ಲೋಪಸಂಧಿ

ಎಯ್ದೆ ಪೋಪವು ಲೋಪವು .

ಲೋಪಸಂಧಿ ಎಂದರೇನು ?

ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಸಂಧಿಪದದಲ್ಲಿ ಲೋಪವಾಗುವುದು. ಇದರಿಂದ ಮೂಲ ಅರ್ಥಕ್ಕೆ ಬಾಧೆ ಬಾರದಿದ್ದಲ್ಲಿ ‘ಲೋಪಸಂಧಿ’ಯಾಗುತ್ತದೆ. ಉದಾ: ನೀರಿಲ್ಲ(‘ಉ’ಕಾರ ಲೋಪ)ಅವನೂರು('ಅ’ ಕಾರ ಲೋಪ) ಬೇರೊಬ್ಬ(‘ಎ’ ಕಾರ ಲೋಪ) ಅಭ್ಯಾಸಕ್ಕೆ : ಹಳಗನ್ನಡ - ನೆಲದಿಂದುಣ್ಬಂ, ಚಲದಾಣ್ಮಂ, ಇಂದ್ರಂಗೈರಾವತಂ, ಪೊಲದಲ್ಲಿರ್ದಂ. ಹೊಸಗನ್ನಡ - ಊರಲ್ಲಿ, ದೇವರಿಂದ, ಬಲ್ಲೆನೆಂದ, ಏನಾದುದು, ಇವನಿಗಾನು, ಮಾತೆಲ್ಲಂ.

  • ಕೇಸಿರಾಜನು ಶಬ್ದಮಣಿದರ್ಪಣಂ ಗಂಥದ ಸೂತ್ರ 62 ರಲ್ಲಿ ನಾಮರೂಢಿಯಳಿಯದ ಪಕ್ಷಂ ಎಂದಿದ್ದಾನೆ. ಎಂದರೆ, ‘ಸಂಧಿಮಾಡುವಾಗ ಅರ್ಥ ಕೆಡಬಾರದು’ ಎಂಬುದು ನಿಯಮ. ಉದಾ: ತಂದೆ+ಇಲ್ಲ=ತಂದಿಲ್ಲ. ಗುರು+ಅನ್ನು=ಗುರನ್ನು, ಮಡು+ಇದು=ಮಡಿದು, ಮುದಿ+ಅಪ್ಪ=ಮುದಪ, ಬಾಳು+ಅನ್ನು=ಬಾಳನ್ನು ಎಂಬುದು ಭಿನ್ನಾರ್ಥ / ಸಂಧಿದೋಷ.

ಸ್ವರ ಲೋಪ ಸಂಧಿ

ಲೋಪ ಸಂಧಿಯನ್ನು ಸ್ವರಲೋಪ ಸಂಧಿಯೆನ್ನುವರು. ಸ್ವರಸಂಧಿ ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾದರೆ ಸ್ವರಸಂಧಿ. ಎಂದರೆ ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲನೆಯ ಅಕ್ಷರ ಸಂಧಿಸಿದಾಗ ಸಂಧಿ ಆಗುವುದು. ಇದನ್ನು ಸಂಧಿಕಾರ್ಯವೆನ್ನುವರು. ಉದಾ:

  • ಮಾತು+ಇಲ್ಲ=ಮಾತುವಿಲ್ಲ- ಮಾತಿಲ್ಲ (ಸಂಧಿ ವಿಕಲ್ಪ) ಉ+ಇ (ಸಂಧಿಪದ ಸಂದರ್ಭ)
  • ಮರ+ಅನ್ನು = ಮರವನ್ನು. ಅ+ಅ(ಸಂಧಿಪದ ಸಂದರ್ಭ)

ಲೋಪ ಸಂಧಿಕಾರ್ಯ

ಲೋಪ ಸಂಧಿ ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ.

  1. ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.
  2. ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.
  3. ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.
  4. ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ‘ಪ್ರಕೃತಿಭಾವ’ / ವಿಸಂಧಿ.
    ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದು.:
    ಉದಾ:- ಮತ್ತು(ಉ)+ಒಬ್ಬ=ಮತ್ತೊಬ್ಬ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಉ' ಕಾರ ಲೋಪವಾಗಿದೆ.
    ಉದಾ:- ಅಲ್ಲಿ(ಇ)+ಅಲ್ಲಿ=ಅಲ್ಲಲ್ಲಿ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಇ'ಕಾರ ಲೋಪವಾಗಿದೆ ಅಂದರೆ ಮಾಯವಾಗಿದೆ.
    ಗಮನಿಸಿರಿ
    ಇಲ್ಲಿ "ಅರ್ಥವು ಕೆಡದಿದ್ದ ಪಕ್ಷದಲ್ಲಿ" ಎಂದು ಹೇಳುವಾಗ, ಸಂಧಿ ಮಾಡುವವರು ಅರ್ಥ ಕೆಡುವುದೇ ಇಲ್ಲವೇ ಎಂದು ಹೇಳಲು ಹಲವು ಸರತಿ ಆಗುವುದಿಲ್ಲ.
  • ಬಾಳನ್ನು = ಬಾಳೆ + ಅನ್ನು ? ಇಲ್ಲವೆ ಬಾಳು + ಅನ್ನು ?
  • ಒಂದು ವೇಳೆ ಬಾಳೆ + ಅನ್ನು = ಬಾಳನ್ನು ಅಂದರೆ ಇಲ್ಲಿ ಅರ್ಥ ಹೇಗೆ ಕಟ್ಟಿದೆ, ಹೇಳಲು ಸಾಧ್ಯವಿಲ್ಲ.
    ಆದುದರಿಂದ ಇಂತಹ ಹಲವು ಸನ್ನಿವೇಶಗಳಲ್ಲಿ ರೂಢಿಯಲ್ಲಿ ಇರುವ ಅರ್ಥವೇ ಸರಿಯೆಂದು ತಿಳಿವುದು.
        ಹಾಗೆ
  • ಬಾಲೆ + ಅನ್ನು = ಬಾಲನ್ನು ತಪ್ಪು ಎಂದು ತಿಳಿವುದು.
  • "ಬಾಲನ್ನು = ಬಾಲು + ಅನ್ನು" ಎಂದೇ ರೂಢಿ.

ಉಲ್ಲೇಖ

Tags:

ಲೋಪಸಂಧಿ ಎಂದರೇನು ?ಲೋಪಸಂಧಿ ಸ್ವರ ಲೋಪ ಸಂಧಿಲೋಪಸಂಧಿ ಲೋಪ ಸಂಧಿಕಾರ್ಯಲೋಪಸಂಧಿ ಉಲ್ಲೇಖಲೋಪಸಂಧಿ

🔥 Trending searches on Wiki ಕನ್ನಡ:

ಜೀವವೈವಿಧ್ಯದ್ವಿರುಕ್ತಿಪ್ರವಾಹಇಂದಿರಾ ಗಾಂಧಿವ್ಯವಸಾಯವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತದ ಸ್ವಾತಂತ್ರ್ಯ ಚಳುವಳಿಕೆ. ಅಣ್ಣಾಮಲೈಎಸ್.ಎಲ್. ಭೈರಪ್ಪಜ್ಯೋತಿ ಪ್ರಕಾಶ್ ನಿರಾಲಾನಾಲ್ವಡಿ ಕೃಷ್ಣರಾಜ ಒಡೆಯರುಫೇಸ್‌ಬುಕ್‌ನಾಗೇಶ ಹೆಗಡೆರಗಳೆಇನ್ಸ್ಟಾಗ್ರಾಮ್ಭಾರತೀಯ ಧರ್ಮಗಳುವಿಲಿಯಂ ಷೇಕ್ಸ್‌ಪಿಯರ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕೆ. ಎಸ್. ನರಸಿಂಹಸ್ವಾಮಿಸತ್ಯಾಗ್ರಹಚದುರಂಗಜ್ಞಾನಪೀಠ ಪ್ರಶಸ್ತಿವಡ್ಡಾರಾಧನೆಉದಯವಾಣಿಮಾಸಬಯಲಾಟಅಜಯ್ ರಾವ್‌ಸಂಪತ್ತಿನ ಸೋರಿಕೆಯ ಸಿದ್ಧಾಂತಭಾರತದ ಪ್ರಧಾನ ಮಂತ್ರಿಸೀತೆವ್ಯಾಕ್ಸಿನೇಷನ್ (ಲಸಿಕೆ ಹಾಕುವುದು)ರವೀಂದ್ರನಾಥ ಠಾಗೋರ್ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಕರ್ನಾಟಕ ಸಶಸ್ತ್ರ ಬಂಡಾಯಪಠ್ಯಪುಸ್ತಕಬಾಬು ರಾಮ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಲಡಾಖ್ರಾಷ್ಟ್ರೀಯ ಉತ್ಪನ್ನದಿಯಾ (ಚಲನಚಿತ್ರ)ಜಾತಿಛಾಯಾಗ್ರಹಣಮಾನವ ಹಕ್ಕುಗಳುಮಾರಾಟ ಪ್ರಕ್ರಿಯೆಭಾರತೀಯ ರಿಸರ್ವ್ ಬ್ಯಾಂಕ್ನೀರಚಿಲುಮೆಬ್ಯಾಂಕ್ಭಾರತೀಯ ಜನತಾ ಪಕ್ಷಜಾಗತೀಕರಣಸಚಿನ್ ತೆಂಡೂಲ್ಕರ್ಬೃಹದೀಶ್ವರ ದೇವಾಲಯಇಮ್ಮಡಿ ಪುಲಿಕೇಶಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಭಾರತೀಯ ಸಂಸ್ಕೃತಿಒಂದು ಮುತ್ತಿನ ಕಥೆಭಾರತದ ಆರ್ಥಿಕ ವ್ಯವಸ್ಥೆಸುದೀಪ್ರಾಷ್ಟ್ರೀಯ ಸೇವಾ ಯೋಜನೆಹಂಪೆಹರಿಹರ (ಕವಿ)ಭಾವನಾ(ನಟಿ-ಭಾವನಾ ರಾಮಣ್ಣ)ಯಣ್ ಸಂಧಿಪ್ರಬಂಧ ರಚನೆದ್ವಿಗು ಸಮಾಸವಿಕಿಪೀಡಿಯಡಿ.ವಿ.ಗುಂಡಪ್ಪಭಾರತೀಯ ಸಂವಿಧಾನದ ತಿದ್ದುಪಡಿಎಲಾನ್ ಮಸ್ಕ್ಆಳಂದ (ಕರ್ನಾಟಕ)ಕಾಳಿದಾಸಕವಿರಾಜಮಾರ್ಗಸೌರ ಶಕ್ತಿಭಾರತ ರತ್ನಬಿಸಿನೀರಿನ ಚಿಲುಮೆರಾಘವಾಂಕ🡆 More