ಬೆಳವಡಿ ಮಲ್ಲಮ್ಮ

ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆ.

ಬೆಳವಡಿ ಮಲ್ಲಮ್ಮ
Bornಆಗಸ್ಟ್ 18,
Known forbrave queen ( warrior)
ಬೆಳವಡಿ ಮಲ್ಲಮ್ಮ
ಬೆಳವಡಿ ಪ್ರಾಂತ್ಯದ ಭೂಪಟ

ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಮಲ್ಲಮ್ಮ.

ಜೀವನಚರಿತ್ರೆ ಬೆಳವಡಿ ಮಲ್ಲಮ್ಮನ ಬಾಲ್ಯ ಮತ್ತು ಜಿವನ ಚರಿತ್ರೆ

ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿ ನಡುವೆ ನಡೆದ ಯುದ್ಧದ ಐತಿಹಾಸಿಕ ದಾಖಲೆಗಳ ಪಟ್ಟಿ.

೧. ಬೆಳವಡಿ ಸಂಸ್ಥಾನದ ಪಾರಂಪರಿಕ ತಾಣವಾದ ಬೃಹನ್ಮಠದ ಶಿವ ಬಸವ ಶಾಸ್ತ್ರಿಯವರು ಬರೆದ ತರಾತುರಿ ಪಂಚಮರ ಇತಿಹಾಸ ಪುಸ್ತಕದಲ್ಲಿ ಬೆಳವಡಿ ಸಂಸ್ಥಾನದ ಇತಿಹಾಸವು 1511ರಿಂದ ರಾಜ ಚಂದ್ರಶೇಖರ ರಾಜನೊಂದಿಗೆ ಪ್ರಾರಂಭವಾಗುತ್ತದೆ. ಈ ಪುಸ್ತಕದಲ್ಲಿ ಮರಾಠಿ ರಾಜ ಶಿವಾಜಿ ಮತ್ತು ಬೆಳವಡಿ ಮಲ್ಲಮ್ಮನವರ ನಡುವೆ ನಡೆದ ಯುದ್ಧ ದಾಖಲಾಗಿದೆ. ಇಶಪ್ರಭು ಯುದ್ಧಭೂಮಿಯಲ್ಲಿ ನಿಧನರಾದ ನಂತರ ಮಲ್ಲಮ್ಮ ಛತ್ರಪತಿ ಶಿವಾಜಿ ಮಹಾರಾಜರಣ ಸೋಲಿಸಿದಳು. ಈ ಯುದ್ಧದ ನೆನಪಿಗಾಗಿ ವೀರಗಲ್ಲುಗಳನ್ನು ಬೆಳವಡಿಯ ಸಂಸ್ಥಾನದಲ್ಲಿ ಮಲ್ಲಮ್ಮನ ಹೆಸರಲ್ಲಿ ಕಟ್ಟಿಸಲಾಯಿತು. ತರಾತುರಿ ಪಂಚಮರ ಇತಿಹಾಸ ಪುಸ್ತಕ 1929 ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು.

೨. ಮಲ್ಲಮ್ಮನ ಗುರುಗಳಾಗಿದ್ದ ಶಂಕರ ಭಟ್ಟರು ಬರೆದ ಸಂಸ್ಕೃತ ಪುಸ್ತಕ ಶಿವವಂಶ ಸುಧರ್ನವದಲ್ಲಿ ಶಿವಾಜಿಯನ್ನು ಬೆಳವಡಿ ಮಲ್ಲಮ್ಮ ಸೋಲಿಸಿದರು ಎಂದು ದಾಖಲಾಗಿದೆ. ಶಿವಾಜಿಯ ಎರಡನೇ ಸೊಸೆಯಾಗಿದ್ದ ತಾರಾಬಾಯ್ ಅವರು ಈ ಪುಸ್ತಕಕ್ಕೆ ಪ್ರಥಮ ಬಹುಮಾನ ನೀಡಿದ್ದರು ಮತ್ತು ಈ ಪುಸ್ತಕದಲ್ಲಿ ಶಿವಾಜಿ ಮತ್ತು ಮಲ್ಲಮ್ಮರ ನಿಖರವಾದ ವಿಷಯವಿದೆ ಎಂದು ಹೇಳಿದ್ದಾರೆ.

೩. ಜಾದುನಾಥ್ ಸರ್ಕಾರ್ ಶಿವಾಜಿಯ ಜೀವನಚರಿತ್ರೆಯನ್ನು ಮರಾಠಿ ಭಾಷೆಯಲ್ಲಿ ಬರೆದಿದ್ದು ಈ ಪುಸ್ತಕದಲ್ಲಿ ಮಲ್ಲಮ್ಮಳನ್ನು 'ಸಾವಿತ್ರಿ ಬಾಯಿ' ಎಂದು ಕರೆದಿದ್ದಾರೆ. ಮಲ್ಲಮ್ಮ ಮತ್ತು ಶಿವಾಜಿಯ ನಡುವಿನ ಯುದ್ದ 27 ದಿನಗಳ ಕಾಲ ನಡೆದಿತ್ತು ಎಂದು ಬರೆದಿದ್ದಾರೆ.

೪. ಸಮಕಾಲೀನ ಬ್ರಿಟಿಷ್ ಕೃತಿಯೊಂದರ ಪ್ರಕಾರ ಈ ಯುದ್ಧದ ಸಮಯದಲ್ಲಿ ಶಿವಾಜಿ ತಾನೇ ಮುಂದೆ ನಿಂತು ಮಲ್ಲಮ್ಮನ ಕೋಟೆಯನ್ನು ಮುತ್ತಿಗೆ ಹಾಕಲು ಯತ್ನಿಸಿದ. ಈ ಪ್ರಯತ್ನದಲ್ಲಿ ದಖ್ಖನಿನ(ಬಿಜಾಪುರದ) ಎಲ್ಲಾ ಮೊಘಲ್ ಅರಸರಿಂದ ಅನುಭವಿಸಿದಕ್ಕಿಂತ ಹೆಚ್ಚು ಮುಖಭಂಗವನ್ನು ಮಲ್ಲಮ್ಮನಿಂದ ಅನುಭವಿಸಿದ ಎಂದು ತಿಳಿದುಬರುತ್ತದೆ. "ಎಷ್ಟೋ ರಾಜ್ಯಗಳನ್ನು ಗೆದ್ದ ಶಿವಾಜಿಗೆ ಬೆಳವಡಿಯ ದೇಸಾಯಿ ವಂಶದ ಹೆಣ್ಣು ಮಲ್ಲಮ್ಮನನ್ನು ಸೋಲಿಸಲು ಸಾಧ್ಯವಾಗಲಿಲ್ಲ".

೫. ಮರಾಠಿ ಇತಿಹಾಸಕಾರರಲ್ಲಿ ಅನೇಕ ಗೊಂದಲಗಳು ಇರುವ ಬಗ್ಗೆ ಪುಣೆ ವಿಶ್ವವಿದ್ಯಾಲಯದವರು ಸಾಬೀತು ಮಾಡಿದ್ದಾರೆ. ಅವಳು ಶತ್ರು ಪಡೆಗಳ ಜತೆ ಕುದುರೆ ಮೇಲೆ ಸೀರೆಯಲ್ಲಿ ವೀರಗಚ್ಚೆ ಹಾಕಿ ಹೋರಾಡಿದಳು. ೬. ಬೆಳವಡಿಯ ಮಲ್ಲಮ್ಮನ ಆಯುಧಗಳು : ಬಿಲ್ಲು ಬಾಣ, ಕಾವಲಿ ಇವರ ಸೈನ್ಯದ ಆಯುಧಗಳಾಗಿದ್ದವು

ವಿದ್ವಾಂಸರಾದ ಶೇಷೊ ಶ್ರೀನಿವಾಸ್ ಮುತಾಲಿಕ್ ಅವರು ಕ್ರಿ. ಶ. ೧೭೦೪-೦೫ ರಲ್ಲಿ ಮಧುಲಿಂಗ ನಾಯಕರ ಅರಮನೆ ಜೀವನವನ್ನು ಮರಾಠಿ ಭಾಷೆಯಲ್ಲಿ ದಾಖಲಿಸಿದ್ದಾರೆ.[ಸಾಕ್ಷ್ಯಾಧಾರ ಬೇಕಾಗಿದೆ]

ಉಲ್ಲೇಖಗಳು ಕನ್ನಡ

Tags:

🔥 Trending searches on Wiki ಕನ್ನಡ:

ವಿತ್ತೀಯ ನೀತಿನೈಸರ್ಗಿಕ ಸಂಪನ್ಮೂಲಸಕಲೇಶಪುರಸಿದ್ದಲಿಂಗಯ್ಯ (ಕವಿ)ಭಾರತೀಯ ಶಾಸ್ತ್ರೀಯ ನೃತ್ಯಅಕ್ಕಮಹಾದೇವಿಕರ್ನಾಟಕದ ಮುಖ್ಯಮಂತ್ರಿಗಳುಚಂದ್ರಯಾನ-೩ಕನ್ನಡ ಪತ್ರಿಕೆಗಳುವಿನಾಯಕ ದಾಮೋದರ ಸಾವರ್ಕರ್ಬೀಚಿಮೈಗ್ರೇನ್‌ (ಅರೆತಲೆ ನೋವು)ಧೂಮಕೇತುಬೃಂದಾವನ (ಕನ್ನಡ ಧಾರಾವಾಹಿ)ಭಾರತದ ಪ್ರಧಾನ ಮಂತ್ರಿಹಬಲ್ ದೂರದರ್ಶಕಐಹೊಳೆಕೋಲಾರಅಂತಿಮ ಸಂಸ್ಕಾರಜಾನ್ ನೇಪಿಯರ್ಸಂಯುಕ್ತ ರಾಷ್ಟ್ರ ಸಂಸ್ಥೆಮೆಂತೆಆಧುನಿಕ ವಿಜ್ಞಾನಬರವಣಿಗೆಚನ್ನವೀರ ಕಣವಿಚೈತ್ರ ಮಾಸವಿಜಯನಗರಭಾರತೀಯ ನೌಕಾಪಡೆಕಥೆರಾಷ್ಟ್ರೀಯ ಶಿಕ್ಷಣ ನೀತಿಕರ್ನಾಟಕಬರಗೂರು ರಾಮಚಂದ್ರಪ್ಪಕೈಗಾರಿಕೆಗಳುಶಿಶುನಾಳ ಶರೀಫರುರೂಢಿಉಡಕಾಂತಾರ (ಚಲನಚಿತ್ರ)ಆರ್ಚ್ ಲಿನಕ್ಸ್ದಯಾನಂದ ಸರಸ್ವತಿಭಾರತದ ಮಾನವ ಹಕ್ಕುಗಳುರಾಜ್ಯಹೆಚ್.ಡಿ.ಕುಮಾರಸ್ವಾಮಿಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುದಿ ಪೆಂಟಗನ್ರವೀಂದ್ರನಾಥ ಠಾಗೋರ್ತೆಂಗಿನಕಾಯಿ ಮರಹೊನಗೊನ್ನೆ ಸೊಪ್ಪುಪರಿಸರ ವ್ಯವಸ್ಥೆರಾಜಸ್ಥಾನ್ ರಾಯಲ್ಸ್ರೋಗಕೃಷ್ಣರಾಜಸಾಗರಲೋಕಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುನಯಾಗರ ಜಲಪಾತಪ್ರಜಾಪ್ರಭುತ್ವದ ವಿಧಗಳುಎ.ಪಿ.ಜೆ.ಅಬ್ದುಲ್ ಕಲಾಂಮಾನವನ ನರವ್ಯೂಹಕಿಸ್ (ಚಲನಚಿತ್ರ)ಹಿಂದೂ ಧರ್ಮಮುದ್ದಣಭೂಮಿಚೋಮನ ದುಡಿಮೂಲಧಾತುಆಸ್ಪತ್ರೆಸತಿಯಣ್ ಸಂಧಿಕೆ. ಅಣ್ಣಾಮಲೈಹದ್ದುಶಂಕರ್ ನಾಗ್ಕಾನೂನುಭಂಗ ಚಳವಳಿನವೋದಯಆರ್ಯಭಟ (ಗಣಿತಜ್ಞ)ಹನುಮಂತಟಿಪ್ಪು ಸುಲ್ತಾನ್ಶ್ಯೆಕ್ಷಣಿಕ ತಂತ್ರಜ್ಞಾನ🡆 More