ಬಿಸಿಲು

ಬಿಸಿಲು ಎಂದರೆ ಸೂರ್ಯನು ಹೊರಸೂಸಿದ ವಿದ್ಯುತ್ಕಾಂತೀಯ ವಿಕಿರಣದ ಒಂದು ಭಾಗ, ವಿಶೇಷವಾಗಿ ಅತಿಗೆಂಪು, ಗೋಚರ ಮತ್ತು ನೇರಳಾತೀತ ಬೆಳಕು.

ಭೂಮಿಯ ಮೇಲೆ, ಬಿಸಿಲು ವಾತಾವರಣದ ಮೂಲಕ ಸೋಸಲ್ಪಡುತ್ತದೆ, ಮತ್ತು ಸೂರ್ಯನು ದಿಗಂತದ ಮೇಲಿದ್ದಾಗ ಸೂರ್ಯಪ್ರಕಾಶವಾಗಿ ಪ್ರಕಟವಾಗುತ್ತದೆ. ನೇರ ಸೌರ ವಿಕಿರಣವು ಮೋಡಗಳಿಂದ ಪ್ರತಿಬಂಧಗೊಳ್ಳದಿದ್ದಾಗ, ಅದು ಬಿಸಿಲಾಗಿ ಅನುಭವಿಸಲ್ಪಡುತ್ತದೆ. ಬಿಸಿಲು ಎಂದರೆ ಪ್ರಕಾಶಮಾನ ಬೆಳಕು ಮತ್ತು ವಿಕಿರಣ ಶಾಖದ ಸಂಯೋಜನೆ. ಮೋಡಗಳು ಇದನ್ನು ಪ್ರತಿಬಂಧಿಸಿದಾಗ ಅಥವಾ ಇದು ಇತರ ವಸ್ತುಗಳಿಂದ ಪ್ರತಿಫಲಿತವಾದಾಗ ಚದುರಿದ ಬೆಳಕಾಗಿ ಅನುಭವಿಸಲ್ಪಡುತ್ತದೆ. ಒಂದು ಪ್ರದೇಶವು ಸೂರ್ಯನಿಂದ ಚದರ ಮೀಟರ್‌ಗೆ ಕನಿಷ್ಠಪಕ್ಷ ೧೨೦ ವಾಟ್ ನೇರ ಉಜ್ಜ್ವಲತೆಯನ್ನು ಪಡೆಯುವ ಸಂಚಿತ ಸಮಯ ಎಂಬ ಅರ್ಥಸೂಚಿಸಲು ಬಿಸಿಲಿನ ಅವಧಿ ಪದವನ್ನು ವಿಶ್ವ ಪವನಶಾಸ್ತ್ರ ಸಂಸ್ಥೆಯು ಬಳಸುತ್ತದೆ.

ಬಿಸಿಲು
ಮೋಡಗಳ ಮೂಲಕ ಬಿಸಿಲು ಬೀಳುತ್ತಿರುವುದು

ಬಿಸಿಲಿನಲ್ಲಿನ ನೇರಳಾತೀತ ವಿಕಿರಣವು ಸಕಾರಾತ್ಮಕ ಮತ್ತು ನಕಾರಾತ್ಮಕ ಆರೋಗ್ಯ ಪರಿಣಾಮಗಳನ್ನು ಹೊಂದಿದೆ, ಏಕೆಂದರೆ ಇದು ವಿಟಮಿನ್ D3 ಮತ್ತು ಒಂದು ವಿಕೃತಿಕಾರಿಯ ಪ್ರಧಾನ ಮೂಲವಾಗಿದೆ. ಸೂರ್ಯನ ಮೇಲ್ಮೈಯಿಂದ ಭೂಮಿಯನ್ನು ತಲುಪಲು ಬಿಸಿಲು ಸುಮಾರು ೮.೩ ನಿಮಿಷ ತೆಗೆದುಕೊಳ್ಳುತ್ತದೆ. ಸೂರ್ಯನ ಕೇಂದ್ರದಿಂದ ಆರಂಭಗೊಳ್ಳುವ ಮತ್ತು ಆವೇಶಹೊಂದಿದ ಕಣವು ಎದುರಾದ ಪ್ರತಿ ಬಾರಿಯೂ ದಿಕ್ಕು ಬದಲಾಯಿಸುವ ಒಂದು ಫ಼ೋಟಾನ್ ಮೇಲ್ಮೈ ಮುಟ್ಟಲು ೧೦,೦೦೦ ರಿಂದ ೧೭೦,೦೦೦ ವರ್ಷಗಳು ತೆಗೆದುಕೊಳ್ಳುವುದು. ಸಸ್ಯಗಳು ಮತ್ತು ಇತರ ಸ್ವಪೋಷಕ ಜೀವಿಗಳು ಬೆಳಕಿನ ಶಕ್ತಿಯನ್ನು ಜೀವಿಗಳ ಚಟುವಟಿಕೆಗಳಿಗೆ ಬಲ ಒದಗಿಸಲು ಬಳಸಲ್ಪಡಬಹುದಾದ ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸಲು ಬಳಸುವ ಪ್ರಕ್ರಿಯೆಯಾದ ದ್ಯುತಿಸಂಶ್ಲೇಷಣೆಯಲ್ಲಿ ಬಿಸಿಲು ಒಂದು ಮುಖ್ಯ ಅಂಶವಾಗಿದೆ.

ಸೂರ್ಯನ ವಿಕಿರಣದ ವರ್ಣಪಟಲವು ಕೃಷ್ಣಕಾಯದ ವರ್ಣಪಟಲಕ್ಕೆ ಹತ್ತಿರವಾಗಿದೆ ಮತ್ತು ಸುಮಾರು ೫,೮೦೦ ಕೆಲ್ವಿನ್‍ನಷ್ಟು ಉಷ್ಣಾಂಶ ಹೊಂದಿದೆ. ಸೂರ್ಯವು ವಿದ್ಯುತ್ಕಾಂತೀಯ ವರ್ಣಪಟಲದ ಬಹುತೇಕ ಉದ್ದಕ್ಕೆ ವಿದ್ಯುತ್ಕಾಂತೀಯ ವಿಕಿರಣವನ್ನು ಹೊರಸೂಸುತ್ತದೆ. ಬೀಜಸಮ್ಮಿಳನ ಪ್ರಕ್ರಿಯೆಯ ಪರಿಣಾಮವಾಗಿ ಸೂರ್ಯವು ಗಾಮಾ ಕಿರಣಗಳನ್ನು ಉತ್ಪತ್ತಿ ಮಾಡುತ್ತದಾದರೂ, ಆಂತರಿಕ ಹೀರಿಕೆ ಮತ್ತು ಉಷ್ಣ ಪ್ರಕ್ರಿಯೆಯು ಅವು ಸೂರ್ಯನ ಮೇಲ್ಮೈಯನ್ನು ತಲುಪುವಷ್ಟರಲ್ಲಿ ಈ ಅತಿ ಹೆಚ್ಚು ಶಕ್ತಿಯ ಫ಼ೋಟಾನ್‍ಗಳನ್ನು ಕಡಿಮೆ ಶಕ್ತಿಯ ಫ಼ೋಟಾನ್‍ಗಳಾಗಿ ಪರಿವರ್ತಿಸುತ್ತವೆ ಮತ್ತು ಅವು ಬಾಹ್ಯಾಕಾಶದಲ್ಲಿ ಹೊರಸೂಸಲ್ಪಡುತ್ತವೆ.

ಬೆಳಕಿನಲ್ಲಿಯ ಅತಿನೇರಿಳೆವಿಭಾಗ (ಅಲ್ಟ್ರಾವಯೊಲೆಟ್) ಚರ್ಮದ ಮೇಲೆ ಬಿದ್ದಾಗ ರಕ್ತದಲ್ಲಿ ಜೀವಸತ್ತ್ವ ಡಿ ಸಂಶ್ಲೇಷಿತವಾಗುತ್ತದೆ. ಆದರೆ ಸೂರ್ಯನನ್ನು ನೇರವಾಗಿ ದಿಟ್ಟಿಸಿದಾಗ, ಅದೂ ಪೂರ್ಣಸೂರ್ಯಗ್ರಹಣ ಸಂದರ್ಭದಲ್ಲಿ ಹೀಗೆ ಮಾಡಲು ಸಾಕಷ್ಟು ಆಕರ್ಷಣೆ ಇದ್ದಾಗ, ಕಣ್ಣುಗಳು ಕುರುಡಾಗುವ ಅಪಾಯವಿದೆ. ಬಿಸಿಲಿಗೆ ಮೈಯೊಡ್ಡಿದಾಗ ಚರ್ಮ ಕೆಂಪಾಗಿ ಕ್ರಮೇಣ ಕಂದು ಬಣ್ಣ ತಳೆಯುವುದು. ಮತ್ತೆ ಸುಟ್ಟಗಾಯ, ಹೊಪ್ಪಳೆ, ಬಿಸಿಲುಗಂದೆ ಮುಂತಾದವು ತಲೆದೋರುತ್ತವೆ. ಮುಂದೆ ಕ್ಯಾನ್ಸರ್ ರೋಗವೂ ತಾಗಬಹುದು.

ಉಲ್ಲೇಖಗಳು

ಬಿಸಿಲು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಕಿರಣ ಮತ್ತು ಆರೋಗ್ಯ

Tags:

ಅತಿಗೆಂಪುಉಷ್ಣತೆಕ್ಷಿತಿಜನೇರಳಾತೀತಬೆಳಕುಭೂಮಿಭೂಮಿಯ ವಾತಾವರಣಮೋಡವಿಕಿರಣವಿದ್ಯುತ್ಕಾಂತ ತರಂಗಸೂರ್ಯ

🔥 Trending searches on Wiki ಕನ್ನಡ:

ಹನುಮಂತಸ್ವಾಮಿ ರಮಾನಂದ ತೀರ್ಥಚಿಕ್ಕಮಗಳೂರುಜಾಗತಿಕ ತಾಪಮಾನ ಏರಿಕೆಮಳೆವಿನಾಯಕ ಕೃಷ್ಣ ಗೋಕಾಕನಾಡ ಗೀತೆಪೋಲಿಸ್ದಲಿತಕೇದರನಾಥ ದೇವಾಲಯಕೃಷ್ಣರಾಜಸಾಗರಜಗದೀಶ್ ಶೆಟ್ಟರ್ವೆಂಕಟೇಶ್ವರ ದೇವಸ್ಥಾನಇಂಡಿಯನ್‌ ಎಕ್ಸ್‌ಪ್ರೆಸ್‌ಹಂಪೆಹೆಳವನಕಟ್ಟೆ ಗಿರಿಯಮ್ಮಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ದ್ವಾರಕೀಶ್ಬೌದ್ಧ ಧರ್ಮಕೈಗಾರಿಕಾ ಕ್ರಾಂತಿಪುರಂದರದಾಸಕರ್ನಾಟಕಚದುರಂಗಸಿಂಹಅನ್ವಿತಾ ಸಾಗರ್ (ನಟಿ)ಕೃಷ್ಣ ಮಠಸಜ್ಜೆಗುರು (ಗ್ರಹ)ನಳಂದರಾಷ್ಟ್ರಕವಿವಿಶ್ವ ಕನ್ನಡ ಸಮ್ಮೇಳನಅಶ್ವಗಂಧಾಅಳಿಲುಕನ್ನಡ ಸಾಹಿತ್ಯ ಪ್ರಕಾರಗಳುಪ್ರಜಾಪ್ರಭುತ್ವದ ಲಕ್ಷಣಗಳುಗೋಡಂಬಿಆಭರಣಗಳುಸೌರಮಂಡಲಕನ್ನಡ ವಿಶ್ವವಿದ್ಯಾಲಯಕುವೆಂಪುಕಾರ್ಮಿಕರ ದಿನಾಚರಣೆನಕ್ಷತ್ರಕೃಷಿಯೋಗವಾಹವಿರಾಟ್ ಕೊಹ್ಲಿಭಾವಗೀತೆರಾಸಾಯನಿಕ ಗೊಬ್ಬರಕೊತ್ತುಂಬರಿಪ್ರೀತಿನಾಲಿಗೆಬೆರಳ್ಗೆ ಕೊರಳ್ಬಾರ್ಲಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವ್ಯಕ್ತಿತ್ವಕರ್ನಾಟಕ ಐತಿಹಾಸಿಕ ಸ್ಥಳಗಳುಸಂಸ್ಕೃತ ಸಂಧಿಸ್ಫಿಂಕ್ಸ್‌ (ಸಿಂಹನಾರಿ)ಕ್ಯುಆರ್ ಕೋಡ್ದಾಸವಾಳತಿಪಟೂರುಭಾರತದಲ್ಲಿ ಮೀಸಲಾತಿಮೈಗ್ರೇನ್‌ (ಅರೆತಲೆ ನೋವು)ಕುರು ವಂಶದ್ವಿರುಕ್ತಿಭೋವಿಪಶ್ಚಿಮ ಘಟ್ಟಗಳುಅಂತರರಾಷ್ಟ್ರೀಯ ಹಣಕಾಸು ಸಂಸ್ಥೆದೆಹಲಿಯ ಇತಿಹಾಸಅವತಾರಕೇದಾರನಾಥಕನ್ನಡ ಸಾಹಿತ್ಯ ಪರಿಷತ್ತುಮಂತ್ರಾಲಯಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುಜನಪದ ಆಭರಣಗಳುಕುಟುಂಬಸಂಗೊಳ್ಳಿ ರಾಯಣ್ಣಅರ್ಥ ವ್ಯತ್ಯಾಸ🡆 More