ಕನ್ನಡದಲ್ಲಿ ಸಂಕಲನ ಗ್ರಂಥಗಳು

ಕನ್ನಡದಲ್ಲಿ ಸಂಕಲನ ಗ್ರಂಥಗಳು : - ಇತರರ ರಚನೆಗಳಿಂದ ಆಯ್ದ ಅವತರಣಿಕೆಗಳನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಅಳವಡಿಸಿಕೊಡುವ ಸಂದರ್ಭ ಗ್ರಂಥ.

ಇದರಲ್ಲಿ ಆಯ್ಕೆ, ಸಂಯೋಜನೆಗಳು ಮಾತ್ರ ಸಂಕಲನಕಾರನ ಮುಖ್ಯ ಕೆಲಸ; ಟೀಕೆಟಿಪ್ಪಣಿಗಳನ್ನು ಯಥೋಚಿತವಾಗಿ ಸೇರಿಸಲು ಅವಕಾಶವಿರುವುದಾದರೂ ಕೇಂದ್ರಸ್ಥಾನವೆಲ್ಲ ಮೂಲ ಲೇಖಕರಿಗೆ. ಇಂಥ ಗ್ರಂಥಗಳನ್ನು ಒಂದು ಭಾಷಾಸಾಹಿತ್ಯದ ವೈಭವಗಳ ದಿಗ್ದರ್ಶಿಕೆಗಳೆನ್ನಬಹುದು.

ಕನ್ನಡದ ಪ್ರಥಮ ಸಂಕಲನ ಗ್ರಂಥ

ಮಲ್ಲಿಕಾರ್ಜುನನ (13ನೆಯ ಶತಮಾನ) ಸೂಕ್ತಿಸುಧಾರ್ಣವ ಕನ್ನಡದ ಪ್ರಥಮ ಸಂಕಲನ ಗ್ರಂಥ(ಆಂಥಾಲಜಿ). ಪಂಪ, ರನ್ನ, ಜನ್ನ, ಪೊನ್ನ ಮುಂತಾದ ಪ್ರಸಿದ್ಧ ಮಹಾಕವಿಗಳಿಂದಷ್ಟೇ ಅಲ್ಲದೆ, ಈಗ ಅನುಪಲಬ್ಧ ಕೃತಿಗಳ ಕರ್ತೃಗಳಾದ ಗುಣನಂದಿ, ಗುಣವರ್ಮ ಮುಂತಾದ ಪ್ರಾಚೀನರಿಂದಲೂ ಇವನು ಪದ್ಯಗಳನ್ನು ಆಯ್ದಿದ್ದಾನೆ ಎಂಬ ಕಾರಣದಿಂದ ಗ್ರಂಥದ ಮಹತ್ತ್ವ ಹೆಚ್ಚಿದೆ. ಇದರಲ್ಲಿ ಕಾವ್ಯದ ಹದಿನೆಂಟು ಅಂಗಗಳಿಗೂ ಒಂದೊಂದು ಆಶ್ವಾಸ ಮೀಸಲಾಗಿರಿಸಿದ್ದು ಪ್ರತಿಯೊಂದು ಆಶ್ವಾಸದಲ್ಲೂ ಪುರ್ವ ಕವಿಗಳ ಉತ್ತಮ ವರ್ಣನಾಪದ್ಯಗಳ ಸಂಕಲನವಿದೆ. ಸಂಕಲನಕಾರ ಜೈನನಾದರೂ ಶಿವ, ವಿಷ್ಣು, ಗಣಪತಿ ಸ್ತೋತ್ರಗಳನ್ನು ಪೀಠಿಕಾ ಭಾಗದಲ್ಲಿ ಸೇರಿಸಿದ್ದಾನೆ. ತಾನು ಆಯ್ದ ಪದ್ಯಗಳನ್ನು ಬರೆದ ಕವಿಗಳ ಹೆಸರನ್ನು ಹೇಳದೆ ಇರುವುದು ಈ ಗ್ರಂಥದ ದೊಡ್ಡ ಕೊರತೆಯಾಗಿದೆ.

ಸಂಕಲಿತವಾದ ಕಾವ್ಯಸಾರ

ಸೂಕ್ತಿ ಸುಧಾರ್ಣವದಂತೆಯೇ ಪ್ರಸಿದ್ಧವಾಗಿರುವ ಇನ್ನೊಂದು ಕೃತಿ ಅಭಿನವವಾದಿ ವಿದ್ಯಾನಂದನಿಂದ (ಕ್ರಿ.ಶ.೧೫೫೦) 'ಕಾವ್ಯಸಾರ'ವನ್ನು ಎಸ್.ಜಿ.ನರಸಿಂಹಾಚಾರ್ ಮತ್ತು ಎಂ.ಎ.ರಾಮನುಜ ಅಯ್ಯಂಗಾರ್ (೧೮೯೮)ರಲ್ಲಿ ಸಂಪಾದಿಸಿದ್ದಾರೆ. ಇದರಲ್ಲಿ ಕವಿಗಳ ಹಾಗೂ ಉದಾಹೃತ ಕಾವ್ಯಗಳ ಹೆಸರಿರುವುದರಿಂದ ಗ್ರಂಥ ಹೆಚ್ಚು ಪ್ರಯೋಜನಕಾರಿಯಾಗಿದೆ. ಸೂಕ್ತಿಸುಧಾರ್ಣವದಲ್ಲಿ ಕಂಡುಬರದ ಮುಂದಿನ ಕವಿಗಳಿಗೂ ಅನೇಕ ಮುಕ್ತಕಗಳು ಹಾಗೂ ಚಾಟುಪದ್ಯಗಳಿಗೂ ಇಲ್ಲಿ ಸ್ಥಾನ ದೊರತಿದೆ.ಮಲ್ಲ ಕವಿ 'ಸಂಯೋಜಿತ ಕಾವ್ಯಸಾರಂ'ವನ್ನು ಎನ್.ಅನಂತರಂಗಚಾರ್ ಅವರು(೧೯೭೩) ಸಂಪಾದಿಸಿದ್ದಾರೆ. ಇದೇ ಕಾಲದಲ್ಲಿ ವೀರಶೈವರು ತಮ್ಮ ಧಾರ್ಮಿಕ ಸಾಹಿತ್ಯದ ವಚನಗಳನ್ನು ಶ್ರದ್ಧೆಯಿಂದ ಸಂಕಲನ ಮಾಡುವ ಮಹಾಕಾರ್ಯ ನಡೆಯಿತು. ಜೈನರ (ಪದ್ಯ) ಸಂಕಲನಗಳು ಸಾಹಿತ್ಯ ದೃಷ್ಟಿಯಿಂದ ಹೆಚ್ಚು ಪ್ರೇರಿತವಾದಂತೆ ವೀರಶೈವರ (ಗದ್ಯ ವಚನ) ಸಂಕಲನಗಳು ಭಕ್ತಿಯಿಂದ ಪ್ರೇರಿತವಾದವು. ಜಕ್ಕಣಾರ್ಯನ ಏಕೋತ್ತರ ಶತಸ್ಥಲ, ಕಲ್ಲಮಠದ ಪ್ರಭುದೇವರ ಲಿಂಗಲೀಲಾವಿಲಾಸಚಾರಿತ್ರ, ಚೆನ್ನಂಜೇದೇವನ ಬಸವಸ್ತೋತ್ರದ ವಚನ, ವೀರಶೈವ ಚಿಂತಾಮಣಿ, ವಿಶೇಷಾನುಭವ ಷಟ್ಸ್ಥಲ ಮುಂತಾದ ಎಷ್ಟೋ ವಚನ ಸಂಕಲನಗಳು ಹುಟ್ಟಿದ್ದುವು. ಇವುಗಳಲ್ಲೆಲ್ಲ ಶೂನ್ಯಸಂಪಾದನೆ ಮುಖ್ಯವಾದುದೆನ್ನಬಹುದು. ಈಗ ಪ್ರಸಿದ್ಧವಾಗಿರುವ ಶೂನ್ಯಸಂಪಾದನೆ ಗೂಳೂರ ಸಿದ್ಧವೀರಣ್ಣೊಡೆಯನ ಸಂಕಲನ. ಆದರೆ ಇದಕ್ಕೂ ಮುಂಚೆಯೇ ಶಿವಗಣಪ್ರಸಾದಿ ಮಹದೇವಯ್ಯ, ಕೆಂಚವೀರಣ್ಣೊಡೆಯ, ಹಲಗೆಯ ದೇವರು, ಗುಮ್ಮಳಾಪುರದ ಸಿದ್ಧಲಿಂಗಯತಿ ಮುಂತಾದವರಿಂದ ಶೂನ್ಯಸಂಪಾದನೆ ಎಂಬ ಹೆಸರಿನಲ್ಲಿ ಬೇರೆ ಸಂಕಲನಗ್ರಂಥಗಳಿದ್ದುವೆಂದು ತಿಳಿದುಬರುತ್ತದೆ. ಇವುಗಳಲ್ಲಿ ಅಲ್ಲಮಪ್ರಭು, ಬಸವೇಶ್ವರ, ಅಕ್ಕಮಹಾದೇವಿ ಮುಂತಾದ ಶಿವಶರಣ ಶರಣೆಯರ ವಚನಗಳನ್ನು ನಾಟಕೀಯವಾಗಿ ಸಂವಾದರೂಪದಲ್ಲಿ ಅಳವಡಿಸಿರುವುದು ಸಂಕಲನಕಾರನ ವೈಶಿಷ್ಟ್ಯವಾಗಿದೆ. ಒಮ್ಮೊಮ್ಮೆ ವಚನಗಳ ವ್ಯಾಖ್ಯಾನವ ಈ ಗ್ರಂಥಗಳಲ್ಲಿ ಕಾಣಬರುತ್ತದೆ.ಜಿ.ವೂರ್ತ್ ಅವರ 'ಕರ್ನಾಟಕ ಪ್ರಾಕ್ಕಾವ್ಯ ಮಾಲಿಕೆ'(೧೮೬೮)

ಅನಂತರ 20ನೆಯ ಶತಮಾನದ ಆರಂಭದವರೆಗೂ ಸಂಕಲನ ಗ್ರಂಥಗಳ ಹುಟ್ಟು ಹೆಚ್ಚಾಗಿ ಕಾಣಿಸದು. ಮೊದಲಿಗೆ ಪ್ರೌಢಶಾಲಾ ಕಾಲೇಜುಗಳ ಪಾಠಕ್ಕೆ ಉಪಯೋಗವಾಗುವಂತೆ ಎಸ್.ಜಿ.ನರಸಿಂಹಾಚಾರ್ ಅವರ 'ಪದ್ಯಸಾರ'(೧೯೨೦) ಮುಂತಾದ ಪ್ರಕಟನೆಗಳು ಬಂದುವು. ಆದರೆ ಹೊಸದಾಗಿ ಕನ್ನಡ ಭಾಷಾಬಿಮಾನ ಉಕ್ಕುವಂತೆ ಬಿ.ಎಂ.ಶ್ರೀಕಂಠಯ್ಯನವರಿಂದ ಸಂಕಲಿತವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾದ 'ಕನ್ನಡ ಬಾವುಟ'(೧೯೩೮) ಆಧುನಿಕ ಕನ್ನಡ ಸಂಕಲನ ಗ್ರಂಥಗಳಿಗೆ ನಾಂದಿ ಹಾಡಿತೆನ್ನಬಹುದು. ಹಾಗೆಯೇ ಇಂಗ್ಲಿಷ್ನಿಂದ ಅನುವಾದ ಮಾಡಲಾದ ಕನ್ನಡ ಕವಿತೆಗಳನ್ನೇ ಒಳಗೊಂಡಿದ್ದರೂ ಕನ್ನಡ ಕವಿತಾರಚನೆಗೆ ಛಂದಸ್ಸು, ತಂತ್ರಗಳ ನೂತನ ದೃಷ್ಟಿಯನ್ನೊದಗಿಸಿ, ವಿನೂತನ ಕಾವ್ಯ ಸಂಪ್ರದಾಯಕ್ಕೆ ನಾಂದಿ ಹಾಡಿದ ಶ್ರೀ ಅವರ ಇಂಗ್ಲಿಷ್ ಗೀತಗಳು ಕೂಡ ಇಲ್ಲಿ ಉಲ್ಲೇಖನೀಯ. ಮುಂದೆ ರೊಮ್ಯಾಂಟಿಕ್ ಸಂಪ್ರದಾಯದಲ್ಲಿ ಬರೆದ ಕವನ ಸಂಕಲನಗಳು ತಳಿರು ಮೊದಲಾದವು ಪ್ರಕಟವಾಗುವ ಪರಿಪಾಠ ಬೆಳೆದುದನ್ನು ಕಾಣುತ್ತೇವೆ.ದ.ರಾ.ಬೇಂದ್ರೆಯವರ 'ಹೊಸ ಗನ್ನಡ ಕಾವ್ಯಶ್ರೀ'(೧೯೫೭) , ಕೆ.ಡಿ.ಕುರ್ತಕೋಟಿ ಮತ್ತು ಜಿ.ಬಿ.ಜೋಶಿ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ 'ನಡೆದು ಬಂದ ದಾರಿ'(೧೯೫೯) ವಿಶೇಷ ಮಹತ್ತ್ವಪಡೆದ ಒಂದು ಸಂಕಲನಗ್ರಂಥವಾಗಿದೆ. ಇದರಲ್ಲಿ ಹೊಸಗನ್ನಡ ಕಾವ್ಯ, ವಿಮರ್ಶೆ, ನಾಟಕ, ಕಾದಂಬರಿ, ಸಣ್ಣಕಥೆ ಈ ಸಾಹಿತ್ಯ ಪ್ರಕಾರಗಳ ವಿಷಯ ನಿರೂಪಿತವಾಗಿದೆ.

‘ನವ್ಯ-ಧ್ವನಿ’ ಒಂದು ವಿಶಿಷ್ಟ ಕಾವ್ಯಮಾರ್ಗದ ದಿಗ್ದರ್ಶನದ ದೃಷ್ಟಿಯಿಂದಲೇ ಹೊರಟ ಮೊದಲ ಕಾವ್ಯಸಂಕಲನ (ಧಾರವಾಡ 1956). ಇದರ ಸಂಪಾದಕರಾದ ವಿ.ಕೆ.ಗೋಕಾಕ ಮತ್ತು ಚೆನ್ನವೀರ ಕಣವಿ ಅವರು ರೊಮ್ಯಾಂಟಿಕ್ ಪರಂಪರೆಯ ಕವಿಗಳಿಗಿಂತ ಬಿನ್ನವಾದ ಕಾವ್ಯಸ್ವರೂಪವನ್ನು ಗುರುತಿಸಿ ಕನ್ನಡ ಕಾವ್ಯದ ನೂತನ ದಿಗಂತವನ್ನು ಕೈಮಾಡಿ ತೋರಿಸಲು ಯತ್ನಿಸಿದರು. ಇದರಲ್ಲಿ ಗೋಕಾಕ, ಅಡಿಗ, ಕಣವಿ, ರಾಮಚಂದ್ರಶರ್ಮ, ಶಂಕರಮೊಕಾಶಿಪುಣೇಕರ ಮೊದಲಾದವರ ಹೊಸ ಕಾವ್ಯ ಧೋರಣೆಯನ್ನು ಕಾಣುತ್ತೇವೆ. ಧಾರವಾಡದಿಂದ ಪ್ರಕಟವಾದ ಮತ್ತೊಂದು ಕವನ ಸಂಕಲನ - ಸಂಕ್ರಮಣ ಕಾವ್ಯ (1965). ಇದರ ಸಂಪಾದಕರು ಚಂದ್ರಶೇಖರ ಪಾಟೀಲ ಮತ್ತು ಇತರರೂ ಆದ ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣ ಶೆಟ್ಟಿ. ಇದರಲ್ಲಿ ಹಿಂದಿನವರ ಜೊತೆಗೆ ಕೆ.ಎಸ್.ನರಸಿಂಹಸ್ವಾಮಿ, ಲಂಕೇಶ್, ರಾಮಾನುಜನ್ ಮುಂತಾದವರ ನೂತನ ರಚನೆಗಳೂ ಸೇರಿವೆ.

ಪಿ.ಲಂಕೇಶ್ ಅವರಿಂದ ಸಂಪಾದಿತವಾಗಿ ಪ್ರಕಟವಾದ 'ಅಕ್ಷರ ಹೊಸ ಕಾವ್ಯ' (1970) ಕನ್ನಡ ನವ್ಯ ಸಾಹಿತ್ಯದ ಸಮಗ್ರ ಸ್ವರೂಪವನ್ನು ದಿಗ್ದರ್ಶಿಸುವ ಪ್ರಯತ್ನವುಳ್ಳ ಅತ್ಯಂತ ಗಮನಾರ್ಹ ಸಂಕಲನ ಗ್ರಂಥ. ಇಂಗ್ಲಿಷಿನಲ್ಲಿ ಪ್ರಕಟವಾದ ಫೇಬರ್ ಬುಕ್ ಆಫ್ ಮಾಡ್ರನ್ ವರ್ಸ್‌ ಈ ಗ್ರಂಥಕ್ಕೆ ಮಾದರಿ. ಅಕ್ಷರ ಹೊಸ ಕಾವ್ಯದಲ್ಲಿ ಸುಮಾರು 34 ಜನ ಕನ್ನಡದ ಪ್ರತಿಭಾವಂತ ಕವಿಗಳಿಗೆ ಎಡೆ ದೊರಕಿದೆ. 4000 ಪದ್ಯಗಳನ್ನು ಓದಿ ಆಯಾ ಕವಿಯ ಒಟ್ಟು ಜೀವನ ದೃಷ್ಟಿ, ಧೋರಣೆಗಳನ್ನು ಪ್ರತಿಬಿಂಬಿಸುವಂತೆ ಕವನಗಳನ್ನು ಆಯ್ಕೆ ಮಾಡಲಾಗಿದೆ. ನವ್ಯಕಾವ್ಯದ ಗಟ್ಟಿ ನೆಲವಾದ ಎಂ.ಗೋಪಾಲಕೃಷ್ಣ ಅಡಿಗರಿಂದ ಹಿಡಿದು ಬಿ.ಆರ್.ಲಕ್ಷ್ಮಣ ರಾವ್, ಶ್ರೀ ಕೃಷ್ಣ ಆಲನಹಳ್ಳಿ, ಕೆ.ವಿ.ತಿರುಮಲೇಶ್, ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟ ಮೊದಲಾದ ಕವಿಗಳ ಕವನಗಳು ಸಂಕಲನಗೊಂಡಿವೆ. 'ಹೊಸ ಜನಾಂಗದ ಕವಿತೆಗಳು' (1971) ಅಕ್ಷರ ಹೊಸ ಕಾವ್ಯದ ಮಾದರಿಯಲ್ಲಿ ರಚಿತವಾದ ಇನ್ನೊಂದು ಸಂಕಲನ ಗ್ರಂಥ. ಬುದ್ದಣ್ಣ ಹಿಂಗಮಿರೆ ಇದರ ಸಂಪಾದಕರು. ಈ ಗ್ರಂಥದಲ್ಲಿ ಅಕ್ಷರ ಹೊಸ ಕಾವ್ಯದಲ್ಲಿ ಸೇರದೆ ಇರುವ ಕವಿಗಳ ಕವನಗಳು ಸಂಕಲನಗೊಂಡಿವೆ. ಸಂಪಾದಕರ ಪ್ರಶ್ನೆಗಳಿಗೆ ಕವಿಗಳಿಂದ ಬಂದ ಉತ್ತರಗಳು ಈ ಗ್ರಂಥದ ಪ್ರಮುಖ ಆಕರ್ಷಣೆ. ಈ ಪ್ರಶ್ನೋತ್ತರ ಸಂವಾದ ಆಯಾ ಕವಿಯ ಕಾವ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಸಾಕಷ್ಟು ಸಹಾಯವನ್ನೊದಗಿಸುತ್ತದೆ. ಹಳಗನ್ನಡದಿಂದ ಆರಂಬಿಸಿ ಆಧುನಿಕ ಕಾಲದ ವರೆಗೂ ಪ್ರಸಿದ್ಧ ಕವಿಗಳ ಕಾವ್ಯ ರಚನೆಗಳಿಂದ ಆಯ್ದು ಸಿದ್ಧಪಡಿಸಿದ ಸಂಕಲನ ಗ್ರಂಥಗಳಲ್ಲಿ ರಂ.ಶ್ರೀ.ಮುಗಳಿಯವರ ಸಂಪಾದಕತ್ವದಲ್ಲಿ ಹೊರಬಂದ 'ಕನ್ನಡ ಕಾವ್ಯ ಸಂಚಯ' ಬಹುಮುಖ್ಯವಾದುದು. ಇದು ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿದೆ (1970). 'ಬೆನ್ನ ಹಿಂದಿನ ಬೆಳಕು' (1972) ಬಳ್ಳಾರಿ, ಗುಲ್ಬರ್ಗಾ, ರಾಯಚೂರು, ಬೀದರ್- ಈ ಭಾಗದ ಸುಮಾರು 27 ಜನ ಕವಿಗಳನ್ನೊಳಗೊಂಡ ಸಂಕಲನ ಗ್ರಂಥ. 'ಶಾಂತರಸ' ಈ ಸಂಕಲನದ ಸಂಪಾದಕರು.ಪು.ತಿ.ನರಸಿಂಹಾಚಾರ್ ಅವರ - 'ಸುವರ್ಣ ಸಂಪುಟ' (೧೯೮೦) ಇತರರೊಂದಿಗೆ.ಇದು ಕನ್ನಡ ಭಾವಗೀತೆಗಳ ಸಂಕಲನ.

ವಿವಿಧಗಳು

ಕವಿತಾ ಸಂಕಲನಗಳಂತೆಯೇ ಸಣ್ಣಕಥೆಗಳ, ಲಘುಪ್ರಬಂಧಗಳ, ಏಕಾಂಕ ನಾಟಕಗಳ ಕೆಲವು ಸಂಕಲನ ಗ್ರಂಥಗಳೂ ಈ ಕಾಲದಲ್ಲೇ ಪ್ರಕಟಗೊಂಡಿವೆ. ಇನ್ನಷ್ಟು ಹೊಸ ಕತೆಗಳು (ಮನೋಹರ ಗ್ರಂಥಮಾಲೆ) ಸಣ್ಣಕಥೆಗಳ ಒಂದು ಗಮನಾರ್ಹ ಸಂಕಲನ. ವಿದ್ವತ್ಪೂರ್ಣವಾದ ಗಂಬೀರ ಪ್ರಬಂಧಗಳ ಹಾಗೂ ವ್ಯಕ್ತಿತ್ವದ್ಯೋತಕ ಪ್ರಬಂಧಗಳ ಸಂಕಲನವನ್ನು ಸುಂದರವಾದ ಬೃಹತ್ಸಂಪುಟಗಳಲ್ಲಿ ಮಾಡುವ ಒಂದು ನೂತನ ಕ್ರಮವನ್ನು ಇಲ್ಲಿ ನಿರ್ದೇಶಿಸದೆ ಕೈಬಿಡುವಂತಿಲ್ಲ. ಕನ್ನಡ ನಾಡು - ನುಡಿಗಳ ಉನ್ನತಿಗಾಗಿ ದುಡಿದ ಅನೇಕ ಮಹನೀಯರ ಹಾಗೂ ಸಂಸ್ಥೆಗಳ ಸಂಸ್ಮರಣಾರ್ಥವಾಗಿ ಕಾಲದಿಂದ ಕಾಲಕ್ಕೆ ಅಬಿನಂದನ ಗ್ರಂಥಗಳೆಂಬ ಹೆಬ್ಬೊತ್ತಿಗೆಗಳು ಈಗಾಗಲೆ ಗಣನೀಯ ಪ್ರಮಾಣದಲ್ಲಿ ಬಂದಿವೆ. ಇಲ್ಲಿ ಆತ್ಮೀಯರಿಂದ ಬರೆಯಲಾದ ವ್ಯಕ್ತಿ ಚಿತ್ರಣಗಳ ಜೊತೆಜೊತೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿಗಳ ವಿಶಿಷ್ಟಾಂಶಗಳ ಬಗೆಗೆ ವಿಶೇಷಜ್ಞರಿಂದ ಬರೆಯಿಸಲಾದ ಸಂಶೋಧನ ಪ್ರಬಂಧಗಳೂ ಸೇರಿರುತ್ತವೆ. ಈ ಮಾಲಿಕೆಯಲ್ಲಿ ಬಿ.ಎಂ.ಶ್ರೀ. ಅವರಿಗೆ ಅರ್ಪಿಸಲಾದ ಸಂಭಾವನೆ ಮೊದಲನೆಯದೆನ್ನಬಹುದು. ಇದಾದ ಮೇಲೆ ಸುಮಾರು 100ಕ್ಕೂ ಮೇಲ್ಪಟ್ಟು ಅಬಿsನಂದನ ಗ್ರಂಥಗಳು ಪ್ರಕಟಗೊಂಡಿವೆ. ಇವುಗಳಲ್ಲಿ ವಚನ ಪಿತಾಮಹ (ಫ.ಗು.ಹಳಕಟ್ಟಿ), ಜ್ಞಾನೋಪಾಸಕ ಮತ್ತು ಉಪಾಯನ (ಡಿ.ಎಲ್. ನರಸಿಂಹಾಚಾರ್), ಗಂಗೋತ್ರಿ ಮತ್ತು ಸಹ್ಯಾದ್ರಿ (ಕುವೆಂಪು), ದೀವಿಗೆ (ಗೋವಿಂದ ಪೈ), ಸವಿನೆನಪು (ಟಿ.ಎಸ್.ವೆಂಕಣ್ಣಯ್ಯ), ಶ್ರೀನಿವಾಸ (ಮಾಸ್ತಿ ವೆಂಕಟೇಶ ಅಯ್ಯಂಗಾರ್), ಚಂದನ (ಕೆ.ಎಸ್. ನರಸಿಂಹಸ್ವಾಮಿ), ಕಾದಂಬರೀ ದರ್ಶನ (ಕೃಷ್ಣಮೂರ್ತಿ ಪುರಾಣಿಕ), ದೇವಗಂಗೆ (ಬಿ.ಶಿವಮೂರ್ತಿಶಾಸ್ತ್ರೀ), ಅಂತಃಕರಣ, ನಮ್ಮ ನಾಡೋಜ (ದೇಜಗೌ), ಗೊರೂರು ಗೌರವಗ್ರಂಥ (ಗೊರೂರು ರಾಮಸ್ವಾಮಿ ಅಯ್ಯಂಗಾರ್), ರಸಚೇತನ (ಅ.ನ.ಕೃ.), ವಿನಾಯಕ ವಾಙ್ಮಯ (ವಿ.ಕೃ.ಗೋಕಾಕ), ವಿ.ಸೀ-75 (ವಿ.ಸೀತಾರಾಮಯ್ಯ), ಅಬಿನಂದನೆ (ಎ.ಆರ್.ಕೃಷ್ಣಶಾಸ್ತ್ರೀ), ಪೂರ್ಣಕುಂಭ (ಎಸ್.ವಿ.ಪರಮೇಶ್ವರ ಭಟ್ಟ), ಕಬ್ಬಿನ ಹಾಲು (ಕೆ.ವಿ.ಶಂಕರಗೌಡ), ಅಧ್ಯಯನ (ಶಂ.ಬಾ.ಜೋಶಿ), ಚೆಂಬೆಳಕು (ಚೆನ್ನವೀರಕಣವಿ), ಯದುಗಿರಿ (ಪು.ತಿ.ನ), ಕಾವ್ಯಾನಂದ (ಸಿದ್ಧಯ್ಯ ಪುರಾಣಿಕ), ಎಚ್ಚೆಸ್ಕೆಯವರ ಆಯ್ದ ಬರಹಗಳು (ಎಚ್ಚೆಸ್ಕೆ), ಸಿದ್ಧಗಂಗಾಶ್ರೀ (ಶಿವಕುಮಾರ ಮಹಾಸ್ವಾಮಿ), ಕಲಾಗೌರವ (ಆರ್.ಜಿ.ರಾಯಕರ), ತ.ರಾ.ಸು. ಬದುಕು ಬರಹ (ತ.ರಾ.ಸು), ಜಾನಪದ ಸಂಪದ (ಎಂ.ಎಸ್.ಸುಂಕಾಪುರ), ಬೆಳುವಲ (ಬೆಟಗೇರಿ ಕೃಷ್ಣಶರ್ಮ), ನಾಡಿಗರ ಬರಹಗಳು (ನಾಡಿಗ ಕೃಷ್ಣಮೂರ್ತಿ), ಗಮಕಶಾರದೆ (ಶಕುಂತಲಾಬಾಯಿ ಪಾಂಡುರಂಗರಾವ್), ರಸರಾಜ (ಚಿಟ್ಟಾಣಿ ರಾಮಚಂದ್ರ ಹೆಗಡೆ), ಸ್ವಸ್ತಿ (ತ.ಸು.ಶಾಮರಾಯ), ಮಾನ (ಹಾ.ಮಾ.ನಾಯಕ), (ಎಸ್.ಎಲ್.ಭೈರಪ್ಪ) ವ್ಯಾಸಂಗನೆ, ಪ್ರಶಾಂತ (ಶಾಂತಾದೇವಿ ಮಾಳವಾಡ), ನಾನೀಕಾಕಾ ಎನ್ಕೆ ಬದುಕು, (ಎನ್ಕೆ ಕುಲಕರ್ಣಿ), ಇಂಚರ (ಪಂಡಿತ ಬಸವರಾಜ ರಾಜಗುರು), ಜಿ.ನಾರಾಯಣ ವಿಚಾರ (ಜಿ.ನಾರಾಯಣ), ನಾಟಕ (ಬೇಲೂರು ಕೃಷ್ಣಮೂರ್ತಿ), ಅರವಿಂದ (ಪಂಡಿತ ಶೇಷಾದ್ರಿ ಗವಾಯಿ), ಕಟ್ಟೀಮನಿ, ಬದುಕ ಬರಹ (ಬಸವರಾಜ ಕಟ್ಟೀಮನಿ), ನಿರಂಜನ ಅಬಿನಂದನಾ ಗ್ರಂಥ (ನಿರಂಜನ), ಅನುಪಮಾ ಅಬಿನಂದನಾ (ಅನುಪಮಾ ನಿರಂಜನ), ಚದುರಂಗ ವ್ಯಕ್ತಿ ಅಬಿವ್ಯಕ್ತಿ (ಚದುರಂಗ), ಶಿವಚಿಂತನ (ಎಚ್.ತಿಪ್ಪೇರುದ್ರಸ್ವಾಮಿ), ಲೋಕಮಿತ್ರ (ಕು.ಶಿ.ಹರಿದಾಸ ಭಟ್ಟ), ಅಬಿನಂದನ (ರಾಮಚಂದ್ರ ಉಚ್ಚಿಲ), ಸಾರ್ಥಕ (ಸಿ.ಪಿ.ಕೆ.), ಜ್ಞಾನದೇಗುಲ (ಪುಟ್ಟರಾಜ ಗವಾಯಿ), ಶ್ರೀಮುಖ (ಟಿ.ವಿ.ವೆಂಕಟಾಚಲಶಾಸ್ತ್ರೀ), ಅಬಿಜ್ಞಾನ (ಕೆ.ಕೃಷ್ಣಮೂರ್ತಿ), ಸಂಶೋಧನೆ (ಚಿದಾನಂದಮೂರ್ತಿ), ಹೊನ್ನಹೊಂಬಾಳೆ (ಡಿ.ಕೆ.ರಾಜೆಂದ್ರ), ವಜ್ರಕುಸುಮ (ಬಿ.ಬಿ.ಸಾಸನೂರ), ಸಿರಸಂಪದ (ಬ.ವಿ.ಶಿರ್ಹೂರ), ಉನ್ಮೀಲನ (ಆರ್ಯಾಂಬಪಟ್ಟಾಬಿ), ಅಕ್ಕಕೇಳವ್ವ (ಸರೋಜನಿ ಶಿಂತ್ರಿ), ವಾಙ್ಮಯತಪಸ್ವಿ (ಕಡೆಂಗೋಡ್ಲು ಶಂಕರಭಟ್ಟ), ತುಂಬಿದ ಕೊಡ (ಕಾಶಿವಿಶ್ವನಾಥ ಶೆಟ್ಟಿ), ಸಾರ್ಥಕ (ಎಂ.ಮರಿಯಪ್ಪಭಟ್ಟ) (ಎಂ.ಎಂ.ಕಲಬುರ್ಗಿ) ಮಹಾಮಾರ್ಗ ಮೊದಲಾದವುಗಳನ್ನು ಹೆಸರಿಸಬಹುದು.

ಇತ್ತೀಚಿನ ದಿನಗಳು

ಇತ್ತೀಚಿನ ದಿನಗಳಲ್ಲಿ ಒಬ್ಬ ಲೇಖಕನ ಸಮಗ್ರ ಕೃತಿಗಳನ್ನು ಒಂದೆಡೆ ಸಂಕಲಿಸಿ ಪ್ರಕಟಿಸುವ ಪರಿಪಾಠ ಆರಂಭವಾಗಿದೆ. ಸಮಗ್ರ ಗದ್ಯ, ಪದ್ಯ, ಕಾವ್ಯ, ಕಥೆಗಳು ಮೊದಲಾದ ಶೀರ್ಷಿಕೆಯಡಿಯಲ್ಲಿ ಕನ್ನಡದ ಅನೇಕ ಲೇಖಕರ ಕೃತಿಗಳು ಪ್ರಕಟವಾಗಿವೆ, ಪ್ರಕಟವಾಗುತ್ತಿವೆ. ಉತ್ತಮ ಮಕ್ಕಳ ಕವಿತೆಗಳನ್ನು ಒಂದೆಡೆ ಸಂಕಲಿಸಿ ಕೊಡುವ ಪ್ರಯತ್ನವನ್ನು ಬೋಳುವಾರು ಮಹಮದ್ ಕುಂಞ ರಚಿಸಿದ್ದು, ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಒಂದು ಮಹತ್ವದ ಸಂಕಲನವಾಗಿದೆ. ಕನ್ನಡ ಸಣ್ಣಕಥೆಗಳು (ಜಿ.ಎಚ್. ನಾಯಕ) ಇನ್ನೊಂದು ಗಮನಾರ್ಹ ಸಣ್ಣಕಥೆಗಳ ಸಂಕಲನ.

ಅಕಾಡೆಮಿಗಳು, ಅನೇಕ ಸಾಹಿತ್ಯಕ ಸಂಸ್ಥೆಗಳು ಸಂಕಲನ ಗ್ರಂಥಗಳನ್ನು ಪ್ರಕಟಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ 2001ರಲ್ಲಿ ಪ್ರಕಟಿಸಿರುವ ಶತಮಾನದ ಕಾವ್ಯ (ಸಂ. ಎಚ್.ಎಸ್.ವೆಂಕಟೇಶಮೂರ್ತಿ), ಶತಮಾನದ ಸಣ್ಣಕತೆ (ಸಂ. ಬೋಳುವಾರು ಮಹಮದ್ ಕುಂಞ), ಶತಮಾನದ ಸಾಹಿತ್ಯ ವಿಮರ್ಶೆ (ಸಂ. ಎಚ್.ಎಸ್.ರಾಘವೇಂದ್ರರಾವ್), ಶತಮಾನದ ಸಂಶೋಧನೆ (ಸಂ. ಎನ್.ಎಸ್.ತಾರಾನಾಥ್) ಶತಮಾನದ ಲಲಿತ ಪ್ರಬಂಧ (ಸಂ. ಗುರುಲಿಂಗ ಕಾಪಸೆ), ಶತಮಾನದ ಮಕ್ಕಳ ಸಾಹಿತ್ಯ (ಸಂ. ಎನ್.ಎಸ್.ರಘುನಾಥ್) ಇವು ಉಲ್ಲೇಖನೀಯ ಗ್ರಂಥಗಳು.

ಆಧಾರ

ಉಲ್ಲೇಖಗಳು

Tags:

ಕನ್ನಡದಲ್ಲಿ ಸಂಕಲನ ಗ್ರಂಥಗಳು ಕನ್ನಡದ ಪ್ರಥಮ ಸಂಕಲನ ಗ್ರಂಥಕನ್ನಡದಲ್ಲಿ ಸಂಕಲನ ಗ್ರಂಥಗಳು ಸಂಕಲಿತವಾದ ಕಾವ್ಯಸಾರಕನ್ನಡದಲ್ಲಿ ಸಂಕಲನ ಗ್ರಂಥಗಳು ವಿವಿಧಗಳುಕನ್ನಡದಲ್ಲಿ ಸಂಕಲನ ಗ್ರಂಥಗಳು ಇತ್ತೀಚಿನ ದಿನಗಳುಕನ್ನಡದಲ್ಲಿ ಸಂಕಲನ ಗ್ರಂಥಗಳು ಆಧಾರಕನ್ನಡದಲ್ಲಿ ಸಂಕಲನ ಗ್ರಂಥಗಳು ಉಲ್ಲೇಖಗಳುಕನ್ನಡದಲ್ಲಿ ಸಂಕಲನ ಗ್ರಂಥಗಳು

🔥 Trending searches on Wiki ಕನ್ನಡ:

ಷಟ್ಪದಿವಿಕ್ರಮಾರ್ಜುನ ವಿಜಯಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ದಾಳನಾಡ ಗೀತೆಚಿಕ್ಕಮಗಳೂರುರಾಮ ಮಂದಿರ, ಅಯೋಧ್ಯೆಸುಬ್ರಹ್ಮಣ್ಯ ಧಾರೇಶ್ವರಕಾಮಸೂತ್ರಕನ್ನಡ ಜಾನಪದಶಾತವಾಹನರುಇಸ್ಲಾಂ ಧರ್ಮಜ್ಞಾನಪೀಠ ಪ್ರಶಸ್ತಿಚಿತ್ರದುರ್ಗಪೆಟ್ರೋಮ್ಯಾಕ್ಸ್ (ಚಲನಚಿತ್ರ)ಸಂವಹನಸರ್ಕಾರೇತರ ಸಂಸ್ಥೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕಾಮಾಲೆರೈತಜಾತ್ರೆಕ್ರೀಡೆಗಳುಇಮ್ಮಡಿ ಪುಲಿಕೇಶಿಪರಿಸರ ರಕ್ಷಣೆಕೃಷ್ಣಾ ನದಿತಾಪಮಾನಊಟಸಂಯುಕ್ತ ಕರ್ನಾಟಕಸಾಮ್ರಾಟ್ ಅಶೋಕಬಾಲ್ಯ ವಿವಾಹಸಮಾಸಕಾದಂಬರಿಭಾರತೀಯ ಭೂಸೇನೆಕೇಂದ್ರಾಡಳಿತ ಪ್ರದೇಶಗಳುಕಿತ್ತಳೆಕರ್ನಾಟಕದ ಜಾನಪದ ಕಲೆಗಳುಪ್ರೇಮಾಸಿಂಧನೂರುಕೆಂಪು ಕೋಟೆಭಾರತದ ರೂಪಾಯಿಕಂಪ್ಯೂಟರ್ರಾಹುಲ್ ದ್ರಾವಿಡ್ಪಾಕಿಸ್ತಾನಶ್ರೀಕೃಷ್ಣದೇವರಾಯಮೂಲಧಾತುಕರ್ನಾಟಕದಲ್ಲಿ ವನ್ಯಜೀವಿಧಾಮಗಳುಸಂಗ್ಯಾ ಬಾಳ್ಯಕರ್ನಾಟಕ ಲೋಕಸಭಾ ಚುನಾವಣೆ, 2019ಪಾಲಕ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಆಗುಂಬೆಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಆದಿವಾಸಿಗಳುಬೆಳಗಾವಿಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಭೋವಿಗ್ರಂಥಾಲಯಗಳುರತ್ನಾಕರ ವರ್ಣಿಸಿದ್ದರಾಮಯ್ಯಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿರನ್ನಚಾರ್ಲಿ ಚಾಪ್ಲಿನ್ಯೂಟ್ಯೂಬ್‌ಜನತಾ ದಳ (ಜಾತ್ಯಾತೀತ)ಸಿ ಎನ್ ಮಂಜುನಾಥ್ಸಂವತ್ಸರಗಳುಪಂಚಾಂಗಹೈದರಾಬಾದ್‌, ತೆಲಂಗಾಣತಾಳೆಮರಝಾನ್ಸಿಶ್ರೀ ಕೃಷ್ಣ ಪಾರಿಜಾತಯುಗಾದಿಬರವಣಿಗೆಶಬ್ದಮಣಿದರ್ಪಣಮಾನವ ಹಕ್ಕುಗಳುವಿಷ್ಣುವರ್ಧನ್ (ನಟ)ಮೌರ್ಯ (ಚಲನಚಿತ್ರ)🡆 More