ಅರೇಬಿಯನ್ ಪರ್ಯಾಯ ದ್ವೀಪ

ಅರೇಬಿಯನ್ ಪರ್ಯಾಯ ದ್ವೀಪ (ಆಂಗ್ಲ: Arabian Peninsula; ಅರೇಬಿಕ್: شبه الجزيرة العربية, ಶಿಬ್‌ಹುಲ್ ಜಝೀರತಿಲ್ ಅರಬಿಯ್ಯ, ಅಥವಾ جزيرة العرب, ಜಝೀರತುಲ್ ಅರಬ್) — ಏಷ್ಯಾ ಖಂಡವು ಆಫ್ರಿಕ ಖಂಡದೊಂದಿಗೆ ಸೇರುವ ಏಷ್ಯಾದ ನೈಋತ್ಯ ಭಾಗದಲ್ಲಿ ಮತ್ತು ಆಫ್ರಿಕದ ಈಶಾನ್ಯ ಭಾಗದಲ್ಲಿರುವ ಪರ್ಯಾಯ ದ್ವೀಪ.

ಇದನ್ನು ಅರೇಬಿಯನ್ ಉಪಖಂಡ ಎಂದು ಕೂಡ ಕರೆಯಲಾಗುತ್ತದೆ. ಇದು ಮಧ್ಯಪ್ರಾಚ್ಯದ ಕೇಂದ್ರ ಭಾಗದಲ್ಲಿದ್ದು, 3,237,500 ಚ. ಕಿಮೀ (1,250,000 ಚ. ಮೈಲು) ವಿಸ್ತೀರ್ಣವನ್ನು ಹೊಂದಿದೆ. ಇದನ್ನು ಜಗತ್ತಿನ ಅತಿದೊಡ್ಡ ಪರ್ಯಾಯ ದ್ವೀಪವೆಂದು ಗುರುತಿಸಲಾಗುತ್ತದೆ.

ಅರೇಬಿಯನ್ ಪರ್ಯಾಯ ದ್ವೀಪ
شبه الجزيرة العربية
ಅರೇಬಿಯನ್ ಪರ್ಯಾಯ ದ್ವೀಪ
Area3,237,500 km2 (1,250,000 sq mi)
Population೮,೬೨,೨೨,೦೦೦
Population density೨೬.೬/km2
HDI0.788 (2018)
high
Countries
  • ಅರೇಬಿಯನ್ ಪರ್ಯಾಯ ದ್ವೀಪ ಬಹ್ರೇನ್
  • ಅರೇಬಿಯನ್ ಪರ್ಯಾಯ ದ್ವೀಪ ಇರಾಕ್
  • ಅರೇಬಿಯನ್ ಪರ್ಯಾಯ ದ್ವೀಪ ಜಾರ್ಡನ್
  • ಅರೇಬಿಯನ್ ಪರ್ಯಾಯ ದ್ವೀಪ ಕುವೈತ್
  • ಅರೇಬಿಯನ್ ಪರ್ಯಾಯ ದ್ವೀಪ ಒಮಾನ್
  • ಅರೇಬಿಯನ್ ಪರ್ಯಾಯ ದ್ವೀಪ ಕತಾರ್
  • ಅರೇಬಿಯನ್ ಪರ್ಯಾಯ ದ್ವೀಪ ಸೌದಿ ಅರೇಬಿಯಾ
  • ಅರೇಬಿಯನ್ ಪರ್ಯಾಯ ದ್ವೀಪ ಸಂಯುಕ್ತ ಅರಬ್ ಸಂಸ್ಥಾನ
  • ಅರೇಬಿಯನ್ ಪರ್ಯಾಯ ದ್ವೀಪ ಯೆಮೆನ್
Largest cities
ಅರೇಬಿಯನ್ ಪರ್ಯಾಯ ದ್ವೀಪದಲ್ಲಿರುವ 11 ಮಹಾ ನಗರಗಳು

ಅರೇಬಿಯನ್ ಪರ್ಯಾಯ ದ್ವೀಪವು ಭೌಗೋಳಿಕವಾಗಿ ಬಹ್ರೈನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ, ಸಂಯುಕ್ತ ಅರಬ್ ಸಂಸ್ಥಾನ (ಯು.ಎ.ಇ) ಮತ್ತು ಯೆಮೆನ್ ದೇಶಗಳನ್ನು ಒಳಗೊಳ್ಳುತ್ತದೆ. ಇರಾಕ್ ಮತ್ತು ಜೋರ್ಡಾನಿನ ದಕ್ಷಿಣ ಭಾಗಗಳು ಕೂಡ ಇದರಲ್ಲಿ ಸೇರುತ್ತವೆ. ಸೌದಿ ಅರೇಬಿಯಾ ಈ ದ್ವೀಪದ ಅತಿದೊಡ್ಡ ದೇಶವಾಗಿದೆ. ಪೌರಾಣಿಕ ಕಾಲದಲ್ಲಿ ಈಗಿನ ಸಿರಿಯಾದ ದಕ್ಷಿಣ ಭಾಗಗಳು, ಜೋರ್ಡಾನ್ ಮತ್ತು ಸಿನಾಯಿ ಪರ್ಯಾಯ ದ್ವೀಪಗಳನ್ನು ಅರೇಬಿಯಾದ ಭಾಗಗಳೆಂದು ಪರಿಗಣಿಸಲಾಗಿತ್ತು.

ಸುಮಾರು 56 ರಿಂದ 23 ದಶಲಕ್ಷ ವರ್ಷಗಳ ಹಿಂದೆ ಕೆಂಪು ಸಮುದ್ರದಲ್ಲಿ ಸಂಭವಿಸಿದ ಬಿರುಕಿನ ಕಾರಣದಿಂದ ಅರೇಬಿಯನ್ ಪರ್ಯಾಯ ದ್ವೀಪ ಅಸ್ತಿತ್ವಕ್ಕೆ ಬಂತು ಎಂದು ಭಾವಿಸಲಾಗುತ್ತದೆ. ಪಶ್ಚಿಮ ಮತ್ತು ನೈಋತ್ಯದಲ್ಲಿ ಕೆಂಪು ಸಮುದ್ರ, ಈಶಾನ್ಯದಲ್ಲಿ ಪರ್ಶಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿ, ಉತ್ತರದಲ್ಲಿ ಶಾಮ್ (ಮೆಡಿಟರೇನಿಯನ್ ಸಮುದ್ರದ ಪೂರ್ವ ಭಾಗ) ಮತ್ತು ಮೆಸಪೊಟೋಮಿಯ ಹಾಗೂ ದಕ್ಷಿಣ ಮತ್ತು ಆಗ್ನೇಯದಲ್ಲಿ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಗಳು ಈ ಪರ್ಯಾಯ ದ್ವೀಪವನ್ನು ಆವರಿಸಿಕೊಂಡಿವೆ. ತೈಲ ಹಾಗೂ ನೈಸರ್ಗಿಕ ಅನಿಲದ ಅಗಾಧ ನಿಕ್ಷೇಪಗಳಿಂದಾಗಿ ಅರೇಬಿಯನ್ ಪರ್ಯಾಯ ದ್ವೀಪವು ಅರಬ್ ಜಗತ್ತಿನ ಭೌಗೋಳಿಕ ರಾಜಕೀಯದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಇಬ್ನುಲ್ ಫಕೀಹ್ ಹೇಳುವಂತೆ, ಹಿಂದಿನ ಕಾಲದಲ್ಲಿ ಈ ಪ್ರದೇಶವನ್ನು ನಾಲ್ಕು ಮುಖ್ಯ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು:

  1. ಕೇಂದ್ರೀಯ ಪ್ರಸ್ಥಭೂಮಿ (ನಜ್ದ್ ಮತ್ತು ಯಮಾಮ)
  2. ದಕ್ಷಿಣ ಅರೇಬಿಯಾ (ಯೆಮೆನ್, ಹದ್ರಮೌತ್ ಮತ್ತು ಒಮಾನ್)
  3. ಬಹ್ರೈನ್ (ಪೂರ್ವ ಅರೇಬಿಯಾ ಅಥವಾ ಅಲ್-ಹಸ್ಸ)
  4. ಹಿಜಾಝ್ (ತಿಹಾಮ).

ನಿಷ್ಪತ್ತಿ

ಹೆಲಿನಿಸ್ಟಿಕ್ ಕಾಲದಲ್ಲಿ ಈ ಪ್ರದೇಶವನ್ನು ಅರೇಬಿಯಾ ಅಥವಾ ಅರೇವಿಯಾ (ಗ್ರೀಕ್: Αραβία) ಎಂದು ಕರೆಯಲಾಗುತ್ತಿತ್ತು. ರೋಮನ್ನರು ಈಗಿನ ಅರೇಬಿಯನ್ ಪರ್ಯಾಯ ದ್ವೀಪಕ್ಕಿಂತಲೂ ಹೆಚ್ಚಿನ ಭಾಗಗಳೊಂದಿಗೆ ಈ ಪ್ರದೇಶವನ್ನು ಅರೇಬಿಯಾ ಎಂಬ ಪೂರ್ವಪ್ರತ್ಯಯವನ್ನು ಸೇರಿಸಿ ಮೂರು ಪ್ರಾಂತ್ಯಗಳಾಗಿ ವಿಂಗಡಿಸಿದ್ದರು:

  • ಅರೇಬಿಯಾ ಪೆಟ್ರಿಯಾ (ಆಂಗ್ಲ: Arabia Petraea ಶಿಲಾ ಅರೇಬಿಯಾ): ಇದು ಈಗಿನ ಸಿರಿಯಾದ ದಕ್ಷಿಣ ಭಾಗ, ಪ್ಯಾಲಸ್ತೀನ್, ಜೋರ್ಡಾನ್, ಸಿನಾಯಿ ಪರ್ಯಾಯ ದ್ವೀಪ ಮತ್ತು ಸೌದಿ ಅರೇಬಿಯಾದ ವಾಯುವ್ಯ ಭಾಗವನ್ನು ಒಳಗೊಂಡಿತ್ತು. ಇದು ಪ್ರಾಂತ್ಯದ ರೂಪ ಪಡೆದು ಪೆಟ್ರಾ ಅನ್ನು ತನ್ನ ರಾಜಧಾನಿಯನ್ನಾಗಿ ಮಾಡಿದ ಏಕೈಕ ಪ್ರದೇಶವಾಗಿದೆ.
  • ಅರೇಬಿಯಾ ಡೆಸರ್ಟಾ (ಆಂಗ್ಲ: Arabia Deserta ಮರುಭೂಮಿ ಅರೇಬಿಯಾ): ಇದು ಅರೇಬಿಯನ್ ಪರ್ಯಾಯ ದ್ವೀಪದ ಆಂತರಿಕ ಭಾಗವನ್ನು ಸೂಚಿಸುತ್ತದೆ.
  • ಅರೇಬಿಯಾ ಫೆಲಿಕ್ಸ್ (ಆಂಗ್ಲ: Arabia Felix ಅದೃಷ್ಟಶಾಲಿ ಅರೇಬಿಯಾ): ಇದು ಈಗಿನ ಯೆಮೆನ್ ದೇಶವನ್ನು ಸೂಚಿಸುತ್ತದೆ. ಈ ಪ್ರದೇಶವು ಹೆಚ್ಚು ಮಳೆಯನ್ನು ಪಡೆದು, ಪರ್ಯಾಯ ದ್ವೀಪದ ಇತರ ಭಾಗಗಳಿಗಿಂತ ಹೆಚ್ಚು ಹಸಿರು ಮತ್ತು ದೀರ್ಘಕಾಲದಿಂದ ಹೆಚ್ಚು ಉತ್ಪಾದಕ ಕ್ಷೇತ್ರಗಳನ್ನು ಆನಂದಿಸುತ್ತಿತ್ತು.
ಅರೇಬಿಯನ್ ಪರ್ಯಾಯ ದ್ವೀಪ 
ಅರೇಬಿಯನ್ ಪರ್ಯಾಯ ದ್ವೀಪದ ಉಪಗ್ರಹ ಚಿತ್ರ

ಅರಬ್ಬರು ಮತ್ತು ಒಟ್ಟೋಮನ್ ಸಾಮ್ರಾಜ್ಯದವರು, ಅರಬ್ಬರು ವಾಸಿಸುತ್ತಿದ್ದ ಅರೇಬಿಯನ್ ಪರ್ಯಾಯ ದ್ವೀಪದ ಪಶ್ಚಿಮ ಪ್ರದೇಶವನ್ನು ಬಿಲಾದುಲ್-ಅರಬ್ (ಅರೇಬಿಕ್: بلاد العرب ಅರಬ್ಬರ ಭೂಮಿ) ಎಂದು ಪರಿಗಣಿಸುತ್ತಿದ್ದರು. ಬಿಲಾದು-ಶ್ಶಾಮ್ (ಅರೇಬಿಕ್: بلاد الشام), ಬಿಲಾದುಲ್-ಯಮನ್ (ಅರೇಬಿಕ್: بلاد اليمن) ಮತ್ತು ಬಿಲಾದುಲ್-ಇರಾಕ್ (ಅರೇಬಿಕ್: بلاد العراق ಅರಬ್ಬರ ಭೂಮಿ) ಇದರ ಪ್ರಮುಖ ವಿಭಾಗಗಳಾಗಿದ್ದವು.

ಭೌಗೋಳಿಕ ಸ್ಥಿತಿ

ಅರೇಬಿಯನ್ ಪರ್ಯಾಯ ದ್ವೀಪವು ಏಷ್ಯಾ ಖಂಡದಲ್ಲಿದೆ. ಇದು ಈಶಾನ್ಯದಲ್ಲಿ ಪರ್ಷಿಯನ್ ಕೊಲ್ಲಿ, ಪೂರ್ವದಲ್ಲಿ ಹರ್ಮುಝ್ ಜಲಸಂಧಿ ಮತ್ತು ಒಮಾನ್ ಕೊಲ್ಲಿ, ಆಗ್ನೇಯದಲ್ಲಿ ಅರಬ್ಬೀ ಸಮುದ್ರ, ದಕ್ಷಿಣದಲ್ಲಿ ಏಡನ್ ಕೊಲ್ಲಿ ಮತ್ತು ಸೊಮಾಲಿ ಸಮುದ್ರ, ನೈಋತ್ಯದಲ್ಲಿ ಬಾಬುಲ್-ಮಂದಬ್ ಜಲಸಂಧಿ ಮತ್ತು ಕೆಂಪು ಸಮುದ್ರದಿಂದ ಸುತ್ತುವರೆದಿದೆ. ಇದರ ಉತ್ತರ ಭಾಗವು ಸ್ಪಷ್ಟವಾದ ಗಡಿರೇಖೆಯಿಲ್ಲದೆ ಸಿರಿಯಾ ಮರುಭೂಮಿಯೊಂದಿಗೆ ವಿಲೀನಗೊಳ್ಳುತ್ತದೆ. ಆದಾಗ್ಯೂ ಇದರ ಉತ್ತರದ ಗಡಿಯನ್ನು ಸಾಮಾನ್ಯವಾಗಿ ಸೌದಿ ಅರೇಬಿಯಾ ಮತ್ತು ಕುವೈತ್‌ ದೇಶಗಳ ಉತ್ತರದ ಗಡಿಗಳು ಹಾಗೂ ಇರಾಕ್ ಮತ್ತು ಜೋರ್ಡಾನ್‌ ದೇಶಗಳ ದಕ್ಷಿಣ ಪ್ರದೇಶಗಳು ಎಂದು ಪರಿಗಣಿಸಲಾಗುತ್ತದೆ.

ಅರೇಬಿಯನ್ ಪರ್ಯಾಯ ದ್ವೀಪದ ಮುಖ್ಯ ಭಾಗವು ಮರುಭೂಮಿಯಾಗಿದೆ. ಆದರೂ ಇದರ ನೈಋತ್ಯದಲ್ಲಿ ಪರ್ವತ ಶ್ರೇಣಿಗಳಿವೆ. ಇದು ಪರ್ಯಾಯ ದ್ವೀಪದ ಉಳಿದ ಭಾಗಗಳಿಗಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತದೆ. ಹರ್‍ರಾತು-ಶ್ಶಾಮ್ ಒಂದು ದೊಡ್ಡ ಜ್ವಾಲಾಮುಖಿ ಪ್ರದೇಶವಾಗಿದ್ದು, ಇದು ವಾಯುವ್ಯ ಅರೇಬಿಯಾದಿಂದ ಜೋರ್ಡಾನ್ ಮತ್ತು ದಕ್ಷಿಣ ಸಿರಿಯಾದವರೆಗೆ ವ್ಯಾಪಿಸಿದೆ.

ರಾಜಕೀಯ ಗಡಿಗಳು

ಅರೇಬಿಯನ್ ಪರ್ಯಾಯ ದ್ವೀಪ 
ಅರೇಬಿಯಾದ ಅಂಗ ದೇಶಗಳು

ಕುವೈತ್, ಕತಾರ್, ಸಂಯುಕ್ತ ಅರಬ್ ಸಂಸ್ಥಾನ (ಯುಎಇ), ಒಮಾನ್, ಯೆಮೆನ್ ಮತ್ತು ಸೌದಿ ಅರೇಬಿಯಾ ಅರೇಬಿಯನ್ ಪರ್ಯಾಯ ದ್ವೀಪದ ಅಂಗ ದೇಶಗಳಾಗಿವೆ. ದ್ವೀಪ ರಾಷ್ಟ್ರವಾದ ಬಹ್ರೈನ್ ಪರ್ಯಾಯ ದ್ವೀಪದ ಪೂರ್ವ ಕರಾವಳಿಯ ಸ್ವಲ್ಪ ದೂರದಲ್ಲಿದೆ.

ಬಹ್ರೈನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ – ಈ ಆರು ದೇಶಗಳು ಗಲ್ಫ್ ಸಹಕಾರ ಮಂಡಳಿಯ (Gulf Cooperation Council – GCC) ಸದಸ್ಯ ದೇಶಗಳಾಗಿವೆ.

ಪರ್ಯಾಯ ದ್ವೀಪದ ಹೆಚ್ಚಿನ ಭಾಗವನ್ನು ಸೌದಿ ಅರೇಬಿಯಾ ಒಳಗೊಂಡಿದೆ. ಪರ್ಯಾಯ ದ್ವೀಪದ ಬಹುಪಾಲು ಜನಸಂಖ್ಯೆಯು ಸೌದಿ ಅರೇಬಿಯಾ ಮತ್ತು ಯೆಮೆನ್‌ನಲ್ಲಿದೆ. ಅರೇಬಿಯನ್ ಪರ್ಯಾಯ ದ್ವೀಪವು ವಿಶ್ವದ ಅತಿದೊಡ್ಡ ತೈಲ ನಿಕ್ಷೇಪವನ್ನು ಹೊಂದಿದೆ. ಸೌದಿ ಅರೇಬಿಯಾ ಮತ್ತು ಯುಎಇ ಈ ಪ್ರದೇಶದ ಅತಿ ಶ್ರೀಮಂತ ರಾಷ್ಟ್ರಗಳಾಗಿವೆ. ಅರೇಬಿಕ್ ಭಾಷೆಯ ಅಲ್-ಜಝೀರಾ ದೂರದರ್ಶನ ಕೇಂದ್ರವು ಕತಾರ್‌ನಲ್ಲಿದೆ, ಇದು ಅಲ್-ಜಝೀರಾ ಇಂಗ್ಲಿಷ್ ಎಂಬ ಹೆಸರಿನಲ್ಲಿ ಆಂಗ್ಲ ಅಂಗಸಂಸ್ಥೆಯನ್ನೂ ಹೊಂದಿದೆ.

ಚರಿತ್ರೆ

ವಾಯವ್ಯ ಸೌದಿ ಅರೇಬಿಯಾದ ತಿಅಸುಲ್-ಗದಾದಲ್ಲಿ ಇತರ ಪ್ರಾಣಿಗಳ ಪಳೆಯುಳಿಕೆಗಳ ಜೊತೆಗೆ ಪತ್ತೆಯಾದ ಮಧ್ಯ ಪ್ರಾಚೀನ ಶಿಲಾಯುಗದ ಕಲ್ಲಿನ ಉಪಕರಣಗಳು 3,00,000 ದಿಂದ 5,00,000 ವರ್ಷಗಳ ಹಿಂದೆ "ಗ್ರೀನ್ ಅರೇಬಿಯಾ" ಮೂಲಕ ಹೋಮಿನಿನ್‌ಗಳು ವಲಸೆ ಬಂದಿರಬಹುದು ಎಂದು ಸೂಚಿಸುತ್ತವೆ. 2,00,000 ವರ್ಷಗಳಷ್ಟು ಹಳೆಯದಾದ ಕಲ್ಲಿನ ಉಪಕರಣಗಳನ್ನು ಪೂರ್ವದ ಅಲ್-ಖಾಸಿಮ್ ಪ್ರಾಂತ್ಯದ ಶುಐಬುಲ್-ಅದ್ಗಾಮ್‌ನಲ್ಲಿ ಸಂಶೋಧಿಸಲಾಗಿದೆ. ಇದು ಅನೇಕ ಇತಿಹಾಸಪೂರ್ವ ತಾಣಗಳು ಈ ಪ್ರದೇಶದಲ್ಲಿ ಒಮ್ಮೆ ಅಸ್ತಿತ್ವದಲ್ಲಿದ್ದವು ಎಂದು ಸೂಚಿಸುತ್ತದೆ. ಸುಮಾರು 188,000 ವರ್ಷಗಳ ಹಿಂದೆ ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಹೋಮಿನಿನ್‌ಗಳು ವಾಸಿಸುತ್ತಿದ್ದರು ಎಂದು ರಿಯಾದ್ ಪ್ರದೇಶದ ಸಫ್ಫಾಕದಲ್ಲಿ ಕಂಡುಬಂದ ಉಪಕರಣಗಳು ಸೂಚಿಸುತ್ತವೆ. ಅರೇಬಿಯಾದಲ್ಲಿ ಮಾನವ ವಾಸವು 1,30,000 ವರ್ಷಗಳ ಹಿಂದೆಯೇ ಸಂಭವಿಸಿರುವ ಸಾಧ್ಯತೆಯಿದೆ. ನಿಫೂದ್ ಮರುಭೂಮಿಯ ಅಲ್-ವುಸ್ತಾದಲ್ಲಿ ಪತ್ತೆಯಾದ ಪಳೆಯುಳಿಕೆಗೊಳಿಸಲಾದ ಹೋಮೋ ಸೇಪಿಯನ್ಸ್ ಬೆರಳಿನ ಮೂಳೆಯು ಸರಿಸುಮಾರು 90,000 ವರ್ಷಗಳ ಹಿಂದಿನದ್ದಾಗಿದ್ದು, ಇದು ಆಫ್ರಿಕಾ ಮತ್ತು ಮೆಡಿಟರೇನಿಯನ್ ಪೂರ್ವ ಭಾಗದ ಹೊರಗೆ ಪತ್ತೆಯಾದ ಅತ್ಯಂತ ಹಳೆಯ ಮಾನವ ಪಳೆಯುಳಿಕೆಯಾಗಿದೆ. ಇದು ಈ ಸಮಯದಲ್ಲಿ ಆಫ್ರಿಕಾದಿಂದ ಅರೇಬಿಯಾಕ್ಕೆ ಮಾನವ ವಲಸೆ ಸಂಭವಿಸಿರಬಹುದೆಂದು ಸೂಚಿಸುತ್ತದೆ.

ಇಸ್ಲಾಮಿಕ್ ಪೂರ್ವ ಅರೇಬಿಯ

ಅರೇಬಿಯನ್ ಉಪದ್ವೀಪದಲ್ಲಿ ಮಾನವ ವಾಸವು ಸುಮಾರು 1,06,000 ದಿಂದ 1,30,000 ವರ್ಷಗಳ ಹಿಂದೆಯೇ ಇತ್ತು ಎಂಬುದಕ್ಕೆ ಪುರಾವೆಗಳಿವೆ. ಆದರೆ ಕಠಿಣ ಹವಾಮಾನವು ಪಶ್ಚಿಮದ ಹಿಜಾಝ್‌ನಲ್ಲಿರುವ ಮಕ್ಕಾ ಮತ್ತು ಮದೀನಾದಂತಹ ಸಣ್ಣ ನಗರಗಳ ವಾಸಸ್ಥಳಗಳನ್ನು ಹೊರತುಪಡಿಸಿ, ಪರ್ಯಾಯ ದ್ವೀಪದ ಇತರ ಭಾಗಗಳಲ್ಲಿ ಜನರ ವಾಸವನ್ನು ತಡೆಯುತ್ತಿತ್ತು.

ಪುರಾತತ್ತ್ವ ಶಾಸ್ತ್ರವು ಇಸ್ಲಾಮಿಕ್-ಪೂರ್ವ ಅರೇಬಿಯಾದಲ್ಲಿ — ವಿಶೇಷವಾಗಿ ದಕ್ಷಿಣ ಅರೇಬಿಯಾದಲ್ಲಿ — ಸಮೂದ್‌ ಮುಂತಾದ ಅನೇಕ ನಾಗರಿಕತೆಗಳ ಅಸ್ತಿತ್ವವಿತ್ತೆಂದು ಸಂಶೋಧಿಸಿದೆ. ದಕ್ಷಿಣ ಅರೇಬಿಯನ್ ನಾಗರೀಕತೆಗಳಲ್ಲಿ ಸಬಾ, ಹಿಮ್ಯರಿ ಸಾಮ್ರಾಜ್ಯ, ಔಸಾನ್ ಸಾಮ್ರಾಜ್ಯ, ಮಾಇನ್ ಸಾಮ್ರಾಜ್ಯ ಮತ್ತು ಸೇಬಿಯನ್ ಸಾಮ್ರಾಜ್ಯಗಳು ಸೇರಿವೆ. ಕ್ರಿ.ಶ. 106 ರಿಂದ 630 ರವರೆಗೆ ವಾಯುವ್ಯ ಅರೇಬಿಯಾವು ರೋಮನ್ ಸಾಮ್ರಾಜ್ಯದ ನಿಯಂತ್ರಣದಲ್ಲಿತ್ತು. ಅವರು ಅದನ್ನು ಅರೇಬಿಯಾ ಪೆಟ್ರಿಯಾ ಎಂದು ಕರೆಯುತ್ತಿದ್ದರು. ಮಧ್ಯ ಅರೇಬಿಯಾವು 4 ನೇ ಶತಮಾನದಿಂದ 6 ನೇ ಶತಮಾನದ ಆರಂಭದವರೆಗೆ ಕಿಂದ ಸಾಮ್ರಾಜ್ಯದ ಪ್ರದೇಶವಾಗಿತ್ತು. ಪೂರ್ವ ಅರೇಬಿಯಾ ದಿಲ್ಮುನ್ ನಾಗರಿಕತೆಯ ನೆಲೆಯಾಗಿತ್ತು.

ಅರೇಬಿಯನ್ ಪರ್ಯಾಯ ದ್ವೀಪವನ್ನು ಬಹುಪಾಲು ವಿದ್ವಾಂಸರು ಸೆಮಿಟಿಕ್ ಭಾಷೆಗಳ ಮೂಲ ನೆಲೆಯೆಂದು ಬಹಳ ಹಿಂದಿನಿಂದಲೇ ಒಪ್ಪಿಕೊಂಡಿದ್ದಾರೆ.

ಉಲ್ಲೇಖಗಳು

Tags:

ಅರೇಬಿಯನ್ ಪರ್ಯಾಯ ದ್ವೀಪ ನಿಷ್ಪತ್ತಿಅರೇಬಿಯನ್ ಪರ್ಯಾಯ ದ್ವೀಪ ಭೌಗೋಳಿಕ ಸ್ಥಿತಿಅರೇಬಿಯನ್ ಪರ್ಯಾಯ ದ್ವೀಪ ಚರಿತ್ರೆಅರೇಬಿಯನ್ ಪರ್ಯಾಯ ದ್ವೀಪ ಉಲ್ಲೇಖಗಳುಅರೇಬಿಯನ್ ಪರ್ಯಾಯ ದ್ವೀಪಆಫ್ರಿಕ ಖಂಡಆಫ್ರಿಕಾಏಷ್ಯಾಏಷ್ಯಾ ಖಂಡಮಧ್ಯ ಪ್ರಾಚ್ಯ

🔥 Trending searches on Wiki ಕನ್ನಡ:

ಜ್ಯೋತಿಬಾ ಫುಲೆದೇವಸ್ಥಾನವ್ಯಾಸರಾಯರುಚಿತ್ರದುರ್ಗ ಕೋಟೆಖಗೋಳಶಾಸ್ತ್ರದ್ವಿಗು ಸಮಾಸವೇಶ್ಯಾವೃತ್ತಿಪಾಂಡವರುಸುದೀಪ್ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಮೆಕ್ಕೆ ಜೋಳನಾಮಪದರಾಧೆಭಾರತದಲ್ಲಿ ಪಂಚಾಯತ್ ರಾಜ್ಸವರ್ಣದೀರ್ಘ ಸಂಧಿರೇಡಿಯೋಕೃಷ್ಣದೇವರಾಯಮೌರ್ಯ ಸಾಮ್ರಾಜ್ಯಸಂದರ್ಶನಮೋಳಿಗೆ ಮಾರಯ್ಯಅರ್ಥಶಾಸ್ತ್ರಐಹೊಳೆಕುಟುಂಬಜಿ.ಎಸ್.ಶಿವರುದ್ರಪ್ಪಪಿ.ಲಂಕೇಶ್ಭಾರತದ ರಾಜಕೀಯ ಪಕ್ಷಗಳುಹಳೆಗನ್ನಡಕೊಡವರುಭಾರತದ ಮುಖ್ಯಮಂತ್ರಿಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಯಮಮೈಸೂರು ಸಂಸ್ಥಾನಭರತನಾಟ್ಯಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಚದುರಂಗದ ನಿಯಮಗಳುಮಾಧ್ಯಮಪ್ರೀತಿಚುನಾವಣೆಪ್ರಾಥಮಿಕ ಶಾಲೆಮುಪ್ಪಿನ ಷಡಕ್ಷರಿವಿಕ್ರಮಾರ್ಜುನ ವಿಜಯದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ವಾಲಿಬಾಲ್ಬೆಳಗಾವಿಚಿತ್ರದುರ್ಗ ಜಿಲ್ಲೆಹನುಮಂತಮಹಿಳೆ ಮತ್ತು ಭಾರತಒನಕೆ ಓಬವ್ವಎಕರೆಬಾಲಕಾರ್ಮಿಕಕಲಬುರಗಿಪಂಪ ಪ್ರಶಸ್ತಿಮುರುಡೇಶ್ವರಲಕ್ಷ್ಮಿಸಂಖ್ಯಾಶಾಸ್ತ್ರಹಲ್ಮಿಡಿರಾಷ್ಟ್ರೀಯತೆರಾಜಧಾನಿಗಳ ಪಟ್ಟಿಬೆಂಕಿದಾಸ ಸಾಹಿತ್ಯಗುಪ್ತ ಸಾಮ್ರಾಜ್ಯಶಾಲೆಎಲೆಕ್ಟ್ರಾನಿಕ್ ಮತದಾನಹನುಮ ಜಯಂತಿಚಿತ್ರಲೇಖವರದಕ್ಷಿಣೆ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಉಪೇಂದ್ರ (ಚಲನಚಿತ್ರ)ಹಾಸನಜಾಪತ್ರೆಕನ್ನಡದಲ್ಲಿ ವಚನ ಸಾಹಿತ್ಯಮಲ್ಟಿಮೀಡಿಯಾಅಕ್ಷಾಂಶ ಮತ್ತು ರೇಖಾಂಶಕಾರ್ಮಿಕರ ದಿನಾಚರಣೆವಿಜಯಪುರಕದಂಬ ರಾಜವಂಶಮಹಾತ್ಮ ಗಾಂಧಿವ್ಯಕ್ತಿತ್ವಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ🡆 More