ಇಂಟೆಲ್ ಕಾರ್ಪೊರೇಶನ್

ಇಂಟೆಲ್ ಕಾರ್ಪೊರೇಶನ್ (NASDAQ: INTC; SEHK: 4335; Euronext: INCO) ಒಂದು ಅಮೆರಿಕಾದ ಜಾಗತಿಕ ತಂತ್ರಜ್ಞಾನ ಕಂಪನಿಯಾಗಿದೆ.

ಇದು ಆದಾಯದ ಆಧಾರದಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಅರೆವಾಹಕ(ಸೆಮಿಕಂಡಕ್ಟರ್) ಚಿಪ್ ತಯಾರಕವಾಗಿದೆ. ಇದು ಹೆಚ್ಚಿನ ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಕಂಡುಬರುವ ಸಂಸ್ಕಾರಕಗಳಾದ x86 ಸರಣಿಯ ಮೈಕ್ರೋಪ್ರೋಸೆಸರ್‌ಗಳ(ಸೂಕ್ಷ್ಮಸಂಸ್ಕಾರಕಗಳ) ಸೃಷ್ಟಿಕರ್ತವಾಗಿದೆ. ಇಂಟೆಲ್ 1968ರ ಜುಲೈ 18ರಂದು ಇಂಟೆ ಗ್ರೆಟೆಡ್ ಎಲೆ ಕ್ಟ್ರೋನಿಕ್ಸ್ ಕಾರ್ಪೊರೇಶನ್ ಆಗಿ ಸ್ಥಾಪನೆಯಾಯಿತು (ಆದರೂ "ಇಂಟೆಲ್" ಎಂಬುದು ಇಂಟೆಲಿ ಜೆನ್ಸ್ ಎಂಬ ಪದದಿಂದ ಬಂದಿದೆಯೆಂಬ ಒಂದು ಸಾಮಾನ್ಯ ತಪ್ಪು ಅಭಿಪ್ರಾಯವಿದೆ). ಇದು USAಯ ಕ್ಯಾಲಿಫೋರ್ನಿಯಾ ಸಂತ ಕ್ಲಾರದಲ್ಲಿದೆ. ಇಂಟೆಲ್ ಮದರ್‌ಬೋರ್ಡ್‌ ಚಿಪ್‌ಸೆಟ್‌ಗಳು, ಜಾಲ ಅಂತರಸಂಪರ್ಕ ನಿಯಂತ್ರಕಗಳು ಮತ್ತು ಅನುಕಲಿತ ಸರ್ಕೀಟುಗಳು(ಇಂಟೆಗ್ರೇಟೆಡ್ ಸರ್ಕೀಟ್), ಫ್ಲ್ಯಾಶ್ ಮೆಮರಿ, ಗ್ರ್ಯಾಫಿಕ್ ಚಿಪ್‌ಗಳು, ಹುದುಗಿದ ಸಂಸ್ಕಾರಕಗಳು ಹಾಗೂ ಸಂಪರ್ಕ ವ್ಯವಸ್ಥೆ ಮತ್ತು ಕಂಪ್ಯೂಟರ್‌ಗೆ ಸಂಬಂಧಿಸಿದ ಇತರ ಉಪಕರಣಗಳನ್ನೂ ತಯಾರಿಸುತ್ತದೆ. ಅರೆವಾಹಕಗಳ ಮೊದಲ ಅನ್ವೇಷಕರಾದ ರಾಬರ್ಟ್ ನಾಯ್ಸ್ ಮತ್ತು ಗೋರ್ಡನ್ ಮೂರ್‌ರಿಂದ ಸ್ಥಾಪಿಸಲ್ಪಟ್ಟ ಹಾಗೂ ಆಂಡ್ರಿವ್ ಗ್ರೂವ್‌ನ ಕಾರ್ಯನಿರ್ವಾಹಕ ಮುಖಂಡತ್ವ ಮತ್ತು ಕಲ್ಪನೆಯೊಂದಿಗೆ ವ್ಯಾಪಕವಾಗಿ ಸಂಬಂಧಿಸಿದ, ಇಂಟೆಲ್ ಉತ್ಕೃಷ್ಟವಾದ ಆಧುನೀಕೃತ ಚಿಪ್ ವಿನ್ಯಾಸ ಮಾಡುವ ಮತ್ತು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಆರಂಭದಲ್ಲಿ ಮೂಲಭೂತವಾಗಿ ಇಂಜಿನಿಯರ್‌ಗಳಿಗೆ ಮತ್ತು ತಂತ್ರಜ್ಞರಿಗೆ ಹೆಸರುವಾಸಿಯಾಗಿದ್ದ ಇಂಟೆಲ್‌ನ 1990ರ ದಶಕದ "ಇಂಟೆಲ್ ಇನ್‌ಸೈಡ್" ಜಾಹೀರಾತು ಕಾರ್ಯಾವಳಿಯು ಅದರ ಮತ್ತು ಅದರ ಪೆಂಟಿಯಮ್‌ ಸಂಸ್ಕಾರಕಗಳ ಹೆಸರುಗಳನ್ನು ಚಿರಪರಿಚಿತವಾಗಿಸಿತು. ಇಂಟೆಲ್ SRAM ಮತ್ತು DRAM ಮೆಮರಿ ಚಿಪ್‌ಗಳ ಆರಂಭಿಕ ತಯಾರಕವಾಗಿತ್ತು ಹಾಗೂ ಇದು 1981ರವರೆಗೆ ಅದರ ಪ್ರಮುಖ ವ್ಯವಹಾರವಾಗಿತ್ತು. ಇಂಟೆಲ್ 1971ರಲ್ಲಿ ಮೊದಲ ವಾಣಿಜ್ಯ ಮೈಕ್ರೋಪ್ರೋಸೆಸರ್‌ ಚಿಪ್ಅನ್ನು ತಯಾರಿಸಿದಾಗ, ಅದು ವೈಯಕ್ತಿಕ ಕಂಪ್ಯೂಟರ್‌‌ನ (PC) ಯಶಸ್ಸಿನ ಮಟ್ಟವನ್ನು ತಲುಪಲಿಲ್ಲ. ಆದ್ದರಿಂದ ಇದು ಇಂಟೆಲ್‌ನ ಮೂಲ ವ್ಯವಹಾರವಾಯಿತು. 1990ರ ದಶಕದಲ್ಲಿ ಇಂಟೆಲ್ ಕಂಪ್ಯೂಟರ್‌ ಉದ್ಯಮದ ಕ್ಷಿಪ್ರ ಬೆಳವಣಿಗೆಯನ್ನು ಉತ್ತೇಜಿಸುವ ಹೊಸ ಮೈಕ್ರೋಪ್ರೋಸೆಸರ್‌ ವಿನ್ಯಾಸಗಳಿಗೆ ಹೆಚ್ಚು ಬಂಡವಾಳ ತೊಡಗಿಸಿತು. ಈ ಸಂದರ್ಭದಲ್ಲಿ ಇಂಟೆಲ್ PCಗಳಿಗೆ ಮೈಕ್ರೋಪ್ರೋಸೆಸರ್‌ಗಳನ್ನು ಒದಗಿಸುವ ಪ್ರಬಲ ಪೂರೈಕೆದಾರವಾಯಿತು. ಅದು ನಿರ್ದಿಷ್ಟವಾಗಿ AMDಯ ವಿರುದ್ಧ ಅದರ ಮಾರುಕಟ್ಟೆ ಸ್ಥಾನವನ್ನು ರಕ್ಷಿಸಿಕೊಳ್ಳುವಲ್ಲಿ ಆಕ್ರಮಣಶಾಲಿ ಮತ್ತು ಕೆಲವೊಮ್ಮೆ ವಿವಾದಾತ್ಮಕ ಕಾರ್ಯತಂತ್ರಕ್ಕೆ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲದೆ ಇದು PC ಉದ್ಯಮದ ನಿಯಂತ್ರಣಕ್ಕಾಗಿ ಮೈಕ್ರೊಸಾಫ್ಟ್ ಒಂದಿಗೆ ಸೆಣಸಾಡುತ್ತಿದೆ. ಮಿಲ್ವಾರ್ಡ್ ಬ್ರೌನ್ ಆಪ್ಟಿಮರ್ ಪ್ರಕಟಿಸಿದ ಪ್ರಪಂಚದ 100 ಅತ್ಯಂತ ಪ್ರಬಲ ಬ್ರ್ಯಾಂಡ್‌ಗಳ 2010ರ ಶ್ರೇಣೀಕರಣದಲ್ಲಿ ಈ ಕಂಪನಿಯು 48ನೇ ಸ್ಥಾನವನ್ನು ಪಡೆದಿದೆ. ಇಂಟೆಲ್ ವಿದ್ಯುತ್ ಸಾಗಣೆ ಮತ್ತು ಉತ್ಪಾದನೆಯಲ್ಲೂ ಸಂಶೋಧನೆಯನ್ನು ಆರಂಭಿಸಿದೆ.

Intel Corporation
ಸಂಸ್ಥೆಯ ಪ್ರಕಾರPublic
NASDAQ: INTC
SEHK: 4335
Euronext: INCO
Dow Jones Industrial Average Component
ಸ್ಥಾಪನೆ1968
ಸಂಸ್ಥಾಪಕ(ರು)Gordon E. Moore
Robert Noyce
ಮುಖ್ಯ ಕಾರ್ಯಾಲಯ2200 Mission College Blvd.
Santa Clara, California
, U.S.
ವ್ಯಾಪ್ತಿ ಪ್ರದೇಶWorldwide
ಪ್ರಮುಖ ವ್ಯಕ್ತಿ(ಗಳು)Jane E. Shaw
(Chairman)
Paul S. Otellini
(President and CEO)
ಉದ್ಯಮSemiconductors
ಉತ್ಪನ್ನMicroprocessors
Flash memory
Motherboard Chipsets
Network Interface Card
Bluetooth Chipsets
ಆದಾಯIncrease US$ 43.6 billion (2010)
ಆದಾಯ(ಕರ/ತೆರಿಗೆಗೆ ಮುನ್ನ)Increase US$ 15.9 billion (2010)
ನಿವ್ವಳ ಆದಾಯIncrease US$ 11.7 billion (2010)
ಒಟ್ಟು ಆಸ್ತಿIncrease US$ 53.095 billion (2009)
ಒಟ್ಟು ಪಾಲು ಬಂಡವಾಳIncrease US$ 41.704 billion (2009)
ಉದ್ಯೋಗಿಗಳು83,500 (2008)
ಜಾಲತಾಣIntel.com
1Incorporated in ಕ್ಯಾಲಿಫೊರ್ನಿಯ in 1968, reincorporated in Delaware in 1989.

ಸಂಸ್ಥೆಯ ಇತಿಹಾಸ

ಮೂಲಗಳು ಮತ್ತು ಆರಂಭಿಕ ವರ್ಷಗಳು

ಇಂಟೆಲ್ ಕಾರ್ಪೊರೇಶನ್ 
USAಯ CAಯ ಸಂತ ಕ್ಲಾರದಲ್ಲಿರುವ ಇಂಟೆಲ್‌ನ ಪ್ರಧಾನ ಕಛೇರಿ

ಗೋರ್ಡನ್ ಇ ಮೂರ್ ("ಮೂರ್‌ನ ನಿಯಮ" ಪ್ರಸಿದ್ಧಿಯನ್ನು ಹೊಂದಿರುವ ಒಬ್ಬ ರಸಾಯನ ಶಾಸ್ತ್ರಜ್ಞ ಮತ್ತು ಭೌತಶಾಸ್ತ್ರಜ್ಞ) ಮತ್ತು ರಾಬರ್ಟ್ ನಾಯ್ಸ್ (ಒಬ್ಬ ಭೌತವಿಜ್ಞಾನಿ ಮತ್ತು ಅನುಕಲಿತ ಸರ್ಕೀಟಿನ ಸಹ-ಅನ್ವೇಷಕ) ಫೇರ್‌ಚೈಲ್ಡ್ ಅರೆವಾಹಕವನ್ನು ಬಿಟ್ಟ ನಂತರ 1968ರಲ್ಲಿ ಇಂಟೆಲ್ಅನ್ನು ಸ್ಥಾಪಿಸಿದರು. ಫೇರ್‌ಚೈಲ್ಡ್‌ನ ಇತರ ಹಲವಾರು ಉದ್ಯೋಗಿಗಳೂ ಸಹ ಇತರ ಸಿಲಿಕಾನ್ ವ್ಯಾಲಿ ಕಂಪನಿಗಳಿಗೆ ಸೇರಿಕೊಳ್ಳಲು ಬಿಟ್ಟುಹೋದರು. ಇಂಟೆಲ್‌ನ ಮೂರನೇ ಉದ್ಯೋಗಿ ಒಬ್ಬ ರಾಸಾಯನಿಕ ಇಂಜಿನಿಯರ್ ಆಂಡಿ ಗ್ರೂವ್, ಇವರು ಕಂಪನಿಯನ್ನು 1980ರ ದಶಕದ ಹೆಚ್ಚಿನ ಅವಧಿಯಲ್ಲಿ ಮತ್ತು 1990ರ ದಶಕದಲ್ಲಿ ಭಾರಿ-ಅಭಿವೃದ್ಧಿಯೊಂದಿಗೆ ನಡೆಸಿದರು. ಗ್ರೂವ್‌ರನ್ನು ಈಗ ಈ ಕಂಪನಿಯ ಪ್ರಮುಖ ವ್ಯವಹಾರ ಮತ್ತು ಕಾರ್ಯತಂತ್ರದ ಮುಖಂಡರಾಗಿ ಜ್ಞಾಪಿಸಿಕೊಳ್ಳಲಾಗುತ್ತದೆ. 1990ರ ದಶಕದ ಕೊನೆಯಲ್ಲಿ, ಇಂಟೆಲ್ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮತ್ತು ಹೆಚ್ಚು ಯಶಸ್ಸಿ ವ್ಯವಹಾರಗಳಲ್ಲಿ ಒಂದಾಗಿತ್ತು.[ಸೂಕ್ತ ಉಲ್ಲೇಖನ ಬೇಕು]

ಹೆಸರಿನ ಮೂಲ

ಸ್ಥಾಪಿಸಿದ ನಂತರ ಗೋರ್ಡನ್ ಮೂರ್ ಮತ್ತು ರಾಬರ್ಟ್ ನಾಯ್ಸ್ ಅವರ ಹೊಸ ಕಂಪನಿಗೆ ಮೂರ್ ನಾಯ್ಸ್‌ ಎಂಬ ಹೆಸರು ನೀಡಲು ಬಯಸಿದರು. ಆದರೆ ಆ ಹೆಸರು ಮೋರ್ ನಾಯ್ಸ್(ಹೆಚ್ಚು ಗದ್ದಲ) ಎಂಬ ಪದದ ಸಮಾನ ಉಚ್ಚಾರಣೆಯನ್ನು ಹೊಂದಿತ್ತು - ಇದು ಒಂದು ಎಲೆಕ್ಟ್ರಾನಿಕ್ಸ್ ಕಂಪನಿಗೆ ಸೂಕ್ತವಾಗದ ಹೆಸರು, ಏಕೆಂದರೆ ಸಾಮಾನ್ಯವಾಗಿ ಎಲೆಕ್ಟ್ರಾನಿಕ್ಸ್‌ನಲ್ಲಿ ಗದ್ದಲವು ತುಂಬಾ ಅಹಿತಕರವಾದುದಾಗಿದೆ ಮತ್ತು ಇದು ಕೆಟ್ಟ ತಡೆಯನ್ನು ಉಂಟುಮಾಡುತ್ತದೆ. ಅವರು ಸುಮಾರು ಒಂದು ವರ್ಷದವರೆಗೆ NM ಎಲೆಕ್ಟ್ರಾನಿಕ್ಸ್ ಎಂಬ ಹೆಸರನ್ನು ಬಳಸಿದರು. ನಂತರ ತಮ್ಮ ಕಂಪನಿಯನ್ನು ಇಂಟೆ ಗ್ರೇಟೆಡ್ ಎಲೆ ಕ್ಟ್ರಾನಿಕ್ಸ್ ಅಥವಾ ಸಣ್ಣದಾಗಿ ಇಂಟೆಲ್ ಎಂಬ ಹೆಸರಿನಿಂದ ಕರೆಯಲು ನಿರ್ಧರಿಸಿದರು. ಆದರೆ ಇಂಟೆಲ್ ಎಂಬ ಹೆಸರು ಅದಾಗಲೇ ಒಂದು ಹೋಟೆಲ್ ಸಮೂಹದಿಂದ ವ್ಯಾಪಾರ ಮುದ್ರೆಯನ್ನು ಪಡೆದಿತ್ತು. ಆದ್ದರಿಂದ ಅವರು ಮೊದಲು ಹೆಸರಿಗಾಗಿ ಹಕ್ಕನ್ನು ಪಡೆಯಬೇಕಾಯಿತು.

ಆರಂಭಿಕ ಇತಿಹಾಸ

ಇಂಟೆಲ್ ಹಲವಾರು ವಿಭಿನ್ನ ಹಂತಗಳನ್ನು ದಾಟಿ ಅಭಿವೃದ್ಧಿ ಹೊಂದಿದೆ. ಸ್ಥಾಪನೆಯಾದ ಆರಂಭದಲ್ಲಿ ಇಂಟೆಲ್ ಕೇವಲ ಅರೆವಾಹಕಗಳನ್ನು ತಯಾರಿಸುವುದರಲ್ಲಿ ಹೆಸರು ಮಾಡಿತ್ತು ಮತ್ತು ಅದರ ಆರಂಭಿಕ ಉತ್ಪನ್ನಗಳೆಂದರೆ ಸ್ಟ್ಯಾಟಿಕ್ ರ್ಯಾಂಡಮ್ ಆಕ್ಸೆಸ್ ಮೆಮರಿ (SRAM) ಚಿಪ್‌ಗಳು. ಇಂಟೆಲ್‌ನ ವ್ಯವಹಾರವು 1970ರ ದಶಕದಲ್ಲಿ ಪ್ರಗತಿಯನ್ನು ಕಂಡಿತು, ಅದು ಅದರ ಉತ್ಪಾದನಾ ಕಾರ್ಯಗಳನ್ನು ವಿಸ್ತರಿಸಿತು ಮತ್ತು ಸುಧಾರಿಸಿತು ಹಾಗೂ ಹಲವಾರು ಪ್ರಕಾರದ ಉತ್ಪನ್ನಗಳನ್ನು ತಯಾರಿಸಿತು. ಇಂಟೆಲ್ 1971ರಲ್ಲಿ ಪ್ರಪಥಮವಾಗಿ ವಾಣಿಜ್ಯವಾಗಿ-ಲಭ್ಯವಾದ ಮೈಕ್ರೋಪ್ರೋಸೆಸರ್‌ (ಇಂಟೆಲ್ 4004)ಅನ್ನು ಮತ್ತು 1972ರಲ್ಲಿ ಮೊದಲ ಮೈಕ್ರೊಕಂಪ್ಯೂಟರ್‌ಅನ್ನು ನಿರ್ಮಿಸಿತು. ಅಷ್ಟೇ ಅಲ್ಲದೆ ಅದು 1980ರ ದಶಕದ ಆರಂಭದಲ್ಲಿ ಡೈನಮಿಕ್ ರ್ಯಾಂಡಮ್ ಆಕ್ಸೆಸ್ ಮೆಮರಿ ಚಿಪ್‌ಗಳನ್ನು ತಯಾರಿಸಿತು. ಆದರೆ 1983ರಲ್ಲಿ ಜಪಾನೀಸ್ ಅರೆವಾಹಕ ತಯಾರಕ ಕಂಪನಿಗಳ ಪೈಪೋಟಿಯು ಹೆಚ್ಚಿದರಿಂದ ಈ ಮಾರುಕಟ್ಟೆಯ ಲಾಭದಾಯಕತೆಯು ಪರಿಣಾಮಕಾರಿಯಾಗಿ ಇಳಿಕೆ ಕಂಡಿತು. IBM ವೈಯಕ್ತಿಕ ಕಂಪ್ಯೂಟರ್‌‌ನ ಹಠಾತ್ ಯಶಸ್ಸು ಆಗಿನ-CEO ಗ್ರೂವ್‌ರವರಿಗೆ ಕಂಪನಿಯ ಗಮನವನ್ನು ಮೈಕ್ರೋಪ್ರೋಸೆಸರ್‌ಗಳ ತಯಾರಿಕೆಗೆ ಬದಲಾಯಿಸುವಂತೆ ಮತ್ತು ಆ ವ್ಯವಹಾರ ಮಾದರಿಯ ಮೂಲಭೂತ ದೃಷ್ಟಿಕೋನವನ್ನು ಮಾರ್ಪಾಡು ಮಾಡುವಂತೆ ಪ್ರೇರೇಪಿಸಿತು. 1980ರ ದಶಕದ ಕೊನೆಯಲ್ಲಿ ಈ ನಿರ್ಧಾರವು ಯಶಸ್ವಿಯಾಯಿತು. ಶೀಘ್ರವಾಗಿ ಬೆಳೆಯುತ್ತಿರುವ ವೈಯಕ್ತಿಕ ಕಂಪ್ಯೂಟರ್‌ ಮಾರುಕಟ್ಟೆಯಲ್ಲಿ IBMಗೆ ಮತ್ತು ಅದರ ಪ್ರತಿಸ್ಪರ್ಧಿ ಕಂಪನಿಗಳಿಗೆ ಮೈಕ್ರೋಪ್ರೋಸೆಸರ್‌ಅನ್ನು ಪೂರೈಸುವ ಸ್ಥಾನಕ್ಕೆ ಉತ್ತೇಜಿಸಲ್ಪಟ್ಟ ಇಂಟೆಲ್ PC ಉದ್ಯಮಕ್ಕೆ ಮೂಲಭೂತ (ಮತ್ತು ಹೆಚ್ಚು ಲಾಭದಾಯಕ) ಯಂತ್ರಾಂಶ ಪೂರೈಕೆದಾರವಾಗಿ 10-ವರ್ಷದ ಅವಧಿಯ ಅಭೂತಪೂರ್ವ ಬೆಳವಣಿಗೆಯನ್ನು ಕಂಡಿತು. 1990ರ ದಶಕದ ಅಂತ್ಯದಲ್ಲಿ ಅದರ ಪೆಂಟಿಯಮ್‌ ಸಂಸ್ಕಾರಕಗಳ ವ್ಯವಹಾರ ಕ್ಷೇತ್ರವು ಚಿರಪರಿಚಿತವಾಯಿತು.

ಕ್ಷೀಣಿಸಿದ ಬೇಡಿಕೆ ಮತ್ತು ಪ್ರಾಬಲ್ಯತೆಗೆ ಎದುರಾದ ಸವಾಲುಗಳು

2000ರ ನಂತರ ಅತ್ಯಾಧುನಿಕ ಮೈಕ್ರೋಪ್ರೋಸೆಸರ್‌ಗಳ ಬೇಡಿಕೆಯಲ್ಲಿನ ಬೆಳವಣಿಗೆಯು ಕ್ಷೀಣಿಸಿತು. ಪ್ರತಿಸ್ಪರ್ಧಿ ಕಂಪನಿಗಳು, ಮುಖ್ಯವಾಗಿ AMD (ಇಂಟೆಲ್‌ನ ಮೂಲ x86 ರಚನe ಮಾರುಕಟ್ಟೆಯ ಬಹುದೊಡ್ಡ ಪ್ರತಿಸ್ಪರ್ಧಿ ಕಂಪನಿ), ಆರಂಭದಲ್ಲಿ ಸರಳ ಮತ್ತು ಮಧ್ಯಮ-ವಲಯದ ಸಂಸ್ಕಾರಕಗಳು ಆದರೆ ಅಂತಿಮವಾಗಿ ಸಂಪೂರ್ಣ ಉತ್ಪನ್ನದ ಗಮನಾರ್ಹ ಮಾರುಕಟ್ಟೆ ಷೇರನ್ನು ಸಂಗ್ರಹಿಸಿದವು. ಇಂಟೆಲ್‌ನ ಮೂಲಭೂತ ಮಾರುಕಟ್ಟೆಯಲ್ಲಿನ ಪ್ರಬಲ ಸ್ಥಾನವು ಪರಿಣಾಮಕಾರಿಯಾಗಿ ಇಳಿಕೆಯಾಯಿತು. 2000ರ ದಶಕದ ಆರಂಭದಲ್ಲಿ ಆಗಿನ-CEO ಕ್ರೈಗ್ ಬ್ಯಾರೆಟ್ಟ್‌ ಕಂಪನಿಯ ವ್ಯವಹಾರವನ್ನು ಅರೆವಾಹಕಗಳನ್ನು ಬಿಟ್ಟು ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ತಯಾರಿಸುವ ವ್ಯವಹಾರವಾಗಿ ವೈವಿಧ್ಯಗೊಳಿಸಲು ಪ್ರಯತ್ನಿಸಿದರು, ಆದರೆ ಅದರಲ್ಲಿ ಕೆಲವು ಕಾರ್ಯಗಳು ಅಂತಿಮವಾಗಿ ಯಶಸ್ವಿ ಕಂಡವು. ಇಂಟೆಲ್ ಹಲವಾರು ವರ್ಷ ಕಾಲ ವಿವಾದದಲ್ಲೂ ಸಿಕ್ಕಿಕೊಂಡಿತ್ತು. US ಕಾನೂನು ಆರಂಭದಲ್ಲಿ 1984ರ ಅರೆವಾಹಕ ಚಿಪ್ ರಕ್ಷಣಾ ಕಾಯಿದೆಯು ಅಸ್ತಿತ್ವಕ್ಕೆ ಬರುವವರೆಗೆ ಮೈಕ್ರೋಪ್ರೋಸೆಸರ್‌ ಟೊಪಾಲಜಿಗೆ (ಸರ್ಕ್ಯೂಟ್ ವಿನ್ಯಾಸರಚನೆ) ಸಂಬಂಧಿಸಿದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಅಂಗೀಕರಿಸಲಿಲ್ಲ, ಇದು ಇಂಟೆಲ್ ಮತ್ತು ಅರೆವಾಹಕ ಉದ್ಯಮ ಸಂಘಟನೆಯು (SIA) ಅನ್ವೇಷಿಸಿದ ಕಾಯಿದೆಯಾಗಿದೆ. 1980ರ ದಶಕದ ಕೊನೆಯಲ್ಲಿ ಮತ್ತು 1990ರಲ್ಲಿ (ಈ ಕಾಯಿದೆಯು ಅಂಗೀಕಾರವಾದ ನಂತರ) ಇಂಟೆಲ್ ಸಹ 80386 CPUಗೆ ಪ್ರತಿಸ್ಪರ್ಧಿ ಚಿಪ್‌ಗಳನ್ನು ತಯಾರಿಸಲು ಪ್ರಯತ್ನಿಸಿದ ಕಂಪನಿಗಳ ವಿರುದ್ಧ ದಾವೆ ಹೂಡಿತು. ಆ ದಾವೆಗಳು ಕಾನೂನುಬದ್ಧ ಕಾಯಿದೆಗಳಿಗೆ ಒಳಪಟ್ಟು ಸ್ಪರ್ಧೆಯನ್ನು ಮಾಡಬೇಕೆಂದು ಸೂಚಿಸಿದರೂ, ಇಂಟೆಲ್ ಆ ದಾವೆಯಲ್ಲಿ ಸೋಲನ್ನು ಕಂಡಿತು. 1990ರ ದಶಕದ ಆರಂಭದಿಂದ ಮೆಲುಗುದಿಯಲ್ಲಿದ್ದ ಮತ್ತು 1991ರಲ್ಲಿ ಇಂಟೆಲ್‌ನ ವಿರುದ್ಧ ಒಂದು ಮೊಕದ್ದಮೆಗೆ ಕಾರಣವಾದ ನಂಬಿಕೆ-ವಿರೋಧಿ ಆಪಾದನೆಗಳು ಮತ್ತೆ ಶುರುವಾದವು. AMD ಯುಕ್ತವಾಗಿಲ್ಲದ ಸ್ಪರ್ಧೆಗೆ ಸಂಬಂಧಿಸಿದಂತೆ ಇಂಟೆಲ್‌ನ ವಿರುದ್ಧ 2004ರಲ್ಲಿ ಹಾಗೂ 2005ರಲ್ಲಿ ಮತ್ತೊಮ್ಮೆ ದೂರುಗಳು ಬರುವಂತೆ ಮಾಡಿತು. 2005ರಲ್ಲಿ CEO ಪಾಲ್ ಒಟೆಲ್ಲಿನಿಯು ಎಂಟರ್‌ಪ್ರೈಸ್, ಡಿಜಿಟಲ್ ಹೋಮ್, ಡಿಜಿಟಲ್ ಹೆಲ್ತ್ ಮತ್ತು ಚಲನಶೀಲತೆಯ ಆಧಾರದಲ್ಲಿ ಅದರ ಮೂಲ ಸಂಸ್ಕಾರಕ ಮತ್ತು ಚಿಪ್‌ಸೆಟ್ ವ್ಯವಹಾರದೆಡೆಗೆ ಗಮನಕೊಡುವುದಕ್ಕಾಗಿ ಕಂಪನಿಯನ್ನು ಪುನಸ್ಸಂಘಟಿಸಿದರು. ಇದು ಸುಮಾರು 20,000 ಹೊಸ ಉದ್ಯೋಗಿಗಳ ಸೇರ್ಪಡೆಗೆ ಕಾರಣವಾಯಿತು. 2006ರ ಸೆಪ್ಟೆಂಬರ್‌ನಲ್ಲಿ ಲಾಭದ ಕ್ಷೀಣಿಸುವಿಕೆಯಿಂದಾಗಿ ಕಂಪನಿಯನ್ನು ಹೊಸದಾಗಿ ವ್ಯವಸ್ಥೆಗೊಳಿಸುವ ಬಗ್ಗೆ ಘೋಷಿಸಲಾಯಿತು, ಇದರಿಂದಾಗಿ 2006ರ ಜುಲೈ ತಿಂಗಳ ಹೊತ್ತಿಗೆ ಸುಮಾರು 10,500 ಉದ್ಯೋಗಿಗಳು ಅಥವಾ ಕಂಪನಿಯ 10 ಪ್ರತಿಶತದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡರು.

ಬೆಳವಣಿಗೆ-ಆವೇಗದ ಪುನಸ್ಸಂಪಾದನೆ

ಕಳೆದುಕೊಂಡ ಮಾರುಕಟ್ಟೆ ಸ್ಥಾನದ ಆವೇಗವನ್ನು ಪುನಃ ಪಡೆಯುವುದು ಅಗತ್ಯವಾಗಿದ್ದುದರಿಂದ ಇಂಟೆಲ್ ಅದರ ಹಿಂದಿನ ತಂತ್ರಜ್ಞಾನದ ಪ್ರಾಬಲ್ಯತೆಯನ್ನು ಮತ್ತೆ ಪಡೆಯಲು ಅದರ ಹೊಸ ಉತ್ಪನ್ನ ಅಭಿವೃದ್ಧಿ ಮಾದರಿಯನ್ನು ಬಹಿರಂಗ ಪಡಿಸಿತು. "ಟಿಕ್-ಟಾಕ್ ಮಾದರಿ" ಎಂಬ ಹೆಸರು ಪಡೆದ ಈ ಯೋಜನೆಯು ಸೂಕ್ಷ್ಮವಿನ್ಯಾಸದ ಹೊಸ ಬದಲಾವಣೆ ಮತ್ತು ಕಾರ್ಯವಿಧಾನದ ಹೊಸ ಪರಿವರ್ತನೆಯ ವಾರ್ಷಿಕ ಮಾರ್ಪಾಡನ್ನು ಆಧರಿಸಿತ್ತು. 2006ರಲ್ಲಿ ಇಂಟೆಲ್ ಅತಿ ಸಣ್ಣ ಗಾತ್ರದ (65 ನ್ಯಾನೊಮೀಟರ್) P6 ಮತ್ತು ನೆಟ್‌ಬರ್ಸ್ಟ್‌ಅನ್ನು ತಯಾರಿಸಿತು. ಒಂದು ವರ್ಷದ ನಂತರ ಅದು ಬಹಿರಂಗಗೊಳಿಸಿದ ಅದರ ಕೋರ್ ಸೂಕ್ಷ್ಮವಿನ್ಯಾಸವು ವ್ಯಾಪಕ ಪ್ರಶಂಸೆಯನ್ನು ಗಳಿಸಿತು; ಈ ಉತ್ಪನ್ನವು ಸಂಸ್ಕಾರಕ ನಿರ್ವಹಣೆಯಲ್ಲಿ ಅಸಾಧಾರಣ ಪ್ರಗತಿಯನ್ನು ಸಾಧಿಸಿತು, ಇದು ಉದ್ಯಮದಲ್ಲಿನ ಅದರ ಹೆಚ್ಚಿನ ಪ್ರಾಬಲ್ಯತೆಯನ್ನು ಪುನಃ ತಂದುಕೊಟ್ಟಿತು. 2008ರಲ್ಲಿ, ಮತ್ತೊಂದು "ಟಿಕ್" ಕಂಡುಬಂತು, ಇಂಟೆಲ್ 65 ನ್ಯಾನೊಮೀಟರ್‌ನಿಂದ 45 ನ್ಯಾನೊಮೀಟರ್‌ಗೆ ಕುಗ್ಗಿದ ಪೆನ್ರಿನ್ ಸೂಕ್ಷ್ಮವಿನ್ಯಾಸವನ್ನು ಪರಿಚಯಿಸಿತು. ಆ ವರ್ಷದ ನಂತರ 32 ನ್ಯಾನೊಮೀಟರ್‌ಗೆ ಕುಗ್ಗಿದ ಸಂಸ್ಕಾರಕವು ಬಳಕೆಗೆ ಬಂದ ನಂತರ ಧನಾತ್ಮಕ ಅಭಿಪ್ರಾಯವನ್ನು ಪಡೆದ ಸಂಸ್ಕಾರಕ ನೆಹಾಲಮ್ ಬಿಡುಗಡೆಗೊಂಡಿತು. ಇಂಟೆಲ್ ಇದನ್ನು ಮಾಡಿದ ಮೊದಲ ಮೈಕ್ರೋಪ್ರೋಸೆಸರ್‌ ಸಂಸ್ಥೆಯಲ್ಲ. ಉದಾಹರಣೆಗಾಗಿ, 1996ರ ಗ್ರಾಫಿಕ್ಸ್ ಚಿಪ್ ವಿನ್ಯಾಸಕ-ಸಂಸ್ಥೆ ಎನ್‌ವಿಡಿಯಾ 6-ತಿಂಗಳ ಆಂತರಿಕ ಉತ್ಪನ್ನ ಆವರ್ತವನ್ನು ಅಳವಡಿಸಿಕೊಳ್ಳುವುದರ ಮೂಲಕ ಅದರ ಸ್ವಂತ ವ್ಯವಹಾರ ಮತ್ತು ಮಾರುಕಟ್ಟೆ-ಸ್ಥಾನದ ಸಮಸ್ಯೆಗಳನ್ನು ಬರಮಾಡಿಕೊಂಡಿತು, ಅದರ ಉತ್ಪನ್ನಗಳು ಮಾರುಕಟ್ಟೆ ನಿರೀಕ್ಷೆಗಳನ್ನು ಮೀರಿಸುತ್ತಿದ್ದವು.

ಎಕ್ಸ್‌ಸ್ಕೇಲ್ ಸಂಸ್ಕಾರಕದ ಮಾರಾಟ ವ್ಯವಹಾರ

2006ರ ಜೂನ್ 27ರಂದು ಇಂಟೆಲ್‌ನ ಎಕ್ಸ್‌ಸ್ಕೇಲ್ ಸಂಸ್ಕಾರಕಗಳ ಮಾರಾಟವನ್ನು ಘೋಷಿಸಲಾಯಿತು. ಇಂಟೆಲ್ ಎಕ್ಸ್‌ಸ್ಕೇಲ್ ಸಂಸ್ಕಾರಕ ವ್ಯವಹಾರವನ್ನು ಮಾರ್ವೆಲ್ ಟೆಕ್ನಾಲಜಿ ಗ್ರೂಪ್‌‌ಗೆ ಸುಮಾರು $600 ದಶಲಕ್ಷಕ್ಕೆ (ಅದು ಅದನ್ನು $1.6 ಶತಕೋಟಿಗೆ ಖರೀದಿಸಿತು) ಮಾರಲು ಮತ್ತು ಸ್ಪಷ್ಟವಾಗಿ ಹೇಳಲಾಗದ ಹಣಕಾಸಿನ ಜವಾಬ್ದಾರಿಗಳನ್ನು ವಹಿಸಿಕೊಡಲು ನಿರ್ಧರಿಸಿತು. ಈ ಬದಲಾವಣೆಯು ಇಂಟೆಲ್ ತನ್ನ ವ್ಯವಹಾರ ಕೌಶಲಗಳನ್ನು ಅದರ ಕೋರ್ x86 ಮತ್ತು ಸರ್ವರ್ ವ್ಯವಹಾರಕ್ಕೆ ಕೇಂದ್ರೀಕರಿಸುವಂತೆ ಮಾಡುವ ಉದ್ದೇಶವನ್ನು ಹೊಂದಿತ್ತು ಹಾಗೂ ಇದನ್ನು 2006ರ ನವೆಂಬರ್ 9ರಂದು ಸಂಪೂರ್ಣವಾಗಿ ಸಾಧಿಸಲಾಯಿತು.

ಮ್ಯಾಕ್‌ಅಫೀ ಮತ್ತು ಇನ್ಫಿನಿಯಾನ್ ಟೆಕ್ನಾಲಜಿಯ ನಿಸ್ತಂತು ಪರಿಹಾರ(ವೈರ್‌ಲೆಸ್ ಸೊಲ್ಯೂಶನ್ಸ್) ವ್ಯವಹಾರದ ಗಳಿಕೆ

2010ರ ಆಗಸ್ಟ್ 19ರಂದು, ಇಂಟೆಲ್ ಕಂಪ್ಯೂಟರ್‌ ಭದ್ರತಾ ತಂತ್ರಜ್ಞಾನದ ತಯಾರಕ ಮ್ಯಾಕ್ಅಫೀಯನ್ನು ಖರೀದಿಸಲು ನಿರ್ಧರಿಸಿದೆಯೆಂದು ಘೋಷಿಸಿತು. ಆ ಖರೀದಿಯ ದರವು $7.68 ಶತಕೋಟಿಯಾಗಿತ್ತು ಹಾಗೂ ಒಪ್ಪಂದವು ಅಂಗೀಕೃತವಾದರೆ ಹೊಸ ಉತ್ಪನ್ನಗಳು 2011ರ ಆರಂಭದಲ್ಲಿ ಬಿಡುಗಡೆಯಾಗುತ್ತವೆಂದು ಕಂಪನಿಗಳು ಹೇಳಿದವು. ಇದು ಮಾಹಿತಿ ಭದ್ರತಾ ಉದ್ಯಮದಲ್ಲಿ ಮತ್ತು ಇಂಟೆಲ್‌ನ 42-ವರ್ಷದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಗಳಿಕೆಯಾಗಿದೆ. ಇನ್ಫಿನಿಯಾನ್‌ನ ವ್ಯವಹಾರದೊಂದಿಗೆ, ಇಂಟೆಲ್ ಕಂಪನಿಯ ತಂತ್ರಜ್ಞಾನವನ್ನು ಲ್ಯಾಪ್‌ಟಾಪ್‌ಗಳಲ್ಲಿ‌, ಸ್ಮಾರ್ಟ್ ಫೋನ್‌ಗಳಲ್ಲಿ, ನೆಟ್‌ಬುಕ್‌ಗಳಲ್ಲಿ, ಟ್ಯಾಬ್ಲೆಟ್‌ಗಳಲ್ಲಿ ಮತ್ತು ಹುದುಗಿದ ಕಂಪ್ಯೂಟರ್‌ಗಳಲ್ಲಿ ಬಳಸುವ ಯೋಜನೆಯನ್ನು ಮಾಡುತ್ತಿದೆ, ಇದು ಅಂತಿಮವಾಗಿ ನಿಸ್ತಂತು ಮಾಡೆಮ್ಅನ್ನು ಇಂಟೆಲ್‌ನ ಸಿಲಿಕಾನ್ ಚಿಪ್‌ಗಳೊಳಗೆ ಸಂಯೋಜಿಸುವ ಪ್ರಯತ್ನವಾಗಿದೆ. ಇಂಟೆಲ್ 2011ರ ಜನವರಿ 26ರಂದು ಮ್ಯಾಕ್ಅಫೀಯನ್ನು ಖರೀದಿಸಿದುದಕ್ಕೆ ಯುರೋಪಿಯನ್ ಒಕ್ಕೂಟ ನಿಯಂತ್ರಕದ ಅಂಗೀಕಾರವನ್ನು ಪಡೆಯಿತು. ಪ್ರತಿಸ್ಪರ್ಧಿ ಭದ್ರತಾ ಸಂಸ್ಥೆಗಳು ಅವುಗಳ ಉತ್ಪನ್ನಗಳಿಗೆ ಇಂಟೆಲ್‌ನ ಚಿಪ್ ಮತ್ತು ವೈಯಕ್ತಿಕ ಕಂಪ್ಯೂಟರ್‌ಗಳನ್ನು ಬಳಸಲು ಅವಕಾಶ ಮಾಡಿಕೊಡುವ ಎಲ್ಲಾ ಅವಶ್ಯಕ ಮಾಹಿತಿಯನ್ನು ಪಡೆಯುವ ಅವಕಾಶವನ್ನು ಹೊಂದಿದೆಯೆಂಬುದನ್ನು ಇಂಟೆಲ್ ಖಚಿತಪಡಿಸಿತು.

ಉತ್ಪನ್ನ ಮತ್ತು ಮಾರುಕಟ್ಟೆ ಇತಿಹಾಸ

SRAMಗಳು ಮತ್ತು ಮೈಕ್ರೋಪ್ರೋಸೆಸರ್‌

ಕಂಪನಿಯ ಮೊದಲ ಉತ್ಪನ್ನಗಳೆಂದರೆ ಶಿಫ್ಟ್ ರಿಜಿಸ್ಟರ್ ಮೆಮರಿ ಮತ್ತು ರ್ಯಾಂಡಮ್-ಆಕ್ಸೆಸ್ ಮೆಮರಿ ಅನುಕಲಿತ ಸರ್ಕೀಟುಗಳು. ಇಂಟೆಲ್ 1970ರ ದಶಕದಲ್ಲಿ ತೀವ್ರ ಪೈಪೋಟಿಯ DRAM, SRAM ಮತ್ತು ROM ಮಾರುಕಟ್ಟೆಯಲ್ಲಿ ಪ್ರಮುಖ ಕಂಪನಿಯಾಗಿ ಬೆಳೆಯಿತು. ಅದೇ ಸಂದರ್ಭದಲ್ಲಿ ಇಂಟೆಲ್ ಇಂಜಿನಿಯರ್‌ಗಳಾದ ಮಾರ್ಸಿಯನ್ ಹಾಫ್, ಫೆಡೆರಿಕೊ ಫ್ಯಾಗ್ಗಿನ್, ಸ್ಟ್ಯಾನ್ಲೆ ಮ್ಯಾಜರ್ ಮತ್ತು ಮಸತೋಶಿ ಶಿಮ ಮೊದಲಾದವರು ಇಂಟೆಲ್‌ನ ಮೊದಲ ಮೈಕ್ರೋಪ್ರೋಸೆಸರ್‌ಅನ್ನು ಅನ್ವೇಷಿಸಿದರು. ಆರಂಭದಲ್ಲಿ ಜಪಾನಿನ ಕಂಪನಿ ಬುಸಿಕಮ್ ತಯಾರಿಸಿದ ಕ್ಯಾಲ್ಕುಲೇಟರ್‌ನ ಹಲವಾರು ASICಗಳನ್ನು ಬದಲಾಯಿಸಲು ಬುಸಿಕಮ್‌ಗಾಗಿ ಅಭಿವೃದ್ಧಿ ಹೊಂದಿದ ಇಂಟೆಲ್ 4004 1971ರ ನವೆಂಬರ್ 15ರಂದು ಮಾರುಕಟ್ಟೆಗೆ ಬಂದಿತು. ಆದರೂ 1980ರ ದಶಕದವರೆಗೆ ಮೈಕ್ರೋಪ್ರೋಸೆಸರ್‌ ಇಂಟೆಲ್‌ನ ಪ್ರಮುಖ ವ್ಯವಹಾರವಾಗಲಿಲ್ಲ. (ಗಮನಿಸಿ: ಇಂಟೆಲ್‌ ಒಂದಿಗೆ ಹೆಚ್ಚುಕಡಿಮೆ ಒಂದೇ ಕಾಲದಲ್ಲಿ ಮೈಕ್ರೋಪ್ರೋಸೆಸರ್‌ಅನ್ನು ಅನ್ವೇಷಣೆ ಮಾಡಿದುದರಿಂದ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್‌ ಸಹ ಆ ಕೀರ್ತಿಗೆ ಪಾತ್ರವಾಗಿದೆ.)

DRAM ನಿಂದ ಮೈಕ್ರೋಪ್ರೋಸೆಸರ್‌ಗೆ

1983ರಲ್ಲಿ ವೈಯಕ್ತಿಕ ಕಂಪ್ಯೂಟರ್‌‌ ಬೆಳಕಿಗೆ ಬಂದ ಕಾಲದಲ್ಲಿ ಇಂಟೆಲ್‌ನ ಲಾಭವು ಜಪಾನಿನ ಮೆಮರಿ-ಚಿಪ್ ತಯಾರಕರಿಂದ ಹೆಚ್ಚು ಪ್ರಭಾವಕ್ಕೆ ಒಳಗಾಯಿತು. ಇದರಿಂದಾಗಿ ಆಗಿನ-ಅಧ್ಯಕ್ಷ ಆಂಡಿ ಗ್ರೂವ್ ಕಂಪನಿಯು ಮೈಕ್ರೋಪ್ರೋಸೆಸರ್‌ಗಳ ತಯಾರಿಕೆಗೆ ಹೆಚ್ಚು ಗಮನ ಹರಿಸುವಂತೆ ಮಾಡಿದರು. ಗ್ರೂವ್ ಈ ಬದಲಾವಣೆಯನ್ನು ಓನ್ಲಿ ದಿ ಪ್ಯಾರನಾಯ್ಡ್ ಸರ್ವೈವ್ ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ. ಈ ಯೋಜನೆಯ ಪ್ರಮುಖ ಕಾರಣವು ಪ್ರಸಿದ್ಧ 8086 ಮೈಕ್ರೋಪ್ರೋಸೆಸರ್‌‌ನ ನಂತರದ ರೂಪಾಂತರಗಳನ್ನು ಒದಗಿಸುವ ಏಕೈಕ ಮೂಲವಾಗಬೇಕೆಂಬುದಾಗಿತ್ತು. ಕೇವಲ ಏಕೈಕ ಪೂರೈಕೆದಾರ ಕಂಪನಿಯನ್ನು ಅವಲಂಬಿಸಬೇಕಾದುದರಿಂದ ಗ್ರಾಹಕರಿಗೆ ಸಂಕೀರ್ಣ ಅನುಕಲಿತ ಸರ್ಕೀಟುಗಳ ತಯಾರಿಕೆಯು ಸಾಕಷ್ಟು ವಿಶ್ವಾಸನೀಯವಾಗಲಿಲ್ಲ. ಆದ್ದರಿಂದ ಗ್ರೂವ್ ಬೇರೆ ಬೇರೆ ಕಡೆ ಇರುವ ಮೂರು ವಿಭಿನ್ನ ಕಾರ್ಖಾನೆಗಳಲ್ಲಿ ಸಂಸ್ಕಾರಕಗಳನ್ನು ತಯಾರಿಸಲು ಆರಂಭಿಸಿದರು ಹಾಗೂ ಜಿಲಾಗ್ ಮತ್ತು AMD ಮೊದಲಾದ ಪ್ರತಿಸ್ಪರ್ಧಿ ಕಂಪನಿಗಳಿಗೆ ಚಿಪ್ ವಿನ್ಯಾಸ ಮಾಡುವ ಪರವಾನಗಿಯನ್ನು ನೀಡಿದರು. PC ಉದ್ಯಮವು 1980ರ ದಶಕದ ಕೊನೆಯಲ್ಲಿ ಮತ್ತು 1990ರ ದಶಕದಲ್ಲಿ ಹಠಾತ್ ಜನಪ್ರಿಯತೆಯನ್ನು ಗಳಿಸಿದಾಗ, ಇಂಟೆಲ್ ಆರಂಭಿಕ ಫಲಾನುಭವಿಗಳಲ್ಲಿ ಒಂದಾಗಿದೆ.

ಇಂಟೆಲ್, x86 ಸಂಸ್ಕಾರಕಗಳು ಮತ್ತು IBM PC

ಇಂಟೆಲ್ ಕಾರ್ಪೊರೇಶನ್ 
ಇಂಟೆಲ್ 8742ರ ಅಚ್ಚು, ಇದು ಒಂದು 8-ಬಿಟ್ ಮೈಕ್ರೊಕಂಟ್ರೋಲರ್(ಸೂಕ್ಷ್ಮನಿಯಂತ್ರಕ) ಆಗಿದ್ದು 12 MHz ನಲ್ಲಿ ಕಾರ್ಯನಿರ್ವಹಿಸುವ CPU, 128 ಬೈಟ್‌ಗಳ RAM, 2048 ಬೈಟ್‌ಗಳ EPROM ಮತ್ತು ಅದೇ ಚಿಪ್‌ನಲ್ಲಿರುವ I/O ಮೊದಲಾದವನ್ನು ಒಳಗೊಳ್ಳುತ್ತದೆ.

ಮೈಕ್ರೋಪ್ರೋಸೆಸರ್‌ನ ಮೂಲಭೂತ ಪ್ರಾಮುಖ್ಯತೆಯನ್ನು ಹೊರತುಪಡಿಸಿ, 4004 ಹಾಗೂ ಅದರ ನಂತರದ ರೂಪಾಂತರಗಳಾದ 8008 ಮತ್ತು 8080 ಇಂಟೆಲ್‌ಗೆ ಪ್ರಮುಖ ಆದಾಯವನ್ನು ಒದಗಿಸಲಿಲ್ಲ. ಮುಂದಿನ ಸಂಸ್ಕಾರಕ 8086 (ಮತ್ತು ಅದರ ರೂಪಾಂತರ 8088) 1978ರಲ್ಲಿ ಪೂರ್ಣಗೊಂಡಿದರಿಂದ, ಇಂಟೆಲ್ ಪ್ರಮುಖ ಮಾರಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಿತು, ಆ ಚಿಪ್‌ಗೆ "ಆಪರೇಶನ್ ಕ್ರಶ್" ಎಂಬ ಅಡ್ಡಹೆಸರು ನೀಡಿತು ಹಾಗೂ ಆ ಸಂಸ್ಕಾರಕಕ್ಕೆ ಸಾಧ್ಯವಾದಷ್ಟು ಗ್ರಾಹಕರನ್ನು ಗಳಿಸಿಕೊಳ್ಳುವ ಉದ್ದೇಶವನ್ನು ಹೊಂದಿತ್ತು. ಯಶಸ್ಸು ಕಂಡ ಒಂದು ವಿನ್ಯಾಸವೆಂದರೆ ಹೊಸದಾಗಿ ರಚಿಸಿದ IBM PC ವಿಭಾಗ, ಆದರೂ ಆ ಸಂದರ್ಭದಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಸಂಪೂರ್ಣವಾಗಿ ತಿಳಿದಿರಲಿಲ್ಲ. IBM ಅದರ ವೈಯಕ್ತಿಕ ಕಂಪ್ಯೂಟರ್‌ಅನ್ನು 1981ರಲ್ಲಿ ಮಾರುಕಟ್ಟೆಗೆ ತಂದಿತು ಮತ್ತು ಅದು ಅತಿ ಶೀಘ್ರದಲ್ಲಿ ಜನಪ್ರಿಯವಾಯಿತು. 1982ರಲ್ಲಿ, ಇಂಟೆಲ್ 80286 ಮೈಕ್ರೋಪ್ರೋಸೆಸರ್‌ಅನ್ನು ತಯಾರಿಸಿತು, ಇದನ್ನು ಎರಡು ವರ್ಷಗಳ ನಂತರ IBM PC/ATಅಲ್ಲಿ ಬಳಸಲಾಯಿತು. ಮೊದಲ IBM PC "ಕ್ಲೋನ್" ತಯಾರಕ ಸಂಸ್ಥೆ ಕಾಂಪ್ಯಾಕ್ 1985ರಲ್ಲಿ ವೇಗದ 80286 ಸಂಸ್ಕಾರಕದ ಆಧಾರದಲ್ಲಿ ಒಂದು ಡೆಸ್ಕ್‌ಟಾಪ್ ಸಿಸ್ಟಮ್ಅನ್ನು ತಯಾರಿಸಿತು ಮತ್ತು ಅನಂತರ ಶೀಘ್ರದಲ್ಲಿ 1986ರಲ್ಲಿ ಮೊದಲ 80386-ಆಧಾರಿತ ಸಿಸ್ಟಮ್ಅನ್ನು ತಯಾರಿಸಿತು. ಆ ಮೂಲಕ ಈ ಸಂಸ್ಥೆಯು IBMಅನ್ನು ಹಿಂದಿಕ್ಕಿ PC-ಹೊಂದಿಕೆಕೊಂಡಿರುವ ಸಿಸ್ಟಮ್‌ಗಳಿಗೆ ಒಂದು ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ಸ್ಥಾಪಿಸಿತು ಮತ್ತು ಇಂಟೆಲ್ಅನ್ನು ಒಂದು ಪ್ರಮುಖ ಸಾಧನ ಪೂರೈಕೆದಾರವಾಗಿ ಮಾಡಿತು. 1975ರಲ್ಲಿ ಕಂಪನಿಯು ಅತ್ಯಾಧುನಿಕ 32-ಬಿಟ್ ಮೈಕ್ರೋಪ್ರೋಸೆಸರ್‌ಅನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಆರಂಭಿಸಿತು. ಇದು ಅಂತಿಮವಾಗಿ 1981ರಲ್ಲಿ ಕೊನೆಗೊಂಡು ಇಂಟೆಲ್ iAPX 432ಆಗಿ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಆ ಯೋಜನೆಯು ಭಾರಿ ಮಹತ್ವಾಕಾಂಕ್ಷೆಯನ್ನು ಹೊಂದಿತ್ತು. ಆದರೆ ಸಂಸ್ಕಾರಕವು ಅದರ ನಿರ್ವಹಣಾ ಗುರಿಗಳನ್ನು ಸಾಧಿಸಲು ಸಮರ್ಥವಾಗಲಿಲ್ಲ. ಹಾಗಾಗಿ ಇದು ಮಾರುಕಟ್ಟೆಯಲ್ಲಿ ವಿಫಲವಾಯಿತು. ಬದಲಿಗೆ ಇಂಟೆಲ್ x86 ವಿನ್ಯಾಸವನ್ನು 32 ಬಿಟ್‌ಗಳಿಗೆ ವಿಸ್ತರಿಸಿತು.

386 ಮೈಕ್ರೋಪ್ರೋಸೆಸರ್‌

ಈ ಸಂದರ್ಭದಲ್ಲಿ ಆಂಡ್ರಿವ್ ಗ್ರೂವ್ ಪರಿಣಾಮಕಾರಿಯಾಗಿ ಕಂಪನಿಗೆ ನಿರ್ದೇಶನವನ್ನು ನೀಡಿದರು, ಕಂಪನಿಯ ಹೆಚ್ಚಿನ DRAM ವ್ಯವಹಾರವನ್ನು ನಿಲ್ಲಿಸಿ, ಸಾಧನ-ಸಂಪತ್ತನ್ನು ಮೈಕ್ರೋಪ್ರೋಸೆಸರ್‌ ವ್ಯವಹಾರಕ್ಕೆ ಬಳಸಲು ಸೂಚಿಸಿದರು. ಅವರ ನಿರ್ಧಾರದಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು "ಏಕ-ಮೂಲ" 386 ಮೈಕ್ರೋಪ್ರೋಸೆಸರ್‌ಗೆ ನೀಡಲಾಗಿತ್ತು‌. ಇದಕ್ಕಿಂತ ಮೊದಲು ಮೈಕ್ರೋಪ್ರೋಸೆಸರ್‌ ತಯಾರಿಕೆಯು ಬೆಳವಣಿಗೆಯ ಹಂತದಲ್ಲಿತ್ತು ಹಾಗೂ ಉತ್ಪಾದನಾ ತೊಂದರೆಗಳು ಕಾಲಕ್ರಮೇಣ ತಯಾರಿಕೆಯನ್ನು ಕಡಿಮೆ ಮಾಡಿದವು ಅಥವಾ ನಿಲ್ಲಿಸಿದವು, ಇದರಿಂದಾಗಿ ಗ್ರಾಹಕರಿಗೆ ಪೂರೈಕೆ ಮಾಡುವಲ್ಲಿ ತಡೆಯುಂಟಾಯಿತು. ಈ ಸಮಸ್ಯೆಯನ್ನು ಪರಿಹರಿಸಲು ಈ ಗ್ರಾಹಕರು, ಚಿಪ್‌ಗಳನ್ನು ಅನೇಕ ತಯಾರಕರು ತಯಾರಿಸಬೇಕು, ಆ ಮೂಲಕ ಅವರು ಸ್ಥಿರವಾದ ಪೂರೈಕೆಯನ್ನು ಒದಗಿಸಬಹುದೆಂಬ ಸೂಚನೆಯನ್ನು ನೀಡಿದರು. 8080 ಮತ್ತು 8086-ಸರಣಿಯ ಮೈಕ್ರೋಪ್ರೋಸೆಸರ್‌ಗಳನ್ನು ಅನೇಕ ಕಂಪನಿಗಳು ತಯಾರಿಸಿದವು, ಗಮನಾರ್ಹವಾಗಿ AMD. ಗ್ರೂವ್ 386 ವಿನ್ಯಾಸದ ಪರವಾನಗಿಯನ್ನು ಇತರ ತಯಾರಕರಿಗೆ ನೀಡಬಾರದು, ಬದಲಿಗೆ ಅದನ್ನು ವಿಭಿನ್ನ ಸ್ಥಳಗಳ ಮೂರು ಕಾರ್ಖಾನೆಗಳಲ್ಲಿ ತಯಾರಿಸಬೇಕೆಂಬ ನಿರ್ಧಾರ ಮಾಡಿದರು, ಆ ಸ್ಥಳಗಳೆಂದರೆ ಕ್ಯಾಲಿಫೋರ್ನಿಯಾದ ಸಂತ ಕ್ಲಾರ; ಆರೆಗನ್‌ನ ಹಿಲ್ಸ್‌ಬೋರೊ; ಮತ್ತು ಚ್ಯಾಂಡ್ಲರ್‌ನ ಅರಿಜೋನ ಉಪನಗರದ ಫೊಯನಿಕ್ಸ್; ಹಾಗೂ ಗ್ರಾಹಕರಿಗೆ ಇದು ಸ್ಥಿರವಾದ ಪೂರೈಕೆಯನ್ನು ಒದಗಿಸುತ್ತದೆಂಬ ಭರವಸೆಯನ್ನು ನೀಡಿದರು. ಕಾಂಪ್ಯಾಕ್ ಡೆಸ್ಕ್‌ಪ್ರೊ 386ರ ಯಶಸ್ಸು 386 ಮೈಕ್ರೊಪ್ರೊಸೆಸರ್ಅನ್ನು ಪ್ರಮುಖ CPU ಆಯ್ಕೆಯಾಗಿ ಮಾಡಿತು, ಇದರಿಂದಾಗಿ ಇಂಟೆಲ್ ಪ್ರಬಲ ಪೂರೈಕೆದಾರ ಸ್ಥಾನವನ್ನು ಗಳಿಸಿತು. ಇದರಿಂದ ಲಭಿಸಿದ ಲಾಭವು ಉನ್ನತ-ನಿರ್ವಹಣೆಯ ಚಿಪ್ ವಿನ್ಯಾಸಗಳು ಮತ್ತು ಉನ್ನತ-ಮಟ್ಟದ ಉತ್ಪಾದನಾ ಸೌಕರ್ಯಗಳ ಶೀಘ್ರ ಬೆಳವಣಿಗೆಗೆ ಬಂಡವಾಳ ಒದಗಿಸಿತು, ಇದು 1990ರ ದಶಕದ ಆರಂಭದಲ್ಲಿ ಇಂಟೆಲ್ಅನ್ನು ನಿಸ್ಸಂದಿಗ್ಧ ಮುಖಂಡತ್ವ ಸ್ಥಿತಿಗೆ ಉತ್ತೇಜಿಸಿತು.

486, ಪೆಂಟಿಯಮ್‌ ಮತ್ತು ಇಟಾನಿಯಮ್

ಇಂಟೆಲ್ 1989ರಲ್ಲಿ 486 ಮೈಕ್ರೋಪ್ರೋಸೆಸರ್‌ಅನ್ನು ಮಾರುಕಟ್ಟೆಗೆ ತಂದಿತು ಹಾಗೂ 1990ರಲ್ಲಿ ಎರಡನೇ ವಿನ್ಯಾಸ ತಂಡವನ್ನು ರಚಿಸಿತು. ಆ ಮೂಲಕ ಇದು "P5" ಮತ್ತು "P6" ಎಂಬ ಕೋಡ್-ಹೆಸರಿನ ಸಂಸ್ಕಾರಕಗಳನ್ನು ವಿನ್ಯಾಸಗೊಳಿಸಲು ನಿರ್ಧರಿಸಿತು ಮತ್ತು ಪ್ರತಿ ಎರಡು ವರ್ಷಕ್ಕೊಮ್ಮೆ ಒಂದು ಪ್ರಮುಖ ಹೊಸ ಸಂಸ್ಕಾರಕವನ್ನು ವಿನ್ಯಾಸಗೊಳಿಸುವ ಕಾರ್ಯಕ್ಕೆ ಬದ್ಧವಾಯಿತು, ಅಂತಹ ವಿನ್ಯಾಸಗಳು ಹಿಂದೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳನ್ನು ತೆಗೆದುಕೊಂಡಿದ್ದವು. P5ಅನ್ನು ಹಿಂದೆ "ಆಪರೇಶನ್ ಬೈಸಿಕಲ್" ಎಂದು ಕರೆಯಲಾಗುತ್ತಿತ್ತು, ಇದು ಸಂಸ್ಕಾರಕದ ಆವರ್ತಗಳನ್ನು ಸೂಚಿಸುತ್ತದೆ. P5ಅನ್ನು 1993ರಲ್ಲಿ ಇಂಟೆಲ್ ಪೆಂಟಿಯಮ್‌ ಆಗಿ ಮಾರುಕಟ್ಟೆಗೆ ತರಲಾಯಿತು, ಆ ಮೂಲಕ ಹಿಂದಿನ ಸಂಖ್ಯೆಗೆ ನೋಂದಾಯಿತ ಟ್ರೇಡ್‌ಮಾರ್ಕ್ ಹೆಸರನ್ನು ಬದಲಿಯಾಗಿ ಬಳಸಲಾಯಿತು (486 ಮೊದಲಾದ ಸಂಖ್ಯೆಗಳನ್ನು ಟ್ರೇಡ್‌ಮಾರ್ಕ್ ಆಗಿ ಸೂಚಿಸುವುದು ಕಷ್ಟವಾಗುತ್ತದೆ). ನಂತರ P6 1995ರಲ್ಲಿ ಪೆಂಟಿಯಮ್‌ ಪ್ರೊ ಆಗಿ ಮಾರುಕಟ್ಟೆಗೆ ಬಂದಿತು ಹಾಗೂ 1997ರಲ್ಲಿ ಪೆಂಟಿಯಮ್‌ II ಆಗಿ ಅಭಿವೃದ್ಧಿಯಾಯಿತು. ಕ್ಯಾಲಿಫೋರ್ನಿಯಾದ ಸಂತ ಕ್ಲಾರ ಮತ್ತು ಆರೆಗನ್‌ನ ಹಿಲ್ಸ್‌ಬೋರೊದಲ್ಲಿ ಹೊಸ ವಿನ್ಯಾಸಕಾರರು ಪರ್ಯಾಯವಾಗಿ ಅಭಿವೃದ್ಧಿ ಹೊಂದಿದರು. ಸಂತ ಕ್ಲಾರದ ವಿನ್ಯಾಸ ತಂಡವು 1993ರಲ್ಲಿ "P7" ಎಂಬ ಕೋಡ್ ಹೆಸರಿನ x86 ವಿನ್ಯಾಸದ ಮುಂದಿನ ರೂಪಾಂತರವನ್ನು ತಯಾರಿಸಲು ಸಿದ್ಧವಾಯಿತು. ಮೊದಲ ಪ್ರಯತ್ನವನ್ನು ಒಂದು ವರ್ಷದ ನಂತರ ಕೈಬಿಡಲಾಯಿತು. ಆದರೆ ಅದು ಹೆವ್ಲೆಟ್-ಪ್ಯಾಕರ್ಡ್ ಇಂಜಿನಿಯರ್‌ಗಳೊಂದಿಗಿನ ಸಹಕಾರಿ ಯೋಜನೆಯಲ್ಲಿ ವೇಗವಾಗಿ ಪುನಶ್ಚೈತನ್ಯಗೊಂಡಿತು, ಆದರೂ ಇಂಟೆಲ್ ಶೀಘ್ರದಲ್ಲಿ ಮೂಲಭೂತ ವಿನ್ಯಾಸ ಜವಾಬ್ದಾರಿಯನ್ನು ವಹಿಸಿಕೊಂಡಿತು. ಇದರ ಪರಿಣಾಮವಾಗಿ IA-64 64-ಬಿಟ್ ವಿನ್ಯಾಸ ಇಟಾನಿಯಮ್‌‌ನ ರಚನೆಯಾಯಿತು, ಇದು ಅಂತಿಮವಾಗಿ 2001ರ ಜೂನ್‌ನಲ್ಲಿ ಮಾರುಕಟ್ಟೆಗೆ ಬಂದಿತು. ಇಟಾನಿಯಮ್‌ನ ಕಾರ್ಯನಿಯಂತ್ರಣ ಅಂಶವಾದ x86 ಕೋಡ್ ನಿರೀಕ್ಷಿತ ಮಟ್ಟವನ್ನು ತಲುಪಲಿಲ್ಲ ಮತ್ತು 64-ಬಿಟ್ ವಿಸ್ತರಣೆಯನ್ನು ಹೊಂದಿರುವ ಇದು AMD ಮಾರುಕಟ್ಟೆಗೆ ತಂದ x86-64 ಹೆಸರಿನ ಮೂಲಭೂತ x86 ವಿನ್ಯಾಸದೊಂದಿಗೆ ಪೈಪೋಟಿ ನಡೆಸಲು ವಿಫಲವಾಯಿತು (ಆದರೂ ಇಂಟೆಲ್ ಇಂಟೆಲ್ 64 ಎಂಬ ಹೆಸರನ್ನು, ಹಿಂದೆ EM64T , ಬಳಸುತ್ತದೆ). 2009ರ ಮಾಹಿತಿಯ ಪ್ರಕಾರ, ಇಂಟೆಲ್ ಇಟಾನಿಯಮ್ಅನ್ನು ಅಭಿವೃದ್ಧಿಪಡಿಸಿ, ಪರಿಣಾಮಕಾರಿಯಾಗಿ ರಚಿಸುವುದನ್ನು ಮುಂದುವರಿಸಿದೆ. ಹಿಲ್ಸ್‌ಬೋರೊ ತಂಡವು ವಿಲ್ಲಮೆಟ್ಟೆ ಸಂಸ್ಕಾರಕಗಳನ್ನು (P67 ಮತ್ತು P68 ಕೋಡ್-ಹೆಸರಿನ) ವಿನ್ಯಾಸಗೊಳಿಸಿತು, ಅವನ್ನು ಪೆಂಟಿಯಮ್‌ 4 ಆಗಿ ಮಾರುಕಟ್ಟೆಗೆ ತರಲಾಯಿತು.

ಪೆಂಟಿಯಮ್‌ ದೋಷ

1994ರ ಜೂನ್‌ನಲ್ಲಿ, ಇಂಟೆಲ್‌ನ ಇಂಜಿನಿಯರ್‌ಗಳು P5 ಪೆಂಟಿಯಮ್‌ ಮೈಕ್ರೋಪ್ರೋಸೆಸರ್‌‌ನ ಫ್ಲೋಟಿಂಗ್ ಪಾಯಿಂಟ್ ಮ್ಯಾತ್ ಸಬ್‌ಸೆಕ್ಷನ್‌ನಲ್ಲಿ ದೋಷವೊಂದನ್ನು ಕಂಡುಹಿಡಿದರು. ಕೆಲವು ಮಾಹಿತಿ ಅವಲಂಬಿತ ಸ್ಥಿತಿಗಳಲ್ಲಿ, ಫ್ಲೋಟಿಂಗ್-ಪಾಯಿಂಟ್ ವಿಭಾಗದ ಕ್ರಿಯೆಗಳ ಫಲಿತಾಂಶದ ಕಡಿಮೆ-ಶ್ರೇಣಿಯ ಬಿಟ್‌ಗಳು ತಪ್ಪಾಗಿರುತ್ತವೆ, ಈ ದೋಷವು ಫ್ಲೋಟಿಂಗ್-ಪಾಯಿಂಟ್ ಕ್ರಿಯೆಗಳಲ್ಲಿ ಶೀಘ್ರದಲ್ಲಿ ಸಂಯೋಗಗೊಂಡು ಅನಂತರದ ಲೆಕ್ಕಾಚಾರಗಳಲ್ಲಿ ದೊಡ್ಡ ದೋಷಗಳಾಗಿ ಪರಿಣಮಿಸುತ್ತದೆ. ಇಂಟೆಲ್ ಈ ದೋಷವನ್ನು ಮುಂದಿನ ಚಿಪ್ ಸಂಸ್ಕರಣದಲ್ಲಿ ಸರಿಪಡಿಸಿತು, ಆದರೂ ಇದನ್ನು ಪ್ರಕಟಪಡಿಸಲು ನಿರಾಕರಿಸಿತು.[ಸೂಕ್ತ ಉಲ್ಲೇಖನ ಬೇಕು] 1994ರ ಅಕ್ಟೋಬರ್‌ನಲ್ಲಿ ಲಿಂಚ್‌ಬರ್ಗ್ ಕಾಲೇಜಿನ ಗಣಿತಶಾಸ್ತ್ರದ ಪ್ರಾಧ್ಯಾಪಕ ಡಾ. ಥಾಮಸ್ ನೈಸೆಲಿ ಸ್ವತಂತ್ರವಾಗಿ ಬಗ್(ದೋಷ)ಅನ್ನು ಕಂಡುಹಿಡಿದರು ಹಾಗೂ ಇದರ ಬಗ್ಗೆ ಇಂಟೆಲ್ ಒಂದಿಗೆ ಮಾಡಿದ ವಿಚಾರಣೆಗೆ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ಅಕ್ಟೋಬರ್ 30ರಂದು ಅಂತರಜಾಲದಲ್ಲಿ ಸಂದೇಶವೊಂದನ್ನು ಪ್ರಕಟಪಡಿಸಿದರು. ಬಗ್‌ ಪದವು ಅಂತರಜಾಲದಲ್ಲಿ ಅತಿ ಶೀಘ್ರವಾಗಿ ಹರಡಿತು ಮತ್ತು ನಂತರ ಉದ್ಯಮದ ಪ್ರೆಸ್‌ಗೂ ಹೋಯಿತು. ಬಗ್ಅನ್ನು ಸಾಧಾರಣ ಬಳಕೆದಾರರು ಸುಲಭದಲ್ಲಿ ಪುನರಾವರ್ತಿಸಬಹುದಾದ್ದರಿಂದ (ದೋಷವನ್ನು ತೋರಿಸಲು OS ಕ್ಯಾಲ್ಕುಲೇಟರ್‌ಗೆ ನಮೂದಿಸಬಹುದಾದ ಸಂಖ್ಯೆಗಳ ಸರಣಿಯೇ ಇತ್ತು), ಇದು ಅಷ್ಟೊಂದು ಮುಖ್ಯವಾದುದಲ್ಲ ಮತ್ತು ಇದೊಂದು "ದೋಷವೇ ಅಲ್ಲ"ವೆಂಬ ಇಂಟೆಲ್‌ನ ಹೇಳಿಕೆಯನ್ನು ಹೆಚ್ಚಿನ ಕಂಪ್ಯೂಟರ್ ಬಳಕೆದಾರರು ಸ್ವೀಕರಿಸಲಿಲ್ಲ. 1994ರ ಕೃತಜ್ಞತಾ ನಿವೇದನೆಯ ದಿನದಂದು ದಿ ನ್ಯೂಯಾರ್ಕ್ ಟೈಮ್ಸ್ ಈ ದೋಷದ ಮೇಲೆ ಬೆಳಕನ್ನು ಬೀರುವ ಪತ್ರಕರ್ತ ಜಾನ್ ಮಾರ್ಕಾಫ್‌ರ ಲೇಖನವೊಂದನ್ನು ಪ್ರಕಟಪಡಿಸಿತು. ಇಂಟೆಲ್ ಅದರ ಸ್ಥಾನವನ್ನು ಬದಲಾಯಿಸಿ, ಪ್ರತಿಯೊಂದು ಚಿಪ್ಅನ್ನು ಪರಿವರ್ತಿಸಲು ಸೂಚಿಸಿತು, ಇದಕ್ಕಾಗಿ ಬಹುದೊಡ್ಡ ಅಂತಿಮ-ಬಳಕೆದಾರರ-ಬೆಂಬಲದ ಸಂಘಟನೆಯೊಂದನ್ನು ಸ್ಥಾಪಿಸಲು ನಿರ್ಧರಿಸಿತು. ಇದರ ಪರಿಣಾಮವಾಗಿ ಇಂಟೆಲ್‌ನ 1994ರ ಆದಾಯಕ್ಕೆ ಸುಮಾರು $500 ದಶಲಕ್ಷದಷ್ಟು ಖರ್ಚು ಉಂಟಾಯಿತು. "ಪೆಂಟಿಯಮ್‌ ದೋಷ" ಸಂಗತಿ, ಇದಕ್ಕೆ ಇಂಟೆಲ್‌ನ ಪ್ರತಿಕ್ರಿಯೆ ಮತ್ತು ಇದರ ಬಗೆಗಿನ ಮಾಧ್ಯಮ ವರದಿಗಳು ಇಂಟೆಲ್ಅನ್ನು ಹೆಚ್ಚಿನ ಕಂಪ್ಯೂಟರ್ ಬಳಕೆದಾರರಿಗೆ ತಿಳಿದಿಲ್ಲದ ತಂತ್ರಜ್ಞಾನದ ಪೂರೈಕೆದಾರ ಸ್ಥಾನದಿಂದ ಅದರ ಹೆಸರು ಚಿರಪಚಿತವಾಗುವಂತೆ ಪ್ರಚೋದಿಸಿದವು. "ಇಂಟೆಲ್ ಇನ್‌ಸೈಡ್" ಕಾರ್ಯಾಚರಣೆಯೊಂದಿಗೆ ಒಂದುಗೂಡಿ ಈ ಘಟನೆಯು ಇಂಟೆಲ್‌ಗೆ ಒಂದು ಧನಾತ್ಮಕ ಅಂಶವಾಗಿ ಪರಿಣಮಿಸಿತು, ಅದರ ಕೆಲವು ವ್ಯವಹಾರ ಕಾರ್ಯಗಳು ಹೆಚ್ಚು ಅಂತಿಮ-ಬಳಕೆದಾರರನ್ನು ಕೇಂದ್ರೀಕರಿಸುವಂತೆ ಬದಲಾವಣೆ ಮಾಡಿತು ಮತ್ತು ಗಮನಾರ್ಹ ಸಾರ್ವಜನಿಕ ಜಾಗೃತಿಯನ್ನು ಮೂಡಿಸಿತು, ಆ ಮೂಲಕ ಹಿಂದಿನ ಋಣಾತ್ಮಕ ಛಾಪನ್ನು ಹೋಗಲಾಡಿಸಿತು.

ಇಂಟೆಲ್ ಇನ್‌ಸೈಡ್, ಇಂಟೆಲ್ ಸಿಸ್ಟಮ್‌ಗಳ ವಿಭಾಗ ಮತ್ತು ಇಂಟೆಲ್ ವಿನ್ಯಾಸ ಪ್ರಯೋಗಾಲಯಗಳು

ಈ ಸಂದರ್ಭದಲ್ಲಿ ಇಂಟೆಲ್ ಅದರ ಸಂಸ್ಕಾರಕಗಳ ಯಶಸ್ಸನ್ನು ಖಚಿತಪಡಿಸುವ ಎರಡು ಪ್ರಮುಖ ಬೆಂಬಲಿಸುವ-ಯೋಜನೆಗಳನ್ನು ಕೈಗೊಂಡಿತು. ಮೊದಲನೆ ಯೋಜನೆಯನ್ನು ವ್ಯಾಪಕವಾಗಿ 1991ರ "ಇಂಟೆಲ್ ಇನ್‌ಸೈಡ್" ಮಾರಾಟ ಮತ್ತು ಬ್ರ್ಯಾಂಡ್ ಮಾಡುವ ಕಾರ್ಯಾಚರಣೆ ಎಂದು ಕರೆಯಲಾಯಿತು. ಘಟಕಾಂಶಗಳನ್ನು ಬ್ರ್ಯಾಂಡ್ ಮಾಡುವ ಕಲ್ಪನೆಯು ಆ ಸಂದರ್ಭದಲ್ಲಿ ಹೊಸದಾಗಿತ್ತು, ಕೇವಲ ನುಟ್ರಾಸ್ವೀಟ್ ಮತ್ತು ಇತರ ಕೆಲವು ಕಂಪನಿಗಳು ಮಾತ್ರ ಆ ಪ್ರಯತ್ನವನ್ನು ಮಾಡುತ್ತಿದ್ದವು. ಈ ಕಾರ್ಯಾಚರಣೆಯು PC ಉದ್ಯಮದಿಂದ ಹೊರಗೆ ಪ್ರಮುಖ ಪೂರೈಕೆದಾರವೆಂಬ ಸ್ವಲ್ಪ ಮಟ್ಟಿನ ಹೆಸರು ಗಳಿಸಿದ್ದ ಇಂಟೆಲ್ ಎಲ್ಲರಿಗೂ ಚಿರಪರಿಚಿತವಾಗುವಂತೆ ಮಾಡಿತು. 1990ರಲ್ಲಿ ಆರಂಭವಾದ ಎರಡನೆ ಯೋಜನೆ ಇಂಟೆಲ್ಸ್ ಸಿಸ್ಟಮ್ಸ್ ಗ್ರೂಪ್ ಅಷ್ಟೊಂದು ಜನಪ್ರಿಯವಾಗಲಿಲ್ಲ. ಇದು ಸಂಸ್ಕಾರಕ (CPU) ಮತ್ತು ಮೆಮರಿ (RAM) ಚಿಪ್‌ಗಳನ್ನು ಪ್ಲಗ್ ಮಾಡಬಹುದಾದ ಮತ್ತು ವೈಯಕ್ತಿಕ ಕಂಪ್ಯೂಟರ್‌ನ ಪ್ರಮುಖ ಬೋರ್ಡ್ ಘಟಕವಾದ PC "ಮದರ್‌ಬೋರ್ಡ್‌"ಗಳನ್ನು ತಯಾರಿಸಿತು. ಅದಾದ ಸ್ವಲ್ಪದರಲ್ಲಿ ಇಂಟೆಲ್ ಅನೇಕ PC ಕ್ಲೋನ್ ಕಂಪನಿಗಳಿಗಾಗಿ ಸಂಪೂರ್ಣವಾಗಿ ವಿನ್ಯಾಸಗೊಳಿಸಿದ "ವೈಟ್ ಬಾಕ್ಸ್" ಸಿಸ್ಟಮ್‌ಗಳನ್ನು ತಯಾರಿಸಲು ಆರಂಭಿಸಿತು, ಇದು ಬಲುಬೇಗನೆ ಬೆಳವಣಿಗೆಯನ್ನು ಕಂಡಿತು.[ಸೂಕ್ತ ಉಲ್ಲೇಖನ ಬೇಕು] ಈ ಬೆಳವಣಿಗೆಯು ಉತ್ತುಂಗದಲ್ಲಿರುವಾಗ 1990ದ ದಶಕದ ಮಧ್ಯಾವಧಿಯಲ್ಲಿ ಇಂಟೆಲ್ ಸುಮಾರು 15%ನಷ್ಟು PCಗಳನ್ನು ತಯಾರಿಸಿತು. ಇದು ಇಂಟೆಲ್ಅನ್ನು ಆ ಸಂದರ್ಭದ ಮೂರನೇ-ಅತ್ಯಂತ ದೊಡ್ಡ ಪೂರೈಕೆದಾರ ಕಂಪನಿಯಾಗಿ ಮಾಡಿತು.[ಸೂಕ್ತ ಉಲ್ಲೇಖನ ಬೇಕು] 1990ರ ದಶಕದಲ್ಲಿ, ಇಂಟೆಲ್‌ನ ವಿನ್ಯಾಸ ಪ್ರಯೋಗಾಲಯವು (IAL) ವೈಯಕ್ತಿಕ ಕಂಪ್ಯೂಟರ್‌‌ನ ಹೆಚ್ಚಿನ ಯಂತ್ರಾಂಶ ನಾವೀನ್ಯಗಳಿಗೆ ಜವಾಬ್ದಾರವಾಗಿತ್ತು, ಅವುಗಳೆಂದರೆ PCI ಬಸ್, PCI ಎಕ್ಸ್‌ಪ್ರೆಸ್ (PCIe) ಬಸ್, ಯೂನಿವರ್ಸಲ್ ಸೀರಿಯಲ್ ಬಸ್ (USB), ಬ್ಲೂಟೂತ್ ನಿಸ್ತಂತು ಸಂಪರ್ಕ ಮತ್ತು ಬಹುಸಂಸ್ಕಾರಕ ಸರ್ವರ್‌ಗಳಿಗೆ ಈಗ-ಪ್ರಧಾನವಾಗಿರುವ[ಸೂಕ್ತ ಉಲ್ಲೇಖನ ಬೇಕು] ವಿನ್ಯಾಸ.[clarification needed] IALನ ತಂತ್ರಾಂಶ ಪ್ರಯತ್ನಗಳು ತುಂಬಾ ಮಿಶ್ರ ಭವಿಷ್ಯವನ್ನು ಕಂಡವು; ಅದರ ವೀಡಿಯೊ ಮತ್ತು ಗ್ರ್ಯಾಫಿಕ್ಸ್ ತಂತ್ರಾಂಶಗಳು ತಂತ್ರಾಂಶ-ಡಿಜಿಟಲ್-ವೀಡಿಯೊದ ಅಭಿವೃದ್ಧಿಯಲ್ಲಿ ಪ್ರಮುಖವಾಗಿದ್ದವು, ಆದರೆ ನಂತರ ಇದರ ಪ್ರಯತ್ನಗಳು ಮೈಕ್ರೊಸಾಫ್ಟ್‌ನ ಪೈಪೋಟಿಯಿಂದ ಕ್ಷೀಣಿಸಿದವು. ಇಂಟೆಲ್ ಮತ್ತು ಮೈಕ್ರೊಸಾಫ್ಟ್‌ನ ನಡುವಿನ ಪೈಪೋಟಿಯು ಮೈಕ್ರೊಸಾಫ್ಟ್‌ನ ನಂಬಿಕೆ-ವಿರೋಧಿ ಪರೀಕ್ಷೆಯಲ್ಲಿ IAL ಉಪಾಧ್ಯಕ್ಷ ಸ್ಟೀವನ್ ಮ್ಯಾಕ್‌ಗೆಡಿಯಿಂದ ಸಾಕ್ಷ್ಯಗಳೊಂದಿಗೆ ಬಹಿರಂಗಗೊಂಡಿತು.

ಸೂಪರ್‌ಕಂಪ್ಯೂಟರ್‌ಗಳು

ಹೈಪರ್‌ಕ್ಯೂಬ್ ಟೊಪಾಲಜಿಯಲ್ಲಿ ಸಂಪರ್ಕಿಸಿದ ಇಂಟೆಲ್ ಮೈಕ್ರೋಪ್ರೋಸೆಸರ್‌ಗಳ ಆಧಾರದ ಸಮಾಂತರ ಕಂಪ್ಯೂಟರ್‌‌ಗಳನ್ನು ವಿನ್ಯಾಸಗೊಳಿಸಲು ಮತ್ತು ತಯಾರಿಸಲು 1984ರಲ್ಲಿ ಜಸ್ಟಿನ್ ರಾಟ್ನರ್ ಇಂಟೆಲ್ ಸೈಂಟಿಫಿಕ್ ಕಂಪ್ಯೂಟರ್ಸ್ ವಿಭಾಗವನ್ನು ಸ್ಥಾಪಿಸಿದರು. 1992ರಲ್ಲಿ ಆ ಹೆಸರು ಇಂಟೆಲ್ ಸೂಪರ್‌ಕಂಪ್ಯೂಟಿಂಗ್ ಸಿಸ್ಟಮ್ಸ್ ಡಿವಿಜನ್ ಎಂಬುದಾಗಿ ಬದಲಾಯಿತು ಹಾಗೂ ಐವಾರ್ಪ್ ವಿನ್ಯಾಸದ ಅಭಿವೃದ್ಧಿಯೂ ಇದರಲ್ಲಿ ಒಳಗೊಂಡಿತು. ಈ ವಿಭಾಗವು ಅನೇಕ ಸೂಪರ್‌ಕಂಪ್ಯೂಟರ್‌ ಸಿಸ್ಟಮ್‌ಗಳನ್ನು ವಿನ್ಯಾಸಗೊಳಿಸಿತು, ಅವುಗಳೆಂದರೆ ಇಂಟೆಲ್ iPSC/1, iPSC/2, iPSC/860, ಪ್ಯಾರಗನ್ ಮತ್ತು ASCI ರೆಡ್.

ಪೈಪೋಟಿ, ನಂಬಿಕೆ-ವಿರೋಧಿ ಮತ್ತು ಗೂಢಚರ್ಯೆ

ಎರಡು ಅಂಶಗಳು ಇದರ ಪ್ರಾಬಲ್ಯತೆಯನ್ನು ಕಡಿಮೆಮಾಡಲು ಕಾರಣವಾದವು: 2000ರಲ್ಲಿ PC ಬೇಡಿಕೆಯು ಕಡಿಮೆಯಾಗಲು ಆರಂಭವಾದುದು ಮತ್ತು ಕಡಿಮೆ ಬೆಲೆಯ PC ಅಭಿವೃದ್ಧಿಯಾದುದು. 1990ರ ದಶಕದ ಕೊನೆಯಲ್ಲಿ, ಮೈಕ್ರೋಪ್ರೋಸೆಸರ್‌ ನಿರ್ವಹಣೆಯು ಅದರ CPU ಸಾಮರ್ಥ್ಯದ ತಂತ್ರಾಂಶ ಬೇಡಿಕೆಯನ್ನು ಮೀರಿಸಿತು. ಅದೂ ಅಲ್ಲದೆ ಅತ್ಯಾಧುನಿಕ ಸರ್ವರ್ ಸಿಸ್ಟಮ್‌ಗಳ ಮತ್ತು ತಂತ್ರಾಂಶದ ಬೇಡಿಕೆಗಳು "ಡಾಟ್-ಕಾಮ್ ಬಬಲ್"ನ ಅಂತ್ಯದೊಂದಿಗೆ ಕೊನೆಗೊಂಡವು. 2000ರ ನಂತರ ಗ್ರಾಹಕ ಸಿಸ್ಟಮ್‌ಗಳು ಕಡಿಮೆ-ಖರ್ಚಿನ ಸಿಸ್ಟಮ್‌ಗಳಾಗಿ ಹೆಚ್ಚು ಪರಿಣಾಮಕಾರಿಯಾಗಿ ಮಾರಾಟವಾದವು. ಹೆಚ್ಚು-ಪ್ರಬಲ ಸಂಸ್ಕಾರಕಗಳನ್ನು ತಯಾರಿಸುವ ಇಂಟೆಲ್‌ನ ಕಾರ್ಯತಂತ್ರ ಮತ್ತು ಅಪೂರ್ಣವಾದ ಅದರ ಹಿಂದಿನ ಉತ್ಪನ್ನಗಳು ತಪ್ಪುಗಳನ್ನು ಮಾಡಿದರಿಂದ,[ಸೂಕ್ತ ಉಲ್ಲೇಖನ ಬೇಕು] ಮುಖ್ಯವಾಗಿ AMD ಮೊದಲಾದ ಪ್ರತಿಸ್ಪರ್ಧಿ ಕಂಪನಿಗಳು ಅತಿ ಶೀಘ್ರದಲ್ಲಿ ಅದರ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಅವಕಾಶವನ್ನು ನೀಡಿತು. ಇದು ಸಂಸ್ಕಾರಕ ವ್ಯವಹಾರ-ಕ್ಷೇತ್ರದ ಲಾಭದಾಯಕತೆಯನ್ನು[ಸೂಕ್ತ ಉಲ್ಲೇಖನ ಬೇಕು] ಕಡಿಮೆ ಮಾಡಿತು ಮತ್ತು PC ಯಂತ್ರಾಂಶ ಪೂರೈಕೆಯಲ್ಲಿನ ಇಂಟೆಲ್‌ನ ಅಭೂತಪೂರ್ವ ಪ್ರಾಬಲ್ಯತೆಯನ್ನು ಕೊನೆಗೊಳಿಸಿತು.[ಸೂಕ್ತ ಉಲ್ಲೇಖನ ಬೇಕು] x86 ಮೈಕ್ರೋಪ್ರೋಸೆಸರ್ ಮಾರುಕಟ್ಟೆಯಲ್ಲಿನ ಇಂಟೆಲ್‌‌ನ ಪ್ರಾಬಲ್ಯತೆಯು ಅನೇಕ ವರ್ಷಗಳಲ್ಲಿ ನಂಬಿಕೆ-ವಿರೋಧಿ ಕಾರ್ಯಗಳ ಹಲವಾರು ದಂಡಗಳನ್ನು ವಿಧಿಸಿತು, ಅವುಗಳೆಂದರೆ 1980ರ ದಶಕದ ಕೊನೆಯ ಮತ್ತು 1999ರ FTC ವಿಚಾರಣೆಗಳು ಹಾಗೂ ಡಿಜಿಟಲ್ ಎಕ್ವಿಪ್ಮೆಂಟ್ ಕಾರ್ಪೊರೇಶನ್‌ನ (DEC) 1997ರ ಮೊಕದ್ದಮೆ ಮತ್ತು ಇಂಟರ್‌ಗ್ರಾಫ್‌ನ ಪೇಟೆಂಟ್ ದಾವೆ ಮೊದಲಾದ ಸಿವಿಲ್ ಮೊಕದ್ದಮೆಗಳು. ಇಂಟೆಲ್‌ನ ಮಾರುಕಟ್ಟೆ ಪ್ರಾಬಲ್ಯತೆಯು (ಒಂದು ಕಾಲದಲ್ಲಿ[when?] ಅದು 32-ಬಿಟ್ x86 ಮೈಕ್ರೋಪ್ರೋಸೆಸರ್‌ಗಳ ಸುಮಾರು 85%ನಷ್ಟು ಮಾರುಕಟ್ಟೆಯ ಮೇಲೆ ನಿಯಂತ್ರಣವನ್ನು ಸಾಧಿಸಿತ್ತು) ಇಂಟೆಲ್‌ನ ಕಾನೂನಿನೊಂದಿಗೆ ರಾಜಿಯಾಗದ ವ್ಯವಹಾರ ತಂತ್ರದೊಂದಿಗೆ (ಉದಾಹರಣೆಗಾಗಿ PC ತಯಾರಕರೊಂದಿಗಿನ ಕುಖ್ಯಾತ 338 ಪೇಟೆಂಟ್ ಮೊಕದ್ದಮೆ) ಸೇರಿ ಇದನ್ನು ಮೊಕದ್ದಮೆಗೆ ಒಂದು ಪ್ರಮುಖ ಗುರಿಯನ್ನಾಗಿ ಮಾಡಿತು. ಆದರೆ ಕೆಲವು ದಾವೆಗಳು ಯಾವುದೇ ಶುಲ್ಕವನ್ನು ವಿಧಿಸಲಿಲ್ಲ.[clarification needed] ಉದ್ಯಮ ಗೂಢಚರ್ಯೆಯ ಕೇಸೊಂದು 1995ರಲ್ಲಿ ಉದ್ಭವಿಸಿತು, ಇದು ಇಂಟೆಲ್ ಮತ್ತು AMD ಕಂಪನಿಗಳೆರಡನ್ನೂ ಒಳಗೊಂಡಿತ್ತು. AMDಯಲ್ಲಿ ಮತ್ತು ಇಂಟೆಲ್‌ನ ಅರಿಜೋನ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದ ಅರ್ಜೆಂಟೈನಾದ ನಿವಾಸಿ ಬಿಲ್ ಗೆಡೆ 1993ರಲ್ಲಿ i486 ಮತ್ತು P5 ಪೆಂಟಿಯಮ್‌ಅನ್ನು AMDಗೆ ಮತ್ತು ಕೆಲವು ವಿದೇಶಿ ಕಂಪನಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸಿದುದಕ್ಕಾಗಿ ಬಂಧನಕ್ಕೊಳಗಾದರು. ಗೆಡೆ ಇಂಟೆಲ್‌ನಲ್ಲಿ ತನ್ನ ಕಂಪ್ಯೂಟರ್ ಪರದೆಯಿಂದ ಮಾಹಿತಿಯನ್ನು ವೀಡಿಯೊ ಟೇಪ್ ಮಾಡಿ AMDಗೆ ಮೇಲ್ ಮಾಡಿದ್ದರು. ಇದು ತಕ್ಷಣವೇ ಇಂಟೆಲ್ ಮತ್ತು ಅದರ ಅಧಿಕಾರಿಗಳಿಗೆ ತಿಳಿದುಬಂದಿತು, ಅದರ ಪರಿಣಾಮವಾಗಿ ಅವರು ಬಂಧನಕ್ಕೆ ಒಳಗಾದರು. ಗೆಡೆ 1996ರ ಜೂನ್‌ನಲ್ಲಿ ತಪ್ಪಿತಸ್ಥನೆಂದು ರುಜುವಾತಾಗಿ, 33 ತಿಂಗಳ ಸೆರೆಮನೆವಾಸದ ಶಿಕ್ಷೆಯನ್ನು ಪಡೆದರು.

ಆಪಲ್ ಒಂದಿಗಿನ ಪಾಲುದಾರಿಕೆ

2005ರ ಜೂನ್ 6ರಂದು, ಆಪಲ್ CEO ಸ್ಟೀವ್ ಜಾಬ್ಸ್, ಆಪಲ್ ಅದರ ದೀರ್ಘಕಾಲದ ಪವರ್PC ವಿನ್ಯಾಸದಿಂದ ಇಂಟೆಲ್ x86 ವಿನ್ಯಾಸಕ್ಕೆ ಬದಲಾಗುತ್ತಿದೆಯೆಂದು ಘೋಷಿಸಿದರು, ಏಕೆಂದರೆ ಮುಂದಿನ ಪವರ್PC ನಕ್ಷೆಯು ಆಪಲ್‌ನ ಬೇಡಿಕೆಗಳನ್ನು ಪೂರೈಸಲು ಅಸಮರ್ಥವಾಗಿತ್ತು. ಇಂಟೆಲ್ CPUಗಳನ್ನು ಹೊಂದಿರುವ ಮೊದಲ ಮ್ಯಾಸಿಂತೋಶ್ ಕಂಪ್ಯೂಟರ್‌‌ಗಳನ್ನು 2006ರ ಜನವರಿ 10ರಂದು ಬಹಿರಂಗ ಪಡಿಸಲಾಯಿತು ಹಾಗೂ 2006ರ ಆಗಸ್ಟ್‌ನ ಹೊತ್ತಿಗೆ ಆಪಲ್ ಇಂಟೆಲ್-ಸಂಸ್ಕಾರಕಗಳಲ್ಲಿ ಕಾರ್ಯನಿರ್ವಹಿಸುವ ಗ್ರಾಹಕ ಮ್ಯಾಕ್ಸ್‌ನ ಸಂಪೂರ್ಣ ವ್ಯವಹಾರ-ಕ್ಷೇತ್ರವನ್ನು ತನ್ನದಾಗಿಸಿಕೊಂಡಿತು. ಆಪಲ್ ಎಕ್ಸ್‌ಸರ್ವ್ ಸರ್ವರ್ 2006ರ ನವೆಂಬರ್‌ನಿಂದ ಇಂಟೆಲ್ ಎಕ್ಸಿಯಾನ್ ಸಂಸ್ಕಾರಕಗಳನ್ನು ಬಳಸಿಕೊಂಡು ನವೀಕರಣಗೊಂಡಿತು ಹಾಗೂ ಇದು ಆಪಲ್‌ನ ಮ್ಯಾಕ್ ಪ್ರೊನಂತಹುದೇ ವಿನ್ಯಾಸದಲ್ಲಿ ಲಭ್ಯವಾಗುತ್ತದೆ.

ಕೋರ್ 2 ಡ್ಯು ಜಾಹೀರಾತು ವಿವಾದ

2007ರಲ್ಲಿ ಕಂಪನಿಯು ಅದರ ಕೋರ್ 2 ಡ್ಯೂ ಸಂಸ್ಕಾರಕದ ಪ್ರಚಾರಕ್ಕಾಗಿ ಒಂದು ಮುದ್ರಿತ ಜಾಹೀರಾತನ್ನು ಬಿಡುಗಡೆ ಮಾಡಿತು, ಈ ಜಾಹೀರಾತು ಆರು ಮಂದಿ ಆಫ್ರಿಕಾ-ಮೂಲದ ಅಮೆರಿಕಾದ ಓಟಗಾರರು ಕಛೇರಿಯೊಂದರೊಳಗೆ ಒಬ್ಬ ಬಿಳಿಯನ ಮುಂದೆ ತಲೆಬಾಗಿ ನಿಂತಿರುವುದನ್ನು ಒಳಗೊಂಡಿತ್ತು (ಆ ಚಿತ್ರವನ್ನು ಆರಂಭಿಕ ತಡೆಕಟ್ಟಿನಲ್ಲಿ ಓಡಲು ತಯಾರಾಗಿ ನಿಂತಿದ್ದ ಓಟಗಾರರಿಂದ ತೆಗೆದಿದ್ದುದರಿಂದ ಅದು ಹಾಗಿತ್ತು). ಇಂಟೆಲ್ ಕಾರ್ಪೊರೇಟ್ ಮಾರ್ಕೆಟಿಂಗ್‌ನ ಉಪಾಧ್ಯಕ್ಷೆ ನ್ಯಾನ್ಸಿ ಭಗತ್‌ರ ಪ್ರಕಾರ, ಸಾರ್ವಜನಿಕರು ಇದನ್ನು "ಸಂವೇದಿಯಲ್ಲದ ಮತ್ತು ಅಪಮಾನ ಮಾಡುವ" ಜಾಹೀರಾತೆಂದು ತಿಳಿದರು. ಆ ಜಾಹೀರಾತನ್ನು ಶೀಘ್ರದಲ್ಲಿ ಹಿಂದಕ್ಕೆ ತೆಗೆದುಕೊಳ್ಳಲಾಯಿತು ಹಾಗೂ ಅನೇಕ ಇಂಟೆಲ್-ಕಾರ್ಯನಿರ್ವಾಹಕರು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಕ್ಷಮಾಪಣೆ ಯಾಚಿಸಿದರು.

ಕ್ಲಾಸ್‌ಮೇಟ್ PC

ಇಂಟೆಲ್‌ನ ಕ್ಲಾಸ್‌ಮೇಟ್ PCಯು ಕಂಪನಿಯ ಮೊದಲ ಕಡಿಮೆ-ದರದ ನೆಟ್‌ಬುಕ್ ಕಂಪ್ಯೂಟರ್ ಆಗಿದೆ‌.

ಸಂಸ್ಥೆಯ ವ್ಯವಹಾರಗಳು

2006ರ ಸೆಪ್ಟೆಂಬರ್‌ನಲ್ಲಿ, ಇಂಟೆಲ್ ಪ್ರಪಂಚದಾದ್ಯಂತ ಸುಮಾರು 100,000 ಉದ್ಯೋಗಿಗಳನ್ನು ಮತ್ತು 200 ಸೌಲಭ್ಯ-ಕೇಂದ್ರಗಳನ್ನು ಹೊಂದಿತ್ತು. ಅದರ 2005ರ ಆದಾಯವು $38.8 ಶತಕೋಟಿಯಾಗಿತ್ತು ಹಾಗೂ ಅದು ಫೊರ್ಚ್ಯೂನ್ 500 ಶ್ರೇಣೀಕರಣದಲ್ಲಿ 49ನೇ ಸ್ಥಾನವನ್ನು ಪಡೆದಿತ್ತು. ಅದರ ಸ್ಟಾಕು ಚಿಹ್ನೆ INTC, NASDAQ ಪಟ್ಟಿಯಲ್ಲಿ ಸೇರಿದೆ. 2009ರ ಫೆಬ್ರವರಿಯ ದಾಖಲೆಯ ಪ್ರಕಾರ ಇಂಟೆಲ್‌ನ ಅತ್ಯಂತ ದೊಡ್ಡ ಗ್ರಾಹಕರೆಂದರೆ ಹೆವ್ಲೆಟ್ಟ್-ಪ್ಯಾಕರ್ಡ್ ಮತ್ತು ಡೆಲ್.

ಮುಖಂಡತ್ವ ಮತ್ತು ಸಾಂಸ್ಥಿಕ ರಚನೆ

1968ರಲ್ಲಿ ಸ್ಥಾಪನೆಯಾದಾಗ ರಾಬರ್ಟ್ ನಾಯ್ಸ್ ಇಂಟೆಲ್‌ನ CEO ಆಗಿದ್ದರು. ಅವರ ನಂತರ 1975ರಲ್ಲಿ ಸಹ-ಸಂಸ್ಥಾಪಕರಾದ ಗೋರ್ಡನ್ ಮೂರ್ CEO ಆದರು. ಆಂಡಿ ಗ್ರೂವ್ 1979ರಲ್ಲಿ ಕಂಪನಿಯ ಅಧ್ಯಕ್ಷರಾದರು ಮತ್ತು 1987ರಲ್ಲಿ ಮೂರ್ ಅಧ್ಯಕ್ಷರಾದಾಗ ಅವರು CEO ಸ್ಥಾನವನ್ನು ಪಡೆದರು. 1998ರಲ್ಲಿ ಮೂರ್‌ರ ನಂತರ ಗ್ರೂವ್ ಅಧ್ಯಕ್ಷರಾದರು. ಅವರ ನಂತರ ಕಂಪನಿಯ-ಅಧ್ಯಕ್ಷರಾಗಿದ್ದ ಕ್ರೈಗ್ ಬ್ಯಾರೆಟ್ಟ್‌ ಈ ಸ್ಥಾನವನ್ನು ವಹಿಸಿಕೊಂಡರು. 2005ರ ಮೇ 18ರಂದು ಬ್ಯಾರೆಟ್ಟ್ ಕಂಪನಿಯ ನಿಯಂತ್ರಣವನ್ನು ಪಾಲ್ ಒಟೆಲ್ಲಿನಿಗೆ ವಹಿಸಿಕೊಟ್ಟರು, ಒಟೆಲ್ಲಿನಿಯು ಹಿಂದೆ ಕಂಪನಿಯ ಅದ್ಯಕ್ಷರಾಗಿದ್ದರು ಮತ್ತು ಇಂಟೆಲ್‌ನ ವಿನ್ಯಾಸವು ಮೂಲಭೂತ IBM PCಯಲ್ಲಿ ಯಶಸ್ಸು ಗಳಿಸಲು ಕಾರಣವಾದವರು. ನಿರ್ದೇಶಕರ ಮಂಡಳಿಯು ಒಟೆಲ್ಲಿನಿಯನ್ನು CEO ಆಗಿ ಆರಿಸಿತು ಮತ್ತು ಬ್ಯಾರೆಟ್ಟ್‌ನ ಬದಲಿಗೆ ಗ್ರೂವ್ ಮಂಡಳಿಯ ಅಧ್ಯಕ್ಷರಾದರು. ಗ್ರೂವ್ ಅಧ್ಯಕ್ಷರ ಸ್ಥಾನಕ್ಕೆ ಇಳಿದರೆ, ಆದರೆ ವಿಶೇಷ ಸಲಹೆಗಾರರಾಗಿ ಉಳಿದರು. 2009ರ ಮೇಯಲ್ಲಿ ಬ್ಯಾರೆಟ್ಟ್ ಅಧ್ಯಕ್ಷರಾದರು ಮತ್ತು ಜಾನೆ ಶಾ ಮಂಡಳಿಯ ಹೊಸ ಅಧ್ಯಕ್ಷರಾಗಿ ಆಯ್ಕೆಯಾದರು. ಇಂಟೆಲ್‌ನ ನಿರ್ದೇಶಕರ ಮಂಡಳಿಯ ಪ್ರಸ್ತುತದ ಸದಸ್ಯರೆಂದರೆ - ಕ್ರೈಗ್ ಬ್ಯಾರೆಟ್ಟ್‌, ಚಾರ್ಲಿನ್ ಬಾರ್ಶೆಫ್‌ಸ್ಕೈ, ಸುಸಾನ್ ಡೆಕರ್, ಜೇಮ್ಸ್ ಗುಜಿ, ರೀಡ್ ಹಂಡ್ಟ್, ಪಾಲ್ ಒಟೆಲ್ಲಿನಿ, ಜೇಮ್ಸ್ ಪ್ಲಮ್ಮರ್, ಡೇವಿಡ್ ಪೊಟ್ರುಕ್, ಜಾನೆ ಶಾ, ಜಾನ್ ಥೋರ್ನ್ಟನ್ ಮತ್ತು ಡೇವಿಡ್ ಯೋಫಿ.

ಉದ್ಯೋಗ

ಇಂಟೆಲ್ ಕಾರ್ಪೊರೇಶನ್ 
ಕೋಸ್ಟ ರಿಕದಲ್ಲಿರುವ ಇಂಟೆಲ್ ಮೈಕ್ರೋಪ್ರೋಸೆಸರ್ ಕೇಂದ್ರ, ಇದು 2006ರಲ್ಲಿ 20%ನಷ್ಟು ಕೋಸ್ಟ ರಿಕನ್ ರಫ್ತುಗಳಿಗೆ ಮತ್ತು 4.9%ನಷ್ಟು ರಾಷ್ಟ್ರದ GDPಗೆ ಜವಾಬ್ದಾರವಾಗಿತ್ತು.

ಈ ಸಂಸ್ಥೆಯು ಒಳಗಿನ ಉದ್ಯೋಗಿಗಳಿಗೆ ಮುಖ್ಯವಾಗಿ ಅದರ ಕಾರ್ಯನಿರ್ವಾಹಕ ತಂಡಕ್ಕೆ ಹೆಚ್ಚಿನ ಬಡ್ತಿ ನೀಡುತ್ತದೆ. ಕಂಪನಿಯು ಹೊರಗಿನ CEOಗಳನ್ನು ನೇಮಿಸಿಕೊಳ್ಳುವ ಕ್ರಮವನ್ನು ಹೊಂದಿಲ್ಲ. ಪಾಲ್ ಒಟೆಲ್ಲಿನಿಯು CEO ಸ್ಥಾನವನ್ನು ಪಡೆಯುವಾಗ 30-ವರ್ಷ ಕಂಪನಿಯ ಅನುಭವವನ್ನು ಹೊಂದಿದ್ದರು. ಅವರ ಎಲ್ಲಾ ಉನ್ನತ ಪ್ರತಿನಿಧಿಗಳು ಕಂಪನಿಯಲ್ಲಿ ಹಲವಾರು ವರ್ಷಗಳನ್ನು ಕಳೆದ ನಂತರ ಸ್ಥಾನದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದರು. ಹೆಚ್ಚಿನ ಸಂದರ್ಭಗಳಲ್ಲಿ, ಇಂಟೆಲ್‌ನ ಪ್ರಮುಖ ಕಾರ್ಯನಿರ್ವಾಹಕರು ಅವರ ಸಂಪೂರ್ಣ ವೃತ್ತಿಜೀವನವನ್ನು ಸಿಲಿಕಾನ್ ವ್ಯಾಲಿಯ ಅಪರೂಪದ ವಾತಾವರಣದಲ್ಲಿರುವ ಇಂಟೆಲ್‌ನಲ್ಲೇ ಕಳೆದಿದ್ದಾರೆ[ಸೂಕ್ತ ಉಲ್ಲೇಖನ ಬೇಕು]. ಇಂಟೆಲ್‌ನ CEOಗಳು 65 ವರ್ಷವನ್ನು ತಲುಪಿದಾಗ ಖಡ್ಡಾಯವಾಗಿ ನಿವೃತ್ತಿ ಹೊಂದುತ್ತಾರೆ. ಆಂಡಿ ಗ್ರೂವ್ ತಮ್ಮ 62ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದರು ಹಾಗೂ ರಾಬರ್ಟ್ ನಾಯ್ಸ್ ಮತ್ತು ಗೋರ್ಡನ್ ಮೂರ್ ಇಬ್ಬರೂ 58 ವರ್ಷ ವಯಸ್ಸಿನಲ್ಲಿ ನಿವೃತ್ತಿ ಹೊಂದಿದರು. ಗ್ರೂವ್ 2005ರಲ್ಲಿ 69ನೇ ವಯಸ್ಸಿನಲ್ಲಿ ಅಧ್ಯಕ್ಷ ಸ್ಥಾನದಿಂದ ಮತ್ತು ನಿರ್ದೇಶಕರ ಮಂಡಳಿಯ ಸದಸ್ಯತ್ವದಿಂದ ನಿವೃತ್ತಿ ಹೊಂದಿದರು. ಯಾರೂಬ್ಬರೂ ಪ್ರತ್ಯೇಕ ಕಛೇರಿಯನ್ನು ಹೊಂದಿಲ್ಲ; ಪ್ರತಿಯೊಬ್ಬರೂ ಒಟೆಲ್ಲಿನಿಯೂ ಸಹ ಒಂದು ಕಿರುಕೋಣೆಯಲ್ಲಿ ಕುಳಿತುಕೊಳ್ಳುತ್ತಾರೆ. ಉದ್ಯೋಗಿಗಳಲ್ಲಿ ಸಮಾನತೆಯನ್ನು ಉತ್ತೇಜಿಸುವುದಕ್ಕಾಗಿ ಈ ರೀತಿ ಮಾಡಲಾಗಿದೆ. ಆದರೆ ಹೊಸದಾಗಿ ಸೇರ್ಪಡೆಯಾದ ಕೆಲವರಿಗೆ ಈ ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ[ಸೂಕ್ತ ಉಲ್ಲೇಖನ ಬೇಕು]. ಇಂಟೆಲ್ ಒಂದೇ ಈ ನಿಯಮವನ್ನು ಪಾಲಿಸುತ್ತಿಲ್ಲ. ಡೆಲ್ ಕಂಪ್ಯೂಟರ್ಸ್, ಹೆವ್ಲೆಟ್ಟ್-ಪ್ಯಾಕರ್ಡ್ ಮತ್ತು NVIDIA ಸಹ ಅಂತಹುದೇ ಕಛೇರಿ-ಇಲ್ಲದ ನಿಯಮವನ್ನು ಹೊಂದಿವೆ. ಕಂಪನಿಯ ಪ್ರಧಾನ ಕಛೇರಿಯು ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿದೆ ಹಾಗೂ ಇದು ಪ್ರಪಂಚದಾದ್ಯಂತ ಹಲವಾರು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ಯಾಲಿಫೋರ್ನಿಯಾದಿಂದ ಹೊರಗೆ ಈ ಕಂಪನಿಯು ಚೀನಾ, ಕೋಸ್ಟಾ ರಿಕಾ, ಮಲೇಷಿಯಾ, ಇಸ್ರೇಲ್, ಐರ್ಲೆಂಡ್, ಭಾರತ, ರಷ್ಯಾ ಮತ್ತು ವಿಯೆಟ್ನಾಂ ಮೊದಲಾದ ಅಂತಾರಾಷ್ಟ್ರೀಯವಾಗಿ 63 ರಾಷ್ಟ್ರಗಳಲ್ಲಿ ಮತ್ತು ಪ್ರದೇಶಗಳಲ್ಲಿ ತನ್ನ ಕಾರ್ಯಕೇಂದ್ರಗಳನ್ನು ಹೊಂದಿದೆ. U.S.ನಲ್ಲಿ ಇಂಟೆಲ್ ಕ್ಯಾಲಿಫೋರ್ನಿಯಾ, ಕೊಲೊರಾಡೊ, ಮಸ್ಸಾಚ್ಯುಸೆಟ್ಸ್, ಅರಿಜೋನ, ನ್ಯೂಮೆಕ್ಸಿಕೊ, ಆರೆಗನ್, ಟೆಕ್ಸಾಸ್, ವಾಷಿಂಗ್ಟನ್ ಮತ್ತು ಉತಾಹ್ ಮೊದಲಾದ ಪ್ರದೇಶಗಳ ಅಸಂಖ್ಯಾತ ಜನರಿಗೆ ಉದ್ಯೋಗವನ್ನು ನೀಡಿದೆ. ಆರೆಗನ್‌ನಲ್ಲಿ ಇಂಟೆಲ್ ರಾಜ್ಯದ ಅತ್ಯಂತ ದೊಡ್ಡ ಖಾಸಗಿ ಉದ್ಯೋಗ-ಸಂಸ್ಥೆಯಾಗಿದೆ, ಇದು ಮೂಲಭೂತವಾಗಿ ಹಿಲ್ಸ್‌ಬೋರೊದಲ್ಲಿ ಸುಮಾರು 15,000 ಉದ್ಯೋಗಿಗಳನ್ನು ಹೊಂದಿದೆ. ಈ ಕಂಪನಿಯು ನ್ಯೂಮೆಕ್ಸಿಕೊದ ಅತಿ ದೊಡ್ಡ ಕೈಗಾರಿಕಾ ಉದ್ಯೋಗ-ಸಂಸ್ಥೆಯಾಗಿದೆ. ಅರಿಜೋನದಲ್ಲಿ ಇದು ಸುಮಾರು 10,000 ಉದ್ಯೋಗಿಗಳನ್ನು ಹೊಂದಿದೆ. ಅಲ್ಲದೆ ಇಂಟೆಲ್ ಐರ್ಲೆಂಡ್‌ನಲ್ಲಿ ಸುಮಾರು 5,000 ಉದ್ಯೋಗಿಗಳನ್ನು ಹೊಂದಿದ್ದು, ಅಲ್ಲಿಯೂ ಸಹ ಇದು ಅತ್ಯಂತ ದೊಡ್ಡ ಉದ್ಯೋಗ-ಸಂಸ್ಥೆಯಾಗಿದೆ.

ವೈವಿಧ್ಯತೆಯ ಉಪಕ್ರಮ

ಉದ್ಯೋಗಿ ವೈವಿಧ್ಯತೆ ಗುಂಪುಗಳು ಮತ್ತು ಪೂರೈಕೆದಾರ ವೈವಿಧ್ಯತೆ ಯೋಜನೆಗಳನ್ನೂ ಒಳಗೊಂಡಂತೆ ಇಂಟೆಲ್ ಒಂದು ವೈವಿಧ್ಯತೆ ಉಪಕ್ರಮವನ್ನು ಹೊಂದಿದೆ. ಉದ್ಯೋಗಿ ವೈವಿಧ್ಯತೆ ಗುಂಪುಗಳನ್ನು ಹೊಂದಿರುವ ಹೆಚ್ಚಿನ ಕಂಪನಿಗಳಂತೆ ಇದು ಜನಾಂಗ ಮತ್ತು ರಾಷ್ಟ್ರೀಯತೆ ಮಾತ್ರವಲ್ಲದೆ ಲಿಂಗ ಮತ್ತು ಧರ್ಮದ ಆಧಾರದ ಗುಂಪುಗಳನ್ನು ಒಳಗೊಂಡಿದೆ. 1994ರಲ್ಲಿ, ಇಂಟೆಲ್ ಮೊತ್ತಮೊದಲ ಸಂಸ್ಥೆಯ-ಸಲಿಂಗಕಾಮಿ, ಸಲಿಂಗಕಾಮಿನಿ, ಉಭಯಲಿಂಗರತ ಮತ್ತು ಹಿಜಡಾ ಉದ್ಯೋಗಿಗಳ ಗುಂಪೊಂದನ್ನು ಅನುಮೋದಿಸಿತು, ಅಲ್ಲದೆ ಇದು ಮುಸ್ಲಿಂ ಉದ್ಯೋಗಿಗಳ ಗುಂಪು, ಯೆಹೂದಿ ಉದ್ಯೋಗಿಗಳ ಗುಂಪು ಮತ್ತು ಬೈಬಲ್-ಆಧಾರಿತ ಕ್ರಿಶ್ಚಿಯನ್ನರ ಗುಂಪುಗಳನ್ನು ಹೊಂದಿದೆ. ಇಂಟೆಲ್ 2002ರಲ್ಲಿ ಹ್ಯೂಮನ್ ರೈಟ್ಸ್ ಕಾಂಪೇನ್ ಪ್ರಕಟಗೊಳಿಸಿದ ಮೊದಲ ಕಾರ್ಪೊರೇಟ್ ಇಕ್ವಾಲಿಟಿ ಇಂಡೆಕ್ಸ್‌ನಲ್ಲಿ 100% ಶ್ರೇಣೀಕರಣವನ್ನು ಪಡೆಯಿತು. ಇದು ಈ ಶ್ರೇಣೀಕರಣವನ್ನು 2003 ಮತ್ತು 2004ರಲ್ಲೂ ಪಡೆಯಿತು. ಇದಕ್ಕೆ ಹೆಚ್ಚುವರಿಯಾಗಿ, ಕಂಪನಿಯು 2005ರಲ್ಲಿ ವರ್ಕಿಂಗ್ ಮದರ್ ನಿಯತಕಾಲಿಕದಿಂದ ಉದ್ಯೋಗಸ್ಥ ತಾಯಿಯಂದಿರ 100 ಅತ್ಯುತ್ತಮ ಕಂಪನಿಗಳಲ್ಲಿ ಒಂದು ಎಂಬ ಹೆಸರು ಪಡೆಯಿತು.

ಶಾಲೆಯೊಂದಕ್ಕೆ ನೀಡಿದ ಧನಸಹಾಯ

ನ್ಯೂಮೆಕ್ಸಿಕೊದ ರಿಯೊ ರಾಂಚೊದಲ್ಲಿ ಇಂಟೆಲ್ ಒಂದು ಪ್ರಮುಖ ಉದ್ಯೋಗ-ನೀಡುವ-ಸಂಸ್ಥೆಯಾಗಿದೆ. 1997ರಲ್ಲಿ ಸ್ಯಾಂಡೋವಲ್ ಕೌಂಟಿ ಮತ್ತು ಇಂಟೆಲ್ ಕಾರ್ಪೊರೇಶನ್ ನಡುವಿನ ಸಹಪಾಲುಗಾರಿಕೆಯು ರಿಯೊ ರಾಂಚೊ ಪ್ರೌಢ ಶಾಲೆಗೆ ಬಂಡವಾಳ ಒದಗಿಸಿ, ನಿರ್ಮಿಸಿತು.

ಹಣಕಾಸು

ಇಂಟೆಲ್ ಕಾರ್ಪೊರೇಶನ್ 
ಇಂಟೆಲ್ ಸ್ಟಾಕು ದರ, ನವೆಂಬರ್ 1986 – ನವೆಂಬರ್ 2006

ಇಂಟೆಲ್‌ನ ಮಾರುಕಟ್ಟೆ ಬಂಡವಾಳೀಕರಣವು $85.67 ಶತಕೋಟಿಯಾಗಿದೆ (ಮೇ 11, 2009). ಇದು INTC ಚಿಹ್ನಯೊಂದಿಗೆ NASDAQ ಅಲ್ಲಿ ಸಾರ್ವಜನಿಕವಾಗಿ ವ್ಯವಹಾರ ನಡೆಸುತ್ತದೆ. ಈ ಕೆಳಗಿನ ಸೂಚ್ಯಾಂಕಗಳು ಇಂಟೆಲ್‌ನ ಷೇರುಗಳನ್ನು ಒಳಗೊಂಡಿವೆ: ಡೊ ಜೋನ್ಸ್ ಇಂಡಸ್ಟ್ರಿಯಲ್ ಎವರೇಜ್, S&P 500, NASDAQ-100, ರಸ್ಸೆಲ್ 1000 ಇಂಡೆಕ್ಸ್, ರಸ್ಸೆಲ್ 1000 ಗ್ರೋತ್ ಇಂಡೆಕ್ಸ್, SOX (PHLX ಸೆಮಿಕಂಡಕ್ಟರ್ ಸೆಕ್ಟರ್) ಮತ್ತು GSTI ಸಾಫ್ಟ್‌ವೇರ್ ಇಂಡೆಕ್ಸ್. 2008ರ ಜುಲೈ 15ರಂದು, ಇಂಟೆಲ್ Q2 2008ರಲ್ಲಿ ಕಂಪನಿಯ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಆದಾಯವನ್ನು ಗಳಿಸಿದೆ ಎಂದು ಘೋಷಿಸಿತು.

ಜಾಹೀರಾತು ಮತ್ತು ಬ್ರ್ಯಾಂಡ್ ನಿರ್ವಹಣೆ

ಇಂಟೆಲ್ ಅದರ ದೀರ್ಘಕಾಲದ ಇಂಟೆಲ್ ಇನ್‌ಸೈಡ್ ಕಾರ್ಯಾಚರಣೆಯ ನಂತರ ಪ್ರಪಂಚದಲ್ಲೇ ಹೆಚ್ಚು ಗುರುತಿಸಲ್ಪಡುವ ಕಂಪ್ಯೂಟರ್ ಬ್ರ್ಯಾಂಡ್‌ಗಳಲ್ಲಿ ಒಂದೆಂಬ ಹೆಸರು ಪಡೆಯಿತು. 1991ರಲ್ಲಿ ಆರಂಭವಾದ ಈ ಕಾರ್ಯಾಚರಣೆಯನ್ನು ಇಂಟೆಲ್‌ನ ಮಾರುಕಟ್ಟೆ-ನಿರ್ವಾಹಕ ಡೆನ್ನಿಸ್ ಕಾರ್ಟರ್ ರೂಪಿಸಿದರು. ನಂತರದ ವರ್ಷದಲ್ಲಿ ಐದು-ಟಿಪ್ಪಣಿಯ ಪ್ರಾಸಾನುಪ್ರಾಸವನ್ನು(ಜಿಂಗಲ್) ಪರಿಚಯಿಸಲಾಯಿತು. ಇದು ಕಂಪನಿಯ ಹತ್ತನೇ ವಾರ್ಷಿಕೋತ್ಸವದ ಹೊತ್ತಿಗೆ ಪ್ರಪಂಚದಾದ್ಯಂತದ ಸುಮಾರು 130 ರಾಷ್ಟ್ರಗಳಲ್ಲಿ ಕೇಳಲ್ಪಟ್ಟಿತು. 'ಇಂಟೆಲ್ ಇನ್‌ಸೈಡ್ ' ಕಾರ್ಯಾಚರಣೆಯ ಆರಂಭಿಕ ಬ್ರ್ಯಾಂಡಿಂಗ್ ಏಜೆನ್ಸಿಯೆಂದರೆ ಸಾಲ್ಟ್ ಲೇಕ್ ಸಿಟಿಯ ಡ್ಯಾಹ್ಲಿನ್‌ಸ್ಮಿತ್‌ವೈಟ್ ಜಾಹೀರಾತು. ಇಂಟೆಲ್‌ನ ಸ್ವರ್ಲ್ ಲೋಗೊವನ್ನು ಇಂಟೆಲ್‌ನ ಅಧ್ಯಕ್ಷ ಮತ್ತು CEO ಆಂಡಿ ಗ್ರೂವ್‌ನ ನಿರ್ದೇಶನದಡಿಯಲ್ಲಿ ಡ್ಯಾಹ್ಲಿನ್‌ಸ್ಮಿತ್‌ವೈಟ್‌ನ ಕಲಾ ನಿರ್ದೇಶಕ ಸ್ಟೀವ್ ಗ್ರಿಗ್ಗ್ ರಚಿಸಿದರು‌. ಇಂಟೆಲ್ ಇನ್‌ಸೈಡ್ ಜಾಹೀರಾತು ಕಾರ್ಯಾಚರಣೆಯು ಗ್ರಾಹಕ ಕಂಪ್ಯೂಟರ್‌ಗಳಲ್ಲಿ ಇಂಟೆಲ್ ಸಂಸ್ಕಾರಕಗಳ ಸಾರ್ವಜನಿಕ ಬ್ರ್ಯಾಂಡ್ ನಿಷ್ಠೆ ಮತ್ತು ಜಾಗೃತಿಯನ್ನು ತಂದುಕೊಟ್ಟಿತು. ಇಂಟೆಲ್ ಇನ್‌ಸೈಡ್ ಲೋಗೊ ಮತ್ತು ಪ್ರಾಸಾನುಪ್ರಾಸ(ಜಿಂಗಲ್)ವನ್ನು ಬಳಸಿದ ಜಾಹೀರಾತಿಗಾಗಿ ಇಂಟೆಲ್ ಕೆಲವು ಜಾಹೀರಾತುದಾರರ ಖರ್ಚನ್ನು ಪಾವತಿಸಿತು.

ಲೋಗೊಗಳು

ಇಂಟೆಲ್ ಬ್ರ್ಯಾಂಡ್ ಲೋಗೊ
ಮುಖ್ಯ ಲೋಗೊ ದಿನಾಂಕ ಉಪ ಲೋಗೊ ದಿನಾಂಕ ಟಿಪ್ಪಣಿ
ಇಂಟೆಲ್ ಕಾರ್ಪೊರೇಶನ್  1968–2005 ಇಂಟೆಲ್ ಕಾರ್ಪೊರೇಶನ್  1991–2003 ಆರಂಭಿಕ "ಇಂಟೆಲ್ ಇನ್‌ಸೈಡ್" ಲೋಗೊ.
ಚಿತ್ರ:Intelinsidemodified.PNG 2003–2005 ಇಂಟೆಲ್ ಇನ್‌ಸೈಡ್ ಲೋಗೊ ಆಗಿಯೇ ಇದೆ, ಆದರೆ ಆರಂಭಿಕ ಇಂಟೆಲ್ ಲೋಗೊವನ್ನು ಹೋಲುವುದಕ್ಕಾಗಿ ಬದಲಾಗಿ, ಇಂಟೆಲ್ "e" ಅಕ್ಷರವು ಸ್ವಲ್ಪ ಕೆಳಕ್ಕೆ ಹೋಗಿದೆ ಮತ್ತು ಮುದ್ರಾಕ್ಷರಗಳ ಛಾಪು ಬದಲಾಗಿದೆ.
2005–ಇಲ್ಲಿಯವರೆಗೆ ಇಂಟೆಲ್ ಕೋರ್ ಡ್ಯೂ ಬ್ರ್ಯಾಂಡ್ ಲೋಗೊ 2006–2009
ಚಿತ್ರ:Intel Leap ahead.png
ಇಂಟೆಲ್ ಇಂಟೆಲ್ ಇಇನ್‌ಸೈಡ್ ಲೋಗೊವನ್ನು ಬಿಟ್ಟು ಹೊಸ ಲೋಗೊ ಇಂಟೆಲ್ ಮತ್ತು ಲೀಪ್ ಅಹೆಡ್ ಎಂಬ ಸ್ಲೋಗನ್ಅನ್ನು ಬಳಸಿದೆ. ಹೊಸ ಲೋಗೊ ಇಂಟೆಲ್ ಸ್ಪಷ್ಟವಾಗಿ ಇನ್‌ಸೈಡ್ ಲೋಗೊದಿಂದ ಸ್ಫೂರ್ತಿಯನ್ನು ಪಡೆದಿದೆ. ಅದು ಅದರಲ್ಲಿನ ಇನ್‌ಸೈಡ್ ಅನ್ನು ಬಿಟ್ಟು ಕೇವಲ ಇಂಟೆಲ್ಅನ್ನು ಮಾತ್ರ ಬಳಸಿದೆ. ಇದರಲ್ಲಿ ನಿಯೊ ಸ್ಯಾನ್ಸ್ ಇಂಟೆಲ್ ಮುದ್ರಣಾಕ್ಷರ ಛಾಪನ್ನು ಬಳಸಲಾಗಿದೆ.
ಚಿತ್ರ:Intel Inside 2009.png 2009–ಇಂದಿನವರೆಗೆ ಪ್ರಸ್ತುತದ ಇಂಟೆಲ್ ಲೋಗೊ ಇನ್‌ಸೈಡ್ ಟ್ರೇಡ್‌ಮಾರ್ಕ್ಅನ್ನು ಹೊಂದಿದೆ. i3, i5, i7, ಆಟಮ್ ಮತ್ತು ಕ್ಸಿಯಾನ್ ಈ ಲೋಗೊವನ್ನು ಬಳಸುತ್ತವೆ.

2006ರಲ್ಲಿ, ಇಂಟೆಲ್ ವಿವ್(Viiv) ಮಾಧ್ಯಮ ಕೇಂದ್ರ PC ಮತ್ತು ಡೆಸ್ಕ್‌ಟಾಪ್ ಇಂಟೆಲ್ vPro(ವಿಪ್ರೊ) ವ್ಯವಹಾರವನ್ನು ಸೇರಿಸಿಕೊಳ್ಳಲು ಅದರ ಮುಕ್ತ ವಿವರಣೆ ಆಧಾರದ ಪ್ರಚಾರವನ್ನು ಸೆಂಟ್ರಿನೊದಾಚೆಗೆ ವಿಸ್ತರಿಸಿತು. 2006ರ ಜನವರಿಯ ಮಧ್ಯವಾಧಿಯಲ್ಲಿ, ಇಂಟೆಲ್ ಅದರ ಸಂಸ್ಕಾರಕಗಳಿಂದ ದೀರ್ಘಕಾಲದಿಂದಿದ್ದ ಪೆಂಟಿಯಮ್‌ ಹೆಸರನ್ನು ಕೈಬಿಡಲಾಗುತ್ತದೆಂದು ಘೋಷಿಸಿತು. ಪೆಂಟಿಯಮ್‌ ಹೆಸರನ್ನು ಮೊದಲು P5 ಕೋರ್ ಇಂಟೆಲ್ ಸಂಸ್ಕಾರಕಗಳನ್ನು ಸೂಚಿಸಲು ಬಳಸಲಾಗಿತ್ತು (P5 ನಲ್ಲಿ ಪೆಂಟ್ 5ಅನ್ನು ಸೂಚಿಸುತ್ತದೆ) ಹಾಗೂ ಇದು ಸಂಖ್ಯಾ ಶ್ರೇಣಿಯನ್ನು ಟ್ರೇಡ್‌ಮಾರ್ಕ್ ಮಾಡುವುದನ್ನು ತಡೆಗಟ್ಟುವ ನಿಯಮಗಳನ್ನು ಮುರಿಯಿತು. ಆದ್ದರಿಂದ ಪ್ರತಿಸ್ಪರ್ಧಿ ಕಂಪನಿಗಳಿಗೆ ಹಿಂದಿನ 386 ಮತ್ತು 486 ಸಂಸ್ಕಾರಕಗಳನ್ನು ಕರೆದಂತೆ ತಮ್ಮ ಸಂಸ್ಕಾರಕವನ್ನು ಅದೇ ಹೆಸರಿನಿಂದ ಕರೆಯಲು ಸಾಧ್ಯವಾಗಲಿಲ್ಲ. (ಇವೆರಡೂ ಸಂಸ್ಕಾರಕಗಳನ್ನು IBM ಮತ್ತು AMD ತಯಾರಿಸುತ್ತಿದ್ದವು). ಅವು ಮೊದಲಿಗೆ ಮೊಬೈಲ್ ಸಂಸ್ಕಾರಕಗಳಿಂದ ಪೆಂಟಿಯಮ್‌ ಹೆಸರಿನ ಬಳಕೆಯನ್ನು ತಪ್ಪಿಸಿದವು, ಇದನ್ನು ಕೋರ್ ಸೋಲೊ ಮತ್ತು ಕೋರ್ ಡ್ಯೂ ಎಂಬ ಬ್ರ್ಯಾಂಡ್ ಹೆಸರಿನ ಯೊನಾಹ್ ಚಿಪ್‌ಗಳು ಬಿಡುಗಡೆಯಾದ ಸಂದರ್ಭದಲ್ಲಿ ಮಾಡಲಾಯಿತು. ಕೋರ್ 2 ಸಾಲಿನ ಸಂಸ್ಕಾರಕಗಳು ಬಿಡುಗಡೆಗೊಂಡಾಗ ಡೆಸ್ಕ್‌ಟಾಪ್ ಸಂಸ್ಕಾರಕಗಳು ಬದಲಾದವು. 2009ರಲ್ಲಿ ಇಂಟೆಲ್‌ನ ವಕ್ತಾರನೊಬ್ಬನು ಹೀಗೆಂದು ಸೂಚಿಸಿದ್ದಾನೆ - ಒಳ್ಳೆಯದು-ಉತ್ತಮ-ಅತ್ಯುತ್ತಮ ಎಂಬ ಪದಗಳಲ್ಲಿ ಹೇಳುವುದಾದರೆ, ಕಂಪನಿಯು ಪೂರೈಸುವುದರಲ್ಲಿ ಸೆಲೆರಾನ್ ಒಳ್ಳೆಯದು, ಪೆಂಟಿಯಮ್‌ ಉತ್ತಮವಾದುದು ಮತ್ತು ಇಂಟೆಲ್ ಕೋರ್ ಸಮೂಹವು ಅತ್ಯುತ್ತಮವಾದುದಾಗಿದೆ. 2008ರಲ್ಲಿ ಇಂಟೆಲ್ ಅದರ ಇಂಟೆಲ್ ಇನ್‌ಸೈಡ್‌ನ ಮಹತ್ವವನ್ನು ಸಾಂಪ್ರದಾಯಿಕ ದೂರದರ್ಶನ ಮತ್ತು ಮುದ್ರಣದಂತಹ ಮಾಧ್ಯಮದಿಂದ ಅಂತರಜಾಲದಂತಹ ಹೊಸ ಮಾಧ್ಯಮಕ್ಕೆ ಬದಲಾಯಿಸುವ ಯೋಜನೆ ಮಾಡಿತು. ಇಂಟೆಲ್ ಅದರ ಸಹಕಾರ-ಸಂಸ್ಥೆ ಯೋಜನೆಯಲ್ಲಿ ಕಂಪನಿಗಳಿಗೆ ಒದಗಿಸಿದ ಹಣದಲ್ಲಿ ಕನಿಷ್ಠ 35%ನಷ್ಟು ಆನ್‌ಲೈನ್ ಮಾರುಕಟ್ಟೆಗೆ ಉಪಯೋಗವಾಗಬೇಕೆಂದು ಬಯಸುತ್ತದೆ. ಕೆಲವು ಕಲಾವಿದರು ಇಂಟೆಲ್ ಬ್ರ್ಯಾಂಡ್ ಬೆಳವಣಿಗೆಯನ್ನು ತಮ್ಮ ಕೆಲಸಗಳಲ್ಲಿ ಸೇರಿಸಿಕೊಂಡಿದ್ದಾರೆ. ಉದಾಹರಣೆಗಾಗಿ, ಎವಿಲ್ ಇನ್‌ಸೈಡ್ ಸ್ಟಿಕ್ಕರ್‌ಗಳು, ಇಂಟೆಲ್ ಇನ್‌ಸೈಡ್, ಈಡಿಯಟ್ ಔಟ್‌ಸೈಡ್‌ ಮತ್ತು ಗೋರಿ-ಕಲ್ಲು R.I.P ಇಂಟೆಲ್ ಇನ್‌ಸೈಡ್ . ಟೆರ್ರಿ ಪ್ರ್ಯಾಟ್‌ಚೆಟ್‌ನ ಡಿಸ್ಕ್‌ವರ್ಲ್ಡ್ ಪುಸ್ತಕಗಳ ಸೂಪರ್‌ಕಂಪ್ಯೂಟರ್ ಹೆಕ್ಸ್‌ನ ಮೇಲಿನ ಸ್ಟಿಕ್ಕರ್ "ಆಂಟ್‌ಹಿಲ್ ಇನ್‌ಸೈಡ್" ಎಂಬುದನ್ನು ಸೂಚಿಸುತ್ತದೆ.

ಶಬ್ಧ ಲೋಗೊ

ಪ್ರಸಿದ್ಧ D♭  D♭  G♭  D♭  A♭ ಜಿಂಗಲ್(ಪ್ರಾಸಾನುಪ್ರಾಸ), ಶಬ್ಧ ಲೋಗೊ, ಟ್ಯಾಗ್(ಹಾಡಿನ ಪಲ್ಲವಿ), ಶ್ರವಣ-ನೆನಪಿನ ಸಾಧನವನ್ನು (MP3 ಫೈಲ್ ಆಫ್ ಸೋನಿಕ್ ಲೋಗೊ Archived 2009-05-10 ವೇಬ್ಯಾಕ್ ಮೆಷಿನ್ ನಲ್ಲಿ.) ಮ್ಯೂಸಿಕ್‌ವರ್ಗ್‌ನ್ಯೂಗನ್ ತಯಾರಿಸಿತು ಮತ್ತು ಅದನ್ನು ಆಸ್ಟ್ರಿಯಾದ 1980ರ ದಶಕದ ಮಾದರಿ ವಾದ್ಯ-ವೃಂದ ಎಡೆಲ್ವೈಸ್‌ನ ವಾಲ್ಟರ್ ವರ್ಜೋವ ಬರೆದರು. ಶಬ್ಧ ಲೋಗೊ ಪೆಂಟಿಯಮ್‌ III, ಪೆಂಟಿಯಮ್‌ 4 ಮತ್ತು ಕೋರ್ ಸಂಸ್ಕಾರಕಗಳು ಮಾರುಕಟ್ಟೆಗೆ ಬಂದುದರಿಂದ ಅನೇಕ ಧ್ವನಿಯ ಬದಲಾವಣೆಗೆ ಒಳಗಾಯಿತು, ಆದರೂ ಅದೇ ಜಿಂಗಲ್(ಪ್ರಾಸಾನುಪ್ರಾಸ)ಅನ್ನು ಉಳಿಸಿಕೊಂಡಿದೆ.

ಹೆಸರಿಸುವ ಕಾರ್ಯವಿಧಾನ

2009ರ ಇಂಟೆಲ್‌ನ ವಕ್ತಾರ ಬಿಲ್ ಕ್ಯಾಲ್ಡರ್‌ನ ಪ್ರಕಾರ, ಇಂಟೆಲ್ ಸೆಲೆರಾನ್ ಬ್ರ್ಯಾಂಡ್ಅನ್ನು ಮಾತ್ರ ಹೊಂದಿತ್ತು, ನೆಟ್‌ಬುಕ್ಸ್‌ಗಾಗಿ ಆಟಮ್ ಬ್ರ್ಯಾಂಡ್ ಮತ್ತು ವ್ಯವಹಾರಕ್ಕಾಗಿ vಪ್ರೊ(ವಿಪ್ರೊ) ಬ್ರ್ಯಾಂಡ್ಅನ್ನು ಬಳಸುತ್ತಿತ್ತು. ಮುಂಬರುವ ಸಂಸ್ಕಾರಕಗಳು ಇಂಟೆಲ್ ಕೋರ್ ಬ್ರ್ಯಾಂಡ್ಅನ್ನು ಹೊಂದುತ್ತವೆ, ಆದರೆ ಮಾರುಕಟ್ಟೆಯಲ್ಲಿನ ಅವುಗಳ ವಲಯದ ಆಧಾರದಲ್ಲಿ ಇಂಟೆಲ್ ಕೋರ್ i7 ಅಥವಾ ಕೋರ್ i3 ಎಂಬ ಹೆಸರು ಪಡೆಯುತ್ತವೆ. vಪ್ರೊ ಉತ್ಪನ್ನಗಳು ಇಂಟೆಲ್ ಕೋರ್ i7 vಪ್ರೊ ಸಂಸ್ಕಾರಕ ಅಥವಾ ಇಂಟೆಲ್ ಕೋರ್ i5 vಪ್ರೊ ಸಂಸ್ಕಾರಕ ಹೆಸರನ್ನು ಪಡೆಯುತ್ತವೆ. 2010ರಲ್ಲಿ ಆರಂಭವಾಗಿ "ಸೆಂಟ್ರಿನೊ"ಅನ್ನು ಇಂಟೆಲ್‌ನ ವೈಮ್ಯಾಕ್ಸ್(WiMAX) ಮತ್ತು ವೈ-ಫೈ ತಂತ್ರಜ್ಞಾನಗಳಿಗೆ ಮಾತ್ರ ಬಳಸಲಾಗುತ್ತದೆ; ಇದು ಎಂದಿಗೂ PC ಬ್ರ್ಯಾಂಡ್ ಆಗುವುದಿಲ್ಲ. ಹಳೆಯದನ್ನೂ ಒಳಗೊಂಡಂತೆ ಬದಲಾವಣೆಗೊಂಡ ಹಲವಾರು ಬ್ರ್ಯಾಂಡ್‌ಗಳು ಮಾರುಕಟ್ಟೆಗೆ ಬರುತ್ತವೆ ಎಂದು ಇಂಟೆಲ್ ಸೂಚಿಸುತ್ತದೆ, ಇದು ಯಾವಾಗಲೂ ಕಂಡುಬರುವ ವಿಕಾಸಾತ್ಮಕ ಕ್ರಿಯೆಯಾಗಿದೆ.

IT ಮ್ಯಾನೇಜರ್ 3: ಅನ್‌ಸೀನ್ ಫೋರ್ಸಸ್

IT ಮ್ಯಾನೇಜರ್ III: ಅನ್‌ಸೀನ್ ಫೋರ್ಸಸ್ ಒಂದು ಇಂಟೆಲ್‌ನ ವೆಬ್-ಆಧಾರಿತ IT ಅನುಕರಣ ಗೇಮ್ ಆಗಿದೆ. ಇದರಲ್ಲಿ ನೀವು ಕಂಪನಿಯ IT ವಿಭಾಗವನ್ನು ನಿರ್ವಹಿಸುತ್ತೀರಿ. ಇದರ ಮುಖ್ಯ ಗುರಿಯೆಂದರೆ ಕಂಪನಿಯನ್ನು ಸಣ್ಣ ವ್ಯವಹಾರದಿಂದ ಜಾಗತಿಕ ಉದ್ಯಮಕ್ಕೆ ಬೆಳೆಯುವಂತೆ ಮಾಡಲು ತಂತ್ರಜ್ಞಾನ ಮತ್ತು ಕೌಶಲ್ಯವನ್ನು ಬಳಸಿಕೊಳ್ಳುವುದು.

ಮುಕ್ತ ಮೂಲದ ಬೆಂಬಲ

ಇಂಟೆಲ್ ಮುಕ್ತ ಮೂಲದ ಸಮುದಾಯಗಳಲ್ಲಿ ಗಮನಾರ್ಹ ಸಹಯೋಗವನ್ನು ಹೊಂದಿದೆ. ಉದಾಹರಣೆಗಾಗಿ, 2006ರಲ್ಲಿ ಇಂಟೆಲ್ i965 ಸಮೂಹದ ಚಿಪ್‌ಸೆಟ್‌ಗಳ ಅನುಕಲಿತ ಗ್ರ್ಯಾಫಿಕ್ ಕಾರ್ಡ್‌ಗಳಿಗಾಗಿ MIT-ಅವಕಾಶ-ಪಡೆದ X.org ಚಾಲಕಗಳನ್ನು ಬಿಡುಗಡೆ ಮಾಡಿತು. ಇಂಟೆಲ್ BSD-ಹೊಂದಿಕೊಳ್ಳುವ ಲೈಸೆನ್‌ನಲ್ಲಿ ಲಭ್ಯವಾಗುವ ಕೆಲವು ಜಾಲಕಲ್ಪಿಸುವ ಕಾರ್ಡ್‌ಗಳಿಗಾಗಿ ಪ್ರೀBSD ಚಾಲಕಗಳನ್ನು ಬಿಡುಗಡೆ ಮಾಡಿತು, ಅವು ಓಪನ್BSDಗೂ ಸಂಪರ್ಕ ಕಲ್ಪಿಸುತ್ತವೆ. ಇಂಟೆಲ್ 2009ರ ಎಪ್ರಿಲ್ 23ರವರೆಗೆ ಮೋಬ್ಲಿನ್ ಯೋಜನೆಯನ್ನು ನಿರ್ವಹಿಸಿತು, ನಂತರ ಆ ಯೋಜನೆಯನ್ನು ಲಿನಕ್ಸ್ ಫೌಂಡೇಶನ್‌ಗೆ ವಹಿಸಿಕೊಡಲಾಯಿತು. ಇಂಟೆಲ್ LessWatts.org ಕಾರ್ಯಾಚರಣೆಯನ್ನೂ ನಿರ್ವಹಿಸುತ್ತದೆ. 2005ರಲ್ಲಿ ಇಂಟೆಲ್ ಪ್ರೊ/ವೈರ್‌ಲೆಸ್ 2100, 2200BG/2225BG/2915ABG ಮತ್ತು 3945ABG ಎಂಬ ನಿಸ್ತಂತು ಉತ್ಪನ್ನಗಳು ಬಿಡುಗಡೆಯಾದ ನಂತರ, ಇಂಟೆಲ್ ಫರ್ಮ್‌ವೇರ್‌‌ಗೆ ಉಚಿತ ಪುನರ್ವಿತರಣ ಹಕ್ಕನ್ನು ನೀಡದಿದ್ದುದಕ್ಕಾಗಿ ಟೀಕೆಗೊಳಗಾಯಿತು, ಫರ್ಮ್‌ವೇರ್ಅನ್ನು ನಿಸ್ತಂತು ಉಪಕರಣಗಳು ಕಾರ್ಯನಿರ್ವಹಿಸಲು ಅವುಗಳ ಕಾರ್ಯನಿರ್ವಹಣಾ-ವ್ಯವಸ್ಥೆಯಲ್ಲಿ ಅಳವಡಿಸಿರಬೇಕಾಗಿರುತ್ತದೆ. ಇದರ ಪರಿಣಾಮವಾಗಿ ಇಂಟೆಲ್, ಮುಕ್ತ ಮೂಲ ಸಮುದಾಯಕ್ಕೆ ಸ್ವೀಕಾರಾರ್ಹವಾಗುವ ಆಧಾರದಲ್ಲಿ ಮುಕ್ತ ಕಾರ್ಯನಿರ್ವಹಣಾ-ವ್ಯವಸ್ಥೆಗಳು ಬೈನರಿ ಫರ್ಮ್‌ವೇರ್‌ಗೆ ಅವಕಾಶ ಮಾಡಿಕೊಡುವುದಕ್ಕಾಗಿ ಕಾರ್ಯಾಚರಣೆಗಳ ಪ್ರಮುಖ ಗುರಿಯಾಯಿತು. ಲಿನ್‌ಸ್ಪೈರ್-ಲಿನಕ್ಸ್ ಸಂಸ್ಥಾಪಕ ಮೈಕೆಲ್ ರಾಬರ್ಟ್ಸನ್ ಇಂಟೆಲ್ ಮುಕ್ತ ಮೂಲಕ್ಕೆ ತೆರೆದುಕೊಳ್ಳುವುದರಿಂದ ಉಂಟಾಗುವ ಸಂದಿಗ್ಧ ಪರಿಸ್ಥಿತಿಯ ಬಗ್ಗೆ ಸ್ಥೂಲವಿವರಣೆ ನೀಡಿದರು, ಏಕೆಂದರೆ ಇಂಟೆಲ್ ಅದರ ಅತ್ಯಂತ ದೊಡ್ಡ ಗ್ರಾಹಕ ಮೈಕ್ರೊಸಾಫ್ಟ್ಗೆ ತೊಂದರೆ ನೀಡಲು ಬಯಸುವುದಿಲ್ಲ. ಮುಕ್ತ-ಮೂಲ ಸಮಾಲೋಚನೆಯಲ್ಲಿ ಇಂಟೆಲ್ ಉದ್ಯೋಗಿಯೊಬ್ಬ ಪರಿಸ್ಥಿತಿಯ ಅಪಾರ್ಥ ಕಲ್ಪಿಸುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನಂತರ ಇಂಟೆಲ್ "ಒಂದು ಮುಕ್ತ-ಮೂಲ ವಂಚಕ"ವಾಗಿದೆ ಎಂದು ಓಪನ್BSDಯ ದಿಯೊ ಡಿ ರಾಡ್ಟ್ ಸಹ ದೂರಿದರು. ಪ್ರಮುಖ ಋಣಾತ್ಮಕ ಅಭಿಪ್ರಾಯದ ಹೊರತಾಗಿಯೂ, ಇಂಟೆಲ್ ನಿಸ್ತಂತು ವ್ಯವಾಹರ-ಒಪ್ಪಂದಗಳನ್ನು ಪಡೆದುಕೊಂಡಿತು, ಬೈನರಿ ಫರ್ಮ್‌ವೇರ್ ಈಗಲೂ ಮುಕ್ತ ತಂತ್ರಾಂಶ ನಿಯಮಗಳೊಂದಿಗೆ ಲೈಸೆನ್ಸ್-ಹೊಂದಿಕೆಯನ್ನು ಪಡೆದಿಲ್ಲ.

ಪರಿಸರಕ್ಕೆ ಸಂಬಂಧಿಸಿದ ದಾಖಲೆ/ಮಾಹಿತಿಗಳು

2003ರಲ್ಲಿ ಇಂಟೆಲ್‌ನ ಅನೇಕ ಆಮ್ಲ ಸ್ಕ್ರಬ್ಬರ್‌ಗಳಲ್ಲಿ ಒಂದು 1.4 ಟನ್‌ಗಳಷ್ಟು ಇಂಗಾಲದ ಟೆಟ್ರಾಕ್ಲೋರೈಡ್ಅನ್ನು ಅಂದಾಜುಮಾಡಿತು. ಆದರೆ ಇಂಟೆಲ್ 2003ರಲ್ಲಿ ಇಂಗಾಲದ ಟೆಟ್ರಾಕ್ಲೋರೈಡ್ ಬಿಡುಗಡೆಯಾಗಿಯೇ ಇಲ್ಲವೆಂದು ವರದಿಮಾಡಿದೆ. ನ್ಯೂಮೆಕ್ಸಿಕೊದ ರಿಯೊ ರಾಂಚೊದಲ್ಲಿನ ಇಂಟೆಲ್‌ನ ಕೇಂದ್ರದ ಹತ್ತಿರದಲ್ಲಿ ಒಂದು ಹಳ್ಳಿಯಿದೆ. ಆ ಪ್ರದೇಶದ ಗುಡ್ಡಗಳಿಂದ ತುಂಬಿದ ಎಲ್ಲೆಕಟ್ಟು ಗಾಳಿಗಿಂತ ಭಾರವಾದ ರಾಸಾಯನಿಕ ಅನಿಲಗಳು ಆ ಹಳ್ಳಿಯತೊರೆ ಮತ್ತು ನೀರಾವರಿ ಗುಂಡಿಗಳಾದ್ಯಂತ ಸರಿಯುವಂತೆ ಮಾಡುತ್ತದೆ. ಅಂತಹ ಪರಿಸರದಲ್ಲಿ ರಾಸಾಯನಿಕಗಳ ಬಿಡುಗಡೆಯು ಪ್ರಾಣಿಗಳು ಮತ್ತು ಮಾನವರಲ್ಲಿ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತದೆ. ಆ ಪ್ರದೇಶದಲ್ಲಿ ಸತ್ತ ನಾಯಿಗಳ ಶ್ವಾಸಕೋಶದಲ್ಲಿ ಹೆಚ್ಚಿನ ಪ್ರಮಾಣದ ಟ್ಯಾಲ್ಯುಯಿನ್, ಹೆಕ್ಸೇನ್, ಈಥೈಲ್‌ಬೆಂಜೀನ್ ಕ್ಸೈಲೀನ್ ಐಸೋಮರ್‌ಗಳು ಇದ್ದುದು ಕಂಡುಬಂದಿತು. 1580 ಪೌಂಡ್‌ಗಳಿಗಿಂತಲೂ ಹೆಚ್ಚು VOC 2006ರ ಜೂನ್ ಮತ್ತು ಜುಲೈನಲ್ಲಿ ಬಿಡುಗಡೆಯಾಗಿದೆಯೆಂದು ಕಂಪನಿ ಹೇಳಿದೆ. ಇಂಟೆಲ್‌ನ ಪರಿಸರೀಯ ನಿರ್ವಹಣೆಯು ವಾರ್ಷಿಕವಾಗಿ ಅದರ ಸಾಂಸ್ಥಿಕ ಜವಾಬ್ದಾರಿ ವರದಿಯಲ್ಲಿ ಪ್ರಕಟವಾಗುತ್ತದೆ.

ಧಾರ್ಮಿಕ ವಿವಾದ

ಇಂಟೆಲ್‌ ಇಸ್ರೇಲ್‌ನಲ್ಲಿ ಶನಿವಾರದ ಶಬ್ಬತ್ ದಿನದಂದು ಕಾರ್ಯನಿರ್ವಹಿಸಿದುದಕ್ಕಾಗಿ ಸಾಂಪ್ರದಾಯಿಕ ಯೆಹೂದ್ಯರು ಕಂಪನಿಯ ವಿರುದ್ಧ ಪ್ರತಿಭಟನೆಯನ್ನು ಮಾಡಿದರು. ಇಂಟೆಲ್ ಪ್ರತಿಭಟನೆಗಿಂತ ಮೊದಲು ಬಾಗು-ಮೊನೆಯುಳ್ಳ ತಂತಿಯಿಂದ ಕಛೇರಿಯ ಸುತ್ತ ಬೇಲಿ ಹಾಕಿದರು, ಆದರೆ ಯಾವುದೇ ಹಿಂಸೆ ನಡೆಯಲಿಲ್ಲ. 2009ರ ಡಿಸೆಂಬರ್‌ನ ದಾಖಲೆಯ ಪ್ರಕಾರ, ಇಸ್ರೇಲ್‌ನಲ್ಲಿನ ಇಂಟೆಲ್‌ನಲ್ಲಿ ಪರಿಸ್ಥಿತಿಯು ಸ್ಥಿಮಿತದಲ್ಲಿತ್ತು, ಅದೇ ಕೆಲವು ಉದ್ಯೋಗಿಗಳು ಶಬ್ಬತ್ ದಿನದಂದು ಅಧಿಕಾವಧಿ ಕೆಲಸಮಾಡಿದ್ದರೆಂದು ವರದಿಯಾಗಿದೆ.

ವಯಸ್ಸಿನ ತಾರತಮ್ಯ

ಇಂಟೆಲ್ ಉದ್ಯೋಗಿಗಳನ್ನು ವಜಾಮಾಡುವಾಗ ವಯಸ್ಸಿನ ತಾರತಮ್ಯ ತೋರಿಸುತ್ತದೆಂಬ ದೂರುಗಳನ್ನು ಎದುರಿಸಿತು. ಇಂಟೆಲ್‌ ತಮ್ಮನ್ನು 40 ವರ್ಷ ಮೇಲ್ಪಟ್ಟವರೆಂಬ ಕಾರಣಕ್ಕಾಗಿ ತೆಗೆದುಹಾಕಿದೆ ಎಂದು ಆರೋಪಿಸಿ ಒಂಭತ್ತು ಮಂದಿ ಮಾಜಿ ಉದ್ಯೋಗಿಗಳು ಕಂಪನಿಯ ವಿರುದ್ಧ ಮೊಕದ್ದಮೆಯನ್ನು ಹೂಡಿದರು. FACE ಇಂಟೆಲ್ (ಇಂಟೆಲ್‌ನ ಮಾಜಿ ಮತ್ತು ಪ್ರಸ್ತುತ ಉದ್ಯೋಗಿಗಳು) ಎಂಬ ಗುಂಪೊಂದು ಇಂಟೆಲ್ ವಯಸ್ಸಾದ ಉದ್ಯೋಗಿಗಳನ್ನು ತೆಗೆದುಹಾಕುತ್ತದೆಂದು ದೂರುತ್ತದೆ. ಇಂಟೆಲ್‌ನಿಂದ ತೆಗೆದುಹಾಕಲ್ಪಟ್ಟ 90 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿ 40 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಾಗಿದ್ದಾರೆಂದು FACE ಇಂಟೆಲ್ ಆಪಾದಿಸುತ್ತದೆ. ಅಪ್‌ಸೈಡ್ ನಿಯತಕಾಲಿಕವು ವಯಸ್ಸಿನ ಆಧಾರದಲ್ಲಿ ಉದ್ಯೋಗಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮತ್ತು ಉದ್ಯೋಗಿಗಳನ್ನು ವಜಾಮಾಡುವ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ ಇಂಟೆಲ್ಅನ್ನು ಕೇಳಿತು, ಆದರೆ ಕಂಪನಿಯು ಈ ಮಾಹಿತಿಯನ್ನು ನೀಡಲು ನಿರಾಕರಿಸಿತು. ವಯಸ್ಸು ಇಂಟೆಲ್‌ನ ಉದ್ಯೋಗ ಕಾರ್ಯನೀತಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಇಂಟೆಲ್ ಅಲ್ಲಗಳೆಯಿತು. FACE ಇಂಟೆಲ್ಅನ್ನು 1995ರಲ್ಲಿ ತನ್ನ 47ನೇ ವಯಸ್ಸಿನಲ್ಲಿ ಇಂಟೆಲ್‌ನಿಂದ ತೆಗೆದುಹಾಕಲ್ಪಟ್ಟ ಕೆನ್ ಹ್ಯಾಮಿಡಿ ಸ್ಥಾಪಿಸಿದರು. ಇಂಟೆಲ್‌ನ ಬಗೆಗಿನ ಟೀಕೆಯನ್ನು ಉದ್ಯೋಗಿಗಳಿಗೆ ಹಂಚಲು ಕಂಪನಿಯ ಇಮೇಲ್ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ ಎಂಬುದಕ್ಕಾಗಿ ಹ್ಯಾಮಿಡಿ 1999ರ ನ್ಯಾಯಾಲಯದ ನಿರ್ಣಯದಲ್ಲಿ ನಿರ್ಬಂಧಕ್ಕೊಳಗಾದರು.

ಪೈಪೋಟಿ

1980ರ ದಶಕದಲ್ಲಿ, ಇಂಟೆಲ್ ಪ್ರಪಂಚದಲ್ಲೇ ಪ್ರಮುಖ ಹತ್ತು ಅರೆವಾಹಕಗಳ ಮಾರಾಟಗಾರರಲ್ಲಿ ಒಂದಾಗಿತ್ತು (1987ರಲ್ಲಿ 10ನೇ ಸ್ಥಾನವನ್ನು ಪಡೆಯಿತು). 1991ರಲ್ಲಿ, ಇಂಟೆಲ್ ಆದಾಯದ ಆಧಾರದಲ್ಲಿ ಅತ್ಯಂತ ದೊಡ್ಡ ಚಿಪ್-ತಯಾರಕವಾಯಿತು ಹಾಗೂ ಅಂದಿನಿಂದೀಚೆಗೆ ಅದು ಆ ಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಇತರ ಪ್ರಮುಖ ಅರೆವಾಹಕ-ತಯಾರಕ ಕಂಪನಿಗಳೆಂದರೆ AMD, ಸ್ಯಾಮ್‌ಸಂಗ್, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, ತೋಶಿಬಾ ಮತ್ತು ಎಸ್‌ಟಿಮೈಕ್ರೊಎಲೆಕ್ಟ್ರಾನಿಕ್ಸ್. PC ಚಿಪ್‌ಸೆಟ್‌ಗಳ ತಯಾರಿಕೆಯಲ್ಲಿ ಈ ಕಂಪನಿಯೊಂದಿಗೆ ಪೈಪೋಟಿ ನಡೆಸುವ ಪ್ರತಿಸ್ಪರ್ಧಿಗಳೆಂದರೆ AMD, VIA ಟೆಕ್ನಾಲಜೀಸ್, SiS ಮತ್ತು ಎನ್‌ವಿಡಿಯಾ. ಸಂಪರ್ಕ-ಜಾಲದಲ್ಲಿ ಇಂಟೆಲ್‌ಗಿರುವ ಪ್ರತಿಸ್ಪರ್ಧಿಗಳೆಂದರೆ - ಫ್ರೀಸ್ಕೇಲ್, ಇನ್ಫಿನಿಯಾನ್, ಬ್ರಾಡ್‌ಕಮ್, ಮಾರ್ವೆಲ್ ಟೆಕ್ನಾಲಜಿ ಗ್ರೂಪ್‌ ಮತ್ತು AMCC. ಫ್ಲ್ಯಾಶ್ ಮೆಮರಿಯಲ್ಲಿ ಇದಕ್ಕಿರುವ ಪ್ರತಿಸ್ಪರ್ಧಿ ಕಂಪನಿಗಳೆಂದರೆ - ಸ್ಪ್ಯಾನ್ಷನ್, ಸ್ಯಾಮ್‌ಸಂಗ್, ಕ್ವಿಮೋಂಡ, ತೋಶಿಬಾ, ಎಸ್‌ಟಿಮೈಕ್ರೊಎಲೆಕ್ಟ್ರಾನಿಕ್ಸ್ ಮತ್ತು ಹೈನಿಕ್ಸ್. x86 ಸಂಸ್ಕಾರಕ ಮಾರುಕಟ್ಟೆಯಲ್ಲಿ ಇಂಟೆಲ್‌ಗಿರುವ ಏಕೈಕ ಪ್ರಮುಖ ಪ್ರತಿಸ್ಪರ್ಧಿಯೆಂದರೆ ಅಡ್ವಾನ್ಸ್ಡ್ ಮೈಕ್ರೊ ಡಿವೈಸಸ್ (AMD). ಇದರೊಂದಿಗೆ ಇಂಟೆಲ್ 1976ರಿಂದ ಸಂಪೂರ್ಣ ಕ್ರಾಸ್-ಲೈಸೆನ್ಸಿಂಗ್ ಒಪ್ಪಂದಗಳನ್ನು ಹೊಂದಿದೆ: ಪ್ರತಿಯೊಂದು ಪಾಲುದಾರ ಕಂಪನಿಯು ಸ್ವಲ್ಪ ಸಮಯದ ನಂತರ ಯಾವುದೇ ಶುಲ್ಕವಿಲ್ಲದೆ ಇತರ ಕಂಪನಿಯ ಪೇಟೆಂಟ್ ಪಡೆದ ತಾಂತ್ರಿಕ ನಾವೀನ್ಯಗಳನ್ನು ಬಳಸಿಕೊಳ್ಳಬಹುದು. ಆದರೆ ಈ ಕ್ರಾಸ್-ಲೆಸೆನ್ಸಿಂಗ್ ಒಪ್ಪಂದವು AMD ದಿವಾಳಿತನ ಅಥವಾ ಸ್ವಾಮ್ಯ ಕಳೆದುಕೊಂಡ ಘಟನೆಯಲ್ಲಿ ರದ್ದುಗೊಂಡಿತು. VIA ಮತ್ತು ಟ್ರಾನ್ಸ್‌ಮೆಟಾ ಮೊದಲಾದ ಕೆಲವು ಸಣ್ಣ ಮಟ್ಟದ ಪ್ರತಿಸ್ಪರ್ಧಿ-ಕಂಪನಿಗಳು ಸಣ್ಣ ಕಂಪ್ಯೂಟರ್‌ಗಳು ಮತ್ತು ಸಾಗಿಸಬಹುದಾದ ಸಾಧನಗಳಿಗಾಗಿ ಕಡಿಮೆ-ಸಾಮರ್ಥ್ಯದ x86 ಸಂಸ್ಕಾರಕಗಳನ್ನು ತಯಾರಿಸುತ್ತವೆ.

ದಾವೆಗಳು

ಇಂಟೆಲ್ ಪೈಪೋಟಿಗೆ ಅಡ್ಡಿಪಡಿಸಲು ಕಾನೂನಿನ ಹಕ್ಕುಪ್ರತಿಪಾದನೆ ಮಾಡುತ್ತದೆಂದು ಪ್ರತಿಸ್ಪರ್ಧಿ ಕಂಪನಿಗಳಿಂದ ಹಲವು ಬಾರಿ ಆಪಾದನೆಗೆ ಒಳಗಾಗಿದೆ. ಇಂಟೆಲ್ ತನ್ನ ಬೌದ್ಧಿಕ ಆಸ್ತಿಯ ಮೂಲಕ ಸಾಧನೆಯನ್ನು ಮಾಡುತ್ತಿರುವುದಾಗಿ ಸಮರ್ಥಿಸಿಕೊಳ್ಳುತ್ತದೆ. ಇಂಟೆಲ್ ಅನೇಕ ಕಾನೂನಿನ ದಾವೆಗಳಲ್ಲಿ ಆಪಾದಕವಾಗಿದೆ ಮತ್ತು ಪ್ರತಿವಾದಿಯಾಗಿದೆ. 2005ರ ಸೆಪ್ಟೆಂಬರ್‌ನಲ್ಲಿ, ಇಂಟೆಲ್ AMD ಮೊಕದ್ದಮೆಗೆ ಪ್ರತಿಕ್ರಿಯೆಯನ್ನು ನೀಡಿತು, AMDನ ದೂರುಗಳನ್ನು ಅಲ್ಲಗಳೆದು, ಇಂಟೆಲ್‌ನ ವ್ಯವಹಾರವು ನ್ಯಾಯಯುತವಾದುದೆಂದು ಹೇಳಿತು. ಆಪಾದನೆಯ ನಿರಾಕರಣೆಯೊಂದರಲ್ಲಿ ಇಂಟೆಲ್ AMDಯ ಆಕ್ರಮಣಶಾಲಿ ಕಾರ್ಯತಂತ್ರವನ್ನು ಖಂಡಿಸಿತು ಹಾಗೂ AMD ಬಹುಮುಖ್ಯ ತಯಾರಿಕಾ ಕಾರ್ಯಕ್ಕೆ ಕಡಿಮೆ ಬಂಡವಾಳ ಹೂಡುವುದು ಮತ್ತು ಚಿಪ್ ತಯಾರಕರ ನಿಬಂಧನೆಗಳಿಗೆ ಒಪ್ಪದಿರುವುದು ಮೊದಲಾದ ಅದರ ಸ್ವಂತ ಕೆಟ್ಟ ವ್ಯವಹಾರ ನಿರ್ಧಾರಗಳ ಪರಿಣಾಮವಾಗಿ ಬಹಳ ಹೆಣಗಾಡಿತು ಎಂದು ಹೇಳಿದೆ. ಇಂಟೆಲ್‌ನ ಆರಂಭಿಕ ಪ್ರತಿಕ್ರಿಯೆಯು ಅದು AMD ಒಂದಿಗೆ ರಾಜಿಮಾಡಿಕೊಳ್ಳಲು ಇಷ್ಟವಿಲ್ಲದಿರುವುದನ್ನು ಸೂಚಿಸಿದರಿಂದ ಕಾನೂನು ವಿಶ್ಲೇಷಕರು ಈ ದಾವೆಯು ಹಲವು ವರ್ಷಗಳ ಕಾಲ ಮುಂದುವರೆಯಬಹುದೆಂದು ಅಂದಾಜಿಸಿದರು. 2008ರಲ್ಲಿ ಅಂತಿಮವಾಗಿ ನ್ಯಾಯಾಲಯವು ನಿರ್ಣಯವೊಂದನ್ನು ನೀಡಿತು. ಆದರೆ 2009ರಲ್ಲಿ ಇಂಟೆಲ್ AMDಗೆ $1.25 ಶತಕೋಟಿ ಮೊತ್ತವನ್ನು ನೀಡಿ ಅಂತಿಮವಾಗಿ ಸಮಸ್ಯೆಯನ್ನು ಪರಿಹರಿಸಿಕೊಂಡಿತು (ಕೆಳಗೆ ನೋಡಿ). 2006ರ ಅಕ್ಟೋಬರ್‌ನಲ್ಲಿ ಕಂಪ್ಯೂಟರ್ ವಿನ್ಯಾಸ ಮತ್ತು ಇಂಧನ-ದಕ್ಷತೆ ತಂತ್ರಜ್ಞಾನಗಳ ಮೇಲಿನ ಪೇಟೆಂಟ್ ಅತಿಕ್ರಮಕ್ಕಾಗಿ ಇಂಟೆಲ್‌ನ ವಿರುದ್ಧ ಟ್ರಾನ್ಸ್‌ಮೆಟಾ ಮೊಕದ್ದಮೆಯೊಂದನ್ನು ಹೂಡಿತು. ಇಂಟೆಲ್ ಆರಂಭದಲ್ಲಿ US$150 ದಶಲಕ್ಷ ಮೊತ್ತವನ್ನು ಹಾಗೂ ನಂತರದ ಐದು ವರ್ಷಗಳಲ್ಲಿ ಪ್ರತಿಯೊಂದು ವರ್ಷವೂ US$20 ದಶಲಕ್ಷದಷ್ಟು ಮೊತ್ತವನ್ನು ಪಾವತಿಸಲು ಒಪ್ಪಿಕೊಳ್ಳುವುದರೊಂದಿಗೆ ಈ ಮೊಕದ್ದಮೆಯು 2007ರ ಅಕ್ಟೋಬರ್‌ನಲ್ಲಿ ಕೊನೆಗೊಂಡಿತು. ಎರಡೂ ಕಂಪನಿಗಳು ಪರಸ್ಪರ ವಿರುದ್ಧದ ಮೊಕದ್ದಮೆಗಳನ್ನು ಕೈಬಿಡಲು ನಿರ್ಧರಿಸಿದವು. ಇಂಟೆಲ್ ಮುಂದಿನ 10 ವರ್ಷಗಳ ಕಾಲ ಪ್ರಸ್ತುತ ಮತ್ತು ಭವಿಷ್ಯದ ಪೇಟೆಂಟ್ ಪಡೆದ ಟ್ರಾನ್ಸ್‌ಮೆಟಾ ತಂತ್ರಜ್ಞಾನಗಳನ್ನು ಅದರ ಚಿಪ್‌ಗಳಲ್ಲಿ ಬಳಸಲು ಸಾರ್ವಕಾಲಿಕ-ಪರವಾನಗಿಯನ್ನು ಪಡೆಯಿತು. 2009ರ ನವೆಂಬರ್‌ನಲ್ಲಿ, ನ್ಯೂಯಾರ್ಕ್‌ನ ಪ್ರಧಾನ ವಕೀಲನೊಬ್ಬ ಇಂಟೆಲ್‌ನ ವಿರುದ್ಧ ಒಂದು ನಂಬಿಕೆ-ವಿರೋಧಿ ಮೊಕದ್ದಮೆಯನ್ನು ಹೂಡಿದನು, ಇದರಲ್ಲಿ ಆತ ಕಂಪ್ಯೂಟರ್‌ ಮೈಕ್ರೋಪ್ರೋಸೆಸರ್‌ಗಳ ಮಾರುಕಟ್ಟೆಯಲ್ಲಿ ಪ್ರಾಮುಖ್ಯತೆಯನ್ನು ಪಡೆಯುವುದಕ್ಕಾಗಿ ಕಂಪನಿಯು "ಕಾನೂನು ಬಾಹಿರ ಬೆದರಿಕೆಗಳನ್ನು ನೀಡುತ್ತಿದೆ ಮತ್ತು ಮೋಸದ ಒಳಸಂಚನ್ನು ನಡೆಸುತ್ತಿದೆ" ಎಂದು ದೂರಿದನು. 2009ರ ನವೆಂಬರ್‌ 12ರಂದು, AMD $1.25 ಶತಕೋಟಿ ಮೊತ್ತಕ್ಕೆ ಪ್ರತಿಯಾಗಿ ಇಂಟೆಲ್‌ನ ವಿರುದ್ಧದ ನಂಬಿಕೆ-ವಿರೋಧಿ ಮೊಕದ್ದಮೆಯನ್ನು ಕೈಬಿಡಲು ಒಪ್ಪಿತು. ಎರಡು ಚಿಪ್-ತಯಾರಕರಿಂದ ಪ್ರಕಟವಾದ ಒಂದು ಜಂಟಿ ಮಾಧ್ಯಮ ಪ್ರಕಟಣೆಯು ಹೀಗೆಂದು ಹೇಳುತ್ತದೆ - ಎರಡು ಕಂಪನಿಗಳ ನಡುವಿನ ಸಂಬಂಧವು ಕಷ್ಟಸಾಧ್ಯವಾದರೆ, ಒಪ್ಪಂದವು ಕಾನೂನು ವಿವಾದಗಳನ್ನು ಕೊನೆಗೊಳಿಸುತ್ತದೆ ಮತ್ತು ಕಂಪನಿಗಳು ಅವುಗಳ ಎಲ್ಲಾ ಪ್ರಯತ್ನಗಳನ್ನು ಉತ್ಪನ್ನದ ಹೊಸ ಬದಲಾವಣೆ ಮತ್ತು ಅಭಿವೃದ್ದಿಗಾಗಿ ಕೇಂದ್ರೀಕರಿಸುವಂತೆ ಮಾಡುತ್ತದೆ.

ನಿಯಂತ್ರಕ ಕೇಂದ್ರಗಳಿಂದ ಪೈಪೋಟಿಯ-ವಿರುದ್ಧ ಆಪಾದನೆಗಳು

ಜಪಾನ್‌

2005ರಲ್ಲಿ, ಇಂಟೆಲ್ ಜಪಾನೀಸ್ ಆಂಟಿಮೋನೋಲಜಿ ಆಕ್ಟ್ಅನ್ನು ಉಲ್ಲಂಘಿಸಿದೆಯೆಂದು ಸ್ಥಳೀಯ ಫೇರ್ ಟ್ರೇಡ್ ಕಮಿಷನ್ ಕಂಡುಹಿಡಿಯಿತು. ಈ ನಿಯೋಗವು AMDಯ ವಿರುದ್ಧ ಭೇದ ಕಲ್ಪಿಸಿದ ರಿಯಾಯಿತಿಗಳನ್ನು ರದ್ದುಗೊಳಿಸಬೇಕೆಂದು ಇಂಟೆಲ್‌ಗೆ ಆದೇಶಿಸಿತು. ತೊಂದರೆಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು, ಇಂಟೆಲ್ ಈ ಆದೇಶವನ್ನು ಅನುಸರಿಸಲು ಒಪ್ಪಿಕೊಂಡಿತು.

ಯೂರೋಪ್ ಒಕ್ಕೂಟ

2007ರ ಜುಲೈನಲ್ಲಿ, ಯುರೋಪಿಯನ್ ಕಮಿಷನ್ ಮುಖ್ಯವಾಗಿ AMD ವಿರುದ್ಧದ ಪೈಪೋಟಿ-ನಿರೋಧ ಕಾರ್ಯಗಳಿಗಾಗಿ ಇಂಟೆಲ್ಅನ್ನು ಆಪಾದಿಸಿತು. 2003ರಲ್ಲಿ ಇಂಟೆಲ್ ಎದುರಿಸಿದ ಆಪಾದನೆಗಳೆಂದರೆ - ತಮ್ಮ ಹೆಚ್ಚಿನ ಅಥವಾ ಎಲ್ಲಾ ಚಿಪ್‌ಗಳನ್ನು ಇಂಟೆಲ್‌ನಿಂದ ಖರೀದಿಸುವ ಕಂಪ್ಯೂಟರ್ ತಯಾರಕರಿಗೆ ರಿಯಾಯಿತಿಯ ದರವನ್ನು ನೀಡುತ್ತದೆ, AMD ಚಿಪ್‌ಗಳನ್ನು ಬಳಸಿಕೊಂಡು ತಯಾರಿಸಿದ ಉತ್ಪನ್ನಗಳ ಬಿಡುಗಡೆಯನ್ನು ವಿಳಂಬಗೊಳಿಸಲು ಅಥವಾ ರದ್ದುಗೊಳಿಸಲು ಕಂಪ್ಯೂಟರ್ ತಯಾರಕರಿಗೆ ಪಾವತಿ ಮಾಡುತ್ತದೆ ಹಾಗೂ ಸರ್ಕಾರಕ್ಕೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಚಿಪ್‌ಗಳನ್ನು ಪ್ರಮಾಣಿತ ದರಕ್ಕಿಂತ ಕೆಳಗಿನ ಬೆಲೆಯಲ್ಲಿ ಒದಗಿಸುತ್ತದೆ. ಇಂಟೆಲ್ ಈ ಆಪಾದನೆಗಳನ್ನು ಆಧಾರವಿಲ್ಲದವೆಂದು ಹೇಳಿತು ಮತ್ತು ಬದಲಿಗೆ ಅದರ ಮಾರುಕಟ್ಟೆ ವ್ಯವಹಾರವನ್ನು ಗ್ರಾಹಕ-ಸ್ನೇಹಿ ಎಂಬುದಾಗಿ ನಿರೂಪಿಸಿತು. ಈ ಕಮಿಷನ್ ಬೆಲೆ ಗೊತ್ತುಮಾಡುವ ಮತ್ತು ತಯಾರಿಸುವ-ಬೆಲೆಗಳ ವಿಷಯದಲ್ಲಿನ ಕೆಲವು ನಿಜ ಸಂಗತಿಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂಬುದಾಗಿ ಜನರಲ್ ಕೌನ್ಸೆಲ್ ಬ್ರೂಸ್ ಸೆವೆಲ್ ಪ್ರತಿಕ್ರಿಯಿಸಿದರು. 2008ರ ಫೆಬ್ರವರಿಯಲ್ಲಿ, ಇಂಟೆಲ್ ಮುನಿಚ್‌ನಲ್ಲಿರುವ ಅದರ ಕಛೇರಿಗೆ ಯುರೋಪ್ ಒಕ್ಕೂಟದ ನಿಯಂತ್ರಕ-ಸಂಘಟನೆಗಳು ಅನಿರೀಕ್ಷಿತ ದಾಳಿ ಮಾಡಿದವೆಂದು ಹೇಳಿತು. ಇಂಟೆಲ್ ತನಿಖೆದಾರರೊಂದಿಗೆ ಸಹಕರಿಸುತ್ತಿರುವುದಾಗಿ ವರದಿ ಮಾಡಿತು. ಇದರಲ್ಲಿ ಪೈಪೋಟಿಯನ್ನು ಪ್ರತಿಬಂಧಿಸುವ ಅಪರಾಧವು ಕಂಡುಬಂದಲ್ಲಿ ಇಂಟೆಲ್ ಅದರ ಆದಾಯದ ಸುಮಾರು 10%ನಷ್ಟು ಮೌಲ್ಯವನ್ನು ದಂಡವಾಗಿ ತೆರಬೇಕಾದ ಸಮಸ್ಯೆಯನ್ನು ಎದುರಿಸಿತು. AMD ಅನಂತರ ಈ ಆಪಾದನೆಗಳನ್ನು ಉತ್ತೇಜಿಸುವ ವೆಬ್‌ಸೈಟ್ ಒಂದನ್ನು ಆರಂಭಿಸಿತು. 2008ರ ಜೂನ್‌ನಲ್ಲಿ, EU ಇಂಟೆಲ್‌ನ ವಿರುದ್ಧ ಹೊಸ ಆಪಾದನೆಯನ್ನು ಹೊರಿಸಿತು. 2009ರ ಮೇಯಲ್ಲಿ EU, ಇಂಟೆಲ್ ಪೈಪೋಟಿ-ವಿರುದ್ಧದ ವ್ಯವಹಾರಗಳಲ್ಲಿ ತೊಡಗಿದೆ ಎಂದು ಕಂಡುಹಿಡಿಯಿತು ಮತ್ತು ಅನಂತರ ಇಂಟೆಲ್‌ಗೆ 1.06 ಶತಕೋಟಿ ($1.44 ಶತಕೋಟಿ) ಮೌಲ್ಯದ ದಂಡವನ್ನು ವಿಧಿಸಿತು, ಇದು ಒಂದು ದಾಖಲೆಯಾದ ಮೊತ್ತವಾಗಿದೆ. ತಮ್ಮ ಉತ್ಪನ್ನಗಳಲ್ಲಿ ವ್ಯಾಪಕವಾಗಿ ಇಂಟೆಲ್ ಚಿಪ್‌ಗಳನ್ನು ಬಳಸುವುದಕ್ಕಾಗಿ ಏಸರ್, ಡೆಲ್, HP, ಲೆನೋವೊ ಮತ್ತು NEC ಮೊದಲಾದ ಕಂಪನಿಗಳಿಗೆ ಇಂಟೆಲ್ ಪಾವತಿ ಮಾಡಿದೆ. ಆದ್ದರಿಂದ ಅದು AMDಅನ್ನೂ ಒಳಗೊಂಡಂತೆ ಅನೇಕ ಇತರ ಕಂಪನಿಗಳಿಗೆ ಹಾನಿಯನ್ನುಂಟುಮಾಡಿದೆ. ಇಂಟೆಲ್ ಪ್ರತಿಸ್ಪರ್ಧಿಗಳನ್ನು ಕಂಪ್ಯೂಟರ್ ಚಿಪ್ ಮಾರುಕಟ್ಟೆಯಿಂದ ಹೊರಗಿಡಲು ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಹಾಗೆ ಮಾಡುವಾಗ "ಅದು EUನ ನಂಬಿಕೆ-ವಿರೋಧಿ ನಿಯಮಗಳನ್ನು ಗಂಭೀರವಾಗಿ ಮತ್ತು ಪ್ರಬಲವಾಗಿ ಉಲ್ಲಂಘನೆ ಮಾಡಿದೆ" ಎಂದು ಯುರೋಪಿಯನ್ ಕಮಿಷನ್ ಹೇಳಿದೆ. ದಂಡವನ್ನು ತೆರುವುದರೊಂದಿಗೆ ಇಂಟೆಲ್‌ ಕಮಿಷನ್‌ನಿಂದ ತಕ್ಷಣವೇ ಎಲ್ಲಾ ಕಾನೂನುಬಾಹಿರ ಕಾರ್ಯಗಳನ್ನು ನಿಲ್ಲಿಸಬೇಕೆಂಬ ಆದೇಶವನ್ನು ಪಡೆಯಿತು. ಇಂಟೆಲ್ ಕಮಿಷನ್‌ನ ನಿರ್ಣಯದ ವಿರುದ್ಧ ಅಪೀಲು ಮಾಡಿಕೊಳ್ಳುತ್ತದೆಂದು ಹೇಳಿತು.

ದಕ್ಷಿಣ ಕೊರಿಯಾ

2007ರ ಸೆಪ್ಟೆಂಬರ್‌ನಲ್ಲಿ, ದಕ್ಷಿಣಾ ಕೊರಿಯಾದ ನಿಯಂತ್ರಕ-ಸಂಘಟನೆಗಳು ಪ್ರತಿನಂಬಿಕೆ ಕಾನೂನಿನ ಉಲ್ಲಂಘನೆಗಾಗಿ ಇಂಟೆಲ್ಅನ್ನು ಆಪಾದಿಸಿದವು. 2006ರ ಫೆಬ್ರವರಿಯಲ್ಲಿ ಅಧಿಕಾರಿಗಳು ಇಂಟೆಲ್‌ನ ದಕ್ಷಿಣ ಕೊರಿಯಾದ ಕಛೇರಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿದಾಗ ವಿಚಾರಣೆಗಳು ಆರಂಭವಾದವು. ಯಾವುದೇ ಅಪರಾಧ ಕಂಡುಬಂದಲ್ಲಿ ಕಂಪನಿಯು ಅದರ ವಾರ್ಷಿಕ ಮಾರಾಟದ ಸುಮಾರು 3%ನಷ್ಟು ಮೊತ್ತವನ್ನು ದಂಡವಾಗಿ ತೆರಬೇಕೆಂಬ ಅಪಾಯಕ್ಕೆ ಸಿಲುಕಿತು. 2008ರ ಜೂನ್‌ನಲ್ಲಿ ಫೇರ್ ಟ್ರೇಡ್ ಕಮಿಷನ್, ಇಂಟೆಲ್ ಅದರ ಪ್ರಬಲ ಸ್ಥಾನದ ಅನುಕೂಲವನ್ನು ಪಡೆಯಲು AMDಯಿಂದ ಉತ್ಪನ್ನಗಳನ್ನು ಖರೀದಿಸಬಾರದೆಂಬ ಷರತ್ತಿನಲ್ಲಿ ಕೊರಿಯಾದ ಪ್ರಮುಖ PC ತಯಾರಕರಿಗೆ ಪ್ರೋತ್ಸಾಹ ಧನ ನೀಡಿದುದಕ್ಕಾಗಿ $25.5 ದಶಲಕ್ಷದಷ್ಟು ದಂಡ ತೆರೆಬೇಕೆಂದು ಆದೇಶಿಸಿತು.

ಅಮೆರಿಕಾ ಸಂಯುಕ್ತ ಸಂಸ್ಥಾನ

ನ್ಯೂಯಾರ್ಕ್ 2008ರ ಜನವರಿಯಲ್ಲಿ ಇಂಟೆಲ್ ಅದರ ಮೈಕ್ರೋಪ್ರೋಸೆಸರ್‌ಗಳಿಗೆ ಬೆಲೆ ಗೊತ್ತುಮಾಡುವಲ್ಲಿ ಮತ್ತು ಮಾರಾಟ ಮಾಡುವಲ್ಲಿ ಪ್ರತಿನಂಬಿಕೆ ಕಾನೂನುಗಳನ್ನು ಉಲ್ಲಂಘನೆ ಮಾಡಿದೆಯೇ ಎಂಬುದನ್ನು ಪತ್ತೆಹಚ್ಚುವ ವಿಚಾರಣೆಯೊಂದನ್ನು ಆರಂಭಿಸಿತು. 2008ರ ಜೂನ್‌ನಲ್ಲಿ, ಫೆಡರಲ್ ಟ್ರೇಡ್ ಕಮಿಷನ್ ಸಹ ಇದಕ್ಕೆ ಸಂಬಂಧಿಸಿದಂತೆ ನಂಬಿಕೆ-ದ್ರೋಹವನ್ನು ಕಂಡುಹಿಡಿಯುವ ವಿಚಾರಣೆಯೊಂದನ್ನು ಪ್ರಾರಂಭಿಸಿತು. 2009ರ ಡಿಸೆಂಬರ್‌ನಲ್ಲಿ FTC ಇಂಟೆಲ್‌ನ ವಿರುದ್ಧ 2010ರ ಸೆಪ್ಟೆಂಬರ್‌ನಲ್ಲಿ ಒಂದು ಕಾರ್ಯನಿರ್ವಾಹಕ ಕಾರ್ಯವನ್ನು ಆರಂಭಿಸುತ್ತದೆಂದು ಘೋಷಿಸಿತು. 2009ರ ನವೆಂಬರ್‌ನಲ್ಲಿ ಎರಡು ವರ್ಷಗಳ ವಿಚಾರಣೆಯ ನಂತರ, ನ್ಯೂಯಾರ್ಕ್ ಅಟರ್ನಿ ಜನರಲ್ ಆಂಡ್ರಿವ್ ಕ್ಯೂಮೊ ಲಂಚಗಾರಿಕೆ ಮತ್ತು ದಬ್ಬಾಳಿಕೆಯ ಆರೋಪದಲ್ಲಿ ಇಂಟೆಲ್‌ನ ವಿರುದ್ಧ ದಾವೆಯನ್ನು ಹೂಡಿದರು. ಇಂಟೆಲ್ ಪ್ರತಿಸ್ಪರ್ಧಿ ಕಂಪನಿಗಿಂತ ಹೆಚ್ಚಿನ ಚಿಪ್‌ಗಳನ್ನು ತನ್ನಿಂದ ಖರೀದಿಸುವಂತೆ ಕಂಪ್ಯೂಟರ್ ತಯಾರಕರಿಗೆ ಲಂಚವನ್ನು ನೀಡುತ್ತದೆ ಹಾಗೂ ಕಂಪ್ಯೂಟರ್ ತಯಾರಕರು ಅದರ ಪ್ರತಿಸ್ಪರ್ಧಿ ಕಂಪನಿಯೊಂದಿಗೆ ಹೆಚ್ಚು ನಿಕಟವಾಗಿರುವುದು ಕಂಡುಬಂದರೆ ಈ ಪಾವತಿಗಳನ್ನು ಹಿಂದಕ್ಕೆ ನೀಡುವಂತೆ ಬೆದರಿಕೆ ನೀಡುತ್ತದೆ ಎಂದು ಅವರು ಆರೋಪಿಸಿದರು. ಇಂಟೆಲ್ ಈ ದೂರುಗಳನ್ನು ನಿರಾಕರಿಸಿತು. 2010ರ ಜುಲೈ 22ರಂದು ಡೆಲ್ ಲೆಕ್ಕಾಚಾರದ ಮಾಹಿತಿಯನ್ನು ಹೂಡಿಕೆದಾರರಿಗೆ ಸ್ಪಷ್ಟವಾಗಿ ತಿಳಿಯಪಡಿಸಿಲ್ಲ ಎಂಬ ಆರೋಪದಡಿಯಲ್ಲಿ $100M ಮೌಲ್ಯವನ್ನು ದಂಡವಾಗಿ ಪಾವತಿಸಬೇಕೆಂಬ U.S. ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್‌ನ (SEC) ಷರತ್ತನ್ನು ಒಪ್ಪಿಕೊಂಡಿತು. ನಿರ್ದಿಷ್ಟವಾಗಿ, ಡೆಲ್ ಇಂಟೆಲ್ ಒಂದಿಗೆ ಅಡ್ವಾನ್ಸ್ಡ್ ಮೈಕ್ರೊ ಡಿವೈಸಸ್ ತಯಾರಿಸಿದ ಚಿಪ್‌ಗಳನ್ನು ಬಳಸದಿರುವುದಕ್ಕೆ ಪ್ರತಿಯಾಗಿ ರಿಯಾಯಿತಿಗಳನ್ನು ಪಡೆಯುವ ಒಪ್ಪಂದವನ್ನು ಮಾಡಿಕೊಂಡಿತ್ತು, ಅದಕ್ಕಾಗಿ SEC 2002ರಿಂದ 2006ರವರೆಗೆ ಡೆಲ್‌ಗೆ ದಂಡವನ್ನು ವಿಧಿಸಿತು. ಈ ಪ್ರಮುಖ ರಿಯಾಯಿತಿಗಳ ಬಗ್ಗೆ ಹೂಡಿಕೆದಾರರಿಗೆ ಬಹಿರಂಗಪಡಿಸಲಿಲ್ಲ, ಆದರೆ ಅವನ್ನು ಕಂಪನಿಯ ಹಣಕಾಸಿನ ನಿರ್ವಹಣೆಗೆ ಸಂಬಂಧಿಸಿದ ಹೂಡಿಕೆದಾರರ ನಿರೀಕ್ಷೆಗಳನ್ನು ಸಾಧಿಸಲು ಬಳಸಲಾಗುತ್ತಿತ್ತು; 2007ರ ಮೊದಲಾರ್ಧದಲ್ಲಿ ಅವು 70%ನಷ್ಟು ಡೆಲ್‌ನ ನಿರ್ವಹಣಾ ಆದಾಯಕ್ಕೆ ಸಮನಾಗಿದ್ದವು ಎಂದು SEC ಹೇಳಿದೆ. ಡೆಲ್ ಅಂತಿಮವಾಗಿ 2006ರಲ್ಲಿ AMDಅನ್ನು ಎರಡನೇ ಪೂರೈಕೆದಾರವಾಗಿ ಸ್ವೀಕರಿಸಿತು ಮತ್ತು ಬಳಿಕ ಇಂಟೆಲ್ ಅದರ ರಿಯಾಯಿತಿಗಳನ್ನು ನಿಲ್ಲಿಸಿತು, ಇದರ ಪರಿಣಾಮವಾಗಿ ಡೆಲ್‌ನ ಹಣಕಾಸಿನ ನಿರ್ವಹಣೆಯು ಇಳಿಮುಖವಾಯಿತು.

ಇವನ್ನೂ ಗಮನಿಸಿ

ಟೆಂಪ್ಲೇಟು:Portal box

  • ASCI ರೆಡ್
  • ATI ಗ್ರ್ಯಾಫಿಕ್ಸ್ ಪ್ರಾಸೆಸಿಂಗ್ ಯುನಿಟ್ಸ್‌ನ ಹೋಲಿಕೆ
  • ಎನ್‌ವಿಡಿಯಾ ಗ್ರ್ಯಾಫಿಕ್ಸ್ ಪ್ರಾಸೆಸಿಂಗ್ ಯುನಿಟ್ಸ್‌ನ ಹೋಲಿಕೆ
  • ಸಿರಿಕ್ಸ್
  • ಇಂಜಿನಿಯರಿಂಗ್ ಮಾದರಿ (CPU)
  • ಬಿಲ್ ಗೆಡೆ
  • ಇಂಟೆಲ್ GMA (ಗ್ರ್ಯಾಫಿಕ್ಸ್ ಮೀಡಿಯಾ ಆಕ್ಸಲರೇಟರ್)
  • ಇಂಟೆಲ್ ಮ್ಯೂಸಿಯಂ
  • ಇಂಟೆಲ್ ಸೈನ್ಸ್ ಟ್ಯಾಲೆಂಟ್ ಸರ್ಚ್
  • ಇಂಟೆಲ್ ಸಾಫ್ಟ್‌ವೇರ್ ನೆಟ್ವರ್ಕ್ (ISN)
  • ಜಸ್ಟಿನ್ ರ್ಯಾಟ್ನರ್
  • ಇಂಟೆಲ್ ಕೋರ್‌ಗಳ ಪಟ್ಟಿ
  • ಇಂಟೆಲ್ ಮೈಕ್ರೋಪ್ರೋಸೆಸರ್‌ಗಳ ಪಟ್ಟಿ
  • ವರ್ಷದ ಆಧಾರದಲ್ಲಿ ಅರೆವಾಹಕ ಮಾರಾಟ ಮುಖಂಡರು
  • ವಿಂಟೆಲ್

ಉಲ್ಲೇಖಗಳು

ವಿಡಿಯೋಗಳು

37°23′16.54″N 121°57′48.74″W / 37.3879278°N 121.9635389°W / 37.3879278; -121.9635389

This article uses material from the Wikipedia ಕನ್ನಡ article ಇಂಟೆಲ್ ಕಾರ್ಪೊರೇಶನ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.

Tags:

ಇಂಟೆಲ್ ಕಾರ್ಪೊರೇಶನ್ ಸಂಸ್ಥೆಯ ಇತಿಹಾಸಇಂಟೆಲ್ ಕಾರ್ಪೊರೇಶನ್ ಉತ್ಪನ್ನ ಮತ್ತು ಮಾರುಕಟ್ಟೆ ಇತಿಹಾಸಇಂಟೆಲ್ ಕಾರ್ಪೊರೇಶನ್ ಸಂಸ್ಥೆಯ ವ್ಯವಹಾರಗಳುಇಂಟೆಲ್ ಕಾರ್ಪೊರೇಶನ್ ಪೈಪೋಟಿಇಂಟೆಲ್ ಕಾರ್ಪೊರೇಶನ್ ಇವನ್ನೂ ಗಮನಿಸಿಇಂಟೆಲ್ ಕಾರ್ಪೊರೇಶನ್ ಉಲ್ಲೇಖಗಳುಇಂಟೆಲ್ ಕಾರ್ಪೊರೇಶನ್ ಬಾಹ್ಯ ಕೊಂಡಿಗಳುಇಂಟೆಲ್ ಕಾರ್ಪೊರೇಶನ್ಅಡ್‌ವ್ಯಾನ್‌ಸ್ಟ್ ಮೈಕ್ರೋ ಡಿವೈಸಸ್ಅಮೇರಿಕ ಸಂಯುಕ್ತ ಸಂಸ್ಥಾನಅರೆವಾಹಕಕ್ಯಾಲಿಫೊರ್ನಿಯವ್ಯಾಪಾರ

🔥 Trending searches on Wiki ಕನ್ನಡ:

ತುಳುಹನುಮಾನ್ ಚಾಲೀಸಪಶ್ಚಿಮ ಘಟ್ಟಗಳುವ್ಯಾಸರಾಯರುಕವಿಭಾರತದ ಉಪ ರಾಷ್ಟ್ರಪತಿಮಾಹಿತಿ ತಂತ್ರಜ್ಞಾನರಾಜಧಾನಿಗಳ ಪಟ್ಟಿವ್ಯಾಪಾರತಾಪಮಾನತಂತ್ರಜ್ಞಾನದ ಉಪಯೋಗಗಳುಅಮೃತಧಾರೆ (ಕನ್ನಡ ಧಾರಾವಾಹಿ)ಕೆ.ಎಲ್.ರಾಹುಲ್ಪ್ರಾಥಮಿಕ ಶಿಕ್ಷಣಪಿತ್ತಕೋಶಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಬಳ್ಳಾರಿಕನ್ನಡ ರಂಗಭೂಮಿಲೆಕ್ಕ ಬರಹ (ಬುಕ್ ಕೀಪಿಂಗ್)ಸುಗ್ಗಿ ಕುಣಿತಮಾನವ ಹಕ್ಕುಗಳುನೀತಿ ಆಯೋಗಸಿದ್ದಲಿಂಗಯ್ಯ (ಕವಿ)ಭಾರತದ ಚುನಾವಣಾ ಆಯೋಗಕರಗ (ಹಬ್ಬ)ಬಿ.ಎಫ್. ಸ್ಕಿನ್ನರ್ಗೋವಿಂದ ಪೈದ್ವಿಗು ಸಮಾಸಕವಿರಾಜಮಾರ್ಗಭಾರತದ ಮಾನವ ಹಕ್ಕುಗಳುಸಂದರ್ಶನಅಕ್ಕಮಹಾದೇವಿಚಿಂತಾಮಣಿಚಿಕ್ಕಮಗಳೂರುಜಿಡ್ಡು ಕೃಷ್ಣಮೂರ್ತಿಭತ್ತಅಂತರ್ಜಲಊಳಿಗಮಾನ ಪದ್ಧತಿಬಾದಾಮಿ ಶಾಸನಪ್ರಬಂಧ ರಚನೆಮಾತೃಭಾಷೆವಿಷ್ಣುಕರ್ನಾಟಕ ಸ್ವಾತಂತ್ರ್ಯ ಚಳವಳಿಕರ್ನಾಟಕದ ಅಣೆಕಟ್ಟುಗಳುಕನ್ನಡ ಚಿತ್ರರಂಗಕನ್ನಡ ಕಾಗುಣಿತಅಂಚೆ ವ್ಯವಸ್ಥೆಚಿತ್ರದುರ್ಗ ಜಿಲ್ಲೆಮಲೈ ಮಹದೇಶ್ವರ ಬೆಟ್ಟಗೀತಾ (ನಟಿ)ಹನುಮಂತಮತದಾನ ಯಂತ್ರವಿಜಯ ಕರ್ನಾಟಕರಾಧೆಹೊಂಗೆ ಮರಚಿನ್ನಎಸ್.ಎಲ್. ಭೈರಪ್ಪಒಗಟುಕಂಸಾಳೆಸಂಖ್ಯೆಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುನೀರಾವರಿಗಣೇಶನೀನಾದೆ ನಾ (ಕನ್ನಡ ಧಾರಾವಾಹಿ)ಹಣಭಾರತದ ಪಂಚಾಯತ್ ರಾಜ್ ವ್ಯವಸ್ಥೆಗಾದೆಸಂಚಿ ಹೊನ್ನಮ್ಮಚಿಲ್ಲರೆ ವ್ಯಾಪಾರಉಡುಪಿ ಜಿಲ್ಲೆಮಧ್ವಾಚಾರ್ಯಕೋಟ ಶ್ರೀನಿವಾಸ ಪೂಜಾರಿಸಮುದ್ರಗುಪ್ತತೆಲುಗುಕಲಿಯುಗಭೂತಾರಾಧನೆಎಲೆಕ್ಟ್ರಾನಿಕ್ ಮತದಾನಭಾರತದಲ್ಲಿ ಬಡತನ🡆 More