ಕ್ಯೂಲೆಕ್ಸ್ ಸೊಳ್ಳೆ

ಕ್ಯೂಲೆಕ್ಸ್ ( Culex ) ಸೊಳ್ಳೆಯು ಡಿಪ್ಟಿರ ಗಣದ ಕ್ಯೂಲಿಸಿಡೀ ಕುಟುಂಬಕ್ಕೆ ಸೇರಿದ ಕೀಟ.

ಕ್ಯೂಲೆಕ್ಸ್ ಸೊಳ್ಳೆ
ಕ್ಯೂಲೆ‍ಕ್ಸ್ ಸೊಳ್ಳೆ

ವಿವರಣೆ

ಗಾತ್ರ ಬಲುಸಣ್ಣದು. ಇದರ ವಾಸ ಸಾಮಾನ್ಯವಾಗಿ ನೀರಿನ ಬಳಿ. ಇದಕ್ಕೆ ಒಂದು ಜೊತೆ ರೆಕ್ಕೆಗಳಿವೆ. ಎರಡನೆಯ ಜೊತೆ ರೆಕ್ಕೆಗಳೂ ಇದ್ದು ಇವು ಸಣ್ಣ ಕೊಡತಿಯಾಕಾರದ ಉಪಾಂಗಗಳಾಗಿ ಮಾರ್ಪಾಡಾಗಿವೆ. ಇವುಗಳಿಗೆ ಹಾಲ್ಟಿಯರ್ಸ್ ಅಥವಾ ಬ್ಯಾಲೆನ್ಸರ್ಸ್ ಎಂದು ಹೆಸರು. ಕ್ಯೂಲೆಕ್ಸ್ ಸೊಳ್ಳೆಯ ದೇಹವನ್ನು ತಲೆ, ಎದೆ ಮತ್ತು ಹೊಟ್ಟೆ ಎಂದು ಮೂರು ಭಾಗಗಳನ್ನಾಗಿ ವಿಂಗಡಿಸಬಹುದು. ಗಂಡು ಸೊಳ್ಳೆಗೂ ಹೆಣ್ಣು ಸೊಳ್ಳೆಗೂ ಹಲವು ವ್ಯತ್ಯಾಸಗಳಿವೆ. ಗಂಡು ಸೊಳ್ಳೆಯಲ್ಲಿ ಆಂಟೆನ ಮೊಟಕಾಗಿದ್ದು ಅದರ ಮೇಲೆ ದಟ್ಟವಾಗಿ ಕೂದಲುಗಳು ಬೆಳೆದಿರುತ್ತವೆ. ಹೆಣ್ಣುಸೊಳ್ಳೆಯಲ್ಲಿ ಆಂಟೆನ ನೀಳವಾಗಿದೆ. ಅದರ ಮೇಲೆ ಕೇವಲ ಕೆಲವೇ ಕೂದಲುಗಳಿವೆ. ಹೆಣ್ಣು ಸೊಳ್ಳೆಗಳು ರಕ್ತವನ್ನು ಹೀರಿ ಜೀವಿಸುತ್ತವೆ. ಗಂಡು ಸೊಳ್ಳೆಗಳು ಸಾಧಾರಣವಾಗಿ ಸಸ್ಯಾಹಾರಿಗಳು; ಹೂಗಳ ಮಕರಂದವನ್ನೊ ಸಸ್ಯಗಳ ರಸವನ್ನೊ ಕುಡಿದು ಬದುಕುತ್ತವೆ. ಇವು ಸೇವಿಸುವ ಆಹಾರವನ್ನು ಅವಲಂಬಿಸಿ ವದನಾಂಗಗಳು ಸ್ವಲ್ಪ ಬೇರೆಯಾಗಿದೆ. ಕ್ಯೂಲೆಕ್ಸ್ ಸೊಳ್ಳೆ ಕೆಲವು ಗುಣಲಕ್ಷಣಗಳಲ್ಲಿ ಬೇರೆ ಬಗೆಯ ಸೊಳ್ಳೆಗಳಿಂದ ಬೇರೆಯಾಗಿದೆ. ಇದು ನೆಲದ ಮೇಲೆ ಕುಳಿತಾಗ ದೇಹ ಭೂಮಿಗೆ ಸಮಾಂತರವಾಗಿರುತ್ತದೆ. ಇದಕ್ಕೆ ಸಣ್ಣ ಪಾಲ್ಪಿ ಉಂಟು. ದೇಹದ ಮಧ್ಯಭಾಗದ ಮೇಲಿನ ಕೂದಲುಗಳು ಮೂರು ಬಗೆಯಾಗಿದ್ದು ಒಂದು ಸಣ್ಣ ಸ್ಕುಟೆಲಂ ಎಂಬ ಏಣಿನ ಮೇಲಿದೆ. ಕ್ಯೂಲೆಕ್ಸ್ ಸೊಳ್ಳೆಯ ಬೆಳೆವಣಿಗೆಯಲ್ಲಿ ಪೂರ್ಣರೂಪಾಂತರವನ್ನು ಕಾಣಬಹುದು. ಇದರ ಜೀವನಚಕ್ರ ಸಂಪೂರ್ಣಗೊಳ್ಳಲು ಸುಮಾರು 10-15 ದಿನಗಳು ಬೇಕು. ಇದು ಮೊಟ್ಟೆಗಳನ್ನು ನೀರಿನ ಮೇಲಿಡುತ್ತದೆ. ಅವು ಒಂದಕ್ಕೊಂದು ಅಂಟಿಕೊಂಡು ದೋಣಿಯಾಕಾರದ ರಚನೆಯನ್ನು ತಳೆದು ನೀರಿನ ಮೇಲೆ ತೆಪ್ಪದ ಹಾಗೆ ತೇಲುತ್ತಿರುತ್ತವೆ. ಡಿಂಬಗಳ ದೇಹದ 8ನೆಯ ಖಂಡದಲ್ಲಿ ಒಂದು ಉದ್ದನೆಯ ಶ್ವಾಸನಾಳವಿದೆ.

ರೋಗಪ್ರಸಾರ

ಕ್ಯೂಲೆಕ್ಸ್ ಸೊಳ್ಳೆಗಳು ಆನೆಕಾಲುರೋಗವನ್ನು ಉಂಟು ಮಾಡುವ ಫೈಲೇರಿಯ ಹುಳುಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಕೆಲವು ಪ್ರಭೇದಗಳು ಮಿದುಳಿನ ಅಂಗಾಂಶಗಳನ್ನು ಬಾಧಿಸುವ ಎನ್‍ಸೆಫಲೈಟಿಸ್ ಎಂಬ ರೋಗಕಾರಕ ವೈರಸ್ಸನ್ನು ಹರಡುತ್ತವೆ.

ನೋಡಿ

ಉಲ್ಲೇಖ

ಕ್ಯೂಲೆಕ್ಸ್ ಸೊಳ್ಳೆ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಕ್ಯೂಲೆಕ್ಸ್ ಸೊಳ್ಳೆ ವಿವರಣೆಕ್ಯೂಲೆಕ್ಸ್ ಸೊಳ್ಳೆ ರೋಗಪ್ರಸಾರಕ್ಯೂಲೆಕ್ಸ್ ಸೊಳ್ಳೆ ನೋಡಿಕ್ಯೂಲೆಕ್ಸ್ ಸೊಳ್ಳೆ ಉಲ್ಲೇಖಕ್ಯೂಲೆಕ್ಸ್ ಸೊಳ್ಳೆen:Culex

🔥 Trending searches on Wiki ಕನ್ನಡ:

ಹಳೇಬೀಡುಕನ್ನಡ ಪತ್ರಿಕೆಗಳುಮಾನವ ಸಂಪನ್ಮೂಲಗಳುಗುಬ್ಬಚ್ಚಿದೂರದರ್ಶನಅಸಹಕಾರ ಚಳುವಳಿಇಂಡಿ ವಿಧಾನಸಭಾ ಕ್ಷೇತ್ರಜಾಹೀರಾತುಶಬರಿಬಿ.ಎಲ್.ರೈಸ್ವ್ಯಾಪಾರಸರ್ವಜ್ಞತತ್ತ್ವಶಾಸ್ತ್ರಮಂತ್ರಾಲಯಅನಸುಯ ಸಾರಾಭಾಯ್ರಾಜ್ಯಗಳ ಪುನರ್ ವಿಂಗಡಣಾ ಆಯೋಗಯೋಗಿ ಆದಿತ್ಯನಾಥ್‌ಗೋವದೆಹಲಿಯ ಇತಿಹಾಸಹಲಸುವಾಟ್ಸ್ ಆಪ್ ಮೆಸ್ಸೆಂಜರ್ಪಶ್ಚಿಮ ಘಟ್ಟಗಳುಕುಟುಂಬದ್ರಾವಿಡ ಭಾಷೆಗಳುಮಹಾಭಾರತವಿ. ಕೃ. ಗೋಕಾಕವಿಜ್ಞಾನಬನವಾಸಿಸ್ವಾಮಿ ವಿವೇಕಾನಂದಕರ್ನಾಟಕ ಹೈ ಕೋರ್ಟ್ಭಾರತದಲ್ಲಿ ತುರ್ತು ಪರಿಸ್ಥಿತಿಮಂಜುಳಹೊರನಾಡುಭೂತಾರಾಧನೆಪಂಪ ಪ್ರಶಸ್ತಿಸಾರ್ವಜನಿಕ ಹಣಕಾಸುನಳಂದಪಂಚತಂತ್ರಸರ್ಪ ಸುತ್ತುಬಿ. ಎಂ. ಶ್ರೀಕಂಠಯ್ಯಭಾರತದ ಬಂದರುಗಳುಪೊನ್ನಿಯನ್ ಸೆಲ್ವನ್ಕರ್ನಾಟಕದ ಜಿಲ್ಲೆಗಳುಯುಗಾದಿಕನ್ನಡ ಚಂಪು ಸಾಹಿತ್ಯಕವಿಗಳ ಕಾವ್ಯನಾಮಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಮಾನವ ಹಕ್ಕುಗಳುಲಿನಕ್ಸ್ಪ್ರಾಣಾಯಾಮಹರ್ಯಂಕ ರಾಜವಂಶಈಸ್ಟ್‌ ಇಂಡಿಯ ಕಂಪನಿಸಂಸ್ಕೃತಅರಿಸ್ಟಾಟಲ್‌ಎಲೆಕ್ಟ್ರಾನಿಕ್ ಮತದಾನಬಯಕೆವಿಶ್ವ ಕನ್ನಡ ಸಮ್ಮೇಳನಸಂಧಿಪಠ್ಯಪುಸ್ತಕತುಳಸಿಶಾತವಾಹನರುಭಾರತದಲ್ಲಿನ ಜಾತಿ ಪದ್ದತಿನಾಗಚಂದ್ರಸೂರ್ಯವ್ಯೂಹದ ಗ್ರಹಗಳುಭಾರತೀಯ ಭೂಸೇನೆಕನ್ನಡಜಗ್ಗೇಶ್ಬಿಳಿ ಎಕ್ಕಚರ್ಚ್ಹದಿಹರೆಯಭಾರತದ ನದಿಗಳುಕರ್ಣಾಟ ಭಾರತ ಕಥಾಮಂಜರಿನಗರೀಕರಣಕರ್ನಾಟಕ ಜನಪದ ನೃತ್ಯಬಾದಾಮಿ ಗುಹಾಲಯಗಳುಆಶಿಶ್ ನೆಹ್ರಾಸಿಹಿ ಕಹಿ ಚಂದ್ರು🡆 More