ಅಂಜಲಿ

ಅಂಜಲಿ ಕನ್ನಡದ ಜನಪ್ರಿಯ ಚಲನಚಿತ್ರ ಮತ್ತು ಕಿರುತೆರೆ ನಟಿ.

೧೯೯೦ರ ದಶಕದಲ್ಲಿ ಚಾಲ್ತಿಯಲ್ಲಿದ್ದ ಅಂಜಲಿ ಅಭಿನಯದ ಪ್ರಮುಖ ಚಿತ್ರಗಳೆಂದರೆ ಅನಂತನ ಅವಾಂತರ(೧೯೮೯), ನೀನು ನಕ್ಕರೆ ಹಾಲು ಸಕ್ಕರೆ(೧೯೯೧) ಮತ್ತು ತರ್ಲೆ ನನ್ಮಗ(೧೯೯೨.

ಅಂಜಲಿ
Born
ಶಾಂತ

ಮೇ ೨೨, ೧೯೭೨
ಕನಕಪುರ, ಬೆಂಗಳೂರು (ಈಗ ರಾಮನಗರಕ್ಕೆ ಸೇರಿದೆ), ಕರ್ನಾಟಕ
Occupationಚಲನಚಿತ್ರ ಮತ್ತು ಕಿರುತೆರೆ ನಟಿ
Years active೧೯೮೯-೧೯೯೭
Spouseಸುಧಾಕರ್

ಆರಂಭಿಕ ಜೀವನ

ಅಂಜಲಿ ಜನಿಸಿದ್ದು ರಾಮನಗರದ ಕನಕಪುರದಲ್ಲಿ ೧೯೭೨ರ ಮೇ ೨೨ರಂದು. ಇವರ ಮೂಲ ಹೆಸರು ಶಾಂತ. ನಿರ್ದೇಶಕ ಕಾಶಿನಾಥ್ ಇವರ ಹೆಸರನ್ನು ಅಂಜಲಿ ಎಂದು ಬದಲಾಯಿಸಿದರು.

ವೃತ್ತಿ ಜೀವನ

ಕಂಕಣ ಭಾಗ್ಯ(೧೯೮೮) ಚಿತ್ರದ ಚಿಕ್ಕ ಪಾತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ ಅಂಜಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ ಚಿತ್ರ ಕಾಶಿನಾಥ್ ನಿರ್ದೇಶನದ ಅನಂತನ ಅವಾಂತರ(೧೯೮೯). ದಾಂಪತ್ಯ ಜೀವನದ ಸಮಸ್ಯೆಗಳ ಕುರಿತಾಗಿದ್ದ ಈ ಹಾಸ್ಯಪ್ರಧಾನ ಚಿತ್ರದಲ್ಲಿ ಕಾಶಿನಾಥ್ ಅವರಿಗೆ ನಾಯಕಿಯಾಗಿ ಗಮನಾರ್ಹ ಅಭಿನಯ ನೀಡಿದ ಅಂಜಲಿ ಅವರಿಗೆ ದೊರೆತ ನಂತರದ ಪ್ರಮುಖ ಚಿತ್ರವೆಂದರೆ ನೀನು ನಕ್ಕರೆ ಹಾಲು ಸಕ್ಕರೆ(೧೯೯೧). ಐವರು ನಾಯಕಿಯರಿದ್ದ ಈ ಚಿತ್ರದಲ್ಲಿ ವಿಷ್ಣುವರ್ಧನ್ ಅವರೊಂದಿಗೆ ಚಿಕ್ಕ ಪಾತ್ರದಲ್ಲಿ ಚೊಕ್ಕದಾಗಿ ಅಭಿನಯಿಸಿದ್ದಾರೆ. ಉಪೇಂದ್ರ ಚೊಚ್ಚಲ ನಿರ್ದೇಶನದ ತರ್ಲೆ ನನ್ಮಗ(೧೯೯೨) ಚಿತ್ರದಲ್ಲಿ ಜಗ್ಗೇಶ್ ಅವರಿಗೆ ನಾಯಕಿಯಾಗಿ ಶಕ್ತ ಅಭಿನಯ ನೀಡಿದ ಅಂಜಲಿ ಶ್ರೀಧರ್ ಅವರೊಂದಿಗೆ ಜನ ಮೆಚ್ಚಿದ ಮಗ(೧೯೯೩), ರಮೇಶ್ ಭಟ್ ಅವರೊಂದಿಗೆ ಸಿಡಿದೆದ್ದ ಶಿವ(೧೯೯೪) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಉತ್ತಮ ಅಭಿನಯ ನೀಡಿದ್ದಾರೆ. ಮರ್ಡರ್(೧೯೯೪) ಚಿತ್ರದಲ್ಲಿ ಋಣಾತ್ಮಕ ಪಾತ್ರದಲ್ಲಿ ಪರಿಣಾಮಕಾರಿ ಅಭಿನಯ ನೀಡಿದ ಅಂಜಲಿ ಟೆನ್ನಿಸ್ ಕೃಷ್ಣ ಅಭಿನಯದ ಅಪ್ಪ ನಂಜಪ್ಪ ಮಗ ಗುಂಜಪ್ಪ(೧೯೯೪) ಚಿತ್ರದಲ್ಲಿ ನಾಯಕಿಯಾಗಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. ಅನಂತ್ ನಾಗ್ ನಾಯಕರಾಗಿ ಅಭಿನಯಿಸಿದ ಗಣೇಶನ ಮದುವೆ(೧೯೯೦) ಮತ್ತು ಉಂಡು ಹೋದ ಕೊಂಡು ಹೋದ(೧೯೯೧) ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಚೊಕ್ಕದಾದ ಅಭಿನಯ ನೀಡಿದ್ದಾರೆ.

ವಿಷ್ಣುವರ್ಧನ್, ಶ್ರೀಧರ್, ಕಾಶಿನಾಥ್, ಜಗ್ಗೇಶ್ ಮುಂತಾದ ಜನಪ್ರಿಯ ನಟರೊಂದಿಗೆ ಅಭಿನಯಿಸಿರುವ ಅಂಜಲಿ ದೊರೈ-ಭಗವಾನ್, ಬಿ.ರಾಮಮೂರ್ತಿ, ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಕಾಶಿನಾಥ್ ಮುಂತಾದ ಹೆಸರಾಂತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

ವೈಯಕ್ತಿಕ ಜೀವನ

೧೯೯೮ರಲ್ಲಿ ದುಬೈನ ಪ್ರಸಿದ್ಧ ಉದ್ಯಮಿ ಸುಧಾಕರ್ ಅವರನ್ನು ಮದುವೆಯಾದ ಅಂಜಲಿ ದುಬೈನಲ್ಲಿ ಸುಖಿ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಸಿರಿ ಮತ್ತು ಸಮೃದ್ಧಿ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ.

ಅಂಜಲಿ ಅಭಿನಯದ ಚಿತ್ರಗಳು

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೮ ಕಂಕಣ ಭಾಗ್ಯ ಪೇರಾಲ ರಾಮಕೃಷ್ಣ, ಜೀವಿತ
೧೯೮೯ ಅನಂತನ ಅವಾಂತರ ಕಾಶಿನಾಥ್ ಕಾಶಿನಾಥ್
೧೯೮೯ ಅವನೇ ನನ್ನ ಗಂಡ ಎಸ್.ಉಮೇಶ್-ಕೆ.ಪ್ರಭಾಕರ್ ಕಾಶಿನಾಥ್, ಸುಧಾರಾಣಿ, ವನಿತಾ ವಾಸು
೧೯೮೯ ಇದು ಸಾಧ್ಯ ದಿನೇಶ್ ಬಾಬು ಅನಂತ್ ನಾಗ್, ಶಂಕರ್ ನಾಗ್, ಶ್ರೀನಾಥ್, ರೇವತಿ, ಮಹಾಲಕ್ಷ್ಮಿ
೧೯೮೯ ಹೆಂಡ್ತಿಗೇಳ್ಬೇಡಿ ದಿನೇಶ್ ಬಾಬು ಅನಂತ್ ನಾಗ್, ಮಹಾಲಕ್ಷ್ಮಿ, ದೇವರಾಜ್‌, ತಾರ
೧೯೮೯ ಮಹಾಯುದ್ಧ ಮುರಳೀಧರ್ ಕೌಶಿಕ್ ಶಂಕರ್ ನಾಗ್, ಮಹಾಲಕ್ಷ್ಮಿ, ವಿನೋದ್ ಆಳ್ವ
೧೯೯೦ ಕಾಲೇಜ್ ಹೀರೋ ಚಂದ್ರಹಾಸ್ ಆಳ್ವ ವಿನೋದ್ ರಾಜ್, ಮಧುಶ್ರೀ, ದೇವರಾಜ್‌, ಶಿವರಂಜಿನಿ
೧೯೯೦ ಗಣೇಶನ ಮದುವೆ ಫಣಿ ರಾಮಚಂದ್ರ ಅನಂತ್ ನಾಗ್, ವಿನಯಾ ಪ್ರಸಾದ್
೧೯೯೧ ಉಂಡು ಹೋದ ಕೊಂಡು ಹೋದ ನಾಗತಿಹಳ್ಳಿ ಚಂದ್ರಶೇಖರ್ ಅನಂತ್ ನಾಗ್, ತಾರ
೧೯೯೧ ನಗು ನಗುತ ನಲಿ ಭಾರ್ಗವ ಸುನೀಲ್, ಶ್ರುತಿ, ತಾರ
೧೯೯೧ ನೀನು ನಕ್ಕರೆ ಹಾಲು ಸಕ್ಕರೆ ದೊರೈ-ಭಗವಾನ್ ವಿಷ್ಣುವರ್ಧನ್, ರೂಪಿಣಿ, ರಜನಿ, ವಿನಯಾ ಪ್ರಸಾದ್, ಚಂದ್ರಿಕಾ
೧೯೯೧ ರೋಲ್‍ಕಾಲ್ ರಾಮಕೃಷ್ಣ ಬಿ.ರಾಮಮೂರ್ತಿ ಅನಂತ್ ನಾಗ್, ವಿದ್ಯಾಶ್ರೀ, ತಾರ
೧೯೯೧ ಶ್ವೇತಾಗ್ನಿ ಬಿ.ರಾಮಮೂರ್ತಿ ದೇವರಾಜ್‌, ವಿನಯಾ ಪ್ರಸಾದ್, ತಾರ
೧೯೯೨ ತರ್ಲೆ ನನ್ಮಗ ಉಪೇಂದ್ರ ಜಗ್ಗೇಶ್
೧೯೯೨ ಪ್ರಣಯದ ಪಕ್ಷಿಗಳು ಮಹೇಂದರ್ ರಮೇಶ್ ಅರವಿಂದ್, ಕಾವ್ಯ
೧೯೯೨ ಭಲೇ ಕೇಶವ ವಿಜಯ್ ಶೆಟ್ಟಿ ದೇವರಾಜ್‌, ಶಿವರಂಜಿನಿ
೧೯೯೨ ಸಪ್ತಪದಿ ಭಾರ್ಗವ ಅಂಬರೀಶ್, ರೂಪಿಣಿ
೧೯೯೩ ಜನ ಮೆಚ್ಚಿದ ಮಗ ಬಿ.ಡಿ.ಶೇಷು ಶ್ರೀಧರ್, ಚಂದ್ರಿಕಾ
೧೯೯೩ ಭವ್ಯ ಭಾರತ ಮಹಮ್ಮದ್ ಗೌಸ್ ಟೈಗರ್ ಪ್ರಭಾಕರ್, ವಿನಯಾ ಪ್ರಸಾದ್, ತಾರಾ
೧೯೯೪ ಅಪ್ಪ ನಂಜಪ್ಪ ಮಗ ಗುಂಜಪ್ಪ ವಿ.ಶಿವರಾಂ, ಕಾಶಿನಾಥ್ ಎಸ್ ಟೆನ್ನಿಸ್ ಕೃಷ್ಣ, ಅಭಿನಯ
೧೯೯೪ ಗೋಪಿ ಕಲ್ಯಾಣ ಬಿ.ರಾಮಮೂರ್ತಿ ಟೈಗರ್ ಪ್ರಭಾಕರ್, ಅಂಜನಾ
೧೯೯೪ ಮರ್ಡರ್ ಮಂಡ್ಯ ನಾಗರಾಜ್ ಸುರೇಶ್ ಹೆಬ್ಳೀಕರ್
೧೯೯೪ ಸಿಡಿದೆದ್ದ ಶಿವ ಕೆ.ಸುರೇಶ್ ರೆಡ್ಡಿ ತ್ಯಾಗರಾಜ್, ರಮೇಶ್ ಭಟ್
೧೯೯೫ ಕೋಣ ಈದೈತೆ ಬಿ.ಜಯಶ್ರೀ ದೇವಿ ವಿಷ್ಣುವರ್ಧನ್, ಕುಮಾರ್ ಗೋವಿಂದ್
೧೯೯೫ ತುಂಬಿದ ಮನೆ ಎಸ್.ಉಮೇಶ್ ವಿಷ್ಣುವರ್ಧನ್, ವಿನಯಾ ಪ್ರಸಾದ್, ಉಮಾಶ್ರೀ, ಶಶಿಕುಮಾರ್, ಶ್ರುತಿ, ತಾರ
೧೯೯೬ ಯಾರು ಬಿ.ಆರ್.ಕೇಶವ್ ಆನಂದ್, ನಾಗೇಶ್ ಮಯ್ಯ

ಉಲ್ಲೇಖಗಳು

Tags:

ಅಂಜಲಿ ಆರಂಭಿಕ ಜೀವನಅಂಜಲಿ ವೃತ್ತಿ ಜೀವನಅಂಜಲಿ ವೈಯಕ್ತಿಕ ಜೀವನಅಂಜಲಿ ಅಭಿನಯದ ಚಿತ್ರಗಳುಅಂಜಲಿ ಉಲ್ಲೇಖಗಳುಅಂಜಲಿಅನಂತನ ಅವಾಂತರತರ್ಲೆ ನನ್ಮಗನೀನು ನಕ್ಕರೆ ಹಾಲು ಸಕ್ಕರೆ

🔥 Trending searches on Wiki ಕನ್ನಡ:

ಬ್ರಿಟಿಷ್ ಆಡಳಿತದ ಇತಿಹಾಸಗಾದೆಅಲೋಹಗಳುವಿದ್ಯುತ್ ಮಂಡಲಗಳುಕರ್ಣಾಟ ಭಾರತ ಕಥಾಮಂಜರಿನೀರಾವರಿಭಾರತದ ಸಂವಿಧಾನ ರಚನಾ ಸಭೆಶಾಸನಗಳುವಿಜಯನಗರಭಗವದ್ಗೀತೆಆದಿಪುರಾಣನೆಟ್‍ಫ್ಲಿಕ್ಸ್ಕೈಗಾರಿಕೆಗಳುರಾಷ್ಟ್ರಕವಿಕನ್ನಡ ಸಾಹಿತ್ಯಸರ್ವಜ್ಞಪಠ್ಯಪುಸ್ತಕಕನಕದಾಸರುವಿಷ್ಣುವರ್ಧನ್ (ನಟ)ಇತಿಹಾಸಗೋಲ ಗುಮ್ಮಟಸಂಯುಕ್ತ ಕರ್ನಾಟಕಜಾತಿಸಂಸ್ಕೃತ ಸಂಧಿಕಂಪ್ಯೂಟರ್ಭಾರತದ ಬಂದರುಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಹಸ್ತ ಮೈಥುನಕರ್ನಾಟಕ ಲೋಕಸೇವಾ ಆಯೋಗಸಿದ್ಧಯ್ಯ ಪುರಾಣಿಕಯಕೃತ್ತುಆಲೂರು ವೆಂಕಟರಾಯರುಹಣಕಾಸುಕನ್ನಡ ಸಂಧಿಖಂಡಕಾವ್ಯಧೊಂಡಿಯ ವಾಘ್ಜೀವವೈವಿಧ್ಯಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಕನ್ನಡ ಸಾಹಿತ್ಯ ಸಮ್ಮೇಳನಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳುಕುಮಾರವ್ಯಾಸಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಕರ್ನಾಟಕದ ತಾಲೂಕುಗಳುಎಚ್ ನರಸಿಂಹಯ್ಯಕೃಷ್ಣದೇವರಾಯಆದಿ ಶಂಕರಸವರ್ಣದೀರ್ಘ ಸಂಧಿಭಾರತೀಯ ಅಂಚೆ ಸೇವೆಸೂರ್ಯವ್ಯೂಹದ ಗ್ರಹಗಳುರೈತವಿಶ್ವ ಮಹಿಳೆಯರ ದಿನವಾಲಿಬಾಲ್ಜೋಡು ನುಡಿಗಟ್ಟುಅಡಿಕೆಗುರು (ಗ್ರಹ)ಮಹಾಭಾರತಉಪ್ಪು (ಖಾದ್ಯ)ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮಾಹಿತಿ ತಂತ್ರಜ್ಞಾನವರ್ಲ್ಡ್ ವೈಡ್ ವೆಬ್ವಿನಾಯಕ ದಾಮೋದರ ಸಾವರ್ಕರ್ಟಿಪ್ಪು ಸುಲ್ತಾನ್ಸಿಂಧನೂರುಪಾಲಕ್ಕುಡಿಯುವ ನೀರುಗ್ರೀಸ್ಕೆ. ಎಸ್. ನರಸಿಂಹಸ್ವಾಮಿಬೌದ್ಧ ಧರ್ಮಜವಹರ್ ನವೋದಯ ವಿದ್ಯಾಲಯವಿಕ್ರಮಾದಿತ್ಯ ೬ಭಾರತೀಯ ನದಿಗಳ ಪಟ್ಟಿಅಂಜನಿ ಪುತ್ರಅರಿಸ್ಟಾಟಲ್‌ಗ್ರಾಮ ಪಂಚಾಯತಿಹಿಂದೂ ಮಾಸಗಳುಗೋವಿಂದ ಪೈಪರಮಾಣುನಾಮಪದ🡆 More