ಹ್ಯೂ ಜ್ಯಾಕ್‌ಮನ್‌

ಹ್ಯೂ ಮೈಕೇಲ್‌ ಜ್ಯಾಕ್‌ಮನ್‌ (ಜನನ 12 ಅಕ್ಟೋಬರ್ 1968) ಇವರು ಸಿನಿಮಾ, ಸಂಗೀತ ರಂಗಭೂಮಿ ಮತ್ತು ದೂರದರ್ಶನದಲ್ಲಿ ತೊಡಗಿಕೊಂಡಿರುವ ಒಬ್ಬ ಆಸ್ಟ್ರೇಲಿಯಾದ ನಟ ಮತ್ತು ನಿರ್ಮಾಪಕ.

ಹ್ಯೂ ಜ್ಯಾಕ್‌ಮನ್‌
ಹ್ಯೂ ಜ್ಯಾಕ್‌ಮನ್‌
Jackman at the X-Men Origins: Wolverine premiere in April 2009
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Hugh Michael Jackman
(1968-10-12) ೧೨ ಅಕ್ಟೋಬರ್ ೧೯೬೮ (ವಯಸ್ಸು ೫೫)
Sydney, New South Wales, Australia
ವೃತ್ತಿ Actor
ವರ್ಷಗಳು ಸಕ್ರಿಯ 1994–present
ಪತಿ/ಪತ್ನಿ Deborra-Lee Furness
(1996-present)

ಜ್ಯಾಕ್‌ಮನ್‌ ತನ್ನ ಹಲವು ಪ್ರಮುಖ ಸಿನಿಮಾಗಳಿಗಾಗಿ ವಿಶೇಷವಾಗಿ ಆಕ್ಷನ್‌/ಸೂಪರ್‌ಹೀರೋ, ಯುಗಾಂತರ ಮತ್ತು ರಮ್ಯ ಪಾತ್ರಗಳಿಗಾಗಿ ಅಂತಾರಾಷ್ಟ್ರೀಯ ಗಮನ ಸೆಳೆದಿದ್ದಾರೆ. ಎಕ್ಸ್‌-ಮೆನ್‌ ಸರಣಿಯ ವೋಲ್ವೆರೈನ್‌ ಪಾತ್ರ, ಜೊತೆಗೆ ನಾಯಕನಾಗಿ ಅಭಿನಯಿಸಿದ ಕೇಟ್‌ ಅಂಡ್‌ ಲಿಯೋಪೋಲ್ಡ್‌ , ವ್ಯಾನ್‌ ಹೆಲ್ಸಿಂಗ್ , ದ ಪ್ರೆಸ್ಟೀಜ್‌ , ಮತ್ತು ಆಸ್ಟ್ರೇಲಿಯಾ ಚಿತ್ರಗಳಿಗಾಗಿ ಇವರು ಚಿರಪರಿಚಿತರಾಗಿದ್ದಾರೆ. ರಂಗಭೂಮಿ ಗೀತೆಗಳಿಗೆ ಜ್ಯಾಕ್‌ಮನ್‌ ಒಬ್ಬ ಗಾಯಕ, ನರ್ತಕ, ಮತ್ತು ನಟರಾಗಿದ್ದಾರೆ, ಮತ್ತು ದ ಬಾಯ್‌ ಫ್ರಮ್‌ ಓಝೆಡ್‌ ದ ಪಾತ್ರಕ್ಕಾಗಿ ಟೋನಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ನವೆಂಬರ್ 2008ರಲ್ಲಿ, ಓಪನ್‌ ಸಲೂನ್‌ ಹ್ಯೂ ಜ್ಯಾಕ್‌ಮನ್‌ರನ್ನು ಜೀವಂತವಾಗಿರುವ ಅತ್ಯಂತ ಮೋಹಕ ವ್ಯಕ್ತಿಗಳಲ್ಲಿ ಒಬ್ಬರು ಎಂದು ಹೆಸರಿಸಿತು. ನಂತರ ಅದೇ ತಿಂಗಳಿನಲ್ಲಿ, ಪೀಪಲ್‌ ಪತ್ರಿಕೆ ಜ್ಯಾಕ್‌ಮನ್‌ರನ್ನು "ಜೀವಂತವಾಗಿರುವ ಅತ್ಯಂತ ಮೋಹಕ ವ್ಯಕ್ತಿ ಎಂದು ಹೆಸರಿಸಿತು."

ಟೋನಿ ಅವಾರ್ಡ್ಸ್‌ (ಟೋನಿ ಪ್ರಶಸ್ತಿಗಳು) ಕಾರ್ಯಕ್ರಮಕ್ಕೆ ಮೂರು ಬಾರಿ ನಿರೂಪಣೆ ಮಾಡಿದ, ಅದರಲ್ಲಿ ಒಂದು ಕಾರ್ಯಕ್ರಮಕ್ಕೆ ಎಮ್ಮಿ ಪ್ರಶಸ್ತಿಯನ್ನು ಗೆದ್ದ ಜ್ಯಾಕ್‌ಮನ್‌, ಫೆಬ್ರವರಿ 22, 2009ರಂದು ನಡೆದ 81ನೇ ಅಕ್ಯಾಡೆಮಿ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ಕೂಡ ನಿರೂಪಣೆ ಮಾಡಿದರು.

ಆರಂಭಿಕ ಜೀವನ

ಹ್ಯೂ ಜ್ಯಾಕ್‌ಮನ್‌ ಸಿಡ್ನಿ, ನ್ಯೂ ಸೌತ್‌ ವೇಲ್ಸ್‌, ಯಲ್ಲಿ ಜನಿಸಿದರು. ಹ್ಯೂ ಜ್ಯಾಕ್‌ಮನ್‌ ಅವರು ಕ್ರಿಸ್‌ ಜ್ಯಾಕ್‌ಮನ್‌ ಮತ್ತು ಗ್ರೇಸ್‌ ವ್ಯಾಟ್‌ಸನ್‌ ಎಂಬ ಇಂಗ್ಲಿಷ್‌ ದಂಪತಿಗಳ ಐದು ಮಕ್ಕಳಲ್ಲಿ ಕೊನೆಯವರು ಮತ್ತು ಆಸ್ಟ್ರೇಲಿಯಾದಲ್ಲಿ ಹುಟ್ಟಲಿದ್ದ ಮಕ್ಕಳಲ್ಲಿ ಎರಡನೆಯವರು (ಆವರಿಗೆ ಮಲತಂಗಿಯೊಬ್ಬಳು ಕೂಡ ಇದ್ದಾಳೆ). ಅವರ ತಾಯಿ ಅವರು ಎಂಟು ವರ್ಷದವಳಿರುವಾಗಲೇ ತನ್ನ ಕುಂಟುಂಬವನ್ನು ತೊರೆದಳು, ಮತ್ತು ಅವರು ತನ್ನ ಕರಣಿಕ ತಂದೆ ಮತ್ತು ಒಡಹುಟ್ಟಿದವರೊಂದಿಗೆ ಇದ್ದ.

ಹ್ಯೂ ಮೊದಲು ಪಿಂಬ್ಲೇ ಪಬ್ಲಿಕ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿ ಹೋದ, ಆಮೇಲೆ ನಾಕ್ಸ್‌ ಗ್ರಾಮರ್‌ ಶಾಲೆಗೆ ಸೇರಿದರು. ಇಲ್ಲಿಯೇ 1985ರಲ್ಲಿ ಮೈ‌ ಫೇರ್‌ ಲೇಡಿ ಗೀತೆಯನ್ನು ಸೃಷ್ಟಿಸಿದ್ದಕ್ಕಾಗಿ ಬಹು ಜನಪ್ರಿಯರಾದರು, ಮತ್ತು 1986ರಲ್ಲಿ ಶಾಲೆಯ ನಾಯಕರಾದರು. ಪದವಿ ಮುಗಿದ ಬಳಿಕ, ಇಂಗ್ಲೆಂಡ್‌ನಲ್ಲಿರುವ ಯುಪಿಂಗ್‌ಹ್ಯಾಮ್‌ ಶಾಲೆಯಲ್ಲಿ ಕೆಲಸ ಮಾಡುತ್ತ ಒಂದು ಅಂತರ ವರ್ಷವನ್ನು ಕಳೆದರು. ಆಸ್ಟ್ರೇಲಿಯಾಗೆ ವಾಪಾಸಾದ ನಂತರ ಯೂನಿವರ್ಸಿಟಿ ಆಫ್‌ ಟೆಕ್ನಾಲಜಿ, ಸಿಡ್ನಿಯಲ್ಲಿ ವಿದ್ಯಾಭ್ಯಾಸ ಮಾಡಿದರು, 1991ರಲ್ಲಿ ಸಂವಹನದಲ್ಲಿ (ಬಿಎ) ಪದವಿಯನ್ನು ಗಳಿಸಿದರು. ಬಿಎ‌ ಪದವಿ ಗಳಿಸಿದ ನಂತರ, ಜ್ಯಾಕ್‌ಮನ್‌ 1991ರಲ್ಲಿ ಸಿಡ್ನಿಯಲ್ಲಿನ ಆಕ್ಟರ್ಸ್‌ ಸೆಂಟರ್‌‌ನಲ್ಲಿ "ದ ಜರ್ನಿ" ಎನ್ನುವ ಒಂದು ವರ್ಷದ ಕೋರ್ಸ್‌ಅನ್ನು ಮುಗಿಸಿದರು.

ಆ ಕೋರ್ಸ್‌ ಮುಗಿದ ನಂತರ ನೇಬರ್ಸ್‌ ಎನ್ನುವ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತ್ತು, ಆದರೆ ಪಶ್ಚಿಮ ಆಸ್ಟ್ರೇಲಿಯಾದ ಪರ್ತ್‌‌ನಲ್ಲಿರುವ ಎಡಿತ್‌ ಕೋವನ್‌‍ ವಿಶ್ವವಿದ್ಯಾಲಯದ ವೆಸ್ಟರ್ನ್‌ ಆಸ್ಟ್ರೇಲಿಯನ್‌ ಅಕ್ಯಾಡೆಮಿ ಆಫ್ ಪರ್ಫಾರ್ಮಿಂಗ್‌ ಆರ್ಟ್ಸ್‌ ಅನ್ನು ಸೇರುವುದಕ್ಕೋಸ್ಕರ ಈ ಅವಕಾಶವನ್ನು ಕೈಬಿಟ್ಟರು, ಮತ್ತು 1994ರಲ್ಲಿ ಅಲ್ಲಿಂದ ಪದವಿಯನ್ನು ಪಡೆದರು.

ವೃತ್ತಿ ಜೀವನ

ಪ್ರಾರಂಭಿಕ ರಂಗಭೂಮಿ, ಸಿನೆಮಾ, ಮತ್ತು ದೂರದರ್ಶನದಲ್ಲಿ ಕೆಲಸ

ಮೆಲ್‌ಬೋರ್ನ್‌ನಲ್ಲಿ ವೇದಿಕೆಯ ಮೇಲೆ, ವಾಲ್ಟ್‌ ಡಿಸ್ನಿ ನಿರ್ಮಾಣದ ಬ್ಯೂಟೀ ಅಂಡ್‌ ದ ಬೀಸ್ಟ್‌ ನಲ್ಲಿ ಗ್ಯಾಸ್‌ಟನ್‌ ಪಾತ್ರ ಮಾಡಿದರು, ಮತ್ತು ಸನ್‌ಸೆಟ್‌ ಬುಲೆವಾರ್ಡ್‌ ನಲ್ಲಿ ಜೋ ಗಿಲ್ಲೀಸ್‌ ಪಾತ್ರ ಮಾಡಿದರು. ಮೆಲ್ಬೋರ್ನ್‌ ರಂಗಸಂಗೀತದ ತನ್ನ ವೃತ್ತಿಯಲ್ಲಿ, 1998 ಮಿಡ್‌ಸಮ್ಮಾ ಫೆಸ್ಟಿವಲ್‌ ಕ್ಯಾಬರೆ ನಿರ್ಮಿಸಿದ ಸಮ್ಮಾ ಕ್ಯಾಬರೆ ಯಿಂದ ಜನಪ್ರಿಯರಾದರು. ಅವರು ಮೆಲ್ಬೋರ್ನ್‌ನ ಕ್ಯಾರೋಲ್ಸ್‌ ಬೈ ಕ್ಯಾಂಡಲ್‌ನೈಟ್‌ ಮತ್ತು ಸಿಡ್ನಿಯ ಕ್ಯಾರೋಲ್ಸ್‌ ಇನ್‌ ದ ಡೊಮೇನ್‌ ಕಾರ್ಯಕ್ರಮಗಳ ನಿರೂಪಣೆ ಮಾಡಿದರು.

ಜ್ಯಾಕ್‌ಮನ್‌‌ರ ಮೊದಲ ಸಿನಿಮಾ ಕೆಲಸಗಳೆಂದರೆ ಎರ್ಸ್‌ಕಿನ್‌ವಿಲ್ಲೆ ಕಿಂಗ್ಸ್‌ ಮತ್ತು ಪೇಪರ್‌ಬ್ಯಾಕ್‌ ಹೀರೋ (1999); ದೂರದರ್ಶನದಲ್ಲಿ ಕೊರ್ರೆಲ್ಲಿ (ಎಬಿಸಿ ಮೇಲಿನ 10-ಅಧ್ಯಾಯಗಳ ಒಂದು ನಾಟಕ ಸರಣಿ ಮತ್ತು ಜ್ಯಾಕ್‌ಮನ್‌ನ ಮೊದಲ ವೃತ್ತಿಪರ ಕಾರ್ಯ. ಇದನ್ನು ಆಸ್ಟ್ರೇಲಿಯಾದ ನಟಿ ಡೆನಿಸ್‌ ರಾಬರ್ಟ್ಸ್‌ ರಚಿಸಿದರು; ತನ್ನ ಭಾವಿ ಪತ್ನಿ ಡೆಬೊರಾ-ಲೀ ಫರ್‌ನೆಸ್‌ ಅನ್ನು ಈತ ಇಲ್ಲೇ ಭೇಟಿ ಮಾಡಿದ), ಲಾ ಆಫ್‌ ದ ಲ್ಯಾಂಡ್ , ಹ್ಯಾಲಿಫ್ಯಾಕ್ಸ್‌ ಎಫ್‌.ಪಿ. , ಬ್ಲೂ ಹೀಲರ್ಸ್‌, ಮತ್ತು ಬಂಜೋ ಪ್ಯಾಟರ್‌ಸನ್‌ ನ ಮ್ಯಾನ್‌ ಫ್ರಮ್‌ ಸ್ನೋಯಿ ರಿವರ್ .

ಅಂತಾರಾಷ್ಟ್ರೀಯ ತಾರಾಪಟ್ಟ

====ಓಕ್ಲಹೋಮ!====

1998ರಲ್ಲಿ ಲಂಡನ್‌ನ ವೆಸ್ಟ್‌ ಎಂಡ್‌ನಲ್ಲಿ ರಾಯಲ್‌ ನ್ಯಾಷನಲ್‌ ಥಿಯೇಟರ್ಸ್‌ನ ಬಹುಪ್ರಸಿದ್ಧ ರಂಗನಿರ್ಮಾಣವಾದ ಓಕ್ಲಹೋಮ! ದ ’ಕರ್ಲಿ’ ಎಂಬ ನಾಯಕನ ಪಾತ್ರವನ್ನು ಮಾಡಿದಾಗ ಜ್ಯಾಕ್‌ಮನ್‌ ಆಸ್ಟ್ರೇಲಿಯಾದಿಂದ ಹೊರಗೆ ಪರಿಚಿತನಾದನು. ಈ ಪ್ರದರ್ಶನಕ್ಕಾಗಿ ಅವರು ’ಗೀತಿಕೆಯಲ್ಲಿ ಅತ್ಯುತ್ತಮ ನಟ’ ಒಲಿವಿಯರ್ ಪ್ರಶಸ್ತಿಗೆ ನಾಮಾಂಕಿತನಾದನು.  ಅವನು 1999ರಲ್ಲಿ ಆ ಗೀತಿಕೆಯ ಸಿನಿಮಾ ಆವೃತ್ತಿಯಲ್ಲೂ ನಾಯಕನಾದನು, ಇದನ್ನು ಅನೇಕ ದೇಶಗಳಲ್ಲಿ ಪ್ರದರ್ಶಿಸಲಾಯಿತು. 

ಎಕ್ಸ್‌-ಮೆನ್‌

2000ದಲ್ಲಿ, ಡೌಗ್ರೇ ಸ್ಕಾಟ್‌ನ ಬದಲಾಗಿ ಬ್ರ್ಯಾನ್‌ ಸಿಂಗರ್‌ ನ ಎಕ್ಸ್‌-ಮೆನ್‌ ನಲ್ಲಿ ವೋಲ್ವೆರೈನ್‌ ಪಾತ್ರವನ್ನು ಮಾಡಿದರು. ತಾರಾಗಣದಲ್ಲಿ ಅವರುನ ಜೊತೆ ಪ್ಯಾಟ್ರಿಕ್‌ ಸ್ಟೆವರ್ಟ್‌, ಜೇಮ್ಸ್‌ ಮ್ಯಾರ್ಸ್‌ಡೆನ್‌, ಫ್ಯಾಮ್‌ಕೀ ಜಾನ್ಸನ್‌, ಮತ್ತು ಇಯಾನ್‌ ಮ್ಯಾಕ್‌ಕೆಲೆನ್‌ ಇದ್ದರು. ನವೆಂಬರ್ 2006ರಲ್ಲಿ ನಡೆಸಿದ ಒಂದು ಸಿಬಿಎಸ್‌ ಸಂದರ್ಶನದ ಪ್ರಕಾರ, ಜ್ಯಾಕ್‌ಮನ್‌ನ ಪತ್ನಿ ಡೆಬೊರಾ-ಲೀ ಫರ್ನೆಸ್‌ ಈ ಪಾತ್ರವನ್ನು ತೆಗೆದುಕೊಳ್ಳಬೇಡವೆಂದು ಅವರುನಿಗೆ ಹೇಳಿದ್ದರು, ಆನಂತರ ಅವರು ತನ್ನನ್ನು ಉಪೇಕ್ಷಿಸಿದ್ದಕ್ಕೆ ಸಂತೋಷವಾಗಿದೆ ಎಂದರು.

6'2 1/2 ಅಡಿ (1.83 ಮೀ) ಎತ್ತರ ಇರುವ ಜ್ಯಾಕ್‌ಮನ್‌, ಮೂಲ ಕಾಮಿಕ್‌ ಪುಸ್ತಕದಲ್ಲಿ 5'3" ಇದ್ದಾರೆ ಎಂದು ಹೇಳಿರುವ ವೋಲ್ವೆರೈನ್‌ಗಿಂತ ಒಂದು ಅಡಿ ಎತ್ತರ ಹೆಚ್ಚಿಗೆ ಇದ್ದಾನೆ. ಆದ್ದರಿಂದ, ಆ ಸಿನಿಮಾದವರು ಜ್ಯಾಕ್‌ಮನ್‌ನನ್ನು ಬಹುತೇಕ ವಿಚಿತ್ರ ಭಂಗಿಗಳಲ್ಲಿ ಶೂಟ್‌ ಮಾಡುತ್ತಿದ್ದರು ಇಲ್ಲವೇ ಅವನು ಇರುವುದಕ್ಕಿಂತ ಕುಳ್ಳಗೆ ಕಾಣಿಸಲು ಸೊಂಟದಿಂದ ಮೇಲಕ್ಕೆ ಮಾತ್ರ ಅವನನ್ನು ತೆಗೆಯುತ್ತಿದ್ದರು, ಮತ್ತು ಅವನ ಜೊತೆಗಿನ ತಾರೆಗಳು ಅಡಿ ಎತ್ತರ ಇರುವ ಪಾದರಕ್ಷೆಗಳನ್ನು ಹಾಕಿಕೊಳ್ಳುತ್ತಿದ್ದರು. ಜ್ಯಾಕ್‌ಮನ್‌ ಆ ಪಾತ್ರಕ್ಕಾಗಿ ಮಾಂಸಖಂಡಗಳನ್ನು ಕೂಡ ಬೆಳೆಸಿಕೊಳ್ಳಬೇಕಾಯಿತು, ಮತ್ತು ಆ ಸರಣಿಯ ನಾಲ್ಕನೇ ಚಿತ್ರಕ್ಕೆ ತಯಾರಿ ನಡೆಸುವಾಗ 300 ಪೌಂಡ್‌ಗಳನ್ನು ಬೆಂಚ್‌-ಪ್ರೆಸ್‌ ಮಾಡುತ್ತಿದ್ದನು. ಆ ಸಿನಿಮಾ ಬಿಡುಗಡೆಯಾಗುತ್ತಿದಂತೆಯೇ ತಾರಾಪಟ್ಟವನ್ನೇರಿದ ಜ್ಯಾಕ್‌ಮನ್‌ 2003ರ ಎಕ್ಸ್‌-ಮೆನ್‌ 2 , 2006ರX-Men: The Last Stand , ಮತ್ತು X-Men Origins: Wolverine , ಮೇ 1, 2009ರಂದು ಬಿಡುಗಡೆಯಾದ ಸಿನಿಮಾಗಳಲ್ಲಿ ಅದೇ ಪಾತ್ರವನ್ನು ಮಾಡಿದರು.

2001

2001ರ ರಮ್ಯ-ಹಾಸ್ಯ ಚಲನಚಿತ್ರ ಕೇಟ್‌ ಅಂಡ್‌ ಲಿಯೊಪೋಲ್ಡ್‌ ನಲ್ಲಿ ಮೆಗ್‌ ರಿಯಾನ್‌ನ ಎದುರು ಲಿಯೊಪೋಲ್ಡ್‌ ಆಗಿ ನಟಿಸಿದರು, ಈ ಪಾತ್ರಕ್ಕಾಗಿ ಅವರು ಚಲನಚಿತ್ರ ಗೀತಿಕೆ ಅಥವಾ ಕಾಮಿಡಿ ವಿಭಾಗದಲ್ಲಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗೆ ನಾಮಾಂಕಿತರಾದರು. ಜ್ಯಾಕ್‌ಮನ್‌ ಒಬ್ಬ ವಿಕ್ಟೋರಿಯನ್ ಕಾಲದ ಇಂಗ್ಲಿಷ್‌ ಡ್ಯೂಕ್‌ನ ಪಾತ್ರ ನಿರ್ವಹಿಸುತ್ತಾರೆ. ಅವರು ಅಕಸ್ಮಾತಾಗಿ 21ನೇ-ಶತಮಾನದ ಮ್ಯಾನ್‌ಹಟನ್‌ಗೆ ಸಮಯ-ಸಂಚಾರ ಮಾಡಿಬಿಡುತ್ತಾರೆ, ಮತ್ತು ಅಲ್ಲಿ ಆತ ಸಿನಿಕ ಸ್ವಭಾವದ ಜಾಹೀರಾತು ಕಾರ್ಯನಿರ್ವಾಹಕ ಅಧಿಕಾರಿ ಕೇಟ್‌ಳನ್ನು ಭೇಟಿ ಮಾಡುತ್ತಾನೆ.

2001 ರಲ್ಲಿ ಜಾಕ್‌ಮನ್ ಸಾಹಸ/ನಾಟಕೀಯ ಚಿತ್ರವಾದ ಸ್ವರ್ಡ್‌ಫಿಶ್‌ ನಲ್ಲಿ ಜಾನ್ ಟ್ರವೋಲ್ಟಾ, ಮತ್ತು ಹಾಲ್ ಬೆರ್ರಿ ರೊಂದಿಗೆ ನಟಿಸಿದರು. ಇದು ಬೆರ್ರಿಯೊಂದಿಗಿನ ಜಾಕ್‌ಮನ್ ಅವರ ಎರಡನೆ ಚಿತ್ರವಾಗಿತ್ತು, ಮತ್ತು ಈ ಜೋಡಿ ಇನ್ನೂ ಎರಡು ಬಾರಿ ಎಕ್ಸ್-ಮೆನ್ ಚಿತ್ರಗಳಲ್ಲಿ ನಟಿಸಿದ್ದು, 2000 ರಿಂದ 2006 ವರೆಗೆ ಬೆರ್ರಿ ಮತ್ತು ಜಾಕ್‌ಮನ್ ಒಟ್ಟು ನಾಲ್ಕು ಚಿತ್ರಗಳಲ್ಲಿ ಜೊತೆಗೆ ನಟಿಸಿದ್ದಾರೆ. ಅವರು 2001 ರಲ್ಲಿ "ಸ್ಯಾಟರ್ಡೇ ನೈಟ್ ಲೈವ್" ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಹಂತ 2002-2009

2002 ರಲ್ಲಿ ಜಾಕ್‌ಮನ್‌ ಕಾರ್ನೆಗಿ ಹಾಲ್ ನಲ್ಲಿ ನಡೆದ ವಿಶೇಷ ಸಂಗೀತ ಕಚೇರಿಯಲ್ಲಿ ಕೆರೌಸೆಲ್ ನಲ್ಲಿನ ಬಿಲ್ಲಿ ಬಿಗೆಲೊ ಪಾತ್ರದ ಹಾಡನ್ನು ಸೇಂಟ್ ಲೂಕ್ ದ ಆರ್ಕೆಸ್ಟ್ರಾ ಜೊತೆ ಹಾಡಿದ.

2004 ರಲ್ಲಿ ಜಾಕ್‌ಮನ್‌ ಗೀತಿಕೆಯೊಂದರಲ್ಲಿ ಅತ್ಯುತ್ತಮ ನಟನೆಗಾಗಿ ಟೋನಿ ಪ್ರಶಸ್ತಿ ಮತ್ತು ಡ್ರಾಮ ಡೆಸ್ಕ್ ಪ್ರಶಸ್ತಿಗಳನ್ನು ಪಡೆದರು. ಇದು ಪೀಟರ್ ಅಲನ್ ಎಂಬ ಆಸ್ಟ್ರೇಲಿಯಾದ ಗೀತಕಾರ ಮತ್ತು ನಟನ ಬ್ರಾಡ್‌ವೇ ರಂಗಭೂಮಿಯಲ್ಲಿನ ಜೀವನದ ಕುರಿತಾದ ಚಿತ್ರವಾಗಿತ್ತು. 2006 ರಲ್ಲಿ ಅವರು ಪ್ರಸಿದ್ಧವಾದ ಈ ಗೀತಿಕೆ ದ ಬಾಯ್ ಫ್ರಾಮ್ ಔಜ್ ನ್ನು ಆಸ್ಟ್ರೇಲಿಯಾದಲ್ಲಿಯೂ ಸಹ ಪ್ರದರ್ಶಿಸಿದರು.

ಇದರ ಜೊತೆ ಜಾಕ್‌ಮನ್‌ 2003, 2004 ಮತ್ತು 2005 ರಲ್ಲಿ ಟೋನಿ ಪ್ರಶಸ್ತಿಗಳ ಕಾರ್ಯಕ್ರಮ ನಿರೂಪಣೆ ಮಾಡಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದರು. ಅವರ 2004 ರ ಟೋನಿ ಪ್ರಶಸ್ತಿಗಳ ನಿರೂಪಣೆ ವಿವಿಧ ಕ್ಷೇತ್ರಗಳಲ್ಲಿ (2005ರ ಸಂಗೀತ ಅಥವಾ ಹಾಸ್ಯ ಕಾರ್ಯಕ್ರಮ) ಅತ್ಯುತ್ತಮ ವ್ಯಕ್ತಿಗತ ಪ್ರದರ್ಶನಕ್ಕಾಗಿ ಎಮ್ಮಿ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು.

ಸ್ಕೊನ್ ಫೆಲ್ಡ್ ಥಿಯೇಟರಿನ ಬ್ರಾಡ್ ವೆ ಯಲ್ಲಿ ಎ ಸ್ಟೆಡಿ ರೇನ್ ಎಂಬ ನಾಟಕದ ಕೆಲವು ನಿಯಮಿತ ಪ್ರದರ್ಶನಗಳಲ್ಲಿ ಡೆನಿಯಲ್ ಕ್ರೆಗ್ ಜೊತೆ ಜಾಕ್‌ಮನ್‌ ಸಹ ನಟಿಸಿದ್ದಾರೆ. ಇದು ಸೆಪ್ಟೆಂಬರ್ 10, 2009 ರಂದು ಮುನ್ನೋಟದಲ್ಲಿ ಪ್ರಾರಂಭವಾಗಿ ಡಿಸೆಂಬರ್ 6, 2009 ರಂದು ಕೊನೆಗೊಳ್ಳುತ್ತದೆ.

2003–2008 ರ ಚಿತ್ರಗಳು

2003 ರ ಎಕ್ಸ್ 2: ಎಕ್ಸ್-ಮೆನ್ ಯುನೈಟೆಡ್ ನ ನಂತರ, 2004 ರಲ್ಲಿ ವಾನ್ ಹೆಸ್ಲಿಂಗ್ ಚಿತ್ರದಲ್ಲಿ ಗೇಬ್ರಿಯಲ್ ವಾನ್ ಹೆಸ್ಲಿಂಗ್ ಹೆಸರಿನ ಕ್ರೂರ ಕೊಲೆಗಾರನಾಗಿ ಜಾಕ್‌ಮನ್‌ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದರು. ಬ್ರೂಸ್ ಎ ಮ್ಯಾಕ್‌ಕ್ಲೆಲ್ಯಾಂಡ್ ಬರೆದ "ಸ್ಲೇಯರ್ಸ್ ಎಂಡ್ ದೇರ್ ವ್ಯಾಂಪಿಯರ್ಸ್: ಅ ಕಲ್ಚರ್ ಹಿಸ್ಟರಿ ಆಫ್ ಕಿಲ್ಲಿಂಗ್ ದ ಡೆಡ್" ಎಂಬ ಪುಸ್ತಕದಲ್ಲಿ ಜಾಕ್‌ಮನ್‌ ಹೊಸ ವಾನ್ ಹೆಸ್ಲಿಂಗ್ ಆಗಿ ಕಾಣಿಸಿಕೊಂಡಿದ್ದಾರೆ.

2005 ರಲ್ಲಿ ಸಹ, 2006 ರ ಕ್ಯಾಸಿನೋ ರಾಯಲ್ ನಲ್ಲಿ ಜೇಮ್ಸ್ ಬಾಂಡ್ ಪಾತ್ರದಲ್ಲಿ ಅಭಿನಯಿಸುವ ಆಯ್ಕೆಗಳಲ್ಲಿ ಜಾಕ್‌ಮನ್‌ ಒಬ್ಬನಾಗಿದ್ದನು, ಆದರೆ ಅದು ಕೊನೆಯಲ್ಲಿ ಡೆನಿಯಲ್ ಕ್ರೆಗ್ ಗೆ ಹೋಯಿತು.

ಕ್ರಿಸ್ಟೋಫರ್ ನೋಲನ್ ನಿರ್ದೇಶಿಸಿರುವ ದ ಪ್ರೆಸ್ಟೀಜ್ ಚಿತ್ರದಲ್ಲಿ ಜಾಕ್‌ಮನ್‌ 2006 ರಲ್ಲಿ ಅಭಿನಯಿಸಿದ್ದು, ಕ್ರಿಸ್ಟನ್ ಬಲೆ, ಮೈಕೆಲ್ ಕೈನ್, ಮತ್ತು ಸ್ಕಾರ್ಲೆಟ್ ಜಾನ್ಸನ್ ಸಹಾ ತಾರಾಗಣದಲ್ಲಿದ್ದಾರೆ. ಜಾಕ್‌ಮನ್ ಅದರಲ್ಲಿ ರಾಬರ್ಟ್ ಏಂಜಿಯರ್ ಮಾಂತ್ರಿಕನ ಎಂಬ ಪಾತ್ರವನ್ನು ನಿರ್ವಹಿಸಿದ್ದು, ಆ ಪಾತ್ರವು ತನ್ನ ವಿರೋಧಿಯಾದ ಅಲ್ಫ್ರೆಡ್ ಬೋರ್ಡನ್ ಎಂಬುವವನೊಡನೆ ಮೋಸದ ಕಲೆಯಲ್ಲಿ ಮೊದಲ ಸ್ಥಾನಕ್ಕಾಗಿ ಸೆಣಸುತ್ತಿರುತ್ತದೆ. ದ ಪ್ರೆಸ್ಟೀಜ್ ಚಿತ್ರದಲ್ಲಿ ವಿಜ್ಞಾನಿ ನಿಕೊಲಾ ಟೆಲ್ಸಾ ಆಗಿ ಅಭಿನಯಿಸಿರುವ ಸಂಗೀತಗಾರ ಬೋವೀ ಅವರ ಜೊತೆ ಕೆಲಸ ಮಾಡುವುದು ಅದರಲ್ಲಿ ಅಭಿನಯಿಸಲು ಮುಖ್ಯ ಕಾರಣವಾಗಿತ್ತೆಂದು ಜಾಕ್‌ಮನ್‌ ಹೀಗೆ ಹೇಳಿದ್ದಾರೆ.

ಡರೆನ್ ಅರನೋಫ್ಸ್ಕಿಯವರ ವೈಜ್ಞಾನಿಕ ಕಾದಂಬರಿ ಆಧಾರಿತ ಚಿತ್ರ ದ ಫೌಂಟೆನ್ ನಲ್ಲಿ ಜಾಕ್‌ಮನ್‌ ಮೂರು ಬೇರೆ ಬೇರೆ ಪಾತ್ರಗಳಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ, ಬ್ರೇನ್ ಟ್ಯೂಮರ್ ನಿಂದ ಸಾಯುತ್ತಿರುವ ಹೆಂಡತಿ ಇಜ್ಜಿ (ರಾಚೆಲ್ ವೆಸ್ಜ್) ಮತ್ತು ಅವಳನ್ನು ಗುಣಪಡಿಸಲು ಪ್ರಯತ್ನಿಸುವ ಕೆಲಸ ಮಾಡುವ ಟಾಮ್ ಕ್ರಿಯೊ ಹೆಸರಿನ ನರ ವಿಜ್ಞಾನಿಯ ಪಾತ್ರ, ಎರಡನೆಯದು 1532 ಸೇವಿಲೆಯಲ್ಲಿ ಕ್ಯಾಪ್ಟನ್ ಥಾಮಸ್ ಕ್ರೆಒ ಹೆಸರಿನ ಸ್ಪೇನ್‌ನ ಸಾಹಸಿ, ಭವಿಷ್ಯದ ಗಗನಯಾತ್ರಿಯ ಪಾತ್ರ, ಬಾಹ್ಯಾಕಾಶ ನೌಕೆಯಲ್ಲಿರುವ ಬಂಗಾರದ ನೀಹಾರಿಕೆಗೆ ಸಂಚರಿಸಿ ಮತ್ತು ಇಜ್ಜಿಯೊಡನೆ ಸೇರಬಯಸುವ ಟಾಮ್‌ನ ಪಾತ್ರ. ಈ ಚಿತ್ರದಲ್ಲಿನ ಶಾರೀರಿಕ ಮತ್ತು ಭಾವನಾತ್ಮಕ ಬೇಡಿಕೆಗಳ ಕಾರಣದಿಂದ ದ ಫೌಂಟೆನ್ ಇಲ್ಲಿಯವರೆಗಿನ ಅತ್ಯಂತ ಕಠಿಣ ಚಿತ್ರ ಎಂದು ಜಾಕ್‌ಮನ್‌ ಹೇಳಿದ್ದಾರೆ.

ಜಾಕ್‌ಮನ್‌ 2006 ರ ವೂಡಿ ಅಲೆನ್ ರ ಚಿತ್ರ ಸ್ಕೂಪ್ ನಲ್ಲಿ ಸಹ ಸ್ಕಾರ್ಲೆಟ್ ಜಾನ್ಸನ್ ಎದುರು ನಟಿಸಿದ್ದಾರೆ. ಅವನು 2006 ರಲ್ಲಿ ಎರಡು ಎನಿಮೇಟೆಡ್ ಚಿತ್ರಗಳನ್ನು ಮಾಡಿದ: ಜಾರ್ಜ್ ಮಿಲ್ಲರ್ ನಿರ್ದೇಶನದ ಹ್ಯಾಪಿ ಫೀಟ್ . ಇದರಲ್ಲಿ ಅವರು ಪೆಂಗ್ವಿನ್ ರಾಜ ಮೆಂಫಿಸ್ ಗೆ ಧ್ವನಿ ನೀಡಿದರು. ಮತ್ತೊಂದು ಫ್ಲಶ್ಡ್ ಅವೆ . ಇದರಲ್ಲಿ ಜಾಕ್‌ಮನ್‌ ರೋಡಿ ಎಂಬ ಹೆಸರಿನ ಇಲಿಯ ಧ್ವನಿಯನ್ನು ಒದಗಿಸಿದ್ದಾರೆ. ಇದು ಮನೆಯ ಟಾಯ್ಲೆಟ್‌ನಿಂದ ಲಂಡನ್ನಿನ ಒಳ ಚರಂಡಿಗೆ ಸಾಗುವುದರ ಕುರಿತು ಚಿತ್ರವಿದೆ. ಫ್ಲಶ್ಡ್ ಅವೆ ಚಿತ್ರದ ತಾರಾಗಣದಲ್ಲಿ ಕೇಟ್ ವಿನ್ಸ್ಲೆಟ್ ಮತ್ತು ಆಯಾನ್ ಮ್ಯಾಕ್‌ಕೆಲ್ಲನ್ (ನಾಲ್ಕನೇ ಸಲ ಜಾಕ್‌ಮನ್‌ ಜೊತೆ ಕೆಲಸ ಮಾಡುತ್ತಿದ್ದಾರೆ) ಅಭಿನಯಿಸಿದ್ದಾರೆ.

2007 ರಲ್ಲಿ ಜಾಕ್‌ಮನ್‌ ನಿರ್ಮಿಸಿ ಅತಿಥಿ ನಟನಾಗಿ ಅಭಿನಯಿಸಿರುವ ದೂರದರ್ಶನದ ಸಂಗೀತ-ಹಾಸ್ಯ ನಾಟಕ ವಿವಾ ಲಾಫ್ಲಿನ್ , ಎರಡು ಕಂತುಗಳ ನಂತರ ಸಿಬಿಎಸ್ ನಿಂದ ರದ್ದಾಯಿತು. ಮೊದಲೇ ಚಿತ್ರೀಕರಿಸಲಾದ ಉಳಿದ ಕಂತುಗಳ ರದ್ದುಗೊಳಿಸುವ ನಿರ್ಣಯ ಇನ್ನೂ ಆಗಬೇಕಿದೆ.

ಜಾಕ್‌ಮನ್‌ ನ 2008 ರ ಚಿತ್ರಗಳಿಗೆ ಡಿಸೆಪ್ಶನ್ (ಇದು ಅವನು ನಿರ್ಮಿಸಿ ಅಭಿನಯಿಸಿದ ಚಿತ್ರ), ಅಂಕಲ್ ಜಾನಿ , ಆಸ್ಟ್ರೇಲಿಯಾ ಗಳು ಸೇರಿವೆ.

ಆಸ್ಟ್ರೇಲಿಯಾ

2008 ರಲ್ಲಿ ಹೆಚ್ಚು ಜನಪ್ರಿಯಗೊ೦ಡ ಪುರಾಣ ಪ್ರಸಿದ್ಧ ಚಿತ್ರ ಆಸ್ಟ್ರೇಲಿಯ ದ ನಾಯಕ ನಟನ ಪಾತ್ರವನ್ನು ನಿರ್ದೇಶಕ ಬಜ್ ಲುಹ್ರ್ಮನ್ ರಸ್ಸೆಲ್ ಕ್ರೋವ್‌ನ ಬದಲಾಗಿ ಜಾಕ್‌ಮನ್‌ ಹತ್ತಿರ ಮಾಡಿಸುತ್ತಾರೆ, ನಿಕೊಲ್ ಕಿಡ್ಮನ್ ಇದರ ತಾರಾಗಣದಲ್ಲಿದ್ದಾರೆ. ಈ ಚಿತ್ರವು 2008 ರ ನವೆಂಬರ್ ನಂತರ ಆಸ್ಟ್ರೇಲಿಯಾ ಮತ್ತು ಯುಎಸ್‌ಗಳಲ್ಲಿ ಬಿಡುಗಡೆಯಾಯಿತು.

ಜಾಕ್‌ಮನ್‌ ಇದರಲ್ಲಿ ಕಠಿಣ, ಸ್ವಾವಲಂಬಿ ದನ ಕಾಯುವವನ ಪಾತ್ರ ಮಾಡಿದ್ದಾರೆ. ತನ್ನ ಗಂಡನ ಕೊಟ್ಟಿಗೆಮತ್ತು ಅವಳು ಅಲ್ಲಿ ಕಂಡ ಬುಡಕಟ್ಟಿನ ಜಾತಿಯಮಗುವನ್ನು ರಕ್ಷಿಸುವ ಇಂಗ್ಲೀಷ್ ಮಹಿಳೆಯ ಆಸೆಗೆ ಜಾಕ್‌ಮನ್‌ ಮನಸ್ಸಿಲ್ಲದೆ ಸಹಾಯ ಮಾಡುತ್ತಾರೆ.

ಚಿತ್ರದ ಬಗ್ಗೆ ಜಾಕ್‌ಮನ್‌ ಹೀಗೆ ಹೇಳುತ್ತಾರೆ, "ಇದು ಬಹಳ ಸುಂದರವಾದ ಪಾತ್ರ ಇದು ಚಿತ್ರೀಕರಣದ ಸಮಯದಲ್ಲಿ ನನ್ನ ಹೃದಯವನ್ನು ಚುಚ್ಚಿತು. ಚಿತ್ರೀಕರಣಕ್ಕೆ ಹೆಚ್ಚಿನ ವೆಚ್ಚದ, ನನ್ನ ದೇಶದ ಇತಿಹಾಸದ ಅತ್ಯಂತ ಪ್ರಕ್ಷುಬ್ಧ ಸಮಯದ ಹಳೆಯ ಫ್ಯಾಶನ್ನಿನ ಪ್ರೇಮಕತೆಯ ಸೆಟ್ಟನ್ನು ಮಾಡಬೇಕಾಯಿತು, ಅದೇ ಸಮಯದಲ್ಲಿ ದೇಶದ ನೈಸರ್ಗಿಕ ಸೌಂದರ್ಯ, ಇಲ್ಲಿಯ ಜನ, ಇಲ್ಲಿಯ ಸಂಸ್ಕೃತಿ ಎಲ್ಲವನ್ನೂ ಸವಿಯುತ್ತಾ... ಈ ಚಿತ್ರ ನನ್ನ ಸಿವಿಯಲ್ಲಿರುವುದಕ್ಕೆ ನಾನು ಬಹಳ ಸಂತೋಷಪಡುತ್ತಾ ಸಾಯುತ್ತೇನೆ.

ಭವಿಷ್ಯದ ಯೋಜನೆಗಳು

  • ಜಾಕ್‌ಮನ್‌ ನಟಿಸುತ್ತಿರುವ ನಾಟಕ, ಡ್ರೈವ್ , ಈಗ ನಿರ್ಮಾಣಗೊಳ್ಳುತ್ತಿದೆ.
  • 2010 ರಲ್ಲಿ ಬಿಡುಗಡೆ ಮಾಡಬೇಕು ಎಂದು ನಿಗದಿಯಾದ ಕೆರೌಸೆಲ್ ರೀಮೇಕ್‌ನಲ್ಲಿ ಮುಖ್ಯ ನಟನಾಗಬೇಕು ಎಂದು ಯೋಜಿಸಿದ್ದಾರೆ, ಇದರಲ್ಲಿ ಅವರು ಬಿಲ್ಲಿ ಬಿಗೆಲೊ ಆಗಿ ಅಭಿನಯಿಸುತ್ತಿದ್ದಾರೆ.
  • ಎವನ್ ಮ್ಯಾಕ್ ಗ್ರೆಗ್ ಜೊತೆ ಜಾಕ್‌ಮನ್‌, ಆಂಡ್ರಿ ಲೊಯ್ಡ್ ವೆಬ್ಬರ್ ಸಂಗೀತದ ಸನ್ ಸೆಟ್ ಬೌಲೆವರ್ಡ್ ನ ಹೊಸ ಚಿತ್ರದ ಆವೃತ್ತಿಯಲ್ಲಿ ಜೊ ಗಿಲಿಸ್ ನ ಪಾತ್ರವನ್ನು ಪುನರಾವರ್ತಿಸಲು ಆಲೋಸಿಸುತ್ತಿದ್ದಾರೆ.
  • ಜಾಕ್‌ಮನ್‌ ಪ್ರಚಲಿತವಾಗಿ ಅಮೇರಿಕದ ಪ್ರಕಾಶಕ ವರ್ಜಿನ್ ಕಾಮಿಕ್ ಮತ್ತು ಬರಹಗಾರ ಮಾರ್ಕ್ ಗುಗ್ಗೆನ್ ಹ್ಯಾಮ್ ಜೊತೆ ಚಲನಚಿತ್ರವಾಗಿಯೂ ಸಹ ಅಳವಡಿಸಿಕೊಳ್ಳುವ ಆಶಯದ ಜೊತೆ ನೌಹಿಯರ್ ಮ್ಯಾನ್ ಎಂಬ ಹೊಸ ವಿನೋದದ ಪುಸ್ತಕಗಳ ಸರಣಿಯನ್ನು ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ.
  • ಜಾಕ್‌ಮನ್‌, ಅನ್ ಬೌಂಡ್ ಕ್ಯಾಪ್ಟಿವ್ ಎನ್ನುವ 2010ರಲ್ಲಿ ಬಿಡುಗಡೆಯಾಗುವ ಚಲನಚಿತ್ರದಲ್ಲಿ ,ಅವನ ಮುಂಚಿನ ಸಹನಟರಾದ ರಾಚೆಲ್ ವೆಸ್ ಮತ್ತು ರಾಬರ್ಟ್ ಪೆಟಿನ್ಸನ್ ರ ಜೊತೆ ಅಭಿನಯಿಸುತ್ತಾರೆ.
  • ಪಿ.ಟಿ.ಬರ್ನಮ್ ಜೀವನದ ಮೇಲೆ ಆಧಾರಿತ ಸಮಕಾಲೀನ ಸಂಗೀತ, ದ ಗ್ರೇಟೆಸ್ಟ್ ಅಮೆರಿಕನ್ ಶೋಮ್ಯಾನ್ ನಲ್ಲಿ ಜಾಕ್‌ಮನ್‌ ನಟಿಸುವವರಿದ್ದಾರೆ.
ಈ ಚಿತ್ರದ ನಾಯಕಿಯ ಪಾತ್ರವನ್ನು ಅನ್ನೆ ಹ್ಯಾತ್‌ವೇಯನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ. 
  • ಜಾಕ್‌ಮನ್‌ ವೊಲ್ವ್ ರೈನ್ 2 ನ್ನು ಜಪಾನಿನಲ್ಲಿ ಚಿತ್ರೀಕರಿಸುತ್ತಾರೆ.
  • ರಿಯಲ್ ಸ್ಟೀಲ್ (2011), ಡ್ರೀಮ್ ವರ್ಕ್ಸ್ ನ ವೈಜ್ಞಾನಿಕ ಚಿತ್ರ.

ನಿರ್ಮಾಣ ಸಂಸ್ಥೆ

2005 ರಲ್ಲಿ, ಜಾಕ್‌ಮನ್‌ ನಿರ್ಮಾಣ ಕಂಪನಿ ಸೀಡ್ ಪ್ರೊಡಕ್ಷನ್ ನ್ನು ಕಟ್ಟುವ ಉದ್ದೇಶದಿಂದ ಅವನ ಹಳೆಯ ಸಹಾಯಕ ಜಾನ್ ಪಲೆರ್ಮೊ‌ನ ಜೊತೆಗೂಡಿದರು. 2007 ರಲ್ಲಿ ಆರಂಭವಾದ ವಿವಾ ಲಾಫ್ಲಿನ್ ಅವರ ಮೊದಲ ಯೋಜನೆಯಾಗಿತ್ತು. ಜಾಕ್‌ಮನ್‌‌ನ ಹೆಂಡತಿ, ನಟಿ ಡೆಬೊರಾ-ಲೀ ಫರ್ನೆಸ್ ಸಹ ಈ ಕಂಪನಿಯಲ್ಲಿ ಸೇರಿದ್ದಳು. ಪಲೆರ್ಮೋ ತನಗೆ, ಫರ್ನೆಸ್ ಮತ್ತು ಜಾಕ್‌ಮನ್‌‌ರಿಗಾಗಿ ಮಾಡದ "ಏಕತೆ" ಎಂಬ ಅರ್ಥದ ಬರಹವಿರುವ ಮೂರು ಉಂಗುರಗಳನ್ನು ಮಾಡಿಕೊಂಡಿದ್ದನು. ಈ ಮೂವರ ಸಹಭಾಗಿತ್ವದ ಬಗ್ಗೆ ಜಾಕ್‌ಮನ್‌ ಹೀಗೆ ಹೇಳುತ್ತಾರೆ, "ನನ್ನ ಜೀವನದಲ್ಲಿ ಡೆಬ್ ಮತ್ತು ಜಾನ್ ಪಲೆರ್ಮೊರಂಥ ಪಾಲುದಾರರ ಜೊತೆ ಕೆಲಸ ಮಾಡಲು ನಾನು ಬಹಳ ಭಾಗ್ಯಶಾಲಿ. ಇದು ನಿಜವಾಗಿಯೂ ಕೆಲಸ ಮಾಡಿತು. ನಾವು ಎಲ್ಲರೂ ಬೇರೆ ಬೇರೆ ಸಾಮರ್ಥ್ಯವನ್ನು ಹೊಂದಿದ್ದೇವೆ. ನಾನು ಇದನ್ನು ಪ್ರೀತಿಸುತ್ತೇನೆ. ಇದು ತುಂಬಾ ಉತ್ತೇಜನಕಾರಿಯಾಗಿದೆ."

ಈ ಫಾಕ್ಸ್-ಆಧಾರಿತ ಸೀಡ್ ಲೇಬಲ್ ಸಂಸ್ಥೆಯ ಗಾತ್ರವು ಬೆಳೆಯಿತು ಮತ್ತು ಇದರಲ್ಲಿ ಅಮಂಡಾ ಶೆವಿಟ್ಸರ್, ಕ್ಯಾಥರಿನ್ ಟ್ಯಾಂಬ್ಲಿನ್, ಅಲನ್ ಮಂಡೆಲ್ಬೌಮ್, ಮತ್ತು ಜೋ ಮರಿನೋ ಇವರೆಲ್ಲರೂ ಕಾರ್ಯನಿರ್ವಾಹಣಾಧಿಕಾರಿಗಳಾಗಿ ಸೇರಿಕೊಂಡರು. ಅಲನ್ ಫ್ರೀ ಸಿಡ್ನಿ-ಮೂಲದ ನಿರ್ಮಾಣ ಕಚೇರಿಯನ್ನು ನೋಡಿಕೊಳ್ಳುತ್ತಿದ್ದು, ಅವರ ಗುರಿಯು ಸಣ್ಣ-ಮೊತ್ತದ ಸಿನೆಮಾಗಳನ್ನು ಮಾಡುವ ಮೂಲಕ ಜಾಕ್‌ಮನ್‌ನ ದೇಶದ ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವುದು.

ಬೇರೆ ಆಸಕ್ತಿಗಳು

ಧರ್ಮಾರ್ಥ ಕೆಲಸಗಳು

ಲೋಕ ಹಿತೈಷಿಯಾಗಿ, ಜಾಕ್‌ಮನ್‌ ಬಹಳ ಹಿಂದಿನಿಂದ ಮೈಕ್ರೊಕ್ರೆಡಿಟ್‌ನ ಪ್ರತಿಪಾದಕ. ಮೈಕ್ರೊಕ್ರೆಡಿಟ್‌ ಎಂದರೆ ಅಭಿವೃದ್ಧಿಯಾಗದ ದೇಶಗಳಲ್ಲಿನ ಹೊಸ ವಾಣಿಜ್ಯೋದ್ಯಮಿಗಳಿಗೆ ಚಿಕ್ಕ ಮೊತ್ತದ ಸಾಲವನ್ನು ನೀಡುವುದು. ಅವರು ಮೈಕ್ರೊಕ್ರೆಡಿಟ್‌ನ ಪ್ರವರ್ತಕ ಮತ್ತು 2006 ರ ನೊಬೆಲ್ ಶಾಂತಿ ಪಾರಿತೋಷಕವನ್ನು ಪಡೆದ ಮುಹಮ್ಮದ್ ಯುನುಸ್‌ನ ಪ್ರತಿಪಾದಕರು.

ಜಾಕ್‌ಮನ್‌ ಗ್ಲೋಬಲ್ ಪವರ್ಟಿ ಪ್ರಾಜೆಕ್ಟ್‌ನ ವಿಶ್ವವ್ಯಾಪಿ ಸಲಹೆಗಾರರಾಗಿದ್ದು, ಇದರ ಬಗ್ಗೆ ಒಂದು ಸಾಕ್ಷ್ಯಚಿತ್ರವನ್ನು ನಿರೂಪಿಸಿದ್ದಾರೆ, 2009ರಲ್ಲಿ ಈ ಕಾರಣಕ್ಕಾಗಿ ಅವರು ಮತ್ತು ಯೋಜನೆಯ ಸಂಸ್ಥಾಪಕ ಹ್ಯೂ ಇವಾನ್ಸ್ ಯುನ್ ಗೆ ಭೇಟಿ ನೀಡಿದ್ದರು. ಜಾಕ್‌ಮನ್‌, ಡೊನ್ನಾ ಕರ್ರನ್, ಲಿಸಾ ಫೊಕ್ಸ್, ಮತ್ತು ಅವನ ಹೆಂಡತಿ ಡೆಬರಾ-ಲೀ ಜೊತೆ ನ್ಯೂಯಾರ್ಕ್‌ನಲ್ಲಿ ನಡೆದ ಗ್ಲೊಬಲ್ ಪವರ್ಟಿ ಪ್ರಾಜೆಕ್ಟ್‌ನ ಮಂಡನೆಯ ಪೂರ್ವಪ್ರದರ್ಶನವನ್ನು ನಡೆಸಿಕೊಟ್ಟರು. ಇವರು ವರ್ಲ್ಡ್ ವಿಶನ್‌ನ ರಾಯಭಾರಿಯೂ ಸಹ ಮತ್ತು 2009ರ ಸಪ್ಟೆಂಬರ್ 21ರಂದು ನಡೆದ ಹವಾಮಾನ ಸಪ್ತಾಹ ಎನ್ ವಾಯ್ ಸಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ಜಾಕ್‌ಮನ್‌ ದ ಆರ್ಟ್ ಆಫ್ ಎಲಿಸಿಯಮ್ ಮತ್ತು ಎಮ್ ಪಿ ಟಿ ವಿ ಫಂಡ್ ಫೌಂಡೇಶನ್‌ ಗಳನ್ನು ಸಮರ್ಥಿಸುತ್ತಾರೆ, ಮತ್ತು ಅವನು ಮತ್ತು ಅವನ ಹೆಂಡತಿ ಡೆಬೊರಾ-ಲೀ ಫರ್ನೆಸ್ ಆಸ್ಟ್ರೇಲಿಯಾದ ಬೋನ್ ಮ್ಯಾರೊ ಸಂಸ್ಥೆಯ ಪೋಷಕರು. ಜಾಕ್‌ಮನ್‌ 2008ರಲ್ಲಿ ಜಾಗತಿಕ ಉಷ್ಣತೆ ಬಗ್ಗೆ ದ ಬರ್ನಿಂಗ್ ಸೀಸನ್ ಎಂಬ ಸಾಕ್ಷ್ಯಚಿತ್ರವನ್ನು ಸಹ ನಿರೂಪಿಸಿದ್ದಾರೆ.

ಜಾಕ್‌ಮನ್‌ ತಮ್ಮ ಟ್ವಿಟ್ಟರ್ ಖಾತೆಯನ್ನು ಧರ್ಮಾರ್ಥಕ್ಕಾಗಿ ಉಪಯೋಗಿಸುತ್ತಿದ್ದಾರೆ. ಎಪ್ರಿಲ್ 14, 2009ರಂದು $100,000ನ್ನು ಒಬ್ಬ ವ್ಯಕ್ತಿಯ ಇಷ್ಟದ ಲಾಭರಹಿತ-ಸೇವೆಯ ಸಂಘಟನೆಗೆ ದಾನ ಮಾಡುತ್ತೇನೆ ಎಂದು ಅವನ ಟ್ವಿಟ್ಟರ್ ಪುಟದಲ್ಲಿ ಹೇಳಿದ್ದಾರೆ. ಎಪ್ರಿಲ್ 21, 2009ರಂದು $50,000 ಧರ್ಮಾರ್ಥಕ್ಕೆ: ವಾಟರ್ ಮತ್ತು ಆಪರೇಷನ್ ಆಫ್ ಹೋಪ್ ಗಾಗಿ $50,000ನ್ನು ದಾನ ಮಾಡುವ ತನ್ನ ನಿರ್ಣಯವನ್ನು ಬಹಿರಂಗಪಡಿಸಿದ್ದಾರೆ.

ಬ್ರಾಡ್ ವೆ ಕೇರ್ಸ್/ಇಕ್ವಿಟಿ ಫೈಟ್ಸ್ ಎಐಡಿಎಸ್ ಫಂಡ್ ರೈಸಿಂಗ್ 8 ಡಿಸೆಂಬರ್ 2009ರ ಇತಿಹಾಸದಲ್ಲಿ ಹಗ್ ಜಾಕ್‌ಮನ್‌ ಮತ್ತು ಡೆನಿಯಲ್ ಕ್ರೆಗ್ ತಮಗಾಗಿ ವಿಶಿಷ್ಟವಾದ ಜಾಗವನ್ನು ಮಾಡಿಕೊಂಡಿದ್ದಾರೆ. 21ನೆಯ ವಾರ್ಷಿಕ ಜಿಪ್ಸಿಯ ವರ್ಷದ ಸ್ಪರ್ಧೆಯಲ್ಲಿ ಅವರು $1,549,953 ನ್ನು ಹೆಚ್ಚಿಸಿದ್ದಾರೆ ಎಂದು ಪ್ರಕಟಿಸಲಾಯಿತು, ಆರು ವಾರಗಳಿಂದ ಅವರ ಪ್ರಸಿದ್ಧ ಬ್ರಾಡ್ ವೆ ನಾಟಕ ಅ ಸ್ಟೆಡಿ ರೇನ್ ಪರದೆಯ ಮೇಲೆ ರಂಜಿಸುತ್ತಿದೆ.

ಕ್ರೀಡೆ

ಜಾಕ್‌ಮನ್‌ ವಿವಿಧ ರೀತಿಯ ಕ್ರೀಡೆಗಳಲ್ಲಿ ತೀವ್ರ ಆಸಕ್ತಿ ತೋರಿಸಿದ್ದಾರೆ. ಪ್ರೌಢಶಾಲೆಯಲ್ಲಿ, ರಗ್ಬಿ ಮತ್ತು ಕ್ರಿಕೆಟ್ ನ್ನು ಆಡಿದ್ದಾರೆ, ಎತ್ತರ ಜಿಗಿತದಲ್ಲಿ ಭಾಗವಹಿಸಿದ್ದಾರೆ ಮತ್ತು ಈಜುವ ಗುಂಪಿನಲ್ಲಿದ್ದರು. ಅವರು ಬಾಸ್ಕೆಟ್ ಬಾಲ್ ಮತ್ತು ಕಯಾಕಿಂಗ್‌‍ ಅನ್ನು ಸಹ ಆನಂದಿಸುತ್ತಾರೆ. ಅವರು ಫುಟ್ ಬಾಲ್‌ನಲ್ಲಿ ಆಸಕ್ತಿ ಹೊಂದಿರುವುದನ್ನು ವ್ಯಕ್ತಪಡಿಸಿದ್ದಾರೆ ಮತ್ತು ನಾರ್ವಿಚ್ ಸಿಟಿ‌ಎಫ್‌ಸಿಯ ಬೆಂಬಲಕ್ಕೆ ಬದ್ಧರಾಗಿದ್ದಾರೆ.

ಜಾಕ್‌ಮನ್‌ ಬಹಳ ಹಿಂದಿನಿಂದ ಸಿಡ್ನಿಯ ಉತ್ತರ ಮೂಲದ ಎನ್‌ಆರ್‌ಎಲ್ ಸಂಸ್ಥೆ ಮನ್ ಲಿ ವಾರ್ರಿಂಗ್ ಸಿ ಈಗಲ್ಸ್‌ನ ಅಭಿಮಾನಿ ಮತ್ತು ಬೆಂಬಲಿಗರು. 1999ರ ಎನ್‌ಆರ್‌ಎಲ್‌ನ ಗ್ರಾಂಡ್ ಫೈನಲ್ನಲ್ಲಿ ಅವರು ರಾಷ್ಟ್ರಗೀತೆಯನ್ನು ಹಾಡಿದ್ದರು. ಹ್ಯೂ ತಾವು ನಾರ್ವಿಚ್ ಸಿಟಿ‍ಎಫ್‌ಸಿಯ ಅಭಿಮಾನಿಯಾಗಿದ್ದರು ಎಂದು ಸ್ಕೈ ಸ್ಫೋರ್ಟ್ಸ್ ಸಾಕರ್ ಎ‌ಎಮ್ ನಲ್ಲಿ ಹೇಳಿದ್ದಾರೆ.

ಜಾಕ್‌ಮನ್‌ ಪಿಯಾನೊ ಸಹ ನುಡಿಸುತ್ತಾರೆ, ಪ್ರತಿದಿನ ಯೋಗಾಭ್ಯಾಸ ಮಾಡುತ್ತಾರೆ, ಮತ್ತು 1992 ರಿಂದ ಪ್ರಾಕ್ಟಿಕಲ್ ಫಿಲಾಸಫಿ ಶಾಲೆಯ ಸದಸ್ಯನಾಗಿದ್ದಾರೆ.

ವೈಯಕ್ತಿಕ ಜೀವನ

ಜಾಕ್‌ಮನ್‌ 11 ಎಪ್ರಿಲ್ 1996 ರಂದು ಡೆಬೊರಾ-ಲೀ ಫರ್ನೆಸ್‌ರನ್ನು ಮದುವೆಯಾದರು. ಇವರು ಆಸ್ಟ್ರೇಲಿಯಾದ ದೂರದರ್ಶನ ಸರಣಿ ಕೊರೆಲಿ ಯಲ್ಲಿ ಭೇಟಿಯಾಗಿದ್ದರು. ಜಾಕ್‌ಮನ್‌ ಸ್ವಂತವಾಗಿ ನಿಶ್ಚಿತಾರ್ಥದ ಉಂಗುರವನ್ನು ಫರ್ನೆಸ್‌ಳಿಗಾಗಿ ರೂಪಿಸಿದ್ದರು. ಅವರ ಮದುವೆಯ ಉಂಗುರಗಳು "ನಾವು ನಮ್ಮ ಮದುವೆಯನ್ನು ಮಹತ್ವದ ಉದ್ದೇಶಕ್ಕಾಗಿ ಅರ್ಪಿಸುತ್ತೇವೆ" ಎಂದು ಅರ್ಥ ಕೊಡುವ "ಓಂ ಪರಮರ್ ಮೈನಮರ್" ಎನ್ನುವ ಸಂಸ್ಕೃತ ಬರಹವನ್ನು ಹೊಂದಿತ್ತು. ಅವರು ಪ್ರಚಲಿತವಾಗಿ ಸಿಡ್ನಿ ಮತ್ತು ನ್ಯೂಯಾರ್ಕ್ಗಳಲ್ಲಿ ಸಮಯವನ್ನು ಕಳೆಯುತ್ತಾರೆ.

ಫರ್ನೆಸ್‌ಳಿಗೆ ಎರಡು ಗರ್ಭಪಾತಗಳಾದವು, ನಂತರ ಅವಳು ಮತ್ತು ಜಾಕ್‌ಮನ್‌ ಸೇರಿ ಆಸ್ಕರ್ ಮ್ಯಾಕ್ಸಿಮಿಲಿಯನ್(15 ಮೇ 2000 ರಂದು ಹುಟ್ಟಿದ) ಮತ್ತು ಅವಾ ಎಲಿಯಟ್(10 ಜುಲೈ 2005 ರಂದು ಹುಟ್ಟಿದ) ಎಂಬ ಎರಡು ಮಕ್ಕಳನ್ನು ದತ್ತು ತೆಗೆದುಕೊಂಡರು.

ಚಲನಚಿತ್ರಗಳ ಪಟ್ಟಿ

ವರ್ಷ ಸಿನಿಮಾ ಪಾತ್ರ ಟಿಪ್ಪಣಿಗಳು
೧೯೯೪ ಲಾ ಆಫ್ ದ ಲ್ಯಾಂಡ್ ಚಾರ್ಲ್ಸ್ ಮ್ಯಾಕ್ ಕ್ರೆ 1 ಎಪಿಸೋಡ್
೧೯೯೫ ಕೊರ್ರೆಲಿ ಕೆವಿನ್ ಜಾನ್ಸ್ ಮುಖ್ಯ ಪಾತ್ರ
ಬ್ಲೂ ಹೀಲರ್ಸ್ ಬ್ರಾಡಿ ಜಾಕ್ಸನ್ 1 ಎಪಿಸೋಡ್
೧೯೯೬ Snowy River: The McGregor Saga ಡಂಕನ್ ಜೋನ್ಸ್ 6 ಸಂಚಿಕೆಗಳು
೧೯೯೯ ಎರ್ ಸ್ಕಿನೆವಿಲೆ ಕಿಂಗ್ಸ್ ವೇಸ್ ಉತ್ತಮ ನಟನೆಗಾಗಿ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆಫ್ ಆಸ್ಟ್ರೇಲಿಯಾದ ಪ್ರಶಸ್ತಿ

ಉತ್ತಮ ನಟನೆಗಾಗಿ ಆಸ್ಟ್ರೇಲಿಯಾದ ಚಲನಚಿತ್ರ ಸಂಸ್ಥೆಯ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು.

ಪೇಪರ್ ಬ್ಯಾಕ್ ಹಿರೋ ಜಾಕ್ ವಿಲ್ಲಿಸ್
೨೦೦೦ ಎಕ್ಸ್-ಮೆನ್ ಲೋಗನ್ ವೊಲ್ವೇರಿನ್ ಸತುರ್ನ್ ಅವಾರ್ಡ್ಸ್
೨೦೦೧ ಕೇಟ್ ಎಂಡ್ ಲಿಯೋಪೋಲ್ಡ್ ಲಿಯೋಪೋಲ್ಡ್

[[ಉತ್ತಮ ನಟನೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ - ಮೋಶನ್ ಪಿಕ್ಚರ್ ಮ್ಯುಸಿಕಲ್ ಅಥವಾ ಕಾಮೆಡಿ|ಉತ್ತಮ ನಟನೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ - ಮೋಶನ್ ಪಿಕ್ಚರ್ ಮ್ಯುಸಿಕಲ್ ಅಥವಾ ಕಾಮೆಡಿ]] ಗಳಿಗೆ ನಾಮಾಂಕಿತಗೊಂಡಿದ್ದರು.

ಸಮ್ ವನ್ ಲೈಕ್ ಯು ಎಡ್ಡೀ
ಸ್ವರ್ಡ್‌ಫಿಶ್ ಸ್ಟೇನ್ಲಿ ಜೋಬ್ಸನ್
೨೦೦೩ ಎಕ್ಸ್ 2 ಲೋಗನ್ ವೋಲ್ವೇರಿನ್ ಉತ್ತಮ ನಟ ಎಂದು ಎಂಪೈರ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದರು.
೨೦೦೪ ವ್ಯಾನ್ ಹೆಲ್ಸಿಂಗ್ ಗೇಬ್ರಿಯಲ್ ವ್ಯಾನ್ ಹೆಲ್ಸಿಂಗ್
Van Helsing: The London Assignment ಗೇಬ್ರಿಯಲ್ ವ್ಯಾನ್ ಹೆಲ್ಸಿಂಗ್ (ಕಂಠದಾನ)
೨೦೦೫ ಸ್ಟೋರೀಸ್ ಆಫ್‌ ಸೌಲ್ಸ್ ರೋಜರ್ ಭಾಗ "ಸ್ಟ್ಯಾಂಡಿಂಗ್ ರೂಮ್ ಓನ್ಲಿ"
೨೦೦೬ ಹ್ಯಾಪಿ ಪೀಟ್ ಮೆಂಫಿಸ್ ಕಂಠದಾನ
ಫ್ಲಷ್ಡ್‌ ಅವೇ ರೋಡಿ ಕಂಠದಾನ
ದ ಪ್ರೆಸ್ಟೀಜ್ ರಾಬರ್ಟ್ ಎಂಜಿಯರ್

ಉತ್ತಮ ನಟ ಎಂದು ಆಸ್ಟ್ರೇಲಿಯಾದ ಚಲನಚಿತ್ರ ಸಂಸ್ಥೆ ಪ್ರಶಸ್ತಿಗೆ ನಾಮಾಂಕಿತಗೊಂಡಿತು.

ದ ಫೌಂಟೆನ್ ಟೊಮಸ್/ ಟೊಮಿ/ ಟೊಮ್ ಕ್ರಿಯೋ

ಉತ್ತಮ ನಟನೆಗಾಗಿ ಮೋಶನ್ ಪಿಕ್ಚರ್ ಡ್ರಾಮ ಸೆಟಲೈಟ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು

ಸ್ಕೂಪ್ ಪೀಟರ್ ಲೈಮನ್
X-Men: The Last Stand ಲೋಗನ್ ವೋಲ್ವೇರಿನ್
೨೦೦೮ ದಿಸೆಪ್ಶನ್ ವ್ಯಾಟ್ ಬೋಸ್ ನಿರ್ಮಾಪಕ
ಅಂಕಲ್ ಜಾನಿ ಅಂಕಲ್ ರಸ್ಸೆಲ್ ಟ್ರೋಪ್‌ಫೆಸ್ಟ್ 2008 ಅಂತಿಮ ಹಂತದ ಚಿತ್ರ
ಆಸ್ಟ್ರೇಲಿಯಾ ದ ಡ್ರೋವರ್
ದ ಬರ್ನಿಂಗ್ ಸೀಸನ್ ನಿರೂಪಕ ಸಾಕ್ಷ್ಯಚಿತ್ರ
೨೦೦೯ X-Men Origins: Wolverine ಲೋಗನ್ ವೋಲ್ವೇರಿನ್ ನಿರ್ಮಾಪಕ
೨೦೧೧ X-Men Origins 2: Wolverine ಲೋಗನ್ ವೋಲ್ವೇರಿನ್ ನಿರ್ಮಾಪಕ

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

ಪ್ರಶಸ್ತಿಗಳು

  • 1997 ರಲ್ಲಿ ಗೀತಿಕೆಗಾಗಿ ಉತ್ತಮ ನಟನೆಗೆ ವೆರೈಟಿ ಕ್ಲಬ್ ಪ್ರಶಸ್ತಿ - ಸನ್‌ಸೆಟ್‌ ಬುಲೆವಾರ್ಡ್
  • 1998 ರಲ್ಲಿ ಸನ್‌ಸೆಟ್‌ ಬುಲೆವಾರ್ಡ್ ಗೀತಿಕೆಯಲ್ಲಿನ ಉತ್ತಮ ನಟನೆಗೆ ಮೊ ಪ್ರಶಸ್ತಿ
  • 1999ರ ಆಸ್ಟ್ರೇಲಿಯನ್ ಮೂವಿ ಕನ್ವೆನಶನ್, ಆಸ್ಟ್ರೇಲಿಯನ್ ಸ್ಟಾರ್ ಆಫ್ ದ ಇಯರ್ ಪ್ರಶಸ್ತಿ
  • 2000 ರ ಉತ್ತಮ ನಟನೆಗಾಗಿನ ಸತರ್ನ್ ಪ್ರಶಸ್ತಿ - ಎಕ್ಸ್ ಮೆನ್
  • 2004 ರ ಗೀತಿಕೆಯಲ್ಲಿನ ಅತ್ಯುತ್ತಮ ನಟನೆಗಾಗಿನ ಡ್ರಾಮಾ ಡೆಸ್ಕ್ ಪ್ರಶಸ್ತಿ - ದ ಬಾಯ್ ಫ್ರಾಮ್ ಆಝ್
  • 2004 ರ ಥಿಯೇಟರ್ ವರ್ಲ್ಡ್ ಪ್ರಶಸ್ತಿ - ದ ಬಾಯ್ ಫ್ರಾಮ್ ಆಝ್
  • 2004ರ ಬ್ರಾಡ್ವೇ ಆಡಿಯನ್ಸ್ ಪ್ರಶಸ್ತಿ - ದ ಬಾಯ್ ಫ್ರಾಮ್ ಆಝ್
  • 2004 ರ ವರ್ಷದ ವಿಶಿಷ್ಟವಾದ ಅಭಿನಯಕ್ಕಾಗಿ ಡ್ರಾಮಾ ಪ್ರಶಸ್ತಿ - ದ ಬಾಯ್ ಫ್ರಾಮ್ ಆಝ್
  • 2004 ರ ಗೀತಿಕೆಯಲ್ಲಿನ ಉತ್ತಮ ನಟನೆಗಾಗಿ ಔಟರ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ - ದ ಬಾಯ್ ಫ್ರಾಮ್ ಆಝ್
  • 2004ರ ಉತ್ತಮ ಮೇಲ್ ಡಾನ್ಸರ್ ಇನ್ ಥಿಯೇಟರ್‌ಗಾಗಿ ಟಿಡಿಎಫ್ ಪ್ರಶಸ್ತಿ - ದ ಬಾಯ್ ಫ್ರಾಮ್ ಆಝ್
  • 2004ರ ಗೀತಿಕೆಯಲ್ಲಿನ ಉತ್ತಮ ಮುಖ್ಯ ಪಾತ್ರದ ನಟನೆಗಾಗಿ ಥಿಯೇಟರ್ ಫ್ಯಾನ್ಸ್ ಚಾಯ್ಸ್ ಪ್ರಶಸ್ತಿ - ದ ಬಾಯ್ ಫ್ರಾಮ್ ಆಝ್
  • 2004ರ ಗೀತಿಕೆಯಲ್ಲಿನ ಮುಖ್ಯ ಪಾತ್ರದ ಉತ್ತಮ ನಟನೆಗಾಗಿ ಟಾನಿ ಪ್ರಶಸ್ತಿ - ದ ಬಾಯ್ ಫ್ರಾಮ್ ಆಝ್
  • 2004ರ ಉತ್ತಮ ನಟನೆಗಾಗಿನ ನ್ಯೂಯಾರ್ಕ್ ಇಂಟರ್ ನ್ಯಾಷನಲ್ ಇಂಡಿಪೆಂಡೆಂಟ್ ಫಿಲಂ & ವಿಡಿಯೋ ಫೆಸ್ಟಿವಲ್- ಶಾರ್ಟ್ ಫಿಲಂ ಪ್ರಶಸ್ತಿ - " ಮೇಕಿಂಗ್ ದ ಗ್ರೇಡ್ "
  • 2004ರ ಆಸ್ಟ್ರೇಲಿಯನ್ ಶೋಬಿಸಿನೆಸ್ ಅಂಬಾಸೆಡರ್ ಆಫ್ ದ ಇಯರ್
  • 2005ರ ಸಂಗೀತದಲ್ಲಿ ಅತ್ಯುತ್ತಮ ವ್ಯಕ್ತಿಗತ ಪ್ರದರ್ಶನಕ್ಕಾಗಿನ ಎಮ್ಮಿ ಪ್ರಶಸ್ತಿ - 58ನೆ ಟೋನಿ ಪ್ರಶಸ್ತಿಗಳ ಸಮಾರಂಭ
  • 2006 ರ ಶೋವೆಸ್ಟ್ ಅವಾರ್ಡ್ ಫಾರ್ ಮೇಲ್ ಸ್ಟಾರ್ ಆಫ್ ದ ಇಯರ್
  • 2006 ರ ಮೊ ಅವಾರ್ಡ್ ಫಾರ್ ಆಸ್ಟ್ರೇಲಿಯನ್ ಪರ್ಫಾರ್ಮರ್ ಆಫ್ ದ ಇಯರ್
  • 2008 ರ ಅತ್ಯುತ್ತಮ ಯುಟಿಏಸ್ ಟವರಿಂಗ್ ಸಾಧನೆಗಾಗಿನ ಡಬ್ಲುಎಎಪಿಎ- ಚಾನ್ಸೆಲರ್ಸ್ ಅಲುಮ್ನಿ ಪ್ರಶಸ್ತಿ
  • 2008ರ ಸಂಗೀತ ವೇದಿಕೆಯಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ಆಸ್ಟ್ರೇಲಿಯನ್ ಡಾನ್ಸ್ ಪ್ರಶಸ್ತಿ - ದ ಬಾಯ್ ಫ್ರಾಮ್ ಆಝ್
  • 2008 ರ ಓದುಗರ ಆಯ್ಕೆಯ ಆಸ್ಟ್ರೇಲಿಯಾದ ಚಲನಚಿತ್ರ ಸಂಸ್ಥೆಯ ಪ್ರಶಸ್ತಿ
  • 2008ರ ಪೀಪಲ್ ಮ್ಯಾಗಜೇನ್ಸ್ ಸೆಕ್ಸಿಯೆಸ್ಟ್ ಮ್ಯಾನ್ ಅಲೈವ್ ಪ್ರಶಸ್ತಿ
  • 2008ರ ಜಿಕ್ಯು ಮ್ಯಾನ್ ಆಫ್ ದ ಇಯರ್
  • 2009 ರಲ್ಲಿ ಜಾಕ್‌ಮನ್ ಹಾಲಿವುಡ್ ವಾಕ್ ಆಫ್ ಫೇಮ್‌ನಲ್ಲಿ ಏಪ್ರಿಲ್ 21, 2009 ರಂದು ತನ್ನ ಹಸ್ತ ಮತ್ತು ಪಾದಮುದ್ರೆಯ ಆಚರಣೆ ನಡೆಸಿದರು.
  • 2009 ರ ಸ್ಪೈಕ್ ವೀಡಿಯೋ ಗೇಮ್ ಅವಾರ್ಡ್ಸ್‌ ನಲ್ಲಿ ಒಬ್ಬ ಗಂಡು ಮನುಷ್ಯನ ಅತ್ಯುತ್ತಮ ಪ್ರದರ್ಶನ ಎಕ್ಸ್-ಮೆನ್ ಒರಿಜಿನ್ಸ್: ವೋಲ್ವೆರಿನ್ ನಲ್ಲಿ ವೋಲ್ವೆರಿನ್ ಆಗಿ.
  • 2010ರ ಮೆಚ್ಚಿನ ಆಕ್ಷನ್ ನಟ ಎಂದು ಜನರ ಆಯ್ಕೆಯ ಪ್ರಶಸ್ತಿ -X-Men Origins: Wolverine

ನಾಮನಿರ್ದೇಶನಗಳು

  • 1997 ರ ಗೀತಿಕೆಯಲ್ಲಿನ ಉತ್ತಮ ಅಭಿನಯಕ್ಕಾಗಿನ ಮೊ ಪ್ರಶಸ್ತಿ- ಬ್ಯೂಟಿ ಆಂಡ್ ದ ಬೀಸ್ಟ್
  • 1998 ರ ಗೀತಿಕೆಯಲ್ಲಿನ ಉತ್ತಮ ನಟನೆಗಾಗಿ ಒಲಿವಿಯರ್ ಪ್ರಶಸ್ತಿ - ಓಕ್ಲಹೋಮ
  • 2001ರ ಮೋಶನ್ ಪಿಕ್ಚರ್ ನ ಹಾಸ್ಯ ಅಥವಾ ಸಂಗೀತದಲ್ಲಿ ಉತ್ತಮ ನಟನೆಗಾಗಿ ಗೋಲ್ಡನ್ ಗ್ಲೋಬ್ - ಕೇಟ್ & ಲಿಯೋಪೋಲ್ಡ್
  • 2001 ರ ಹೆಚ್ಚು ಭರವಸೆಯ ನಟನೆಗಾಗಿನ ಸಿಎಫ್ ಸಿಎ ಪ್ರಶಸ್ತಿ
  • 2006 ರ ಸಂಗೀತ ಕಾರ್ಯಕ್ರಮದಲ್ಲಿ ಅತ್ಯುತ್ತಮ ವ್ಯಕ್ತಿಗತ ಪ್ರದರ್ಶನಕ್ಕಾಗಿ ಎಮ್ಮಿ ಪ್ರಶಸ್ತಿ - 59ನೇ ಟೋನಿ ಪ್ರಶಸ್ತಿಗಳ ವಾರ್ಷಿಕ ಸಮಾರಂಭಗಳು
  • 2006ರ ಮುಖ್ಯ ಪಾತ್ರದಲ್ಲಿ ಅತ್ಯತ್ತಮ ಕಲಾವಿದನಿಗೆ ಗ್ರೀನ್ ರೂಮ್ ಪ್ರಶಸ್ತಿ - ದ ಬಾಯ್ ಫ್ರಾಮ್ ಆಝ್

ಜನಪ್ರಿಯ ಸಂಸ್ಕೃತಿಯಲ್ಲಿ ಉಲ್ಲೇಖಗಳು

  • ಜಾಕ್‌ಮನ್‌ 2008 ರ ಪೀಪಲ್ ಮ್ಯಾಗಜಿನ್‌ನ ಸೆಕ್ಸಿಯೇಸ್ಟ್ ಮ್ಯಾನ್ ಅಲೈವ್ ಗೆ ಆಯ್ಕೆಯಾಗಿದ್ದರು.
  • ಎಬಿಸಿಯ ಹಾಸ್ಯ-ನಾಟಕ ಶ್ರಬ್ಸ್‌ ನ ಇಡೀ ಸರಣಿಯಲ್ಲಿ ಡಾ.ಕೋಕ್ಸ್‌ ಪದೇ ಪದೇ ಜಾಕ್‌ಮನ್ ಕುರಿತಾದ ತನ್ನ ತರ್ಕವಿಲ್ಲದ ದ್ವೇಶವನ್ನು ವ್ಯಕ್ತಪಡಿಸುತ್ತಾನೆ, ಪ್ರತಿಯಾಗಿ J.D. ಯು ಹ್ಯೂ ಜಾಕ್‌ಮನ್‌ನ ವೋಲ್ವರಿನ್, ಅವನು ಹೊರಟ ನಂತರ ಪಿಸುನುಡಿಯುತ್ತಾನೆ

! ಎಷ್ಟು ಧೈರ್ಯ ಅವನಿಗೆ.'.

  • Punk'd - "ಫೈರ್ ಇನ್ ದ ಹೋಲ್" - Punk'd ನ ಏಳನೇ ಋತುವಿನಲ್ಲಿ ಜಾಕ್‌ಮನ್ ಅಕಾಸ್ಮಾತ್ತಾಗಿ ನಿರ್ದೆಕ ಬ್ರೆಟ್ ರಾಟ್‌ನರ್ ರ ಮನೆಯನ್ನು ಸ್ಪೋಟಿಸಿದರೆಂದು ನಂಬುವಂತೆ ಮಾಡಲಾಗಿತ್ತು.
  • ಫೆಬ್ರುವರಿ 10, 2004 ರಂದು ಪ್ರಸಾರವಾದ ವಿಲ್ & ಗ್ರೇಸ್ ನ ಋತು 6ರ, 13 ನೇ ಎಪಿಸೋಡಿನಲ್ಲಿ ಜಾಕ್ (ಶಾನ್ ಹೇಯ್ಸ್) ಪಾತ್ರವು ತನಗೆ ಹ್ಯೂ ಜಾಕ್‌ಮನ್‌ನನ್ನು ನೋಡಲು ಕಾಯಲಾಗುವುದಿಲ್ಲವಾದ್ದರಿಂದ ದ ಬಾಯ್ ಫ್ರಾಮ್ ಆಝ್ ನೋಡಲು ಹೋಗುತ್ತೇನೆಂದು ಹೇಳುತ್ತದೆ. ನಂತರದಲ್ಲಿ ಆತ ತಾನು ಹ್ಯೂ ಜಾಕ್‌ಮನ್/ದ ಬಾಯ್ ಫ್ರಾ ಆಝ್ ಮೇಲೆ ತನ್ನ ಕೆಲವು ಸಿನೆಮಾಗಳನ್ನು ಕದ್ದ ಕಾರಣ ಕೇಸು ಹಾಕಬಯಸಿದ್ದೇನೆ ಎಂದು ಚರ್ಚಿಸುತ್ತಾನೆ.

ಆಕರಗಳು

ಹೊರಗಿನ ಕೊಂಡಿಗಳು

ಹ್ಯೂ ಜ್ಯಾಕ್‌ಮನ್‌ ಎ ಸ್ಟೇಡಿ ರೇನ್ ಆನ್ ಬ್ರಾಡ್‌‍ವೇ - ಒಪನಿಂಗ್ ನೈಟ್ ಬ್ರಾಡ್‌‍ವೇ. ಟಿವಿ ಬ್ಲಾಗ್ Archived 2018-05-30 ವೇಬ್ಯಾಕ್ ಮೆಷಿನ್ ನಲ್ಲಿ.

ಹ್ಯೂ ಜ್ಯಾಕ್‌ಮನ್‌‌‍ನೊಂದಿಗೆ movies.com ನಲ್ಲಿ ವಿಡಿಯೋ ಸಂದರ್ಶನ

ಹಂಕ್ ಪಾರ್ಟ್‌‍ಯಲ್ಲಿ! ಹ್ಯೂ ಜ್ಯಾಕ್‌ಮನ್‌‌‍ ಭಾವಚಿತ್ರಗಳು

ಪೂರ್ವಾಧಿಕಾರಿ
Matt Damon
People's Sexiest Man Alive
2008
ಉತ್ತರಾಧಿಕಾರಿ
Johnny Depp

ಟೆಂಪ್ಲೇಟು:Oscars hosts 2001-2020 ಟೆಂಪ್ಲೇಟು:EmmyAward VarietyPerformance 2001-2025 ಟೆಂಪ್ಲೇಟು:TonyAward MusicalLeadActor 2001-2025

Tags:

ಹ್ಯೂ ಜ್ಯಾಕ್‌ಮನ್‌ ಆರಂಭಿಕ ಜೀವನಹ್ಯೂ ಜ್ಯಾಕ್‌ಮನ್‌ ವೃತ್ತಿ ಜೀವನಹ್ಯೂ ಜ್ಯಾಕ್‌ಮನ್‌ ಭವಿಷ್ಯದ ಯೋಜನೆಗಳುಹ್ಯೂ ಜ್ಯಾಕ್‌ಮನ್‌ ನಿರ್ಮಾಣ ಸಂಸ್ಥೆಹ್ಯೂ ಜ್ಯಾಕ್‌ಮನ್‌ ಬೇರೆ ಆಸಕ್ತಿಗಳುಹ್ಯೂ ಜ್ಯಾಕ್‌ಮನ್‌ ವೈಯಕ್ತಿಕ ಜೀವನಹ್ಯೂ ಜ್ಯಾಕ್‌ಮನ್‌ ಚಲನಚಿತ್ರಗಳ ಪಟ್ಟಿಹ್ಯೂ ಜ್ಯಾಕ್‌ಮನ್‌ ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳುಹ್ಯೂ ಜ್ಯಾಕ್‌ಮನ್‌ ಜನಪ್ರಿಯ ಸಂಸ್ಕೃತಿಯಲ್ಲಿ ಉಲ್ಲೇಖಗಳುಹ್ಯೂ ಜ್ಯಾಕ್‌ಮನ್‌ ಆಕರಗಳುಹ್ಯೂ ಜ್ಯಾಕ್‌ಮನ್‌ ಹೊರಗಿನ ಕೊಂಡಿಗಳುಹ್ಯೂ ಜ್ಯಾಕ್‌ಮನ್‌ಆಸ್ಟ್ರೇಲಿಯಾನಟಸಿನಿಮಾ

🔥 Trending searches on Wiki ಕನ್ನಡ:

ಪ್ರಬಂಧ ರಚನೆಜಾಯಿಕಾಯಿಚದುರಂಗ (ಆಟ)ರೇಡಿಯೋಹವಾಮಾನರಾಷ್ಟ್ರಕೂಟಹಣಹರಿದಾಸಬಾದಾಮಿಆದಿಪುರಾಣಐಹೊಳೆಪ್ರಜಾಪ್ರಭುತ್ವಕೋಲಾರ ಚಿನ್ನದ ಗಣಿ (ಪ್ರದೇಶ)ಬೆಂಗಳೂರುಅಕ್ಟೋಬರ್ಆಯ್ದಕ್ಕಿ ಲಕ್ಕಮ್ಮಕೊಡವರುಕ್ರೈಸ್ತ ಧರ್ಮವಿನಾಯಕ ಕೃಷ್ಣ ಗೋಕಾಕಪ್ರಜಾಪ್ರಭುತ್ವದ ಲಕ್ಷಣಗಳುಜಾರಿ ನಿರ್ದೇಶನಾಲಯತುಮಕೂರುಪುನೀತ್ ರಾಜ್‍ಕುಮಾರ್ಹಗ್ಗಕರ್ಬೂಜಗುರುರಾಜ ಕರಜಗಿಫ್ರೆಂಚ್ ಕ್ರಾಂತಿಪ್ರೇಮಾಕೊಡಗುವಿಜಯನಗರ ಸಾಮ್ರಾಜ್ಯಹಲ್ಮಿಡಿ ಶಾಸನಆನಂದಕಂದ (ಬೆಟಗೇರಿ ಕೃಷ್ಣಶರ್ಮ)ನೈಸರ್ಗಿಕ ವಿಕೋಪರಾಘವಾಂಕಬಾಬು ಜಗಜೀವನ ರಾಮ್ಮೂಲಧಾತುಗಳ ಪಟ್ಟಿಆರೋಗ್ಯಬಾಸ್ಟನ್ಕರ್ನಾಟಕದ ವಾಸ್ತುಶಿಲ್ಪಫ್ರಾನ್ಸ್ಕನ್ನಡ ಸಂಧಿಕನ್ನಡದಲ್ಲಿ ವಚನ ಸಾಹಿತ್ಯಸಜ್ಜೆಕೃಷ್ಣಕಲ್ಹಣರತನ್ ನಾವಲ್ ಟಾಟಾಪ್ಲ್ಯಾಸ್ಟಿಕ್ ಸರ್ಜರಿಧೂಮಕೇತುಹಿಮನದಿಗಿಡಮೂಲಿಕೆಗಳ ಔಷಧಿರಾಜ್ಯರಾಮಜಾತ್ಯತೀತತೆರಂಗಭೂಮಿಸಿಂಗಾಪುರಶಂಕರ್ ನಾಗ್ಬೃಂದಾವನ (ಕನ್ನಡ ಧಾರಾವಾಹಿ)ಮಲೇರಿಯಾಶಿವರಚಿತಾ ರಾಮ್ಮೆಕ್ಕೆ ಜೋಳಉಪ್ಪಿನ ಸತ್ಯಾಗ್ರಹಅರ್ಥಶಾಸ್ತ್ರಹೆಚ್.ಡಿ.ಕುಮಾರಸ್ವಾಮಿಅಮೇರಿಕ ಸಂಯುಕ್ತ ಸಂಸ್ಥಾನಕಿರುಧಾನ್ಯಗಳುಅವರ್ಗೀಯ ವ್ಯಂಜನಸಂತಾನೋತ್ಪತ್ತಿಯ ವ್ಯವಸ್ಥೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಚದುರಂಗದ ನಿಯಮಗಳುಕಾರ್ಯಾಂಗಭಾರತದಲ್ಲಿ ಕೃಷಿಪ್ರಜಾಪ್ರಭುತ್ವದ ವಿಧಗಳುಷಟ್ಪದಿಕರ್ನಾಟಕ ಪೊಲೀಸ್🡆 More