ವ್ಯಾಪಾರ

ವ್ಯಾಪಾರ (ವ್ಯಾಪಾರಸಂಸ್ಥೆ ಅಥವಾ ಉದ್ಯಮ ಎಂದೂ ಕರೆಯಲಾಗುವ) ಗ್ರಾಹಕರಿಗೆ ಸರಕುಗಳನ್ನು ಮತ್ತು/ಅಥವಾ ಸೇವೆಗಳನ್ನು ಒದಗಿಸಲು ರಚಿಸಲಾದ ಕಾನೂನಿನಿಂದ ಗುರುತಿಸಲ್ಪಟ್ಟ ಒಂದು ಸಂಘೀಯ ವಸ್ತು.

ಒಂದು ವ್ಯಾಪಾರಕ್ಕೆ ಮಾರುಕಟ್ಟೆ ಬೇಕಾಗುತ್ತದೆ. ಗ್ರಾಹಕ ಒಂದು ವ್ಯಾಪಾರದ ಒಂದು ಆವಶ್ಯಕವಾದ ಭಾಗ. ವ್ಯಾಪಾರಗಳು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಗಳಲ್ಲಿ ಅಧಿಕವಾಗಿರುತ್ತವೆ ಮತ್ತು ಹೆಚ್ಚಿನವು ಖಾಸಗಿ ಮಾಲೀಕರ ಕೈಯಲ್ಲಿರುತ್ತವೆ ಮತ್ತು ಲಾಭವನ್ನು ಗಳಿಸಲು ಮತ್ತು ಮಾಲೀಕರ ಸಂಪತ್ತನ್ನು ಹೆಚ್ಚಿಸಲು ರಚಿಸಲ್ಪಟ್ಟಿರುತ್ತವೆ. ವ್ಯಾಪಾರದ ಮಾಲೀಕರು ಮತ್ತು ನಿರ್ವಾಹಕರು, ಕೆಲಸ ಮತ್ತು ಅಪಾಯದ ಒಪ್ಪಿಗೆಯ ಬದಲಾಗಿ ಆದಾಯ ಅಥವಾ ಆರ್ಥಿಕ ಪ್ರತಿಫಲದ ಉತ್ಪಾದನೆ ತಮ್ಮ ಮುಖ್ಯ ಉದ್ದೇಶಗಳಲ್ಲಿ ಒಂದಾಗಿ ಹೊಂದಿರುತ್ತಾರೆ. ಸಹಕಾರಿ ವ್ಯಾಪಾರಗಳು ಮತ್ತು ಸರ್ಕಾರಿ ಸಂಸ್ಥೆಗಳು ಕೆಲವು ಗಮನಾರ್ಹವಾದ ಅಪವಾದಗಳಾಗಿವೆ. ಸಮಾಜವಾದಿ ವ್ಯವಸ್ಥೆಗಳು ಬೃಹದಾಕಾರದ ವ್ಯಾಪಾರಗಳ ಸರ್ಕಾರಿ, ಸಾರ್ವಜನಿಕ ಅಥವಾ ಕಾರ್ಮಿಕ ಒಡೆತನವನ್ನು ಒಳಗೊಂಡಿರುತ್ತವೆ.

ವ್ಯಾಪಾರ
ಅನೇಕ ವ್ಯಾಪಾರಿ ಮಳಿಗೆಗಳಿರುವ ಬೆಂಗಳೂರಿನ ಕಮರ್ಷಿಯಲ್ ಬೀದಿ.

ವ್ಯಾಪಾರ" ಪದದ ವ್ಯುತ್ಪತ್ತಿ

  • "ವ್ಯಾಪಾರ" ಪದದ ವ್ಯುತ್ಪತ್ತಿ, ಒಬ್ಬ ವ್ಯಕ್ತಿ ಅಥವಾ ಸಮಾಜ ಸಮಗ್ರವಾಗಿ ವಾಣಿಜ್ಯದ ದೃಷ್ಟಿಯಿಂದ ಕಾರ್ಯಸಾಧ್ಯವಾದ ಮತ್ತು ಲಾಭಕರ ಕೆಲಸವನ್ನು ಮಾಡುವ, ಕ್ರಿಯಾಶೀಲವಾದ ಸ್ಥಿತಿಗೆ ಸಂಬಂಧಿಸಿದೆ. "ವ್ಯಾಪಾರ" ಪದ, ವ್ಯಾಪ್ತಿಯನ್ನು ಅವಲಂಬಿಸಿ ಕನಿಷ್ಠ ಪಕ್ಷ ಮೂರು ಪ್ರಯೋಗಗಳನ್ನು ಹೊಂದಿದೆ — (ಮೇಲಿನ) ಏಕವಚನದ ಪ್ರಯೋಗ ಒಂದು ನಿರ್ದಿಷ್ಟ ಕಂಪನಿ ಅಥವಾ ಪಾಲಿಕೆಯ ಅರ್ಥದಲ್ಲಿ, ಸಾಮಾನ್ಯೀಕರಿಸಿದ ಪ್ರಯೋಗ ಒಂದು ನಿರ್ದಿಷ್ಟ ಮಾರುಕಟ್ಟೆ ವಲಯ.
  • ಉದಾ. "ಸಂಗೀತ ಉದ್ಯಮ" ಮತ್ತು ಕೃಷಿ ಉದ್ಯಮದಂತಹ ಸಂಯುಕ್ತ ಪ್ರಕಾರಗಳ ಕುರಿತು ಹೇಳಲು, ಅಥವಾ ಅತ್ಯಂತ ವಿಶಾಲವಾದ ಅರ್ಥದಲ್ಲಿ, ಸರಕು ಮತ್ತು ಸೇವೆಗಳ ಪೂರೈಕೆದಾರರ ಸಮುದಾಯದ ಎಲ್ಲ ಕ್ರಿಯೆಯನ್ನು ಒಳಗೊಳ್ಳುವುದು. ಆದರೆ, ವ್ಯಾಪಾರದ ತತ್ತ್ವಶಾಸ್ತ್ರದಲ್ಲಿನ ಎಲ್ಲದರಂತೆ, ವ್ಯಾಪಾರದ ಕರಾರುವಾಕ್ಕಾದ ವ್ಯಾಖ್ಯಾನ ಒಂದು ಚರ್ಚೆಯ ವಿಷಯವಾಗಿದೆ.
  • ವ್ಯಾಪಾರ ಅಧ್ಯಯನಗಳು, ವಿಶಿಷ್ಟ ಸೃಜನಾತ್ಮಕ ಮತ್ತು ಲಾಭದಾಯಕ ಗುರಿಗಳನ್ನು (ಸಾಮಾನ್ಯವಾಗಿ ಲಾಭವನ್ನು ಗಳಿಸಲು) ಸಾಧಿಸಲು ಸಾಮೂಹಿಕ ಉತ್ಪಾದಕತೆ ಪಾಲಿಸಿಕೊಂಡು ಬರಲು ಮನುಷ್ಯರ ನಿರ್ವಹಣೆಯ ವ್ಯಾಸಂಗ, ಹಲವು ಶಾಲೆಗಳಲ್ಲಿ ಒಂದು ತಾತ್ವಿಕ ವಿಷಯವಾಗಿ ಕಲಿಸಲಾಗುತ್ತದೆ.

ಒಡೆತನದ ಮೂಲಭೂತ ಪ್ರಕಾರಗಳು

ವ್ಯಾಪಾರ ಒಡೆತನದ ಪ್ರಕಾರಗಳು ಆಡಳಿತ ವ್ಯಾಪ್ತಿ ಬದಲಾದಂತೆ ಬದಲಾಗುತ್ತವಾದರೂ, ಹಲವು ಸಾಮಾನ್ಯ ಪ್ರಕಾರಗಳಿವೆ:

  1. ಏಕಮಾತ್ರ ಒಡೆತನ: ಏಕಮಾತ್ರ ಒಡೆತನ ಒಬ್ಬನೇ ವ್ಯಕ್ತಿಯಿಂದ ಹೊಂದಲ್ಪಟ್ಟ ವ್ಯಾಪಾರ. ಮಾಲೀಕ ತಾನೇ ಸ್ವಂತವಾಗಿ ನಿರ್ವಹಿಸಬಹುದು ಅಥವಾ ಇತರರನ್ನು ನೇಮಿಸಿಕೊಳ್ಳಬಹುದು. ಮಾಲೀಕ ವ್ಯಾಪಾರ ತಂದುಕೊಂಡ ಸಾಲಗಳ ಸಂಪೂರ್ಣ ಮತ್ತು ಅಪರಿಮಿತ ವೈಯಕ್ತಿಕ ಹೊಣೆಗಾರಿಕೆ ಹೊಂದಿರುತ್ತಾನೆ.
  2. ಪಾಲುದಾರಿಕೆ: ಪಾಲುದಾರಿಕೆ, ಎರಡು ಅಥವಾ ಹೆಚ್ಚು ವ್ಯಕ್ತಿಗಳು ಲಾಭ ಮಾಡುವ ಸಾಮಾನ್ಯ ಧ್ಯೇಯಕ್ಕಾಗಿ ಕೆಲಸ ನಿರ್ವಹಿಸುವ ಒಂದು ವ್ಯಾಪಾರದ ಪ್ರಕಾರ. ಪ್ರತಿ ಪಾಲುದಾರ ಪಾಲುದಾರಿಕೆ ತಂದುಕೊಂಡ ಸಾಲಗಳ ಸಂಪೂರ್ಣ ಮತ್ತು ಅಪರಿಮಿತ ವೈಯಕ್ತಿಕ ಹೊಣೆಗಾರಿಕೆ ಹೊಂದಿರುತ್ತಾನೆ. ಪಾಲುದಾರಿಕೆಗಳ ಮೂರು ವಿಶಿಷ್ಟ ವರ್ಗೀಕರಣಗಳಿವೆ: ಸಾಮಾನ್ಯ ಪಾಲುದಾರಿಕೆ, ಪರಿಮಿತ ಪಾಲುದಾರಿಕೆ, ಮತ್ತು ಪರಿಮಿತ ಹೊಣೆಗಾರಿಕೆಯ ಪಾಲುದಾರಿಕೆ.
  3. ನಿಗಮ: ವ್ಯಾಪಾರ ನಿಗಮ, ತನ್ನ ಸದಸ್ಯರಿಗಿಂತ ಬೇರೆಯಾದ ಪ್ರತ್ಯೇಕ ಕಾನೂನುಬದ್ಧ ವ್ಯಕ್ತಿತ್ವ ಹೊಂದಿದ ಒಂದು ಲಾಭದ ದೃಷ್ಟಿಯುಳ್ಳ ಪರಿಮಿತ ಹೊಣೆಗಾರಿಕೆಯ ವಸ್ತು. ಒಂದು ನಿಗಮ ಅನೇಕ ಷೇರುದಾರರಿಂದ ಸ್ವಾಮಿತ್ವಪಡೆದಿರುತ್ತದೆ ಮತ್ತು ವ್ಯಾಪಾರದ ನಿರ್ವಾಹಕ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಒಂದು ನಿರ್ದೇಶಕ ಮಂಡಲಿಯಿಂದ ಪಾರುಪತ್ಯ ಮಾಡಲ್ಪಡುತ್ತದೆ.
  4. ಸಹಕಾರಿ: "ಸಹಕಾರಿ ಉದ್ಯಮ"ವೆಂದೂ ಅನೇಕ ಸಲ ಕರೆಯಲಾಗುವ, ಸಹಕಾರ ಸಂಸ್ಥೆ ಲಾಭದ ದೃಷ್ಟಿಯುಳ್ಳ ಪರಿಮಿತ ಹೊಣೆಗಾರಿಕೆಯ ವಸ್ತು ಮತ್ತು ಷೇರುದಾರರ ಬದಲು ಸದಸ್ಯರು ನಿರ್ಣಯಿಸುವ ಅಧಿಕಾರ ಹಂಚಿಕೊಳ್ಳುವುದರಿಂದ ಇದು ನಿಗಮಕ್ಕಿಂತ ಬೇರೆ ಯಾಗಿದೆ. ಸಹಕಾರ ಸಂಸ್ಥೆಗಳನ್ನು ವಿಶಿಷ್ಟವಾಗಿ ಗ್ರಾಹಕ ಸಹಕಾರ ಸಂಸ್ಥೆ ಮತ್ತು ಕಾರ್ಮಿಕ ಸಹಕಾರ ಸಂಸ್ಥೆ ಎಂದು ವರ್ಗೀಕರಿಸಲಾಗುತ್ತದೆ. ಆರ್ಥಿಕ ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ಸಹಕಾರ ಸಂಸ್ಥೆಗಳು ಆಧಾರವಾಗಿವೆ. ಪ್ರತಿ ದೇಶದ ಕಾನೂನುಬದ್ಧವಾಗಿ ಮಾನ್ಯಮಾಡಿದ ವ್ಯಾಪಾರ ಪ್ರಕಾರಗಳ ಪಟ್ಟಿಗಾಗಿ ವ್ಯಾಪಾರ ತತ್ತ್ವಗಳ ಪ್ರಕಾರಗಳು ನೋಡಿ.

ವರ್ಗೀಕರಣಗಳು

ಹಲವು ಪ್ರಕಾರಗಳ ವ್ಯಾಪಾರಗಳಿವೆ ಹಾಗಾಗಿ ವ್ಯಾಪಾರಗಳನ್ನು ಹಲವು ರೀತಿಯಿಂದ ವರ್ಗೀಕರಿಸಲಾಗುತ್ತದೆ. ಒಂದು ಅತಿ ಸಾಮಾನ್ಯ ರೀತಿ ಒಂದು ವ್ಯಾಪಾರದ ಪ್ರಾಥಮಿಕ ಲಾಭದಾಯಕ ಕ್ರಿಯೆಗಳ ಮೇಲೆ ಕೇಂದ್ರೀಕರಿಸುತ್ತದೆ:

  • ಉತ್ಪಾದಕರು ಕಚ್ಚಾಸಾಮಗ್ರಿ ಅಥವಾ ಅಂಗ ಭಾಗಗಳಿಂದ ಉತ್ಪನ್ನಗಳನ್ನು ತಯಾರಿಸುತ್ತಾರೆ ಮತ್ತು ಆಮೇಲೆ ಲಾಭಕ್ಕೆ ಮಾರುತ್ತಾರೆ. ಕಾರು ಅಥವಾ ಕೊಳವೆಗಳಂತಹ ಭೌತಿಕ ಸರಕುಗಳನ್ನು ಉತ್ಪಾದಿಸುವ ಕಂಪನಿಗಳನ್ನು ಉತ್ಪಾದಕರೆಂದು ಪರಿಗಣಿಸಲಾಗುತ್ತದೆ.
  • ಸೇವಾ ಉದ್ಯಮಗಳು ಸ್ಪರ್ಶಾತೀತ ಸರಕು ಅಥವಾ ಸೇವೆಗಳನ್ನು ನೀಡುತ್ತವೆ ಮತ್ತು ವಿಶಿಷ್ಟವಾಗಿ ಸರ್ಕಾರ, ಇತರ ವ್ಯಾಪಾರಗಳು ಅಥವಾ ಗ್ರಾಹಕರಿಗೆ ಒದಗಿಸಲಾದ ದುಡಿಮೆ ಅಥವಾ ಇತರ ಸೇವಗಳಿಗೆ ಶುಲ್ಕವಿಧಿಸಿ ಲಾಭವನ್ನು ಗಳಿಸುತ್ತವೆ. ಗೃಹ ಸಿಂಗಾರಕರು, ಸಲಹಾ ವ್ಯಾಪಾರಸಂಸ್ಥೆಗಳು, ಉಪಾಹಾರ ಗೃಹಗಳು ಮತ್ತು ಮನೋರಂಜಕರಂತಹ ಸಂಸ್ಥೆಗಳು ಸೇವಾ ಉದ್ಯಮಗಳಾಗಿವೆ.
  • ಚಿಲ್ಲರೆ ವ್ಯಾಪಾರಿಗಳು ಮತ್ತು ವಿತರಕರು ಉತ್ಪಾದಕರಿಂದ ತಯಾರಿಸಲಾದ ಸರಕುಗಳನ್ನು ತರಿಸಿ ಉದ್ದೇಶಿತ ಗ್ರಾಹಕನಿಗೆ ಕೊಟ್ಟು ಮಧ್ಯವರ್ತಿಗಳಾಗಿ ಕಾರ್ಯಮಾಡುತ್ತಾರೆ ಮತ್ತು ತಾವು ಒದಗಿಸುವ ಮಾರಾಟ ಮತ್ತು ವಿತರಣಾ ಸೇವೆಗಳಿಂದ ಲಾಭ ಗಳಿಸುತ್ತಾರೆ. ಬಹುತೇಕ ಎಲ್ಲ ಗ್ರಾಹಕ-ಉದ್ದೇಶಿತ ಅಂಗಡಿಗಳು ಮತ್ತು ಕ್ಯಾಟಲಾಗು ಕಂಪನಿಗಳು ವಿತರಕರು ಅಥವಾ ಚಿಲ್ಲರೆ ವ್ಯಾಪಾರಿಗಳಾಗಿವೆ. ವಿತರಣಾ ಅಧಿಕಾರ (ಫ಼್ರ್ಯಾಂಚಾಯ್ಜ಼ಿಂಗ್) ನೋಡಿ
  • ಕೃಷಿ ಮತ್ತು ಗಣಿಗಾರಿಕೆ ವ್ಯಾಪಾರಗಳು ಗಿಡ ಅಥವಾ ಖನಿಜಗಳಂತಹ ಕಚ್ಚಾವಸ್ತುಗಳ ಉತ್ಪಾದನೆಗೆ ಸಂಬಂಧಿಸಿವೆ.
  • ಆರ್ಥಿಕ ವ್ಯಾಪಾರಗಳು, ಬಂಡವಾಳ ಹೂಡಿಕೆ ಮತ್ತು ನಿರ್ವಹಣೆ ಮೂಲಕ ಲಾಭ ಗಳಿಸುವ ಬ್ಯಾಂಕು ಮತ್ತು ಇತರ ಕಂಪನಿಗಳನ್ನು ಒಳಗೊಂಡಿವೆ.
  • ಮಾಹಿತಿ ವ್ಯಾಪಾರಗಳು ಮುಖ್ಯವಾಗಿ ಬೌದ್ಧಿಕ ಆಸ್ತಿಯ ಮರುಮಾರಾಟದಿಂದ ಲಾಭ ಗಳಿಸುತ್ತವೆ ಮತ್ತು ಚಲನಚಿತ್ರ ನಿರ್ಮಾಣಶಾಲೆಗಳು, ಪ್ರಕಾಶಕರು ಮತ್ತು ಒಟ್ಟಾರೆ ವ್ಯವಹಾರಗಳ ತಂತ್ರಾಂಶ (ಸಾಫ಼್ಟ್‌ವೇರ್) ಕಂಪನಿಗಳನ್ನು ಒಳಗೊಂಡಿವೆ.
  • ಸೌಲಭ್ಯಗಳು ಶಾಖ, ವಿದ್ಯುಚ್ಛಕ್ತಿ ಅಥವಾ ಚರಂಡಿ ನಿರ್ವಹಣೆಯಂತಹ ಸಾರ್ವಜನಿಕ ಸೇವೆಗಳನ್ನು ಉತ್ಪಾದಿಸುತ್ತವೆ, ಮತ್ತು ಸಾಮಾನ್ಯವಾಗಿ ಸರ್ಕಾರ ಇವುಗಳನ್ನು ಬಾಡಿಗೆಗೆ ಪಡೆದಿರುತ್ತದೆ.
  • ಸ್ಥಿರಾಸ್ತಿ ವ್ಯಾಪಾರಗಳು ಜಮೀನು, ಮನೆ ಮತ್ತು ಕಟ್ಟಡಗಳನ್ನು ಮಾರುವುದು, ಬಾಡಿಗೆ ಕೊಡುವುದು ಮತ್ತು ಅಭಿವೃದ್ಧಿಗೊಳಿಸುವುದರಿಂದ ಲಾಭವನ್ನು ಗಳಿಸುತ್ತವೆ.
  • ಸಾರಿಗೆ ವ್ಯಾಪಾರಗಳು ಸರಕು ಮತ್ತು ಜನರನ್ನು ಒಂದು ನೆಲೆಯಿಂದ ಮತ್ತೊಂದು ನೆಲೆಗೆ ತಲುಪಿಸುತ್ತವೆ ಮತ್ತು ಸಾರಿಗೆ ವೆಚ್ಚಗಳಿಂದ ಲಾಭವನ್ನು ಗಳಿಸುತ್ತವೆ

ವ್ಯಾಪಾರಗಳ ಇತರ ಹಲವು ವಿಭಾಗ ಮತ್ತು ಉಪವಿಭಾಗಗಳಿವೆ. ಉತ್ತರ ಅಮೇರಿಕಾ ಉದ್ಯಮ ವರ್ಗೀಕರಣ ವ್ಯವಸ್ಥೆ (ನಾರ್ತ್ ಅಮೇರಿಕಾ ಇಂಡಸ್ಟ್ರಿ ಕ್ಲಾಸಿಫ಼ಿಕೇಷನ್ ಸಿಸ್ಟಮ್) ಅಥವಾ ಎನ್ಎಆಯ್‌ಸಿಎಸ್, ಉತ್ತರ ಅಮೇರಿಕಾದ ವ್ಯಾಪಾರ ಪ್ರಕಾರಗಳ ವಿಶ್ವಾಸಾರ್ಹ ಪಟ್ಟಿಯೆಂದು ಪರಿಗಣಿಸಲಾಗುತ್ತದೆ. ಎನ್ಎಸಿಇ, ಇದಕ್ಕೆ ಸಮಾನವಾದ ಐರೋಪ್ಯ ಒಕ್ಕೂಟದ (ಯೂರಪಿಯನ್ ಯೂನಿಯನ್) ಪಟ್ಟಿ.

ಸಂಘಟನೆ

ಬಹುತೇಕ ಎಲ್ಲ ವ್ಯಾಪಾರಗಳು ಗಾತ್ರ, ಕಾನೂನು ರಚನೆ ಅಥವಾ ಉದ್ಯಮವನ್ನು ಗಮನಿಸದೆ ಒಂದೇ ತೆರನ ಕಾರ್ಯಗಳನ್ನು ಸಾಧಿಸಲೇಬೇಕು. ಅನೇಕ ಸಲ ಈ ಕಾರ್ಯಗಳನ್ನು ವಿಭಾಗಗಳಲ್ಲಿ ಸಂಘಟಿಸಲಾಗುತ್ತದೆ. ಸಾಮಾನ್ಯವಾದ ವಿಭಾಗಗಳ ಉದಾಹರಣೆಗಳು (ಆದರೆ ಇವಕ್ಕೇ ಸೀಮಿತವಾಗಿಲ್ಲ):

    ಮಾನವ ಸಂಪನ್ಮೂಲಗಳು
    ವಿಶಿಷ್ಟವಾಗಿ ಸಿಬ್ಬಂದಿ ನೇಮಕ, ವಜಾ ಮಾಡುವುದು, ವೇತನದಾರರ ಪಟ್ಟಿ, ಸಿಬ್ಬಂದಿ ಸೌಲಭ್ಯಗಳಿಗೆ ಜವಾಬ್ದಾರರಾಗಿರುತ್ತವೆ.
    ಹಣಕಾಸು
    ಉದ್ಯಮದ ಆರ್ಥಿಕ ಸಂಪನ್ಮೂಲಗಳನ್ನು ನಿರ್ವಹಿಸಲು ಜವಾಬ್ದಾರರಾಗಿರುತ್ತವೆ
        ಆಯವ್ಯಯ ತಯಾರಿಕೆ ಮತ್ತು ಅಂದಾಜು ಮಾಡುವುದು
        ಉದ್ಯಮ, ಸನ್ನಿವೇಶಗಳು ಹೇಗೆ ಆಗಬೇಕೆಂದು ಅಪೇಕ್ಷಿಸುತ್ತದೆಂದು ಯೋಜಿಸುವುದು
        ಹಣ ಮತ್ತು ಕೋಶಾಗಾರ ನಿರ್ವಹಣೆ
        ಉದ್ಯಮಕ್ಕೆ ಆವಶ್ಯಕವಾದಾಗ ಹಣ ಇರುವಂತೆ ಕಾದಿಡುವುದು
        ಪಾವತಿ ಮತ್ತು ಸ್ವೀಕಾರ ಖಾತೆಗಳು
        ಉದ್ಯಮ ಅದು ಕೊಟ್ಟ ಸಾಲಗಳನ್ನು ಸ್ವೀಕರಿಸುವುದು ಮತ್ತು ತೊಗೊಂಡ ಸಾಲಗಳನ್ನು ತೀರಿಸುತ್ತಿದೆ ಎಂದು ನಿಶ್ಚಿತಗೊಳಿಸುವುದು
        ತೆರಿಗೆ ಯೋಜನೆ/ದಾಖಲೆ ಮತ್ತು ವರದಿ ಮಾಡುವುದು
        ಸರ್ಕಾರದ ಪ್ರತಿ ಕರ್ತವ್ಯಗಳನ್ನು ಪೂರೈಸುವುದು
        ಅಪಾಯ ನಿರ್ವಹಣೆ
        ಉದ್ಯಮ ಯಾವುದೇ ಪ್ರತಿಕೂಲತೆಗಳಿಂದಲೂ ಆಶ್ಚರ್ಯಗೊಳ್ಳದಿರುವಂತೆ ನಿಶ್ಚಿತಗೊಳಿಸುವುದು
        ಬಾಹ್ಯ ಮತ್ತು ಆಂತರಿಕ (ನಿರ್ವಹಣೆ) ವರದಿ ಸಲ್ಲಿಕೆ
        ಹಣಕಾಸು ವಿವರಣೆ ಮತ್ತು ಇತರ ಪ್ರಕಾರಗಳ ವಿವರಣೆ ಮೂಲಕ ಬೇಕಾದವರಿಗೆ ಉದ್ಯಮದ ಒಳಗಿನ ದೃಷ್ಟಿಗೋಚರತೆ ಒದಗಿಸುವುದು
    ವ್ಯಾಪಾರ ಮತ್ತು ಮಾರಾಟ
    ಗ್ರಾಹಕನಿಗೆ ವ್ಯಾಪಾರದ ಸರಕು ಅಥವಾ ಸೇವೆಗಳನ್ನು ಮಾರಲು ಮತ್ತು ಗ್ರಾಹಕನೊಂದಿಗಿನ ಸಂಬಂಧಗಳನ್ನು ನಿರ್ವಹಿಸಲು ಜವಾಬ್ದಾರವಾಗಿರುತ್ತದೆ
        ವ್ಯಾಪಾರ
        ವಿಶಿಷ್ಟವಾಗಿ ವ್ಯಾಪಾರದ ಉತ್ಪನ್ನಗಳ ಅಥವಾ ಸೇವೆಗಳಿಗಾಗಿ ಆಸಕ್ತಿಯನ್ನು ಉತ್ತೇಜಿಸಲು ಮತ್ತು ಬೇಡಿಕೆ ಉಂಟುಮಾಡಲು ಮತ್ತು ಮಾರುಕಟ್ಟೆಯಲ್ಲಿ ಅವುಗಳ ಪ್ರತಿ ಅಭಿಪ್ರಾಯ ನಿರ್ಮಾಣ ಮಾಡಲು ಜವಾಬ್ದಾರವಾಗಿರುತ್ತದೆ
        ಮಾರಾಟ
        ಸಂಭವನೀಯ ಖರೀದಿದಾರರನ್ನು ಹುಡುಕುವುದು ಮತ್ತು ವ್ಯಾಪಾರದ ಉತ್ಪನ್ನಗಳು ಅಥವಾ ಸೇವೆಗಳನ್ನು ಖರೀದಿಸಲು ಅವರ ಒಪ್ಪಿಗೆಯನ್ನು (ಕರಾರು ಎಂದು ತಿಳಿಯಲಾಗುವ) ಪಡೆಯುವುದು
    ಕಾರ್ಯಕಾರಿಗಳು
    ಉತ್ಪನ್ನವನ್ನು ತಯಾರಿಸುತ್ತವೆ ಅಥವಾ ಸೇವೆಯನ್ನು ತಲುಪಿಸುತ್ತವೆ
        ಉತ್ಪಾದನೆ
        ಸಂಸ್ಕರಣ ಬೇಕಾಗಿದ್ದರೆ, ಕಚ್ಚಾಸಾಮಗ್ರಿಗಳನ್ನು ವಿತರಣೆ ಮಾಡಬಲ್ಲ ಸರಕುಗಳನ್ನಾಗಿ ತಯಾರಿಸುತ್ತದೆ
        ಗ್ರಾಹಕ ಸೇವೆ
        ಸರಕುಗಳು ಮತ್ತು ಸೇವೆಗಳ ಬಗ್ಗೆ ಸಹಾಯ ಬೇಕಾದರೆ ಗ್ರಾಹಕರಿಗೆ ಸಹಾಯ ಒದಗಿಸುತ್ತದೆ
    ಸಂಗ್ರಹಣೆ
    ವ್ಯಾಪಾರಕ್ಕೆ ಬೇಕಾದ ಸರಕುಗಳು ಮತ್ತು ಸೇವೆಗಳನ್ನು ಪಡೆಯಲು ಜವಾಬ್ದಾರರಾಗಿರುತ್ತದೆ. ಕೆಲವು ವೇಳೆ ಹೀಗೆ ಸಂಘಟಿಸಲಾಗುತ್ತದೆ:
        ಕೌಶಲಯುತ ಅವಯವ ಖರೀದಿ
        ವ್ಯಾಪಾರದ ಆವಶ್ಯಕತೆಗಳನ್ನು ನಿರ್ಣಯಿಸಿ ವ್ಯಾಪಾರಕ್ಕೆ ಬೇಕಾದ ಕಚ್ಚಾಸಾಮಗ್ರಿಗಳು ಮತ್ತು ಸೇವೆಗಳನ್ನು ಸಂಪಾದಿಸಲು ಯೋಜಿಸುತ್ತದೆ
        ಖರೀದಿ
        ಖರೀದಿ ಕೋರಿಕೆಗಳು ಮತ್ತು ಸಂಬಂಧಿತ ವಹಿವಾಟುಗಳನ್ನು ಸಂಸ್ಕರಿಸುತ್ತದೆ
    ಸಂಶೋಧನೆ ಮತ್ತು ಅಭಿವೃದ್ಧಿ
    ಹೊಸ ಉತ್ಪನ್ನಗಳನ್ನು ನಿರ್ಮಿಸಲು ಪರೀಕ್ಷೆ ಮಾಡುತ್ತದೆ ಮತ್ತು ಅವುಗಳ ಕಾರ್ಯಸಾಧ್ಯತೆ ನಿರ್ಧರಿಸುತ್ತದೆ (ಉದಾ. ಮಾರ್ಗದರ್ಶಕ ಸ್ಥಾವರಗಳು)
    ಮಾಹಿತಿ ತಂತ್ರಜ್ಞಾನ
    ವ್ಯಾಪಾರದ ಗಣಕಯಂತ್ರ ಮತ್ತು ದತ್ತಾಂಶ ಸ್ವತ್ತುಗಳನ್ನು ನಿರ್ವಹಿಸುತ್ತದೆ
    ಸಂಪರ್ಕಗಳು/ಸಾರ್ವಜನಿಕ ಸಂಬಂಧ
    ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಜವಾಬ್ದಾರರಾಗಿರುತ್ತದೆ
    ಆಡಳಿತ
    (ಬೆರಳಚ್ಚು, ಅರ ದಂತಹ) ಇತರ ವಿಭಾಗಗಳಿಗೆ ಆಡಳಿತ ಬೆಂಬಲ ಒದಗಿಸುತ್ತದೆ
    ಆಂತರಿಕ ಲೆಕ್ಕಪರಿಶೋಧನೆ
    ವಿಶಿಷ್ಟವಾಗಿ ಇತರ ವಿಭಾಗಗಳ ಸರಿಯಾದ ಕಾರ್ಯನಿರ್ವಹಣೆ ಬಗ್ಗೆ ವರದಿ ನೀಡಿ ನಿರ್ದೇಶಕ ಮಂಡಲಿಗೆ ಜವಾಬ್ದಾರವಾದ ಒಂದು ಸ್ವತಂತ್ರ ನಿಯಂತ್ರಣ ಕ್ರಿಯೆ

ನಿರ್ವಹಣೆ ಕೆಲವು ಸಲ ಒಂದು "ವಿಭಾಗ"ವೆಂದು ಪಟ್ಟಿ ಮಾಡಲಾಗುತ್ತದಾದರೂ ವಿಶಿಷ್ಟವಾಗಿ ಅವುಗಳ ಕಾರ್ಯಾತ್ಮಕ ಪಾತ್ರ ಗಮನಿಸದೆ ವ್ಯಾಪಾರದೊಳಗೆ ನಾಯಕತ್ವದ ಉಚ್ಚ ದರ್ಜೆಯನ್ನು ನಿರ್ದೇಶಿಸುತ್ತದೆ.

ನಿರ್ವಹಣೆ

ಸಮರ್ಥ ಮತ್ತು ಪರಿಣಾಮಕಾರಿ ವ್ಯಾಪಾರದ ಕ್ರಿಯೆಯ ಅಧ್ಯಯನ ನಿರ್ವಹಣೆಯೆಂದು ಕರೆಯಲಾಗುತ್ತದೆ. ಹಣಕಾಸು ನಿರ್ವಹಣೆ, ವ್ಯಾಪಾರ ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ, ಕೌಶಲಯುತ ನಿರ್ವಹಣೆ, ಉತ್ಪಾದನಾ ನಿರ್ವಹಣೆ, ಸೇವಾ ನಿರ್ವಹಣೆ, ಮಾಹಿತಿ ತಂತ್ರಜ್ಞಾನ ನಿರ್ವಹಣೆ, ಮತ್ತು ವ್ಯಾಪಾರ ಪ್ರಜ್ಞೆ ನಿರ್ವಹಣೆಯ ಪ್ರಮುಖ ವಿಭಾಗಗಳು.

ಸರಕಾರಿ ನಿಯಂತ್ರಣ

ಬಹುತೇಕ ಕಾನೂನುವ್ಯಾಪ್ತಿಗಳು ಒಂದು ವ್ಯಾಪಾರ ಪಡೆದುಕೊಳ್ಳಬಹುದಾದ ಒಡೆತನದ ಪ್ರಕಾರಗಳನ್ನು ನಿಖರವಾಗಿ ಹೆಸರಿಸಿ ಪ್ರತಿ ಪ್ರಕಾರಕ್ಕೆ ವಾಣಿಜ್ಯ ಕಾನೂನಿನ ಒಂದು ಭಾಗವನ್ನು ಸೃಷ್ಟಿಸುತ್ತವೆ.

ವ್ಯಾಪಾರವನ್ನು ಸಂಘಟಿಸುವುದು

ಸಾಮಾನ್ಯವಾಗಿ ಒಂದು ವ್ಯಾಪಾರ ಹೇಗೆ ಸಂಘಟಿತವಾಗುತ್ತದೆಂಬುದರ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳು:

  1. ವ್ಯಾಪಾರದ ಗಾತ್ರ ಮತ್ತು ವ್ಯಾಪ್ತಿ, ಮತ್ತು ಅದರ ಅಪೇಕ್ಷಿತ ನಿರ್ವಹಣೆ ಮತ್ತು ಒಡೆತನ. ಸಾಮಾನ್ಯವಾಗಿ ಒಂದು ಚಿಕ್ಕ ಉದ್ಯಮ ಹೆಚ್ಚು ಹೊಂದಾಣಿಕೆ ಉಳ್ಳದ್ದಾಗಿರುತ್ತದೆ, ಹಾಗೆ ದೊಡ್ಡ ಉದ್ಯಮಗಳು, ಅಥವಾ ವಿಸ್ತಾರವಾದ ಒಡೆತನ ಅಥವಾ ಹೆಚ್ಚು ವಿಧ್ಯುಕ್ತ ರಚನೆಗಳುಳ್ಳವು ,ಸಾಮಾನ್ಯವಾಗಿ ಪಾಲುದಾರಿಕೆಗಳಾಗಿ ಅಥವಾ (ಹೆಚ್ಚು ಸಾಮಾನ್ಯವಾಗಿ) ನಿಗಮವಾಗಿ ಸಂಘಟಿತವಾಗುವ ಪ್ರವೃತ್ತಿ ಹೊಂದಿರುತ್ತವೆ. ಜೊತೆಗೆ ಒಂದು ಬಂಡವಾಳ ಪತ್ರದ ಪೇಟೆಯಲ್ಲಿ ಹಣ ಸಂಗ್ರಹಿಸುವ ಅಥವಾ ವಿಶಾಲ ವ್ಯಾಪ್ತಿಯ ಜನರಿಂದ ಸ್ವಾಮಿತ್ವಪಡೆಯುವ ಅಪೇಕ್ಷೆಯುಳ್ಳ ಒಂದು ವ್ಯಾಪಾರ ಅನೇಕಸಲ ಒಂದು ನಿರ್ದಿಷ್ಟ ಕಾನೂನುಬದ್ಧ ಸ್ವರೂಪವನ್ನು ಅಳವಡಿಸಿಕೊಳ್ಳುವುದು ಆವಶ್ಯಕವಾಗುತ್ತದೆ.
  2. ಕ್ಷೇತ್ರ ಮತ್ತು ದೇಶ. ಖಾಸಗಿ ಲಾಭ ಗಳಿಸುವ ವ್ಯಾಪಾರಗಳು ಸರಕಾರಿ ಒಡೆತನದ ಸಂಸ್ಥೆಗಳಿಗಿಂತ ಭಿನ್ನವಾಗಿವೆ. ಕೆಲವು ದೇಶಗಳಲ್ಲಿ, ನಿರ್ದಿಷ್ಟ ವ್ಯಾಪಾರಗಳು ಕಾನೂನುಬದ್ಧವಾಗಿ ನಿರ್ದಿಷ್ಟ ರೀತಿಗಳಲ್ಲಿ ಸಂಘಟಿತವಾಗಬೇಕಾಗಿ ನಿರ್ಬಂಧಿತವಾಗಿರುತ್ತವೆ.
  3. ಪರಿಮಿತ ಹೊಣೆಗಾರಿಕೆ. ನಿಗಮಗಳು, ಪರಿಮಿತ ಹೊಣೆಗಾರಿಕೆ ಪಾಲುದಾರಿಕೆಗಳು, ಮತ್ತು ಇತರ ನಿರ್ದಿಷ್ಟ ಪ್ರಕಾರದ ವ್ಯಾಪಾರ ಸಂಸ್ಥೆಗಳು ವ್ಯಾಪಾರವನ್ನು ನಿರ್ದಿಷ್ಟ ಕಾನೂನು ರಕ್ಷಣೆಗಳುಳ್ಳ ಒಂದು ಪ್ರತ್ಯೇಕ ಕಾನೂನು ಘಟಕವಾಗಿ ವ್ಯಾಪಾರ ಮಾಡುವುದರ ಮೂಲಕ ತಮ್ಮ ಮಾಲೀಕರನ್ನು ವ್ಯಾಪಾರ ವೈಫಲ್ಯದಿಂದ ರಕ್ಷಿಸುತ್ತವೆ. ತದ್ವಿರುದ್ಧವಾಗಿ, ಅಸಂಘಟಿತ ವ್ಯಾಪಾರಗಳು ಅಥವಾ ಸ್ವಂತವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಸಾಮಾನ್ಯವಾಗಿ ಅಷ್ಟು ರಕ್ಷಿತವಾಗಿರುವುದಿಲ್ಲ.
  4. ತೆರಿಗೆ ಅನುಕೂಲಗಳು. ಭಿನ್ನ ರಚನೆಗಳನ್ನು ತೆರಿಗೆ ಕಾನೂನಿನಲ್ಲಿ ಭಿನ್ನವಾಗಿ ಕಾಣಲಾಗುತ್ತದೆ, ಮತ್ತು ಈ ಕಾರಣಕ್ಕಾಗಿ ಅನುಕೂಲಗಳನ್ನು ಹೊಂದಿರಬಹುದು.
  5. ಪ್ರಕಟಣೆ ಮತ್ತು ಅನುವರ್ತನೆ ಅಗತ್ಯಗಳು. ವಿಭಿನ್ನ ವ್ಯಾಪಾರ ರಚನೆಗಳು ಹೆಚ್ಚು ಅಥವಾ ಕಡಿಮೆ ಮಾಹಿತಿಯನ್ನು ಸಾರ್ವಜನಿಕ ಮಾಡುವುದು ಆವಶ್ಯಕವಿರಬಹುದು (ಅಥವಾ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡುವುದು), ಮತ್ತು ವಿಭಿನ್ನ ನಿಯಮಗಳು ಮತ್ತು ನಿಬಂಧನೆಗಳನ್ನು ಅನುವರ್ತಿಸುವಂತೆ ನಿರ್ಬಂಧಿತವಾಗಿರಬಹುದು.
  • ಹಲವು ವ್ಯಾಪಾರಗಳು ಒಂದು ನಿಗಮ, ಪರಿಮಿತ ಪಾಲುದಾರಿಕೆ ಅಥವಾ ಪರಿಮಿತ ಹೊಣೆಗಾರಿಕೆ ಕಂಪನಿಗಳಂತಹ ಒಂದು ಪ್ರತ್ಯೇಕ ಘಟಕದ ಮೂಲಕ ಕಾರ್ಯ ನಿರ್ವಹಿಸುತ್ತವೆ. ಬಹುತೇಕ ಕಾನೂನುವ್ಯಾಪ್ತಿಗಳು ಸಂಬಂಧಿತ ವಿದೇಶಾಂಗ ಮಂತ್ರಿ ಅಥವಾ ಸಮಾನ ವ್ಯಕ್ತಿಗಳಿಗೆ ನಿರ್ದಿಷ್ಟ ಸನ್ನದು ಕಾಗದ ಪತ್ರಗಳನ್ನು ದಾಖಲು ಮಾಡಿ ಮತ್ತು ಇತರ ಅಸ್ತಿತ್ವದಲ್ಲಿರುವ ನಿರ್ದಿಷ್ಟ ಬಾಧ್ಯತೆಗಳನ್ನು ನೆರವೇರಿಸಿ ಅಂತಹ ಒಂದು ಘಟಕವನ್ನು ಸಂಘಟಿಸಲು ಜನರಿಗೆ ಅವಕಾಶ ನೀಡುತ್ತವೆ.
  • ಷೇರುದಾರರು, ಪರಿಮಿತ ಪಾಲುದಾರರು, ಅಥವಾ ಸದಸ್ಯರ ಸಂಬಂಧಗಳು ಮತ್ತು ಕಾನೂನು ಹಕ್ಕುಗಳು ಭಾಗಶಃ ಸನ್ನದು ಕಾಗದ ಪತ್ರಗಳಿಂದ ಮತ್ತು ಭಾಗಶಃ ಘಟಕ ಸಂಘಟಿತವಾಗಿರುವ ಕಾನೂನುವ್ಯಾಪ್ತಿಯ ಕಾನೂನಿನಿಂದ ನಿರ್ಣಯಿಸಲ್ಪಡುತ್ತವೆ. ಸಾಮಾನ್ಯ ವಾಗಿ ಹೇಳುವುದಾದರೆ, ಒಂದು ನಿಗಮದಲ್ಲಿನ ಷೇರುದಾರರು, ಪರಿಮಿತ ಪಾಲುದಾರಿಕೆಯಲ್ಲಿನ ಪರಿಮಿತ ಪಾಲುದಾರರು, ಮತ್ತು ಪರಿಮಿತ ಹೊಣೆಗಾರಿಕೆ ಕಂಪನಿಯಲ್ಲಿನ ಸದಸ್ಯರು, ಕಾನೂನುಬದ್ಧವಾಗಿ ಒಂದು ಪ್ರತ್ಯೇಕ "ವ್ಯಕ್ತಿ"ಯೆಂದು ಕಾಣಲಾಗುವ ಘಟಕದ ಸಾಲಗಳು ಮತ್ತು ಬಾಧ್ಯತೆಗಳ ವೈಯಕ್ತಿಕ ಹೊಣೆಗಾರಿಕೆಯಿಂದ ರಕ್ಷಿತರಾಗಿರುತ್ತಾರೆ.
  • ಇದರ ಅರ್ಥ, ದುರ್ವರ್ತನೆ ಇಲ್ಲದಿದ್ದರೆ ಮತ್ತು ವ್ಯಾಪಾರ ಸಫಲವಾಗದಿದ್ದರೆ, ಮಾಲೀಕನ ಸ್ವಂತ ಸ್ವತ್ತುಗಳು ಕಾನೂನಿನಲ್ಲಿ ಬಲವಾಗಿ ರಕ್ಷಿತವಾಗಿರುತ್ತವೆ. ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಒಂದು ವ್ಯಾಪಾರಕ್ಕೆ ಒಟ್ಟಾಗಿ ಒಡೆಯರಾಗಿದ್ದರೂ ಒಂದು ಹೆಚ್ಚು ವಿಶಿಷ್ಟ ಸ್ವರೂಪದ ಸಾಧನ ವನ್ನು ಸಂಘಟಿಸುವಲ್ಲಿ ವಿಫಲರಾದಾಗ, ಆ ವ್ಯಾಪಾರವನ್ನು ಸಾಮಾನ್ಯ ಪಾಲುದಾರಿಕೆಯೆಂದು ಕಾಣಲಾಗುವುದು. ಪಾಲುದಾರಿಕೆಯ ನಿಬಂಧನೆಗಳು, ನಿರ್ಮಿತವಾಗಿದ್ದರೆ ಒಂದು ಪಾಲುದಾರಿಕೆ ಒಡಂಬಡಿಕೆಯಿಂದ ಭಾಗಶಃ, ಮತ್ತು ಪಾಲುದಾರಿಕೆ ನೆಲೆಗೊಂಡ ಕಾನೂನುವ್ಯಾಪ್ತಿಯ ಶಾಸನದಿಂದ ಭಾಗಶಃ ನಿರ್ಣಯಿಸಲಾಗಿರುತ್ತವೆ.
  • ಒಂದು ಪಾಲುದಾರಿಕೆ ನಿರ್ಮಿಸಲು ಯಾವುದೇ ಕಾಗದಪತ್ರ ಅಥವಾ ಕಡತ ದಾಖಲಿಸುವುದು ಆವಶ್ಯಕವಾಗಿರುವುದಿಲ್ಲ ಮತ್ತು ಒಂದು ಒಡಂಬಡಿಕೆಯಿಲ್ಲದೆ, ಪಾಲುದಾರರ ಸಂಬಂಧಗಳು ಮತ್ತು ಕಾನೂನು ಹಕ್ಕುಗಳು ಪಾಲುದಾರಿಕೆ ನೆಲೆಗೊಂಡ ಕಾನೂನುವ್ಯಾಪ್ತಿಯ ಶಾಸನದಿಂದ ಸಂಪೂರ್ಣವಾಗಿ ನಿರ್ಣಯಿಸಲಾಗುತ್ತವೆ. ಅವನು ಅಥವಾ ಅವಳು ನೇರವಾಗಿ ಅಥವಾ ಒಂದು ಸಾಂಪ್ರದಾಯಿಕ ಸಂಘಟಿತ ವಸ್ತುವಿನ ಮೂಲಕ ಒಂದು ವ್ಯಾಪಾರವನ್ನು ಹೊಂದಿದ ಮತ್ತು ನಡೆಸುವ ಒಬ್ಬ ಏಕೈಕ ವ್ಯಕ್ತಿ ಸಾಮಾನ್ಯವಾಗಿ ಏಕಮಾತ್ರ ಮಾಲೀಕ ಎಂದು ಪರಿಚಿತವಾಗಿರುತ್ತಾನೆ/ಳೆ. ಒಂದು ವ್ಯಾಪಾರವನ್ನು ಹೇಗೆ ನಿರ್ವಹಿಸಬೇಕೆಂದು ನಿರ್ಧರಿಸಲು ಪರಿಗಣಿಸಬೇಕಾದ ಕೆಲವು ಸಂಗತ ಅಂಶಗಳು:
  1. ಪಾಲುದಾರಿಕೆಯಲ್ಲಿನ ಸಾಮಾನ್ಯ ಪಾಲುದಾರರು (ಪರಿಮಿತ ಹೊಣೆಗಾರಿಕೆಯ ಪಾಲುದಾರಿಕೆಗಿಂತ ಬೇರೆಯದಾದ), ಜೊತೆಗೆ ಒಂದು ಪ್ರತ್ಯೇಕ ಕಾನೂನು ವಸ್ತುವನ್ನು ನಿರ್ಮಿಸದೆ ವೈಯಕ್ತಿಕವಾಗಿ ಒಂದು ವ್ಯಾಪಾರವನ್ನು ಹೊಂದಿದ ಮತ್ತು ನಿರ್ವಹಿಸುವ ಯಾರಾದರೂ, ವ್ಯಾಪಾರದ ಸಾಲಗಳು ಮತ್ತು ಬಾಧ್ಯತೆಗಳಿಗೆ ವೈಯಕ್ತಿಕವಾಗಿ ಹೊಣೆಯಾಗಿರುತ್ತಾರೆ.
  2. ಸಾಮಾನ್ಯವಾಗಿ, ನಿಗಮಗಳು "ವಾಸ್ತವ" ವ್ಯಕ್ತಿಗಳಂತೆ ತೆರಿಗೆ ಸಲ್ಲಿಸುವುದು ಅಗತ್ಯವಿರುತ್ತದೆ. ಕೆಲವು ತೆರಿಗೆ ವ್ಯವಸ್ಥೆಗಳಲ್ಲಿ, ಇದು ಹಾಗೆ ಕರೆಯಲಾಗುವ ಇಮ್ಮಡಿ ಕರಭಾರವನ್ನು ಪ್ರಾರಂಭಮಾಡಬಹುದು, ಏಕೆಂದರೆ ನಿಗಮ ಮೊದಲು ಲಾಭದ ಮೇಲೆ ತೆರಿಗೆ ಸಲ್ಲಿಸುತ್ತದೆ, ಮತ್ತು ಆಮೇಲೆ ನಿಗಮ ಅದರ ಮಾಲೀಕರಿಗೆ ಅದರ ಲಾಭಗಳನ್ನು ವಿತರಿಸುವಾಗ, ತಮ್ಮ ವೈಯಕ್ತಿಕ ತೆರಿಗೆ ಜಮಾ ಖರ್ಚು ವಿವರಗಳನ್ನು ತೀರಿಸುವಾಗ ವ್ಯಕ್ತಿಗಳು ತಮ್ಮ ಆದಾಯದಲ್ಲಿ ಲಾಭಾಂಶಗಳನ್ನು ಸೇರಿಸಬೇಕಾಗುತ್ತದೆ, ಮತ್ತು ಈ ಘಳಿಗೆಯಲ್ಲಿ ಎರಡನೇಯ ಸ್ತರದ ಆದಾಯ ತೆರಿಗೆ ವಿಧಿಸಲಾಗುತ್ತದೆ.
  3. ಬಹುತೇಕ ದೇಶಗಳಲ್ಲಿ, ಸಣ್ಣ ನಿಗಮಗಳನ್ನು ದೊಡ್ಡದವುಗಳಿಗಿಂತ ಭಿನ್ನವಾಗಿ ಕಾಣುವ ಶಾಸನಗಳಿವೆ. ಅವು ನಿರ್ದಿಷ್ಟ ಕಾನೂನು ದಾಖಲೆ ಅಗತ್ಯಗಳು ಅಥವಾ ಕಾರ್ಮಿಕ ಕಾನೂನುಗಳಿಂದ ವಿನಾಯಿತಿ ಹೊಂದಿರಬಹುದು, ವಿಶಿಷ್ಟ ಕ್ಷೇತ್ರಗಳಲ್ಲಿ ಸರಳಗೊಳಿಸಿದ ವಿಧಾನಗಳನ್ನು ಹೊಂದಿರಬಹುದು, ಮತ್ತು ಸರಳಗೊಳಿಸಿದ, ಅನುಕೂಲಕರ, ಅಥವಾ ಸ್ವಲ್ಪ ಭಿನ್ನ ತೆರಿಗೆ ವರ್ತನೆಗೆ ಒಳಪಡಬಹುದು.
  4. "ಸಾರ್ವಜನಿಕವಾಗು"ವುದಕ್ಕೆ (ಕೆಲವು ಸಲ ಪ್ರಾಥಮಿಕ ಸಾರ್ವಜನಿಕ ಅರ್ಪಣೆ "ಇನಿಷಿಯಲ್ ಪಬ್ಲಿಕ್ ಆಫ಼ರಿಂಗ್" ಎಂದು ಕರೆಯಲಾಗುವ) -- ಅಂದರೆ ಪ್ರಮುಖವಾಗಿ ವ್ಯಾಪಾರದ ಒಂದು ಭಾಗವನ್ನು ವಿಸ್ತಾರವಾದ ವ್ಯಾಪ್ತಿಯ ಹೂಡಿಕೆದಾರರಿಗೆ ಅಥವಾ ಸಾಮಾನ್ಯವಾಗಿ ಸಾರ್ವಜನಿಕರಿಗೆ ಮಾಲೀಕರಾಗಲು ನೀಡುವುದು -- ಒಂದು ಪ್ರತ್ಯೇಕ ಸಂಸ್ಥೆಯನ್ನು ಸಂಘಟಿಸಲೇಬೇಕು, ಮತ್ತು ಸಾಧಾರಣವಾಗಿ ಅದು ಒಂದು ಬಿಗಿಯಾದ ವರ್ಗದ ಕಾನೂನುಗಳು ಮತ್ತು ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗುತ್ತದೆ.
  • ಬಹುತೇಕ ಸಾರ್ವಜನಿಕ ಸಂಸ್ಥೆಗಳು ಷೇರುಗಳನ್ನು ವಿಕ್ರಯಿಸಿದ ನಿಗಮಗಳಾಗಿವೆ, ಆದರೆ ಹೆಚ್ಚುತ್ತಿರುವ ಏಕಾಂಶಗಳನ್ನು (ಯೂನಿಟ್) ವಿಕ್ರಯಿಸುವ ಸಾರ್ವಜನಿಕ ಪರಿಮಿತ ಹೊಣೆಗಾರಿಕೆ ಕಂಪನಿಗಳು, ಮತ್ತು ಇತರ ಹೆಚ್ಚು ವಿನೂತನ ಸಂಸ್ಥೆಗಳು (ಉದಾ, ಅಮೇರಿಕಾದಲ್ಲಿ ಸ್ಥಿರಾಸ್ತಿ ಹಣಹೂಡಿಕೆ ನ್ಯಾಸ "ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್", ಬ್ರಿಟನ್‌ನಲ್ಲಿ ಏಕಾಂಶ ನ್ಯಾಸಗಳು "ಯೂನಿಟ್ ಟ್ರಸ್ಟ್") ಕೂಡ ಇವೆ. ಆದರೆ, ಒಂದು ಸಾಮಾನ್ಯ ಪಾಲುದಾರಿಕೆಯನ್ನು "ಸಾರ್ವಜನಿಕ" ಮಾಡುವಂತಿಲ್ಲ.

ವಾಣಿಜ್ಯ ಕಾನೂನು

  • ಬಹುತೇಕ ವಾಣಿಜ್ಯ ವ್ಯವಹಾರಗಳು ಅತಿ ದೀರ್ಘ ಸಮಯಾವಧಿಯಿಂದ ಬೆಳೆದ ಒಂದು ಅತಿ ವಿವರಣಾತ್ಮಕ ಮತ್ತು ಚೆನ್ನಾಗಿ ಊರ್ಜಿತವಾದ ಸೂತ್ರಗಳ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತವೆ. ಇದೇ ಕಾರಣದಿಂದ ಆಡಳಿತ ವ್ಯಾಪಾರ ಮತ್ತು ವಾಣಿಜ್ಯ ಪಾಶ್ಚಾತ್ಯ ನಾಗರಿಕತೆಯಲ್ಲಿ ಕಾನೂನು ಮತ್ತು ನ್ಯಾಯಾಲಯಗಳ ನಿರ್ಮಾಣದಲ್ಲಿ ಒಂದು ಪ್ರಭಾವಿ ಶಕ್ತಿಯಾಗಿತ್ತು. ವ್ಯಾಪಾರಗಳನ್ನು ನಿಯಂತ್ರಿಸುವ ಅಥವಾ ಪ್ರಭಾವ ಬೀರುವ ಇತರ ಕಾನೂನುಗಳಿಗೆ ಸಂಬಂಧಿಸಿದಂತೆ, ಹಲವು ದೇಶಗಳಲ್ಲಿ ಅವುಗಳೆಲ್ಲವನ್ನು ಒಂದು ಒಂಟಿ ಉಲ್ಲೇಖ ಆಕರದಲ್ಲಿ ದಾಖಲಿಸುವುದು ಅಸಾಧ್ಯ. *ಕಾರ್ಮಿಕರ ಉಪಚಾರ ಮತ್ತು ಸಾಮಾನ್ಯವಾಗಿ ನೌಕರರೊಂದಿಗಿನ ಸಂಬಂಧಗಳು, ಭದ್ರತೆ ಮತ್ತು ರಕ್ಷಣೆ ವಿಷಯಗಳು (ಔದ್ಯೋಗಿಕ ರಕ್ಷಣೆ ಮತ್ತು ಆರೋಗ್ಯ ಆಡಳಿತ "ಆಕ್ಯುಪೇಷನಲ್ ಸೇಫ಼್‌ಟಿ ಆಂಡ್ ಹೆಲ್ತ್ ಅಡ್ಮಿನಸ್ಟ್ರೇಷನ್" ಅಥವಾ ಔದ್ಯೋಗಿಕ ರಕ್ಷಣೆ ಮತ್ತು ಆರೋಗ್ಯ), ನಿಷ್ಪಕ್ಷಪಾತ ಕಾನೂನುಗಳು (ವಯಸ್ಸು, ಲಿಂಗ, ಅಂಗವಿಕಲತೆಗಳು, ಜನಾಂಗ ಮತ್ತು ಕೆಲವು ಕಾನೂನುವ್ಯಾಪ್ತಿಗಳಲ್ಲಿ ಲೈಂಗಿಕ ನಿಲವು), ಕನಿಷ್ಠ ವೇತನ ಕಾನೂನುಗಳು, ಕಾರ್ಮಿಕ ಸಂಘ ಕಾನೂನುಗಳು, ಕಾರ್ಮಿಕರ ಪರಿಹಾರ ಕಾನೂನುಗಳು, ಮತ್ತು ವಾರ್ಷಿಕ ರಜೆ ಅಥವಾ ಕೆಲಸದ ವೇಳೆಗಳ ಸಮಯವನ್ನು ನಿರ್ಣಯಿಸುವ ಕಾನೂನುಗಳಿವೆ.
  • ಕೆಲವು ವಿಶಿಷ್ಟ ವ್ಯಾಪಾರಗಳಲ್ಲಿ, ವಿಷೇಷ ಶಿಕ್ಷಣದ ಅಗತ್ಯವಿರಬಹುದಂಥ ನಿಶ್ಚಿತ ವ್ಯಾಪಾರಗಳು, ವೃತ್ತಿಗಳು ಅಥವಾ ಉದ್ಯೋಗಗಳಲ್ಲಿ ಪ್ರವೇಶ ನಿರ್ಧರಿಸುವ ವಿಷೇಷ ಕಾನುನುಗಳಿಂದಾಗಿ ಅಥವಾ ನಿಮ್ಮ ಹಣದ ಅಗತ್ಯವಿರುವ ಸ್ಥಳೀಯ ಸರಕಾರಗಳ ಕಾರಣ ಪರವಾನಗಿಗಳ ಆವಶ್ಯಕತೆ ಯೂ ಇರಬಹುದು. ವಿಷೇಷ ಪರವಾನಗಿಗಳ ಅಗತ್ಯವಿರುವ ಉದ್ಯೋಗಗಳು ಕಾನೂನು ಮತ್ತು ವೈದ್ಯಶಾಸ್ತ್ರದಿಂದ ಹಿಡಿದು ವಿಮಾನಗಳ ಹಾರಾಟ, ಮದ್ಯ ಮಾರಾಟ, ರೇಡಿಯೋ ಪ್ರಸಾರ, ಬಂಡವಾಳ ಭದ್ರತಾ ಪತ್ರಗಳ ಮಾರಾಟ, ಬಳಸಿದ ಕಾರುಗಳ ಮಾರಾಟ, ಛಾವಣಿ ವಸ್ತುಗಳ ವರೆಗಿನ ವ್ಯಾಪ್ತಿಯನ್ನು ನಿರ್ವಹಿಸುತ್ತವೆ.
  • ಸ್ಥಳೀಯ ಕಾನೂನುವ್ಯಾಪ್ತಿಗಳು ಒಳಗೊಂಡ ವ್ಯಾಪಾರ ಪ್ರಕಾರಕ್ಕೆ ಮನ್ನಣೆ ನೀಡದೆ ಕೇವಲ ಒಂದು ವ್ಯಾಪಾರ ನಡೆಸುವುದಕ್ಕೆ ವಿಷೇಷ ಪರವಾನಗಿಗಳು ಮತ್ತು ತೆರಿಗೆಗಳನ್ನು ಕೇಳಬಹುದು. ಕೆಲವು ವ್ಯಾಪಾರಗಳು ಅಸ್ತಿತ್ವದಲ್ಲಿರುವ ವಿಷೇಷ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಈ ಉದ್ದಿಮೆ ಗಳು ಸಾರ್ವಜನಿಕ ಸೌಲಭ್ಯಗಳು, ಬಂಡವಾಳ ಭದ್ರತಾ ಪತ್ರಗಳು, ಬ್ಯಾಂಕಿನಲ್ಲಿ ವ್ಯವಹಾರ, ಜೀವವಿಮೆ, ಪ್ರಸರಣ, ವಿಮಾನಯಾನ ಮತ್ತು ಆರೋಗ್ಯ ಪಾಲನೆ ಒದಗಿಸುವವರನ್ನು ಒಳಗೊಂಡಿವೆ. ಪರಿಸರ ನಿಯಂತ್ರಣಗಳು ಕೂಡ ಬಹಳ ಜಟಿಲವಿವೆ ಮತ್ತು ಅನಿರೀಕ್ಷಿತ ರೀತಿಗಳಲ್ಲಿ ಹಲವು ಪ್ರಕಾರಗಳ ವ್ಯಾಪಾರಗಳ ಮೇಲೆ ಪ್ರಭಾವ ಬೀರಬಹುದು.

ಬಂಡವಾಳ

  • ವ್ಯಾಪಾರಗಳು ಹಣವನ್ನು ('ಬಂಡವಾಳ' ಎಂದು ಕರೆಯಲಾಗುತ್ತದೆ) ಕೂಡಿಸುವ ಅಗತ್ಯವಾದಾಗ, ಇನ್ನಷ್ಟು ಕಾನೂನುಗಳು ಕಾರ್ಯರೂಪಕ್ಕೆ ಬರುತ್ತವೆ. ಬಹುತೇಕ ಪಾಶ್ಚಾತ್ಯ ದೇಶಗಳಲ್ಲಿ, ಬಂಡವಾಳ ಭದ್ರತಾ ಪತ್ರಗಳ ನೀಡಿಕೆ ಮತ್ತು ಮಾರಾಟವನ್ನು (ಹಣವನ್ನು ಕೂಡಿಸುವ ಬಗೆ) ಒಂದು ಅತಿ ಜಟಿಲ ಕಾನೂನುಗಳು ಮತ್ತು ನಿಯಂತ್ರಣಗಳ ವರ್ಗ ನಿರ್ಧರಿಸುತ್ತವೆ. ಈ ನಿಯಂತ್ರಣಗಳು ವ್ಯಾಪಾರದ ಬಗ್ಗೆ ಹಲವು ನಿರ್ದಿಷ್ಟ ಆರ್ಥಿಕ ಮತ್ತು ಇತರ ಮಾಹಿತಿಯ ಪ್ರಕಟಣೆಯನ್ನು ಆದೇಶಿಸಬಹುದು ಮತ್ತು ಖರೀದಿದಾರರಿಗೆ ಕೆಲವು ಪರಿಹಾರೋಪಾಯಗಳನ್ನು ಒದಗಿಸಬಹುದು. "ಭದ್ರತಾ ಪತ್ರ" ಒಂದು ಅತಿ ವಿಶಾಲ ಪದವಾದ್ದರಿಂದ, ಬಹುತೇಕ ಬಂಡವಾಳ ವಹಿವಾಟುಗಳು, ಒಂದು ವಿಶೇಷ ವಿನಾಯಿತಿ ಲಭ್ಯವಿಲ್ಲದಿದ್ದರೆ, ಈ ಕಾನೂನುಗಳಿಗೆ ಒಳಪಡುವ ಸಾಧ್ಯತೆಯಿರುತ್ತದೆ.
  • ಖಾಸಗಿ ವಿಧಾನದ ಮೂಲಕ, ಷೇರುಪೇಟೆಯಲ್ಲಿ ಸಾರ್ವಜನಿಕ ಅರ್ಪಣೆ (ಆಯ್‌ಪಿಒ) ಮೂಲಕ, ಅಥವಾ ಇತರ ಹಲವು ರೀತಿಗಳಲ್ಲಿ ಬಂಡವಾಳ ಕೂಡಿಸಬಹುದು. ನ್ಯೂ ಯಾರ್ಕ್ ಷೇರುಪೇಟೆ ಮತ್ತು ನ್ಯಾಸ್‌ಡ್ಯಾಕ್ (ಅಮೇರಿಕಾ), ಲಂಡನ್ ಷೇರುಪೇಟೆ (ಬ್ರಿಟನ್), ಟೋಕ್ಯೊ ಷೇರುಪೇಟೆ (ಜಪಾನ್) ಕೆಲವು ಪ್ರಮುಖ ಷೇರುಪೇಟೆಗಳು. ಬಂಡವಾಳ ಮಾರುಕಟ್ಟೆ ಹೊಂದಿರುವ ಬಹುತೇಕ ದೇಶಗಳು ಕನಿಷ್ಠ ಒಂದು ಷೇರುಪೇಟೆ ಹೊಂದಿರುತ್ತವೆ.
  • "ಸಾರ್ವಜನಿಕ"ವಾದ ವ್ಯಾಪಾರಗಳು ತಮ್ಮ ಆಂತರಿಕ ಆಡಳಿತದ (ಕಾರ್ಯನಿರ್ವಾಹಕ ಅಧಿಕಾರಿಗಳ ಪರಿಹಾರ ಧನ ಹೇಗೆ ನಿರ್ಧರಿತವಾಗುತ್ತದೆ ಎಂಬಂತಹ) ಬಗ್ಗೆ ಮತ್ತು ಯಾವಾಗ ಮತ್ತು ಹೇಗೆ ಮಾಹಿತಿಯನ್ನು ಸಾರ್ವಜನಿಕರಿಗೆ ಮತ್ತು ತಮ್ಮ ಷೇರುದಾರರಿಗೆ ಬಹಿರಂಗ ಪಡಿಸು ತ್ತಾರೆಂಬುದು ವಿಪರೀತ ವಿವರಣಾತ್ಮಕ ಮತ್ತು ಜಟಿಲವಾದ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಅಮೇರಿಕಾದಲ್ಲಿ, ಈ ನಿಯಂತ್ರಣಗಳು ಅಮೇರಿಕಾ ಭದ್ರತಾ ಪತ್ರ ಮತು ವಿನಿಮಯ ಮಂಡಲಿಯಿಂದ (ಸಿಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್) ಪ್ರಾಥಮಿಕವಾಗಿ ಕಾರ್ಯಗತ ವಾಗುತ್ತವೆ. ಇತರ ಪಾಶ್ಚಾತ್ಯ ದೇಶಗಳು ತುಲನಾತ್ಮಕ ನಿಯಂತ್ರಣ ಸಂಸ್ಥೆಗಳನ್ನು ಹೊಂದಿವೆ.
  • ಆರಂಭದಲ್ಲಿ ಗಮನಿಸಿದಂತೆ, ಇಂದು ವ್ಯಾಪಾರದ ಮೇಲೆ ಪ್ರಭಾವ ಬೀರುವ ಎಲ್ಲ ಪ್ರಕಾರಗಳ ಕಾನೂನುಗಳ ಮತ್ತು ನಿಬಂಧನೆಗಳ ಪಟ್ಟಿಮಾಡುವುದು ಅಸಾಧ್ಯ. ವಾಸ್ತವವಾಗಿ, ಈ ಕಾನೂನುಗಳು ಎಷ್ಟೊಂದು ಬಹು ಸಂಖ್ಯಾಕ ಮತ್ತು ಜಟಿಲ ಆಗಿವೆಯೆಂದರೆ, ಯಾವ ವ್ಯಾಪಾರ ವಕೀಲನೂ ಅವೆಲ್ಲವನ್ನು ಗ್ರಹಿಸುವುದು ಅಶಕ್ಯ, ಹಾಗಾಗಿ ಸಂಸ್ಥೆಗೆ ಸಂಬಂಧಿಸಿದ ನ್ಯಾಯವಾದಿಗಳಲ್ಲಿ ಇವುಗಳಲ್ಲಿ ಒತ್ತಾಯಪೂರ್ವಕವಾಗಿ ಪ್ರಾವೀಣ್ಯ ಗಳಿಸುವುದು ಹೆಚ್ಚುತ್ತಿದೆ.
  • ಆಧುನಿಕ ನಿಯಂತ್ರಣಗಳ ಅಸ್ತವ್ಯಸ್ತವಾಗಿ ಹರಡಿರುವ ಸ್ವರೂಪದ ಕಾರಣ, ಕೆಲವು ಪ್ರಕಾರಗಳ ಸಂಸ್ಥೆಗೆ ಸಂಬಂಧಿಸಿದ ವಹಿವಾಟುಗಳನ್ನು ನಿಭಾಯಿಸಲು ೫ ರಿಂದ ೧೦ ನ್ಯಾಯವಾದಿಗಳ ತಂಡಗಳು ಬೇಕಾಗುವುದು ಅಶ್ರುತವಲ್ಲ.ಸಂಸ್ಥೆಗೆ ಸಂಬಂಧಿಸಿದ ಸಾಮಾನ್ಯ ಕಾನೂನು, ಉದ್ಯೋಗ ಮತ್ತು ಕಾರ್ಮಿಕ ಕಾನೂನು, ಸ್ವಾಸ್ಥ್ಯ ಸೇವಾ ಕಾನೂನು, ಭದ್ರತಾ ಪತ್ರ ಕಾನೂನು, ಒಟ್ಟುಗೂಡುವಿಕೆ ಮತ್ತು ಸ್ವಾಧೀನ ಕಾನೂನು (ಯಾರು ಸ್ವಾಧೀನಗಳಲ್ಲಿ ನಿಷ್ಣಾತರಾಗುತ್ತಾರೆ), ತೆರಿಗೆ ಕಾನೂನು, ಅರಿಸಾ (ನೌಕರ ನಿವೃತ್ತಿ ವೇತನ ಭದ್ರತಾ ಕಾಯಿದೆ "ಎಂಪ್ಲಾಯಿ ರಿಟೈರ್‌ಮೆಂಟ್ ಇನ್ಕಮ್ ಸಿಕ್ಯೂರಿಟಿ ಆಕ್ಟ್") ಕಾನೂನು (ಅಮೇರಿಕಾದಲ್ಲಿ ಅರಿಸಾ ನೌಕರರ ಹಿತ ಯೋಜನೆಗಳನ್ನು ನಿರ್ಣಯಿಸುತ್ತದೆ), ಆಹಾರ ಮತ್ತು ಔಷಧ ನಿಯಾಮಕ ಕಾನೂನು, ಬೌದ್ಧಿಕ ಸಂಪತ್ತು ಕಾನೂನು (ಕೃತಿಸ್ವಾಮ್ಯಗಳು, ಹಕ್ಕುಪತ್ರಗಳು, ವ್ಯಾಪಾರ ಚಿಹ್ನೆಗಳು ಮುಂತಾದವುಗಳಲ್ಲಿ ಪ್ರಾವೀಣ್ಯ ಗಳಿಸುವ), ದೂರಸಂಪರ್ಕ ಸಾಧನ ಕಾನೂನು ಮುಂತಾದವುಗಳನ್ನು ವಾಣಿಜ್ಯ ಕಾನೂನು ವ್ಯಾಪಿಸುತ್ತದೆ.
  • ಉದಾಹರಣೆಗೆ ಥಾಯ್‌ಲಂಡ್‌ನಲ್ಲಿ, ಪ್ರತಿಯೊಬ್ಬ ನೌಕರನಿಗೆ ಒಂದು ನಿರ್ದಿಷ್ಟ ಮೊತ್ತದ ಬಂಡವಾಳವನ್ನು ದಾಖಲಿಸುವುದು ಮತ್ತು ದಾಖಲಿಸಿದ ಬಂಡವಾಳದ ಮೊತ್ತಕ್ಕೆ ಸರ್ಕಾರಕ್ಕೆ ಒಂದು ಸಂಭಾವನೆ ಸಲ್ಲಿಸುವುದು ಕಡ್ಡಾಯ. ಈ ಬಂಡವಾಳ ವಾಸ್ತವಿಕವಾಗಿ ಅಸ್ತಿತ್ವದಲ್ಲಿದೆ ಎಂದು ತೋರಿಸಿಕೊಡುವ ಕಾನೂನುಬದ್ಧ ಆವಶ್ಯಕತೆ ಇಲ್ಲ, ಪ್ರವೇಶಧನ ಸಲ್ಲಿಸುವುದು ಏಕಮಾತ್ರ ಆವಶ್ಯಕತೆ. ಒಟ್ಟಿನಲ್ಲಿ, ಈ ರೀತಿಯ ಪ್ರಕ್ರಿಯೆಗಳು ಒಂದು ದೇಶದ ಅಭಿವೃದ್ಧಿ ಮತ್ತು ನಿವ್ವಳ ದೇಶೀಯ ಉತ್ಪನ್ನಕ್ಕೆ ಹಾನಿಕರ, ಆದರೂ ಹಲವುಬಾರಿ "ಊಳಿಗಮಾನ್ಯ" ಅಭಿವೃದ್ಧಿಶೀಲ ದೇಶ ಗಳಲ್ಲಿ ಅಸ್ತಿತ್ವದಲ್ಲಿರುತ್ತವೆ.

ಬೌದ್ಧಿಕ ಸ್ವತ್ತು

  • ವ್ಯಾಪಾರಗಳು ಹಲವುವೇಳೆ ಕಂಪನಿ ಲಾಭದಾಯಕವಾಗಿ ಉಳಿದಿರಲು ಪ್ರತಿಸ್ಪರ್ಧಿಗಳಿಂದ ರಕ್ಷಣೆಯ ಅಗತ್ಯವಿರುವ ಮಹತ್ವವುಳ್ಳ "ಬೌದ್ಧಿಕ ಸ್ವತ್ತು" ಹೊಂದಿರುತ್ತವೆ. ಹಕ್ಕುಪತ್ರಗಳು ಅಥವಾ ಕೃತಿಸ್ವಾಮ್ಯಗಳು ಅಥವಾ ವೃತ್ತಿ ರಹಸ್ಯಗಳ ಸಂರಕ್ಷಣೆ, ಇದಕ್ಕೆ ಆವಶ್ಯಕವಾಗಿರಬಹುದು. ಬಹುತೇಕ ವ್ಯಾಪಾರಗಳು ವ್ಯಾಪಾರ ಚಿಹ್ನೆಯ ನೋಂದಾವಣೆಯಿಂದ ಪ್ರಯೋಜನ ಪಡೆಯಬಹುದಾದ ಹೆಸರುಗಳು, ಪ್ರತೀಕ ಚಿಹ್ನೆಗಳು ಮತ್ತು ಅಂತಹದೇ ಆದ ವ್ಯಾಪಾರದ ಗುರುತಿನ ಬಳಕೆಯ ತಂತ್ರಗಳನ್ನು ಬಳಸುತ್ತವೆ.
  • ಅಮೇರಿಕಾದಲ್ಲಿ ಹಕ್ಕುಪತ್ರಗಳು ಮತ್ತು ಕೃತಿಸ್ವಾಮ್ಯಗಳು ಬಹುಮಟ್ಟಿಗೆ ಸಂಘೀಯ ಕಾನೂನಿನ ಮೂಲಕ ನಿರ್ವಹಿಸಲಾಗುತ್ತವೆ, ಅದೇ ವ್ಯಾಪಾರ ರಹಸ್ಯಗಳು ಮತ್ತು ವ್ಯಾಪಾರ ಚಿಹ್ನೆ ನೋಂದಾವಣೆ ಬಹುಮಟ್ಟಿಗೆ ರಾಜ್ಯ ಕಾನೂನಿನ ಒಂದು ವಿಷಯ. ಬೌದ್ಧಿಕ ಸ್ವತ್ತಿನ ಸ್ವರೂಪದ ಕಾರಣ, ಪ್ರತಿಸ್ಪರ್ಧಿಗಳ ಬಗ್ಗೆ ತವಕವಿರುವ ಪ್ರತಿಯೊಂದು ಕಾನೂನುವ್ಯಾಪ್ತಿಯಲ್ಲಿ ಒಂದು ವ್ಯಾಪಾರಕ್ಕೆ ರಕ್ಷಣೆ ಬೇಕಾಗುತ್ತದೆ. ಅನೇಕ ದೇಶಗಳು ಬೌದ್ಧಿಕ ಸ್ವತ್ತಿಗೆ ಸಂಬಂಧಿಸಿದ ಅಂತರರಾಷ್ಟ್ರೀಯ ಒಡಂಬಡಿಕೆಗಳಿಗೆ ಸಹಿ ಹಾಕಿರುತ್ತವೆ, ಮತ್ತು ಹಾಗಾಗಿ ಈ ದೇಶಗಳಲ್ಲಿ ನೋಂದಾಯಿಸಿದ ಕಂಪನಿಗಳು ಈ ಒಡಂಬಡಿಕೆಗಳಿಂದ ಸೀಮಿತವಾದ ರಾಷ್ಟ್ರೀಯ ಕಾನೂನುಗಳಿಗೆ ಒಳಪಟ್ಟಿರುತ್ತವೆ.

ನಿರ್ಗಮನ ಯೋಜನೆಗಳು

ವ್ಯಾಪಾರಗಳನ್ನು ಖರೀದಿಸಬಹುದು ಮತ್ತು ಮಾರಬಹುದು. ವ್ಯಾಪಾರದ ಮಾಲೀಕರು ಹಲವುವೇಳೆ ವ್ಯಾಪಾರವನ್ನು ಹಸ್ತಾಂತರಿಸುವ ತಮ್ಮ ಯೋಜನೆಯನ್ನು ಒಂದು "ನಿರ್ಗಮನ ಯೋಜನೆ" ಎಂದು ಹೇಳುತ್ತಾರೆ. ಸಾಮಾನ್ಯವಾದ ನಿರ್ಗಮನ ಯೋಜನೆಗಳು, ಪ್ರಾಥಮಿಕ ಸಾರ್ವಜನಿಕ ಅರ್ಪಣೆಗಳು, ನಿರ್ವಹಣಾ ಸ್ವಾಧೀನಗಳು ಮತ್ತು ಇತರ ವ್ಯಾಪಾರಗಳೊಂದಿಗೆ ಒಟ್ಟುಗೂಡುವಿಕೆಗಳನ್ನು ಒಳಗೊಂಡಿವೆ.

ಇವನ್ನೂ ನೋಡಿ

    ಪ್ರಧಾನ ಪಟ್ಟಿ: ವ್ಯಾಪಾರ ವಿಷಯಗಳ ಪಟ್ಟಿ
  • ಹಣಕಾಸು ಲೆಕ್ಕ
    • ಹಣಕಾಸು ಲೆಕ್ಕದ ವಿಷಯಗಳ ಪಟ್ಟಿ
  • ಜಾಹೀರಾತು
  • ಬ್ಯಾಂಕ್
  • ಬೃಹತ್ ವ್ಯಾಪಾರ
  • ವ್ಯವಹಾರ ಚಾತುರ್‍ಯ
  • ವ್ಯಾಪಾರ ಮಧ್ಯವರ್ತಿ
  • ವ್ಯಾಪಾರ ನೀತಿ ತತ್ವಗಳು
    • ವ್ಯಾಪಾರ ನೀತಿ ತತ್ವಗಳು, ರಾಜಕೀಯ ಆರ್ಥಿಕ ವ್ಯವಸ್ಥೆ, ಮತ್ತು ವ್ಯಾಪಾರ ವಿಷಯಗಳ ತತ್ತ್ವಶಾಸ್ತ್ರದ ಪಟ್ಟಿ
    • ಸಾಮಾಜಿಕ ಜವಾಬ್ದಾರಿ
  • ವ್ಯಾಪಾರದ ವೇಳೆ
  • ವ್ಯಾಪಾರ ಮಧ್ಯಸ್ಥ
  • ವ್ಯಾಪಾರ ವಿದ್ಯಾಸಂಸ್ಥೆ
  • ವ್ಯಾಪಾರ ಪ್ರಯಾಣ
  • ಬಂಡವಾಳಶಾಹಿ
  • ವಾಣಿಜ್ಯ
  • ವಾಣಿಜ್ಯ ಕಾನೂನು
    • ವ್ಯಾಪಾರ ಕಾನೂನು ವಿಷಯಗಳ ಪಟ್ಟಿ
  • ಕಂಪನಿ
  • ಸಹಕಾರಿ ಸಂಸ್ಥೆ
  • ನಿಗಮ
  • ಸಂಸ್ಥೆಗೆ ಸಂಬಂಧಿಸಿದ ಕಾನೂನು
  • ವೆಚ್ಚ ಹೆಚ್ಚಳ
  • ಅರ್ಥಶಾಸ್ತ್ರ
    • ಆರ್ಥಿಕ ಪ್ರಜಾಪ್ರಭುತ್ವ
    • ಹಣಕಾಸು ಅರ್ಥಶಾಸ್ತ್ರ
    • ಅರ್ಥಶಾಸ್ತ್ರ ವಿಷಯಗಳ ಪಟ್ಟಿ
  • ಈ-ವಾಣಿಜ್ಯ
    • ವಿದ್ಯುನ್ಮಾನ ವ್ಯಾಪಾರ
  • ಉದ್ಯಮಶೀಲತೆ
  • ಹಣಕಾಸು
    • ಹಣಕಾಸು ವಿಷಯಗಳ ಪಟ್ಟಿ
  • ವಿತರಣಾ ಅಧಿಕಾರ ವಿಧಾನ
  • ಸರ್ಕಾರಿ ಒಡೆತನ
  • ಮಾನವ ಸಂಪನ್ಮೂಲಗಳು
    • ಮಾನವ ಸಂಪನ್ಮೂಲ ನಿರ್ವಹಣೆ ವಿಷಯಗಳ ಪಟ್ಟಿ
  • ಉದ್ದಿಮೆ
  • ಬೌದ್ಧಿಕ ಸ್ವತ್ತು
  • ಅಂತರರಾಷ್ಟ್ರೀಯ ವ್ಯಾಪಾರ
    • ಅಂತರರಾಷ್ಟ್ರೀಯ ವ್ಯಾಪಾರ ವಿಷಯಗಳ ಪಟ್ಟಿ
  • ವಿಮೆ
  • ಹಣಹೂಡಿಕೆ
  • ಪರಿಮಿತ ಹೊಣೆಗಾರಿಕೆ
  • ನಿರ್ವಹಣೆ
    • ನಿರ್ವಹಣೆ ವಿಷಯಗಳ ಪಟ್ಟಿ
  • ವ್ಯವಸ್ಥಾಪಕ ಮಾಹಿತಿ ವಿಧಾನ
    • ಮಾಹಿತಿ ತಂತ್ರಜ್ಞಾನ ನಿರ್ವಹಣೆ ವಿಷಯಗಳ ಪಟ್ಟಿ
  • ಉತ್ಪಾದನೆ
    • ಉತ್ಪಾದನೆ ವಿಷಯಗಳ ಪಟ್ಟಿ
  • ವ್ಯಾಪಾರ ಪ್ರಚಾರ
    • ವ್ಯಾಪಾರ ಪ್ರಚಾರ ವಿಷಯಗಳ ಪಟ್ಟಿ
  • ಸಂಘಟನಾ-ಸಂಬಂಧಿ ಅಧ್ಯಯನಗಳು
  • ಪಾಲುದಾರಿಕೆ
  • ಏಕಮಾತ್ರ ಒಡೆತನ
  • ಸ್ಥಿರಾಸ್ತಿ
    • ಸ್ಥಿರಾಸ್ತಿ ವಿಷಯಗಳ ಪಟ್ಟಿ
  • ನವೀಕರಣೀಯ ಶಕ್ತಿ
  • ಆದಾಯ ಕೊರತೆ
  • ಲಘು ಉದ್ಯಮ
  • ಕೌಶಲಯುತ ನಿರ್ವಹಣೆ
  • ಕೌಶಲಯುತ ಯೋಜನೆ
  • ವ್ಯಾಪಾರ ವಸ್ತುಗಳ ಪ್ರಕಾರಗಳು

ಹೊರಗಿನ ಸಂಪರ್ಕಗಳು

ಟಿಪ್ಪಣಿಗಳು ಮತ್ತು ಉಲ್ಲೇಖಗಳು

Tags:

ವ್ಯಾಪಾರ ಪದದ ವ್ಯುತ್ಪತ್ತಿವ್ಯಾಪಾರ ಒಡೆತನದ ಮೂಲಭೂತ ಪ್ರಕಾರಗಳುವ್ಯಾಪಾರ ವರ್ಗೀಕರಣಗಳುವ್ಯಾಪಾರ ಸಂಘಟನೆವ್ಯಾಪಾರ ನಿರ್ವಹಣೆವ್ಯಾಪಾರ ಸರಕಾರಿ ನಿಯಂತ್ರಣವ್ಯಾಪಾರ ಇವನ್ನೂ ನೋಡಿವ್ಯಾಪಾರ ಹೊರಗಿನ ಸಂಪರ್ಕಗಳುವ್ಯಾಪಾರ ಟಿಪ್ಪಣಿಗಳು ಮತ್ತು ಉಲ್ಲೇಖಗಳುವ್ಯಾಪಾರಅಪಾಯಕೆಲಸಗ್ರಾಹಕಬಂಡವಾಳಶಾಹಿಲಾಭಸಂಪತ್ತುಸರಕು

🔥 Trending searches on Wiki ಕನ್ನಡ:

ಸೆಲರಿಕಳಿಂಗ ಯುದ್ಧಮಲಾವಿಫುಟ್ ಬಾಲ್ಮೊದಲನೇ ಅಮೋಘವರ್ಷಬಿ. ಆರ್. ಅಂಬೇಡ್ಕರ್ಶಿಕ್ಷಣರಾಮಾಚಾರಿ (ಕನ್ನಡ ಧಾರಾವಾಹಿ)ಬಸವೇಶ್ವರರೋಸ್‌ಮರಿರವೀಂದ್ರನಾಥ ಠಾಗೋರ್ಕೆ. ಅಣ್ಣಾಮಲೈಕರ್ನಾಟಕ ಐತಿಹಾಸಿಕ ಸ್ಥಳಗಳುಸಂಪತ್ತಿನ ಸೋರಿಕೆಯ ಸಿದ್ಧಾಂತಹಸಿರುಮನೆ ಪರಿಣಾಮಶಿವಕೋಟ್ಯಾಚಾರ್ಯಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸಂಭೋಗವಾಟ್ಸ್ ಆಪ್ ಮೆಸ್ಸೆಂಜರ್ಕರ್ನಾಟಕದ ತಾಲೂಕುಗಳುಗೋಲ ಗುಮ್ಮಟವಿನಾಯಕ ದಾಮೋದರ ಸಾವರ್ಕರ್ಪಿತ್ತಕೋಶಅಲಿಪ್ತ ಚಳುವಳಿಮುರುಡೇಶ್ವರಚಂಡಮಾರುತಕರ್ನಾಟಕದ ಕಲೆ ಮತ್ತು ಸಂಸ್ಕೃತಿರಾಮ್ ಮೋಹನ್ ರಾಯ್ಚಂದ್ರಶೇಖರ ಕಂಬಾರಮುಹಮ್ಮದ್ಹಸಿವುಗಾದೆಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರರೇಣುಕಯಕ್ಷಗಾನವಿತ್ತೀಯ ನೀತಿಶುಷ್ಕಕೋಶ (ಡ್ರೈಸೆಲ್)ಜಾತಿಆಂಗ್‌ಕರ್ ವಾಟ್ದೂರದರ್ಶನವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ವರ್ಣಾಶ್ರಮ ಪದ್ಧತಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಗೋಪಾಲಕೃಷ್ಣ ಅಡಿಗದ್ವಿಗು ಸಮಾಸಬೌದ್ಧ ಧರ್ಮಕುಬೇರರತ್ನತ್ರಯರುಅಂತಾರಾಷ್ಟ್ರೀಯ ಸಂಬಂಧಗಳುಭರತನಾಟ್ಯಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಸಂಗೊಳ್ಳಿ ರಾಯಣ್ಣಜಾತ್ರೆಶೃಂಗೇರಿಕೇಂದ್ರ ಲೋಕ ಸೇವಾ ಆಯೋಗಏಡ್ಸ್ ರೋಗದಾಸವಾಳವಿಷ್ಣುವರ್ಧನ್ (ನಟ)ಕನ್ನಡ ಸಾಹಿತ್ಯ ಪರಿಷತ್ತುಭಾರತದ ಆರ್ಥಿಕ ವ್ಯವಸ್ಥೆಪ್ರೀತಿಶಬ್ದಕರ್ನಾಟಕದ ರಾಜ್ಯಪಾಲರುಗಳ ಪಟ್ಟಿದೇವರ ದಾಸಿಮಯ್ಯನಾಡ ಗೀತೆಅತೀಶ ದೀಪಂಕರಅಮೃತಧಾರೆ (ಕನ್ನಡ ಧಾರಾವಾಹಿ)ಶಿವಕುಮಾರ ಸ್ವಾಮಿಉಡುಪಿ ಜಿಲ್ಲೆಕರ್ನಾಟಕದ ಶಾಸನಗಳುಭಾಷಾ ವಿಜ್ಞಾನಭಾರತದಲ್ಲಿನ ಶಿಕ್ಷಣಅಸ್ಪೃಶ್ಯತೆಆಗಮ ಸಂಧಿಯೋನಿನರರೋಗ(Neuropathy)🡆 More