ರೇಷ್ಮೆ

ರೇಷ್ಮೆಯು ರೇಷ್ಮೆ ಹುಳುಗಳು ಉತ್ಪಾದಿಸುವ ಒಂದು ಪ್ರೊಟೀನ್ ನಾರು.

ರೇಷ್ಮೆ ಬಟ್ಟೆಗಳನ್ನುಟ್ಟ ಹೆಂಗೆಳೆಯರ, ಮಕ್ಕಳ, ಮತ್ತು ಎಲ್ಲ ವಯೋಮಾನದ ಜನರ ಸಂಭ್ರಮಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಆಕರ್ಷಕ ಮೈಮಾಟವಿರುವವರಿಗೆ, ಮತ್ತಷ್ಟು ನಿಖಾರತೆಗಳನ್ನು ಕೊಡುವ ದಟ್ಟ ಬಣ್ಣಗಳ, ಹೊಳಪಿನ, ವೈವಿಧ್ಯಮಯ ಸಂಗಮಗಳ ನಿಧಿಯಾದ, ರೇಷ್ಮೆ ಉಡುಪಿಗೆ ಕಾಲ, ದೇಶ ಹಾಗೂ ವಯಸ್ಸಿನ ಪರಿಮಿತಿಯಿಲ್ಲ.

ರೇಷ್ಮೆ
'ರೇಷ್ಮೆ ಹುಳುಗಳು, ಹಿಪ್ಪು ನೇರಳೆ ಸೊಪ್ಪನ್ನು ಮೇಯುತ್ತಿರುವುದು'

ಗುಣಗಳು

ರೇಷ್ಮೆ 
'ಕಕೂನ್' ಗಳು ಇಲ್ಲವೇ 'ರೇಷ್ಮೆ ಗೂಡುಗಳು ಕುದಿಯುವ ನೀರಿನಲ್ಲಿ'

ಮೃದುವಾಗಿ ಹಗುರವಾದ ರೇಷ್ಮೆಯ ಶಿಫಾರಸು ಮಾಡಲು ಕಾರಣವಿಲ್ಲದಿಲ್ಲ. ಅದಕ್ಕೆ ದೈವದತ್ತವಾದ ಹಲವಾರು ಶ್ರೇಷ್ಟ ಗುಣಗಳು ಇರುವುದೇ ಕಾರಣವಾಗಿದೆ. ಉಕ್ಕಿನತಂತಿಗಿಂತ ಹೆಚ್ಚು ಬಲಯುತವಾದ ಗುಣ ಕಲ್ಪನೆಗೆ ಮೀರಿದ್ದು. ತೇವವನ್ನು ಹೀರಿಕೊಳ್ಳುವ ಗುಣ, ಉಡುವವರ ಮೈನ ಬೆವರನ್ನು ನಿಯಂತ್ರಿಸುವಲ್ಲಿ ಸಹಾಯಕವಾಗುತ್ತದೆ. ಆದರೆ ಉಷ್ಣಾಂಷವನ್ನು ಹೀರಿಕೊಳ್ಳುವ ಗುಣವಿಲ್ಲ. ಬೇಸಿಗೆಯಲ್ಲಿ ತಂಪು, ಚಳಿಗಾಗಾಲದಲ್ಲಿ ಬೆಚ್ಚಗಿನ ಅನುಭವನೀಡುವ ವಿಶಿಷ್ಟವಸ್ತ್ರಗಳು ರೇಷ್ಮೆಯಿಂದ ಸಾಧ್ಯ. ಇವನ್ನೆಲ್ಲಾ ಒಟ್ಟಾರೆ ಮೇಳೈಸುವ ಸಾಧ್ಯತೆ ರೇಷ್ಮೆಹುಳುಗಳ ಚಾಣಾಕ್ಷತನದಿಂದ ಹೊರಸೂಸುವ 'ಪ್ರೋಟೀನ್ ಯುಕ್ತ' ಎಳೆಗಳಿಂದ ಸಾಧ್ಯವಾಗಿದೆ ಎನ್ನುವುದನ್ನು ಕಲ್ಪನಾತೀತ. ನೈಸರ್ಗಿಕ ರೇಷ್ಮೆಯಲ್ಲಿ ಪ್ರಮುಖವಾಗಿ ನಾಲ್ಕುವಿಧಗಳನ್ನು ಕಾಣಬಹುದು. ಸುಮಾರಾಗಿ ರೇಷ್ಮೆ ಉತ್ಪಾದಿಸುವ ವಿಶ್ವದ ಪ್ರಮುಖ ದೇಶಗಳೆಲ್ಲಾ ಹಿಪ್ಪುನೇರಳೆ ಸೊಪ್ಪನ್ನು ಉಣ್ಣುವ ರೇಷ್ಮೆಯನ್ನೇ ಹೆಚ್ಚಾಗಿ ಬಳಸುತ್ತಾರೆ.

ಭಾರತದಲ್ಲಿ ರೇಷ್ಮೆ ಉದ್ಯಮ

'ರೇಷ್ಮೆ ಉದ್ಯಮ,' ಭಾರತದ ದೇಶದ ಅತಿ ಪುರಾತನ ಪ್ರಮುಖ 'ವಸ್ತ್ರೌದ್ಯೋಗ'ದ ಒಂದು ಭಾಗವಾಗಿದೆ. ಇಲ್ಲಿ ಸುಮಾರು ೬ ಮಿಲಿಯನ್ ಕೆಲಸಗಾರರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕೆಲಸಮಾಡುತ್ತಿದ್ದಾರೆ. ಕಾರ್ಖಾನೆಗಳ ಕೆಲಸಗಾರರು, ಮಾರುಕಟ್ಟೆಯ ವ್ಯಾಪಾರಿಗಳು, ಕಾಲೇಜ್ ನ ಬೋಧಕರು, ಸಂಶೋಧಕರು, ಉಡುಪುಗಳ ಮಾರಾಟಗಾರರು, ಉದ್ಯಮಿಗಳು, ಮತ್ತು ಹೆಚ್ಚಾಗಿ, ರೈತಾಪಿಕೆಲಸದಲ್ಲಿ ತೊಡಗಿಯೂ ಬಿಡುವಿನ ವೇಳೆಯಲ್ಲಿ ರೇಷ್ಮೆ ಉತ್ಪಾದಿಸುವವರ್ಗದ ಕಾರ್ಮಿಕರು ಕಾಣಿಸಿಕೊಳ್ಳುತ್ತಾರೆ. ದೇಶದ ಒಟ್ಟಾರೆ ರೇಷ್ಮೆ ಉತ್ಪಾದನೆ, ೧೭,೩೦೦ ಟನ್ ಗಳು,

  • ಮಲ್ಬರ್ರಿ ರೇಷ್ಮೆ
  • ಟಸ್ಸಾ 'ರೇಷ್ಮೆ'
  • ಈರಿ 'ರೇಷ್ಮೆ'
  • ಮುಗಾ 'ರೇಷ್ಮೆ'

ಬಾಂಬಿಕ್ಸ್ ತಳಿಯ 'ರೇಷ್ಮೆ ಹುಳುಗಳು 'ಹಿಪ್ಪುನೇರಳೆಗಿಡದ ಸೊಪ್ಪನ್ನು' ತಿಂದು 'ರೇಷ್ಮೆ' ಎಳೆಗಳನ್ನು ಹೊರಸೂಸುತ್ತವೆ. 'ಗೃಹೋದ್ಯೋಗ'ವೆಂದು ಕರೆಯಲಾಗುವ 'ಸೆರಿಕಲ್ಚರ್ 'ನಲ್ಲಿ ರೇಷ್ಮೆ ಹುಳುಗಳ ಪಾತ್ರ ಅತಿಮುಖ್ಯ. ಈ ಹುಳುಗಳನ್ನು ಮನೆಯ ಒಳ ಆಂಗಣದಲ್ಲೇ ಸಾಕಲಾಗುತ್ತದೆ. 'ಸಿಲ್ಕ್ ಮಾರ್ಕ್' ನ, ಸಿಇಒ, 'ಸುಕುಮಾರ ಮೆನನ್' ಹೇಳುವಂತೆ, ಭಾರದಲ್ಲಿ ಪ್ರಮುಖ ರಾಜ್ಯಗಳೆಂದರೆ,

  • ಕರ್ನಾಟಕ,
  • ಆಂಧ್ರ ಪ್ರದೇಶ
  • ಪಶ್ಚಿಮ ಬಂಗಾಳ
  • ತಮಿಳುನಾಡು
  • ಜಾರ್ ಖಂಡ್,
  • ಛತ್ತೀಸ್ ಘರ್,
  • ಒಡಿಶಾ,
  • ಜಮ್ಮು ಮತ್ತು ಕಾಶ್ಮೀರ

'ರೇಷ್ಮೆ' ಯಂತಹ ಸುಂದರ ಹಾಗೂ ಕೀಟಗಳಿಂದ ಲಭ್ಯವಾಗುವ 'ಫೈಬರ್ 'ನ ಉತ್ಪಾದನೆಯ ವಿಧಿ-ವಿಧಾನಗಳು ಅತ್ಯಂತ ರೋಚಕ. ರೇಷ್ಮೆ ಹುಳುಗಳ ಜೀವನದ ೪ ಹಂತಗಳು ಹೀಗಿವೆ.

  • ಮೊಟ್ಟೆ,
  • ಲಾರ್ವ,
  • ಪ್ಯೂಪಾ, ಮತ್ತು
  • ವಯಸ್ಕ ಚಿಟ್ಟೆ.

'ಚಾಕಿ ಕಟ್ಟುವ ಪ್ರಕ್ರಿಯೆ'

'ಫೆರೊಮೇನ್,' ಎಂಬ 'ಸುಗಂಧ ದ್ರವ'ವನ್ನು ಗಂಡು ಪತಂಗ ಹುಡುಕಿಕೊಂಡು ಸಾಗುತ್ತಾ, ಹೆಣ್ಣುಪತಂಗದ ಸಮಾಗಮದಿಂದಾಗಿ ನೂರಾರು ಮೊಟ್ಟೆಗಳನ್ನು ಇಡುತ್ತದೆ. ಇಂತಹ ಮೊಟ್ಟಗಳಿಗೆ ಅಪಾರ ಬೇಡಿಕೆಯಿದೆ. ಅವನ್ನು ಕೇಂದ್ರ 'ರೇಷ್ಮೆ' ಮಂಡಳಿ ಹಾಗೂ ಖಾಸಗಿ ವ್ಯಾಪಾರಸಂಸ್ಥೆಗಳಿದ ಖರೀದಿಸಬಹುದು. ೧೪ ದಿನಗಳ ಬಳಿಕ ಮೊಟ್ಟೆಗಳು ಒಡೆದು ಲಾರ್ವಾ ಅಥವಾ ಕಂಬಳಿಹುಳು ಹೊರಗೆ ಬರುತ್ತದೆ. ಸ್ಥಳೀಯ ಕೃಷಿಕರು ಅದಕ್ಕೆ 'ಚಾಕಿ ಕಟ್ಟುವುದು' ಎಂದು ಹೇಳುತ್ತಾರೆ. ಬೆಚ್ಚನೆಯ ವಾತಾವರಣ ಇದಕ್ಕೆ ಅತಿ ಮುಖ್ಯ, ಈಹುಳುಗಳು ತಿನ್ನುವ ಪ್ರಕ್ರಿಯಯನ್ನು ಗಮನಿಸಿದರೆ ಎಂಥವರಿಗೂ ಅಚ್ಚರಿಯಾಗುತ್ತದೆ. ಎಲೆಗಳನ್ನು ನುಣ್ಣಗೆ ಹದವಾಗಿ ಕೊಚ್ಚಿ ಹಾಕಿದಷ್ಟೂ ಅವು ಗಬಗಬನೆ ತಿನ್ನುತ್ತಲೇ ಸಾಗುತ್ತವೆ.ಇಡೀದಿನ ಸೊಪ್ಪನ್ನು ತಿನ್ನುವುದೇ ಅವುಗಳ ಪ್ರಮುಖ ಕೆಲಸವಾಗಿರುತ್ತದೆ. ಹುಳುಗಳು ಸೊಪ್ಪಿನಲ್ಲಿರುವ 'ಸಿಎಸ್-ಜಾಸ್ಮೋನ್ ಎಂಬ ಸುವಾಸನಾ ದ್ರವ್ಯದಿಂದ ಸಂಮೋಹಿತವಾಗಿರುತ್ತವೆ. ಹುಳುವಿನ ತಲೆ ಕಪ್ಪುಬಣ್ಣಕ್ಕೆ ತಿರುಗುವುದನ್ನೇ ಗಮನಿಸುತ್ತಿರಬೇಕು. ಆಗ ಹುಳುಗಳು 'ಜ್ವರಕ್ಕೆ ಕೂತಿವೆ' ಎಂದು ತಿಳಿಯಬೇಕು. ಈ ಸಮಯದಲ್ಲಿ ಹುಳು ಆಹಾರಸೇವನೆಯನ್ನು ಪೂರ್ಣವಾಗಿ ನಿಲ್ಲಿಸುತ್ತವೆ.ದೇಹದ ಚರ್ಮದಲ್ಲಿ ಪೊರೆ ಕಾಣಿಸಿಕೊಂಡು ಅದು ಹೊರಕ್ಕೆ ಬರುತ್ತದೆ. ೪ ಹಂತಗಳಲ್ಲಿ ಜ್ವರಕಾಣಿಸಿಕೊಳ್ಳುತ್ತದೆ.ವಿಶ್ವದ 'ರೇಷ್ಮೆ' ಹುಳಗಳು ಎಂಬ ಎರಡು ಇವೆ. ಅದರಲ್ಲಿ ಭಾರತದ ಹುಳಗಳ ವರ್ಗ, 'ಬೈವೋಲ್ಟೇನ್' ಎಂಬ ವಿಭಾಗಕ್ಕೆ ಸೇರಿದೆ. ಇವು ಬಿಳಿಬಣ್ಣದವು. ಬೆನ್ನಿನಮೇಲೆ ಪುಟ್ಟ ಮುಳ್ಳಿನಾಕಾರದ ರಚನೆಯನ್ನು ಕಾಣಬಹುದು. ಪ್ರತಿಹಂತದ ಜ್ವರಮುಗಿದಮೇಲೂ ಕೊಡುವ ಸೊಪ್ಪಿನೂಟದ ರೀತಿಬೇರೆಯದೇ ಅಗಿರಬೇಕು. ಅಂದರೆ ಬೆಳೆದ ಸೊಪ್ಪನ್ನು ಕೊಡಬೇಕಾಗುತ್ತದೆ. ಹುಳುಗಳು ಬಿದುರಿನ ವೃತ್ತಾಕಾರದ ಭಾರಿ ತಟ್ಟೆಯಲ್ಲಿ ಶೇಖರವಾಗಿರುತ್ತವೆ. ಪ್ರತಿದಿನ ಬಿದಿರು ತಟ್ಟಯನ್ನು ಶುಚಿಗೊಳಿಸುವುದಲ್ಲದೆ 'ಹುಳುಗಳ ಹಿಕ್ಕೆ'ಯನ್ನೂ ತಟ್ಟೆಯಲ್ಲಿ ಒಂದೂ ಇಲ್ಲದಂತೆ ಜಾಗೃತಿವಹಿಸಬೇಕು. ತಟ್ಟೆಗಳನ್ನು ಸುಲಭವವಾಗಿ ಬದಲಾಯಿಸಬಹುದು. ಶುಚಿಯಾಗಿಡದಿದ್ದಲ್ಲಿ ತೇವಾಂಶದಿಂದ ' ಫಂಗಸ್ ಜಾಡ್ಯ ಉಂಟಾಗಿ' ರೋಗ ಪಸರಿಸುವ ಸಾಧ್ಯತೆ ಹೆಚ್ಚು. ಅದೂ ಅಲ್ಲದೆ, 'ಊಜಿನೊಣಗಳು ದಾಣಿಯಿಡುತ್ತವೆ.

' ಹುಳು ಹಣ್ಣಾಗುವ ಹಂತ'

'೪ ನೆಯ ಜ್ವರ'ದ ನಂತರ, ಅಂದರೆ ಮೊಟ್ಟೆಯೊಡೆದು 'ಲಾರ್ವ' ಹೊರಬಂದ ೨೮-೩೦ ದಿನಗಳಲ್ಲಿ ರೇಷ್ಮೆ ಸ್ವಲ್ಪ 'ಹಳದಿಬಣ್ಣ'ಕ್ಕೆ ತಿರುಗಿ ದೇಹ ಸ್ವಲ್ಪಮಟ್ಟಿಗೆ ಪಾರದರ್ಶಕವಾಗುತ್ತದೆ. ಹುಳುಗಳ ಬಾಯಿನಿಂದ ಸೂಕ್ಷ್ಮ ವಾದ ರೇಷ್ಮೆ ಎಳೆಗಳು ಬರಲು ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆಯನ್ನು ಸ್ಥಳೀಯ 'ರೇಷ್ಮೆ ಕೃಷಿಕರು, ’ಹುಳು ಹಣ್ಣಾಗುವುದು’ ಎನ್ನುತ್ತಾರೆ. ಆ ಸಮಯದಲ್ಲಿ ಹುಳುಗಳನ್ನು 'ಬಿದಿರಿನ ಚಂದ್ರಿಕೆ'ಗೆ ವರ್ಗಾಯಿಸಬೇಕು. ಅಂದರೆ ಅದಕ್ಕೆ 'ಗೂಡು ನಿರ್ಮಿಸಲು ಆಧಾರ' ಒದಗಿಸಬೇಕು. ಸುಮಾರು ೨೪-೩೬ ಗಂಟೇಗಳಲ್ಲಿ ೫೦೦-೯೦೦ ಮೀಟರ್ ಉದ್ದವಿರುವ ಎಳೆಯಿಂದ ಈಗೂಡು ಸಿದ್ಧವಾಗಿ ಒಳಗಡೆ ಪ್ಯೂಪಾ ಅವಸ್ಥೆಯಲ್ಲಿರುವ ಹುಳು ಇರುತ್ತದೆ. ೧ ಪೌಂಡ್ ರೇಷ್ಮೆ ನೂಲು ತೆಗೆಯಲು ೨,೦೦೦-೩,೦೦೦ ಗೂಡುಗಳ ಅವಶ್ಯಕತೆಯಿದೆ. ಹೀಗೆ, 'ಪತಂಗ'ದಿಂದ 'ರೇಷ್ಮೆ'ಯ ತನಕದ ದೀರ್ಘ ಪಯಣ, ಅತಿ ರೋಚಕವಾದದ್ದು.

ಗೂಡುಗಳನ್ನು (Cocoons) ನೀರಿನಲ್ಲಿ ಬೇಯಿಸುವ ಕೊನೆಯ ಹಂತ

ಒಂದು ರೇಷ್ಮೆ ಗೂಡು ೩೬೦೦ ಅಡಿ ಉದ್ದದ ಒಂದೇ ಎಳೆಯಿಂದ ಮಾಡಲ್ಪಟ್ಟಿರುತ್ತದೆ. ಒಂದು ಉಪಯುಕ್ತ ದಾರವನ್ನು ತಯಾರಿಸಲು ಅಂತಹ ೮ ಎಳೆಗಳು ಬೇಕು. ಈ ರೀತಿ ಸುಮಾರು ೪೦,೦೦೦ ರೇಷ್ಮೆ ಹುಳುಗಳಿಂದ ೩೬೦೦ ಅಡಿ ಉದ್ದದ ೫೦೦೦ ದಾರಗಳನ್ನು ತಯಾರಿಸಬಹುದು.
ಒಂದು ಇಂಚುಗೆ ೨೦೦ ದಾರಗಳ ಲೆಕ್ಕದಲ್ಲಿ (ಒಂದು ಚದುರ ಇಂಚಿಗೆ ೪೦೦ ಇಂಚು ದಾರ) ೮ ಹುಳಗಳಿಂದ (೩೬೦೦ x ೧೨) / ೪೦೦ = ೧೦೮ ಚದುರ ಇಂಚುಗಳ ಬಟ್ಟೆ ತಯಾರಾಗುತ್ತದೆ. ಆದ್ದರಿಂದ ೪೦,೦೦೦ ಹುಳಗಳಿಂದ (೫೦೦೦ x ೧೦೮)/೧೪೪ = ೩,೭೫೦ ಚದುರ ಅಡಿಗಳ ಬಟ್ಟೆ ತಯಾರಾಗುತ್ತದೆ.

ನಂತರ ಗೂಡುಗಳನ್ನು ನೀರಿನಲ್ಲಿ ಬೇಯಿಸಿ, ಒಳಗಿರುವ 'ಪ್ಯೂಪಾ'ವನ್ನು ಕೊಲ್ಲಲಾಗುತ್ತದೆ. ಇದು ಅತ್ಯವಶ್ಯಕ. ಇಲ್ಲವಾದರೆ, 'ಪ್ಯೂಪಾ ಚಿಟ್ಟೆಯಾಗಿ ಮಾರ್ಪಟ್ಟು ಗೂಡು ಹರಿದುಕೊಂಡು ಹೊರಬರುತ್ತದೆ. ಇದರಿಂದ ಆಗಲೇ ತಯಾರಾಗಿರುವ 'ರೇಷ್ಮೆ' ಎಳೆಗಳು ತುಂಡಾಗಿ ಹಾಳಾಗುತ್ತವೆ. ಅಂತಹ ರೇಷ್ಮೆಯಿಂದ ಅತ್ಯುತ್ತಮ ಬೆಲೆಬಾಳುವ ವಸ್ತ್ರಗಳನ್ನು ಮಾಡಲು ಅಸಾಧ್ಯ. ಬಿಸಿನೀರಿನಲ್ಲಿ ಬೇಯಿಸುವ ಸಮಯದಲ್ಲಿ ಗೂಡಿನಿಂದ ಎಳೆಗಳನ್ನು ತೆಗೆದು ಸರಾಗವಾಗಿ ಎಳೆಗಳನ್ನು ಸುತ್ತಿಡಬಹುದು.

ರೇಷ್ಮೆ ತಯಾರಿಕೆಯ ಹಂತಗಳು

ಚೈನಾದೇಶದಲ್ಲಿ ರೇಷ್ಮೆ ತಯಾರಿಸುವ ವಿಧಾನ

ನೋಡಿ

Tags:

ರೇಷ್ಮೆ ಗುಣಗಳುರೇಷ್ಮೆ ಭಾರತದಲ್ಲಿ ಉದ್ಯಮರೇಷ್ಮೆ ಚಾಕಿ ಕಟ್ಟುವ ಪ್ರಕ್ರಿಯೆರೇಷ್ಮೆ ಹುಳು ಹಣ್ಣಾಗುವ ಹಂತರೇಷ್ಮೆ ಗೂಡುಗಳನ್ನು (Cocoons) ನೀರಿನಲ್ಲಿ ಬೇಯಿಸುವ ಕೊನೆಯ ಹಂತರೇಷ್ಮೆ ತಯಾರಿಕೆಯ ಹಂತಗಳುರೇಷ್ಮೆ ಚೈನಾದೇಶದಲ್ಲಿ ತಯಾರಿಸುವ ವಿಧಾನರೇಷ್ಮೆ ನೋಡಿರೇಷ್ಮೆ

🔥 Trending searches on Wiki ಕನ್ನಡ:

ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಜಗನ್ಮೋಹನ್ ಅರಮನೆಗೋಲಗೇರಿಶಿಕ್ಷಣಮಂಜುಳಕಲ್ಕಿಕ್ರೈಸ್ತ ಧರ್ಮಹರಪ್ಪದ್ವಿಗು ಸಮಾಸಶಾಸನಗಳುಕೆ. ಎಸ್. ನರಸಿಂಹಸ್ವಾಮಿಪಾಕಿಸ್ತಾನಮಳೆಎಳ್ಳೆಣ್ಣೆಏಕರೂಪ ನಾಗರಿಕ ನೀತಿಸಂಹಿತೆನಾಥೂರಾಮ್ ಗೋಡ್ಸೆಯೋಗಧೃತರಾಷ್ಟ್ರಪೂರ್ಣಚಂದ್ರ ತೇಜಸ್ವಿಸೀಬೆಕದಂಬ ರಾಜವಂಶಭಾರತದ ವಿಜ್ಞಾನಿಗಳುರಾಮಾಚಾರಿ (ಕನ್ನಡ ಧಾರಾವಾಹಿ)ಬಾಬರ್ಇತಿಹಾಸಅಂಟುಪರಿಸರ ರಕ್ಷಣೆಅರಿಸ್ಟಾಟಲ್‌ಕಾಲಾಯ ತಸ್ಮೈ ನಮಃ (ಚಲನಚಿತ್ರ)ವಾಟ್ಸ್ ಆಪ್ ಮೆಸ್ಸೆಂಜರ್ಗರ್ಭಧಾರಣೆಭರತನಾಟ್ಯಹಣಕಾಸುವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಕರ್ನಾಟಕದ ಮುಖ್ಯಮಂತ್ರಿಗಳುದ್ವಾರಕೀಶ್ಕನ್ನಡ ಅಭಿವೃದ್ಧಿ ಪ್ರಾಧಿಕಾರಹಲ್ಮಿಡಿ ಶಾಸನಕರ್ನಾಟಕದ ರಾಜ್ಯಪಾಲರುಗಳ ಪಟ್ಟಿನಯಸೇನಭಾರತ ಬಿಟ್ಟು ತೊಲಗಿ ಚಳುವಳಿಕರ್ನಾಟಕದ ಮಹಾನಗರಪಾಲಿಕೆಗಳುಕರಗ (ಹಬ್ಬ)ಶಬರಿಹಿಂದೂ ಧರ್ಮಸುಭಾಷ್ ಚಂದ್ರ ಬೋಸ್ರಾಮಾಯಣಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಪ್ಲಾಸ್ಟಿಕ್ರತ್ನಾಕರ ವರ್ಣಿಹೊಯ್ಸಳಚಿದಾನಂದ ಮೂರ್ತಿಭಾರತೀಯ ಮೂಲಭೂತ ಹಕ್ಕುಗಳುವಿರಾಟ್ ಕೊಹ್ಲಿನಾಯಕ (ಜಾತಿ) ವಾಲ್ಮೀಕಿಇದ್ದಿಲುಹಿಂದುಸ್ತಾನಿ ಶಾಸ್ತ್ರೀಯ ಸಂಗೀತನೀತಿ ಆಯೋಗಬರಭಾರತೀಯ ನೌಕಾಪಡೆಊಳಿಗಮಾನ ಪದ್ಧತಿಭಾರತದ ನದಿಗಳುಕುಕ್ಕೆ ಸುಬ್ರಹ್ಮಣ್ಯ ದೇವಾಲಯಡಿ.ಕೆ ಶಿವಕುಮಾರ್ಹಣಕರ್ನಾಟಕದಲ್ಲಿ ಪಂಚಾಯತ್ ರಾಜ್ಹಾಸನಭಾವನಾ(ನಟಿ-ಭಾವನಾ ರಾಮಣ್ಣ)ಲೋಪಸಂಧಿನೇಮಿಚಂದ್ರ (ಲೇಖಕಿ)ಮಳೆನೀರು ಕೊಯ್ಲುದೇವರಾಯನ ದುರ್ಗಮನಮೋಹನ್ ಸಿಂಗ್ಬಿ.ಎಸ್. ಯಡಿಯೂರಪ್ಪಕನ್ನಡದಲ್ಲಿ ಸಣ್ಣ ಕಥೆಗಳುಯೋನಿವಾಣಿಜ್ಯ(ವ್ಯಾಪಾರ)ಡಾಪ್ಲರ್ ಪರಿಣಾಮದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),🡆 More