ಸೀಬೆ

ಸೀಬೆ (ಸೀಬೆಹಣ್ಣು - ಚೇಪೆ ಕಾಯಿ - ಪೇರಲ) ಉಷ್ಣವಲಯದ ಪೊದರುಗಳು ಮತ್ತು ಸಣ್ಣ ಮರಗಳ ಸುಮಾರು ೧೦೦ ಪ್ರಜಾತಿಗಳನ್ನು ಹೊಂದಿರುವ ಮರ್ಟಲ್ ಕುಟುಂಬ (ಮಿರ್ಟೇಸಿಯೀ) ಜಾತಿ ಸೈಡಿಯಮ್‍ನಲ್ಲಿನ ಒಂದು ಸಸ್ಯ.

Common guava
ಸೀಬೆ
Common guava (Psidium guajava) fruit
Conservation status
ಸೀಬೆ
Least Concern  (IUCN 3.1)
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಮಿರ್ಟೇಲ್ಸ್
ಕುಟುಂಬ: ಮಿರ್ಟೇಸೀ
ಕುಲ: ಸಿಡಿಯಮ್
ಪ್ರಜಾತಿ:
P. guajava
Binomial name
Psidium guajava
L.
ಸೀಬೆ
Honey bee on a Psidium guajava flower. Flower buds and leaf buds are also visible.
ಸೀಬೆ
Common guava seedling, 14 months
ಸೀಬೆ
ಸೀಬೆ ಹಣ್ಣು
ಸೀಬೆ
ಕೆಂಪು ಸೀಬೆ

ಸಿಡಿಯಮ್ ಗ್ವಜಾವಾ ಎಂಬುದು ಇದರ ಸಸ್ಯಶಾಸ್ತ್ರೀಯ ಹೆಸರು. ಹಿಂದಿಯಲ್ಲಿ ಅಮರೂದ್, ಜಮ್‌ಫಲ್ ಎಂಬ ಹೆಸರುಗಳಿವೆ.ಇದು ಮೆಕ್ಸಿಕೊ, ಮಧ್ಯ ಅಮೇರಿಕಾ, ಮತ್ತು ದಕ್ಷಿಣ ಅಮೇರಿಕಾದ ಉತ್ತರ ಭಾಗಕ್ಕೆ ಸ್ಥಳೀಯವಾಗಿದೆ. ಸೀಬೆಯನ್ನು ಈಗ ಉಷ್ಣವಲಯಗಳು ಮತ್ತು ಉಪೋಷ್ಣವಲಯಗಳಾದ್ಯಂತ ಆಫ಼್ರಿಕಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಕರಿಬಿಯನ್, ಉತ್ತರ ಅಮೇರಿಕಾ, ಹವಾಯಿ, ನ್ಯೂ ಜ಼ೀಲಂಡ್, ಆಸ್ಟ್ರೇಲಿಯಾ ಮತ್ತು ಸ್ಪೇನ್‍ನ ಉಪೋಷ್ಣವಲಯದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ ಹಾಗು ದೇಶೀಕರಿಸಲಾಗಿದೆ.

ಕೃಷಿ

ಸಸ್ಯ ಸು. 4.5-7.5 ಮೀ ಎತ್ತರ ಬೆಳೆಯುತ್ತದೆ. ಇದನ್ನು ಭಾರತದಲ್ಲಿ ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ್, ಪಂಜಾಬ್, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬೆಳೆಸುತ್ತಾರೆ. ಇದು ಅತಿ ಬಿಸಿಲು ಮತ್ತು ಬರಗಾಲ ತಡೆದುಕೊಳ್ಳಬಲ್ಲದು. ಸಾಮಾನ್ಯವಾಗಿ ಎಲ್ಲ ತರಹದ ಮಣ್ಣಿನಲ್ಲೂ ಬೆಳೆಯುತ್ತದೆ.

ದಕ್ಷಿಣ ಭಾರತದಲ್ಲಿ ಇದು ಸ್ವಾಭಾವಿಕ ಬೆಳೆಯಾಗಿದೆ.

ಉಪಯೋಗಗಳು

ಔಷಧೀಯ ಸಸ್ಯವಾಗಿಯೂ ಇದು ಬಳಕೆಯಲ್ಲಿದೆ. ಹಣ್ಣಿನ ತಿರುಳು ದಪ್ಪ, ಬಲು ರುಚಿಕರ. ಇದರಲ್ಲಿ ‘ಸಿ’ ಜೀವಸತ್ತ್ವ ಹೇರಳವಾಗಿದೆ. ಸ್ವಲ್ಪ ಕ್ಯಾಲ್ಶಿಯಮ್ ಕೂಡ ಇರುತ್ತದೆ. ಕಚ್ಚಾ ಹಣ್ಣನ್ನು ನೇರವಾಗಿ ಸೇವಿಸಬಹುದು. ಹಣ್ಣನ್ನು ಒಣಗಿಸಿ ಪುಡಿಮಾಡಿ ಜಾಮ್ ಮತ್ತು ಜೆಲ್ಲಿ ರೂಪದಲ್ಲಿ ಉಪಯೋಗಿಸಬಹುದು. ಒಣಗಿಸಿದರೂ ‘ಸಿ’ ಜೀವಸತ್ತ್ವ ನಷ್ಟವಾಗದು. ಇದಲ್ಲದೆ ಸೀಬೆಕಾಯಿ, ಸೀಬೆಎಲೆ ಹಾಗೂ ಚಕ್ಕೆಗಳನ್ನು ಬಾಯಿಹುಣ್ಣು, ವಸಡಿನ ರಕ್ತಸ್ರಾವ, ತುರಿಕಜ್ಜಿಗಳಿಗೆ ಔಷಧ ರೂಪದಲ್ಲಿ ಉಪಯೋಗಿಸಬಹುದು.

ಉಲ್ಲೇಖಗಳು

ಸೀಬೆ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೀಬೆ

Tags:

ಆಗ್ನೇಯ ಏಷ್ಯಾಆಫ್ರಿಕಾಆಸ್ಟ್ರೇಲಿಯಾಉತ್ತರ ಅಮೇರಿಕಾಕುಟುಂಬಜಾತಿದಕ್ಷಿಣ ಅಮೇರಿಕಾದಕ್ಷಿಣ ಏಷ್ಯಾನ್ಯೂ ಜೀಲ್ಯಾಂಡ್ಪೊದರುಮರಮೆಕ್ಸಿಕೊಸಸ್ಯಸ್ಪೇನ್ಹವಾಯಿ

🔥 Trending searches on Wiki ಕನ್ನಡ:

ಚಂದನಾ ಅನಂತಕೃಷ್ಣಚಿಕ್ಕಮಗಳೂರುಬೇಲೂರುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕನ್ನಡ ಸಾಹಿತ್ಯ ಸಮ್ಮೇಳನಬುಡಕಟ್ಟುವಿಶ್ವಕೋಶಗಳುಕನ್ನಡ ಸಾಹಿತ್ಯ ಪ್ರಕಾರಗಳುಭರತ-ಬಾಹುಬಲಿಗೋತ್ರ ಮತ್ತು ಪ್ರವರಮೈಸೂರು ಅರಮನೆಕ್ರೈಸ್ತ ಧರ್ಮಹುಣಸೆಗ್ರಾಮ ದೇವತೆಝಾನ್ಸಿ ರಾಣಿ ಲಕ್ಷ್ಮೀಬಾಯಿ೧೬೦೮ಬಹುವ್ರೀಹಿ ಸಮಾಸಕರ್ನಾಟಕದ ಕಲೆ ಮತ್ತು ಸಂಸ್ಕೃತಿಆಸ್ಪತ್ರೆಭಾರತೀಯ ಸ್ಟೇಟ್ ಬ್ಯಾಂಕ್ನಾಲತವಾಡತುಂಗಭದ್ರಾ ಅಣೆಕಟ್ಟುಮೈಸೂರು ಸಂಸ್ಥಾನಪರಿಸರ ಕಾನೂನುಕುಟುಂಬದಶಾವತಾರವಿಭಕ್ತಿ ಪ್ರತ್ಯಯಗಳುಜಾಗತೀಕರಣಎಚ್.ಎಸ್.ಶಿವಪ್ರಕಾಶ್ಗರ್ಭಧಾರಣೆವಿರಾಟ್ ಕೊಹ್ಲಿಕರ್ನಾಟಕದ ನದಿಗಳುಮಣ್ಣಿನ ಸಂರಕ್ಷಣೆಸಾಂಸ್ಥಿಕ ಆಡಳಿತಪ್ಯಾರಾಸಿಟಮಾಲ್ಹೊಯ್ಸಳೇಶ್ವರ ದೇವಸ್ಥಾನಮುಖೇಶ್ ಅಂಬಾನಿಮಹಾವಿಷ್ಣುಋತುಶ್ರೀ ಮಂಜುನಾಥ (ಚಲನಚಿತ್ರ)ಮದಕರಿ ನಾಯಕಕರ್ಬೂಜಅಶ್ವತ್ಥಮರಸುಧಾರಾಣಿಬಿ.ಎಫ್. ಸ್ಕಿನ್ನರ್ಚಂದ್ರಯಾನ-೩ಆಯುರ್ವೇದಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಕರ್ಮಧಾರಯ ಸಮಾಸಎನ್. ರಂಗನಾಥ ಶರ್ಮಾಮೈಸೂರುಕಲ್ಯಾಣ್ಗ್ರಂಥಾಲಯಗಳುಸಾರಾ ಅಬೂಬಕ್ಕರ್ವಿಜಯನಗರಕರ್ನಾಟಕ ರತ್ನಭಾರತದ ಚುನಾವಣಾ ಆಯೋಗಭಕ್ತಿ ಚಳುವಳಿರಗಳೆರೈತಅರ್ಜುನಚಾರ್ಲ್ಸ್ ಡಾರ್ವಿನ್ಟಿ.ಪಿ.ಕೈಲಾಸಂಭಾರತೀಯ ಸಂವಿಧಾನದ ತಿದ್ದುಪಡಿಎಲ್ಲೋರಇಂಡಿಯನ್ ಪ್ರೀಮಿಯರ್ ಲೀಗ್ಕನ್ನಡಪ್ರಭನೆಲ ಮಾಲಿನ್ಯಆವಕಾಡೊಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಟಿಪ್ಪು ಸುಲ್ತಾನ್ಬಾಲಕಾರ್ಮಿಕಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಇಮ್ಮಡಿ ಪುಲಿಕೇಶಿಬರವಣಿಗೆ🡆 More