ಚಲನಚಿತ್ರ ರಾಬರ್ಟ್

ರಾಬರ್ಟ್ ೨೦೨೧ರಲ್ಲಿ ಬಿಡುಗಡೆಯಾದ ಕನ್ನಡ- ಭಾಷೆಯ ಭಾರತೀಯ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ.

ತರುಣ್ ಸುಧೀರ್ ಈ ಚಲನಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ ಮತ್ತು ಉಮಾಪತಿ ಶ್ರೀನಿವಾಸ ಗೌಡ ಅವರು ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ದರ್ಶನ್, ಜಗಪತಿ ಬಾಬು, ರವಿ ಕಿಶನ್, ಆಶಾ ಭಟ್, ದೇವರಾಜ್ ಮತ್ತು ಪಿ ರವಿಶಂಕರ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ವಿ.ಹರಿಕೃಷ್ಣ ಮತ್ತು ಅರ್ಜುನ್ ಜನ್ಯಾ ಸಂಗೀತ ಈ ಚಲನಚಿತ್ರಕ್ಕಿದೆ. ಈ ಚಿತ್ರದ ಛಾಯಾಗ್ರಹಣ ಸುಧಾಕರ್ ಎಸ್ ರಾಜ್ ಮತ್ತು ಸಂಕಲನವನ್ನು ಕೆ.ಎಂ.ಪ್ರಕಾಶ್ ನಿರ್ವಹಿಸಿದ್ದಾರೆ. ಈ ಚಿತ್ರವು ಅದೇ ಹೆಸರಿನಿಂದ ತೆಲುಗು ಆವೃತ್ತಿಯೊಂದಿಗೆ ೧೧ ಮಾರ್ಚ್ ೨೦೨೧ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ರಾಬರ್ಟ್
ನಿರ್ದೇಶನತರುಣ್ ಸುಧೀರ್
ನಿರ್ಮಾಪಕಉಮಾಪತಿ ಶ್ರಿನೀವಾಸ್
ಚಿತ್ರಕಥೆತರುಣ್ ಸುಧೀರ್
ಕಥೆತರುಣ್ ಸುಧೀರ್
ಪಾತ್ರವರ್ಗದರ್ಶನ್
ಆಶಾ ಭಟ್
ಜಗಪತಿ ಬಾಬು
ದೇವರಾಜ್
ಪಿ ರವಿಶಂಕರ್
ವಿನೋದ್ ಪ್ರಭಾಕರ್
ಸಂಗೀತಅರ್ಜುನ್ ಜನ್ಯ, ವಿ.ಹರಿಕೃಷ್ಣ
ಛಾಯಾಗ್ರಹಣಸುಧಾಕರ್ ಎಸ್. ರಾಜ್
ಸಂಕಲನಕೆ.ಎಂ.ಪ್ರಕಾಶ್
ಸ್ಟುಡಿಯೋಉಮಾಪತಿ ಫಿಲ್ಮ್ಸ್
ಬಿಡುಗಡೆಯಾಗಿದ್ದು೧೧ ಮಾರ್ಚ್ ೨೦೨೧
ಅವಧಿ೧೬೬ ನಿಮಿಷ
ದೇಶಭಾರತ
ಭಾಷೆಕನ್ನಡ ಹಾಗೂ ತೆಲುಗು
ಬಂಡವಾಳ೫೦ ಕೋಟಿ
ಬಾಕ್ಸ್ ಆಫೀಸ್೧೦೧ ಕೋಟಿ

ಪಾತ್ರವರ್ಗ

  • ರಾಘವ / ರಾಬರ್ಟ್ ಪಾತ್ರದಲ್ಲಿ ದರ್ಶನ
  • ನಾನಭಾಯಿಯಾಗಿ ಜಗಪತಿ ಬಾಬು
  • ರಾಘವನಾಗಿ ವಿನೋದ್ ಪ್ರಭಾಕರ್
  • ಸರ್ಕಾರ್ ಪಾತ್ರದಲ್ಲಿ ಪಿ ರವಿಶಂಕರ್
  • ಅಮೃತ ಪಾತ್ರದಲ್ಲಿ ಆಶಾ ಭಟ್, (ರಾಬರ್ಟ್‌ನ ಪ್ರೇಯಸಿ)
  • ರಾಘವನ ಪತ್ನಿಯಾಗಿ ಸೋನಲ್ ಮೊಂತೇರೊ
  • ಶಾಸಕ ತ್ರಿಪಾಠಿಯಾಗಿ ರವಿ ಕಿಶನ್
  • ಪೊಲೀಸ್ ಆಯುಕ್ತರಾಗಿ ದೇವರಾಜ್
  • ಸಚಿವರಾಗಿ ಅವಿನಾಶ್
  • ಅಗ್ನಿಯಾಗಿ ಚಿಕ್ಕಣ್ಣ
  • ಬಾಬು / ಬಾಬಿಯಾಗಿ ಶಿವರಾಜ್ ಕೆ.ಆರ್ ಪೇಟೆ
  • ರಾಘವನ ಮಗ ಅರ್ಜುನ್ ಪಾತ್ರದಲ್ಲಿ ಜೇಸನ್ ಡಿಸೋಜಾ
  • ಕಮಲಾ ಪಾತ್ರದಲ್ಲಿ ಐಶ್ವರ್ಯ ಪ್ರಸಾದ್
  • ಶಾಸಕನ ಪುತ್ರನಾಗಿ ಚಂದು ಬಿ ಗೌಡ
  • ನಾನಾಭಾಯ್ ಅವರ ಮಗ ಚೆರ್ರಿ ಪಾತ್ರದಲ್ಲಿ ದಿಲೀಪ್ ಶೆಟ್ಟಿ
  • ವಿಶ್ವನಾಥ್ ಭಟ್ ಆಗಿ ಅಶೋಕ್
  • ವಿಶ್ವನಾಥ್ ಭಟ್ ಅವರ ಸೋದರ ಮಾವನಾಗಿ ನವೀನ್ ಡಿ ಪಡಿಲ್
  • ಮದನಾ ಪಾತ್ರದಲ್ಲಿ ಧರ್ಮಣ್ಣ ಕಡೂರ್
  • ಭೂತಯ್ಯನಾಗಿ ಗಿರಿ ದ್ವಾರಕಿಶ್
  • ಕರಿ ಸುಬ್ಬು
  • ಉಮಾಪತಿ ಶ್ರೀನಿವಾಸ ಗೌಡ ಅವರು "ಜೈ ಶ್ರೀರಾಮ್" ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ
  • ತರುಣ್ ಸುಧೀರ್ "ದೋಸ್ತಾ ಕಣೋ" ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ನಿರ್ಮಾಣ ಪ್ರಕ್ರಿಯೆ

ಡಿ ೫೩ ಎಂಬ ತಾತ್ಕಾಲಿಕ ಶೀರ್ಷಿಕೆಯೊಂದಿಗೆ ಚಿತ್ರದ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಯಿತು. ಈ ಚಿತ್ರವನ್ನು ಹೆಬ್ಬುಲಿ ಮತ್ತು ಒಂದಲ್ಲ - ಎರಡಲ್ಲ ಚಿತ್ರಗಳ ನಿರ್ಮಾಪಕರಾದ ಉಮಾಪತಿ ಫಿಲ್ಮ್ಸ್ ನಿರ್ಮಾಣ ಹಾಗೂ ತರುಣ್ ಕಿಶೋರ್ ಸುಧೀರ್ ಅವರ ನಿರ್ದೇಶನದಲ್ಲಿ ದರ್ಶನ್ ಅವರ ಮುಖ್ಯಪಾತ್ರದೊಂದಿಗೆ ನಿರ್ಮಿಸುವುದಾಗಿ ಘೋಷಿಸಲಾಯ್ತು. ೨೦೧೭ರಲ್ಲಿ ದರ್ಶನ್ ಅವರು ತರುಣ್ ಸುಧೀರ್ ನಿರ್ದೇಶನದ ಚೊಚ್ಚಲ ಚಿತ್ರ ೨೦೧೭ರಲ್ಲಿ ಬಿಡುಗೊಂಡ ಚೌಕ ದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಬರ್ಟ್ ಚಿತ್ರದ ಚಿತ್ರೀಕರಣ ಪ್ರಕ್ರಿಯೆ ಜೂನ್ ೨೦೧೯ ರಲ್ಲಿ ಪ್ರಾರಂಭವಾಯಿತು. ಈ ಚಿತ್ರದ ಮೊದಲ ಥೀಮ್ ಪೋಸ್ಟರನ್ನು ೬ ನವೆಂಬರ್ ೨೦೧೮ ರಂದು ಬಿಡುಗಡೆ ಮಾಡಲಾಗಿತ್ತು. ಚಲನಚಿತ್ರದ ಶೀರ್ಷಿಕೆಯನ್ನು೨೫ ಡಿಸೆಂಬರ್ ೨೦೧೮ರಂದು ಕ್ರಿಸ್‌ಮಸ್‌ನ ಸಂದರ್ಭದಲ್ಲಿ ಘೋಷಿಸಲಾಯ್ತು ಹಾಗೂ ಚಿತ್ರದ ಎರಡನೇ ಥೀಮ್ ಪೋಸ್ಟರ್ ರಂಜಾನ್ ಹಬ್ಬದ ಮುನ್ನಾದಿನದಂದು ೫ ಜೂನ್ ೨೦೧೯ ರಂದು ಬಿಡುಗಡೆ ಮಾಡಲಾಯ್ತು.

ಸಂಗೀತ

ಚಿತ್ರದ ಹಾಡುಗಳನ್ನು ಅರ್ಜುನ್ ಜನ್ಯಾ ಸಂಯೋಜಿಸಿದ್ದಾರೆ ಹಾಗೂ ವಿ.ಹರಿಕೃಷ್ಣ ಅವರು ಹಿನ್ನಲೆ ಸಂಗೀತ ನೀಡಿದ್ದಾರೆ.

  • ರಾಬರ್ಟ್ ಚಿತ್ರದ ಮೊದಲ ಹಾಡು "ಬಾ ಬಾ ಬಾ ನಾ ರೆಡಿ" ೩ ಮಾರ್ಚ್ ೨೦೨೦ರಂದು ಬಿಡುಗಡೆಯಾಯಿತು.
  • ಚಲನಚಿತ್ರದ ಎರಡನೇ ಹಾಡು "ಜೈ ಶ್ರೀ ರಾಮ್" ಅನ್ನು ಎರಡು ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಯ್ತು. ಅದರಲ್ಲಿ ಒಂದು ಆವೃತ್ತಿಯನ್ನು ಶಂಕರ್ ಮಹಾದೇವನ್ ಹಾಡಿದ್ದಾರೆ ಮತ್ತು ಇನ್ನೊಂದು ಹಾಡನ್ನು ದಿವ್ಯಾ ಕುಮಾರ್ ಹಾಡಿದ್ದಾರೆ.
  • ಮೂರನೆಯ ಹಾಡು "ದೋಸ್ತಾ ಕಣೋ" ೨೧ ಮಾರ್ಚ್೨೦೨೦ರಂದು ಬಿಡುಗಡೆಯಾಯಿತು.
  • "ಕಣ್ಣು ಹೊಡಿಯಾಕಾ" ೨೦ ಫೆಬ್ರವರಿ ೨೦೨೧ರಂದು ಬಿಡುಗಡೆಯಾದರೆ, "ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ" ೨೮ ಫೆಬ್ರವರಿ ೨೦೨೧ ರಂದು ಬಿಡುಗಡೆಯಾಯಿತು.

ಬಿಡುಗಡೆ

ರಾಬರ್ಟ್ ೧೧ ಮಾರ್ಚ್ ೨೦೨೧ರಂದು , ಮಹಾ ಶಿವರಾತ್ರಿಯ ಮುನ್ನಾದಿನದಂದು ವಿಶ್ವದಾದ್ಯಂತ ೧೨೦೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಏಪ್ರಿಲ್ ೨೦೨೦ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ಭಾರತದಲ್ಲಿ COVID-19 ಸಾಂಕ್ರಾಮಿಕ ರೋಗದಿಂದಾಗಿ ಈ ಚಿತ್ರವು ಹಲವಾರು ತಿಂಗಳುಗಳ ಬಳಿಕ ಬಿಡುಗಡೆ ಮಾಡಲಾಯ್ತು.

ಈ ಚಿತ್ರವು ಕರ್ನಾಟಕದಲ್ಲಿ ೬೫೦ ಮತ್ತು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಸುಮಾರು ೩೫೦, ಭಾರತದ ಉಳಿದ ಭಾಗಗಳಲ್ಲಿ ೩೦೦ ಹಾಗೂ ವಿದೇಶಗಳಲ್ಲಿ ೩೦೦ ಪರದೆಗಳು ಸೇರಿದಂತೆ ಸುಮಾರು ೧೬೦೦ಪರದೆಗಳಲ್ಲಿ ಬಿಡುಗಡೆಮಾಡಲಾಯ್ತು.

ಪ್ರತಿಕ್ರಿಯೆಗಳು

ಪತ್ರಿಕಾ ವಿಮರ್ಶೆಗಳು

ಟೈಮ್ಸ್ ಆಫ್ ಇಂಡಿಯಾ ಈ ಚಿತ್ರಕ್ಕೆ ೪/೫ ಅಂಕ ನೀಡಿ "ಚಿತ್ರವು ಒಂದು ವರ್ಷ ತಡವಾಗಿ ಬಿಡುಗಡೆಯಾಗಿದ್ದರೂ, ಮನೋರಂಜನೆ ನೀಡುವಲ್ಲಿ ಸಫಲವಾಗಿದೆ. ಈ ಚಿತ್ರವು ಕೇವಲ ಜನಪ್ರಿಯ ಅಂಶಗಳನ್ನಷ್ಟೇ ಹೊಂದದೇ ಸಂಪೂರ್ಣ ಕುಟುಂಬಕ್ಕೆ ಖುಷಿ ಪಡೆಸಲು ಸಫಲವಾಗಿದೆ" ಎಂದು ಅಭಿಪ್ರಾಯಪಟ್ಟಿದೆ.

ಬೆಂಗಳೂರು ಮಿರರ್‌ನ ವೈ ಮಹೇಶ್ವರ ರೆಡ್ಡಿ ೪/೫ ಅಂಕ ನೀಡಿ, "ರಾಬರ್ಟ್ ದ್ವಿಭಾಷಾ (ಕನ್ನಡ ಮತ್ತು ತೆಲುಗು) ಚಲನಚಿತ್ರವು ವ್ಯಾಪಾರಿ ಚಿತ್ರಗಳ ಪ್ರೇಕ್ಷಕರನ್ನು ರಂಜಿಸಲು ಬೇಕಾದ ಎಲ್ಲಾ ಅಂಶಗಳನ್ನು ಹೊಂದಿದೆ, ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ನ ಅಭಿಮಾನಿಗಳ ಹಾಗೂ ಚಲನಚಿತ್ರ ಬಫ್‌ಗಳ ನಿರೀಕ್ಷೆಯನ್ನು ಪೂರೈಸುವಲ್ಲಿ ಇದು ಯಶಸ್ವಿಯಾಗಿದೆ. " ಎಂದು ವಿಮರ್ಶೆ ವ್ಯಕ್ತ ಪಡಿಸಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಶಾರದಾ ೪/೫ ಎಂದು ರೇಟ್ ಮಾಡಿ, "ದರ್ಶನ್-ನಟಿಸಿದ 'ರಾಬರ್ಟ್' ಚಾಲೆಂಜಿಂಗ್ ಸ್ಟಾರ್‌ನ ಒಂದು ವಿಶಿಷ್ಟವಾದ ಚಿತ್ರವಾಗಿದೆ. ಕನ್ನಡ ಚಿತ್ರರಂಗದ ಜನಪ್ರಿಯ ನಟರಾದ ಇವರು, ತನ್ನ ಅಭಿಮಾನಿಗಳ ನಿರೀಕ್ಷೆಯನ್ನ ಪೂರೈಸಿದ್ದಾರೆ. " ಎಂದು ವಿಮರ್ಶಿಸಿದ್ದಾರೆ

ಗಲ್ಲಾಪೆಟ್ಟಿಗೆಯಲ್ಲಿ

ಬಿಡುಗಡೆಯಾದ ಮೊದಲ ದಿನ ರಾಬರ್ಟ್ ವಿಶ್ವಾದ್ಯಂತ ₹ ೨೧ ಕೋಟಿ ಸಂಗ್ರಹಿಸಿದ್ದು, ಕರ್ನಾಟಕದಲ್ಲಿ ೧೭.೨೪ ಕೋಟಿ, ತೆಲಂಗಾಣ, ಆಂಧ್ರಪ್ರದೇಶ, ಉಳಿದ ಭಾರತೀಯ ರಾಜ್ಯಗಳು ಮತ್ತು ವಿದೇಶಗಳಿಂದ ೩.೧೨ ಕೋಟಿ (ತೆಲುಗು ಆವೃತ್ತಿಗೆ) ಗಳಿಸಿತು . ಕರ್ನಾಟಕದಲ್ಲಿ ರಾಬರ್ಟ್ ಎರಡನೇ ಮತ್ತು ಮೂರನೇ ದಿನ ಕ್ರಮವಾಗಿ ೧೨.೭೮ ಕೋಟಿ ಮತ್ತು ೧೪.೧೦ ಕೋಟಿ ರೂ. ಗಳಿಸುವ ಮೂಲಕ ಮೂರು ದಿನಗಳಲ್ಲಿ ಒಟ್ಟು ೪೪.೧೨ ಕೋಟಿ ರೂ.ಗಳನ್ನು ಸಂಗ್ರಹಿಸಿ ಈ ಚಿತ್ರವು ನಾಲ್ಕನೇ ದಿನ ೫೦ ಕೋಟಿ ರೂ.ಗಳ ಕ್ಲಬ್‌ಗೆ ಪ್ರವೇಶಿಸಿತು. ಈ ಚಿತ್ರವು ಮೂರನೇ ವಾರದ ಪ್ರದರ್ಶನದ ವೇಳೆಗೆ ಕರ್ನಾಟಕದ ಚಿತ್ರಮಂದಿರಗಳಿಂದ ೧೦೨.೪ ಕೋಟಿ ಸಂಗ್ರಹಿಸಿದೆ.

ಉಲ್ಲೇಖಗಳು

 

Tags:

ಚಲನಚಿತ್ರ ರಾಬರ್ಟ್ ಪಾತ್ರವರ್ಗಚಲನಚಿತ್ರ ರಾಬರ್ಟ್ ನಿರ್ಮಾಣ ಪ್ರಕ್ರಿಯೆಚಲನಚಿತ್ರ ರಾಬರ್ಟ್ ಸಂಗೀತಚಲನಚಿತ್ರ ರಾಬರ್ಟ್ ಬಿಡುಗಡೆಚಲನಚಿತ್ರ ರಾಬರ್ಟ್ ಪ್ರತಿಕ್ರಿಯೆಗಳುಚಲನಚಿತ್ರ ರಾಬರ್ಟ್ ಉಲ್ಲೇಖಗಳುಚಲನಚಿತ್ರ ರಾಬರ್ಟ್ಅರ್ಜುನ್ ಜನ್ಯಆಶಾ ಭಟ್ಕನ್ನಡತೆಲುಗುದರ್ಶನ್ ತೂಗುದೀಪ್ದೇವರಾಜ್‌ಪಿ.ರವಿ ಶಂಕರ್ವಿ.ಹರಿಕೃಷ್ಣ

🔥 Trending searches on Wiki ಕನ್ನಡ:

ಬುದ್ಧತುಂಗಭದ್ರಾ ಅಣೆಕಟ್ಟುರಾಜ್ಯಸಭೆಕುವೆಂಪುನಿರುದ್ಯೋಗಜೈನ ಧರ್ಮಇಂದಿರಾ ಗಾಂಧಿಗುರು (ಗ್ರಹ)ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಅಳಿಲುಗಾಂಜಾಗಿಡಭರತನಾಟ್ಯರಮ್ಯಾಗುಪ್ತ ಸಾಮ್ರಾಜ್ಯಭಾರತ ಸಂವಿಧಾನದ ಪೀಠಿಕೆಪೂರ್ಣಚಂದ್ರ ತೇಜಸ್ವಿಸಂಧ್ಯಾವಂದನ ಪೂರ್ಣಪಾಠಕರ್ನಾಟಕ ರತ್ನಗ್ರಾಮ ಪಂಚಾಯತಿಕನ್ನಡ ಸಾಹಿತ್ಯ ಸಮ್ಮೇಳನಇಂಡಿ ವಿಧಾನಸಭಾ ಕ್ಷೇತ್ರಗುಬ್ಬಚ್ಚಿಕೃಷಿರಾಜ್ಯಗಳ ಪುನರ್ ವಿಂಗಡಣಾ ಆಯೋಗವ್ಯವಹಾರಭೌಗೋಳಿಕ ಲಕ್ಷಣಗಳುಹೆಚ್.ಡಿ.ದೇವೇಗೌಡಚಂದ್ರಗುಪ್ತ ಮೌರ್ಯಕನ್ನಡಟೈಗರ್ ಪ್ರಭಾಕರ್ಬಸವರಾಜ ಬೊಮ್ಮಾಯಿಗುಣ ಸಂಧಿಹೈದರಾಲಿಬಿ. ಆರ್. ಅಂಬೇಡ್ಕರ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭಾರತದ ಚಲನಚಿತ್ರೋದ್ಯಮಭಾರತೀಯ ನದಿಗಳ ಪಟ್ಟಿಗೋವಕಂದಶಾಮನೂರು ಶಿವಶಂಕರಪ್ಪಗಾಂಡೀವರತ್ನತ್ರಯರುಭಾರತದ ಬಂದರುಗಳುವ್ಯಂಜನವಚನ ಸಾಹಿತ್ಯಜಾನಪದಜಿ.ಎಸ್. ಘುರ್ಯೆಭಾರತದ ಮಾನವ ಹಕ್ಕುಗಳುಕವಿರಾಜಮಾರ್ಗಚೋಮನ ದುಡಿತಾಳಗುಂದ ಶಾಸನತೆಲುಗುಅಕ್ಷಾಂಶ ಮತ್ತು ರೇಖಾಂಶಪರಶುರಾಮಅಂತಿಮ ಸಂಸ್ಕಾರಪ್ರಾಣಾಯಾಮಆಂಧ್ರ ಪ್ರದೇಶಡಿ.ಎಸ್.ಕರ್ಕಿಪಂಚ ವಾರ್ಷಿಕ ಯೋಜನೆಗಳುಸಾಯಿ ಪಲ್ಲವಿಬೀದರ್ರಾಘವಾಂಕಹಾವೇರಿಜನಪದ ಕಲೆಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಅಣ್ಣಯ್ಯ (ಚಲನಚಿತ್ರ)ಭರತೇಶ ವೈಭವಗೂಬೆಕೆ ವಿ ನಾರಾಯಣಕದಂಬ ಮನೆತನಭಾರತದ ಇತಿಹಾಸಅವಯವಔರಂಗಜೇಬ್ಮಳೆಮಯೂರಶರ್ಮ🡆 More