ಮುಂಬೈ ನಗರದ ಡಬ್ಬಾವಾಲಾಗಳು

ಡಬ್ಬಾವಾಲರ, 'ಊಟದ ಡಬ್ಬಗಳ ವಿತರಣೆಯ ಮೂಲ ಕಲ್ಪನೆ ಬಂದದ್ದು, ಬ್ರಿಟಿಷ್ ಆಫೀಸರ್ ಗಳು ನಮ್ಮ ದೇಸಿ ಆಹಾರವನ್ನು ಇಷ್ಟಪಡುತ್ತಿರಲಿಲ್ಲ.

ಮುಂಬೈ ನಗರದ ಡಬ್ಬಾವಾಲಾಗಳು
'ಮುಂಬಯಿ ನಗರದ ಡಬ್ಬಾವಾಲಾಗಳು'

ಡಬ್ಬಾ ಊಟ

ಅವರ ಬಟ್ಲರ್ ಗಳು ಮನೆಯಿಂದ ಮಾಡಿದ ಅಡಿಗೆ, ಅಥವ ಟಿಫಿನ್ ಗಳನ್ನು 'ಟಿಫಿನ್ ಬಾಕ್ಸ್,' ಗಳಲ್ಲಿ ತುಂಬಿ ಕಳಿಸಿಕೊಡುತ್ತಿದ್ದರು. ಆದನ್ನು ಆಫೀಸ್ ಗಳಿಗೆ ಸರಿಯಾದ ಸಮಯಕ್ಕೆ ವಿಲೇವಾರಿಮಾಡುವ ಜವಾಬ್ದಾರಿಯನ್ನು 'ಡಬ್ಬಾವಾಲರುಗಳು'ತೆಗೆದುಕೊಂಡರು. ಅವರನ್ನು 'ಟಿಫಿನ್ ವಾಲಾಸ್,' ಎನ್ನುತ್ತಾರೆ. ಇಂತಹ,ಬೇಕಾದಷ್ಟು ಕಲೋನಿಯಲ್ ಪದ್ಧತಿಗಳು, ನಮ್ಮ ಭಾರತೀಯ ಜನಜೀವನದಲ್ಲಿ ಹಾಸು-ಹೊಕ್ಕಿವೆ. ಅದರಲ್ಲಿ ಈ ಪದ್ಧತಿಯೂ ಒಂದು. ಕೆಲವು ಡಬ್ಬಾವಾಲರುಗಳು, ಮಾಲಿಕರ ಮನೆಯಲ್ಲಿ ಅಡುಗೆ-ಕೆಲಸ ಮಾಡಿ ವಿತರರಣೆಯ ಕೆಲಸವನ್ನೂ, ಮಾಡುತ್ತಿದ್ದರು. ಮುಂಬಯಿನಲ್ಲಿ ಡಬ್ಬಾವಾಲರ ಸಂಘಟನೆ ಬಹಳ ಬಲವಾಗಿಯೂ, ಹಾಗೂ ಸುವ್ಯವಸ್ಥಿತವಾಗಿಯೂ ಇದೆ. ಮುಂಬಯಿನ ಡಬ್ಬಾವಾಲಗಳೆಂದು ಸುಪ್ರಸಿದ್ಧಿಪಡೆದಿರುವ, ಊಟದ-ಡಬ್ಬಗಳನ್ನು ವಿಲೇವಾರಿಮಾಡುವ ಒಂದು ಸರಳ ಸುವ್ಯವಸ್ಥಿತ ಸಂಸ್ಥೆಯಾಗಿ ಬೆಳೆದಿದೆ. ಇದೊಂದು,'ಬ್ರಾಂಡ್ ನೇಮ್,' ಆಗಿದ್ದು, ಕೇವಲ ಮುಂಬಯಿನ ನಾಗರಿಕರಿಗೆ ಮಾತ್ರ ಸೀಮಿತವಾಗಿದೆ. ಮನೆಯಲ್ಲಿ ಮಾಡಿದ, ಊಟದ ಊಟದ ಸಾಮಗ್ರಿಗಳನ್ನು ಟಿಫಿನ್ ಕ್ಯಾರಿಯರ್ ಗಳಿಗೆ ಹಾಕಿ, ವ್ಯವಧಾನದಿಂದ ಮೊದಲೇ ತಿಳಿಸಿದ ಸ್ಥಳಗಳಿಗೆ ವಿಲೇವಾರಿಮಾಡುವ, ಒಂದು ದಕ್ಷವ್ಯವಸ್ಥೆ- ಮುಂಬಯಿ ನ ಡಬ್ಬಾವಾಲರ, 'ಮುಂಬಯಿ ಟಿಫಿನ್ ಬಾಕ್ಸ್ ಕ್ಯಾರಿಯರ್ಸ್ ಅಸೋಸಿಯೇಷನ್.' ಆಫೀಸ್ ಗಳಲ್ಲಿ ಕೆಲಸಮಾಡುವ ಜನರಲ್ಲಿ ಕ್ಯಾಂಟಿನ್ ನಲ್ಲಿ ಊಟವನ್ನು ಇಚ್ಛಿಸದ ಜನರಿಗೆ, ಮನೆಯಲ್ಲಿ ಮಾಡಿದ ತಾಜಾ-ಖಾನ ಬೇಕಾದರಿಗೆ ಮಾತ್ರ, ಈ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ ಊಟವನ್ನು ಒದಗಿಸುತ್ತದೆ. ಊಟದ ನಂತರ ಕಾದಿದ್ದು, ಖಾಲಿಯಾದ ಲಂಚ್ ಬಾಕ್ಸ್ ಗಳನ್ನು ಸಂಗ್ರಹಿ, ಅವನ್ನು ಅವರವರ ಮನೆಗಳಿಗೆ, ತಲುಪಿಸುವ ಈ ವ್ಯವಸ್ಥೆ ಅನುಕರಣೀಯ.

ಡಬ್ಬಾವಾಲಾ ಕೆಲಸದ ಕಾರ್ಯ ವೈಖರಿ

ಮುಂಬಯಿನಗರದ ಉದ್ದಗಲಕ್ಕೂ ಊಟದ ಡಬ್ಬವನ್ನು, ಸಾಗಿಸಿ ಬಳಕೆದಾರರಿಗೆ, ಸಕಾಲದಲ್ಲಿ ಮುಟ್ಟಿಸುವ ಪ್ರಕ್ರಿಯೆ, ಅನನ್ಯ. ಮುಂಬಯಿ ನಂತಹ ಜನನಿಬಿಡ ಪ್ರದೇಶದಲ್ಲಿ ಒಂದು ಚದರ ಕಿ.ಮೀ.ನಲ್ಲಿ, ೧೯,೩೭೩ ಜನರಿದ್ದಾರೆ. ಅವರ ಮಧ್ಯೆ ಊಟದ ಡಬ್ಬಗಳನ್ನು ತಲೆಯಮೇಲೆ ಹೊತ್ತುಕೊಂಡು ಹೋಗಿ, ಕೊಟ್ಟು, ಮತ್ತೆ ಖಾಲಿ ಡಬ್ಬ ವಾಪಸ್ ತರುವುದು ಕಷ್ಟವಾದ ಕೆಲಸ. ಒಬ್ಬರು ರೈಲಿನಲ್ಲಿ ಸರಿಯಾಗಿ ಪ್ರಯಾಣಿಸುವುದೇ ಕಷ್ಟವಾಗಿರುವಾಗ, ಟಿಫಿನ್ ತೆಗೆದುಕೊಂಡು ಹೋಗುವುದು ಕನಸೇ ಸರಿ. ಮನೆಗೆ ಹೋಗಿ ಉಟಮಾಡಿ ಬರಲು ಕಷ್ಟ. ಕೆಲವು ಕೆಫೆಗಳು ಕೂಡ ,ಊಟದ ಸಾಮಗ್ರಿಗಳನ್ನು ಡಬ್ಬಗಳಲ್ಲಿ ತುಂಬಿ ಕಳಿಸಿಕೊಡುತ್ತಾರೆ. ತಿಂಗಳಿ ನಿಗದಿಯಾದ ಸೇವಾ ಶುಲ್ಕವನ್ನು ಅವರಿಗೆ ಕೊಟ್ಟರಾಯಿತು. ಬೊಂಬಾಯಿನ ಡಬ್ಬವಾಲರುಗಳ ಸುದೀರ್ಘ ಇತಿಹಾಸವಿದೆ. ಹಾಗೂ ಅವರದೇ ಒಂದು ಭದ್ರವಾಗಿ ಹೆಣೆದ ಸಮುದಾಯವಿದೆ. ಮನೆಯ ಬಾಗಿಲಿಗೆ ಬಂದು, ಸೈಕಲ್ ಗಳ ಮೇಲೆ ಊಟದ ಡಬ್ಬಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ಡಬ್ಬಗಳನ್ನು ಬೇರೆ ಇದಕ್ಕಾಗಿ ಕಾದಿರುವ ಡಬ್ಬಾವಾಲರುಗಳು, ಇವೆಲ್ಲ ಡಬ್ಬಗಳನ್ನೂ ಸಂಗ್ರಹಿಸಿ, ಅದರ ಮೇಲೆ ಕೈನಲ್ಲಿ ಕೆಲವು ಮಾರ್ಕ್ ಗಳನ್ನು ಮಾಡುತ್ತಾರೆ. ಬಳಕೆದಾರರ ಹೆಸರು, ವಿಳಾಸ, ಹಾಗೂ, ಸಮೀಪದ ರೈಲ್ವೆ ಸ್ಟೇಷನ್ ಇತ್ಯಾದಿ ವಿವಿರಗಳು ಅದರಲ್ಲಿ ಇರುತ್ತವೆ. ಈ ವಿವರಗಳ ಕೋಡ್ ನಮಗೆ, ಗೊತ್ತಾಗುವುದಿಲ್ಲ. ಇನ್ನುಳಿದ ಡಬ್ಬಾವಾಲರುಗಳು, ಅವನ್ನು ವ್ಯವಸ್ಥಿತವಾಗಿ ವಿಂಗಡಿಸಿ, ರೈಲ್ವೆ ಕೋಚ್ ನಲ್ಲಿ ಇಡುತ್ತಾರೆ. ಯಾವ ರೈಲ್ವೆ ಸ್ಟೇಷನ್ ನಲ್ಲಿ ಅದನ್ನು ಅನ್ ಲೋಡ್ ಮಾಡಬೇಕು, ಬಳಕೆದಾರರ, ವಿಳಾಸ ಇತ್ಯಾದಿ ವಿವರಗಳಿರುತ್ತವೆ. ಇವೆಲ್ಲಾ ಡಬ್ಬಾವಾಲರು, ಸುಮಾರುವರ್ಷಗಳಿಂದ ಇದೇಕೆಲಸವನ್ನು ನಿರಂತರವಾಗಿ ಮಾಡುತ್ತಿರುವ ಅನುಭವದಿಂದ, ನಿರ್ಣಯಿಸಿ, ನಿರ್ಧರಿಸಿಮಾಡಿದ ಫಲಿತದಿಂದ ಎಂದು, ಧಾರಾಳವಾಗಿ ಹೇಳಬಹುದು.

ಡಬ್ಬಾವಾಲಾ ಇತಿಹಾಸ

ಡಬ್ಬಾವಾಲರ ಕಾರ್ಯ ಚಟುವಟಿಕೆಗಳನ್ನು ಸನ್,೧೮೮೦,ರಷ್ಟು ಹಿಂದೆಯೇ,ನೋಂದಾಯಿಸಲಾಗಿತ್ತು. 'ದ ನವಿ ಮುಂಬಯಿ ಟಿಫಿನ್ ಬಾಕ್ಸ್ ಸಪ್ಲೈರ್ಸ್ ಟ್ರಸ್ಟ್,' ಮುಂಬಯಿ ನಲ್ಲಿ ಪ್ರಥಮವಾಗಿ ನೋಂದಾಯಿಸಿದ ಕಂಪೆನಿ. ಮಹಾರಾಷ್ಟ್ರದ, 'ಮಹದೇವ್ ಹವಜಿ ಬಾಚ್ಚೆ,' ಎಲ್ಲರಂತೆ ಒಬ್ಬ ವಲಸೆಕಾರ, ಈ ಉದ್ಯೋಗವನ್ನು ಮೊಟ್ಟಮೊದಲಿಗೆ ಪ್ರಾರಂಭಿಸಿದರು, ಶುರುವಿನಲ್ಲಿ ಅವರ ಜೊತೆಯಲ್ಲಿದ್ದವರು, ೧೦೦ ಜನರು ಮಾತ್ರ. ೧೯೩೦, ರಲ್ಲಿ 'ಚಾರಿಟಿ ಟ್ರಸ್ಟ್,' ನಲ್ಲಿ ಹೆಸರನ್ನು ನೋಂದಾಯಿಸಲಾಯಿತು. ೧೯೫೬ ರಲ್ಲಿ, ಅದೇ ಸಂಸ್ಥೆ 'ನೂತನ್ ಮುಂಬಯಿ ಟಿಫಿನ್ ಬಾಕ್ಸ್ ಸಪ್ಲೈರ್ಸ್ ಟ್ರಸ್ಟ್' ವಾಣಿಜ್ಯಶಾಖೆಯ ರೂಪವನ್ನು ತಳೆದು, ೧೯೬೮ ರಲ್ಲಿ ನೊಂದಾಯಿಸಲಾಯಿತು. 'ಮುಂಬಯಿ ಟಿಫಿನ್ ಬಾಕ್ಸ್ ಕ್ಯಾರಿಯರ್ಸ್ ಅಸೋಸಿಯೇಷನ್,' ನ ಈಗಿನ ಅಧ್ಯಕ್ಷರು, ರಘುನಾಥ್ ಮೆದ್ಗೆ. ಗ್ರಾಹಕರ ತೃಪ್ತಿಯೇ ತಮ್ಮ ಪರಮ ಧ್ಯೇಯಗಳಲ್ಲೊಂದಾಗಿದೆ ಎಂದು ಹೇಳಿ, ಅವರಿಗೆ ಇನ್ನೂ ಅತ್ಯುತ್ತಮ ಸೇವೆಯನ್ನು ನೀಡುವುದೇ ತಮ್ಮ ಗುರಿಯಾಗಿರುವುದಾಗಿ ಹೇಳಿದ್ದಾರೆ. ಈಗ, ಅಸೋಸಿಯೇಷನ್ ಕಾರ್ಯಚಟುವಟಿಕೆಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ಇದರಬಗ್ಗೆ ಒಂದು ಪ್ರಸ್ತುತಿಯನ್ನು ಡಬ್ಬಾವಾಲರುಗಳು, 'ಟೈಮ್ ಮ್ಯಾನೇಜ್ಮೆಂಟ್', 'ಗ್ರಾಹಕರ ತೃಪ್ತಿ', 'ವೃತ್ತಿ-ನಿಷ್ಠೆ', 'ತಪ್ಪಿನಿಂದ ಮುಕ್ತಪದ್ದತಿ', ಮತ್ತಿತರ ಕುಶಲತೆಗಳನ್ನು 'ಕೈಗಾರಿಕೆಯ ಉನ್ನತ-ವೃತ್ತಿಪರ'ರಿಗೆ ನೀಡಿದ್ದಾರೆ.

ದಬ್ಬಾವಾಲರ ಬಗ್ಗೆ ಪುಸ್ತಕ

'ಶ್ರೀ. ಅಗರ್ ವಾಲಾ,' ಬರೆದುಪ್ರಸ್ತುತ ಪಡಿಸಿದ, "Dabbawalas' of Mumbai-Masters of Supply Chain Management,"ಒಂದು ಉಪಯುಕ್ತವಾದ ಹೊತ್ತಿಗೆ, ಡಬ್ಬಾವಾಲರ ಕುಶಲ ಕಾರ್ಯವೈಖರಿಯನ್ನು ಸರಿಯಾದ ರೀತಿಯಲ್ಲಿ ವಿವರಿಸಿ ಮಾಹಿತಿನೀಡಿರುವ ಸಂಶೋಧನಾ-ಗ್ರಂಥವೊಂದು, ಹೊರಬಂದಿದೆ. ಈ ಪುಸ್ತಕವನ್ನು ಅಗರ್ ವಾಲ್ " ಬಾಂಬೆ ಛೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ" ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆಮಾಡಿದ್ದಾರೆ.

ಡಬ್ಬಾವಾಲರುಗಳ ಕೆಲಸದ ಸೂಕ್ಷ್ಮತೆ

ಈ ಸಂಘಟನೆಯಲ್ಲಿ ಕೆಲಸಮಾಡುವರೆಲ್ಲಾ ಸಮಾನರು. ಪ್ರತಿ ಡಬ್ಬಾವಾಲನಿಗೂ ಸರಾಸರಿ, ೨ ರಿಂದ ೪ ಸಾವಿರ ರುಪಾಯಿ ಸಂಬಳ ಸಿಗುತ್ತದೆ. ೨೫-೫೦ ಬ್ರಿಟಿಷ್ ಪೌಂಡ್ ಗಳು ಇಲ್ಲವೇ ೪೦-೮೦ ಅಮೆರಿಕನ್ ಡಾಲರ್. ಪ್ರತಿದಿನ, ೧೭೫,೦೦೦ ಅಥವಾ ೨೦೦,೦೦೦ ಲಂಚ್ ಬಾಕ್ಸ್ ಗಳು ವಿತರಿತವಾಗುತ್ತವೆ. ಸುಮಾರು, ೪,೫೦೦ ದಿಂದ ೫,೦೦೦ ಅರೆಕಲಿತ ಡಬ್ಬಾವಾಲಗಳು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಡಿಮೆ ಫೀ ಮತ್ತು ಸಮಯಕ್ಕೆ ಸರಿಯಾಗಿ ಮಾಡುವ ಕೆಲಸ. ಒಂದು ಸರ್ವೇಕ್ಷಣೆಯ ವರದಿಯಪ್ರಕಾರ, ೧೬,೦೦೦,೦೦೦, ಡಬ್ಬಾಗಳನ್ನು ಡೆಲಿವರಿ ಮಾಡಿದರೂ ಸಿಕ್ಸ್ (six sigma performance) ಕಾರ್ಯನಿರ್ವಹಣೆಯ ಮಟ್ಟವೆಂದು ಕರೆಯಲ್ಪಡುತ್ತದೆ. ಇದಕ್ಕೆ ದೊರೆತ ರೇಟಿಂಗ್ ೯೯.೯೯೯೯೯೯ ಅಂಕಗಳು.

ಬಿ.ಬಿ.ಸಿ,'ವಾಹಿನಿಯಲ್ಲಿ

ಬಿ.ಬಿಸಿ, ತಯಾರಿಸಿರುವ ಸಾಕ್ಷಿಚಿತ್ರದಲ್ಲಿ ಡಬ್ಬವಾಲಾಗಳನ್ನು , ಪ್ರಿನ್ಸ್ ಚಾರ್ಲ್ಸ್ ರವರು ಭೆಟ್ಟಿಮಾಡಿರುವ ಪ್ರಸಂಗವಿದೆ. ಹೆಚ್ಚಿನ ವಿಷಗಳಿಗೆ ಸಂಪರ್ಕಿಸಬೇಕಾದಲ್ಲಿ ಡಬ್ಬಾವಾಲಗಳ ವೇಳೆಗೆ ತಕ್ಕಹಾಗೆ ಸಮಯವನ್ನು ಅನುಸರಿಸಿಕೊಂಡು, ನಾವು ನಮ್ಮ ಸಮಯವನ್ನು ಕಾಯ್ದಿರಿಸಿಕೊಳ್ಳಬೇಕು. ಅವರ ಸಮಯ ಮುಂಜಾನೆಯಿಂದಲೇ ಪ್ರಾರಂಭವಾಗುವುದರಿಂದ ಬದಲಾವಣೆ ಅಶಕ್ಯ. ಬ್ರಿಟನ್ ದೊರೆಯವರ ಸಂದರ್ಶನದ ಘಟನೆಯನಂತಹ ಅವರಿಗೆ ಪ್ರಚಂಡ ಜನಪ್ರಿಯತೆ ಬಂತು. ಕೆಲವು ಡಬ್ಬಾವಾಲಗಳನ್ನು ಅತಿಧಿಯಾಗಿ ದೊಡ್ಡ, ಬಿಸಿನೆಸ್ ಹೌಸಸ್ ನಲ್ಲಿ ಕರೆಯುತ್ತಾರೆ. ಇದನ್ನು ಊಹಿಸಲೂ ಸಾಧ್ಯವಿಲ್ಲ. ಪಾಶ್ಚಿಮಾತ್ಯರಿಗೆಲ್ಲರಿಗೂ ಅಚ್ಚರಿಯಾಗಿದೆ. ಯಾವ ಆಧುನಿಕ ತಂತ್ರಜ್ಞಾನ, ನಿರ್ವಣಾ ಪದ್ಧತಿಗಳ ಪ್ರಶಿಕ್ಷಣದ ಸಹಾಯ, ತರಪೇತಿಯೂ ಇಲ್ಲದೆ ಇಷ್ಟು ಸುವ್ಯವಸ್ಥಿತವಾಗಿ ನಡೆಯುತ್ತಿದೆ. 'ದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ, ಯ ಪ್ರಕಾರ ೨೦೦೭ ವರ್ಷದ, ೧೨೫ ವರ್ಷಹಳೆಯ ಡಬ್ಬಾವಾಲ ಇಂಡಸ್ಟ್ರಿ ೫-೧೦%/ವಾರ್ಷಿಕವಾಗಿ ಸಫಲತೆ, ಮತ್ತು ಮುಂದುವರೆಯುತ್ತಲೇ ಇದೆ. ಈ ಡಬ್ಬಾವಾಲಾ ಇಂಡಸ್ಟ್ರಿಯ ವ್ಯವಹಾರವು ಸಾಲಾನ ೪೦ ಕೋಟಿರೂಪಾಯಿನದಾಗಿದೆಯೆಂದು ಅವರ ಸಂಘದ ಅಧ್ಯಕ್ಷ, ಮೆಡ್ಗೆ ಹೇಳಿದ್ದಾರೆ.

ಡಬ್ಬಾವಾಲರ ಆದ್ಯತೆ

ಹವಾಮಾನದ ವೈಪರೀತ್ಯಗಳಲ್ಲೂ, ಎಡೆ-ತಡೆಯಿಲ್ಲದ, ನಿರಂತರಸೇವೆ ಅನುಕರಣೀಯವಾಗಿದೆ. 'ಹೈಟೆಕ್' ಎಂದು ಹೇಳಲು ಬಾರದಿದ್ದರೂ, ಇದರ ಸೇವೆ ಹೈಟೆಕ್ ಉದ್ಯೋಗಗಳಲ್ಲಿ ಕೆಲಸಮಾಡುತ್ತಿರುವ ಬಿಝಿನೆಸ್ ಎಕ್ಸಿಕ್ಯೂಟಿವ್ ಗಳಿಗೆಲ್ಲಾ ದೊರೆಯುತ್ತಿದೆ. ಡಬ್ಬಾಗಳನ್ನು ಡೆಲಿವರಿ ಮಾಡುವ ವ್ಯಕ್ತಿ ಇಂದಿಗೂ ಕೆಲವೊಮ್ಮೆ ಬರಿಕಾಲಿನಲ್ಲಿ, (information technology), ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದ್ದಾನೆ. ಈಗ ಅಲ್ಪ-ಸ್ವಲ್ಪ ಬಳಸುತ್ತಿದ್ದಾರೆ. SMS ಮಾಡಿ ಬುಕ್ ಮಾಡಬಹುದು. ಒಂದು ವೆಬ್ ಸೈಟ್,mydabbawala.com, ಆನ್ ಲೈನ್ ಪ್ರಕ್ರಿಯೆ ಈಗಾಗಲೇ ಲಭ್ಯ.' ಕಸ್ಟಮರ್ ಫೀಡ್ ಬ್ಯಾಕ್' ಸೇವೆಯೂ ಇದೆ. 'ಟೀಮ್ ವರ್ಕ್', ಅತ್ಯಾಧುನಿಕ ಮ್ಯಾನೇಜರ್ ಗಳಿಗೂ ಈರ್ಷೆಯಾಗುವಷ್ಟು. ಸಫಲತೆ, ಎಲ್ಲರೂ ಒಗ್ಗಟ್ಟಾಗಿ ಕೆಲಸಮಾಡುವುದರಿಂದ. ಡಬ್ಬಾವಾಲಗಳ ಯಶಸ್ಸು, ನಿಷ್ಟೆ, ಸಮಯಪ್ರಜ್ಞೆ, ಕೆಲಸಮಾಡುವ ಇಚ್ಛೆ, ಹಾಗೂ ತ್ಯಾಗದಿಂದ ಹಾಸಲಾಗಿದೆ. ಕೆಲವರಿಗೆ ಕೇವಲ ಅಕ್ಷರಗಳನ್ನು ಕೂಡಿಸಿಕೊಂಡು ಓದಲು ಮಾತ್ರಬರುತ್ತದೆ. ಈಗಲೂ ಬರಿಗಾಲಿನಲ್ಲಿ ಓಡಾಟ. ಕೆಲವೇ ವಿಲೇವಾರಿ ಮಾಡುವ ಹೆಂಗಸರು. ಈ ಅಭಿಯಾನದಲ್ಲಿ ಕೊಂಡಿಗಳಾಗಿ, ಕೆಲಸಮಾಡುತ್ತಿದ್ದಾರೆ. ಲೆಖ್ಖ ಇಡುವಪದ್ಧತಿ, ಯಾವಹಂತದಲ್ಲೂ ಇಲ್ಲ. 'ಸರಳವಾದ ಬಣ್ಣದ ಮಾರ್ಕ್ ಅಷ್ಟೆ.

ಡಬ್ಬಾವಾಲ ಒಂದು ಟ್ರೇಡ್ ಮಾರ್ಕ್

'ಮ್ಯಾನೇಜ್ ಮೆಂಟ್' ನಲ್ಲಿ ಅನೇಕ ಮೇಲ್ಪದರಗಳಿಲ್ಲ. ಕೇವಲ ೩ ಮಟ್ಟಗಳು-ಪ್ರತಿ ಡಬ್ಬಾವಾಲನೂ ದೇಣಿಗೆ ಕೊಡಬೇಕು ಹಣದ ರೂಪದಲ್ಲಿ ಅಥವಾ ಬೇರೆ ತರಹ. ಕನಿಷ್ಠ ಬಂಡವಾಳ ೨ ಸೈಕಲ್, ಮರದ ಒಂದು, ಕ್ರೇಟ್-tiffin ಬಾಕ್ಸ್ ಗಳನ್ನು ಅದರಲ್ಲಿ ಕಲೆಹಾಕಲು. ಬಿಳಿ ಹತ್ತಿಬಟ್ಟೆಯ, 'ಕುರ್ತಾ-ಪೈಜಾಮ ಮತ್ತು ಗಾಂಧಿ ಟೋಪಿ, ಅದೇ ಟ್ರೇಡ್ ಮಾರ್ಕ್' ಅವರಿಗೆ ಬರುವ ಆದಾಯದಲ್ಲಿ ಪ್ರತಿ-ಯುನಿಟ್ ಗೆ ಇಷ್ಟು ಎಂದು ಲೆಕ್ಕ ಮಾಡಿ ಹಂಚಲಾಗುತ್ತದೆ. ತಡೆಯಿಲ್ಲದ ಸೇವೆ ಹವಾಮಾನದ ವೈಪರಿತ್ಯತೆ, ಅಥವಾ ಬೇರೆಯೇನೂ ಸವಾಲುಗಳೇ ಅಲ್ಲ. ಮಳೆಗಾಲ, ತಪ್ಪದೆ ಬರುತ್ತವೆ. ಗುಡುಗಿರಲಿ, ಸಿಡಿಲಿರಲೆ, ಪಿಡುಗಿರಲಿ ಅವರಿದ್ದಾರೆ. ಬಹಳ ಹಿಂದೆ,ಡಬ್ಬಾಗಳಲ್ಲೇ ಪುಟ್ಟ ಚೀಟಿಯಲ್ಲಿ ಬರೆದಿಟ್ಟು, ಸುದ್ದಿಯನ್ನು ಕೊಡುತ್ತಿದ್ದರು. ಈಗ ದಿನಗಳು ಬದಲಾಗಿವೆ. ಡಬ್ಬಾವಾಲರೆಲ್ಲರ ಕೈನಲ್ಲೂ 'ಮೊಬೈಲ್,' ಗಳಿವೆ.

ಸಲ್ಮಾನ್ ರಶ್ದಿಯವರ, ಕಾದಂಬರಿಯಲ್ಲಿ

ಸಲ್ಮಾನ್ ರಶ್ದಿಯವರ ವಿವಾದಾತ್ಮಕ ನಾವೆಲ್, 'ಸಟಾನಿಕ್ ವರ್ಸಿಸ್' ನಲ್ಲಿ ಇಬ್ಬರು ಮುಖಂಡರಲ್ಲಿ ಒಬ್ಬನು ಗಿಬ್ರೀಲ್ ಫರಿಶ್ತ, ಇಸ್ಮೈಲ್ ನಜ್ಮುದ್ದೀನ್ ಎಂಬ ಹೆಸರಿನಲ್ಲಿ ಒಬ್ಬ ಡಬ್ಬಾವಾಲನಿಗೆ ಜನಿಸುತ್ತಾನೆ. ನಾವೆಲ್ ನಲ್ಲಿ ಫರಿಶ್ತ ತನ್ನ ೧೦ ವರ್ಷದ ವಯಸ್ಸಿನಲ್ಲೇ, ತಂದೆಯವರ ಜೊತೆ ಸೇರಿಕೊಳ್ಳುತ್ತಾನೆ. ಬಾಂಬೆಯ ಎಲ್ಲಾ ಪ್ರದೇಶಗಳಿಗೂ ಊಟದ ಡಬ್ಬಗಳನ್ನು ವಿಲೆವಾರಿಮಾಡುತ್ತಾ, ಕೊನೆಗೆ ರಸ್ತೆಯಲ್ಲಿನ ಮನೆಯಿಂದ ಮುಕ್ತಿ ದೊರೆತು, ದೊಡ್ಡ ಸಿನೆಮಾ ನಟನಾಗುತ್ತಾನೆ. ಇನ್ಪೆಕ್ಟರ್ ಘೋಟೆ ನಾವೆಲ್, "ಡೆಡ್ ಆನ್ ಟೈಮ್", ನಲ್ಲಿಯೂ ಡಬ್ಬಾವಾಲನ ಒಂದು ಭೂಮಿಕೆಯಿದೆ. ಹಾಗಾಗಿ ಡಬ್ಬಾವಾಲರುಗಳು ಮುಂಬಯಿ ಜನರಿಗೆ ಚಿರಪರಿಚಿತರಾಗಿದ್ದಾರೆ.

ಹೆಚ್ಚಿನ ಓದು

  1. Pathak R.C. (1946, Reprint 2000). The Standard Dictionary of the Hindi Language, Varanasi: Bargava Book Depot,pp. 300,680
  1. Bombay Dabbawalas go high-tech.
  1. Amberish K Diwanji, "Dabbawallahs: Mumbai's best managed business", Rediff.com, November 4, 2003.
  1. In India, Grandma Cooks, They Deliver.
  1. BBC News: India's tiffinwalas fuel economy.

೨೦೧೮ ರಲ್ಲಿ

ಡಬ್ಬಾವಾಲಾಗಳು, ಯಾವಾಗಲೂ ಸುದ್ದಿಯಲ್ಲಿರುತ್ತಾರೆ.,

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

  • Official Website of the Mumbai Dabbawalas
  • Thakker, Pradip, Mumbai's amazing Dabbawalas, rediff.com, 11 November 2005
  • Shekhar Gupta, Our computer is our head and our Gandhi cap is the cover to protect it from the sun or rain,
  • Indian Express, Walk the Talk, NDTV 24x7.
  • Hart, Jeremy. "The Mumbai working lunch", The Independent Online, The Independent group, London, 2006-03-19. Retrieved on 2007-03-20.
  • Retrieved from "http://en.wikipedia.org/wiki/Dabbawala"
  • http://en.wikipedia.org/wiki/Image:Dabba.jpg.

Tags:

ಮುಂಬೈ ನಗರದ ಡಬ್ಬಾವಾಲಾಗಳು ಡಬ್ಬಾ ಊಟಮುಂಬೈ ನಗರದ ಡಬ್ಬಾವಾಲಾಗಳು ಡಬ್ಬಾವಾಲಾ ಕೆಲಸದ ಕಾರ್ಯ ವೈಖರಿಮುಂಬೈ ನಗರದ ಡಬ್ಬಾವಾಲಾಗಳು ಡಬ್ಬಾವಾಲಾ ಇತಿಹಾಸಮುಂಬೈ ನಗರದ ಡಬ್ಬಾವಾಲಾಗಳು ದಬ್ಬಾವಾಲರ ಬಗ್ಗೆ ಪುಸ್ತಕಮುಂಬೈ ನಗರದ ಡಬ್ಬಾವಾಲಾಗಳು ಡಬ್ಬಾವಾಲರುಗಳ ಕೆಲಸದ ಸೂಕ್ಷ್ಮತೆಮುಂಬೈ ನಗರದ ಡಬ್ಬಾವಾಲಾಗಳು ಬಿ.ಬಿ.ಸಿ,ವಾಹಿನಿಯಲ್ಲಿಮುಂಬೈ ನಗರದ ಡಬ್ಬಾವಾಲಾಗಳು ಡಬ್ಬಾವಾಲರ ಆದ್ಯತೆಮುಂಬೈ ನಗರದ ಡಬ್ಬಾವಾಲಾಗಳು ಡಬ್ಬಾವಾಲ ಒಂದು ಟ್ರೇಡ್ ಮಾರ್ಕ್ಮುಂಬೈ ನಗರದ ಡಬ್ಬಾವಾಲಾಗಳು ಸಲ್ಮಾನ್ ರಶ್ದಿಯವರ, ಕಾದಂಬರಿಯಲ್ಲಿಮುಂಬೈ ನಗರದ ಡಬ್ಬಾವಾಲಾಗಳು ಹೆಚ್ಚಿನ ಓದುಮುಂಬೈ ನಗರದ ಡಬ್ಬಾವಾಲಾಗಳು ಉಲ್ಲೇಖಗಳುಮುಂಬೈ ನಗರದ ಡಬ್ಬಾವಾಲಾಗಳು ಬಾಹ್ಯ ಸಂಪರ್ಕಗಳುಮುಂಬೈ ನಗರದ ಡಬ್ಬಾವಾಲಾಗಳು

🔥 Trending searches on Wiki ಕನ್ನಡ:

ವಿಭಕ್ತಿ ಪ್ರತ್ಯಯಗಳುವಿರಾಟ್ ಕೊಹ್ಲಿಬಾಬು ಜಗಜೀವನ ರಾಮ್ಓಂ (ಚಲನಚಿತ್ರ)ಕೊರೋನಾವೈರಸ್ ಕಾಯಿಲೆ ೨೦೧೯ಪ್ರಾಣಾಯಾಮಕರುಳುವಾಳುರಿತ(ಅಪೆಂಡಿಕ್ಸ್‌)ವಿಜ್ಞಾನ2ನೇ ದೇವ ರಾಯಕವಿರಾಜಮಾರ್ಗತೇಜಸ್ವಿ ಸೂರ್ಯಜಾಹೀರಾತುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಪುರಂದರದಾಸಅಂತಿಮ ಸಂಸ್ಕಾರಕರ್ನಾಟಕದ ನದಿಗಳುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಮಲೈ ಮಹದೇಶ್ವರ ಬೆಟ್ಟಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಪಟ್ಟದಕಲ್ಲುಕರ್ನಾಟಕದ ಹಬ್ಬಗಳುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಇಂಡಿ ವಿಧಾನಸಭಾ ಕ್ಷೇತ್ರಕನ್ನಡ ಸಾಹಿತ್ಯಹಳೇಬೀಡುದಶಾವತಾರಶಬರಿವಾಸ್ತುಶಾಸ್ತ್ರಕವಿಗಳ ಕಾವ್ಯನಾಮಅಳಿಲುಆದಿವಾಸಿಗಳುಷಟ್ಪದಿಮಕರ ಸಂಕ್ರಾಂತಿಮಂಡಲ ಹಾವುಭಾರತದ ಸಂವಿಧಾನ ರಚನಾ ಸಭೆಶಬ್ದಮಣಿದರ್ಪಣಅಮೆರಿಕಕೇಂದ್ರ ಪಟ್ಟಿರಾಷ್ಟ್ರೀಯ ಉತ್ಪನ್ನವಿನಾಯಕ ಕೃಷ್ಣ ಗೋಕಾಕಕದಂಬ ಮನೆತನಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕರ್ನಾಟಕ ರತ್ನಮೆಕ್ಕೆ ಜೋಳಭಾರತದ ರಾಜಕೀಯ ಪಕ್ಷಗಳುಕೊಳ್ಳೇಗಾಲಕೇಂದ್ರ ಸಾಹಿತ್ಯ ಅಕಾಡೆಮಿಮಹಾವೀರದಿಕ್ಕುಕರ್ನಾಟಕದ ಜಿಲ್ಲೆಗಳುಮಹಾತ್ಮ ಗಾಂಧಿಹಾಕಿಕ್ಷಯಭಾರತೀಯ ಶಾಸ್ತ್ರೀಯ ಸಂಗೀತವಿಜಯಪುರದೇಶಗಳ ವಿಸ್ತೀರ್ಣ ಪಟ್ಟಿಪಂಪ ಪ್ರಶಸ್ತಿಚಿಕ್ಕಮಗಳೂರುದಾಸ ಸಾಹಿತ್ಯಗಂಗಾಶಾತವಾಹನರುಜಲ ಮಾಲಿನ್ಯಭಗತ್ ಸಿಂಗ್ಇಮ್ಮಡಿ ಪುಲಿಕೇಶಿಸುಭಾಷ್ ಚಂದ್ರ ಬೋಸ್ನೀರುಗುಡಿಸಲು ಕೈಗಾರಿಕೆಗಳುಪುನೀತ್ ರಾಜ್‍ಕುಮಾರ್ಸಂಸ್ಕೃತ ಸಂಧಿಗುರು (ಗ್ರಹ)ಪಂಚಾಂಗಪೂರ್ಣಚಂದ್ರ ತೇಜಸ್ವಿವಾಲ್ಮೀಕಿಮಧುಮೇಹಚನ್ನವೀರ ಕಣವಿಭಾರತೀಯ ರಿಸರ್ವ್ ಬ್ಯಾಂಕ್ಅಶ್ವಗಂಧಾಶಿವಪ್ಪ ನಾಯಕಶ್ಯೆಕ್ಷಣಿಕ ತಂತ್ರಜ್ಞಾನ🡆 More