ಜೂಡಿ ಡೆಂಚ್

ಡೇಮ್ ಜುಡಿತ್ ಒಲಿವಿಯಾ ಡೆಂಚ್ ಸಿಎಚ್, ಡಿ ಬಿ ಇ, ಎಫ್ ಆರ್ ಎಸ್ ಎ ರವರು ೯ ಡಿಸೆಂಬರ್,೧೯೩೪ರಲ್ಲಿ ಜನಿಸಿದ್ದಾರೆ.

ಪರಿಚಯ

ಅವರನ್ನು ಜೂಡಿ ಡೆಂಚ್ ಎಂದು ಕೂಡ ಕರೆಯಲಾಗುತ್ತದೆ. ಇವರು ಇಂಗ್ಲೀಷ್ ಲೇಖಕಿ ಮತ್ತು ನಟಿ, ಡೆಂಚ್ ತಮ್ಮ ವೃತ್ತಿಪರ ಪಾದರ್ಪಣೆಯನ್ನುಓಲ್ಡ್ ವಿಕ್ ಕಂಪನಿಯೊಂದಿಗೆ ೧೯೫೭ರಲ್ಲಿ ಮಾಡಿದರು. ಮುಂದಿನ ಕೆಲವೇ ವರ್ಷಗಳಲ್ಲಿ ಅವರು ಷೇಕ್ಸ್ಪಿಯರ್ ನಾಟಕಗಳಾದ ರೋಮಿಯೋ ಮತ್ತು ಜೂಲಿಯೆಟ್, ಮ್ಯಾಕ್ ಬೆತ್ನಲ್ಲಿನ ಲೇಡಿ ಮ್ಯಾಕ್ ಬೆತ್, ಹಾಗೂ ಹ್ಯಾಮ್ಲೆಟ್ನಲ್ಲಿ ಒಫೆಲಿಯಾದಲ್ಲಿ ಮೊದಲಾದ ಬಹಳಷ್ಟು ಪಾತ್ರಗಳನ್ನು ಅವರು ಅಭಿನಯಿಸಿದ್ದಾರೆ. ಈ ಕಾಲವದಿಯಲ್ಲಿ ಅವರ ಹೆಚ್ಚಿನ ಕೆಲಸದ ಬಹುತೇಕ ಭಾಗವು ರಂಗಮಂದಿರದಲ್ಲಿದ್ದರೂ, ಅವರು ಚಿತ್ರಕಥೆಗಳ ಶಾಖೆಗೊಳಗಾಗಿ, ಬಿ ಎ ಎಫ್ ಟಿ ಎ ಪ್ರಶಸ್ತಿಯನ್ನು ಮೋಸ್ಟ್ ಪ್ರಾಮಿಸಿಂಗ್ ನ್ಯೂಕಮರ್ಗೆ ಗೆದ್ದರು, ಆಕೆ ಸಂಗೀತ ಕ್ಯಾಬೆರ್ನಲ್ಲಿ ಪ್ರಮುಖ ಪಾತ್ರಕ್ಕಾಗಿ ೧೯೬೮ರಲ್ಲಿ ಬಲವಾದ ವಿಮರ್ಶೆಗಳನ್ನು ಪಡೆದರು.ಮುಂದಿನ ಎರಡು ದಶಕಗಳಲ್ಲಿ,ಡೆಂಚ್ ರವರು ಗಮನಾರ್ಹ ಬ್ರಿಟಿಷ್ ರಂಗಭೂಮಿಯ ಪ್ರದರ್ಶಕರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡರು. ರಾಯಲ್ ಷೇಕ್ಸ್ಪಿಯರ್ ಕಂಪನಿಗಾಗಿ ಹಾಗೂ ನ್ಯಾಷನಲ್ ಥಿಯೇಟರ್ ಕಂಪನಿಗಳಿಗಾಗಿ ಕೆಲಸ ನಿರ್ವಹಿಸಿದರು. ಈ ಅವಧಿಯಲ್ಲಿ ದೂರದರ್ಶನದಲ್ಲೂ ಕೂಡ ಯಶಸ್ಸನ್ನು ಗಳಿಸಿದರೂ ಹಾಗೂ ೧೯೮೧ ರಿಂದ ೧೯೮೪ ರವರೆಗೆ ಎ ಫೈನ್ ರೊಮಾನ್ಸ್ ಸರಣಿಯಲ್ಲಿ, ಮತ್ತು ೧೯೯೨ ರಲ್ಲಿ ಪ್ರಣಯ ಹಾಸ್ಯ ಸರಣಿಯ ಆಸ್ ಟೈಮ್ ಗೋಸ್ ಬೈ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಅವಳು ೧೯೮೬ರಲ್ಲಿ ಮ್ಯಾಗಿ ಸ್ಮಿತ್ಗೆ ಬೆಂಬಲ ನೀಡುವ ಎ ರೂಮ್ ವಿತ್ ಅ ವ್ಯೂ ಚಿತ್ರದಲ್ಲಿ ಅಭಿನಯಿಸಿದ್ದಾರೆ , ೧೯೯೫ರಲ್ಲಿ ಆಕೆ ಗೋಲ್ಡನ್ ಐನಲ್ಲಿ ಅಂತರಾಷ್ಟ್ರಿಯ ಖ್ಯಾತಿಗೆ ಏರಿ ಪ್ರಮುಖ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಒಳಗೊಂಡಿದ್ದರು, ಇಂತಹ ಅವರ ಪಾತ್ರಗಳು ೨೦೧೨ರ ಜೇಮ್ಸ್ ಬಾಂಡ್ ಚಲನಚಿತ್ರವಾದ ಸ್ಕೈಫ಼ಾಲ್ ವರೆಗೂ ಮುಂದುವರೆಯಿತು.

ಜೂಡಿ ಡೆಂಚ್
ಜೂಡಿ ಡೆಂಚ್


ಆರಂಭಿಕ ಜೀವನ

ಡೆಂಚ್ ರವರು ನಾರ್ತ್ ರೈಡಿಂಗ್ ಆಫ್ ಯಾರ್ಕ್ಷೈರ್ನ ಹತ್ತಿರದ ಹೆವರ್ತನಲ್ಲಿ ಜನಿಸಿದರು, ಅವರ ತಾಯಿ, ಎಲೀನೋರಾ ಆಲಿವ್(ನೀ ಜಾನ್ಸ್) ಐರ್ಲೆಂಡ್ನ ಡಬ್ಲಿನಲ್ಲಿ ಜನಿಸಿದರು. ಅವರ ತಂದೆ ರೆಜಿನಾಲ್ಡ್ ಆರ್ಥರ್ ಡೆಂಚ್, ವೈದ್ಯರಾದ ಇವರು ಇಂಗ್ಲೆಂಡಿನ ಡಾರ್ಸೆಟ್ನಲ್ಲಿ ಜನಿಸಿದರು. ಹಾಗೂ ನಂತರ ಅವರು ಸ್ಥಳಾಂತರಗೊಂಡು ಬೆಳೆದದ್ದು ಡಬ್ಲಿನಲ್ಲಿ, ಅವರು ತಮ್ಮ ವೈದ್ಯಕೀಯ ಅಧ್ಯಾಯನವನ್ನು ಡಬ್ಲಿನ್ ಟ್ರಿನಿಟಿ ಕಾಲೇಜಿನಲ್ಲಿ ಮಾಡುತ್ತಿದ್ದಾಗ ಡೆಂಚ್ ತಾಯಿಯನ್ನು ಬೇಟಿ ಮಾಡಿದರು.ಡೆಂಚ್ ಯಾರ್ಕ್ನಲ್ಲಿನ ಕ್ವೇಕರ್ ಸ್ವತಂತ್ರ ಮಾಧ್ಯಮಿಕ ಶಾಲೆಯಾದ ದಿ ಮೌಂಟ್ ಸ್ಕೂಲಿನಲ್ಲಿ ಓದಿಗಾಗಿ ಸೇರಿಕೊಂಡು ಅವರು ಕೂಡ ಕ್ವೇಕರ್ ಆದರು. ಅವರ ಸಹೋದರ ನಟನಾದ ಜೆಫ್ರಿ ಡೆಂಚ್ ರವರು ಜನಿಸಿದ್ದು ಲಂಕಾಷೈರ್ನ ಟಿಲ್ಡೆಸ್ಲೇಯಲ್ಲಿ, ಹಾಗೂ ಆಕೆಯ ಸೋದರ ಸಂಭಂದಿಯಾದ ಎಮ್ಮಾ ಡೆಂಚ್ ರವರು ಹಿಂದೆ ರೋಮನ್ ಪ್ರಾಧ್ಯಾಪಕಿ ಹಾಗೂ ಇತಿಹಾಸಗಾರ್ತಿಯಾಗಿದ್ದು ಲಂಡನ್ ವಿಶ್ವವಿದ್ಯಾಲಯದ ಬಿರ್ಕ್ಬೆಕ್ನಲ್ಲಿ ಮತ್ತು ಪ್ರಸ್ತುತವಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾದ್ಯಾಪಕಿಯಾಗಿದ್ದಾರೆ.

ಜೂಡಿ ಡೆಂಚ್

ಡೇಮ್ ಜುಡಿತ್ ಒಲಿವಿಯಾ ಡೆಂಚ್ ಸಿಎಚ್, ಡಿ ಬಿ ಇ, ಎಫ್ ಆರ್ ಎಸ್ ಎ ರವರು ೯ ಡಿಸೆಂಬರ್,೧೯೩೪ರಲ್ಲಿ ಜನಿಸಿದ್ದಾರೆ.

ಯುದ್ದ ನಂತರದ ಅವಧಿಯಲ್ಲಿ ಡೆಂಚ್ ಬ್ರಿಟನ್ ನಲ್ಲಿನ ಶ್ರೇಷ್ಠ ನಟಿಯರಲ್ಲಿ ಒಬ್ಬರೆಂದು ಬೆಳೆಸಿಕೊಂಡಿದ್ದಾರೆ , ಮುಖ್ಯವಾಗಿ ರಂಗಭೂಮಿಯಲ್ಲಿ ತನ್ನ ಕೆಲಸದ ಮೂಲಕ, ತಮ್ಮ ವೃತ್ತಿಜೀವನದುದ್ದಕ್ಕೂ ಅವರ ಶ್ರಮವಿದೆ. ಡೆಂಚ್ರವರು ಬ್ರಿಟನ್ನ ಉತ್ತಮ ನಟನೆಯ ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಭಾರಿ ಸ್ಥಾನ ಪಡೆದಿದ್ದಾರೆ.

ಆರಂಭಿಕ ವರ್ಷಗಳು

ಡೆಂಚ್ ರವರು ತಮ್ಮ ತಂದೆ-ತಾಯಿಯ ಸಹಾಯದಿಂದಾಗಿ ರಂಗಭೂಮಿಯಲ್ಲಿ ನಿರಂತರ ಸಂಪರ್ಕವನ್ನು ಹೊಂದಿದ್ದರು, ಹಾಗೂ ವೈದ್ಯರಾಗಿದ್ದ ಅವರ ತಂದೆ ಯಾರ್ಕ್ ರಂಗಮಂದಿರದಲ್ಲಿ ಜಿಪಿ ಯಾಗಿದ್ದರು ಮತ್ತು ಅವರ ತಾಯಿ ಒಬ್ಬ ವಾರ್ಡ್ರೋಬ್ ಪ್ರೇಯಸಿಯಾಗಿದ್ದರು.ಹೆಚ್ಚಾದ ನಟರು ಡೆಂಚ್ ಮನೆಯಲ್ಲಿಯೇ ಇದ್ದರು. ಈ ವರ್ಷಗಳಲ್ಲಿ, ೧೯೫೦ರ ದಷಕದಲ್ಲಿ ಜುಡಿ ಡೆಂಚ್ ರವರು ಯಾರ್ಕ್ ಮಿಸ್ಟರಿ ನಾಟಕಗಳ ಆಧುನಿಕ ಪುನರುಜ್ಜೀವನದ ಮೊದಲ ಮೂರು ನಿರ್ಮಾಣಗಳಲ್ಲಿ ವೃತ್ತಿಪರದಲ್ಲವರಾಗಿದ್ದರು. ೧೯೫೭ರ ಅವಧಿಗಳಲ್ಲಿ ಕಾಣಿಸಿಕೊಂಡ ಅವರು ಕೊನೆಯ ನಿರ್ಮಾಣಗಳಲ್ಲಿ ವರ್ಜಿನ್ ಮೇರಿ ಪಾತ್ರವನ್ನು ನಿರ್ವಹಿಸಿ, ಮ್ಯೂಸಿಯಮ್ ಗಾರ್ಡೆನ್ನಲ್ಲಿ ನಿಶ್ಚಿತ ಹಂತದಲ್ಲಿ ಪ್ರದರ್ಶನ ನೀಡಿದರು. ಆರಂಭದಲ್ಲಿ ಅವರು ಒಂದು ಸೆಟ್ ಡಿಸೈನರ್ ಆಗಿ ತರಬೇತಿ ಹೊಂದಿದ್ದರೂ ಕೂಡ ಅವರಿಗೆ ನಾಟಕದಲ್ಲಿ ಆಸಕ್ತಿಯಿತ್ತು ಏಕೆಂದರೆ ಆಕೆಯ ಸಹೋದರನಾದ ಜೆಫ್ ಸೆಂಟ್ರಲ್ ಸ್ಕೂಲ್ ಆಫ್ ಸ್ಪೀಚ್ ಅಂಡ್ ಡ್ರಾಮದಲ್ಲಿ ಹಾಜಾರಾಗಿ ಕಲಿಯುತ್ತಿದ್ದರು, ಅವರು ಆ ಶಾಲೆಯಲ್ಲಿ ಅರ್ಜಿಯನ್ನು ಹಾಕಿದ ನಂತರ ಲಂಡನ್ನ ರಾಯಲ್ ಆಲ್ಬರ್ಟ್ ಹಾಲ್ನಲ್ಲಿ ನೆಲೆಸಿ ಶಾಲೆಯಿಂದ ಅಂಗೀಕರಿಸಲ್ಪಡಲಾಯಿತು, ಅಲ್ಲಿ ಅವರು ವನೆಸ್ಸಾ ರೆಡ್ಗ್ರೇವ್ನ ಎಂಬವರ ಸಹಪಾಠಿಯೂ ಆಗಿದ್ದರು. ನಾಟಕ ಮತ್ತು ನಾಲ್ಕು ನಟನಾ ಬಹುಮಾನಗಳಲ್ಲಿ ಪ್ರಥಮ ದರ್ಜೆಯೊಂದಿಗೆ ಪದವಿಯನ್ನು ಪಡೆದು ಒಬ್ಬ ಅತ್ಯುತ್ತಮ ವಿದ್ಯಾರ್ಥಿನಿ ಎಂದು ಚಿನ್ನದ ಪದಕವನ್ನು ಕೂಡ ಪಡೆದಿದ್ದಾರೆ. ಸೆಪ್ಟೆಂಬರ್ ೧೯೫೭ರಲ್ಲಿ, ಲಿವರ್ಪೊಲ್ನ ರಾಯಲ್ ಕೋರ್ಟ್ ಥಿಯೇಟರ್ನ ಹತ್ತಿರದ ಓಲ್ಡ್ ವಿಕ್ ಕಂಪನಿಯಲ್ಲಿ ಹ್ಯಾಮ್ಲೆಟ್ನಲ್ಲಿ ಒಫೆಲಿಯಾ ಆಗಿ ತನ್ನ ಮೊದಲ ವೃತ್ತಿಪರ ವೇದಿಕೆಯಲ್ಲಿ ಕಾಣಿಸಿಕೊಂಡರು. ಇತ್ತೀಚಿನಾ ವರ್ಷಗಳಲ್ಲಿ ಬ್ರಿಟನ್ನ ಇತಿಹಾಸದ ೧೯೫೭-೧೯೬೨ರ ಸರಣಿಯಲ್ಲಿ ಒಂದು ಪರಿಣಾಮವು ಅವರ ಅಭಿನಯದ ಸಮಕಾಲಿನ ವಿಮರ್ಶೆಯನ್ನು ಉಲ್ಲೇಖಿಸುತ್ತದೆ, ಅದೇನೆಂದರೆ " ಪ್ರತಿಭಾವಂತತೆಯನ್ನು ಹೊಂದುವುದು, ಅದರೊಂದಿಗೆ ಹೋಗಲು ಕೆಲವು ತಂತ್ರಗಳನ್ನು ಪಡೆದುಕೊಂಡಾಗ ಉತ್ತಮ ಪ್ರಯೋಜನವನ್ನು ತೋರಿಸುತ್ತದೆ". ನಂತರ ಡೆಂಚ್ ಓಲ್ಡ್ ವಿಕ್ಗೆ ಅದೇ ನಿರ್ಮಾಣದಲ್ಲಿ ತನ್ನ ಚೊಚ್ಚಲ ಪ್ರವೇಶ ಮಾಡಿದರು, ೧೯೫೭-೧೯೬೧ರವರೆಗೆ ಅಂದರೆ ನಾಲ್ಕು ಋತುಗಳವರೆಗೆ ಕಂಪನಿಯ ಸದಸ್ಯರಾಗಿದ್ದರು. ಅವರು ಡಿಸೆಂಬರ್ ೧೯೬೧ರಲ್ಲಿ ರಾಯಲ್ ಷೇಕ್ಸ್ಪಿಯರ್ ಕಂಪನಿಯೊಂದಿಗೆ ಲಂಡನ್ನಲ್ಲಿರುವ ಆಲ್ಡ್ವಿಚ್ ಥಿಯೇಟರ್ನಲ್ಲಿ ದಿ ಚೆರ್ರಿ ಆರ್ಚಾರ್ಡ್ನಲ್ಲಿ ಆನ್ಯ ಎಂಬ ಪಾತ್ರದಲ್ಲಿ ನಟಿಸಿ ಹಾಗೂ ಏಪ್ರಿಲ್ ೧೯೬೨ರ ಮೆಶರ್ ಫಾರ್ ಮೆಶರ್ನಲ್ಲಿ ಇಸಾಬೆಲ್ಲಾ ಸ್ಟ್ರಾಟ್ಫೋರ್ಡ್-ಅಪಾನ್-ಏವನ್ ಪಾತ್ರಕ್ಕೆ ಚೊಚ್ಛಲ ಪ್ರವೇಶ ಮಾಡಿದರು.

ಪ್ರಾಮುಖ್ಯತೆ

ಡೆಂಚ್ರವರಿಗೆ ೧೯೬೬ರ ಬಿ ಎ ಎಫ್ ಟಿ ಎ(BAFTA)ಪ್ರಶಸ್ತಿಯನ್ನು ಪ್ರಮುಖ ಚಲನಚಿತ್ರದ ಪಾತ್ರಗಳಿಗೆ ಅತ್ಯಂತ ಭರವಸೆಯ ಹೊಸ ನಟಿ ಎಂದು ಹಾಗೂ ಅದರ ಜೊತೆಗೆ ಜಾನ್ ಹಾಪ್ಕಿನ್ಸ್ನ ೧೯೬೬ BBC ನಾಟಕದಲ್ಲಿ ಅಪರಿಚಿತರೊಂದಿಗೆ ಮಾತನಾಡುವ ಪಾತ್ರಕ್ಕೆ ಬಿ ಎ ಎಫ್ ಟಿ ಎ(BAFTA) ಟೆಲಿವಿಷನ್ ೧೯೬೮ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಿದೆ.

ವೈಯಕ್ತಿಕ ಜೀವನ

ಡೆಂಚ್ ರವರು ಫೆಬ್ರವರಿ ೫,೧೯೭೧ರಲ್ಲಿ ಮೈಕೆಲ್ ವಿಲಿಯಮ್ಸ್ ಎಂಬ ಬ್ರಿಟಿಷ್ ನಟನನ್ನು ಮದುವೆಯಾದರು, ನಂತರ ಸೆಪ್ಟೆಂಬರ್ ೨೪,೧೯೭೨ರಲ್ಲಿ ತಾರಾ ಕ್ರೆಸ್ಸಿಡಾ ಫ್ರಾನ್ಸಿಸ್ ವಿಲಿಯಮ್ಸ್ ಎಂಬ ಮಗಳಿಗೆ ಜನ್ಮ ನೀಡಿದರು. ಅವರ ಮಗಳು ಫಿಂಟಿ ವಿಲಿಯಮ್ಸ್ ಎಂದು ವೃತ್ತಿಪರವಾಗಿ ಹೆಸರಾದ ನಟಿಯಾದಳು. ಡೆಂಚ್ ಮತ್ತು ಅವಳ ಪತಿ ಹಲವಾರು ಹಂತದ ನಿರ್ಮಾಣಗಳಲ್ಲಿ ಹಾಗೂ ಬಾಬ್ ಲಾರ್ಬೇ ಬ್ರಿಟಿಷ್ ಟೆಲಿವಿಷನ್ ಸಿಟ್ಕಾಂ, ಎ ಫೈನ್ ರೋಮ್ಯಾನ್ಸ್(೧೯೮೧-೮೪)ನಲ್ಲಿ ನಟಿಸಿದರು. ಮೈಕೆಲ್ ವಿಲಿಯಮ್ಸ್ ೬೫ ವರ್ಷ ವಯಸ್ಸಿನವರಿದ್ದಾಗ ಶ್ವಾಸಕೋಶದ ಕ್ಯಾನ್ಸರ್ನಿಂದ ೨೦೦೧ರಲ್ಲಿ ಮರಣ ಹೊಂದಿದರು, ಅವರಿಗೆ ಒಂದು ಮೊಮ್ಮಗುವಿತ್ತು ಅದೇ ಫಿಂಟಿ ವಿಲಿಯಮ್ಸ್ನ ಮಗ ೧೯೯೭ರಲ್ಲಿ ಜನಿಸಿದ ಸ್ಯಾಮ್ ವಿಲಿಯಮ್ಸ್.೨೦೧೦ರಿಂದ ಡೆಂಚ್ರವರು ಸಂರಕ್ಷಕ ಡೇವಿಡ್ ಮಿಲ್ಸ್ನೊಂದಿಗೆ ಸಂಬಂಧ ಹೊಂದಿದ್ದರು, ದಿ ಟೈಮ್ಸ್ ಪತ್ರಿಕೆಯೊಂದಿಗೆ ೨೦೧೪ರ ಸಂದರ್ಶನವೊಂದರಲ್ಲಿ ಅವಳು ಪತಿ ಮರಣದ ನಂತರ ಮತ್ತೊಮ್ಮೆ ಪ್ರೀತಿಯನ್ನು ಏಕೆ ಕಂಡುಕೊಳ್ಳಬಾರದು ಎಂದು ಚರ್ಚಿಸಿದ್ದಾರೆ ಹಾಗೂ "ನಾನು ಅದಕ್ಕೆ ಸಿದ್ದವಾಗಿರಲಿಲ್ಲ, ಅದು ತುಂಬಾ ಕ್ರಮೇಣವಾಗಿ ಬೆಳೆದು ಬಂದಿದೆ ಹಾಗೂ ಇದು ಅದ್ಬುತವಾಗಿದೆ" ಎಂದು ಹೇಳಿಕೆ ನೀಡಿದ್ದಾರೆ. ೨೦೧೨ರ ಆರಂಭದಲ್ಲಿ ಡೆಂಚ್ ತಮ್ಮ ಕಣ್ಮರೆಯಾದ ಅವನತಿ ಬಗ್ಗೆ ಚರ್ಚಿಸಿದರು, ಒಂದು ಕಣ್ಣಿನಲ್ಲಿ 'ಶುಷ್ಕ' ಮತ್ತು ಇತರ ಕಣ್ಣಿನಲ್ಲಿ 'ಆರ್ದ್ರ' ದಿಂದ ಕಣ್ಣಿನ ಚಿಕಿತ್ಸೆ ಪಡೆದರು, ಅದಾದನಂತರ ಆಕೆಗೆ ಸ್ಕ್ರಿಪ್ಟ್ಗಳನ್ನು ಓದಲು ಯಾರಾದರೊಬ್ಬರ ಅಗತ್ಯವಿದೆ ಎಂದು ಹೇಳಿದ್ದಾರೆ. ಅವರಿಗೆ ೨೦೧೩ರಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಯಾಗಿ ಕಾರ್ಯವಿಧಾನದಿಂದ ಚೆನ್ನಾಗಿ ಚೇತರಿಸಿಕೊಂಡರು ಹಾಗೂ "ನನಗೆ ಇದು ಒಂದು ಸಮಸ್ಯೆಯೇ ಅಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ದಾನ ಮತ್ತು ಗೌರವಗಳು

೧೯೭೦ರ ಜನ್ಮದಿನದ ಗೌರವಗಳಲ್ಲಿ ಹಾಗೂ ೧೯೮೮ರ ಹೊಸ ವರ್ಷದ ಗೌರವಗಳಲ್ಲಿ ಡೆಂಚ್ರವರನ್ನು ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (OBE) ಅಧಿಕಾರಿಯಾಗಿ ಮತ್ತು ದ ಡೇಮ್ ಕಮಾಂಡರ್ನ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್(BBE) ಅಧಿಕಾರಿಯಾಗಿ ನೇಮಿಸಲಾಯಿತು. ೨೦೦೫ರ ಜನ್ಮದಿನದ ಗೌರವಗಳಲ್ಲಿ ಅವರನ್ನು ಆರ್ಡರ್ ಆಫ್ ದಿ ಕಂಪ್ಯಾನಿಯನ್ಸ್ ಸದಸ್ಯರಾಗಿ ನೇಮಕಗೊಂಡರು, ಜೂನ್ ೨೦೧೧ರಲ್ಲಿ ಅವರು ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್ನ(BFI) ಸಹವರ್ತಿಯಾಗಿದ್ದರು. ೨೪ ಜೂನ್ ೨೦೦೮ರಲ್ಲಿ, ಯುನಿವರ್ಸಿಟಿ ಆಫ್ ಸೇಂಟ್ ಆಂಡ್ರ್ಯೂಸ್ ಅವರು ವಿಶ್ವವಿದ್ಯಾನಿಲಯದ ಪದವಿ ಸಮಾರಂಭದಲ್ಲಿ ಗೌರವ ಡಿಲಿಟ್ ಪದವಿ ನೀಡಿದ್ದಾರೆ. ಜೂನ್ ೨೬,೨೦೧೩ರಂದು ಯುನಿವರ್ಸಿಟಿ ಆಫ್ ಸ್ಟಿರ್ಲಿಂಗ್ ಅವರು ಗೌರವಕ್ಕೆ ಪಾತ್ರರಾಗಿ ಆರ್ಟ್ಸ್ಗೆ ವಿಶೇಷವಾಗಿ ನೀಡಿದ ಚಲನಚಿತ್ರ ಮನ್ನಣೆಯನ್ನು ಗುರುತಿಸಿ ವಿಶ್ವವಿದ್ಯಾಲಯದ ಪದವಿ ಸಮಾರಂಭದಲ್ಲಿ ಗೌರವಾನ್ವಿತ ದಾಕ್ಟರೇಟ್ ಪದವಿ ಪಡೆದರು. ಮಾರ್ಚ್ ೨೦೧೩ರಲ್ಲಿ ದಿ ಗಾರ್ಡಿಯನಲ್ಲಿ ೫೦ಕ್ಕಿಂತ ಹೆಚ್ಚಿನ ಐಷರಾಮಿ ಉಡುಪುಗಳ ಪೈಕಿ ಡೆಂಚ್ರವರ ಉಡುಪು ತೊಡುಗೆಯನ್ನು ಅತ್ಯುತ್ತಮ ಎಂದು ಪಟ್ಟಿ ಮಾಡಲಾಯಿತು. ಬ್ರಿಟಿಷ್ ಜನಪ್ರಿಯ ಸಂಸ್ಕೃತಿಯಲ್ಲಿ ಅತ್ಯುನ್ನತ-ಪ್ರಖ್ಯಾತ ನಟಿಯಾಗಿದ್ದ ಡೆಂಚ್ ಡೆಬ್ರೆಟ್ನ ೨೦೧೭ರ ಯುಕೆಯಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡರು.



ಉಲೇಖಗಳು

Tags:

ಜೂಡಿ ಡೆಂಚ್ ಪರಿಚಯಜೂಡಿ ಡೆಂಚ್ ಆರಂಭಿಕ ಜೀವನಜೂಡಿ ಡೆಂಚ್ ವೃತ್ತಿ ಜೀವನಜೂಡಿ ಡೆಂಚ್ಇಂಗ್ಲೀಷ್ದೂರದರ್ಶನರಂಗಭೂಮಿ

🔥 Trending searches on Wiki ಕನ್ನಡ:

ಮುಖೇಶ್ ಅಂಬಾನಿತುಮಕೂರುಶಿಶುನಾಳ ಶರೀಫರುಕರ್ಣಕಾರ್ಮಿಕ ಕಾನೂನುಗಳುಮೂಕಜ್ಜಿಯ ಕನಸುಗಳು (ಕಾದಂಬರಿ)ಚಾಣಕ್ಯಜೈಪುರಶಿವಮೊಗ್ಗರೇಡಿಯೋರಸ(ಕಾವ್ಯಮೀಮಾಂಸೆ)ಕರ್ನಾಟಕ ಲೋಕಸೇವಾ ಆಯೋಗಚಾಮುಂಡೇಶ್ವರಿಭಾರತದ ಸಂಸತ್ತುಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಕರ್ನಾಟಕದ ಮಹಾನಗರಪಾಲಿಕೆಗಳುಹಿಂದೂ ಧರ್ಮಅಸಹಕಾರ ಚಳುವಳಿಕೇಂದ್ರಾಡಳಿತ ಪ್ರದೇಶಗಳುವಿಭಕ್ತಿ ಪ್ರತ್ಯಯಗಳುಹದಿಹರೆಯಪಪ್ಪಾಯಿರವಿಚಂದ್ರನ್ಆಗಮ ಸಂಧಿಕ್ರೀಡೆಗಳುಮರೀಚಿಕೆಮುಹಮ್ಮದ್ಶ್ಯೆಕ್ಷಣಿಕ ತಂತ್ರಜ್ಞಾನಯಕ್ಷಗಾನಹನುಮಾನ್ ಚಾಲೀಸಕಲ್ಯಾಣ್ ಕುಮಾರ್ಸೂರ್ಯವಂಶ (ಚಲನಚಿತ್ರ)ಭಾರತದ ರೂಪಾಯಿಕರ್ನಾಟಕ ಹೈ ಕೋರ್ಟ್ಬೆಂಗಳೂರುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾರತ ಬಿಟ್ಟು ತೊಲಗಿ ಚಳುವಳಿಡಿ.ಕೆ ಶಿವಕುಮಾರ್ಇಂಡೋನೇಷ್ಯಾರಾಜ್ಮಾಲೋಕಸಭೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುಹಸ್ತ ಮೈಥುನಶೈಕ್ಷಣಿಕ ಮನೋವಿಜ್ಞಾನಯೋಗಕನ್ನಡದಲ್ಲಿ ವಚನ ಸಾಹಿತ್ಯನಾಟಕಸಂಯುಕ್ತ ರಾಷ್ಟ್ರ ಸಂಸ್ಥೆಭಾರತದ ಜನಸಂಖ್ಯೆಯ ಬೆಳವಣಿಗೆಅಹಲ್ಯೆಕರ್ನಾಟಕ ಸ್ವಾತಂತ್ರ್ಯ ಚಳವಳಿಅಗಸ್ಟ ಕಾಂಟ್ಎಳ್ಳೆಣ್ಣೆಜೋಗಿ (ಚಲನಚಿತ್ರ)ಮಾಧ್ಯಮಕೃಷ್ಣದೇವರಾಯಭಯೋತ್ಪಾದನೆಹಣ್ಣುಕಲ್ಯಾಣ್ಗಾಳಿ/ವಾಯುಬನವಾಸಿಓಂ (ಚಲನಚಿತ್ರ)ಕರ್ನಾಟಕದ ಅಣೆಕಟ್ಟುಗಳುಗಣರಾಜ್ಯೋತ್ಸವ (ಭಾರತ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಉಡುಪಿ ಜಿಲ್ಲೆಹಟ್ಟಿ ಚಿನ್ನದ ಗಣಿಭಾರತೀಯ ಮೂಲಭೂತ ಹಕ್ಕುಗಳುವಚನ ಸಾಹಿತ್ಯಕೃತಕ ಬುದ್ಧಿಮತ್ತೆಘಾಟಿ ಸುಬ್ರಹ್ಮಣ್ಯಕರ್ನಾಟಕನವರತ್ನಗಳುಆಧುನಿಕ ವಿಜ್ಞಾನಹಣದುಬ್ಬರಭಾರತದ ಪಂಚಾಯತ್ ರಾಜ್ ವ್ಯವಸ್ಥೆಭಾರತದಲ್ಲಿ ತುರ್ತು ಪರಿಸ್ಥಿತಿ🡆 More