ದಮನ್ ಮತ್ತು ದಿಯು: ಕೇಂದ್ರಾಢಳಿತ ಪ್ರದೇಶ

ದಮನ್ ಮತ್ತು ದಿಯು ಭಾರತದ ಕೇಂದ್ರಾಡಳಿತ ಪ್ರದೇಶಗಳು.ಸ್ವಾತಂತ್ರ್ಯಕ್ಕಿಂತ ಮೊದಲು ಗೋವಾದೊಂದಿಗೆ ಪೊರ್ಚುಗೀಸರ ಸ್ವಾಧೀನವಿತ್ತು.

ದಮನ್ ಮತ್ತು ದಿಯು
  • दामांव आनी दीव (Konkani)
    દમણ અને દીવ (Gujarati)
    दमण और दीव (Hindi)
Union territory
Official logo of ದಮನ್ ಮತ್ತು ದಿಯು
ದಮನ್ ಮತ್ತು ದಿಯು: ಭೌಗೋಳಿಕ ಸ್ಥಾನ, ಇತಿಹಾಸ, ವ್ಯವಸಾಯ
Coordinates: 20°25′N 72°50′E / 20.42°N 72.83°E / 20.42; 72.83
Countryದಮನ್ ಮತ್ತು ದಿಯು: ಭೌಗೋಳಿಕ ಸ್ಥಾನ, ಇತಿಹಾಸ, ವ್ಯವಸಾಯ ಭಾರತ
Established30 May 1987
CapitalDaman
ಸರ್ಕಾರ
 • Member of ParliamentLalubhai Patel
 • AdministratorPraful Khoda Patel
Area
 • Total೧೦೨ km (೩೯ sq mi)
 • ಶ್ರೇಣಿ35th
Population
 (2011)
 • Total೨,೪೨,೯೧೧
 • ಶ್ರೇಣಿ6th (among union territories)
 • ಸಾಂದ್ರತೆ೨,೪೦೦/km (೬,೨೦೦/sq mi)
Languages
 • OfficialKonkani
Gujarati
Hindi
English
 • Additional officialNone
ಸಮಯ ವಲಯಯುಟಿಸಿ+5:30 (IST)
ISO 3166 codeIN-DD
No. of districts2
HDIIncrease 0.754 (2005)
HDI Categoryhigh
Sex ratio1.61 ♂/♀
ದಮನ್ ಮತ್ತು ದಿಯು: ಭೌಗೋಳಿಕ ಸ್ಥಾನ, ಇತಿಹಾಸ, ವ್ಯವಸಾಯ
St. Paul's Church in Diu

"ಗೋವಾ, ದಮನ್ ಮತ್ತು ದಿಯು" ಪ್ರದೇಶವನ್ನು 1987 ವರೆಗೆ ಒಂದು ಒಕ್ಕೂಟ ಕ್ಷೇತ್ರವಾಗಿ ಆಡಳಿತಕ್ಕೊಳಪಟ್ಟಿತ್ತು. ಗೋವಾ ಪ್ರತ್ಯೇಕ ಒಕ್ಕೂಟ ಕ್ಷೇತ್ರವಾಗಿ ಮಾಡಿದಾಗ, ದಮನ್ ಮತ್ತು ದಿಯು ಬೇರೆಯಾದ ಕೇಂದ್ರಾಡಳಿತ ಪ್ರದೇಶವಾಯಿತು. ಎರಡು ಜಿಲ್ಲೆಗಳಲ್ಲಿ ಕೇಂದ್ರಾಡಳಿತ ಪ್ರದೇಶದ ಸ್ಥಳಗಳಲ್ಲಿ ಒಂದಾಗಿದೆ. ದಮನ್ ಮತ್ತು ದಿಯು ರಸ್ತೆಯಲ್ಲಿ ಸರಿಸುಮಾರು ೬೫೦ ಕಿಲೋಮೀಟರ್ ಪರಸ್ಪರ ದೂರ ಇವೆ.ಭಾರತದ ಉತ್ತರದಲ್ಲಿರುವ ಒಂದು ಒಕ್ಕೂಟ ಪ್ರದೇಶ.

ಭೌಗೋಳಿಕ ಸ್ಥಾನ

ಗುಜರಾತ್ ರಾಜ್ಯದ ಪಶ್ಚಿಮ ತೀರದಲ್ಲಿ ಮುಂಬಯಿಯಿಂದ ಸು. 193 ಕಿ.ಮೀ. ದೂರದಲ್ಲಿ ದರ್ಮನ್ ಪ್ರದೇಶವಿದೆ. ಪೂರ್ವದಲ್ಲಿ ಗುಜರಾತ್ ರಾಜ್ಯ, ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ, ಉತ್ತರದಲ್ಲಿ ಕೊಲಕ್ ನದಿ ಮತ್ತು ದಕ್ಷಿಣದಲ್ಲಿ ಕಲೈ ನದಿ ದಮನ್ ಪ್ರದೇಶವನ್ನು ಸುತ್ತುವರೆದಿವೆ. ದೀವ ಒಂದು ಪುಟ್ಟ ದ್ವೀಪ. ಇದು ಗುಜರಾತಿನ ಜುನಾಘಡ್ ಜಿಲ್ಲೆಯ ದಕ್ಷಿಣಕ್ಕೆ ಅರೇಬಿಯ ಸಮುದ್ರದಲ್ಲಿದೆ. ಈ ದ್ವೀಪಕ್ಕೆ ಗುಜರಾತ್ ರಾಜ್ಯ ಎರಡು ಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಿದೆ. ದಾಮನ್ ಗುಜರಾತಿನ ವಲ್ಸದ್ ಜಿಲ್ಲದೆಯ ಪಕ್ಕದಲ್ಲಿದ್ದು 72 ಚ.ಕಿ.ಮೀ. ವಿಸ್ತೀರ್ಣವಿದೆ. ದೀವ್ 40 ಚ.ಕಿ.ಮೀ. ವಿಸ್ತೀರ್ಣವುಳ್ಳದ್ದು ಇವುಗಳ ಒಟ್ಟು ವಿಸ್ತೀರ್ಣ 112 ಚ.ಕಿ.ಮೀ. 2001ರ ಅಂಕಿ ಅಂಶದ ಪ್ರಕಾರ 92,512 ಮಂದಿ ಪುರುಷರು, 65,692 ಮಂದಿ ಮಹಿಳೆಯರು ಇರುವ ಈ ಪ್ರದೇಶಗಳ ಒಟ್ಟು ಜನಸಂಖ್ಯೆ 1,58,204. ಆಡಳಿತ ಕೇಂದ್ರ ಪಟ್ಟಣ ದಮನ್.

ಇತಿಹಾಸ

ಗೋವ, ದಮನ್ ಮತ್ತು ದೀವ್ ಇವು ಪೋರ್ಚುಗೀಸರ ಆಡಳಿತಕ್ಕೆ ಸೇರಿದ್ದ ಪ್ರದೇಶಗಳಾಗಿದ್ದವು. ಭಾರತ ಸ್ವತಂತ್ರವಾದರೂ ಇವು ಪೋರ್ಚುಗೀಸರ ಮುಷ್ಠಿಯಿಂದ ಬಿಡುಗಡೆಯಾಗಲಿಲ್ಲ. ಇದಕ್ಕಾಗಿ ಭಾರತೀಯರು ಗೋವದ ಮುಕ್ತಿಗಾಗಿ ಮತ್ತೆ ಹೋರಾಡಬೇಕಾಯಿತು. 1961ರಲ್ಲಿ ಮುಕ್ತಗೊಂಡ ಈ ಪ್ರದೇಶಗಳು ಭಾರತದ ಆಡಳಿತಕ್ಕೆ ಸೇರಿದವು. ಮುಂದೆ 1987, ಮೇ 30ರಂದು ಗೋವ ರಾಜ್ಯವಾಯಿತು. ಅಂದಿನಿಂದ ದಮನ್ ಮತ್ತು ದೀವ್‍ಗಳು ಒಕ್ಕೂಟದ ಆಡಳಿತಕ್ಕೆ ಒಳಪಟ್ಟವು. ದಮನ್ ಜಿಲ್ಲೆಯ ಜನಸಂಖ್ಯೆ ೨,೪೨,೯೧೧ ದೀವ್ ಜಿಲ್ಲೆಯ ಜನಸಂಖ್ಯೆ 44,215. ಎರಡು ಪಟ್ಟಣಗಳು, 23 ಗ್ರಾಮಗಳು ಇರುವ ಈ ಪ್ರದೇಶಗಳಿಗೆ ದಮನ್ ಮತ್ತು ದೀವ್‍ಗಳೇ ಆಡಳಿತ ಪ್ರದೇಶಗಳು.

ವ್ಯವಸಾಯ

ಈ ಪ್ರದೇಶದ ಒಟ್ಟು ಭೂ ಪ್ರದೇಶದಲ್ಲಿ 1,12,103 ಹೆಕ್ಟೇರ್‍ಗಳು ವ್ಯವಸಾಯಕ್ಕೆ ಬಳಸಲಾಗಿದೆ. ಬತ್ತ, ರಾಗಿ, ಬಾಜ್ರ, ಜೋಳ, ನೆಲಗಡಲೆ, ವಿವಿಧ ದ್ವಿದಳ ಧಾನ್ಯಗಳು, ಗೋಧಿ ಬೆಳೆಯುವುದರ ಜೊತೆಗೆ ಬಾಳೆಹಣ್ಣು, ಸಪೋಟ, ಮಾವು, ತೆಂಗು ಮತ್ತು ಕಬ್ಬು ಬೆಳೆಯುತ್ತಾರೆ. ಇಲ್ಲಿ ಅರಣ್ಯ ಪ್ರದೇಶವಿಲ್ಲವೆಂದೇ ಹೇಳಬಹುದು.

ಕೈಗಾರಿಕೆ

ಎರಡೂ ಪ್ರದೇಶಗಳು ಸೇರಿದಂತೆ ಸು. 746 ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಘಟಕಗಳಿವೆ. ದಮನ್ನಿನ ಆಮ್ನಿಬಸ್ ಇಂಡಸ್ಟ್ರಿಯರ್ ಡೆವಲಪ್‍ಮೆಂಟ್ ನಿಗಮ ಮುಖ್ಯ ಕೈಗಾರಿಕಾ ಕ್ಷೇತ್ರವಾಗಿದ್ದು ದಬೆಲ್, ಭಿಮ್‍ಪುರೆ, ಕಾಚಿಗಮ್ ಮತ್ತು ಕದೈಯ ಇವು ಸಹ ಕೈಗಾರಿಕಾ ಕ್ಷೇತ್ರಗಳಾಗಿವೆ. ಸಾಕಷ್ಟು ವಿದ್ಯುತ್ ಸರಬರಾಜಿದ್ದು ಪಟ್ಟಣ ಮತ್ತು ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವಿದೆ.

ಸಂಪರ್ಕ

ಸಾರಿಗೆ ಸಂಪರ್ಕ ಕುರಿತಂತೆ ದಮನ್‍ನಲ್ಲಿ 191 ಕಿ.ಮೀ. ದೂರದ ಹಾಗೆ ದೀವ್‍ನಲ್ಲಿ 78 ಕಿ.ಮೀ ರಸ್ತೆಗಳಿವೆ. ನೇರ ರೈಲು ಸಂಪರ್ಕವಿಲ್ಲದ ಇವುಗಳಿಗೆ ಹತ್ತಿರದ ಮುಂಬಯಿ, ದೆಹಲಿ ಪಶ್ಚಿಮ ರೈಲು ಮಾರ್ಗದ ವಾಪಿ ನಿಲ್ದಾಣ ದಮನ್‍ಗೆ ಹತ್ತಿರವಿದ್ದರೆ ದೀವ್‍ಗೆ ಮೀಟರ್ ಗೇಜ್‍ನ ದೆಲ್ವಾಡ ರೈಲು ನಿಲ್ದಾಣ ಹತ್ತಿರವಿದೆ. ಎರಡೂ ಪ್ರದೇಶಗಳಿಗೆ ವಿಮಾನ ಸಂಪರ್ಕವಿದೆ. ಮುಂಬಯಿಯಿಂದ ದೀವ್‍ಗೆ ನಿಗದಿತವಾದ ನೇರ ವಿಮಾನ ಸಂಪರ್ಕವಿದೆ.

ಪ್ರವಾಸೋದ್ಯಮ

ಈ ಎರಡೂ ಪ್ರದೇಶಗಳಿಗೆ ಪ್ರವಾಸಿಗರು ಭೇಟಿ ನೀಡುವುದುಂಟು. ಬಾಮ್ ಜೇಸಸ್ ಚರ್ಚ್, ಆವರ್ ಲೇಡಿ ಆಫ್ ಸೀ ಚರ್ಚ್, ಅವರ್ ಲೇಡಿ ಆಫ್ ರೆಮೆಡಿಯೋಸ್ ಚರ್ಚ್, ಮೋತಿದಮನ್ ಮತ್ತು ನಾನಿ ದರ್ಮನ್ ಕೋಟೆಗಳು ಜಾಮ್‍ಪೊರೆ ಮತ್ತು ದೇವ್‍ಕ ಸಮುದ್ರ ತೀರಗಳು, ಸಾರ್ವಜನಿಕ ಉದ್ಯಾನವನ, ಮೋತಿ ದಮನ್ ಜೆಟ್ಟಿ, ಮತ್ತು ಪರ್ಗೊಲ ತೋಟಗಳು, ಮೋತಿ ದಮನ್ ವಿಹಾರ ಉದ್ಯಾನವನ, ದೇವ್‍ಕ, ದಮನ್ ಗಂಗಾ ಪ್ರವಾಸಿ ವಿಹಾರ ಕೇಂದ್ರಗಳು, ಕಾಚಿಗಮ್, ಸತ್ಯ ಸಾಗರ್ ಉದ್ಯಾನ್, ಮಿರಸಾಲ್ ಉದ್ಯಾನ, ಮತ್ತು ಜಲಕ್ರೀಡಾ ಪಾರ್ಕ್‍ಗಳು ಬಹು ಪ್ರಸಿದ್ಧ. ಅದರಂತೆ ದೀವ್‍ನ ಸಂತ ಪಾಲ್ ಚರ್ಚ್, ದೀವ್‍ನ ಕೋಟೆ ಮತ್ತು ಪನಿ ಕೊಟ ಕೋಟೆ, ನಗೋವ ಮತ್ತು ಚಕ್ರತೀರ್ಥ, ಗೋಖ್ಲಾದ ಮಕ್ಕಳ ಉದ್ಯಾನವನ ಮತ್ತು ಬೇಸಿಗೆ ಮನೆ ಯಾತ್ರಿಕರನ್ನು ಸೆಳೆಯುವ ಬಹು ಪ್ರಸಿದ್ಧ ಆಕರ್ಷಕ ಸ್ಥಳಗಳಾಗಿವೆ.

ಆಡಳಿತ

ಇತ್ತೀಚೆಗೆ ಮುಂಬಯಿಯಲ್ಲಿ ದಮನ್, ದೀವ್ ಮತ್ತು ದಾದ್ರಾ ಮತ್ತು ನಗರ್ ಹವೇಲಿ ಇವುಗಳಿಗೆ ಒಂದು ಉಚ್ಛನ್ಯಾಯಾಲಯವನ್ನು ಸ್ಥಾಪಿಸಲಾಗಿದೆ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ದಮನ್ ಮತ್ತು ದಿಯು: ಭೌಗೋಳಿಕ ಸ್ಥಾನ, ಇತಿಹಾಸ, ವ್ಯವಸಾಯ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ದಮನ್ ಮತ್ತು ದಿಯು ಭೌಗೋಳಿಕ ಸ್ಥಾನದಮನ್ ಮತ್ತು ದಿಯು ಇತಿಹಾಸದಮನ್ ಮತ್ತು ದಿಯು ವ್ಯವಸಾಯದಮನ್ ಮತ್ತು ದಿಯು ಕೈಗಾರಿಕೆದಮನ್ ಮತ್ತು ದಿಯು ಸಂಪರ್ಕದಮನ್ ಮತ್ತು ದಿಯು ಪ್ರವಾಸೋದ್ಯಮದಮನ್ ಮತ್ತು ದಿಯು ಆಡಳಿತದಮನ್ ಮತ್ತು ದಿಯು ಉಲ್ಲೇಖಗಳುದಮನ್ ಮತ್ತು ದಿಯು ಬಾಹ್ಯ ಸಂಪರ್ಕಗಳುದಮನ್ ಮತ್ತು ದಿಯು

🔥 Trending searches on Wiki ಕನ್ನಡ:

ಪ್ರೇಮಾಬಿಳಿ ರಕ್ತ ಕಣಗಳುನಾಮಪದಭಾರತದ ರಾಜ್ಯಗಳ ಜನಸಂಖ್ಯೆರೋಸ್‌ಮರಿಅಸಹಕಾರ ಚಳುವಳಿಮಂಗಳಮುಖಿಶ್ರೀನಯನತಾರಭರತನಾಟ್ಯಆಡು ಸೋಗೆಶಿಕ್ಷಕಜನಪದ ಕರಕುಶಲ ಕಲೆಗಳುಜನ್ನಭಾರತದ ಸ್ವಾತಂತ್ರ್ಯ ದಿನಾಚರಣೆಪೂರ್ಣಚಂದ್ರ ತೇಜಸ್ವಿಭಾರತದ ರಾಷ್ಟ್ರೀಯ ಉದ್ಯಾನಗಳುಗಣೇಶ ಚತುರ್ಥಿವಿಜಯದಾಸರುಆಗುಂಬೆವಚನ ಸಾಹಿತ್ಯಮಳೆಮುಹಮ್ಮದ್ಗದಗಮೂಲಭೂತ ಕರ್ತವ್ಯಗಳುದಾವಣಗೆರೆಕಾಮಾಲೆಪ್ರವಾಸೋದ್ಯಮಜಯಚಾಮರಾಜ ಒಡೆಯರ್ಭಾರತೀಯ ಸಂಸ್ಕೃತಿಭಾರತೀಯ ಭೂಸೇನೆಕರಗಗುರುಮುಟ್ಟುಅಶ್ವತ್ಥಮರಜ್ಞಾನಪೀಠ ಪ್ರಶಸ್ತಿಗೂಗಲ್ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುನಾಲ್ವಡಿ ಕೃಷ್ಣರಾಜ ಒಡೆಯರುಬೀಚಿಕುವೆಂಪುಕರ್ನಾಟಕ ಪೊಲೀಸ್ರಾಯಲ್ ಚಾಲೆಂಜರ್ಸ್ ಬೆಂಗಳೂರುಗುಣ ಸಂಧಿಮಾದರ ಚೆನ್ನಯ್ಯಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕರ್ನಾಟಕವೃತ್ತಪತ್ರಿಕೆಏಕರೂಪ ನಾಗರಿಕ ನೀತಿಸಂಹಿತೆನೀರುಪಟ್ಟದಕಲ್ಲುಹೈನುಗಾರಿಕೆಯಕೃತ್ತುಶರಣಬಸವೇಶ್ವರ ದೇವಸ್ಥಾನ ಕಲಬುರಗಿವಿಜಯನಗರತರಕಾರಿವಿನಾಯಕ ಕೃಷ್ಣ ಗೋಕಾಕದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಗುಬ್ಬಚ್ಚಿಭಾರತದ ಸರ್ವೋಚ್ಛ ನ್ಯಾಯಾಲಯಶಬರಿಗಣೇಶ್ (ನಟ)ಕನ್ನಡ ರಾಜ್ಯೋತ್ಸವಎ.ಪಿ.ಜೆ.ಅಬ್ದುಲ್ ಕಲಾಂಕುತುಬ್ ಮಿನಾರ್ಮಂಡ್ಯದಕ್ಷಿಣ ಕರ್ನಾಟಕಸೆಲರಿಕೊಲ್ಲೂರು ಮೂಕಾಂಬಿಕಾ ದೇವಸ್ಥಾನಬೆಂಗಳೂರು ಕೋಟೆಭಾರತೀಯ ನದಿಗಳ ಪಟ್ಟಿಶಿಕ್ಷಣಕಾದಂಬರಿರಜಪೂತಶಿವಶಿವಮೊಗ್ಗಕರ್ನಾಟಕ ಸಂಗೀತಬಾಳೆ ಹಣ್ಣುರಾಜಧಾನಿಗಳ ಪಟ್ಟಿ🡆 More