ಚಳ್ಳೆ ಹಣ್ಣು

ಚಳ್ಳೆಹಣ್ಣು (ಇಂಗ್ಲೀಷ್ Bird lime) ಪಶ್ಚಿಮ ಘಟ್ಟದ ಕಾಡು ಹಣ್ಣುಗಳಲ್ಲಿ ಒಂದು.

ಚಳ್ಳೆ ಹಣ್ಣು
ಚಳ್ಳೆಹಣ್ಣು
ಚಳ್ಳೆ ಹಣ್ಣು
ಚಳ್ಳೆ ಹಣ್ಣು
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Asterids
ಗಣ:
Lamiales
ಕುಟುಂಬ:
Boraginaceae
ಕುಲ:
Cordia
ಪ್ರಜಾತಿ:
C. myxa
Binomial name
Cordia myxa
L.
Synonyms

Cordia obliqua
Cordia domestica

ಕನ್ನಡದಲ್ಲಿ

ಸೊಳ್ಳೆ, ಬೊಟ್ಟೆ, ಚೆಡ್ಲು, ಕೆಂದಲ್, ಮಣ್ಣಡಿಕೆ, ಚಳ್ಳಂಟು,ಗೊಣ್ಣೆ ಹಣ್ಣು.

ಇತರ ಭಾಷೆಯಲ್ಲಿ

(ಹಿಂದಿ) ಲಸುರ, (ಇಂ) ಅಸ್ಸಿರಿಯನ್ ಪ್ಲಮ್, ಬರ್ಡ್ ಲೈಮ್, (ಸಂ) ಉದ್ದಾಲಕ, ಬೌವರಕ, (ತ) ನರುವಿಲಿ, (ತೆ) ಬಂಕನೆಕ್ಕೆರ.

ಸಸ್ಯಶಾಸ್ತ್ರೀಯ ವಿಂಗಡಣೆ

ಕಾರ್ಡೀಯ ಮಿಕ್ಸ (Cordia myxa L.C. obliqua)

ಕುಟುಂಬ

ಬೊರಾಗಿನೇಸಿ (Boraginaceae)

ಹಣ್ಣಾಗುವ ಕಾಲ

ಮೇ- ಜುಲೈ

ಪೌಷ್ಟಿಕಾಂಶಗಳು

ಪ್ರೋಟೀನ್, ಶರ್ಕರಪಿಷ್ಟ, ಕಬ್ಬಿಣ, ಪೊಟಾಶಿಯಮ್, ಮೆಗ್ನಿಶಿಯಮ್, ಸುಣ್ಣ.

ಆಹಾರ ಪದಾರ್ಥಗಳು

ಹಣ್ಣಿನಿಂದ ಮದ್ಯ, ಕಾಯಿಗಳಿಂದ ಉಪ್ಪಿನಕಾಯಿ, ಸಾಂಬಾರ್.

ಔಷಧೀಯ ಗುಣ

  • ಹಣ್ಣು ವಿರೇಚಕ, ಮೂತ್ರವರ್ಧಕ, ಶಾಮಕ ಕಫ ಮತ್ತು ಕೆಮ್ಮು ನಿವಾರಕ.
  • ಚರ್ಮ ರೋಗ ಮತ್ತು ತುರಿಕೆ ನಿವಾರಣೆಗೆ, ತಲೆಗೂದಲು ಬೆಳೆಯಲು ಉತ್ತಮ.
  • ಗರ್ಭಕೋಶದ ಹಾಗೂ ಯಕೃತ್ ತೊಂದರೆಗೆ ಹಣ್ಣಿನ ಔಷಧಿ.
  • ಚಳ್ಳೆ ಬೀಜದ ಪುಡಿಯಿಂದ ಹುಳಕಡ್ಡಿಯ ಶಮನ.
  • ತೊಗಟೆಯ ಕಷಾಯದಿಂದ ಅತಿಸಾರ ಹೊಟ್ಟೆನೋವು ಗುಣಮುಖ.
  • ಗಾಯಕ್ಕೆ ತೊಗಟೆಯ ಗಂಧ ಲೇಪನ.

ಸಸ್ಯ ಮೂಲ, ಸ್ವರೂಪ

ಏಷ್ಯಾ ಮೂಲದ ಚಳ್ಳೆಗಿಡ ೮-೧೦ ಮೀ ಎತ್ತರಕ್ಕೆ ಬೆಳೆಯಬಲ್ಲದು.ಇದು ಹಳ‍್ಳದ ಬದಿಯಲ್ಲಿ, ಪೊದೆ ಗಿಡ ಗಂಟಿಗಳು ಇರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ತೆಳ್ಳನೆಯ ಇಳಿ ಬಿದ್ದ ರೆಂಬೆಗಳಲ್ಲಿ ಅಂಡಾಕಾರದ ಚೂಪು ತುದಿಯ ದಟ್ಟ ಹಸಿರು ಎಲೆಗಳು. ಚಿಕ್ಕ ಬಿಳಿ ಹೂಗೂಂಚಲು ಹಸಿರು ಕಾಯಿಗಳಿಗೆ ರೂಪಾಂತರ. ಹಳದಿ ಮಿಶ್ರಿತ ತಿಳಿ ಗುಲಾಬಿ ವರ್ಣದ ಹಣ್ಣಿನಲ್ಲಿ ಸುತ್ತುವರೆದ ಪಾರದರ್ಶಕ ಸಿಹಿ ಅಂಟಿನ ತಿರುಳು.ಒಗರು ಮಿಶ್ರಿತ ಸಾಧಾರಣ ಸಿಹಿಯನ್ನು ಹೊಂದಿದೆ.ಇದರ ಬೀಜವು ಗಟ್ಟಿಯಾಗಿರುತ್ತದೆ.

ಸಸ್ಯ ಪಾಲನೆ

ಉಷ್ಣವಲಯದಲ್ಲಿ, ಸಮುದ್ರಮಟ್ಟದಿಂದ ೨೦೦-೧೫೦೦ ಮೀ ಎತ್ತರದಲ್ಲಿ ಬೆಳೆಯುವ ಮರ. ಮರಳು ಮಿಶ್ರಿತ ಗೋಡು ಮಣ್ಣು ಉತ್ತಮ. ಬೀಜ ಮತ್ತು ದಂಟುಸಸಿಗಳಿಂದ ಸಸ್ಯಾಭಿವೃದ್ಧಿ. ಹಕ್ಕಿ ಕೋತಿಗಳಿಂದ ಬೀಜಪ್ರಸಾರ.

ವಿಶಿಷ್ಟತೆ

  • ಇದು ಕೋತಿ,ಅಳಿಲು ಮತ್ತು ಹಲವು ಪಕ್ಷಿಗಳಿಗೆ ಅತ್ಯಂತ ಪ್ರಿಯವಾದ ಹಣ್ಣು.
  • ಹಣ್ಣಿನ ಅರೆಪಾರದರ್ಶಕ ತಿರುಳು ಉತ್ತಮ ಅಂಟು.
  • ಸೊಪ್ಪು ಪಶುಗಳಿಗೆ ಮೇವು.
  • ದೋಣಿ, ಆಟಿಕೆ, ಕೃಷಿ ಉಪಕರಣಗಳು ಮತ್ತು ಕೆತ್ತನೆ ಕಲಸಕ್ಕೆ ಮರದ ಬಳಕೆ
  • ಕನ್ನಡ ಸಾಹಿತ್ಯದಲ್ಲಿ 'ಚಳ್ಳೆ ಹಣ್ಣು ತಿನ್ನಿಸು' ಎಂಬ ನುಡಿಗಟ್ಟಿನ ಪ್ರಯೋಗ ಸಾಮಾನ್ಯ.
  • ಇದನ್ನು ಪುಸ್ತಕಗಳ ಹಾಳೆಗಳನ್ನು ಅಂಟಿಸಲು ಉಪಯೋಗಿಸುತ್ತಿದ್ದರು.
  • ಇದರ ಮಿಡಿಯ ಉಪ್ಪಿನಕಾಯಿಯನ್ನು ತಯಾರಿಸುತ್ತಾರೆ.
  • ಇದರಲ್ಲಿ ಪ್ರೋಟಿನ್, ಕಬ್ಬಿಣ, ಮೆಗ್ನೀಶಿಯಂ, ಪೊಟಾಶಿಯಂ ಹಾಗೂ ಸುಣ್ಣದ ಅಂಶಗಳು ಹೇರಳವಾಗಿರುತ್ತದೆ.
  • ಮರದ ತೊಗಟೆ,ಎಲೆಗಳು, ಮತ್ತು ಹಣ್ಣುಗಳು ಔಷಧೀಯ ಗುಣಗಳನ್ನು ಹೊಂದಿವೆ.
  • ಹಣ್ಣಿನ ಲೋಳೆಯು ಮೂತ್ರವರ್ಧಕವಾಗಿದೆ.


ಉಲ್ಲೇಖ

ಬಾಹ್ಯಸಂಪರ್ಕ

http://www.ayurvediccommunity.com/AmaraEnglish.asp

Tags:

ಚಳ್ಳೆ ಹಣ್ಣು ಕನ್ನಡದಲ್ಲಿಚಳ್ಳೆ ಹಣ್ಣು ಇತರ ಭಾಷೆಯಲ್ಲಿಚಳ್ಳೆ ಹಣ್ಣು ಸಸ್ಯಶಾಸ್ತ್ರೀಯ ವಿಂಗಡಣೆಚಳ್ಳೆ ಹಣ್ಣು ಕುಟುಂಬಚಳ್ಳೆ ಹಣ್ಣು ಹಣ್ಣಾಗುವ ಕಾಲಚಳ್ಳೆ ಹಣ್ಣು ಪೌಷ್ಟಿಕಾಂಶಗಳುಚಳ್ಳೆ ಹಣ್ಣು ಆಹಾರ ಪದಾರ್ಥಗಳುಚಳ್ಳೆ ಹಣ್ಣು ಔಷಧೀಯ ಗುಣಚಳ್ಳೆ ಹಣ್ಣು ಸಸ್ಯ ಮೂಲ, ಸ್ವರೂಪಚಳ್ಳೆ ಹಣ್ಣು ಸಸ್ಯ ಪಾಲನೆಚಳ್ಳೆ ಹಣ್ಣು ವಿಶಿಷ್ಟತೆಚಳ್ಳೆ ಹಣ್ಣು ಉಲ್ಲೇಖಚಳ್ಳೆ ಹಣ್ಣು ಬಾಹ್ಯಸಂಪರ್ಕಚಳ್ಳೆ ಹಣ್ಣುw:Bird plum

🔥 Trending searches on Wiki ಕನ್ನಡ:

ಅಳಿಲುಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಅದ್ವೈತನಗರೀಕರಣಶಬರಿಹಾಗಲಕಾಯಿಅವಿಭಾಜ್ಯ ಸಂಖ್ಯೆಆದೇಶ ಸಂಧಿಸಂಶೋಧನೆಶೂನ್ಯ ಛಾಯಾ ದಿನಹಲ್ಮಿಡಿವೇದಾವತಿ ನದಿಸಮಾಜ ಸೇವೆಕಂಪ್ಯೂಟರ್ಬೆಂಗಳೂರುಮಾನವ ಹಕ್ಕುಗಳುಕರ್ಬೂಜಕರ್ನಾಟಕ ಪೊಲೀಸ್ಸಾಯಿ ಪಲ್ಲವಿಹೊಯ್ಸಳೇಶ್ವರ ದೇವಸ್ಥಾನಬಾರ್ಲಿಅಮ್ಮಕುಮಾರವ್ಯಾಸಇಮ್ಮಡಿ ಪುಲಿಕೇಶಿಉಪನಿಷತ್ದೇವತಾರ್ಚನ ವಿಧಿಎಚ್‌.ಐ.ವಿ.ಹಾನಗಲ್1935ರ ಭಾರತ ಸರ್ಕಾರ ಕಾಯಿದೆಕಪ್ಪೆ ಅರಭಟ್ಟಸಿಂಧನೂರುಭಾರತದ ಸಂವಿಧಾನ ರಚನಾ ಸಭೆಗಸಗಸೆ ಹಣ್ಣಿನ ಮರಹೊರನಾಡುಮಾವುಡಿ.ವಿ.ಗುಂಡಪ್ಪಆಗಮ ಸಂಧಿಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುಬಿ. ಆರ್. ಅಂಬೇಡ್ಕರ್ಗೋವಿಂದ ಪೈಹನುಮಾನ್ ಚಾಲೀಸರಾಧಿಕಾ ಕುಮಾರಸ್ವಾಮಿಕೆ. ಎಸ್. ನಿಸಾರ್ ಅಹಮದ್ಸ್ವಾಮಿ ರಮಾನಂದ ತೀರ್ಥಭಾರತದ ಚಲನಚಿತ್ರೋದ್ಯಮಲಕ್ಷ್ಮಣಕುಕ್ಕೆ ಸುಬ್ರಹ್ಮಣ್ಯ ದೇವಾಲಯರಾಷ್ಟ್ರೀಯ ಸೇವಾ ಯೋಜನೆಅಂತರಜಾಲಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುತಾಳೀಕೋಟೆಯ ಯುದ್ಧಕನ್ನಡ ಅಕ್ಷರಮಾಲೆಕ್ಯಾನ್ಸರ್ಸುದೀಪ್ಯೋಗವಾಹವಸುಧೇಂದ್ರಕ್ಯುಆರ್ ಕೋಡ್ಗಾಳಿಪಟ (ಚಲನಚಿತ್ರ)ಭಾವಗೀತೆಹೃದಯಸಮುದ್ರಗುಪ್ತಮಾನವ ಸಂಪನ್ಮೂಲಗಳುಕನ್ನಡ ಗುಣಿತಾಕ್ಷರಗಳುಬಿದಿರುಸಿಗ್ಮಂಡ್‌ ಫ್ರಾಯ್ಡ್‌ಬಿಳಿಗಿರಿರಂಗನ ಬೆಟ್ಟಕಾಮಧೇನುಸರ್ವೆಪಲ್ಲಿ ರಾಧಾಕೃಷ್ಣನ್ಮಾಸ್ತಿ ವೆಂಕಟೇಶ ಅಯ್ಯಂಗಾರ್ದ್ವಾರಕೀಶ್ಸಾರಾ ಅಬೂಬಕ್ಕರ್ಗರ್ಭಕಂಠದ ಕ್ಯಾನ್ಸರ್‌ಕವಿಗಳ ಕಾವ್ಯನಾಮಬಿರಿಯಾನಿತ್ರಿಪದಿರವಿ ಡಿ. ಚನ್ನಣ್ಣನವರ್🡆 More