ಕತ್ತೆಕಿರುಬ

ಕತ್ತೆಕಿರುಬವು ಕರ್ನಿವೋರಾದ ಫ಼ೆಲಿಫ಼ೋರ್ಮಿಯಾ ಉಪಗಣದ ಹಾಯೆನಡಿ ಕುಟುಂಬದ ಒಂದು ಪ್ರಾಣಿ.

Hyenas
Temporal range: 26–0 Ma
PreꞒ
O
S
D
C
P
T
J
K
Pg
N
Early Miocene-recent
ಕತ್ತೆಕಿರುಬ
All extant species of hyenas in descending order of size: spotted hyena, brown hyena, striped hyena and aardwolf.
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
Mammalia
ಗಣ:
Carnivora
ಉಪಗಣ:
Feliformia
ಕುಟುಂಬ:
Hyaenidae

Gray, 1821
Genera
  • Crocuta - (olive overlay on map)
  • Hyaena (blue on map)
  • Proteles - (magenta red on map)
  • Adcrocuta
  • Chasmaporthetes
  • Herpestides
  • Hyaenotherium
  • Ictitherium
  • Pachycrocuta
  • Pliocrocuta
  • Plioviverrops
  • Thalassictis
ಕತ್ತೆಕಿರುಬ
Synonyms
  • Protelidae Flower, 1869

ಕೇವಲ ನಾಲ್ಕು ಪ್ರಜಾತಿಗಳಿರುವ ಇದು ಕರ್ನಿವೋರಾದಲ್ಲಿ ನಾಲ್ಕನೇ ಅತಿ ಚಿಕ್ಕ ಜೀವಶಾಸ್ತ್ರೀಯ ಕುಟುಂಬ, ಮತ್ತು ಮಮ್ಮಾಲಿಯಾ ವರ್ಗದಲ್ಲಿನ ಅತಿ ಚಿಕ್ಕ ಕುಟುಂಬಗಳ ಪೈಕಿ ಒಂದು. ಅವುಗಳ ಅಲ್ಪ ವೈವಿಧ್ಯತೆಯ ಹೊರತಾಗಿಯೂ, ಕತ್ತೆಕಿರುಬಗಳು ಅನನ್ಯವಾಗಿವೆ ಮತ್ತು ಬಹುತೇಕ ಆಫ್ರಿಕಾದ ಹಾಗು ಕೆಲವು ಏಷ್ಯಾದ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಘಟಕಗಳಾಗಿವೆ.

ವೈಜ್ಞಾನಿಕ ವರ್ಗೀಕರಣ

ಕತ್ತೆ ಕಿರುಬ : ಮಾಂಸಾಹಾರಿ ಸ್ತನಿಗಳ ಗುಂಪಿನ (ಕಾರ್ನಿವೊರ) ಹೈಯಿನಿಡೀ ಕುಟುಂಬಕ್ಕೆ ಸೇರಿದ ಕುರೂಪಿಯಾದ ವನ್ಯಪ್ರಾಣಿ. ಇದರ ವೈಜ್ಞಾನಿಕ ನಾಮ ಹೈಯೀನ.

ಪ್ರಭೇದಗಳು

ಇದರಲ್ಲಿ ಎರಡು ಪ್ರಭೇದಗಳಿವೆ. ಒಂದು ಹೈ.ಸ್ಟ್ರ ಯೇಟ (ಪಟ್ಟೆಗಳಿರುವ ಕತ್ತೆಕಿರುಬ). ಇದು ಭಾರತ, ಪರ್ಷಿಯ, ಏಷ್ಯಮೈನರ್ ಮತ್ತು ಉತ್ತರ ಹಾಗೂ ಪುರ್ವ ಆಫ್ರಿಕದ ಕಾಡುಗಳಲ್ಲಿ ಕಂಡುಬರುತ್ತದೆ. ಇನ್ನೊಂದು ಹೈ.ಬ್ರುನಿಯ (ಕಂದು ಕತ್ತೆಕಿರುಬ) ಎಂಬುದು. ಇದು ದಕ್ಷಿಣ ಆಫ್ರಿಕದ ನಿವಾಸಿ.

ಲಕ್ಷಣಗಳು

ನಾಯಿಗಳಲ್ಲಿರುವಂಥ ಹೆಜ್ಜೆ ಮತ್ತು ಕಾಲುಗಳು, ಬಹಳ ಬಲಿಷ್ಠವಾದ ಮತ್ತು ಉದ್ದವಾದ ಮುಂಗಾಲುಗಳು, ಮೋಟಾದ ಮತ್ತು ಒಂದಕ್ಕೊಂದು ತಾಕುವಂತಿರುವ ಹಿಂಗಾಲುಗಳು, ಚಿಕ್ಕದಾದ ಪೊದೆಯಂತಿರುವ ಬಾಲ. ಬಹುಬಲಿಷ್ಠವಾದ ದವಡೆಗಳು, ಹಿಂದಕ್ಕೆ ಸೆಳೆದುಕೊಳ್ಳಲಾಗದಂಥ ಉಗುರುಗಳು. ಇವು ಈ ಎರಡೂ ಬಗೆಯ ಕತ್ತೆಕಿರುಬಗಳ ಮುಖ್ಯಲಕ್ಷಣಗಳು.

ಭಾರತದಲ್ಲಿ ಕಾಣುವ ಕತ್ತೆಕಿರುಬ ಸುಮಾರು ತೋಳದ ಗಾತ್ರದ್ದು. ಬೂದು ಮಿಶ್ರಿತ ಕಂದುಬಣ್ಣದ ಇದರ ದೇಹದ ಮೇಲೆ ಅಸ್ಪಷ್ಟವಾದ ಉದ್ದುದ್ದ ಪಟ್ಟೆಗಳಿವೆ. ಕುತ್ತಿಗೆ ಮತ್ತು ಬೆನ್ನಿನ ಉದ್ದಕ್ಕೂ ಕೇಸರಗಳ ಸಾಲಿವೆ. ಇದರ ಕೂಗು ಬಲು ವಿಚಿತ್ರವಾದುದು. ಅಟ್ಟಹಾಸದಿಂದ ಕೇಕೆಹಾಕಿ ನಗುವಂತಿರುತ್ತದೆ, ನಿಶಾಚರಿಯಾದ ಇದು ಸಾಮಾನ್ಯವಾಗಿ ಒಂಟಿಯಾಗಿಯೇ ಜೀವಿಸುತ್ತದೆ. ತನ್ನ ಆಹಾರವನ್ನು ವಾಸನೆಯಿಂದ ಪತ್ತೆಹಚ್ಚುತ್ತದೆ.

ಆಹಾರ

ಬೇಟೆಯಾಡುವ ಪ್ರಾಣಿಯಲ್ಲದ್ದರಿಂದ ಇದರ ಆಹಾರದಲ್ಲಿ ವೈವಿಧ್ಯವಿಲ್ಲ. ಸತ್ತ ಪ್ರಾಣಿಗಳು ಇದರ ಮುಖ್ಯ ಆಹಾರ. ಹುಲಿ, ಚಿರತೆ ಮುಂತಾದ ಮಾಂಸಾಹಾರಿ ಪ್ರಾಣಿಗಳು ತಿಂದು ಮಿಗಿಸಿದುದು ಇದರ ಪಾಲಿಗೆ. ಕೆಲವೊಮ್ಮೆ ಕುರಿ, ಆಡು, ನಾಯಿ ಮುಂತಾದ ಸಾಕುಪ್ರಾಣಿಗಳನ್ನು ಕದ್ದೊಯ್ಯುವುದೂ ಉಂಟು. ಆದರೆ ಮನುಷ್ಯನನ್ನು ಕಂಡರೆ ಭಯಪಡುವ ಈ ಪ್ರಾಣಿ ಅವನು ವಾಸಿಸುವ ಸ್ಥಳಗಳಿಂದ ದೂರವೇ ಇರುತ್ತದೆ.

ಸಂತಾನಾಭಿವೃದ್ಧಿ

ಇವುಗಳ ಸಾಂಸಾರಿಕ ಜೀವನದ ಬಗ್ಗೆ ಹೆಚ್ಚು ತಿಳಿಯದು. ಹೆಣ್ಣು ಕತ್ತೆಕಿರುಬ ಒಂದು ಬಾರಿಗೆ 2-4 ಮರಿಗಳನ್ನು ಈಯುತ್ತದೆ. ತಾಯಿಯೇ ಮರಿಗಳನ್ನು ಹಾಲೂಣಿಸಿ ಸಾಕುವುದು ಸಾಮಾನ್ಯವಾದರೂ ಕೆಲವೊಮ್ಮೆ ಗಂಡು ಹೆಣ್ಣುಗಳೆರಡೂ ಮರಿಗಳಿಗೆ ಮೊಲೆಯೂಣಿಸುತ್ತವೆ ಎಂದು ಹೇಳಲಾಗುತ್ತದೆ.

ಕತ್ತೆಕಿರುಬಗಳನ್ನು ಪಳಗಿಸುವುದೂ ಉಂಟು. ಸಾಕಿದ ಪ್ರಾಣಿಗಳು ಸಾಧುವಾಗಿಯೂ ನಂಬಿಕೆಗೆ ಅರ್ಹವಾಗಿಯೂ ಇರುತ್ತವೆ.

ಬಾಹ್ಯ ಸಂಪರ್ಕಗಳು

* IUCN Conservation Union Hyaendiae Specialist Group 
ಕತ್ತೆಕಿರುಬ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕತ್ತೆಕಿರುಬ ವೈಜ್ಞಾನಿಕ ವರ್ಗೀಕರಣಕತ್ತೆಕಿರುಬ ಪ್ರಭೇದಗಳುಕತ್ತೆಕಿರುಬ ಲಕ್ಷಣಗಳುಕತ್ತೆಕಿರುಬ ಆಹಾರಕತ್ತೆಕಿರುಬ ಸಂತಾನಾಭಿವೃದ್ಧಿಕತ್ತೆಕಿರುಬ ಬಾಹ್ಯ ಸಂಪರ್ಕಗಳುಕತ್ತೆಕಿರುಬಆಫ್ರಿಕಾಏಷ್ಯಾ

🔥 Trending searches on Wiki ಕನ್ನಡ:

ವಾಣಿಜ್ಯೋದ್ಯಮಗ್ರಾಹಕರ ಸಂರಕ್ಷಣೆಇಮ್ಮಡಿ ಪುಲಕೇಶಿಜಿ.ಪಿ.ರಾಜರತ್ನಂಒನಕೆ ಓಬವ್ವಗ್ರಂಥಾಲಯಗಳುಕಾಲಾಯ ತಸ್ಮೈ ನಮಃ (ಚಲನಚಿತ್ರ)ಶ್ರೀಕೃಷ್ಣದೇವರಾಯಬಾಬು ಜಗಜೀವನ ರಾಮ್ತಾಮ್ರನೈಟ್ರೋಜನ್ ಚಕ್ರವಿಕ್ರಮಾರ್ಜುನ ವಿಜಯಧೀರೂಭಾಯಿ ಅಂಬಾನಿತುಳಸಿಕರ್ನಾಟಕಬಸವೇಶ್ವರಕರಗಲೋಕಸಭೆಜಾನಪದಕೈಗಾರಿಕೆಗಳ ಸ್ಥಾನೀಕರಣಅಮೀಬಾಸಾಮಾಜಿಕ ಸಮಸ್ಯೆಗಳುಕರ್ನಾಟಕದ ಹಬ್ಬಗಳುಶಬ್ದಗರ್ಭಧಾರಣೆಭಾರತದ ಜನಸಂಖ್ಯೆಯ ಬೆಳವಣಿಗೆಸವರ್ಣದೀರ್ಘ ಸಂಧಿಪಂಚತಂತ್ರಜಲ ಮಾಲಿನ್ಯಸಂವಹನಸತ್ಯ (ಕನ್ನಡ ಧಾರಾವಾಹಿ)ನಿರುದ್ಯೋಗನೀತಿ ಆಯೋಗಕಾರ್ಲ್ ಮಾರ್ಕ್ಸ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆವೃಕ್ಷಗಳ ಪಟ್ಟೆಆರ್ಥಿಕ ಬೆಳೆವಣಿಗೆಶ್ರವಣಾತೀತ ತರಂಗಕೆ. ಅಣ್ಣಾಮಲೈಪಾಲಕ್ಶ್ಯೆಕ್ಷಣಿಕ ತಂತ್ರಜ್ಞಾನತೂಕಬಿಪಾಶಾ ಬಸುಭಾರತದ ಗವರ್ನರ್ ಜನರಲ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಜೋಗಿ (ಚಲನಚಿತ್ರ)ಜಾಗತೀಕರಣಮಾವಂಜಿಅರವಿಂದ ಘೋಷ್ಸುಭಾಷ್ ಚಂದ್ರ ಬೋಸ್ಶಿಕ್ಷಣಎಂ. ಎಸ್. ಸ್ವಾಮಿನಾಥನ್ನೈಸರ್ಗಿಕ ವಿಕೋಪಮೊದಲನೇ ಅಮೋಘವರ್ಷಆದಿ ಶಂಕರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ವಾಣಿಜ್ಯ ಪತ್ರದಾಸ ಸಾಹಿತ್ಯಕರ್ನಾಟಕ ಲೋಕಾಯುಕ್ತವಚನಕಾರರ ಅಂಕಿತ ನಾಮಗಳುಪ್ರಾಚೀನ ಈಜಿಪ್ಟ್‌ಕನ್ನಡಪ್ರಭಗದ್ದಕಟ್ಟುಒಡಲಾಳಆಹಾರ ಸಂರಕ್ಷಣೆಹಣಕಾಸುಯೇಸು ಕ್ರಿಸ್ತವ್ಯಂಜನಪಂಪರಾಮಲೋಹಾಭಧರ್ಮಗೋವಿಂದ III (ರಾಷ್ಟ್ರಕೂಟ)ವಚನ ಸಾಹಿತ್ಯಮಂಕುತಿಮ್ಮನ ಕಗ್ಗಮಡಿವಾಳ ಮಾಚಿದೇವ🡆 More