ಕನ್ನೂರ

ಕನ್ನೂರ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನಲ್ಲಿದೆ.

ಕನ್ನೂರ
ಕನ್ನೂರ
village

ಭೌಗೋಳಿಕ

ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.

ಹವಾಮಾನ

  • ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು
  • ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಜನಸಂಖ್ಯೆ

ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 9902 ಇದೆ. ಅದರಲ್ಲಿ 5173 ಪುರುಷರು ಮತ್ತು 4729 ಮಹಿಳೆಯರು ಇದ್ದಾರೆ.

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ

ಕನ್ನೂರ 
ಉತ್ತರ ಕರ್ನಾಟಕದ ಊಟ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಧರ್ಮ

ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.

ಭಾಷೆ

ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ದೇವಾಲಯ

  • ಶ್ರೀ ಮಹಾಲಕ್ಷ್ಮಿ ದೇವಾಲಯ
  • ಶ್ರೀ ದುರ್ಗಾದೇವಿ ದೇವಾಲಯ
  • ಶ್ರೀ ಮಲ್ಲಿಕಾರ್ಜುನ ದೇವಾಲಯ
  • ಶ್ರೀ ಬಸವೇಶ್ವರ ದೇವಾಲಯ
  • ಶ್ರೀ ವೆಂಕಟೇಶ್ವರ ದೇವಾಲಯ
  • ಶ್ರೀ ಪಾಂಡುರಂಗ ದೇವಾಲಯ
  • ಶ್ರೀ ಹಣಮಂತ ದೇವಾಲಯ

ಮಸೀದಿ

ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.

ನೀರಾವರಿ

ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.

ಕಾಲುವೆ

ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.

ಕೃಷಿ ಮತ್ತು ತೋಟಗಾರಿಕೆ

ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.

ಆರ್ಥಿಕತೆ

ಕನ್ನೂರ 
ಸ.ಸ. ಗಣಪತರಾವ ಮಹಾರಜ, ಶಾಂತಿ ಕುಟೀರ ಆಶ್ರಮ, ಕನ್ನೂರ

ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.

ಉದ್ಯೋಗ

ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.

ಬೆಳೆ

ಆಹಾರ ಬೆಳೆಗಳು

ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ

ವಾಣಿಜ್ಯ ಬೆಳೆಗಳು

ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.

ತರಕಾರಿ ಬೆಳೆಗಳು

ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.

ಸಸ್ಯ

ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.

ಪ್ರಾಣಿ

ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.

ಹಬ್ಬ

ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.

ಶಿಕ್ಷಣ

  • ಕಿರಿಯ ಪ್ರಾಥಮಿಕ ಶಾಲೆ, ಕನ್ನೂರ
  • ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಕನ್ನೂರ
  • ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಕನ್ನೂರ
  • ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಕನ್ನೂರ
  • ಶಾಂತಿನಿಕೇತನ ಪ್ರಾಥಮಿಕ ಶಾಲೆ, ಕನ್ನೂರ
  • ಎಸ್.ವಿ. ಪ್ರೌಡ ಶಾಲೆ, ಕನ್ನೂರ
  • ಬಸವನಗುಡಿ ಪ್ರೌಡ ಶಾಲೆ, ಕನ್ನೂರ
  • ಸರಕಾರಿ ಪದವಿಪೂರ್ವ ಮಹಾವಿದ್ಯಾಲಯ, ಕನ್ನೂರ

ಆರೋಗ್ಯ

ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ.

ವಿದ್ಯುತ್ ಪರಿವರ್ತನಾ ಕೇಂದ್ರ

  • ಗಮ್ಮೆಸಾ ಪವನ ವಿದ್ಯುತ್ ಘಟಕ, ಕನ್ನೂರ, ವಿಜಯಪುರ

ಶಾಂತಿ ಕುಟೀರ, ಕನ್ನೂರ

ಗಣಪತರಾವ್ ಮಹಾರಾಜರು ಗ್ರಾಮದ ಹಿರಿಯ ಸಂತರು. ಗ್ರಾಮದಲ್ಲಿ ಶಾಂತಿ ಕುಟೀರನ್ನು ಸ್ಥಾಪಿಸಿದ್ದಾರೆ. ಶಾಂತಿ ಕುಟೀರ ಆಶ್ರಮಕ್ಕೆ ಸಮಾಜ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಸಾಕ್ಷರತೆ

ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.

ರಾಜಕೀಯ

ಗ್ರಾಮವು ಬಿಜಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.

ಸೇವಾ ಕೇಂದ್ರಗಳು

  • ಮಳೆ ಮಾಪನ ಕೇಂದ್ರ, ಕನ್ನೂರ
  • ಎಸ್.ಬಿ.ಐ.ಬ್ಯಾಂಕ್, ಕನ್ನೂರ
  • ಕಾರ್ಪೋರೇಶನ್ ಬ್ಯಾಂಕ್, ಕನ್ನೂರ
  • ಗ್ರಾಮ ಪಂಚಾಯತಿ, ಕನ್ನೂರ
  • ದೂರವಾಣಿ ವಿನಿಮಯ ಕೇಂದ್ರ, ಕನ್ನೂರ
  • ಕನ್ನೂರ - 586119 (ಕನ್ನಾಳ, ಮಡಸನಾಳ, ಮಖಣಾಪುರ, ಶಾಂತಿ ಕುಟೀರ, ಶಿರನಾಳ, ತಿಡಗುಂದಿ, ಬರಟಗಿ).
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕನ್ನೂರ
  • ಹಾಲು ಉತ್ಪಾದಕ ಸಹಕಾರಿ ಸಂಘ, ಕನ್ನೂರ
  • ಪ್ರಾಥಮಿಕ ಆರೋಗ್ಯ ಕೇಂದ್ರ, ಕನ್ನೂರ

ಉಲ್ಲೇಖ

ವಿಜಯಪುರ

ಕರ್ನಾಟಕ

ಕನ್ನೂರ 
ಬಿಜಾಪುರ ತಾಲ್ಲೂಕುಗಳು
ಇಂಡಿ | ಕೊಲ್ಹಾರ | ಚಡಚಣ | ತಾಳಿಕೋಟಿ | ತಿಕೋಟಾ | ದೇವರ ಹಿಪ್ಪರಗಿ | ನಿಡಗುಂದಿ | ಬಬಲೇಶ್ವರ | ಬಸವನ ಬಾಗೇವಾಡಿ | ಮುದ್ದೇಬಿಹಾಳ | ಸಿಂದಗಿ | ಬಿಜಾಪುರ

Tags:

ಕನ್ನೂರ ಭೌಗೋಳಿಕಕನ್ನೂರ ಹವಾಮಾನಕನ್ನೂರ ಜನಸಂಖ್ಯೆಕನ್ನೂರ ಸಾಂಸ್ಕೃತಿಕಕನ್ನೂರ ಧರ್ಮಕನ್ನೂರ ಭಾಷೆಕನ್ನೂರ ದೇವಾಲಯಕನ್ನೂರ ಮಸೀದಿಕನ್ನೂರ ನೀರಾವರಿಕನ್ನೂರ ಕಾಲುವೆಕನ್ನೂರ ಕೃಷಿ ಮತ್ತು ತೋಟಗಾರಿಕೆಕನ್ನೂರ ಆರ್ಥಿಕತೆಕನ್ನೂರ ಉದ್ಯೋಗಕನ್ನೂರ ಬೆಳೆಕನ್ನೂರ ಸಸ್ಯಕನ್ನೂರ ಪ್ರಾಣಿಕನ್ನೂರ ಹಬ್ಬಕನ್ನೂರ ಶಿಕ್ಷಣಕನ್ನೂರ ಆರೋಗ್ಯಕನ್ನೂರ ವಿದ್ಯುತ್ ಪರಿವರ್ತನಾ ಕೇಂದ್ರಕನ್ನೂರ ಶಾಂತಿ ಕುಟೀರ, ಕನ್ನೂರ ಸಾಕ್ಷರತೆಕನ್ನೂರ ರಾಜಕೀಯಕನ್ನೂರ ಸೇವಾ ಕೇಂದ್ರಗಳುಕನ್ನೂರ ಉಲ್ಲೇಖಕನ್ನೂರಕರ್ನಾಟಕವಿಜಯಪುರ

🔥 Trending searches on Wiki ಕನ್ನಡ:

ಕಾರವಾರಹಸ್ತ ಮೈಥುನತೇಜಸ್ವಿ ಸೂರ್ಯಹೊರನಾಡುಬಿ. ಆರ್. ಅಂಬೇಡ್ಕರ್ಮತದಾನ (ಕಾದಂಬರಿ)ಗರ್ಭಧಾರಣೆಸಂಗೀತಹೊಯ್ಸಳ ವಿಷ್ಣುವರ್ಧನಮೈಸೂರು ಅರಮನೆತುಳಸಿಸಂಚಿ ಹೊನ್ನಮ್ಮಕನ್ನಡ ವಿಶ್ವವಿದ್ಯಾಲಯಕರ್ನಾಟಕಶಿವನ ಸಮುದ್ರ ಜಲಪಾತಶ್ರೀ ರಾಮಾಯಣ ದರ್ಶನಂಸೂಪರ್ (ಚಲನಚಿತ್ರ)ಕಾಲ್ಪನಿಕ ಕಥೆಭಾರತದ ಮುಖ್ಯಮಂತ್ರಿಗಳುರಾಷ್ಟ್ರೀಯ ಉತ್ಪನ್ನಅಲಾವುದ್ದೀನ್ ಖಿಲ್ಜಿಜಿ.ಎಸ್. ಘುರ್ಯೆಅವಿಭಾಜ್ಯ ಸಂಖ್ಯೆಹವಾಮಾನದಾಳಿಂಬೆಭಾರತದ ರಾಜಕೀಯ ಪಕ್ಷಗಳುವೇದರಾಷ್ಟ್ರಕವಿಸಿಂಹಹಿಂದುಸ್ತಾನಿ ಶಾಸ್ತ್ರೀಯ ಸಂಗೀತಧರ್ಮಬಳ್ಳಾರಿಜೋಳಸಾಯಿ ಪಲ್ಲವಿಕರ್ನಾಟಕದ ಜಿಲ್ಲೆಗಳುಭಗತ್ ಸಿಂಗ್ಕರ್ನಾಟಕ ವಿಧಾನ ಸಭೆಕರ್ನಾಟಕ ರತ್ನಮಂಗಳಮುಖಿಕಾರ್ಮಿಕ ಕಾನೂನುಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಬಸವೇಶ್ವರ2ನೇ ದೇವ ರಾಯಚೆನ್ನಕೇಶವ ದೇವಾಲಯ, ಬೇಲೂರುಕಬ್ಬುಯಕ್ಷಗಾನಹುಬ್ಬಳ್ಳಿಕೆ ವಿ ನಾರಾಯಣಆರ್ಯಭಟ (ಗಣಿತಜ್ಞ)ಮಾನವ ಹಕ್ಕುಗಳುಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆರಸ(ಕಾವ್ಯಮೀಮಾಂಸೆ)ಸಮಾಜ ವಿಜ್ಞಾನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಒಗಟುಬಾಹುಬಲಿಉತ್ತರ ಪ್ರದೇಶದಕ್ಷಿಣ ಕನ್ನಡಲಕ್ಷ್ಮಿವಾಸ್ತುಶಾಸ್ತ್ರಉಪನಿಷತ್ಸಿದ್ದಲಿಂಗಯ್ಯ (ಕವಿ)ಬೌದ್ಧ ಧರ್ಮಪೋಲಿಸ್1935ರ ಭಾರತ ಸರ್ಕಾರ ಕಾಯಿದೆಕದಂಬ ಮನೆತನಉಡುಪಿ ಜಿಲ್ಲೆಪ್ರಾಣಾಯಾಮಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಮೊಘಲ್ ಸಾಮ್ರಾಜ್ಯಯಲಹಂಕಸಿಂಧನೂರುಕನ್ನಡ ಛಂದಸ್ಸುಕೋಲಾರಭಾವಗೀತೆಕಿರುಧಾನ್ಯಗಳುವಿಜಯನಗರಸಾಲುಮರದ ತಿಮ್ಮಕ್ಕಮಂಕುತಿಮ್ಮನ ಕಗ್ಗ🡆 More