ಒಸಾಮಾ ಬಿನ್ ಲಾಡೆನ್

ಒಸಾಮಾ ಬಿನ್ ಮೊಹಮ್ಮದ್ ಬಿನ್ ಅವದ್ ಬಿನ್ ಲಾಡೆನ್ (ಅರೇಬಿಕ್: أسامة بن محمد بن عوض بن لادن, ೧೦ ಮಾರ್ಚ್ ೧೯೫೭– ೨ ಮೇ ೨೦೧೧) ಸೌದಿ ಅರೇಬಿಯದ ಶ್ರೀಮಂತ ಬಿನ್ ಲಾಡೆನ್ ಪರಿವಾರದ ಸದಸ್ಯ, ಜಿಹಾದಿ ಭಯೋತ್ಪಾದಕ ಸಂಸ್ಥೆಯಾದ ಅಲ್ ಖೈದಾದ ಸಂಸ್ಥಾಪಕ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸೆಪ್ಟೆಂಬರ್ ೧೧ ೨೦೦೧ರಂದು ನಡೆದ ದಾಳಿ ಮತ್ತು ಇನ್ನೂ ಅನೇಕ ನಾಗರಿಕ ಮತ್ತು ಸೈನ್ಯ ಗುರಿಗಳ ಮೇಲೆ ನಡೆದ ದಾಳಿಗಳ ಜವಾಬ್ದಾರ.

ಒಸಾಮಾ ಬಿನ್ ಲಾಡೆನ್
أسامة بن لادن
ಒಸಾಮಾ ಬಿನ್ ಲಾಡೆನ್
Born(೧೯೫೭-೦೩-೧೦)೧೦ ಮಾರ್ಚ್ ೧೯೫೭
DiedMay 2, 2011(2011-05-02) (aged 54)
ಅಬೊಟ್ಟಾಬಾದ್, ಪಾಕಿಸ್ತಾನ
Nationalityಸೌದಿ ಅರೇಬಿಯ

ಜನನ,ವಿದ್ಯಾಭ್ಯಾಸ ಹಾಗೂ ಮುಂದಿನ ಜೀವನ

ತಂದೆ, ಮಹಮದ್ ಲಾಡೆನ್. ತಾಯಿ, ಹಮೀದಾ ಆಲ್ ಅತ್ತಾಸ್, ಇವರ ಏಕೈಕ ಪುತ್ರನೇ ಒಸಾಮಾ ಬಿನ್ ಲಾಡೆನ್. ಮಹಮದ್ ಲಾಡೆನ್ ರ ೧೦ ನೆಯ ಪತ್ನಿ ಹಮೀದಾ, ೧೯೫೭ ರ, ಮಾರ್ಚ್ ೧೦ ರಂದು, ಸೌದಿ ಅರೇಬಿಯದ 'ರಿಯಾದ್' ನಗರದಲ್ಲಿ ಜನ್ಮ ಕೊಟ್ಟರು. ಆಕೆ ಸಿರಿಯಾ ದೇಶದ ಡಮಾಸ್ಕಸ್ ನಗರದ 'ಅಲಾವಿ' ಬುಡಕಟ್ಟಿಗೆ ಸೇರಿದವರು. ಒಸಾಮಾ, ೧೯೬೮ ರಿಂದ ೧೯೭೬ ರ ವರೆಗೆ ಜೆಡ್ಡಾದ 'ಆಲ್ ತಗೇರ್ ಮಾದರಿ ಶಾಲೆ'ಯಲ್ಲಿ ವಿದ್ಯಾರ್ಜನೆ ಮಾಡಿ, ೭೦ ರ ದಶಕದ ಅಂತ್ಯದಲ್ಲಿ 'ಕಿಂಗ್ ಅಬ್ದುಲ್ ಅಝೀಝ್ ವಿಶ್ವ ವಿದ್ಯಾಲಯದಲ್ಲಿ 'ಅರ್ಥ ಶಾಸ್ತ್ರ' ಹಾಗೂ 'ಆಡಳಿತ ನಿರ್ವಹಣೆಯಲ್ಲಿ ಪದವಿ' ಗಳಿಸಲು ಕಾಲೇಜ್ ಸೇರಿದರು. ಕಾಲೇಜ್ ಶಿಕ್ಷಣದ ಬಳಿಕ ತಮ್ಮ ಕುಟುಂಬದ ಉದ್ಯೋಗದಲ್ಲಿ ಶಾಮಿಲ್ ಗೊಳ್ಳುವ ಯೋಜನೆಯಿತ್ತು.

ಬಿನ್ ಲಾಡೆನ್ ಸ್ವಭಾವ

ಮಿತಭಾಷಿ, ಕವಿಯ ಮನಸ್ಸಿನ, ಭಾವಜೀವಿ, ಅಂತರ್ಮುಖಿ, ಇಸ್ಲಾಂ ಧಾರ್ಮಿಕ ಗ್ರಂಥಗಳಲ್ಲಿ ಅತೀವ ಆಸಕ್ತ. ಕಾಲೇಜಿನಲ್ಲಿ ಇಸ್ಲಾಂಧರ್ಮದ ಬಗ್ಗೆ ಪಾಠಮಾಡುತ್ತಿದ್ದ ಮಹಮದ್ ಕುತುಬ್ ಎಂಬುವರಿಂದ ಸಾಕಷ್ಟು ಪ್ರಭಾವಿತರಾಗಿದ್ದರು. 'ಮುಸ್ಲಿಮ್ ಬ್ರದರ್ ಹುಡ್' ಎಂಬ ಮೂಲಭೂತವಾದಿ ಸಂಘಟನೆಯ 'ಸಯ್ಯದ್ ಕುತುಬ್' ಮತ್ತು 'ಅಬ್ದುಲ್ಲಾ ಅಜಾಮ್' ಅವರ ನಿಕಟವರ್ತಿಯಾಗಿದ್ದ 'ಮಹಮದ್ ಕುತುಬ್' ತನ್ನ ಮೆಚ್ಚಿನ ವಿದ್ಯಾರ್ಥಿಯ ಬಗ್ಗೆ 'ಅಜಾಮ್'ಗೆ ಮಾಹಿತಿ ನೀಡಿದರು. 'ಅಜಾಮ್' ಜೊತೆಯಲ್ಲಿ ಗಂಟೆಗಟ್ಟಲೆ ಧರ್ಮದ ವಿಚಾರಗಳನ್ನು ಚರ್ಚಿಸುತ್ತಾ ಅಂತಿಮ ವರ್ಷದ ಪದವಿ ಪರೀಕ್ಷೆ ಬಂದದ್ದೇ ಅವರಿಗೆ ತಿಳಿಯಲಿಲ್ಲ. 'ಒಸಾಮಾ' ಕಾಲೇಜಿಗೆ ಶರಣುಹೊಡೆದು ಹೊರಗೆ ಹೊರಟರು.

ಲಾಡೆನ್ ನ ಮರಣೋತ್ತರ ಇಚ್ಛಾಪತ್ರ

ಲಾಡೆನ್, ತಾವೊಬ್ಬ ಮಹಾ-ಆತಂಕಿಯಾದರೂ ಯಾವುದೇ ಕಾರಣಕ್ಕೂ ಅವರ ಮಕ್ಕಳ್ಯಾರೂ ಆ ವ್ಯವಸಾಯದಲ್ಲಿ ಭಾಗಿಯಾಗಬಾರದೆಂದು 'ಉಯಿಲಿ'ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅದನ್ನು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿದ್ದೂ ನಿಜವಾಗಿದೆ. ತಮ್ಮ ಬಿಡುವಿಲ್ಲದ ಕಾರ್ಯಾಚರಣೆಯಲ್ಲಿ ಮಕ್ಕಳ ಹಾಗೂ ಪರಿವಾರದಬಗ್ಗೆ ಗಮನ ಹರಿಸಲಾಗದ್ದಕ್ಕೆ ಕ್ಷಮೆಕೇಳಿರುತ್ತಾರೆ. ತನ್ನ ಹೆಂಡತಿಯರಿಗೆ ಸ್ಪಷ್ಟವಾಗಿ ಅರುಹಿರುವುದೇನೆಂದರೆ, ತಮ್ಮ ಮರಣಾನಂತರ ಮಕ್ಕಳ ಯೋಗಕ್ಷೇವನ್ನು ಪ್ರಧಾನವಾಗಿ ಪರಿಗಣಿಸಬೇಕು. ಅದಕ್ಕಾಗಿ, ಅವರು ಬೇರೆ ಮದುವೆಯಾಗಕೂಡದು. ತನ್ನ ೨೪ ಮಕ್ಕಳನ್ನು ಚೆನ್ನಾಗಿ ಪೋಷಿಸುವ ಜವಾಬ್ದಾರಿ ಹೊರಬೇಕು. ತಾವು ಬಿಟ್ಟುಹೋಗುವ ೧೮ ಮಿಲಿಯನ್ ಡಾಲರ್ ಆಸ್ತಿಯನ್ನು ಹೇಗೆ ವಿತರಿಸಿಕೊಳ್ಳಬೇಕೆನ್ನುವ ಬಗ್ಗೆ ಯಾವ ಮಾಹಿತಿಯೂ ದೊರೆತಿಲ್ಲ. ಮಕ್ಕಳ್ಯಾರೂ ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ಒಡ್ಡಿಕೊಳ್ಳಬಾರದು. ಧಾರ್ಮಿಕ ಚರ್ಚೆಗಳ ಬಗ್ಗೆ ತಲೆಕೆಡೆಸಿಕೊಳ್ಳಬಾರದು. ಕಾಲೇಜ್ ಗೆ ಶರಣುಹೊಡೆದ ನಂತರ ಒಸಾಮ, ೧೯೭೯ ರ ಡಿಸೆಂಬರ್ ನಲ್ಲಿ ಅವರ ಗುರು, ಡಾ. ಅಝಾಮ್ ನ ಹೇಳಿಕೆಯಂತೆ, ಪಾಕಿಸ್ತಾನಕ್ಕೆ ಹೋಗಿ, ಅಲ್ಲಿನ ಪ್ರಮುಖ ಸಂಘಟನೆಗಳಲ್ಲೊಂದಾದ ’ಜಮಾತೆ ಇಸ್ಲಾಮಿಯ’ ದ ಚಿಂತಕ 'ಬುರ್ಹಾನುದ್ದೀನ್ ರಬಾನಿ'ಯವರನ್ನು ಪ್ರಥಮಬಾರಿಗೆ ಭೆಟ್ಟಿಯಾದರು. ಆಫ್ಘಾನಿಸ್ತಾನದಲ್ಲಿ ಸೋವಿಯಟ್ ಒಕ್ಕೂಟದ ವಿರುದ್ಧ 'ಜಿಹಾದ್' (ಧರ್ಮಯುದ್ಧ)ಘೋಷಿಸಿದ್ದ ಒಕ್ಕೂಟದ ೭ ಕಮಾಂಡರ್ ಗಳಲ್ಲಿ ಒಬ್ಬರಾಗಿದ್ದರು. ಈ ಸಂಘಟನೆಗೆ ರೂಪುಕೊಟ್ಟ ಅಝಾಮ್ ಇಸ್ಲಾಮಾಬಾದ್ ನ ’ಅಂತಾರಾಷ್ಟ್ರೀಯ ಇಸ್ಲಾಮಿಕ್ ವಿಶ್ವವಿದ್ಯಾಲಯ’ದಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ಆಗ ಪಾಕೀಸ್ತಾನದಲ್ಲಿ ಪ್ರಶಿಕ್ಷಣಗಳಿಸಿದ ಕೆಲವೇ 'ಮುಜಾಹಿದ್ದೀನ್' ಗಳು 'ಆಫ್ಘಾನಿಸ್ತಾನ'ಕ್ಕೆ ಹೋಗಿ, ಗೆರಿಲ್ಲಾ ದಾಳಿಯಲ್ಲಿ ರಷ್ಯನ್ ಸೇನೆಗಳ ವಿರುದ್ಧ ಕಾಯಾಚರಣೆಗಳನ್ನು ಕೈಗೊಂಡು ಮರಳುತ್ತಿದ್ದರು.

ಸಿ.ಐ.ಎ.ಕಾರ್ಯಾಚರಣೆಯಲ್ಲಿ ಸಕ್ರಿಯರಾದರು

ಪಾಕೀಸ್ತಾನದ ಗುಪ್ತಚರರ ಸಂಸ್ಥೆ, ISI ನ ಮುಖ್ಯಸ್ಥ ಹಮೀದ್ ಗುಲ್ ರನ್ನು ಒಸಾಮಾ ಭೆಟ್ಟಿಯಾದರು. ಅಂದಿನ ದಿನಗಳಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ ಪರೋಕ್ಷವಾಗಿ ಆಫ್ಘಾನಿಸ್ಥಾನದಲ್ಲಿ ನಡೆಸಿದ್ದ ’ಆಪರೇಷನ್ ಸೈಕ್ಲೋನ್’ ಕಾರ್ಯಾಚರಣೆಯಲ್ಲಿ ಸಿ ಐ ಎ ಹಾಗೂ ಮುಜಾಹಿದ್ದೀನ್ ಸಂಘಟನೆಗಳ ಮಧ್ಯೆ ಐ ಎಸ್ ಐ ಮಧ್ಯವರ್ತಿಯಾಗಿ ಪಾತ್ರವಹಿಸಿತ್ತು. ಸಿ ಐ ಎ ಪಡೆಗಳು ಪರೋಕ್ಷವಾಗಿ 'ಮುಜಾಹಿದ್ದೀನ್' ಗಳಿಗೆ ಪಾಕೀಸ್ತಾನದಲ್ಲಿ ಸೈನ್ಯ ತರಬೇತಿ ಕೊಟ್ಟು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸಿ ಆಫ್ಘಾನಿಸ್ತಾಕ್ಕೆ ಹೋಗಿ ಕದನಮಾಡಲು ಪ್ರೇರೇಪಿಸುತ್ತಿದ್ದವು.

ಸಾವು

'ಒಸಾಮಾ ಬಿನ್ ಲಾಡೆನ್‌'ನ ಸಾವನ್ನು ಭಾನುವಾರ, ಮೇ ೧, ೨೦೧೧ ರಂದು ಸುಮಾರು ರಾತ್ರಿ ೧೦:೩೦ .ವೇಳೆಗೆ ವರದಿ ಮಾಡಲಾಯಿತು. ಅಮೆರಿಕಾದ ಮಿಲಿಟರಿ ಪಡೆ ಪಾಕಿಸ್ತಾನದ ಅಬ್ಬೋತ್ತಬಾದ್‌ನಲ್ಲಿ, (Abbottabad), ಒಸಾಮಾ ಬಿನ್ ಲಾಡೆನ್‌ನನ್ನು ೪೦ ನಿಮಿಷದ ಗುಂಡಿನ ಚಕಮಕಿಯ ನಂತರ ಗುಂಡು ಹೊಡೆದು ಹತ್ಯೆಗೈದು, ನಂತರ ಆತನ ಶವವನ್ನು ವಶಕ್ಕೆ ತೆಗದುಕೊಂಡರು, ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಮೇ ೧, ೨೦೧೧ ರಂದು ಅಧಿಕೃತ ಪ್ರಕಟಣೆಯಲ್ಲಿ ಬಿನ್ ಲಾಡೆನ್‌ನನ್ನು ಒಂದು ಸಣ್ಣ ವಿಶೇಷ ಕಾರ್ಯಪಡೆಯು ಕೊಂದು ಹಾಕಿರುವುದಾಗಿ ಹೇಳಿಕೆ ನೀಡಿದರು. ಈ ಕಾರ್ಯಾಚರಣೆಯನ್ನು ಪಾಕಿಸ್ತಾನದಲ್ಲಿ ನೆಲೆಹೂಡಿರುವ ಅಮೆರಿಕಾದ ಜಾಯಿಂಟ್ ಸ್ಪೆಶಲ್ ಆಪರೇಶನ್ಸ್ ಕಮಾಂಡ್‌ ಪಡೆಗಳು ಹಾಗು ಅಮೆರಿಕಾದ ಕೇಂದ್ರೀಯ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿ ಐ ಎ) ನಡೆಸಿದವು.

ಉಲ್ಲೇಖಗಳು

ಅಧಿಕ ಓದಿಕೆ

Tags:

ಒಸಾಮಾ ಬಿನ್ ಲಾಡೆನ್ ಜನನ,ವಿದ್ಯಾಭ್ಯಾಸ ಹಾಗೂ ಮುಂದಿನ ಜೀವನಒಸಾಮಾ ಬಿನ್ ಲಾಡೆನ್ ಬಿನ್ ಲಾಡೆನ್ ಸ್ವಭಾವಒಸಾಮಾ ಬಿನ್ ಲಾಡೆನ್ ಲಾಡೆನ್ ನ ಮರಣೋತ್ತರ ಇಚ್ಛಾಪತ್ರಒಸಾಮಾ ಬಿನ್ ಲಾಡೆನ್ ಸಿ.ಐ.ಎ.ಕಾರ್ಯಾಚರಣೆಯಲ್ಲಿ ಸಕ್ರಿಯರಾದರುಒಸಾಮಾ ಬಿನ್ ಲಾಡೆನ್ ಸಾವುಒಸಾಮಾ ಬಿನ್ ಲಾಡೆನ್ ಉಲ್ಲೇಖಗಳುಒಸಾಮಾ ಬಿನ್ ಲಾಡೆನ್ ಅಧಿಕ ಓದಿಕೆಒಸಾಮಾ ಬಿನ್ ಲಾಡೆನ್ಅಮೆರಿಕ ಸಂಯುಕ್ತ ಸಂಸ್ಥಾನಅರಬ್ಬಿ ಭಾಷೆಅಲ್ ಖೈದಾಇಸ್ಲಾಂ ಧರ್ಮಭಯೋತ್ಪಾದನೆಸೌದಿ ಅರೇಬಿಯ

🔥 Trending searches on Wiki ಕನ್ನಡ:

ಆದೇಶ ಸಂಧಿಗಿರೀಶ್ ಕಾರ್ನಾಡ್ಸ್ವರಸಂಸ್ಕೃತಅಂತರಜಾಲಮಂಟೇಸ್ವಾಮಿಮಧುಮೇಹಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಭಾರತದಲ್ಲಿನ ಶಿಕ್ಷಣಮೂಲಭೂತ ಕರ್ತವ್ಯಗಳುಡೊಳ್ಳು ಕುಣಿತಪೌರತ್ವಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಮೌರ್ಯ ಸಾಮ್ರಾಜ್ಯವಿಧಾನಸೌಧದುಶ್ಯಲಾಪ್ಯಾರಾಸಿಟಮಾಲ್ರಗಳೆಮಲ್ಟಿಮೀಡಿಯಾಕರ್ನಾಟಕದಲ್ಲಿ ಪಂಚಾಯತ್ ರಾಜ್ರಸ(ಕಾವ್ಯಮೀಮಾಂಸೆ)ಆದಿವಾಸಿಗಳುಮೋಳಿಗೆ ಮಾರಯ್ಯವಾಲಿಬಾಲ್ಚಿಕ್ಕಮಗಳೂರುರಾಷ್ತ್ರೀಯ ಐಕ್ಯತೆನರೇಂದ್ರ ಮೋದಿಬಯಲಾಟವಚನ ಸಾಹಿತ್ಯಕರ್ನಾಟಕ ಲೋಕಾಯುಕ್ತಎರಡನೇ ಮಹಾಯುದ್ಧಗೀತಾ (ನಟಿ)ಮಾಸರತನ್ ನಾವಲ್ ಟಾಟಾಮಿಥುನರಾಶಿ (ಕನ್ನಡ ಧಾರಾವಾಹಿ)ರಾಜ್ಯಸಭೆಕೃಷ್ಣಮಿಲಿಟರಿ ಪ್ರಶಸ್ತಿಗಳು ಮತ್ತು ಬಿರುದುಗಳುಭೂಮಿಕೃಷಿಮಾತೃಭಾಷೆಕಾಮಸೂತ್ರವಾಯು ಮಾಲಿನ್ಯಸಮುಚ್ಚಯ ಪದಗಳುಮಜ್ಜಿಗೆಕೊಪ್ಪಳಲೋಪಸಂಧಿಪಂಜೆ ಮಂಗೇಶರಾಯ್ಶ್ಯೆಕ್ಷಣಿಕ ತಂತ್ರಜ್ಞಾನಬಹುವ್ರೀಹಿ ಸಮಾಸಮೂಲಧಾತುವಿಜಯವಾಣಿಆದಿಚುಂಚನಗಿರಿತ್ರಿವೇಣಿಸರ್ಕಾರೇತರ ಸಂಸ್ಥೆಸರ್ವಜ್ಞಅವ್ಯಯಅಕ್ಬರ್ದೇವಸ್ಥಾನಕನ್ನಡ ಸಂಧಿಸಾವಯವ ಬೇಸಾಯಯೋಗಸುಭಾಷ್ ಚಂದ್ರ ಬೋಸ್ಮಳೆನೀರು ಕೊಯ್ಲುಜ್ಯೋತಿಷ ಶಾಸ್ತ್ರಕಿತ್ತೂರು ಚೆನ್ನಮ್ಮಮಂತ್ರಾಲಯಮಣ್ಣುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಬಂಗಾರದ ಮನುಷ್ಯ (ಚಲನಚಿತ್ರ)ರಕ್ತದೊತ್ತಡರಾಷ್ಟ್ರಕೂಟಮಳೆಭತ್ತಇನ್ಸ್ಟಾಗ್ರಾಮ್ಮೊದಲನೇ ಅಮೋಘವರ್ಷಉತ್ತರ ಕರ್ನಾಟಕತ. ರಾ. ಸುಬ್ಬರಾಯಗೊರೂರು ರಾಮಸ್ವಾಮಿ ಅಯ್ಯಂಗಾರ್🡆 More