ಕವಟೆಕಾಯ್ಮರ

ಕವಟೆಕಾಯ್ಮರವು ರುಟಾಸಿಯ ಕುಟುಂಬಕ್ಕೆ ಸೇರಿದೆ.

ಇದನ್ನು ಕೇಪ್ ಎಲ್ಲೊವುಡ್ ಎಂದು ಕರೆಯುತ್ತಾರೆ. ಝಾಂಟೊಕ್ಸಿಲಮ್ ರಹೀಟ್ಸ ಇದರ ವೈಜ್ಞಾನಿಕ ಹೆಸರು.

ಕವಟೆಕಾಯ್ಮರ
ಕವಟೆಕಾಯ್ಮರ

ಸಸ್ಯದ ವಿವರಣೆ

ಕವಟೆಕಾಯ್ಮರ ೩೫ ಮೀಟರ್ ಉದ್ದ ಬೆಳೆಯುತ್ತದೆ. ಇದೊಂದು ಎಲೆಯುದುರುವ ಮರವಾಗಿದೆ. ಈ ಮರದ ವ್ಯಾಸ ಸುಮಾರು ೭೫ಸೆ.ಮೀ ವರೆಗೂ ಇರುತ್ತದೆ.ಕಾಂಡದ ತೊಗಟೆಯು ಕಾರ್ಕಿಯ ಶಂಕುವಿನಾಕಾರದ ಮುಳ್ಳುಗಳನ್ನು ಹೊಂದಿದ್ದು ತೊಗಟೆ ಕಂದು ಬಣ್ಣದಲ್ಲಿರುತ್ತದೆ. ಎಲೆಯ ಕಿರು ಕೊಂಬೆಗಳು ದುಂಡಾಗಿದ್ದು, ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿದ್ದು ಮತ್ತು ರೋಮ ರಹಿತವಾಗಿರುತ್ತದೆ. ಎಲೆಗಳು ಸಂಯುಕ್ತವಾಗಿದ್ದು, ಸುತ್ತಲೂ ಜೋಡನಾ ವ್ಯವಸ್ಥೆಯಲ್ಲಿರುತ್ತದೆ. ಇದೆರ ತೊಟ್ಟುಗಳು 3ಸೆಂ.ಮೀ ಉದ್ದವಿದೆ. ತುದಿಯು ಕ್ರಮೇಣ ಚುಪಾಗಿರುತ್ತದೆ. ಇದರ ಬೀಜಗಳು ಗೋಳಾಕಾರಲ್ಲಿದ್ದು, ನಯವಾದ ನೀಲಿ ಕಂದು ಬಣ್ಣದಲ್ಲಿರುತ್ತದೆ. ಇದರ ಹಣ್ಣು ರುಚಿ ಮತ್ತು ಸುವಾಸನೆಯನ್ನು ಹೊಂದಿರುತ್ತದೆ.

ಬೆಳೆಯುವ ಪ್ರದೇಶಗಳು

ಇದು ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ. ಕೊಡಗಿನ ಜನರ ಆಹಾರದಲ್ಲಿ ಮಸಾಲೆಯಾಗಿ ಬಳಸಲು ಈ ಮರವನ್ನು ಬೆಳೆಸುತ್ತಾರೆ. ಈ ಮರ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್, ಥೈಲ್ಯಾಂಡ್, ಮಲೆಷ್ಯಾ, ಇಂಡೋನೇಷಿಯಾ, ವಿಯೆಟ್ನಾಂ, ಪಪುವಾ ನ್ಯೂ ಗಿನಿಯಾಗಳಲ್ಲಿ ಬೆಳೆಯುತ್ತದೆ.

ಕವಟೆಕಾಯ್ಮರ 
ಕವಟೆಕಾಯ್ಮರದ ಹಣ್ಣು

ಉಪಯೋಗ

  • ತೊಗಟೆಯನ್ನು ಮಸಾಲೆಯಾಗಿ ಬಳಸಿಕೊಳ್ಳಲಾಗುತ್ತದೆ. ಈ ಮರವು ಸುಣ್ಣ-ಮೆಣಸಿನ ಪರಿಮಳವನ್ನು ಹೊಂದಿರುತ್ತದೆ.
  • ಇದನ್ನು ಬೇಯಿಸಿ ಆಹಾರವಾಗಿ ಸೇವಿಸುತ್ತಾರೆ.
  • ಹಣ್ಣುಗಳು ಮತ್ತು ಕೋಮಲ ಎಲೆಗಳನ್ನು ಬೇಯಿಸಿ ತಿನ್ನಲಾಗುತ್ತದೆ.
  • ಅರುಣಾಚಲ ಪ್ರದೇಶದ ಸ್ಥಳೀಯ ಜನರು ಇದನ್ನು ಬಿಸಿ ಮಸಾಲೆಯಾಗಿ ಬಳಸುತ್ತಾರೆ.

ಔಷಧೀಯ ಬಳಕೆ

  • ಹಣ್ಣುಗಳ ಸಿಪ್ಪೆ, ಬೀಜಗಳು, ಕಾಂಡಗಳ ತೊಗಟೆ ಮತ್ತು ಬೇರುಗಳು ಹಾಗೂ ಹಣ್ಣುಗಳಿಂದ ಪಡೆಯಲಾದ ಎಣ್ಣೆ (ಮುಲ್ಲಿಲ್ಲಮ್-ಎಣ್ಣೆ)ಯನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
  • ತೊಗಟೆಯ ಕಷಾಯವನ್ನು ಎದೆಯ ನೋವಿನ ಚಿಕಿತ್ಸೆಯಲ್ಲಿ ಬಳಸುತ್ತಾರೆ.
  • ಹಣ್ಣುಗಳನ್ನು ಡಿಸ್ಪಿಪ್ಸಿಯಾ, ಆಸ್ತಮಾ ಮತ್ತು ಬ್ರಾಂಕೈಟಿಸ್, ಹೃದಯ ತೊಂದರೆಗಳು, ಹಲ್ಲುನೋವು ಮತ್ತು ಸಂಧಿವಾತಗಳ ಚಿಕಿತ್ಸೆಗೆ ಬಳಸಲಾಗುತ್ತದೆ.
  • ಹೊಟ್ಟೆ ನೋವುಗಳಿಗೆ ಪರಿಹಾರವಾಗಿ ಬಾಹ್ಯವಾಗಿ ಬಳಸಲಾಗುತ್ತದೆ.
  • ಹಣ್ಣೀನ ಚರ್ಮಗಳು ಉತ್ತೇಜಕ ಮತ್ತು ಜೀರ್ಣಕಾರಿ ಗುಣಲಕ್ಷಣಗಳನ್ನು ಹೊಂದಿದೆ.
  • ಎದೆ ನೋವುಗಳಿಗೆ ಆಂತರಿಕವಾಗಿ ಇದರ ಕಷಾಯವನ್ನು ಬಳಸಲಾಗುತ್ತದೆ.
  • ಗೋವಾದಲ್ಲಿ ಮೂತ್ರಪಿಂಡಗಳಿಗೆ ಶುದ್ಧೀಕರಿಸಲು ಮೂಲ ತೊಗಟೆಯನ್ನು ಬಳಸಲಾಗುತ್ತದೆ.
  • ಕಾಲರಾಗೆ ಅಗತ್ಯ ಎಣ್ಣೆ ಅಲ್ಲದೆ ನಂಜುನಿರೋಧಕ ಅಥವಾ ಸೊಂಕು ನಿವಾರಕವನ್ನಾಗಿ ಬಳಸಲಾಗುತ್ತದೆ.
  • ಭಾರತದ ಅರುಣಾಚಲ ಪ್ರದೇಶದಡಿಯ ಕಣಿವೆಯ ಆದಿಬುಡಕಟ್ಟುಗಳು ನರಹುಲಿ ಮತ್ತು ಕಾಮಾಲೆಗಳ ಚಿಕಿತ್ಸೆಗಾಗಿ ಬೇಯಿಸಿದ ಅಥವಾ ಉಗಿ ಎಲೆಗಳನ್ನು ಬಳಸಲಾಗುತ್ತದೆ.

ಜನಪದ ಕಲೆಗಳಲ್ಲಿ ಬಳಕೆ

ಉಲ್ಲೇಖ

Tags:

ಕವಟೆಕಾಯ್ಮರ ಸಸ್ಯದ ವಿವರಣೆಕವಟೆಕಾಯ್ಮರ ಬೆಳೆಯುವ ಪ್ರದೇಶಗಳುಕವಟೆಕಾಯ್ಮರ ಉಪಯೋಗಕವಟೆಕಾಯ್ಮರ ಔಷಧೀಯ ಬಳಕೆಕವಟೆಕಾಯ್ಮರ ಜನಪದ ಕಲೆಗಳಲ್ಲಿ ಬಳಕೆಕವಟೆಕಾಯ್ಮರ ಉಲ್ಲೇಖಕವಟೆಕಾಯ್ಮರ

🔥 Trending searches on Wiki ಕನ್ನಡ:

ರಸ(ಕಾವ್ಯಮೀಮಾಂಸೆ)ಕ್ರೈಸ್ತ ಧರ್ಮವಿಜಯನಗರ ಸಾಮ್ರಾಜ್ಯರಾವಣಸೀತಾ ರಾಮಭಾರತದ ನದಿಗಳುಕೆ. ಅಣ್ಣಾಮಲೈಬಂಜಾರನುಡಿಗಟ್ಟುಜಿ.ಎಸ್.ಶಿವರುದ್ರಪ್ಪಬಾಲ ಗಂಗಾಧರ ತಿಲಕವೈದ್ಯಸಹಕಾರಿ ಸಂಘಗಳುವಿಜಯಪುರಪಠ್ಯಪುಸ್ತಕಕಂಪ್ಯೂಟರ್ಸಿದ್ಧರಾಮಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಬಿ. ಜಿ. ಎಲ್. ಸ್ವಾಮಿಗೋವಿಂದ ಪೈಹಾ.ಮಾ.ನಾಯಕದೆಹಲಿ ಸುಲ್ತಾನರುಕೃಷ್ಣದೇವರಾಯಗೌತಮಿಪುತ್ರ ಶಾತಕರ್ಣಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾರತದಲ್ಲಿ ತುರ್ತು ಪರಿಸ್ಥಿತಿಫೇಸ್‌ಬುಕ್‌ಭಾರತದ ಪ್ರಧಾನ ಮಂತ್ರಿಕುಪ್ಪಿಗಿಡಅಡೋಲ್ಫ್ ಹಿಟ್ಲರ್ಕನ್ನಡ ಕಾಗುಣಿತಚಾರ್ಲಿ ಚಾಪ್ಲಿನ್ಸಾ.ಶಿ.ಮರುಳಯ್ಯಸೀಸಂವಾಲಿಬಾಲ್ತೆಲುಗುಅಷ್ಟಸಿದ್ಧಿಗಳುಗೋತ್ರ ಮತ್ತು ಪ್ರವರಜೆ.ಆರ್.ಡಿ. ಟಾಟಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು1773ರ ರೆಗ್ಯುಲೇಟಿಂಗ್ ಶಾಸನತ್ರಿಪದಿತ್ರಿಪುರಕನ್ನಡಹವಾಮಾನಬಿ.ಎಫ್. ಸ್ಕಿನ್ನರ್ಶ್ಯೆಕ್ಷಣಿಕ ತಂತ್ರಜ್ಞಾನಭಾರತೀಯ ಧರ್ಮಗಳುಗಂಗ (ರಾಜಮನೆತನ)ಬಾರ್ಲಿಸೆಸ್ (ಮೇಲ್ತೆರಿಗೆ)ಕಾರ್ಮಿಕರ ದಿನಾಚರಣೆಮಲೈ ಮಹದೇಶ್ವರ ಬೆಟ್ಟರಾಜಕೀಯ ವಿಜ್ಞಾನವಿಶ್ವವಾಣಿ ಪತ್ರಿಕೆಸೂರ್ಯಎ.ಎನ್.ಮೂರ್ತಿರಾವ್ಮಹಾಶರಣೆ ಶ್ರೀ ದಾನಮ್ಮ ದೇವಿದ್ವಂದ್ವ ಸಮಾಸಕರ್ನಾಟಕದ ಹಬ್ಬಗಳುಬೀಚಿಮಹಾರಾಷ್ಟ್ರಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಭಾರತ ರತ್ನನೂಲುಮಡಿವಾಳ ಮಾಚಿದೇವಸಂಧಿಗೌತಮ ಬುದ್ಧನ ಕುಟುಂಬರಾಜ್ಯಸಭೆಗ್ರಾಮ ಪಂಚಾಯತಿಜುಪೀ (ಲುಡೋ)ಯುಗಾದಿಮುದ್ದಣತಂಬಾಕುಬ್ಯಾಂಕ್ಕರ್ಮಹಸ್ತ ಮೈಥುನ🡆 More