ಶಿವ ಸೇನಾ

ಟೆಂಪ್ಲೇಟು:Infobox ಭಾರತೀಯ ರಾಜಕೀಯ ಪಕ್ಷ

ಶಿವ ಸೇನೆ (ಮರಾಠೀ: शिव सेना Śiv Senā, ಅರ್ಥ ಶಿವನ ಸೇನೆ, ಶಿವಾಜಿ)ಗೆ ಸಂಬಂಧಿಸಿದಂತೆ, ಭಾರತದ ಒಂದು ತೀವ್ರಗಾಮಿ ಬಲಪಂಥೀಯ ರಾಜಕೀಯ ಪಕ್ಷವಾಗಿದ್ದು ೧೯ ಜೂನ್ ೧೯೬೬ರಂದು ಬಾಳಾಸಾಹೇಬ್ ಠಾಕ್ರೆಯಿಂದ ಸ್ಥಾಪಿಸಲ್ಪಟ್ಟಿತು. ಈಗ ಇದರ ನಾಯಕತ್ವವನ್ನು ಠಾಕ್ರೆಯವರ ಪುತ್ರ,ಉದ್ಧವ್ ಠಾಕ್ರೆ ವಹಿಸಿಕೊಂಡಿದ್ದಾರೆ. ಈ ಪಕ್ಷವು ಮೂಲವಾಗಿ ಮುಂಬಯಿ - ಆಗಿನ ಬಾಂಬೆಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಪ್ರಾಶಸ್ತ್ಯ ನೀಡಬೇಕೆಂಬ ಆಂದೋಲನವೊಂದರಿಂದ ಹುಟ್ಟಿತು. ಇದು ಮಹಾರಾಷ್ಟ್ರವು ಮರಾಠೀ ಸಮುದಾಯಕ್ಕೆ ಸೇರಿದೆ ಮತ್ತು ಇತರ ಭಾರತೀಯ ರಾಜ್ಯಗಳಿಂದ ಬಂದಿರುವ ವಲಸಿಗರಿಗೆ ಮುನ್ನ ಮರಾಠಿಗರಿಗೆ ಪ್ರಾಶಸ್ತ್ಯ ದೊರಕಬೇಕೆಂಬ ತನ್ನ ಸಿದ್ಧಾಂತದ ಮೂಲಕವಾಗಿ ಅರವತ್ತರ ದಶಕದಲ್ಲಿ ಮರಾಠೀ ಸಮುದಾಯದಲ್ಲಿ ಗಟ್ಟಿಯಾದ ತಳಹದಿಯನ್ನು ಸ್ಥಾಪಿಸಿಕೊಂಡಿತು. ಪಕ್ಷದ ಮೂಲ ಕಾರ್ಯಸ್ಥಾನವು ಇನ್ನೂ ಮಹಾರಾಷ್ಟ್ರದಲ್ಲಿಯೇ ಇದ್ದರೂ ಕೂಡ, ಅದು ಭಾರತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹರಡಲು ಪ್ರಯತ್ನಿಸುತ್ತಿದೆ. ಕ್ರಮೇಣವಾಗಿ, ಪಕ್ಷವು ಮರೆ ಮರಾಠೀ-ಪರ ಸಿದ್ಧಾಂತವನ್ನು ಪ್ರತಿಪಾದಿಸುವುದನ್ನು ಬಿಟ್ಟು, ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದರ ಮೂಲಕ ಹೆಚ್ಚು ವಿಶಾಲವಾದ ಹಿಂದೂ ರಾಷ್ಟ್ರೀಯತಾವಾದಿ ಕಾರ್ಯಸೂಚಿಗೆ [ಸೂಕ್ತ ಉಲ್ಲೇಖನ ಬೇಕು] ಬೆಂಬಲ ಸೂಚಿಸುವುದರೆಡೆ ವಾಲಿದೆ. ಈ ಪಕ್ಷವು ಹಲವಾರು ಮಹಾರಾಷ್ಟ್ರ ಸರ್ಕಾರಗಳ ಭಾಗವಾಗಿ ಕೆಲವು ಬಾರಿ ಕಾರ್ಯ ನಿರ್ವಹಣೆ ಮಾಡಿದೆ ಮತ್ತು ಭಾರತದಲ್ಲಿ ೧೯೯೮-೨೦೦೪ರ ನಡುವೆ ಅಧಿಕಾರದಲ್ಲಿದ್ದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ನ ಮೈತ್ರಿಕೂಟದ ಭಾಗೀದಾರನೂ ಆಗಿ ಕೆಲಸ ಮಾಡಿದೆ. ಶಿವಸೇನೆಯ ಸದಸ್ಯರನ್ನು ಶಿವಸೈನಿಕರು ಎಂದು ಕರೆಯಲಾಗುತ್ತದೆ.

ಇತಿಹಾಸ

ಮೂಲಗಳು

ಚಿತ್ರ:Shivsenakolkata.jpg
ವ್ಯಾಲೆಂಟೈನ್ಸ್ ಡೇ ವಿರುದ್ಧ ಶಿವಸೇನೆಯ ಪ್ರಚಾರಕಾರ್ಯದ ಒಂದು ಪೋಸ್ಟರ್- ಕೊಲ್ಕತಾ

೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ, ವಸಾಹತುಶಾಹೀ ಯುಗದ ಪ್ರಾಂತೀಯ ಆಡಳಿತ ವಿಭಾಗಗಳಾನ್ನು ಕ್ರಮೇಣ ಬದಲಾಯಿಸಿ ಭಾಷಾವಾರು ಗಡಿಗಳಿಗೆ ತಕ್ಕನಾಗಿ ರಾಜ್ಯಗಳನ್ನು ರೂಪಿಸಲಾಯಿತು. ಬಾಂಬೆ ಪ್ರೆಸಿಡೆನ್ಸಿಯ ಒಳಗೇ ಮರಾಠೀ-ಮಾತನಾಡುವ ಜನರಿಗೆ ಒಂದು ಪ್ರತ್ಯೆಕವಾದ ರಾಜ್ಯ ಬೇಕೆನ್ನುವುದಕ್ಕಾಗಿ ಒಂದು ಬೃಹತ್ತಾದ ಜನಪ್ರಿಯ ಆಂದೋಲನವು ಆರಂಭವಾಯಿತು. ೧೯೬೦ರಲ್ಲಿ ಪ್ರೆಸಿಡೆನ್ಸಿಯನ್ನು ಗುಜರಾತ್ ಮತ್ತು ಮಹಾರಾಷ್ಟ್ರಗಳೆಂಬ ಎರಡು ಪ್ರತ್ಯೇಕ ಭಾಷಾವಾರು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು. ಇದಲ್ಲದೆ, ಹಿಂದಿನ ಹೈದರಾಬಾದ್ ರಾಜ್ಯದ ಮರಾಠೀ ಮಾತನಾಡುವ ಪ್ರಾಂತ್ಯಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಲಾಯಿತು. ಹಲವಾರು ರೀತಿಗಳಲ್ಲಿ ಭಾರತದ ಆರ್ಥಿಕ ರಾಜಧಾನಿಯೆನಿಸಿಕೊಂಡಿದ್ದ ಮುಂಬಯಿ ಮಹಾರಾಷ್ಟ್ರ ರಾಜ್ಯದ ರಾಜಧಾನಿಯಾಯಿತು. ಒಂದೆಡೆಗೆ, ಮುಂಬಯಿಯಲ್ಲಿ ಗುಜರಾತೀ ಮತ್ತು ಮಾರವಾಡೀ ಸಮುದಾಯಗಳ ಜನರು ಹೆಚ್ಚಿನ ಉದ್ಯಮಗಳು ಮತ್ತು ವ್ಯಾಪಾರ ವಹಿವಾಟು ಸಂಸ್ಥೆಗಳ ಒಡೆಯರಾಗಿದ್ದರು. ಇನ್ನೊಂದೆಡೆಗೆ, ದಕ್ಷಿಣ ಭಾರತದಿಂದ ವಲಸಿಗರು ನಿರಂತರವಾಗಿ ಹರಿದುಬರುತ್ತಲೇ ಇದ್ದರು, ಮತ್ತು ವ್ಹೈಟ್ ಕಾಲರ್ ಉದ್ಯೋಗಗಳನ್ನು ಪಡೆದುಕೊಳ್ಳಲು ಬರುವವರೂ ಇದ್ದರು.

೧೯೬೦ರಲ್ಲಿ ಬಾಳಾಸಾಹೇಬ್ ಠಾಕ್ರೆ ಎಂಬ್ವ ಒಬ್ಬ ಮುಂಬಯಿನ ಕಾರ್ಟೂನ್ ಕಲಾವಿದ ಮಾರ್ಮಿಕ್ ಎಂಬ ವಿಡಂಬನಾತ್ಮಕ ಕಾರ್ಟೂನ್ ವಾರಪತ್ರಿಕೆಯನ್ನು ಆರಂಭಿಸಿದರು. ಈ ಪ್ರಕಟಣೆಯ ಮೂಲಕ ಅವರು ವಲಸಿಗ-ವಿರೋಧಿ ಭಾವನೆಗಳಿಗೆ ಪ್ರಚಾರ ನೀಡಲು ಆರಂಭಿಸಿದರು. ೧೯ ಜೂನ್ ೧೯೬೬ರಂದು ಠಾಕ್ರೆ ಶಿವಸೇನೆಯನ್ನು ಒಂದು ರಾಜಕೀಯ ಸಂಸ್ಥೆಯ ರೂಪದಲ್ಲಿ ಆರಂಭಿಸಿದರು. ಗಮನಿಸತಕ್ಕ ವಿಷಯವೆಂದರೆ, ತನ್ನ ಸ್ಥಾಪನೆಯ ಸಮಯದಲ್ಲಿ ಶಿವಸೇನೆಯು ಒಂದು ರಾಜಕೀಯ ಪಕ್ಷವಾಗಿರಲಿಲ್ಲ.

ಆರಂಭದ ವರ್ಷಗಳು

ಶಿವಸೇನೆಯ ರಾಜಕೀಯ ದೃಷ್ಟಿಯು ಭೂಮಿಪುತ್ರ (ಮಣ್ಣಿನ ಮಗ)ನ ಪರಿಕಲ್ಪನೆಯನ್ನು, ಎಂದರೆ ಮಹಾರಾಷ್ತ್ರವು ಸ್ವಯಂಸಿದ್ಧವಾಗಿ ಕೇವಲ ಮರಾಠಿಗರಿಗೆ ಮಾತ್ರ ಸೇರಿದ್ದು ಎಂಬ ಗ್ರಹಿಕೆಯನ್ನು ಆಧರಿಸಿದ್ದಾಗಿತ್ತು. ಹೀಗೆ ಸ್ಥಳೀಯ ಮರಾಠೀ ಜನರು ತಾವು ಹೊರಗಿನವರೆಂದು ಪರಿಗಣಿಸಿದವರಿಂದಲೇ ತುಲನಾತ್ಮಕ ಉಪೇಕ್ಷೆಗೊಳಗಾಗಿರುವರೆಂಬ ಅಸಮಾಧಾನದ ಭಾವನೆಯು ಶಿವಸೇನೆಯ ಹುಟ್ಟಿಗೆ ಕಾರಣವಾಯಿತು.

ಶಿವಸೇನೆಯು ವಿಶೇಷವಾಗಿ ದೊಡ್ಡ ಸಂಖ್ಯೆಯಲ್ಲಿ ಠಾಕ್ರೆಯವರ ವಲಸಿಗ-ವಿರೋಧೀ ವಾಕ್‌ಝರಿಯಿಂದ ಪ್ರಭಾವಿತರಾದ, ನಿರಾಶರಾಗಿದ್ದ ಮತ್ತು ಹೆಚ್ಚಾಗಿ ನಿರುದ್ಯೋಗಿಗಳಾಗಿದ್ದ ಮರಾಠೀ ಯುವಸಮುದಾಯವನ್ನು ಆಕರ್ಷಿಸಿತು. ಶಿವಸೇನೆಯ ಪಡೆಗಳು ದಕ್ಷಿಣ ಭಾರತೀಯ ಸಮುದಾಯದ ಮೇಲೆ ದಾಳಿ ನಡೆಸುವುದು, ದಕ್ಷಿಣ ಭಾರತೀಯ ರೆಸ್ಟುರಾಂಟ್‌ಗಳ ಮೇಲೆ ವಿಧ್ವಂಸಕ ಕೃತ್ಯಗಳನ್ನು ನಡೆಸುವುದು ಮತ್ತು ಮರಾಠಿಗರನ್ನೆ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಸಂಸ್ಥೆಗಳ ಒಡೆಯರನ್ನು ಒತ್ತಾಯಿಸುವುದೇ ಮೊದಲಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಾರಂಭಿಸಿದರು.

ಶಿವಸೇನೆಯ ಇನ್ನೊಂದು ಪ್ರಮುಖ ಲಕ್ಷಣವೆಂದರೆ ಕಮ್ಯುನಿಸ್ಟ್ ಕಾರ್ಮಿಕರ ಸಂಘಗಳ ವಿರುದ್ಧ ಆಗಾಗ ಹೋರಾಟಗಳನ್ನು ನಡೆಸುತ್ತಿದ್ದುದು. ಶಿವಸೇನೆಯ ಅಸ್ತಿತ್ವಕ್ಕೆ ಮುನ್ನ ಮುಂಬಯಿಯ ಕಾರ್ಮಿಕ ರಾಜಕೀಯದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪ್ರಮುಖ ಪಾತ್ರವನ್ನು ವಹಿಸಿದ್ದಿತು. ಈ ಹೊಸ ಸಂಸ್ಥ್ರೆಯ ಮೂಲಕವಾಗಿ ಕಾರ್ಮಿಕ ಸಂಘಗಳ ಮೇಲೆ ಕಮ್ಯುನಿಸ್ಟ್ ಪ್ರಭಾವವನ್ನು ದುರ್ಬಲಗೊಳಿಸಬಹುದು ಎಂದು ಭಾವಿಸಿದ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್‌ನ ಶಕ್ತಿಗಳು ಶಿವಸೇನೆಯನ್ನು ಬೆಂಬಲಿಸಿದವು. ಕೆಲವೆ ಸಮಯದಲ್ಲಿ ಶಿವಸೆನೆಯ ಪಡೆಗಳು ಕಮ್ಯುನಿಸ್ಟ್ ಕಾರ್ಮಿಕ ಸಂಘಗಳ ಕಾರ್ಯಕರ್ತರುಗಳ ಜತೆಗೆ ಹಿಂಸಾಪೂರ್ಣ ಘರ್ಷಣೆಗಳನ್ನು ನಡೆಸಲು ಆರಂಭಿಸಿದರು. ೧೯೭೦ರಲ್ಲಿ ಸಿಪಿಐನ ದಾದರ್ ಕ್ಷೇತ್ರದ ಎಮ್‌ಎಲ್‌ಎ ಆಗಿದ್ದ ಕೃಷ್ಣ ದೇಸಾಯಿಯವರ ಹತ್ಯೆ ಮಾಡಲಾಯಿತು. ಸಿಪಿಐ ಶಿವಸೇನೆಯ ಮೇಲೆ ಹತ್ಯೆಯ ಆರೋಪ ಹೊರಿಸಿತು ಮತ್ತು ಠಾಕ್ರೆಯೇ ಈ ಹತ್ಯೆಗೆ ಜವಾಬ್ದಾರರೆಂದು ಹೆಸರಿಸಿತು.

೧೯೯೫ ಚುನಾವಣೆ

ಶಿವಸೇನಾ-ಬಿಜೆಪಿ ಮೈತ್ರಿಯು ೧೯೯೫ರ ಮಹಾರಾಷ್ಟ್ರ ರಾಜ್ಯ ಚುನಾವಣೆಗಳಲ್ಲಿ ವಿಜಯ ಸಾಧಿಸಿತು. ಸರ್ಕಾರದ ಅಧಿಕಾರವನ್ನು ಗಳಿಸಿದ ನಂತರ, ಶಿವಸೇನೆಯು ತನ್ನ ವ್ಯವಸ್ಥೆಯನ್ನು ಉತ್ತಮಪಡಿಸತೊಡಗಿತು. ಚುನಾವಣೆಯ ಆರು ತಿಂಗಳುಗಳ ನಂತರ ಮುಂಬಯಿನಲ್ಲಿ ಒಂದು 'ಶಿವಸೇನಾ ರಾಜ್ಯಪ್ರಮುಖ್ ಪರಿಷದ್' ಸಮ್ಮೇಳನವನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಸ್ಥಳೀಯ ಪಕ್ಷದ ನಾಯಕರು ಮತ್ತು ಪಕ್ಷದ ಹಲವಾರು ವಿಭಾಗಗಳ ಸದಸ್ಯರು ಭಾಗವಹಿಸಿದರು. ಈ ಸಭೆಯು ಸರ್ಕಾರದಲ್ಲಿರುವ ಪಕ್ಷವಾಗಿ ಹೊಸ ಕಾರ್ಯನಿರ್ವಹಣೆಗಳಿಗೆ ಹೊಂದಿಸಲು ಪಕ್ಷವ್ಯವಸ್ಠೆಗೆ ಹೊಸ ರೂಪ ನೀಡುವುದಕ್ಕೆ ಅವಶ್ಯಕವಾದ ಕೆಲಸವನ್ನು ಮಾಡಿತು. ಇಲ್ಲಿ ಬಾಂಬೆಗೆ ಮುಂಬಯಿ ಎಂಬುದಾಗಿ ಮರುನಾಮಕರಣ ಮಾಡಲಾಯಿತು.

ಹಿಂದುತ್ವಕ್ಕೆ ಸ್ಥಳಾಂತರ ಮತ್ತು ಭಾರತೀಯ ಜನತಾ ಪಾರ್ಟಿಯ ಜತೆಗೆ ಮೈತ್ರಿ

ಸೇನೆಯು ೧೯೭೦ರ ದಶಕದಲ್ಲಿ ತನ್ನ ವೈಶಿಷ್ಟ್ಯವಾದ "ಮಣ್ಣಿನ ಮಕ್ಕಳು" ಸಿದ್ಧಾಂತವು ದುರ್ಬಲಗೊಳ್ಳುತ್ತಿರುವುದನ್ನು ಕಂಡು ಹಿಂದುತ್ವದ ಸಿದ್ಧಾಂತದ ಮೇಲೆ ಹೆಚ್ಚು ಒತ್ತು ಕೊಡಲು ತೊಡಗಿತು. ಹಿಂದುತ್ವದೆಡೆಗೆ ಬದಲಾಗುತ್ತಿದ್ದಂತೆ,ಠಾಕ್ರೆ ಮುಸ್ಲಿಮರು ಮತ್ತು ನೆರೆಯ ದೇಶವಾದ ಪಾಕಿಸ್ತಾನದ ಮೇಲೆ ಕೆಲವು ವಿವಾದಾಸ್ಪದ ಆರೋಪಗಳನ್ನು ಮಾಡಿದರು.

೧೯೯೫-೯೯ರಿಂದ ಈ ಪಕ್ಷವು ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಜತೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಿ ಅಧಿಕಾರಕ್ಕೆ ಬರುತ್ತಲೇ ಇದೆ. ೧೯೯೯ರಿಂದ ಸೇನೆಯು ಬಿಜೆಪಿಯ ಜತೆಗೆ ಸೇರಿಕೊಂಡು ವಿರೋಧಪಕ್ಷದಲ್ಲಿದೆ. ಶಿವಸೇನಾ-ಬಿಜೆಪಿ ಮೈತ್ರಿಯು ಬೃಹನ್ಮುಂಬಯಿ ಮಿನಿಸಿಪಲ್ ಕಾರ್ಪೊರೇಶನ್‌ನಲ್ಲಿ ಅಧಿಕಾರದಲ್ಲಿದೆ. ಸಾಂಪ್ರದಾಯಿಕವಾಗಿ ಮುಂಬಯಿ ಮತ್ತು ಕೊಂಕಣದ ತೀರಪ್ರದೇಶಗಳು ಶಿವಸೇನೆಯ ಭದ್ರಕೋಟೆಗಳಾಗಿವೆ. ಆದರೆ, 2004ರ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶವು ತಲೆಕೆಳಗಾಯಿತು. ಶಿವಸೇನೆಯು ರಾಜ್ಯದ ಒಳಪ್ರದೇಶಗಳಲ್ಲಿ ಗೆಲುವು ಸಾಧಿಸಿತದರೂ ಮುಂಬಯಿಯಲ್ಲಿ ಹೆಚ್ಚಿನ ಸೋಲನ್ನು ಅನುಭವಿಸಬೇಕಾಯಿತು.

ರಾಜ್ ಠಾಕ್ರೆ ವಿಭಜನೆ

ಜುಲೈ ೨೦೦೫ರಲ್ಲಿ ಪಕ್ಷದಿಂದ ನಾರಾಯಣ್ ರಾಣೆಯವರನ್ನು ಹೊರಹಾಕಿದ್ದು ಪಕ್ಷದೊಳಗಿನ ಅಂತಃಕಲಹದ ಆರಂಭಕ್ಕೆ ಕಾರಣವಾಯಿತು. ಅದೇ ವರ್ಷ ಡಿಸೆಂಬರ್‌ನಲ್ಲಿ ಬಾಳಾ ಠಾಕ್ರೆಯವರ ಸೋದರಳಿಯ ರಾಜ್ ಠಾಕ್ರೆ ಪಕ್ಷವನ್ನು ತ್ಯಜಿಸಿದರು. ಇದಾದ ನಂತರ ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಮ್‌ಎನ್‌ಎಸ್) ಎಂಬ ನೂತನ ಪಕ್ಷವೊಂದನ್ನು ಸ್ಥಾಪಿಸಿದರು. ಈ ಒಡಕಿನ ನಂತರ ಎರಡೂ ಸೇನೆಗಳ ಬೆಂಬಲಿಗರ ನಡುವೆ ಹಲವಾರು ಘರ್ಷಣೆಗಳು ನಡೆದಿವೆ.

ಎಮ್‌ಎನ್‌ಎಸ್ ಶಿವಸೇನೆಯಿಂದ ದೂರವಾದ ಬಣವಾಗಿದ್ದರೂ ಕೂಡ ಅದರ ಮೂಲಸಿದ್ಧಾಂತಗಳು ಇನ್ನೂ ಹಿಂದುತ್ವ ಮತ್ತು ಭೂಮಿಪುತ್ರ ಸಿದ್ಧಾಂತಗಳನ್ನೇ ಆಧರಿಸಿವೆ. ಶಿವಾಜಿ ಪಾರ್ಕ್‌ನ ಸಭೆಯೊಂದರಲ್ಲಿ ಪಕ್ಷವನ್ನು ಉದ್ಘಾಟಿಸುತ್ತ ಅವರು ಎಲ್ಲರೂ ಹಿಂದುತ್ವಕ್ಕೆ ಏನಾಗುವುದೆಂದು ತಿಳಿಯಲು ಕಾತುರರಾಗಿದ್ದಾರೆಂದು ಹೇಳಿದರು. ಜತೆಗೇ ಉದ್ಘಾಟನೆಯ ಸಮಯದಲ್ಲಿ ಮಾತನಾಡುತ್ತ ಅವರು ಈ ಮಾತುಗಳನ್ನೂ ಹೇಳಿದರು, "ನಾನು ೧೯ ಮಾರ್ಚ್‌ನ ಸಾರ್ವಜನಿಕ ಸಭೆಯಲ್ಲಿ ಹಿಂದುತ್ವದ ಬಗ್ಗೆ ಪಕ್ಷದ ನಿಲುವು, ಮಹಾರಾಷ್ಟ್ರದ ಅಭಿವೃದ್ಧಿಯ ಬಗ್ಗೆ ಪಕ್ಷದ ಕಾರ್ಯಸೂಚಿ ಮತ್ತು ಪಕ್ಷದ ಧ್ವಜದ ಬಣ್ಣಗಳ ಮಹತ್ವದ ಬಗ್ಗೆ ಕೂಲಂಕಷವಾಗಿ ಮಾತನಾಡುವೆನು."

ರಾಜ್ ಠಾಕ್ರೆ ತನ್ನನ್ನು ಒಬ್ಬ ಭಾರತೀಯ ರಾಷ್ಟ್ರೀಯತಾವಾದಿ ಎಂದು ಪರಿಗಣಿಸುತ್ತಾರೆ (ಬರೆ ಒಬ್ಬ ಪ್ರಾಂತೀಯತಾವಾದಿಯಲ್ಲ) ಮತ್ತು ಕಾಂಗ್ರೆಸ್ ಎರಡು ಮುಖಗಳನ್ನು ಹೊಂದಿರುವುದೆಂದು ಸಾಧಿಸುತ್ತಾರೆ.

ಪಕ್ಷ ವ್ಯವಸ್ಥೆ

ಪಕ್ಷದ ಪ್ರಮುಖ್ (ಮುಖ್ಯಸ್ಥ) ಆಗಿ ಬಾಳಾಸಾಹೇಬ್ ಠಾಕ್ರೆ ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು, ಮತ್ತು ಸೇನಾ-ಭಾರತೀಯ ಜನತಾ ಪಾರ್ಟಿಯ ಮೈತ್ರಿ ಸರ್ಕಾರವನ್ನು ೧೯೯೫ರಿಂದ ೧೯೯೯ರವರೆಗೆ ತಾನು ಒಂದು ’ರಿಮೋಟ್ ಕಂಟ್ರೋಲ್’ನಿಂದ ನಿಯಂತ್ರಿಸುತ್ತಿದ್ದುದಾಗಿ ಹೇಳಿಕೊಂಡಿದ್ದರು.

ಶಿವಸೇನೆಯ ಕಾರ್ಯಕರ್ತರು ಮತ್ತು ಸದಸ್ಯರು ತಮ್ಮನ್ನು ಶಿವಸೈನಿಕರು ಎಂದು ಕರೆದುಕೊಳ್ಳುತ್ತಾರೆ ಮತ್ತು ಪಕ್ಷದ ಹೆಚ್ಚಿನ ಕಾರ್ಯಕಲಾಪಗಳನ್ನು ನಿರ್ವಹಿಸುತ್ತಾರೆ. ನಂತರದ ದಿನಗಳಲ್ಲಿ, ಠಾಕ್ರೆಯವರು ಪಕ್ಷದ ದೈನಂದಿನ ಚಟುವಟಿಕೆಗಳಿಂದ ದೂರವಿದ್ದರು, ಮತ್ತು ಇವುಗಳನ್ನು ಅವರ ಕಿರಿಯ ಮಗ ಉದ್ಧವ್ ಠಾಕ್ರೆ ನಿಭಾಯಿಸುತ್ತಿದ್ದರು.

ಇತ್ತೀಚೆಗೆ ಹೊಸದಾಗಿ ಮೆರುಗು ನೀಡಲಾದ ಮುಂಬಯಿನ ದಾದರ್‌ನಲ್ಲಿರುವ ಸೇನಾ ಭವನ್ ೧೯೭೬ರಿಂದ ಸೇನೆಯ ಪ್ರಧಾನ ಕಚೇರಿಯಾಗಿ ಉಳಿದುಕೊಂಡು ಬಂದಿದೆ. ಸೇನೆಯ ಶಾಖಾಗಳು (ಶಾಖೆಗಳು) ಮಹಾರಾಷ್ಟ್ರದ ಉದ್ದಗಲಕ್ಕೂ ಮಾತ್ರವಲ್ಲದೆ ಕೆಲವಾರು ರಾಜ್ಯಗಳ ಆಯ್ದ ಭಾಗಗಳಲ್ಲಿ ಹರಡಿದ್ದು, ತಮ್ಮ ತಮ್ಮ ನಗರಗಳು ಮತ್ತು ಊರುಗಳ ಹೆಚ್ಚಿನ ಸ್ಥಳೀಯ ವಿಷಯಗಳ ಬಗ್ಗೆ ತಾವೇ ನಿರ್ಧಾರ ತೆಗೆದುಕೊಳ್ಳುತ್ತವೆ.

ಚುನಾವಣಾ ಪ್ರದರ್ಶನ

ಟೆಂಪ್ಲೇಟು:Electiontable

ಚುನಾವಣೆ ಸ್ಪರ್ಧಿಗಳು ಚುನಾಯಿತರು ಮತಗಳು ಮೂಲ
೧೯೭೧ ಪಾರ್ಲಿಮೆಂಟ್ ೨೨೭೪೬೮
೧೯೮೦ ಪಾರ್ಲಿಮೆಂಟ್ ೧೨೯೩೫೧
೧೯೮೯ ಪಾರ್ಲಿಮೆಂಟ್ ೩೩೯೪೨೬
೧೯೮೯ ಗೋವಾ ಅಸೆಂಬ್ಲಿ   ೪೯೬೦
೧೯೯೧ ಪಾರ್ಲಿಮೆಂಟ್ ೨೨ ೨೨೦೮೭೧೨
೧೯೯೩ ಮಧ್ಯ ಪ್ರದೇಶ್ ಅಸೆಂಬ್ಲಿ ೮೮ ೭೫೭೮೩
೧೯೯೬ ಪಾರ್ಲಿಮೆಂಟ್ ೧೩೨ ೧೫ ೪೯೮೯೯೯೪
೧೯೯೬ ಹರಿಯಾಣ ಅಸೆಂಬ್ಲಿ ೧೭ ೬೭೦೦
೧೯೯೭ ಪಂಜಾಬ್ ಅಸೆಂಬ್ಲಿ ೭೧೯
೧೯೯೮ ಪಾರ್ಲಿಮೆಂಟ್ ೭೯ ೬೫೨೮೫೬೬
೧೯೯೮ ದೆಹಲಿ ಅಸೆಂಬ್ಲಿ ೩೨ ೯೩೯೫
೧೯೯೮ ಹಿಮಾಚಲ ಪ್ರದೇಶ ಅಸೆಂಬ್ಲಿ ೨೮೨೭
೧೯೯೯ ಪಾರ್ಲಿಮೆಂಟ್ ೬೩ ೧೫ ೫೬೭೨೪೧೨
೧೯೯೯ ಗೋವಾ ಅಸೆಂಬ್ಲಿ ೧೪   ೫೯೮೭
೨೦೦೦ ಒಡಿಶಾ ಅಸೆಂಬ್ಲಿ ೧೬   ೧೮೭೯೪
೨೦೦೧ ಕೇರಳ ಅಸೆಂಬ್ಲಿ   ೨೭೯
೨೦೦೨ ಗೋವಾ ಅಸೆಂಬ್ಲಿ ೧೫  
೨೦೦೪ ಪಾರ್ಲಿಮೆಂಟ್ ೫೬ ೧೨ ೭೦೫೬೨೫೫
೨೦೦೯ ಪಾರ್ಲಿಮೆಂಟ್ ೨೨ ೧೧ ೬೮೨೮೩೮೨

ಇತ್ತೀಚೆಗಿನ ಚುನಾವಣಾ ವಿಜಯಗಳು

ಶಿವಸೇನೆಯು ಫೆಬ್ರುವರಿ ೨೦೦೭ರ ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್‌ನ ಸ್ಥಳೀಯ ಮಹಾರಾಷ್ಟ್ರದ ಚುನಾವಣೆಗಳಲ್ಲಿ ತಮ್ಮ ಜತೆಗಾರರಾದ ಭಾರತೀಯ ಜನತಾ ಪಾರ್ಟಿಯ ಜತೆಯಲ್ಲಿ ವಿಜಯ ಸಾಧಿಸಿತು. ಅವರು ಇದನ್ನು ತಮ್ಮ ವೋಟ್ ಬಣಕ್ಕೆ ಸಲ್ಲುತ್ತಿದ್ದ ವಿಷಯವಾದ ಮಹಾರಾಷ್ಟ್ರೀಯರಿಗೆ ಪ್ರಾಶಸ್ತ್ಯ ನೀಡಬೆಕೆನ್ನುವುದರ ವೇದಿಕೆಯ ಮೇಲೆ ಸಾಧಿಸಿದರು. ಈ ಗೆಲುವು ಹಲವಾರು ಕಾರಣಗಳಿಂದಾಗಿ ಗಮನಾರ್ಹವಾಗಿದೆ. ಇದರರ್ಥವೆನೆಂದರೆ, ೨೦೧೨ರ ಮುಂದಿನ ಬಿಎಮ್‌ಸಿ ಚುನಾವಣೆಗಳ ಹೊತ್ತಿಗೆ, ಶಿವಸೇನೆಯು ಮುಂಬಯಿಯಲ್ಲಿ ೨೦ ವರ್ಷಗಳ ಕಾಲ ಸತತವಾಗಿ ತಡೆಯಿಲ್ಲದೆ ಆಡಳಿತ ನಡೆಸಿದಂತಾಗುತ್ತದೆ. ಈ ಚುನಾವಣೆಯ ಪ್ರಚಾರಕಾರ್ಯತಂತ್ರದ ಮೇಲ್ವಿಚಾರಣೆಯನ್ನು ವ್ಯಕ್ತಿಗತವಾಗಿ ಮಾಡಿದ ಕಿರಿಯ ಠಾಕ್ರೆಯೂ ಇದರಿಂದ ನಿರಾಳವಾಗುವಂತಾಯಿತು.

ಕಳೆದ ಎರಡು ವರ್ಷಗಳ ಎಲ್ಲ ಅಸೆಂಬ್ಲಿ ಉಪಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದ ಸೇನೆಯ ಮುಖಂಡತ್ವದ ಮೈತ್ರಿಯು ೨೨೭ ಸ್ಥಾನಗಳ ಪೈಕಿ ೧೧೧ನ್ನು ಗೆದ್ದುಕೊಂಡಿತು. ಘೋಷಿಸಲಾದ ೨೨೬ ಸ್ಥಾನಗಳಲ್ಲಿ ಶಿವಸೇನೆಯು ೮೩ ಸ್ಥಾನಗಳು, ಬಿಜೆಪಿ ೨೮ ಸ್ಥಾನಗಳನ್ನು, ಎಡಪಂಥೀಯ ವಿರೋಧಪಕ್ಷ, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ೭೧ ಸ್ಥಾನಗಳನ್ನು ಗೆದ್ದಿತು, ಮತ್ತು ಇತರ ವಿರೋಧೀ ಗುಂಪುಗಳಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ೧೪ ಸ್ಥಾನಗಳನ್ನು ಮತ್ತು ಎಮ್‌ಎನ್‍ಎಸ್ ೭ ಸ್ಥಾನಗಳನ್ನು ಗೆದ್ದುಕೊಂಡವು.

ಕಾರ್ಯ

ಮಹಾರಾಷ್ಟ್ರೀಯರಿಗೆ ಸೌಲಭ್ಯಗಳನ್ನು ಕಲ್ಪಿಸಿರುವುದಾಗಿ ಹೇಳಿಕೊಂಡಿರುವುದು

ಶಿವಸೇನೆಯ ಬೆಂಬಲಿಗರು ತಮ್ಮ ಪಕ್ಷವು ಮುಂಬಯಿಯ ಮರಾಠೀ ಮಾನುಸ್ (ಮರಾಠಿಗ)ರಿಗೆ, ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಸೌಲಭ್ಯಗಳನ್ನು ಕಲ್ಪಿಸಿದೆ ಎಂದು ಹೇಳಿಕೊಂಡಿದ್ದಾರೆ.

ಧಾರಾವಿ ವಿಮೋಚನೆ

ಸೇನೆಯು ತಾನು ಏಷ್ಯಾದ ಅತ್ಯಂದ ದೊಡ್ಡ ಕೊಳೆಗೇರಿಯಾಗಿರುವ ಮುಂಬಯಿಯ ಧಾರಾವಿ ಪ್ರದೇಶದ ೫೦೦,೦೦೦ ಕೊಳೆಗೇರಿ ನಿವಾಸಿಗಳ ವಿಮೋಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದಾಗಿ ಹೇಳಿಕೊಂಡಿದೆ. ಆದರೆ, ಸ್ಲಂ ನಿವಾಸಿಗಳಿಗೆ ಉಚಿತ ಮನೆಗಳನ್ನು ನೀಡುವ ರಾಜ್ಯ ಸರ್ಕಾರದ ನೀತಿಯು ಒಂದು ದಶಕದ ಹಿಂದೆ ಶಿವಸೇನೆ-ಬಿಜೆಪಿ ಸರ್ಕಾರದಿಂದ ಜಾರಿಯಾದಾಗಲಿಂದಲೂ ವಿವಾದಗಳಲ್ಲಿ ಸಿಲುಕಿಕೊಂಡಿದೆ.

ಮುಲಭೂತ ವ್ಯವಸ್ಥೆಯಲ್ಲಿ ಸುಧಾರಣೆ

ಜತೆಗೇ, ಸೇನೆಯು ಮಹಾರಾಷ್ಟ್ರದಲ್ಲಿ, ಅದರಲ್ಲಿಯೂ ವಿಶೇಷವಾಗಿ ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಕಾರ್ಯನಿರತವಾಗಿದೆ. ಮುಂಬಯಿನ ಸುಮಾರು ೪೦ ಫ್ಲೈಯೋವರ್‌ಗಳು ಮತ್ತು ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ವೇಗಳನ್ನು ಶಿವಸೇನಾ ಆಡಳಿತಾವಧಿಯಲ್ಲಿ ನಿರ್ಮಿಸಲಾಯಿತು ಮತ್ತು ಇದರಿಂದ ಮುಂಬಯಿಯ ಮೂಲಭೂತ ಸೌಕರ್ಯಗಳಲ್ಲಿ ಗಣನೀಯವಾದ ಅಭಿವೃದ್ಧಿಯುಂಟಾಯಿತು. ನಂತರದ ಸರ್ಕಾರಗಳ ಮೇಲೆ ಮುಂಬಯಿಯ ಸಾರಿಗೆವ್ಯವಸ್ಥೆಯ ತೊಂದರೆಗಳನ್ನು ನಿರ್ಲಕ್ಷ್ಯ ಮಾಡಿದ ಆರೋಪವಿದೆಯಾದರೂ, ಹಿಂದಿನ ಶಿವಸೇನಾ-ಬಿಜೆಪಿ ಸರ್ಕಾರವು ತೀವ್ರವಾದ ಬದಲಾವಣೆಗಳನ್ನು ತಂದಿತು. ಸ್ಥಳೀಯ ದಿನಪತ್ರಿಕೆಯೊಂದರ ಪ್ರಕಾರ, "ಹಲವಾರು ರಸ್ತೆ ಯೋಜನೆಗಳನ್ನು ಅರಂಭಿಸುವುದರ ಮೂಲಕ ಸೇನೆಯು ಸ್ಪಷ್ಟವಾಗಿ ಸಾರ್ವಜನಿಕ ಸಾರಿಗೆಗೆ ಬದಲಾಗಿ ಖಾಸಗೀ, ಮೋಟರೀಕೃತ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಿದಂತಾಗಿದೆ." ಈ ವರದಿಯಲ್ಲಿ ಈ ನೀತಿಯನ್ನು "ವಿಮರ್ಶಕರ ಹೀಗಳೆತ" ದೊರಕಿದೆಯೆಂದೂ, ನಗರದ "ಕೇವಲ ಶೇಕಡಾ ಒಂಭತ್ತು"ರಷ್ಟು ಜನರು ಮಾತ್ರ ಖಾಸಗೀ ಸಾರಿಗೆವಾಹನಗಳನ್ನು ಬಳಸುವರೆಂದೂ ಹೇಳಲಾಯಿತು.

ಆದರೆ ಈ ಪ್ರಯತ್ನಗಳು ಶಿವಸೇನೆಯ ಜನಪ್ರಿಯತೆಯು ಭಾರತದೊಳಗೆ ಹೆಚ್ಚಲು ಕಾರಣವಾಗಿರುವ ನಿರ್ಣಾಯಕ ಅಂಶಗಳಾಗಿವೆ ಮತ್ತು ಇನ್ನೂ ಹೆಚ್ಚಿನ ಅಭಿವೃದ್ಧಿಯ ಭರವಸೆಗಳು ಶಿವಸೇನೆಯ ಪ್ರಚಾರಕ್ಕೆ ಇಂಬು ನೀಡಿವೆ.

ಇತರೆ

ಶಿವಸೇನೆಯು ೧೪ ಜುಲೈ ೨೦೦೮ರಂದು ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಹಿಂಸಾಚಾರದಲ್ಲಿ ತೊಡಗಿತು, ಏಕೆಂದರೆ ಅವರನ್ನು ಜಮ್ಮು ನಗರಕ್ಕೆ ಪ್ರವೇಶಿಸದಂತೆ ಸೆಂಟ್ರಲ್ ರೆಸರ್ವ್ ಪೊಲೀಸ್ ಫೋರ್ಸ್‍ನ ಸಿಬ್ಬಂದಿಗಳು ತಡೆಹಿಡಿದರು. ಸೇನೆಯು ಹಿಂದೂ ದೇವಾಲಯ ಸಮಿತಿಯೊಂದಕ್ಕೆ ಜಮೀನನ್ನು ಹಸ್ತಾಂತರಗೊಳಿಸದಿರುವ ಕಾಶ್ಮೀರ ಸರ್ಕಾರದ ನಿರ್ಧಾರದ ವಿರುದ್ಧ ಪ್ರದರ್ಶನ ನಡೆಸುತ್ತಿದ್ದರು, ಏಕೆಂದರೆ ಈ ಪ್ರಸ್ತಾವವು ಕಾಶ್ಮೀರದ ಇತಿಹಾಸದಲ್ಲೇ ಬೃಹತ್ ಎನ್ನಬಹುದಾದ ಕೆಲವು ಪ್ರತಿಭಟನೆಗಳು ಆರಂಭವಾಗಲು ಕಾರಣವಾಗಿತ್ತು, ಮತ್ತು ಅಸಂತುಷ್ಟಿ ಮತ್ತು "ಜನಸಂಖ್ಯಾ ದುರ್ಬಲತೆ"ಯ ಭೀತಿಗಳು ಮೂಡಲು ಎಡೆಮಾಡಿಕೊಟ್ಟಿತು. ಶಿವಸೇನೆಯು ತನ್ನ ಸೈನಿಕದಳವನ್ನು ಅವಶ್ಯಕವೆನಿಸಿದಾಗಲೆಲ್ಲ ಸುಮಾರು ೧೯೮೭ರಂದಿನಿಂದಲೂ ಬಳಸುತ್ತ ಬಂದಿದೆ, ಉದಾಹರಣೆಗೆ, ೧೯೮೦ರ ದಶಕದ ಪಂಜಾಬ್‌ನ ದಂಗೆಗಳ ಸಮಯದಲ್ಲಿ ಅಲ್ಲಿನ ಹಿಂದೂ ಸಮುದಾಯದ "ಸ್ಥೈರ್ಯ ವರ್ಧಿಸುವು"ದೆನ್ನಲಾದ ಚಟುವಟಿಕೆಗಳಲ್ಲಿ 125 ಕಾರ್ಯಕರ್ತರು ಭಾಗವಹಿಸಿದರು. ಜತೆಗೇ ಸೇನೆಯು ಈ ದಳವನ್ನು 2004ರಲ್ಲಿ ಶ್ರೀನಗರಕ್ಕೆ ಆ ನಗರದ ಮುಖ್ಯ ಕೇಂದ್ರಭಾಗವಾಗಿದ್ದ ಲಾಲ್ ಚೌಕದಲ್ಲಿ ಭಾರತದ ಧ್ವಜವನ್ನು ಹಾರಿಸಲು ಕಳಿಸುವುದಾಗಿ ಶಪಥ ಮಾಡಿತು. ನಂತರ ಅದೇ ವರುಷದಲ್ಲಿ, ಶಿವಸೇನೆಯು ಭಾರತ ಮತ್ತು ಪಾಕಿಸ್ತಾನಗಳು ದೆಹಲಿಯಲ್ಲಿ ಕ್ರಿಕೆಟ್ ಆಡುವುದನ್ನು ತಪ್ಪಿಸಲು ಪ್ರಯತ್ನಿಸಿತು. ಶಿವಸೇನೆಯು ತಮ್ಮ ಸದಸ್ಯರು ಹಿಂದೂ ರಾಷ್ಟ್ರವಾಗಿ ಭಾರತವು ನ್ಯಾಯಯುತವಾದ ಅಸ್ತಿತ್ವವನ್ನು ಹೊಂದಿರಬೇಕೆನ್ನುವ ತಮ್ಮ ನಂಬುಗೆಯ ಸಲುವಾಗಿ ತಮ್ಮ ಜೀವತ್ಯಾಗ ಮಾಡಲೂ ಸಿದ್ಧರಿದ್ದಾರೆಂದು ಹೇಳಿಕೊಳ್ಳುತ್ತದೆ.

ವಿವಾದ

ಭೂಮಿಪುತ್ರ ಪ್ರಚಾರಕಾರ್ಯ

ತನ್ನ ಆರಂಭದ ವರ್ಷಗಳಲ್ಲಿ ಸೇನೆಯು ತನ್ನ "ಮಣ್ಣಿನ ಮಕ್ಕಳ" ಸಿದ್ಧಾಂತದ ಭಾಗವಾಗಿ ಆಗಾಗ ಇತರ ಭಾರತೀಯ ಸಮುದಾಯಗಳ ಜನರ ಮೇಲೆ ಹಿಂಸಾಚಾರ ಮತ್ತು ಬೆದರಿಕೆ ಹಾಕುವುದನ್ನು ನಡೆಸುತ್ತ ಇತ್ತು. ಸೇನೆಯ ಆರಂಭದ ವರ್ಷಗಳಲ್ಲಿ, ಪಕ್ಷದ ಅತ್ಯಂತ ಹೆಚ್ಚು ಪ್ರಸಾರದಲ್ಲಿದ್ದ ಮರಾಠೀ-ಭಾಷಾ ವಾರಪತ್ರಿಕೆಯಾದ ಮಾರ್ಮಿಕ್ ಮುಂಬಯಿನ ಮಹಾರಾಷ್ಟ್ರೀಯರಲ್ಲಿ ವಲಸಿಗ-ವಿರೋಧೀ ಭಾವನೆಯನ್ನು ಕೆರಳಿಸಲು ಕಾರಣಕರ್ತವಾದವು. ಅಗ ಫ್ರೀ ಪ್ರೆಸ್ ಜರ್ನಲ್‌ಗೆ ಕಾರ್ಟೂನ್ ಕಲಾವಿದರಾಗಿದ್ದ ಠಾಕ್ರೆ, ಮೊದಲಿಗೆ ಬೆಳೆಯುತ್ತಿದ್ದ ದಕ್ಷಿಣ ಭಾರತೀಯ ಸಮುದಾಯವನ್ನು ಗುರಿಯಾಗಿಸಿಕೊಂಡು "ಲುಂಗಿ ಹಟಾವ್ ಪುಂಗಿ ಬಜಾವ್" ( ಲುಂಗಿ ಎಂಬುದು ದಕ್ಷಿಣ ಭಾರತದ ಪುರುಷರ ಸಾಂಪ್ರದಾಯಿಕ ತೊಡುಗೆಗೆ ಮರಾಠೀ ಭಾಷೆಯಲ್ಲಿ ಬಳಸಲಾಗುವ ಪದ), ಮತ್ತು "ಎಂಡು ಗುಂಡು " (ದಕ್ಷಿಣ ಭಾರತೀಯರು ಮಾತನಾಡುವ ದ್ರಾವಿಡ ಭಾಷೆಗಳ ಅವಹೇಳನಕಾರಿ ವರ್ಣನೆ) ಎಂಬುವೇ ಮುಂತಾದ ಘೋಷಣೆಗಳನ್ನು ಜಾರಿಗೆ ತಂದರು. ಈ ಅವಧಿಯಲ್ಲಿ, ಶಿವಸೈನಿಕರು ಮುಂಬಯಿಯಲ್ಲಿ ಜನಪ್ರಿಯವಗುತ್ತಿದ್ದ ದಕ್ಷಿಣ ಭಾರತೀಯ ಒಡೆತನದ ಉಡುಪಿ ರೆಸ್ಟುರಾಂಟ್‍ಗಳ ಮೇಲೆ ಸರಣಿದಾಳಿಗಳನ್ನು ನಡೆಸಲಾರಂಭಿಸಿದರು. ಇದೇ ರೀತಿಯಲ್ಲಿ ಠಾಕ್ರೆ ತನ್ನ ಭಾಷಣಗಳ ಮೂಲಕ ಗುಜರಾತಿಗಳು ಮಾರವಾಡಿಗಳು, ಬಿಹಾರಿಗಳು, ಉತ್ತರ ಪ್ರದೇಶ ('ಯೂಪಿಯೈಟ್ಸ್')ವೇ ಮೊದಲಾದ ಉತ್ತರ ಭಾರತದ ರಾಜ್ಯಗಳ ಮುಸ್ಲಿಮರನ್ನು ಟೀಕಿಸಲಾರಂಭಿಸಿದರು. ಇದಲ್ಲದೆ, ಠಾಕ್ರೆ ಹಲವಾರು ಸ್ಥಳೀಯ ಉದ್ಯಮಿಗಳುಅ ಮತ್ತು ವಹಿವಾಟುದಾರರಿಗೆ ಮಹಾರಾಷ್ಟ್ರೀಯರಿಗೆ ಉದ್ಯೋಗ ನೀಡುವಾಗ ಪ್ರಾಶಸ್ತ್ಯ ದೊರಕದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದೆಂಬ ಬೆದರಿಕೆ ಹಾಕಿದರು.

ಪಕ್ಷದ ಹಿಂಸಾಚಾರ

ಸೇನೆಯ ಮೇಲೆ ತನ್ನ ಸಿದ್ಧಾಂತಗಳನ್ನು ಪ್ರತಿಪಾದಿಸುವ ಸಲುವಾಗಿ ಆಯೋಜಿತ ರಾಜಕೀಯ ಹಿಂಸೆಯಲ್ಲಿ ತೊಡಗಿರುವ ಮತ್ತು ವಿರುದ್ಧ ಸಿದ್ಧಾಂತಗಳ ಮೇಲೆ ದಾಳಿ ನಡೆಸಿರುವ ಆರೋಪಗಳಿವೆ. ಈ ಕಾರಣದಿಂದಾಗಿ, ಕೆಲವೊಮ್ಮೆ ಇದನ್ನು ಉಗ್ರಗಾಮಿ ಬಲಪಂಥೀಯ ಬಣವೆಂದೂ ಬಣ್ಣಿಸಲಾಗುತ್ತದೆ.

೧೯೭೦ರ ದಶಕದಲ್ಲಿ ಶಿವಸೇನೆಯ ಸದಸ್ಯರ ಮೇಲೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ನ ಸೆಂಟ್ರಲ್ ಮುಂಬಯಿಯ Parel ಕ್ಷೇತ್ರದ ಮೆಂಬರ್ ಆಫ್ ಪಾರ್ಲಿಮೆಂಟ್ (MLA)ರವರನ್ನು ಕೊಲೆ ಮಾಡಿದ ಆರೋಪಗಳಿವೆ. ಅದರೆ ದಾಳಿ ಮಾಡಿದವರ ಮೇಲೆ ಕೊಲೆಯ ಆರೋಪ ಹೊರಿಸಲಾಗಲಿಲ್ಲ. ೮ ಫೆಬ್ರುವರಿ ೨೦೦೬ರಂದು ಸೇನೆಯ ಕಾರ್ಯಕರ್ತರು ಅದರ ವಿದ್ಯಾರ್ಥಿ ವಿಭಾಗದ ನೇತೃತ್ವದಲ್ಲಿ ಜೀ ಟಿವಿ ಚ್ಯಾನೆಲ್‌ನ ಕಚೇರಿಗೆ ನುಗ್ಗಿ ಅಲ್ಲಿ ಹಾನಿಯುಂಟುಮಾಡಿದರು. ಈ ದಾಳಿ ನಡೆಸಲು ಹೆಸರಿಸಲಾದ ಚ್ಯಾನೆಲ್ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆಸಿದ ಪ್ರಶಸ್ತಿಪ್ರದಾನ ಸಮಾರಂಭವೊಂದರಲ್ಲ್ಲಿ ಪ್ರದರ್ಶಿಸಲಾದ 'ಕಾಕಾ ಮಾಳಾ ವಚ್‌ವಾ' ('ಚಿಕ್ಕಪ್ಪಾ, ನನ್ನನ್ನು ರಕ್ಷಿಸಿ') ಎಂಬ ವಿಡಂಬನಾತ್ಮಕ ಕಿರುನಾಟಕವು ಕಾರಣವಾಗಿತ್ತು. ವರದಿಯ ಪ್ರಕಾರ ಈ ಕಿರುನಾಟಕವು ಕೆಲಕಾಲದ ಹಿಂದೆ ಪಕ್ಷದಿಂಡ ರಾಜ್ ಠಾಕ್ರೆ ಹೊರಹೋಗಲು ಕಾರಣವಾದ ಠಾಕ್ರೆ ಕುಟುಂಬದ ಅಂತರಿಕ ಕಲಹದ ಕುರಿತಾಗಿತ್ತು.

ಮುಂಬಯಿಯ ಮರಾಠಿಗರಲ್ಲದವರ ವಿರುದ್ಧ ಪ್ರಚಾರಕಾರ್ಯದ ಜತೆಗೇ, ಶಿವಸೇನೆಯು ತಾನು ಹಿಂದುತ್ವಕ್ಕೆ ಅಡ್ಡಿಯುಂಟುಮಾಡುವುದೆಂದು ಭಾವಿಸುವ ಪಾಶ್ಚಿಮಾತ್ಯ ಪ್ರಭಾವಗಳ ವಿರುದ್ಧ ಸಾರ್ವಜನಿಕವಾಗಿ ಹಿಂಸಾಚಾರ ಮತ್ತು ಬಲಪ್ರಯೋಗಕ್ಕಿಳಿಯುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಪಕ್ಷವು ಪ್ರತಿಭಟನೆಗಳು, ಪಿಕೆಟಿಂಗ್, ಮಾರ್ಕೆಟ್ ಬಂದುಮಾಡುವುದು ಮತ್ತು ಮುಷ್ಕರಗಳ ಆಯೋಜನೆಯಲ್ಲಿ ಭಾಗವಹಿಸುತ್ತಿದ್ದು ಇವು ಸಾಮಾನ್ಯವಾಗಿ ಮುಂದುವರೆದು ಹಿಂಸಾಪೂರ್ಣ ಘರ್ಷಣೆಗಳ, ಕೆಲವೊಮ್ಮೆ ದಂಗೆಗಳ ರೂಪ ಪಡೆಯುವುದು ಪ್ರಚಲಿತ ವಿದ್ಯಮಾನ. ಉದಾಹರಣೆಗೆ, ಶಿವಸೇನೆಯ ಕಾರ್ಯಕರ್ತರು ಯುವಜನರ ಮೇಲೆ ’ಅಶ್ಲೀಲ’ ಪಾಶ್ಚಿಮಾತ್ಯ ಪ್ರಭಾವಗಳ ವಿರುದ್ಧ ಪಕ್ಷದ ಪ್ರಚಾರಕಾರ್ಯದ ಅಂಗವಾಗಿ ವ್ಯಾಲೆಂಟೈನ್ಸ್ ಡೇ ಉಡುಗೊರೆಗಳನ್ನು ಮಾರುವ ಮುಂಬಯಿನ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಇದೇ ರೀತಿ, ೧೯೯೮ರಲ್ಲಿ ಶಿವಸೈನಿಕರು ದೀಪಾ ಮೆಹ್ತಾರ ಅತಿ ವಿವಾದಾಸ್ಪದವಾದ ಸಲಿಂಗಕಾಮದ ವಿಷಯವನ್ನುಳ್ಳ ಚಲನಚಿತ್ರ ಫೈರ್ ಅನ್ನು ತೋರಿಸಲಾಗುತ್ತಿದ್ದ ಚಲನಚಿತ್ರಮಂದಿರಗಳ ಮೇಲೆ ಈ ರೀತಿಯ ಚಲನಚಿತ್ರಗಳು ಹಿಂದೂ ಮೌಲ್ಯಗಳಿಗೆ ಧಕ್ಕೆಯುನ್ನುಂಟುಮಾಡುವುದು ಮತ್ತು ಹಿಂದೂಗಳು ನೋಡಾಲು ತಕ್ಕುದಲ್ಲ ಎಂಬ ಕಾರಣ ನೀಡಿ ದಾಳಿ ನಡೆಸಿದರು. ಇದರ ಫಲವಾಗಿ ಚಲನಚಿತ್ರ ಪ್ರದರ್ಶನವನ್ನು ನಿಲ್ಲಿಸಲಾಯಿತು. ನಂತರದಲ್ಲಿ ವಾರಾಣಸಿ ಮತ್ತಿತರ ಭಾರತೀಯ ಪವಿತ್ರ ಕ್ಷೇತ್ರಗಳನ್ನು ತಪ್ಪಾಗಿ ಮತ್ತು ನಕಾರಾತ್ಮಕವಾಗಿ ತೋರಿಸುವುದರ ಮೂಲಕ ಹಿಂದೂ ಧರ್ಮಕ್ಕೆ ಬೇಕೆಂದೇ ಅಪಖ್ಯಾತಿ ತರುವ ಸಲುವಾಗಿ ನಿರ್ಮಿಸಲಾಗುತ್ತಿದೆಯೆಂಬ ಆರೋಪ ಹೊರಿಸಿ, ಸೇನೆಯ ವಾರಾಣಸಿ ವಿಭಾಗವು ದೀಪಾ ಮೆಹ್ತಾರ ವಾಟರ್ ಚಲನಚಿತ್ರದ ಚಿತ್ರೀಕರಣದ ವಿರುದ್ಧ ಉಗ್ರವಾದ ಪ್ರತಿಭಟನೆಗಳನ್ನು ಆಯೋಜಿಸಲಾರಂಭಿಸಿತು.L ಈ ಪ್ರತಿಭಟನೆಗಳಿಂದಾಗಿ ಚಲನಚಿತ್ರದ ಲೊಕೇಶನ್ ಅನ್ನು ನೆರೆಯ ಶ್ರೀಲಂಕಾಗೆ ಬದಲಾಯಿಸಲಾಯಿತು.

ಮುಸ್ಲಿಮರ ಮೇಲೆ ಹಿಂಸಾಚಾರದ ಆರೋಪಗಳು

ಶಿವಸೇನೆಯ ಮೇಲೆ ಮುಸ್ಲಿಮರ ವಿರುದ್ಧ ಹಿಂಸಾಚಾರಗಳನ್ನು ಆಯೋಜಿಸಿದ ಆರೋಪಗಳಿವೆ. ೧೯೯೨ರಲ್ಲಿ ಉತ್ತರ ಭಾರತದ ಪವಿತ್ರ ಕ್ಷೇತ್ರವಾದ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯ ಉರುಳಿಸುವಿಕೆಯ ನಂತರ ಮುಂಬಯಿನಲ್ಲಿ ನಡೆದ ದಂಗೆಗಳಲ್ಲಿ ಶಿವಸೇನೆ ಸಕ್ರಿಯ ಪಾತ್ರವಹಿಸಿತ್ತು ಎಂಬುದು ಎಲ್ಲೆಡೆ ವ್ಯಾಪಕವಾಗಿರುವ ಆರೋಪ. ೨೩ ಜನವರಿ ೧೯೯ರಂದು, ಆಗಿನ ಕಾಂಗ್ರೆಸ್-ನೇತೃತ್ವದ ಮಹಾರಾಷ್ಟ್ರ ಸರ್ಕಾರವು ಜಸ್ಟಿಸ್ ಬಿ.ಎನ್. ಶ್ರೀಕೃಷ್ಣ (ಆಗಿನ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದವರು) ಅವರನ್ನು ದಂಗೆಯ ತನಿಖೆ ನಡೆಸಲು ಏಕವ್ಯಕ್ತಿ ಆಯೋಗದ ಮುಖ್ಯಸ್ಥರನ್ನಾಗಿ ನಿಯಮಿಸಿತು. ಆಯೋಗವು ಸೇನೆಯನ್ನು ಮುಸ್ಲಿಮ್-ವಿರೋಧಿ ದಂಗೆಗಳಲ್ಲಿ ನೇರವಾಗಿ ಭಾಗವಹಿಸಿದ್ದಕ್ಕಾಗಿ ಆರೋಪ ಹೊರಿಸಿದ್ದಲ್ಲದೆ, ಠಾಕ್ರೆ "ತನ್ನ ನಿಷ್ಠ ಅನುಯಾಯಿಗಳಿಗೆ ಮುಸ್ಲಿಮರ ವಿರುದ್ಧ ದಾಳಿಗಳನ್ನು ಆಯೋಜಿಸಲು ಆದೇಶ ನೀಡಿದ್ಧಾಗಿ" ಆಪಾದಿಸಿತು. ಆದರೆ ಜುಲೈ ೨೦೦೦ದಲ್ಲಿ ಏಳು ವರ್ಷಗಳ ನ್ಯಾಯಾಂಗ ವಿಚಾರಣೆಗಳ ನಂತರ ಠಾಕ್ರೆಯನ್ನು ಎಲ್ಲಾ ಕ್ರಿಮಿನಲ್ ಆರೋಪಗಳಿಂದ ಮುಕ್ತಗೊಳಿಸಲಾಯಿತು. ಆದರೆ, ಆಧಾರವಾಗಿ ಸಲ್ಲಿಸಲಾದ ವರದಿಯು ಈ ರೀತಿಯಾಗಿ ಹೇಳುತ್ತದೆ: " ಇದರ ಜತೆಗೇ ಭಾರತದ ಸುಪ್ರೀಮ್ ಕೋರ್ಟ್ ಠಾಕ್ರೆಯನ್ನು ಮುಸ್ಲಿಮರ ವಿರುದ್ಧ ಕೋಮುವಾರು ದ್ವೇಷ ವನ್ನು ಪ್ರಚೋದಿಸಿದ್ದಕ್ಕಾಗಿ ದೋಷಿಯನ್ನಾಗಿ ಹೆಸರಿಸಿತು."

ಇದರ ಜತೆಗೇ ಭಾರತ ಮತ್ತು ಮುಸ್ಲಿಮ್ ಪ್ರಧಾನ ಪಾಕಿಸ್ತಾನದ ನಡುವೆ ಯಾವುದೇ ಸಹಭಾಗಿತ್ವವನ್ನು ತಪ್ಪಿಸುವ ತಮ್ಮ ಪ್ರಯತ್ನಗಳ ಭಾಗವಾಗಿ, ಶಿವಸೈನಿಕರು ಭಾರತ ಮತ್ತು ಪಾಕಿಸ್ತಾನೀ ಕ್ರಿಕೆಟ್ ತಂಡಗಳು ಆಡಬೇಕೆಂದು ನಿರ್ಧಾರಿತವಾದ ಕ್ರಿಕೆಟ್ ಪಿಚ್‌ಗಳನ್ನು ಹಾಳುಗೆಡಹುವ ಕೆಲಸವನ್ನು ಮಾಡುತ್ತ ಬಂದಿದ್ದಾರೆ. ಸೇನೆಯು ಪಿಚ್‌ಗಳನ್ನು ತನ್ನ ದಾಳಿಗಳ ಗುರಿಯಾಗಿಸಿಕೊಂಡ ಎರಡು ಪ್ರಮುಖ ನಿದರ್ಶನಗಳೆಂದರೆ ಮುಂಬಯಿನ ವಾಂಖೇಡೆ ಸ್ಟೇಡಿಯಮ್‌ನ ಪಿಚ್ ಅನ್ನು ೧೯೯೧ರಲ್ಲಿ ಹಾಳುಗೆಡವಿದ್ದು ಮತ್ತು ರಾಷ್ಟ್ರದ ರಾಜಧಾನಿ ದೆಹಲಿಯ ಫೆರೋಜ್ ಶಾ ಕೋಟ್ಲಾ ಗ್ರೌಂಡ್ಸ್‌ನ ಪಿಚ್ ಅನ್ನು ೧೯೯೯ರಲ್ಲಿ ಧ್ವಂಸ ಮಾಡಿದ್ದು. ಎರಡೂ ದೇಶಗಳ ನಡುವೆ ಉದ್ವಿಗ್ನತೆಗಳು ಹೆಚ್ಚುತ್ತಿರುವ ವಾತಾವರಣದ ನಡುವೆ ಸೇನೆಯು ಈ ಚಟುವಟಿಕೆಗಳನ್ನು ಆಯೋಜಿಸಿತು.

ಮುಂಗೋಪದ ನಿಲುವಿನ ಘೋಷಣೆಗಳು

೧೯೯೮ರ ಸಂದರ್ಶನವೊಂದರಲ್ಲಿ, ಠಾಕ್ರೆಯವರು ಶಿವಸೇನೆಯು ಮುಸ್ಲಿಮರ ಬಗ್ಗೆ ತನಗಿದ್ದ ಹಲವಾರು ಸಮಸ್ಯೆಗಳ ಬಗ್ಗೆ, ಅದರಲ್ಲಿಯೂ ಬಾಬ್ರಿ ಮಸೀದಿ ಅಥವಾ ರಾಮಜನ್ಮಭೂಮಿ ವಿವಾದದ ಬಗ್ಗೆ ಮುಂಗೋಪದ ಧೋರಣೆಯನ್ನು ಹೊಂದಿದ್ದಿದ್ದಾಗಿ ತಿಳಿಸುತ್ತಾ ಈ ರೀತಿಯಾಗಿ ಹೇಳಿದರು: "ನಾವು ಮುಸ್ಲಿಮರನ್ನು ಅವರು ದೇಶಕ್ಕೆ, ಹಿಂದುಸ್ತಾನದ ಸಂವಿಧಾನಕ್ಕೆ ನಿಷ್ಟರಗಿರುವ ತನಕ ಸಲಹಬೇಕು ಮತ್ತು ನಮ್ಮದೇ ಭಾಗವಾಗಿ ಅವರನ್ನು ಕಾಣಬೇಕು." ಇದಕ್ಕೆ ಸಂಬಂಧಿಸಿದಂತೆ, ಸೇನೆಯ ಕೆಲವು ಸದಸ್ಯರು ಪಕ್ಷವು ಜಾತಿಯ ಆಧಾರದ ಮೇಲೆ ಭೇದಭಾವ ಮಾಡುವುದಿಲ್ಲವೆಂದೂ, ಪಕ್ಷವು ಶುದ್ಧ ರಾಷ್ಟ್ರೀಯತಾವಾದವನ್ನು ಆಧರಿಸಿರುವುದೆಂದೂ ಪ್ರತಿಪಾದಿಸುತ್ತಾರೆ.

ಮೀನಾತಾಯ್ ಅಪಚಾರ ಪ್ರತಿಭಟನೆಗಳು

೯ ಜುಲೈ ೨೦೦೬ರಂದು, ಯಾರೋ ಅನಾಮಿಕ ವ್ಯಕ್ತಿಗಳು ಮೀನಾತಾಯ್(ಬಾಳಾ ಠಾಕ್ರೆಯವರ ದಿವಂಗತ ಪತ್ನಿ) ಅವರ ಮೂರ್ತಿಯನ್ನು ಅಪವಿತ್ರಗೊಳಿಸಿದ ಘಟನೆಯ ನಂತರ, ಶಿವಸೈನಿಕರು ಸೆಂಟ್ರಲ್ ಮುಂಬಯಿಯ ದಾದರ್‌ನ ರಸ್ತೆಗಳನ್ನು ಅಡ್ಡಗಟ್ಟಿ ಪೊಲೀಸ್ ಔಟ್‌ಪೋಸ್ಟೊಂದನ್ನು ಧ್ವಂಸ ಮಾಡಿದರು, ಮತ್ತು ನಂತರ ಅವರು ರಾಜ್ಯದುದ್ದಕ್ಕೂ ನಡೆಸಿದ ಪ್ರತಿಭಟನೆಗಳಲ್ಲಿ ನಾಗ್‌ಪುರ್, ಪುಣೆ, ನಾಶಿಕ್ ಹಾಗೂ ಮಹಾರಾಷ್ಟದ ಕೆಲ ನಗರಗಳಲ್ಲಿ ಒಂದೊಂದು ಹಿಂಸಾಚಾರದ ಘಟನೆಗಳು ನಡೆದ ಬಗ್ಗೆ ವರದಿಗಳು ಬಂದವು.

ಶಿವಸೇನಾ ಮತ್ತು ಎಮ್‌ಎನ್‌ಎಸ್ ಘರ್ಷಣೆಗಳು

೧೦ ಅಕ್ಟೋಬರ್ ೨೦೦೬ರಂದು ಶಿವಸೇನೆಯ ಬೆಂಬಲಿಗರು ಮತ್ತು ರಾಜ್ ಠಾಕ್ರೆಯವರ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಮ್‌ಎನ್‌ಎಸ್) ನಡುವೆ ಘರ್ಷಣೆಗಳು ಭುಗಿಲೆದ್ದವು. ಎಮ್‌ಎನ್‌ಎಸ್‌ನ ಕಾರ್ಯಕರ್ತರು ಮುಂಬಯಿಯ ಎಸ್‌ಐಇಎಸ್ ಕಾಲೇಜಿನ ಬಳಿ ಶಿವಸೇನೆಯ ಮುಖಂಡ ಬಾಳಾ ಠಾಕ್ರೆಯವರ ಚಿತ್ರಗಳಿದ್ದ ಪೋಸ್ಟರುಗಳನ್ನು ಹರಿದುಹಾಕಿದರೆಂದು ಆಪಾದಿಸಲಾಯಿತು. ಇದಕ್ಕೆ ಪ್ರತಿಯಾಗಿ ಶಿವಸೇನಾ ಕಾರ್ಯಕರ್ತರು ದಾದರ್‌ನ ಸೇನಾ ಭವನದ ಬಳಿ ರಾಜ್ ಠಾಕ್ರೆಯವರ ಚಿತ್ರವಿರುವ ಜಾಹೀರಾತು ಫಲಕಗಳನ್ನು ಕೆಳಕ್ಕುರುಳಿಸಿದರೆಂದು ಆಪಾದನೆ ಮಾಡಲಾಯಿತು.

ಘಟನೆಗಳ ಸುದ್ದಿಗಳು ಹರಡುತ್ತಿದ್ದಂತೆಯೆ ಎರಡೂ ಗುಂಪುಗಳು ಸೇನ ಭವನದ ಬಳಿ ಸೇರಿಕೊಂಡು ಒಬ್ಬರೊಬ್ಬರ ಮೇಲೆ ಕಲ್ಲುತೂರಾಟ ನಡೆಸತೊಡಗಿದವು. ಈ ಘಟನೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಮತ್ತು ಎರಡೂ ಪಕ್ಷಗಳ ಹಲವಾರು ಬೆಂಬಲಿಗರಿಗೆ ಗಾಯಗಳಾದವು. ಪರಿಸ್ಥಿತಿಯನ್ನು ಸಾಮಾನ್ಯಸ್ಥಿತಿಗೆ ತರುವ ಸಲುವಾಗಿ ಪೊಲೀಸ್ ಪಡೆಯು ಗಲಭೆ ನಡೆಸುತ್ತಿದ್ದ ಗುಂಪಿನೆಡೆಗೆ ಟಿಯರ್‌ಗ್ಯಾಸ್ ಶೆಲ್‌ಗಳನ್ನು ಸಿಡಿಸಿತು.

ಕೊನೆಗೆ ಪೊಲೀಸ್ ಕಾರ್ಯಾಚರಣೆ ಮತ್ತು ಉದ್ಧವ್ ಠಾಕ್ರೆ ಮತ್ತು ಅವರ ಸೋದರಸಂಬಂಧಿ ರಾಜ್ ಠಾಕ್ರೆಯವರು ಸ್ಥಳಕ್ಕೆ ಭೇಟಿ ನೀಡಿದ್ದರಿಂದ ಪರಿಸ್ಥಿತಿಯನ್ನು ತಹಬಂದಿಗೆ ತರಲು ಸಾಧ್ಯವಾಯಿತು. ಉದ್ಧವ್ ಸೇನಾ ಕಾರ್ಯಕರ್ತರಿಗೆ ವಾಪಾಸು ತಮ್ಮ ಮನೆಗಳಿಗೆ ಮರಳುವಂತೆ ಮನವಿ ಮಾಡಿದರು. ಅವರು ಹೇಳಿದ್ದು;

"ಪೊಲೀಸರು ಅವಶ್ಯಕ ಕ್ರಮ ಕೈಗೊಳ್ಳುತ್ತಾರೆ. ಇದು ಎಮ್‌ಎನ್‌ಎಸ್‌ನಿಂದ ಹೊರಬಂದು ನಮ್ಮನ್ನು ಸೇರುತ್ತಿರುವ ಕಾರಣದಿಂದ ನಡೆಯುತ್ತಿದೆ. ಪಕ್ಷಾಂತರಗಳು ಆರಂಭವಾಗಿವೆ ಮತ್ತು ಇದರಿಂದಾಗಿ ಅವರು ಈ ರೀತಿಯ ಕೃತ್ಯಗಳಲ್ಲಿ ತೊಡಗಿದ್ದಾರೆ".

ಶಿವಸೇನೆಯ ವಿಭಗೀಯ ಮುಖ್ಯಸ್ಥರಾದ ಮಿಲಿಂದ್ ವೈದ್ಯ ಈ ಘಟನೆಯಲ್ಲಿ ಪಾಲ್ಗೊಂಡಿದ್ದ ಎಮ್‌ಎನ್‌ಎಸ್‌ ಕಾರ್ಯಕರ್ತನೊಬ್ಬನ ವಿರುದ್ಧ ತಾವು ಸ್ಥಳೀಯ ಪೊಲೀಸರಲ್ಲಿ ಕಂಪ್ಲೇಂಟು ಸಲ್ಲಿಸಿರುವುದಾಗಿ ತಿಳಿಸಿದರು. ಆದರೆ ಎಮ್‌ಎನ್‌ಎಸ್‍ನ ಜನರಲ್ ಸೆಕ್ರೆಟರಿ ಪ್ರವೀಣ್ ಡಾರೇಕರ್ ಎಸ್‌ಐಇಎಸ್ ಕಾಲೇಜಿನ ಸ್ಥಳೀಯ ಚುನಾವಣೆಗಳನ್ನು ಈ ಘಟನೆಗೆ ಕಾರಣವೆಂದು ತಿಳಿಸಿದರು. ಅವರು, ಸೇನೆಯು ಕಾಲೇಜುಗಳ ಮೇಲೆ ತಮ್ಮ ಪ್ರಭಾವ ಕಡಿಮೆಯಾಗುತ್ತಿರುವುದರಿಂದ ಈ ವಿಷಯಕ್ಕೆ ಅನಗತ್ಯ ಬಣ್ಣಬಳಿದು ಪ್ರಚಾರ ನೀಡಲಾಗುತ್ತಿದೆಯೆಂದು ಆರೋಪಿಸಿದರಲ್ಲದೆ, ಸೇನೆಯ ಆಪಾದನೆಗಳಲ್ಲಿ ಯಾವುದೇ ಹುರುಳಿಲ್ಲವೆಂದೂ ಹೇಳಿದರು. ರಾಜ್ ಠಾಕ್ರೆಯವರು ತಾವು ಮತ್ತು ತಮ್ಮ ಪಕ್ಷದ ಸದಸ್ಯರು ಬಾಳಾ ಠಾಕ್ರೆಯವರನ್ನು ಬಹಳವಾಗಿ ಗೌರವಿಸುವುದರಿಂದ ಎಮ್‍ಎನ್‍ಎಸ್ ಅವರ ಚಿತ್ರಕ್ಕೆ ಹಾನಿಯುಂಟುಮಾಡಿರುವ ಸಾಧ್ಯತೆಗಳು ಇಲ್ಲವೇ ಇಲ್ಲವೆಂದು ಸಾಧಿಸುತ್ತಾರೆ.

ಕಾನೂನು ಬೆಂಬಲ

ಶಿವಸೇನೆಯು 2008ರ ಮಾಲೇಗಾಂವ್ ಬಾಂಬ್ ದಾಳಿಗಳ ಆತಂಕವಾದದ ಆರೋಪಿ ಪ್ರಜ್ಞಾ ಸಿಂಗ್ ಠಾಕುರ್‌ಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿತು.

ಶಾರುಖ್ ಖಾನ್ ವಿವಾದ

ಫೆಬ್ರುವರಿ ೨೦೧೦ರ ಆರಂಭದಿಂದ ಪಕ್ಷವು ಬಹಳ ನಿರೀಕ್ಷಿಸಲಾಗಿದ್ದ ಕರಣ್ ಜೊಹರ್ ನಿರ್ದೇಶನದ, ಶಾರುಖ್ ಖಾನ್ ನಾಯಕನಟನಾಗಿರುವ ಬಾಲಿವುಡ್ ಚಲನಚಿತ್ರ ಮೈ ನೇಮ್ ಈಸ್ ಖಾನ್‌ನ ಬಿಡುಗಡೆಗೆ ತಡೆಯೊಡ್ಡುತ್ತಲೇ ಬಂದಿದೆ. ಈ ನಟ ಇಂಡಿಯನ್ ಪ್ರೀಮಿಯರ್ ಲೀಗ್, ೨೦೧೦ನಲ್ಲಿ ಪಾಕಿಸ್ತಾನೀ ಆಟಗಾರರನ್ನು ಒಳಗೊಳ್ಳಬೇಕೆನ್ನುವ ಅಭಿಪ್ರಾಯಕ್ಕೆ ಬೆಂಬಲ ಸೂಚಿಸಿದ್ದಕ್ಕಾಗಿ ಮತ್ತು ತಾನು ರಾಜ್ಯವೊಂದಕ್ಕೆ ಸಂಬಂಧಿಸಿರುವ ವ್ಯಕ್ತಿಯಾಗಿರುವುದಕ್ಕೆ ಬದಲಾಗಿ "ಮೊದಲಿಗೆ ಭಾರತೀಯ"ನಾಗಿರುವುದಾಗಿ ನೀಡಿದ ಹೇಳಿಕೆಗಳ ನಂತರ ಶಿವಸೇನೆಯ ಪ್ರಮುಖರಿಂದ ಚಲನಚಿತ್ರದ ಬಿಡುಗಡೆಯನ್ನು ನಿಲ್ಲಿಸಲು ಉಗ್ರವಾದ ಆದೇಶಗಳು ಜಾರಿಯಾದವು. ಆತ ಒಬ್ಬ ಉತ್ತರ ಭಾರತೀಯನಾಗಿರುವುದು(v.s.) ಮತ್ತು ಮುಸಲ್ಮಾನ ಸಮುದಾಯದವರಾಗಿರುವುದು ಸೇನೆಯಿಂದ ಆಳಲ್ಪಡದಿದ್ದರೂ ನಿಯಂತ್ರಿಸಲ್ಪಡುವ ನಗರದಲ್ಲಿ ಅವರ ತೊಂದರೆಗಳು ಹೆಚ್ಚಾಗಲು ಕಾರಣವಾದವು. ಕೆಲಕಾಲದವರೆಗೆ ಈ ವಿವಾದವು ಪರಿಹಾರವಾದಂತೆ ಕಂಡುಬಂದರೂ ಕೂಡ, ತಾವು ಚಲನಚಿತ್ರದ ಪ್ರದರ್ಶನಕ್ಕೆ ಅಡ್ಡಿಯುಂಟುಮಾಡುವುದಿಲ್ಲವೆಂದು ಸಾರ್ವಜನಿಕ ಹೇಳಿಕೆಯನ್ನು ನೀಡಿದರೂ ಕೂಡ, ಶಿವಸೇನೆಯ ಪಡೆಗಳು ಚಲನಚಿತ್ರದ ಪೋಸ್ಟರ್‌ಗಳನ್ನು ಸುಡುವುದು ಮತ್ತು ಚಲನಚಿತ್ರದ ಬಿಡುಗಡೆಗೆ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಸುಮಾರು ೧೬೦೦ ಜನರನ್ನು ಪ್ರಿವೆಂಟಿವ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ಚಲನಚಿತ್ರ ಪ್ರದರ್ಶಿತವಾಗುತ್ತಿರುವ ಥಿಯೇಟರುಗಳನ್ನು ಸೇನೆಯ ಉದ್ದೇಶಪೂರ್ವಕ ಹಿಂಸಾಚಾರದಿಂದ ರಕ್ಷಿಸಲು ಸುಮಾರು ೧೦,೦೦೦ ಪೊಲೀಸ್ ಸಿಬ್ಬಂದಿಯನ್ನು ನಿಯಮಿಸಲಾಗಿದೆ.

CNN-IBN ಕಚೇರಿಗಳ ಮೇಲೆ ದಾಳಿ

IBN-7ನ ಹಿಂದಿ ಮತ್ತು ಮರಾಠೀ ಟಿವಿ ನ್ಯೂಸ್ ಚ್ಯಾನೆಲ್ ಕಚೇರಿಗಳು ಹಾಗೂ ಮುಂಬಯಿ ಮತ್ತು ಪುಣೆಯ IBN-Lokmat ಕಚೇರಿಗಳ ಮೇಲೆ ಶಿವಸೇನೆಯ ಕಾರ್ಯಕರ್ತರು ೨೦ ನವೆಂಬರ್ ೨೦೦೯ರಂದು ದಾಳಿ ಮಾಡಿ ಧ್ವಂಸ ಮಾಡಿದರು. ಶಿವಸೇನೆಯು ಈ ದಾಳಿಗಳಿಗೆ ಸಚಿನ್ ತೆಂಡೂಲ್ಕರ್ ಬಗ್ಗೆ ಬಾಳಾ ಠಾಕರೆಯವರ ಅಭಿಪ್ರಾಯಗಳನ್ನು ಈ ನ್ಯೂಸ್ ಚ್ಯಾನೆಲ್ ಟೀಕಿಸಿದ್ದನ್ನು ಕಾರಣವಾಗಿ ಹೆಸರಿಸಿತು. ಶಿವಸೇನೆಯ ರಾಜ್ಯ ಸಭಾ ಎಂಪಿ ಸಂಜಯ್ ರಾವುತ್ ಈ ದಾಳಿಗಳು "ಅಪ್ರಯತ್ನಪೂರ್ವಕ" ಎಂದು ಹೇಳಿದರು. ಹಲವಾರು ಶಿವಸೇನಾ ವಕ್ತಾರರು ಈ ದಾಳಿಗಳನ್ನು ಸಮರ್ಥಿಸುತ್ತ ಬಂದಿದ್ದಾರೆ.

ಈ ಕೆಳಗಿನವುಗಳನ್ನೂ ನೋಡಬಹುದು

  • ಹಿಂದೂ ರಾಷ್ಟ್ರೀಯತಾವಾದಿ ಪಕ್ಷಗಳು
  • ಮರಾಠೀ ಪ್ರಾಂತೀಯತಾವಾದ
  • ಮಹಾರಾಷ್ಟ್ರ ನವನಿರ್ಮಾಣ್ ಸೇನಾ
  • ಆರ್‌ಎಸ್‌ಎಸ್
  • ಬೆಳಗಾವಿ ಗಡಿ ವಿವಾದ
  • ನೇಪಾಳ ಶಿವಸೇನಾ
  • ಅಸೋಮ್ ಸೇನಾ

ಹೆಚ್ಚಿನ ಓದಿಗಾಗಿ

ಪುಸ್ತಕಗಳು — ಮರಾಠಿ

  • ಭೋಸಲೆ, ಹರ್ಶದ್ (೨೦೦೪): 'Mumbai Mahanagarpalika Nivadnuk' in ಪಾಲ್‌ಶೀಕರ್ ಸುಹಾಸ್ ಮತ್ತು ನಿತಿನ್ ಬೀರ್‌ಮಲ್ (eds), Maharashtrache Rajkaran Pratima, ಪುಣೆ.
  • Maharashtratil Sattantar, ವೋರಾ ರಾಜೇಂದ್ರ ಮತ್ತು ಸುಹಾಸ್ ಪಾಲ್‌ಶೀಕರ್, Granthali, ಮುಂಬಯಿ ೧೯೯೬
  • ಭೋಸಲೆ, ಹರ್ಶದ್(೨೦೦೬),"Mumbaichya Vikasacha Arthik, Rajakiya Ani Samajik Sandarbha",in Bi monthly APLA PARAM MITRA, ಸೆಪ್ಟೆಂಬರ್-ಅಕ್ಟೋಬರ್ ೨೦೦೬,ಸಂಪುಟ ೫,ಸಂಚಿಕೆ-೩.

ಪುಸ್ತಕಗಳು - ಆಂಗ್ಲ

  • Ethnicity and Equality: The Shiv Sena Party and Preferential Policies in Bombay , ಎಮ್‌ಎಫ್ ಕ್ಯಾಟ್‌ಜೆನ್‌ಸ್ಟೀನ್ - ೧೯೭೯ - ಕಾರ್ನೆಲ್ ಯುನಿವರ್ಸಿಟಿ ಪ್ರೆಸ್
  • Warriors in Politics: Hindu Nationalism, Violence, and the Shiv Sena in India , ಎಸ್ ಬ್ಯಾನರ್ಜೀ - ೨೦೦೦ - ವೆಸ್ಟ್‌ವ್ಯೂ ಪ್ರೆಸ್
  • The Sena Story , ಪುರಂದರೆ ವೈಭವ್, ಬಿಸಿನೆಸ್ ಪಬ್ಲಿಕೇಶನ್ಸ್, ಮುಂಬಯಿ,(೧೯೯೯)
  • The Charisma of Direct Action: Power, Politics, and the Shiv Sena , ಜೆ‌ಎಮ್ ಎಕರ್ಟ್ - ೨೦೦೩ - ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್
  • Nativism in a Metropolis: The Shiv Sena in Bombay , ಡಿ ಗುಪ್ತಾ - ೧೯೮೨ – ಮನೋಹರ್ (ಓಯುಪಿ ೧೯೯೬)
  • Shiv Sena: An Assessment , ಪಾಲ್‌ಶೀಕರ್, ಸುಹಾಸ್, ಡಿಪಾರ್ಟ್‌ಮೆಂಟ್ ಆಫ್ ಪಾಲಿಟಿಕ್ಸ್ ಎಂಡ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್, ಯುನಿವರ್ಸಿಟಿ ಅಫ್ ಪುಣೆ, ಪುಣೆ (೧೯೯೯)
  • Maximum City: Bombay Lost and Found, 'Power', chapter ೩, Mumbai , ಮೆಹ್ತಾ, ಸುಕೇತು, ಪೆಂಗ್ವಿನ್ ಬುಕ್ಸ್(೨೦೦೫)

ಲೇಖನಗಳು

  • The Rebirth of Shiv Sena: The Symbiosis of Discursive and Organizational Power, ಮೇರಿ ಫೇಯ್ನ್‌ಸಾಡ್ ಕ್ಯಾಟ್‌ಜೆನ್‌ಸ್ಟೀನ್, ಉದಯ್ ಸಿಂಗ್ ಮೆಹ್ತಾ, ಉಷಾ ಠಕ್ಕರ್, The Journal of Asian Studies , Vol. ೫೬, No. ೨ (ಮೇ, ೧೯೯೭), ಪುಟಗಳು. ೩೭೧–೩೯೦
  • Saffronisation of the Shiv Sena, ಜೆ ಲೆಲೆ — Bombay: Metaphor for Modern India , ೧೯೯೫
  • Cultural Populism: The Appeal of the Shiv Sena, ಜಿ ಹ್ಯೂಜ್ — Bombay: Metaphor for Modern India , ೧೯೯೫
  • The Shiv Sena's new avatar: Marathi chauvinism and Hindu communalism, ಆರ್ ಸರ್ದೇಸಾಯಿ - Politics in Maharashtra , ೧೯೯೫
  • The Rhetoric of Hindu Nationalism: A Narrative of Mythic Redefinition, ರಾಬರ್ಟ್ ಸಿ. ರೋಲ್ಯಾಂಡ್, ಅಭಿಕ್ ರಾಯ್; Western Journal of Communication , Vol. ೬೭, ೨೦೦೩
  • Regenerating Masculinity in the Construction of Hindu Nationalist Identity: A Case Study of Shiv Sena, ಅಭಿಕ್ ರಾಯ್, Communication Studies , Volume ೫೭, Number ೨ / ಜೂನ್ ೨೦೦೬,
  • The Feminization of Violence in Bombay: Women in the Politics of the Shiv Sena, ಎಸ್ ಬ್ಯಾನರ್ಜೀ - Asian Survey , ೧೯೯೬
  • The vernacularisation of Hindutv: The BJP and Shiv Sena in rural Maharashtra, ಥಾಮಸ್ ಬ್ಲಾಮ್ ಹ್ಯಾನ್‌ಸೆನ್ Contributions to Indian Sociology , Vol. ೩೦, No. ೨, ೧೭೭-೨೧೪ (೧೯೯೬)
  • The Shiv Sena: A Movement in Search of Legitimacy ಆರ್ ಜೋಶಿ - Asian Survey , ೧೯೭೦
  • Origins of Nativism: The Emergence of Shiv Sena in Bombay ಎಮ್‌ಎಫ್ ಕ್ಯಾಟ್‌ಜೆನ್‌ಸ್ಟೀನ್ - Asian Survey , ೧೯೭೩
  • ಸರ್ದೇಸಾಯ್, ರಾಜ್‌ದೀಪ್ 'Shiv Sena's New Avatar: Marathi Chauvinism and Hindu Communalism' in Usha Thakkar and Mangesh Kulkarni (eds), Politics in Maharashtra , ಹಿಮಾಲಯಾ, ಮುಂಬಯಿ, pp ೧೨೭–೪೬ (೧೯೯೫)
  • " City of Mongrel Joy": Bombay and the Shiv Sena in Midnight's Children and The Moor's Last Sigh, ಆರ್ ಟ್ರೌಸ್‌ಡೇಲ್ - JOURNAL OF COMMONWEALTH LITERATURE , ೨೦೦೪

ಅಂತರ್ಜಾಲದಲ್ಲಿ ಲಭ್ಯವಿರುವ ಲೇಖನಗಳು

  • The Shiv Sena: An Eruption of Subnationalism, ಮೋರ್‌ಖಂಡೀಕರ್ ಆರ್ ಎಸ್, Economic and Political Weekly , ೨೧ ಅಕ್ಟೋಬರ್, ಪುಟಗಳು ೧೯೦೩–೦೬ (೧೯೬೭
  • Shiv Sena: A Tiger with Many Faces? ಎಸ್ ಪಾಲ್‌ಶೀಕರ್ - Economic and Political Weekly , ೨೦೦೪
  • The Charisma of Autocracy Bal Thackeray's Dictatorship in Shiv Sena ಜೆ ಎಕರ್ಟ್ — ಮಾನುಷಿ, ೨೦೦೨
  • Shiv Sena andNational'Hinduism, ಜಿ ಹ್ಯೂಜ್ — ECONOMIC AND POLITICAL WEEKLY, ೧೯೯೨

ಆಕರಗಳು

ಬಾಹ್ಯ ಕೊಂಡಿಗಳು

Tags:

ಶಿವ ಸೇನಾ ಇತಿಹಾಸಶಿವ ಸೇನಾ ಪಕ್ಷ ವ್ಯವಸ್ಥೆಶಿವ ಸೇನಾ ಚುನಾವಣಾ ಪ್ರದರ್ಶನಶಿವ ಸೇನಾ ಇತ್ತೀಚೆಗಿನ ಚುನಾವಣಾ ವಿಜಯಗಳುಶಿವ ಸೇನಾ ಕಾರ್ಯಶಿವ ಸೇನಾ ವಿವಾದಶಿವ ಸೇನಾ CNN-IBN ಕಚೇರಿಗಳ ಮೇಲೆ ದಾಳಿಶಿವ ಸೇನಾ ಈ ಕೆಳಗಿನವುಗಳನ್ನೂ ನೋಡಬಹುದುಶಿವ ಸೇನಾ ಹೆಚ್ಚಿನ ಓದಿಗಾಗಿಶಿವ ಸೇನಾ ಆಕರಗಳುಶಿವ ಸೇನಾ ಬಾಹ್ಯ ಕೊಂಡಿಗಳುಶಿವ ಸೇನಾ

🔥 Trending searches on Wiki ಕನ್ನಡ:

ಆಲೂರು ವೆಂಕಟರಾಯರುಶಬ್ದಮಣಿದರ್ಪಣಚನ್ನವೀರ ಕಣವಿಕದಂಬ ಮನೆತನಭಾರತದಲ್ಲಿ ತುರ್ತು ಪರಿಸ್ಥಿತಿಮಾಸ್ತಿ ವೆಂಕಟೇಶ ಅಯ್ಯಂಗಾರ್ಕ್ರಿಕೆಟ್ಮೈಸೂರುಹಿಂದೂ ಮಾಸಗಳುಜಿ.ಪಿ.ರಾಜರತ್ನಂಪ್ಲಾಸಿ ಕದನಸವದತ್ತಿಗೋಲ ಗುಮ್ಮಟಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುಸರ್ ಐಸಾಕ್ ನ್ಯೂಟನ್ಬಿ. ಆರ್. ಅಂಬೇಡ್ಕರ್ಪರಶುರಾಮಉಡಮೂಲಸೌಕರ್ಯಧರ್ಮವಿಮೆಬಹಮನಿ ಸುಲ್ತಾನರುಗುಪ್ತ ಸಾಮ್ರಾಜ್ಯಸಿದ್ದರಾಮಯ್ಯವ್ಯಾಪಾರಎಂ. ಎಂ. ಕಲಬುರ್ಗಿಪತ್ರಿಕೋದ್ಯಮಪ್ರಜಾಪ್ರಭುತ್ವಕನ್ನಡ ಪತ್ರಿಕೆಗಳುಕಳಿಂಗ ಯುದ್ಧಭರತೇಶ ವೈಭವಇಂಡಿ ವಿಧಾನಸಭಾ ಕ್ಷೇತ್ರಸಾಲುಮರದ ತಿಮ್ಮಕ್ಕಚಿತ್ರದುರ್ಗ ಕೋಟೆಆದೇಶ ಸಂಧಿಮರಭಾರತದ ರಾಜಕೀಯ ಪಕ್ಷಗಳುಸಂಧಿಭಾರತದ ಮಾನವ ಹಕ್ಕುಗಳುಪಂಪ ಪ್ರಶಸ್ತಿಕಪ್ಪೆಚಿಪ್ಪುಕೆಳದಿಯ ಚೆನ್ನಮ್ಮಹುಲಿಸೇತುವೆಭಾರತ ಬಿಟ್ಟು ತೊಲಗಿ ಚಳುವಳಿಯಕ್ಷಗಾನಪೂರ್ಣಚಂದ್ರ ತೇಜಸ್ವಿಕನ್ನಡ ಸಾಹಿತ್ಯ ಪ್ರಕಾರಗಳುಶಬ್ದಹೊಯ್ಸಳ ವಿಷ್ಣುವರ್ಧನಆತ್ಮಚರಿತ್ರೆಖೊಖೊಸಮುಚ್ಚಯ ಪದಗಳುಬಿ.ಜಯಶ್ರೀಹಿಂದೂ ಧರ್ಮಭಾರತೀಯ ರಿಸರ್ವ್ ಬ್ಯಾಂಕ್ಚೋಳ ವಂಶಕ್ರಿಯಾಪದರಸ(ಕಾವ್ಯಮೀಮಾಂಸೆ)ತಿಂಥಿಣಿ ಮೌನೇಶ್ವರಚಂಪೂಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಗುರುನಾನಕ್ರೈಲು ನಿಲ್ದಾಣಹಳೆಗನ್ನಡಪ್ರಾಚೀನ ಈಜಿಪ್ಟ್‌ಕಮಲಲೆಕ್ಕ ಪರಿಶೋಧನೆವೆಂಕಟೇಶ್ವರ ದೇವಸ್ಥಾನನೆಲ್ಸನ್ ಮಂಡೇಲಾಪ್ರಜಾವಾಣಿಚನ್ನಬಸವೇಶ್ವರವಂದನಾ ಶಿವಭಾರತ ಗಣರಾಜ್ಯದ ಇತಿಹಾಸಕಾಂತಾರ (ಚಲನಚಿತ್ರ)ಐಹೊಳೆಸೌರಮಂಡಲಹಸಿರುಮನೆ ಪರಿಣಾಮ🡆 More