ಭಾರತದ ಬಂದರುಗಳು

ಬಂದರು ಎಂಬ ಶಬ್ದವು ಸಾಮಾನ್ಯವಾಗಿ ಪೋರ್ಟ್ನೊಂದಿಗೆ ಪರ್ಯಾಯವಾಗಿ ಬಳಸಲ್ಪಡುತ್ತದೆ.

ಇದು ನೌಕೆಗಳನ್ನು ಲೋಡ್ ಮಾಡಲು ಮತ್ತು ಇಳಿಸುವ ಮತ್ತು ಇದು ಮಾನವ ನಿರ್ಮಿತ ಸೌಲಭ್ಯವಾಗಿದೆ.

ಭಾರತದ ಬಂದರುಗಳು
ಭಾರತದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳ ಸ್ಥಳವನ್ನು ತೋರಿಸುವ ನಕ್ಷೆ

ಭಾರತವು 7516.6 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಕರಾವಳಿಯನ್ನು ಹೊಂದಿದೆ, ಇದು ವಿಶ್ವದ ಅತಿದೊಡ್ಡ ಪರ್ಯಾಯ ದ್ವೀಪಗಳಲ್ಲಿ ಒಂದಾಗಿದೆ. ಹಡಗು ಸಾಗಣೆ ಸಚಿವಾಲಯ, ಭಾರತ ಸರಕಾರದ ಪ್ರಕಾರ, ಭಾರತದ ವ್ಯಾಪಾರದ ಸುಮಾರು 95 ಪ್ರತಿಶತದಷ್ಟು ಮತ್ತು ಮೌಲ್ಯದಿಂದ 68 ಪ್ರತಿಶತದಷ್ಟು ಸಮುದ್ರ ಸಾರಿಗೆ ಮೂಲಕ ಮಾಡಲಾಗುತ್ತದೆ. ಇದು 13 ಪ್ರಮುಖ ಬಂದರುಗಳು (12 ಸರ್ಕಾರಿ ಸ್ವಾಮ್ಯದ ಮತ್ತು ಒಂದು ಖಾಸಗಿ) ಮತ್ತು 187 ಅಧಿಸೂಚಿತ ಸಣ್ಣ ಮತ್ತು ಮಧ್ಯಂತರ ಬಂದರುಗಳಿಂದ ಸೇವೆ ಸಲ್ಲಿಸುತ್ತದೆ. 2010 ರಲ್ಲಿ ಪ್ರಮುಖ ಬಂದರು ಎಂದು ಘೋಷಿಸಲ್ಪಟ್ಟ ಪೋರ್ಟ್ ಬ್ಲೇರ್ ಅನ್ನು ಇತ್ತೀಚೆಗೆ ಅದರ ಸ್ಥಾನಮಾನದಿಂದ ತೆಗೆದುಹಾಕಲಾಯಿತು. ಒಟ್ಟು 200 ಪ್ರಮುಖ ಮತ್ತು ಪ್ರಮುಖವಲ್ಲದ ಬಂದರುಗಳು ಈ ಕೆಳಗಿನ ರಾಜ್ಯಗಳಲ್ಲಿವೆ: ಮಹಾರಾಷ್ಟ್ರ (53); ಗುಜರಾತ್ (40); ಕೇರಳ (20); ತಮಿಳುನಾಡು (15); ಕರ್ನಾಟಕ(10) ಮತ್ತು ಇತರರು (63).

ಪಶ್ಚಿಮ ತೀರದ ಬಂದರುಗಳು

ಕಾಂಡ್ಲಾ

ಇದು ಗುಜಾರಾತಿನ ಕಛ್ ಖಾರಿಯ ಶಿರೋಭಾಗದಲ್ಲಿದೆ.ಇದನ್ನು ದೀನ್ ದಯಾಳ್ ಉಪಾಧ್ಯಾಯ ಬಂದರು ಎನ್ನುವರು.ಇದು ಸ್ವತಂತ್ರ ಭಾರತದ ಮೊದಲ ಬಂದರು.

ಮುಂಬಯಿ

ಇದು ವಿಶಾಲ ಸ್ಥಳಾವಕಾಶವುಳ್ಳ, ಹಡಗು ತಂಗುವ ಬಂದರು. ಇದು ಮಹಾರಾಷ್ಟ್ರದಲ್ಲಿದ್ದು, ಇದನ್ನು "ಭಾರತದ ಹೆಬ್ಬಾಗಿಲು" ಎಂದು ಕರೆಯುತ್ತಾರೆ.

ಜವಹರಲಾಲ್ ನೆಹರು ಬಂದರು

ಹಿಂದೆ ಇದನ್ನು "ನವಾಶೇವ ಬಂದರು" ಎಂದು ಕರೆಯುತ್ತಿದ್ದರು.ಇದು ಮುಂಬಯಿ ನಗರದಿಂದ ೧೦ ಕಿ.ಮೀ.ದೂರದಲ್ಲಿರುವ ಎಲಿಫೆಂಟಾ ಗುಹೆಗಳಿಗೆ ಸಮೀಪದಲ್ಲಿದೆ. ಮುಂಬಯಿ ಬಂದರಿನ ಒತ್ತಡವನ್ನು ಕುಗ್ಗಿಸಲು ಈ ಬಂದರು ನಿರ್ಮಾಣಗೊಂಡಿದೆ.

ಮರ್ಮಗೋವ

ಇದು ಗೋವಾದ ಜುವಾರಿ ನದಿಯ ಹತ್ತಿರದಲ್ಲಿದೆ.ಅತೀ ಹೆಚ್ಚು ಕಬ್ಬಿಣ ರಪ್ತು ಮಾಡುವ ಬಂದರು

ನವಮಂಗಳೂರು

ಇದನ್ನು "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯಲಾಗಿದೆ.

ಕೊಚ್ಚಿ

ಇದು ಕೇರಳ ತೀರದಲ್ಲಿದೆ. ಇದನ್ನು 'ಅರಬ್ಬೀ ಸಮುದ್ರದ ರಾಣಿ'ಎಂದು ಕರೆಯಳಗಿದೆ.

ಪೂರ್ವ ತೀರದ ಬಂದರುಗಳು

ತುತುಕುಡಿ

ತಮಿಳುನಾಡಿನ ಆಗ್ನೇಯ ಭಾಗದಲ್ಲಿದೆ.

ಚೆನ್ನೈ

ಇದು ತಮಿಳುನಾಡಿನಲ್ಲಿರುವ ಹಳೆಯ ಬಂದರು. ಇದೊಂದು ಕೃತಕ ರೇವುವುಳ್ಳದ್ದು.

ಎನ್ನೋರ್

ಚೆನ್ನೈ ಬಂದರಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ಚೆನ್ನೈ ಬಂದರಿನಿಂದ ಉತ್ತರ ಭಾಗದಲ್ಲಿದೆ.ಇತ್ತೀಚಿಗೆ ಇದಕ್ಕೆ ಕಾಮರಾಜ ಎಂದು ನಾಮಕರಣ ಮಾಡಿದ್ದಾರೆ.

ಪಾರಾದೀಪ್

ಒಡಿಸ್ಸಾದ ಮಹಾನದಿ ಮುಖ ಭಾಗದಲ್ಲಿರುವ ಬಂದರು.

ವಿಶಾಖಪಟ್ಟಣ

ಇದು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿರುವ ಬಂದರು. ಭಾರತದ ಆಳವಾದ ಬಂದರು

ಹಾಲ್ಡಿಯ

ಇದು ಹೂಗ್ಲಿ ಮತ್ತು ಹಾಲ್ಡಿ ನದಿಗಳ ಸಂಗಮ ಸ್ಥಳದಲ್ಲಿ ನೆಲೆಸಿದೆ. ಕೊಲ್ಕತ್ತ ಬಂದರಿಗೆ ಪ್ರವೇಶಿಸಲಾಗದ ಕೆಲ ಬಂದರುಗಳು ಈ ಬಂದರಿಗೆ ಪ್ರವೇಶಿಸುತ್ತದೆ ಇದು ಪಶ್ಚಿಮ ಬಂಗಳದಲ್ಲಿ ಕ೦ಡು ಬರುತ್ತದೆ.

ಕೊಲ್ಕತ್ತ

ಹೂಗ್ಲಿ ನದಿಯ ಎಡ ದಂಡೆಯಲ್ಲಿದ್ದು, ಭಾರತದ ನದಿದಂಡೆಯ ಬಂದರಾಗಿದೆ. ಭಾರತದ ಎರಡನೇ ದೊಡ್ಡ ಬಂದರು. ಸಮುದ್ರಯಾನದಲ್ಲಿ ನಡೆಯುವ ವ್ಯಾಪಾರ ಕಾರ್ಯನಿರ್ವಹಿಸುವ ಆಗ್ನೇಯ ಏಷ್ಯಾದ ದೊಡ್ಡ ಬಂದರು

ಪೋರ್ಟ್ ಬ್ಲೇರ್

ಇದು ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪದಲ್ಲಿದೆ.

ಭಾರತದ ಪ್ರಮುಖ ಬಂದರು

ಕೆಳಗಿನ ಕೋಷ್ಟಕವು ಭಾರತದ ಪ್ರಮುಖ ಬಂದರುಗಳ ಬಗ್ಗೆ ವಿವರವಾದ ಡೇಟಾವನ್ನು ನೀಡುತ್ತದೆ (ಮೂಲ: ಭಾರತೀಯ ಬಂದರುಗಳ ಸಂಘ)

ಹೆಸರು ನಗರ ರಾಜ್ಯ ಸರಕು ನಿರ್ವಹಣೆ
(ಆರ್ಥಿಕ ವರ್ಷ2017-18)
ಕಂಟೈನರ್ ಸಂಚಾರ

(ಆರ್ಥಿಕ ವರ್ಷ 2017-18)

ಮಿಲಿಯನ್ ಟನ್ % ಹೆಚ್ಚಳ
(ಹಿಂದಿನ ಆರ್ಥಿಕ ವರ್ಷ )
'000 ಇಪ್ಪತ್ತು ಅಡಿ ಸಮಾನ ಘಟಕ % ಹೆಚ್ಚಳ
(ಹಿಂದಿನ ಆರ್ಥಿಕ ವರ್ಷ)
ಮುಂದ್ರಾ ಬಂದರು ಮುಂದ್ರಾ ಗುಜರಾತ್ 150
ದೀನದಯಾಳ್ ಪೋರ್ಟ್ ಟ್ರಸ್ಟ್ ಕಾಂಡ್ಲಾ ಗುಜರಾತ್ 110.10 4.42% ↑ 117 95.73% ↑
ಪಾರದೀಪ ಬಂದರು ಪಾರದೀಪ್ ಒಡಿಶಾ 102.01 14.68% ↑ 7 71.43% ↑
ಜವಾಹರಲಾಲ್ ನೆಹರು ಬಂದರು ನವಿ ಮುಂಬೈ ಮಹಾರಾಷ್ಟ್ರ 66.00 6.20% ↑ 4,833 6.89% ↑
ವಿಶಾಖಪಟ್ಟಣಂ ಬಂದರು ವಿಶಾಖಪಟ್ಟಣ ಆಂಧ್ರಪ್ರದೇಶ 63.54 4.12% ↑ 389 5.66% ↑
ಮುಂಬೈ ಬಂದರು ಮುಂಬೈ ಮಹಾರಾಷ್ಟ್ರ 62.83 -0.35% ↓ 42 -2.38% ↓
ಶ್ಯಾಮ ಪ್ರಸಾದ್ ಮುಖರ್ಜಿ ಪೋರ್ಟ್ ಟ್ರಸ್ಟ್ ಕೋಲ್ಕತ್ತಾ ಪಶ್ಚಿಮ ಬಂಗಾಳ 57.89 13.61% ↑ 796 3.02% ↑
ಚೆನ್ನೈ ಪೋರ್ಟ್ ಟ್ರಸ್ಟ್ ಚೆನ್ನೈ ತಮಿಳುನಾಡು 51.88 3.32% ↑ 1,549 3.49% ↑
ನವ ಮಂಗಳೂರು ಬಂದರು ಕರ್ನಾಟಕ 42.06 5.28% ↑ 115 17.39% ↑
ವಿ.ಓ. ಚಿದಂಬರನಾರ್ ಬಂದರು ಪ್ರಾಧಿಕಾರ ತೂತುಕ್ಕುಡಿ ತಮಿಳುನಾಡು 36.58 -4.91% ↓ 698 8.02% ↑
ಕೊಚ್ಚಿ ಬಂದರು ಕೊಚ್ಚಿ ಕೇರಳ 32.02 16.52% ↑ 735 11.69% ↑
ಕಾಮರಾಜರ್ ಬಂದರು ಚೆನ್ನೈ ತಮಿಳುನಾಡು 30.45 1.42% ↑ 3 100.00% ↑
ಮರ್ಮಗೋವ ಬಂದರು ಪ್ರಾಧಿಕಾರ ಮರ್ಮಗೋವ ಗೋವಾ 26.90 -18.94% ↓ 32 6.25% ↑
ಎಲ್ಲಾ ಬಂದರುಗಳು ಭಾರತ 679.37 4.77% ↑ 9,138 7.62% ↑

ಉಲ್ಲೇಖಗಳು

Tags:

ಭಾರತದ ಬಂದರುಗಳು ಪಶ್ಚಿಮ ತೀರದ ಬಂದರುಗಳುಭಾರತದ ಬಂದರುಗಳು ಪೂರ್ವ ತೀರದ ಬಂದರುಗಳುಭಾರತದ ಬಂದರುಗಳು ಭಾರತದ ಪ್ರಮುಖ ಬಂದರುಭಾರತದ ಬಂದರುಗಳು ಉಲ್ಲೇಖಗಳುಭಾರತದ ಬಂದರುಗಳುಬಂದರು

🔥 Trending searches on Wiki ಕನ್ನಡ:

ಧಾರವಾಡಜಲ ಮಾಲಿನ್ಯವಿದ್ಯುತ್ ಮಂಡಲಗಳುಬಾನು ಮುಷ್ತಾಕ್ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆರಾಯಚೂರು ಜಿಲ್ಲೆಭಾರತದ ಇತಿಹಾಸಕನ್ನಡದಲ್ಲಿ ಪ್ರವಾಸ ಸಾಹಿತ್ಯಅಲಿಪ್ತ ಚಳುವಳಿಗಣೇಶ್ (ನಟ)ನಾಗರಹಾವು (ಚಲನಚಿತ್ರ ೧೯೭೨)ಬಾಲ್ಯ ವಿವಾಹಮೂರನೇ ಮೈಸೂರು ಯುದ್ಧಕರ್ನಾಟಕದ ಇತಿಹಾಸಮೊಗಳ್ಳಿ ಗಣೇಶಸರಸ್ವತಿಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ಸ್ವಾಮಿ ವಿವೇಕಾನಂದತಾಜ್ ಮಹಲ್ಛಂದಸ್ಸುಕಂಪ್ಯೂಟರ್ಸುಧಾ ಮೂರ್ತಿಮೊದಲನೆಯ ಕೆಂಪೇಗೌಡಕನ್ನಡದಲ್ಲಿ ಅಂಕಣ ಸಾಹಿತ್ಯಬಾರ್ಲಿಭಾರತದ ಸಂಯುಕ್ತ ಪದ್ಧತಿವಿನಾಯಕ ಕೃಷ್ಣ ಗೋಕಾಕಸಂಸ್ಕೃತಿವಿಮೆಭ್ರಷ್ಟಾಚಾರಹಳೇಬೀಡುಸಾಮವೇದಪ್ರಾಚೀನ ಈಜಿಪ್ಟ್‌ವಿಜಯಪುರಒಂದನೆಯ ಮಹಾಯುದ್ಧಭಾರತದಲ್ಲಿ ಬಡತನವಾಲಿಬಾಲ್ಅಕ್ಷಾಂಶಹಳೆಗನ್ನಡಭಾರತೀಯ ಕಾವ್ಯ ಮೀಮಾಂಸೆಕಲ್ಯಾಣ ಕರ್ನಾಟಕಕರ್ನಾಟಕದ ಮುಖ್ಯಮಂತ್ರಿಗಳುಕಿರುಧಾನ್ಯಗಳುಕನ್ನಡ ಸಾಹಿತ್ಯ ಸಮ್ಮೇಳನಹಾ.ಮಾ.ನಾಯಕಕಾಡ್ಗಿಚ್ಚುಮೂಢನಂಬಿಕೆಗಳುಶಂಕರ್ ನಾಗ್ಅರ್ಥಶಾಸ್ತ್ರಇರುವುದೊಂದೇ ಭೂಮಿಸಿದ್ಧರಾಮವೈದೇಹಿಭಾರತದ ಉಪ ರಾಷ್ಟ್ರಪತಿಭಾರತದಲ್ಲಿ ಪರಮಾಣು ವಿದ್ಯುತ್ಕುಮಾರವ್ಯಾಸಕುರುಬಸಾರಾ ಅಬೂಬಕ್ಕರ್ದುರ್ಯೋಧನಗಾಂಧಾರಪುರಾತತ್ತ್ವ ಶಾಸ್ತ್ರಮಂತ್ರಾಲಯಧ್ವನಿಶಾಸ್ತ್ರಆವಕಾಡೊಗೌರಿ ಹಬ್ಬಕರ್ನಾಟಕದ ನದಿಗಳುಸೂರ್ಯ (ದೇವ)ಲೋಕಸಭೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಸಾವಿತ್ರಿಬಾಯಿ ಫುಲೆಹೊಸಗನ್ನಡಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಕೆರೆಗೆ ಹಾರ ಕಥನಗೀತೆಗೋಲ ಗುಮ್ಮಟನದಿಸಿದ್ದಲಿಂಗಯ್ಯ (ಕವಿ)ಜಿ.ಪಿ.ರಾಜರತ್ನಂಪಂಚಾಂಗಭಾರತದ ಜನಸಂಖ್ಯೆಯ ಬೆಳವಣಿಗೆಚಂದ್ರ🡆 More