ದಕ್ಷಿಣ ಕರ್ನಾಟಕ

ದಕ್ಷಿಣ ಕರ್ನಾಟಕವು ಕಾವೇರಿ ಕಣಿವೆಯಾಗಿದ್ದು, ಸಮೃದ್ಧವಾಗಿದೆ, ಹೇಮಾವತಿ, ಲಕ್ಷ್ಮಣತೀರ್ಥ, ಕಬಿನಿ, ಯಗಚಿ, ನುಗು ಅರ್ಕಾವತಿ ,ಶಿಂಷ ಮುಂತಾದ ನದಿಗಳು ಹುಟ್ಟಿ ಹರಯುತ್ತವೆ.

ಇತಿಹಾಸ

ದಕ್ಷಿಣ ಕರ್ನಾಟಕ 
ದಕ್ಷಿಣ ಕರ್ನಾಟಕ

ದಕ್ಷಿಣ ಕರ್ನಾಟಕವನ್ನು ಕದಂಬರು, ಚಾಲುಕ್ಯರು, ಹೋಯ್ಸಳರು, ಗಂಗರು, ಮೈಸೂರು ಒಡೆಯರು, ಮೈಸೂರು ಸುಲ್ತಾನರು ಆಳಿದ್ದಾರೆ. ಇವರಲ್ಲಿ ಪ್ರಮುಖರಾದವರೆಂದರೆ ಮೈಸೂರಿನ ಒಡೆಯರು, ಕದಂಬರು ಮತ್ತು ಮೈಸೂರಿನ ಸುಲ್ತಾನರು.

೨೦ ನೇ ಶತಮಾನದ ಸಂಧರ್ಭದಲ್ಲಿ ಇದು ಮೈಸೂರಿನ ರಾಜರ ಆಳ್ವಿಕೆಯಲ್ಲಿತ್ತು, ೧೯೪೭ ರ ಭಾರತ ಸ್ವಾತಂತ್ರ್ಯದ ನಂತರ ಇದನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು, ಇದು ದಕ್ಷಿಣ ಕರ್ನಾಟಕವಾದರು ಈಗಲು ಸಹ ಇಲ್ಲಿ ಸ್ಥಳೀಯವಾಗಿ ಈ ಭಾಗವನ್ನು ಹಳೇ ಮೈಸೂರು ಭಾಗವೆಂದು ಕರೆಯುತ್ತಾರೆ.

ಇಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು ಅವುಗಳಲ್ಲಿ ಪ್ರಮುಖವಾದವುಗಳೆಂದರೆ

ಸ್ಥಳ ಸ್ಥಳ ವಿಶೇಷ
ಮೈಸೂರು ಅರಮನೆಗಳು
ಬೇಲೂರು-ಹಳೇಬೀಡು ಪ್ರಾಚೀನ ದೇವಾಲಯಗಳು
ಬೆಂಗಳೂರು ರಾಜ್ಯ ರಾಜಧಾನಿ
ಜೋಗ ಜಲಪಾತ
ಧರ್ಮಸ್ಥಳ ಹಿಂದೂ ಧಾರ್ಮಿಕ ಕ್ಷೇತ್ರ
ನಾಗರಹೊಳೆ ಅಭಯಾರಣ್ಯ

ಜಿಲ್ಲೆಗಳು

  1. ಬೆಂಗಳೂರು ನಗರ
  2. ಬೆಂಗಳೂರು ಗ್ರಾಮಾಂತರ
  3. ಚಿಕ್ಕಬುಳ್ಳಾಪುರ
  4. ಕೋಲಾರ
  5. ತುಮಕೂರು
  6. ರಾಮನಗರ
  7. ಮಂಡ್ಯ
  8. ಚಿತ್ರದುರ್ಗ
  9. ದಾವಣಗೆರೆ
  10. ಶಿವಮೊಗ್ಗ
  11. ಉಡುಪಿ
  12. ದಕ್ಷಿಣ ಕನ್ನಡ
  13. ಚಿಕ್ಕಮಗಳೂರು
  14. ಹಾಸನ
  15. ಮೈಸೂರು
  16. ಕೊಡಗು
  17. ಚಾಮರಾಜನಗರ

ಆಡಳಿತ

ರೆವಿನ್ಯೂ ವಿಭಾಗಗಳು

ದಕ್ಷಿಣ ಕರ್ನಾಟಕವು ಒಟ್ಟು ೩ ರೆವಿನ್ಯೂ ವಿಭಾಗಗಳ ೧೭ ಜಿಲ್ಲೆಗಳನ್ನೊಳಗೊಂಡಿದೆ,

ದಕ್ಷಿಣ ಕರ್ನಾಟಕ 
ಮೈಸೂರು ಅರಮನೆ

ಕಾವೇರಿ ನದಿಯು ಈ ಭಾಗದ ಮುಖ್ಯ ನದಿಯಾಗಿದ್ದು, ಕೃಷ್ಣರಾಜಸಾಗರ ದೊಡ್ಡ ಜಲಾಶಯವಾಗಿದೆ. ಪಶ್ಚಿಮದಲ್ಲಿ ಪಶ್ಚಿಮಘಟ್ಟಗಳಿದ್ದು ಹೆಚ್ಚಿನ ಮಳೆ ಪಡೆಯುತ್ತದೆ.ಭತ್ತ, ಕಬ್ಬು, ಮತ್ತು ತಂಬಾಕು ಇಲ್ಲಿನ ಪ್ರಮುಖ ಬೆಳೆಗಳಾಗಿದ್ದು, ತೆಂಗು ಮತ್ತು ಅಡಿಕೆ ಇಲ್ಲಿನ ಮುಖ್ಯ ತೋಟಗಾರಿಕಾ ಬೆಳೆಗಳಾಗಿವೆ.

ದಕ್ಷಿಣ ಕರ್ನಾಟಕ 
ಕಾವೇರಿ ನದಿ

ಭೌಗೋಳಿಕ ಲಕ್ಷಣ ಮತ್ತು ಹವಾಮಾನ

ದಖ್ಹನ್ ಪ್ರಸ್ತಭೂಮಿಯಲ್ಲಿರುವ ದಕ್ಷಿಣ ಕರ್ನಾಟಕವು ಕಾವೇರಿ, ಹೇಮಾವತಿ, ಕಬಿನಿ, ಲಕ್ಷ್ಮಣತೀರ್ಥ ಮುಂತಾದ ನದಿಗಳ ಉಗಮ ಸ್ಥಳವಾಗಿದ್ದು ಬಹುತೇಕ ಈ ಭಾಗದ ನದಿಗಳು ಪಶ್ಚಿಮಘಟ್ಟದಲ್ಲಿ ಹುಟ್ಟಿ ಪೂರ್ವಾಭಿಮುಖವಾಗಿ ಹರಿಯುತ್ತವೆ. ಆದರೆ ಶಿಂಷ, ಅರ್ಕಾವತಿ, ವೃಷಭಾವತಿ ಮತ್ತು ಪೆನ್ನಾರ್ ನದಿಗಳು ನಂದಿ ಬೆಟ್ಟ ಮತ್ತು ಬೆಂಗಳೂರು ಭಾಗದ ಬಯಲುಸೀಮೆಯಲ್ಲಿ ಹುಟ್ಟಿ ಕಾವೇರಿಯನ್ನು ಸೇರುತ್ತವೆ.

ಪೂರ್ವಾಭಿಮುಖವಾಗಿ ಹರಿಯುವ ನದಿಗಳು

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು

ಹವಾಮಾನ

ಈ ಭಾಗದಲ್ಲಿ ವರ್ಷಪೂರ್ತಿ ಹಿತಕರ ವಾತವರಣವಿದ್ದು, ಜೂನ್ ರಿಂದ ಅಕ್ಟೋಬರ್ ವರೆಗೆ ನೈರುತ್ಯ ಮಾನ್ಸೂನ್ ಮಾರುತಗಳು ಮಳೆ ಸುರಿಸುತ್ತವೆ. ಚಳಿಗಾಲದಲ್ಲಿ ಕನಿಷ್ಟ ತಾಪಮಾನವು ೧೪ ಡಿಗ್ರಿ ಸೆಲ್ಸಿಯಸ್ ನಷ್ಟಿದ್ದು, ಬೀಸಿಗೆಯಲ್ಲಿ ಗರಿಷ್ಟ ತಾಪಮಾನವು ಸುಮಾರು ೩೦ ರಿಂದ ೩೫ ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ.

ಇವುಗಳನ್ನು ಸಹ ನೋಡಿ

Tags:

ದಕ್ಷಿಣ ಕರ್ನಾಟಕ ಇತಿಹಾಸದಕ್ಷಿಣ ಕರ್ನಾಟಕ ಜಿಲ್ಲೆಗಳುದಕ್ಷಿಣ ಕರ್ನಾಟಕ ಆಡಳಿತದಕ್ಷಿಣ ಕರ್ನಾಟಕ ಭೌಗೋಳಿಕ ಲಕ್ಷಣ ಮತ್ತು ಹವಾಮಾನದಕ್ಷಿಣ ಕರ್ನಾಟಕ ಇವುಗಳನ್ನು ಸಹ ನೋಡಿದಕ್ಷಿಣ ಕರ್ನಾಟಕಅರ್ಕಾವತಿ ನದಿಕಬಿನಿ ನದಿಲಕ್ಷ್ಮಣ ತೀರ್ಥ ನದಿ

🔥 Trending searches on Wiki ಕನ್ನಡ:

ಕನ್ನಡದಲ್ಲಿ ಮಹಿಳಾ ಸಾಹಿತ್ಯಶ್ರೀ ರಾಮ ನವಮಿಅಜಂತಾವಲ್ಲಭ್‌ಭಾಯಿ ಪಟೇಲ್ಭಾರತೀಯ ಜನತಾ ಪಕ್ಷಬಹಮನಿ ಸುಲ್ತಾನರುಯು.ಆರ್.ಅನಂತಮೂರ್ತಿಜಿ.ಎಸ್.ಶಿವರುದ್ರಪ್ಪಚಂದ್ರಗುಪ್ತ ಮೌರ್ಯಚೇಳು, ವೃಶ್ಚಿಕಭಾರತದಲ್ಲಿ ಬಡತನಹುಣಸೆಜಾನಪದಮಹಾತ್ಮ ಗಾಂಧಿಗುಪ್ತ ಸಾಮ್ರಾಜ್ಯಮಧ್ವಾಚಾರ್ಯಚಾಮರಾಜನಗರಗದ್ದಕಟ್ಟುವಾಲ್ಮೀಕಿಕನ್ನಡ ವಿಶ್ವವಿದ್ಯಾಲಯಚಿನ್ನಹುಣಸೂರುಸೀಮೆ ಹುಣಸೆಜೈಜಗದೀಶ್ಪಿ.ಲಂಕೇಶ್ಮಾವುದೆಹಲಿ ಸುಲ್ತಾನರುಕೈವಾರ ತಾತಯ್ಯ ಯೋಗಿನಾರೇಯಣರುದಿವ್ಯಾಂಕಾ ತ್ರಿಪಾಠಿಏಕರೂಪ ನಾಗರಿಕ ನೀತಿಸಂಹಿತೆಪ್ರೀತಿಅಂತಾರಾಷ್ಟ್ರೀಯ ಸಂಬಂಧಗಳುಆದಿ ಶಂಕರಹೇರಳೆಕಾಯಿವಿರೂಪಾಕ್ಷ ದೇವಾಲಯರವಿಚಂದ್ರನ್ಕಾವೇರಿ ನದಿಯೋಗ ಮತ್ತು ಅಧ್ಯಾತ್ಮಸಾಮ್ರಾಟ್ ಅಶೋಕಶ್ರೀವಿಜಯನೇಮಿಚಂದ್ರ (ಲೇಖಕಿ)ಉಪನಯನಶ್ರವಣಬೆಳಗೊಳಗುಡಿಸಲು ಕೈಗಾರಿಕೆಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಪರಿಸರ ರಕ್ಷಣೆಸಂಶೋಧನೆತಂತ್ರಜ್ಞಾನಸೀತಾ ರಾಮದಕ್ಷಿಣ ಭಾರತದ ಪಕ್ಷಿಗಳ ಪಟ್ಟಿಶಬ್ದ ಮಾಲಿನ್ಯಮುರುಡೇಶ್ವರಮಾನವನ ಪಚನ ವ್ಯವಸ್ಥೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಹೈನುಗಾರಿಕೆಭಾರತದ ಇತಿಹಾಸಶೈಕ್ಷಣಿಕ ಮನೋವಿಜ್ಞಾನಕರ್ನಾಟಕ ಸ್ವಾತಂತ್ರ್ಯ ಚಳವಳಿಮಾನವ ಹಕ್ಕುಗಳುತಿಂಥಿಣಿ ಮೌನೇಶ್ವರಶ್ರೀ ರಾಘವೇಂದ್ರ ಸ್ವಾಮಿಗಳುಬಿ.ಎಫ್. ಸ್ಕಿನ್ನರ್ಭಾರತದಲ್ಲಿ ಪಂಚಾಯತ್ ರಾಜ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಬಾಳೆ ಹಣ್ಣುತಲಕಾಡುಸರ್ಪ ಸುತ್ತುಗೋಲ ಗುಮ್ಮಟಯುಗಾದಿಮತದಾನನಗರಜ್ಯೋತಿಷ ಮತ್ತು ವಿಜ್ಞಾನಉದಯವಾಣಿಚೆನ್ನಕೇಶವ ದೇವಾಲಯ, ಬೇಲೂರುಹಿಂದಿ ಭಾಷೆನಗರೀಕರಣರಾಶಿಚಿದಂಬರ ರಹಸ್ಯ🡆 More