ಬರವಣಿಗೆ

ಬರವಣಿಗೆ'ಯು ಭಾಷೆ ಮತ್ತು ಭಾವನೆಯನ್ನು ಚಿಹ್ನೆಗಳು ಮತ್ತು ಸಂಕೇತಗಳ ಮೂಲಕ ನಿರೂಪಿಸುವ ಮಾನವ ಸಂವಹನದ ಒಂದು ಮಾಧ್ಯಮ.

ಬಹುತೇಕ ಭಾಷೆಗಳಲ್ಲಿ, ಬರವಣಿಗೆಯು ಮಾತು ಅಥವಾ ಮಾತನಾಡಲಾದ ಭಾಷೆಗೆ ಪೂರಕವಾಗಿದೆ. ಬರವಣಿಗೆಯು ಒಂದು ಭಾಷೆಯಲ್ಲ, ಬದಲಿಗೆ ಭಾಷೆಗಳನ್ನಓದುವಂತೆ ಮಾಡಲು ಬಳಸಲಾದ ಸಾಧನ. ಒಂದು ಭಾಷಾ ವ್ಯವಸ್ಥೆಯಲ್ಲಿ, ಬರವಣಿಗೆಯು ಮಾತಿನಂತೆಯೇ ಅನೇಕ ಸಮಾನ ರಚನೆಗಳ ಮೇಲೆ ಅವಲಂಬಿಸಿದೆ, ಉದಾಹರಣೆಗೆ, ಶಬ್ದಸಂಗ್ರಹ, ವ್ಯಾಕರಣ, ಮತ್ತು ಶಬ್ದಾರ್ಥಶಾಸ್ತ್ರ, ಜೊತೆಗೆ ಮತ್ತೊಂದು ಹೆಚ್ಚುವರಿ ಅವಲಂಬನೆಯಾದ ಚಿಹ್ನೆಗಳು ಅಥವಾ ಸಂಕೇತಗಳ ವ್ಯವಸ್ಥೆ. ಬರವಣಿಗೆಯ ಫಲಿತಾಂಶವನ್ನು ಪಠ್ಯ ಎಂದು ಕರೆಯಲಾಗುತ್ತದೆ, ಮತ್ತು ಪಠ್ಯದ ಗ್ರಾಹಿಯನ್ನು ಓದುಗ ಎಂದು ಕರೆಯಲಾಗುತ್ತದೆ. ಬರವಣಿಗೆಯ ಪ್ರೇರಣೆಗಳಲ್ಲಿ ಪ್ರಕಟಣೆ, ಕಥನ, ಪತ್ರವ್ಯವಹಾರ, ದಾಖಲೆಗಳ ನಿರ್ವಹಣೆ ಮತ್ತು ದಿನಚರಿ ಸೇರಿವೆ. ಇತಿಹಾಸವನ್ನು ಇಡುವುದು, ಸಂಸ್ಕೃತಿಯನ್ನು ಕಾಪಾಡುವುದು, ಮಾಧ್ಯಮಗಳ ಮೂಲಕ ಜ್ಞಾನದ ಪ್ರಸಾರ ಮತ್ತು ಕಾನೂನು ವ್ಯವಸ್ಥೆಗಳ ರಚನೆಯಲ್ಲಿ ಬರವಣಿಗೆಯು ಸಾಧನವಾಗಿದೆ.

ಮಾನವ ಸಮಾಜಗಳು ಹೊರಹೊಮ್ಮಿದಂತೆ, ಬರವಣಿಗೆಯ ಬೆಳವಣಿಗೆ ಮಾಹಿತಿ ವಿನಿಮಯ, ಹಣಕಾಸು ಲೆಕ್ಕಗಳನ್ನು ನಿರ್ವಹಿಸುವುದು, ಕಾನೂನುಗಳನ್ನು ಕ್ರೋಡೀಕರಿಸುವುದು ಮತ್ತು ಇತಿಹಾಸದ ದಾಖಲೀಕರಣದಂತಹ ವ್ಯಾವಹಾರಿಕ ಅಗತ್ಯತೆಗಳಿಂದ ಚಾಲಿತವಾಗಿತ್ತು. ಸುಮಾರು ಕ್ರಿ.ಪೂ. ೪ನೇ ಸಹಸ್ರಮಾನದ ವೇಳೆ, ಮೆಸೊಪೊಟೇಮಿಯಾದಲ್ಲಿನ ವ್ಯಾಪಾರ ಹಾಗೂ ಆಡಳಿತದ ಸಂಕೀರ್ಣತೆಯು ಮಾನವ ಸ್ಮರಣಶಕ್ತಿಯನ್ನು ಮೀರಿ ಬೆಳೆಯಿತು, ಮತ್ತು ಬರವಣಿಗೆಯು ಶಾಶ್ವತ ರೂಪದಲ್ಲಿ ವ್ಯವಹಾರಗಳ ದಾಖಲೀಕರಣ ಹಾಗೂ ಪ್ರಸ್ತುತಿಯ ಹೆಚ್ಚು ವಿಶ್ವಾಸಾರ್ಹ ವಿಧಾನವಾಯಿತು. ಪ್ರಾಚೀನ ಈಜಿಪ್ಟ್ ಹಾಗೂ ಮೀಸೊಅಮೇರಿಕಾ ಎರಡೂ ಕಡೆ, ಬರವಣಿಗೆಯು ಐತಿಹಾಸಿಕ ಹಾಗೂ ಪಾರಿಸರಿಕ ಘಟನೆಗಳ ದಾಖಲೀಕರಣಕ್ಕಾಗಿ ಪಂಚಾಂಗ ಸಂಬಂಧಿ ಮತ್ತು ರಾಜಕೀಯ ಅಗತ್ಯತೆಯ ಕಾರಣ ವಿಕಸನಗೊಂಡಿರಬಹುದು.

ಪ್ರಮುಖ ಲಿಪಿಗಳು—ಅಂದರೆ ಲೇಖನದ ವಿಧಾನಗಳನ್ನು—ವಿಶಾಲವಾಗಿ ಐದು ವರ್ಗಗಳಲ್ಲಿ ವರ್ಗೀಕರಿಸಬಹುದು: ಪದಚಿಹ್ನೆ ಸಂಬಂಧಿ, ಉಚ್ಚಾರಾಂಶ ಸಂಬಂಧಿ, ವರ್ಣಮಾಲೆ ಸಂಬಂಧಿ, ವಿಶಿಷ್ಟ ಲಕ್ಷಣ ಸಂಬಂಧಿ, ಮತ್ತು ಭಾವಲಿಪಿ (ಭಾವನೆಗಳಿಗೆ ಚಿಹ್ನೆಗಳು/ಸಂಕೇತಗಳು). ಆರನೇ ವರ್ಗವಾದ ಚಿತ್ರಾತ್ಮಕ ಲಿಪಿಯು ಸ್ವಂತವಾಗಿ ಭಾಷೆಯನ್ನು ನಿರೂಪಿಸಲು ಸಾಕಾಗುವುದಿಲ್ಲ, ಆದರೆ ಹಲವುವೇಳೆ ಪದಚಿಹ್ನೆಗಳ ತಿರುಳನ್ನು ರಚಿಸುತ್ತದೆ.

ಅಕ್ಷರಮಾಲೆಯು ಚಿಹ್ನೆಗಳ ಸಮೂಹವಾಗಿದೆ, ಪ್ರತಿಯೊಂದು ಚಿಹ್ನೆಯು ಭಾಷೆಯ ಒಂದು ಧ್ವನಿಮಾವನ್ನು ಚಿತ್ರಿಸುತ್ತದೆ ಅಥವಾ ಐತಿಹಾಸಿಕವಾಗಿ ಚಿತ್ರಿಸುತ್ತಿತ್ತು. ಪರಿಪೂರ್ಣವಾಗಿ ಧ್ವನಿಶಾಸ್ತ್ರೀಯ ಅಕ್ಷರಮಾಲೆಯಲ್ಲಿ, ಧ್ವನಿಮಾಗಳು ಮತ್ತು ಅಕ್ಷರಗಳು ಎರಡು ದಿಕ್ಕುಗಳಲ್ಲಿ ಪರಿಪೂರ್ಣವಾಗಿ ಹೊಂದಿಕೆಯಾಗುತ್ತವೆ: ಒಂದು ಶಬ್ದದ ಉಚ್ಚಾರಣೆಯನ್ನು ಕೊಟ್ಟರೆ ಬರಹಗಾರನು ಅದರ ಕಾಗುಣಿತವನ್ನು ಮುನ್ನುಡಿಯುವುದು ಸಾಧ್ಯವಾಗಿತ್ತು, ಮತ್ತು ಒಂದು ಶಬ್ದದ ಕಾಗುಣಿತ ಕೊಟ್ಟರೆ ವಾಚಕನು ಅದರ ಉಚ್ಚಾರವನ್ನು ಮುನ್ನುಡಿಯುವುದು ಸಾಧ್ಯವಾಗಿತ್ತು.

ಟಿಪ್ಪಣಿಗಳು

ಉಲ್ಲೇಖಗಳು

Tags:

ಇತಿಹಾಸಭಾಷೆಮಾಧ್ಯಮವ್ಯಾಕರಣಸಂವಹನಸಂಸ್ಕೃತಿ

🔥 Trending searches on Wiki ಕನ್ನಡ:

ಮೈಸೂರು ಸಂಸ್ಥಾನಭಾರತದ ರಾಷ್ಟ್ರಪತಿಗಳ ಪಟ್ಟಿಶಕ್ತಿಅರ್ಥಶಾಸ್ತ್ರಮಹಿಳೆ ಮತ್ತು ಭಾರತಕದಂಬ ರಾಜವಂಶಕರ್ಬೂಜಕನ್ನಡದಲ್ಲಿ ವಚನ ಸಾಹಿತ್ಯಅಡಿಕೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾವನಾ(ನಟಿ-ಭಾವನಾ ರಾಮಣ್ಣ)ಕನ್ನಡದಲ್ಲಿ ಗದ್ಯ ಸಾಹಿತ್ಯನೀಲಾಂಬಿಕೆಅಲಾವುದ್ದೀನ್ ಖಿಲ್ಜಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಯೂಟ್ಯೂಬ್‌ತುಳಸಿಕಾಟೇರಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಶ್ರೀ ರಾಘವೇಂದ್ರ ಸ್ವಾಮಿಗಳುಸಿರಿ ಆರಾಧನೆಕರ್ನಾಟಕದ ಮುಖ್ಯಮಂತ್ರಿಗಳುಕನ್ನಡ ಜಾನಪದಬಳ್ಳಾರಿಶಿವರಾಮ ಕಾರಂತಡಿ.ಎಲ್.ನರಸಿಂಹಾಚಾರ್ಆಗಮ ಸಂಧಿಅಂಬಿಗರ ಚೌಡಯ್ಯರಾಮ್ ಮೋಹನ್ ರಾಯ್ನುಡಿಗಟ್ಟುಫ.ಗು.ಹಳಕಟ್ಟಿಭಾರತದ ಸಂಸತ್ತುಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಎ.ಪಿ.ಜೆ.ಅಬ್ದುಲ್ ಕಲಾಂಪ್ರಬಂಧಅಂತಾರಾಷ್ಟ್ರೀಯ ಸಂಬಂಧಗಳುಆದೇಶ ಸಂಧಿಶಿವರಾಜ್‍ಕುಮಾರ್ (ನಟ)ನೀರಿನ ಸಂರಕ್ಷಣೆನಾಮಪದಭಾರತದ ರಾಜ್ಯಗಳ ಜನಸಂಖ್ಯೆಬಡತನಆಕ್ಟೊಪಸ್ಅಶ್ವತ್ಥಾಮಜಲ ಮಾಲಿನ್ಯಅಂತರಜಾಲಭಾರತೀಯ ಆಡಳಿತಾತ್ಮಕ ಸೇವೆಗಳುಒಂದನೆಯ ಮಹಾಯುದ್ಧಅಮರೇಶ ನುಗಡೋಣಿಕನ್ನಡ ವ್ಯಾಕರಣವಿಜಯದಾಸರುಸೀತಾ ರಾಮಸೆಸ್ (ಮೇಲ್ತೆರಿಗೆ)ಆಯುರ್ವೇದಹಲ್ಮಿಡಿರಾವಣಗಿಡಮೂಲಿಕೆಗಳ ಔಷಧಿಉದಯವಾಣಿಬಬಲಾದಿ ಶ್ರೀ ಸದಾಶಿವ ಮಠಮಾನವ ಹಕ್ಕುಗಳುಜೀವನರಾಮನಗರವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ತ್ರಯಂಬಕಂ (ಚಲನಚಿತ್ರ)ಹಿಂದೂ ಕೋಡ್ ಬಿಲ್ಶಂಕರ್ ನಾಗ್ಕನ್ನಡಪ್ರಭಋತುಚಕ್ರದೂರದರ್ಶನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಹೊಯ್ಸಳೇಶ್ವರ ದೇವಸ್ಥಾನಚಿತ್ರದುರ್ಗಸಂಗೊಳ್ಳಿ ರಾಯಣ್ಣಕರ್ನಾಟಕಭೂಮಿ🡆 More