ಜೇಮ್ಸ್ ವ್ಯಾಟ್: ಗಣಿತಜ್ಞ

ಜೇಮ್ಸ್ ವ್ಯಾಟ್ , ಎಫ್‌ಆರ್ಎಸ್, ಎಫ್ಆರ್ಎಸ್‌‍ಇ (೧೯ ಜನವರಿ ೧೭೩೬ - ೨೫ ಆಗಸ್ಷ್ ೧೮೧೯) ಒಬ್ಬ ಉಗಿ ಎಂಜಿನ್ ಅನ್ನು ಕಂಡು ಹಿಡಿದ ಸ್ಕಾಟ್‍ಲ್ಯಾಂಡಿನ ಸಂಶೋಧಕ, ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಬ್ರಿಟನ್ ಸಂಯುಕ್ತ ಸಂಸ್ಥಾನ ಮತ್ತು ಪ್ರಪಂಚದಾದ್ಯಂತ ಮೂಲಭೂತ ಬದಲಾವಣೆ ತಂದವನು.

  • ಗ್ಲ್ಯಾಸ್ಗೋ ವಿಶ್ವವಿದ್ಯಾಲಯದಲ್ಲಿ ಸಲಕರಣೆ ತಯಾರಿಸುವ ಕೆಲಸ ಮಾಡುವಾಗ ವ್ಯಾಟ್‌ಗೆ ಉಗಿ ಎಂಜಿನ್ ತಂತ್ರಜ್ಞಾನದಲ್ಲಿ ಆಸಕ್ತಿ ಮೂಡಿತು. ಸಮಕಾಲಿನ ಎಂಜಿನ್ ಮಾದರಿಗಳಲ್ಲಿ ಸಿಲಿಂಡರ್ ತಂಪಾಗುವಿಕೆ ಮತ್ತು ಮತ್ತೆ ಶಾಖ ಪಡೆಯುವ ಶಕ್ತಿಯು ನಷ್ಷವಾಗುತ್ತಿದ್ದು ಇದು ಒಂದು ದೊಡ್ಡ ಸಮಸ್ಯೆಯಾಗಿದೆ ಎಂದು ಅರ್ಥ ಮಾಡಿಕೊಂಡನು. ಪ್ರತ್ಯೇಕ ಕಂಡೆನ್ಸರ್ ಬಳಕೆಯಿಂದ ನಷ್ಷವಾಗುವ ಶಕ್ತಿಯನ್ನು ತಡೆಯಬಹುದು. ಹಾಗೆಯೇ ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಬಹುದು ಮತ್ತು ಬೆಲೆಯ ಪರಿಣಾಮವನ್ನು ಸುಧಾರಿಸಬಹುದು ಎಂದು ಕಂಡು ಕೊಂಡ ವ್ಯಾಟ್ ತನ್ನ ಬೆಳವಣಿಗೆಯ ಮಾದರಿಗಳನ್ನು ಪರಿಚಯಿಸಿದನು ಹಾಗೂ ಅಶ್ವಶಕ್ತಿಯ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದನು.
  • ಶಕ್ತಿಯ ಎಸ್‌‌ಐ ಸಂಕೇತ(ಘಟಕ) ವ್ಯಾಟ್ ಎಂದು ನಂತರ ವ್ಯಾಟ್ ನಾಮಕರಣ ಮಾಡಿದನು. ವ್ಯಾಟ್ ತನ್ನ ಸಂಶೋಧನೆಯನ್ನು ವಾಣಿಜ್ಯೀಕರಿಸಲು ಪ್ರಯತ್ನಿಸಿದನು, ಆದರೆ ೧೭೭೫ರ ವರೆಗೂ ಆರ್ಥಿಕ ಸಂಕಷ್ಷಕ್ಕೆ ಸಿಲುಕಿದ್ದರಿಂದ ಮ್ಯಾತ್ಯು ಬೌಲ್ಟನ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡನು. ಈ ಹೊಸ ವ್ಯವಹಾರದ ಪರಿಣಾಮ ಬೌಲ್ಟ್‌‍ನ್ ಮತ್ತು ವ್ಯಾಟ್ ಹೆಚ್ಚು ಯಶಸ್ಸು ಪಡೆದರು ಮತ್ತು ಇದರೊಂದಿಗೆ ವ್ಯಾಟ್ ಶ್ರೀಮಂತನಾದನು. ವ್ಯಾಟ್ ತನ್ನ ನಿವೃತ್ತಿ ನಂತರವೂ ಮಹತ್ವವಾದ ತನ್ನ ಉಗಿ ಎಂಜಿನ್ ಕೆಲಸದಲ್ಲಿ ಹೊಸ ಸಂಶೋಧನೆಯನ್ನು ಮುಂದುವರಿಸಿದನು. ೮೩ನೇ ವಯಸ್ಸಿನಲ್ಲಿ ೧೮೧೯ ರಲ್ಲಿ ನಿಧನನಾದನು.
ಜೇಮ್ಸ್ ವ್ಯಾಟ್
ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ
Portrait of James Watt (1736-1819)
by Carl Frederik von Breda
ಜನನ(೧೭೩೬-೦೧-೧೯)೧೯ ಜನವರಿ ೧೭೩೬
Greenock, Renfrewshire, Scotland
ಮರಣ25 August 1819(1819-08-25) (aged 83)
Handsworth, Birmingham, ಇಂಗ್ಲೆಂಡ್
ವಾಸಸ್ಥಳGlasgow then Handsworth, Great Britain
ಪೌರತ್ವKingdom of Great Britain
ರಾಷ್ಟ್ರೀಯತೆScottish
ಕಾರ್ಯಕ್ಷೇತ್ರInventor and Mechanical Engineer
ಸಂಸ್ಥೆಗಳುUniversity of Glasgow
Boulton and Watt
ಪ್ರಸಿದ್ಧಿಗೆ ಕಾರಣImproving the steam engine
ಹಸ್ತಾಕ್ಷರ
ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ

ಜೀವನ ಚರಿತ್ರೆ

  • ಜೇಮ್ಸ್ ವ್ಯಾಟ್ ರೆನ್‌ಫ್ರೀವ್‌ಶೈರ್ನಲ್ಲಿರುವ ಗ್ರೀನೊಕ್ನ ಬಂದರು ಮೇಲಿನ ಫರ್ತ್ ಆಫ್ ಕ್ಲೈಡ್ನಲ್ಲಿ ಜನವರಿ ೧೯, ೧೭೩೬ ರಲ್ಲಿ ಜನಿಸಿದನು. ಅವನ ತಂದೆ ಹಡಗು ತಯಾರಕ, ಹಡಗಿನ ಮಾಲಿಕ, ಮತ್ತು ಗುತ್ತಿಗೆದಾರ ಮತ್ತು ನಗರದ ಸ್ಥಳೀಯ ಸಾರ್ವಜನಿಕ ಇಲಾಖೆಯ ಮುಖ್ಯಸ್ಥನಾಗಿದ್ದ. ಇವರ ತಾಯಿ ಅಗ್ನೆಸ್ ಮುಇರ್ಹೆಡ್ ಉನ್ನತ ಕುಟುಂಬದಿಂದ ಬಂದವರು ಮತ್ತು ಹೆಚ್ಚು ವಿಧ್ಯಾವಂತರಾಗಿದ್ದರು. ಇವರಿಬ್ಬರು ಧಾರ್ಮಿಕ ಸಾಂಪ್ರದಾಯಿಗಳು ಮತ್ತು ಧಾರ್ಮಿಕವಾಗಿ, ರಾಜಕೀಯವಾಗಿ ಎಲ್ಲ ವಿಷಯದಲ್ಲೂ ಸಮಾನರಾಗಿದ್ದರು.
  • ವ್ಯಾಟ್‍ನ ತಾತ ಥಾಮಸ್ ವ್ಯಾಟ್ ಗಣಿತದ ಶಿಕ್ಷಕರಾಗಿದ್ದರು ಮತ್ತು ಕ್ಯಾರ್ಟ್ಸ್‌ಬರ್ನ್‌ನ ಬರೊನ್ನ ಬೈಲಿ ಆಗಿದ್ದರು. ಪ್ರಾಥಮಿಕ ಹಂತದಲ್ಲಿ ವ್ಯಾಟ್ ಶಾಲೆಗೆ ಹೋಗುತ್ತಿರಲಿಲ್ಲ, ಬಹುಶಃ ಮನೆಪಾಠವನ್ನು ಆತನ ತಾಯಿ ಬೋಧಿಸುತ್ತಿದ್ದಳು ನಂತರ ಗ್ರೀನೊಕ್ ವ್ಯಾಕರಣ ಶಾಲೆಗೆ ಹೋಗುತ್ತಿದ್ದನು. ಗಣಿತದಲ್ಲಿ ಇವನಿಗೆ ಇರುವ ಕೌಶಲ್ಯದಿಂದ ಹೆಚ್ಚು ಭಿನ್ನವಾಗಿ ಕಾಣುತ್ತಿದ್ದನು, ಆದಾಗ್ಯೂ ಲ್ಯಾಟೀನ್ ಮತ್ತು ಗ್ರೀಕ್ನಲ್ಲಿ ಇವನ ಆಸಕ್ತಿ ಕುಂಠಿತಗೊಂಡಿತ್ತು.
  • ಇವನ ೧೮ನೇ ವಯಸ್ಸಿನಲ್ಲಿ ತಾಯಿ ನಿಧನವಾದಳು, ತಂದೆ ಆನಾರೋಗ್ಯಕ್ಕೆ ತುತ್ತಾದರು. ಸಲಕರಣ ತಯಾರಿಕೆಯ ಬಗ್ಗೆ ಅಧ್ಯಯನ ಮಾಡಲು ಒಂದು ವರ್ಷ ವ್ಯಾಟ್ ಲಂಡನ್‌ಗೆ ತೆರಳಿ ನಂತರ ಸ್ಕಾಟ್‍ಲ್ಯಾಂಡ್‌ಗೆ ಮರಳಿದನು. ಗ್ಲ್ಯಾಸ್ಗೋನ ಪ್ರಮುಖ ವಾಣಿಜ್ಯ ನಗರದಲ್ಲಿ ನೆಲೆಸಿ ಅವನ ಸ್ವಂತ ಸಲಕರಣೆ ತಯಾರಿಕಾ ವ್ಯಾಪಾರವನ್ನು ಅಳವಡಿಸಲು ಕಾರ್ಯಪ್ರವೃತ್ತನಾದನು. ಅವನು ಕನಿಷ್ಟ ೭ ವರ್ಷಗಳ ಕಾಲ ಅಪ್ರೆಂಟೀಸ್ ಆಗಿ ಕೆಲಸ ಮಾಡಿಲ್ಲದ ಕಾರಣದಿಂದಾಗಿ, ಸ್ಕಾಟ್‌‍ಲ್ಯಾಂಡಿನಲ್ಲಿ ಗಣಿತದ ಸಲಕರಣೆಗಳನ್ನು ತಯಾರಿಸುವವರು ಯಾರೂ ಇರಲಿಲ್ಲವಾಗಿದ್ದರೂ, ಗ್ಲ್ಯಾಸ್ಗೋದ ಹ್ಯಾಮರ್‌ಮನ್ ಗಿಲ್ಡ್ (ಅಂದರೆ ಸುತ್ತಿಗೆ ಬಳಸುವ ಕುಶಲಕರ್ಮಿಗಳು) ಅವರ ಅರ್ಜಿಯನ್ನು ತಡೆಹಿಡಿಯಿತು.
  • ಗ್ಲ್ಯಾಸ್ಗೋ ವಿಶ್ವವಿದ್ಯಾಲಯಕ್ಕೆ ದೊಡ್ಡ ಪ್ರಮಾಣದ ಸಲಕರಣೆಗಳ ಆಗಮನದಿಂದಾಗಿ ದೊಡ್ಡ ಬಿಕ್ಕಟ್ಟಿನಿಂದ ವ್ಯಾಟ್ ತಪ್ಪಿಸಿಕೊಂಡ. ಆ ಸಲಕರಣೆಗಳನ್ನು ಬಳಸಲು ಪರಿಣಿತರಿಗೆ ಮಾತ್ರ ಸಾಧ್ಯವಿತ್ತು. ವ್ಯಾಟ್ ಅವುಗಳನ್ನು ಕಾರ್ಯೋದ್ದೇಶಕ್ಕೆ ತಕ್ಕಂತೆ ಜೋಡಿಸಿದ ಮತ್ತು ಅವನಿಗೆ ಅದಕ್ಕಾಗಿ ಸಂಭಾವನೆ ನೀಡಲಾಯಿತು. ಮ್ಯಾಕ್‌ಫರ್ಲೆ‌ನ್ ಅಬ್ಸರ್ವೆಟರಿಯಲ್ಲಿ ಈ ಸಲಕರಣೆಗಳನ್ನು ಪರಿಣಾಮಕಾರಿಯಾಗಿ ಅಳವಡಿಸಲಾಯಿತು. ಹಾಗೆಯೇ ವಿಶ್ವವಿದ್ಯಾಲಯದ ಮೂವರು ಪ್ರಾಧ್ಯಾಪಕರು ವಿಶ್ವವಿದ್ಯಾಲಯ ದಲ್ಲಿಯೇ ಒಂದು ಚಿಕ್ಕ ಕಾರ್ಯಗಾರವನ್ನು ನಡೆಸುವ ಅವಕಾಶ ನೀಡಿದರು. ೧೭೫೮ರಲ್ಲಿ ಇದು ಸ್ಥಾಪನೆಯಾಯಿತು ಮತ್ತು ಜೊಸೆಫ್ ಬ್ಲಾಕ್ ಎಂಬ ಪ್ರಾಧ್ಯಾಪಕ, ಭೌತವಿಜ್ಞಾನಿ, ರಸಾಯನ ವಿಜ್ಞಾನಿಯು ವ್ಯಾಟ್‍ನ ಸ್ನೇಹಿತನಾದನು.
  • ವ್ಯಾಟ್ ೧೭೬೪ರಲ್ಲಿ ತನ್ನ ಸೋದರ ಸಂಬಂಧದಲ್ಲಿ ಮಾರ್ಗರೆಟ್ ಮಿಲ್ಲರ್ ಅವರನ್ನು ಮದುವೆಯಾಗಿ ೫ ಮಕ್ಕಳನ್ನು ಪಡೆದನು. ಅವರಲ್ಲಿ ಇಬ್ಬರು ಮಾತ್ರ ದೊಡ್ಡವರಾಗುವವರೆಗೂ ಬದುಕಿದ್ದರು. ಅವರೆಂದರೆ: ಜೆಮ್ಸ್ ಜೆಆರ್.(೧೭೬೯–೧೮೪೮)ಮತ್ತು ಮಾರ್ಗರೇಟ್(೧೭೬೭–೧೭೯೬). ೧೭೭೨ರಲ್ಲಿ ಮಗುವಿಗೆ ಜನ್ಮನೀಡುವಾಗ ಅವರ ಪತ್ನಿ ನಿಧನಳಾದಳು. ೧೭೭೭ ರಲ್ಲಿ ಗ್ಲ್ಯಾಸ್ಗೋನಲ್ಲಿ ಬಣ್ಣ ತಯಾರು ಮಾಡುವವನ ಮಗಳಾದ ಅನ್ ಮ್ಯಾಕ್‌ಗ್ರೆಗೊರ್ ಅವರನ್ನು ಮತ್ತೆ ವಿವಾಹವಾದನು ಮತ್ತು ಅವಳಿಂದ ಇಬ್ಬರು ಮಕ್ಕಳನ್ನು ಪಡೆದನು, ಅವರೆಂದರೆ: ಗ್ರೆ‍ಗೊರಿ (೧೭೭೭–೧೮೦೩) ಮತ್ತು ಜನೆಟ್ (೧೭೭೯–೧೭೯೪). ೧೮೩೨ ರಲ್ಲಿ ಅನ್ ನಿಧನವಾದಳು.

ವ್ಯಕ್ತಿತ್ವ

  • ವ್ಯಾಟ್ ಒಬ್ಬ ಸಮೃದ್ಧ ಕಲ್ಪನೆಗಳಿರುವ ಸಂಶೋಧಕನಾಗಿದ್ದ. ಆತನೊಬ್ಬ ಕುಶಲ ವಿಜ್ಞಾನಿಯಾಗಿದ್ದ. ತನ್ನ ವ್ಯವಸ್ಥಿತವಾದ ವೈಜ್ಞಾನಿಕ ಅಳತೆಗಳನ್ನು ಮಾಡಬಲ್ಲವನಾಗಿದ್ದು, ಅದು ಅವನ ಕೆಲಸದ ಗುಣಮಟ್ಟವನ್ನು ವೃದ್ಧಿಸುತ್ತಿತ್ತು ಮತ್ತು ಅದನ್ನು ಹೆಚ್ಚು ಅರ್ಥ‌‍ ಮಾಡಿಕೊಳ್ಳಲು ಸಾಧ್ಯ ವಾಗುತ್ತಿತ್ತು. ಕೈಗಾರಿಕಾ ಕ್ರಾಂತಿಯಲ್ಲಿ ಪ್ರಖ್ಯಾತಿ ಪಡೆದ ಗಣ್ಯರಿಂದ ಅವನು ಹೆಚ್ಚು ಗೌರವವನ್ನು ಪಡೆದಿದ್ದನು. ಅವನು ಲೂನಾರ್ ಸಮಾಜದಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದವನಾಗಿದ್ದನು ಮತ್ತು ಎಲ್ಲರೂ ಕೇಳಬಯಸುವಂತಹ ಮಾತುಗಾರನಾಗಿದ್ದನು, ಮತ್ತು ಯಾವತ್ತೂ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುವಲ್ಲಿ ಆಸಕ್ತನಾಗಿದ್ದನು. ಅವನ ವೈಯಕ್ತಿಕ ಸಂಬಂಧಗಳು ತಂದೆ-ತಾಯಿ ಮತ್ತು ಸ್ನೇಹಿತರೊಂದಿಗೆ ಯಾವಾಗಲೂ ಹಿತವಾಗಿಯೂ ಮತ್ತು ದೀರ್ಘಕಾಲದವರೆಗೂ ಇದ್ದವು.
  • ವ್ಯಾಟ್ ಒಬ್ಬ ಸಮೃದ್ಧವಾಗಿ ಬರೆಯಬಲ್ಲವನಾಗಿದ್ದನು. ಕಾರ್ನ್‌ವಾಲ್‌‌‍ನಲ್ಲಿರುವ ವರ್ಷಗಳಲ್ಲಿ ಅವನು ಬೌಲ್ಟನ್‌ಗೆ ಪ್ರತಿ ವಾರವೂ ಅನೇಕ ಸುದೀರ್ಘ ಪತ್ರಗಳನ್ನು ಬರೆದನು. ಅವನು ತನ್ನ ವೈಜ್ಞಾನಿಕ ಸಂಶೋಧನೆಯ ಫಲಿತಾಂಶಗಳನ್ನು ಪತ್ರಿಕೆಗಳಲ್ಲಿ, ಉದಾಹರಣೆಗೆ ರಾಯಲ್ ಸಮಾಜದ ಫಿಲಾಸಫಿಕಲ್ ಟ್ರಾನ್ಸ್ಯಾಕ್ಷನ್ಸ್‌ದಲ್ಲಿ, ಪ್ರಕಟಿಸಲು ನಿರಾಕರಿಸುತ್ತಿದ್ದನು. ಪ್ರತಿಯಾಗಿ ಹಕ್ಕು ಸ್ವಾಮ್ಯತೆಯನ್ನು ಪಡೆದುಕೊಳ್ಳುವ ಮೂಲಕ ಹೇಳಲು ಬಯಸುತ್ತಿದ್ದನು.
  • ಅವನು ವ್ಯವಹಾರಿಕ ಮನಸ್ಥಿತಿಯನ್ನು ಹೊಂದಿರಲಿಲ್ಲ ಮತ್ತು ಮುಖ್ಯವಾಗಿ ಚೌಕಾಸಿತನವನ್ನು ವಿರೋಧಿಸುತ್ತಿದ್ದ. ಉಗಿ ಎಂಜಿನ್ ಬಳಸಲು ಬಯಸುವ ಗ್ರಾಹಕರೊಂದಿಗೆ ಸಂಧಾನ ಅಥವಾ ಚೈಕಾಸಿ ಮಾಡುವುದನ್ನು ಅವನ್ನು ದ್ವೇಷಿಸುತ್ತಿದ್ದನು. ಅವನ ನಿವೃತ್ತಿಯವರೆಗೂ ತನ್ನ ಆರ್ಥಿಕ ವ್ಯವಹಾರಗಳ ಬಗ್ಗೆ ಗಮನ ಹರಿಸುತ್ತಿದ್ದ ಮತ್ತು ಕೆಲವು ಚಿಂತೆಗಳು ಕಾಡುತ್ತಿದ್ದವು. ಆಗಿಂದಾಗ್ಗೆ ಅವನ ಆರೋಗ್ಯ ಕ್ಷಿಣಿಸುತ್ತಿತ್ತು. ಅವನು ಪದೇ ಪದೇ ತಲೆನೋವು ಮತ್ತು ಖಿನ್ನತೆಗೆ ಗುರಿಯಾದನು.

ಉಗಿಯೊಂದಿಗಿನ ಆರಂಭಿಕ ಪ್ರಯೋಗಗಳು

ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ 
ಬೌಲ್ಟನ್ ಮತ್ತು ವ್ಯಾಟ್‌ನಿಂದ 1774 ಹವಾ ಯಂತ್ರದ ವಿನ್ಯಾಸದ ಚಿತ್ರಣ.
  • ನಾಲ್ಕು ವರ್ಷಗಳ ನಂತರ ವ್ಯಾಟ್ ತನ್ನ ಕಾರ್ಯಗಾರವನ್ನು ಆರಂಭಿಸಿದನು. ಅವನ ಸ್ನೇಹಿತ, ಪ್ರಾಧ್ಯಾಪಕ ಜಾನ್ ರೊಬಿಸನ್ ಉಗಿಯನ್ನು ಶಕ್ತಿಯ ಮೂಲವಾಗಿ ಬಳಸಲು ಅವನ ಗಮನವನ್ನು ಸೆಳೆದ ಮತ್ತು ಇದರೊಂದಿಗೆ ವ್ಯಾಟ್ ಪ್ರಯೋಗ ಆರಂಭಿಸಿದ. ವ್ಯಾಟ್ ಕಾರ್ಯ ನಿರತ ಉಗಿ ಎಂಜಿನ್ ಅನ್ನು ಹಿಂದೆಂದೂ ನೋಡಿರಲಿಲ್ಲ. ಆದರೆ ಮಾದರಿಯನ್ನು ರೂಪಿಸಲು ಪ್ರಯತ್ನಿಸಿದ. ಇದು ತೃಪ್ತಿಕರವಾಗಿ ಕೆಲಸ ಮಾಡದೆ ವಿಫಲವಾಯಿತು. ಆದರೆ ಅವನು ತನ್ನ ಪ್ರಯೋಗಗಳನ್ನು ಮುಂದುವರಿಸಿದನು ಮತ್ತು ವಿಷಯದ ಬಗ್ಗೆ ಎಲ್ಲವನ್ನು ಓದಲು ಆರಂಭಿಸಿದನು. *ಎಂಜಿನ್‌ನಲ್ಲಿ ಅಡಗಿದ ಶಾಖದ ಪ್ರಾಮುಖ್ಯತೆಯನ್ನು ಅನ್ನು ಅರ್ಥಮಾಡಿಕೊಂಡು ಸ್ವತಂತ್ರವಾಗಿ ಸಂಶೋಧಿಸಿದನು. ಅವನಿಗೆ ತಿಳಿಯದ ವಿಷಯಗಳನ್ನು ಕೆಲವು ವರ್ಷಗಳ ಹಿಂದೆ ಬ್ಲಾಕ್‌ನ ಪ್ರಸಿದ್ದ ಸಂಶೋಧನೆಯಿಂದ ಪಡೆದನು. ಅವನು ವಿಶ್ವವಿದ್ಯಾಲಯದ ನ್ಯೂಕಮೆನ್ ಎಂಜಿನ್‌ನಿಂದ ಕಲಿತನು, ಆದರೆ ಅದು ದುರಸ್ತಿಗಾಗಿ ಲಂಡನ್‌ನಲ್ಲಿತ್ತು. ವ್ಯಾಟ್ ವಿಶ್ವವಿದ್ಯಾಲಯದಿಂದ ಅದನ್ನು ಹಿಂಪಡೆದನು. ೧೭೬೩ರಲ್ಲಿ ಸರಿಪಡಿಸಿದನು.
*ಅವನು ಹೆಚ್ಚು ಮುಚ್ಚುಮರೆಯಿಲ್ಲದೇ ಕೆಲಸ ಮಾಡಿದ ಮತ್ತು ತೀವ್ರ ಪ್ರಯೋಗದ ನಂತರ ಉಗಿಯ ಶಾಖ ಶೇ.80ರಷ್ಷು ಸಿಲಿಂಡರನ್ನು ಬಿಸಿಮಾಡಲು ಉಪಯೋಗವಾಗುತ್ತದೆ, ಏಕೆಂದರೆ ತಣ್ಣೀರಿನ ಪ್ರಭಾವದಿಂದ ಹಬೆಯು ಘನೀರಿಸುತ್ತದೆ. ಅವನ ವಿಮರ್ಶಾತ್ಮಕ ಅಂತರ್ದೃಷ್ಟಿಯ ಕಾರಣದಿಂದ, ಸಿಲಿಂಡರ್‌‌ನಲ್ಲಿ  ಮೊದಲಿನಷ್ಟೇ ಪ್ರಮಾಣದ ತಾಪಮಾನವನ್ನು ತಾಪಮಾನವನ್ನು ಕಾಪಾಡಲು ಹಬೆಯನ್ನು ಪ್ರತ್ಯೇಕ ಕೊಠಡಿಗಳಲ್ಲಿ ಅಂದರೆ ಪಿಸ್ಟನ್‌ಗಳಲ್ಲಿ ಸಂಗ್ರಹಿಸಲಾಯಿತು. ಅವನು 1765ರಿಂದ ತ್ವರಿತವಾಗಿ ಕೆಲಸದ ಮಾದರಿಯನ್ನು ತಯಾರಿಸಿದನು.  
  • ಈಗ ಪೂರ್ಣಪ್ರಮಾಣದ ಎಂಜಿನ್‌ನನ್ನು ಉತ್ಪಾದಿಸಲು ಸುದೀರ್ಘ ಹೋರಾಟ ನಡೆಯಿತು. ಇದಕ್ಕೆ ಹೆಚ್ಚು ಬಂಡವಾಳ ಬೇಕಾಗಿತ್ತು, ಕೆಲವರು ಬ್ಲಾಕ್ ಕಡೆಯಿಂದ ಬಂದವರಾಗಿದ್ದರು. ಫಾಲ್‌ಕಿರ್ಕ್‌ನ ಹತ್ತಿರದ ಪ್ರಸಿದ್ದವಾದ ಕ್ಯಾರೊನ್ ಐರನ್ ವರ್ಕ್ಸ್‌‍ನ ಸಂಸ್ಥಾಪಕ ಜಾನ್‌ರಿಬುಕ್ ಅವರ ಪಾಲುದಾರಿಕೆಯಿಂದ ದೊಡ್ಡ ಪ್ರಮಾಣದ ಬೆಂಬಲ ದೊರೆತಿತು. ಆದರೆ ಪಿಸ್ಟನ್ ಮತ್ತು ಸಿಲಿಂಡರ್‌‌ನ್ನು ಯಂತ್ರಕ್ಕೆ ಅಳವಡಿ ಸುವುದು ಪ್ರಮುಖ ಸಮಸ್ಯೆಯಾಗಿತ್ತು.
  • ಪ್ರತಿದಿನದ ಕಬ್ಬಿಣದ ಕೆಲಸಮಾಡಲು ಮೆಶಿನಿಸ್ಟ್‌ಗಳಿಗಿಂತ ಕಬ್ಬಿಣದ ಕುಲುಮೆಲ್ಲಿ ಕೆಲಸಮಾಡುವವರೇ ಹೆಚ್ಚು ಇಷ್ಟಪಡುತ್ತಿದ್ದರು, ಅದ್ದರಿಂದ ಬಯಸಿದ್ದಕ್ಕಿಂತ ಹೆಚ್ಚು ಪ್ರಯೋಜನವಾಗಲಿಲ್ಲ. ಭೂಮಿಯನ್ನು ಒಡೆಯುವ ಹಕ್ಕುಸ್ವಾಮ್ಯ ಪಡೆಯಲು ಹೆಚ್ಚು ಬಂಡವಾಳ ಖರ್ಚು ಮಾಡಲಾಯಿತು. ಸಂಪನ್ಮೂಲಗಳನ್ನು ಸರಿತೂಗಿಸಲು ವ್ಯಾಟ್ ಸರ್ವೇಯರ್ ಕೆಲಸಕ್ಕೆ ಸೇರಲು ಬಯಸಿದನು ನಂತರ ಸಿವಿಲ್ ಇಂಜಿನಿಯರ್ಅಗಿ ಎಂಟು ವರ್ಷಗಳು ಕೆಲಸ ಮಾಡಿದನು.
  • ರೋಬಕ್‌ನು ದಿವಾಳಿಯಾದನು, ಮತ್ತು ಬಿರ್ಮಿ‍ನ್‌ಗ್ಯಾಮ್ ಹತ್ತಿರದ ಸೋಹೊ ಫೌಡರಿಯ ಒಡೆಯ ಮ್ಯಾಥ್ಯೂ ಬೌಲ್ಟನ್‌ ಅವನ ಹಕ್ಕುಸ್ವಾಮ್ಯವನ್ನು ಪಡೆದುಕೊಂಡನು. ಹಕ್ಕುಸ್ವಾಮ್ಯವನ್ನು ೧೮೦೦ ರ ವರೆಗೆ ಮುಂದುವರಿಸಲು ೧೭೭೫ ರಲ್ಲಿ ಒಪ್ಪಿಗೆ ಪಡೆಲಾಯಿತು.
  • ಕೊನೆಗೆ ವ್ಯಾಟ್ ಪ್ರಪಂಚದ ಕೆಲವು ಅತ್ಯುತ್ತಮ ಕಬ್ಬಿಣದ ಕೆಲಸಗಾರರಲ್ಲಿ ಗುರುತಿಸಿಕೊಂಡರು. ಕಷ್ಟವಾದ ದೊಡ್ಡ ಸಿಲಿಂಡರ್‌‌‌‍ನ ಜೊತೆಗೆ ಬಿಗಿಯಾಗಿ ಜೊಡಿಸಿದ ಪಿಸ್ಟನ್‌ ತಯಾರಿಸುವುದನ್ನು ಜಾನ್ ವಿಲ್ಕಿ‌ಸನ್‌ನು ನಿವಾರಿಸಿದನು. ಇವನು ಬೆರ್ಶ್ಯಾಮ್‌ನ ರೆಕ್ಸ್‌‌ಹ್ಯಾಮ್ ಹತ್ತಿರದ ಉತ್ತರದ ವಲ್ಸ್‌ನಲ್ಲಿನ ಪಿರಂಗಿ ತಯಾರಿಸಲು ನಿಖರವಾಗಿ ತೂತು ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿನು.‌ ವ್ಯಾಟ್ ಮತ್ತು ಬೌಲ್ಟನ್ ರವರ ಪಾಲುದಾರಿಕೆಯು ಯಶಸ್ವಿಯಾಗಿ ಸುದೀರ್ಘವಾಗಿತ್ತು (ಬೌಲ್ಟನ್ ಮತ್ತು ವ್ಯಾಟ್), ಇವರ ಪಾಲುದಾರಿಕೆಯು ಮುಂದಿನ ಇಪ್ಪತೈದು ವರ್ಷಗಳಲ್ಲಿ ಕೊನೆಗೊಂಡಿತು.

ಮೊದಲ ಎಂಜಿನ್

  • ಕೊನೆಗೂ ೧೭೭೬ ರಲ್ಲಿ ಮೊದಲ ಎಂಜಿನ್‌ನ್ನು ಅಳವಡಿ ಸಲಾಯಿತು ಮತ್ತು ಅದು ಆರ್ಥಿಕೋಧ್ಯಮದಲ್ಲಿ ಕೆಲಸ ಮಾಡುತ್ತಿತ್ತು. ಈ ಮೊದಲ ಎಂಜಿನ್‌ಗಳನ್ನು ಪಂಪ್‌ಗಳಲ್ಲಿ ಉಪಯೋಗಿಸುತ್ತಿದ್ದರು ಮತ್ತು (ರೆಸಿಪ್ರೊಕೆಟಿಂಗ್) ಅಲ್ಲೇ ತಿರುಗಿ ಪಂಪ್‌ನ್ನು ಚಲಿಸುವಂತೆ ಮಾಡುವ ಕೆಳಗಿನ ಉದ್ದನೇಯ ವಸ್ತುಗಳಿಂದ ಉತ್ಪಾದನೆ ಮಾಡಲಾಗುತ್ತಿತ್ತು. ಎಂಜಿನ್‌ಗಾಗಿ ಬೇಡಿಕೆ ಹೆಚ್ಚಾಯಿತು, ನಂತರದ ಐದು ವರ್ಷಗಳು ಹೆಚ್ಚು ಎಂಜಿನ್‌ಗಳನ್ನು ಅಳವಡಿಸಲು ವ್ಯಾಟ್ ಕಾರ್ಯನಿರತನಾಗಿದ್ದನು. ಬಹುಶಃ ಕಾರ್ನ್‌ವಾಲ್‌‍ನಲ್ಲಿ ಗಣಿಗಳಿಂದ ನೀರನ್ನು ಹೊರಹಾಕಲು ಬಳಸುತ್ತಿದ್ದರು.
  • ಈ ಮೊದಲ ಎಂಜಿನ್‌ಗಳನ್ನು ಬೊಲ್ಟನ್ ಮತ್ತು ವ್ಯಾಟ್ ತಯಾರಿಸಿರಲಿಲ್ಲ, ಆದರೆ ವ್ಯಾಟ್‌‍ನು ಸಲಹಾ ಇಂಜಿನಿಯರಾಗಿ ಸೇವೆ ಸಲ್ಲಿಸುವಾಗ ರಚಿಸಿದ ರೇಖಾಚಿತ್ರಗಳ ಪ್ರಕಾರ ಬೇರೆಯವರಿಂದ ತಯಾರಿಸಲ್ಪಟ್ಟಿವೆ. ಎಂಜಿನನ್ನು ನಿಲ್ಲಿಸುವುದು ಮತ್ತು ಅಲ್ಲಡಿಸುವುಕೆಯ ಮೆಲ್ವಿಚಾರಣೆಯನ್ನು ಮೊದಲು ವ್ಯಾಟ್ ಮಾಡುತ್ತಿದ್ದನು, ನಂತರ ಅವನ ಉದ್ಯೋಗಿಗಳು ಮಾಡುತ್ತಿದ್ದನು. ಇವುಗಳು ದೊಡ್ಡ ಯಂತ್ರಗಳಾಗಿದ್ದವು.
  • ಮೊದಲ ಉದಾಹರಣೆಯೆಂದರೆ, ೫೦ ಅಂಗುಲ ವ್ಯಾಸ ಮತ್ತು ಒಟ್ಟು ಉದ್ದ 24 ಅಡಿಗಳ ಸಿಲಿಂಡರ್ ಇರುತ್ತಿತ್ತು ಮತ್ತು ಮನೆಯಲ್ಲಿ ನಿರ್ಮಿಸಲು ಅವಶ್ಯಕತೆಗೆ ತಕ್ಕ ಗಾತ್ರದಲ್ಲಿ ರೂಪಿಸುತ್ತಿದ್ದರು. ನ್ಯೂಕಾಮೆನ್ ಎಂಜಿನ್ ಕೆಲಸ ಮಾಡಲು ಬಳಸುವ ವಾರ್ಷಿಕ ಕಲ್ಲಿದ್ದಲ ಉಳಿತಾಯದ ಮೂರನೇ ಒಂದು ಭಾಗದ ಆಧಾರದ ಮೇಲೆ ಕಂಪನಿಯು ವೇತನವನ್ನು ನಿಗದಿ ಮಾಡುತ್ತಿತ್ತು.
ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ 
*೧೮೪೮ರಲ್ಲಿ ಹವಾಯಂತ್ರವನ್ನು ಜೇಮ್ಸ್‌ ವ್ಯಾಟ್‌ನ ಹಕ್ಕು ಸ್ವಾಮ್ಯಕ್ಕಾಗಿ ರಲ್ಲಿ ಜರ್ಮನಿಯ ಫ್ರೈಬರ್ಗ್‌ನಲ್ಲಿ ನಿರ್ಮಿಸಲಾಯಿತು.

ರುಬ್ಬುವ ಮತ್ತು ನೇಯುವುದಕ್ಕಾಗಿ ಪಿಸ್ಟನ್‌ನ ರೆಸಿಪ್ರೊಕೆಟಿಂಗ್ ಚಲನೆಯನ್ನು ತಿರುಗುವ ಶಕ್ತಿಯಾಗಿ ಪರಿವರ್ತಿಸಲು ಬೊಲ್ಟನ್‌‌ನು ವ್ಯಾಟ್‌ನನ್ನು ಪ್ರೇರೆಪಿಸಿದ ನಂತರ ಸಂಶೋಧನೆಯ ಉಪಯೋಗದ ಕ್ಷೇತ್ರ ಹೆಚ್ಚು ವ್ಯಾಪಕತೆಯನ್ನು ಪಡೆಯಿತು.ಆದಾಗ್ಯೂ ನೇರಚಲನೆಯನ್ನು ವೃತ್ತಾಕಾರವಾಗಿ ಪರಿವರ್ತಿಸುವ ಉಪಕರಣದ ತಾರ್ಕಿಕತೆಯ ಉಪಯೋಗವನ್ನು ತೋರಿದ ಬದಲಾವಣೆಯು, ಹಕ್ಕುಸ್ವಾಮ್ಯವನ್ನು ಯಾರ ಹೆಸರಲ್ಲಿ ಪಡೆಯಬೇಕೆಂದು ವ್ಯಾಟ್ ಮತ್ತು ಬೊಲ್ಟನ್‌ರಿಗೆ ಕಷ್ಷವಾಯಿತು. ಜೇಮ್ಸ್ ಪಿಕ್ಕರ್‌ಡ್ ಮತ್ತು ಜೊತೆಗಾರರು ಹೊರಗಿನ ಕಂಡನ್ಸರ್‌ಗೆ ಇಬ್ಬರ ಹೆಸರಿನಲ್ಲೂ ಪರವಾನಗಿ ಪಡೆಯಲು ಹೇಳಿದರು.

  • ವ್ಯಾಟ್ ಇದನ್ನು ಧೃಡವಾಗಿ ವಿರೋಧಿಸಿನು ಮತ್ತು 1781ರಲ್ಲಿ ಅವನ ಸನ್ ಅಂಡ್ ಪ್ಲನೆಟ್ ಗೇರ್ ನಿಂದ ಹಕ್ಕುಸ್ವಾಮ್ಯದಿಂದ ತಪ್ಪಿಸಿಕೊಂಡನು. ನಂತರದ ಆರು ವರ್ಷಗಳಲ್ಲಿ ಅವನು ಉಗಿ ಎಂಜಿನ್‌ನಲ್ಲಿ ಅನೇಕ ಸುಧಾರಣೆಗಳನ್ನು ಮತ್ತು ಮಾರ್ಪಾಡುಗಳನ್ನು ಮಾಡಿದನು.

ದ್ವಿಪಾತ್ರ ವಹಿಸುವ ಎಂಜಿನ್‌ನಲ್ಲಿ ಉಗಿಯು ಒಂದು ಪಿಸ್ಟನ್‌ನ ಎರಡು ಕಡೆಯೂ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಉಗಿಯು "ವಿಸ್ತಾರವಾಗುವ"(ಅಂದರೇ ಮೇಲಿನ ಸನ್ನಿವೇಶದಲ್ಲಿ ಉಪಯೋಗಿಸುವ ಉಗಿಯ ಉತ್ತಮ ಒತ್ತಡ) ಕಾರ್ಯದ ವಿಧಗಳನ್ನು ಅವನು ವಿವರಿಸಿದನು. ಸಂಯುಕ್ತ ಎಂಜಿನ್ ಎರಡು ಅಥವಾ ಅದಕ್ಕಿಂತ ಹೆಚ್ಚು ಎಂಜಿನ್‌ಗಳನ್ನು ಕೂಡಿಸಿ ನಿರೂಪಿಸಲಾಗುತಿತ್ತು.

  • ಇವುಗಳಿಗೆ ೧೭೮೧ ಮತ್ತು ೧೭೮೨ ರಲ್ಲಿ ಇನ್ನೂ ಎರಡು ಹಕ್ಕುಸ್ವಾಮ್ಯಗಳನ್ನು ನೀಡಲಾಯಿತು. ಅನೇಕ ಇತರ ಸುಧಾರಣೆಗಳಿಂದ ಉತ್ಪಾದನೆ ಸುಲಭವಾಯಿತು ಮತ್ತು ನಿರಂತರ ಅಳವಡಿಕೆ ಮಾಡಲಾಯಿತು. ಘನ ಅಳತೆಯ ವಿರುದ್ಧ ಒತ್ತಡವನ್ನು ಸೂಚಿಸುವ ಉಗಿಯ ಇಂಡಿಕೇಟರ್‌ನ ಉಪಯೋಗವೂ ಇವುಗಳಲ್ಲೊಂದಾಗಿದೆ, ಅವನು ಇದನ್ನು ವ್ಯಾಪಾರದ ರಹಸ್ಯವಾಗಿ ಇಡುತ್ತಾನೆ. ವ್ಯಾಟ್ ಬಹಳ ಗರ್ವದಿಂದ ಹೇಳುವ ಮತ್ತೊಂದು ಮುಖ್ಯವಾದ ಸಂಶೋಧನೆಯೆಂದರೆ, ದ್ವಿಪಾತ್ರ ವಹಿಸುವ ಎಂಜಿನ್‌ಗೆ ಅತಿ ಮುಖ್ಯವಾಗಿ ಬೇಕಾದ ಸಮತಲ ಚಲನೆಯು ಸರಳರೇಖೆಯಲ್ಲಿ ಚಲನೆಯನ್ನು ಉತ್ಪಾದಿಸುತ್ತದೆ. ಇದಕ್ಕೆ ಗಟ್ಟಿಯಾದ ಹೆಟ್ಟಿಗೆಗೆ ಸಿಲಿಂಡರ್‌ನ ಕಡ್ಡಿ ಮತ್ತು ಪಂಪ್‌ನ್ನು ಅಳವಡಿಸಲಾಗಿರುತ್ತದೆ, ಇದರ ಕೊನೆಯು ವೃತ್ತಕಾರವದ ಬಾಗುವಿಕೆಯಲ್ಲಿ ಚಲಿಸುತ್ತದೆ.
  • ಇದನ್ನು ೧೭೮೪ರಲ್ಲಿ ಹಕ್ಕುಸ್ವಾಮ್ಯಗೊಳಿಸಲಾಯಿತು. ನಿಯಂತ್ರಕ ಕವಾಟವು ಇಂಜಿನ್‌ನ ಶಕ್ತಿಯನ್ನು ತಡೆಯುತ್ತದೆ, ಮತ್ತು ಸೆಂಟ್ರಿಫುಗಲ್ ಗವರ್ನರ್ 1788 ರಲ್ಲಿ ಹಕ್ಕುಸ್ವಾಮ್ಯ ಪಡೆಯಿತು, ಇದನ್ನು ಚಾಲನೆಯಲ್ಲಿಯೇ ಇಡುವುದು ಬಹಳ ಮುಖ್ಯವಾಗಿತ್ತು. ಈ ಬೆಳವಣಿಗೆಗಳು ಎಂಜಿನ್‌ನ ಉತ್ಪಾದನೆಯಲ್ಲಿ ಐದು ಪಟ್ಟು ಹೆಚ್ಚು ದಕ್ಷವಾಗಿ ಇಂಧನ ಬಳಕೆಯಾಗುವ ನ್ಯೂಕಮೆನ್‌ ಎಂಜಿನ್‌ಗಳ ರೀತಿಯಲ್ಲಿ ಎಂಜಿನ್‌ಗಳನ್ನು ಉತ್ಪಾಸಲಾಯಿತು.
  • ಪ್ರಾರಂಭಿಕ ಹಂತದಲ್ಲಿ ಅಭಿವದ್ಧಿಪಡಿಸಿದ ಬಾಯ್ಲರ್‌ಗಳು, ಆಗಿಂದಾಗ್ಗೆ ಸೋರುವಿಕೆಯಿಂದ ಸ್ಪೋಟಗೊಂಡು ಅಪಾಯವನ್ನುಂಟು ಮಾಡುತ್ತಿದ್ದವು, ಇದರಿಂದ ವ್ಯಾಟ್ ಹೆಚ್ಚು ಒತ್ತಡದ ಉಗಿಯ ಉಪಯೋಗವನ್ನು ನಿಲ್ಲಿಸಿದನು. ಅವನ ಎಲ್ಲಾ ಇಂಜಿನ್‌ಗಳಲ್ಲಿ ಉಗಿಯನ್ನು ಹತ್ತಿರದ ವಾತಾವರಣದ ಒತ್ತಡಕ್ಕೆ ತಕ್ಕಂತೆ ಬಳಸಿದನು. ೧೭೯೪ ರಲ್ಲಿ ಬೊಲ್ಟನ್ ಮತ್ತು ವ್ಯಾಟ್‌ರ ಪಾಲುದಾರಿಕೆಯಲ್ಲಿ ಪ್ರತ್ಯೇಕವಾಗಿ ಉಗಿ ಎಂಜಿನ್‌ಗಳನ್ನು ತಯಾರಿಸಿದರು, ಮುಂದೆ ಇದು ದೊಡ್ಡ ಉದ್ಯಮವಾಯಿತು.

೧೮೨೪ರಿಂದ ೧೧೬೪ ಎಂಜಿನ್‌ಗಳನ್ನು ಉತ್ಪಾದಿಸಿ ೨೬,೦೦೦ ನಾಮಮಾತ್ರ ಅಶ್ವಶಕ್ತಿಯನ್ನು ಪಡೆದರು. ಬೊಲ್ಟನ್ ಒಬ್ಬ ಅತ್ಯುತ್ತಮ ವ್ಯಾಪಾರಸ್ಥನೆಂದು ಸಾಬೀತು ಮಾಡಿದನು, ಮತ್ತು ಇಬ್ಬರು ಕೊನೆಗೆ ಸಂಪತ್ತನ್ನು ಗಳಿಸಿದರು.

ಹಕ್ಕುಸ್ವಾಮ್ಯದ ವಿಚಾರಣೆ

  • ೧೭೮೧ ರಲ್ಲಿ ಎಡ್ವರ್ಡ್ ಬುಲ್ ನೇರವಾದ ಎಂಜಿನ್‌ಗಳನ್ನು ಬೊಲ್ಟನ್ ಮತ್ತು ವ್ಯಾಟ್‌ಗಾಗಿ ಕಾರ್ನ್‌ವಾಲ್‌ನಲ್ಲಿ ಪ್ರಾರಂಭಿಸಿದನು. ೧೭೯೨ ರಿಂದ ಅವನ ಸ್ವಂತ ವಿನ್ಯಾಸದಲ್ಲಿ ಎಂಜಿನ್‌ಗಳನ್ನು ತಯಾರಿಸುತ್ತಿದ್ದ, ಆದರೆ ಅದು ಪ್ರತ್ಯೇಕ ಕಂಡೆನ್ಸರ್ ಹೊಂದಿತ್ತು, ಮತ್ತು ವ್ಯಾಟ್‌ನ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿತು. ಜಬೆಜ್ ಕರ್ಟೆರ್ ಹರ್ನ್‌ಬ್ಲೋವೆರ್ ಮತ್ತು ಜೊನತನ್ ಹರ್ನ್‌ಬ್ಲೋವೆರ್ ಜೆ‌ಎನ್‌ಆರ್ ಎಂಬ ಸಹೋದರರು ಸಹ ನೇರ ಎಂಜಿನ್‌ಗಳನ್ನು ಇದೇ ಸಮಯದಲ್ಲಿ ಆರಂಭಿಸಿದರು. ಬೇರೆಯವರು ಸಹ ನ್ಯೂಕಮೆನ್ ಎಂಜಿನ್‌ಗಳಿಗೆ ಕಂಡೆನ್ಸರ್‌ನ್ನು ಸೇರಿಸಿ, ಪರಿವರ್ತಿಸಲು ಆರಂಭಿಸಿದರು, ಕಾರ್ನ್‌ವಾಲ್‌ನ ಮುಖ್ಯ ಮಾಲಿಕರನ್ನು ಒಪ್ಪಿಸಿದರು. ವ್ಯಾಟ್‌ನ ಹಕ್ಕುಸ್ವಾಮ್ಯವು ಸಹ ಒತ್ತಾಯ ಮಾಡಲಿಲ್ಲ.
  • ಬೊಲ್ಟನ್ ಮತ್ತು ವ್ಯಾಟ್‌ರಿಂದಾಗಿ ಅವರು ವೇತನ ನೀಡವುದನ್ನು ತಡೆ ಹಿಡಿದರು. ಏಕೆಂದರೆ ಇವರ ಆದಾಯ ಇಳಿಮುಖವಾಗಿದ್ದು, ೧೭೯೫ ರಿಂದ ೨೧,೦೦೦ ಪೌಂಡ್ ನಿಂದ ೨೫೦೦ ಪೌಂಡ್ ಪಡೆದಿರುತ್ತಾರೆ. ತನ್ನ ಹಕ್ಕಿಗಾಗಿ ವ್ಯಾಟ್ ರಭಸದಿಂದ ನ್ಯಾಯಾಲಯಕ್ಕೆ ಹೋಗಿ ಒತ್ತಾಯಿಸಲು ಸಿದ್ದನಿದ್ದ. ಅವನು ೧೭೯೩ರಲ್ಲಿ ಮೊದಲು ಬುಲ್ ಮೇಲೆ ದಾವೆ ಹೂಡಿದ್ದ. ತೀರ್ಪುಗಾರರ ಸಮಿತಿಯು ವ್ಯಾಟ್‌ನನ್ನು ಗುರುತಿಸಿದವು.
  • ಆದರೆ ಪ್ರಶ್ನೆ ಎಂದರೆ ಹಕ್ಕುಸ್ವಾಮ್ಯದ ಮೂಲ ಅಥವಾ ಅಲ್ಲದ ನಿರ್ದಿಷ್ಟ ವಿವರಣೆಯ ಕಾಲಾವದಿಯು ಮುಗಿದು ಮತ್ತೊಂದು ವಿಚಾರಣೆಗೆ ಅವಕಾಶವಿತ್ತು. ಈ ಮಧ್ಯೆ ವೇತನ ನೀಡಲು ನಿರಾಕರಿಸಿದವರ ಮೇಲೆ ನಿಷೇಧಾದೇಶಗಳನ್ನು ಹೊರಡಿಸಿ, ವೇತನ ನೀಡುವವರೆಗೂ ರಾಜತ್ವದ ಭರವಸೆಯ ಕಾಗದ ಪತ್ರಗಳನ್ನು ಪಡೆಯಿತು. ವಿಶಿಷ್ಟ ವಿವರಣ ಕಾಲಾವಧಿಯ ನಿರ್ಧಾರದ ಮೇಲಿನ ವಿಚಾರಣೆಗಳು ಮುಂದಿನ ವರ್ಷದಲ್ಲಿ ಅನಿಶ್ಚಿತ, ಆದರೆ ಒತ್ತಡ ಮತ್ತು ಉಲ್ಲಘಂನೆಗಳಿಂದ ನಿಷೇಧಾದೇಶಗಳು ಇನ್ನೂ ಉಳಿದಿವೆ.
  • ಜೋನತನ್ ಹೊರ್ನ್‌ಬ್ಲೋವರರನ್ನು ಬಿಟ್ಟು ಉಳಿದ ಎಲ್ಲಾ ಮೊಕದ್ದಮೆಗಳು ಇತ್ಯರ್ಥವಾಗಿದ್ದವು. ಹಾರ್ನ್‌ಬ್ಲೊವರ್ ವಿಚಾರಣೆಯನ್ನು ಬೇಗ ತಂದನು.೧೭೯೯ ರಲ್ಲಿ ನಾಲ್ಕು ನ್ಯಾಯವಾದಿಗಳು ವ್ಯಾಟ್‌ನ ಪರವಾಗಿ ದೃಢವಾದ ತೀರ್ಪುನ್ನು ನೀಡಿದರು. ಬೌಲ್ಟನ್ ಮತ್ತು ವ್ಯಾಟ್ ಅವರು ಸಾಲದ ಹೊರೆಯನ್ನು ಶೇಖರಿಸಿಯೇ ಇರಲಿಲ್ಲ, ಆದರೆ ವ್ಯಾಜ್ಯಗಳನ್ನೆಲ್ಲ ನೇರವಾಗಿ ಮಧ್ಯಸ್ಥಿಕೆಯ ಅಥವಾ ದಲ್ಲಾಳಿಗಳಿಂದಲೇ ಇತ್ಯರ್ಥಮಾಡಿಕೊಂಡರು. ಈ ವಿಚಾರಣೆಗಳಿಗೆಲ್ಲಾ ಹೆಚ್ಚು ಸಮಯ ಮತ್ತು ಹಣ ವೆಚ್ಚವಾಯಿತು, ಆದರೆ ಅಂತಿಮವಾಗಿ ತಮ್ಮ ವ್ಯವಹಾರದಲ್ಲಿ ಯಶಸ್ಸು ಪಡೆದರು.

ನಕಲು ಮಾಡುವ ಯಂತ್ರ

  • ೧೭೮೦ರ ಹಿಂದೆ ಪತ್ರಗಳು ಅಥವಾ ಚಿತ್ರಗಳನ್ನು ನಕಲು ಮಾಡುವ ಉತ್ತಮ ವಿಧಾನವಿರಲಿಲ್ಲ. ಅನೇಕ ಲೇಖನಿಗಳನ್ನು ಸೇರಿಸಿ ಯಾಂತ್ರಿಕವಾಗಿ ಉಪಯೋಗಿಸುವ ಒಂದೇ ವಿಧಾನವಿತ್ತು. ಮೊದಲಿಗೆ ವ್ಯಾಟ್ ಈ ವಿಧಾನವನ್ನು ಪ್ರಯೋಗಿಸಿದನು, ಆದರೆ ಈ ವಿಧಾನ ಕಷ್ಷವಾಗಿದ್ದರಿಂದ ಹಿಂದೆ ಸರಿದನು. ಇದಕ್ಕೆ ಬದಲಾಗಿ ಭೌತಿಕವಾಗಿ ಶಾಯಿಯನ್ನು ಒಂದು ಮೂಲ ಹಳೆಯಿಂದ ಮತ್ತೊಂದು ಹಳೆಗೆ ವರ್ಗಾಯಿಸಲು ತಿರ್ಮಾನಿಸಿದನು. ಶಾಯಿಯು ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆಳುವಾಗಿ ಹೋಗಿ ಬರಹವು ನಿಕರವಾಗಿ ಮೂಡಿತು. ೧೭೭೯ ರಲ್ಲಿ ವ್ಯಾಟ್ ಈ ಪ್ರಕ್ರಿಯೆಯನ್ನು ಆರಂಭಿಸಿದನು ಮತ್ತು ಶಾಯಿಯನ್ನು ಸ್ಪಷ್ಟವಾಗಿ ನಿರೂಪಿಸಲು ಅನೇಕ ಪ್ರಯೋಗಗಳನ್ನು ಮಾಡಿದನು, ತೆಳುವಾದ ಕಾಗದ ಉಪಾಯದಿಂದ ವಿಶೇಷ ತೆಳು ಕಾಗದವನ್ನು ಆರಿಸಿ ಅದನ್ನು ಒದ್ದೆಮಾಡಿ ಅದನ್ನು ನಿಧಾನವಾಗಿ ಒತ್ತುವುದರ ಮೂಲಕ ಅದರ ಪರಿಣಾಮವನ್ನು ವರ್ಗಾಯಿಸುತ್ತಿದ್ದನು. ಇದಕ್ಕೆಲ್ಲಾ ಹೆಚ್ಚು ಪ್ರಯೋಗಗಳು ಅವಶ್ಯಕತೆಯಿದ್ದರೂ ಸಹ, ಅವನು ಅತಿ ಬೇಗ ಯಶಸ್ಸು ಸಾಧಿಸಿ ಈ ಪ್ರಕ್ರಿಯೆಗೆ ಒಂದು ವರ್ಷದ ನಂತರ ಹಕ್ಕುಸ್ವಾಮ್ಯ ಪಡೆದನು.
  • ಬೌಲ್ಟನ್(ಹಣಕಾಸು ಒದಗಿಸಿದಾತ) ಮತ್ತು ಜೇಮ್ಸ್ ಕೀರ್(ವ್ಯಾಪಾರ ನಿರ್ವಾಹಣೆಗೆ)ರೊಂದಿಗೆ ವ್ಯಾಟ್ ಮತ್ತೊಂದು ಪಾಲುದಾರಿಕೆಯನ್ನು ಮಾಡಿಕೊಂಡು ಈ ವ್ಯಾಪಾರಕ್ಕೆ ಜೇಮ್ಸ್ ವ್ಯಾಟ್ ಮತ್ತು ಕಂ ಎಂದು ಕರೆದ. ಬೇರೆಯವರು ದಿನನಿತ್ಯದಂತೆ ಉಪಯೋಗಿಸುವ ಮೊದಲೇ ಸಂಶೋಧನೆಯ ಸಮಗ್ರತೆಗೆ ಹೆಚ್ಚು ಹೆಚ್ಚು ಅಭಿವೃದ್ಧಿ ಬೇಕಾಗಿದೆ ಆದರೆ ಇದು ಇನ್ನಷ್ಷು ವರ್ಷಗಳು ಮುಂದಕ್ಕೆ ಹೋಗುತ್ತದೆ.೧೭೯೪ ರಲ್ಲಿ ಬೌಲ್ಟನ್ ಮತ್ತು ವ್ಯಾಟ್ ಅವರ ಷೇರುಗಳನ್ನು ಅವರ ಪುತ್ರರಿಗೆ ನೀಡಿದರು. ಇದು ಆರ್ಥಿಕವಾಗಿ ಯಶಸ್ಸು ಸಾಧಿಸಿದೆ ಮತ್ತು ಇಪ್ಪತ್ತನೇಯ ಶತಮಾನದಲ್ಲೂ ಕಛೇರಿಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ.

ರಾಸಾಯನಿಕ ಪ್ರಯೋಗಗಳು.

  • ವ್ಯಾಟ್‌ಗೆ ಚಿಕ್ಕಂದಿನಿಂದಲೂ ರಸಾಯನ ವಿಜ್ಞಾನದಲ್ಲಿ ಆಸಕ್ತಿಯಿತ್ತು. ೧೭೮೬ ರ ನಂತರ ಪ್ಯಾರೀಸ್‌ನಲ್ಲಿರುವಾಗ ಹೈಡ್ರೊಕ್ಲೋರಿಕ್ ಆಮ್ಲದ ಮತ್ತು ಮ್ಯಾಂಗನಿಸ್ ಡೈಆಕ್ಸೈಡ್ ನಿಂದ ಕ್ಲೊರಿನ್ ಅನ್ನು ಉತ್ಪಾದಿಸಿದ ಪ್ರಯೋಗವನ್ನು ಬೆರ್ತೊಲ್ಲೆಟ್ ನಿಂದ ಮಾಡಿದ್ದನು.

ಎಕ್ವಿಯಸ್ ಸೊಲುಷನ್ಸ್ ನೀರಿನಲ್ಲಿ ಕರಗಿ ಬಟ್ಟೆಗಳನ್ನು ಶುಭ್ರಗೊಳಿಸುತ್ತದೆಂದು ಅವನು ಮೊದಲೇ ತಿಳಿದಿದ್ದನು, ಮತ್ತು ಅವನು ಕಂಡುಹಿಡಿದಿದ್ದನ್ನು ಪ್ರಚಾರ ಮಾಡಿದನು, ಸಾಮರ್ಥ್ಯ ಹೊಂದಿದ ಎದುರಾಳಿಗಳ ಮಧ್ಯೆ ತನ್ನ ಅಪಾರ ಆಸಕ್ತಿಯನ್ನು ಹೊರದಬ್ಬಿದನು. ವ್ಯಾಟ್ ಬ್ರಿಟನ್‌ಗೆ ಹಿಂತಿರುಗಿ ಈ ಅನುಭವ ಮತ್ತು ಕಂಡುಹಿಡಿಯುವ ನಂಬಿಕೆಗಳ ಜೊತೆಗೆ ಅವನು ಪ್ರಯೋಗಗಳನ್ನು ಪ್ರಾರಂಭಿಸಿ, ಆರ್ಥಿಕ ಸುಗಮ ಪ್ರಕ್ರಿಯೆಗೆ ಚಾಲನೆ ನೀಡಿದನು.

  • ಉಪ್ಪು, ಮ್ಯಾಂಗನೀಸ್ ಡೈಆಕ್ಸೈಡ್ ಮತ್ತು ಸಲ್ಫೂರಿಕ್ ಆಕ್ಸೈಡ್‌ನ ಮಿಶ್ರಣವು ಕ್ಲೋರಿನ್‌ನನ್ನು ಉತ್ಪಾದಿಸುತ್ತದೆ ಎಂಬುದನ್ನು ಕಂಡು ಹಿಡಿದನು, ಹಾಗೆಯೇ ಕಡಿಮೆ ವೆಚ್ಚದಲ್ಲಿ ಆರಂಭಿಸಲು ಯೋಚಿಸಿದನು. ನೀರಿನಲ್ಲಿ ಕರಗುವ ದುರ್ಬಲವಾದ ದ್ರಾವಣದಲ್ಲಿ ಮತ್ತು ಟರ್ಬೈಡ್ ದ್ರಾವಣದಲ್ಲಿ ಕ್ಲೋರಿನ್‌ನ್ನು ಹರಿಸಿದನು ಇದರಿಂದ ಉತ್ತಮ ಶುಭ್ರಮಾಡುವ ಗುಣಗಳು ಕಂಡುಬಂದವು. ಈ ಫಲಿತಾಂಶವನ್ನು ಗ್ಲ್ಯಾಸ್ಗೋನಲ್ಲಿ ಶುಭ್ರಗೊಳಿಸುವ ಕೆಲಸ(ಬ್ಲಿಚರ್) ಮಾಡುವ ತನ್ನ ಚಿಕ್ಕಪ್ಪ ಮ್ಯಾಕ್‌ಗ್ರಿಗೊರ್‌ಗೆ ತಿಳಿಸಿದನು. ಇಲ್ಲದಿದ್ದರೆ ಅವನು ಅವನ ವಿಧಾನವನ್ನು ರಹಸ್ಯ ವಾಗಿಟ್ಟುಕೊಳ್ಳಲು ಯತ್ನಿಸಿದನು.
  • ಮ್ಯಾಕ್‌ಗ್ರಿಗೊರ್ ಅವನ ಪತ್ನಿ ಅನ್ನೀ ಜೊತೆ ಸೇರಿ ಈ ಪ್ರಕ್ರಿಯೆಯನ್ನು ಆರಂಭಿಸಿದನು. ೧೭೮೮ ರ ಮಾರ್ಚ್‌ನಲ್ಲಿ ಅವನ ತೃಪ್ತಿಗಾಗಿ ೧೫೦೦ ಗಜಗಳು ಉದ್ದದ ಬಟ್ಟೆಯನ್ನು ಶುಭ್ರಗೊಳಿಸಿದನು. ಆದಾಗ್ಯೂ ಇದೇ ಸಮಯಕ್ಕೆ ಉಪ್ಪು ಮತ್ತು ಸಲ್ಫೂರಿಕ್ ಆಮ್ಲದ ಮಾರ್ಗವನ್ನು ಬೆರ್ಥೊ‌ಲ್ಲೆಟ್ ಕಂಡು ಹಿಡಿದನು ಮತ್ತು ಸಾರ್ವಜನಿಕರ ತಿಳುವಳಿಕೆಗಾಗಿ ಅದನ್ನು ಪ್ರಚಾರ ಮಾಡಿದನು. ಇತರ ಅನೇಕರು ಈ ಪ್ರಯೋಗವನ್ನು ಆರಂಭಿಸುವುದರ ಜೊತೆಗೆ ಈ ಪ್ರಕ್ರಿಯೆಯನ್ನು ಬೆಳೆಸಿದರು, ಈಗಲೂ ಅನೇಕ ನ್ಯೂನ್ಯತೆಗಳು ಇವೆ.
  • ದ್ರವ ಪದಾರ್ಥಗಳ ಸಾಗಾಟದಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಅವನ ಪ್ರತಿಸ್ಪರ್ಧಿಗಳು ಪ್ರಕ್ರಿಯೆಯ ಬೆಳವಣಿಯಲ್ಲಿ ಅವನನ್ನು ಹಿಂದೆ ಬೀಳಿಸಿದರು ಮತ್ತು ಅವನು ಈ ಓಟವನ್ನು ಕೈ ಬಿಟ್ಟನು. ಇದು ಹೆಚ್ಚು ಕಾಲ ಉಳಿಯಲಿಲ್ಲ. ೧೭೯೯ರಲ್ಲಿ ಗಟ್ಟಿ ಶುಭ್ರಗೊಳಿಸುವ ಪುಡಿ ಯ (ಕ್ಯಾಲ್ಶಿಯಮ್ ಹೈಪೊಕ್ಲೊರೈಡ್)ಪ್ರಕ್ರಿಯೆಗೆ ಚರ್ಲ್ಸ್ ಟೆನ್ನನ್ಟ್ ಹಕ್ಕು ಸ್ವಾಮ್ಯ ಪಡೆದನು. ಇದು ಹೆಚ್ಚು ಪ್ರವರ್ಧಮಾನವಾಯಿತು ಮತ್ತು ಹೆಚ್ಚು ಆರ್ಥಿಕ ಯಶಸ್ಸನ್ನು ಪಡೆಯಿತು.

ನಂತರದ ವರ್ಷಗಳು

ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ 
ಜೇಮ್ಸ್‌ವ್ಯಾಟ್‌ನ ಕಾರ್ಯಾಗಾರ

1800ರಲ್ಲಿ ವ್ಯಾಟ್ ನಿವೃತ್ತನಾದನು, ಅದೇ ವರ್ಷದಲ್ಲಿ ಮೂಲಭೂತ ಹಕ್ಕುಸ್ವಾಮ್ಯ ಪಡೆದ ಮತ್ತು ಪಾಲುದಾರನಾದ ಬೊಲ್ಟನ್ ನಿಧನನಾದನು. ಪ್ರಸಿದ್ಧ ಪಾಲುದಾರಿಕೆಯು ಮ್ಯಾಥ್ಯೂ ಬೊಲ್ಟನ್ ಮತ್ತು ಜೇಮ್ಸ್ ವ್ಯಾಟ್ ಅವರ ಪುತ್ರರಾದ ಜೆಆರ್. ಲಂಗ್‌ಟೈಮ್ ವ್ಯವಹಾರದ ಇಂಜಿನಿಯರ್ ವಿಲಿಯಮ್ ಮುರ್‌ಡೊಚ್ ಅವರಿಗೆ ವರ್ಗಾವಣೆಯಾಯಿತು. ಇವರ ಪಾಲುದಾರಿಕೆ ಮತ್ತು ವ್ಯಾಪಾರವು ಸಹ ಬೇಗ ಯಶಸ್ವಿಯಾಯಿತು.

ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ 
"ಹೀತ್‌ಫೀಲ್ಡ್‌", ವ್ಯಾಟ್‌ನ ಬರ್ಮಿಂಗ್‌ಹ್ಯಾಮ್‌ನ ಹ್ಯಾಂಡ್ಸ್‌ವರ್ತ್‌ನಲ್ಲಿರುವ ಮನೆ

ವ್ಯಾಟ್ ನಿವೃತ್ತಿಯ ಮೊದಲು ಮತ್ತು ನಂತರದ ಕೆಲವು ದಿನಗಳಲ್ಲಿ ತನ್ನ ಸಂಶೋಧನೆಯನ್ನು ಮುಂದುವರಿಸಿದ.

ದೂರದರ್ಶಕ ಯಂತ್ರದಿಂದ ದೂರವನ್ನು ಅಳೆಯುವ ಹೊಸ ವಿಧಾನ, ಎಣ್ಣೆ-ದೀಪದಲ್ಲಿ ಸುಧಾರಣೆಗಳು, ಉಗಿಯಿಂದ ವಸ್ತುಗಳನ್ನು ಚಪ್ಪಟೆ ಮಾಡುವುದು ಮತ್ತು ಶಿಲ್ಪಗಳನ್ನು ನಕಲು ಮಾಡುವ ಯಂತ್ರವನ್ನು ಕಂಡುಹಿಡಿದನು. ಹ್ಯಾಡ್ಸ್‌ವರ್ಥ್ ಹೀಥ್, ಸ್ಟಫೋರ್ಡ್ಸ್‌ಶೈರ್‌ಗಳನ್ನು ಮನೆಯಲ್ಲಿಯೇ ಮಾಡಿದ್ದ, ಮನೆಯಲ್ಲಿಯೇ ಗರ್ರೆಟ್ ಕೊಠಡಿಯನ್ನು ಕಾರ್ಯಗಾರದ ರೀತಿಯಲ್ಲಿ ಬಳಸುತ್ತಿದ್ದ, ಮತ್ತು ಅವನು ಕಂಡುಹಿಡಿಯಲು ಶ್ರಮಿಸಿದ ಅನೇಕ ವಸ್ತುಗಳು ಇಲ್ಲಿವೆ.ಅವನು ಮತ್ತು ಅವನ ಎರಡನೇಯ ಪತ್ನಿ ಫ್ರಾನ್ಸ್ ಮತ್ತು ಜರ್ಮನಿಗೆ ತೆರಳಿ ಚನ್ವರ್ಥಾಲ್ ನಿಂದ ಒಂದು ಮೈಲಿ ದೂರದ ವೆಲ್ಸ್ ಹತ್ತಿರ ಡೊಲ್ಡೊವ್ಲೊಡ್ ಮನೆಯ ಹತ್ತಿರ ಎಸ್ಟೇಟನ್ನು ಕೊಂಡು ಅವನು ಮತ್ತಷ್ಟು ಅಭಿವೃದ್ಧಿ ಹೊಂದಿದನು. ಅವನು 83ನೇ ವಯಸ್ಸಿನಲ್ಲಿ ಆಗಸ್ಟ್ 25, 1819ರಲ್ಲಿ ಬಿರ್ಮಿನ್‌ಗ್ಯಾಮ್‌ನ ಹ್ಯಾಡ್ಸ್‌ವರ್ಥ್ ನಲ್ಲಿ ತನ್ನ ಮನೆ "ಹೀಥ್‌ಫೀಲ್ಡ್"ನಲ್ಲಿ ನಿಧನನಾದನು. ಸೆಪ್ಟೆಂಬರ್ 2 ರಂದು ಅವನು ಸಮಾಧಿಯಾದನು. ವ್ಯಾಟ್ ನಿವೃತ್ತಿಯ ಕಾಲದಲ್ಲಿ ಬಳಸಿದ ಕಾರ್ಯಗಾರದ ರೀತಿಯ ಗರ್ರೆ‌‍ಟ್ ಕೊಠಡಿಯನ್ನು 1853ರ ವರೆಗೂ ಯಾರೂ ಬಳಸಿರಲಿಲ್ಲ, ಬೀಗ ಹಾಕಲಾಗಿತ್ತು. ಇವನ ಜೀವನ ಚರಿತ್ರೆಯನ್ನು ಬರೆಯುವ ಜೆ.ಪಿ. ಮುಇರ್‌ಹೆಡ್ ಮೂದಲು ಇದನ್ನು ನೋಡಿದ. ಆ ನಂತರ ಇಲ್ಲಿಗೆ ಸಾಂದರ್ಭಿಕವಾಗಿ ಭೇಟಿ ನೀಡಲಾಗುತ್ತಿತ್ತು, ಆದರೆ ದೇವಾಲಯದ ಮಗುವಂತೆ ಇದನ್ನು ಯಾರೂ ಮುಟ್ಟುತ್ತಿಲಿಲ್ಲ. ಪ್ರಸ್ತಾಪದಂತೆ ಇದು ಖಾಲಿಯಾದಾಗ ಇದನ್ನು ಹಕ್ಕುಸ್ವಾಮ್ಯದ ಕಛೇರಿಗೆ ವರ್ಗಾಯಿಸಲಾಯಿತು. 1924ರಲ್ಲಿ ಇದನ್ನು ಧ್ವಂಸ ಮಾಡಬೇಕಾದಾಗ ಕೊಠಡಿ ಮತ್ತು ಅದರ ಎಲ್ಲಾ ಭಾಗಗಳನ್ನು ವಿಜ್ಞಾನ ವಸ್ತು ಸಂಗ್ರಹಾಲಯಕ್ಕೆ ಕಾಣಿಕೆಯಾಗಿ ನೀಡಿ, ಇದನ್ನು ಪೂರ್ತಿಯಾಗಿ ಪುನರ್‌ನಿರ್ಮಿಸಲಾಯಿತು. ಸುಮಾರು ವರ್ಷಗಳಿಂದ ಇದು ಸಂದರ್ಶಕರ ಪ್ರದರ್ಶನಕ್ಕಾಗಿ ಉಳಿದಿದೆ. ಆದರೆ ಹತ್ತಿರದಲ್ಲೇ ಮನೆಗಳನ್ನು ನಿರ್ಮಿಸಿದ್ದರಿಂದ ಪ್ರದರ್ಶನ ಮಂದಿರದ ಸುತ್ತ ಗೋಡೆ ಕಟ್ಟಲಾಗದೆ. ಕಾರ್ಯಗಾರ ನಾಶವಾಗದಂತೆ ಇನ್ನೂ ಕಾಪಾಡಲಾಗಿದೆ, ಮತ್ತು ಮುಂದಿನ ಕಾಲಕ್ಕೆ ಕೆಲವು ಅಂಶಗಳನ್ನು ಸೇರಿಸಿ ಮತ್ತೆ ಪ್ರದರ್ಶನಕ್ಕೆ ಸಿದ್ದತೆ ನಡೆಯುತ್ತಿದೆ.

ವಿವಾದ

ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ 
ಜೇಮ್ಸ್‌ವ್ಯಾಟ್‌ನಿಂದಾದ ನಿಜವಾದ ಕಂಡೆಸ್ನರ್‌.

ಕೆಲವು ಪ್ರಮುಖ ಸಂಶೋಧನೆಗಳ ಜೊತೆಗೆ ಕೆಲವು ವಿವಾದ[ಸೂಕ್ತ ಉಲ್ಲೇಖನ ಬೇಕು]ಗಳು ಇವೆ, ವ್ಯಾಟ್ ಹಕ್ಕುಸ್ವಾಮ್ಯ ಪಡೆದ ಕೆಲವು ಸಂಶೋಧನೆಗಳಿಗೆ ವ್ಯಾಟ್ ಒಬ್ಬನೇ ಮೂಲ ಸಂಶೋಧಕನೇ ಅಥವಾ ಅಲ್ಲವೆ ಎಂಬುದು ಪ್ರಮುಖವಾದವು. ಆದಾಗ್ಯೂ ಅವನು ಒಬ್ಬನೇ ಶೋಧಿಸಿದ ಅತ್ಯಂತ ಪ್ರಮುಖವಾದ ಶೋಧನೆಗಳಾದ ಪ್ರತ್ಯೇಕ ಕಂಡೆನ್ಸರ್, ಸಮಾನಾಂತರ ಚಲನೆಯ ಸಂಯೋಜನೆ, ಅವನದಲ್ಲದ ಇತರ ಏಕೈಕ ಆರ್ಥಿಕಾಭಿವೃದ್ಧಿ ಸಂಶೋಧನೆಗಳ ಮೇಲೆ ಯಾವುದೇ ವಿವಾದಗಳಿಲ್ಲ. ಕೆಲವು ವೇಳೆ ಅವನಿಗೆ ತಿಳಿದ ಬೇರೆಯವರ ಅಭಿಪ್ರಾಯಗಳನ್ನು ಅಭ್ಯಾಸಿಸಿ ಬಳಕೆ ತಂದು ಪೂರ್ವ ವಿಕ್ರಯಾಧಿಕಾರ ಪಡೆದು ಹಕ್ಕುಸ್ವಾಮ್ಯಕ್ಕೆ ಸೇರಿಸಿ ಸಂಶೋಧನೆಯಿಂದ ಅದರ ಪ್ರಯೋಜನ ಪಡೆಯುವ ಉದ್ದೇಶವನ್ನು ಹೊಂದಿದ್ದನು, ಮತ್ತು ಇದನ್ನು ಬೇರೆಯವರು ಅಭ್ಯಾಸಿಸದಂತೆ ನೋಡಿಕೊಳ್ಳುತ್ತಿದ್ದರು. ನಂತರ 1784 ಆಗಸ್ಟ್ 17 ರಲ್ಲಿ ಅವನು ಬೊಲ್ಟನ್‌ಗೆ ಬರೆದ ಪತ್ರದಲ್ಲಿ ಹೀಗೆ ಹೇಳಿದ್ದನು:

    ಚಕ್ರ ಸಾಗಾಟದ ಇಂಜಿನ್‌ಗೆ ನಾನು ಹೇಗೆ ಸಮಯ ಮತ್ತು ಸ್ಥಳ ಬಿಡುತ್ತೇನೊ ಹಾಗೆ ಮಾಡಲು ಕೆಲವು ವಿವರಣೆಗಳನ್ನು ನೀಡಿದ್ದೇನೆ, ಆದರೆ ಬೇರೆಯವರು ಇದಕ್ಕೆ ಪೂರಕವಾದ ಸೇವೆಗೆ ಹಕ್ಕುಸ್ವಾಮ್ಯ ಪಡೆಯುವುದು ಮನನೋಯಿಸುತ್ತದೆ. ಅವನ ನೌಕರ ವಿಲಿಯಮ್ ಮುರ್ಡೊಚ್‌ನ ಹೆಚ್ಚು ಒತ್ತಡದ ಉಗಿ ಜೊತೆಗೆ ಕೆಲಸ ಮಾಡುವ, ಉಗಿಯ ರಸ್ತೆ ಚಲನ ಪ್ರಯೋಗ ತಡವಾಗಲು ಕೆಲವು[who?] ಚರ್ಚೆಗಳು ನಿಷೇದವನ್ನು ಹೇರಿದ್ದವು.

1784 ರಲ್ಲಿ ಸನ್ ಆ‍ಯ್‌೦ಡ್ ಪ್ಲನೆಟ್ ಗೇರ್‌‍ನ ಉಪಯೋಗಕ್ಕಾಗಿ, ಮತ್ತು 1784 ರಲ್ಲಿ ಉಗಿಯ ಚಲನೆಗೆ ವ್ಯಾಟ್ ಹಕ್ಕಸ್ವಾಮ್ಯವನ್ನು ಪಡೆದಿದ್ದನು, ಆದರೆ ಈ ಎರಡೂ ಸಂಶೋಧನೆಗಳು ಅವನ ನೌಕರ ವಿಲಿಯಮ್ ಮರ್ಡೊಚ್‌ನಿಂದ ಸಂಶೋಧಿಸಲ್ಪವು. ಜನವರಿ 5 1782ರಲ್ಲಿ ವ್ಯಾಟ್ ಬೊಲ್ಟನ್‌ಗೆ ಬರೆದ ಪತ್ರದಲ್ಲಿ ಸನ್ ಆ‍ಯ್‌೦ಡ್ ಪ್ಲನೆಟ್ ಗೇರ್ ಮೂಲ ಸಂಶೋಧನೆಯ ಬಗ್ಗೆ ಅವನಷ್ಷಕ್ಕೆ ಅವನೆ ವಿವರಿಸಿದ್ದನೆ.

    ನನ್ನ ಹಳೆಯ ಯೋಚನೆಗಲ್ಲಿ ಒಂದು ಮಾದರಿಯಾದ ತಿರುಗುವ ಇಂಜಿನ್ ಪುನಶ್ಚೇತನ ಮತ್ತು ಕಾರ್ಯರೂಪಕ್ಕೆ ತಂದವನು ಡಬ್ಲ್ಯು. ಮುರ್ಡೊಕ್ ಮತ್ತು ಐದನೆಯ ವಿಧಾನದಲ್ಲಿ ಇದರ ನಿರ್ಧಿಷ್ಟ ವಿವರಣೆಯ ಗುಣಗಳನ್ನು ಸಹ ಸೇರಿಸಲಾಗಿದೆ. ಬೊಲ್ಟನ್ ಮತ್ತು ವ್ಯಾಟ್‌ನ ಬಳಿ ನೌಕರನಾಗಿರುವ ಮುರ್ಡೊಕ್, ತನ್ನ ಜೀವನದ ಹೆಚ್ಚು ಸಮಯವನ್ನು ಇಲ್ಲಿಯೇ ಕಳೆದರೂ, ಯಾವತ್ತೂ ಹಕ್ಕುಸ್ವಾಮ್ಯಕ್ಕಾಗಿ ಸ್ಪರ್ಧಿಸಿರಲಿಲ್ಲ. ಬೊಲ್ಟನ್‌ ಮತ್ತು ವ್ಯಾಟ್‌ ಸನ್ ಆ‍ಯ್‌೦ಡ್ ಪ್ಲನೆಟ್ ಗೇರ್‌‍ನ್ನು ಅವರ ತಿರುಗುವ ಇಂಜಿನ್‌ಗೆ ಉಪಯೋಗಿಸಿಕೊಂಡೇ ತಮ್ಮ ವ್ಯವಹಾರ ಮುಂದುವರಿಸಿದರು.

ಪರಂಪರೆ

ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ 
ಲೀಡ್ಸ್‌ನಲ್ಲಿರುವ ಸಿಟಿಸ್ಕ್ವೇರ್‌ನಲ್ಲಿರುವ ಜೇಮ್ಸ್‌ವ್ಯಾಟ್‌ನ ಪ್ರತಿಮೆ.
ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ 
ಬರ್ಮಿಂಗ್‌ಹ್ಯಾಮ್‌ ಕೇಂದ್ರ ಗ್ರಂಥ ಭಂಡಾರದ ಹೊರಭಾಗದಲ್ಲಿರುವ ಚೇಂಬರ್ಲನ್‌‌ ಸ್ಕ್ವೇರ್‌ನಲ್ಲಿ ಅಲೆಕ್ಸಾಂಡರ್‌ ಮನ್ರೊ ತಯಾರಿಸಿದ ವ್ಯಾಟ್‌ನ ಪ್ರತಿಮೆಯನ್ನು ಉದ್ಘಾಟಿಸಲಾಯಿತು

ಜೇಮ್ಸ್ ವ್ಯಾಟ್‌ರು ಐವತ್ತು ವರ್ಷಗಳಲ್ಲಿ ಪರಿಶ್ರಮದಿಂದ ಬದಲಾಯಿಸಿದ ಅಭಿವೃದ್ಧಿಯನ್ನು ನ್ಯೂಕಾಮೆನ್ ಇಂಜಿನ್‌ಗೆ ವರ್ಗಾಯಿಸಲಾತು ಮತ್ತು ಶಕ್ತಿಯನ್ನು ಸೃಷ್ಷಿಸುವಲ್ಲಿ ಬದಲಾವಣೆಗಳನ್ನು ಆರಂಭಿಸುವುದು ಮತ್ತು ಅನ್ವಯವಾಗುವಂತೆ ಮಾಡಿ ಪ್ರಪಂಚಕ್ಕೆ ಪರಿಚಯಿಸುವುದು ಮತ್ತು ಇದರಿಂದ ಕೈಗಾರಿಕಾ ಕ್ರಾಂತಿಯಲ್ಲಿ ಹೊಸತನ ರೂಪಿಸುವುದು. ಈ ಸಂಶೋಧನೆಯ ಪ್ರಾಮುಖ್ಯತೆಯು ದೃಢವಾಗಿ ಒತ್ತಿಹೇಳುವುದೇನೆಂದರೆ ಇದು ಆಧುನಿಕ ಜಗತ್ತನ್ನು ನೀಡುತ್ತದೆ. ಇದರ ಮುಖ್ಯವಾದ ಲಕ್ಷಣಗಳೆಂದರೆ ದೂರದ ಕಲ್ಲಿದ್ದಲು ಕ್ಷೇತ್ರಗಳಿಂದ ಎಂಜಿನ್‌ಗಳನ್ನು ಕೈಗಾರಿಕೆಗಳಿಗೆ ತಂದಿದ್ದು, ಅವುಗಳೆಂದರೆ ಹೆಚ್ಚು ಯಂತ್ರಗಳು, ಇಂಜಿನಿಯರ್‌ಗಳು ಮತ್ತು ಚಿಂತಕರು ಕೂಡ ಅದರ ಗುಣ ಮತ್ತು ದೋಷಗಳನ್ನು ಪ್ರಚುರಪಡಿಸಿದರು. ಇದು ಸಂಶೋಧಕರು ಹುಟ್ಟಿ ಬೆಳೆಯಲು ಇದು ನೆಲೆಯಾಯಿತು. ಸುಧಾರಿತ ಬಾಯ್ಲರು(ಕಡಾಯಿ)ಗಳನ್ನು ಉತ್ಪಾದಿಸಲು ಆಗ ಹೆಚ್ಚು ಒತ್ತಡವಿತ್ತು. ಇದು ಇಂಜಿನ್‌ಗಳಿಗೆ ಹೆಚ್ಚು ದಕ್ಷತೆಯನ್ನು ಮತ್ತು ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿ ಆವಿ ದೋಣಿ ಮತ್ತು ಚಲನೆಗೆ ಅವಕಾಶಮಾಡಿಕೊಟ್ಟಿತು. ಇದು ಹೊಸ ಕೈಗಾರಿಕೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿತು, ಅಲ್ಲಿಂದ ಅವರು ನೀರಿನ ಶಕ್ತಿ(ವಿದ್ಯುತ್) ಮೇಲೆ ಅವಲಂಬಿಸಲಿಲ್ಲ, ವರ್ಷವಿಡೀ ಕೆಲಸ ಮಾಡಬಹುದು ಮತ್ತು ಎಲ್ಲಿ ಬೇಕಾದರೂ ಕೈಗಾರಿಕೆಗಳನ್ನು ನಿರ್ಮಿಸಬಹುದಾಗಿತ್ತು. ಸಣ್ಣಮನೆಗಳಿಂದ ಕೆಲಸ ಹೊರಬಂತು, ಆರ್ಥಿಕ ಪ್ರಮಾಣ ವೃದ್ಧಿಸಿತು. ಬಂಡವಾಳ ದಕ್ಷತೆಯಿಂದ ಕೆಲಸಮಾಡಿತು ಮತ್ತು ಉತ್ಪಾದನಾ ತಯಾರಿಕೆ ಹೆಚ್ಚು ಬೆಳೆಯಿತು. ಇದು ಹೊಸಬಗೆಯ ಯಂತ್ರೋಪಕರಣಗಳು ಜಲಪಾತದಂತೆ ಹರಿಯಲು ಅವಕಾಶಮಾಡಿಕೊಟ್ಟಿತು. ಇವು ಉತ್ತಮ ಯಂತ್ರಗಳ ಉತ್ಪಾದನೆಗೆ, ಗಮನಾರ್ಹವಾಗಿ ವ್ಯಾಟ್‌ನ ಉಗಿ ಎಂಜಿನ್ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟಿತು. ವ್ಯಾಟ್‌ರ ಬಗ್ಗೆ ಆಂಗ್ಲ ಕಾದಂಬರಿಕಾರ ಅಲ್ಡೌಸ್ ಹುಕ್ಸ್‌ಲೇ (1894–1963) ಟೂ ಹಸ್, ದ 8:17A.M. ಎಂಬ ಕಾದಂಬರಿಯನ್ನು ಬರೆದಿದ್ದಾರೆ, ಅದೆಂದರೆ;" ಕೆಲವುವಿಚಾರ - ನಮ್ಮ ನಿತ್ಯದ ರೈಲಿನ ಆರಂಭಿಕ ಸಮಯದಂತೆ, ಕೆಲವು ವಿಚಾರಗಳು ಬಹಳ ಮುಖ್ಯವಾಗುತ್ತವೆ. ನಮ್ಮ ಪೂರ್ವಿಕರು ವಿಲಕ್ಷಣ, ವಿಕೇಂದ್ರೀಯವಾದ ಕ್ಷಣಕ್ಕೆ ಮಹತ್ವ ಕೊಡದೇ ಜೀವಿಸುತ್ತಿದ್ದರು. ಚಲಿಸುವ ರೈಲ್ವೆ ಎಂಜಿನ್ ಆವಿಷ್ಕಾರಿಸುವಾಗ ವ್ಯಾಟ್ ಮತ್ತು ಸ್ಟೆಫೆನ್‌ಸನ್ ಕಾಲದ ಒಂದು ಭಾಗದ ಆವಿಷ್ಕಾರಕರಾಗಿದ್ದರು".

ಪ್ರಶಸ್ತಿಗಳು

  • ವ್ಯಾಟ್ ರಾಯಲ್ ಸೊಸೈಟಿ ಆಫ್ ಈಡನ್‌ಬರ್ಗ್ ಮತ್ತು ರಾಯಲ್ ಸೊಸೈಟಿ ಆಫ್ ಲಂಡನ್‌ನ ಸದಸ್ಯನಾಗಿದ್ದನು.
  • ಇವನು ಬ್ಯಾಟವಿಯನ್ ಸೊಸೈಟಿ, ಮತ್ತು ಎಂಟು ವಿದೇಶಿ ಸಹ ಸದಸ್ಯರ, ವಿಜ್ಞಾನಗಳ ಫ್ರೆಂಚ್ ವಿದ್ಯಾಸಂಸ್ಥೆ ಒಂದರಲ್ಲಿ ಸದಸ್ಯರಾಗಿದ್ದರು.

ಜೇಮ್ಸ್ ವ್ಯಾಟ್ ತನ್ನ ಉಗಿ ಎಂಜಿನ್ ಅಭಿವೃದ್ಧಿಗೆ ನೀಡಿರುವ ಕೊಡುಗೆಳ ನಂತರ ವ್ಯಾಟ್ ಎಂದು ಕರೆಯಲ್ಪಟ್ಟರು. ಮತ್ತು 1889ರಲ್ಲಿ ಬ್ರಿಟಿಷ್ ಸಂಘದ ಎರಡನೇ ಕಾಂಗ್ರೆಸ್ ವಿಜ್ಞಾನದ ಅಭಿವೃದ್ಧಿಯನ್ನು ಅಳವಡಿಸಿಕೊಳ್ಳಲಾಯಿತು ಮತ್ತು 1960 ರಲ್ಲಿ ತೂಕ ಮತ್ತು ಅಳತೆಗಳ ಮೇಲಿನ 11ನೇ ಸಾಮಾನ್ಯ ಸಭೆಯನ್ನು ನಡೆಸಲಾಯಿತು, ಘಟಕದ ಶಕ್ತಿಯನ್ನು ಸಂಘಟಿಸಲು, ಘಟಕಗಳ ಅಂತರಾಷ್ಟ್ರೀಯ ಪದ್ದತಿ ಯಲ್ಲಿ(ಎಸ್ಐ) ಅಳವಡಿಸಲಾಯಿತು.

This SI unit is named after James Watt. As with every International System of Units (SI) unit whose name is derived from the proper name of a person, the first letter of its symbol is upper case (W). However, when an SI unit is spelled out in English, it should always begin with a lower case letter (watt), except in a situation where any word in that position would be capitalized, such as at the beginning of a sentence or in capitalized material such as a title. Note that "degree Celsius" conforms to this rule because the "d" is lowercase. —Based on The International System of Units, section 5.2.''

ಸ್ಮಾರಕಗಳು

ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ 
ಗ್ರೀನಕ್‌ನಲ್ಲಿರುವ ಜೇಮ್ಸ್‌ವ್ಯಾಟ್‌ ಮೆಮೊರಿಯಲ್‌ ಕಾಲೆಜು.
  • ಬಿರ್ಮಿ‌‌ನ್‌ಗ್ಯಾಮ್‌ ನಗರದ ಹ್ಯಾಡ್ಸ್‌ವರ್ಥ್‌ನ ಸೆಂಟ್ ಮೇರಿಸ್ ಚರ್ಚ್ ಆವರಣದಲ್ಲಿ ವ್ಯಾಟ್‌ನನ್ನು ಸಮಾಧಿ ಮಾಡಲಾಗಿದೆ. ನಂತರ ಚರ್ಚ್‌ನ ವಿಸ್ತರಣೆಯಿಂದ ಇವನ ಗೋರಿ ಅಂದರೆ ಸಮಾಧಿ ಚರ್ಚ್‌ನ ಒಳಗೆ ಹೂಳಲಾಗಿದೆ. ಅವನಿಗೆ ಬೊಲ್ಟನ್‌ ಮತ್ತು ಮರ್ಡೊಚ್ ಅವರ ಪ್ರತಿಮೆಗಳೊಂದಿಗೆ ಬಿರ್ಮಿ‌‌ನ್‌ಗ್ಯಾಮ್‌ ನಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದೆ ಹಾಗೆಯೇ ಅವನಿಗೆ ಐದು ಪ್ರತ್ಯೇಕ ಪ್ರತಿಮೆಗಳನ್ನು ನಿರ್ಮಿಸಲಾಗಿದೆ, ಅದರಲ್ಲಿ ಒಂದನ್ನು ಚಮ್‌ಬೆರ್ಲೈನ್ ಚೌಕದಲ್ಲಿ, ಉಳಿದವುಗಳನ್ನು ಕಾನೂನು ನ್ಯಾಯಾಲಯಗಳ ಹೊರಗೆ ನಿರ್ಮಿಸಲಾಗಿದೆ.

ಚಂದ್ರಶಿಲೆಗಳಿಂದ ಅವನನ್ನು ಸ್ಮರಿಸಲಾಗುತ್ತದೆ ಮತ್ತು ಶಾಲೆಗೆ ಅವನ ಗೌರವಾರ್ಥವಾಗಿ ಹೆಸರಿಡಲಾಗಿದೆ ಇವೆರಡೂ ಬಿರ್ಮಿ‌‌ನ್‌ಗ್ಯಾಮ್‌‌ನಲ್ಲಿವೆ.

  • ಬಿರ್ಮಿ‌‌ನ್‌ಗ್ಯಾಮ್‌‌‌‌ನ ಕೇಂದ್ರ ಗ್ರಂಥಾಲಯವು ಇವನ ದೊಡ್ಡ ಪ್ರಮಾಣದ ದಾಖಲೆ ಪತ್ರಗಳನ್ನು ಹೊಂದಿದೆ. ಈಗ ಮ್ಯಾಥ್ಯೂ ಬೊಲ್ಟನ್‌ನ ಸೊಹೊ ಮನೆ ವಸ್ತು ಸಂಗ್ರಹಾಲಯವಾಗಿದೆ, ಇಬ್ಬರ ಕೆಲಸಗಳನ್ನು ಸಹ ಸ್ಮರಿಸಲಾಗುತ್ತಿದೆ. ಇಂಜಿನಿಯರಿಂಗ್ ಬೋಧನಾಂಗವು ಬ್ರಿಟನ್‌ನ ಗ್ಲ್ಯಾಸ್ಗೋ ವಿಶ್ವವಿದ್ಯಾಲಯದ ಅತ್ಯಂತ ಹಳೆಯ ಬೋಧನಾಂಗವಾಗಿದ್ದು,(ಇಲ್ಲಿ ವ್ಯಾಟ್ ಪ್ರಾಧ್ಯಾಪಕರಾಗಿದ್ದರು) ಇದು ವ್ಯಾಟ್‌ನ ಕೇಂದ್ರ ಕಾರ್ಯಾಲಯವಾಗಿತ್ತು. ಇದನ್ನು ಮೆಕ್ಯಾನಿಕಲ್ ಇಂಜಿನಿಯರ್ ವಿಭಾಗ ಮತ್ತು ಗಗನಯಾನ ಇಂಜಿನಿಯರ್ ವಿಭಾಗಗಳ ಕೊಠಡಿಗಳನ್ನಾಗಿ ಮಾಡಲಾಗಿದೆ. ಜೇಮ್ಸ್ ವ್ಯಾಟ್ ಹುಟ್ಟಿದ ಸ್ಥಳವಾದ ಗ್ರಿನೊಕ್ ಹತ್ತಿರದ ಪ್ರದೇಶದಲ್ಲಿ ಅವನ ಪ್ರತಿಮೆಯನ್ನು ಸ್ಥಾಪಿಸಿ ಸ್ಮರಿಸಲಾಗುತ್ತದೆ. ಗ್ರಿನೊಕ್‌ನ ಕೆಲವು ಪ್ರದೇಶಗಳು ಅವನ ಹೆಸರಿನಿಂದ ಕರೆಯಲ್ಪಡುತ್ತಿವೆ.
  • ಹೆಚ್ಚು ಹೆಸರು ಪಡೆದುದೆಂದರೆ, 1816 ರಲ್ಲಿ ವ್ಯಾಟ್‌ನ ವೈಜ್ಞಾನಿಕ ಪುಸ್ತಕಗಳನ್ನು ಪಡೆದು ಆರಂಭವಾದ ವ್ಯಾಟ್‌ನ ಸ್ಮರಣಿಯ ಗ್ರಂಥಾಲಯ ಮತ್ತು ಇದು ಅವನ ಮಗನಿಂದ ವ್ಯಾಟ್ ಸಂಸ್ಥೆಯ ಒಂದು ಭಾಗವಾಗಿ ಅಭಿವೃದ್ಧಿಯಾಯಿತು.(ಅಂತಿಮವಾಗಿ ಇದು ಜೇಮ್ಸ್ ವ್ಯಾಟ್ ಕಾಲೇಜಾಗಿ ಪರಿವರ್ತನೆಯಾಯಿತು.) 1974ರಲ್ಲಿ ಎಲ್ಲವನ್ನು ಸ್ಥಳೀಯ ಅಧಿಕಾರಕ್ಕೆ ತೆಗೆದುಕೊಳ್ಳಲಾಯಿತು, ಈಗಲೂ ಗ್ರಂಥಾಲಯ ಸ್ಥಳೀಯ ಮನೆಗಳ ಇತಿಹಾಸದ ಸಂಗ್ರಹಗಳು ಮತ್ತು ಇನ್ವರ್‌‍ಕ್ಲೈಡ್‌ನ ದಾಖಲೆಗಳನ್ನು ಹೊಂದಿದೆ ಮತ್ತು ಒಳಕೋಣೆಯಲ್ಲಿ ಕೂರಿಸಿದ ಅತಿ ದೊಡ್ಡ ಪ್ರತಿಮೆಯಿಂದ ಪ್ರಭಾವ ಬೀರುತ್ತದೆ. ವ್ಯಾಟ್‌ನನ್ನು ಜಾರ್ಜ್ ಸ್ವೆರ್, ಗ್ಲ್ಯಾಸ್ಗೋ ಮತ್ತು ಈಡನ್‌ಬರ್ಗ್ ಪ್ರಿನ್ಸೆ‌ಸ್ ರಸ್ತೆಗಳಲ್ಲಿ ಕೂಡ ಸ್ಮರಿಸಲಾಗುತ್ತದೆ.
  • ಜೇಮ್ಸ್ ವ್ಯಾಟ್ ಕಾಲೇಜ್‍ನ ಮೈದಾನಗಳನ್ನು ಕಿಲ್ವಿನ್ನಿಂಗ್(ಉತ್ತರ ಐರ್‌ಶೈರ್), ಫಿನ್ನಾರ್ಟ್ ರಸ್ತೆ ಮತ್ತು ಗ್ರಿನೊಕ್‌ನಲ್ಲಿರುವ ನದೀ ತೀರಪ್ರದೇಶದ ವರೆಗೂ ವಿಸ್ತರಿಸಲಾಯಿತು ಮತ್ತು ಕ್ರೀಡಾ ಮೈದಾನವನ್ನು ಲರ್ಗ್ಸ ವರೆಗೂ ವಿಸ್ತರಿಸಲಾಯಿತು. ಈಡನ್‌ಬರ್ಗ್ ಹತ್ತಿರದ ಹೆರಿಯೊಟ್-ವ್ಯಾಟ್ ವಿಶ್ವವಿದ್ಯಾಲಯವು ಒಂದು ಕಾಲದ ಈಡನ್‌ಬರ್ಗ್‌ನ ಕಲಾ ಶಾಲೆಯಾಗಿ 1821ರಲ್ಲಿ ಪ್ರಪಂಚದ ಪ್ರಥಮ ಮೆಕ್ಯಾನಿಕಲ್ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಆದರೆ 16ನೇ ಶತಮಾನದಲ್ಲಿ ಜೇಮ್ಸ್ ರಾಜನಿಗೆ ಆರ್ಥಿಕ ತಜ್ಞನಾಗಿದ್ದ ಜಾರ್ಜ್ ಹೆರಿಯೊಟ್‌ನನ್ನು ಸ್ಮರಿಸಲಾಗುತ್ತದೆ, ರಾಯಲ್ ಚರ್ಟ್‌ರ್‌ನ ನಂತರ ಜೇಮ್ಸ್ ವ್ಯಾಟ್ ಹೆರಿಯೊಟ್-ವ್ಯಾಟ್ ವಿಶ್ವವಿದ್ಯಾಲಯದ ಹೆಸರನ್ನು ಬದಲಿಸಿದನು. ನಂತರ ಹನ್ನೇರಡು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ(ಮುಖ್ಯವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ) ಹೆಸರುಗಳನ್ನು ಬದಲಿಸಿದನು.
  • ಜೇಮ್ಸ್ ವ್ಯಾಟ್ ಹೆಚ್ಚು ಉಗಿ ಎಂಜಿನ್‌ನ ವರ್ಣಚಿತ್ರಗಳನ್ನು ಜೇಮ್ಸ್ ಇಕ್ಫೊರ್ಡ್ ಲೌಡೆರ್ ನಿಂದ ನಿರೀಕ್ಷಿಸುತ್ತಿದ್ದ , ಇವನು ಈಗ ಸ್ಕಾಡ್‌ಲ್ಯಾಂಡ್‌ನ ರಾಷ್ಷ್ರೀಯ ಚಿತ್ರಕಲಾ ಮಂದಿರದ ಒಡಯನಾಗಿದ್ದಾನೆ. ಚಾರ್ಲ್ಸ್ ಮುರ್ರೇನು ಇತಿಹಾಸದ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ನಡೆಸಿದ ಅಧ್ಯಯನದ ಸಮೀಕ್ಷೆಯಂತೆ ತಂತ್ರಜ್ಞಾನದ ಇತಿಹಾಸದಲ್ಲಿ 229 ಪ್ರಮುಖ ವ್ಯಕ್ತಿಗಳಲ್ಲಿ ವ್ಯಾಟ್ ಪ್ರಥಮ ಸ್ಥಾನವನ್ನು ಪಡೆದು, ಎಡಿಸನ್‌ನೊಂದಿಗೆ ಸಮಾನವಾಗಿದ್ದಾನೆ ಎಂದು ತನ್ನ ಮಾನವೀಯ ಸಾಧನೆ ಎಂಬ ಪುಸ್ತಕಲ್ಲಿ ಬರೆದಿದ್ದಾನೆ. ನಂತರ ಬ್ರಿಟನ್‌ನ 50ಕ್ಕೂ ಹೆಚ್ಚು ರಸ್ತೆ ಅಥವಾ ಬೀದಿಗಳಿಗೆ ಇವನ ಹೆಸರಿಡಲಾಗಿದೆ.ಚನ್ಟರ್ಯೆ ವೆಸ್ಟ್‌‍ಮಿನಿಸ್ಟರ್ ಅಬ್ಬೇ ಯಲ್ಲಿ ವ್ಯಾಟ್‌ನ ಬೃಹತ್ ಪ್ರಮಾಣದ ಪ್ರತಿಮೆ ನಿರ್ಮಿಸಿದನು, ನಂತರ ಇದನ್ನು ಸೆಂಟ್. ಪೌಲ್‌ನ ಕ್ಯಾಥೆರ್ಡಲ್‌ಗೆ ಸ್ಥಳಾಂತರಿಸಲಾಯಿತು. ಸ್ಮಾರಕ ಸಮಾಧಿ ಮೇಲೆ ಹೀಗೆ ಬರೆಯಲಾಗಿದೆ.
ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ 
ಚಂರ್ಟಿಯ ಜೇಮ್ಸ್‌ವ್ಯಾಟ್‌ ಪ್ರತಿಮೆ
    ಹೆಸರನ್ನು ಚಿರಸ್ಮರಣೀಯಗೊಳಿಸಬೇಡಿ,
      ಶಾಂತಿಯ ಕೌಶಲ್ಯಗಳು ವೃದ್ಧಿಯಾಗುವಾಗ ತಾಳ್ಮೆಯಿಂದರಬೇಕು.
        ಆದರೆ ತೋರಿಸಲು
          ಅವುಗಳನ್ನು ಮನುಕುಲ ಗೌರವದಿಂದ ಕಲಿಯಬೇಕು
            ಯಾರು ಅತ್ಯುತ್ತಮ ಯೋಗ್ಯತೆಯನ್ನು ಪಡೆದಿರುತ್ತರೋ ಅವರಿಗೆ ಕೃತಜ್ಞತೆ,
              ರಾಜ,
                ಅವನ ಮಂತ್ರಿಗಳು, ಮತ್ತು ಅನೇಕ ಶ್ರೇಷ್ಠರು
                  ಸಾಮ್ರಾಜ್ಯದ ಶ್ರೀಸಾಮಾನ್ಯರು
                    ಈ ಲಿಖಿತ ದಾಖಲೆಯನ್ನು ಎತ್ತರಿಸಿ
    ಜೇಮ್ಸ್ ವ್ಯಾಟ್‌ಗೆ
    ಯಾರು ಶಕ್ತಿಯಿಂದ ಮುನ್ನೆಡೆಯುತ್ತರೋ ಅವನೇ ಮೂಲ ಅಸಾಧಾರಣ ಪ್ರತಿಭೆ
      ಬೇಗ ಬಳಕೆಗೆತರುವುದು ತತ್ವಜ್ಞಾನದ ಶೋಧನೆ
        ಅಭಿವೃದ್ಧಿಗೆ
          ಉಗಿ-ಎಂಜಿನ್‌
            ಅವನ ದೇಶದ ಸಂಪನ್ಮೂಲಗಳ ವಿಸ್ತರಣೆಮಾಡಲಾಗಿದೆ
              ಮನುಷ್ಯನ ಶಕ್ತಿಯನ್ನು ವೃದ್ಧಿಸಿತು
                ಮತ್ತು ಗುಲಾಬಿಗೆ ಉತ್ಕೃಷ್ಟ ಸ್ಥಾನ
                  ಅವರಲ್ಲಿ ಹೆಚ್ಚು ಸುಪ್ರಸಿದ್ಧರು ವಿಜ್ಞಾನದ ಅನುಯಾಯಿಗಳು
                    ಮತ್ತು ಪ್ರಪಂಚದ ನಿಜವಾದ ಉಪಕಾರಿಗಳು
                      ಗ್ರಿನೊಕ್ MDCCXXXVI ನಲ್ಲಿ ಜನಿಸಿ
                        ಹೀತ್ ಫೀಲ್ಡ್‌ನ ಸ್ಟಫ್ಫೊರ್ಡ್‌ಶೈರ್ MDCCCXIX ನಲ್ಲಿ ಮರಣ ಹೊಂದು

ಬಿರ್ಮಿನ್‌ಗ್ಯಾಮ್‌‌ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಮತ್ತು ತಯಾರಿಕಾ ಇಂಜಿನಿಯರಿಂಗ್ ಕಟ್ಟಡದ ಉಪನ್ಯಾಸ ಮಂದಿರಕ್ಕೆ "G31 - ಜೇಮ್ಸ್ ವ್ಯಾಟ್ ಲೆಕ್ಚರ್ ಥಿಯೇಟರ್" ಎಂದು ಹೆಸರಿಸಿದರು.29 ಮೇ 2009ರಂದು £50 ಪೌಂಡ್ ನೋಟಿನ ಮೇಲೆ ವ್ಯಾಟ್ ಮತ್ತು ಪಕ್ಕದಲ್ಲಿಯೇ ಮ್ಯಾಥ್ಯೂ ಬೊಲ್ಟನ್ ಕಾಣಿಸಿಕೊಳ್ಳುತ್ತಾನೆ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್ ಪ್ರಕಟಿಸಿತು.

ಹಕ್ಕುಸ್ವಾಮ್ಯಗಳು

ವ್ಯಾಟ್, ಅವನ ಆರು ಹಕ್ಕುಸ್ವಾಮ್ಯಗಳ ಪಟ್ಟಿಯಲ್ಲಿ ಮೂಲ ಅಡಿಪಾಯದ ಸಶೋಧಕ.

  • ಹಕ್ಕುಸ್ಯಾಮ್ಯ 913 A ವಿಧಾನವು ಉಗಿ ಇಂಜಿನ್‌ಗಳಲ್ಲಿ ಪ್ರತ್ಯೇಕ ಕಂಡಸ್ಸರ್‌ನಿಂದ ಉಗಿಯ ಉಪಯೋಗವು ಕಡಿಮೆಮಾಡುತ್ತದೆ.

ಜನವರಿ 5, 1769 ರಲ್ಲಿ ಇದರ ವಿವರಣೆಯನ್ನು ಒಪ್ಪಲಾಯಿತು. ಏಪ್ರಿಲ್ 29, 1769ರಲ್ಲಿ ಪಟ್ಟಿಯಲ್ಲಿ ಸೇರಿಸಲಾಯಿತು. 1775ರಲ್ಲಿ ಸಂಸತ್‌ ಕಾಯಿದೆಯಿಂದ ಜೂನ್ 1800 ರ ವರೆಗೆ ವಿಸ್ತರಿಸಲಾಗಿದೆ.

  • ಹಕ್ಕುಸ್ವಾಮ್ಯ 1,244 A ಯು ಪತ್ರಗಳ ನಕಲುಮಾಡುವ ಹೊಸ ವಿಧಾನ: ಇದರ ವಿವರಣೆಯನ್ನು ಫೆಬ್ರವರಿ 14, 1780ರಲ್ಲಿ ಒಪ್ಪಲಾಯಿತು ಮತ್ತು ಮೇ 31, 1780ರಲ್ಲಿ ಪಟ್ಟಿಗೆ ಸೇರಿಸಲಾಯಿತು.
  • ಹಕ್ಕುಸ್ಯಾಮ್ಯ 1,306 ಹೊಸ ವಿಧಾನಗಳಿಂದ ನಿರಂತರವಾಗಿ ತಿರುಗುವ ಚಲನೆ- ಸೂರ್ಯ ಮತ್ತು ಪರಿಭ್ರಮಣ.

ಇದರ ವಿವರಣೆಯನ್ನು ಅಕ್ಟೋಬರ್ 25, 1781ರಲ್ಲಿ ಒಪ್ಪಲಾಯಿತು ಮತ್ತು ಫೆಬ್ರವರಿ 23, 1782ರಲ್ಲಿ ಪಟ್ಟಿಗೆ ಸೇರಿಸಲಾಯಿತು.

  • ಹಕ್ಕುಸ್ವಾಮ್ಯ 1,321 ಉಗಿ ಇಂಜಿನ್‌ಗಳಿಂದ ಹೊಸ ಅಭಿವೃದ್ಧಿ - ವಿಸ್ತಾರವಾಗಬಲ್ಲ ಮತ್ತು ದ್ವಿ ಪಾತ್ರವನ್ನು ನಿರ್ವಹಿಸುತ್ತದೆ.

ಇದರ ವಿವರಣೆಯನ್ನು ಮಾರ್ಚ್ 14, 1782 ರಲ್ಲಿ ಒಪ್ಪಲಾಯಿತು ಮತ್ತು ಜುಲೈ 14, 1782ರಲ್ಲಿ ಪಟ್ಟಿಗೆ ಸೇರಿಸಲಾಯಿತು.

  • ಹಕ್ಕುಸ್ವಾಮ್ಯ 1,432 ಉಗಿ ಇಂಜಿನ್‌ನಿಂದ ಹೊಸ ಅಭಿವೃದ್ಧಿ - ಮೂರು ಕಡ್ಡಿ ಮತ್ತು ಉಗಿಯ ರವಾನೆ.

ಇದರ ವಿವರಣೆಯನ್ನು ಏಪ್ರಿಲ್ 28 1782 ರಲ್ಲಿ ಒಪ್ಪಲಾಯಿತು ಮತ್ತು ಆಗಸ್ಟ್ 25, 1782ರಲ್ಲಿ ಪಟ್ಟಿಗೆ ಸೇರಿಸಲಾಯಿತು.

  • ಹಕ್ಕುಸ್ವಾಮ್ಯ 1,485 ಕುಲುಮೆ ನಿರ್ಮಾಣದ ಹೊಸ ಅಭಿವೃದ್ಧಿ ವಿಧಾನಗಳು.

ಇದರ ವಿವರಣೆಯನ್ನು ಜೂನ್ 14, 1785 ರಲ್ಲಿ ಒಪ್ಪಲಾಯಿತು ಮತ್ತು ಜುಲೈ 9, 1785 ರಲ್ಲಿ ಪಟ್ಟಿಗೆ ಸೇರಿಸಲಾಯಿತು.

ಟಿಪ್ಪಣಿಗಳು

ಗ್ರಂಥಸೂಚಿ

  • ಜರ್ನಲ್‌ ಆಫ್ಇನ್‌ಸ್ಟಿಟ್ಯುಶನ್‌ ಆಫ್‌ ಮೆಕ್ಯಾನಿಕಲ್‌ ಇಂಜಿನಿಯರ್ಸ್ ನಲ್ಲಿನ "ಸಮ್‌ ಅನ್ಪಬ್ಲಿಶಡ್‌ ಲೆಟರ್ಸ್ ಆಫ್‌ ಜೇಮ್ಸ್ ವ್ಯಾಟ್‌" (ಲಂಡನ್‌, 1915).
  • ಕಾರ್ನೆಗೀ, ಆಂಡ್ರ್ಯೂ, ಜೇಮ್ಸ್ ವ್ಯಾಟ್‌ ಯುನಿವರ್ಸಿಟಿ ಪ್ರೆಸ್‌ ಆಫ್‌ ಫೆಸಿಫಿಕ್‌ (2001) (1913ರ ಆವೃತ್ತಿಯನ್ನು ಮರುಮುದ್ರಿಸಲಅಗಿದೆ.), ISBN 0-89875-578-6.
  • Dickenson, H. W. (1935). James Watt: Craftsman and Engineer. Cambridge University Press.
  • ಹೆಚ್‍. ಡಬ್ಲು‌. ಡಿಕಿನ್‌ಸನ್‌ ಮತ್ತು ಹಗ್‌ ಪೆಂಬ್ರೊಕೆ Vowles ಜೇಮ್ಸ್‌ ವ್ಯಾಟ್‌ ಆ‍ಯ್‌೦ಡ್‍ ಇಂಡಸ್ಟ್ರಿಯಲ್‌ ರೆವಲ್ಯೂಶನ್‌ (1943ರಲ್ಲಿ ಪ್ರಕಟವಾದ, 1948 ಮತ್ತು 1949ರಲ್ಲಿ ಮರುಮುದ್ರಣಗೊಂಡಿದೆ ಸ್ಪ್ಯಾನಿಶ್‌ ಮತ್ತು ಪೊರ್ಚ್ಯುಗೀಸ್‌ನಲ್ಲಿ (1944) ಬ್ರಿಟಿಷ್‌ ಕೌನ್ಸಿಲ್‌ ಪ್ರಕಟಗೊಂಡಿದೆ)
  • ಹಿಲ್ಸ್, Rev. ಡ್ರಾ. ರಿಚರ್ಡ್‌ ಎಲ್‌., ಜೇಮ್ಸ್‌ ವ್ಯಾಟ್‌, ವಾಲ್ಯೂಮ್‌ 1, ಹಿಸ್‌ ಟೈಮ್‌ ಇನ್‌ ಸ್ಕಾಟ್‌ಲ್ಯಾಂಡ್‌, 1736-1774 (2002); ಅಧ್ಯಾಯ 2, ದ ಇಯರ್ಸ್‌ ಆಫ್‌ ಟಾಯಿಲ್‌,1775-1785 ; ಅಧ್ಯಾಯ 3 ಟ್ರಿಂಪ್‌ ಥ್ರೂ ಅಡ್ವರ್ಸಿಟಿ 1785-1819. ಲ್ಯಾಂಡ್‌ಮಾರ್ಕ್‌ ಪಬ್ಲಿಶಿಂಗ್‌ ಲಿಮಿಟೆಡ್‌, ISBN 1-84306-045-0.
  • Hulse David K. (1999). The early development of the steam engine. Leamington Spa, UK: TEE Publishing. pp. 127–152. ISBN 1 85761 107 1.
  • Hulse David K. (2001). The development of rotary motion by steam power. Leamington, UK: TEE Publishing Ltd. ISBN 1 85761 119 5.
  • ಮಾರ್ಸ್ಡನ್‌, Ben. ವ್ಯಾಟ್ಸ್‌ ಪರ್ಫೆಕ್ಟ್‌ ಇಂಜಿನ್‌ ಕೊಲಂಬಿಯ ಯುನಿವರ್ಸಿಟಿ‌ ಪ್ರೆಸ್‌ (ನ್ಯೂಯಾರ್ಕ್‌, 2002) ISBN 0-231-13172-0.
  • ಯೂನಿವರ್ಸಿಟಿ ಆಫ್‌ ರೊಚೆಸ್ಟರ್‌ ಇತಿಹಾಸ ವಿಭಾಗದ ಸ್ಟೀಮ್‌ ಎಂಜಿನ್‌ ಲಿಬರ್ಟಿ[ಶಾಶ್ವತವಾಗಿ ಮಡಿದ ಕೊಂಡಿ] ಯಿಂದಾದ ಥಾಮಸ್‌ ಹೆಚ್‌.ಮಾರ್ಶಲ್‌ (1925), ಜೇಮ್ಸ್‌ ವ್ಯಾಟ್‌ ,ಚಾಪ್ಟರ್‌ 3: ಮ್ಯಾಥಮೆಟಿಕಲ್‌ ಇನ್‌ಸ್ಟ್ರೂಮೆಂಟ್‌ ಮೇಕರ್‌ Archived 2005-12-21 ವೇಬ್ಯಾಕ್ ಮೆಷಿನ್ ನಲ್ಲಿ..
  • ಥಾಮಸ್‌ ಹೆಚ್‌ ಮಾರ್ಶಲ್‌ (1925) ಜೇಮ್ಸ್ ವ್ಯಾಟ್‌ , [೧] Archived 2005-12-21 ವೇಬ್ಯಾಕ್ ಮೆಷಿನ್ ನಲ್ಲಿ. ಯುನಿವರ್ಸಿಟಿ ಆಫ್ ರೊಚೆಸ್ಟರ್‌ ಇತಿಹಾಸ ವಿಭಾಗ.
  • Muirhead, James Patrick (1854). Origin and Progress of the Mechanical Inventions of James Watt. London: John Murray.
  • Muirhead, James Patrick (1858). The Life of James Watt. London: John Murray.
  • ಸಾಮ್ಯುಯಲ್‌ ಸ್ಮೈಲ್‌, ಲೈವ್ಸ್‌ ಆಫ್‌ ಇಂಜಿನಿಯರ್ಸ್‌ , (ಲಂಡನ್‌, 1861–62, ಹೊಸ ಆವೃತ್ತಿ, ಐದನೇ ವಿಭಾಗ, 1905).
    ಸಂಬಂಧಿತ ವಿಚಾರಗಳು
  • Schofield, Robert E. (1963). The Lunar Society, A Social History of Provincial Science and Industry in Eighteenth Century England. Clarendon Press.
  • Uglow, Jenny (2002). The Lunar Men. London: Farrar, Straus and Giroux.

ಹೊರಗಿನ ಕೊಂಡಿಗಳು

ಜೇಮ್ಸ್ ವ್ಯಾಟ್: ಜೀವನ ಚರಿತ್ರೆ, ವಿವಾದ, ಪರಂಪರೆ 
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಜೇಮ್ಸ್ ವ್ಯಾಟ್]]

Tags:

ಜೇಮ್ಸ್ ವ್ಯಾಟ್ ಜೀವನ ಚರಿತ್ರೆಜೇಮ್ಸ್ ವ್ಯಾಟ್ ವಿವಾದಜೇಮ್ಸ್ ವ್ಯಾಟ್ ಪರಂಪರೆಜೇಮ್ಸ್ ವ್ಯಾಟ್ ಪ್ರಶಸ್ತಿಗಳುಜೇಮ್ಸ್ ವ್ಯಾಟ್ ಸ್ಮಾರಕಗಳುಜೇಮ್ಸ್ ವ್ಯಾಟ್ ಹಕ್ಕುಸ್ವಾಮ್ಯಗಳುಜೇಮ್ಸ್ ವ್ಯಾಟ್ ಟಿಪ್ಪಣಿಗಳುಜೇಮ್ಸ್ ವ್ಯಾಟ್ ಗ್ರಂಥಸೂಚಿಜೇಮ್ಸ್ ವ್ಯಾಟ್ ಹೊರಗಿನ ಕೊಂಡಿಗಳುಜೇಮ್ಸ್ ವ್ಯಾಟ್

🔥 Trending searches on Wiki ಕನ್ನಡ:

ಬಂಡಾಯ ಸಾಹಿತ್ಯಬೆಂಗಳೂರು ಗ್ರಾಮಾಂತರ ಜಿಲ್ಲೆಯೋಗಸೂರ್ಯ (ದೇವ)ಹಾಸನ ಜಿಲ್ಲೆಟಿಪ್ಪು ಸುಲ್ತಾನ್ಗಾದೆಶುಕ್ರಚಾಲುಕ್ಯನರೇಂದ್ರ ಮೋದಿಶಬ್ದಮಣಿದರ್ಪಣವಾಯು ಮಾಲಿನ್ಯಜಲ ಮಾಲಿನ್ಯಕಲ್ಪನಾನಾಲ್ವಡಿ ಕೃಷ್ಣರಾಜ ಒಡೆಯರುಮಳೆತೀ. ನಂ. ಶ್ರೀಕಂಠಯ್ಯಕರ್ನಾಟಕದ ಇತಿಹಾಸಭಾರತದ ಜನಸಂಖ್ಯೆಯ ಬೆಳವಣಿಗೆರಚಿತಾ ರಾಮ್ಗೊರೂರು ರಾಮಸ್ವಾಮಿ ಅಯ್ಯಂಗಾರ್ಹಾವಿನ ಹೆಡೆಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಸೂರ್ಯವ್ಯೂಹದ ಗ್ರಹಗಳುಸರ್ವೆಪಲ್ಲಿ ರಾಧಾಕೃಷ್ಣನ್ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಚಂದ್ರಯಾನ-೩ಜರಾಸಂಧಕನ್ನಡ ಸಾಹಿತ್ಯ ಸಮ್ಮೇಳನಫುಟ್ ಬಾಲ್ಕರ್ನಾಟಕದ ಹಬ್ಬಗಳುಜೀವಕೋಶಭಾರತದ ರಾಷ್ಟ್ರಪತಿಕಾವೇರಿ ನದಿಕೊಡವರುಬುಧಮೂಲಭೂತ ಕರ್ತವ್ಯಗಳುಮಹಾಭಾರತಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮಧ್ವಾಚಾರ್ಯಪೆರಿಯಾರ್ ರಾಮಸ್ವಾಮಿಅಲ್ಲಮ ಪ್ರಭುಭಕ್ತಿ ಚಳುವಳಿಹವಾಮಾನಅಂತರಜಾಲದಿವ್ಯಾಂಕಾ ತ್ರಿಪಾಠಿಕರ್ನಾಟಕದ ಮುಖ್ಯಮಂತ್ರಿಗಳುತಂತ್ರಜ್ಞಾನದ ಉಪಯೋಗಗಳುಕೈಗಾರಿಕೆಗಳುದಯಾನಂದ ಸರಸ್ವತಿತುಮಕೂರುಸಿದ್ದಪ್ಪ ಕಂಬಳಿತ. ರಾ. ಸುಬ್ಬರಾಯಭಾರತದ ಉಪ ರಾಷ್ಟ್ರಪತಿವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಬಾಬು ಜಗಜೀವನ ರಾಮ್ಗಾಳಿ/ವಾಯುಭೂಮಿಕನಕದಾಸರುಕಲಿಯುಗಪೊನ್ನಲಗೋರಿಬಿ. ಶ್ರೀರಾಮುಲುಭಾರತೀಯ ಸ್ಟೇಟ್ ಬ್ಯಾಂಕ್ಆಗಮ ಸಂಧಿರೈತಹಾಗಲಕಾಯಿಸೂರ್ಯ ಗ್ರಹಣಬ್ರಹ್ಮಬೆಳಕುಮಾನವ ಸಂಪನ್ಮೂಲ ನಿರ್ವಹಣೆಜಿಡ್ಡು ಕೃಷ್ಣಮೂರ್ತಿಅವರ್ಗೀಯ ವ್ಯಂಜನಕನ್ನಡ ಛಂದಸ್ಸುವರದಕ್ಷಿಣೆಸೈಯ್ಯದ್ ಅಹಮದ್ ಖಾನ್ಶ್ರವಣಬೆಳಗೊಳ🡆 More