ಮದೀನಾ

ಮದೀನ - ಸೌದಿ ಅರೇಬಿಯಾದಲ್ಲಿರುವ ಮುಸ್ಲಿಮರ ಒಂದು ಧಾರ್ಮಿಕ ಕೇಂದ್ರ ನಗರ.

ಜನಸಂಖ್ಯೆ 1,98,196 (1984). ಮೆಕ್ಕ ನಗರದ ಉತ್ತರಕ್ಕೆ ಸುಮಾರು 193ಕಿಮೀ ದೂರದಲ್ಲಿದೆ. ಈ ನಗರವನ್ನು ಮದೀನತ್-ಉಲ್-ನಬೀ, ಮದೀನಮುನವರ್ ಎಂದೂ ಕರೆಯುವುದುಂಟು. ಪ್ರವಾದಿ ಮುಹಮ್ಮದ್ ( ಸ.ಅ ) ಈ ನಗರಕ್ಕೆ ತೆರಳುವುದರ ಮುಂಚೆ ಇದನ್ನು ಯಸ್ರಬ್ ಎಂದು ಕರೆಯುತ್ತಿದ್ದರು. ನಗರ ಎತ್ತರವಾದ ಸ್ಥಳದಲ್ಲಿದೆ. ಇದರ ಸುತ್ತಲೂ ಫಲವತ್ತಾದ ಮೈದಾನ ಪ್ರದೇಶವಿದೆ. ಇಲ್ಲಿ ಖರ್ಜೂರ, ದ್ರಾಕ್ಷಿ, ವಿವಿಧ ತರಕಾರಿ ಮತ್ತು ದ್ವಿದಳಧಾನ್ಯಗಳನ್ನು ಬೆಳೆಸುತ್ತಾರೆ.

ನಗರಕ್ಕೆ ವಿಮಾನ ಸಂಪರ್ಕವಿದೆ. ಈ ನಗರ ಎತ್ತರವಾದ ಗೋಡೆಯಿಂದ ಸುತ್ತುವರಿದು ಅನೇಕ ಪುರಾತನ ಗೋಪುರ, ಗೋರಿ, ಮಸೀದಿಗಳಿಂದ ಕೂಡಿದೆ. ಹೆಚ್ಚು ಪ್ರವಾದಿಗಳ ಸಮಾಧಿಗಳಿರುವ ಮಸ್ಜಿದೆ-ನಬವಿ ಎಂಬ ಮಸೀದಿ ಆಕರ್ಷಣೀಯವಾದ್ದು.ಮುಹಮ್ಮದ್ ಪೈಗಂಬರರ ಸಮಾಧಿ ಅವರು ಪ್ರೀತಿಯ ಪತ್ನಿ ಆಯಿಷಾ (ರ.ಅ) ಮನೆಯಿದ್ದ ಸ್ಥಳದಲ್ಲಿದೆ. ಖಲೀಫರಾದ ಉಮರ್ (ರ.ಅ) ಹಾಗೂ ಉಸ್ಮಾನ್ (ರ.ಅ) ರಿಂದ ವಿಸ್ತರಿಸಲ್ಪಟ್ಟಿದ್ದ ಈ ಮಸೀದಿ ಕ್ರಿ.ಶ. 711ರಲ್ಲಿ ಬೈಜಾಂಟಿಯನ್ ಮಾದರಿಯಲ್ಲಿ ಖಲೀಫ ವಲೀದರ ಆಜ್ಞೆಯಂತೆ ಪುನರ್ರಚಿಸಲ್ಪಟ್ಟಿತು.ಮೊದಲ ಖಲೀಫರಾದ ಅಬೂಬಕರ್ (ರ.ಅ) ಮತ್ತು ಉಮರ್ (ರ.ಅ) ಅವರ ಗೋರಿಗಳೂ ಇಲ್ಲಿವೆ. ಮದೀನಕ್ಕೆ ಸುಮಾರು 4.8ಕಿಮೀ ದೂರದ ಖುಬ ಎಂಬಲ್ಲಿ ಪ್ರವಾದಿ ಮುಹಮ್ಮದರು ಕಟ್ಟಿದ ಮೊದಲ ಮಸೀದಿ ಇದೆ. ಇದನ್ನು ತರುವಾಯ ಅಬ್ದುಲ್ ಹಮೀದ್ ಸುಲ್ತಾನರು ಜೀರ್ಣೋದ್ಧಾರ ಮಾಡಿಸಿದರು.

ಮುಹಮ್ಮದರು ಮೆಕ್ಕಾ ಬಿಟ್ಟು ಮದೀನ ತಲುಪಿದಂದಿನಿಂದ (ಕ್ರಿ.ಶ. 622ರಿಂದ ಹಿಜರಿ ಶಕೆಯ ಪ್ರಾರಂಭ) ಉಮ್ಮಾಯದ್ ಸಂತತಿಯ ಖಲೀಫ ಡಮಾಸ್ಕಸ್‍ಗೆ ರಾಜಧಾನಿಯನ್ನು ಬದಲಾಯಿಸುವ ತನಕವೂ (661) ಮದೀನ ಮುಸ್ಲಿಮರ ರಾಜಧಾನಿಯಾಗಿತ್ತು. ಅನಂತರ ಇದು ಕೇವಲ ಧಾರ್ಮಿಕ ಅಧ್ಯಯನ ಕೇಂದ್ರವಾಗಿ ಉಳಿದಿದೆ.

1960ರಲ್ಲಿ ಇಸ್ಲಾಮಿಕ್ ವಿಶ್ವವಿದ್ಯಾಲಯ ಸ್ಥಾಪಿತವಾಗಿದೆ.

ಚಿತ್ರಸಂಪುಟ


ಮದೀನಾ 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಖರ್ಜೂರದ ಹಣ್ಣುದ್ರಾಕ್ಷಿಮುಸ್ಲಿಮ್ಮೆಕ್ಕಾಸೌದಿ ಅರೆಬಿಯ

🔥 Trending searches on Wiki ಕನ್ನಡ:

ಪಿತ್ತಕೋಶಶುಕ್ರದಕ್ಷಿಣ ಕನ್ನಡಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ತಂತ್ರಜ್ಞಾನದ ಉಪಯೋಗಗಳುಬಾಲಕೃಷ್ಣಸಾವಿತ್ರಿಬಾಯಿ ಫುಲೆಭಾರತೀಯ ಜನತಾ ಪಕ್ಷಪದಬಂಧವಿಜಯವಾಣಿವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಭಾರತದ ಸಂವಿಧಾನಗೋತ್ರ ಮತ್ತು ಪ್ರವರಗುರುವಸಾಹತುಕೆ.ವಿ.ಸುಬ್ಬಣ್ಣವೈದೇಹಿತುಮಕೂರುಅಲಾವುದ್ದೀನ್ ಖಿಲ್ಜಿಯಕ್ಷಗಾನಹಣಶಿವಕುಮಾರ ಸ್ವಾಮಿಸರ್ವಜ್ಞವಡ್ಡಾರಾಧನೆಹೀಮೊಫಿಲಿಯವಿಭಕ್ತಿ ಪ್ರತ್ಯಯಗಳುಕಾದಂಬರಿಭೂತಾರಾಧನೆಗ್ರಾಮ ಪಂಚಾಯತಿಧರ್ಮಪ್ರಬಂಧ ರಚನೆಬಾಲಕಾಂಡಆರೋಗ್ಯಪ್ರಜಾಪ್ರಭುತ್ವಪುರಂದರದಾಸಕನ್ನಡಪ್ರಭಬಿಗ್ ಬಾಸ್ ಕನ್ನಡಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಭಾರತದ ಸಂಸತ್ತುಡಿ.ಎಸ್.ಕರ್ಕಿನೈಸರ್ಗಿಕ ಸಂಪನ್ಮೂಲಶಿಕ್ಷಣಕಲಬುರಗಿಭಾರತದಲ್ಲಿ ಮೀಸಲಾತಿಧರ್ಮಸ್ಥಳಮಂಜಮ್ಮ ಜೋಗತಿವಚನ ಸಾಹಿತ್ಯಉಳ್ಳಾಲಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಅಯೋಧ್ಯೆಸಿದ್ದರಾಮಯ್ಯಕರ್ನಾಟಕ ಹೈ ಕೋರ್ಟ್ಹೂಡಿಕೆಜಾಗತೀಕರಣವರ್ಗೀಯ ವ್ಯಂಜನದಾಸ ಸಾಹಿತ್ಯಇಮ್ಮಡಿ ಪುಲಕೇಶಿಕನ್ನಡ ಜಾನಪದಬೇಲೂರುಝಾನ್ಸಿಹರೇ ರಾಮ ಹರೇ ಕೃಷ್ಣ (ಚಲನಚಿತ್ರ)ಹೆಚ್.ಡಿ.ಕುಮಾರಸ್ವಾಮಿಬಿ.ಎಫ್. ಸ್ಕಿನ್ನರ್ಮಹಾಭಾರತಬಾದಾಮಿಭಾರತದ ಚುನಾವಣಾ ಆಯೋಗಅವತಾರಹನುಮ ಜಯಂತಿಆಯುರ್ವೇದಗುಣ ಸಂಧಿಅಕ್ಷಾಂಶ ಮತ್ತು ರೇಖಾಂಶಜೀವಕೋಶಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕರ್ನಾಟಕ ಐತಿಹಾಸಿಕ ಸ್ಥಳಗಳು🡆 More