ಕಾನ್ಸ್ಟಾಂಟಿನೋಪಲ್

ಪಶ್ಚಿಮ ರೋಮನ್ ಸಾಮ್ರಾಜ್ಯ ಕೊನೆಗೊಂಡ ಮೇಲೆ, 476 ರಿಂದ 1453ರ ವರೆಗೆ ಬಿಜಾಂಟಿನ್ (ಪೂರ್ವರೋಮನ್) ಸಾಮ್ರಾಜ್ಯಕ್ಕೂ ಅದು ತುರ್ಕರಿಂದ ಪತನ ಹೊಂದಿದ ಅನಂತರ ಆಟೋಮನ್ ಸಾಮ್ರಾಜ್ಯಕ್ಕೂ ರಾಜಧಾನಿಯಾಗಿದ್ದು, ಈಗ ಇಸ್ತಾನ್ಬುಲ್ ಎನಿಸಿಕೊಂಡಿರುವ ನಗರ.

ಮೊದಲು ಇದಕ್ಕೆ ಬಿಜಾಂಟಿಯಂ ಎಂಬ ಹೆಸರಿತ್ತು.

ಕಾನ್ಸ್ಟಾಂಟಿನೋಪಲ್
ಕಾನ್ಸ್ಟಾಂಟಿನೋಪಲ್ ;Byzantine Constantinople-en

ಕಾನ್ಸ್ಟಾಂಟಿನೋಪಲ್ ಎಂಬ ಹೆಸರು

ಬಾಸ್ಫೊರಸ್ ಜಲಸಂಧಿಯ ಐರೋಪ್ಯ ದಂಡೆಯ ಮೇಲಿದ್ದ ಈ ನಗರವನ್ನು 1ನೆಯ ಕಾನ್‍ಸ್ಟಂಟೈನ್ ಮಹಾಶಯ ೩೩೦ರಲ್ಲಿ ತನ್ನ ರಾಜಧಾನಿಯಾಗಿ ಉದ್ಘಾಟಿಸಿದಾಗ ಇದನ್ನು ಆತನ ಹೆಸರಿನಿಂದ ಕಾನ್‍ಸ್ಟಾಂಟಿನೋಪೊಲಿಸ್ ಎಂದೂ ಹೊಸ ರೋಂ ಎಂದೂ ಕರೆಯಲಾಯಿತು.

ವೈಶಿಷ್ಟ್ಯ

ಏಳು ಮಲೆಗಳ ಮೇಲೆ ನಿರ್ಮಿತವಾಗಿ, ಮೂರು ಸುತ್ತಿನ ಕೋಟೆಯಿಂದ ರಕ್ಷಿತವಾಗಿದ್ದ ಈ ನಗರ ಬಿಜಾóಂಟಿನ್ ಚಕ್ರಾಧಿಪತ್ಯದ ವೈಭವದ ಪಡಿನೆಳಲಾಗಿ, 1453ರಲ್ಲಿ ತುರ್ಕರ ವಶವಾಗುವ ವರೆಗೂ ಮಧ್ಯ ಯೂರೋಪಿನಲ್ಲೇ ಅತ್ಯಂತ ಪ್ರಸಿದ್ಧ ನಗರವಾಗಿತ್ತು.

ಪೂರ್ವ ಮತ್ತು ಪಶ್ಚಿಮ ರೋಮನ್ ಸಾಮ್ರಾಜ್ಯಗಳನ್ನು ಕಾನ್‍ಸ್ಟಂಟೈನ್ ಒಂದುಗೂಡಿಸಿ, ಕಾನ್‍ಸ್ಟಾಂಟಿನೋಪಲಿನಿಂದ ಅದನ್ನು ಆಳತೊಡಗಿದ ಮೇಲೆ ಈ ನಗರ ಸರ್ವತೋಮುಖವಾಗಿ ಬೆಳೆಯಿತು. ಭವ್ಯಸ್ಮಾರಕಗಳು, ಕ್ರೀಡಾರಂಗಗಳು ಮುಂತಾದ ರಚನೆಗಳಿಂದ ಕೂಡಿ ಅತ್ಯಂತ ಸುಂದರವೂ ವೈಭವಯುತವೂ ಆಗಿ ಕಂಗೊಳಿಸುತ್ತಿತ್ತು.

ಸೇಂಟ್ ಸೋಫಿಯ ಕಟ್ಟಡ

ಕಾನ್‍ಸ್ಟಂಟೈನನ ಕಾಲದಲ್ಲಿ ಇಲ್ಲಿ ನಿರ್ಮಿತವಾದ ಸೇಂಟ್ ಸೋಫಿಯ ಅತ್ಯಂತ ಪ್ರಸಿದ್ಧ ಕಟ್ಟಡ. ಥಿಯೋಡೊಸಿಯಸ್ (415) ಮತ್ತು ಜಸ್ಟಿನಿಯನರ ಕಾಲದಲ್ಲಿ ವಿಸ್ತøತವಾಗಿ ಭವ್ಯರೂಪು ತಳೆಯಿತು. ಕಲಾಪೂರ್ಣವಾದ ಇದರ ಒಳಭಾಗದ ಕೆತ್ತನೆಕೆಲಸವನ್ನು ಪೂರ್ಣಗೊಳಿಸಲು 10,000 ಕೆಲಸಗಾರರು ಸುಮಾರು ಆರು ವರ್ಷ ದುಡಿದರು. ಇದು ಮಧ್ಯಯುಗದ ಅತ್ಯಂತ ಅಪೂರ್ವ ಕಟ್ಟಡವಾಗಿತ್ತು. ಚಕ್ರವರ್ತಿಗಳ ಪವಿತ್ರ ಅರಮನೆಗಳೂ ಬೃಹದ್ವರ್ತುಲ ಕೀಡಾರಂಗವೂ ಸುವರ್ಣದ್ವಾರವೂ ಇದರ ಸುಪ್ರಸಿದ್ದ ಸ್ಮಾರಕಗಳಾಗಿದ್ದವು.

ಧರ್ಮ

ಇತಿಹಾಸದಲ್ಲಿ ಕಾನ್‍ಸ್ಟಾಂಟಿನೋಪಲ್ ವಹಿಸಿದ ಪಾತ್ರ ಪ್ರಮುಖವಾದದ್ದು. ಆಗಾಗ್ಗೆ ಇಲ್ಲಿ ಧಾರ್ಮಿಕ ಸಮ್ಮೇಳನಗಳು ನಡೆಯುತ್ತಿದ್ದವು. ಪೂರ್ವ ಪಶ್ಚಿಮ ರೋಮನ್ ಸಾಮ್ರಾಜ್ಯ ಚರ್ಚ್‍ಗಳ ಮನ್ನಣೆ ಪಡೆದ ಮೂರು ವಿಶ್ವಕ್ರೈಸ್ತ ಸಮ್ಮೇಳನಗಳು ಇವುಗಳಲ್ಲಿ ಮುಖ್ಯವಾದವು. ಈ ನಗರ ಕ್ರೈಸ್ತಸಂನ್ಯಾಸಿಗಳ ಪ್ರಸಿದ್ಧ ಕೇಂದ್ರವೂ ಆಗಿತ್ತು.

ಇತಿಹಾಸ ಮತ್ತು ಎಂಬ ಇಸ್ತಾನ್ಬುಲ್ ಹೆಸರು

ಇದು ಅತ್ಯಂತ ಪ್ರವರ್ಧಮಾನ ಸ್ಥಿತಿಯಲ್ಲಿದ್ದಾಗ (10ನೆಯ ಶತಮಾನ) ನಗರದ ಜನಸಂಖ್ಯೆ 10,00,000 ಕಲೆ ಸಾಹಿತ್ಯ ಸಂಪತ್ತುಗಳ ಕೇಂದ್ರವಾಗಿದ್ದ ಕಾನ್‍ಸ್ಟಾಂಟಿನೋಪಲ್ ೧೪೫೩ರಲ್ಲಿ ತುರ್ಕರ ವಶವಾಗಿ ತನ್ನ ವೈಭವವನ್ನು ಕಳೆದುಕೊಂಡು, ಜನಹೀನವಾಗಿ ಕೆಲಕಾಲ ಮಸುಳಿಸಿತ್ತು. ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಅದು ಪುನಃ ತಲೆಯೆತ್ತಿ ಮತ್ತೊಮ್ಮೆ ವೈಭವಯುಕ್ತವಾಗಿ ಯೂರೋಪಿನ ಒಂದು ಪ್ರಸಿದ್ಧ ರಾಜಕೀಯ ಹಾಗೂ ವಾಣಿಜ್ಯ ಕೇಂದ್ರವಾಗಿ ಬೆಳೆಯಿತು. ಮೊದಲನೆಯ ಮಹಾಯುದ್ಧದ ಅನಂತರ ಮಿತ್ರರಾಷ್ಟ್ರಗಳ ಆಕ್ರಮಣಕ್ಕೊಳಗಾಗಿತ್ತು. (1918-23). 1923ರಲ್ಲಿ ತುರ್ಕಿಯ ರಾಜಧಾನಿಯಾದ್ದರಿಂದ ಇದರ ರಾಜಕೀಯ ಪ್ರಾಮುಖ್ಯ ಕಡಿಮೆಯಾಯಿತೆನ್ನಬಹುದು. ಈ ನಗರಕ್ಕೆ ಇಸ್ತಾನ್ಬುಲ್ ಎಂದು ನಾಮಕರಣವಾದದ್ದು 1930ರಲ್ಲಿ.

ಉಲ್ಲೇಖಗಳು

Tags:

ಕಾನ್ಸ್ಟಾಂಟಿನೋಪಲ್ ಎಂಬ ಹೆಸರುಕಾನ್ಸ್ಟಾಂಟಿನೋಪಲ್ ವೈಶಿಷ್ಟ್ಯಕಾನ್ಸ್ಟಾಂಟಿನೋಪಲ್ ಸೇಂಟ್ ಸೋಫಿಯ ಕಟ್ಟಡಕಾನ್ಸ್ಟಾಂಟಿನೋಪಲ್ ಧರ್ಮಕಾನ್ಸ್ಟಾಂಟಿನೋಪಲ್ ಇತಿಹಾಸ ಮತ್ತು ಎಂಬ ಇಸ್ತಾನ್ಬುಲ್ ಹೆಸರುಕಾನ್ಸ್ಟಾಂಟಿನೋಪಲ್ ಉಲ್ಲೇಖಗಳುಕಾನ್ಸ್ಟಾಂಟಿನೋಪಲ್ಇಸ್ತಾನ್ಬುಲ್

🔥 Trending searches on Wiki ಕನ್ನಡ:

ವಿಜಯವಾಣಿಕರ್ನಾಟಕ ಹೈ ಕೋರ್ಟ್ಗುಡಿಸಲು ಕೈಗಾರಿಕೆಗಳುಧರ್ಮರಾಯ ಸ್ವಾಮಿ ದೇವಸ್ಥಾನ1935ರ ಭಾರತ ಸರ್ಕಾರ ಕಾಯಿದೆರಾಜ್ಯಸಭೆಶಬರಿಮೋಳಿಗೆ ಮಾರಯ್ಯತುಂಗಭದ್ರ ನದಿಹೆಚ್.ಡಿ.ಕುಮಾರಸ್ವಾಮಿಕನ್ನಡ ಕಾವ್ಯದೇವರ ದಾಸಿಮಯ್ಯಖಗೋಳಶಾಸ್ತ್ರಶಾತವಾಹನರುಚಾಲುಕ್ಯಗರ್ಭಧಾರಣೆರಾಶಿದ್ವಿರುಕ್ತಿರಸ(ಕಾವ್ಯಮೀಮಾಂಸೆ)ಗೂಗಲ್ಭಾರತದ ಮಾನವ ಹಕ್ಕುಗಳುಶಬ್ದ ಮಾಲಿನ್ಯರಂಗಭೂಮಿಪಂಚ ವಾರ್ಷಿಕ ಯೋಜನೆಗಳುಕರ್ನಾಟಕದ ಕಲೆ ಮತ್ತು ಸಂಸ್ಕೃತಿಆಗಮ ಸಂಧಿಮೆಕ್ಕೆ ಜೋಳಅರವಿಂದ ಘೋಷ್ರಾಷ್ಟ್ರೀಯ ಶಿಕ್ಷಣ ನೀತಿಛತ್ರಪತಿ ಶಿವಾಜಿಸ್ವಚ್ಛ ಭಾರತ ಅಭಿಯಾನಭಗತ್ ಸಿಂಗ್ಕನ್ನಡ ಅಕ್ಷರಮಾಲೆಹೈದರಾಲಿಸಂಯುಕ್ತ ರಾಷ್ಟ್ರ ಸಂಸ್ಥೆದೇವತಾರ್ಚನ ವಿಧಿರಾಯಲ್ ಚಾಲೆಂಜರ್ಸ್ ಬೆಂಗಳೂರುಗಣೇಶರಾಹುಲ್ ಗಾಂಧಿಉಡುಪಿ ಜಿಲ್ಲೆಮೂಲಧಾತುಉಡಸಿದ್ದಲಿಂಗಯ್ಯ (ಕವಿ)ಭಾರತದ ರಾಷ್ಟ್ರಪತಿಗಳ ಪಟ್ಟಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಅತ್ತಿಮಬ್ಬೆಜೈನ ಧರ್ಮಊಟಬಡತನನೀತಿ ಆಯೋಗವ್ಯಾಪಾರಪ್ರಜ್ವಲ್ ರೇವಣ್ಣಮಂಟೇಸ್ವಾಮಿಋಗ್ವೇದಸಜ್ಜೆವಿಶ್ವದ ಅದ್ಭುತಗಳುಖೊಖೊಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿ೧೮೬೨ಅಮೃತಧಾರೆ (ಕನ್ನಡ ಧಾರಾವಾಹಿ)ನಚಿಕೇತವಿಜ್ಞಾನವಿಜಯದಾಸರುಕನ್ನಡ ಸಾಹಿತ್ಯಸ್ತ್ರೀಶೈಕ್ಷಣಿಕ ಸಂಶೋಧನೆಭಾರತದ ಆರ್ಥಿಕ ವ್ಯವಸ್ಥೆಮಂಜುಳಟೊಮೇಟೊಕನ್ನಡ ಸಾಹಿತ್ಯ ಪ್ರಕಾರಗಳುವೆಬ್‌ಸೈಟ್‌ ಸೇವೆಯ ಬಳಕೆಕಲಿಯುಗಜಶ್ತ್ವ ಸಂಧಿ🡆 More