ಸುರ್ಜಿತ್ ಪಾಟಾರ್: ಪಂಜಾಬಿ ಲೇಖಕ

ಸುರ್ಜಿತ್ ಪಾಟಾರ್ ಅವರು ಪಂಜಾಬಿ ಭಾಷೆಯ ಬರಹಗಾರ ಮತ್ತು ಭಾರತದ ಪಂಜಾಬ್‌ನ ಕವಿ.

ಅವರ ಕವಿತೆಗಳು ಸಾರ್ವಜನಿಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ ಮತ್ತು ವಿಮರ್ಶಕರಿಂದ ಹೆಚ್ಚಿನ ಮೆಚ್ಚುಗೆಯನ್ನು ಗಳಿಸಿವೆ.

ಸುರ್ಜಿತ್ ಪಾಟಾರ್
ಸುರ್ಜಿತ್ ಪಾಟಾರ್: ಜೀವನಚರಿತ್ರೆ, ಪ್ರಸಿದ್ಧ ಕವನಗಳು, ಚಿತ್ರಕಥೆ
ಜನನಪಾಟ್ಟಾರ್ ಕಲಾನ್, ಪಂಜಾಬ್, ಬ್ರಿಟಿಷ್ ಇಂಡಿಯಾ
ವೃತ್ತಿಬರಹಗಾರ, ಕವಿ, ಶಿಕ್ಷಕ
ವಿದ್ಯಾಭ್ಯಾಸಸಾಹಿತ್ಯದಲ್ಲಿ ಪಿಎಚ್‌ಡಿ, ಗುರುನಾನಕ್ ದೇವ್ ವಿಶ್ವವಿದ್ಯಾಲಯ (ಅಮೃತ್‌ಸರ್)

ಜೀವನಚರಿತ್ರೆ

ಸುರ್ಜಿತ್ ಪಾಟಾರ್: ಜೀವನಚರಿತ್ರೆ, ಪ್ರಸಿದ್ಧ ಕವನಗಳು, ಚಿತ್ರಕಥೆ 
ಅಭಿಮಾನಿಯೊಂದಿಗೆ ಸುರ್ಜಿತ್ ಪಾಟಾರ್

ಪಾಟಾರ್ ಅವರು ಜಲಂಧರ್ ಜಿಲ್ಲೆಯ ಪಾಟ್ಟಾರ್ ಕಲಾನ್ ಗ್ರಾಮದವರು. ಅವರು ಕಪುರ್ತಲಾದ ರಣಧೀರ್ ಕಾಲೇಜಿನಿಂದ ಪದವಿ ಪಡೆದರು, ನಂತರ ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅಮೃತ್‌ಸರ್‌ನ ಗುರುನಾನಕ್ ದೇವ್ ವಿಶ್ವವಿದ್ಯಾಲಯದಿಂದ "ಗುರುನಾನಕ್ ವಾಣಿಯಲ್ಲಿ ಜಾನಪದ ರೂಪಾಂತರ" ದ ಕುರಿತು ಸಾಹಿತ್ಯದಲ್ಲಿ ಪಿಎಚ್‌ಡಿ ಪಡೆದರು. ನಂತರ ಅವರು ಶೈಕ್ಷಣಿಕ ವೃತ್ತಿಗೆ ಸೇರಿ, ಲುಧಿಯಾನದ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಿಂದ ಪಂಜಾಬಿ ಪ್ರಾಧ್ಯಾಪಕರಾಗಿ ನಿವೃತ್ತರಾದರು. ಅವರು ಅರವತ್ತರ ದಶಕದ ಮಧ್ಯಭಾಗದಲ್ಲಿ ಕವನ ಬರೆಯಲು ಪ್ರಾರಂಭಿಸಿದರು. "ಹವಾ ವಿಚ್ ಲಿಖೆ ಹರ್ಫ್" (ಗಾಳಿಯಲ್ಲಿ ಬರೆದ ಪದಗಳು), ಬಿರ್ಖ್ ಅರ್ಜ಼್ ಕರೇ, ಹನೆರೆ ವಿಚ್ ಸುಲಗ್ಡಿ ವರ್ಣಮಾಲಾ (ಕತ್ತಲೆಯಲ್ಲಿ ಹೊಗೆಯಾಡುವ ಪದಗಳು), ಲಫ್ಜಾನ್ ಡಿ ದರ್ಗಾ (ಪದಗಳ ದೇಗುಲ), ಪಟ್ಜರ್ ಡಿ ಪಜ಼ೆಬ್ ಮತ್ತು ಸುರ್ಜ಼ಮೀನ್ (ಸಂಗೀತ ಭೂಮಿ) ಇವು ಅವರ ಕವನ ಕೃತಿಗಳು.

ಇವರು ಫೆಡೆರಿಕೊ ಗಾರ್ಸಿಯಾ ಲೋರ್ಕಾ ಅವರ ಮೂರು ದುರಂತಗಳು, ಗಿರೀಶ್ ಕಾರ್ನಾಡ್ ಅವರ ನಾಗಮಂಡಲ ನಾಟಕ, ಮತ್ತು ಬರ್ಟೋಲ್ಟ್ ಬ್ರೆಕ್ಟ್ ಮತ್ತು ಪ್ಯಾಬ್ಲೋ ನೆರುಡಾ ಅವರ ಕವನಗಳನ್ನು ಪಂಜಾಬಿಗೆ ಅನುವಾದಿಸಿದ್ದಾರೆ. ಅವರು ಶೇಖ್ ಫರೀದ್‌ನಿಂದ ಶಿವ ಕುಮಾರ್ ಬಟಾಲ್ವಿವರೆಗೆ ಪಂಜಾಬಿ ಕವಿಗಳ ಮೇಲೆ ಟೆಲಿ-ಸ್ಕ್ರಿಪ್ಟ್‌ಗಳನ್ನು ಬರೆದಿದ್ದಾರೆ.

ಅವರು ಚಂಡೀಗಢದ ಪಂಜಾಬ್ ಆರ್ಟ್ಸ್ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದಾರೆ. ಅವರು ೨೦೧೨ ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.

ಪ್ರಸಿದ್ಧ ಕವನಗಳು

"ಕ್ಯಾಂಡಲ್ಸ್", "ಹನೇರೆ ವಿಚ್ ಸುಲಗ್ಡಿ ವರ್ಣಮಾಲಾ", "ಅಯ್ಯಾ ನಂದ್ ಕಿಶೋರ್", "ಹನೇರ ಜರೇಗಾ ಕಿವೆನ್", "ಫಸ್ಲಾ", "ಕೋಯಿ ದಾಲಿಯಾ ಚೋ ಲಂಗೇಯ ಹವಾ ಬನ್ ಕೆ" ಇವು ಅವರ ಪ್ರಸಿದ್ದ ಕವನಗಳು.

ಚಿತ್ರಕಥೆ

ಸುರ್ಜಿತ್ ಪಾಟಾರ್ ಅವರು ಪಂಜಾಬಿ ಚಲನಚಿತ್ರವಾದ ಶಹೀದ್ ಉದ್ಧಮ್ ಸಿಂಗ್ ಮತ್ತು ದೀಪಾ ಮೆಹ್ತಾ ಅವರ ಹೆವನ್ ಆನ್ ಅರ್ಥ್ ಚಿತ್ರದ ಪಂಜಾಬಿ ಆವೃತ್ತಿಯಾದ ವಿದೇಶ್‌ನ ಸಂಭಾಷಣೆಗಳನ್ನು ಬರೆದಿದ್ದಾರೆ.

ಪ್ರಶಸ್ತಿಗಳು

ಸುರ್ಜಿತ್ ಪಾಟಾರ್: ಜೀವನಚರಿತ್ರೆ, ಪ್ರಸಿದ್ಧ ಕವನಗಳು, ಚಿತ್ರಕಥೆ 
ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ಸುರ್ಜಿತ್ ಪಾಟಾರ್
  • ೧೯೭೯: ಪಂಜಾಬ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ೧೯೯೩: ಹನೇರೆ ವಿಚ್ ಸುಲಗ್ಡಿ ವರ್ಣಮಾಲಾ ಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • ೧೯೯೯: ಭಾರತೀಯ ಭಾಷಾ ಪರಿಷತ್ತು, ಕೋಲ್ಕತ್ತಾದಿಂದ ಪಂಚನಾದ್ ಪುರಸ್ಕಾರ
  • ೨೦೦೯: ಕೆಕೆಬಿರ್ಲಾ ಫೌಂಡೇಶನ್‌ನಿಂದ ಸರಸ್ವತಿ ಸಮ್ಮಾನ್ .
  • ೨೦೦೯: ಗಂಗಾಧರ ರಾಷ್ಟ್ರೀಯ ಪ್ರಶಸ್ತಿ, ಸಂಬಾಲ್ಪುರ್ ವಿಶ್ವವಿದ್ಯಾಲಯ, ಒರಿಸ್ಸಾ
  • ೨೦೧೨: ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ
  • ೨೦೧೪: ಕುಸುಮಾಗ್ರಜ್ ಸಾಹಿತ್ಯ ಪ್ರಶಸ್ತಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಸುರ್ಜಿತ್ ಪಾಟಾರ್ ಜೀವನಚರಿತ್ರೆಸುರ್ಜಿತ್ ಪಾಟಾರ್ ಪ್ರಸಿದ್ಧ ಕವನಗಳುಸುರ್ಜಿತ್ ಪಾಟಾರ್ ಚಿತ್ರಕಥೆಸುರ್ಜಿತ್ ಪಾಟಾರ್ ಪ್ರಶಸ್ತಿಗಳುಸುರ್ಜಿತ್ ಪಾಟಾರ್ ಉಲ್ಲೇಖಗಳುಸುರ್ಜಿತ್ ಪಾಟಾರ್ ಬಾಹ್ಯ ಕೊಂಡಿಗಳುಸುರ್ಜಿತ್ ಪಾಟಾರ್ಪಂಜಾಬಿಪಂಜಾಬ್

🔥 Trending searches on Wiki ಕನ್ನಡ:

ಭಾರತೀಯ ಜ್ಞಾನಪೀಠಕನ್ನಡದಲ್ಲಿ ಸಣ್ಣ ಕಥೆಗಳುಭಾರತದ ಸಂವಿಧಾನನರೇಂದ್ರ ಮೋದಿಸುಭಾಷ್ ಚಂದ್ರ ಬೋಸ್ಭಾರತದಲ್ಲಿ ತುರ್ತು ಪರಿಸ್ಥಿತಿಜ್ಞಾನಪೀಠ ಪ್ರಶಸ್ತಿಅವರ್ಗೀಯ ವ್ಯಂಜನಊಳಿಗಮಾನ ಪದ್ಧತಿಭಾರತೀಯ ಜನತಾ ಪಕ್ಷಹೊಯ್ಸಳಮಳೆಕನ್ನಡಪ್ರಭಕಲ್ಯಾಣಿಸಂಸ್ಕೃತಕನ್ನಡ ವಿಶ್ವವಿದ್ಯಾಲಯಭಾರತದ ರಾಷ್ಟ್ರೀಯ ಚಿನ್ಹೆಗಳುನುಡಿಗಟ್ಟುರಂಜಾನ್ಬೆಂಗಳೂರಿನ ಇತಿಹಾಸಮೊದಲನೆಯ ಕೆಂಪೇಗೌಡಮಗುವಿನ ಬೆಳವಣಿಗೆಯ ಹಂತಗಳುಪೂರ್ಣಚಂದ್ರ ತೇಜಸ್ವಿಭಾರತೀಯ ರಿಸರ್ವ್ ಬ್ಯಾಂಕ್ನಡುಕಟ್ಟುಶಿರ್ಡಿ ಸಾಯಿ ಬಾಬಾಮಂಕುತಿಮ್ಮನ ಕಗ್ಗಗುರುನಾನಕ್ಕಲ್ಯಾಣ್ಕುಟುಂಬನಾಡ ಗೀತೆಜಾನಪದಆಗಮ ಸಂಧಿವ್ಯಾಪಾರರತ್ನತ್ರಯರುಕೋಶಭಾರತದ ರಾಷ್ಟ್ರಗೀತೆಶಾಮನೂರು ಶಿವಶಂಕರಪ್ಪಬಾಲ ಗಂಗಾಧರ ತಿಲಕಆರೋಗ್ಯಏಷ್ಯಾ ಖಂಡಶ್ರೀ ರಾಮಾಯಣ ದರ್ಶನಂರಾಮ ಮನೋಹರ ಲೋಹಿಯಾರವೀಂದ್ರನಾಥ ಠಾಗೋರ್ತ್ರಿಪದಿಆರ್ಯಭಟ (ಗಣಿತಜ್ಞ)ಭಾರತದ ರಾಜಕೀಯ ಪಕ್ಷಗಳುಲಕ್ನೋದೊಡ್ಡರಂಗೇಗೌಡಬರಗೂರು ರಾಮಚಂದ್ರಪ್ಪಆಮ್ಲಜನಕಅಲಿಪ್ತ ಚಳುವಳಿಮೇರಿ ಕ್ಯೂರಿದುರ್ಯೋಧನಹೆಚ್.ಡಿ.ಕುಮಾರಸ್ವಾಮಿರಾಶಿರಗಳೆಕ್ಷಯಕರ್ನಾಟಕ ಪೊಲೀಸ್ಸಂಯುಕ್ತ ರಾಷ್ಟ್ರ ಸಂಸ್ಥೆದ್ರವ್ಯ ಸ್ಥಿತಿಕಲ್ಯಾಣ ಕರ್ನಾಟಕಟಾವೊ ತತ್ತ್ವಅರ್ಥಶಾಸ್ತ್ರಪರಶುರಾಮತಂತ್ರಜ್ಞಾನಮೊಬೈಲ್ ಅಪ್ಲಿಕೇಶನ್ಗೌತಮಿಪುತ್ರ ಶಾತಕರ್ಣಿಭಾರತೀಯ ಕಾವ್ಯ ಮೀಮಾಂಸೆಯೋನಿಪ್ರಬಂಧ ರಚನೆವಿಭಕ್ತಿ ಪ್ರತ್ಯಯಗಳುಜಾತ್ರೆಶಿವಮೊಗ್ಗಬಿ.ಎಲ್.ರೈಸ್ಅಂಬರೀಶ್ಬಾರ್ಬಿಪರಮ ವೀರ ಚಕ್ರ🡆 More