ರೇಡಿಯಮ್

88 ಫ್ರಾನ್ಸಿಯಮ್ರೇಡಿಯಮ್ಆಕ್ಟಿನಿಯಮ್
ಬೇರಿಯಮ್

Ra

Ubn
ರೇಡಿಯಮ್
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ರೇಡಿಯಮ್, Ra, 88
ರಾಸಾಯನಿಕ ಸರಣಿalkaline earth metals
ಗುಂಪು, ಆವರ್ತ, ಖಂಡ 2, 7, s
ಸ್ವರೂಪಬೆಳ್ಳಿಯ ಬಿಳಿ ಬಣ್ಣ
ಅಣುವಿನ ತೂಕ 226 g·mol−1
ಋಣವಿದ್ಯುತ್ಕಣ ಜೋಡಣೆ [ರೇಡಾನ್] 7s²
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು 2, 8, 18, 18, 8, 1
ಭೌತಿಕ ಗುಣಗಳು
ಹಂತಘನವಸ್ತು
ಸಾಂದ್ರತೆ (ಕೋ.ತಾ. ಹತ್ತಿರ)5.5 g·cm−3
ಕರಗುವ ತಾಪಮಾನ973 K
(700 °C, 1292 °ಎಫ್)
ಕುದಿಯುವ ತಾಪಮಾನ2010 K
(1737 °C, 3159 °F)
ಸಮ್ಮಿಲನದ ಉಷ್ಣಾಂಶ8.5 kJ·mol−1
ಭಾಷ್ಪೀಕರಣ ಉಷ್ಣಾಂಶ113 kJ·mol−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 819 906 1037 1209 1146 1799
ಅಣುವಿನ ಗುಣಗಳು
ಸ್ಪಟಿಕ ಸ್ವರೂಪbody centered cubic
ಆಕ್ಸಿಡೀಕರಣ ಸ್ಥಿತಿಗಳು1
(strongly basic oxide)
ವಿದ್ಯುದೃಣತ್ವ0.9 (Pauling scale)
Ionization energies ೧ನೇ: 509.3 kJ/mol
೨ನೇ: 979.0 kJ/mol
ಅಣುವಿನ ತ್ರಿಜ್ಯ215 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆnonmagnetic
ವಿದ್ಯುತ್ ರೋಧಶೀಲತೆ(20 °C) 1 microΩ·m
ಉಷ್ಣ ವಾಹಕತೆ(300 K) 18.6 W·m−1·K−1
ಸಿಎಎಸ್ ನೋಂದಾವಣೆ ಸಂಖ್ಯೆ7440-14-4
ಉಲ್ಲೇಖನೆಗಳು

ರೇಡಿಯಮ್ ಒಂದು ಲೋಹ. ಇದು ಅತ್ಯಂತ ವಿಕಿರಣಶೀಲ ಲೋಹ. ಇದು ಮುಖ್ಯವಾಗಿ ಯುರೇನಿಯಮ್ ಹಾಗೂ ಥೋರಿಯಮ್ ಅದಿರಿನೊಂದಿಗೆ ದೊರೆಯುತ್ತದೆ. ಇದನ್ನು ಫ್ರಾನ್ಸ್‌ಮೇರಿ ಕ್ಯೂರಿ, ಪಿಯರೆ ಕ್ಯೂರಿ ತಮ್ಮ ಸಹಾಯಕ ಸಂಶೋಧಕ ಗುಸ್ತಾವ್ ಬೆಮಾಂಟ್ ರೊಂದಿಗೆ ೧೮೯೮ರಲ್ಲಿ ಸಂಶೋಧಿಸಿದರು. ರೇಡಿಯಮ್ ಪ್ರಕೃತಿಯಲ್ಲಿ ಯುರೇನಿಯಮ್ವಿಕಿರಣ ಸವೆತ (radioactive decay) ದಿಂದ ರಚಿಸಲ್ಪಡುತ್ತದೆ. ಇದು ಸತತ ವಿಕಿರಣ ಹೊಂದುತ್ತಿರುವುದರಿಂದ ಪ್ರಕೃತಿಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿದೆ.

ಇದು ಆವರ್ತಕೋಷ್ಟಕದ 2ಎ ಗುಂಪಿನ 7ನೆಯ ಆವರ್ತದ ಕ್ಷಾರಲೋಹೀಯ ಭಸ್ಮಧಾತು. ಪ್ರತೀಕ Ra. ರಾಸಾಯನಿಕವಾಗಿಯೂ ಪಟುವಾಗಿರುವ ಬೆಳ್ಳಿಬಿಳುಪಿನ ಲೋಹ. ಪರಮಾಣು ಸಂಖ್ಯೆ 88. ಪರಮಾಣು ತೂಕ 226. ದ್ರವನಬಿಂದು 697o ಸೆ. ಕುದಿಬಿಂದು 11370 ಸೆ. ಸಾಪೇಕ್ಷ ಸಾಂದ್ರತೆ 5. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p6 3d10 4s2 4p6 4d10 4f14 5s2 5p6 5d10 6s2 6p6 7s2. ವೇಲೆನ್ಸಿ 0, +2. ನಾಲ್ಕು ನೈಸರ್ಗಿಕ ವಿಕಿರಣಪಟು ಸಮಸ್ಥಾನಿಗಳಿವೆ. ಬೈಜಿಕ ಕ್ರಿಯೆ ಮುಖೇನ ಇನ್ನೂ 9 ಸಮಸ್ಥಾನಿಗಳು ಲಭ್ಯ. ಇವುಗಳ ಪೈಕಿ ವಿಕಿರಣಪಟು ರೇಡಿಯಮ್-226 ಬಲು ಮುಖ್ಯವಾದದ್ದು (ಅರ್ಧಾಯು 1620 ವರ್ಷ).

ಪಿಚ್‌ಬ್ಲೆಂಡ್ (1 ಟನ್ ಅದುರಿನಲ್ಲಿ 0.4 ಗ್ರಾಮ್ ರೇಡಿಯಮ್) ಮತ್ತು  ಕಾರ್ನೊಟೈಟ್ ಪ್ರಮುಖ ಅದುರುಗಳು. ಆಮ್ಲ ಅವಿಲೇಯ ಶೇಷವಾಗಿ ಸಲ್ಫೇಟುಗಳ ರೂಪದಲ್ಲಿ ಬೇರಿಯಮಿನೊಂದಿಗೆ ರೇಡಿಯಮನ್ನು ಅದುರಿನಿಂದ ಆಹರಿಸುತ್ತಾರೆ.

ಗುಣಗಳು

ರೇಡಿಯಮ್ ವಾಯುವಿನಿಂದ ಬಲು ವೇಗವಾಗಿ ಉತ್ಕರ್ಷಿತವಾಗಿ ಕಪ್ಪಾಗುತ್ತದೆ. ಎಂದೇ, ರೇಡಿಯಮ್ ಕ್ಲೋರೈಡ್ ಅಥವಾ ರೇಡಿಯಮ್ ಬ್ರೋಮೈಡ್ ರೂಪದಲ್ಲಿ ಮಾತ್ರ ಬಳಕೆ. ರಾಸಾಯನಿಕ ಗುಣಗಳಲ್ಲಿ ಬೇರಿಯಮ್ ಧಾತುವಿಗೂ ರೇಡಿಯಮ್ ಧಾತುವಿಗೂ ಬಲು ಸಾಮ್ಯವಿದೆ. ನೀರಿನೊಂದಿಗೆ ಸುಲಭವಾಗಿ ವರ್ತಿಸುತ್ತದೆ; ಹೈಡ್ರೊಜನ್ ಮತ್ತು ಹೈಡ್ರಾಕ್ಸೈಡ್ ದ್ರಾವಣ ಉತ್ಪನ್ನಗಳು. ಎಲುಬುಗಳಲ್ಲಿ ಕ್ಯಾಲ್ಸಿಯಮಿನ ಬದಲು ರೇಡಿಯಮ್ ಸಂಚಯಿಸಬಲ್ಲದು. ತನ್ಮೂಲದ ದೀರ್ಘಕಾಲೀನ ವಿಕಿರಣನದ ಪರಿಣಾಮವೇ ರಕ್ತಹೀನತೆ ಮತ್ತು ಕ್ಯಾನ್ಸರ್ (ಸಹಿಷ್ಣುತಾ ಮಿತ 1 ಮಿಲಿಗ್ರಾಮ್).  ರೇಡಾನ್ ಅನಿಲಧಾತು ರೇಡಿಯಮಿನ ವಿಕಿರಣಕ್ಷಯದ ಉತ್ಪನ್ನ.

ಉಪಯೋಗಗಳು

ರೇಡಿಯಮಿನ ನಿಯಂತ್ರಿತ ವಿಕಿರಣವನ್ನು ಕ್ಯಾನ್ಸರ್ ಕೋಶಗಳ ನಾಶಕ್ಕೆ ಬಳಸುವುದುಂಟು. ಔದ್ಯಮಿಕ ರೇಡಿಯೊರೇಖನದಲ್ಲಿ (ರೇಡಿಯೊಗ್ರಫಿ) ರೇಡಿಯಮ್ ಸಲ್ಫೇಟ್ ಬಳಕೆ ಇದೆ. ಸಂಶೋಧನೆ ಹಾಗೂ ನ್ಯೂಟ್ರಾನ್ ಪಟುಕರಣದಿಂದ ಪದಾರ್ಥ ವಿಶ್ಲೇಷಣೆಯಲ್ಲಿ ನ್ಯೂಟ್ರಾನ್ ಆಕರವಾಗಿಯೂ ಬಳಕೆ ಉಂಟು. ದೀಪ್ತಿಶೀಲ ಬಣ್ಣಗಳ ತಯಾರಿಯಲ್ಲಿ ಬಳಕೆ ಇತ್ತು.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ರೇಡಿಯಮ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ರೇಡಿಯಮ್ ಗುಣಗಳುರೇಡಿಯಮ್ ಉಪಯೋಗಗಳುರೇಡಿಯಮ್ ಉಲ್ಲೇಖಗಳುರೇಡಿಯಮ್ ಹೊರಗಿನ ಕೊಂಡಿಗಳುರೇಡಿಯಮ್

🔥 Trending searches on Wiki ಕನ್ನಡ:

ಕರಗವಿನಾಯಕ ಕೃಷ್ಣ ಗೋಕಾಕಕರ್ನಾಟಕದ ನದಿಗಳುಮಧ್ವಾಚಾರ್ಯಕೋಲಾರ ಚಿನ್ನದ ಗಣಿ (ಪ್ರದೇಶ)ಸುಭಾಷ್ ಚಂದ್ರ ಬೋಸ್ಗಡಿಯಾರಹಳೆಗನ್ನಡವಸಾಹತು ಭಾರತಅಂತರಜಾಲಶೇಷಾದ್ರಿ ಅಯ್ಯರ್ಪಾಲಕ್ವಿಜ್ಞಾನಚಿತ್ರದುರ್ಗಹದಿಹರೆಯಮಳೆನೀರು ಕೊಯ್ಲುಹಿಂದೂ ಧರ್ಮ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಊಳಿಗಮಾನ ಪದ್ಧತಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕನ್ನಡ ಕಾಗುಣಿತಗುರುರಾಜ ಕರಜಗಿತಾಳೀಕೋಟೆಯ ಯುದ್ಧದುಂಡು ಮೇಜಿನ ಸಭೆ(ಭಾರತ)ಕೆಂಪು ಮಣ್ಣುಹಲ್ಮಿಡಿ ಶಾಸನತಾಮ್ರಆಲೂರು ವೆಂಕಟರಾಯರುಹೋಳಿಭಾರತದ ಸರ್ವೋಚ್ಛ ನ್ಯಾಯಾಲಯಬಾದಾಮಿ ಚಾಲುಕ್ಯರ ವಾಸ್ತುಶಿಲ್ಪರಕ್ತಚಂದನಬುಡಕಟ್ಟುಜೀಮೇಲ್ಭಾರತದ ರಾಷ್ಟ್ರಪತಿಗಳ ಪಟ್ಟಿವಿರಾಟ್ ಕೊಹ್ಲಿಮದುವೆಭತ್ತಉದ್ಯಮಿಸಿದ್ದಲಿಂಗಯ್ಯ (ಕವಿ)ಕನ್ನಡ ಸಾಹಿತ್ಯ ಸಮ್ಮೇಳನರವೀಂದ್ರನಾಥ ಠಾಗೋರ್ದೇವನೂರು ಮಹಾದೇವಹನುಮಂತಪ್ಲೇಟೊವಚನ ಸಾಹಿತ್ಯಮಾರಿಕಾಂಬಾ ದೇವಸ್ಥಾನ (ಸಾಗರ)ಎ.ಪಿ.ಜೆ.ಅಬ್ದುಲ್ ಕಲಾಂವಲ್ಲಭ್‌ಭಾಯಿ ಪಟೇಲ್ರೈತವಾರಿ ಪದ್ಧತಿಬುದ್ಧಕನ್ನಡ ಸಾಹಿತ್ಯ ಪ್ರಕಾರಗಳುಶುಭ ಶುಕ್ರವಾರನಯಸೇನಕಿತ್ತೂರು ಚೆನ್ನಮ್ಮಕರ್ನಾಟಕದ ಜಿಲ್ಲೆಗಳುಶಿಶುನಾಳ ಶರೀಫರುಭಾರತದ ಸಂಸತ್ತುಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳುಕೆ. ಎಸ್. ನಿಸಾರ್ ಅಹಮದ್ಪಂಚತಂತ್ರಪಂಜಾಬ್ಕರ್ನಾಟಕದಲ್ಲಿ ಬ್ಯಾಂಕಿಂಗ್ಪರೀಕ್ಷೆಶ್ಯೆಕ್ಷಣಿಕ ತಂತ್ರಜ್ಞಾನಪತ್ರರಂಧ್ರಅಮ್ಮಮಹೇಂದ್ರ ಸಿಂಗ್ ಧೋನಿಬ್ಯಾಡ್ಮಿಂಟನ್‌ಹುಲಿಯಣ್ ಸಂಧಿಜಾತ್ರೆಫ್ರೆಂಚ್ ಕ್ರಾಂತಿಸಾವಯವ ಬೇಸಾಯಪಿ.ಲಂಕೇಶ್ಹಸ್ತ ಮೈಥುನನೀರುಗಿರೀಶ್ ಕಾರ್ನಾಡ್ಕವಿಗಳ ಕಾವ್ಯನಾಮ🡆 More