜಿಸಲು ಕೇಳಿದಾಗ ಸಹಕರಿಸಲಿಲ್ಲ. ನಂತರ ಜಾನ್ ಆಲ್ಟ್ಮನ್ ಸರಣಿಗೆ ಸಂಗೀತವನ್ನು ಒದಗಿಸಿದರು, ಆದರೆ ಸೆರಾ ಅವರ ಮೂಲ ಟ್ರ್ಯಾಕ್ ಅನ್ನು ಈಗಲೂ "ಎ ಪ್ಲೆಸೆಂಟ್ ಡ್ರೈವ್ ಇನ್ ಸೇಂಟ್ ಪೀಟರ್ಸ್ಬರ್ಗ್" ಎಂದು ಧ್ವನಿಪಥದಲ್ಲಿ ಕಾಣಬಹುದು.

ಸೆರ್ರಾ ಗನ್ ಬ್ಯಾರೆಲ್ ದೃಶ್ಯದಲ್ಲಿ ಕೇಳಿಬರುವ "ಜೇಮ್ಸ್ ಬಾಂಡ್ ಹಿನ್ನೆಲೆ ಸಂಗೀತ" ಸೇರಿದಂತೆ ಹಲವಾರು ಸಿಂಥಸೈಜರ್ ಟ್ರ್ಯಾಕ್‌ಗಳನ್ನು ಸಂಯೋಜಿಸಿ ನುಡಿಸಿದರು., ಆಲ್ಟ್ಮನ್ ಮತ್ತು ಡೇವಿಡ್ ಆರ್ಚ್ ಹೆಚ್ಚು ಸಾಂಪ್ರದಾಯಿಕ ಸಿಂಫೋನಿಕ್ ಸಂಗೀತವನ್ನು ನೀಡಿದರು. ಚಲನಚಿತ್ರದ ಕೊನೆಯಲ್ಲಿ ಕೇಳಿಬರುವ ಎಕ್ಸ್ಪೀರಿಯೆನ್ಸ್ ಆಫ್ ಲವ್ ಎಂಬ ಹಾಡು, ಒಂದು ವರ್ಷದ ಹಿಂದೆ ಲುಕ್ ಬೆಸ್ಸನ್‌ರ ಲಿಯಾನ್ ಗಾಗಿ ಸೆರಾ ಮೂಲತಃ ಬರೆದ ಒಂದು ಸಣ್ಣ ಸಂಕೇತವನ್ನು ಆಧರಿಸಿದೆ.

ಗೋಲ್ಡನ್ ಐ ರೇಡಿಯೋ ಸಿಟಿ ಮ್ಯೂಸಿಕ್ ಹಾಲ್‌ನಲ್ಲಿ ೧೩ ನವೆಂಬರ್ ೧೯೯೫ರಂದು ಪ್ರಥಮ ಪ್ರದರ್ಶನಗೊಂಡಿತು ಮತ್ತು ೧೭ ನವೆಂಬರ್ ೧೯೯೫ ರಂದು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾರ್ವಜನಿಕರಿಗೆ ಬಿಡುಗಡೆಯಾಯಿತು. ಯುಕೆಯಲ್ಲಾದ ಪ್ರಥಮ ಪ್ರದರ್ಶನದಲ್ಲಿ, ಪ್ರಿನ್ಸ್ ಚಾರ್ಲ್ಸ್ ಹಾಜರಿದ್ದರು, ನಂತರ ನವೆಂಬರ್ ೨೧ ರಂದು ಒಡಿಯನ್ ಲೀಸೆಸ್ಟರ್ ಸ್ಕ್ವೇರ್ನಲ್ಲಿ, ಮೂರು ದಿನಗಳ ನಂತರ ಸಾರ್ವಜನಿಕರಿಗಾಗಿ ಬಿಡುಗಡೆಯಾಯಿತು. ಈ ಚಿತ್ರವು ಡಿಸೆಂಬರ್ ೫ ರಂದು ಜರ್ಮನಿಯಲ್ಲಿ ಪ್ರಥಮ ಪ್ರದರ್ಶನವಿತ್ತು.ಮ್ಯೂನಿಚ್‌ನ ಮ್ಯಾಥೆಸರ್-ಫಿಲ್ಮ್‌ಪಲಾಸ್ಟ್ (ಡಿ ) ನಲ್ಲಿ ನಡೆದ ಈ ಪ್ರಥಮ ಪ್ರದರ್ಶನಕ್ಕೆ ಖುದ್ದು ಬ್ರಾಸ್ನನ್ ಹಾಜರಿದ್ದರು. , ಡಿಸೆಂಬರ್ ೨೮ ರಂದು ಸಾರ್ವಜನಿಕರಿಗಾಗಿ ಚಲನಚಿತ್ರವನ್ನು ಬಿಡುಗಡೆ ಮಾಡಲಾಯಿತು. ಮತ್ತು ಡಿಸೆಂಬರ್ ೮ ರಂದು ನಡೆದ ಸ್ವೀಡಿಷ್ ಪ್ರಥಮ ಪ್ರದರ್ಶನದಲ್ಲಿ ಬ್ರಾಸ್ನನ್ ಮತ್ತು ಸ್ಕೋರುಪ್ಕೊ ಭಾಗವಹಿಸಿದರು , ಸ್ಟಾಕ್ಹೋಮ್ನ ರಿಗೊಲೆಟ್ಟೊ (sv ) ನಲ್ಲಿ, ಅದೇ ದಿನ ಸಾರ್ವಜನಿಕ ಬಿಡುಗಡೆಯನ್ನೂ ಮಾಡಲಾಯಿತು. ನಂತರದ ಸಂತೋಷಕೂಟವು ಸ್ಟಾಕ್‌ಹೋಮ್‌ನ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯಿತು . ಫ್ರೆಂಚ್ ಪರಮಾಣು ಪರೀಕ್ಷಾ ಕಾರ್ಯಕ್ರಮದ ವಿರುದ್ಧ ಗ್ರೀನ್ ಪೀಸ್ ನ ಪ್ರತಿಭಟನೆಯನ್ನು ಬೆಂಬಲಿಸಲು ಬ್ರಾಸ್ನನ್ ಫ್ರೆಂಚ್ ಪ್ರೀಮಿಯರ್ ಅನ್ನು ಬಹಿಷ್ಕರಿಸಿದರು.

ಚಿತ್ರವು ಅಮೇರಿಕಾ ಮತ್ತು ಕೆನಡಾ ದೇಶಗಳ ೨೬೬೭ ಚಿತ್ರಮಂದಿರಗಳಲ್ಲಿ ೨೬ ಮಿಲಿಯನ್ ಡಾಲರುಗಳಿಗೂ ಹೆಚ್ಚು ಹಣ ಗಳಿಸಿತು. ಯುನೈಟೆಡ್ ಕಿಂಗ್‌ಡಂನಲ್ಲಿ, ಇದು ದಾಖಲೆಯ ೫.೫ ಮಿಲಿಯನ್ ಗಳಿಸಿತು. ಇದು ರಜೆಯಿಲ್ಲದ ವಾರಾಂತ್ಯದಲ್ಲಿ, ೪೪೮ ಚಿತ್ರಮಂದಿರಗಳಲ್ಲಿ ಗಳಿಸಿದ ಮೊತ್ತವಾಗಿದ್ದು, ಗಳಿಕೆಯ ದೃಷ್ಟಿಯಿಂದ ಜುರಾಸಿಕ್ ಪಾರ್ಕ್ ಮತ್ತು ಬ್ಯಾಟ್ಮ್ಯಾನ್ ಫಾರೆವರ್ ಚಲನಚಿತ್ರಗಳ ನಂತರ ಹೆಚ್ಚು ಗಳಿಕೆಯ ಇತಿಹಾಸದಲ್ಲಿ ಮೂರನೇ ದೊಡ್ಡ ಗಳಿಕೆಯಾಗಿದೆ.. ಇದು ೧೯೯೫ ರಲ್ಲಿ ಪ್ರದರ್ಶಿತವಾದ ಎಲ್ಲಾ ಚಿತ್ರಗಳಲ್ಲಿ ನಾಲ್ಕನೇ ಅತಿ ಹೆಚ್ಚು ವಿಶ್ವವ್ಯಾಪಿ ಗಳಿಕೆಯನ್ನು ಹೊಂದಿತ್ತು, ಮತ್ತು ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡಲ್ಲಿ ಮೂನ್‌ರೇಕರ್ ನಂತರ ಅತ್ಯಂತ ಯಶಸ್ವಿ ಬಾಂಡ್ ಚಿತ್ರವಾಗಿದೆ.

ಗೋಲ್ಡನ್ ಐ ಹಿಂದಿನ ಯಾವುದೇ ಬಾಂಡ್ ಫಿಲ್ಮ್‌ಗಿಂತ ಹೆಚ್ಚಿನ ಆದಾಯವನ್ನು ಗಳಿಸಿದೆ. ಹಣದುಬ್ಬರಕ್ಕೆ ಸರಿಹೊಂದಿಸಿದಾಗ, ಇದು ಹಿಂದಿನ ಬಾಂಡ್ ಚಿತ್ರ ೧೯೮೯ ರ ಲೈಸೆನ್ಸ್ ಟು ಕಿಲ್‌ಗಿಂತ 83% ಹೆಚ್ಚು ವಿಶ್ವಾದ್ಯಂತ ಗಳಿಸಿತು.

ಎಂಪಿಎಎಯಿಂದ ಪಿಜಿ -13 ರೇಟಿಂಗ್ ಮತ್ತು ಬಿಬಿಎಫ್‌ಸಿಯಿಂದ 12 ರೇಟಿಂಗ್ ಗ್ಯಾರಂಟಿ ಪಡೆಯಲು ಚಲನಚಿತ್ರವನ್ನು ಸಂಕಲನ ಮಾಡಲಾಗಿದೆ. ಟ್ರೆವೆಲ್ಯಾನ್ ತಲೆಗೆ ಬಡಿದ ಗುಂಡಿನ ದೃಶ್ಯ,ಒನಾಟೊಪ್ ಸೆವೆರ್ನಾಯಾ ನಿಲ್ದಾಣದಲ್ಲಿ ಕೆಲಸಗಾರರ ಮೇಲೆ ಗುಂಡು ಹಾರಿಸುವ ದೃಶ್ಯ ಅಡ್ಮಿರಲ್ ಸಾವಿನ ದೃಶ್ಯದಲ್ಲಿ ಕಾಣುವ ಹಿಂಸಾತ್ಮಕ ದೃಶ್ಯಗಳು, ಒನಾಟೊಪ್ ಸಾವಿನ ಹೆಚ್ಚುವರಿ ದೃಶ್ಯ, ಬಾಂಡ್ ಅವಳಿಗೆ ಕಾರಿನಲ್ಲಿ ಹೊಡೆಯುವುದು ಮುಂತಾದ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಯಿತು.. ೨೦೦೬ರಲ್ಲಿ ಚಲನಚಿತ್ರವನ್ನು ಜೇಮ್ಸ್ ಬಾಂಡ್ ಅಂತಿಮ ಡಿವಿಡಿಗಾಗಿ ಮರುರೂಪಿಸಿ, ಮರುಸಂಪಾದಿಸಲಾಯಿತು, ಇದರಲ್ಲಿ ಬಿಬಿಎಫ್‌ಸಿಗಾಗಿ ಮಾಡಿದ್ದ ಕಡಿತವನ್ನು ಮರುಸ್ಥಾಪಿಸಲಾಯಿತು, ಇದರಿಂದಾಗಿ ರೇಟಿಂಗ್ ಅನ್ನು 15 ಕ್ಕೆ ಬದಲಾಯಿಸಲಾಯಿತು. ಆದಾಗ್ಯೂ, ಮೂಲ ಎಂಪಿಎಎ ಸಂಪಾದನೆಗಳು ಇನ್ನೂ ಉಳಿದಿವೆ.

ವಿಮರ್ಶೆಗಳು

ಚಿತ್ರದ ವಿಮರ್ಶೆಗಳು ಹೆಚ್ಚಾಗಿ ಸಕಾರಾತ್ಮಕವಾಗಿದ್ದವು. ಚಲನಚಿತ್ರ ವಿಮರ್ಶೆ ಸಂಗ್ರಾಹಕ ವೆಬ್‌ಸೈಟ್ ರಾಟನ್ ಟೊಮ್ಯಾಟೋಸ್ ಇದಕ್ಕೆ ೭೯% ಅನುಮೋದನೆ ರೇಟಿಂಗ್‌ನಲ್ಲಿ ನೀಡಿದೆ.. ಅದರ ಸಹಮತವು ಹೀಗೆ ಹೇಳುತ್ತದೆ: "ಮೊದಲ ಮತ್ತು ಅತ್ಯುತ್ತಮ ಪಿಯರ್ಸ್ ಬ್ರಾನ್ಸನ್ ಬಾಂಡ್ ಚಿತ್ರ, ಗೋಲ್ಡನ್ ಐ ಸರಣಿಯನ್ನು ಹೆಚ್ಚು ಆಧುನಿಕ ಸನ್ನಿವೇಶಕ್ಕೆ ತರುತ್ತದೆ, ಮತ್ತು ಫಲಿತಾಂಶದಲ್ಲಿ 007 ಪ್ರವೇಶವು ಅತ್ಯಾಧುನಿಕ ತಂತ್ರಜ್ಞಾನವುಳ್ಳದ್ದೂ, ಸಾಹಸಮಯವೂ, ನಗರ ಮಾದರಿಯದೂ ಆಗಿದೆ." ಇದೇ ರೀತಿಯ ಇನ್ನೊಂದು ವೆಬ್ಸೈಟ್, ಮೆಟಾಕ್ರಿಟಿಕ್, ಈ ಚಲನಚಿತ್ರಕ್ಕೆ ೬೫% ಅನುಮೋದನೆಯ ರೇಟಿಂಗ್ ನೀಡಿದೆ. . ಸಿನಿಮಾಸ್ಕೋರ್ ನಲ್ಲಿ ಮತದಾನ ಮಾಡಿದ ಪ್ರೇಕ್ಷಕರು ಚಿತ್ರಕ್ಕೆ A+ ನಿಂದ F ಸ್ಕೇಲ್ ನಲ್ಲಿ ಸರಾಸರಿ "A-" ದರ್ಜೆಯನ್ನು ನೀಡಿದ್ದಾರೆ.

ಚಿಕಾಗೊ ಸನ್-ಟೈಮ್ಸ್ ನಲ್ಲಿ, ರೋಜರ್ ಎಬರ್ಟ್ ಈ ಚಿತ್ರಕ್ಕೆ 4 ರಲ್ಲಿ 3 ನಕ್ಷತ್ರಗಳನ್ನು ನೀಡಿದರು, ಮತ್ತು ಬ್ರಾಸ್ನನ್ ಬಾಂಡ್ " ಹಿಂದಿನ ಬಾಂಡ್^ಗಿಂತ ಹೆಚ್ಚು ಸೂಕ್ಷ್ಮ, ಹೆಚ್ಚು ದುರ್ಬಲ, ಹೆಚ್ಚು ಮಾನಸಿಕವಾಗಿ ಸಂಪೂರ್ಣ" ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಬಾಂಡ್ ಚಲನಚಿತ್ರಗಳಿಗೆ ಹೋಲಿಸಿದಲ್ಲಿ, ಬಾಂಡ್ ತನ್ನ ಮುಗ್ಧತೆಯನ್ನು ಕಳೆದುಕೊಂಡಿದ್ದಾನೆ ಎಂದಿದ್ದಾರೆ.. ಜೇಮ್ಸ್ ಬೆರಾರ್ಡಿನೆಲ್ಲಿ ಬ್ರಾಸ್ನಾನ್ ರನ್ನು "ತನ್ನ ಹಿಂದಿನವರಿಗಿಂತ ಸುಧಾರಿತ" ಎಂದು ವಿವರಿಸಿದ್ದು, "ತನ್ನ ಸಹಜ ಆಕರ್ಷಣೆಯೊಂದಿಗೆ ಬುದ್ಧಿವಂತಿಕೆಯ ಚತುರತೆ" ಯನ್ನು ಹೊಂದಿದ್ದಾನೆ, ಆದರೆ " ಗೋಲ್ಡ್‌ ನ್ ಐ ನ ಕಾಲುಭಾಗವು ವೇಗವನ್ನು ಕೊಲ್ಲುತ್ತದೆ" ಎಂದಿದ್ದಾರೆ.

ಬಾಂಡ್‌ ಬಗ್ಗೆ " ಲಿಂಗತಾರತಮ್ಯವಾದಿ ಮತ್ತು ಮಹಿಳೆಯರನ್ನು ಕುರಿತಂತೆ ಪೂರ್ವಾಗ್ರಹಪೀಡಿತಡೈನೋಸಾರ್" ಎಂಬ M ನ ಮೌಲ್ಯಮಾಪನವನ್ನು ಹಲವಾರು ವಿಮರ್ಶಕರು ಶ್ಲಾಘಿಸಿದರು ಈ ಸರಣಿಯಲ್ಲಿ "ತಾಜಾ ಸೃಜನಶೀಲ ಮತ್ತು ವಾಣಿಜ್ಯ ಜೀವನದ ಉಸಿರು ಕಂಡುಬರುತ್ತದೆ" ಎಂದು ವೆರೈಟಿಯಲ್ಲಿ ಟಾಡ್ ಮೆಕಾರ್ಥಿ ಹೇಳಿದ್ದಾರೆ. ಡಿವಿಡಿ ಟೌನ್‌ನ ಜಾನ್ ಪುಸಿಯೊ ಇದು "ಬಾಂಡ್ ಸರಣಿಯಲ್ಲಿ ಕಣ್ಣಿಗೆ ಮತ್ತು ಕಿವಿಗೆ ಆಹ್ಲಾದಕರ, ಸಾಹಸಮಯ ಪ್ರವೇಶ" ಎಂದು ಹೇಳಿದರು ಮತ್ತು ಈ ಚಿತ್ರವು ಬಾಂಡ್‌ಗೆ "ಸ್ವಲ್ಪ ಮಾನವೀಯತೆಯನ್ನು ನೀಡಿದೆ" ಎಂದು ಹೇಳಿದರು. ಎಂಪೈರ್^ನ ಇಯಾನ್ ನಾಥನ್ ಇದು "ಆ ಅದಮ್ಯ ಬ್ರಿಟಿಷ್ ಚೈತನ್ಯವನ್ನು ಪುನರುಜ್ಜೀವನಗೊಳಿಸುತ್ತದೆ" ಮತ್ತು ಡೈ ಹಾರ್ಡ್ ಚಲನಚಿತ್ರಗಳು "007 ರ ಸಮೀಪಕ್ಕೂ ಬರುವುದಿಲ್ಲ" ಎಂದು ಹೇಳಿದರು. ದಿ ಸಂಡೇ ಟೈಮ್ಸ್‌ನ ಟಾಮ್ ಸಾನ್ ಇದನ್ನು ದಿ ಸ್ಪೈ ಹೂ ಲವ್ಡ್ ಮಿ ನಂತರದ ಅತ್ಯುತ್ತಮ ಬಾಂಡ್ ಚಿತ್ರವೆಂದು ಪರಿಗಣಿಸಿದ್ದಾರೆ. ಸೈಟ್ & ಸೌಂಡ್‌ನ ಜೋಸ್ ಅರೊಯೊ ಈ ಸರಣಿಯನ್ನು ಆಧುನೀಕರಿಸಿದ್ದೇ ಅದರ ಅತ್ಯುತ್ತಮ ಯಶಸ್ಸಿಗೆ ಕಾರಣವೆಂದು ಪರಿಗಣಿಸಿದ್ದಾರೆ.

ಬಾಂಡ್-ಸಂಬಂಧಿತ ಪಟ್ಟಿಗಳಲ್ಲಿ ಈ ಚಿತ್ರವು ಉನ್ನತ ಸ್ಥಾನದಲ್ಲಿದೆ. ಐಜಿಎನ್ ಇದನ್ನು ಐದನೇ ಅತ್ಯುತ್ತಮ ಚಲನಚಿತ್ರವಾಗಿ ಆಯ್ಕೆ ಮಾಡಿದೆ, ಎಂಟರ್‌ಟೈನ್‌ಮೆಂಟ್ ವೀಕ್ಲಿ ಎಂಟನೇ ಸ್ಥಾನ ನೀಡಿದೆ, ಮತ್ತು ಎಂಎಸ್‌ಎನ್‌ನ ನಾರ್ಮನ್ ವಿಲ್ನರ್ ಒಂಬತ್ತನೇ ಸ್ಥಾನ ನೀಡಿದ್ದಾರೆ. EW ಕ್ಸೇನಿಯಾ Onatopp ಆರನೇ ಅವಿಸ್ಮರಣೀಯ ಬಾಂಡ್ ಹುಡುಗಿ, ಎಂದಿದ್ದಾರೆ. ಐಜಿಎನ್ ಇಂಥದೇ ಪಟ್ಟಿಯಲ್ಲಿ ನಟಾಲಿಯಾಳಿಗೆ ಏಳನೇ ಸ್ಥಾನವನ್ನು ನೀಡಿದ್ದಾರೆ.

ಹೀಗಿದ್ದರೂ ಚಲನಚಿತ್ರವು ಹಲವಾರು ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಟೈಂ ಪತ್ರಿಕೆಯ ರಿಚರ್ಡ್ ಸ್ಕಿಕಲ್ "ಶತಮಾನದ ಮೂರನೇ ಒಂದು ಭಾಗ ಒರಟು ಬಳಕೆಯ" ನಂತರ, ಬಾಂಡ್ ನ ಸಮಾವೇಶಗಳು "ನಢುಗುವ ಮೊಣಕಾಲುಗಳ ಮೇಲೆ" ಉಳಿದುಕೊಂಡಿವೆ,ಎಂದು ಬರೆದಿದ್ದಾರೆ. ಎಂಟರ್‌ಟೈನ್‌ಮೆಂಟ್ ವೀಕ್ಲಿಯಲ್ಲಿ, ಓವನ್ ಗ್ಲೈಬರ್ಮನ್ ಈ ಸರಣಿಯು "ನಿಶ್ಯಕ್ತಿಯ ಅಂತಿಮ ಸ್ಥಿತಿಯನ್ನು ಪ್ರವೇಶಿಸಿದೆ" ಎಂದು ಭಾವಿಸಿದರು. " ಡ್ರಾಗನ್ ಅಂಟುಲೊವ್ ಚಿತ್ರದ ದೃಶ್ಯಗಳಿಗೆ ಒಂದು ಊಹಿಸಬಹುದಾದ ಸರಣಿ, ಇತ್ತು ಎಂದು ಹೇಳಿದರು ಮತ್ತು ಲಾಸ್ ಎಂಜೆಲಿಸ್ ಟೈಮ್ಸ್^ನ ಕೆನೆತ್ ಟ್ಯುರನ್ ಇದು "ಮಧ್ಯವಯಸ್ಕ ಅಸ್ತಿತ್ವ ರೂಪವಾಗಿದ್ದು,ಏನಾದರೂ ಆಗಲಿ,ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು ಎನ್ನುವಂತಿದೆ" ಎಂದರು.. ಪ್ರೀಮಿಯರ್‌ನ ಡೇವಿಡ್ ಐಮರ್ "ಸಾಮಾನ್ಯವಾಗಿ ಕಂಡುಬರುತ್ತಿದ್ದ ಹಾಸ್ಯಕ್ಕೆ ಕೊರತೆಯಿದೆ" ಮತ್ತು "ಗೋಲ್ಡನ್ ಐ ಯಾವುದೇ ದೃಷ್ಟಿಯಿಂದಲೂ ಸಾಂಪ್ರದಾಯಿಕ ಬಾಂಡ್ ಅಲ್ಲ" ಎಂದು ಬರೆದಿದ್ದಾರೆ. ಮೆಡೆಲಿನ್ ವಿಲಿಯಮ್ಸ್ "ನಿಮ್ಮ ಮನಸ್ಸನ್ನು ಕಥಾವಸ್ತುವಿನಿಂದ ದೂರೀಕರಿಸಲು ಸಾಕಷ್ಟು ಸ್ಟಂಟ್‌ಗಳು ಮತ್ತು ಸ್ಫೋಟಗಳು ಇವೆ" ಎಂದು ಹೇಳಿದರು.

ಪೂರ್ವಾಪರ ವಿಮರ್ಶೆಗಳು

ಪಿಯರ್ಸ್ ಬ್ರಾಸ್ನನ್^ನ ಎಂದೇ ಹೇಳಲಾದ ಗೋಲ್ಡನ್ ಐ ಅತ್ಯುತ್ತಮ ಬಾಂಡ್ ಚಲನಚಿತ್ರವೆಂದು ಅಂಗೀಕರಿಸಲ್ಪಟ್ಟಿದೆ, ಅದರ ಬಿಡುಗಡೆಯ ನಂತರ ಅದರ ಖ್ಯಾತಿಯಲ್ಲಿ ಸುಧಾರಣೆ ಕಂಡಿದೆ. ಚಲನಚಿತ್ರವು ಬಾಂಡ್ ಅಭಿಮಾನಿಗಳಲ್ಲಿ ವಿಶೇಷವಾಗಿ ಗೋಲ್ಡನ್ ಐ 007 (1997) ವಿಡಿಯೋ ಗೇಮ್‌ನೊಂದಿಗೆ ಬೆಳೆದವರಲ್ಲಿ ಹೆಚ್ಚಿನ ಸಂಖ್ಯೆಯ ಮತ್ತು ಉತ್ಸಾಹಭರಿತ ಅನುಯಾಯಿಗಳನ್ನು ಹೊಂದಿದೆ. ೨೨೦೦ ವಿದ್ವಾಂಸರು ಮತ್ತು ಬಾಂಡ್ ಸೂಪರ್‌ಫ್ಯಾನ್ಸ್‌ಗಳನ್ನು ಒಳಗೊಂಡ ೨೦೨೧ ರ ಯಾಹೂ ಸಮೀಕ್ಷೆಯಲ್ಲಿ, ಗೋಲ್ಡನ್ ಐ ಅತ್ಯುತ್ತಮ ಬಾಂಡ್ ಚಿತ್ರವಾಗಿ ಆಯ್ಕೆಯಾಯಿತು, ನಂತರದ ಸ್ಥಾನಗಳನ್ನು ಡೇನಿಯಲ್ ಕ್ರೇಗ್‌ನ ಕ್ಯಾಸಿನೊ ರಾಯಲ್ ಮತ್ತು ಜಾರ್ಜ್ ಲಾಜೆನ್‌ಬಿಯ ಆನ್ ಹರ್ ಮೆಜೆಸ್ಟಿ ಸೀಕ್ರೆಟ್ ಸರ್ವೀಸ್ ಪಡೆದವು. 2019 ರಲ್ಲಿ, ಈ ಚಲನಚಿತ್ರ ಮತ್ತು ಅದರ ಅನೇಕ ವಿಡಿಯೋ ಗೇಮ್ ಆವೃತ್ತಿಗಳಾದ ದಿ ವರ್ಲ್ಡ್ ಆಫ್ ಗೋಲ್ಡನ್ ಐ ಬಗ್ಗೆ ಮೆಚ್ಚುಗೆಯ ಪುಸ್ತಕವನ್ನು ಲೇಖಕ ನಿಕೋಲಸ್ ಸುಜ್ಜಿಕ್ ಪ್ರಕಟಿಸಿದ್ದಾರೆ. ಅದರ ಅಧಿಕೃತ ಸಾರಾಂಶ ಪುಟದ ಪ್ರಕಾರ, ಈ ಪ್ರಕಟಣೆಯು "ಇದುವರೆಗೆ ಬಿಡುಗಡೆಯಾದ ಅತ್ಯುತ್ತಮ ಬಾಂಡ್ ಚಿತ್ರಗಳಲ್ಲಿ ಒಂದು ಸಮಗ್ರ ವಿಶ್ಲೇಷಣೆ ನೀಡುತ್ತದೆ ಮತ್ತು ಹೊಸ ಪೀಳಿಗೆಯ ಬಾಂಡ್ ಅಭಿಮಾನಿಗಳನ್ನು ಹುಟ್ಟುಹಾಕಿದ ಜನಪ್ರಿಯ ಸಂಸ್ಕೃತಿಯ ಪ್ರಭಾವ, ೧೯೬೦ರ ದಶಕದಿಂದ ಬಾಂಡ್ ಉನ್ಮಾದದ ಅಲೆಗಳನ್ನು ನೆನಪಿಸುತ್ತದೆ " ಎಂದಿದೆ. ಚಲನಚಿತ್ರದ ಹಿಂದಿನ ಸೃಜನಶೀಲ ಪ್ರಕ್ರಿಯೆಯನ್ನು ನೋಡಿದಾಗ ಮತ್ತು ಶೀತಲ ಸಮರದ ನಂತರದ ಸಮಯದಲ್ಲಿ ಅದರ ಪ್ರಸ್ತುತತೆಯನ್ನು" ಕಡೆಗಣಿಸಲಾದ ಕ್ಲಾಸಿಕ್ "ಎಂದು ಪರಿಗಣಿಸಲಾಗಿದೆ.

ಪ್ರಶಸ್ತಿಗಳು

೧೯೯೬ರಲ್ಲಿ ರಲ್ಲಿ ಈ ಚಲನಚಿತ್ರವು ಎರಡು BAFTA ಗಳಿಗೆ ನಾಮನಿರ್ದೇಶನಗೊಂಡಿತು - ಅತ್ಯುತ್ತಮ ಸೌಂಡ್ ಮತ್ತು ವಿಶೇಷ ವಿಷುಯಲ್ ಎಫೆಕ್ಟ್‌ಗಳು - ಆದರೆ ಕ್ರಮವಾಗಿ ಬ್ರೇವ್‌ಹಾರ್ಟ್ ಮತ್ತು ಅಪೊಲೊ 13 ಕ್ಕೆ ಈ ಪ್ರಶಸ್ತಿ ಸಂದಿತು. ಎರಿಕ್ ಸೆರ್ರಾ ಸೌಂಡ್‌ಟ್ರಾಕ್‌ಗಾಗಿ BMI ಫಿಲ್ಮ್ ಪ್ರಶಸ್ತಿಯನ್ನು ಪಡೆದರು, ಮತ್ತು ಇದು 22 ನೇ ಸ್ಯಾಟರ್ನ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಾಹಸ, ಸಾಹಸ ಅಥವಾ ಥ್ರಿಲ್ಲರ್ ಚಲನಚಿತ್ರ ಮತ್ತು ನಟ ಮತ್ತು 1996 MTV ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಾಹಸದೃಶ್ಯಗಳಿಗಾಗಿ ನಾಮನಿರ್ದೇಶನಗಳನ್ನು ಗಳಿಸಿತು.

ಇತರ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವಿಕೆ

ಈ ಚಿತ್ರವು ಕಾದಂಬರಿಕಾರ ಜಾನ್ ಗಾರ್ಡನರ್ ಅವರ ಕಾದಂಬರಿಗೆ ಅಳವಡಿಸಿದ ಎರಡನೇ ಮತ್ತು ಅಂತಿಮ ಬಾಂಡ್ ಚಿತ್ರವಾಗಿದೆ. ಪುಸ್ತಕವು ಅದರ ಕಥಾಹಂದರವನ್ನು ನಿಕಟವಾಗಿ ಅನುಸರಿಸುತ್ತದೆ, ಆದರೆ ಗಾರ್ಡನರ್ ಆರಂಭಿಕ ಬಂಗೀ ಜಂಪ್‌ ದೃಶ್ಯಕ್ಕೂ ಮುಂನ್ನ ಹಿಂಸಾತ್ಮಕ ದೃಶ್ಯವೊಂದನ್ನು ಸೇರಿಸಿದರು, ಇದರಲ್ಲಿ ಬಾಂಡ್ ರಷ್ಯಾದ ಕಾವಲುಗಾರರ ಗುಂಪನ್ನು ಕೊಲ್ಲುತ್ತಾನೆ, ಈ ಬದಲಾವಣೆಯನ್ನು ವಿಡಿಯೋ ಗೇಮ್ ಗೋಲ್ಡನ್ ಐ 007 ನಲ್ಲಿ ಉಳಿಸಿಕೊಳ್ಳಬಹುದಾಗಿತ್ತು ಮತ್ತು ವಿಸ್ತರಿಸಬಹುದಾಗಿತ್ತು.

1995 ರ ಕೊನೆಯಲ್ಲಿ, ಟಾಪ್ಸ್ ಕಾಮಿಕ್ಸ್ ಈ ಚಲನಚಿತ್ರದ ಮೂರು ಸಂಚಿಕೆಯ ಕಾಮಿಕ್ ಪುಸ್ತಕ ರೂಪಾಂತರವನ್ನು ಪ್ರಕಟಿಸಲು ಆರಂಭಿಸಿತು. ಕಥೆಯನ್ನು ಡಾನ್ ಮೆಕ್‌ಗ್ರೆಗರ್ ಅವರು ರಿಕ್ ಮಾಗ್ಯಾರ್ ಅವರ ಕಲೆಯೊಂದಿಗೆ ಅಳವಡಿಸಿಕೊಂಡರು. ಮೊದಲ ಸಂಚಿಕೆಯು ಜನವರಿ 1996 ರ ಕವರ್ ದಿನಾಂಕವನ್ನು ಹೊಂದಿತ್ತು. ಅಜ್ಞಾತ ಕಾರಣಗಳಿಗಾಗಿ, ಮೊದಲ ಸಂಚಿಕೆ ಪ್ರಕಟವಾದ ನಂತರ ಟಾಪ್ಸ್ ಸಂಪೂರ್ಣ ರೂಪಾಂತರವನ್ನು ರದ್ದುಗೊಳಿಸಿತು ಮತ್ತು ಇಲ್ಲಿಯವರೆಗೆ ರೂಪಾಂತರವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಲಾಗಿಲ್ಲ.

1995 ರಲ್ಲಿ, ಟೈಗರ್ ಎಲೆಕ್ಟ್ರಾನಿಕ್ಸ್ ಎರಡು ವಿಭಿನ್ನ ರೂಪಾಂತರಗಳಲ್ಲಿ ಮೂರನೇ ವ್ಯಕ್ತಿಯ ಶೂಟರ್ ಹ್ಯಾಂಡ್‌ಹೆಲ್ಡ್ ಎಲೆಕ್ಟ್ರಾನಿಕ್ ಆಟವನ್ನು ಬಿಡುಗಡೆ ಮಾಡಿತು: ಗೇಮ್‌ಪ್ಯಾಡ್ ರೂಪಾಂತರ, ಲಿಕ್ವಿಡ್-ಕ್ರಿಸ್ಟಲ್ ಡಿಸ್‌ಪ್ಲೇ (ಎಲ್‌ಸಿಡಿ), ಅಡ್ಡ-ಆಕಾರದ ಪುಶ್ ಬಟನ್ ಮತ್ತು ಎರಡು ಲೈನ್-ಆಕಾರದ ಮತ್ತು ನಾಲ್ಕು ಸೆಟ್ಟಿಂಗ್ ಬಟನ್‌ಗಳು ಪರದೆಯ ಕೆಳಗಿನ ಭಾಗದಲ್ಲಿ, ಮತ್ತು "ಹಿಡಿತದ ಆಟದ" ನಮೂನೆ, ಪಿಸ್ತೂಲ್ ಹಿಡಿತದ ಆಕಾರದಲ್ಲಿ, ಚಿತ್ರೀಕರಣಕ್ಕೆ ಬಳಸುವ ಟ್ರಿಗ್ಗರ್ ಮತ್ತು ಹಿಂಭಾಗದಲ್ಲಿ ಇತರ ಗುಂಡಿಗಳು. ಎರಡು ಆವೃತ್ತಿಗಳು ಸ್ವಲ್ಪ ಭಿನ್ನವಾಗಿದ್ದವು.

ಈ ಚಲನಚಿತ್ರವು ಗೋಲ್ಡನ್ ಐ 007, ಎಂಬ ವಿಡಿಯೋ ಆಟದ ಆಧಾರವಾಗಿತ್ತು. ನಿಂಟೆಂಡೊ 64 ಕ್ಕಾಗಿ ರೇರ್ ಇದನ್ನು ಅಭಿವೃದ್ಧಿಪಡಿಸಿತ್ತು. (ಆಗ ಇದನ್ನುrareware ಎಂದು ಕರೆಯಲಾಗುತ್ತಿತ್ತು) ಮತ್ತುಈ ಆಟವನ್ನು ನಿಂಟೆಂಡೊ ಪ್ರಕಟಿಸಿತ್ತು. ಇದನ್ನು ವಿಮರ್ಶಕರು ಪ್ರಶಂಸಿಸಿದರು ಮತ್ತು ಜನವರಿ ೨೦೦೦ ರಲ್ಲಿ, ಬ್ರಿಟಿಷ್ ವಿಡಿಯೋ ಗೇಮ್ ನಿಯತಕಾಲಿಕ ಕಂಪ್ಯೂಟರ್ ಮತ್ತು ವಿಡಿಯೋ ಗೇಮ್ಸ್‌ನ ಓದುಗರು ಇದನ್ನು "ನೂರು ಶ್ರೇಷ್ಠ ವಿಡಿಯೋ ಗೇಮ್‌ಗಳ" ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಪಟ್ಟಿ ಮಾಡಿದರು. ೨೦೦೩ ರಲ್ಲಿಎಡ್ಜ್ ಪತ್ರಿಕೆಯ  '​ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ' ಈ ಆಟವನ್ನು ಸಾರ್ವಕಾಲಿಕ ಹತ್ತು ಆಟಗಳಲ್ಲಿ ಒಂದಾಗಿ ಸೇರಿಸಲಾಯಿತು . ಇದು ಗೋಲ್ಡನ್ಚ ಐ ಚಲನಚಿತ್ರವನ್ನು ಆಧರಿಸಿದೆ, ಆದರೆ ಹಲವು ಕಾರ್ಯಾಚರಣೆಗಳನ್ನು ವಿಸ್ತರಿಸಲಾಗಿದೆ ಅಥವಾ ಮಾರ್ಪಡಿಸಲಾಗಿದೆ.

ವರ್ಚುವಲ್ ಬಾಯ್ ಕನ್ಸೋಲ್‌ಗಾಗಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಆಟವನ್ನು ರೇಸಿಂಗ್ ಆಟವಾಗಿ ಮಾರ್ಪಡಿಸಲಾಯಿತು. ಆದರೆ, ಬಿಡುಗಡೆಗೂ ಮುನ್ನ ಅದನ್ನು ರದ್ದುಮಾಡಲಾಯಿತು. ೨೦೦೪ ರಲ್ಲಿ, ಎಲೆಕ್ಟ್ರಾನಿಕ್ ಆರ್ಟ್ಸ್ ಗೋಲ್ಡನ್ ಐ: ರೋಗ್ ಏಜೆಂಟ್ ಅನ್ನು ಬಿಡುಗಡೆ ಮಾಡಿತು, ಇದು ಜೇಮ್ಸ್ ಬಾಂಡ್ ಸರಣಿಯ ಮೊದಲ ಆಟವಾಗಿದ್ದು, ಇದರಲ್ಲಿ ಆಟಗಾರ ಬಾಂಡ್ ಪಾತ್ರವನ್ನು ವಹಿಸುವುದಿಲ್ಲ. ಬದಲಾಗಿ, ನಾಯಕ ಮಹತ್ವಾಕಾಂಕ್ಷೆಯ ಡಬಲ್ -0 ಏಜೆಂಟ್ ಜೊನಾಥನ್ ಹಂಟರ್, ಆತನ ಸಂಕೇತನಾಮ "ಗೋಲ್ಡನ್ ಐ" ಎಂದಾಗಿರುತ್ತದೆ. , ಈತನನ್ನು ಬಾಂಡ್ ಬ್ರಹ್ಮಾಂಡದ ಖಳನಾಯಕ ಆರಿಕ್ ಗೋಲ್ಡ್ ಫಿಂಗರ್ ನಿಂದ ನೇಮಕ ಮಾಡಲಾಗಿರುತ್ತದೆ. ಕ್ಸೆನಿಯಾ ಒನಾಟೊಪ್ ಪ್ರವೇಶವನ್ನು ಹೊರತುಪಡಿಸಿ, ಇದು ಚಿತ್ರಕ್ಕೆ ಸಂಬಂಧಿಸಿಲ್ಲ, ಮತ್ತು ಸಾಧಾರಣ ಎಂಬ ವಿಮರ್ಶೆಗಳಿಗೆ ಪಾತ್ರವಾಯಿತು. ರೇರ್ ಆಟದ ಯಶಸ್ಸಿನ ಮೇಲೆ ಸವಾರಿ ಮಾಡುವ ಪ್ರಯತ್ನವಾಗಿ "ಗೋಲ್ಡನ್ ಐ" ಎಂಬ ಹೆಸರನ್ನು ಬಳಸಿದ್ದಕ್ಕಾಗಿ ಎರಿಕ್ ಕ್ವಾಲ್ಸ್ ಸೇರಿದಂತೆ ಹಲವಾರು ವಿಮರ್ಶಕರು ಇದನ್ನು ಟೀಕಿಸಿದರು.. ೨೦೧೦ ರಲ್ಲಿ, ಸ್ವತಂತ್ರ ಅಭಿವೃದ್ಧಿ ತಂಡವೊಂದು ಗೋಲ್ಡನ್ ಐ: ಸೋರ್ಸ್ ಅನ್ನು ಬಿಡುಗಡೆ ಮಾಡಿತು, ಹಲವಾರು ಆಟಗಾರರು ಮಾತ್ರ ಈ ಆಟವನ್ನು ಆಡಬಹುದಾಗಿತ್ತು.ವಾಲ್ವ್‌ನ ಮೂಲ ಎಂಜಿನ್ ಬಳಸಿ ಅಭಿವೃದ್ಧಿಪಡಿಸಲಾಗಿತ್ತು .

ನಿಂಟೆಂಡೊ ೧೫ ಜೂನ್ ೨೦೧೦ ರಂದು ತಮ್ಮ E3 ಪತ್ರಿಕಾಗೋಷ್ಠಿಯಲ್ಲಿ ಮೂಲ ಗೋಲ್ಡನ್ ಐ 007 ರಿಮೇಕ್ ಘೋಷಿಸಿತು. ಇದು ಮೂಲ ಸಿನಿಮಾದ ಕಥೆಯನ್ನು ಆಧುನೀಕರಿಸಿದ ಪುನರ್ ನಿರೂಪಣೆಯಾಗಿದ್ದು, ಡೇನಿಯಲ್ ಕ್ರೇಗ್ ಬಾಂಡ್ ಪಾತ್ರವನ್ನು ನಿರ್ವಹಿಸಿದ್ದಾರೆ. ಬ್ರೂಸ್ ಫೀರ್‌ಸ್ಟೈನ್ ಸ್ಕ್ರಿಪ್ಟ್‌ನ ಆಧುನೀಕೃತ ಆವೃತ್ತಿಯನ್ನು ಬರೆಯಲು ಬಂದರು. ನಿಕೋಲ್ ಶೆರ್ಜಿಂಜರ್ ಥೀಂ ಸಾಂಗ್ ಬರೆದರು. ಇದನ್ನು ಯೂರೋಕಾಮ್ ಅಭಿವೃದ್ಧಿಪಡಿಸಿದೆ ಮತ್ತು ವೈ ಮತ್ತು ನಿಂಟೆಂಡೊ ಡಿಎಸ್‌ಗಾಗಿ ಆಕ್ಟಿವಿಸನ್‌ನಿಂದ ಪ್ರಕಟಿಸಲಾಯಿತು ಹಾಗೂ ನವೆಂಬರ್ ೨೦೧೦ ರಲ್ಲಿ ಬಿಡುಗಡೆಯಾಯಿತು. Wii ಮತ್ತು DS ಎರಡೂ ಆವೃತ್ತಿಗಳು ಮೂಲ N64 ಬಿಡುಗಡೆಯ ಸ್ಥಳಗಳು ಮತ್ತು ಆಯುಧಗಳಿಗೆ ಯಾವ ಸಾಮ್ಯತೆಯನ್ನೂ ಹೊಂದಿರಲಿಲ್ಲ. ೨೦೧೧ ರಲ್ಲಿ, ಈ ಆಟವನ್ನುಪ್ಲೇಸ್ಟೇಷನ್ 3ಕ್ಕೆ ಮತ್ತು ಎಕ್ಸ್ ಬಾಕ್ಸ್ ೩೬೦ ಕ್ಕೆ ಅಳವಡಿಸಲಾಯಿತು. ಗೋಲ್ಡನ್ ಐ ೦೦೭:ರೀಲೋಡೆಡ್ ಎಂದು ಈ ಆಟಕ್ಕೆ ಹೆಸರಿಡಲಾಯಿತು.

ಪರಂಪರೆ

ಮಾಲ್ವೇರ್ ಪೆಟ್ಯಾ ("ಗೋಲ್ಡನ್ ಐ" ಎಂದೂ ಕರೆಯುತ್ತಾರೆ) ಚಲನಚಿತ್ರದ ಉಲ್ಲೇಖವಾಗಿದೆ. ಮಾಲ್‌ವೇರ್ ಲೇಖಕರದ್ದು ಎಂದು ಜರ್ಮನ್ ಪತ್ರಿಕೆ ಹೈಸ್ ಆನ್‌ಲೈನ್ ಅನುಮಾನಿಸಿದ ಟ್ವಿಟರ್ ಖಾತೆಯು ಬೋರಿಸ್ ಗ್ರಿಶೆಂಕೊ ಅವರ ಚಿತ್ರವನ್ನು ತಮ್ಮ ಅವತಾರವಾಗಿ ಬಳಸಿತು.

ಇದನ್ನೂ ನೋಡಿ

ಚಲನಚಿತ್ರದ ಪೋರ್ಟಲ್ ೧೯೯೦ರ ಪೋರ್ಟಲ್

  • ೯ಕೆ೭೨೦ ಇಸ್ಕಾಂದರ್
  • ಕೌಂಟರ್-ಎಲೆಕ್ಟ್ರಾನಿಕ್ಸ್ ಹೈ ಪವರ್ ಮೈಕ್ರೋವೇವ್ ಅಡ್ವಾನ್ಸ್ಡ್ ಮಿಸೈಲ್ ಪ್ರಾಜೆಕ್ಟ್ (CHAMP)
  • ಜನಪ್ರಿಯ ಸಂಸ್ಕೃತಿಯಲ್ಲಿ ವಿದ್ಯುತ್ಕಾಂತೀಯ ನಾಡಿ
  • ಜೇಮ್ಸ್ ಬಾಂಡ್ನ ರೂಪರೇಖೆ

ಉಲ್ಲೇಖಗಳು

ವಿವರಣಾತ್ಮಕ ಟಿಪ್ಪಣಿಗಳು

 ಸೆವೆರ್ನಾಯಾ ಒಂದು ಕಾಲ್ಪನಿಕ ಭೌಗೋಲಿಕ ಪ್ರಾಂತವಾಗಿದೆ. ಇದನ್ನು ಟೆಮಿರ್ ದ್ವೀಪಕಲ್ಪದ ಸೆವೆರ್^ಮಾಯಾ ಝೆಮ್ಲ್ಯಾ ದ್ವೀಪಸಮೂಹಗಳ ಮಾದರಿಯಲ್ಲಿ ಸೃಜಿಸಲಾಗಿದೆ. ಈ ಚಲನಚಿತ್ರದ ಪ್ರಕಾರ ಸೆವೆರ್ನಾಯಾ ಉಪಗ್ರಹ ನಿಯಂತ್ರಣ ಕೇಂದ್ರವು ಕೇಂದ್ರ ಸೈಬಿರಿಯಾದ ಪರ್ವತಶ್ರೇಣಿಯಲ್ಲಿದೆ.

ಉಲ್ಲೇಖಗಳು

೧ ಗೋಲ್ಡನ್ ಐ ಲುಮಿಯೇರ್ ಯುರೋಪಿಯನ್ ಅಬ್ಸರ್ವೇಟರಿ. ೨೬ ಸೆಪ್ಟೆಂಬರ್ ೨೦೨೦ ಪಡೆಯಲಾಗಿದೆ, ೯ ಅಕ್ಟೋಬರ್ ೨೦೨೦ ರಲ್ಲಿ ಹಿಂಪಡೆಯಲಾಗಿದೆ. ೨ ಎಎಫ್ ಕ್ಯಾಟಲಾಗ್: ಗೋಲ್ಡನ್ ಐ (೧೯೯೫) ಅಮೇರಿಕನ್ ಫಿಲ್ಮ್ ಇನ್ಸ್ಟಿಟ್ಯೂಟ್ ಲಾಸ್ ಎಂಜೆಲಿಸ್ ೨೦೧೯ರ ಡಿಸೆಂಬರ್ ೧೨ರಂದು ಮೂಲದಿಂದ ಪಡೆಯಲಾಗಿದೆ. ೨೩ ಮೇ ೨೦೨೧ರಂದು ಹಿಂಪಡೆಯಲಾಗಿದೆ.

೩ ಗೋಲ್ಡನ್ ಐ (೧೯೫೫) ಬಾಕ್ಸ್ ಆಫೀಸ್ ಮೊಜೊ. ಮೂಲದಿಂದ ೨೦೨೧ ಜೂನ್ ೨೪ರಂದು ಪಡೆಯಲಾಗಿದೆ. ೨೫ ಏಪರಿಲ್ ೨೦೨೦ರಲ್ಲಿ ಹಿಂಪಡೆಯಲಾಗಿದೆ.

೪ ದ ಜೇಮ್ಸ್ ಬಾಂಡ್ ಫಿಲ್ಮ್ಸ್ -೧೯೯೪-೨೦೦೨ ಬಿಬಿಸಿ ನ್ಯೂಸ್. ೨೦೦೨ ೧೦ ನವೆಂಬರ್. ಮೂಲದಿಂದ ೯ ಜನವರಿ೨೦೦೯ರಂದು ಪಡೆಯಲಾಗಿದೆ.೨೨ ಅಕ್ಟೋಬರ್ ೨೦೦೭ರಲ್ಲಿ ಹಿಂಪಡೆಯಲಾಗಿದೆ.

೫ ಬಾಕ್ಸ್ ಆಫಿಸ್ ಹಿಸ್ಟರಿ ಫಾರ್ ಜೇಮ್ಸ್ ಬಾಂಡ್ ಮೂವೀಸ್ ದ ನಂಬರ್ಸ್ ನ್ಯಾಶ್ ಇನ್^ಫರ್ಮೇಶನ್ ಸರ್ವೀಸ್. ಮೂಲದಿಂದ ೨೦೧೨ ೧೬ ಮಾರ್ಚ್ ರಂದು ಪಡೆಯಲಾಗಿದೆ. ೨೦೦೭ರ ಅಕ್ಟೋಬರ್ ೧೮ರಂದು ಹಿಂಪಡೆಯಲಾಗಿದೆ.

೬ ಕೆಂಡ್ರಿಕ್ ಜೇಮ್ಸ್ "ಗೋಲ್ಡನ್ ಐ" ಕ್ಯೂ ನೆಟ್ವರ್ಕ್. ೫ ಫೆಬ್ರವರಿ ೨೦೧೨ರಂದು ಮೂಲದಿಂದ ಪಡೆಯಲಾಗಿದೆ. ೨೦೦೭ ಏಪ್ರಿಲ್ ೨೭ರಂದು ಹಿಂಪಡೆಯಲಾಗಿದೆ.

೭ ಮೆಕಾರ್ಥಿ,ಟೋಡ್ (೧೫ ನವೆಂಬರ್ ೧೯೫೫).

ಗೋಲ್ಡನ್ ಐ" ವೆರೈಟಿ. ಮೂಲದಿಂದ ೧೩ ಅಕ್ಟೋಬರ್ ೨೦೦೭ರಲ್ಲಿ ಪಡೆಯಲಾಗಿದೆ. ೨೦೦೬ ನವೆಂಬರ್ ೧೬ರಂದು ಹಿಂಪಡೆಯಲಾಗಿದೆ.

೮ ನಲ್ ಕ್ರಿಸ್ಟೋಫರ್."ಗೋಲ್ಡನ್ ಐ" ಫಿಲ್ಮ್ ಕ್ರಿಟಿಕ್.ಕಾಂ. ಮೂಲದಿಂದ ೧೩ ಅಕ್ಟೋಬರ್ ೨೦೦೭ರಂದು ಪಡೆಯಲಾಗಿದೆ. ೨೭ ಏಪ್ರಿಲ್ ೨೦೦೭ರಲ್ಲಿ ಹಿಂಪಡೆಯಲಾಗಿದೆ.

೯ ೧೯೯೫ರ 'ಚಲನಚಿತ್ರ ನಾಮನಿರ್ದೇಶನಗಳು" ಬ್ರಿಟಿಶಗ ಅಕಾಡೆಮಿ ಆಫ್ ಫಿಲ್ಮ್ ಆಂಡ್ ಟೆಲಿವಿಶನ್ ಆರ್ಟ್ಸ್. ಮೂಲದಿಂದ ೨೮ ಫೆಬ್ರವರಿ ೨೦೦೮ ರಲ್ಲಿ ಪಡೆಯಲಾಗಿದೆ. ೫ ಏಪರಿಲ್ ೨೦೦೮ರಲ್ಲಿ ಹಿಂಪಡೆಯಲಾಗಿದೆ.

೧೦ " ಸಿಕ್ಸ್ಟಿ ಸೆಕೆಂಡ್ಸ್:ಟಿಮೊತಿ ಡಾಲ್ಟನ್" ಮೆಟ್ರೊ ಪತ್ರಿಕೆಯಲ್ಲಿ ೧೫ ಫೆಬ್ರವರಿ ೨೦೦೭ರಲ್ಲಿ ಆಂಡ್ರ್ಯೂ ವಿಲಿಯಮ್ಸ್ ಮಾಡಿದ ಸಂದರ್ಶನ. ಮೂಲದಿಂದ ೨೯ ಸೆಪ್ಟೆಂಬರ್ ೨೦೦೭ರಲ್ಲಿ ಪಡೆಯಲಾಯಿತು. ೯ ಮಾರ್ಚ್೨೦೧೯ರಲ್ಲಿ ಹಿಂಪಡೆಯಲಾಯಿತು.

೧೧ ಫೀಲ್ಡ್ ಮ್ಯಾಥ್ಯೂ (೨೦೧೫) ಸಂ ಕೈಂಡ್ ಆಫ್ ಹೀರೊ:೦೦೭: ದ ರಿಮಾರ್ಕೇಬಲ್ ಸ್ಟೋರಿ ಆಫ್ ದಿ ಜೇಮ್ಸ್ ಬಾಂಡ್ ಫಿಲ್ಮ್ಸ್ ಅಜಅಯ್ ಚೌಧರಿ,ಸ್ಟ್ರೌಡ್,ಗ್ಲೈಸೆಸ್ಟರ್^ಶೈರ್.

ಬಾಹ್ಯ ಕೊಂಡಿಗಳು

ಉಲ್ಲೇಖ

Tags:

ಗೋಲ್ಡನ್ ಐ ಕಥಾವಸ್ತುಗೋಲ್ಡನ್ ಐ ಪಾತ್ರವರ್ಗಗೋಲ್ಡನ್ ಐ ನಿರ್ಮಾಣಗೋಲ್ಡನ್ ಐ ಇತರ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವಿಕೆಗೋಲ್ಡನ್ ಐ ಪರಂಪರೆಗೋಲ್ಡನ್ ಐ ಇದನ್ನೂ ನೋಡಿಗೋಲ್ಡನ್ ಐ ಉಲ್ಲೇಖಗಳುಗೋಲ್ಡನ್ ಐ ಬಾಹ್ಯ ಕೊಂಡಿಗಳುಗೋಲ್ಡನ್ ಐ ಉಲ್ಲೇಖಗೋಲ್ಡನ್ ಐಪಿಯರ್ಸ್ ಬ್ರಾಸ್ನನ್ಲಂಡನ್

🔥 Trending searches on Wiki ಕನ್ನಡ:

ಶೈಕ್ಷಣಿಕ ಮನೋವಿಜ್ಞಾನಶಿವಮೊಗ್ಗವಿಕಿಪೀಡಿಯಮಣ್ಣುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಯುರೋಪ್ಮಡಿವಾಳ ಮಾಚಿದೇವಗ್ರಹಮಲೈ ಮಹದೇಶ್ವರ ಬೆಟ್ಟಭಕ್ತಿ ಚಳುವಳಿಆನೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಮಂಗಳೂರುಕುದುರೆರೈತ ಚಳುವಳಿಮಿಥುನರಾಶಿ (ಕನ್ನಡ ಧಾರಾವಾಹಿ)ಹನುಮ ಜಯಂತಿಡೊಳ್ಳು ಕುಣಿತಜರಾಸಂಧಮಾಹಿತಿ ತಂತ್ರಜ್ಞಾನಸಂಸ್ಕೃತ ಸಂಧಿಕನ್ನಡ ಛಂದಸ್ಸುನವೋದಯದರ್ಶನ್ ತೂಗುದೀಪ್ವೇದವ್ಯಾಸಜಾನಪದದ.ರಾ.ಬೇಂದ್ರೆಹುಲಿಸಾದರ ಲಿಂಗಾಯತವಿಜಯಪುರವಿಮರ್ಶೆಸರಸ್ವತಿಕನ್ನಡ ಜಾನಪದಶಬ್ದಮಣಿದರ್ಪಣಹಿಂದೂ ಮಾಸಗಳುಪ್ರಪಂಚದ ದೊಡ್ಡ ನದಿಗಳುಬೀಚಿಕರ್ನಾಟಕದ ಶಾಸನಗಳುಸಾವಯವ ಬೇಸಾಯಭಾರತೀಯ ಸಂಸ್ಕೃತಿಚೆನ್ನಕೇಶವ ದೇವಾಲಯ, ಬೇಲೂರುಸುಧಾ ಮೂರ್ತಿಕರ್ನಾಟಕ ಹೈ ಕೋರ್ಟ್ಸಾಮಾಜಿಕ ಸಮಸ್ಯೆಗಳುಜಿ.ಪಿ.ರಾಜರತ್ನಂಗುರು (ಗ್ರಹ)ಚಿಂತಾಮಣಿಸೂರ್ಯ (ದೇವ)ರಾಧೆಕರ್ನಾಟಕದ ಏಕೀಕರಣವಿಜಯದಾಸರುಜ್ಯೋತಿಬಾ ಫುಲೆಸಂಯುಕ್ತ ಕರ್ನಾಟಕಶಿರ್ಡಿ ಸಾಯಿ ಬಾಬಾಮಲೇರಿಯಾಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಮಂಕುತಿಮ್ಮನ ಕಗ್ಗಕೃಷಿಉಪೇಂದ್ರ (ಚಲನಚಿತ್ರ)ತಾಪಮಾನಸುಬ್ರಹ್ಮಣ್ಯ ಧಾರೇಶ್ವರಚಿತ್ರದುರ್ಗಜನ್ನದ್ವಂದ್ವ ಸಮಾಸಚಂಡಮಾರುತಮೊದಲನೇ ಅಮೋಘವರ್ಷಲೆಕ್ಕ ಬರಹ (ಬುಕ್ ಕೀಪಿಂಗ್)ಮಳೆನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಎರಡನೇ ಮಹಾಯುದ್ಧಬಿ. ಆರ್. ಅಂಬೇಡ್ಕರ್ನೀರಿನ ಸಂರಕ್ಷಣೆಪ್ಯಾರಾಸಿಟಮಾಲ್ಸೀತಾ ರಾಮಹಣ್ಣುಶ್ಚುತ್ವ ಸಂಧಿ🡆 More