ಖಗೋಳ ಮಾನ

ಖಗೋಳ ಮಾನ (AU ಅಥವಾ au ಅಥವಾ ಖ.ಮಾ.) - ಒಂದು ಉದ್ದದ ಅಳತೆಯಾಗಿದ್ದು, ಇದು ಸುಮಾರು ಭೂಮಿ ಮತ್ತು ಸೂರ್ಯರ ನಡುವಿನ ದೂರಕ್ಕೆ ಸಮನಾಗಿದೆ.

ಪ್ರಸ್ತುತದಲ್ಲಿ ಒಪ್ಪಿಗೆಯಲ್ಲಿರುವ ಖ.ಮಾ.ದ ಮೌಲ್ಯವು ೧೪೯ ೫೯೭ ೮೭೦ ೬೯೧ ± ೩೦ ಮೀಟರ್‌ಗಳು (ಸುಮಾರು ೧೫ ಕೋಟಿ ಕಿ.ಮೀ. ಅಥವಾ ೯.೩ ಕೋಟಿ ಮೈಲಿಗಳು).

ಉದಾಹರಣೆಗಳು

ಕೆಳಗಿನ ದೂರಗಳು ಅಂದಾಜಿನ ಸರಾಸರಿ ದೂರಗಳು. ಖಗೋಳಕಾಯಗಳ ನಡುವಿನ ದೂರವು ಅವುಗಳ ಕಕ್ಷೆ ಮತ್ತಿತರ ಅಂಶಗಳ ಕಾರಣದಿಂದ, ಸಮಯದೊಂದಿಗೆ ಬದಲಾಗುತ್ತದೆ ಎಂಬುದನ್ನು ಇಲ್ಲಿ ಗಮನದಲ್ಲಿಡಬೇಕು

  • ಭೂಮಿಯು ಸೂರ್ಯನಿಂದ ೧.೦೦ ± ೦.೦೨ ಖ.ಮಾ. ದೂರದಲ್ಲಿದೆ.
  • ಚಂದ್ರವು ಭೂಮಿಯಿಂದ ೦.೦೦೨೬ ± ೦.೦೦೦೧ ಖ.ಮಾ. ದೂರದಲ್ಲಿದೆ.
  • ಮಂಗಳ ಗ್ರಹವು ಸೂರ್ಯನಿಂದ ೧.೫೨ ± ೦.೧೪ ಖ.ಮಾ. ದೂರದಲ್ಲಿದೆ.
  • ಗುರು ಗ್ರಹವು ಸೂರ್ಯನಿಂದ ೫.೨೦ ± ೦.೦೫ ಖ.ಮಾ. ದೂರದಲ್ಲಿದೆ.
  • ಪ್ಲುಟೊ ಸೂರ್ಯನಿಂದ ೩೯.೫ ± ೯.೮ ಖ.ಮಾ. ದೂರದಲ್ಲಿದೆ.
  • ಕೈಪರ್ ಪಟ್ಟಿಯು ಸುಮಾರು ೩೫ ಖ.ಮಾ. ದೂರದಲ್ಲಿ ಆರಂಭವಾಗುತ್ತದೆ
  • ೪೫ ಖ.ಮಾ. - ಚದರಿದ ತಟ್ಟೆಯ ಪ್ರಾರಂಭ (ಇದರಲ್ಲಿ ೧೦ ಖ.ಮಾ. ಕೈಪರ್ ಪಟ್ಟಿಯ ಮೇಲೆ ಚಾಚಿದೆ)
  • ೫೦-೫೫ ಖ.ಮಾ. - ಕೈಪರ್ ಪಟ್ಟಿಯ ಕೊನೆ
  • ೯೦೩೭೭ ಸೆಡ್ನಾದ ಕಕ್ಷೆಯು ಸೂರ್ಯನಿಂದ ೭೬-೯೪೨ ಖ.ಮಾ. ದೂರಗಳ ವ್ಯಾಪ್ತಿಯಲ್ಲಿದೆ; ೨೦೦೬ರ ಪ್ರಕಾರ ಸೆಡ್ನಾ ಸೂರ್ಯನಿಂದ ೯೦ ಖ.ಮಾ. ದೂರದಲ್ಲಿದೆ.
  • ೯೪ ಖ.ಮಾ.: ಸೌರ ಮಾರುತ/ಅಂತರನಾಕ್ಷತ್ರಿಕ ಮಾರುತ/ಅಂತರ ನಾಕ್ಷತ್ರಿಕ ಮಾಧ್ಯಮಗಳ ನಡುವೆ ಆಘಾತ ತರಂಗ
  • ಆಗಸ್ಟ್ ೨೦೦೬ರ ಪ್ರಕಾರ, ಸೂರ್ಯನಿಂದ ೧೦೦ ಖ.ಮಾ. ದೂರದಲ್ಲಿರುವ ವಾಯೇಜರ್ ೧ ಗಗನ ನೌಕೆಯು ಅತಿ ದೂರದಲ್ಲಿರುವ ಮಾನವ ನಿರ್ಮಿತ ವಸ್ತುವಾಗಿದೆ.
  • ೧೦೦ ಖ.ಮಾ.: ಸೌರವೇಷ್ಟನ
  • ೧೦೦-೧೫೦ ಖ.ಮಾ.: ಚದರಿದ ತಟ್ಟೆಯ ಕೊನೆ
  • ೫೦೦-೩೦೦೦ ಖ.ಮಾ.: ಹಿಲ್ಸ್ ಮೋಡ/"ಒಳ ಊರ್ಟ್ ಮೋಡಗಳ ಪ್ರಾರಂಭ
  • ೨೦,೦೦೦ ಖ.ಮಾ: ಹಿಲ್ಸ್ ಮೋಡ/"ಒಳ ಊರ್ಟ್ ಮೋಡ"ಗಳ ಕೊನೆ, ಮತ್ತು "ಹೊರ ಊರ್ಟ್ ಮೋಡ"ದ ಪ್ರಾರಂಭ
  • ೫೦,೦೦೦ ಖ.ಮಾ.: "ಹೊರ ಊರ್ಟ್ ಮೋಡ"ದ ಹೊರ ಸೀಮೆಯ ಅಂದಾಜು ದೂರ (೧.೦ LY)
  • ೧೦೦,೦೦೦ ಖ.ಮಾ.: "ಹೊರ ಊರ್ಟ್ ಮೋಡ"ದ ಹೊರ ಸೀಮೆಯ ಅತಿ ಹೆಚ್ಚಿನ ಸಂಭಾವ್ಯ ದೂರ (೧.೬ LY).
  • ೧೨೫,೦೦೦ ಖ.ಮಾ.: ಸೂರ್ಯನ ಗುರುತ್ವ ಕ್ಷೇತ್ರದ ಪ್ರಭಾವದ ವ್ಯಾಪ್ತಿಯ ಕೊನೆ (ಹಿಲ್/ರೋಶೆ ಗೋಳ). ಇದರಾಚೆಗಿರುವುದು ಅಂತರನಾಕ್ಷತ್ರಿಕ ಆಕಾಶ
  • ಪ್ರಾಕ್ಸಿಮಾ ಸಂಟಾರಿಯು (ಅತಿ ಹತ್ತಿರದ ನಕ್ಷತ್ರ) ಸೂರ್ಯನಿಂದ ~೨೬೮ ೦೦೦ ಖ.ಮಾ. ದೂರದಲ್ಲಿದೆ.
  • ಬೆಟಲ್‌ಗೀಸ್ ನಕ್ಷತ್ರದ ಸರಾಸರಿ ವ್ಯಾಸ ೨.೫೭ ಖ.ಮಾ..
  • ಸೂರ್ಯನಿಂದ ಕ್ಷೀರಪಥದ ಕೇಂದ್ರಕ್ಕಿರುವ ದೂರವು ಸುಮಾರು ೧.೭×೧೦ ಖ.ಮಾ.

ಕೆಲವು ಪರಿವರ್ತನಾ ಅಪವರ್ತನಗಳು:

  • ೧ ಖ.ಮಾ. = ೧೪೯ ೫೯೭ ೮೭೦.೬೯೧ ± ೦.೦೩೦ ಕಿ.ಮೀ. ≈ ೯೨ ೯೫೫ ೮೦೭ ಮೈಲಿಗಳು ≈ ೮.೩೧೭ ಜ್ಯೋತಿ ನಿಮಿಷಗಳು ≈ ೪೯೯ ಜ್ಯೋತಿ ಕ್ಷಣಗಳು
  • ೧ ಜ್ಯೋತಿಕ್ಷಣ ≈ ೦.೦೦೨ ಖ.ಮಾ.
  • ೧ ಗಿಗಾ ಮೀಟರ್ ≈ ೦.೦೦೭ ಖ.ಮಾ.
  • ೧ ಜ್ಯೋತಿನಿಮಿಷ ≈ ೦.೧೨೦ ಖ.ಮಾ.
  • ೧ ಮೈಕ್ರೊ ಪಾರ್ಸೆಕ್ ≈ ೦.೨೦೬ ಖ.ಮಾ.
  • ೧ ಟೆರಾ ಮೀಟರ್ ≈ ೬.೬೮೫ ಖ.ಮಾ.
  • ೧ ಜ್ಯೋತಿಘಂಟೆ ≈ ೭.೨೧೪ ಖ.ಮಾ.
  • ೧ ಜ್ಯೋತಿದಿನ ≈ ೧೭೩.೨೬೩ ಖ.ಮಾ.
  • ೧ ಮಿಲಿ ಪಾರ್ಸೆಕ್ ≈ ೨೦೬.೨೬೫ ಖ.ಮಾ.
  • ೧ ಜ್ಯೋತಿಸಪ್ತಾಹ ≈ ೧೨೧೨.೮೪ ಖ.ಮಾ.
  • ೧ ಜ್ಯೋತಿರ್ಮಾಸ ≈ ೫೧೯೭.೯ ಖ.ಮಾ.
  • ಜ್ಯೋತಿರ್ವರ್ಷ ≈ ೬೩,೨೪೧ ಖ.ಮಾ.
  • ಪಾರ್ಸೆಕ್ ≈ ೨೦೬,೨೬೫ ಖ.ಮಾ.

ಇವನ್ನೂ ನೋಡಿ

ಉಲ್ಲೇಖಗಳು

Tags:

en:Plus-minus signen:lengthಭೂಮಿಸೂರ್ಯ

🔥 Trending searches on Wiki ಕನ್ನಡ:

ಪ್ರವಾಹಗೋತ್ರ ಮತ್ತು ಪ್ರವರವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ನೀತಿ ಆಯೋಗಭಾರತದ ವಿಶ್ವ ಪರಂಪರೆಯ ತಾಣಗಳುಮಲೈ ಮಹದೇಶ್ವರ ಬೆಟ್ಟದ್ವಾರಕೀಶ್ಶಿವಕುಮಾರ ಸ್ವಾಮಿಸಂಸ್ಕೃತಿವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಹಲ್ಮಿಡಿ ಶಾಸನಆಂಧ್ರ ಪ್ರದೇಶಕರ್ನಾಟಕದ ಇತಿಹಾಸಕರ್ನಾಟಕದ ಶಾಸನಗಳುಕನಕದಾಸರುಸಮುದ್ರಶಾಸ್ತ್ರಅನುನಾಸಿಕ ಸಂಧಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆವಿನಾಯಕ ಕೃಷ್ಣ ಗೋಕಾಕಪೌರತ್ವಸೆಸ್ (ಮೇಲ್ತೆರಿಗೆ)ಭಾಷಾ ವಿಜ್ಞಾನಬಂಗಾರದ ಮನುಷ್ಯ (ಚಲನಚಿತ್ರ)ಬಾಳೆ ಹಣ್ಣುಕ್ಯಾರಿಕೇಚರುಗಳು, ಕಾರ್ಟೂನುಗಳುರೋಸ್‌ಮರಿಕೈಮಗ್ಗಹಲಸುನಾಗೇಶ ಹೆಗಡೆನಿರುದ್ಯೋಗಕೊತ್ತುಂಬರಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಚಿಕ್ಕಮಗಳೂರುರಾಮ ಮನೋಹರ ಲೋಹಿಯಾಬಾಂಗ್ಲಾದೇಶಸೀತೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುರಾಷ್ಟ್ರೀಯ ಉತ್ಪನ್ನಅಲಾವುದ್ದೀನ್ ಖಿಲ್ಜಿಸೂರ್ಯ (ದೇವ)ಗೂಗಲ್ರವೀಂದ್ರನಾಥ ಠಾಗೋರ್ಕೈಗಾರಿಕೆಗಳುಮದುವೆಸಹಕಾರಿ ಸಂಘಗಳುಸಾಮಾಜಿಕ ಸಮಸ್ಯೆಗಳುಮೂಢನಂಬಿಕೆಗಳುಭಾರತದಲ್ಲಿ ಪಂಚಾಯತ್ ರಾಜ್ಲಿವರ್ ಪೂಲ್ ಫುಟ್ ಬಾಲ್ ಕ್ಲಬ್ಮಾಸಸೀತಾ ರಾಮಸಂವತ್ಸರಗಳುಶಿಶುನಾಳ ಶರೀಫರುಯೋನಿಅಡಿಕೆತಲಕಾಡುಕಾರ್ಲ್ ಮಾರ್ಕ್ಸ್ಕಾವೇರಿ ನದಿಗೂಬೆಕರ್ನಾಟಕದ ವಾಸ್ತುಶಿಲ್ಪತೀ. ನಂ. ಶ್ರೀಕಂಠಯ್ಯಡಿ.ವಿ.ಗುಂಡಪ್ಪಕೃಷಿಕ್ರೈಸ್ತ ಧರ್ಮಸಂವಹನಹನುಮಂತಪರಿಸರ ವ್ಯವಸ್ಥೆಶಾಂತಲಾ ದೇವಿಸೂರ್ಯವಂಶ (ಚಲನಚಿತ್ರ)ಸತೀಶ್ ನಂಬಿಯಾರ್ವ್ಯಾಕ್ಸಿನೇಷನ್ (ಲಸಿಕೆ ಹಾಕುವುದು)ರಾಜಕೀಯ ವಿಜ್ಞಾನಸತ್ಯ (ಕನ್ನಡ ಧಾರಾವಾಹಿ)ನುಡಿ (ತಂತ್ರಾಂಶ)ಗ್ರಂಥ ಸಂಪಾದನೆಹೂವುಭಾರತದಲ್ಲಿನ ಶಿಕ್ಷಣ🡆 More