ಹಾಕಿ

ಹಾಕಿ ಯು ಯಾವುದೇ ಆಟಗಳ ಕೂಟಕ್ಕೆ ಮೂಲ ಕಾರಣವೆನ್ನಬಹುದು ಇದರಲ್ಲಿ ಎರಡು ತಂಡಗಳು ವಿರುದ್ದವಾಗಿ ಒಬ್ಬರನ್ನೊಬ್ಬರು ಉಪಾಯವಾಗಿ ನಿರ್ವಹಿಸುತ್ತಾ ಒಂದು ಚೆಂಡಿನಿಂದ, ಅಥವಾ ಗಟ್ಟಿ, ಗೋಲಾಗಿರುವ, ರಬ್ಬರಿನ ಅಥವಾ ಭಾರವಾದ ಪಕ್ಎಂದು ಕರೆಯಲ್ಪಡುವ ಪ್ಲಾಸ್ಟಿಕ್ ಡಿಸ್ಕ್ , ಎದುರಾಳಿಗಳ ಬಲೆ ಅಥವಾ ಗೋಲ್ ನೊಳಗೆ ಹೋಗುವಂತೆ,ಹಾಕಿ ಸ್ಟಿಕ್ ಅನ್ನು ಬಳಸಿ ಆಡಲಾಗುತ್ತದೆ.

ಮೈದಾನದ ಹಾಕಿ

ಹಾಕಿ 
ಮೆಲ್ಬೊರ್ನ್ ಯೂನಿವರ್ಸಿಟಿಯಲ್ಲಿ ಮೈದಾನದ ಹಾಕಿ ಆಟ

ಮೈದಾನದ ಹಾಕಿಯನ್ನು ಗರಸು, ನೈಸರ್ಗಿಕ ಹುಲ್ಲಿನ ಮೇಲೆ, ಮರಳು-ಆಧಾರಿತ ಅಥವಾ ನೀರಿನಾಧಾರಿತ ಕೃತಕ ಹುಲ್ಲಿನ ನೆಲದ ಮೇಲೆ, ಸಣ್ಣದಾದ,ಗಟ್ಟಿಯುಳ್ಳ ಬಾಲ್ ಬಳಸಿ ಆಟವಾಡಲಾಗುತ್ತದೆ. ಈ ಆಟವು ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ವಿಶ್ವದ ಹಲವಾರು ಕಡೆಗಳಲ್ಲಿ ಜನಪ್ರಿಯವಾಗಿದೆ, ಮುಖ್ಯವಾಗಿಯುರೋಪ್,ಏಷಿಯಾ, ಆಸ್ಟ್ರೇಲಿಯಾ, ಮತ್ತು ದಕ್ಷಿಣ ಆಫ್ರಿಕಾ.


ಹೆಚ್ಚಿನ ದೇಶಗಳಲ್ಲಿ, ಆಟವನ್ನು ಒಂದು ಜಾತಿಯ ಪುರುಷ ಅಥವಾ ಮಹಿಳೆಯರ ವಿಭಾಗಗಳಲ್ಲಿ ಆಡಲಾಗುತ್ತದೆ, ಅಲ್ಲದೇ ಇಬ್ಬರೂ ಇರುವಂತಹ ತಂಡಗಳಲ್ಲಿ ಕೂಡಾ ಆಡಬಹುದು.


ಅಂತರಾಷ್ಟ್ರೀಯ ಹಾಕಿ ಫೆಡೆರೇಶನ್ (FIH), 116 ಸದಸ್ಯರುಗಳಿಂದ ಕೂಡಿದ ಆಡಳಿತ ಮಂಡಳಿಯಾಗಿದೆ. 1908 ರಿಂದ ಪುರುಷರ ಫೀಲ್ಡ್ ಹಾಕಿಯನ್ನು ಪ್ರತಿ ಸಮ್ಮರ್ ಓಲಂಪಿಕ್ ಗೇಮ್ಸ್ನಲ್ಲಿ ಆಡಲಾಗುತ್ತಿದೆ (1912 & 1914 ಹೊರತುಪಡಿಸಿ), ಈ ವೇಳೆ ಮಹಿಳೆಯರ ಫೀಲ್ಡ್ ಹಾಕಿಯನ್ನು 1980 ರಿಂದ ಪ್ರತಿ ಸಮ್ಮರ್ ಓಲಂಪಿಕ್ ಗೇಮ್ಸ್ ನಲ್ಲಿ ಆಡಲಾಗುತ್ತಿದೆ.

ನವೀನ ಮಾದರಿಯ ಫೀಲ್ಡ್ ಹಾಕಿ ಸ್ಟಿಕ್‌ಗಳು J- ಆಕಾರದಲ್ಲಿರುತ್ತವೆ ಮತ್ತು ಮರ, ಗ್ಲಾಸ್ ಫೈಬರ್ ಅಥವಾ ಕಾರ್ಬನ್ ಫೈಬರ್‌ಗಳ ಮಿಶ್ರಣದಿಂದ ತಯಾರಿಸಲಾಗಿದೆ ( ಕೆಲವು ಸಲ ಎಲ್ಲದರಿಂದ) ಮತ್ತು ಆಟವಾಡುವ ಕೊನೆಯ ಬದಿಯು ಡೊಂಕಾಗಿ ಬಾಗಿರುತ್ತದೆ, ಆಟವಾಡುವ ಬದಿಯು ಸಮಾಂತರ ಮೇಲ್ಮೈಯಿದ್ದು ಮತ್ತು ಕೊನೆಯ ಬದಿಯು ಡೊಂಕಾದ ಮೇಲ್ಮೈ ಇರುತ್ತದೆ.

ಈಗಿನ ಫೀಲ್ಡ್ ಹಾಕಿಯು 18 ಶತಮಾನದ ಮಧ್ಯದಲ್ಲಿ ಇಂಗ್ಲೆಂಡ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರಾಥಮಿಕವಾಗಿ ಶಾಲೆಗಳಲ್ಲಿ, ಮೊದಲ 19 ನೇ ಶತಮಾನದ ಅರ್ಧದವರಗೆ ಇದು ದೃಢವಾಗಿ ಸ್ಥಾಪನೆಯಾಗಿರಲಿಲ್ಲ ಲಂಡನ್ನ ಆಗ್ನೇಯ ಭಾಗದಲ್ಲಿ ಬ್ಲಾಕ್ ಹೀತ್ಎಂಬಲ್ಲಿ ಮೊಟ್ಟ ಮೊದಲ ಕ್ಲಬ್ ಅನ್ನು 1849 ರಲ್ಲಿ ಸ್ಥಾಪಿಸಲಾಯಿತು. ಭಾರತ ಮತ್ತು ಪಾಕಿಸ್ತಾನ ದಲ್ಲಿ ಫೀಲ್ಡ್ ಹಾಕಿಯು ರಾಷ್ಟೀಯ ಕ್ರೀಡೆ ಯಾಗಿದೆ.

ಐಸ್ ಹಾಕಿ

ಹಾಕಿ 
The Barrie Colts and the Brampton Battalion in an ice hockey game.

ಐಸ್ ಹಾಕಿ ಯನ್ನು ದೊಡ್ದದಾದ ಸಮತಟ್ಟಾದ ಐಸ್‌ನ ಮೇಲೆ , ಮೂರು ಇಂಚಿನ (76.2 mm) ವಿಸ್ತೀರ್ಣವುಳ್ಳ ಬಿರುಸು ಅಥವಾ ಮೆದು ರಬ್ಬರ್‌ನ ಪಕ್ ಎಂದು ಕರೆಯಲ್ಪಡುವ ಡಿಸ್ಕ್ ನಿಂದ ಆಡಲಾಗುತ್ತದೆ. ಪಕ್ ಅನ್ನು ಉನ್ನತ ಶ್ರೇಣಿಯ ಆಟಗಳಲ್ಲಿ ಐ‌ಸ್‌ನ ಮೇಲೆ ಜಿಗಿತ ಮತ್ತು ಘರ್ಷಣೆಯನ್ನು ಕಡಿಮೆ ಮಾಡಲು ಗಟ್ಟಿಗೊಳಿಸಲಾಗಿರುತ್ತದೆ. ಎರಡು ಸ್ಕೇಟರ್‌ ತಂಡಗಳ ಮಧ್ಯ ಆಟದ ಸ್ಪರ್ಧೆ ಏರ್ಪಡುತ್ತದೆ. ಈ ಆಟವನ್ನು ಉತ್ತರ ಅಮೇರಿಕ ಮತ್ತು ಇನ್ನೂ ವಿಶ್ವದ ಇತರ ದೇಶಗಳಲ್ಲಿ ಬದಲಾದ ರೀತಿಯಲ್ಲಿ ಆಡಲ್ಪಡುತ್ತದೆ. ಕೆನಡಾ, ಫಿನ್ ಲ್ಯಾಂಡ್, ಲಟ್ವಿಯ, ಚೆಕ್ ರಿಪಬ್ಲಿಕ್, ಮತ್ತುಸ್ಲೋವಾಕಿಯದಲ್ಲಿ ಈ ಆಟವು ಬಹಳ ಜನಪ್ರಿಯವಾಗಿದೆ.

ಇದರ ಆಡಳಿತ ಮಂಡಳಿಯು 66 ಸದಸ್ಯರನ್ನು ಹೊಂದಿದೆ ಇಂಟರ್ ನ್ಯಾಷನಲ್ ಐಸ್ ಹಾಕಿ ಫೆಡರೆಷನ್, (IIHF ). ಪುರುಷರ ಐಸ್ ಹಾಕಿಯನ್ನು 1924 ರಿಂದ ಚಳಿಗಾಲದ ಒಲಂಪಿಕ್‌ ಮತ್ತು 1920 ಬೇಸಿಗೆ ಒಲಂಪಿಕ್‌ನಲ್ಲಿ ಆಡಲಾಗುತ್ತಿದೆ ಮಹಿಳೆಯರ ಐಸ್ ಹಾಕಿಯನ್ನು 1998ರಲ್ಲಿ ಚಳಿಗಾಲದ ಒಲಂಪಿಕ್ನಲ್ಲಿ ಸೇರಿಸಲಾಯಿತು. ಉತ್ತರ ಅಮೇರಿಕಾದ }ನ್ಯಾಷನಲ್ ಹಾಕಿ ಲೀಗ್ (NHL) ಬಲವಾದ ವೃತ್ತಿಪರ ಐಸ್ ಹಾಕಿ ಒಕ್ಕೂಟವಾಗಿದ್ದು, ಪ್ರಪಂಚದಾದ್ಯಂತ ಉನ್ನತ ಶ್ರೇಣಿಯ ಐಸ್ ಹಾಕಿ ಆಟಗಾರರನ್ನು ಹೊರತರುತ್ತಿದೆ. NHLನ ನಿಯಮಾವಳಿಗಳು ಒಲಂಪಿಕ್ ಹಾಕಿಯಲ್ಲಿ ಉಪಯೋಗಿಸುವ ನಿಯಮಗಳಿಗಿಂತ ಸ್ವಲ್ಪ ಭಿನ್ನವಾಗಿ ಇರುತ್ತದೆ: ಕೆಳಮುಖವಾಗಿ ಮುಂದುವರೆದು ಕಾಲಾವಧಿಗಳು 20ನಿಮಿಷ ಉದ್ದವಾಗಿರುತ್ತದೆ. ಇಲ್ಲಿ ಮೂರು ರೀತಿಯ ಕಾಲಾವಧಿಗಳಿರುತ್ತವೆ.

ಐಸ್ ಹಾಕಿ ಸ್ಟಿಕ್ಗಳು L- ಆಕಾರದ ಮರದಿಂದ ಮಾಡಿದ ಗ್ರ್ಯಾಫೈಟ್ಅಥವಾ ಕಾಂಪೋಸಿಟ್ಸ್ನೊಂದಿಗೆ ತಳಬಾಗದಲ್ಲಿ ಬ್ಲೇಡ್ ನಿಂದಾಗಿದ್ದು ಇದರಿಂದ ಆಡುವ ಜಾಗದಲ್ಲಿ ಮಗ್ಗುಲಾಗಿ ಒರಗು ವಂತದ್ದಾಗಿರುತ್ತದೆ. ನಿಯಮದ ಪ್ರಕಾರ ಈ ವಿನ್ಯಾಸವು ಎಡ - ಅಥವಾ ಬಲ ಕೈ ಆಟಗಾರರಿಬ್ಬರಿತೂ ಅನುಕೂಲಕರವಾಗಿದೆ

ಐಸ್ ಹಾಕಿ ತರಹದ ಆಟಗಳನ್ನು ನೆದರ್ ಲ್ಯಾಂಡ್ಸ್ನಲ್ಲಿ ಈ ಮುಂಚಿತವಾಗಿ ಆಡಲ್ಪಟ್ಟಿದೆ ಎಂದು ಪ್ರದರ್ಶನಗಳು ಮತ್ತು ವರದಿಗಳು ಬಂದಿವೆ, ಮತ್ತು ಕೆನಡಾದಿಂದ 19 ನೇ ಶತಮಾನದ ಆರಂಭದಲ್ಲಿ ವರದಿಯಾಗಿದೆ, ಆದರೆ ನವೀನ ಮಾದರಿಯ ಆಟವು ಮೂಲತಃ ಮೆಕ್ ಗಿಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಸ್ಥಾಪಿಸಲ್ಪಟ್ಟಿದೆ, 1

ರೋಲರ್ ಹಾಕಿ

ಇನ್‌ಲೈನ್

ಚಿತ್ರ:AcesWomenChCh 56.jpg
ಇನ್ ಲೈನ್ ರೋಲರ್ ಹಾಕಿ

ಇನ್ ಲೈನ್ ಹಾಕಿಯು ರೋಲರ್ ಹಾಕಿಗಿಂತ ವ್ಯತ್ಯಾಸವಿದ್ದು ಐಸ್ ಹಾಕಿಯಿಂದ ಕಂಡುಹಿಡಿದಿರುವುದರಿಂದ ಅದಕ್ಕೆ ಹೋಲುತ್ತದೆ. ಇನ್ ಲೈನ್ ಹಾಕಿಯು 4 ಸ್ಕೇಟರ್ ಗಳು ಮತ್ತು ಒಬ್ಬ ಗೋಲರ್‌ ಅನ್ನು ಒಳಗೊಂಡಿರುವ ಎರಡು ಆಟಗಾರರ ತಂಡದಿಂದ, ಒಂದೊಂದು ಮೈದಾನದ ಕೊನೆಗೂ ಒಂದೊಂದು ಬಲೆಯೊಂದಿಗೆ ಮದ್ಯದ ಗೆರೆಯಿಂದ ಎರಡು ಅರ್ಧಭಾಗವಾಗಿ ಇಬ್ಬಾಗಿಸಲ್ಪಟ್ಟ ಒಣಗಿದ ಮಂಜಿನ ಮೈದಾನದಲ್ಲಿ ಆಡಲ್ಪಡುತ್ತದೆ. ಈ ಆಟವು ಐಸ್ ಹಾಕಿಯ ಆಫ್ ಸೈಡ್ ನಿಯಮಕ್ಕೆ ಬದಲಾಗಿ 15 ನಿಮಿಷಗಳ ಕಾಲಾವಧಿಯಲ್ಲಿ ಆಡಲ್ಪಡುತ್ತದೆ. ಇವನ್ನು ಐಸಿಂಗ್ಸ್ ಎಂದು ಸಹ ಕರೆಯಲಾಗಿದೆ, ಆದರೆ ಇವು ಸಾಮಾನ್ಯವಾಗಿ ಕಾನೂನಿಗೆ ವಿರುದ್ಧ ಎಂದು ಉಲ್ಲೇಖಿಸಲಾಗಿದೆ. ಮೈದಾನದ ವಿಸ್ತೀರ್ಣಕ್ಕಾಗಿ ಮತ್ತು ಆಟದ ನಿಯಮಗಳ ಮೇಲ್ನೋಟಕ್ಕಾಗಿ, IIHF ಇನ್ ಲೈನ್ ನಿಯಮಗಳನ್ನು ನೋಡಿ (ಅಧಿಕೃತ ನಿಯಮಗಳು). ಕೆಲವೊಂದು ಒಕ್ಕೂಟಗಳು ಮತ್ತು ಸ್ಪರ್ಧೆಗಳು IIHF ನಿಯಮಾವಳಿಗಳನ್ನು ಪಾಲಿಸುವುದಿಲ್ಲ, ಅದರಲ್ಲೂ ವಿಶೇಷವಾಗಿ USA ಇನ್ ಲೈನ್ Archived 2011-07-28 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಕೆನಡಾ ಇನ್ ಲೈನ್.

ಕ್ವಾಡ್

ರೋಲರ್ ಹಾಕಿ(ಕ್ವಾಡ್)ಯು ರೋಲರ್ ಕ್ರೀಡೆಗೋಸ್ಕರ ಹುಟ್ಟಿಕೊಂಡ ಹೆಸರಾಗಿದೆ ಇನ್ ಲೈನ್ ಸ್ಕೇಟ್ಸ್ ಗಳನ್ನು ಕಂಡುಹಿಡಿಯುವ ಮೊದಲೇ ಇದು ಅಸ್ಥಿತ್ವದಲ್ಲಿತ್ತು. ರೋಲರ್ ಹಾಕಿಯನ್ನು ವಿಶ್ವದಾದ್ಯಂತ 60 ದೇಶಗಳಲ್ಲಿ ಆಡಲ್ಪಡುತ್ತಿದೆ, ಮತ್ತು ವಿಶ್ವದಾದ್ಯಂತ ಅನೇಕ ಹೆಸರುಗಳನ್ನು ಹೊಂದಿದೆ. ಈ ಆಟವು ಕ್ವಾಡ್ ಹಾಕಿ, ಹೊಖೀ ಎಂ ಪಟಿನ್ಸ್, ಅಂತರಾಷ್ತ್ರೀಯ ಸ್ಟೈಲ್ ಬಾಲ್ ಹಾಕಿ, ರಿಂಕ್ ಹಾಕಿ ಮತ್ತು ಹಾರ್ಡ್ ಬಾಲ್ ಹಾಕಿ ಎಂದೂ ಸಹ ಗುರುತಿಸಲ್ಪಡುತ್ತದೆ. ರೋಲರ್ ಹಾಕಿಯು 1992 ಬಾರ್ಸಿಲೋನಾ ಸಮ್ಮರ್ ಓಲಂಪಿಕ್‌ನ ರೋಲರ್ ಆಟಗಳಲ್ಲಿ ಬಹಿರಂಗವಾಗಿ ಪ್ರದರ್ಶಿಸಲ್ಪಟ್ಟಿತು.

ಸ್ಲೆಡ್ಜ್ ಹಾಕಿ

ಸ್ಲೆಡ್ಜ್ ಹಾಕಿಯು ಒಂದು ತರಹದ ಐಸ್ ಹಾಕಿಯಾಗಿದ್ದು, ಇದು ದೇಹದ ಕೆಳಾಭಾಗದಲ್ಲಿ ತೊಂದರೆಯಿದ್ದು ದೈಹಿಕವಾಗಿ ಅಂಗವಿಕಲರಾಗಿರುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಆಟಗಾರರು ಡಬಲ್-ಬ್ಲೇಡೆಡ್ ಸ್ಲೆಡ್ಜ್‌ಗಳ ಮೇಲೆ ಕುಳಿತು ಮತ್ತು ಎರಡು ದಾಂಡುಗಳನ್ನು ಉಪಯೋಗಿಸುತ್ತಾರೆ; ಪ್ರತಿಯೊಂದು ಕೋಲು ಕೊನೆಯಲ್ಲಿ ಬ್ಲೇಡ್ ಹೊಂದಿದ್ದು ಮತ್ತು ಇನ್ನೊಂದೆಡೆ ಸಣ್ಣ ಪಿಕ್ಸ್ ಹೊಂದಿರುತ್ತದೆ. ಆಟಗಾರರು ಕೋಲನ್ನು ಮುಂದೂಡಲು, ಸ್ಟಿಕ್ ಹ್ಯಾಂಡಲ್ ಮತ್ತು ಪಕ್ ಅನ್ನು ಹೊಡೆಯಲು ಮತ್ತು ತಮ್ಮ ಸ್ಲೆಡ್ಜ್ ಗಳನ್ನು ಮುಂದೂಡಲು ಉಪಯೋಗಿಸುತ್ತಾರೆ. ಇದರ ನಿಯಮಾವಳಿಗಳು IIHF ಐಸ್ ಹಾಕಿಯ ನಿಯಮಗಳಿಗೆ ಬಹಳ ಸಮಾನವಾಗಿವೆ.

ಕೆನಡಾವು ಆಟದ ಅಭಿವೃದ್ಧಿ ಮತ್ತು ಆಟಗಾರರಿಗೆ ಬೇಕಾಗುವ ಸಲಕರಣೆಗಳನ್ನು ಉತ್ತಮ ರೀತಿಯಲ್ಲಿ ತಯಾರಿಸುವಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತದೆ. ಬಹಳಷ್ಟು ಸಲಕರಣೆಗಳನ್ನು ಕ್ರೀಡೆಗಾಗಿ ತಯಾರಿಸಲು ಕೆನಡಾದಲ್ಲಿ ಮೊಟ್ಟ ಮೊದಲಿಗೆ ಅಭಿವೃದ್ಧಿಪಡಿಸಲಾಯಿತು, ಅವುಗಳಲ್ಲಿ ಸ್ಲೆಡ್ಜ್ ಹಾಕಿಗಾಗಿ ಹಾಕಿ ಸ್ಟಿಕ್ಗಳನ್ನು ಫೈಬರ್ ಗ್ಲಾಸ್‌ನಿಂದ ಪದರು ಪದರಾಗಿ ಹೊದಿಸಿ, ಅದೇ ರೀತಿಯಾಗಿ ಅಲ್ಯೂಮಿನಿಯಮ್ ಹಿಡಿಕೆಗಳನ್ನು ಕೈಯಿಂದ ಕೆತ್ತಿದ ಬ್ಲೇಡ್‌ಗಳು ಮತ್ತು ವಿಶೇಷವಾಗಿ ಅಲ್ಯೂಮಿನಿಯಮ್ ಸ್ಲೆಡ್ಜ್‌ಗಳನ್ನು ಸ್ಕೇಟ್ ಬ್ಲೇಡ್‌ಗಳ ನಿಯಂತ್ರಣಕ್ಕೆ ಸೇರಿಸಲಾಯಿತು.

ಇನ್ ಲೈನ್ ಸ್ಲೆಡ್ಜ್ ಹಾಕಿ

ಐಸ್ ಸ್ಲೆಡ್ಜ್ ಹಾಕಿಯ ಮೇಲೆ ಆಧರಿಸಿದೆ, ಇನ್ ಲೈನ್ ಸ್ಲೆಡ್ಜ್ ಹಾಕಿಯನ್ನು ಇನ್ ಲೈನ್ ಹಾಕಿಯಲ್ಲಿರುವ ನಿಯಮದಂತೆ ಆಡಲಾಗುತ್ತದೆ (ಮೂಲತವಾಗಿ ಐಸ್ ಹಾಕಿಯನ್ನು ಇನ್ ಲೈನ್ ಸ್ಕೇಟ್ಸ್‌ಗಳನ್ನು ಬಳಸುತ್ತಾ ಐಸ್ ಮೇಲೆ ಆಡಲಾಗುತ್ತದೆ)ಮತ್ತು ಯೂರೋಪಿನ ಪ್ರೀಮಿಯರ್ ಕ್ರೀಡೆಗಳ ವೀಲ್ ಚೇರ್ ಗಳ ತಯಾರಕ ಕಂಪನಿ RGKಯಿಂದ ಇನ್ ಲೈನ್ ಸ್ಲೆಡ್ಜ್ ಗಳನ್ನು ತಯಾರಿಸಲು ಮತ್ತು ವಿನ್ಯಾಸವನ್ನು ಮಾಡಲು ಇದರಿಂದ ಸಾಧ್ಯವಾಯಿತು. . ಈ ಆಟದಲ್ಲಿ ಬೇರೆ ರೀತಿಯ ಗುಂಪು ಆಟಗಳಲ್ಲಿ ಅಂದರೆ ವೀಲ್ ಚೇರ್ ಬಾಸ್ಕೆಟ್ ಬಾಲ್ ಮತ್ತು ವೀಲ್ ಚೇರ್ ರಗ್ಬಿ ಇರುವಂತೆ ಯಾರು ಈ ಇನ್ ಲೈನ್ ಸ್ಲೆಡ್ಜ್ ಆಟದಲ್ಲಿ ಸೇರಿಕೊಳ್ಳಬಹುದು ಎನ್ನುವುದರ ಬಗ್ಗೆ ಸ್ಪಷ್ಟವಾದ ಅಂಕಗಳ ಪದ್ಧತಿಯ ನಿರ್ದೇಶನ ಇರುವುದಿಲ್ಲ. ಇನ್ ಲೈನ್ ಆಟವು ಪ್ರತಿಯೊಬ್ಬರಿಗೂ, ಅವರು ಅಂಗವಿಕಲತೆಯನ್ನು ಹೊಂದಿರಲಿ ಇಲ್ಲದೆ ಇರಲಿ ಅದನ್ನು ಗಣನೆಗೆ ತೆಗೆದುಕೊಳ್ಳದೆ ಒಬ್ಬ ವ್ಯಕ್ತಿಯ ಕೇವಲ ಅರ್ಹತೆ ಮತ್ತು ಸಾಮರ್ಥ್ಯ ಆಧಾರದ ಮೇಲೆ ವಿಶ್ವದ ಚಾಂಪಿಯನ್ ಷಿಪ್ ಶ್ರೇಣಿಯನ್ನು ಪೂರ್ಣಗೊಳಿಸಲು ಅಭಿವೃದ್ಧಿಗೊಳಿಸಲ್ಪಟ್ಟಿತು. ಇದು ಇನ್ ಲೈನ್ ಸ್ಲೆಡ್ಜ್ ಹಾಕಿಯ ನಿಜವಾದ ಸತ್ಯತೆಯನ್ನು ಸೂಚಿಸುತ್ತದೆ.

ಮೊಟ್ಟ ಮೊದಲನೇ ಇನ್ ಲೈನ್ ಸ್ಲೆಡ್ಜ್ ಹಾಕಿಯನ್ನು 2009ರ ಡಿಸೆಂಬರ್ 19 ರಂದು ಹಲ್ ಸ್ಟಿಂಗ್ರೇಸ್ ಮತ್ತು ಗ್ರಿಮ್ಸ್ ಬೈ ರೆಡ್ ವಿಂಗ್ಸ್ ಗಳ ಮಧ್ಯೆ ಇಂಗ್ಲೆಂಡ್‌ನ ಬಿಸ್ಲೆಯಲ್ಲಿ ಆಡಲಾಯಿತು. ಮ್ಯಾಟ್ ಲಾಯ್ಡ್, ಪ್ಯಾರಾಲಿಂಪಿಕ್ ಅಥ್ಲೆಟ್ ಇವರು ಇನ್ ಲೈನ್ ಹಾಕಿಯನ್ನು ಕಂಡುಹಿಡಿದ ಹೆಗ್ಗಳಿಕೆಗೆ ಪಾತ್ರನಾಗಿದ್ದಾರೆ ಮತ್ತು ಗ್ರೇಟ್ ಬ್ರಿಟನ್ ಅನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಆಟದ ಅಭಿವೃದ್ಧಿಯಲ್ಲಿ ತೊಡಗಿರುವ ದೇಶವೆನ್ನಲಾಗಿದೆ.

ಸ್ಟ್ರೀಟ್ ಹಾಕಿ

ಇನ್ನೊಂದು ರೀತಿಯ ಹೆಸರುವಾಸಿಯಾದ ಹಾಕಿ ಎಂದರೆ ಸ್ಟ್ರೀಟ್ ಹಾಕಿ, ಕೆಲವೊಂದು ಬಾರಿ ಇದನ್ನು ರೋಡ್ ಹಾಕಿ ಎಂದೂ ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಐಸ್ ಹಾಕಿಯ ಅಥವಾ ರೋಲರ್ ಹಾಕಿಯ ನಿಯಮಗಳಂತೆಯೇ ಆಡಲಾಗುತ್ತದೆ, ಇದು ಬೀದಿಯಲ್ಲಿ ಆಡಲ್ಪಡುತ್ತದೆ. ಬಹಳಷ್ಟು ಸಮಯ, ಪಕ್ ನ ಬದಲಾಗಿ ಬಾಲನ್ನು ಉಪಯೋಗಿಸಲಾಗುತ್ತದೆ, ಏಕೆಂದರೆ ಪಕ್ ಅಸ್ಫಾಲ್ಟ್ ಅಥವಾ ಸಿಮೆಂಟ್ ಮೇಲ್ಮೈ ಮತ್ತು ಐಸ್‌ನ ಮೇಲೆ ಜಾರುವುದಿಲ್ಲ ಹಾಗೂ ಬಹಳಷ್ಟು ಘರ್ಷಣೆಗೊಳಗಾಗುತ್ತದೆ ಬೀದಿ ಹಾಕಿಯು ವರ್ಷವಿಡೀ ಆಡಲಾಗುತ್ತದೆ.

ಹಾಕಿಯ ಬೇರೆ ಬೇರೆ ವಿಧಗಳು

ಇನ್ನಿತರ ಆಟಗಳು ಹಾಕಿಯಿಂದಲೇ ಕಂಡುಹಿಡಿಯಲ್ಪಟ್ಟಿವೆ ಅಥವಾ ಮೊದಲಿನವುಗಳು ಈ ಕೆಳಕಂಡವುಗಳನ್ನು ಒಳಗೊಳ್ಳುತ್ತವೆ.

ಏರ್ ಹಾಕಿ ಒಳಾಂಗಣ ಆಟವಾಗಿ ಪಕ್ ನೊಂದಿಗೆ ಏರ್-ಕುಷನ್ ಟೇಬಲ್‌ನ ಮೇಲೆ ಆಡುತ್ತಾರೆ.

ಬೀಚ್ ಹಾಕಿಯು,ಬೀದಿ ಹಾಕಿಗಿಂತ ವ್ಯತ್ಯಾಸವಾಗಿರುತ್ತದೆ,ಇದು ದಕ್ಷಿಣ ಕ್ಯಾಲಿಫೋರ್ನಿಯಾದ ಸಮುದ್ರದಲ್ಲಿನ ಆಟ ಸಾಮಾನ್ಯ ದೃಶ್ಯವಾಗಿದೆ.

ಬಾಲ್ ಹಾಕಿ ಜಿಮ್‌ಗಳಲ್ಲಿ ಬಳಸುವ ಕೋಲಿನಿಂದ ಆಡಲ್ಪಡುತ್ತದೆ ಮತ್ತು ನಯವಾಗಿಸಿದ ಟೆನ್ನಿಸ್ ಬಾಲನ್ನು ಬಳಸಲಾಗುತ್ತದೆ.

ಚಿತ್ರ:Unicyclehockey.jpg
Unicycle hockey
  • ಯೂನಿಸೈಕಲ್ ಹಾಕಿ ರೋಲರ್ ಅಥವಾ ಇನ್ ಲೈನ್ ಹಾಕಿಯನ್ನು ಹೋಲುವಂತಿರುತ್ತದೆ, ಆದರೂ ಪ್ರತಿಯೊಬ್ಬ ಆಟಗಾರರು ತಮ್ಮ ನೆಲೆಯನ್ನು ಬಾಲಿಗೆ ಆಟ ಆಡಲು ಯೂನಿಸೈಕಲ್ನ ಮೇಲೆ (ಎರಡು ಕಾಲುಗಳನ್ನು ಪೆಡಲ್ ಮೇಲೆ) ಹೊಂದಿಸಿಕೊಳ್ಳಬೇಕಾಗುತ್ತದೆ.

ಡೆಕ್ ಹಾಕಿಯು ಸಾಂಪ್ರದಾಯಿಕವಾಗಿ ರಾಯಲ್ ನೇವೀ ಯವರಿಂದ ಹಡಗಿನಲ್ಲಿ ಮರದ ಸಣ್ಣ "L" ಆಕಾರದ ಮರದ ಕೋಲನ್ನು ಉಪಯೋಗಿಸಿ ಆಡಲಾಗುತ್ತದೆ.

ಬ್ಯಾಂಡಿಯು ಸಾಂಕೇತಿಕವಾಗಿ ಹೊರಾಂಗಣ ಆಟವಾಗಿ ಫುಟ್ ಬಾಲ್- ಸೈಜಿನ ಐಸ್ ಅರೆನಾದಿಂದ ಆಡಲ್ಪಡುತ್ತದೆ.

ಬಾಕ್ಸ್ ಹಾಕಿಯು ಶಾಲೆಯ ಮೈದಾನದ ಆಟವಾಗಿ ಇಬ್ಬರು ವ್ಯಕ್ತಿಗಳಿಂದ ಆಡಲ್ಪಡುತ್ತದೆ.

ಆಟದ ಉದ್ಡೇಶವೆಂದರೆ ಹಾಕಿ ಪಕ್‌ ಅನ್ನು  ಬಾಕ್ಸ್‌ನ ಮಧ್ಯದಿಂದ ರಂದ್ರದ ಮುಖಾಂತರ ಬಾಕ್ಸ್‌ನ ಕೊನೆಯವರೆಗೆ ಹೋಗುವಂತೆ ಹೊಡೆಯಬೇಕಾಗುತ್ತದೆ.(ಗೋಲ್ ಎಂದು ಕರೆಯಲ್ಪಡುತ್ತದೆ)  

ಆಟಗಾರನು ಮಂಡಿಯೂರಿ ಮತ್ತು ಒಬ್ಬರ ಎದುರಿನಲ್ಲಿ ಇನ್ನೊಬ್ಬರು ಬಾಕ್ಸ್‌ನ ಎರಡೂ ಬದಿಯಲ್ಲಿರಬೇಕು, ಪ್ರತಿ ಪ್ರಯತ್ನದಲ್ಲು ಪಕ್ ಅನ್ನು ಅವರ ಎಡಗಡೆ ಇರುವ ರಂದ್ರದ ಕಡೆಗೆ ಹೋಗುವಂತೆ ಹೊಡೆಯಬೇಕು.

ಬ್ರೂಮ್‌ಬಾಲ್ ಅನ್ನು ಐಸ್ ಹಾಕಿಯ ಮೈದಾನದಲ್ಲಿ ಆಡಲಾಗುತ್ತದೆ, ಆದರೆ ಪಕ್‌ನ ಬದಲಾಗಿ ಬಾಲ್ ನೊಂದಿಗೆ ಮತ್ತು ಐಸ್ ಹಾಕಿ ಸ್ಟಿಕ್ ನ ಜಾಗದಲ್ಲಿ "ಬ್ರೂಮ್" (ತುದಿಯಲ್ಲಿ ಚಿಕ್ಕದಾದ ಪ್ಲಾಸ್ಟಿಕ್ ಅಳವಡಿಸಿದ ಸ್ಟಿಕ್) ಬಳಸಿ ಆಡಲಾಗುತ್ತದೆ. ಸ್ಕೇಟ್ ಗಳ ಬದಲಾಗಿ ವಿಶೇಷವಾದ ಬೂಟುಗಳನ್ನು ಬಳಸಲಾಗುತ್ತದೆ ಇವು ತುಂಬಾ ಮೃದುವಾದ ರಬ್ಬರಿನ ತಳವನ್ನು ಹೊಂದಿರುತ್ತವೆ, ಮೈದಾನದಲ್ಲಿ ಓಡುತ್ತಿರುವ ವೇಳೆಯಲ್ಲಿ ಇವು ಗರಿಷ್ಠ ಹಿಡಿತ ನೀಡುತ್ತವೆ.

ಫ್ಲೋರ್ ಬಾಲ್, ಹಾಕಿಯ ಒಂದು ಮಾದರಿ, ಇದನ್ನು ಜಿಮ್ನಾಷಿಯಂನಲ್ಲಿ ಅಥವಾ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ. ಪ್ಲಾಸ್ಟಿಕ್ ಬಾಲ್‌ನ ಬದಲಾಗಿ ವಿಫಲ್ ಬಾಲ್ ನ್ನು ಬಳಸಲಾಗುತ್ತದೆ, ಮತ್ತು ಸ್ಟಿಕ್‌ಗಳನ್ನು ಅವಶ್ಯಕ ವಸ್ತುಗಳ ಸಂಯುಕ್ತದಿಂದ ಮಾಡಲಾಗಿರುತ್ತದೆ. ಸ್ಟಿಕ್‌ಗಳು ಕೇವಲ ಒಂದು ಮೀಟರ್ ಉದ್ದವಿರುತ್ತವೆ.

ಫುಟ್ ಹಾಕಿ ಅಥವಾ ಸಕ್ ಹಾಕಿಯನ್ನು ಬಾಲ್ ಅಥವಾ ಒಂದು ಜೋಡಿ ಸಾಕ್ಸ್‌ಗಳನ್ನು ಸುರುಳಿ ಸುತ್ತಿ ಅದನ್ನು ಚೆಂಡಿನಂತೆ ಬಳಸಿ ಕೇವಲ ಪಾದಗಳಿಂದ ಆಡಲಾಗುತ್ತದೆ. ಇದು ಚಳಿಗಾಲದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಜನಪ್ರಿಯವಾಗಿದೆ.

ಜಿಮ್ ಹಾಕಿಯು ಐಸ್ ಹಾಕಿಯ ಒಂದು ಮಾದರಿಯಾಗಿದೆ ಇದನ್ನು ಜಿಮ್ನಾಶಿಯಂನಲ್ಲಿ ಆಡಲಾಗುತ್ತದೆ. ಇದು ಫೋಮ್‌ನ ಅಂಚಿರುವ ಸ್ಟಿಕ್‌ಗಳ ಜೊತೆಯಲ್ಲಿ ಫೋಮ್ ಬಾಲನ್ನು ಅಥವಾ ಪ್ಲಾಸ್ಟಿಕ್ ಪಕ್‌ಅನ್ನು ಬಳಸಿ ಆಡಲಾಗುತ್ತದೆ.

ಹರ್ಲಿಂಗ್ ಮತ್ತು ಕ್ಯಾಮೊಗೀಗಳು ಐರಿಷ್ ಆಟಗಳ ಕೆಲವು ತಡೆದುಕೊಳ್ಳುವ ಮತ್ತು ಗಮನಾರ್ಹವಾದ ವ್ಯತ್ಯಾಸಗಳನ್ನು ಹಾಕಿಯಿಂದ ಹೋಲಿಸಲಾಗುತ್ತದೆ.

ಒಳಾಂಗಣ ಫೀಲ್ಡ್ ಹಾಕಿಯು ಫೀಲ್ಡ್ ಹಾಕಿಯ ಒಂದು ಒಳಾಂಗಣ ಮಾರ್ಪಾಡಾಗಿದೆ.

ಮಿನಿ ಹಾಕಿಯು ಯುನೈಟೆಡ್ ರಾಜ್ಯಗಳಲ್ಲಿ ಆಡುವ ಒಂದು ಮಾದರಿಯಾಗಿದೆ (ಇದು "ಮಿನಿ-ಸ್ಟಿಕ್ಸ್" ಎಂದು ಕರೆಯಲಾಗಿದೆ) ಮನೆಗಳ ಕೆಳ ಮಹಡಿಗಳಲ್ಲಿ ಇದನ್ನು ಆಡಲಾಗುತ್ತದೆ. ಆಟಗಾರರು ತಮ್ಮ ಮಂಡಿಗಳ ಮೇಲೆ ಕೂತು ಒಂದು ಸಣ್ಣಳತೆಯುಳ್ಳ ಸಾಮಾನ್ಯವಾಗಿ 15 ಇಂಚಿನ (38 cm) ಉದ್ದವಿರುವ ಪ್ಲಾಸ್ಟಿಕ್ ಸ್ಟಿಕ್‌ಅನ್ನು ಸಣ್ಣದಾದ ಬಾಲ್ ಅಥವಾ ಮೆದು, ಫ್ಯಾಬ್ರಿಕ್ ಸುತ್ತಿರುವ ಸಣ್ಣ ಪಕ್‌ಅನ್ನು ಸಣ್ಣಳತೆಯೊಳಗಿನ ಗೋಲ್‌ಗೆ ಹಾಕಲು ಉಪಯೋಗಿಸಲಾಗುತ್ತದೆ. ಇಂಗ್ಲೆಂಡಿನಲ್ಲಿ 'ಮಿನಿ ಹಾಕಿ'ಯು ಫೀಲ್ಡ್ ಹಾಕಿ ಅವತರಣಿಕೆಯ ಏಳನೇ-ಒಂದುಭಾಗವಾಗಿದೆ,ಯುವ ಆಟಗಾರರಿಗೋಸ್ಕರ ಸಾಮಾನ್ಯವಾದ ಪಿಚ್ ನ ಅರ್ಧದ ಸಮಾನಗುಣದ ಸ್ಥಳದಲ್ಲಿ ಆಡಲಾಗುತ್ತದೆ.

ನಾಕ್ ಹಾಕಿಯು ಹಾಕಿ ಅವತರಣಿಕೆಯ ಒಂದು ಟೇಬಲ್-ಟಾಪ್‌ ನ ಭಾಗವಾಗಿದೆ ಇದರಲ್ಲಿ ಯಾವುದೇ ವಿರೋಧವಿಲ್ಲದೆ ಮತ್ತು ಗೋಲ್ ನ ಮುಂದಕ್ಕೆ ಒಂದು ಸಣ್ಣದಾದ ಪ್ರತಿಬಂಧಕವಿದ್ದು ಅಲ್ಲಿ ಆಡಲಾಗುತ್ತದೆ.

ಪವರ್ ಹಾಕಿ ಪ್ರತಿನಿತ್ಯ ಜೀವನದಲ್ಲಿ ಎಲೆಕ್ಟ್ರಿಕ್ ವೀಲ್‌ಚೇರ್ ಬಳಸುವ ಜನರಿಗಾಗೆ ಆಡಿಸಲಾಗುತ್ತದೆ ಇದು ಹಾಕಿಯ ಒಂದು ಮಾದರಿಯಾಗಿದೆ. ದೈಹಿಕ ಬಲಹೀನರಾದವರಿಗೆ ಪವರ್ ಹಾಕಿಯು ಒಂದು ಉತ್ತಮವಾದ ಅವಕಾಶಗಳ ಸ್ಪರ್ಧಾತ್ಮಕ ಕ್ರೀಡೆಯಾಗಿದೆ.

ರಿಂಗೆಟ್ಟಿಯು ಐಸ್ ಹಾಕಿಗೆ ಇದನ್ನು ಕೇವಲ ಮಹಿಳಾ ಆಟಗಾರರಿಗೆ ಮಾತ್ರ ವಿನ್ಯಾಸಗೊಳಿಸಲಾಗಿದೆ; ಇಲ್ಲಿ ನೇರವಾದ ಸ್ಟಿಕ್ ಗಳನ್ನು ಮತ್ತು ಪ್ಕ್ ನ ಬದಲಿಗೆ ಒಂದು ರಬ್ಬರಿನ ರಿಂಗನ್ನು ಬಳಸಲಾಗುತ್ತದೆ. ಸೂಚನೆ:ರಿಂಗೆಟ್ಟಿ ತನ್ನಂತಾನೆ ಹಾಕಿಯಿಂದ ಅಂತರದಲ್ಲಿದೆ ಹಾಗೇ ಇದು ತನ್ನದೇ ಸ್ವಂತ ನಿಯಮಗಳನ್ನು ಹೊಂದಿದೆ ಮತ್ತು ಇದು ತುಂಬಾ ಹತ್ತಿರವಾಗಿ ಲ್ಯಾಕ್ರೋಸ್ಸೆ ಮತ್ತು ಬಾಸ್ಕೆಟ್ ಬಾಲ್‌ ಆಟಗಳಿಗೆ ಸಂಬಂಧಿಸಿದೆ.

ರಿಂಕ್ ಬಾಲ್ವು ಸ್ಕಾಂಡಿನಾವಿಯನ್ ತಂಡಗಳ ಕ್ರೀಡೆಯಾಗಿದೆ, ಐಸ್ ಹಾಕಿ ಮೈದಾನದಲ್ಲಿ ಒಂದು ಬಾಲ್ ನೊಂದಿಗೆ ಆಡಲಾಗುತ್ತದೆ.

ರೋಸ್ಸಲ್ ಹಾಕಿಯುನ್ನು ಸಮುದ್ರ ತಟದ ಮೇಲೆ ರೋಸ್ಸಲ್ ಶಾಲೆಯಲ್ಲಿ ಚಳಿಗಾಲದಲ್ಲಿ ಆಡಲಾಗುತ್ತದೆ.

ಇದರ ನಿಯಮಗಳು ಫೀಲ್ಡ್ ಹಾಕಿ , ರಗ್ಬಿ ಮತ್ತು ಇಟಾನ್ ವಾಲ್ ಆಟಗಳೆ ಕೂಡಿದೆ.

ಶಿನ್ನಿಯು ಒಂದು ಅಸಂಪ್ರದಾಯಕವಾದ ಫೀಲ್ಡ್ ಹಾಕಿಯ ಅವತರಣಿಕೆಯಾಗಿದೆ.

ಶಿಂಟಿಯು ಸ್ಕಾಟಿಶ್ ಆಟವಾಗಿದೆ ಈಗ ಇದನ್ನು ಹೈಲ್ಯಾಂಡ್ಸ್ನಲ್ಲಿ ಆಡಲಾಗುತ್ತದೆ.

ಸ್ಕೇಟರ್ ಹಾಕಿಯು ಇನ್ ಲೈನ್ ಹಾಕಿಯ ಬದಲುರೂಪವಾಗಿದ್ದು ಬಾಲ್‌ನಿಂದ ಆಡಲಾಗುತ್ತದೆ.

ಸ್ಪಾಂಜೀಯು ಐಸ್ ಹಾಕಿ ಮತ್ತು ಬ್ರೂಮ್ ಬಾಲ್‌ನ ಮಿಶ್ರವಾಗಿದೆ ಮತ್ತು ಕೆನಡಾದ, ಮೊನಿಟಾಬದಲ್ಲಿ ತುಂಬಾ ಪ್ರಸಿದ್ದವಾಗಿದೆ. ಹಾಕಿಯಲ್ಲಿ ಬಳಸಿದಂತೆ ಒಂದು ಸ್ಟಿಕ್ ಮತ್ತು ಪಕ್ ಅನ್ನು ಬಳಸಲಾಗುತ್ತದೆ (ಪಕ್ ತುಂಬಾ ಮೆದುವಾಗಿರುತ್ತದೆ ಇದನ್ನು ಸ್ಪಾಂಜಿ ಪಕ್ ಎನ್ನುತ್ತಾರೆ). ಮತ್ತು ಬ್ರೂಮ್ ಬಾಲ್ ನಲ್ಲಿ ಬಳಸುವ ಮೆದು- ತಳದ ಬೂಟುಗಳನ್ನು ಬಳಸಲಾಗುತ್ತದೆ. ನಿಯಮಗಳು ಮೂಲತಃ ಐಸ್ ಹಾಕಿಯಲ್ಲಿರುವಂತೆ ಇರುತ್ತವೆ, ಆದರೆ ಒಂದು ವ್ಯತ್ಯಾಸವೆಂದರೆ ಒಬ್ಬ ಹೆಚ್ಚುವರಿ ಆಟಗಾರನಿರುತ್ತಾನೆ ಇವನನ್ನು ರೋವರ್ ಎಂದು ಕರೆಯಲಾಗುತ್ತದೆ.

ಟೇಬಲ್ ಹಾಕಿ ಯನ್ನು ಒಳಾಂಗಣದಲ್ಲಿ ಒಂದು ಟೇಬಲ್- ಟಾಪ್ ನೊಂದಿಗೆ ಆಡಲಾಗುತ್ತದೆ.

ಅಂಡರ್ ವಾಟರ್ ಹಾಕಿ ಈಜು ಕೊಳದ ಕೆಳಗೆ ಈ ಆಟವನ್ನು ಆಡಲಾಗುತ್ತದೆ.

17ನೇ ಏಷ್ಯನ್‌ ಕ್ರೀಡಾಕೂಟ 2014

  • ಭಾರತ ಪುರುಷರ ಹಾಕಿ ತಂಡದಲ್ಲಿ ಕರ್ನಾಟಕದ ವಿ.ಆರ್. ರಘುನಾಥ್, ಎಸ್.ವಿ. ಸುನಿಲ್ ಮತ್ತು ನಿಕಿನ್‌ ತಿಮ್ಮಯ್ಯ ಇದ್ದರು. ಈ ತಂಡ 17ನೇ ಏಷ್ಯನ್‌ ಕ್ರೀಡಾಕೂಟ 2014ದಲ್ಲಿ ಚಿನ್ನದ ಪದಕ ಗೆದ್ದಿತು.

ನೋಡಿ

ಆಕರಗಳು

ಹೊರಗಿನ ಕೊಂಡಿಗಳು

Tags:

ಹಾಕಿ ಮೈದಾನದ ಹಾಕಿ ಐಸ್ ಹಾಕಿ ರೋಲರ್ ಹಾಕಿ ಸ್ಲೆಡ್ಜ್ ಹಾಕಿ ಸ್ಟ್ರೀಟ್ ಹಾಕಿ ಯ ಬೇರೆ ಬೇರೆ ವಿಧಗಳುಹಾಕಿ 17ನೇ ಏಷ್ಯನ್‌ ಕ್ರೀಡಾಕೂಟ 2014ಹಾಕಿ ನೋಡಿಹಾಕಿ ಆಕರಗಳುಹಾಕಿ ಹೊರಗಿನ ಕೊಂಡಿಗಳುಹಾಕಿರಬ್ಬರು

🔥 Trending searches on Wiki ಕನ್ನಡ:

ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಾಂಗತ್ಯಭಾರತೀಯ ಜನತಾ ಪಕ್ಷಗಣೇಶಗೊರೂರು ರಾಮಸ್ವಾಮಿ ಅಯ್ಯಂಗಾರ್ಮಲೈ ಮಹದೇಶ್ವರ ಬೆಟ್ಟಗ್ರಂಥ ಸಂಪಾದನೆಕಾರ್ಲ್ ಮಾರ್ಕ್ಸ್ಕೃಷಿವಿಕಿಮೀಡಿಯ ಪ್ರತಿಷ್ಠಾನವಿಶ್ವ ಪರಂಪರೆಯ ತಾಣಭಾರತದ ರಾಷ್ಟ್ರಪತಿಗಳ ಪಟ್ಟಿಸೀಮಂತಸಂಯುಕ್ತ ಕರ್ನಾಟಕಭಾರತದ ರಾಷ್ಟ್ರೀಯ ಉದ್ಯಾನಗಳುಪ್ರಜಾವಾಣಿಮುಹಮ್ಮದ್ಭಾರತಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕೃಷ್ಣರಾಜಸಾಗರಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುತ್ಯಾಜ್ಯ ನಿರ್ವಹಣೆಊಳಿಗಮಾನ ಪದ್ಧತಿಜವಾಹರ‌ಲಾಲ್ ನೆಹರುರಾಮಗೋವಕರಿಘಟ್ಟಬಿ. ಎಂ. ಶ್ರೀಕಂಠಯ್ಯಮಳೆಕೆಂಪುಶಂಕರ್ ನಾಗ್ಭಾರತದ ಚುನಾವಣಾ ಆಯೋಗಹೊನ್ನಾವರಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಮಸೂದೆಅಮ್ಮಯಣ್ ಸಂಧಿರಾಮ ಮನೋಹರ ಲೋಹಿಯಾಎರಡನೇ ಮಹಾಯುದ್ಧಚಿಲ್ಲರೆ ವ್ಯಾಪಾರಬೆಳಗಾವಿಷಟ್ಪದಿಭ್ರಷ್ಟಾಚಾರರಕ್ತದ ಗುಂಪುಗಳುಕಬಡ್ಡಿಭಾರತದ ಸ್ವಾತಂತ್ರ್ಯ ದಿನಾಚರಣೆಐಹೊಳೆಅವ್ಯಯರಾಜಕೀಯ ಪಕ್ಷಯೋಗಕನಕದಾಸರುಕಾಳಿ ನದಿಕರ್ನಾಟಕದ ಇತಿಹಾಸಜೋಳಲಕ್ಷ್ಮೀಶಆಲಮಟ್ಟಿ ಆಣೆಕಟ್ಟುಕುರುಬಕನ್ನಡದಲ್ಲಿ ಪ್ರವಾಸ ಸಾಹಿತ್ಯಭಾರತದ ಉಪ ರಾಷ್ಟ್ರಪತಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಅಂಬಿಗರ ಚೌಡಯ್ಯಹಂಪೆನೈಸರ್ಗಿಕ ವಿಕೋಪಭಾರತೀಯ ಕಾವ್ಯ ಮೀಮಾಂಸೆಬೆಂಕಿಭರತನಾಟ್ಯಸೀತಾ ರಾಮಚಾಣಕ್ಯಕೆ. ಅಣ್ಣಾಮಲೈಪಂಚಾಂಗಹೊಯ್ಸಳೇಶ್ವರ ದೇವಸ್ಥಾನಮಂತ್ರಾಲಯಸಾನೆಟ್ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕುದುರೆಮುಖಕೃಷ್ಣ🡆 More