ಮಂಗಟ್ಟೆ

14, see text

ಮಂಗಟ್ಟೆ
ಮಂಗಟ್ಟೆ
ಮಲಬಾರ್ ಕಂದು ಮಂಗಟ್ಟೆ
Ocyceros griseus
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಬುಸೆರೊಟಿಫೊರ್ಮಿಸ್
ಕುಟುಂಬ:
ಬುಸೆರೊಟಿಡೆ

ರಾಫಿನೆಸ್ಕ್, 1815
Genera

ಮಂಗಟ್ಟೆಯು ಕಾರಸೈಯಿಫಾರ್ಮೀಸ್ ಗಣದ ಬುಸೆರೊಟಿಡೆ ಕುಟುಂಬಕ್ಕೆ ಸೇರಿದ ಉಷ್ಣವಲಯ, ಆಫ್ರಿಕಾ ಹಾಗೂ ಉಪ ಉಷ್ಣವಲಯ ಏಶಿಯಾದಲ್ಲಿ ಕಾಣಸಿಗುವ ಒಂದು ವನ್ಯಪಕ್ಷಿ. ಓಂಗಿಲೆ ಪರ್ಯಾಯ ನಾಮ. ಇವುಗಳ ಕೊಕ್ಕು ಉದ್ದವಾಗಿ ಕೆಳಬಾಗಿದ್ದು ಸಾಮಾನ್ಯವಾಗಿ ಉಜ್ವಲ ಬಣ್ಣ ಹೊಂದಿರುತ್ತದೆ. ಕೊಕ್ಕಿನ ಮೇಲ್ಭಾಗದಲ್ಲಿ ಸೀಸಕ ಇರುತ್ತದೆ.

ಭಾರತದ ಪ್ರಭೇದಗಳು ಮತ್ತು ವ್ಯಾಪ್ತಿ

ಈ ಕುಟುಂಬದಲ್ಲಿ ಸುಮಾರು 45 ಪ್ರಭೇದಗಳಿವೆ. ಭಾರತದಲ್ಲಿ ಟೋಕಸ್ ಬಿರಾಸ್ಟ್ರಿಸ್ (ಕಾಮನ್ ಗ್ರೇ ಹಾರ್ನ್‌ಬಿಲ್), ಟೋಕಸ್ ಗ್ರೈಸಿಯಾಸ್ (ಮಲಬಾರ್ ಗ್ರೇ ಹಾರ್ನ್‌ಬಿಲ್), ಆಂತ್ರಕೋಸಿರಸ್ ಕಾರೊನೇಟಸ್ (ಮಲಬಾರ್ ಪೈಡ್ ಹಾರ್ನ್‌ಬಿಲ್), ಆ. ಮಲಬಾರಿಕಸ್ (ಲಾರ್ಜ್ ಪೈಡ್ ಹಾರ್ನ್‌ಬಿಲ್) ಮತ್ತು ಬ್ಯೂಸರಸ್ ಬೈಕಾರ್ನಿಸ್ (ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್) ಎಂಬ ಐದು ಪ್ರಭೇದಗಳುಂಟು. ಇವುಗಳ ಪೈಕಿ ಮೊದಲನೆಯದು ಕೇರಳ, ಅಸ್ಸಾಮ್ ಮತ್ತು ರಾಜಸ್ಥಾನಗಳನ್ನುಳಿದು ಭಾರತಾದ್ಯಂತವೂ, ಎರಡನೆಯದು ಮಹಾರಾಷ್ಟ್ರದಲ್ಲೂ, ಮೂರನೆಯದು ಭಾರತಾದ್ಯಂತವೂ, ನಾಲ್ಕನೆಯದು ಕುಮಾಂವ್‌ನಿಂದ ಅಸ್ಸಾಮ್‌ವರೆಗಿನ ಪ್ರದೇಶಗಳಲ್ಲೂ, ಕೊನೆಯದು ಪಶ್ಚಿಮಘಟ್ಟ ಹಾಗೂ ಪೂರ್ವ ಹಿಮಾಲಯದ ತಪ್ಪಲು ಪ್ರದೇಶಗಳಲ್ಲೂ ಕಾಣದೊರೆಯುವುವು.

ಕಾಮನ್ ಗ್ರೇ ಹಾರ್ನ್‌ಬಿಲ್

ಮಂಗಟ್ಟೆ 

ದೇಹರಚನೆ

ಇದು ಸುಮಾರು 60 ಸೆಂಮೀ ಉದ್ದದ ಒಡ್ಡೊಡ್ಡಾದ ಹಕ್ಕಿ. ಮೈಬಣ್ಣ ಅನಾಕರ್ಷಕ; ಕಂದು ಮಿಶ್ರಿತ ಬೂದು. ಬಾಲವೇ ದೇಹದ 1/2 ಭಾಗದಷ್ಟಿದೆ. ರೆಕ್ಕೆಗಳು ಬಲಯುತವಾಗಿವೆ. ಗರಿಗಳು ಒರಟು, ಇವುಗಳ ರಚನೆ ಜಾಳುಜಾಳು, ಕೊಕ್ಕಿನ ಮೇಲ್ಭಾಗದಲ್ಲಿ ಅದಕ್ಕೆ ಅಂಟಿಕೊಡಿರುವ ಕೊಂಬಿನ ವಾಳ ಇರುವುದು ಈ ಹಕ್ಕಿಯ ಅತಿವಿಚಿತ್ರ ಲಕ್ಷಣ. ಇದರಿಂದ ಹಕ್ಕಿಗೆ ಯಾವುದೇ ತೆರನ ಉಪಯೋಗವಿಲ್ಲ.

ಆವಾಸಸ್ಥಾನ

ಇದು ವೃಕ್ಷವಾಸಿ ಹಕ್ಕಿ. ಹಳ್ಳಿಗಳ ಸುತ್ತಮುತ್ತ ಹಳೆಯ ಮರಗಳ ತೋಪುಗಳಲ್ಲಿ ವಾಸಿಸುತ್ತದೆ. ಆಲ, ಅರಳಿ ಮುಂತಾದ ಹಣ್ಣುಬಿಡುವ ಶ್ರಾಯದಲ್ಲಿ ಇದನ್ನು ಹೆಚ್ಚು ಸಂಖ್ಯೆಯಲ್ಲಿ ನೋಡಬಹುದು.

ಆಹಾರ

ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತದೆ. ಮಂಗಟ್ಟೆ ಕೀಟಗಳನ್ನೂ, ಓತಿ, ಇಲಿಗಳನ್ನೂ ತಿನ್ನುವುದಿದೆ.

ಸಂತಾನೋತ್ಪತ್ತಿ

ಇದು ಗೂಡು ಕಟ್ಟಿ ಮರಿ ಮಾಡುವ ಶ್ರಾಯ ಮಾರ್ಚ್-ಜೂನ್. ಆ ಸಮಯದಲ್ಲಿ ಹೆಣ್ಣು ಹಕ್ಕಿ ಯಾವುದಾದರೂ ವಯಸ್ಸಾದ ಮರದ ಪೊಟರೆಯನ್ನು ಆಯ್ದುಕೊಂಡು ಅದರೊಳಗೆ ಕೂತು ಕಿರಿಯಗಲದ ಕಿಂಡಿಯೊಂದನ್ನು ಬಿಟ್ಟು ಪೊಟರೆಯ ಸುತ್ತ ಮಣ್ಣು, ಕಸಕಡ್ಡಿ, ತನ್ನ ಹಿಕ್ಕೆ ಮುಂತಾದ ಸಾಮಗ್ರಿಗಳಿಂದ ಗೋಡೆ ರಚಿಸಿ ಬಂಧಿಸಿಕೊಳ್ಳುತ್ತದೆ. ಕಿಂಡಿಯ ಮೂಲಕ ತನ್ನ ಕೊಕ್ಕನ್ನು ಮಾತ್ರ ಹೊರಚಾಚಬಲ್ಲದು. ತರುವಾಯ 2-3 ಮಾಸಲು ಬಿಳಿಯ ಬಣ್ಣದ ಮೊಟ್ಟೆಗಳನ್ನಿಟ್ಟು ಕಾವಿಗೆ ಕೂತುಕೊಳ್ಳುತ್ತದೆ. ಮೊಟ್ಟೆಯೊಡೆದು ಮರಿಗಳು ಹೊರಬಂದು ಕೊಂಚ ದೊಡ್ಡವಾಗುವ ತನಕವೂ (6-8 ವಾರಕಾಲ) ಹೆಣ್ಣು ಹೀಗೆ ಸೆರೆವಾಸದಲ್ಲೇ ಇರುತ್ತದೆ. ಈ ಸಮಯದಲ್ಲಿ ಹೆಣ್ಣಿಗೆ ಆಹಾರ ಒದಗಿಸುವ ಕೆಲಸವನ್ನು ಗಂಡು ಸಮರ್ಪಕವಾಗಿ ನಿರ್ವಹಿಸುತ್ತದೆ. ಮರಿಗಳು ಅರ್ಧ ಬೆಳೆದ ಮೇಲೆ ಹೆಣ್ಣು ಗೂಡಿನ ಗೋಡೆಯನ್ನು ಒಡೆದು ಹೊರ ಬಂದು ಮರಿಗಳಿಗೆ ಉಣಿಸುತರುವ ಕಾರ್ಯದಲ್ಲಿ ಗಂಡಿನೊಡನೆ ಪಾಲುಗೊಳ್ಳುತ್ತದೆ. ಮರಿಗಳು ಪೂರ್ಣ ಬೆಳೆದು ತಮ್ಮನ್ನು ತಾವು ನೋಡಿಕೊಳ್ಳಲು ಸಮರ್ಥವಾದಾಗ ಗೂಡಿನಿಂದ ಹೊರಬೀಳುವುವು.

ಸಾಮಾಜಿಕ ನಡವಳಿಕೆ

ಮರದಿಂದ ಮರಕ್ಕೆ ಬಿಟ್ಟು ಬಿಟ್ಟು ರೆಕ್ಕೆ ಬಡಿಯುತ್ತ ಶ್ರಮಪಟ್ಟಂತೆ ಬಳುಕುಗತಿಯಲ್ಲಿ ಹಾರುತ್ತದೆ. ಹಾರುವಾಗ ಎಲ್ಲ ಮಂಗಟ್ಟೆಗಳೂ ಒಟ್ಟಿಗೆ ಹೋಗದೆ, ಒಂದಾದ ಮೇಲೆ ಒಂದರಂತೆ ಸಾಗುವುವು.

ಇದನ್ನೂ ಓದಿ

ಉಲ್ಲೇಖಗಳು

  • Kemp, Alan C. & Woodcock, Martin (1995): The Hornbills: Bucerotiformes. Oxford University Press, Oxford, New York. ISBN 0-19-857729-X
  • Maclean, Gordon Lindsay & Roberts, Austin (1988): Roberts' Birds of Southern Africa (Revised Edition). Hyperion Books. ISBN 1-85368-037-0
  • Wallace, Alfred Russel (1863): "The Bucerotidæ, or Hornbills". The Intellectual Observer June 1863: 309–316.
  • Zimmerman, Dale A., Turner, Donald A., & Pearson, David J. (1999): Birds of Kenya and Northern Tanzania (Field Guide Edition). Princeton University Press. ISBN 0-691-01022-6
ಮಂಗಟ್ಟೆ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಮಂಗಟ್ಟೆ ಭಾರತದ ಪ್ರಭೇದಗಳು ಮತ್ತು ವ್ಯಾಪ್ತಿಮಂಗಟ್ಟೆ ಕಾಮನ್ ಗ್ರೇ ಹಾರ್ನ್‌ಬಿಲ್ಮಂಗಟ್ಟೆ ಇದನ್ನೂ ಓದಿಮಂಗಟ್ಟೆ ಉಲ್ಲೇಖಗಳುಮಂಗಟ್ಟೆ

🔥 Trending searches on Wiki ಕನ್ನಡ:

ದೇವಸ್ಥಾನಜೈನ ಧರ್ಮವೀರೇಂದ್ರ ಪಾಟೀಲ್ಕಮಲವಿಮರ್ಶೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸಾವಯವ ಬೇಸಾಯಶ್ರೀಕೃಷ್ಣದೇವರಾಯಪ್ರಪಂಚದ ದೊಡ್ಡ ನದಿಗಳುಪ್ರಬಂಧಮಾನ್ವಿತಾ ಕಾಮತ್ಭಗತ್ ಸಿಂಗ್ವೇದವ್ಯಾಸರತ್ನತ್ರಯರುಹಳೆಗನ್ನಡಗೀತಾ (ನಟಿ)ಮದುವೆಬಾಹುಬಲಿಶಬ್ದಮಣಿದರ್ಪಣಸೂರ್ಯವ್ಯೂಹದ ಗ್ರಹಗಳುರಾಷ್ತ್ರೀಯ ಐಕ್ಯತೆಸ್ವಚ್ಛ ಭಾರತ ಅಭಿಯಾನಬಿ.ಎಫ್. ಸ್ಕಿನ್ನರ್ನವಿಲುಮೈಗ್ರೇನ್‌ (ಅರೆತಲೆ ನೋವು)ಹೊಯ್ಸಳ ವಾಸ್ತುಶಿಲ್ಪವಚನಕಾರರ ಅಂಕಿತ ನಾಮಗಳುಸಮಾಸಕನ್ನಡ ಛಂದಸ್ಸುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕುವೆಂಪುಕಂದವಿಕಿಪೀಡಿಯಜಾಗತಿಕ ತಾಪಮಾನಜಲ ಮಾಲಿನ್ಯಭಾರತದ ರೂಪಾಯಿಕನ್ನಡ ಕಾವ್ಯವಿಜಯದಾಸರುಸರಸ್ವತಿಅರವಿಂದ ಘೋಷ್ಗೌತಮ ಬುದ್ಧಬ್ರಹ್ಮಗುರುರಾಜ ಕರಜಗಿಭಾರತದ ರಾಷ್ಟ್ರೀಯ ಉದ್ಯಾನಗಳುವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಸಂಯುಕ್ತ ಕರ್ನಾಟಕಪಾರ್ವತಿಕೆ. ಅಣ್ಣಾಮಲೈಪಾಕಿಸ್ತಾನಅಳಿಲುತೆಲುಗುಸವದತ್ತಿಭಾರತದ ಸ್ವಾತಂತ್ರ್ಯ ಚಳುವಳಿಗಾದೆ ಮಾತುಅಧಿಕ ವರ್ಷಬಿ. ಆರ್. ಅಂಬೇಡ್ಕರ್ದರ್ಶನ್ ತೂಗುದೀಪ್ಅಳತೆ, ತೂಕ, ಎಣಿಕೆಭಾಷಾ ವಿಜ್ಞಾನಉತ್ತರ ಪ್ರದೇಶಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಆಂಧ್ರ ಪ್ರದೇಶಅಶೋಕನ ಶಾಸನಗಳುಮಿಲಾನ್ಬಂಗಾರದ ಮನುಷ್ಯ (ಚಲನಚಿತ್ರ)ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಮಾರ್ಕ್ಸ್‌ವಾದಸಂವಹನಸಿದ್ದರಾಮಯ್ಯಕವಿಗಳ ಕಾವ್ಯನಾಮಸಾಮ್ರಾಟ್ ಅಶೋಕಹವಾಮಾನಶಿಶುಪಾಲಕರ್ನಾಟಕದ ಜಾನಪದ ಕಲೆಗಳುವಿಷ್ಣುವರ್ಧನ್ (ನಟ)ಸುಬ್ರಹ್ಮಣ್ಯ ಧಾರೇಶ್ವರಶ್ರೀನಿವಾಸ ರಾಮಾನುಜನ್ಮಾಸ🡆 More