ಬಿರಿಯಾನಿ

ಬಿರಿಯಾನಿ ಭಾರತೀಯ ಉಪಖಂಡದ ಒಂದು ಮಿಶ್ರ ಅಕ್ಕಿ ಖಾದ್ಯವಾಗಿದೆ.

ಅದನ್ನು ಸಂಬಾರ ಪದಾರ್ಥಗಳು, ಅಕ್ಕಿ ಮತ್ತು ಮಾಂಸ ಅಥವಾ ತರಕಾರಿಗಳಿಂದ ತಯಾರಿಸಲಾಗುತ್ತದೆ. ಬಿರಿಯಾನಿಯಲ್ಲಿ ಮೂರು ವಿಧ- ೧.ಚಿಕನ್ (ಕೋಳಿ) ಬಿರಿಯಾನಿ, ೨.ಮಟನ್ (ಆಡು-ಕುರಿ,ಮಾಂಸ) ಬಿರಿಯಾನಿ, ೩.ಬೀಫ್ (ಹಸುಮಾಂಸ) ಬಿರಿಯಾನಿ. ಆದರೆ ಬಿರಿಯಾನಿಯನ್ನು ಹತ್ತಾರು ವಿಧಗಳಲ್ಲಿ ಮಾಡುವ ಕ್ರಮ ರೂಢಿಯಲ್ಲಿದೆ.

ಬಿರಿಯಾನಿ
ಹೈದರಾಬಾದಿ ದಮ್ ಚಿಕನ್ ಬಿರಿಯಾನಿ
ಬಿರಿಯಾನಿ
ಸಿಗಡಿ ಬಿರಿಯಾನಿ
ಬಿರಿಯಾನಿ
ಮಟನ್ ಬಿರಿಯಾನಿ
ಬಿರಿಯಾನಿ
ಸೋಯಾ ಬಿರಿಯಾನಿ

ಮೂಲ

ಮೊಗಲರು ಬಿರಿಯಾನಿಯ ಪ್ರವರ್ತಕರೆಂದು ಚರಿತ್ರೆಯ ಮೂಲಗಳು ಹೇಳುತ್ತವೆ. ಇತ್ತೀಚಿನ ದಿನಗಳಲ್ಲಿ ಭಾರತೀಯರು ಬಿರಿಯಾನಿ ಮಾಡುವ ಕ್ರಮವನ್ನು ರೂಢಿಸಿಕೊಂಡಿದ್ದಾರೆ. 'ಬಿರಿಯಾನಿ' ಎಂಬ ಪದವು ಪರ್ಷಿಯನ್ ಪದವಾದ ಬಿರಿಯನ್ ನಿಂದ ಬಂದಿದೆ. ಇದು ದಕ್ಷಿಣ ಏಷ್ಯಾದಲ್ಲಿ ಬಹಳ ಜನಪ್ರಿಯವಾದ ಖಾದ್ಯವಾಗಿದೆ. ಭಾರತದ ಎಲ್ಲಾ ಕಡೆಯಲ್ಲೂ ಈ ಖಾದ್ಯವನ್ನು ಮಾಡಲಾಗುತ್ತದೆ. ದಕ್ಷಿಣ ಭಾರತದಲ್ಲಿ ಅಕ್ಕಿಯು ಪ್ರಧಾನ ಆಹಾರವಾಗಿದ್ದುದರಿಂದ ತೆಲಂಗಾಣ, ತಮಿಳು ನಾಡು, ಕೇರಳ ಮತ್ತು ಕರ್ನಾಟಕದಲ್ಲಿ ವಿಭಿನ್ನ ರೀತಿಯ ಬಿರಿಯಾನಿಗಳನ್ನು ಮಾಡುತ್ತಿದ್ದರು. ಬಿರಿಯಾನಿಗಳಲ್ಲಿ ಅನೇಕ ರೀತಿಯ ವಿಧಗಳಿವೆ. ಸಾಮಾನ್ಯವಾಗಿ ಆಯಾ ಪ್ರದೇಶದ ಹೆಸರಿನೊಂದಿಗೆ ಕರೆಯುತ್ತಾರೆ. ಉದಾಹರಣೆಗೆ ಹೈದರಾಬಾದ್ ಬಿರಿಯಾನಿ ದಕ್ಷಿಣ ಭಾರತದ ಹೈದರಾಬಾದ್ ನಗರದಲ್ಲಿ ಮಾಡುತ್ತಾರೆ.ಮಲಬಾರಿ ಬಿರಿಯಾನಿ ಕೆರಳದ ಕರಾವಳೆಯಲ್ಲಿ ಅರಬ್ ವ್ಯಾಪಾರಿಗಳ ಸಂಬರ್ಕದಿಂದ ಬೆಳದುಬಂದ ರೀತಿ. ಸಿಂಧಿ ಬಿರಿಯಾನಿ ಸಾಮಾನ್ಯವಾಗಿ ಸಿಂಧ್ ಪ್ರದೇಶದಲ್ಲಿ ಮಾಡುತ್ತಾರೆ.

ಬೇಕಾಗುವ ಸಾಮಾನು

೧ ಕೆ.ಜಿ ಬಿರಿಯಾನಿ ಅಕ್ಕಿ, ೧ಕೆ.ಜಿ ಮಾಂಸ, ೫ ಟೀಸ್ಪೂನ್ ಎಣ್ಣೆ, ೩ ಟೀ ಸ್ಪೂನ್ ತುಪ್ಪ, ಎರಡು ದಪ್ಪನಾದ ಈರುಳ್ಳಿ, ಎರಡು ಚೆನ್ನಾಗಿ ಹಣ್ಣಾದ ಟೋಮೊಟೊ, ಗಸಗಸೆ, ಚಕ್ಕೆ, ಲವಂಗ, ಮರಾಠಿ ಮೊಗ್ಗು, ದಾಲ್ಚಿನ್ನಿ ಎಲೆ, ಹಸಿಶುಂಠಿ, ಬೆಳ್ಳುಳ್ಳಿ ಪೇಸ್ಟ್ ಅಗತ್ಯಕ್ಕೆ ತಕ್ಕಷ್ಟು ಉಪ್ಪು, ತುಸು ಅರಿಸಿಣ, ೧ ಕಟ್ಟು ಕೊತ್ತಂಬರಿಸೊಪ್ಪು, ಅರ್ಧ ಹೋಳು ಚೆನ್ನಾಗಿ ಬಲಿತ ತೆಂಗಿನಕಾಯಿ, ಅರ್ಧ ಕಟ್ಟು ಪುದೀನಾ ಸೊಪ್ಪು, ೫ ಹಸಿಮೆಣಸು, ೧ ಟೀಸ್ಪೂನ್ ಮೆಣಸಿನ ಪುಡಿ, ಎರಡು ಟೀ ಸ್ಪೂನ್ ಧನಿಯ ಪುಡಿ, ೧ ಟೀ ಸ್ಪೂನ್ ಅಚ್ಚಕಾರದ ಪುಡಿ, ೧ ನಿಂಬೇ ಹಣ್ಣು, ಅಳತೆಗೆ ತಕ್ಕನೀರು ಮುಂತಾದುವು.

ಮಾಡುವ ವಿಧಾನ

ಅಕ್ಕಿಯನ್ನು ತೊಳೆದು ನೀರನ್ನು ಬಸಿದು ಇಟ್ಟುಕೊಳ್ಳಿ. ೧ಕೆ.ಜಿ ಮಾಂಸವನ್ನು ಶುದ್ದಿಕರಿಸಿಕೊಂಡು ತೊಳೆದು ಇಟ್ಟುಕೊಳ್ಳಬೇಕು. ಎರಡು ದಪ್ಪನಾದ ಈರುಳ್ಳಿಯನ್ನು, ಎರಡು ಚೆನ್ನಾಗಿ ಹಣ್ಣಾದ ಟೋಮೊಟೊವನ್ನು ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಬೇಕು. ಗಸಗಸೆ, ಚಕ್ಕೆ, ಲವಂಗ, ೫ ಹಸಿಮೆಣಸು,೧ ಟೀಸ್ಪೂನ್ ಮೆಣಸು, ಎರಡು ಟೀ ಸ್ಪೂನ್ ಧನಿಯ, ೧೦ ಒಣಮೆಣಸಿನಕಾಯಿ, ಅರ್ಧ ಹೋಳು ಚೆನ್ನಾಗಿ ಬಲಿತ ತೆಂಗಿನಕಾಯಿಯನ್ನು ಬಾಣಲೆಯೊಂದಕ್ಕೆ ಸ್ಪಲ್ಪ ಎಣ್ಣೆ ಹಾಕಿ ಕೆಂಪಗೆ ಹುರಿದು ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ೫ ಟೀಸ್ಪೂನ್ ಎಣ್ಣೆ, ೩ ಟೀ ಸ್ಪೂನ್ ತುಪ್ಪ, ಎರಡು ದಪ್ಪನಾದ ಈರುಳ್ಳಿ, ಎರಡು ಚೆನ್ನಾಗಿ ಹಣ್ಣಾದ ಟೋಮೊಟೊವನ್ನು ಸೇರಿಸಿ ಚೆನ್ನಾಗಿ ಬಾಡಿಸಿ, ಅದಕ್ಕೆ ಮಾಂಸವನ್ನು ಸೇರಿಸಿ ಹದವಾಗಿ ಹುರಿದು ರುಬ್ಬಿಕೊಂಡ ಮಸಾಲೆಯನ್ನು, ಹಸಿಶುಂಠಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಅಗತ್ಯಕ್ಕೆ ತಕ್ಕಷ್ಟು ಉಪ್ಪು ಸೇರಿಸಿ ಬಾಡಿಸಿಕೊಂಡು, ಅಳತೆಗೆ ತಕ್ಕ ನೀದನ್ನು ಹಾಕಿ ಅಕ್ಕಿಯನ್ನು ಮಸಾಲೆಯೊಂದಿಗೆ ಮಿಶ್ರಮಾಡಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಬೇಯಿಸಿ, ಮುಕ್ಕಾಲು ಭಾಗ ಬಿರಿಯಾನಿ ಬೆಂದ ಮೇಲೆ ಅರ್ಧ ಕಟ್ಟು ಪುದೀನಾ ಸೊಪ್ಪು,೧ ಕಟ್ಟು ಕೊತ್ತಂಬರಿಸೊಪ್ಪುನ್ನು ಹಾಕಿ ಮಿಶ್ರಮಾಡಿ, ಕಡೆಯಲ್ಲಿ ನಿಂಬೆ ಹಣ್ಣನ್ನು ಹಿಂಡಿ ಬಿರಿಯಾನಿಯನ್ನು ಸ್ಪಲ್ಪ ಹೊತ್ತು ಮುಚ್ಚಿಟ್ಟು ಅದು ಚೆನ್ನಾಗಿ ಪೊಂಗಿದಾಗ ಸೇವಿಸಬೇಕು. ಇದರೊಂದಿಗೆ ಮೊಸರು ಬಜ್ಜಿ, ಮಾಂಸದ ಸಾರನ್ನು ಮಾಡುತ್ತಾರೆ.

ಉಲ್ಲೇಖಗಳು

Tags:

ಬಿರಿಯಾನಿ ಮೂಲಬಿರಿಯಾನಿ ಬೇಕಾಗುವ ಸಾಮಾನುಬಿರಿಯಾನಿ ಮಾಡುವ ವಿಧಾನಬಿರಿಯಾನಿ ಉಲ್ಲೇಖಗಳುಬಿರಿಯಾನಿಅಕ್ಕಿಕೋಳಿತರಕಾರಿಭಾರತೀಯ ಉಪಖಂಡಮಾಂಸಸಂಬಾರ ಪದಾರ್ಥ

🔥 Trending searches on Wiki ಕನ್ನಡ:

ಉಪನಯನಕನ್ನಡದಲ್ಲಿ ಮಹಿಳಾ ಸಾಹಿತ್ಯಬಹುವ್ರೀಹಿ ಸಮಾಸನುಡಿ (ತಂತ್ರಾಂಶ)ಕರ್ನಾಟಕದ ಹಬ್ಬಗಳುಚಿನ್ನರಚಿತಾ ರಾಮ್ಚಿಕ್ಕಮಗಳೂರುಭಾರತದ ರಾಷ್ಟ್ರಗೀತೆತಾಳಗುಂದ ಶಾಸನಜಿ.ಎಸ್.ಶಿವರುದ್ರಪ್ಪಸಂಜಯ್ ಚೌಹಾಣ್ (ಸೈನಿಕ)ಜಾಗತಿಕ ತಾಪಮಾನ ಏರಿಕೆರಾಷ್ಟ್ರೀಯ ಸೇವಾ ಯೋಜನೆಸುಮಲತಾಸೀತೆಮಡಿವಾಳ ಮಾಚಿದೇವರಮ್ಯಾಭಾರತದ ಸಂವಿಧಾನ ರಚನಾ ಸಭೆಜಶ್ತ್ವ ಸಂಧಿಪಠ್ಯಪುಸ್ತಕಡಿ.ಕೆ ಶಿವಕುಮಾರ್ವಿರಾಟಪ್ರಜಾಪ್ರಭುತ್ವಊಟಹಸ್ತ ಮೈಥುನದಾವಣಗೆರೆಬಾದಾಮಿ ಶಾಸನಗ್ರಹಶೈಕ್ಷಣಿಕ ಸಂಶೋಧನೆಚಾಮರಾಜನಗರಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಬಡ್ಡಿ ದರಬೇಲೂರುಕರ್ನಾಟಕದ ತಾಲೂಕುಗಳುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಅತ್ತಿಮಬ್ಬೆಮಾಹಿತಿ ತಂತ್ರಜ್ಞಾನಅಯೋಧ್ಯೆಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಗೀತಾ (ನಟಿ)ಮಾನವ ಹಕ್ಕುಗಳುಸ್ವರರಾಮ ಮಂದಿರ, ಅಯೋಧ್ಯೆಅವತಾರಹೃದಯಗುಡಿಸಲು ಕೈಗಾರಿಕೆಗಳುತಾಳೀಕೋಟೆಯ ಯುದ್ಧಪರಿಸರ ವ್ಯವಸ್ಥೆಪಂಜೆ ಮಂಗೇಶರಾಯ್ಸಂಶೋಧನೆರಾಜಧಾನಿಗಳ ಪಟ್ಟಿ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ದೇವರ/ಜೇಡರ ದಾಸಿಮಯ್ಯರವಿಚಂದ್ರನ್ಪಂಚತಂತ್ರಮೂಲಧಾತುಫೇಸ್‌ಬುಕ್‌ಭೀಮಸೇನರಾಷ್ಟ್ರೀಯ ಶಿಕ್ಷಣ ನೀತಿಸ್ಟಾರ್‌ಬಕ್ಸ್‌‌ಡಿ.ವಿ.ಗುಂಡಪ್ಪಕನ್ನಡ ರಂಗಭೂಮಿಭಾರತೀಯ ಅಂಚೆ ಸೇವೆನೀರಿನ ಸಂರಕ್ಷಣೆಬಿ.ಎಸ್. ಯಡಿಯೂರಪ್ಪಏಕರೂಪ ನಾಗರಿಕ ನೀತಿಸಂಹಿತೆಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಕದಂಬ ರಾಜವಂಶಹೊಯ್ಸಳಶೈಕ್ಷಣಿಕ ಮನೋವಿಜ್ಞಾನಸನ್ನಿ ಲಿಯೋನ್ಕಾಂತಾರ (ಚಲನಚಿತ್ರ)ಪಾಕಿಸ್ತಾನದೆಹಲಿ ಸುಲ್ತಾನರುಬಿಳಿ ರಕ್ತ ಕಣಗಳು🡆 More