ಕನ್ನಡ ಸಂಧಿ

ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯ ಬಾರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.

    ಸಂಧಿ ಎಂದರೇನು ?

ಉದಾ : [ಹೊಸಗನ್ನಡ] =ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ ಪೂರ್ವಪದ+ಉತ್ತರಪದ=ಸಂಧಿಪದ. ಇಲ್ಲಿ ಪೂರ್ವಪದ ಮತ್ತು ಉತ್ತರಪದಗಳು ಮೂಲಪದಗಳು. ಪೂರ್ವಪದದ ಕೊನೆಯ ಅಕ್ಷರ ‘ಅ’ಮತ್ತು ಉತ್ತರಪದದ ಮೊದಲನೆಯ ಅಕ್ಷರ ‘ಕ್’ಸಂಧಿಸಿದಾಗ ಸಂಧಿಕಾರ್ಯ ಆಗುವುದು. ಉದಾ : ಹೊಸ(ಅ)+(ಕ್)ಕನ್ನಡ = ಹ್+ಓ+ಸ್+ಅ+ಕ್+ಅ+ನ್+ನ್+ಅ+ಡ್+ಅ. ಸಂಧಿ = ಕೂಡುವುದು. ಎಂದರೆ, ಎರಡು ವರ್ಣಗಳು ಸದ್ಗುಣಕೂಡಿ ಸಂಧಿಯಾಗುತ್ತದೆ. ಉದಾ: ಮರ=ಮ್+ಅ+ರ್+ಅ. ಎರಡು ವರ್ಣಗಳು = ಮ್+ಅ ಮತ್ತು ರ್+ಅ.

    ವಿದ್ವಾಂಸರ ಅಭಿಪ್ರಾಯ

ಸಂಧಿ ಎಂದರೆ, “ಎರಡು ಅಥವಾ ಹಲವಾರು ಅಕ್ಷರಗಳು ಒಂದಕ್ಕೊಂದು ಸೇರುವುದಕ್ಕೆ ವರ್ಣಾಕ್ಷರ ಸಂಧಿ ಎಂದು ಹೆಸರು”- ಕೇಶಿರಾಜ.

  • ಬೇರೆ ಬೇರೆಯಾಗಿದ್ದ ಅಕ್ಷರಗಳನ್ನು ಕೂಡಿಸಿ ಉಚ್ಛರಿಸುವುದಕ್ಕೆ ಸಂಧಿ ಎಂದು ಹೆಸರು - ಕ್ಯೆಪಿಡಿಕಾರ.

ಸಂಧಿಗಳಲ್ಲಿ ವಿಧ

  • ಸಂಧಿಗಳಲ್ಲಿ ಎರಡು ವಿಧ.
  1. ಕನ್ನಡ ಸಂಧಿ.
  2. ಸಂಸ್ಕೃತ ಸಂಧಿ.

ಕನ್ನಡ ಸಂಧಿ

    ಕನ್ನಡ ಸಂಧಿ ಎಂದರೇನು ?
  • ಕನ್ನಡ ಕನ್ನಡ ಪದಗಳು ಕೂಡಿ ಆಗುವುದು ಕನ್ನಡ ಸಂಧಿ. ಉದಾ : ಎಳೆ+ಕರು=ಎಳೆಕರು. ಇಲ್ಲಿ ಎರಡೂ ಕನ್ನಡ+ಕನ್ನಡ ಪದಗಳು ಸೇರಿ ಸಂಧಿಯಾಗಿದೆ.
  • ಒಂದು ಕನ್ನಡ ಪದ, ಇನ್ನೊಂದು ಸಂಸ್ಕೃತ ಪದ ಕೂಡಿ ಸಂಧಿಯಾದರೂ ಕನ್ನಡ ಸಂಧಿಯಾಗಬಹುದು.
    ಕನ್ನಡ ಸಂಧಿಗಳು ಯಾವುವು?
  • ಲೋಪಾಗಮಾದೇಶ ಎಂದು ಕನ್ನಡದ ಮೂರು ಸಂಧಿಗಳು. : ಲೋಪ-ಆಗಮ-ಆದೇಶ
  • ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.
  • ಲೋಪಸಂಧಿ
  • ಆಗಮ ಸಂಧಿ
  • ಆದೇಶ ಸಂಧಿ

ಸ್ವರ ಸಂಧಿ

ಸ್ವರಸಂಧಿ ಎಂದರೇನು? ಸ್ವರಸಂಧಿ ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾದರೆ ಸ್ವರಸಂಧಿ. ಎಂದರೆ ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲನೆಯ ಅಕ್ಷರ ಸಂಧಿಸಿದಾಗ ಸಂಧಿ ಆಗುವುದು. ಇದನ್ನು ಸಂಧಿಕಾರ್ಯವೆನ್ನುವರು. ಉದಾ: ಮಾತು+ಇಲ್ಲ=ಮಾತುವಿಲ್ಲ- ಮಾತಿಲ್ಲ (ಸಂಧಿ ವಿಕಲ್ಪ) ಉ+e (ಸಂಧಿಪದ ಸಂದರ್ಭ) ಮರ+ಅನ್ನು = ಮರವನ್ನು. ಅ+ಅ(ಸಂಧಿಪದ ಸಂದರ್ಭ) :

ಕನ್ನಡ ಸಂಧಿಕಾರ್ಯ

ಲೋಪ-ಆಗಮ-ಆದೇಶ, ಈ ಮೂರೂ ಸಂಧಿಗಳು ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ.

  1. ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.
  2. ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.
  3. ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.
  4. ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ‘ಪ್ರಕೃತಿಭಾವ’ / ವಿಸಂಧಿ.

ಸಂಧಿಯಾಗುವ ಸ್ಥಳಗಳು

ಸಂಧಿಯಾಗುವ ಸ್ಥಳಗಳಲ್ಲಿ ಎರಡು ವಿಧ

  1. ಪದಮಧ್ಯ ಸಂಧಿ : ಪ್ರಕೃತಿ+ಪ್ರತ್ಯಯಗಳ ಸೇರುವಿಕೆಯಿಂದ ಪದವಾಗುತ್ತದೆ. ಇದರ ಮಧ್ಯದಲ್ಲಿ ಉಂಟಾಗುವ ಸೇರುವಿಕೆಯೇ ಪದಮಧ್ಯ ಸಂಧಿ. ಉದಾ: ಮನೆಯಿಂದ=ಮನೆ+ಇಂದ, ನೋಡು+ಅ+ಅನ್ನು=ನೋಟವನ್ನು. ಮಾತು+ಒಳ್=ಮಾತೊಳ್.
  2. ಪದಾಂತ್ಯ ಸಂಧಿ : ಒಂದು ಪದದ ಮುಂದೆ ಇನ್ನೊಂದು ಪದವೋ, ಪ್ರತ್ಯಯವೋ ಸೇರಿದರೆ ಆ ಸಂಧಿಯನ್ನು ಪದಾಂತ್ಯ ಸಂಧಿಯೆನ್ನುತ್ತಾರೆ. ವಾಕ್ಯದಲ್ಲಿ ಎರಡು ಪದಗಳ ಡುವೆ ಆಗುವ ಸಂಧಿ. ಉದಾ: ಮರ+ಎಂಬಲ್ಲಿ=ಮರವೆಂಬಲ್ಲಿ, ಶಿಖರ+ಅನ್ನು+ಏರಿ=ಶಿಖರವನ್ನೇರಿ. [ಪದಮಧ್ಯೆ ಸಂಧಿ ನಿತ್ಯವೂ ಬರುವುದು. ಪದಾಂತ್ಯ ಸಂಧಿ ವಿಕಲ್ಪವಾಗಿ ಬರುವುದು. ವಿಕಲ್ಪ=ಸಂಧಿಮಾಡಬಹುದು/ಬಿಡಬಹುದು]


ಉಲ್ಲೇಖ

4. ಕನ್ನಡ ಸಂಧಿಗಳು

Tags:

ಕನ್ನಡ ಸಂಧಿ ಸಂಧಿಗಳಲ್ಲಿ ವಿಧಕನ್ನಡ ಸಂಧಿ ಸ್ವರ ಸಂಧಿಕನ್ನಡ ಸಂಧಿ ಕಾರ್ಯಕನ್ನಡ ಸಂಧಿ ಸಂಧಿಯಾಗುವ ಸ್ಥಳಗಳುಕನ್ನಡ ಸಂಧಿ ಉಲ್ಲೇಖಕನ್ನಡ ಸಂಧಿಸಂಧಿ

🔥 Trending searches on Wiki ಕನ್ನಡ:

ಅಡಿಕೆಜನತಾ ದಳ (ಜಾತ್ಯಾತೀತ)ಸೂರ್ಯವ್ಯೂಹದ ಗ್ರಹಗಳುಟಿಪ್ಪು ಸುಲ್ತಾನ್ಕರ್ನಾಟಕ ಲೋಕಾಯುಕ್ತಉತ್ತರ ಪ್ರದೇಶಪಿತ್ತಕೋಶಶಿವನ ಸಮುದ್ರ ಜಲಪಾತಭಾರತೀಯ ರಿಸರ್ವ್ ಬ್ಯಾಂಕ್ಗೌತಮ ಬುದ್ಧಪಟ್ಟದಕಲ್ಲುಕನ್ನಡ ಸಾಹಿತ್ಯ ಸಮ್ಮೇಳನವರ್ಗೀಯ ವ್ಯಂಜನಕರ್ವಾಲೋಬಸವರಾಜ ಕಟ್ಟೀಮನಿಗರ್ಭಧಾರಣೆನವಿಲುಕೆ. ಎಸ್. ನರಸಿಂಹಸ್ವಾಮಿಭಗತ್ ಸಿಂಗ್ಭಗವದ್ಗೀತೆಸ್ವಾಮಿ ವಿವೇಕಾನಂದಶಾಲೆಉತ್ತರಾಖಂಡಭಾರತದಲ್ಲಿ ಬಡತನಅನುಷ್ಕಾ ಶರ್ಮಾದಶರಥಸಂಗೀತತತ್ಪುರುಷ ಸಮಾಸಪೂರ್ಣಚಂದ್ರ ತೇಜಸ್ವಿಮಡಿವಾಳ ಮಾಚಿದೇವಶಿಕ್ಷೆಅಂತರಜಾಲಜೇಮ್ಸ್ ಬಾಂಡ್‌ಹಿಂದೂ ಧರ್ಮಗಾಣಗಾಪುರಉಪೇಂದ್ರಹಿಂದಿಕೈಗಾರಿಕಾ ಕ್ರಾಂತಿಕೈಗಾರಿಕೆಗಳುಮೂಲವ್ಯಾಧಿಗೋತ್ರ ಮತ್ತು ಪ್ರವರಇಸ್ಲಾಂ ಧರ್ಮತಾಳೀಕೋಟೆಯ ಯುದ್ಧಕೋಟಿ ಚೆನ್ನಯತೆಲುಗುಪೆಂಗ್ವಿನ್‌‌ವಿಶ್ವ ಕನ್ನಡ ಸಮ್ಮೇಳನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕಾಂತಾರ (ಚಲನಚಿತ್ರ)ಕರಿಕಾಲ ಚೋಳಶ್ರೀ ರಾಘವೇಂದ್ರ ಸ್ವಾಮಿಗಳುಚರ್ಚೆಭಾರತದ ರಾಜಕೀಯ ಪಕ್ಷಗಳುಆಟಿಸಂಕೃಷ್ಣಪಂಪ ಪ್ರಶಸ್ತಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಚನಕಾರರ ಅಂಕಿತ ನಾಮಗಳುಅವತಾರಸರ್ವಜ್ಞಆಯ್ದಕ್ಕಿ ಲಕ್ಕಮ್ಮಊಳಿಗಮಾನ ಪದ್ಧತಿಗುಲಾಬಿಸೂಕ್ಷ್ಮ ಅರ್ಥಶಾಸ್ತ್ರಭಾರತದ ಮುಖ್ಯ ನ್ಯಾಯಾಧೀಶರುಗಣರಾಜ್ಯೋತ್ಸವ (ಭಾರತ)ಅರಿಸ್ಟಾಟಲ್‌ದ್ರೌಪದಿ ಮುರ್ಮುಭಾರತ ಗಣರಾಜ್ಯದ ಇತಿಹಾಸಭಾರತದಲ್ಲಿನ ಜಾತಿ ಪದ್ದತಿಬ್ರಿಕ್ಸ್ ಸಂಘಟನೆಹುಣಸೆಭಾರತೀಯ ಶಾಸ್ತ್ರೀಯ ಸಂಗೀತಶ್ರೀ ಸಿದ್ದೇಶ್ವರ ಸ್ವಾಮಿಜಿಗಳುದ್ರೌಪದಿಸೂರ್ಯ (ದೇವ)ಭಗೀರಥ🡆 More