ಬಿಲಾವಲ್

ಬಿಲಾವಲ್ ಒಂದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ರಾಗ ಮತ್ತು ಥಾಟ್.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಪರಿಕಲ್ಪನೆಗಳು
ಶೃತಿ · ಸ್ವರ · ಅಲಂಕಾರ · ರಾಗ
ತಾಳ · ಘರಾನಾ · ಥಾಟ್
ಸಂಗೀತೋಪಕರಣಗಳು
ಭಾರತೀಯ ಸಂಗೀತೋಪಕರಣಗಳು
ಶೈಲಿಗಳು
ದ್ರುಪದ್ · ಧಮಾರ್ · ಖಯಾಲ್ · ತರಾನ
ಠುಮ್ರಿ · ದಾದ್ರ · ಖವ್ವಾಲಿ · ಘಝಲ್
ವಿದಾನಗಳು (ಥಾಟ್‌ಗಳು)
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ

ಇದು ಪಾಶ್ಚಿಮಾತ್ಯ ಸಂಗೀತದ ಐಯೋನಿಯನ್  ಮೋಡ್ (major scale)ಗೆ ಸಮಾನವಾಗಿದೆ ಮತ್ತು ಎಸ್ ಆರ್ ಜಿ ಎಂ ಪಿ ಡಿ ಎನ್ ಎಸ್' ಸ್ವರಗಳನ್ನು ಹೊಂದಿದೆ. ಬಿಲಾವಲ್ ಥಾಟ್‍ನ ಎಲ್ಲಾ ಸ್ವರಗಳೂ ಶುದ್ಧ ಅಥವಾ ಪ್ರಕೃತಿಕ.ಬಿಲಾವಲ್ ಥಾಟ್‍ನಲ್ಲಿ ಕೋಮಲ ಅಥವಾ ತೀವ್ರ ಸ್ವರಗಳು ಯಾವಾಗಲೂ ಅಂತರಿಕ ಮಾದರಿಗೆ ಅನುಗುಣವಾಗಿರುತ್ತದೆ.

ಪ್ರಾಚೀನತೆ

ಇದು  ಸಿಖ್ ಸಂಪ್ರದಾಯದ  ಪವಿತ್ರ ಗ್ರಂಥ, ಶ್ರೀ ಗುರು ಗ್ರಂಥ ಸಾಹಿಬ್ನಲ್ಲಿ ಉಲ್ಲೇಖಿವಾದ ಒಂದು ರಾಗವಾಗಿದೆ.ಪ್ರತಿ ರಾಗಗಳೂ  ಒಂದು ಕಟ್ಟುನಿಟ್ಟಾದ  ನಿಯಮಗಳಿಗೆ ಒಳಪಟ್ಟಿರುತ್ತವೆ. ಇದರಲ್ಲಿ ಯಾವ ಸ್ವರಗಳನ್ನು ಬಳಸಬಹುದು ಅಥವಾ ಬಳಸಬಾರದು, ಅವುಗಳ ನಡುವೆ ಇರಬೇಕಾದ ಅಂತರಗಳು ಇವುಗಳನ್ನು ಗಮನದಲ್ಲಿರಿಸಿಕೊಂಡು ಅಯಾ ರಾಗಗಳಲ್ಲಿ ಸಂಯೋಜನೆಗಳನ್ನು ಮಾಡಬಹುದು.

ಶ್ರೀ ಗುರು ಗ್ರಂಥ ಸಾಹಿಬ್‍ನಲ್ಲಿ ಒಟ್ಟು 31 ರಾಗಗಳಿವೆ.ಅದರಲ್ಲಿ ಬಿಲಾವಲ್ ಹದಿನಾರನೆಯ ರಾಗವಾಗಿ ಕಾಣಿಸಿಕೊಂಡಿದೆ. ಈ ರಾಗದ ರಚನೆಗಳು ಒಟ್ಟು ೬೪ ಪುಟಗಳಲ್ಲಿದ್ದು ಅದು ೭೯೫ ರಿಂದ ೮೫೯ರವರೆಗಿನ ಪುಟಸಂಖ್ಯೆಗಳಲ್ಲಿವೆ.ಸುಮಾರು ೧೭೦ ಮಂತ್ರಗಳಿದ್ದು ಇದನು ಗುರು ನಾನಕ್,  ಗುರು ಅಮರ ದಾಸ, ಗುರು ರಾಮ ದಾಸ, ಗುರು ಅರ್ಜುನ ಮತ್ತು ಗುರು ತೇಜ್ ಬಹಾದೂರ್ ರಚಿಸಿದ್ದಾರೆ.

ಹಿಂದೂಸ್ಥಾನಿ ಪದ್ಧತಿಯಲ್ಲಿ

ಬಿಲಾವಲ್ ಉತ್ತರ ಭಾರತದ ಹಿಂದೂಸ್ಥಾನಿ ಸಂಗೀತ ಪದ್ಧತಿಯಲ್ಲಿ ೧೯ನೆಯ ಶತಮಾನದಿಂದ ಮೂಲ ರಾಗವಾಗಿ ಬಳಕೆಯಲ್ಲಿದೆ.ಬಿಲಾವಲ್ ರಾಗಮಾಲಾದಲ್ಲಿ ಭೈರವಿ  ರಾಗದ ರಾಗಿಣಿಯಾಗಿ ಉಲ್ಲೇಖಿತವಾಗಿದೆಯಾದರೂ ಇಂದು ಇದು ಒಂದು ಸ್ವತಂತ್ರ ಥಾಟ್ ಆಗಿ ಪರಿಗಣಿಸಲ್ಪಟ್ಟಿದೆ.

ರಾಗಮಾಲಾ ದಲ್ಲಿ ಬಿಲಾವಲ್‍ನ್ನು ಭೈರವನ ಪುತ್ರ ಎಂದು ಪರಿಗಣಿಸಲಾಗಿದೆಯಾದರೂ ಇಂದು ಈ ಎರಡು ರಾಗಗಳಲ್ಲಿ ಯಾವುದೇ ಸಂಬಂಧ  ಕಂಡು ಬರುವುದಿಲ್ಲ.ಬಿಲಾವಲ್‍ನ್ನು ಬೇಸಗೆ ಕಾಲದಲ್ಲಿ ಹಾಡಲಾಗುತ್ತದೆ.ಇದರ ಭಾವ ಉತ್ಕಟ ಭಕ್ತಿ ಮತ್ತು ಶಾಂತ ಸ್ಥಿತಿ. ಇದು ಬೆಳಗಿನ ರಾಗವಾಗಿದೆ.

ಆರೋಹ ಮತ್ತು ಅವರೋಹ

ಅರೋಹ ಸ ರಿ ಗ ಮ ಪ ಧ ನಿ ಸ

ಅವರೋಹ

ಸ ನಿ ಧ, ಪ, ಸ ಗ,ರಿ ಸ

ವಾದಿ ಮತ್ತು ಸಂವಾದಿ

ವಾದಿ:ಧ

ಸಂವಾದಿ:ಗ

ಪಕಡ್ ಅಥವಾ ಚಲನೆ

ಗ ರಿ, ಗ ಮ ಧ ಪ, ಮಾ ಗ,ಮ ರಿ ಸ

ಬಿಲಾವಲ್ ಥಾಟ್‍ನ ರಾಗಗಳು

  1. ಅಲ್‍ಹಯ ಬಿಲಾವಲ್
  2. ದೇಶ್ಕರ್
  3. ಹಂಸಧ್ವನಿ
  4. ದುರ್ಗಾ
  5. ಶಂಕರ
  6. ಕುಕುಭ್ ಬಿಲಾವಲ್
  7. ಸುಖಿಯಾ
  8. ಶುಕ್ಲಾ ಬಿಲಾವಲ್
  9. ದೇವಗಿರಿ ಬಿಲಾವಲ್
  10. ಪಹಾಡಿ
  11. ಮಾಂಡ್
  12. ಭೂಪಾಲಿ

ಸಮಯ (ಸಮಯ)

ಬೆಳಿಗ್ಗಿನ ಮೊದಲ ಪ್ರಹರ.

ರಸ

Bor, Joep (ed). Rao, Suvarnalata; der Meer, Wim van; Harvey, Jane (co-authors) The Raga Guide: A Survey of 74 Hindustani Ragas. Zenith Media, London: 1999.

ಬಾಹ್ಯ ಕೊಂಡಿಗಳು

Tags:

ಬಿಲಾವಲ್ ಪ್ರಾಚೀನತೆಬಿಲಾವಲ್ ಹಿಂದೂಸ್ಥಾನಿ ಪದ್ಧತಿಯಲ್ಲಿಬಿಲಾವಲ್ ಆರೋಹ ಮತ್ತು ಅವರೋಹಬಿಲಾವಲ್ ವಾದಿ ಮತ್ತು ಸಂವಾದಿಬಿಲಾವಲ್ ಪಕಡ್ ಅಥವಾ ಚಲನೆಬಿಲಾವಲ್  ಥಾಟ್‍ನ ರಾಗಗಳುಬಿಲಾವಲ್ ಬಾಹ್ಯ ಕೊಂಡಿಗಳುಬಿಲಾವಲ್ಥಾಟ್ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

🔥 Trending searches on Wiki ಕನ್ನಡ:

ಕರ್ನಾಟಕದ ಏಕೀಕರಣಹನುಮಾನ್ ಚಾಲೀಸಪಿತ್ತಕೋಶಎಲೆಕ್ಟ್ರಾನಿಕ್ ಮತದಾನಬಸವ ಜಯಂತಿತಾಳೆಮರಫುಟ್ ಬಾಲ್ಭಾರತದ ಮಾನವ ಹಕ್ಕುಗಳುಚದುರಂಗದ ನಿಯಮಗಳುಅಸಹಕಾರ ಚಳುವಳಿನವರಾತ್ರಿಸಣ್ಣ ಕೊಕ್ಕರೆಕರ್ನಾಟಕದ ತಾಲೂಕುಗಳುಸಹಕಾರಿ ಸಂಘಗಳುಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಅಷ್ಟಾಂಗ ಮಾರ್ಗಬುಡಕಟ್ಟುತಾಳೀಕೋಟೆಯ ಯುದ್ಧಕರ್ನಾಟಕ ಜನಪದ ನೃತ್ಯಕುಕ್ಕೆ ಸುಬ್ರಹ್ಮಣ್ಯ ದೇವಾಲಯಮಂಡಲ ಹಾವುಪರಿಸರ ರಕ್ಷಣೆಭಾರತದ ಇತಿಹಾಸಮಡಿಕೇರಿಅಲಂಕಾರಗುರು (ಗ್ರಹ)ಭಾರತೀಯ ಆಡಳಿತಾತ್ಮಕ ಸೇವೆಗಳುಪರಮಾತ್ಮ(ಚಲನಚಿತ್ರ)ತತ್ಪುರುಷ ಸಮಾಸಆಯ್ದಕ್ಕಿ ಲಕ್ಕಮ್ಮವೆಂಕಟೇಶ್ವರಮಲಬದ್ಧತೆಗೊರೂರು ರಾಮಸ್ವಾಮಿ ಅಯ್ಯಂಗಾರ್ಶ್ರೀ ಕೃಷ್ಣ ಪಾರಿಜಾತಅವತಾರಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿದಾವಣಗೆರೆಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಸವರ್ಣದೀರ್ಘ ಸಂಧಿನೈಸರ್ಗಿಕ ಸಂಪನ್ಮೂಲದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಬಾಗಿಲುಮೂಕಜ್ಜಿಯ ಕನಸುಗಳು (ಕಾದಂಬರಿ)ನಾಥೂರಾಮ್ ಗೋಡ್ಸೆಕೊಡಗು ಜಿಲ್ಲೆಒಂದನೆಯ ಮಹಾಯುದ್ಧಟಿಪ್ಪು ಸುಲ್ತಾನ್ತಂತಿವಾದ್ಯಗಣೇಶ ಚತುರ್ಥಿರೋಸ್‌ಮರಿಮಲೇರಿಯಾಅಯೋಧ್ಯೆವ್ಯಂಜನನಿಯತಕಾಲಿಕದಿಯಾ (ಚಲನಚಿತ್ರ)ಚಿನ್ನಚಾಮುಂಡೇಶ್ವರಿ ದೇವಸ್ಥಾನ, ಮೈಸೂರುನಿರಂಜನಕರಗಪ್ರವಾಸ ಸಾಹಿತ್ಯಹಂಪೆಪ್ರಾರ್ಥನಾ ಸಮಾಜಚಕ್ರವ್ಯೂಹಜಾತ್ರೆದಿವ್ಯಾಂಕಾ ತ್ರಿಪಾಠಿರಚಿತಾ ರಾಮ್ಗೌತಮ ಬುದ್ಧಕನ್ನಡ ವ್ಯಾಕರಣಯಣ್ ಸಂಧಿನಾಡ ಗೀತೆಸಂಗೊಳ್ಳಿ ರಾಯಣ್ಣರಕ್ತದೊತ್ತಡದಿಕ್ಕುಕರ್ನಾಟಕಭಾರತದಲ್ಲಿನ ಶಿಕ್ಷಣಚೆನ್ನಕೇಶವ ದೇವಾಲಯ, ಬೇಲೂರುಕುರಿ🡆 More