ವೆಬ್‌ಎಂ

ವೆಬ್‌ಎಂ' ಒಂದು ಶ್ರಾವ್ಯ-ದೃಶ್ಯ ಕಾರ್ಯಕ್ರಮ ವ್ಯವಸ್ಥೆಯಾಗಿದ್ದು, ಇದನ್ನು ರಾಯಧನ-ಮುಕ್ತ, ಉನ್ನತ-ಗುಣಮಟ್ಟದ ಮುಕ್ತ ವೀಡಿಯೋ ಕಾಂಪ್ರೆಶ್ಶನ್ ವ್ಯವಸ್ಥೆಯೊಂದನ್ನು ಎಚ್‌ಟಿಎಂಎಲ್‌೫ ವೀಡಿಯೋದೊಂದಿಗೆ ಬಳಸಲು ನೀಡುವುದಕ್ಕಾಗಿ ರೂಪಿಸಲಾಗಿದೆ.

ಈ ಪ್ರೊಜೆಕ್ಟ್‌ ಅಭಿವೃದ್ಧಿಪಡಿಸಲು ಗೂಗಲ್ ಪ್ರಾಯೋಜಕತ್ವ ನೀಡಿದೆ.

WebM
Filename extension
.webm
Internet media type
video/webm
audio/webm
Developed byGoogle, based on developments of On2, Xiph, and Matroska
Initial release2010-05-19
Type of formatMedia container
Container forVP8 (video)
Vorbis (audio)
Extended fromMatroska
Free format?Yes. Three-clause BSD license with royalty-free patent license
WebsiteThe WebM Project

ಒಂದು ವೆಬ್‌ಎಂ ಫೈಲ್‌ನಲ್ಲಿ ವಿಪಿ೮ ವೀಡಿಯೋ ಮತ್ತು ವೊರ್ಬಿಸ್ ಆಡಿಯೋ ವಾಹಿನಿಗಳಿದ್ದು, ಇದು ಮ್ಯಾಟ್ರೋಸ್ಕಾ ಪ್ರೊಫೈಲ್‌ನ ಮೇಲೆ ಆಧಾರಿತಗೊಂಡಿರುವ ಧಾರಕದಲ್ಲಿ ಇರುತ್ತದೆ. ಈ ಪ್ರೊಜೆಕ್ಟ್ ವೆಬ್‌ಎಂ ಸಂಬಂಧಿತ ಸಾಫ್ಟ್‌ವೇರನ್ನು BSD ಲೈಸೆನ್ಸ್ ಅಡಿಯಲ್ಲಿ ಬಿಡುಗಡೆ ಮಾಡುತ್ತದೆ ಮತ್ತು ಜಾಗತೀಕವಾಗಿ ಎಲ್ಲಾ ಬಕೆದಾರರಿಗೂ ಇದು ಯಾವುದೇ ಮೀಸಲಾತಿಯಿಲ್ಲದ, ಬೆಲೆಯಿಲ್ಲದ, ರಾಯಧನ-ಮುಕ್ತ ಪೇಟೆಂಟ್ ಲೈಸೆನ್ಸ್ ನೀಡುತ್ತದೆ.

ವೆಬ್‌ಎಂ ವೀಡಿಯೊ

ಮಾರಾಟಗಾರರ ಬೆಂಬಲ

ಸಾಫ್ಟ್‌ವೇರ್‌

ಮೊಜಿಲ್ಲಾ ಫೈರ್‌ಫಾಕ್ಸ್‌, ಒಪೇರಾ, ಮತ್ತು ಗೂಗಲ್ ಕ್ರೋಮ್‌ ಗಳ ಬೆಂಬಲವನ್ನು ೨೦೧೦ ಗೂಗಲ್ ಐ/ಒ ಸಮ್ಮೇಳನದಲ್ಲಿ ಘೋಷಿಸಲಾಯಿತು. ಇಂಟರ್ನೆಟ್ ಎಕ್ಸ್‌ಪ್ಲೋರರ್‌ ೯ ಸಹಾ ವೆಬ್‌ಎಂ ಫೈಲ್‌ಗಳನ್ನು, ಒಂದುವೇಳೆ ವಿಪಿ೮ ಕೊಡೆಕ್ ಅನ್ನು ಸ್ಥಳೀಯವಾಗಿ ಸ್ಥಾಪಿಸಿದಲ್ಲಿ, ಬೆಂಬಲಿಸಲು ಸಾಧ್ಯವಿದೆ. ಡೆಸ್ಕ್‌ಟಾಪ್ ಮೇಲಿರುವ ಸಫಾರಿಯು ಕ್ವಿಕ್‌ಟೈಮ್‌ ನಲ್ಲಿ ಸ್ಥಾಪಿಸಿದ ಯಾವುದೇ ಕೊಡೆಕ್ ಅನ್ನು ಬೆಂಬಲಿಸುತ್ತದೆ, ಮತ್ತು ಆ ಮೂಲಕ ಭವಿಷ್ಯದ ವೆಬ್‌ಎಂ ಪ್ಲೇಬ್ಯಾಕ್ ಅನ್ನು ಪೆರಿಯನ್‌ನಂತಹ ಕ್ವಿಕ್‌ಟೈಮ್‌ ಕೊಡೆಕ್ ಅಂಶಗಳನ್ನು ಬಳಸಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಎಪಿಫ್ಯಾನಿ ಸಹಾ ವೆಬ್‌ಎಂ ಅನ್ನು ಜಿಸ್ಟ್ರೀಮರ್ ಮಲ್ಟಿಮೀಡಿಯಾ ಫ್ರೇಂ‌ವರ್ಕ್ ಮೂಲಕ ಬೆಂಬಲಿಸುತ್ತದೆ.

ಅಡೋಬ್‌ಅಡೋಬ್ ಸಿಸ್ಟಮ್ಸ್ ಫ್ಲ್ಯಾಶ್‌ ಪ್ಲೇಯರ್‌ ವಿಪಿ೮ ಅನ್ನು ಬೆಂಬಲಿಸುವಂತೆ ನವೀಕರಿಸಲಾಗುತ್ತದೆ ಎಂದು ಘೋಷಿಸಿತು, ಆದರೆ ಅದು ವೊರ್ಬಿಸ್ ಅಥವಾ ಮ್ಯಾಟ್ರೋಸ್ಕಾ-ಆಧಾರಿತ ವೆಬ್‌ಎಂ ಸಂಗ್ರಾಹಕಗಳಿಗೆ ಬೆಂಬಲವನ್ನು ಘೋಷಿಸಿಲ್ಲ.

ವಿಎಲ್‌ಸಿ, ಮೈರೊ, ಮೂವಿಡಾ ಮತ್ತು ವಿನ್ಯಾಂಪ್, ಗಳಂತಹ ಮೀಡಿಯಾ ಪ್ಲೇಯರ್‌ಗಳು ಬೆಂಬಲ ಘೋಷಿಸಿವೆ. ವೆಬ್‌ಎಂ ಫೈಲುಗಳನ್ನು ಪ್ಲೇ ಮಾಡಲು ಎಂಪ್ಲೇಯರ್‌ ಸ್ಥಳೀಯ ಬೆಂಬಲವನ್ನು ಹೊಂದಿದೆ. ಲಿಬ್‌ವಿಪಿಎಸ್ ಬೆಂಬಲದೊಂದಿಗೆ ರಚಿಸಿದಾಗ ಎಫ್‌ಎಫ್‌ಎಂಪಿಇಜಿ ಈಗ ವಿಪಿ೮ ವೀಡಿಯೋಗಳನ್ನು ಎನ್‌ಕೋಡ್ ಮತ್ತು ಡಿಕೋಡ್ ಮಾಡಬಲ್ಲುದಾಗಿದೆ. ಅಷ್ಟೇ ಅಲ್ಲದೇ ಮ್ಯುಕ್ಸ್/ಡಿಮ್ಯುಕ್ಸ್ ವೆಬ್‌ಎಂ-ಕಂಪ್ಲೈಂಟ್ ಫೈಲುಗಳನ್ನು ಕೂಡಾ. ಜುಲೈ ೨೩, ೨೦೧೦ ರಂದು ಎಫ್‌ಎಫ್‌ಎಂಪಿಇಜಿ ತಂಡದ ಜೇಸನ್ ಗ್ಯಾರಟ್-ಗ್ಲಾಸರ್, ರೊನಾಲ್ಡ್ ಬುಲ್ಟೀ, ಮತ್ತು ಡೇವಿಡ್ ಕಾನ್ರಾಡ್ ಎಫ್‌ಎಫ್ವಿಪಿ೮ ಡಿಕೋಡರ್ ಅನ್ನು ಘೋಷಿಸಿದರು. ಪರೀಕ್ಷೆಯ ಮೂಲಕ ಅವರು ಎಫ್‌ಎಫ್‌‍ವಿಪಿ೮ ಗೂಗಲ್‌ನ ಲಿಬ್‌ವಿಪಿಎಕ್ಸ್‌ ಡಿಕೋಡರ್‌ಗಿಂತ ಹೆಚ್ಚು ವೇಗದ್ದಾಗಿದೆ ಎಂದು ಹೇಳಿದರು. ಮ್ಯಾಟ್ರೋಸ್ಕಾದ ಪ್ರಸಿದ್ಧ ರಚನಾ ಸಾಧನಗಳಾದ ಎಂಕೆವಿಟೂಲ್‌ನಿಕ್ಸ್ ಹೊಸ ರೀತಿಯಲ್ಲಿ ಮಲ್ಟಿಪ್ಲೆಕ್ಸಿಂಗ್‌/ಡಿಮಲ್ಟಿಪ್ಲೆಕ್ಸಿಂಗ್‌ ವೆಬ್‌ಎಂ-ಕಂಪ್ಲೇಂಟ್ ಫೈಲುಗಳಿಗೆ ಬೆಂಬಲವನ್ನು ಸಾಧಿಸಿವೆ. ಹಾಲಿ ಮೀಡಿಯಾ ಸ್ಪ್ಲಿಟ್ಟರ್ ವೆಬ್‌ಎಂ ಮ್ಯುಕ್ಸಿಂಗ್/ಡಿಮ್ಯುಕ್ಸಿಂಗ್‌ಗೆ ಬೆಂಬಲವನ್ನು ಘೋಷಿಸಿದೆ.

ಎಂಪಿಸಿ-ಎಚ್‌ಸಿ ಎಸ್‌ವಿಎನ್‌ ೨೦೭೧ ಹಾಗೂ ನಂತರದ ಬಿಲ್ಡ್‌ಗಳ ನಂತರದಲ್ಲಿ ಈಗ ವೆಬ್‌ಎಂ ಪ್ಲೇಬ್ಯಾಕ್‌ ಅನ್ನು ಎಫ್‌ಎಫ್‌ಎಂಪಿಇಜಿ ಕೋಡ್ ಆಧಾರಿತವಾದ ಆಂತರಿಕ ವಿಪಿ೮ ಡಿಕೋಡರ್‌ನೊಂದಿಗೆ ಬೆಂಬಲಿಸುತ್ತದೆ. ಎಂಪಿಸಿ-ಎಚ್‌ಸಿಯ ೧.೪.೨೪೯೯.೦ ಮತ್ತು ನಂತರದ ಆವೃತ್ತಿಗಳ ಇತ್ತೀಚಿನ ಅಧಿಕೃತ ಸ್ಥಿರ ಬಿಡುಗಡೆಗಳು ವೆಬ್‌ಎಂಗೆ ಸಂಪೂರ್ಣ ಡಿಕೋಡಿಂಗ್ ಬೆಂಬಲವನ್ನು ಹೊಂದಿವೆ.

ಅಂಡ್ರಾಯಿಡ್‌ ಆವೃತ್ತಿ ೨.೩ - ಜಿಂಜರ್‌ಬ್ರೆಡ್ ಅಧಿಕೃತವಾಗಿ ವೆಬ್‌ಎಂ-ಸಕ್ರಿಯಗೊಳಿಸಲ್ಪಟ್ಟಿದ್ದು, ಅದನ್ನು ಮೊದಲು ನೆಕ್ಸಸ್ ಎಸ್ ಮೊಬೈಲ್ ಫೋನ್ ಮೂಲಕ ಬಿಡುಗಡೆ ಮಾಡಲಾಯಿತು.

ಹಾರ್ಡ್‌ವೇರ್‌

ಎ‌ಎಂಡಿ, ಎಆರ್‌ಎಂ, ಮತ್ತು ಬ್ರಾಡ್‌ಕಾಂ ವೆಬ್‌ಎಂ ಸ್ವರೂಪದ ಹಾರ್ಡ್‌ವೇರ್ ವೇಗೋತ್ಕರ್ಷಕ್ಕೆ ಬೆಂಬಲ ಸೂಚಿಸಿವೆ. ಇಂಟೆಲ್ ಸಹಾ ಒಂದು ವೇಳೆ ಈ ಸ್ವರೂಪವು ಪ್ರಸಿದ್ಧಿಗೊಂಡರ್ರೆ ವೆಬ್‌ಎಂಗಾಗಿ ಹಾರ್ಡ್‌ವೇ ಆಧಾರಿತ ವೇಗೋತ್ಕರ್ಷವನ್ನು ತನ್ನ ಆ‍ಯ್ಟಮ್-ಆಧಾರಿತ ಟಿವಿ ಚಿಪ್ಸ್‌ಗಾಗಿ ಬಳಸಲು ಚಿಂತಿಸುತ್ತಿದೆ. ಕ್ವಾಲ್‌ಕಾಮ್‌ ಮತ್ತು ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಹಾ ಬೆಂಬಲವನ್ನು ಘೋಷಿಸಿವೆ, ಏಕೆಂದರೆ ಟಿಐ ಒಎಂಎಪಿ ಪ್ರೊಸೆಸರ್‌ಗೆ ಸ್ಥಳಿಯ ಬೆಂಬಲವು ದೊರೆತಿದೆ. ಚಿಪ್&ಮೀಡಿಯಾ ಸಂಪೂರ್ಣವಾಗಿ ಹಾರ್ಡ್‌ವೇರ್ ಡಿಕೋಡರ್ ಅನ್ನು ವಿಪಿ೮ ಗಾಗಿ ಘೋಷಿಸಿದ್ದು, ಅದು ಸಂಪೂರ್ಣ ಎಚ್‌ಡಿ ರೆಸೊಲ್ಯೂಶನ್ ವಿಪಿ೮ ಸ್ಟ್ರೀಮ್‌ಗಳನ್ನು ಪ್ರತೀ ಸೆಕೆಂಡಿಗೆ ೬೦ ಫ್ರೇಮುಗಳಂತೆ ಡಿಕೋಡ್ ಮಾಡುವ ಸಾಧ್ಯತೆ ಹೊಂದಿದೆ.

ಎನ್‌ವಿಡಿಯಾ ಸಹಾ ವಿಪಿ೮ ಬಳಕೆಗೆ ತಾವೂ ಬೆಂಬಲವನ್ನು ಸೂಚಿಸುತ್ತೇವೆಂದು ಹೇಳಿದ್ದಾರಾದರೂ ಅವರಿಗೆ ಹಾರ್ಡ್‌ವೇರ್ ಬೆಂಬಲ ನೀಡುವ ಯಾವುದೇ ನಿರ್ಧಿಷ್ಟ ಯೋಜನೆಗಳಿಲ್ಲ.

ಜನವರಿ ೭ ೨೦೧೧ ರಂದು ರಾಕ್‌ಚಿಪ್‌ ೧೦೮೦ಪಿ ವಿಪಿ೮ ಡಿಕೋಡಿಂಗ್‌ನ ಸಂಪೂರ್ಣ ಹಾರ್ಡ್‌ವೇರ್ ಕಾರ್ಯರೂಪಣೆಗಾಗಿ ಜಗತ್ತಿನ ಮೊದಲ ಚಿಪ್‌ ಅನ್ನು ಬಿಡುಗಡೆ ಮಾಡಿತು. ಆರ್‌ಕೆ೨೯ಎಕ್ಸ್‌ಎಕ್ಸ್ ಚಿಪ್‌ನಲ್ಲಿನ ವೀಡಿಯೋ ವೇಗೋತ್ಕರ್ಷವನ್ನು ವೆಬ್‌ಎಂ ಪ್ರೊಜೆಕ್ಟ್‌‍ನ ಜಿ-ಸರಣಿ ೧ ಹಾರ್ಡ್‌ವೇರ್ ಡಿಕೋಡರ್ ಐಪಿ ನಿರ್ವಹಿಸುತ್ತಿದೆ.

ಸೇವೆಗಳು

ಯೂಟ್ಯೂಬ್ ಈಗ ವೆಬ್‌ಎಂ ವೀಡಿಯೋಗಳನ್ನು ತನ್ನ ಎಚ್‌ಟಿಎಂಎಲ್‌೫ ಪ್ಲೇಯರ್ ಪ್ರಯೋಗದ ಭಾಗವಾಗಿ ನೀಡುತ್ತಿದೆ. ೭೨೦p ಮತ್ತು ಹೆಚ್ಚಿನ ರೆಸೊಲ್ಯೂಶನ್ ಇರುವ ಎಲ್ಲಾ ಅಪ್ಲೋಡ್ ಮಾಡಿದ ವೀಡಿಯೋಗಳೂ ವೆಬ್‌ಎಂ ನಿಂದ ೪೮೦ಪಿ ಮತ್ತು ೭೨೦ಪಿ ನಲ್ಲಿ ಎನ್‌ಕೋಡ್ ಮಾಡಲ್ಪಟ್ಟಿದ್ದು, ಉಳಿದ ರೆಸೊಲ್ಯೂಶನ್‌ಗಳು ಸಧ್ಯದಲ್ಲಿಯೇ ಬರಲಿವೆ. ಯೂಟ್ಯೂಬ್‌ ತನ್ನ ಸಂಪೂರ್ಣ ವೀಡಿಯೋ ಪೋರ್ಟ್‌ಫೋಲಿಯೋವನ್ನು ವೆಬ್‌ಎಂ ನಲ್ಲಿ ಎನ್‌ಕೋಡ್ ಮಾಡುವ ನಿರ್ಧಾರ ಹೊಂದಿದೆ.

ಸೋರ್‌ಸನ್ ಮೀಡಿಯಾದ ಆನ್‌ಲೈನ್ ಎನ್‌ಕೋಡಿಂಗ್ ಪ್ಲ್ಯಾಟ್‌ಫಾರ್ಮ್ ಈಗ ವಿಪಿ೮ ಮತ್ತು ವೆಬ್‌ಎಂ ಅನ್ನು ಬೆಂಬಲಿಸುತ್ತದೆ.

ಸ್ಕೈಪ್ ತನ್ನ ಸ್ಕೈಪ್ ೫.೦ ಸಾಫ್ಟ್‌‍ವೇರ್‌ಗೆ ವಿಪಿ೮ ಕೊಡೆಕ್ ಅನ್ನು ಬಳಸಿಕೊಂಡಿದೆ.

ಲಾಜಿಟೆಕ್ ತನ್ನ ವೀಡಿಯೋ ಕರೆ ಸೇವೆಯ ಭಾಗವಾಗಿ ವೆಬ್‌ಎಂ ಅನ್ನು ಬಳಸುವ ಯೋಜನೆ ಹೊಂದಿದೆ.

ಪರವಾನಗಿ ಪಡೆಯುವಿಕೆ

ಮಧ್ಯ-೨೦೧೦ ರಲ್ಲಿ ಓಪನ್ ಸೋರ್ಸ್ ಇನಿಶಿಯೇಟಿವ್‌ನ ಮಂಡಳಿಯ ಸದಸ್ಯನಾದ ಸೈಮನ್ ಫಿಪ್ಸ್ ಎಂಬಾತ ಮೂಲ ವೆಬ್‌ಎಂ ಪರವಾನಗಿಯು ಒಂದು ಮುಕ್ತ-ಮೂಲ ಪರವಾನಗಿ ಹೌದೇ ಎಂಬ ಕುರಿತು ಅನುಮಾನ ವ್ಯಕ್ತಪಡಿಸಿದ. ಏಕೆಂದರೆ ಇದನ್ನು ಒಎಸ್‌ಐಗೆ ಒಪ್ಪಿಗೆಗಾಗಿ ಸಲ್ಲಿಸಲಾಗಿರಲಿಲ್ಲ. ಅದಕ್ಕೆ ಪ್ರತಿಕ್ರಿಯೆಯಾಗಿ, ವೆಬ್‌ಎಂ ಪ್ರೊಜೆಕ್ಟ್ ಪೇಟೆಂಟ್‌ಅನ್ನು ಕೃತಿಸ್ವಾಮ್ಯದಿಂದ ತೆಗೆದುಹಾಕಿತು, ಮತ್ತು ಆ ಕೋಡ್‌ ಅನ್ನು ಒಂದು ಪ್ರಮಾಣಿತ ಬಿಎಸ್‌ಡಿ ಪರವಾನಗಿ ಮತ್ತು ಪೇಟೆಂಟ್‌ಗಳ ಅಡಿಯಲ್ಲಿ ಒಂದು ಪ್ರತ್ಯೇಕ ಗ್ರ್ಯಾಂಟ್‌ನ ಅಡಿಯಲ್ಲಿ ನೀಡಿತು. ಫ್ರೀ ಸಾಫ್ಟ್‌ವೇರ್ ಡೆಫಿನಿಶನ್ ನಿರ್ವಹಿಸುತ್ತಿರುವ ಫ್ರೀ ಸಾಫ್ಟ್‌ವೇರ್ ಫೌಂಡೇಶನ್ ವೆಬ್‌ಎಂ ಮತ್ತು ವಿಪಿ೮ ಗೆ ತನ್ನ ಒಪ್ಪಿಗೆಯನ್ನು ನೀಡಿತು ಮತ್ತು ಈ ಸಾಫ್ಟ್‌ವೇರ್‌ನ ಪರವಾನಗಿಯನ್ನು ಜಿಎನ್‌ಯು ಜನರಲ್ ಪಬ್ಲಿಕ್ ಲೈಸೆನ್ಸ್‌ಗೆ ಹೊಂದಿರಬೇಕು ಎಂದು ಹೇಳಿತು.. ಜನವರಿ ೧೯, ೨೦೧೧ ರಂದು ಫ್ರೀ ಸಾಫ್ಟ್‌ವೇರ್ ಫೌಂಡೇಶನ್‌ ವೆಬ್‌ಎಂ ಯೋಜನೆಗೆ ತನ್ನ ಅಧಿಕೃತ ಬೆಂಬಲವನ್ನು ವ್ಯಕ್ತಪಡಿಸಿತು.

ಗೂಗಲ್ ಮತ್ತೆ ತೆಗೆಯಲಾಗದಂತೆ ವಿಪಿ೮ ಮೇಲಿನ ತನ್ನ ಎಲ್ಲಾ ಪೇಟೆಂಟ್‌ಗಳನ್ನು ರಾಯಧನ-ರಹಿತ ಸ್ವರೂಪದಲ್ಲಿ ಬಿಡುಗಡೆಗೊಳಿಸಿತಾದರೂ, H.೨೬೪ ಪೇಟೆಂಟ್ ಪೂಲ್‌ನ ಪರವಾನಗಿದಾರರಾದ ಎಂಪಿಇಜಿ ಎಲ್‌ಎ ವಿಪಿ೮ ಗಾಗಿ ಪೇಟೆಂಟ್ ಪೂಲ್‌ ಅನ್ನು ರಚಿಸಲು ಆಸಕ್ತಿ ತೋರಿಸಿದ್ದಾರೆ. H.೨೬೪ ಎನ್‌ಕೋಡರ್ x೨೬೪ ನ ಪ್ರಮುಖ ಅಭಿವರ್ಧಕನಾದ ಜೇಸನ್ ಗ್ಯಾರೆಟ್-ಗ್ಲೇಸರ್ ವಿಪಿ೮ ಮತ್ತು H.೨೬೪ ಗಳ ನಡುವಿನ ಸಾಮ್ಯತೆಯ ಕುರಿತು ತನ್ನ ಕಾಳಜಿ ವ್ಯಕ್ತಪಡಿಸಿದ. ಅದಕ್ಕೆ ಪ್ರತಿಯಾಗಿ, ಇತರೆ ಸಂಶೋಧಕರು ಯಾವುದೇ ಎಂಪಿಇಜಿ ಎಲ್‌ಎ ಪೇಟೆಂಟ್‌ಗಳ ಹೊರತಾಗಿ ಕಾರ್ಯನಿರ್ವಹಿಸಲು ಒಂದು ನಿರ್ಧಿಷ್ಟ ಪ್ರಯತ್ನ ಮಾಡಿದ ಕುರಿತು ಸಾಕ್ಷಿಗಳನ್ನು ನೀಡುತ್ತಾರೆ.

ಇವನ್ನೂ ಗಮನಿಸಿ

  • ವೆಬ್‌ಪಿ
  • ಥಿಯೋರಾ
  • H.೨೬೪/MPEG-೪ AVC
  • ಆನ್‌೨ ಟೆಕ್ನಾಲಜೀಸ್, ವಿಪಿ೮ ಯ ಮೂಲ
  • ಕಂಟೇನರ್ ಫಾರ್ಮೆಟ್‌ಗಳ ಹೋಲಿಕೆ
  • ಎಚ್‌ಟಿಎಂಎಲ್‌೫ ವೀಡಿಯೋ ಫಾರ್ಮ್ಯಾಟ್ ಡಿಬೇಟ್

ಉಲ್ಲೇಖಗಳು

Tags:

ವೆಬ್‌ಎಂ ಮಾರಾಟಗಾರರ ಬೆಂಬಲವೆಬ್‌ಎಂ ಪರವಾನಗಿ ಪಡೆಯುವಿಕೆವೆಬ್‌ಎಂ ಇವನ್ನೂ ಗಮನಿಸಿವೆಬ್‌ಎಂ ಉಲ್ಲೇಖಗಳುವೆಬ್‌ಎಂ ಬಾಹ್ಯ ಕೊಂಡಿಗಳುವೆಬ್‌ಎಂಗೂಗಲ್

🔥 Trending searches on Wiki ಕನ್ನಡ:

ಗೋಲ ಗುಮ್ಮಟಬಾಬು ಜಗಜೀವನ ರಾಮ್ವಿನಾಯಕ ಕೃಷ್ಣ ಗೋಕಾಕಮಕ್ಕಳ ದಿನಾಚರಣೆ (ಭಾರತ)ಕೀರ್ತನೆಸರ್ವೆಪಲ್ಲಿ ರಾಧಾಕೃಷ್ಣನ್ಗಣೇಶ್ (ನಟ)ಜೋಗತಾಲ್ಲೂಕುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ರಾಜಧಾನಿಗಳ ಪಟ್ಟಿವಲ್ಲಭ್‌ಭಾಯಿ ಪಟೇಲ್ಜೈಮಿನಿ ಭಾರತಬೀಚಿಅಖಿಲ ಭಾರತ ಬಾನುಲಿ ಕೇಂದ್ರಮಹಾವೀರಉಡ್ಡಯನ (ಪ್ರಾಣಿಗಳಲ್ಲಿ)ಸೇಬುಕರ್ನಾಟಕದ ಮುಖ್ಯಮಂತ್ರಿಗಳುಮಂಜಮ್ಮ ಜೋಗತಿಋಗ್ವೇದಕಾರ್ಲ್ ಮಾರ್ಕ್ಸ್ಬೆಸಗರಹಳ್ಳಿ ರಾಮಣ್ಣಕುರುಬಕರ್ಣನಾಗವರ್ಮ-೧ಕರ್ನಾಟಕದ ಏಕೀಕರಣರತ್ನತ್ರಯರುಭಾರತದಲ್ಲಿ ಬ್ರಿಟಿಷ್ ಆಳ್ವಿಕೆತೆಂಗಿನಕಾಯಿ ಮರಶಾಸಕಾಂಗಭಾರತೀಯ ಭೂಸೇನೆಅಂಬರೀಶ್ಸೋನು ಗೌಡಚೌರಿ ಚೌರಾ ಘಟನೆಎಸ್.ಎಲ್. ಭೈರಪ್ಪಪಾರ್ವತಿಇತಿಹಾಸವಚನಕಾರರ ಅಂಕಿತ ನಾಮಗಳುಯಶವಂತರಾಯಗೌಡ ಪಾಟೀಲವಚನ ಸಾಹಿತ್ಯಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಏಡ್ಸ್ ರೋಗಶುಕ್ರಯಶ್(ನಟ)ಭಾರತೀಯ ಮೂಲಭೂತ ಹಕ್ಕುಗಳುಕ್ಯಾನ್ಸರ್ಹನುಮಂತಕನ್ನಡ ಅಕ್ಷರಮಾಲೆಗೋವಚಂದ್ರಗುಪ್ತ ಮೌರ್ಯಕೈಗಾರಿಕೆಗಳುಗಣರಾಜ್ಯೋತ್ಸವ (ಭಾರತ)ಬೆಟ್ಟದಾವರೆಯುರೋಪ್ಕುಮಾರವ್ಯಾಸಗೌತಮಿಪುತ್ರ ಶಾತಕರ್ಣಿವಾಣಿವಿಲಾಸಸಾಗರ ಜಲಾಶಯಮೂಲಧಾತುಶ್ರೀವಿಜಯಕನ್ನಡ ರಾಜ್ಯೋತ್ಸವಪಂಪ ಪ್ರಶಸ್ತಿಮಫ್ತಿ (ಚಲನಚಿತ್ರ)ಬಾಲ ಗಂಗಾಧರ ತಿಲಕಹಂಸಲೇಖಕರಗಪಟ್ಟದಕಲ್ಲುತ್ಯಾಜ್ಯ ನಿರ್ವಹಣೆಭಾರತದಲ್ಲಿ ಮೀಸಲಾತಿಜನಪದ ಕ್ರೀಡೆಗಳುಚೋಳ ವಂಶರೋಸ್‌ಮರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆಸವರ್ಣದೀರ್ಘ ಸಂಧಿಅಂತರಜಾಲಶ್ರೀಪಾದರಾಜರುಧಾರವಾಡ🡆 More