ಭಾರತದಲ್ಲಿ ನೀರಾವರಿ

ಪ್ರಮುಖ ನೀರಾವರಿ ವ್ಯವಸ್ಥೆಗಳು

ಭಾರತದಲ್ಲಿ ನೀರಾವರಿ
ಉತ್ತರ ಭಾರತದಲ್ಲಿ ಭಾಕ್ರಾ ಮುಖ್ಯಕಾಲುವೆ ವ್ಯವಸ್ಥೆಯ ವಿಭಾಗಗಳಲ್ಲಿ ಒಂದು. ಈ ಕಾಲುವೆ ಜಾಲವು 40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಭೂಮಿಗೆ ನೀರಾವರಿ ಒದಗಿಸುವುದು.
  • ಭಾರತದಲ್ಲಿ ನೀರಾವರಿಯು ಪ್ರಮುಖ ಮತ್ತು ಸಣ್ಣ ಕಾಲುವೆಗಳ ಜಾಲ, ನದಿಗಳು, ಅಂತರ್ಜಲ ಆಧಾರಿತ ಪದ್ಧತಿಗಳು ಹಾಗೂ, ಕೆರೆಗಳು, ಮತ್ತು ಮಳೆನೀರು ಕೊಯ್ಲು ಕೃಷಿ ಯೋಜನೆಗಳಿಂದ ಒಳಗೊಂಡಿದೆ. ಇವುಗಳಲ್ಲಿ ಅಂತರ್ಜಲ ಆಧಾರಿತ ಪದ್ಧತಿ ಅತಿದೊಡ್ಡ. ಕೃಷಿ ಚಟುವಟಿಕೆಯಾಗಿದೆ. 2010 ರಲ್ಲಿ ಭಾರತದಲ್ಲಿ ಒಟ್ಟು ಕೃಷಿ ಭೂಮಿಯ ಕೇವಲ 35% ವಿಶ್ವಾಸಾರ್ಹ ನೀರಾವರಿ ಗೆ ಒಳಪಟ್ಟಿತ್ತು. ಭಾರತದಲ್ಲಿ ಸುಮಾರು 2 / 3ರಷ್ಟು ಕೃಷಿ ಭೂಮಿ ಮಳೆಯನ್ನು ಅವಲಂಬಿಸಿದೆ.

ವಸಾಹತು ಯುಗ

  • ಗಂಗಾ ನೀರಾವರಿ ಕಾಲುವೆಗಳನ್ನು ಬ್ರಿಟಿಷರ ವಸಾಹತು ಕಾಲದಲ್ಲಿ ನಿರ್ಮಿಸಲಾಯಿತು, ಮತ್ತು 1854 ರಲ್ಲಿ ದನ್ನು ಉದ್ಘಾಟಿಸಿದರು. 1800 ರಲ್ಲಿ 800,000 ಹೆಕ್ಟೇರ್ ಪ್ರದೇಶಕ್ಕೆ ಭಾರತದಲ್ಲಿ ನೀರಾವರಿ ವ್ಯವಸ್ಥೆ ಮಾಡಲಾಯಿತು. ಉತ್ತರ ಪ್ರದೇಶ, ಬಿಹಾರ, ಪಂಜಾಬ್, ಅಸ್ಸಾಂ ಮತ್ತು ಒರಿಸ್ಸಾಗಳಲ್ಲಿ 1940 ರಲ್ಲಿ. ಕಾಲುವೆಗಳು ಮತ್ತು ನೀರಾವರಿ ವ್ಯವಸ್ಥೆಗಳನ್ನು ಗಮನಾರ್ಹ ಸಂಖ್ಯೆಯಲ್ಲಿ ನಿರ್ಮಿಸಲಾಯಿತು. ಉತ್ತರ ಪ್ರದೇಶದಲ್ಲಿ ಗಂಗಾ ಕಾಲುವೆಯು ಹರಿದ್ವಾರಗಿಂದ 350 ಮೈಲಿಯ ಕಾನ್ಪುರವನ್ನು ತಲುಪಿತು. ಅಸ್ಸಾಂನಲ್ಲಿ , 1840 ರಿಂದ 1900 ರಲ್ಲಿ ಒಂದು ಅರಣ್ಯ ಪ್ರದೇಶದ4.000.000 ಎಕರೆ, ಸಾಗುವಳಿ ಹೊಂದಿತು. ಇತಿಹಾಸಕಾರ ಡೇವಿಡ್ ಗಿಲ್ಮೊರ್ ಹೇಳುತ್ತಾರೆ : "ಶತಮಾನದ ಕೊನೆಯಲ್ಲಿ ಜಾರಿಯಲ್ಲಿದ್ದ ಸರ್ಕಾರ ಪಂಜಾಬ್’ನಲ್ಲಿ ಕಾಲುವೆಗಳ ಹೊಸ ಜಾಲವನ್ನು ನಿರ್ಮಿಸಿತ್ತು" ಮತ್ತು ಗಂಗಾ ಕಾಲುವೆ ಮತ್ತು ನೀರಾವರಿ ಜಾಲವನ್ನೇ ನಿರ್ಮಿಸಿತ್ತು". ಆದರೆ ಬ್ರಿಟಿಷ್ ವಸಾಹತು ಕಾಲದಲ್ಲಿ ನೀರಾವರಿ ಹೆಚ್ಚಳದ ಹೆಚ್ಚಿನ ನೀರಾವರಿ ವ್ಯವಸ್ಥೆಯ ಭೂಮಿ (ಬ್ರಿಟಿಷ್ ಆಳ್ವಿಕೆಯುಲ್ಲಿ) ಮಾದಕ ವಸ್ತು ಅಫೀಮು ತಯಾರಿಸವ ಗಸಗಸೆ ಕೃಷಿಗೆ ಮೀಸಲಾಗಿತ್ತು. ದೊಡ್ಡ ಪೂರ್ವಭಾಗದ ಮತ್ತು ಉತ್ತರದ ಪ್ರದೇಶಗಳ ಭಾಗಗಳ ಬೆಳೆಯ ಅಫೀಮನ್ನು ಭಾರತದಿಂದ ಚೀನಾಕ್ಕೆ ರಫ್ತು ಮಾಡುವ ಗುರಿಯಿಟ್ಟುಕೊಂಡು ಗಸಗಸೆ ಮತ್ತು ಅಫೀಮು ಕೃಷಿಗೆ ಮೀಸಲಾಗಿ ಇಡಲಾಗಿತ್ತು. ಅವು ಯಾವುವೆಂದರೆ ಭಾರತದ ಸಂಯುಕ್ತ ಪ್ರಾಂತ್ಯಗಳು, ವಾಯವ್ಯ ಪ್ರಾಂತ್ಯಗಳು ಔಧ್, ಬಿಹಾರ್, ಬಂಗಾಳ ಮತ್ತು ರೇವಾ ಇವುಗಲ ಭೂಮಿ.ಚೀನಾಕ್ಕೆ ಗಸಗಸೆ ಮತ್ತು ಅಫೀಮಿನ ಪೂರೈಕೆಯನ್ನು ವಿಶ್ವಾಸಾರ್ಹವಾಗಿ ರಫ್ತನ್ನುಖಚಿತಪಡಿಸಿಕೊಳ್ಳಲು ನೀರಾವರಿ ಮಾಡಲಾಯಿತು.
ಭಾರತದಲ್ಲಿ ನೀರಾವರಿ
ಗುಜರಾತಿನಲ್ಲಿ ಹರಿಯುತ್ತಿರುವ ಸರ್ದಾರ್ ಸರೋವರ ಕಾಲುವೆ
  • 1850 ರ ವೇಳೆಗೆ, ಏಷ್ಯನ್ ಅಫೀಮು ವ್ಯಾಪಾರ ಆಹಾರ ಬೆಳೆ ಭೂಮಿಯಿಂದ ತಿರುವು ಪಡೆದು ನಗದು ಬೆಳೆ ಬಳಕೆಗ ಸುಮಾರು 1,000 ಚದರ ಕಿಲೋಮೀಟರ್ ವ್ಯವಸಾಯ ದಾಖಲಿಸಿತು, 1900 [21] ರ ಹೊತ್ತಿಗೆ 500,000 ಎಕರೆಗೆ ಅಫೀಮು ಬೆಳಯ ಪ್ರದೇಶ ಏರಿತು. ದೇಶದ ವಿದ್ವಾಂಸರು ಫಲವತ್ತಾದ ಗಂಗಾನದಿಯ ಪ್ರದೇಶ , ಆಹಾರ ಬೆಳೆ ಭೂಮಿಯಿಂದ ಗಸಗಸೆಯ ನಗದು ಬೆಳೆಗೆ ತಿರುವು ಆಗುವ ಮೂಲಕ 1850 - 1905 ಅವಧಿಯಲ್ಲಿ ಭಾರತದಲ್ಲಿ ಬೃಹತ್ ಕ್ಷಾಮಗಳಿಗೆ ಕಾರಣವಾಯಿತು.
  • ಬ್ರಿಟಿಷ್ ಭಾರತದಲ್ಲಿ 19 ನೇ ಶತಮಾನದಲ್ಲಿ ಪ್ರಮುಖ ಕ್ಷಾಮ ಸರಣಿಯಲ್ಲಿ ಲಕ್ಷಾಂತರ ಜನರ ಮರಣದ ನಂತರ ಪ್ರಮುಖ ನೀರಾವರಿ ಕಾಲುವೆಗಳನ್ನು ನಿರ್ಮಿಸಲಾಯಿತು. 1900 ರಲ್ಲಿ, ಬ್ರಿಟೀಷ್ ಭಾರತದಲ್ಲಿ (ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಸೇರಿದಂತೆ) 13 ಮಿಲಿಯನ್ ಹೆಕ್ಟೇರು ನೀರಾವರಿ ವ್ಯವಸ್ಥೆ ಹೊಂದಿತ್ತು. 1947 ರ ಹೊತ್ತಿಗೆ ಈ ನೀರಾವರಿ 22 ಮಿಲಿಯನ್ ಹೆಕ್ಟೇರ್ ಗೆ ಏರಿತು. 1940ರಲ್ಲಿ ,ಬ್ರಿಟಿಷ್ ಭಾರತದ ವಾಯುವ್ಯ ಪ್ರದೇಶದಲ್ಲಿ ಹಿಂದೆ ಕೇವಲ ಬಂಜರು ಭೂಮಿಯಾಗಿದ್ದ 2.2 ಮಿಲಿಯನ್ ಹೆಕ್ಟೇರ್ ಪ್ರದೇಶ ವಸಾಹತು ಸರ್ಕಾರದ ಪ್ರಯತ್ನದಿಂದ ನೀರಾವರಿ ಮಾಡಲಾಯಿತು ಅದು ಈಗ ಪಾಕಿಸ್ತಾನ ಭಾಗವಾಗಿದೆ. ಆರ್ಥರ್ ಕಾಟನ್ ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಕೆಲವು ನೀರಾವರಿ ಕಾಲುವೆ ಯೋಜನೆಗಳನ್ನು ಮಾಡಲು ಕಾರಣನು, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಅವರ ಹೆಸರನ್ನಿಡಲಾಗಿರುವದು ಅದರ ಹೆಗ್ಗುರುತುಗಳು. ಆದಾಗ್ಯೂ, ವಸಾಹತು ಕಾಲದಲ್ಲಿ ನೀರಾವರಿ ವ್ಯವಸ್ಥೆ ಬಹಳಷ್ಟು ಕೈನಿಂದ ನಿರ್ವಹಿಸಲ್ಪಟ್ಟ ಅಂತರ್ಜಲ ಬಾವಿಗಳು ಮತ್ತು ಕರೆಗಳೇ ಆಗಿದ್ದವು.

1947 ರಿಂದ ನೀರಾವರಿ ಯೋಜನೆಗಳು

  • 1951 ರಲ್ಲಿ ಭಾರತದ ಸುಮಾರು 22.6 ಮಿಲಿಯನ್ ಹೆಕ್ಟೇರ್ ಬೆಳೆ ಪ್ರದೇಶ ನೀರಾವರಿಗೆ ಒಳಗೊಂಡಿತ್ತು,, ಇದು 1995 ರ ಕೊನೆಯಲ್ಲಿ ಸಂಭಾವ್ಯ 90 ಮಿಲಿಯನ್ ಹೆಕ್ಟೇರ್‍ಗೆ ಏರಿತು. ಇದಕ್ಕೆ ಕಾಲುವೆಗಳ ಮತ್ತು ಅಂತರ್ಜಲ ಬಾವಿಗಳು ಸೇರಿದೆ. ಆದಾಗ್ಯೂ, ಸಂಭಾವ್ಯ ನೀರಾವರಿ ವ್ಯವಸ್ಥೆ ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಮತ್ತು ನೀರಿನ ಪಂಪ್ ನಿರ್ವಹಣೆಯನ್ನು ಅವಲಂಬಿಸಿದೆ. ಆದ್ದರಿಂದ ನಿವ್ವಳ ನೀರಾವರಿ ಭೂಮಿ ಗಣನೀಯವಾಗಿ ಕಡಿಮೆಯಾಗಿದೆ. 2001/2002 ಕೃಷಿ ಜನಗಣತಿಯ ಪ್ರಕಾರ, ಕೇವಲ 58.1 ಮಿಲಿಯನ್ ಹೆಕ್ಟೇರ್ ಭೂಮಿ ಭಾರತದಲ್ಲಿ ವಾಸ್ತವವಾಗಿ ನೀರಾವರಿ ಹೊಂದಿತ್ತು. ಭಾರತದಲ್ಲಿ ಒಟ್ಟು ಕೃಷಿಯೋಗ್ಯ ಭೂಮಿ 160 ಮಿಲಿಯನ್ ಹೆಕ್ಟೇರ್ (39.5 ಕೋಟಿ ಎಕರೆ) ಆಗಿದೆ. ವಿಶ್ವ ಬ್ಯಾಂಕಿನ ಪ್ರಕಾರ, 2010 ರಲ್ಲಿ ಭಾರತದ ಒಟ್ಟು ಕೃಷಿ ಭೂಮಿಯ ಕೇವಲ 35% ವಿಶ್ವಾಸಾರ್ಹವಾಗಿ ನೀರಾವರಿ ಹೊಂದಿತ್ತು.
  • 1991 ರ ಯುನೈಟೆಡ್ ನೇಷನ್ಸ್ 'ವಿಶ್ವಸಂಸ್ಥೆ ಆಹಾರ ಸಂಸ್ಥೆಯ ವರದಿಯು ಭಾರತದ ಅಂತಿಮ ಸಮರ್ಥನೀಯ ನೀರಾವರಿ ಸಂಭಾವ್ಯ ನೀರಾವರಿ ಪ್ರದೇಶ, 139,5 ಮಿಲಿಯನ್ ಹೆಕ್ಟೇರ್ ಎಂದು ಒಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಪ್ರಮುಖ ಮತ್ತು ಸಾಧಾರಣ ನದಿಗಳ ನೀರಾವರಿ ಕಾಲುವೆ ಯೋಜನೆಗಳ 58.5 ಮಿಲಿಯನ್ ಹೆಕ್ಟೇರ್’ಗಳು; ಸಣ್ಣ ನೀರಾವರಿ ಕಾಲುವೆ ಯೋಜನೆಗಳು 15 ಮಿಲಿಯನ್ ಹೆಕ್ಟೇರ್’ಗಳು, ಮತ್ತು 66 ಮಿಲಿಯನ್ ಹೆಕ್ಟೇರ್’ಗಳ ಅಂತರ್ಜಲ ನೀರಾವರಿ ಒಳಗೊಂಡಿದೆ.
  • ಭಾರತದ ನೀರಾವರಿಯು ಹೆಚ್ಚಾಗಿ ಅಂತರ್ಜಲ ಆಧಾರಿತ ವಾಗಿದೆ. ಅದರ ಒಟ್ಟು ನೀರಾವರಿ ಪ್ರದೇಶದ 67%ನಷ್ಟು, ಎಂದರೆ 39 ಮಿಲಿಯನ್ ಹೆಕ್ಟೇರ್, ಭಾರತವು ವಿಶ್ವದ ಅತ್ಯಂತ ದೊಡ್ಡ ಅಂತರ್ಜಲದ ಸುಸಜ್ಜಿತ ನೀರಾವರಿ ವ್ಯವಸ್ಥೆಯನ್ನು ಹೊಂದಿದೆ. (ಎರಡನೇ ಚೀನಾ 19 ಮಿಲಿಯನ್ ಹೆಕ್ಟೇರ್, 3ನೇ ಅಮೇರಿಕಾ 17 ಮಿಲಿಯನ್ ಹೆಕ್ಟೇರ್).
  • ಭಾರತ 1950 ಮತ್ತು 1985ರ ನಡುವೆ ನೀರಾವರಿ ಅಭಿವೃದ್ಧಿಗೆ 16.590 ಕೋಟಿ ರೂ ; 2000-2005ರ ನಡುವೆ. 1,03,315 ಕೋಟಿ ರೂ. ಮತ್ತು 2005-2010ರ ನಡುವೆ 2,10,326 ಕೋಟಿ ರೂ ಗಳನ್ನು , ಭಾರತ ನೀರಾವರಿ ಮತ್ತು ಪ್ರವಾಹ ನಿಯಂತ್ರಣಕ್ಕಾಗಿ ಹೂಡಿಕೆಗೆ ಯೋಜನೆ ಮಾಡಿದೆ.

ಭಾರತದಲ್ಲಿ ನೀರಾವರಿ

  • ಮಿಲಿಯನ್ ಹೆಕ್ಟೇರ್‍ಗಳಲ್ಲಿ
ರಾಜ್ಯ ಬೆಳೆ ಪ್ರದೇಶ (2011)(ಮಿ.ಹೆ.) !ಅಂತರ್ಜಲ ನೀರಾವರಿ ಹೊಂದಿದ ಬೆಳೆ ಪ್ರದೇಶ (2011)ಮಿ.ಹೆ. !ಕಾಲುವೆ ನೀರಾವರಿ ಹೊಂದಿದ ಬೆಳೆ ಪ್ರದೇಶ (2011)(ಮಿ.ಹೆ. ಒಟ್ಟು ಬೆಳೆ ಪ್ರದೇಶ ವಾಸ್ತವವಾಗಿ ನೀರಾವರಿ (2011)

(ಮಿ.ಹೆ.)

ಆಂಧ್ರ ಪ್ರದೇಶ 14.3 2.5 2.7 4.9
ಅರುಣಾಚಲ ಪ್ರದೇಶ 0.4 0.07 0.05
ಅಸ್ಸಾಂ 3.0 0.13 0.1 0.22
ಬಿಹಾರ 6.4 2.2 1.3 3.5
ಛತ್ತೀಸ್ಗಢ 5.1 0.17 0.74 0.85
ಗೋವಾ 0.1 0.1 0.1
ಗುಜರಾತ್ 9.9 3.1 0.5 3.2
ಹರಿಯಾಣ 3.6 1.99 1.32 3.26
ಹಿಮಾಚಲ ಪ್ರದೇಶ 1.0 0.02 0.09 0.11
ಜಮ್ಮು ಮತ್ತು ಕಾಶ್ಮೀರ 0.9 0.02 0.38 0.37
ಜಾರ್ಖಂಡ್ 3.2 0.11 0.13 0.24
ಕರ್ನಾಟಕ 12.2 1.43 1.33 2.38
ಕೇರಳ 1.5 0.18 0.21 0.39
ಮಧ್ಯಪ್ರದೇಶ 15.8 2.74 1.70 4.19
ಮಹಾರಾಷ್ಟ್ರ 19.8 3.12 1.03 3.36
ಮಣಿಪುರ 0.2 0.05 0.05
ಮೇಘಾಲಯ 0.3 0.06 0.06
ಮಿಜೋರಾಂ 0.1 0.01 0.01
ನಾಗಾಲ್ಯಾಂಡ್ 1.1 0.1 0.07
ಒಡಿಶಾ 4.9 0.17 1.07 1.24
ಪಂಜಾಬ್ 4.0 3.06 0.94 3.96
ರಾಜಸ್ಥಾನ 21.1 3.98 1.52 5.12
ಸಿಕ್ಕಿಂ 0.1 0.01 0.01
ತಮಿಳುನಾಡು 6.5 1.61 1.43 2.66
ತ್ರಿಪುರ 0.3 0.02 0.05 0.07
ಉತ್ತರ ಪ್ರದೇಶ 17.6 10.64 4.21 14.49
ಉತ್ತರಾಖಂಡ್ 0.8 0.22 0.14 0.35
ಪಶ್ಚಿಮ ಬಂಗಾಳ 5.5 2.09 1.22 2.98
ಅಖಿಲ ಭಾರತ 159.6 39.43 22.48 58.13
  • ಅಖಿಲಭಾರತ ಅಂಕೆ ಸಂಖ್ಯೆಗಳಲ್ಲಿ ಕೇಂದ್ರಾಡಳಿತ ಪ್ರದೇಶವೂ ಸೇರಿದೆ.

ಯೋಜನೆಗಳ (ಪ್ರಾಜೆಕ್ಟ್) ವರ್ಗೀಕರಣ

ಭಾರತದಲ್ಲಿ ನೀರಾವರಿ 
ಗುಜರಾತ್‍ನ ರಾವಲಾಮಂಡಿ ನೀರಾವರಿ ಕಾಲುವೆ.ಭಾರತದಲ್ಲಿ ಕೃಷಿಗೆ ಮಹತ್ತರ ಕೊಡುಗೆ ನೀಡುತ್ತದೆ.
  • ಭಾರತದಲ್ಲಿ ನೀರಾವರಿ ಯೋಜನೆಗಳನ್ನು ಮೂರು ಪ್ರಮುಖ ವಿಭಾಗಗಳನ್ನಾಗಿ ವರ್ಗೀಕರಿಸಲಾಗಿದೆ:
  • 1. ಸಣ್ಣ ನೀರಾವರಿ ಯೋಜನೆಗಳು
  • 2. ಮಧ್ಯಮ ನೀರಾವರಿ ಯೋಜನೆಗಳು
  • 3. ಪ್ರಮುಖ ನೀರಾವರಿ ಯೋಜನೆಗಳನ್ನು 1950 ರಿಂದ, ನೀರಾವರಿ ಯೋಜನೆಗಳ 'ಅನುಷ್ಠಾನಕ್ಕೆ ಉಂಟಾದ ವೆಚ್ಚ, ಆಡಳಿತ ಮತ್ತು ಪ್ರಸರಣಗಳ ಆಧಾರದ ಮೇಲೆ ಪರಿಗಣಿಸಲಾಗಿದೆ., ಆದರೂ ಭಾರತದ ಯೋಜನಾ ಆಯೋಗವು ಬೆಳೆ ಬೆಳೆಯಹುದಾದ ಗೊತ್ತಾದ ಪ್ರದೇಶದ ಆಧಾರದ ಮೇಲೆ ಯೋಜನೆಗಳ ವರ್ಗೀಕರಣ ಮಾಡಿದೆ.(ಸಿ.ಸು.ಎ.ಕಚೇರಿಯಿಂದ )

ನೋಡಿ

ಉಲ್ಲೇಖ

Tags:

ಭಾರತದಲ್ಲಿ ನೀರಾವರಿ ಪ್ರಮುಖ ನೀರಾವರಿ ವ್ಯವಸ್ಥೆಗಳುಭಾರತದಲ್ಲಿ ನೀರಾವರಿ ವಸಾಹತು ಯುಗಭಾರತದಲ್ಲಿ ನೀರಾವರಿ 1947 ರಿಂದ ನೀರಾವರಿ ಯೋಜನೆಗಳುಭಾರತದಲ್ಲಿ ನೀರಾವರಿ ರಾಜ್ಯವಾರು ನೀರಾವರಿ ಪ್ರದೇಶಗಳು=ಭಾರತದಲ್ಲಿ ನೀರಾವರಿ

🔥 Trending searches on Wiki ಕನ್ನಡ:

ವಾಲಿಬಾಲ್ಉತ್ತರ ಕರ್ನಾಟಕಆಸ್ಟ್ರೇಲಿಯಕನ್ನಡ ರಂಗಭೂಮಿಮದುವೆಜ್ಯೋತಿಬಾ ಫುಲೆಕಿರುಧಾನ್ಯಗಳುವ್ಯಾಪಾರಮಾನವನಲ್ಲಿ ರಕ್ತ ಪರಿಚಲನೆಕಿಸ್ (ಚಲನಚಿತ್ರ)ಇಂಡಿಯನ್ ಪ್ರೀಮಿಯರ್ ಲೀಗ್ಉತ್ಪಾದನಾಂಗಗಳುತ್ರಿಕೋನಮಿತಿಯ ಇತಿಹಾಸಜಾಹೀರಾತುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿವಾದಿರಾಜರುಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಹಗ್ಗಹಿಮಶನಿಚಂದ್ರಾ ನಾಯ್ಡುಎತ್ತಿನಹೊಳೆಯ ತಿರುವು ಯೋಜನೆದರ್ಶನ್ ತೂಗುದೀಪ್ಆಂಗ್ಲನೀನಾದೆ ನಾ (ಕನ್ನಡ ಧಾರಾವಾಹಿ)ಭಾರತದ ಪಂಚಾಯತ್ ರಾಜ್ ವ್ಯವಸ್ಥೆಕರ್ನಾಟಕದ ಇತಿಹಾಸಲಕ್ಷ್ಮಿಉಡುಪಿ ಜಿಲ್ಲೆಲೋಪಸಂಧಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಸಲಗ (ಚಲನಚಿತ್ರ)ನುಗ್ಗೆಕಾಯಿಸಿದ್ಧರಾಮಎಚ್.ಎಸ್.ವೆಂಕಟೇಶಮೂರ್ತಿಆಲಿವ್ಬ್ರಿಟೀಷ್ ಸಾಮ್ರಾಜ್ಯಮುಹಮ್ಮದ್ರಾಮ್ ಮೋಹನ್ ರಾಯ್ನಾಲ್ವಡಿ ಕೃಷ್ಣರಾಜ ಒಡೆಯರುಕನ್ನಡದಲ್ಲಿ ವಚನ ಸಾಹಿತ್ಯಗುರುಲಿಂಗ ಕಾಪಸೆನೈಸರ್ಗಿಕ ಸಂಪನ್ಮೂಲವಿಕಿಪೀಡಿಯಜೈ ಕರ್ನಾಟಕದೆಹಲಿಜಾಗತೀಕರಣಕನ್ನಡಪ್ರಭಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕರ್ನಾಟಕ ವಿಧಾನ ಸಭೆಕಿತ್ತೂರು ಚೆನ್ನಮ್ಮಚೋಳ ವಂಶಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುತಾಜ್ ಮಹಲ್ಶ್ರವಣಬೆಳಗೊಳವಿಜಯನಗರ ಸಾಮ್ರಾಜ್ಯಸೂರ್ಯಭಾರತದ ಪ್ರಧಾನ ಮಂತ್ರಿಗಳ ಪಟ್ಟಿಅಪಕೃತ್ಯಸಿಮ್ಯುಲೇಶನ್‌ (=ಅನುಕರಣೆ)ಕಂಪ್ಯೂಟರ್ಗರ್ಭಪಾತಬೀಚಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಹೊಸ ಆರ್ಥಿಕ ನೀತಿ ೧೯೯೧ಕೆಮ್ಮುವ್ಯವಸಾಯಜಿ.ಪಿ.ರಾಜರತ್ನಂರಚಿತಾ ರಾಮ್ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿನುಡಿಗಟ್ಟುಪ್ರವಾಸೋದ್ಯಮಮಾಸ್ತಿ ವೆಂಕಟೇಶ ಅಯ್ಯಂಗಾರ್ಅಕ್ಕಮಹಾದೇವಿಹಲ್ಮಿಡಿಹದಿಬದೆಯ ಧರ್ಮಭಾರತೀಯ ಶಾಸ್ತ್ರೀಯ ನೃತ್ಯಸ್ತ್ರೀ🡆 More