ಮುಸ್ಲಿಮ್

ಮುಸ್ಲಿಮ್ ಅಥವಾ ಮುಸಲ್ಮಾನ ಅಥವಾ ಮಹಮದೀಯ (ಅರಬ್ಬಿ: المسلم - ಅಲ್-ಮುಸ್ಲಿಮ್) ಐಬ್ರಹೀಮಿಕ ಧರ್ಮಗಳಲ್ಲಿ ಒಂದಾದ ಇಸ್ಲಾಮ್ ಧರ್ಮದ ಅನುಯಾಯಿಯ ಹೆಸರು.

ಮುಸ್ಲಿಮರು ಏಕೈಕ ದೇವರನ್ನು ಮಾತ್ರ ನಂಬುತ್ತಾರೆ ಮತ್ತು ಪೂಜಿಸುತ್ತಾರೆ. ಮುಹಮ್ಮದ್‌ರನ್ನು ಅಂತಿಮ ಪ್ರವಾದಿಯೆಂದು ಮತ್ತು ಕುರ್‌ಆನನ್ನು ಅಂತಿಮ ದೇವಗ್ರಂಥವೆಂದು ನಂಬುತ್ತಾರೆ.

ಮುಸ್ಲಿಮ್
ಮುಸ್ಲಿಮ್
ದೆಹಲಿಯ ಜಾಮಾ ಮಸೀದಿಯಲ್ಲಿ ಒಬ್ಬ ಮುಸ್ಲಿಮ್ ಕುಳಿತಿರುವುದು
Total population
190 ಕೋಟಿ
Founder
ಮುಹಮ್ಮದ್
Regions with significant populations
ಮುಸ್ಲಿಮ್ ಇಂಡೋನೇಷ್ಯಾ229,620,000
ಮುಸ್ಲಿಮ್ ಭಾರತ213,340,000
ಮುಸ್ಲಿಮ್ ಪಾಕಿಸ್ತಾನ200,490,000
ಮುಸ್ಲಿಮ್ ಬಾಂಗ್ಲಾದೇಶ153,010,000
ಮುಸ್ಲಿಮ್ ನೈಜೀರಿಯ104,650,000
ಮುಸ್ಲಿಮ್ ಈಜಿಪ್ಟ್90,420,000
ಮುಸ್ಲಿಮ್ ಇರಾನ್80,880,000
ಮುಸ್ಲಿಮ್ ಟರ್ಕಿ79,090,000
ಮುಸ್ಲಿಮ್ ಇರಾಕ್41,430,000
ಮುಸ್ಲಿಮ್ ಅಫ್ಘಾನಿಸ್ತಾನ40,610,000
Religions
ಸುನ್ನಿ 75% - 90%

ಶಿಯಾ 10% - 20%

ಅಹ್ಮದಿಯಾ < 1%

ಮುಸ್ಲಿಮರು ಜಾಗತಿಕವಾಗಿ 190 ಕೋಟಿಗಿಂತಲೂ (2020ರ ಅಂದಾಜಿನ ಪ್ರಕಾರ) ಹೆಚ್ಚು ಜನಸಂಖ್ಯೆ ಹೊಂದಿದ್ದು, ಜಗತ್ತಿನ ಒಟ್ಟು ಜನಸಂಖ್ಯೆಯ ಕಾಲು ಭಾಗವನ್ನು (25%) ಒಳಗೊಳ್ಳುತ್ತಾರೆ. ಮುಸ್ಲಿಮರ ಅತಿಹೆಚ್ಚು ಜನಸಂಖ್ಯೆಯಿರುವುದು ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕದಲ್ಲಿ (93%) ಮತ್ತು ಅತಿಕಡಿಮೆ ಜನಸಂಖ್ಯೆಯಿರುವುದು ಲ್ಯಾಟಿನ್ ಅಮೆರಿಕ-ಕೆರಿಬ್ಬಿಯನ್‌ನಲ್ಲಿ (1% ಕ್ಕಿಂತಲೂ ಕಡಿಮೆ). ದೇಶವಾರು ಲೆಕ್ಕದಲ್ಲಿ ಇಂಡೋನೇಷಿಯಾ ಮೊದಲ ಸ್ಥಾನದಲ್ಲಿದ್ದರೆ (22.9 ಕೋಟಿ), ಭಾರತವು ಎರಡನೇ ಸ್ಥಾನದಲ್ಲಿ (21.3 ಕೋಟಿ) ಮತ್ತು ಪಾಕಿಸ್ಥಾನ ಮೂರನೇ ಸ್ಥಾನದಲ್ಲಿದೆ (20 ಕೋಟಿ). ಮುಸ್ಲಿಮರಲ್ಲಿ ಅನೇಕ ಪಂಗಡಗಳು ಮತ್ತು ವಿಚಾರಧಾರೆಗಳಿದ್ದು ಸುನ್ನಿ ಮತ್ತು ಶಿಯಾಗಳು ಪ್ರಮುಖ ಪಂಗಡಗಳಾಗಿದ್ದಾರೆ. ಒಟ್ಟು ಮುಸ್ಲಿಮ್ ಜನಸಂಖ್ಯೆಯಲ್ಲಿ 75-90% ಸುನ್ನಿ ಮುಸ್ಲಿಮರು ಮತ್ತು 10-20% ಶಿಯಾ ಮುಸ್ಲಿಮರಿದ್ದಾರೆ.

ಹೆಸರಿನ ಉದ್ಭವ ಮತ್ತು ಅರ್ಥ

ಮುಸ್ಲಿಮ್ ಎಂಬುದು ಒಂದು ಅರೇಬಿಕ್ ಪದವಾಗಿದ್ದು, ಅದು ಇಸ್ಲಾಂ (ಅರೇಬಿಕ್ الإسلام - ಅಲ್-ಇಸ್ಲಾಮ್) ಎಂಬ ಕ್ರಿಯಾಧಾತುವಿನಿಂದ ಉದ್ಭವವಾದ ಕರ್ತೃ ಪದವಾಗಿದೆ. ಭಾಷಿಕ ಅರ್ಥದಲ್ಲಿ ಮುಸ್ಲಿಂ ಎಂದರೆ ಶರಣಾದವನು, ಸ್ವಯಂ ಅರ್ಪಿಸಿಕೊಂಡವನು, ತಲೆಬಾಗಿದವನು. ಪಾರಿಭಾಷಿಕ ಅರ್ಥದಲ್ಲಿ ಮುಸ್ಲಿಂ ಎಂದರೆ ಏಕೈಕ ದೇವರ ಇಚ್ಛೆಗೆ ಶರಣಾದವನು, ಸ್ವಯಂ ಅರ್ಪಿಸಿಕೊಂಡವನು,ಇಸ್ಲಾಂ ಅನ್ನು ಧರ್ಮವಾಗಿ ಸ್ವೀಕರಿಸಿಕೊಂಡವನು ಮತ್ತು ದೇವರ ಏಕೈಕತೆಯನ್ನು ಮತ್ತು ಮುಹಮ್ಮದ್‌ರ ಪ್ರವಾದಿತ್ವವನ್ನು ಒಪ್ಪಿಕೊಂಡವನು.

ಇಸ್ಲಾಮಿಕ್ ನಂಬಿಕೆಯ ಪ್ರಕಾರ ಒಬ್ಬ ವ್ಯಕ್ತಿ ಮುಸ್ಲಿಮ್ ಆಗಲು (ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು) ಶಹಾದ ಉಚ್ಛರಿಸಬೇಕಾದುದು ಕಡ್ಡಾಯ. ಶಹಾದ ಉಚ್ಛರಿಸುವುದು ಎಂದರೆ ಏಕೈಕ ದೇವರ (ಅಲ್ಲಾಹನ) ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ದೇವರ ಸಂದೇಶವಾಹಕ ಎಂದು ಸಾಕ್ಷಿ ನುಡಿಯುವುದು. ಅರೇಬಿಕ್ ಭಾಷೆಯಲ್ಲಿ ಇದನ್ನು "ಅಶ್‌ಹದು ಅನ್ ಲಾ ಇಲಾಹ ಇಲ್ಲಲ್ಲಾಹ್ ವ ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್" (أشهد أن لا إله إلا الله وأشهد أن محمداً رسول الله) ಎಂದು ಹೇಳುತ್ತಾರೆ. ಇದರ ಅರ್ಥ: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು".

ಇಸ್ಲಾಮಿಕ್ ನಂಬಿಕೆಯ ಪ್ರಕಾರ ಮುಹಮ್ಮದ್ ಪೈಗಂಬರ್‌ಗಿಂತ ಮೊದಲು ಬಂದ ಆದಮ್, ನೋಹ್, ಅಬ್ರಹಾಮ್, ಇಷ್ಮಾಯೇಲ್, ಯಾಕೋಬ್, ಮೋಸೆ, ಯೇಸು ಮುಂತಾದ ಪ್ರವಾದಿಗಳೆಲ್ಲರೂ ಮುಸ್ಲಿಮರು. ಏಕೆಂದರೆ ಇವರೆಲ್ಲರೂ ತಮ್ಮ ಇಚ್ಛೆಯನ್ನು ಏಕೈಕ ದೇವರಿಗೆ ಅರ್ಪಿಸಿ ಅವನ ಆಜ್ಞೆಯಂತೆ ಜೀವಿಸಿದ್ದರು ಮತ್ತು ಅದನ್ನೇ ಜನರಿಗೆ ಬೋಧಿಸಿದ್ದರು.

ವಿದ್ಯಾಭ್ಯಾಸ

ಜಗತ್ತಿನಲ್ಲಿ ಒಟ್ಟು 190 ಕೋಟಿ ಮುಸ್ಲಿಮರಿದ್ದು, ಇಸ್ಲಾಂ ಧರ್ಮವು ಅತಿ ಶೀಘ್ರವಾಗಿ ಬೆಳೆಯುತ್ತಿರುವ ಧರ್ಮವೆಂದು ಪರಿಗಣಿಸಲಾಗಿದೆ. ಮುಸ್ಲಿಮರಲ್ಲಿರುವ ಫಲವತ್ತತೆಯ ಪ್ರಮಾಣವೇ (TFR) ಇದಕ್ಕೆ ಮುಖ್ಯ ಕಾರಣವೆಂದು ಹೇಳಲಾಗುತ್ತದೆ. ಮುಸ್ಲಿಮರಲ್ಲಿ 2.9 ಪ್ರಮಾಣದಲ್ಲಿ ಫಲವತ್ತತೆಯಿದೆ. ಮುಸ್ಲಿಮರ ಶೈಕ್ಷಣಿಕ ಮಟ್ಟವು ಅತ್ಯಂತ ಕಳಪೆಯಾಗಿದ್ದು, ಸರಾಸರಿ 5.6 ವರ್ಷಗಳಷ್ಟು ಮಾತ್ರ ಶಾಲೆಗೆ ಹೋಗುತ್ತಾರೆ. 36% ಮುಸ್ಲಿಮರಿಗೆ ಔಪಚಾರಿಕ ವಿದ್ಯಾಭ್ಯಾಸ ಕೂಡ ಇಲ್ಲ. ಕೇವಲ 8% ಮುಸ್ಲಿಮರು ಮಾತ್ರ ಉನ್ನತ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ.

ಉಲ್ಲೇಖಗಳು

Tags:

ಇಸ್ಲಾಂ ಧರ್ಮಮುಹಮ್ಮದ್

🔥 Trending searches on Wiki ಕನ್ನಡ:

ಹರಪ್ಪಕನ್ನಡದ ಉಪಭಾಷೆಗಳುಕೇಸರಿ (ಬಣ್ಣ)ಚಂಪಕ ಮಾಲಾ ವೃತ್ತದೇವರ ದಾಸಿಮಯ್ಯಸಂಸ್ಕೃತದಕ್ಷಿಣ ಕನ್ನಡಭೂಮಿಕನ್ನಡದಲ್ಲಿ ಕಾವ್ಯ ಮಿಮಾಂಸೆಅಲ್ಲಮ ಪ್ರಭುಸುಧಾರಾಣಿಭ್ರಷ್ಟಾಚಾರಮನಮೋಹನ್ ಸಿಂಗ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಈರುಳ್ಳಿತಾಟಕಿಪ್ಯಾರಾಸಿಟಮಾಲ್ಜಯಂತ ಕಾಯ್ಕಿಣಿಪಂಚ ವಾರ್ಷಿಕ ಯೋಜನೆಗಳುವ್ಯಂಜನಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುವಿಕ್ರಮಾರ್ಜುನ ವಿಜಯಕನ್ನಡ ರಾಜ್ಯೋತ್ಸವಭರತೇಶ ವೈಭವನಾಟಕಓಂ ನಮಃ ಶಿವಾಯಆಗಮ ಸಂಧಿಹೊಯ್ಸಳೇಶ್ವರ ದೇವಸ್ಥಾನವಿನಾಯಕ ಕೃಷ್ಣ ಗೋಕಾಕಎಸ್.ಎಲ್. ಭೈರಪ್ಪಜಾಗತಿಕ ತಾಪಮಾನಕೊ. ಚನ್ನಬಸಪ್ಪಆವಕಾಡೊಗರ್ಭಧಾರಣೆಮಯೂರಶರ್ಮಅನುನಾಸಿಕ ಸಂಧಿಬಾಹುಬಲಿಪೊನ್ನಮಾಹಿತಿ ತಂತ್ರಜ್ಞಾನಸ್ಟಾರ್‌ಬಕ್ಸ್‌‌ಭಾರತದ ಉಪ ರಾಷ್ಟ್ರಪತಿಮೋಕ್ಷಗುಂಡಂ ವಿಶ್ವೇಶ್ವರಯ್ಯಗ್ರಂಥ ಸಂಪಾದನೆಬಹಮನಿ ಸುಲ್ತಾನರುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಎ.ಎನ್.ಮೂರ್ತಿರಾವ್ಜೀವಸತ್ವಗಳುಗೋಕಾಕ್ ಚಳುವಳಿಸಂಸದೀಯ ವ್ಯವಸ್ಥೆತೀ. ನಂ. ಶ್ರೀಕಂಠಯ್ಯರಾಜ್ಯಶನಿಶಾಸನಗಳುಕಾಳಿ ನದಿರಾಮ್ ಮೋಹನ್ ರಾಯ್ವರ್ಗೀಯ ವ್ಯಂಜನವೆಂಕಟೇಶ್ವರನುಡಿಗಟ್ಟುಕೊಪ್ಪಳಮಣ್ಣುಭತ್ತಬಾದಾಮಿ ಶಾಸನಹೊಂಗೆ ಮರನವ್ಯಬೀಚಿಋಗ್ವೇದಒಡೆಯರ್ಮಹಿಳೆ ಮತ್ತು ಭಾರತಯೂಟ್ಯೂಬ್‌ಗಂಗ (ರಾಜಮನೆತನ)ಕನ್ನಡದಲ್ಲಿ ಸಣ್ಣ ಕಥೆಗಳುಅನುಪಮಾ ನಿರಂಜನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಂತ್ರಾಲಯ🡆 More