ಬೆಂಗಳೂರು ದೂರದರ್ಶನ ಕೇಂದ್ರ

ದೂರದರ್ಶನ ಕೇಂದ್ರ - ಬೆಂಗಳೂರು: ಭಾರತದ ಏಕೈಕ ಸಾರ್ವಜನಿಕ ಕಿರುತೆರೆ ಜಾಲವಾದ ದೂರದರ್ಶನದ ಬೆಂಗಳೂರು ಕೇಂದ್ರ.

ದೂರದರ್ಶನ ಕೇಂದ್ರ - ಬೆಂಗಳೂರು

ಇತಿಹಾಸ

ಸ್ಥಾಪನೆ

೧೯೮೨ರಲ್ಲಿ ದೂರದರ್ಶನ ರಾಷ್ಟ್ರೀಯ ವಾಹಿನಿಯ ಪ್ರಸಾರ ಕೇಂದ್ರವಾಗಿ ಸ್ಥಾಪನೆಗೊಂಡ ಬೆಂಗಳೂರು ದೂರದರ್ಶನ ಕೇಂದ್ರವು ಶಂಕರ್ ಗುರು ಚಲನಚಿತ್ರದ ಪ್ರಸಾರದೊಡನೆ ಚಾಲನೆಗೊಂಡಿತು. ನಂತರ ೧೯೮೪ರಲ್ಲಿ ಕನ್ನಡ ಕಾರ್ಯಕ್ರಮಗಳ ಪ್ರಸಾರದೊಡನೆ ಸ್ವತಂತ್ರವಾಹಿನಿ ಯಾಯಿತು.

ಪ್ರಾರಂಭದ ಹಂತ

ಪ್ರತಿನಿತ್ಯ ಸಂಜೆ ಕೆಲವು ಗಂಟೆಗಳ ಕನ್ನಡ ಕಾರ್ಯಕ್ರಮಗಳ ಪ್ರಸಾರವಾಗಲು ತೊಡಗಿದವು ಹಾಗು ಹಂಸಗೀತೆ ಚಲನಚಿತ್ರದ ಪ್ರಸಾರದೊಡನೆ ವಾರಕ್ಕೊಮ್ಮೆ ಕನ್ನಡ ಚಲನಚಿತ್ರದ ಪ್ರಸಾರವಾಗಲು ಪ್ರಾರಂಭವಾಯಿತು. ಕನ್ನಡ ವಾರ್ತೆಗಳು, ಚಲನಚಿತ್ರ ಗೀತೆಗಳ ಕಾರ್ಯಕ್ರಮವಾದ ಚಿತ್ರಮಂಜರಿ, ನಾಟಕ, ಶಾಸ್ತ್ರೀಯ ಸಂಗೀತ/ಭಾವಗೀತೆ, ಶೈಕ್ಷಣಿಕ ಕಾರ್ಯಕ್ರಮಗಳು ಬಿತ್ತರಗೊಳ್ಳಲು ಶುರುವಾಯಿತು.

ಬೆಳವಣಿಗೆ

ಸಿಹಿ ಕಹಿ ಬೆಂಗಳೂರು ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಧಾರಾವಾಹಿ. ಸಿಹಿ ಕಹಿಯ ಯಶಸ್ಸಿನ ಹಿಂದೆಯೇ ಅನೇಕ ಧಾರಾವಾಹಿಗಳ ನಿರ್ಮಾಣವಾದವು, ಹಾಗೆಯೇ ಕಾರ್ಯಕ್ರಮಗಳನ್ನು ಪ್ರಾಯೋಜಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ೯೦ರ ದಶಕದ ಮಧ್ಯದಲ್ಲಿ ಡಿ.ಡಿ.೯ ಎಂಬ ಇನ್ನೊಂದು ವಾಹಿನಿಯೂ ಪ್ರಾರಂಭವಾಯಿತು.

ಇಂದಿನ ಬೆಂಗಳೂರು ದೂರದರ್ಶನ ಕೇಂದ್ರ

ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಮಧ್ಯಾಹ್ನ ೩ರಿಂದ ರಾತ್ರಿ ೮ರವರೆಗೆ ಪ್ರಸಾರದಲ್ಲಿದ್ದು, ನಂತರದ ಸಮಯಗಳಲ್ಲಿ ದೂರದರ್ಶನ ರಾಷ್ಟ್ರೀಯ ಜಾಲದ ಕಾರ್ಯಕ್ರಮಗಳ ಪ್ರಸಾರವನ್ನು ಮುಂದುವರೆಸುತ್ತದೆ. ಡಿ.ಡಿ.೯ ವಾಹಿನಿಯು ೧೯೯೯ರಲ್ಲಿ ಚಂದನ ಎಂಬ ಹೆಸರಿಂದ ಅಧಿಕ ಅವಧಿಯ ಪ್ರಸಾರವನ್ನು ಮುಂದುವರೆಸಿ, ಸದ್ಯಕ್ಕೆ ಬೆಳಗ್ಗೆ ೫ರಿಂದ ರಾತ್ರಿ ೧೦ರವರೆಗೆ ಪ್ರಸಾರದಲ್ಲಿರುವ ವಾಹಿನಿಯಾಗಿದೆ.

ಧಾರಾವಾಹಿಗಳು

ಪ್ರಸಾರದಲ್ಲಿರುವ ದೈನಂದಿನ ಧಾರಾವಾಹಿಗಳು

  • ಕಂಕಣ
  • ಕಿರಣ
  • ಶಿವ
  • ಕಾದಂಬರಿ
  • ವಿಶ್ವರೂಪ
  • ಬಿಸಿಲು ಕುದುರೆ (ಹಳೆಯ ಧಾರಾವಾಹಿಯ ಮರುಪ್ರಸಾರ)
  • ಭಗೀರಥ
  • ಗಲಿ ಬಿಲಿ ಸಂಸಾರ

ಪ್ರಸಾರದಲ್ಲಿರುವ ವಾರಾಂತ್ಯದ ಧಾರಾವಾಹಿಗಳು

  • ವಿಕ್ರಮ ಮತ್ತು ಬೇತಾಳ

ಹಳೆಯ ಧಾರಾವಾಹಿಗಳು

  • ಅಜಿತನ ಸಾಹಸಗಳು
  • ಆಸೆಗಳು ನೂರಾರು
  • ಕಂಡಕ್ಟರ್ ಕರಿಯಪ್ಪ
  • ಕಟ್ಟೆ
  • ಕೇಳಿದಿರಾ ?
  • ಕ್ರೇಜಿ ಕರ್ನಲ್
  • ಗುಡ್ಡದ ಭೂತ
  • ತಾಳೋ ನೋಡೋಣ
  • ತಿರುಗುಬಾಣ
  • ನಮ್ಮ ನಮ್ಮಲ್ಲಿ
  • ಬದುಕು ಜಟಕಾಬಂಡಿ
  • ಬಿಸಿಲು ಕುದುರೆ
  • ಮಾಯಾಮೃಗ
  • ರೀ ಮರೀಬೇಡಿ
  • ವರ ಬೇಕಾಗಿದೆ
  • ಶ್ರೀಮಾನ್ ಶ್ರೀ ಸಾಮಾನ್ಯ
  • ಸಿಹಿ ಕಹಿ

ಕಾರ್ಯಕ್ರಮಗಳು

ಪ್ರಸಾರದಲ್ಲಿರುವ ಕಾರ್ಯಕ್ರಮಗಳು

  • ವಾರ್ತೆಗಳು
  • ಚಿತ್ರಮಂಜರಿ
  • ಸೊಡರ ಸಿರಿ
  • ತಾರೆಗಳ ತೋಟದಿಂದ
  • ಕೃಷಿ ದರ್ಶನ
  • ಗ್ರಾಮೀಣ ಭಾರತ
  • ಹೊಸ ಮಿಂಚು
  • ಸತ್ಯ ದರ್ಶನ
  • ಮಧುರ ಮಧುರವೀ ಮಂಜುಳಗಾನ
  • ಥಟ್ ಅಂತ ಹೇಳಿ!

ಹಳೆಯ ಕಾರ್ಯಕ್ರಮಗಳು

ಹೊರಗಿನ ಸಂಪರ್ಕ

Tags:

ಬೆಂಗಳೂರು ದೂರದರ್ಶನ ಕೇಂದ್ರ ದೂರದರ್ಶನ ಕೇಂದ್ರ - ಬೆಂಗಳೂರುಬೆಂಗಳೂರು ದೂರದರ್ಶನ ಕೇಂದ್ರ ಇತಿಹಾಸಬೆಂಗಳೂರು ದೂರದರ್ಶನ ಕೇಂದ್ರ ಧಾರಾವಾಹಿಗಳುಬೆಂಗಳೂರು ದೂರದರ್ಶನ ಕೇಂದ್ರ ಕಾರ್ಯಕ್ರಮಗಳುಬೆಂಗಳೂರು ದೂರದರ್ಶನ ಕೇಂದ್ರ ಹೊರಗಿನ ಸಂಪರ್ಕಬೆಂಗಳೂರು ದೂರದರ್ಶನ ಕೇಂದ್ರದೂರದರ್ಶನ (ಕಿರುತೆರೆ ವಾಹಿನಿ ಜಾಲ)

🔥 Trending searches on Wiki ಕನ್ನಡ:

ಕಲಬುರಗಿಪೊನ್ನಮಾನನಷ್ಟಜೈಮಿನಿ ಭಾರತಮೌರ್ಯ ಸಾಮ್ರಾಜ್ಯಜೀವನಚರಿತ್ರೆಗುಣ ಸಂಧಿಕನ್ನಡ ಸಂಧಿರಾಷ್ಟ್ರೀಯ ಶಿಕ್ಷಣ ನೀತಿನಿರ್ವಹಣೆ, ಕಲೆ ಮತ್ತು ವಿಜ್ಞಾನಬಾಲಕಾರ್ಮಿಕಸೌರಮಂಡಲಡಾ ಬ್ರೋಇಮ್ಮಡಿ ಪುಲಕೇಶಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಲೋಕಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಇಂಡೋನೇಷ್ಯಾನೆಹರು ವರದಿಅಜಂತಾಭಾರತದ ಬ್ಯಾಂಕುಗಳ ಪಟ್ಟಿಸಂಧಿಪರಿಸರ ವ್ಯವಸ್ಥೆಬ್ಲಾಗ್ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಸೂರ್ಯ ಗ್ರಹಣಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಗುಪ್ತಗಾಮಿನಿ (ಧಾರಾವಾಹಿ)ಕವನಭಾರತದ ಆರ್ಥಿಕ ವ್ಯವಸ್ಥೆಏಡ್ಸ್ ರೋಗಆರ್ಯಭಟ (ಗಣಿತಜ್ಞ)ಕರ್ನಾಟಕದ ಇತಿಹಾಸಬೆಳಗಾವಿರಸ(ಕಾವ್ಯಮೀಮಾಂಸೆ)ಉಪನಯನತಾಪಮಾನಬೇವುಸಂಕಷ್ಟ ಚತುರ್ಥಿಮಯೂರಶರ್ಮಕೋಲಾರ ಚಿನ್ನದ ಗಣಿ (ಪ್ರದೇಶ)ದಲಿತನಯಾಗರ ಜಲಪಾತಕ್ಯಾರಿಕೇಚರುಗಳು, ಕಾರ್ಟೂನುಗಳುಸುಧಾ ಮೂರ್ತಿಸಮಾಜ ವಿಜ್ಞಾನಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನವಿಶ್ವ ಮಹಿಳೆಯರ ದಿನದುಂಬಿಪ್ರಧಾನ ಖಿನ್ನತೆಯ ಅಸ್ವಸ್ಥತೆತ್ರಿಕೋನಮಿತಿಯ ಇತಿಹಾಸಗುರುನಿರ್ಮಲಾ ಸೀತಾರಾಮನ್ಸೂಳೆಕೆರೆ (ಶಾಂತಿ ಸಾಗರ)ಟೊಮೇಟೊಸೀತೆದಿ ಪೆಂಟಗನ್ಇಂದಿರಾ ಗಾಂಧಿಹಯಗ್ರೀವಮೊದಲನೇ ಕೃಷ್ಣಈಸ್ಟರ್ಅಭಿಮನ್ಯುನಿರ್ವಹಣೆ ಪರಿಚಯರಷ್ಯಾಬಾಸ್ಟನ್ಭಾರತೀಯ ನೌಕಾಪಡೆನರೇಂದ್ರ ಮೋದಿಕುವೆಂಪುಸಂವತ್ಸರಗಳುಸರ್ವಜ್ಞದಾಸ ಸಾಹಿತ್ಯಆದಿಪುರಾಣಶಾಲೆಹೋಳಿಗೋಳ🡆 More