ಸೊಳ್ಳೆ

ಸೊಳ್ಳೆ
ಸೊಳ್ಳೆ
ಸೊಳ್ಳೆ
Scientific classification
ಸಾಮ್ರಾಜ್ಯ:
ಅನಿಮೇಲಿಯ
ವಿಭಾಗ:
ಅರ್ತ್ರೊಪೋಡ
ವರ್ಗ:
ಇಂಸೆಕ್ಟ
ಗಣ:
ಉಪಗಣ:
ನೆಮಟೊಸೆರ
ಕೆಳಗಣ:
ಕುಲಿಕೊಮೋರ್ಫ
ಮೇಲ್ಕುಟುಂಬ:
ಕುಲಿಕೈಡಿಯ
ಕುಟುಂಬ:
ಕುಲಿಸಿಡೇ

Meigen, ೧೮೧೮ 

ಪೀಠಿಕೆ

  • ಸೊಳ್ಳೆಗಳು ಕುಲಿಸಿಡೇ ಜಾತಿಗೆ ಸೇರಿದ ಚಿಕ್ಕ-ಚಿಕ್ಕ ಕೀಟಗಳು.ಕೆಲವು ಸೊಳ್ಳೆಗಳು ಪ್ರಾಣಿಗಳ ರಕ್ತವನ್ನು ಕುಡಿಯುತ್ತವೆ, ಮಾನವನದ್ದು ಕೂಡ.ಹೆಣ್ಣು ಸೊಳ್ಳೆಗಳು ರಕ್ತ-ಕುಡಿಯುವ ಪಿಶಾಚಿಗಳೆಂದು ಕರೆಯುತ್ತಾರೆ.ಕುಡಿಯುವುದಷ್ಟೇ ಅಲ್ಲದೇ, ರೋಗಗಳನ್ನು ಹರಡುತ್ತವೆ. ಅವೆಂದರೆ- ಮಲೇರಿಯಾ, ಡೆಂಗ್ಯೂ, ಕಾಮಾಲೆ, ಚಿಕನ್ ಗುನ್ಯಾ ಈ ಬಗೆಯವು .ತಜ್ಞರ ಪ್ರಕಾರ ಸೊಳ್ಳೆಗಳು ಮಾನವಕುಲಕ್ಕೆ ಅತೀ ಅಪಾಯಕಾರಿ ಜೀವಿಗಳು.
  • ಸೊಳ್ಳೆಯ ಕಚ್ಚುವಿಕೆಯು ಚರ್ಮಕ್ಕೆ ಹರಡಿದ ಲಾಲಾರಸವು ತುರಿಕೆ ಮತ್ತು ರಾಶ್‍ಗೆ/ ದದ್ದು ಬರಲು ಕಾರಣವಾಗಬಹುದು. ಇದರ ಜೊತೆಗೆ, ಸೊಳ್ಳೆಗಳ ಅನೇಕ ಪ್ರಭೇದಗಳು ಕಾಯಿಲೆಯನ್ನು ಉಂಟುಮಾಡುವ ಅಥವಾ ಹರಡುವ (ಅಥವಾ ಎರಡೂ) ಮಲೇರಿಯಾ, ಹಳದಿ ಜ್ವರ, ಚಿಕನ್ಗುನ್ಯಾ, ವೆಸ್ಟ್ ನೈಲ್ ವೈರಸ್, ಡೆಂಗ್ಯೂ ಜ್ವರ, ಫಿಲಾರಿಯಾಸಿಸ್, ಝಿಕಾ ವೈರಸ್ ಮತ್ತು ಇತರ ಅರ್ಬೊವೈರಸ್ಗಳು ರೋಗಗಳನ್ನು ಉಂಟುಮಾಡುವ ಜೀವಿಗಳನ್ನು ಮಾನವನ ದೇಹಕ್ಕೆ ಸೇರಿಸುತ್ತವೆ, ಮತ್ತು ಯಾವುದೇ ಪ್ರಾಣಿಗಳಿಗಿಂತಲೂ ಸೊಳ್ಳೆಗಳು ಹೆಚ್ಚು ಜನರನ್ನು ಕೊಲ್ಲುತ್ತವೆ: ಇದರಿಂದ ಪ್ರತಿ ವರ್ಷ 700,000 ಕ್ಕಿಂತ ಹೆಚ್ಚು ಜನರು ಸಾವಿಗೀಡಾಗುತ್ತಾರೆ.

ವಿವರ

  • ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಆನೆ, ಹಾವು. ಈ ಪ್ರಾಣಿಗಳಿಗಳಿಗಿಂತ ಅಪಾಯಕಾರಿಯಾದದ್ದು ಸೊಳ್ಳೆ.ಅದರಲ್ಲೂ ಹೆಣ್ಣು ಸೊಳ್ಳೆ. ಸುಮಾರು ನಾಲ್ಕು ಕೋಟಿ ಐವತ್ತು ಲಕ್ಷ ಜನರು ಸತ್ತಿರುವುದು ಈ ಹೆಣ್ಣು ಸೊಳ್ಳೆಯಿಂದಲೇ. (ಗಂಡು ಸೊಳ್ಳೆಗಳು ಗಿಡಗಳನ್ನು ಮಾತ್ರ ಕಚ್ಚುತ್ತವೆ).
  • ಮಲೇರಿಯಾ, ಹಳದಿ ಜ್ವರ, ಡೆಂಗಿ, ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ), ಫಿಲಾರಿಯಾಸಿಸ್, ಆನೆ ಕಾಲು ರೋಗ ಸೇರಿದಂತೆ ನೂರಕ್ಕೂ ಹೆಚ್ಚು ಮಾರಕ ರೋಗಗಳನ್ನು ತರುವ ಸಾಮರ್ಥ್ಯ ಈ ಹೆಣ್ಣು ಸೊಳ್ಳೆಗಳಿಗಿದೆ. ಇಂದಿಗೂ ವಿಶ್ವದಲ್ಲಿ ಪ್ರತಿ ಹನ್ನೆರಡು ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಸೊಳ್ಳೆಯಿಂದ ಸಾಯುತ್ತಿದ್ದಾನೆ.
  • ಹತ್ತೊಂಬತ್ತನೇ ಶತಮಾನದ ಕೊನೆಯವರೆಗೂ ಸೊಳ್ಳೆ ಇಷ್ಟೊಂದು ಅಪಾಯಕಾರಿ ಎಂಬುದೇ ಯಾರ ಗಮನಕ್ಕೂ ಬಂದಿರಲಿಲ್ಲ. 1877ರಲ್ಲಿ ಬ್ರಿಟಿಷ್ ವೈದ್ಯ ಪ್ಯಾಟ್ರಿಕ್ ಮ್ಯಾನ್ಸನ್, (‘ಮಸ್ಕಿಟೊ ಮ್ಯಾನ್ಸನ್’ ಎಂದು ಪ್ರಸಿದ್ಧರಾದರು) ಆನೆಕಾಲು ರೋಗಕ್ಕೆ ಮೂಲ ಸೊಳ್ಳೆ ಎಂಬುದನ್ನು ಕಂಡುಕೊಂಡರು.
  • ಇದಾದ 17 ವರ್ಷಗಳ ನಂತರ, ಅಂದರೆ 1894ರಲ್ಲಿ ಮಲೇರಿಯಾ ಕೂಡ ಸೊಳ್ಳೆಯ ಫಲವೇ ಎಂಬ ಸಂಶಯ ವ್ಯಕ್ತವಾಯಿತು. ಭಾರತದ ರೊನಾಲ್ಡ್ ರೋಸ್‌ ಎಂಬ ವೈದ್ಯರಿಗೆ ಈ ಕುರಿತು ಸಂಶೋಧನೆ ಮಾಡಲು ಮ್ಯಾನ್ಸನ್ ಸಲಹೆ ನೀಡಿದರು.

ಸಂಶೋಧನೆ

  • ಹೆಣ್ಣು ಸೊಳ್ಳೆಗಳು ಹೇಗೆ ತಮ್ಮ ಎಂಜಿಲಿನ ಮೂಲಕ ಪ್ಲಾಸ್ಮೋಡಿಯಂ ಪ್ಯಾರಾಸೈಟ್ ಅನ್ನು ಹರಡುತ್ತವೆ ಎಂಬುದನ್ನು ಕಂಡುಹಿಡಿದ ಮೊದಲ ವ್ಯಕ್ತಿಯಾದರು ರೋಸ್. ಇವರು ಹಕ್ಕಿಯನ್ನು ಬಳಸಿಕೊಂಡು ಸಿದ್ಧಾಂತವನ್ನು ಸಾಬೀತು ಮಾಡಲು ಹೊರಟರು. ಆದರೆ ಮ್ಯಾನ್ಸನ್ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದರು. ಈ ಸಿದ್ಧಾಂತ ಮನುಷ್ಯರ ಮೇಲೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕಂಡುಕೊಳ್ಳಲು ತಮ್ಮ ಮಗನನ್ನೇ ಪ್ರಯೋಗಕ್ಕೆ ಒಡ್ಡಿದರು.(ಔಷಧಿ ಕೊಟ್ಟ ನಂತರ ಮಗ ತಕ್ಷಣ ಗುಣಮುಖನಾದದ್ದು ವಿಶೇಷ).
  • ಈ ಸಂಶೋಧನೆ ಫಲವಾಗಿ 1902ರಲ್ಲಿ ರೋಸ್‌ ಅವರಿಗೆ ನೋಬೆಲ್ ಪ್ರಶಸ್ತಿ ದೊರಕಿತು. ಮ್ಯಾನ್ಸನ್‌, ರಾಯಲ್ ಸೊಸೈಟಿಯ ಸದಸ್ಯರಾಗಿ, ಲಂಡನ್ ಸ್ಕೂಲ್ ಆಫ್ ಟ್ರಾಪಿಕಲ್ ಮೆಡಿಸನ್‌ ಸಂಸ್ಥೆ ಸ್ಥಾಪಿಸಿದರು.

ಸೊಳ್ಳೆಯ ವಿಧಗಳು

ಸೊಳ್ಳೆ 
ಅನಾಫಿಲಿಸ್‌ ಆಲ್ಬುಮಿನಸ್ ಸೊಳ್ಳೆಯು ಮನುಷ್ಯನ ತೋಳಿನಿಂದ ಆಹಾರ ಪಡೆಯುತ್ತದೆ. ಈ ಸೊಳ್ಳೆಯು ಮಲೇರಿಯಾದ ರೋಗವಾಹಕ ಮತ್ತು ಸೊಳ್ಳೆ ನಿಯಂತ್ರಣ ಮಲೇರಿಯಾದಂತಹ ಘಟನೆಗಳನ್ನು ಕಡಿಮೆ ಮಾಡಲು ಇರುವ ಪರಿಣಾಮಕಾರಿ ಮಾರ್ಗ.
  • ಸೊಳ್ಳೆಯಲ್ಲಿ 2,500 ಪ್ರಭೇದಗಳಿವೆ. ಅದರಲ್ಲಿ 400 ‘ಅನಾಫಿಲಿಸ್’ ಕುಟುಂಬಕ್ಕೆ ಸೇರಿದವು ಮತ್ತು 40 ಪ್ರಭೇದಗಳು ಮಲೇರಿಯಾ ಹರಡುವಲ್ಲಿ ಪ್ರಮುಖ ಪಾತ್ರ ವಹಿಸುವಂಥವು. ಅನಾಫಲೀಸ್ ಹೆಣ್ಣು ಸೊಳ್ಳೆ ತಾನು ಹೀರಿದ ರಕ್ತವನ್ನು ನೀರಿನ ಮೇಲಿಟ್ಟ ತನ್ನ ಮೊಟ್ಟೆಯನ್ನು ಬಲಿಸಲು ಬಳಸುತ್ತದೆ. ಅವು ನೀರಿನಲ್ಲಿ ಮರಿಯಾಗುತ್ತವೆ. ಆ ಮರಿಸೊಳ್ಳೆಗಳು ನೀರಿನಲ್ಲೇ ಈಜಾಡಿಕೊಂಡು ರೋಗದ ಮೂಲವಾಗುತ್ತವೆ.
  • ಹೆಣ್ಣು ಸೊಳ್ಳೆಗಳು ತೇವವಿರುವ ಕಡೆ, ನೀರಿನ ಆಶ್ರಯ, ಕಾರ್ಬನ್ ಡೈ ಆಕ್ಸೈಡ್, ದೇಹದ ಉಷ್ಣತೆಗೆ ಆಕರ್ಷಿತವಾಗುತ್ತವೆ. ಬೆವರುವ ಜನರ ಹಾಗೂ ಗರ್ಭಿಣಿಯರಿಗೆ ಸೊಳ್ಳೆ ಕಚ್ಚುವುದು ಹೆಚ್ಚು. ಇಷ್ಟೆಲ್ಲಾ ಪ್ರಭೇದಗಳಿರುವ ಹಾಗೂ ಜೀವಕ್ಕೇ ಎರವಾಗುವ ಸೊಳ್ಳೆಯನ್ನು ‘ಚಿಕ್ಕ ಕೀಟ’ ಎಂದು ಕರೆಯಲಾಗಿದೆ. ಆದರೆ ಇದು ಮಾನವರಿಗೆ ಭೂಮಿ ಮೇಲಿನ ಭಯಾನಕ ಜೀವಿ.

ಸೊಳ್ಳೆಯ ಅಂಗರಚನಾ ಶಾಸ್ತ್ರೀಯ ವಿವರಣೆ

ಭಾರತದಲ್ಲಿ ಮಲೇರಿಯಾ

  • ಮಲೇರಿಯಾವನ್ನು ಸೋಲಿಸಲು ಭಾರತ ದಾರಿ ಮಾಡಿಕೊಂಡಿದೆ. ಸಂಘಟಿತವಾದ ಮಲೇರಿಯಾ-ವಿರೋಧಿ ಅಭಿಯಾನದ ಸಂಯೋಜನೆ, ತ್ವರಿತ ರೋಗನಿರ್ಣಯದ ಪರೀಕ್ಷೆಗಳ ಲಭ್ಯತೆ, ಆರ್ಟೆಮೆಸಿನಿನ್-ಆಧಾರಿತ ಸಂಯೋಜನೆಯ ಚಿಕಿತ್ಸೆಗಳು (ಎಸಿಟಿ) ಮತ್ತು ಸಮುದಾಯದ ಚಲನಶೀಲತೆಗಳನ್ನು ಬಳಸುವುದು, ಇವು ಭಾರತವು ಮಲೇರಿಯಾ ಹರಡುವಿಕೆಯನ್ನು ಹತೋಟಿಗೆ ತರಲು ಸಹಾಯ ಮಾಡಿದೆ. ಮಲೇರಿಯಾ ಸಂಖ್ಯೆಯನ್ನು ಕಡಿಮೆಗೊಳಿಸಲು ದೇಶದ ನಿರ್ವಹಣೆಯ ಪರಿಣಾಮ ಹೀಗಿದೆ.
ಮಲೇರಿಯಾ ಸೋಂಕಿನವರು. ಸಾವು
2001 :20.8 ಲಕ್ಷ ಸಾವು::1005
2004:19.1 ಲಕ್ಷ ಸಾವು::949
2007 : 15.1 ಲಕ್ಷ ಸಾವು::1311
2010: ಸಾವು::1018
2014:8.5 ಲಕ್ಷ ಸಾವು::316

ಸೊಳ್ಳೆಗಳು ಮತ್ತು ಮನುಷ್ಯರು

  • ಫ್ಲೊರಿಡಾದ ವಿಶ್ವವಿದ್ಯಾಲಯದ ಪಿಎಚ್‌ಡಿ ಪ್ರಾಧ್ಯಾಪಕ ಜೆರ್ರಿ ಬಟ್ಲರ್ ತಿಳಿಸಿದ್ದಾರೆ. ಸೊಳ್ಳೆಗಳು ಆಹಾರದ ಉದ್ದೇಶಕ್ಕಾಗಿ ರಕ್ತ ಹೀರುವುದಿಲ್ಲ. ಹೆಣ್ಣು ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ಪ್ರೋಟೀನ್‌ಗಳನ್ನು ಪಡೆಯುವುದಕ್ಕಾಗಿ ರಕ್ತ ಹೀರುತ್ತವೆ ಎಂದು ಅವರು ತಮ್ಮ ಸಂಶೋಧನಾ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.ಒ ಗುಂಪಿನ ರಕ್ತವುಳ್ಳವರತ್ತ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆ ಶೇಕಡ 83ರಷ್ಟು ಹೆಚ್ಚು. ಬಿ ಗುಂಪಿನ ರಕ್ತದವರತ್ತ ಆಕರ್ಷಿತವಾಗುವ ಸಾಧ್ಯತೆ ಸಾಮಾನ್ಯವಾಗಿದ್ದರೆ ಎ ಗುಂಪಿನ ರಕ್ತ ಇರುವವರತ್ತ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆ ತುಂಬಾ ಕಡಿಮೆ. ಸ್ಥೂಲಕಾಯದವರು, ಗರ್ಭಿಣಿಯರು, ವ್ಯಾಯಾಮನಿರತರು, ಹೆಚ್ಚು ಇಂಗಾಲದ ಡೈಆಕ್ಸೈಡ್‌ ಹೊರಸೂಸುವುದರಿಂದ ಸೊಳ್ಳೆಗಳು ಆಕರ್ಷಿತವಾಗುವ ಸಾಧ್ಯತೆ ಹೆಚ್ಚು.

ತಡೆ ಮತ್ತು ನಾಶ

  • ಸೊಳ್ಲೆತಡೆಗಾಗಿ ಅನೇಕ ಬಗೆಯ ಸಲಕರಣೆ, ಮುಲಾಮು, ಸಿಂಪರಣೆ, ವಿದ್ಯತ್‍ಕೋಶಗಳು ಇವೆ ಆದರೆ ಸಮಪೂರ್ನ ತಡೆಗೆ ವಿಫಲವಾಗಿವೆ. ಹೊಸ ಸಲಕರಣೆಗಳು ಬರತ್ತಿವೆ.

ನೋಡಿ

ಉಲ್ಲೇಖಗಳು

Tags:

ಸೊಳ್ಳೆ ಪೀಠಿಕೆಸೊಳ್ಳೆ ವಿವರಸೊಳ್ಳೆ ಸಂಶೋಧನೆಸೊಳ್ಳೆ ಯ ವಿಧಗಳುಸೊಳ್ಳೆ ಯ ಅಂಗರಚನಾ ಶಾಸ್ತ್ರೀಯ ವಿವರಣೆಸೊಳ್ಳೆ ಭಾರತದಲ್ಲಿ ಮಲೇರಿಯಾಸೊಳ್ಳೆ ಗಳು ಮತ್ತು ಮನುಷ್ಯರುಸೊಳ್ಳೆ ನೋಡಿಸೊಳ್ಳೆ ಉಲ್ಲೇಖಗಳುಸೊಳ್ಳೆ

🔥 Trending searches on Wiki ಕನ್ನಡ:

ಸೂಫಿಪಂಥತ. ರಾ. ಸುಬ್ಬರಾಯಸಹಕಾರಿ ಸಂಘಗಳುಮೈಸೂರು ಸಂಸ್ಥಾನಚಿತ್ರದುರ್ಗ ಜಿಲ್ಲೆಪ್ರೇಮಾಮಳೆಗಾಲಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಕುದುರೆಜೋಗಿ (ಚಲನಚಿತ್ರ)ಇಂದಿರಾ ಗಾಂಧಿಕರ್ನಾಟಕದ ಮಹಾನಗರಪಾಲಿಕೆಗಳುಲಸಿಕೆ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಹೊಂಗೆ ಮರಚಿಲ್ಲರೆ ವ್ಯಾಪಾರಪರಿಣಾಮನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಪ್ಯಾರಾಸಿಟಮಾಲ್ಕನ್ನಡ ಗುಣಿತಾಕ್ಷರಗಳುವಿಕಿರಣಗೋಪಾಲಕೃಷ್ಣ ಅಡಿಗಗೋಕಾಕ್ ಚಳುವಳಿಚದುರಂಗದ ನಿಯಮಗಳುಜನ್ನಚಾಮರಾಜನಗರಮಂಕುತಿಮ್ಮನ ಕಗ್ಗಭಾರತದ ಪ್ರಧಾನ ಮಂತ್ರಿಮಹಮದ್ ಬಿನ್ ತುಘಲಕ್ಜಾಹೀರಾತುಮೂಕಜ್ಜಿಯ ಕನಸುಗಳು (ಕಾದಂಬರಿ)ಭಾರತ ಸಂವಿಧಾನದ ಪೀಠಿಕೆಕನ್ನಡ ಚಳುವಳಿಗಳುಅರ್ಜುನಕರಗ (ಹಬ್ಬ)ಆಟಿಸಂಯಮಸಂಶೋಧನೆಬೆಂಗಳೂರು ಗ್ರಾಮಾಂತರ ಜಿಲ್ಲೆಆನೆಅಂಡವಾಯುಮಾಧ್ಯಮರವಿಚಂದ್ರನ್ಜಿ.ಎಸ್.ಶಿವರುದ್ರಪ್ಪನಚಿಕೇತನಾಟಕರೇಣುಕಮಾದಕ ವ್ಯಸನಭೋವಿಅಷ್ಟ ಮಠಗಳುಕರ್ನಾಟಕ ಸ್ವಾತಂತ್ರ್ಯ ಚಳವಳಿಹನುಮಂತಕರ್ನಾಟಕದ ಜಿಲ್ಲೆಗಳುಶ್ಯೆಕ್ಷಣಿಕ ತಂತ್ರಜ್ಞಾನಭಾರತದ ಜನಸಂಖ್ಯೆಯ ಬೆಳವಣಿಗೆಸವದತ್ತಿಕರ್ನಾಟಕಅಶೋಕನ ಶಾಸನಗಳುವ್ಯಂಜನಎಳ್ಳೆಣ್ಣೆಕಲ್ಯಾಣ ಕರ್ನಾಟಕನೀನಾದೆ ನಾ (ಕನ್ನಡ ಧಾರಾವಾಹಿ)ಗುರುರಾಜ ಕರಜಗಿವಿನಾಯಕ ದಾಮೋದರ ಸಾವರ್ಕರ್ಸುಗ್ಗಿ ಕುಣಿತವಾಲಿಬಾಲ್ಮಂಗಳ (ಗ್ರಹ)ಯು. ಆರ್. ಅನಂತಮೂರ್ತಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕನ್ನಡದಲ್ಲಿ ಸಣ್ಣ ಕಥೆಗಳುನಗರಖೊಖೊಜೋಡು ನುಡಿಗಟ್ಟುಭಾರತೀಯ ಅಂಚೆ ಸೇವೆಲೆಕ್ಕ ಬರಹ (ಬುಕ್ ಕೀಪಿಂಗ್)🡆 More