ಗಸಗಸೆ

ಗಸಗಸೆಪ್ರಾಚೀನ ಕಾಲದಿಂದಲೂ ಬೆಳೆಸಲ್ಪಡುತ್ತಿರುವ ಒಂದು ಸಸ್ಯ.

ಗಸಗಸೆ
ಗಸಗಸೆ
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಮ್ಯಾಗ್ನೋಲಿಯೋಪ್ಸಿಡ
ಗಣ:
ಪಾಪವೆರಲ್ಸ್
ಕುಟುಂಬ:
ಪಾಪವೆರೆಸಿಯೆ(Papaveraceae)
ಕುಲ:
ಪಾಪವೆರ್
ಪ್ರಜಾತಿ:
P. rhoeas
Binomial name
ಪಾಪವೆರ್ ರೊಯೆಸ್
L.

ಕಳೆಯ ಪಟ್ಟದಿಂದ ಬೆಳೆಯ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ. ಬಹಳ ಹಿಂದಿನ ಕಾಲದಿಂದ ಮೆಡಿಟರೇನಿಯನ್ ಪ್ರದೇಶಗಳು, ಮಧ್ಯ ಪ್ರಾಚ್ಯ, ಭಾರತ, ರಷ್ಯಾ ದೇಶಗಳಲ್ಲಿ ಇದರ ವ್ಯವಸಾಯ ಇದೆ.

ಇತಿಹಾಸ

ಪಶ್ಚಿಮ ಯುರೋಪ್ ದೇಶಗಳಲ್ಲಿ ಇದನ್ನು ಗಸಗಸೆ ಬೀಜಗಳಿಗಾಗಿಯೂ ಪೂರ್ವದೇಶಗಳಲ್ಲಿ ಅದರಲ್ಲೂ ಭಾರತ, ಇರಾನ್, ಟರ್ಕಿಗಳಲ್ಲಿ ಆಫೀಮಿಗಾಗಿಯೂ ಹೆಚ್ಚಾಗಿ ಬೆಳೆಸಲಾಗುತ್ತಿದೆ. ಭಾರತದಲ್ಲಿ ಇದನ್ನು ಬೀಜ ಮತ್ತು ಅಫೀಮಿಗಾಗಿ ಸುಮಾರು 16ನೆಯ ಶತಮಾನ ದಿಂದ ಬೆಳೆಸುತ್ತಿದ್ದಾರೆ. ಅಫೀಮಿನ ಬೇಸಾಯ, ಮಾರಾಟ, ಬಳಕೆಗಳ ಬಗ್ಗೆ ಕಟ್ಟುನಿಟ್ಟಾದ ನಿಬಂಧನೆಗಳಿವೆ. ಸರ್ಕಾರದ ಅನುಮತಿ ಇಲ್ಲದೆ ಗಸಗಸೆ ಗಿಡವನ್ನು ಬೆಳೆಸಲಾಗದು. ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ತಾನ, ಬಿಹಾರಗಳಲ್ಲಿ ಹೆಚ್ಚಾಗಿಯೂ ಕಾಶ್ಮೀರದಲ್ಲಿ ಅಲ್ಪಸ್ವಲ್ಪವಾಗಿಯೂ ಇದನ್ನು ಬೆಳೆಸುತ್ತಾರೆ. ಹಿಮಾಚಲ ಪ್ರದೇಶದಲ್ಲಿ ಇದರ ವ್ಯವಸಾಯವನ್ನು ನಿಷೇಧಿಸಲಾಗಿದೆ. ಗಸಗಸೆ ಗಿಡದ ಬೇಸಾಯ, ಇದರಿಂದ ಅಫೀಮನ್ನು ತೆಗೆಯುವ ವಿಧಾನ ಮತ್ತು ಅಫೀಮಿನ ಬಳಕೆಗಳನ್ನು ಕುರಿತ ವಿವರಗಳಿಗೆ ಅಫೀಮು.

ಗಸಗಸೆ 
The three stages in a common poppy flower: bud, flower and capsule

ಸಸ್ಯಶಾಸ್ತ್ರೀಯ ವರ್ಗೀಕರಣ

ಪಾಪವೆರೆಸಿಯೆ ( Papaveraceae)ಕುಟುಂಬಕ್ಕೆ ಸೇರಿರುವ ಈ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಪಾಪವೆರ್ ರೊಯೆಸ್( Papaver rhoeas)ಎಂದಾಗಿದೆ.ಪರ್ಯಾಯ ನಾಮ ಅಫೀಮುಗಿಡ. ಪಪೇವರ್ ಸಾಮ್ನಿಫೆರಂ ವೈಜ್ಞಾನಿಕ ನಾಮ. ಸಾಮಾನ್ಯ ಬಳಕೆಯ ಇಂಗ್ಲಿಷ್ ಹೆಸರು ಓಪಿಯಂ ಪಾಪಿ ಅಥವಾ ವೈಟ್ ಪಾಪಿ ಹಿಂದಿಯಲ್ಲಿ 'ಕಸ್‌ಕಸ್',ತೆಲುಗಿನಲ್ಲಿ 'ಗಸಗಸಾಲು'ಎಂದು ಹೆಸರು.

ಗಸಗಸೆ 
ಗಸಗಸೆ ಹೂವು

ಸಸ್ಯದ ಗುಣಲಕ್ಷಣಗಳು

  • ದೊಡ್ಡ ಹೂವಿನ ಸಣ್ಣ ಗಿಡ. ಕಡು ಕೆಂಪು ಬಣ್ಣದ ದೊಡ್ಡ ಹೂವಿನ ನಡುವೆ ಕಪ್ಪು ಬಣ್ಣದ ಕೇಸರವಿರುತ್ತದೆ. ಗಸಗಸೆ ಗಿಡ ವಾರ್ಷಿಕ ಬಗೆಯದು. ಇದು ಸುಮಾರು 61ಸೆಂಮೀನಿಂದ 1ಮೀ-22ಸೆ.ಮೀ ಎತ್ತರಕ್ಕೆ ಬೆಳೆಯುತ್ತದೆ. ಕಾಂಡ ನೀಳವಾಗಿ ಬೆಳೆ ಯುವುದು. ಇದರ ಮೇಲ್ಭಾಗದಲ್ಲಿ ವಿರಳವಾಗಿ ಕೊಂಬೆಗಳು ಹರಡಿರುತ್ತವೆ. ಎಲೆಗಳ ಆಕಾರ ದೀರ್ಘ ಅಂಡದಂತೆ. ಅಂಚು ಸೀಳುಗೊಂಡಿದೆ. ಹೂಗಳು ಗಾತ್ರದಲ್ಲಿ ದೊಡ್ಡವು. ಇವುಗಳ ಭಾರಕ್ಕೆ ಕೊಂಬೆಗಳು ಜಗ್ಗಿ ತೂಗಾಡುತ್ತಿರುತ್ತವೆ.
  • ಹೂಗಳ ಬಣ್ಣ ಕೆಂಪು, ಬಿಳಿ, ನೇರಳೆ, ನೀಲಿ-ಹೀಗೆ ವೈವಿಧ್ಯಮಯ. ಅಂಡಾಶಯ ಗುಂಡಗೆ ದಪ್ಪವಾಗಿದೆ. ಶಲಾಕೆ ಇಲ್ಲ. ಅಂಡಾಶಯದ ಮೇಲ್ಭಾಗದಲ್ಲಿ ಛಾವಣಿಯಂಥ ಶಲಾಕಾಗ್ರ ಉಂಟು. ಕಾಯಿಯ ಒಳಗೆ ಅಸಂಖ್ಯಾತ ಬೀಜಗಳಿವೆ. ಇವೇ ಗಸಗಸೆ. ಬೀಜಗಳ ಬಣ್ಣ ಕಪ್ಪು ಇಲ್ಲವೆ ಬಿಳಿ. ಆಕಾರ ಮೂತ್ರಪಿಂಡದಂತೆ. ಕಾಯಿಗಳು ಬಲಿತ ಮೇಲೆ ತುದಿಯಲ್ಲಿ ಸಣ್ಣ ಸಣ್ಣ ರಂಧ್ರಗಳು ಉಂಟಾಗಿ ಅವುಗಳ ಮೂಲಕ ಬೀಜಗಳು ಹೊರಬರುತ್ತವೆ. ಗಾಳಿಗೆ ಕಾಯಿ ಅಲುಗಾಡಿದಾಗ ಬೀಜಗಳು ಸ್ವಲ್ಪ ಸ್ವಲ್ಪವಾಗಿ ಹೊರಬಂದು ಚದರುತ್ತವೆ.

ಪೌಷ್ಟಿಕಾಂಶಗಳು

ಬೀಜಗಳಲ್ಲಿ ಪೌಷ್ಟಿಕಾಂಶಗಳು ಹೇರಳವಾಗಿವೆ. ಬೀಜಗಳ ರಾಸಾಯನಿಕ ಸಂಯೋಜನೆ ಈ ರೀತಿ ಇದೆ: ಶೇ.4.3-ಶೇ.5.2 ತೇವಾಂಶ, ಶೇ.22.3- ಶೇ.24.4 ಪ್ರೋಟೀನು, ಶೇ.1.03- ಶೇ.1.45 ಸುಣ್ಣ, ಶೇ.0.79-ಶೇ.0.89 ರಂಜಕ, ಶೇ.8.5-ಶೇ.11.1 ಕಬ್ಬಿಣ ಮತ್ತು ಥಯಾಮಿನ್, ರೈಬೊಫ್ಲೇವಿನ್, ನಿಕೊಟಿನಿಕ್ ಆಮ್ಲ ಮುಂತಾದ ವಿಟಮಿನ್ನುಗಳೂ ಮ್ಯಾಂಗನೀಸ್, ತಾಮ್ರ, ಮೆಗ್ನೀಸಿಯಂ, ಪೊಟ್ಯಾಸಿಯಂ, ಸತು ಮುಂತಾದ ಖನಿಜಾಂಶಗಳೂ ಲಘು ಪರಿಮಾಣಗಳಲ್ಲಿರುತ್ತವೆ. ಅಲ್ಲದೆ ಲೆಸಿತಿನ್, ಆಕ್ಸ್ಯಾಲಿಕ್ ಆಮ್ಲ, ಪೆಂಟಾಸಾನ್ಸ್ ಎಂಬ ವಸ್ತುಗಳೂ ಡಯಾಸ್ಟೇಸ್, ಎಮಲ್ಸಿನ್, ಲೈಪೇಸ್, ನ್ಯೂಕ್ಲಿಯೇಸ್ ಮುಂತಾದ ಕಿಣ್ವಗಳೂ ಇವೆ. ಮತ್ತುಬರಿಸುವ ಅಂಶವಾದ ನಾರ್ಕೊಟಿನ್ ಅತ್ಯಲ್ಪ ಪರಿಮಾಣದಲ್ಲಿದೆ.

ಗಸಗಸೆ 
Claude Monet, "Summer Field of Coquelicots", 1875

ಉಪಯೋಗಗಳು

  • ಗಸಗಸೆ ಗಿಡ, ಹೂವು ತರಕಾರಿಯಾಗಿ ಉಪಯೋಗವಾಗುತ್ತದೆ. ಬೀಜ ಪಾಯಸ,ಕೀರು ಇತ್ಯಾದಿ ಮಾಡಲು ಉಪಯೋಗಿಸುತ್ತಾರೆ. ಇದರ ಹೂವನ್ನು ಮಾದಕ ಪಾನೀಯ ತಯಾರಿಕೆಯಲ್ಲಿ ಬಳಸುತ್ತಾರೆ.ಇದರ ಹೂವನ್ನು ಯುದ್ಧದಲ್ಲಿ ಮಡಿದವರ ಜ್ಞಾಪಕಾರ್ಥವಾಗಿ ಧರಿಸುವ ಸಂಪ್ರದಾಯ ಹಲವಾರು ದೇಶಗಳಲ್ಲಿದೆ.
  • ಅನೇಕ ಬಗೆಯ ಖಾದ್ಯ ವಸ್ತುಗಳ ತಯಾರಿಕೆಯಲ್ಲಿ ಬೀಜಗಳನ್ನು ಬಳಸುತ್ತಾರೆ. ಬೀಜಗಳಿಗೆ ಔಷಧೀಯ ಗುಣಗಳೂ ಇವೆ. ಬೀಜಕ್ಕೆ ಪುಷ್ಟಿದಾಯಕ ಮತ್ತು ತಂಪುಕಾರಕವೆಂದು ಹೆಸರುಂಟು. ದೇಹಭಾಗಗಳನ್ನು ಮೃದುಗೊಳಿಸುವ ಲೇಪವಾಗಿಯೂ ಮಲಬದ್ಧತೆಯ ನಿವಾರಕವಾಗಿಯೂ ಇದನ್ನು ಬಳಸುವುದಿದೆ.

ಆಧಾರ /ಬಾಹ್ಯ ಸಂಪರ್ಕಗಳು

೧.http://sliceoftheday.wordpress.com/2008/06/17/common-poppy-papaver-rhoeas/ ೨. Malta Wild Plants - Papaver rhoeas

ಛಾಯಾಂಕನ

ಗಸಗಸೆ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಗಸಗಸೆ ಇತಿಹಾಸಗಸಗಸೆ ಸಸ್ಯಶಾಸ್ತ್ರೀಯ ವರ್ಗೀಕರಣಗಸಗಸೆ ಸಸ್ಯದ ಗುಣಲಕ್ಷಣಗಳುಗಸಗಸೆ ಪೌಷ್ಟಿಕಾಂಶಗಳುಗಸಗಸೆ ಉಪಯೋಗಗಳುಗಸಗಸೆ ಆಧಾರ ಬಾಹ್ಯ ಸಂಪರ್ಕಗಳುಗಸಗಸೆ ಛಾಯಾಂಕನಗಸಗಸೆ

🔥 Trending searches on Wiki ಕನ್ನಡ:

ಕೃಷ್ಣ ಮಠಅಶ್ವಗಂಧಾಬೀಚಿಡಿ.ಎಸ್.ಕರ್ಕಿಸ್ಮೃತಿ ಇರಾನಿಸಚಿನ್ ತೆಂಡೂಲ್ಕರ್ರಾಘವಾಂಕವಾಟ್ಸ್ ಆಪ್ ಮೆಸ್ಸೆಂಜರ್ರಾಷ್ಟ್ರೀಯ ಸ್ವಯಂಸೇವಕ ಸಂಘಭಾರತೀಯ ಭಾಷೆಗಳುಪಿ.ಲಂಕೇಶ್ಚಂದ್ರಶೇಖರ ಕಂಬಾರಬಾದಾಮಿ ಗುಹಾಲಯಗಳುಕ್ರಿಯಾಪದಮಳೆಗಾಲವಿಜಯಪುರ ಜಿಲ್ಲೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸಾರ್ವಜನಿಕ ಹಣಕಾಸುಮಲ್ಲಿಕಾರ್ಜುನ ಜ್ಯೋತಿರ್ಲಿಂಗವಂದೇ ಮಾತರಮ್ಪ್ರಿಯಾಂಕ ಗಾಂಧಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಮರಾಠಾ ಸಾಮ್ರಾಜ್ಯಚಂದ್ರಗುಪ್ತ ಮೌರ್ಯಕನ್ನಡ ಅಕ್ಷರಮಾಲೆಪ್ಯಾರಾಸಿಟಮಾಲ್ವಿಜಯಪುರ ಜಿಲ್ಲೆಯ ತಾಲೂಕುಗಳುಕಾಮಧೇನುಸಾಮಾಜಿಕ ಸಮಸ್ಯೆಗಳುವಸುಧೇಂದ್ರಅಂಬಿಗರ ಚೌಡಯ್ಯಲೋಪಸಂಧಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುನಾಗಚಂದ್ರಶಕ್ತಿಸರಸ್ವತಿಜೋಳಸೀತೆಗ್ರಹಕುಷಾಣ ರಾಜವಂಶಆಭರಣಗಳುಶಿಕ್ಷಣಗಾದೆಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕೆಳದಿಯ ಚೆನ್ನಮ್ಮವೇದವ್ಯಾಸದೆಹಲಿ ಸುಲ್ತಾನರುಕಾಲ್ಪನಿಕ ಕಥೆಸೂರ್ಯವ್ಯೂಹದ ಗ್ರಹಗಳುಉಪನಯನಬೇವುಮಾರಾಟ ಪ್ರಕ್ರಿಯೆರಾಮನಗರಕರ್ನಾಟಕದ ಮುಖ್ಯಮಂತ್ರಿಗಳುತುಂಬೆಗಿಡಪ್ರಜಾಪ್ರಭುತ್ವದ ಲಕ್ಷಣಗಳುಕೋಲಾಟಮಳೆಭೋವಿತುಳಸಿಮಹಾವೀರಕೃತಕ ಬುದ್ಧಿಮತ್ತೆಗೋವಉತ್ತರಾಖಂಡನವಣೆಭಾರತದ ಚುನಾವಣಾ ಆಯೋಗಬಿಳಿಗಿರಿರಂಗನ ಬೆಟ್ಟಬಾಲ್ಯ ವಿವಾಹಮಾಟ - ಮಂತ್ರಬೆರಳ್ಗೆ ಕೊರಳ್ಭಾರತದ ವಿಜ್ಞಾನಿಗಳುಭಾರತೀಯ ರಿಸರ್ವ್ ಬ್ಯಾಂಕ್ಭಾರತದ ಪ್ರಧಾನ ಮಂತ್ರಿತ್ರಿಪದಿಶಾಸನಗಳುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಇಮ್ಮಡಿ ಪುಲಕೇಶಿಕುರುಬ🡆 More