ಅನ್ನೀ ಜಂಪ್ ಕ್ಯಾನನ್

ಅಮೇರಿಕದ ಮಹಿಳಾ ಖಗೋಳವಿಜ್ಞಾನಿಯಾಗಿದ್ದ ಅನ್ನೀ ಜಂಪ್ ಕ್ಯಾನನ್‌ರವರು ೧೮೬೩ರ ಡಿಸೆಂಬರ್ ೧೧ರಂದು ಜನಿಸಿದರು.

ಅನ್ನೀಯವರು ಶ್ರೀಮಂತ ಶರೀರವಿಜ್ಞಾನಿ ಮತ್ತು ಹವ್ಯಾಸಿ ಖಗೋಳವಿಜ್ಞಾನಿಯಾಗಿದ್ದ ಹೆನ್ರಿ ಡ್ರೇಪರ್‌ರವರ (೧೮೩೭-೧೮೮೨) ವಿಧವಾಪತ್ನಿಯಾಗಿದ್ದರು. (ಅವರು ಕೇವಲ ೧೯ವರುಷಕ್ಕೇ ವಿಧವೆಯಾದರು.) ಹೆನ್ರಿ ಡ್ರೇಪರ್‌ರವರು ತಾರಾ ರೋಹಿತಗಳ (stellar spectrum) ಬಗ್ಗೆ ಮಾಹಿತಿ ಗಳಿಸಲು ಉಪಯೋಗವಾಗುವಂತ ಪಟ್ಟಿಯನ್ನು ತಯಾರಿಸಿದ್ದರು. ಆ ಪಟ್ಟಿಗೆ ’ಡ್ರೇಪರ್ ಪಟ್ಟಿ’ (Draper catalog) ಎಂದು ಕರೆಯಲಾಗಿತ್ತು. ಹಾರ್ವರ್ಡ್ ವೀಕ್ಷಣಾಲಯದ ನಿರ್ದೇಶಕರಾಗಿದ್ದ ಎಡ್ವರ್ಡ್ ಚಾರ್ಲ್ಸ್ ಪಿಕೆರಿಂಗ್‌ರವರು (೧೮೪೬-೧೯೧೯) ’ಪಿಕೆರಿಂಗ್ ಮಹಿಳೆಯರು’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಡ್ರೇಪರ್ ಪಟ್ಟಿಯ ಭೂಪಟವನ್ನು ಪೂರ್ಣಸ್ಥಿತಿಗೆ ತರಲು ಮತ್ತು ಬಾನಿನಲ್ಲಿ ಕಾಣುವ ಎಲ್ಲ ಸುಮಾರು ೯ರ ಛಾಯಾಚಿತ್ರ-ಪ್ರಮಾಣದ (photographic magnetude) ತಾರೆಗಳನ್ನು ಗುರುತಿಸಲು ಪಿಕೆರಿಂಗ್‌ರವರು "ಪಿಕೆರಿಂಗ್ ಮಹಿಳೆಯರ’ ಸಂಸ್ಥೆಯ ಮಹಿಳೆಯರನ್ನು ಸಹಾಯಕ್ಕೆ ತೆಗೆದುಕೊಳ್ಳುತ್ತಿದ್ದರು. ಹಾಗಾಗಿ ಭೌತವಿಜ್ಞಾನ ಮತ್ತು ಖಗೋಳವಿಜ್ಞಾನದ ಕ್ಷೇತ್ರದಲ್ಲಿ ಪದವೀಧರರಾಗಿದ್ದ ಆದರೆ ವಿಧವೆಯಾಗಿದ್ದ ಅನ್ನೀಯವರು ೧೮೯೬ರಲ್ಲಿ ಪಿಕೆರಿಂಗ್ ಮಹಿಳೆಯರ ಸಂಸ್ಥೆಗೆ ಸದಸ್ಯರಾದರು. ಹಾಗೆಯೇ ಅವರು ಪಿಕೆರಿಂಗ್‌ರವರಿಗೆ ಸಹಾಯಕರಾಗಿ ನೇಮಕಗೊಂಡರು. ರೋಹಿತ ವಿಜ್ಞಾನ (spectroscopy) ಮತ್ತು ತಾರೆಯರ ರೋಹಿತದ ಛಾಯಾಗ್ರಹಣ ಕಲೆಯಲ್ಲಿಯೂ (spectra-photography) ಪರಿಣಿತಿ ಪಡೆದಿದ್ದ ಅನ್ನೀಯವರಿಗೆ ಹೆನ್ರಿ ಡ್ರೇಪರ್‌ರವರ ಪಟ್ಟಿಯ ಯೋಜನೆಯಲ್ಲಿ ಕೆಲಸ ಮಾಡಲು ಹೇಳಿದರು. ಎಷ್ಟು ತಾರೆಗಳ ದ್ಯುತಿ-ರೋಹಿತವನ್ನು (optical spectra) ಗಳಿಸಲು ಸಾಧ್ಯವೋ ಅಷ್ಟು ತಾರೆಗಳ ಸೂಚಿಯಲ್ಲದೆ (index), ರೋಹಿತಗಳ ಸಹಾಯದಿಂದ ಅವುಗಳ ವರ್ಗೀಕರಣವನ್ನು ಮಾಡಬೇಕಾದ ಬೃಹತ್ ಯೋಜನೆ ಅದಾಗಿತ್ತು. ಆ ಕೆಲಸ ಸುಲಭಸಾಧ್ಯವಾಗಿರಲಿಲ್ಲ. ಅನ್ನೀಯವರು ದಕ್ಷಿಣಾರ್ಧ ಗೋಳದ (southern hemisphere) ಪ್ರಕಾಶಮಾನವಾದ ತಾರೆಗಳನ್ನು ಪರೀಕ್ಷಿಸಿದರು. ನಂತರ ಅವರು ಅವುಗಳನ್ನು ’ಬಾಲ್ಮರ್ ಅವಶೋಷಣ ರೇಖೆಗಳ’ (Balmer absorption lines) ಅಧಾರದ ಮೇಲೆ ’ಒ, ಬಿ. ಎ. ಎಫ್. ,ಜಿ, ಕೆ ಮತ್ತು ಎಮ್.’ ಎಂಬುದಾಗಿ ರೋಹಿತ-ವರ್ಗೀಕರಣಕ್ಕೆ (spectral classes) ಒಳಪಡಿಸಿದರು. ಏಕೆಂದರೆ ಅವಶೋಷಣ ರೇಖೆಗಳ ವಿಧಾನ ತಾರೆಗಳ ಉಷ್ಣತೆಯ ಮೇಲೆ ಅವಲಂಬಿಸಿರುತ್ತದೆ. ಸ್ವಾರಸ್ಯ ಸಂಗತಿಯೆಂದರೆ ಆ ಆಂಗ್ಲ ಅಕ್ಷರಗಳ ವರ್ಗೀಕರಣವನ್ನು ನೆನಪಿನಲ್ಲಿಟ್ಟುಕೊಳ್ಳಲು ಒಂದು ಇಂಗ್ಲಿಷ್ ವಾಕ್ಯವನ್ನು (Oh Be A Fine Girl Kiss Me) ಉದ್ಧರಿಸಿದರು. ಗಮನಾರ್ಹ ಸಂಗತಿಯೆಂದರೆ ಅವರ ಅಂತಹ ವರ್ಗೀಕೃತ-ತಾರೆಗಳ ’ಹೆನ್ರಿ ಡ್ರೇಪರ್ ಪಟ್ಟಿ’ಗೆ ಸುಮಾರು ೨೩೦,೦೦೦ ತಾರೆಗಳು ಸೇರಿದ್ದವು. ಅಂತಹ ಕೆಲಸವನ್ನು ಅನ್ನೀ ಒಬ್ಬರೇ ನಿರ್ವಹಿಸಿದರು ಎನ್ನುವುದು ಆಶ್ಚರ್ಯಕರ ಸಂಗತಿಯಾಗಿದೆ. ಅದೂ ಅಲ್ಲದೆ ಅನ್ನೀಯವರು ಚಂಚಲ ತಾರೆಗಳ (variable stars) ಇತರ ಅನೇಕ ಪಟ್ಟಿಗಳನ್ನು ಪ್ರಕಟಿಸಿದರು. ಆ ಚಂಚಲ ತಾರೆಗಳ ಪಟ್ಟಿಗಳಲ್ಲಿ ಅನ್ನೀಯವರು ಕಂಡುಹಿಡಿದಿದ್ದ ೩೦೦ ತಾರೆಗಳೂ ಸೇರಿದ್ದವು. ಅನ್ನೀಯವರ ಸಂಶೋಧನೆಗಳೆಲ್ಲವೂ ಅವರ ೪೦ ವರುಷಗಳ ಸಾಧನೆಯಾಗಿದ್ದವು. ಅನ್ನೀಯವರು ೧೯೪೧ರ ಏಪ್ರಿಲ್ ೧೩ರಂದು ನಿಧನರಾದರು.

ಅನ್ನೀ ಜಂಪ್ ಕ್ಯಾನನ್
ಅನ್ನೀ ಜಂಪ್ ಕ್ಯಾನನ್
ಅನ್ನೀ ಜಂಪ್ ಕ್ಯಾನನ್
Born
ಅನ್ನೀ ಜಂಪ್

೧೧ ಡಿಸೆಂಬರ್ ೧೮೬೩
ಅಮೇರಿಕ
Nationalityಅಮೇರಿಕ

ಉಲ್ಲೇಖಗಳು

Tags:

ಅಮೇರಿಕಉಷ್ಣತೆ

🔥 Trending searches on Wiki ಕನ್ನಡ:

ಬ್ಯಾಂಕ್ಟೊಮೇಟೊಬಿಳಿ ರಕ್ತ ಕಣಗಳುಶೃಂಗೇರಿಜಾತ್ರೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಅಳಲೆ ಕಾಯಿಭಾರತೀಯ ಕಾವ್ಯ ಮೀಮಾಂಸೆಯಕೃತ್ತುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಮಹಮದ್ ಬಿನ್ ತುಘಲಕ್ರೇಣುಕಭೋವಿರಾಷ್ಟ್ರೀಯ ಶಿಕ್ಷಣ ನೀತಿಜಾತ್ಯತೀತತೆಸಂಗೊಳ್ಳಿ ರಾಯಣ್ಣಶಿಶುನಾಳ ಶರೀಫರುಮೂಢನಂಬಿಕೆಗಳುಬೆಟ್ಟದ ನೆಲ್ಲಿಕಾಯಿಪ್ರಜ್ವಲ್ ರೇವಣ್ಣಜ್ಞಾನಪೀಠ ಪ್ರಶಸ್ತಿಸಂಯುಕ್ತ ಕರ್ನಾಟಕತುಳಸಿಝಾನ್ಸಿ ರಾಣಿ ಲಕ್ಷ್ಮೀಬಾಯಿಆಲದ ಮರಕನ್ನಡಪ್ರಭಅಂತಾರಾಷ್ಟ್ರೀಯ ಸಂಬಂಧಗಳುಆಗಮ ಸಂಧಿಚಿತ್ರದುರ್ಗಗಿರೀಶ್ ಕಾರ್ನಾಡ್ಕನ್ನಡದಲ್ಲಿ ಗಾದೆಗಳುಪ್ರಾಥಮಿಕ ಶಿಕ್ಷಣಭಯೋತ್ಪಾದನೆನವೋದಯಜನತಾ ದಳ (ಜಾತ್ಯಾತೀತ)ಛಂದಸ್ಸುಅನುಭವ ಮಂಟಪಬನವಾಸಿದಕ್ಷಿಣ ಕರ್ನಾಟಕಕನ್ನಡ ಸಾಹಿತ್ಯ ಪ್ರಕಾರಗಳುಸೌರಮಂಡಲತಂತಿವಾದ್ಯಕರ್ನಾಟಕದ ಪ್ರಸಿದ್ಧ ದೇವಾಲಯಗಳುಕುಟುಂಬತೆಂಗಿನಕಾಯಿ ಮರಸರಸ್ವತಿ ಪ್ರಭಾ ಕೊಂಕಣಿ ಮಾಸಿಕಡೊಳ್ಳು ಕುಣಿತಸಂಭೋಗದಿಕ್ಕುಪೂರ್ಣಚಂದ್ರ ತೇಜಸ್ವಿಮಾನವ ಸಂಪನ್ಮೂಲ ನಿರ್ವಹಣೆವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕರ್ನಾಟಕಈರುಳ್ಳಿಮಾಧ್ಯಮಬಾಳೆ ಹಣ್ಣುಶ್ರೀ ಕೃಷ್ಣ ಪಾರಿಜಾತಭೂಮಿವಚನಕಾರರ ಅಂಕಿತ ನಾಮಗಳುರಮ್ಯಾಪರಶುರಾಮಪ್ರದೀಪ್ ಈಶ್ವರ್ಓಂ (ಚಲನಚಿತ್ರ)ಸ್ಕೌಟ್ಸ್ ಮತ್ತು ಗೈಡ್ಸ್ದೀಪಾವಳಿಹೈದರಾಬಾದ್‌, ತೆಲಂಗಾಣನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಭಾರತದ ಮಾನವ ಹಕ್ಕುಗಳುಭಾರತದ ಪ್ರಧಾನ ಮಂತ್ರಿನಯನತಾರನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವಿಚ್ಛೇದನಗೋಕಾಕ್ ಚಳುವಳಿವಿಧಾನಸೌಧಕ್ರಿಕೆಟ್ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಮತದಾನ ಯಂತ್ರ🡆 More