ಸಂಕಲನ

ಸಂಕಲನ (Addition) ವು ಅಂಕಗಣಿತದ ನಾಲ್ಕು ಮೂಲಪರಿಕ್ರಿಯೆಗಳಲ್ಲೊಂದು.

ಉಳಿದವುಗಳೆಂದರೆ, ವ್ಯವಕಲನ (Subtraction), ಗುಣಾಕಾರ (Multiplication), ಮತ್ತು ಭಾಗಾಕಾರ (Division),. ಎರಡು ಪೂರ್ಣಸಂಖ್ಯೆಗಳ ಸಂಕಲನವು ಅವುಗಳ ಪರಿಮಾಣಗಳನ್ನು ಒಟ್ಟುಗೂಡಿಸುವುದಾಗಿರುತ್ತದೆ. ಉದಾಹರಣೆಗೆ ಬಲಗಡೆಯ ಚಿತ್ರದ ಮೂರು ಸೇಬುಹಣ್ಣುಗಳು ಮತ್ತು ಎರಡು ಸೇಬುಹಣ್ಣುಗಳನ್ನು ಒಟ್ಟಿಗೆ ಸೇರಿಸಿದರೆ ಒಟ್ಟು ಐದು ಸೇಬುಹಣ್ಣುಗಳಾಗುವುವು. ಇದು “3 + 2 = 5” ಈ ಗಣಿತದ ಸಮೀಕರಣಕ್ಕೆ ಸಮ. ಅಂದರೆ, “3 ಕೂಡಿಸು 2 ಸಮ 5.”

ಸಂಕಲನ
ಸೇಬಿನ ಹಣ್ಣುಗಳ ಸಂಬಂಧವಾಗಿ ೩ + ೨ = ೫, ಪಠ್ಯಪುಸ್ತಕಗಳಲ್ಲಿ ಒಂದು ಜನಪ್ರಿಯ ಆಯ್ಕೆ

ಪಕ್ಕದಲ್ಲಿರುವ ಹಣ್ಣುಗಳನ್ನು ಎಣಿಸಿದಂತೆ, ಸಂಕಲನವು ಉಳಿದ ಭೌತಿಕ ವಸ್ತುಗಳನ್ನು ಸೇರಿಸುವುದನ್ನು ಪ್ರತಿನಿಧಿಸುತ್ತದೆ. ವ್ಯವಸ್ಥಿತವಾದ ಸಾಮಾನ್ಯೀಕರಣದ ಉಪಯೋಗದಿಂದ ಹೆಚ್ಚು ಅಮೂರ್ತ ಪ್ರಮಾಣಗಳಿಂದಲೂ ಸಂಕಲನವನ್ನು ವ್ಯಾಖ್ಯಾನಿಸಬಹುದು.

ಉದಾಹರಣೆಗೆ ಪೂರ್ಣಾಂಕಗಳು (Integers), ಭಾಗಲಬ್ಧಸಂಖ್ಯೆಗಳು (Rational numbers), ನೈಜಸಂಖ್ಯೆಗಳು (Real numbers), ಮತ್ತು ಸಂಕೀರ್ಣ ಸಂಖ್ಯೆಗಳು (Complex numbers). ಹಾಗೂ ಇತರ ಅಮೂರ್ತ ವಸ್ತುಗಳಾದ ವಾಹಕಗಳು (Vectors) ಮತ್ತು ಮಾತೃಕೆಗಳು (Matrices).

ಅಂಕಗಣಿತದಲ್ಲಿ, ಭಿನ್ನರಾಶಿಗಳು (Fractions) ಮತ್ತು ಋಣಸಂಖ್ಯೆ ಗಳನ್ನು (Negative numbers) ಸಂಕಲನದ ನಿಯಮಗಳನ್ನೊಳಗೊಂಡು ರೂಪಿಸಲಾಗಿರುತ್ತವೆ. ಬೀಜಗಣಿತ (Algebra)ದಲ್ಲಿ, ಸಂಕಲನವನ್ನು ಅಮೂರ್ತವಾಗಿ ಅಭ್ಯಾಸ ಮಾಡಲಾಗುತ್ತದೆ.

ಸಂಕಲನವು ಹಲವಾರು ಪ್ರಮುಖ ಗುಣಗಳನ್ನು ಹೊಂದಿದೆ.

ಪರಿವರ್ತನೀಯ ಗುಣ

ಸಂಖ್ಯೆಗಳು ಅಥವಾ ಬೀಜಪದಗಳ ಸಂಕಲನ ಮಾಡುವಾಗ ಅವುಗಳನ್ನು ಅದಲು ಬದಲು ಮಾಡಿ ಕೂಡಿದರೂ ಮೊತ್ತದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ.

ಉದಾಹರಣೆ 1:5+6=11

6+5=11

ಅಂದರೆ5+6= 6+5 ಆಗುವುದು.

ಉದಾಹರಣೆ 1:x+n=n+x ಆಗುವುದು.

ಸಹವರ್ತನೀಯ ಗುಣ

ಸಂಖ್ಯೆ ಅಥವಾ ಬೀಜಪದಗಳ ಸಂಕಲನ ಮಾಡುವಾಗ ಅವುಗಳನ್ನು ಬೇರೆ ಬೇರೆ ಗುಂಪು ಮಾಡಿ ಕೂಡಿದರೂ ಅವುಗಳ ಮೊತ್ತದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

ಉದಾಹರಣೆ 1:(3+2)+4=5+4=9

3+(2+4)=3+6=9

ಅಂದರೆ (3+2)+4=3+(2+4) ಆಗುವುದು.

ಉದಾಹರಣೆ 1:(a+b)+p=a+(b+p) ಆಗುವುದು.


ಸಂಖ್ಯೆ 1ರ ಪುನರಾವರ್ತಿತ ಸಂಕಲನವು ಕ್ರಮ ಸಂಖ್ಯೆಗಳಾಗಿರುತ್ತವೆ. ಸೊನ್ನೆಯನ್ನು ಸಂಖ್ಯೆಗಳಿಗೆ ಕೂಡಿಸಿದಾಗ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.



Tags:

ಅಂಕಗಣಿತಗುಣಾಕಾರಭಾಗಾಕಾರವ್ಯವಕಲನ

🔥 Trending searches on Wiki ಕನ್ನಡ:

ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಭಾರತದಲ್ಲಿನ ಚುನಾವಣೆಗಳುಬ್ಲಾಗ್ಹೆಚ್.ಡಿ.ಕುಮಾರಸ್ವಾಮಿಭಾರತೀಯ ಸಂಸ್ಕೃತಿಹೊಸ ಆರ್ಥಿಕ ನೀತಿ ೧೯೯೧ಬಹಮನಿ ಸುಲ್ತಾನರುಮಾನವ ಹಕ್ಕುಗಳುಐಹೊಳೆಲೋಕಗರ್ಭಧಾರಣೆಸುಮಲತಾಪಾಟಲಿಪುತ್ರಕರ್ನಾಟಕದ ಜಿಲ್ಲೆಗಳುಲಂಚ ಲಂಚ ಲಂಚಉಪ್ಪಿನ ಸತ್ಯಾಗ್ರಹಯಕ್ಷಗಾನನಿರ್ವಹಣೆ ಪರಿಚಯರಾಜ್ಯಧರ್ಮಸ್ಥಳಇಮ್ಮಡಿ ಪುಲಿಕೇಶಿಭತ್ತಮೂಲಧಾತುಗಳ ಪಟ್ಟಿಯೂಟ್ಯೂಬ್‌ನಿರುದ್ಯೋಗಮೈಸೂರು ಅರಮನೆಮುಂಬಯಿ ವಿಶ್ವವಿದ್ಯಾಲಯಶಿವಕೋಟ್ಯಾಚಾರ್ಯಭೂಮಿಯ ವಾಯುಮಂಡಲದಯಾನಂದ ಸರಸ್ವತಿರಣಹದ್ದುರಕ್ತಪೂರಣವಿಜ್ಞಾನಸವದತ್ತಿಟಿ.ಪಿ.ಕೈಲಾಸಂಅಂಬಿಗರ ಚೌಡಯ್ಯಸಂಧಿನರೇಂದ್ರ ಮೋದಿಕರ್ಣಾಟಕ ಬ್ಯಾಂಕ್ಕಾವ್ಯಮೀಮಾಂಸೆಉಡುಪಿ ಜಿಲ್ಲೆಭಾರತದ ಆರ್ಥಿಕ ವ್ಯವಸ್ಥೆಅಂತಾರಾಷ್ಟ್ರೀಯ ಸಂಬಂಧಗಳುಆಮದು ಮತ್ತು ರಫ್ತುಗ್ರಾಮೀಣ ಪ್ರಾದೇಶಿಕ ಬ್ಯಾಂಕ್ಮಹಮದ್ ಬಿನ್ ತುಘಲಕ್ಕನ್ನಡ ಕಾವ್ಯಚಂದನಾ ಅನಂತಕೃಷ್ಣಜಲ ಮಾಲಿನ್ಯಕಾವೇರಿ ನದಿಕರ್ನಾಟಕದ ನದಿಗಳುಹೆಚ್.ಡಿ.ದೇವೇಗೌಡಆಲೂರು ವೆಂಕಟರಾಯರುಕಾಲಾಯ ತಸ್ಮೈ ನಮಃ (ಚಲನಚಿತ್ರ)ಸತಿಈಸ್ಟರ್ರಾಷ್ಟ್ರೀಯ ವರಮಾನಸೌರಮಂಡಲಅರವಿಂದ್ ಕೇಜ್ರಿವಾಲ್ದರ್ಶನ್ ತೂಗುದೀಪ್ದಿ ಪೆಂಟಗನ್ಹಿಮಸಿದ್ಧರಾಮಷಟ್ಪದಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಅವರ್ಗೀಯ ವ್ಯಂಜನಭಾರತದ ಸಂವಿಧಾನ ರಚನಾ ಸಭೆಭಾರತದ ಸ್ವಾತಂತ್ರ್ಯ ಚಳುವಳಿಕನ್ನಡದಲ್ಲಿ ಕಾದಂಬರಿ ಸಾಹಿತ್ಯರಸ(ಕಾವ್ಯಮೀಮಾಂಸೆ)ಹಾಗಲಕಾಯಿಅಭಿ (ಚಲನಚಿತ್ರ)ನಾಗಚಂದ್ರಚಪಾತಿಪ್ರಜಾವಾಣಿಇಸ್ಲಾಂ🡆 More